ವಿಭಾಗಗಳು

ಸುದ್ದಿಪತ್ರ


 

ಗೋವಧೆಯ ಹಿಂದಿನ ರೈತವಿರೋಧಿ ಮನಸ್ಥಿತಿ

1580 ರ ಸುಮಾರಿಗೆ ಭಾರತಕ್ಕೆ ಬಂದಿದ್ದ ರಾಲ್ಫ್ ಪಿಚ್ ಎಂಬ ವ್ಯಾಪಾರಿ ಬರೆದ ಪತ್ರವೊಂದರಲ್ಲಿ, ‘ಅವರದ್ದೊಂದು ಅಪರೂಪದ ಆಚರಣೆ. ಅವರು ಗೋ ಪೂಜೆ ಮಾಡುತ್ತಾರೆ ಮತ್ತು ಅದರ ಸಗಣಿಯನ್ನು ಮನೆಯ ಗೋಡೆಗಳಿಗೆ ಬಣ್ಣವಾಗಿ ಬಳಿಯುತ್ತಾರೆ. ಮಾಂಸ ತಿನ್ನುವುದಿಲ್ಲ ಬದಲಿಗೆ ಅಕ್ಕಿ, ಹಾಲು ಮತ್ತು ಬೇರುಗಳನ್ನು ತಿಂದು ಬದುಕುತ್ತಾರೆ’ ಎಂದಿದ್ದ.

featured

‘ಕೃಷಿಯನ್ನು ಬಲವಾದ ಅಡಿಪಾಯವನ್ನಾಗಿಸಿಕೊಂಡು ರಾಷ್ಟ್ರವೊಂದು ರಾಜನೀತಿ, ವ್ಯಾಪಾರ, ಕಲೆಯೇ ಮೊದಲಾದ ಜಗತ್ತಿನ ಶ್ರೇಷ್ಠ ಸಂಗತಿಗಳನ್ನು ಸದೃಢವಾಗಿ ಕಟ್ಟಬಹುದು’ ಎನ್ನುತ್ತಾನೆ 18ನೇ ಶತಮಾನದಲ್ಲಿ ಪೇಶ್ವೆಗಳಿಗೆ ರಾಯಭಾರಿಯಾಗಿದ್ದ ಸರ್ ಚಾಲ್ಸರ್್ ಮ್ಯಾಲೆ. ಆತ ಮಹಾರಾಷ್ಟ್ರದ ಪುಣೆಯ ಕೃಷಿ ಪದ್ಧತಿಯನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಪ್ರಸ್ತುತ ಪಡಿಸಿದ ವರದಿ ಪ್ರಾಚೀನ ಕೃಷಿಯ ಕುರಿತಂತೆ ನಮ್ಮೆಲ್ಲರ ಕಣ್ತೆರೆಸುವಂಥದ್ದು. ಭೂಮಿಯನ್ನು ಹಸನುಗೊಳಿಸುವ ಕಾರ್ಯ ಏಪ್ರಿಲ್ ತಿಂಗಳಲ್ಲಿಯೇ ಆರಂಭವಾಗುತ್ತಿತ್ತಂತೆ. ಒಂದು, ಎರಡು ಕೆಲವೊಮ್ಮೆ ನಾಲ್ಕು ಎತ್ತುಗಳನ್ನು ಹೂಡಿ ಭೂಮಿಯನ್ನು ಯಂತ್ರಗಳಿಂದ ಹಸನು ಮಾಡಲಾಗುತ್ತಿತ್ತಂತೆ. ಆತನ ಪ್ರಕಾರ ದಖನ್ನ ಮಣ್ಣು ಬಲು ಮೃದುವಾದುದು. ಅತ್ತ ಮರಳೂ ಅಲ್ಲದ ಇತ್ತ ಕಲ್ಲು ಕಲ್ಲಾಗಿಯೂ ಇರದ ಮಣ್ಣು ಅದು. ಇಲ್ಲಿನ ರೈತ ತನ್ನದೇ ಆದ ವಿಶಿಷ್ಟ ಬಗೆಯ ಕೃಷಿ ಯಂತ್ರಗಳನ್ನು ಬಳಸುತ್ತಿದ್ದನಂತೆ. ಉಳಲು ಒಂದು ಯಂತ್ರ, ಆನಂತರ ಹೆಂಟೆಗಳನ್ನು ಪುಡಿ ಮಾಡಲು ಮತ್ತೊಂದು. ಬೀಜ ಬಿತ್ತಲು ಒಂದಾದರೆ, ಎಣ್ಣೆ ತೆಗೆಯುವ ಗಾಣದ ಶೈಲಿಯೇ ಮತ್ತೊಂದು. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಸತ್ವಾಲ್ ಸಂಗ್ವಾನ್ರ ಪ್ರಕಾರ ಭಾರತೀಯ ಕೃಷಿಕ 18 ನೇ ಶತಮಾನದ ವೇಳೆಗೆ ಕೃಷಿ ತಂತ್ರಜ್ಞಾನದ ಗಣಿಯೇ ಆಗಿಬಿಟ್ಟಿದ್ದ. ಹೀಗಾಗಿಯೇ ಆ ಹೊತ್ತಿಗೂ ಜಗತ್ತಿನ ಹೆಚ್ಚು ಕೃಷಿ ಉತ್ಪನ್ನದ ರಾಷ್ಟ್ರವಾಗಿಯೇ ಭಾರತ ಗುರುತಿಸಲ್ಪಡುತ್ತಿತ್ತು. ಆಂಧ್ರದ ಚಂಗಲ್ಪಟ್ಟುವಿನಲ್ಲಿ ಅಧ್ಯಯನ ನಡೆಸಿದ ಬ್ರಿಟೀಷ್ ಅಧಿಕಾರಿಗಳ ವರದಿಯ ಪ್ರಕಾರ ಅಲ್ಲಿನ 800 ಹಳ್ಳಿಗಳಲ್ಲಿ ಒಂದು ಹೆಕ್ಟೇರಿಗೆ 36 ಕ್ವಿಂಟಾಲುಗಳಷ್ಟು ಭತ್ತ ಬೆಳೆದರೆ ಕೆಲವು ಫಲವತ್ತು ಭೂಮಿಯಲ್ಲಿ ಈ ಪ್ರಮಾಣ ಹೆಕ್ಟೇರಿಗೆ 82 ಕ್ವಿಂಟಾಲುಗಳಷ್ಟಿತ್ತು. ಕೇಂಬ್ರಿಡ್ಜ್ ಎಕಾನಾಮಿಕ್ ಹಿಸ್ಟರಿ ಆಫ್ ಇಂಡಿಯಾ ಕೂಡ ಸುಮಾರು ಇದೇ ಬಗೆಯ ವರದಿಯನ್ನು ತಮಿಳುನಾಡಿನಿಂದ ದಾಖಲಿಸುತ್ತದೆ. ಈ ಉತ್ಪಾದನೆಯನ್ನು ಬ್ರಿಟೀಷ್ ಕೃಷಿ ಭೂಮಿಯೊಂದಿಗೆ ತುಲನೆ ಮಾಡುವಂತೆಯೂ ಇರಲಿಲ್ಲ. ಅಷ್ಟೇ ಅಲ್ಲ. ಎಡಿನ್ಬರ್ಗ್ ರಿವ್ಯೂದ ವರದಿಯ ಪ್ರಕಾರ ಯೂರೋಪಿನ ಕೃಷಿಕನಿಗಿಂತ ಭಾರತದ ಕೃಷಿಕ ಹೆಚ್ಚು ಸಂಬಳ ಪಡೆಯುತ್ತಿದ್ದ.
