ವಿಭಾಗಗಳು

ಸುದ್ದಿಪತ್ರ


 

ಕಾಶ್ಮೀರದ ಬೀದಿಗಳಲ್ಲಿ ಭಸ್ಮಾಸುರ ನರ್ತನ!

ಶ್ರೀನಗರದ ಮುಖ್ಯ ಬೀದಿಗಳಲ್ಲಿ ಒಂದು ಶವಯಾತ್ರೆ. ತೀರಿಕೊಂಡವನ ಸಹೋದರಿ ಎಲ್ಲರೆದುರು ಆಕ್ರೋಶದಿಂದಲೇ ಕಿರುಚುತ್ತಿದ್ದಳು ‘ಹೌದು, ನಾವು ಭಾರತೀಯರೇ’. ಉಳಿದವರೆಲ್ಲ 57 ವರ್ಷದ ಹುತಾತ್ಮ ಡಿಎಸ್ಪಿ ಮೊಹಮ್ಮದ್ ಅಯೂಬ್ ಪಂಡಿತ್ರಿಗೆ ಜೈಕಾರ ಮೊಳಗಿಸುತ್ತ ನಡೆದಿದ್ದರು. ಕಳೆದ ನಾಲ್ಕಾರು ತಿಂಗಳಲ್ಲಿ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಂಡ ಭಸ್ಮಾಸುರನ ಕಥೆ ಮತ್ತೆ ಮತ್ತೆ ನೆನಪಿಸುತ್ತಿದೆ ಕಾಶ್ಮೀರ.

dsp-pandit-murder1-360x180

 

