ವಿಭಾಗಗಳು

ಸುದ್ದಿಪತ್ರ


 

ಖಿಲ್ಜಿಯ ಮಾನಸಿಕ ತೊಳಲಾಟಗಳ ಅನಾವರಣ ಪದ್ಮಾವತ್!

ಒಬ್ಬ ಕಥೆಗಾರನಿಗೆ ಮೂಲ ಹಂದರಕ್ಕೆ ಧಕ್ಕೆಯೊದಗದಂತೆ ಕಥೆ ಹೇಳಬಲ್ಲ ಸ್ವಾತಂತ್ರ್ಯ ಕೊಡದಿದ್ದರೆ ರಾಮಾಯಣ ಇಷ್ಟೊಂದು ಆಕಾರ, ಅಲಂಕಾರಗಳನ್ನು ಕಾಣುತ್ತಿರಲಿಲ್ಲ. ಪ್ರತಿಯೊಂದು ಕಾವ್ಯಕ್ಕೂ ಕಥೆಗಾರ ರಸ ತುಂಬುತ್ತಾನೆ. ಹೊಸ ಪಾತ್ರಗಳು ಸೃಷ್ಟಿಯಾಗುತ್ತವೆ; ಹೊಸ ಕಲ್ಪನೆಗಳು ಗರಿಗೆದರುತ್ತವೆ. ಹಾಗೆ ಮಾಡದಿದ್ದರೆ ದೂರದರ್ಶನದ ಧಾರಾವಾಹಿಗೂ ಈ ಸಿನಿಮಾಗಳಿಗೂ ಭಾಳ ವ್ಯತ್ಯಾಸ ಉಳಿಯಲಾರದು!

ಕೊನೆಗೂ ರಾಜಸ್ಥಾನದ ಕರಣಿ ಸೇನಾ ಒಂದು ಅತ್ಯಂತ ಕೆಟ್ಟ ಯೂ ಟನರ್್ನೊಂದಿಗೆ ಪದ್ಮಾವತ್ ವಿವಾದಕ್ಕೆ ಅಂತ್ಯ ಹಾಡಿದೆ. ಆದರೆ ಇತಿಹಾಸವನ್ನು, ಭಾರತೀಯ ಪರಂಪರೆ, ಸಭ್ಯತೆಗಳನ್ನು ಸಮರ್ಥವಾಗಿ ಮುಂದಿಡುವ ಒಬ್ಬ ಅದ್ಭುತ ನಿದರ್ೇಶಕನಿಗೆ ಅದೆಷ್ಟು ಸಾಧ್ಯವೋ ಅಷ್ಟು ಮಾನಸಿಕ ಚಿತ್ರಹಿಂಸೆ ನೀಡಿ ಎಲ್ಲರಂತೆ ನಾಯಕ-ನಾಯಕಿಯರು ಮರ ಸುತ್ತುವ ಚಿತ್ರಗಳಿಗೆ ಬದ್ಧವಾಗುವಂತೆ ಮಾಡಿಬಿಟ್ಟೆವು. ಅನೇಕ ಬಾರಿ ಮತ-ಪಂಥಗಳು, ಭಾಷೆ-ಸಂಸ್ಕೃತಿಗಳು ಬೇಲಿಯಾದಾಗ ಬುದ್ಧಿ ಯೋಚಿಸುವುದನ್ನು ನಿಲ್ಲಿಸಿಬಿಡುತ್ತದೆ. ತಾಲೀಬಾನ್ ಎಂಬ ಸಂಸ್ಕೃತಿ ಆವಾಹನೆಯಾಗಿಬಿಡುತ್ತದೆ ಎಂಬುದಕ್ಕೆ ಪದ್ಮಾವತ್ ಸಿನಿಮಾದ ಪ್ರಕರಣವೇ ಸುಂದರ ಉದಾಹರಣೆ. ಊಟ ಬೇಡ ಮತಗ್ರಂಥ ಬೇಕು; ಉದ್ಯೋಗ ಬೇಡ, ಮತವನ್ನುಳಿಸಲು ಕತ್ತಿ ಬೇಕು, ಶಿಕ್ಷಣ ಬೇಡ, ವೈಚಾರಿಕ ವಿರೋಧಿಯ ರಕ್ತ ನೋಡಬೇಕು ಇವೆಲ್ಲ ಅಕ್ಷರಶಃ ತಾಲೀಬಾನೀ ಸಂಸ್ಕೃತಿಯೇ. ನಮ್ಮ ಮೇಲೂ ಇದು ತನ್ನ ಪ್ರಭಾವ ಬೀರುವ ಲಕ್ಷಣ ಜೋರಾಗಿಯೇ ಕಾಣುತ್ತಿದೆ. ಇಲ್ಲವಾದರೆ ವಿಕಾಸ ಬೇಡ, ಧರ್ಮ ಬೇಕು; ದೇಶದ ಪ್ರಗತಿ ಬೇಡ, ಉಗ್ರ ಭಾಷಣ ಬೇಕು ಎಂದು ನಾವೆಲ್ಲ ರಂಪಾಟ ಮಾಡುತ್ತಿರಲಿಲ್ಲ. ಹಿಂದೂಗಳು ಬೌದ್ಧಿಕವಾಗಿ ಬಲಾಢ್ಯರು, ಮುಸಲ್ಮಾನರು ದೈಹಿಕವಾಗಿ. ಹಿಂದೂಗಳನ್ನು ಒಂದೆರಡು ಮಾತುಗಳಿಂದ ಉದ್ದೀಪಿಸಿ ತಮಗಿಚ್ಛೆ ಬಂದಂತೆ ದುಡಿಸಿಕೊಳ್ಳುವುದು ಕಷ್ಟ, ಮುಸಲ್ಮಾನರು ಹಾಗಲ್ಲ ಕುರಾನಿಗೆ ಧಕ್ಕೆಯೊದಗಿದೆ ಎಂಬ ಒಂದು ಗಾಳಿ ಸುದ್ದಿ ಸಿಕ್ಕರೂ ಸಾಕು ಅವರು ಸುತ್ತಲೂ ಬೆಂಕಿ ಹಚ್ಚಲು ತಯಾರು! ಯಾಕೋ ನಮಗರಿವಿಲ್ಲದಂತೆಯೇ ನಾವೂ ಆ ದಿಕ್ಕಿನತ್ತ ಸಾಗುತ್ತಿದ್ದೇವೆ. ವಿಶ್ವದ ಇತಿಹಾಸದಲ್ಲಿ ನುಗ್ಗಿದ, ಏರಿಹೋದ ಪ್ರಭೇದದ ಪ್ರಾಣಿಗಳೆಲ್ಲವೂ ಹೆಸರಿಲ್ಲದಂತೆ ನಾಶವಾಗಿವೆ. ಇತರರ ಕೊಂದು ಮೆರೆದ ನಾಗರೀಕತೆಗಳೂ ತಾವೇ ನಾಮಾವಶೇಷವಾಗಿವೆ. ಹಾಗಿರುವಾಗ ಕಾಲದ ಪ್ರವಾಹದಲ್ಲಿ ಶಾಶ್ವತವೆಂಬುದು ಯಾರೆಂಬುದರ ಕುರಿತಂತೆ ಎಚ್ಚರಿಕೆ ಹೊಂದಿರಲೇಬೇಕು. ಹಾಗಂತ ಪ್ರತಿಕ್ರಿಯೆ ನೀಡಬಾರದೆಂದಲ್ಲ ಅದು ಬುದ್ಧಿಯ ಪರಿಧಿಯನ್ನು ದಾಟಿಬಿಡಬಾರದಷ್ಟೇ. ಹಾಗಿಲ್ಲವಾದಲ್ಲಿ ಪದ್ಮಾವತಿಯ ವಿರೋಧ ಮಾಡುವ ನೆಪದಲ್ಲಿ ಹೇಸಿಗೆ ಮಾಡಿಕೊಂಡಂತಾಗುತ್ತದೆ!

