ವಿಭಾಗಗಳು

ಸುದ್ದಿಪತ್ರ


 

ಕೃತಕ ಸುನಾಮಿ, ಭೂಕಂಪಗಳ ಹೊಸ ಬಗೆಯ ಯುದ್ಧ!

ಪ್ರಕೃತಿಯನ್ನು ಶಾಂತಗೊಳಿಸುವ ಸಾತ್ವಿಕ ಪ್ರಯತ್ನಗಳಿಗೆ ನಾವು ಕೈ ಹಾಕಿದ್ದರೆ ಅತ್ತ ಕೆಲವು ರಾಷ್ಟ್ರಗಳು ಪಕ್ಕಾ ಜಗತ್ತನ್ನು ಅಂಧಕಾರಕ್ಕೆ ತಳ್ಳುವ ತಾಮಸಿಕ ಮಾರ್ಗದ ಆರಾಧಕರಾಗಿದ್ದಾರೆ. ಇವರುಗಳು ಯಾವ ಪರಿಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆಂದರೆ ಅಗತ್ಯ ಬಿದ್ದಾಗ ಕೃತಕ ಕ್ಷಾಮ ಸೃಷ್ಟಿಸಬಲ್ಲರು, ಬೇಕೆನಿಸಿದರೆ ಕೃತಕ ಮಂಜಿನ ಆವರಣವನ್ನೂ ಸೃಷ್ಟಿಸಬಲ್ಲರು. ಈ ಬಗೆಯ ಸಂಶೋಧನೆಗಳಿಗೆ ಆಯಾ ರಾಷ್ಟ್ರಗಳು ಅವರವರ ನೆಲವನ್ನೇ ಬಳಸಿಕೊಳ್ಳುತ್ತವೆ. ಈ ಹೊತ್ತಲ್ಲಿ ಅನಪೇಕ್ಷಿತ ಪರಿಣಾಮಗಳನ್ನೂ ಎದುರಿಸುತ್ತವೆ.

ಹಾಗೆಯೇ ಊಹಿಸಿಕೊಳ್ಳಿ. ಹರಳುಗಟ್ಟಿ ಮಳೆಗರೆಯಲು ಸಿದ್ಧವಾಗಿದ್ದ ಮೋಡ ಇದ್ದಕ್ಕಿದ್ದಂತೆ ಚೆದುರಿ ಕಾಣೆಯಾಗಿ ಹೋದರೆ? ಮಳೆ ಬರುವ ಸಾಧ್ಯತೆಯೇ ಇಲ್ಲವೆಂದು ಭಾವಿಸಿ ಮಹತ್ವದ ಕೆಲಸಕ್ಕೆ ಕೈ ಹಾಕಿದ ಬೆನ್ನಲ್ಲೇ ಹಿಂದೆಂದೂ ಕಾಣದ ಮುಸಲಧಾರೆಯಾದರೆ? ಇದ್ದಕ್ಕಿದ್ದಂತೆ ಸೆಲ್ ಫೋನ್ ನೆಟ್ವಕರ್್ ಕೈ ಕೊಟ್ಟು ಟಿವಿ ಚಾನೆಲ್ಲುಗಳೂ ನಿಂತು ಹೋದರೆ? ದಿನದಿಂದ ದಿನಕ್ಕೆ ವಾತಾವರಣದಲ್ಲಿ ಬಿಸಿ ಏರುತ್ತ ಹೋಗಿ ಸೂರ್ಯನಿಂದ ಭಯಾನಕವಾದ ವಿಕಿರಣಗಳು ದೇಹವನ್ನು ಸುಡಲಾರಂಭಿಸಿದರೆ? ಅಕಾಲದಲ್ಲಿ ಮಳೆ ಮತ್ತು ನಿಲ್ಲಬೇಕಾದ ಮಳೆ ಅಗತ್ಯಕ್ಕಿಂತ ಹೆಚ್ಚು ಸುರಿಯುತ್ತಲೇ ಇದ್ದರೆ? ಊಹಿಸಿಕೊಳ್ಳಲೂ ಭಯವೆನಿಸುವ ಈ ಬಗೆಯ ಹವಾಮಾನ ಬದಲಾವಣೆಗಳು ಅದಾಗಲೇ ಭೂಮಿಯನ್ನು ನಡುಗಿಸುತ್ತಿವೆ. ಅದನ್ನು ಮಾಡಲೆಂದೇ ಜಗತ್ತಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿವೆ. ಅಮೇರಿಕಾದ ಹಾರ್ಪ್ (ಹೆಚ್.ಎ.ಎ.ಆರ್.ಪಿ) ಅದರಲ್ಲೊಂದು.