ಅದು ರಂಜಾನ್ ತಿಂಗಳ ವಿಶೇಷ ದಿನ. ಶಕ್ತಿಯ ರಾತ್ರಿ ಅದು. ಶಬ್-ಇ-ಕದರ್ ಅಂತಾರೆ ಅದನ್ನು. ಕುರಾನ್ ಪ್ರವಾದಿಯವರ ಮೇಲೆ ಅವತೀರ್ಣಗೊಂಡ ಮೊದಲ ದಿನವಂತೆ ಅದು. ಅಂದು ರಾತ್ರಿ ಕಳೆದು ಬೆಳಗಾಗುವ ಹೊತ್ತು ಬಲು ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ. ಶ್ರೀನಗರದ ನೌಹಟ್ಟಾದ ಜಾಮಿಯಾ ಮಸೀದಿಯಲ್ಲಿಯೂ ಎಲ್ಲೆಡೆಯಂತೆ ಸಾವಿರಾರು ಜನ ಪ್ರಾರ್ಥನೆಗೆ ಅಣಿಯಾಗಿದ್ದರು. ಈ ಮಸೀದಿಯಲ್ಲಿಯೇ ಪ್ರತ್ಯೇಕತಾವಾದಿ ಉಮರ್ ಫಾರುಕ್ ಪ್ರಧಾನ ಮೌಲ್ವಿಯಾಗಿರುವುದು. ಸಹಜವಾಗಿಯೇ ಹೋಗಿ ಬರುವ ಭಕ್ತರ ಮೇಲೆ ಕಣ್ಣಿಡುವ ಜವಾಬ್ದಾರಿ ಅಯೂಬರಿಗಿತ್ತು. ಚಿಕ್ಕಂದಿನಿಂದಲೂ ಸೌಮ್ಯ ಸ್ವಭಾವದ ಆದರೆ ಕರ್ತವ್ಯದ ವಿಚಾರದಲ್ಲಿ ಬಲು ಕಠೋರವೂ, ಪ್ರಾಮಾಣಿಕರೂ ಆಗಿದ್ದ ಆತ ಈಗ ಮಹತ್ವದ ಜವಾಬ್ದಾರಿ ಹೊತ್ತು ಮಸೀದಿಯ ಹೊರಗೆ ನಿಂತಿದ್ದರು. ರಾತ್ರಿ ಸುಮಾರು 12 ಗಂಟೆಗೆ ಪ್ರತ್ಯೇಕತಾವಾದಿ ಉಮರ್ನ ಉದ್ರೇಕಕಾರಿ ಭಾಷಣ ಕೇಳಿ ಹೊರಬಿದ್ದ ಒಂದಷ್ಟು ತರುಣರು ಘೋಷಣೆಗಳನ್ನು ಕೂಗುತ್ತ, ಬೊಬ್ಬೆ ಹಾಕಲಾರಂಭಿಸಿದರು. ಅಯೂಬ್ ತಮ್ಮ ಮೊಬೈಲಿನಿಂದ ಈ ಯುವಕರ ಫೋಟೋ ತೆಗೆದಿಟ್ಟುಕೊಂಡರು. ಯಾರಿಗ್ಗೊತ್ತು? ಇವರ ನಡುವೆಯೇ ಇಲಾಖೆಗೆ ಬೇಕಾದ ಪ್ರಮುಖ ಉಗ್ರ ಇದ್ದರೂ ಇರಬಹುದು. ಅದ್ಯಾಕೋ ಪುಂಡರ ಗಮನ ಇತ್ತ ತಿರುಗಿತು. ಮತಾಂಧತೆಯ ಮದಿರೆಯ ನಿಶೆ ಏರಿತ್ತು. ಪೊಲೀಸ್ ಇಲಾಖೆಗೆ ಸೇರಿದವರೆಂದು ಗೊತ್ತಾಗುತ್ತಲೇ ಆಕ್ರೋಶ ತೀವ್ರವಾಯ್ತು. ಹೊಡೆಯಲೆಂದು ಮುನ್ನುಗ್ಗಿದರು. ತಕ್ಷಣ ತಮ್ಮ ರಕ್ಷಣೆಗಾಗಿ ಪಿಸ್ತೂಲು ತೆಗೆದ ಅಯೂಬರು ಗುಂಡು ಹಾರಿಸಿ ಕೆಲವರ ಕಾಲಿಗೆ ಗಾಯ ಮಾಡಿದರು. ಹೆದರಿ ಓಡಬೇಕಿದ್ದ ಪುಂಡರ ಪಡೆ ಮತ್ತೂ ವ್ಯಗ್ರವಾಗಿ ನುಗ್ಗಿತು. ಅಕ್ಕ-ಪಕ್ಕದಲ್ಲಿದ್ದ ಇತರೆ ಪೊಲೀಸರು ಪರಿಸ್ಥಿತಿಯ ಸೂಕ್ಷ್ಮ ಅರಿತು ಕಾಲಿಗೆ ಬುದ್ಧಿ ಹೇಳಿದರು. ಸಿಕ್ಕಿದವರು ಅಯೂಬ್ ಪಂಡಿತರು ಮಾತ್ರ. ಮದೋನ್ಮತ್ತ ಪಡೆ ಅವರನ್ನು ಮನಸೋ ಇಚ್ಛೆ ತಳಿಸಿತು, ಅವರ ಬಟ್ಟೆ ಕಿತ್ತು ಮರಕ್ಕೆ ಕಟ್ಟಿ ಹಾಕಿತು. ಕೊನೆಗೆ ಜೀವಂತವಾಗಿದ್ದ ಅಯೂಬರನ್ನು ಕಲ್ಲೆಸೆದೆಸೆದೇ ಕೊಂದು ಹಾಕಿತು. ರಂಜಾನಿನ ಅತ್ಯಂತ ಪವಿತ್ರವಾದ ಶಕ್ತಿಯ ರಾತ್ರಿ, ರಕ್ತದ ರಾತ್ರಿಯಾಗಿ ಪರಿವರ್ತನೆಗೊಂಡಿತ್ತು. ರಕ್ತ-ಸಿಕ್ತವಾಗಿ ವಿರೂಪಗೊಂಡಿದ್ದ ದೇಹದ ಫೋಟೋ ತೆಗೆದುಕೊಂಡು ನೆರೆದಿದ್ದ ಸಾವಿರಾರು ಜನ ಸಾರ್ವಜನಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಅಯೂಬರ ಮನೆಯ ಫೋನುಗಳಿಗೂ ಈ ಫೋಟೋ ಬಂದಿತ್ತಾದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸುದ್ದಿ ಖಾತ್ರಿಯಾಗಿ ಹರಡಿದ ಮೇಲೆ ಕಾಶ್ಮೀರದಲ್ಲಿ ಯಾರಿಗೂ ನಿದ್ದೆ ಇಲ್ಲ. ತಾವೇ ಜನ್ಮ ಕೊಟ್ಟ ಪ್ರತ್ಯೇಕವಾದ ತಮ್ಮನ್ನೇ ನುಂಗುತ್ತಿರುವ ಅತ್ಯಂತ ಕೆಟ್ಟ ಸ್ಥಿತಿಗೆ ಅವರೆಲ್ಲ ಸಾಕ್ಷಿಯಗಿದ್ದರು!