1

ಹೌದು. ನಿಜಕ್ಕೂ ಇದು ಹೇಸಿಗೆಯೇ. ಸಂಜಯ್ ಲೀಲಾ ಭನ್ಸಾಲಿ ತನ್ನ ನಿದರ್ೇಶನದ ಶೈಲಿಯಿಂದಲೇ ಖ್ಯಾತಿ ಪಡೆದವರು. ಅವರ ಇತ್ತೀಚಿನ ಬಾಜೀರಾವ್ ಮಸ್ತಾನಿ ಅದೊಂದು ದೃಶ್ಯ ಕಾವ್ಯ. ಮರಾಠಾ ಮಹಾರಾಜ ಬಾಜೀರಾವ್ ಪೇಶ್ವೆಯ ಕಥೆಯನ್ನು ಹೆಕ್ಕಿ ತೆಗೆದು, ಅದನ್ನು ಚಿತ್ರಕ್ಕೆ ಹೆಣೆದು, ಅಂದಿನ ಕಾಲದ ದೃಶ್ಯಗಳಿಗೆ ಮರು ಜೀವ ತುಂಬಿ ಕಣ್ಣೆದುರಿಗೆ ಮರಾಠಾ ವೈಭವವನ್ನು ತುಂಬಿಸಿಕೊಟ್ಟ ಸಂಜಯ್ಗೆ ಶತ ಶತ ನಮನ. ಅಲ್ಲಿಯವರೆಗೆ ಬಾಜೀರಾವ್ನ ಹೆಸರೇ ಕೇಳದಿದ್ದ ಪುಣ್ಯಾತ್ಮರೆಲ್ಲ ಮಸ್ತಾನಿಯ ಕಥೆಯ ಎಳೆಯೊಂದು ಚಿತ್ರದಲ್ಲಿ ಬಂತೆಂಬ ಕಾರಣಕ್ಕೆ ಕೆಂಡ ಕೆಂಡವಾದರು. ಒಬ್ಬ ಮುಸ್ಲೀಂ ಹೆಣ್ಣು ಮಗಳಿಗಾಗಿ ಬಾಜೀರಾವ್ ಇಷ್ಟು ಬಲಹೀನನಾಗಿಬಿಟ್ಟನೆಂಬುದೇ ಅವರಿಗೆ ಸಹಿಸಲಾಗಿರಲಿಲ್ಲ. ಮಸ್ತಾನಿಯ ಕಥೆ ಬಾಜೀರಾವ್ನ ಬದುಕಿನಲ್ಲಿ ಇಣುಕಿರುವುದು ನಿಜ. ಅದನ್ನು ಆನಂತರದ ಇತಿಹಾಸಕಾರರು ಅಲ್ಲಲ್ಲಿ ಮರೆ ಮಾಚಿರುವುದೂ ಸತ್ಯ. ಹಾಗಂತ ಅದು ಸಂಜಯ್ ತೋರಿಸಿದಷ್ಟು ಆಳವಾಗಿತ್ತಾ ಎಂಬುದಕ್ಕೆ ಸೂಕ್ತ ಪುರಾವೆಗಳಿಲ್ಲ, ಇಲ್ಲ ಎನ್ನುವುದಕ್ಕೂ ಸಾಕ್ಷ್ಯಾಧಾರಗಳಿಲ್ಲ. ಒಬ್ಬ ಕಥೆಗಾರನಿಗೆ ಮೂಲ ಹಂದರಕ್ಕೆ ಧಕ್ಕೆಯೊದಗದಂತೆ ಕಥೆ ಹೇಳಬಲ್ಲ ಸ್ವಾತಂತ್ರ್ಯ ಕೊಡದಿದ್ದರೆ ರಾಮಾಯಣ ಇಷ್ಟೊಂದು ಆಕಾರ, ಅಲಂಕಾರಗಳನ್ನು ಕಾಣುತ್ತಿರಲಿಲ್ಲ. ಪ್ರತಿಯೊಂದು ಕಾವ್ಯಕ್ಕೂ ಕಥೆಗಾರ ರಸ ತುಂಬುತ್ತಾನೆ. ಹೊಸ ಪಾತ್ರಗಳು ಸೃಷ್ಟಿಯಾಗುತ್ತವೆ; ಹೊಸ ಕಲ್ಪನೆಗಳು ಗರಿಗೆದರುತ್ತವೆ. ಹಾಗೆ ಮಾಡದಿದ್ದರೆ ದೂರದರ್ಶನದ ಧಾರಾವಾಹಿಗೂ ಈ ಸಿನಿಮಾಗಳಿಗೂ ಭಾಳ ವ್ಯತ್ಯಾಸ ಉಳಿಯಲಾರದು!