1

ಪಶ್ಚಿಮದ ಎಲ್ಲಾ ಅಚ್ಚರಿಯ ಆವಿಷ್ಕಾರಗಳು ಜನ ಸಮುದಾಯದ ಮೇಲಿನ ಪ್ರೀತಿಯಿಂದ ಅಭಿವೃದ್ಧಿಯಾದುದಲ್ಲ, ಬದಲಿಗೆ ಜನ ಸಮೂಹದ ವಿನಾಶಕ್ಕಾಗಿ ಅಭಿವೃದ್ಧಿಗೊಂಡವು. ಅಣುಶಕ್ತಿ ಸಂಶೋಧನೆಯಿಂದ ವಿದ್ಯುತ್ ಶಕ್ತಿ ಪಡೆಯಬೇಕೆಂಬ ತುಡಿತಕ್ಕಿಂತ ಅದನ್ನು ಬಳಸಿ ರಾಷ್ಟ್ರವೊಂದರ ವಿನಾಶ ಮಾಡುವುದು ಹೇಗೆಂಬುದರ ಆತುರವಿತ್ತು. ಯುದ್ಧದಲ್ಲಿ ಪ್ರತ್ಯಕ್ಷ ಭಾಗವಹಿಸದೇ ದೂರದಿಂದಲೇ ಶತ್ರು ರಾಷ್ಟ್ರ ವಿನಾಶಗೈಯ್ಯುವ ಆಲೋಚನೆ ಪ್ರತಿಯೊಬ್ಬ ಮಹತ್ವಾಕಾಂಕ್ಷಿ ರಾಜನಿಗೂ ಇದ್ದದ್ದೇ. ಅದರಲ್ಲೂ ಸಾರ್ವಭೌಮತೆಯ ತುಡಿತ ಹೊಂದಿದ ಅಮೇರಿಕಾದಂತಹ ರಾಷ್ಟ್ರಗಳಿಗಂತೂ ಅದು ಬಲು ಸಹಜ. 1940 ರ ವೇಳೆಗೆ ಹೀಗೆ ವಾತಾವರಣವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಶತ್ರು ವಿನಾಶದ ಪ್ರಯೋಗ ಶುರುಮಾಡಿತ್ತು ಅಮೇರಿಕಾ. 1947 ರಲ್ಲಿ ಅಲ್ಲಿನ ನೌಕಾಸೇನೆ ಮತ್ತು ವಾಯು ಸೇನೆಗಳು ಮೋಡದ ಮೇಲೆ ಡ್ರೈ ಐಸ್ ಸಿಂಪಡಿಸಿ ವಿಪರೀತ ಮಳೆ ತರಿಸುವ ಪ್ರಯತ್ನ ಆರಂಭಿಸಿತ್ತು. 1952 ರಲ್ಲಿ ಲಂಡನ್ನಿನ ರಾಯಲ್ ಏರ್ಫೋಸರ್್ ಮೋಡ ಬಿತ್ತನೆಗೆ ಮಾಡಿದ ಪ್ರಯತ್ನದಿಂದ ಉಂಟಾದ ಭಯಾನಕ ಮಳೆಗೆ ಅನೇಕ ಹಳ್ಳಿಗಳು ಜಲಾವೃತವಾಗಿಬಿಟ್ಟವು. ಅದೇ ವೇಳೆಗೆ ಅಮೇರಿಕಾದ ಅರಣ್ಯಗಳಲ್ಲಿ ಬೆಂಕಿ ಹೊತ್ತುವುದನ್ನು ತಡೆಯಲು ಸಿಡಿಲನ್ನೇ ತಡೆಯುವ ಯೋಜನೆ ರೂಪಿಸಿಬಿಟ್ಟಿದ್ದರು.

ನಾವಿಲ್ಲಿ ಪ್ರಕೃತಿಯೊಂದಿಗೆ ಸಮತೋಲನ ಕಾಯ್ದುಕೊಳ್ಳಲು ಗಿಡನೆಟ್ಟು, ಸೀಡ್ ಬಾಲ್ಗಳನ್ನೆಸೆದು ಅರಣ್ಯ ನಿಮರ್ಾಣಕ್ಕೆ ಕೈಹಾಕಿ, ಕಲ್ಯಾಣಿ-ಕೆರೆಗಳ ಪುನರುಜ್ಜೀವನ ಮಾಡುತ್ತಾ, ಅಂತರ್ಜಲದ ಹರಿವನ್ನೂ ಹೆಚ್ಚಿಸುವ ಜಲಜಾಗೃತಿಯ ಕಾರ್ಯಕ್ರಮಗಳಿಗೆ ಜೀವ ತುಂಬುತ್ತ ಸಾತ್ವಿಕ ಪ್ರಯತ್ನಗಳನ್ನು ಮಾಡುತ್ತಿದ್ದರೆ ಜಗತ್ತಿನ ಕೆಲವು ರಾಷ್ಟ್ರಗಳು ಇವೆಲ್ಲವನ್ನೂ ಮೀರಿ ಅಗತ್ಯ ಬಿದ್ದಾಗ ತಮಗೆ ವಿರೋಧಿಯೆನಿಸಿದ ರಾಷ್ಟ್ರದ ವಾತಾವರಣವನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಪ್ರಕೃತಿಯ ಸಮಚಿತ್ತವನ್ನೇ ಕಲಕುತ್ತಿದ್ದಾರೆ. ಈ ಎಲ್ಲಾ ವಿಕೃತ ಮನಸ್ಥಿತಿ ಯುದ್ಧದ ಹೊತ್ತಲ್ಲೇ ತುದಿ ಮುಟ್ಟೋದು. ಪ್ರತಿ ವಿಶ್ವಯುದ್ಧದ ವೇಳೆಗೂ ಇಂತಹುದೊಂದು ಭಯಾನಕ ಶಸ್ತ್ರ ಸಂಶೋಧಿತವಾಗಿ ಪರೀಕ್ಷೆಗೆ ಒಳಪಡುತ್ತದೆ. ಮುಂದಿನ ದಶಕಗಳ ಕಾಲ ಅದು ಜಗತ್ತನ್ನು ಬೆದರಿಸುತ್ತಲೇ ಇರುತ್ತದೆ.