ಇಂಗ್ಲೆಂಡು ಕಾಲಕ್ರಮದಲ್ಲಿ ಭಾರತೀಯ ಕೃಷಿ ಪದ್ಧತಿಯನ್ನು ಅನುಕರಿಸಿ, ಸಂಶೋಧನೆಗಳ ಮೂಲಕ ರಸಗೊಬ್ಬರ, ರಾಸಾಯನಿಕ ಔಷಧಗಳನ್ನೆಲ್ಲ ಬಳಸಿ ಕೃಷಿ ಉತ್ಪನ್ನವನ್ನು ವೃದ್ಧಿಸಿಕೊಂಡರೂ ಭಾರತೀಯರ ಸಮಸಮಕ್ಕೆ ಸುಲಭವಾಗಿ ಬರಲು ಸಾಧ್ಯವೇ ಆಗಲಿಲ್ಲ. ಅಲೆಕ್ಸಾಂಡರ್ ವಾಕರ್ ಇದನ್ನು ಗುರುತಿಸಿ ಭಾರತೀಯರ ಕೃಷಿ ತಂತ್ರಜ್ಞಾನವನ್ನು ಬಹುವಾಗಿ ಕೊಂಡಾಡುತ್ತಾನೆ. ಅವರು ಬಳಸುವ ಉಳುವ ಯಂತ್ರಗಳು ವೈಜ್ಞಾನಿಕವಾಗಿ ರೂಪಿಸಲ್ಪಟ್ಟವೆಂದು ಅಭಿಮಾನ ಪಡುತ್ತಾನೆ. ವಾಕರ್ನಂತೆ ಇಲ್ಲಿನ ಕೃಷಿ ಪದ್ಧತಿಯ ವೈಭವದಿಂದ ಬೆರಗಾದ ಅನೇಕರು ಈ ಯಂತ್ರಗಳ ರೇಖಾಚಿತ್ರ ಬರೆದುಕೊಂಡು ಇಂಗ್ಲೆಂಡಿನಲ್ಲಿ ಪ್ರಕಟಗೊಂಡ ಪುಸ್ತಕಗಳಲ್ಲಿ ಅದನ್ನು ಪ್ರಸ್ತುತ ಪಡಿಸುತ್ತಾರೆ. ಆ ಕೃತಿಗಳಲ್ಲಿ ಭಾರತೀಯ ರೈತನನ್ನು, ಅವನ ಬಲಗೈ ಬಂಟನಂತಿರುವ ಇಲ್ಲಿನ ಗೋತಳಿಗಳನ್ನು ಕೊಂಡಾಡುವುದು ಮರೆಯುವುದಿಲ್ಲ.
ಹೌದು. ಭಾರತದಲ್ಲಿ ಗೋವು ಮತ್ತು ಕೃಷಿ ಅವಿನಾಭಾವ ಸಂಬಂಧವುಳ್ಳದ್ದು. ಗೋವನ್ನು ನಾಶಗೊಳಿಸಿ ಕೃಷಿಕನನ್ನು ಉದ್ಧರಿಸುವ ಮಾತು ಬೂಟಾಟಿಕೆಯೇ. ಈ ದೇಶದ ಸುಮಾರು ಶೇಕಡಾ 70 ರಷ್ಟು ಭೂಮಿ ಹಳ್ಳಿಗಳಿಗೆ ಸೇರಿದ್ದು. ಶೇಕಡಾ 60 ರಷ್ಟು ಜನ ಕೃಷಿಯನ್ನೇ ಅವಲಂಬಿಸಿದವರು. ಹೀಗಾಗಿಯೇ ಹಿಂದೂಗಳ ಬಹುತೇಕ ಹಬ್ಬಗಳು ಕೃಷಿ ಉತ್ಸವಗಳೇ. ಇನ್ನು ಹೆಚ್ಚು ಕಡಿಮೆ ಎಲ್ಲಾ ಕೃಷಿಕರೂ ಹಿಂದೂಗಳೇ ಆಗಿದ್ದರು ಎನ್ನುವುದನ್ನು ಕೋಮುವಾದ ಅಂತ ದಯಮಾಡಿ ಕರೆಯಬೇಡಿ! ರೈತರೆಲ್ಲ ಹಿಂದೂಗಳೇ ಮತ್ತು ಬಹುತೇಕ ಭಾರತೀಯರು ರೈತರೇ ಆಗಿದ್ದರಿಂದ ರೈತನ ಸಿರಿವಂತಿಕೆಯ ಸಂಕೇತವಾಗಿದ್ದ ಗೋವು ಹಿಂದೂವಿನ ಸಿರಿವಂತಿಕೆಯ ದ್ಯೋತಕವೂ ಆಗಿದ್ದರಲ್ಲಿ ಅಚ್ಚರಿಯಿಲ್ಲ. ಗೋವುಗಳನ್ನು ಋಷಿಗಳ ಆಶ್ರಮದಲ್ಲಿ ಬಿಟ್ಟು ಗೋತ್ರವನ್ನು ಪಡೆಯುವುದರಿಂದ ಹಿಡಿದು ಮನೆ ಮನೆಯಲ್ಲೂ ಗೋ ಪೂಜೆ ಮಾಡುವವರೆಗೆ ಅದು ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿತ್ತು. ಯಜ್ಞ-ಯಾಗಾದಿಗಳಲ್ಲಿ ಬೆಳೆದು ನಿಂತ ಎತ್ತಿನ ಬಲಿಯಾಗುತ್ತಿತ್ತೆಂಬುದ ಹಿಡಿದು ಅನೇಕರು ವಾದ ಮಾಡುತ್ತಾರಲ್ಲ ಅದು ಇದ್ದಿರಲೂಬಹುದು. ಸರ್ವಶ್ರೇಷ್ಠ ಯಾಗದ ಹೊತ್ತಲ್ಲಿ ಸರ್ವಶ್ರೇಷ್ಠವಾದ ಪ್ರಾಣಿಯನ್ನು ಬಲಿಕೊಟ್ಟು ಭಗವಂತನನ್ನು ಸಂಪ್ರೀತಗೊಳಿಸುವ ಮಾದರಿ ಇರಬಹುದು ಅದು. ಕಾಳಿಗೆ ಅರ್ಪಿಸಲೆಂದೇ ಕೋಣವನ್ನು ಬೆಳೆಸೋದು ಅನೇಕ ಕಡೆಗಳಲ್ಲಿ ಇತ್ತೀಚಿನವರೆಗೂ ಚಾಲ್ತಿಯಲ್ಲಿತ್ತು. ಅದರ ಮಾಂಸ ತಿನ್ನುವ ಚಟಕ್ಕಲ್ಲ.