ಇಷ್ಟಕ್ಕೂ ಬಾಜೀರಾವ್ ಮಸ್ತಾನಿಯನ್ನು ಮಸಲ್ಮಾನ ಹುಡುಗಿಯೊಬ್ಬಳು ನೋಡಿದರೆ ಅವಳಿಗೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಹಿಂದೂ ಹುಡುಗರ ಬಗ್ಗೆ ಆಂತರ್ಯದಲ್ಲಿ ಪ್ರೇಮ ಹುಟ್ಟಬೇಕಲ್ಲವೇ? ಲವ್ ಜೀಹಾದ್ಗೆ ನಿಜಕ್ಕೂ ಉತ್ತರವಾಗಬೇಕಿತ್ತು ಅದು. ಸಲ್ಮಾನ್ ಖಾನನ ದೇಹ ಸೌಷ್ಟವವನ್ನು ತೋರಿಸಿ ಅದರಂತಿರುವ ಮುಸಲ್ಮಾನ ಹುಡುಗರತ್ತ ಹಿಂದೂ ಹೆಣ್ಣುಮಕ್ಕಳು ಸೆಳೆಯಲ್ಪಡುತ್ತಾರೆಂಬುದು ಆರೋಪವಾದರೆ ಸಂಜಯ್ ಲೀಲಾ ಭನ್ಸಾಲಿಯ ಚಿತ್ರಗಳು ಇದಕ್ಕೆ ಉತ್ತರವಾಗಬೇಕಲ್ಲ. ಹೀಗೆಲ್ಲ ಯೋಚಿಸುವುದನ್ನು ಕಂಡಾಗ ಸಹಜವಾಗಿಯೇ ನಗುವುಕ್ಕುತ್ತದೆ. ಮೀಸೆ ಬೋಳಿಸಿಕೊಂಡು ಗಡ್ಡಬಿಟ್ಟು, ತಲೆಗೊಂದು ಟೋಪಿ ಹಾಕಿಕೊಂಡು ಮಾತುಮಾತಿಗೆ ದೇವರನ್ನು ನೆನಪಿಸಿಕೊಳ್ಳುತ್ತ ತಮ್ಮ ಕಟ್ಟರತೆಯನ್ನು ತೋರ್ಪಡಿಸಿಕೊಳ್ಳುವವರೊಂದುಕಡೆಯಾದರೆ, ಉದ್ದ ನಾಮ ಹಾಕಿಕೊಂಡು, ಕೇಸರೀ ಶಾಲನ್ನು ಇಳಿಬಿಟ್ಟುಕೊಂಡಿರುವ ಜನ ಮತ್ತೊಂದು ಕಡೆ. ಇವರಿಬ್ಬರಿಂದಲೂ ದೂರವಿದ್ದು ಆಧ್ಯಾತ್ಮದ ತುಡಿತವನ್ನು ಎದೆಯಲ್ಲಿ ಹೊತ್ತ ಜನರೊಂದಷ್ಟಿದ್ದರೆ, ಯಾರ ಸಹವಾಸವೂ ಬೇಡವೆಂದು ತಮ್ಮ ಪಾಡಿಗೆ ತಾವಿರುವ ಅನೇಕರೂ ಇದ್ದಾರೆ. ಹೀಗೆ ತಮ್ಮ ಪಾಡಿಗೆ ತಾವಿರುವ ಜನರ ಮನಸೊಳಗೆ ಸೂಕ್ಷ್ಮವಾಗಿ ರಾಷ್ಟ್ರೀಯತೆಯನ್ನು, ಧರ್ಮ ಪ್ರೀತಿಯನ್ನು ಬಿತ್ತುವುದೇ ನಿಜವಾದ ಸಾಹಸ. ಅಮೀರ್ ಖಾನ್ ಈ ಮಧ್ಯಭಾಗದಲ್ಲಿರುವ ಜನರನ್ನು ತನ್ನ ಸಿನಿಮಾಗಳಿಂದ ಹಿಂದೂ ವಿರೋಧಿಯಾಗಿ ರೂಪಿಸುತ್ತಿದ್ದ, ಅಕ್ಷಯ್ ಕುಮಾರ್ ರಾಷ್ಟ್ರೀಯತೆಯೆಡೆಗೆ ಎಳೆದು ತರುತ್ತಿದ್ದ ಮತ್ತು ಸಂಜಯ್ ಲೀಲಾ ಭನ್ಸಾಲಿ ಕಲೆಯ ಆಸ್ವಾದನೆಯ ನೆಪದಲ್ಲಿ ಭಾರತದ ವೈಭವವನ್ನು ಮತ್ತೆ ನೆನಪಿಸುತ್ತಿದ್ದ ಅಷ್ಟೇ.