480370-burhan-muzaffar-wani2

ಕಾಶ್ಮೀರದ ವಿಚಾರದಲ್ಲಿ ಭಾರತದ ನೀತಿ ಬದಲುಗೊಂಡಾಗಿನಿಂದ ಪಾಕೀಸ್ತಾನ ಹುಚ್ಚಾಪಟ್ಟೆ ಕುಣಿದಾಡುತ್ತಿದೆ. ಎಲ್ಲಕ್ಕೂ ಮುನ್ನುಡಿ ಬರೆದದ್ದು ಹಿಜ್ಬುಲ್ ಕಮಾಂಡರ್ ಬುರ್ಹನ್ ವಾನಿಯ ಹತ್ಯೆ. ಭಾರತ ಸಕರ್ಾರದ ಶಾಂತಿಯ ನೀತಿಯ ವಿಶ್ವಾಸದ ಮೇಲೆ ಮೆರೆದಾಡುತ್ತಿದ್ದ ಕಾಶ್ಮೀರದ ತರುಣರ ಆಶಾ ಕೇಂದ್ರವೆನಿಸಿದ್ದ ಬುರ್ಹನ್ನನ್ನು ಕೊಂದು ಬಿಸಾಡಿದ ಮೇಲೆ ಕಾಶ್ಮೀರ ಉರಿದೆದ್ದಿತ್ತು. ದಿನಾಲೂ ಕಲ್ಲೆಸೆತ, ಕಿತ್ತಾಟಗಳು. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸುದ್ದಿಯಿಂದ ಗಮನ ಸೆಳೆದು ಮೋದಿಯವರ ಗೌರವಕ್ಕೆ ಧಕ್ಕೆ ತರುವ ದುರಾಸೆ ಅದರಲ್ಲಿತ್ತು. ಭಾರತ ತಲೆಕೆಡಿಸಿಕೊಳ್ಳಲಿಲ್ಲ. ಕಲ್ಲೆಸೆಯುವವರ ಹುಟ್ಟಡಗಿಸಿಯೇ ಸುಮ್ಮನಾಗುವುದೆಂದಿತು. 73 ದಿನಗಳಷ್ಟು ದೀರ್ಘಕಾಲದ ಕಫ್ಯರ್ೂಗೆ, 85ಕ್ಕೂ ಹೆಚ್ಚು ಪುಂಡರು ಬಲಿಯಾದರು. ಕಾಶ್ಮೀರದ ಜನತೆಗೆ ಸಾಕು ಸಾಕಾಗಿತ್ತು. ಅಂದುಕೊಂಡಷ್ಟು ಬೆಂಬಲ ಜಾಗತಿಕವಾಗಿ ದಕ್ಕಲಿಲ್ಲ. ಇತ್ತ ದೇಶದೊಳಗೂ ಜನತೆ ಸೈನ್ಯದ ಪರವಾಗಿ ನಿಂತಿದ್ದರಿಂದ ಪ್ರತ್ಯೇಕತಾವಾದಿಗಳು ಪತರಗುಟ್ಟಿದ್ದರು. ಭಾರತ ನಡೆಸಿದ ಸಜರ್ಿಕಲ್ ಸ್ಟ್ರೈಕ್ಗಳು, ಪಾಕೀಸ್ತಾನದ ಬಂಕರ್ಗಳ ಮೇಲಿನ ದಾಳಿಗಳು ಸಕರ್ಾರದ ಬಲಾಢ್ಯ ಮಾನಸಿಕತೆಯನ್ನು ಕಾಶ್ಮೀರಿಗಳಿಗೆ ಸ್ಪಷ್ಟವಾಗಿ ಪರಿಚಯಿಸಿತ್ತು. ಪ್ರತ್ಯೇಕತಾವಾದಿಗಳ ಗೃಹ ಬಂಧನವಂತೂ ಕಠೋರ ನಿರ್ಣಯಗಳ ಕಿರೀಟಕ್ಕೊಂದು ಗರಿ.