ಇರಲಿ ಬಿಡಿ. ಅದೊಂದು ಬಲು ಸೂಕ್ಷ್ಮವಾದ ಮತ್ತು ವಿಸ್ತಾರವಾಗಿ ಮಾಡಬೇಕಾದ ಚರ್ಚೆ. ಕೃಷಿಕನಿಗೆ ಎತ್ತು ಉಳಲು ಸಹಕಾರಿಯಾಗುತ್ತಿತ್ತು. ಸಗಣಿ ಗೊಬ್ಬರವಾದರೆ, ಗೋಮೂತ್ರ ಕ್ರಿಮಿನಾಶಕವಾಗಿ ಬಳಕೆಯಾಗುತ್ತಿತ್ತು. ಗೋವಿನ ಹಾಲು ಮನೆಮಂದಿಗೆಲ್ಲಾ ಆಹಾರವಾದರೆ, ಮೊಸರು ಊಟದ ಭಾಗವಾಯಿತು. ತುಪ್ಪ ಆರೋಗ್ಯದ ದೃಷ್ಟಿಯಿಂದ ಶ್ರೇಷ್ಠ ಔಷಧಿಯಾಯ್ತು. ತನಗೆ ಸಣ್ಣ ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳುವ ಹಿಂದೂ ತನಗೆ ಉಳುವುದರಿಂದ ಶುರುಮಾಡಿ ದೇಹಾರೋಗ್ಯ ಕಾಪಾಡಿಕೊಳ್ಳುವವರೆಗೆ ಎಲ್ಲ ಬಗೆಯಲ್ಲೂ ಸಹಕಾರಿಯಾದ ಗೋವನ್ನು ಪೂಜಿಸದೇ ಇರುವುದು ಸಾಧ್ಯವೇ? ನಮ್ಮಲ್ಲಿ ಕೃಷಿಗೊಬ್ಬರು, ಅನ್ನ ಕೊಡುವುದಕ್ಕೊಬ್ಬರು ದೇವರಿದ್ದಾರೆ. ಆರೋಗ್ಯಕೊಬ್ಬರಿದ್ದಾರೆ ಮತ್ತು ಯಜ್ಞದಲ್ಲಿ ಹವಿಸ್ಸಿನ ಸ್ವೀಕಾರಕ್ಕೂ ದೇವರಿದ್ದಾರೆ. ಆದರೆ ಇವೆಲ್ಲವನ್ನು ಪರೋಕ್ಷವಾಗಿ ಪೂರೈಸಿಕೊಡುವ ಗೋವಿನಲ್ಲಿ ಈ ಎಲ್ಲಾ ದೇವತೆಗಳು ಅಡಗಿ ಕುಳಿತಿದ್ದಾರೆಂಬ ಪ್ರತೀತಿ ಈ ಕಾರಣದಿಂದಲೇ ಹರಡಿರಲು ಸಾಕು. ಇನ್ನು ಶ್ರೀಕೃಷ್ಣನ ಬಾಲ ಲೀಲೆಗಳು ಗೋವಿನೊಂದಿಗೆ ತಳಕು ಹಾಕಿಕೊಂಡಿರುವುದಂತೂ ಗೋವಿನ ದೈವೀ ಮಹತ್ವವನ್ನು ಉತ್ತುಂಗಕ್ಕೇರಿಸಿಬಿಟ್ಟಿತು. ಗೋವು ಮೂವ್ವತ್ಮೂರು ಕೋಟಿ ದೇವತೆಗಳ ಆವಾಸ ಎಂದಾಗ ಹಿಂದೂವೊಬ್ಬನಿಗೆ ಎದೆಯುಬ್ಬುವುದು ಇದಕ್ಕಾಗಿಯೇ. ತಮಗಿರುವ ಒಬ್ಬ ದೇವನನ್ನೇ ಎಲ್ಲೆಡೆ ಕಾಣಲಾಗದ ಜನರಿಗೆ, ತಮ್ಮೆಲ್ಲಾ ದೇವರನ್ನು ಗೋವೊಂದರಲ್ಲಿಯೇ ಕಾಣುವ ಹಿಂದೂವಿನ ಮನಸ್ಥಿತಿ ಅರಿವಾಗುವುದಾದರೂ ಹೇಗೆ?