2

ಪದ್ಮಾವತ್ ವಿರುದ್ಧದ ಹೋರಾಟವನ್ನು ಪ್ರತಿಷ್ಠೆಯನ್ನು ಪಣಕ್ಕಿಟ್ಟ ಹೋರಾಟವಾಗಿ ರೂಪಿಸಿದರು ಕೆಲವರು. ವಾಸ್ತವದಲಿ ಅದಕ್ಕೆ ವಿರೋಧ ಬರಬೇಕಿದ್ದುದೇ ಮುಸಲ್ಮಾನರಿಂದ. ಒಮ್ಮೆ ನೋಡಿ ಬನ್ನಿ. ವಾಯುವ್ಯ ಭಾಗದಿಂದ ಆಕ್ರಮಣಕಾರಿಗಳಾಗಿ ಬಂದ ಮುಸಲ್ಮಾನರು ಅದೆಷ್ಟು ಅನಾಗರಿಕರಾಗಿದ್ದರೆಂದು ಸಂಜಯ್ ಚಿತ್ರಿಸಿರುವ ರೀತಿ ರೋಚಕ. ಸಿನಿಮಾ ಅಂತ್ಯಗೊಳ್ಳುವ ವೇಳೆಗೆ ಬೆನ್ನಹುರಿಯ ಆಳದಲ್ಲೊಂದು ಆಕ್ರಮಣಗೈದ ಮುಸಲ್ಮಾನರ ವಿರುದ್ಧ ಸಣ್ಣದೊಂದು ಅಲುಗಾಟ ಕಂಡರೆ ಅಚ್ಚರಿ ಪಡಬೇಕಿಲ್ಲ. ಹಾಗೆ ತೋರಿಸಲಾಗಿದೆ. ರಣಬೀರ್ ಸಿಂಗ್ ಸಿನಿಮಾ ಶುರುವಾಗುವ ಮುನ್ನವಷ್ಟೇ ರಣಬೀರ್; ಆಮೇಲೆ ಆತ ಅಕ್ಷರಶಃ ರಕ್ಕಸ ಅಲಾವುದ್ದೀನನೇ. ಓಹ್. ಅವನು ಊಟ ಮಾಡುವ ಶೈಲಿ, ಮೈಗೆ ಸೆಂಟ್ ಹಚ್ಚಿಕೊಳ್ಳುವ ಶೈಲಿ, ಹೆಂಡತಿಯೊಂದಿಗೆ ರತಿಕ್ರೀಡೆಯಾಡುವ ರೀತಿ, ಕೊನೆಗೆ ಮಲ್ಲಿಕಾಫರನೊಂದಿಗೆ ರಸಮಯ ಕ್ಷಣಗಳನ್ನು ಕಳೆಯುವ ಬಗೆ ಎಲ್ಲವನ್ನು ಅದು ಹೇಗೆ ನಿದರ್ೇಶಕ ಕಟ್ಟಿಹಾಕಿಕೊಟ್ಟಿದ್ದಾನೆಂದರೆ ಪ್ರತಿ ಕ್ಷಣವೂ ಅಸಹ್ಯದ ಕೊಳದಲ್ಲಿ ಮಿಂದೆದ್ದು ಬರಬೇಕು. ಹಾಗಂತ ಅವನನ್ನು ಇಷ್ಟಕ್ಕೇ ಸೀಮಿತಗೊಳಿಸಿ ಕೆಲಸಕ್ಕೆ ಬಾರದವನಂತೆ ಚಿತ್ರಿಸಿಲ್ಲ. ಕುಸ್ತಿಯ ಸನ್ನಿವೇಶಗಳನ್ನು ರೂಪಿಸಿ ಅವನ ರೋಷಾವೇಶದ ಚಿತ್ರಣವನ್ನೂ ನಮ್ಮೆದುರಿಗಿಡುತ್ತಾರೆ ಸಂಜಯ್.