ಇಷ್ಟೇ ಅಲ್ಲ. ಪಾಕೀಸ್ತಾನ ಉಮರ್ ಬಾಜ್ವಾರನ್ನು ಪಾಕೀ ಸೇನೆಯ ಮುಖ್ಯಸ್ಥರಾಗಿ ಆಯ್ಕೆ ಮಾಡಿದಾಗ ಅದಕ್ಕೆ ಭಾರತ ಬಿಪಿನ್ ರಾವತ್ರ ರೂಪದಲ್ಲಿ ಮುಖಕ್ಕೆ ಬಾರಿಸಿದಂತೆ ಉತ್ತರ ನೀಡಿತು. ಬಾಜ್ವಾ ಯುಎನ್ ಶಾಂತಿ ಪಡೆಯಲ್ಲಿ ದುಡಿದವರಾಗಿ, ಕಾಶ್ಮೀರದ ವಿಚಾರದಲ್ಲಿ ವಿಶೇಷ ಜ್ಞಾನ ಹೊಂದಿದವರೆಂಬ ಕಾರಣಕ್ಕೇ ಅವರನ್ನು ತಂದಿತ್ತು ಪಾಕ್. ಭಾರತ ಅದಕ್ಕೆ ಪ್ರತಿಯಾಗಿ ರಾಷ್ಟ್ರೀಯ ರೈಫಲ್ಸ್ನ ಮೂಲಕ ಕಾಶ್ಮೀರದಲ್ಲಿ ನುಸುಳುಕೋರರ ವಿರುದ್ಧ ಕಾಯರ್ಾಚರಣೆಯ ಅನುಭವ ಹೊಂದಿದ್ದ, ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ನ ಗುಡ್ಡ ಪ್ರದೇಶಗಳಲ್ಲಿ ಚೀನಾದೆದುರು ಯುದ್ಧದಲ್ಲಿ ವಿಶೇಷ ಪರಿಣತಿ ಹೊಂದಿದ ಯುಎನ್ ಶಾಂತಿ ಪಡೆಯಲ್ಲಿ ಗೌರವಕ್ಕೆ ಪಾತ್ರರಾದ ಬಿಪಿನ್ ರಾವತ್ರನ್ನು ಸೈನ್ಯದ ನಿಯಮಗಳನ್ನು ಮೀರಿ ತಂದು ಕೂರಿಸಿತು. ಆಗಲೇ ಮುಂದಾಗುವುದನ್ನು ಊಹಿಸಿ ಪಾಕೀಸ್ತಾನ ತೆಪ್ಪಗಿದ್ದರೆ ಸರಿಹೋಗುತ್ತಿತ್ತು.

28-1427546513-19-1426789285-ajit-doval

ಮೋದಿ ಮತ್ತು ದೋವಲ್ರ ಜೋಡಿಯೆದುರು ಯಾವುದೂ ಉಪಯೋಗಕ್ಕೆ ಬರಲಿಲ್ಲ. 2010ರಲ್ಲಿಯೇ ದೋವಲ್, ಕಾಶ್ಮೀರದ ವಿಚಾರದಲ್ಲಿ ಪಾಕೀಸ್ತಾನದೊಂದಿಗೆ ಮಾತನಾಡಿದ್ದು ಸಾಕು ಒಂದು ಬಲವಾದ ಪೆಟ್ಟು ಕೊಡಬೇಕಷ್ಟೇ ಅಂದಿದ್ದರು. 2014ರಲ್ಲಿ ಇನ್ನೂ ಎನ್ಎಸ್ಎ ಮುಖ್ಯಸ್ಥರಾಗುವುದಕ್ಕೆ ಮುನ್ನವೇ ‘ಇನ್ನೊಂದು ಮುಂಬೈನಂತಹ ದಾಳಿ ನಡೆದರೆ, ಬಲೂಚಿಸ್ತಾನ ಕಳೆದುಕೊಳ್ಳುವುದು ಖಾತ್ರಿ’ ಅಂತ ಪಾಕಿಗೆ ಎಚ್ಚರಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲ, ‘ಪಾಕೀಸ್ತಾನ ತುಂಡಾಗುವ ಸ್ಥಿತಿ ನಮಗಿಂತ ನೂರುಪಟ್ಟು ಹೆಚ್ಚು. ಒಮ್ಮೆ ನಾವು ನಮ್ಮನ್ನು ನಾವು ರಕ್ಷಿಸಿಕೊಳ್ಳುವ ರಣನೀತಿಯಿಂದ ಆಕ್ರಮಕ ರಕ್ಷಣೆಯ ಹೊಸ ನೀತಿಗೆ ವಾಲಿಕೊಂಡಿದ್ದೇವೆ ಎಂದು ಗೊತ್ತಾದೊಡನೆ ಪಾಕೀಸ್ತಾನ ಕಕ್ಕಾಬಿಕ್ಕಿಯಾಗುತ್ತದೆ. ನಮ್ಮೊಡನೆ ಜಗಳಕ್ಕಿಳಿಯುವುದೆಂದರೆ ಬಲುದೊಡ್ಡ ಬೆಲೆ ತೆರಬೇಕೆಂಬುದು ಅದರ ಅರಿವಿಗೆ ಬರುತ್ತದೆ’ ಎಂದಿದ್ದರು.

ಹಾಗೆಯೇ ಆಯ್ತು. ಭಾರತ ಆರಂಭದಲ್ಲಿ ತೋರಿದ ಎಲ್ಲಾ ಪ್ರೀತಿ ಆದರಗಳನ್ನು ಬದಿಗಿಟ್ಟೇ ಮುಂದಡಿ ಇಟ್ಟಿತು. ನಿಮಗೆ ನೆನಪಿರಬೇಕು.. ಝೀಲಂ ನದಿ ತುಂಬಿ ಹರಿಯುವಾಗ ಪ್ರವಾಹ ಪರಿಸ್ಥಿತಿ ನಿಮರ್ಾಣವಾಗಿ ಕಾಶ್ಮೀರದ ಜನ ಬೀದಿಗೆ ಬಂದು ನಿಂತಿದ್ದರಲ್ಲ; ಆಗ ಇದೇ ಪ್ರಧಾನಮಂತ್ರಿ ಕಾಶ್ಮೀರದಲ್ಲಿಯೇ ನೆಲೆ ನಿಂತು ಜನರ ಕಣ್ಣೀರು ಒರೆಸಿದ್ದರು. ಸೈನ್ಯ ಪ್ರತ್ಯೇಕತಾವಾದಿಗಳಿಂದ ಅಸಭ್ಯ ಭಾಷೆಯಲ್ಲಿ ಬೈಸಿಕೊಂಡೂ ಅವರನ್ನು ಸಂಕಟದಿಂದ ಪಾರು ಮಾಡಿತ್ತು. ಸ್ವತಃ ಪ್ರತಿಯೊಬ್ಬ ಭಾರತೀಯ ಒಂದಷ್ಟು ಹಣವನ್ನು ಕಾಶ್ಮೀರದ ಪುನನರ್ಿಮರ್ಾಣಕ್ಕೆಂದು ಕಳಿಸಿದ್ದ. ಅದಾದ ಕೆಲವು ದಿನಗಳಲ್ಲಿಯೇ ಮಿತ್ರನೊಂದಿಗೆ ಕಾಶ್ಮೀರಕ್ಕೆ ಹೋಗಿದ್ದೆ. ಹೊಟೆಲಿನ ಮಾಣಿಯೊಂದಿಗೆ ಮಾತನಾಡುತ್ತ ಪ್ರವಾಹದ ಕರಾಳ ದಿನಗಳ ಬಗ್ಗೆ ವಿವರ ಕೇಳುತ್ತ ಕುಳಿತಿದ್ದೆ. ಎಲ್ಲಿಯಾದರೂ ಒಮ್ಮೆ ಭಾರತೀಯರ ಪ್ರತಿಸ್ಪಂದನೆಗೆ ಕೃತಜ್ಞತೆ ತೋರಿಸುವನಾ ಅಂತ ಕಾದೆ. ಪ್ರಧಾನಿಯ ಸೇವೆಯ ಕುರಿತಂತೆ ಅಭಿಮಾನ ವ್ಯಕ್ತಪಡಿಸುವನಾ ಅಂತ ನೋಡಿದೆ. ಊಹೂಂ. ಕೊನೆಗೆ ನಾನೇ ಕೆದಕಿದಾಗ ‘ನೀವು ಕೊಟ್ಟ ಭಿಕ್ಷೆ ನಮಗೆ ಬೇಕಿಲ್ಲ. ಅದನ್ನು ರಾಜಕಾರಣಿಗಳೇ ನುಂಗಿಬಿಟ್ಟರು. ನಾವು ನಮ್ಮ ಕಾಲ ಮೇಲೆ ನಿಂತಿದ್ದೇವೆ’ ಎಂದಾಗ ಯಾಕೋ ಮೈಯೆಲ್ಲ ಉರಿದುಹೋಗಿತ್ತು. ಅಜಿತ್ ದೋವಲ್ರ ಭಾಷೆಯೊಂದೇ ಅವರಿಗೆ ಅರ್ಥವಾಗೋದು ಅನಿಸಿತ್ತು.