3
ಕಾಲಕ್ರಮದಲ್ಲಿ ಹೆಚ್ಚು ಹೆಚ್ಚು ಗೋವುಗಳಿದ್ದಷ್ಟೂ ಸಿರಿವಂತಿಕೆ ಹೆಚ್ಚೆಂಬ ಭಾವನೆ ಬಲವಾಯ್ತು. ದನ ಕಟ್ಟುವ ಕೊಟ್ಟಿಗೆಗಳು ಮನೆಯ ಹಜಾರಕ್ಕೆ ತಾಕಿಕೊಂಡೇ ಇರುತ್ತಿದ್ದ ಹಳೆಯ ಮನೆಗಳು ಉತ್ತರ ಕನರ್ಾಟಕದಲ್ಲಿ ಈಗಲೂ ಕಾಣಸಿಗುತ್ತವೆ. ಆ ಮನೆಗೆ ಬಂದವರಿಗೆ ಮೊದಲು ಗೋವಿನದ್ದೇ ದರ್ಶನವಾಗಬೇಕಿತ್ತು. ಈ ಮನೆಗಳಲ್ಲಿ ಒಂದು ಕಂಬವನ್ನು ಮಜ್ಜಿಗೆ ಕಂಬವೆಂದೇ ಕರೆಯುತ್ತಿದ್ದರು. ಅಪಾರ ಸಂಖ್ಯೆಯ ಗೋವುಗಳಿಂದಾಗಿ ಹಾಲು-ಮಜ್ಜಿಗೆಗೆ ಕೊರತೆಯಿರುತ್ತಿರಲಿಲ್ಲ. ಹೆಚ್ಚುವರಿ ಮಜ್ಜಿಗೆಯನ್ನು ಮಡಕೆಯೊಳಗಿಟ್ಟು ಆ ಕಂಬಕ್ಕೆ ಕಟ್ಟಿಟ್ಟುಬಿಡುತ್ತಿದ್ದರು. ದಾರಿಯಲ್ಲಿ ಅಡ್ಡಾಡುವವರೆಲ್ಲ ಬಾಯಾರಿದಾಗ ಮಜ್ಜಿಗೆ ಕುಡಿದು ಹೋಗಬಹುದಿತ್ತು. ಗೋವು ನಮ್ಮ ಹೃದಯವನ್ನು ವಿಶಾಲಗೊಳಿಸಿತ್ತು.
ಇವೆಲ್ಲ ಭಾವನೆಗಳು ಎಲ್ಲರಿಗೂ ಅರ್ಥವಾಗೋದು ಕಷ್ಟ. 1580 ರ ಸುಮಾರಿಗೆ ಭಾರತಕ್ಕೆ ಬಂದಿದ್ದ ರಾಲ್ಫ್ ಪಿಚ್ ಎಂಬ ವ್ಯಾಪಾರಿ ಬರೆದ ಪತ್ರವೊಂದರಲ್ಲಿ, ‘ಅವರದ್ದೊಂದು ಅಪರೂಪದ ಆಚರಣೆ. ಅವರು ಗೋ ಪೂಜೆ ಮಾಡುತ್ತಾರೆ ಮತ್ತು ಅದರ ಸಗಣಿಯನ್ನು ಮನೆಯ ಗೋಡೆಗಳಿಗೆ ಬಣ್ಣವಾಗಿ ಬಳಿಯುತ್ತಾರೆ. ಮಾಂಸ ತಿನ್ನುವುದಿಲ್ಲ ಬದಲಿಗೆ ಅಕ್ಕಿ, ಹಾಲು ಮತ್ತು ಬೇರುಗಳನ್ನು ತಿಂದು ಬದುಕುತ್ತಾರೆ’ ಎಂದಿದ್ದ.