ಅದಕ್ಕೆದುರಾಗಿ ರಜಪೂತರ ದೊರೆ ರತನ್ ಸಿಂಗ್ರನ್ನು ಅತ್ಯಂತ ಧೈರ್ಯವಂತ ಆದರೆ ಸಜ್ಜನನಾಗಿ ತೋರಿಸಿರುವ ಪರಿಯೂ ಅನನ್ಯ. ಆತ ಕದನ ಕಲಿ, ಕೊನೆಯ ಯುದ್ಧವೊಂದರಲ್ಲಿ ಖಿಲ್ಜಿಯನ್ನೇ ಸೋಲಿಸಿಯೂ ಮೋಸಕ್ಕೊಳಗಾಗಿ ಸಾಯುತ್ತಾನೆ. ಆದರೆ ಅದಕ್ಕೂ ಮುನ್ನ ‘ಇತಿಹಾಸದ ಪುಟಗಳು ನಿನ್ನಂಥವನ್ನು ಕಿತ್ತೆಸೆಯುತ್ತವೆ’ ಎಂದು ಹೇಳಿಯೇ ಸಾಯುತ್ತಾನೆ. ಅವನು ಹಾಗೆ ಹೇಳಿದ್ದು ನಿಜವೇ ಆದರೆ ಹಾಗೆ ಖಿಲ್ಜಿಯನ್ನು ಇತಿಹಾಸದಲ್ಲಿ ನಗಣ್ಯನೆಂದು ಮರು ನಿರೂಪಿಸುವ ಬಲುದೊಡ್ಡ ಹೊಣೆಗಾರಿಕೆ ಸಂಜಯ್ ಮೇಲೆಯೇ ಇತ್ತೆನಿಸುತ್ತದೆ.

3

ಬರೆದಿರುವುದನ್ನು ಅದೆಷ್ಟೇ ಓದಿದರೂ ಈ ಕಾವ್ಯವನ್ನು ನೋಡಿಯೇ ಆನಂದಿಸಬೇಕು. ಹಿಂದೂ-ಮುಸ್ಲೀಂ ವೈರುಧ್ಯವನ್ನು ನಿದರ್ೇಶಕ ತೆರೆದಿಟ್ಟಿರುವ ರೀತಿ ಪರಮಾದ್ಭುತ. ಹೋಳಿಯ ರಂಗನ್ನು ಖಿಲ್ಜಿ ಮುಖಕ್ಕೆ ಬಳಿದುಕೊಳ್ಳುವ ಪರಿ ಮತ್ತು ಪದ್ಮಾವತಿ ಅದನ್ನು ರತನ್ ಸಿಂಗ್ನಿಗೆ ಹಚ್ಚುವ ರೀತಿಯಲ್ಲಿನ ಭಿನ್ನತೆಯನ್ನು ನಿದರ್ೇಶಕ ಯೋಚಿಸಿರುವುದಿದೆಯಲ್ಲ; ಅದು ಅತ್ಯದ್ಭುತ. ಪದ್ಮಾವತಿಯನ್ನು ಸಿಂಗರಿಸಿ ರಾಜನ ಸ್ವಾಗತಕ್ಕೆ ನಿಲ್ಲಿಸುವುದು ಮತ್ತು ಅವರೀರ್ವರ ಸರಸ ಸಲ್ಲಾಪಗಳಲ್ಲೂ ಒಂದು ಚೌಕಟ್ಟು, ಸಾತ್ವಿಕತೆಯನ್ನು ನಿರೂಪಿಸಿರುವುದು ಹಿಂದೂ ದಾಂಪತ್ಯದ ಪರಮಾದ್ಭುತ ವೈಭವ. ರಾಜ ಯುದ್ಧಕ್ಕೆ ಹೋಗುವ ಮುನ್ನ ರಾಣಿಯೊಂದಿಗಿನ ಆತನ ಪ್ರೇಮದ ಭಾವವಂತೂ ಅಸದೃಶವಾದುದು. ಅದಕ್ಕೆ ಪ್ರತಿಯಾಗಿ ಖಿಲ್ಜಿ ತನ್ನ ಪತ್ನಿಯೊಂದಿಗೆ ಅತ್ಯಂತ ಕೆಡುಕಾದ ರೀತಿಯಲ್ಲಿ ವ್ಯವಹರಿಸುವುದಲ್ಲದೇ ಯುದ್ಧಕ್ಕೆ ಮುನ್ನವೂ ಕಾಮ ತೃಷೆಯನ್ನು ತೀರಿಸಿಕೊಳ್ಳುವುದನ್ನು ಮಾಮರ್ಿಕವಾಗಿ ನಿರೂಪಿಸಲಾಗಿದೆ. ಇವೆಲ್ಲ ಎರಡು ಸಾಂಸ್ಕೃತಿಕ ವೈರುಧ್ಯಗಳನ್ನು ನಮ್ಮೆದುರು ಅನಾವರಣಗೊಳಿಸುತ್ತದೆ.