ಅಮೇರಿಕಾ-ರಷ್ಯಾ ನಡುವಣ ಶೀತಲ ಸಮರ ಆರಂಭವಾದಾಗ ಇವೆಲ್ಲಕ್ಕೂ ಭರ್ಜರಿ ಮುನ್ನುಡಿ ಬರೆದಂತಾಯ್ತು. 1976 ರಲ್ಲಿ ರಷ್ಯಾದಿಂದ ಹೊರಟ ರೇಡಿಯೋ ಸಿಗ್ನಲ್ಗಳು ಅಮೇರಿಕಾದ ಸಂಪರ್ಕ ವ್ಯವಸ್ಥೆಯನ್ನು ಧ್ವಂಸಗೊಳಿಸಿದ್ದವು. ಅನೇಕರು ಮಾನಸಿಕ ಸ್ಥಿಮಿತ ಕಳೆದುಕೊಂಡು ಆಲಸಿಗಳಂತಾಗಿಬಿಟ್ಟಿದ್ದರು. ಬಲುಬೇಗ ಇದನ್ನು ಗುರುತಿಸಿ ಅದಕ್ಕೆ ಪ್ರತಿ ದಾಳಿ ಮಾಡಿದ ಅಮೇರಿಕಾ ನಂತರ ತಾನೇ ಈ ಸಂಶೋಧನೆಯಲ್ಲಿ ಆಳಕ್ಕಿಳಿಯಿತು. ಹವಾಮಾನ ಮಾದರಿಯನ್ನು ತನಗೆ ಬೇಕಾದಂತೆ ಬದಲಾಯಿಸುವ ಸಂಶೋಧನೆ ಏಕಕಾಲಕ್ಕೆ ಅನೇಕ ಕಡೆ ಶುರುವಾದವು. ಮಲೇಷಿಯಾ ಮತ್ತು ರಷ್ಯಾ ಕೃತಕ ಸೈಕ್ಲೋನ್ ಬರಿಸುವ ಒಪ್ಪದಂಕ್ಕೆ 1997 ರಲ್ಲಿ ಅಧಿಕೃತವಾಗಿ ಸಹಿ ಹಾಕಿತ್ತು! ಹಾಗಂತ ಇದು ರಷ್ಯಾ ಮತ್ತು ಅಮೇರಿಕಾ ಮಾತ್ರ ನಡೆಸುತ್ತಿರುವ ಸಂಶೋಧನೆ ಎಂದು ಭಾವಿಸಬೇಡಿ. 2005 ರ ಬಿಸಿನೆಸ್ ವೀಕ್ನ ಪ್ರಕಾರ ಚೀನಾ ಕೂಡ ಈ ಸಂಶೋಧನೆಯಲ್ಲಿ ಪ್ರತಿ ವರ್ಷ ಕೋಟ್ಯಂತರ ಡಾಲರುಗಳನ್ನು ವ್ಯಯಿಸುತ್ತಿದೆ. ಬ್ರಹ್ಮಪುತ್ರಾ ನದಿಯ ಹರಿವನ್ನು ನಿಯಂತ್ರಿಸಿ ಉತ್ತರ ಭಾರತದಲ್ಲಿ ಪ್ರವಾಹ ತರಿಸುವ ಚೀನಾದ ಪ್ರಯತ್ನವಂತೂ ನಮಗೆ ಗೊತ್ತಿರುವಂಥದ್ದೇ. ಕೇದಾರದಲ್ಲಿ ಮೇಘ ಸ್ಫೋಟವಾದುದರ ಹಿಂದೆಯೂ ಇದೇ ಬಗೆಯ ಪ್ರಯೋಗವಾಗಿದ್ದಿರಬಹುದೆನ್ನುವುದನ್ನು ಅಲ್ಲಗಳೆಯುವುದು ಕಷ್ಟ.
ಅಮೇರಿಕಾದಲ್ಲಿ ವಾನ್ ನ್ಯೂಮನ್ 1940 ರಲ್ಲಿ ಇಂತಹುದೊಂದು ಸಂಶೋಧನೆಗೆ ಕೈ ಹಾಕಿದರು. 1967 ರಲ್ಲಿ ಪ್ರಾಜೆಕ್ಟ್ ಪೊಪೆಯೆ ಅನ್ನೋ ಹೆಸರಲ್ಲಿ ಯುದ್ಧದ ವೇಳೆ ವಿಯೆಟ್ನಾಂಗೆ ಕಿರಿಕಿರಿ ಉಂಟು ಮಾಡಲೆಂದು ಆ ವರ್ಷದ ಮಾನ್ಸೂನ್ ವಿಸ್ತರಿಸುವ ಅಂದರೆ ಸಾಮಾನ್ಯಕ್ಕಿಂತ ದೀರ್ಘಕಾಲದ ಮಳೆಗಾಲವಾಗುವಂತೆ ಮಾಡುವ ಪ್ರಯತ್ನಕ್ಕೆ ಚಾಲನೆ ನೀಡಲಾಯಿತು. ಯಶಸ್ವಿಯಾದ ಅಮೇರಿಕಾ ಸಂಶೋಧನೆಗೆ ಹೆಚ್ಚು ಒತ್ತು ನೀಡಿತು. 1992 ರಲ್ಲಿ ಅಲಾಸ್ಕಾದಲ್ಲಿ ಹಾರ್ಪ್ ಶುರುವಾಯಿತು.