ಭಾರತ ಆಕ್ರಮಣಕ್ಕೆ ತುತ್ತಾಗುತ್ತಿದ್ದಂತೆ ಗೋವುಗಳ ನಾಶವೂ ಹೆಚ್ಚುತ್ತ ಹೋಯಿತು. ವಿಶೇಷವಾಗಿ ವಾಯುವ್ಯ ಭಾಗದಿಂದ ಧಾವಿಸಿ ಬಂದ ಮುಸಲರೊಂದಿಗೆ ಹಿಂದೂಗಳ ಶ್ರದ್ಧಾಕೇಂದ್ರವಾಗಿದ್ದ ಗೋವಿನ ಮೇಲೆ ಆಘಾತ ಹೆಚ್ಚಿತು. ಭಗವಂತನಿಂದ ಮರುಜನ್ಮನದ ಉಪಕಾರವನ್ನೇ ಪಡೆದಿರುವ ಹಿಂದು ಸಾಯಲು ಹೆದರಲಾರ ಎಂಬುದರ ಅರಿವಿದ್ದ ಮುಸಲ್ಮಾನ ದೊರೆಗಳು ಅವನ ಪಾಲಿಗೆ ಜೀವಂತ ದೇವತೆಯಾಗಿರುವ ಗೋವನ್ನೇ ವಧೆಗೈದು ಅವನನ್ನು ಹಿಂಸಿಸಿದರು. ಕೆಲವೊಮ್ಮೆ ಬಲವಂತದಿಂದ ಗೋ ಮಾಂಸವನ್ನು ಅವನ ಬಾಯಲ್ಲಿ ತುರುಕಿ ಅವನ ಮತ ಪರಿವರ್ತನೆಯ ಪ್ರಯತ್ನವನ್ನು ಮಾಡಿದರು. ಅಲ್ಲಿಂದಾಚೆಗೆ ಗೋವು ಹಿಂದೂ-ಮುಸಲ್ಮಾನರ ನಡುವಣ ಕದನದ ಕೇಂದ್ರ ಬಿಂದುವಾಯ್ತು. ಪೃಥ್ವಿರಾಜ್ ಚೌಹಾನ್ನನ್ನು ಘೋರಿ ಎದುರಿಸಿದ್ದು ದನಗಳ ಸಮೂಹವನ್ನು ಮುಂದೆ ಬಿಟ್ಟು ಅಂತಾರೆ. ಬಿಜಾಪುರಕ್ಕೆ ಮೊದಲ ಬಾರಿಗೆ ಬಂದ ಬಾಲಕ ಶಿವಾಜಿ ಗೋವನ್ನು ಕಡಿಯುತ್ತಿದ್ದ ಕಟುಕನ ಕೈ ಕಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರಂತೆ. ಕೂಕಾ ಸಂಪ್ರದಾಯದ ಗುರುಗಳು ತಮ್ಮ ಅನುಯಾಯಿಗಳಿಗೆ ಹೇಳಿಕೊಟ್ಟಿದ್ದೇ ‘ಗೋವಿಗಾಗಿ ಯುದ್ಧ’ ಅಂತ. ಇದನ್ನು ಅರಿತೇ ಮುಸಲ್ಮಾನ ರಾಜರೂ ಬರ ಬರುತ್ತಾ ಗೋಹತ್ಯೆ ನಿಷೇಧ ಜಾರಿಗೆ ತರಲೇಬೇಕಾಯ್ತು. ಹಿಂದೂ ತನ್ನ ತಲೆ ಮೇಲಿನ ಜೇಸಿಯೂ ಕಂದಾಯ ಕಟ್ಟುವಲ್ಲಿಯಾ ಹಿಂದು ಮುಂದು ನೋಡುತ್ತಿರಲಿಲ್ಲ ಆದರೆ ಗೋರಕ್ಷಣೆಗೆ ತಲೆಯನ್ನೇ ಬೇಕಾದರೂ ಕೊಡುತ್ತಿದ್ದ. ಇದು ಪರಂಪರೆಯಿಂದ ಅನೂಚಾನವಾಗಿ ಹಬ್ಬಿ ಬಂದ ಶ್ರದ್ಧೆಯ ಪರಿಣಾಮ ಅಷ್ಟೇ.