ಕಾಮ ತೃಷೆಗಾಗಿಯೇ ತನ್ನಿಡೀ ರಾಜ್ಯವನ್ನು ಯುದ್ಧಕ್ಕೆ ತಳ್ಳುವ ಖಿಲ್ಜಿ ಒಂದೆಡೆಯಾದರೆ, ಯುದ್ಧ ತಮ್ಮಿಬ್ಬರ ನಡುವೆಯೇ ನಡೆಯಲೆಂದು ಏಕಾಂಗಿಯಾಗಿ ಮುನ್ನುಗ್ಗುವ ರತನ್ ಸಿಂಗ್ ರಾವಲ್ನ ರಜಪೂತ ಶೌರ್ಯ ಮತ್ತೊಂದೆಡೆ. ಕರಣಿಸೇನಾದ ಪ್ರತಿಭಟನೆಗೆ ಮಣಿದು ಒಂದಷ್ಟು ದೃಶ್ಯಗಳನ್ನು ತುಂಡರಿಸಲಾಗಿದೆಯೆನ್ನುತ್ತಾರೆ ಕೆಲವರು. ಇಡಿಯ ಸಿನಿಮಾ ನೋಡಿದ ಮೇಲೆ ಅವುಗಳನ್ನು ನೋಡಿಬಿಡಬೇಕಿತ್ತು ಎನಿಸುತ್ತಿದೆ. ಇಬ್ಬರ ನಡುವಿನ ಕೊನೆಯ ಯುದ್ಧಕ್ಕೂ ಮುನ್ನ ತನ್ನ ಡೇರೆಯಿಂದ ಹೊರಗೆ ಪದ್ಮಾವತಿಗಾಗಿ ಖಿಲ್ಜಿ ಕಾಯುತ್ತ ಕುಳಿತುಕೊಳ್ಳುವ ಹೊತ್ತಿನ ಹಾಡಿನಲ್ಲಿ ಬಹುಶಃ ಒಂದಷ್ಟು ದೃಶ್ಯಗಳು ಕತ್ತರಿಹಾಕಲ್ಪಟ್ಟಿರಬಹುದು. ಖಿಲ್ಜಿಯನ್ನು ಇಷ್ಟೆಲ್ಲ ನೈಜವಾಗಿ ತೋರಿಸಿರುವ ನಿದರ್ೇಶಕ ಅಲ್ಲಿಯೂ ಪದ್ಮಾವತಿಯೊಂದಿಗೆ ಆತ ನಡೆದುಕೊಳ್ಳುವ ರೀತಿಯನ್ನು ಮಾಮೂಲಿ ಹಿಂದಿ ಸಿನಿಮಾದಂತಲ್ಲದೇ ಸಹಜವಾಗಿ ತೋರಿಸಿದ್ದಿರಬಹುದೇನೋ? ಬಹುಶಃ ಒಂದು ಹೆಣ್ಣುಮಗಳು ಎರಡು ಸಂಸ್ಕೃತಿಯ ನಡುವೆ ಸಿಕ್ಕುಬಿದ್ದಾಗ ಯಾವುದನ್ನು ಆರಿಸಿಕೊಳ್ಳಬೇಕೆಂಬುದಕ್ಕೆ ಅದು ಸಮರ್ಥ ಉದಾಹರಣೆಯಾಗಿರಬಹುದಿತ್ತು. ನಾವು ಕಣ್ಣಿಗೆ ಪರದೆ ಎಳೆದುಕೊಂಡು ಕುಳಿತುಬಿಟ್ಟಿದ್ದೆವು. ಸಿನಿಮಾ ಬಿಡುಗಡೆಯಾದೊಡನೆ ನಾವೇ ಧಾವಿಸಿ ಅದನ್ನು ಆಸ್ವಾದಿಸಿಕೊಂಡು ಬಂದೆವು!

ಸಂಜಯ್ ಲೀಲಾ ಭನ್ಸಾಲಿ ಬರಿಯ ನಿದರ್ೇಶಕನಷ್ಟೇ ಅಲ್ಲ, ಮಹಾ ಕನಸುಗಾರ. ಆತನೇ ತನ್ನ ಸೆಟ್ಗಳ ನಿಮರ್ಾಣದಲ್ಲಿ ಆಸಕ್ತಿ ವಹಿಸುತ್ತಾನೆ. ನಟ, ನಟಿಯರು ಹಾಕಬೇಕಾದ ವಸ್ತ್ರ ವಿನ್ಯಾಸಕ್ಕೂ ಆತನೇ ಕನಸುಗಳನ್ನು ಹೆಣೆಯುತ್ತಾನೆ. ಈ ಚಿತ್ರದಲ್ಲಂತೂ ಪದ್ಮಾವತಿ ಧರಿಸಿದ ಒಡವೆಗಳ ವಿನ್ಯಾಸವನ್ನೂ ಬಲು ಎಚ್ಚರಿಕೆಯಿಂದ ಮಾಡಿಸಿದ್ದು ಆತನೇ. ಇಷ್ಟೇ ಅಲ್ಲ. ಸಂಜಯ್ ಅದ್ಭುತ ಲೇಖಕ. ಹಾಡುಗಳನ್ನು ಬರೆದು, ತಾನೇ ಸಂಗೀತ ಸಂಯೋಜಿಸಿ ಅದಕ್ಕೆ ಬೇಕಾದ ನೃತ್ಯದ ಹಾವಭಾವಗಳೂ ಹೀಗೆಯೇ ಇರಬೇಕೆಂದು ತಾಕೀತು ಮಾಡುತ್ತಾನೆ. ಇದೇ ಚಿತ್ರದಲ್ಲಿ ಖಿಲ್ಜಿ ಮಾಡುವ ನೃತ್ಯವೊಂದಿದೆ. ಅದನ್ನು ನೋಡಿ. ಚಿತ್ರ ಮುಗಿದ ಮೇಲೂ ಆ ನೃತ್ಯ ನಿಮ್ಮನ್ನು ದೀರ್ಘಕಾಲ ಕಾಡದಿದ್ದರೆ ಕೇಳಿ! ಅಬ್ಬಾ. ಅರಬ್ಸ್ಥಾನದ ಶೈಲಿಯ ಭಯಾನಕ ನೃತ್ಯ ಅದು. ಅದರಲ್ಲಿ ಲಾಲಿತ್ಯವಿಲ್ಲ, ಮನೋಲ್ಲಾಸವಿಲ್ಲ; ಸಾತ್ವಿಕೆಯಂತೂ ಬಲುದೂರದ ಮಾತು. ಬದಲಿಗೆ ಅದೊಂದು ರಾಕ್ಷಸೀ ನೃತ್ಯವಾಗಿ ಬಿಂಬಿಸಲ್ಪಟ್ಟಿದೆ. ಖಿಲ್ಜಿಯ ಕಂಗಳಲ್ಲಿ ಆವೇಶ, ಧಾವಂತಗಳೆಲ್ಲ ಹೆದರಿಕೆ ಹುಟ್ಟಿಸುವಂತಿವೆ. ಸಾಕ್ಷಾತ್ ಭೂತ ನರ್ತನವೇ. ಸಂಜಯ್ ಭನ್ಸಾಲಿ ಮಾತ್ರ ಯೊಚಿಸಬಹುದೇನೋ ಇದನ್ನು!