ಬುಹರ್ಾನ್ ವಾನಿಯ ಹತ್ಯೆಯ ನಂತರ ಭಾರತ ಇಟ್ಟ ಹೆಜ್ಜೆ ಕಾಶ್ಮೀರಿಗರನ್ನು ಮೆತ್ತಗೆ ಮಾಡಿತ್ತು. ನವೆಂಬರ್ನಲ್ಲಿ ನೋಟು ಅಮಾನ್ಯೀಕರಣವಾದ ಮೇಲಂತೂ ಹೆಚ್ಚು ಕಡಿಮೆ ಕಾಶ್ಮೀರ ಶಾಂತವಾಯ್ತು. ನೆನಪಿಡಿ. ಯಾವಾಗೆಲ್ಲ ಬಂದೂಕಿನ ಮೊರೆತ ಕಡಿಮೆಯಾಗುತ್ತದೆಯೋ ಆಗೆಲ್ಲ ಸ್ಲೀಪರ್ಸೆಲ್ಗಳು ಚುರುಕಾಗಿರುತ್ತವೆ. ಅದಕ್ಕಾಗಿಯೇ ಸೈನ್ಯ ತಾನೇ ಮುಂದಡಿಯಿಟ್ಟು ಲಷ್ಕರ್ ಮತ್ತು ಹಿಜ್ಬುಲ್ನ ಪ್ರಮುಖರನ್ನು ಹುಡುಹುಡುಕಿ ಕೊಲ್ಲಲಾರಂಭಿಸಿತು. ರಾವತ್ರು ಅಧಿಕಾರ ಸ್ವೀಕರಿಸಿದ ಮೇಲೆ ಇದು ಜೋರಾಗಿಯೇ ನಡೆಯಿತು. ಸೈನ್ಯದ ಮೇಲೆ ಕಲ್ಲು ತೂರಿದ ಯುವಕರ ಮುಖ್ಯಸ್ಥನನ್ನು ಜೀಪಿಗೆ ಕಟ್ಟಿಕೊಂಡು ಹೊರಟ ಮೇಜರ್ ಲಿತುಲ್ ಗೊಗೊಯ್ ಮಾನವ ಹಕ್ಕುಗಳ ರಕ್ಷಣಾ ಹೋರಾಟಗಾರರಿಂದ ಭೀಷಣ ಭತ್ರ್ಸನೆಗೆ ಒಳಗಾದರು. ಆದರೆ ದೇಶ ತಲೆ ಕೆಡಿಸಿಕೊಳ್ಳಲಿಲ್ಲ. ಗೊಗೊಯ್ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದರು. ಅಷ್ಟೇ ಅಲ್ಲ, ಅವರು ಮಾಡಿದ್ದು ತಪ್ಪಿಲ್ಲವೆಂದು ಸೈನ್ಯ ನಿರ್ಣಯ ಕೊಟ್ಟಿತಲ್ಲದೇ ರಾವತ್ರು ಗೊಗೊಯ್ಗೆ ವಿಶೇಷ ಸನ್ಮಾನವನ್ನೂ ಮಾಡಿಬಿಟ್ಟರು. ಇದು ಮುಂದಿನ ದಿನಗಳಲ್ಲಿ ಭಾರತದ ಕಾಶ್ಮೀರ ನೀತಿ ಎತ್ತ ಸಾಗಲಿದೆ ಎಂಬುದರ ಸ್ಪಷ್ಟ ದಿಕ್ಸೂಚಿಯಾಗಿತ್ತು. ಸೈನ್ಯಕ್ಕೆ ಸೇರುವ ಇಚ್ಚೆಯಿಂದ ರ್ಯಾಲಿಗೆ ದೊಡ್ಡ ಸಂಖ್ಯೆಯಲ್ಲಿ ಬಂದ ಕಾಶ್ಮೀರಿ ತರುಣರು ಹೊಸ ನೀತಿಯನ್ನು ಅಪ್ಪಿಕೊಂಡದಕ್ಕೆ ಮುದ್ರೆಯೊತ್ತಿದ್ದರು. ಈಗ ಪಾಕ್ ಪ್ರೇರಿತ ಉಗ್ರರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮತ್ತೊಂದು ಬಲಿತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಲೆಫ್ಟಿನೆಂಟ್ ಉಮರ್ ಫಯಾಜ್ ದಕ್ಷಿಣ ಕಾಶ್ಮೀರದಲ್ಲಿ ಸುಲಭದ ತುತ್ತಾಗಿಬಿಟ್ಟರು.