ಬ್ರಿಟೀಷರ ಕಥೆ ಬೇರೆ. ಅವರು ನಯ ವಂಚಕರು. ಅವರಿಗೆ ಭಾರತದ ಶ್ರೀಮಂತಿಕೆಯ ಗುಟ್ಟು ಇಲ್ಲಿನ ರೈತ ಅನ್ನೋದು ಸ್ಪಷ್ಟವಾಗಿ ಗೊತ್ತಿತ್ತು. ಅವನನ್ನು ಹಿಡಿತಕ್ಕೆ ತಂದುಕೊಳ್ಳದಿದ್ದುದೇ ಇಲ್ಲಿ ಆಳಲು ಯತ್ನಿಸಿದ ಪ್ರತಿಯೊಬ್ಬರೂ ಸೋಲಲು ಕಾರಣವೆಂಬುದನ್ನು ಚೆನ್ನಾಗಿ ತಿಳಿದುಕೊಂಡರು. ಅದಕ್ಕಾಗಿ ರೈತನ ತೆರಿಗೆ ಹೆಚ್ಚಿಸಿದರು, ಭೂಮಿ ಮಾರಿಸಿದರು, ಬೆಳೆಗೆ ಬೆಲೆ ಸಿಗದಂತೆ ನೋಡಿಕೊಂಡರು, ಧಾನ್ಯ ಬಿಟ್ಟು ಹಣದ ವ್ಯವಹಾರ ಮಾಡುವಂತೆ ಅವನನ್ನು ಪ್ರೇರೇಪಿಸಿದರು. ಕೊನೆಗೆ ಅವನ ಸರ್ವಋತು ಮಿತ್ರ ಗೋವಿನ ಮಾರಣ ಹೋಮ ಎಂದೂ ನಿಲ್ಲದಂತೆ ನೋಡಿಕೊಂಡರು. ಹಾಗೆ ನೋಡಿದರೆ 1857 ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎರಡನೇ ಬಹದ್ದೂರ್ ಷಾಹ್ ಗೋಮಾಂಸ ಭಕ್ಷಣೆ ಮಾಡಲೇಬಾರದೆಂದು ತಾಕೀತು ಮಾಡಿದ್ದರಿಂದ ಮುಸಲ್ಮಾನರು ಹೆಚ್ಚು ಕಡಿಮೆ ಹಿಂದೂಗಳಂತೆ ಬದುಕುವುದನ್ನು ಕಲಿತುಬಿಟ್ಟಿದ್ದರು. ಆಗ ಗೋಹತ್ಯೆ ಮುಂದುವರೆಸಿದ್ದು ಬ್ರಿಟೀಷರೇ. ತಮ್ಮ ಸೈನಿಕರ ಹಸಿವಿನ ಬೆಂಕಿ ತಣಿಸಲು ಅವರು ಗೋಮಾಂಸ ಬಳಕೆ ಮಾಡುತ್ತಲೇ ಇದ್ದರು. ಅಧಿಕೃತ ದಾಖಲೆಯ ಪ್ರಕಾರ ಕಲ್ಕತ್ತಾದಲ್ಲಿ ಮೊದಲ ಕಸಾಯಿಖಾನೆ 1760 ರಲ್ಲಿ ಆರಂಭವಾಯಿತು. ಪ್ರತಿನಿತ್ಯ ಸಾವಿರಾರು ಗೋವುಗಳ ವಧೆಯಾಗುತ್ತಿತ್ತು. ಅಂದಾಜು ಒಂದು ಕೋಟಿ ಗೋವು ಒಂದೇ ವರ್ಷದಲ್ಲಿ ಕಣ್ಮರೆಯಾಗಿ ಹೋಯ್ತು. ಈ ಆಕ್ರೋಶವೇ 1857 ರಲ್ಲಿ ಮಂಗಲ್ ಪಾಂಡೆಯ ರೂಪದಲ್ಲಿ ಭುಗಿಲೆದ್ದಿತು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿ ನಡೆದ ಅಷ್ಟೂ ಕದನದ ಮೂಲ ಕಿಡಿ ಗೋವಿನ ಹತ್ಯೆಯೇ ಆಗಿತ್ತು! ಸಂಗ್ರಾಮ ಮುಗಿದ ನಂತರವೂ ಕಾವು ಆರಿರಲಿಲ್ಲ. ಈಸ್ಟ್ ಇಂಡಿಯಾ ಕಂಪನಿಯಿಂದ ಅಧಿಕಾರ ಸ್ವೀಕರಿಸಿದ ಇಂಗ್ಲೆಂಡಿನ ರಾಣಿ ಗೋಹತ್ಯೆ ನಿಲ್ಲಲೇಬಾರದೆಂದು ತಾಕೀತು ಮಾಡಿದ್ದಳಂತೆ.