4

ಈ ಚಿತ್ರವನ್ನು ವಿರೋಧಿಸಿದ ರಜಪೂತರನ್ನುಳಿದು ಅನೇಕರಿಗೆ ರಾಣಿ ಪದ್ಮಾವತಿಯ ಕುರಿತಂತೆ ನಾಲ್ಕು ಸಾಲಿನ ಮಾಹಿತಿ ಗೊತ್ತಿದ್ದುದೂ ಅನುಮಾನ. ಒಬ್ಬ ವೀರ ಮಹಿಳೆಗೆ ಮರು ಜೀವ ಕೊಟ್ಟ ಗೌರವಕ್ಕೆ ಪಾತ್ರವಾಗಬೇಕಿದ್ದ ನಿದರ್ೇಶಕ ಎಷ್ಟು ಅವಮಾನಕ್ಕೊಳಗಾಬೇಕಾಯ್ತು ಗೊತ್ತೇನು? ಆತನ ವೈಯಕ್ತಿಕ ಬದುಕನ್ನು ಕೆದಕಿ ಅವರಮ್ಮನ ಮೇಲೆ ಸಿನಿಮಾ ಮಾಡುತ್ತೇನೆಂದರು. ರಸ್ತೆಗೆ ಕಾಲಿಟ್ಟರೆ ಸುಡುತ್ತೇವೆಂದರು. ದೀಪಿಕಾಳ ಮೂಗು ಕತ್ತರಿಸುವೆನೆಂದರು. ಬೇಸತ್ತ ರಣವೀರ್ ಸಿಂಗ್ ಸಿನಿಮಾ ಪ್ರದರ್ಶನಗೊಳ್ಳಲಿಲ್ಲವೆಂದರೆ ಹಿಂದೂ ಧರ್ಮ ಬಿಟ್ಟು ಹೋಗುವೆನೆಂದು ಆವೇಶದಲ್ಲಿ ನುಡಿದದ್ದೂ ಆಯಿತು. ಆಗೆಲ್ಲ ನಮಗೂ ಆತನದ್ದು ಬಲು ಧಿಮಾಕೆನಿಸುತ್ತಿತ್ತು. ಆದರೆ ಹಿಂದೂ ಧರ್ಮವನ್ನು ಎತ್ತಿ ಹಿಡಿಯುವಲ್ಲಿ ಇಷ್ಟೆಲ್ಲ ಶ್ರಮಪಟ್ಟ ನಂತರವೂ ಇವೆಲ್ಲವನ್ನೂ ಕೇಳಬೇಕಾದರೆ ಮನಸಿಗೆ ನೋವಾಗುವುದು ಸಹಜವೇ. ಆದರೆ ಅವರಿಗೂ ಗೊತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅರಚಾಡುವ ಈ ಜನ ಸ್ವತಃ ರಣಬೀರ್ ಎದುರಿಗೆ ಸಿಕ್ಕರೆ ದುಂಬಾಲು ಬಿದ್ದು ಸೆಲ್ಫೀ ತೆಗೆಸಿಕೊಳ್ಳಲು ಧಾವಿಸುತ್ತಾರೆ ಅಂತ! ಅದಕ್ಕೇ ಆರಂಭದಲ್ಲಿ ಹೇಳಿದ್ದು; ಬುದ್ಧಿ ಕೈಕೊಟ್ಟಾಗ ಆಗುವ ಸಮಸ್ಯೆಗಳು ಇವೆಲ್ಲ ಅಂತ.
ಈ ಚಿತ್ರ ಅನೇಕ ಪಾಠಗಳನ್ನು ಸೂಕ್ಷ್ಮವಾಗಿ ಹೇಳಿಕೊಡುತ್ತದೆ. ತನ್ನ ಕಾಮತೃಷೆಗಾಗಿಯೇ ಯುದ್ಧಕ್ಕೆ ಬಂದ ಖಿಲ್ಜಿ ಚಿತ್ತೋಢದ ಮೇಲೆ ಏರಿಹೋಗಲಾಗದೇ ಕೋಟೆಯ ಸುತ್ತ ಕಾವಲು ಕಾಯುತ್ತ ಕುಳಿತಿರುವಾಗ ಅವನ ಸೈನಿಕರು ಅಸಹನೆಯಿಂದ ಕುದಿಯುತ್ತಾರೆ. ಖಿಲ್ಜಿಯ ವಿರುದ್ಧ ಬಂಡೆದ್ದು ಮರಳಿ ಹೋಗಲು ಸಿದ್ಧವಾಗಿಬಿಡುತ್ತಾರೆ. ಆಗ ಅವರೆದುರಿಗೆ ಭಾವನಾತ್ಮಕವಾಗಿ ಮಾತನಾಡುವ ಖಿಲ್ಜಿ ಇಸ್ಲಾಮಿನ ಧ್ವಜ ಉರುಳುತ್ತಿದೆ; ಉರುಳಲಿ ಎನ್ನುತ್ತ ಅದನ್ನು ತಳ್ಳಿಬಿಡುತ್ತಾನೆ. ಅಗೊಳ್ಳಿ ಇಡಿಯ ಸೈನಿಕರು ಅದನ್ನುಳಿಸಲು ಧಾವಿಸಿ ಬರುತ್ತಾರೆ. ಮತಕ್ಕಾಗಿ ಪ್ರಾಣ ಕೊಡಲೂ ಸಿದ್ಧ ಎಂದು ಶಪಥ ಮಾಡುತ್ತಾರೆ. ವಿಕೃತವಾಗಿ ನಗುವವನು ಮಾತ್ರ ಅಲ್ಲಾವುದ್ಧಿನ್ ಖಿಲ್ಜಿಯೇ. ಈ ಒಂದು ದೃಶ್ಯ ಅಫೀಮು ಸೇವಿಸಿದವರೆಲ್ಲರ ಪ್ರತಿಬಿಂಬ. ಮೂಲ ಪುರುಷ ಮತ್ತು ಮತ ಗ್ರಂಥಗಳಿಗಾಗಿ ಬಡಿದಾಡುವ ಇಸ್ಲಾಂ ಹಾಗೆಯೇ ಕರಣಿ ಸೇನಾ ಹೇಳಿತೆಂದ ಮಾತ್ರಕ್ಕೆ ಬೀದಿಗೆ ಬಂದು ಸಕರ್ಾರಿ ಸ್ವತ್ತುಗಳನ್ನು ರಜಪೂತರ ತಂಡ ಇವೆರಡೂ ಒಂದೇ ಬಳ್ಳಿಯ ಹೂಗಳೆಂಬುದನ್ನು ಚಿತ್ರ ನೋಡಿದ ಪ್ರತಿಯೊಬ್ಬನೂ ಅಥರ್ೈಸಿಕೊಳ್ಳಬಲ್ಲ.