kashmiris-have-lost-the-will-to-live-cfe1aef7dae886c777c662876597c05e

ಹಾಗಂತ ಸೈನ್ಯ ಸುಮ್ಮನಿರಲಿಲ್ಲ. ಲಷ್ಕರ್ನ ಕಮ್ಯಾಂಡರ್ ಆಗಿದ್ದ ಜುನೈದ್ ಮಟ್ಟು ಅಡಗಿರುವ ಸ್ಥಳದ ಕುರಿತು ಸ್ಪಷ್ಟ ಮಾಹಿತಿ ಪಡೆದರು. ಅಡಗುತಾಣವನ್ನು ಸುತ್ತುವರಿದರು. ಸುದ್ದಿ ತಿಳಿದ ಊರವರು ಕಲ್ಲೆಸೆಯಲೆಂದು ಧಾವಿಸಿದರೆ ಅವರನ್ನು ತಡೆದು ನಿಲ್ಲಿಸುತ್ತಾ ಜುನೈದ್ನನ್ನು ಬಲಿ ತೆಗೆದುಕೊಂಡರು. ಇದು ಕಾಶ್ಮೀರಿಗಳ ಮನೋಬಲವನ್ನೇ ಉಡುಗಿಸಿಬಿಟ್ಟಿತು. ಭಾರತೀಯ ಪಡೆಯ ಆತ್ಮಸ್ಥೈರ್ಯ ವೃದ್ಧಿಯಾಗಿತ್ತು. ಆದರೆ ಅದೇ ದಿನ ತಮ್ಮ ಕೆಲಸ ಮುಗಿಸಿ ಸ್ಟೇಶನ್ನಿಗೆ ಮರಳುತ್ತಿದ್ದ ಫಿರೋಜ್ ಅಹಮದ್ ದಾರ್ ಮತ್ತು ಇತರೆ ಐವರು ಪೊಲೀಸರನ್ನು ಅಚವಾಲಿನ ಬಳಿ ಒಂದಷ್ಟು ಜನ ಅಡ್ಡಗಟ್ಟಿ ಕಲ್ಲು ತೂರಲಾರಂಭಿಸಿದರು. ಕಲ್ಲು ತೂರುವವರನ್ನು ತಹಬಂದಿಗೆ ತರಲೆಂದು ಇವರು ಕೆಳಗಿಳಿದದ್ದೇ ತಡ ಎಲ್ಲ ದಿಕ್ಕಿನಿಂದಲೂ ತೂರಿ ಬಂದ ಗುಂಡುಗಳು ಪೊಲೀಸ್ರನ್ನು ಬಲಿತೆಗೆದೊಕೊಂಡುಬಿಟ್ಟಿತು. ಯಾವ ಭಯೋತ್ಪಾದನೆಗೆ ಕಾಶ್ಮೀರದ ಜನ ಬೆಂಬಲ ಕೊಟ್ಟು ಇಷ್ಟು ವರ್ಷ ಸಾಕಿಕೊಂಡಿದ್ದರೋ ಈಗ ಅದೇ ಭಯೋತ್ಪಾದನೆ ಅವರನ್ನೇ ಆಪೋಶನ ತೆಗೆದುಕೊಳ್ಳುತ್ತಿದೆ.
ಪಾಕೀಸ್ತಾನವೀಗ ಹತಾಶೆಗೊಳಗಾಗಿದೆ. ಅದಕ್ಕೆ ಕಾಶ್ಮೀರದಲ್ಲಿ ಶತಾಯಗತಾಯ ಭಯೋತ್ಪಾದನೆಯನ್ನು ಜೀವಂತವಾಗಿಡಬೇಕಿದೆ. ಸೈನಿಕರನ್ನೂ ಕೊಲ್ಲಬೇಕು, ಸಾಧ್ಯವಾಗದಿದ್ದರೆ ಪೊಲೀಸರು. ಅದೂ ಆಗದೇ ಹೋದರೆ ಮುಂದಿನ ಹಂತ ಸ್ಥಳೀಯರದ್ದು. ಸಾಯಲು ಪಂಡಿತರು ಅಲ್ಲಿ ಇಲ್ಲದಿರುವುದರಿಂದ ಭಯೋತ್ಪಾದನೆಯ ನೇರ ಹೊಡೆತ ಬೀಳಲಿರುವುದು ಅಲ್ಲಿನ ಸುನ್ನಿ ಮುಸಲ್ಮಾನರಿಗೇ!