OLYMPUS DIGITAL CAMERA

ಭೂಮಿಯ ಮೇಲೆ ಐವತ್ತು ಕಿ.ಮೀ ನಿಂದ ಸುಮಾರು ಸಾವಿರ ಕಿ.ಮೀ ವ್ಯಾಪ್ತಿಯವರೆಗೆ ಹಬ್ಬಿರುವ ಎಲೆಕ್ಟ್ರಾನುಗಳಿಂದ ತುಂಬಿರುವ ರಕ್ಷಾ ಪದರವನ್ನು ಅಯಾನುಗೋಳ ಅಂತಾರೆ. ಈ ಅಯಾನುಗೋಳದ ನಮಗೆ ಬೇಕಾದಷ್ಟು ಭಾಗವನ್ನು ಭೂಮಿಯಿಂದಲೇ ನಿಯಂತ್ರಿಸಿ ಅದರ ಉಷ್ಣತೆಯನ್ನು ಹೆಚ್ಚಿಸುವ ಸಾಹಸ ಮಾಡೋದು ಹಾಪರ್್ನ ಉದ್ದೇಶ. ಹೀಗೆ ಅಯಾನುಗೋಳ ಬಿಸಿಯಾಗುತ್ತಿದ್ದಂತೆ ಅದು ಮೇಲು ಮೇಲಕ್ಕೆ ಸರಿಯುತ್ತ ಹೋಗುತ್ತದೆ. ಸಹಜವಾಗಿಯೇ ಅದರಡಿಯಲ್ಲಿದ್ದ ಮೋಡಗಳು ಚೆದುರಲಾರಂಭಿಸುತ್ತವೆ. ಮಳೆ ಸುರಿಸಬೇಕಿದ್ದ ಮೋಡಗಳು ಅಷ್ಟು ಜಾಗದಲ್ಲಿ ಮಳೆಯ ಹನಿ ಸುರಿಸದೇ ಮುಂದೆ ಹೊರಟುಬಿಡುತ್ತವೆ. ಆಯ್ಕೆ ಮಾಡಿಕೊಂಡಂತಹ ಅಯಾನುಗೋಳ ಕಾದು ಆ ಜಾಗ ಸಾಂದ್ರತೆ ಕಳಕೊಂಡಿತೆಂದರೆ ಸೂರ್ಯನಿಂದ ಹೊರಡುವ ಹಾನಿಯುಂಟು ಮಾಡುವ ವಿಕಿರಣಗಳು ಭೂಮಿಯ ಮೇಲಿನ ಬದುಕನ್ನು ದುಸ್ತರಗೊಳಿಸುತ್ತದೆ.
ಹಾಪರ್್ನ ವೆಬ್ಸೈಟ್ ಪ್ರಕಾರ ಅಯಾನುಗೋಳ ಬಿಸಿಯಾದರೆ ಏನಾಗಬಹುದೆಂದು ಅಧ್ಯಯನಕ್ಕೆ ನಡೆಸುತ್ತಿರುವ ಪ್ರಯೋಗ ಇದು. ಆದರೆ ಇದರ ಪೇಟೆಂಟ್ಗೆ ನೀಡಿದ ಅಜರ್ಿಯನ್ನು ನೋಡಿದರೆ ಎಂಥವರೂ ಹೌಹಾರಿಬಿಡುತ್ತಾರೆ. ಅದರ ಪ್ರಕಾರ, ‘ಅಯಾನುಗೋಳದ ಉಷ್ಣತೆ ನೂರಾರು ಡಿಗ್ರಿಯಷ್ಟು ಏರಿಸಲಾಗುತ್ತದೆ. ಈ ಮೂಲಕ ಭೂಮಿಯ ಬಹುಭಾಗದ ಸಂಪರ್ಕ ವ್ಯವಸ್ಥೆಯಲ್ಲಿ ಮೂಗು ತೂರಿಸುವ ಅಥವಾ ಪೂರ್ಣ ನಾಶಗೈಯ್ಯುವ ಸಾಮಥ್ರ್ಯ ಪಡೆಯಲಾಗುತ್ತದೆ. ಶತ್ರು ರಾಡಾರ್ಗಳಿಗೆ ಗುರುತೇ ಸಿಕ್ಕದಂತೆ ವಿಮಾನ ಶತ್ರು ನೆಲೆಯೊಳಕ್ಕೆ ನುಗ್ಗುವುದು ಸಾಧ್ಯವಾಗುತ್ತದೆ. ಅಥವಾ ರಡಾರ್ನ ನಿಯಂತ್ರಣ ತಪ್ಪಿಸಿ ವಿಮಾನಗಳು ಕೈತಪ್ಪಿ ಹೋಗುವಂತೆಯೂ ಮಾಡಬಹುದು. ದೊಡ್ಡ ಮೊತ್ತದ ಶಕ್ತಿಯನ್ನು ಉತ್ಪಾದಿಸಿ ಅದನ್ನು ಬೇರೆಡೆಗೆ ಸುಲಭವಾಗಿ ಸಾಗಿಸಬಹುದು. ವಾತಾವರಣದ ಬದಲಾವಣೆ ಮಾಡಿ, ಗಾಳಿಯ ಚಲನೆಯ ದಿಕ್ಕನ್ನೇ ಬದಲಾಯಿಸಿ, ವಾಯುಮಂಡಲದ ಅಪೇಕ್ಷಿತ ವಿಸ್ತೀರ್ಣದ ಕಣಗಳನ್ನು ಪ್ರಚೋದಿಸಿ ಅದನ್ನೇ ಲೆನ್ಸ್ನಂತೆ ಮಾಡಿ ಸೂರ್ಯನ ಶಾಖ ಅಷ್ಟೇ ಭಾಗದಲ್ಲಿ ಬೆಂಕಿಯಾಗುವಂತೆ ಮಾಡಬಹುದು. ಭೂಮಿಯ ಆಯಸ್ಕಾಂತೀಯ ಕ್ಷೇತ್ರವನ್ನೇ ಏರುಪೇರು ಮಾಡಿ ಅದನ್ನೇ ನಂಬಿ ನಡೆಯುತ್ತಿರುವ ಎಲ್ಲ ವ್ಯವಸ್ಥೆಯನ್ನು ಬುಡಮೇಲುಗೊಳಿಸಬಹುದು.’ ಇವೆಲ್ಲವನ್ನೂ ಅಮೇರಿಕಾ ಅಧ್ಯಯನದ ದೃಷ್ಟಿಯಿಂದ ಮಾಡುವುದೆಂದು ಹೇಳಿಕೊಳ್ಳುವುದಾದರೂ ಅದನ್ನು ಅಲ್ಲಗಳೆಯಲು ಸ್ಪಷ್ಟ ಪುರಾವೆಯೊಂದಿದೆ. ಅಲಾಸ್ಕಾದಲ್ಲಿ ಈ ಯೋಜನೆಗೆ ಬೇಕಾದ ಆಂಟೆನಾಗಳ ನಿಮರ್ಾಣ, ಹೆಚ್ಚಿನ ಫ್ರೀಕ್ವೆನ್ಸಿಯ ರೆಡಿಯೋ ತರಂಗಗಳ ಉತ್ಪಾದನೆಯ ವ್ಯವಸ್ಥೆ ಇವೆಲ್ಲಕ್ಕೂ ಬೇಕಾದ ಹಣಕಾಸು ಬಂದಿರೋದು ಅಮೇರಿಕಾದ ವಾಯುದಳ ಮತ್ತು ನೌಕಾದಳದ ಕಡೆಯಿಂದಲೇ. ರಕ್ಷಣಾ ಇಲಾಖೆಯಿಂದಲೇ ಹಣ ಹೂಡಿಕೆಯಾಗಿದೆಯೆಂದರೆ ಅದನ್ನು ಬಳಸುವವರಾರು ಎಂಬುದನ್ನು ಅರಿಯುವುದು ಕಷ್ಟವಲ್ಲ.
ಹಿಸ್ಟರಿ ಚಾನೆಲ್ಲು ಈ ವಾತಾವರಣದ ಯುದ್ಧದ ಕುರಿತಂತೆ ಮಾಡಿದ ಕಿರು ಚಿತ್ರದಲ್ಲಿ ಸ್ಪಷ್ಟವಾಗಿ ಹೇಳಿದೆ, ‘ವಿದ್ಯುತ್ಕಾಂತೀಯ ಶಸ್ತ್ರಾಸ್ತ್ರಗಳು ಮಿಂಚಿಗಿಂತ ನೂರು ಪಾಲು ಶಕ್ತಿಶಾಲಿಯಾದವು. ಅವು ಶತ್ರುಗಳ ಮಿಸೈಲ್ಗಳನ್ನು ಆಕಾಶದಲ್ಲಿಯೇ ಧ್ವಂಸಗೊಳಿಸಬಲ್ಲುದು, ಶತ್ರು ಸೈನಿಕನ ಕಂಗಳು ಕುರುಡಾಗುವಂತೆ ಮಾಡಬಲ್ಲುದು, ದಾಳಿಗೆ ಬರುವ ನಿಯಂತ್ರಣಕ್ಕೆ ಸಿಗದ ಜನರ ಚರ್ಮ ಉರಿದು ಹೋಗುವಂತೆ ಮಾಡಬಹುದು, ಅಷ್ಟೇ ಅಲ್ಲ. ಒಂದು ಬೃಹತ್ ನಗರದ ಮೇಲೆ ಈ ಶಸ್ತ್ರ ಬಳಕೆ ಮಾಡಿದರೆ ಕೆಲವೇ ಕ್ಷಣದಲ್ಲಿ ಆ ನಗರದ ಎಲೆಕ್ಟ್ರಾನಿಕ್ಸ್ ವ್ಯವಸ್ಥೆಯನ್ನೇ ಧ್ವಂಸಗೊಳಿಸಬಹುದು.’ ಅಂದರೆ ಮನೆಯೊಳಗಿರುವ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಕ್ಷಣಾರ್ಧದಲ್ಲಿ ವ್ಯರ್ಥವಾಗಿಬಿಡುತ್ತವೆ. ಓಹ್! ಬರಲಿರುವ ದಿನಗಳಲ್ಲಿ ಈ ಬಗೆಯ ಯುದ್ಧವಾದರೆ ಅದು ಸರ್ವನಾಶವೇ.