ಇವೆಲ್ಲದರ ನಡುವೆ ಇಡಿಯ ಸಿನಿಮಾದಲ್ಲಿ ಅಮೀರ್ ಖುಸ್ರೋಗೆ ಅನ್ಯಾಯವಾಗಿದೆಯೆಂದು ನನ್ನಂತಹ ಅನೇಕರಿಗೆ ಅನ್ನಿಸಿದೆ. ಮಲ್ಲಿಕಾಫರನ ಹೊಸ ರೂಪ ಅನಾವರಣಗೊಂಡಿದೆ. ಖಿಲ್ಜೀ ವಿಕೃತ ಸಲಿಂಗ ಕಾಮಿಯಾಗಿದ್ದ ಎನ್ನುವುದು ಸಮರ್ಥವಾಗಿ ಅನಾವರಣಗೊಂಡಿದೆ. ಆದರೆ ಪದ್ಮಾವತಿಯ ಸೌಂದರ್ಯಕ್ಕೆ ದೀಪಿಕಾ ಖಂಡಿತ ಸಾಟಿಯಾಗಲಾರಳೆನಿಸಿದ್ದಂತೂ ನಿಜ. ಮೊದಲಾರ್ಧ ಸ್ವಲ್ಪ ಎಳೆದಿದೆ ಎನಿಸುವ ವೇಳೆಗೆ ದ್ವಿತೀಯಾರ್ಧ ಮುಗಿದದ್ದೇ ಅರಿವಾಗದಷ್ಟು ವೇಗವಾಗಿ ಓಡುತ್ತದೆ. ಜೌಹರ್ನ ವೈಭವವನ್ನು ಸೆರೆ ಹಿಡಿದ ನಿದರ್ೇಶಕನ ಜಾಣ್ಮೆಗೆ ಸರಿಸಾಟಿ ಯಾವುದೂ ಇಲ್ಲ. ಚಿತ್ತೋಢ್ನ ಕೋಟೆಯನ್ನು ನಮ್ಮೆದುರು ಬಿಚ್ಚಿಟ್ಟಿರುವ ರೀತಿಯಂತೂ ಮನಸೂರೆಗೊಳ್ಳುವಂಥದ್ದು.

ನಿಜಕ್ಕೂ ನನಗೆ ಹೇಳಲು ಸಾಕಷ್ಟಿದೆ. ಆದರೆ ನಾನೆಷ್ಟೇ ಹೇಳಿದರೂ ಸಿನಿಮಾ ನೋಡಿದ ಅನುಭವವನ್ನು ಖಂಡಿತ ಕಟ್ಟಿಕೊಡಲಾಗದು. ಒಮ್ಮೆ ನೋಡಿಬನ್ನಿ, ಅಷ್ಟೇ.

Comments are closed.