ಇಷ್ಟಕ್ಕೂ ಪಾಕೀಸ್ತಾನ ಇಷ್ಟೊಂದು ಹತಾಶೆಗೆ ಒಳಗಾಗಿರುವುದು ಏಕೆ ಗೊತ್ತೇ? ಜೂನ್ 19ರ ಡಾನ್ ಪತ್ರಿಕೆಯ ವರದಿಯ ಪ್ರಕಾರ ಪಾಕ್ನ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಥಾರಿಟಿಯ ಮುಖ್ಯಸ್ಥರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಎರಡೇ ತಿಂಗಳಲ್ಲಿ ಭಾರತೀಯ ಪಡೆ ಗಡಿ ರೇಖೆ ಉಲ್ಲಂಘಿಸಿ 832 ಭಯೋತ್ಪಾದಕರು, ಸೈನಿಕರನ್ನು ಬಲಿತೆಗೆದುಕೊಂಡಿದೆ. 3 ಸಾವಿರ ಜನ ಗಾಯಾಳುಗಳಾಗಿದ್ದರೆ 3300 ಮನೆಗಳು ಉಧ್ವಸ್ಥಗೊಂಡಿವೆ. ಗಾಯಾಳುಗಳಿಗೆ ಒಂದು ಲಕ್ಷ ಮತ್ತು ಅನಾರೋಗ್ಯ ಪೀಡಿತರಿಗೆ ಮೂರು ಲಕ್ಷ ಪರಿಹಾರ ಕೊಡಲು ನಿಶ್ಚಯಿಸಲಾಗಿದೆ. ಆದರೆ ಪಾಕೀ ಸಕರ್ಾರ ಇದಕ್ಕೆ ಬೆಂಬಲಿಸುತ್ತಿಲ್ಲ ಎಂಬ ಆರೋಪ ಮಾಡಿದ್ದಾರೆ. ಭಾರತೀಯ ಪಡೆಯ ನಡೆ ಊಹಿಸಲು ಸಾಧ್ಯವಾಗದಿರುವುದರಿಂದ ಗಡಿ ರೇಖೆಯ ಬಳಿ ಸಮಿತಿಯ ಸದಸ್ಯರು ಹೋಗಲೂ ಹೆದರುತ್ತಿದ್ದಾರೆ ಎಂದು ಅಂತರಾಳ ಬಿಚ್ಚಿಟ್ಟಿದ್ದಾರೆ. ಇದು ಕಣಿವೆಯಲ್ಲಿ ಚಳಿಗಾಲ ಆರಂಭವಾಗುವ ಹೊತ್ತು. ಅತ್ತಲಿಂದ ಭಯೋತ್ಪಾದಕರನ್ನು ನುಸುಳಿಸಲು ಇದು ಸಮರ್ಥ ಸಂದರ್ಭ. ಭಾರತ ಈ ಹೊತ್ತಲ್ಲಿಯೇ ಗಡಿಯ ಮೇಲೆ ದಾಳಿ ಮಾಡುತ್ತ ಬಂಕರ್ಗಳನ್ನು ಧ್ವಂಸ ಮಾಡುತ್ತಾ ಯುದ್ಧಕ್ಕೂ ಮುನ್ನ ಯುದ್ಧೋನ್ಮಾದವನ್ನು ಪ್ರದಶರ್ಿಸುತ್ತಿದೆಯಲ್ಲ ಇದು ಪಾಕೀಸ್ತಾನದ ಹುಟ್ಟಡಗಿಸಿಬಿಟ್ಟಿದೆ. ಅದರ ಪ್ರತಿಬಿಂಬವೇ ಕಾಶ್ಮೀರದಲ್ಲಿ ಈಗ ಕಾಣುತ್ತಿರೋದು. ಇತ್ತ ಕಾಂಗ್ರೆಸಿಗ ಸಂದೀಪ್ ದೀಕ್ಷಿತ್ ಸೇನಾ ಮುಖ್ಯಸ್ಥ ರಾವತ್ರನ್ನು ಗಲ್ಲಿಯ ಗೂಂಡಾ ಎಂದಿರುವುದು ಇದೇ ಹತಾಶೆಯ ಮುಂದುವರಿದ ಭಾಗ ಅಷ್ಟೇ! ಅಜಿತ್ ದೋವಲ್ರ ಮಾತು ನೆನಪಿಸಿಕೊಳ್ಳಿ. ಭಾರತದೊಂದಿಗೆ ತಕರಾರು ಮಾಡಿಕೊಳ್ಳುವುದು ಬಲು ದುಬಾರಿಯಾಗಲಿದೆ ಅಂದಿದ್ದರಲ್ಲ ಅದು ಪಾಕಿಗೆ ಈಗ ಅನುಭವಕ್ಕೆ ಬರುತ್ತಿದೆ.

ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ಹೊತ್ತು ಹತ್ತಿರ ಬಂದಿರುವ ಮುನ್ಸೂಚನೆಗಳಂತೆ ಕಾಣುತ್ತಿವೆ ಇವೆಲ್ಲ.

Comments are closed.