3

ನನ್ನ ಚಿಂತೆ ಯುದ್ಧದ್ದಲ್ಲ. ನಿರಂತರ ನಡೆಯುತ್ತಿರುವ ಪ್ರಕೃತಿ ನಾಶದ್ದು. ಸಹಜವಾಗಿ ಶಾಂತವಾಗಿದ್ದ ಪ್ರಕೃತಿಯನ್ನು ಸದಾ ಕೆಣಕುತ್ತಿದ್ದರೆ ಆಕೆ ಸುಮ್ಮನಿರುವಳೇನು? ಸಹ ಮಾನವರ ನಾಶಕ್ಕೆಂದು ನಾವು ನಡೆಸುತ್ತಿರುವ ಸಂಶೋಧನೆಗಳು, ಆವಿಷ್ಕಾರ ಮಾಡುತ್ತಿರುವ ಶಸ್ತ್ರಗಳು ನಮ್ಮನ್ನು ಎಲ್ಲಿಗೊಯ್ದು ನಿಲ್ಲಿಸುವುದು ಹೇಳಿ. ಎರಡನೇ ವಿಶ್ವಯುದ್ಧದ ವೇಳೆಗೆ ಜರ್ಮನಿಯ ಹಿಟ್ಲರ್ನ್ನು ತಹಬಂದಿಗೆ ತರಲು ಸುನಾಮಿ ಬಾಂಬಿನ ಆವಿಷ್ಕಾರ ನಡೆದಿತ್ತು. ಪ್ರಾಜೆಕ್ಟ್ ಸೀಲ್ ಎಂಬ ಹೆಸರಿನ ಈ ಯೋಜನೆಗೆ ಅಮೇರಿಕಾ ಮತ್ತು ನ್ಯೂಜಿಲ್ಯಾಂಡಿನ ಸಹಯೋಗವಿತ್ತಂತೆ. ಸುಮಾರು ಏಳು ತಿಂಗಳ ಕಾಲ ನಡೆದ ಪ್ರಯೋಗಾರ್ಥ ಪರೀಕ್ಷೆಗಳ ನಂತರ ದೊಡ್ಡ ಮೊತ್ತದ ಸ್ಫೋಟಕವನ್ನು ದಡದಿಂದ 8 ಕಿ.ಮೀ ದೂರದಲ್ಲಿ ಸ್ಫೋಟಿಸಿದರೂ ಸುನಾಮಿ ಸೃಷ್ಟಿಸುವುದು ಸಾಧ್ಯವೆಂದು ನಿಶ್ಚಯಿಸಲಾಯಿತು. ಅದನ್ನು ಪೂರ್ಣವಾಗಿ ಅಭಿವೃದ್ಧಿ ಪಡಿಸಿದ್ದರೆ ಅದು ಸಮುದ್ರ ತಟದಲ್ಲಿರುವ ರಾಷ್ಟ್ರಗಳ ಚಿತ್ರಣವನ್ನೇ ಬದಲಾಯಿಸಿಬಿಡುತ್ತಿತ್ತೆನ್ನುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಪೂರಕವಾಗಿ ಪುಟಿಯುವ ಬಾಂಬು ತಯಾರಿಸಿದ್ದು ಈ ಹೊತ್ತಲ್ಲೇ. ಬೃಹತ್ ಡ್ಯಾಂಗಳ ಒಡ್ಡಿನ ಹತ್ತಿರಕ್ಕೆ ಇದನ್ನು ಬಿಸಾಡಿದರೆ ಅದು ಪುಟಿಯುತ್ತ ಡ್ಯಾಂನ ಕಟ್ಟೆಯ ಸಮೀಪ ನೀರೊಳಗೆ ಮುಳುಗಿ ಅಲ್ಲಿಯೇ ಸಿಡಿಯುವಂತೆ ರೂಪಿಸಲಾಗಿತ್ತು. ನೀರೊಳಗೆ ಸಿಡಿಯುವ ಈ ಬಾಂಬು ಅಣೆಕಟ್ಟುಗಳನ್ನೇ ಧ್ವಂಸಗೊಳಿಸಿದರೆ ಆಳುವ ದೊರೆಗಳು ಹೈರಾಣಾಗುವುದು ಶತಃಸಿದ್ಧ. ಇದಷ್ಟೇ ಅಲ್ಲದೇ ಭೂಮಿಯೊಳಗಿನ ಟೆಕ್ಟಾನಿಕ್ ಪ್ಲೇಟುಗಳನ್ನು ಅಲುಗಾಡಿಸಿ ಭೂಕಂಪ ತರಿಸುವ ತಂತ್ರಜ್ಞಾನ ಈ ಮುಂದುವರಿದ ರಾಷ್ಟ್ರಗಳ ಕೈಲಿದೆ ಅನ್ನೋದು ಕರಾಳ ಭವಿಷ್ಯದ ಮುನ್ಸೂಚನೆ.

ಪ್ರಕೃತಿಯನ್ನು ಶಾಂತಗೊಳಿಸುವ ಸಾತ್ವಿಕ ಪ್ರಯತ್ನಗಳಿಗೆ ನಾವು ಕೈ ಹಾಕಿದ್ದರೆ ಅತ್ತ ಕೆಲವು ರಾಷ್ಟ್ರಗಳು ಪಕ್ಕಾ ಜಗತ್ತನ್ನು ಅಂಧಕಾರಕ್ಕೆ ತಳ್ಳುವ ತಾಮಸಿಕ ಮಾರ್ಗದ ಆರಾಧಕರಾಗಿದ್ದಾರೆ. ಇವರುಗಳು ಯಾವ ಪರಿಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದಾರೆಂದರೆ ಅಗತ್ಯ ಬಿದ್ದಾಗ ಕೃತಕ ಕ್ಷಾಮ ಸೃಷ್ಟಿಸಬಲ್ಲರು, ಬೇಕೆನಿಸಿದರೆ ಕೃತಕ ಮಂಜಿನ ಆವರಣವನ್ನೂ ನಿಮರ್ಿಸಬಲ್ಲರು. ಅಮೇರಿಕಾದ ವಾಯುಸೇನೆ 100 ಮೀಟರ್ ವಿಸ್ತಾರದ ಗಾಢ ಮಂಜಿನ ಆವರಣವನ್ನು ಕಣ್ಣೆವೆಯಿಕ್ಕುವುದರೊಳಗೆ ನಿಮರ್ಿಸಬಲ್ಲದು. ಮನಸ್ಸು ಮಾಡಿದರೆ ಅಲ್ಲಿನ ಸೇನೆ ಮೋಡಗಳ ನಡುವೆ ಕೈಯ್ಯಾಡಿಸಿ ಕೃತಕ ಮಿಂಚನ್ನು ಸೃಷ್ಟಿಸಿ ಅಗಾಧ ಪ್ರಮಾಣದ ಶಕ್ತಿಯನ್ನು ವಗರ್ಾಯಿಸಬಲ್ಲುದು. ಈ ಬಗೆಯ ಸಂಶೋಧನೆಗಳಿಗೆ ಆಯಾ ರಾಷ್ಟ್ರಗಳು ಅವರವರ ನೆಲವನ್ನೇ ಬಳಸಿಕೊಳ್ಳುತ್ತವೆ. ಈ ಹೊತ್ತಲ್ಲಿ ಅನಪೇಕ್ಷಿತ ಪರಿಣಾಮಗಳನ್ನೂ ಎದುರಿಸುತ್ತವೆ.

5

ಅಂತರರಾಷ್ಟ್ರೀಯ ಮಟ್ಟದ ಹವಾಮಾನ ಅಧ್ಯಯನದ ಸಂಸ್ಥೆ ಒಂದೂವರೆ ದಶಕದ ಹಿಂದೆ ಕೊಟ್ಟ ವರದಿ ಹಾಗೆಯೇ ಇತ್ತು. 1992 ರ ಮೇ ತಿಂಗಳಲ್ಲಿ ಅಮೇರಿಕಾದಲ್ಲಿ 399 ಟಾನರ್ೆಡೋಗಳು ದಾಖಲಾಗಿದ್ದರೆ ಜೂನ್ನಲ್ಲಿ ಅದು 562ಕ್ಕೇರಿತ್ತು. ಆ ವೇಳೆಯಲ್ಲಿ ಅಮೇರಿಕಾದ ಪೂರ್ವ ಭಾಗದಲ್ಲಿ ಮಾಮೂಲಿಗಿಂತ ಹೆಚ್ಚು ಚಳಿ ದಾಖಲಾಗಿತ್ತು. ಇವೆಲ್ಲಾ  ಹಾರ್ಪ್     ತoತ್ರಜ್ಞಾನದ ಅಭಿವೃದ್ಧಿಯ ವೇಳೆಯಲ್ಲಾದ ಬದಲಾವಣೆಗಳು. ಆಮೇಲೆ ಅದರ ಪ್ರಯೋಗ ಎಲ್ಲೆಡೆ ಮಾಡಲಾರಂಭಿಸಿದರಲ್ಲ, ಜಗತ್ತಿನ ವಾತಾವರಣವೂ ಅಸಹಜ ಬೆಳವಣಿಗೆ ತೋರಲಾರಂಭಿಸಿತು. ಹಿಮಾಲಯ ಕರಗುವ ವೇಗ ತೀವ್ರವಾಗಿದ್ದು ಇದೇ ಹೊತ್ತಲ್ಲಿ. ಸುನಾಮಿ ಅಲೆಗಳೆದ್ದು ಕರಾವಳಿ ಉಧ್ವಸ್ತಗೊಂಡಿತಲ್ಲ ಅದೂ ಪರಿಸರವಾದಿಗಳ ಬುದ್ಧಿಮತ್ತೆಗೆ ನಿಲುಕದಷ್ಟು ಅಸಹಜವೇ ಆಗಿತ್ತು. ಎಲ್ಲೆಡೆ ಅಯಾನುಗೋಳದ ಮೇಲೆ ಈ ರೀತಿಯ ಪ್ರಯೋಗಗಳು ನಡೆಯುತ್ತಿರಬೇಕಾದರೆ ಭೂಮಿಯ ಸ್ವಾಸ್ಥ್ಯ ಹಾಳಾಗುವುದು ಸಹಜವೇ.

ಅದಾದ ಮೇಲೆಯೇ ಮುಂದುವರೆದ ರಾಷ್ಟ್ರಗಳೆಲ್ಲ ಸೇರಿ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ, ಕಾರ್ಬನ್ ಹೊಗೆ ಉಗುಳುವಿಕೆ ಎಂದೆಲ್ಲಾ ಮಾತನಾಡಲು ಶುರುಮಾಡಿದ್ದು. ಆಗುತ್ತಿರುವ ಪಾರಿಸರಿಕ ಬದಲಾವಣೆಗಳಿಗೆ ಯಾರ ಮೇಲಾದರೂ ಗೂಬೆ ಕೂರಿಸಲೇ ಬೇಕಿತ್ತಲ್ಲ! ಅಭಿವೃದ್ಧಿಯ ನಾಗಾಲೋಟದಲ್ಲಿ ಮುಂದಿರುವ ರಾಷ್ಟ್ರಗಳು ಭೂಮಂಡಲದ ಸರ್ವನಾಶಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ಕುಳಿತಿವೆ. ಇವುಗಳ ಸೋಂಕಿಲ್ಲದ ದೇಶಗಳು ಮಾತ್ರ ಜಗತ್ತಿನ ಒಳಿತಿಗೆ ತಮ್ಮನ್ನು ತಾವೇ ತೇಯ್ದುಕೊಳ್ಳುತ್ತಿವೆ. ಈ ಬಾರಿ ತಾಮಸಿಕ ಶಕ್ತಿಯ ವಿಶ್ವಸಮರವೆಂದರೆ ಮತ್ತೊಂದು ವಿಶ್ವರೂಪದರ್ಶನ ಆಗಲೇಬೇಕು!

Comments are closed.