ಬ್ರಿಟೀಷರು ಮುಂದಿನ ದಿನಗಳಲ್ಲಿ ಗೋವನ್ನು ವ್ಯವಸ್ಥಿತವಾಗಿ ಹಿಂದೂ-ಮುಸಲ್ಮಾನರ ನಡುವಣ ಕದನ ಬಿಂದುವಾಗಿರುವಂತೆ ನೋಡಿಕೊಂಡರು. ಅವರ ಒಡೆದು ಆಳುವ ನೀತಿಯ ಮಹತ್ವದ ಭಾಗವಾಯ್ತು ಗೋವು. ಗಾಂಧೀಜಿಯೂ ಗೋವಧೆಯ ವಿರೋಧವಾಗಿ ಅನೇಕ ಬಾರಿ ಮಾತನಾಡಿದರು. ಸ್ವಾತಂತ್ರ್ಯ ಬಂದ ಮೇಲೂ ಗೋವಿನ ಮಹತ್ವ ಕಮ್ಮಿಯಾಗಲಿಲ್ಲ. ಕಾಂಗ್ರೆಸ್ಸು ಚುನಾವಣೆಗೆ ಜೋಡೆತ್ತುಗಳನ್ನು ಆನಂತರ ಗೋವು ಮತ್ತು ಕರುವನ್ನೇ ತಮ್ಮ ಸಂಕೇತವಾಗಿ ಬಳಸಿತು. ಹಾಗಂತ ಗೋಹತ್ಯೆಯನ್ನು ತಡೆಯುವಂತಹ ಛಾತಿ ಮಾತ್ರ ತೋರಲಿಲ್ಲ. ಚುನಾವಣಾ ಚಿನ್ಹೆಯಲ್ಲಿ ಗೋವನ್ನು ಬಳಸಿ ಹಿಂದೂಗಳನ್ನು ಅತ್ತ ಗೋಹತ್ಯೆ ತಡೆಯದೇ ಮುಸಲ್ಮಾನರನ್ನು ತನ್ನತ್ತ ಸೆಳೆದೇ ಸೆಳೆಯಿತು. ಹೀಗಾಗಿಯೇ ಸುಮಾರು 350 ರಷ್ಟಿದ್ದ ಕಸಾಯಿಖಾನೆಗಳ ಸಂಖ್ಯೆ ಬರಬರುತ್ತಾ 35 ಸಾವಿರವನ್ನು ದಾಟಿತು. ಇಂದಿನ ಸ್ಥಿತಿಗತಿ ಹೇಗಿದೆ ಗೊತ್ತೇ? 2015 ರ ಅಂಕಿ ಅಂಶದ ಪ್ರಕಾರ ಆಸ್ಟ್ರೇಲಿಯಾ 15 ಲಕ್ಷ ಟನ್ನಷ್ಟು, ಬ್ರೆಜಿಲ್ 20 ಲಕ್ಷ ಟನ್ಗಳಷ್ಟು ಗೋಮಾಂಸ ರಫ್ತು ಮಾಡಿದ್ದರೆ ಭಾರತ 24 ಲಕ್ಷ ಟನ್ಗಳಷ್ಟು ಗೋಮಾಂಸ ರಫ್ತು ಮಾಡಿ ಎಲ್ಲರಿಗಿಂತಲೂ ಮೊದಲ ಸ್ಥಾನದಲ್ಲಿ ನಿಂತಿತು. 2016 ರ ಡಿಸೆಂಬರ್ನ ದಿ ಹಿಂದೂ ಪತ್ರಿಕೆಯ ವರದಿಯ ಪ್ರಕಾರ ದನದ ಮಾಂಸ ತಿನ್ನುವ ಭಾರತೀಯರು ಹೆಚ್ಚುತ್ತಿದ್ದಾರೆ. ಆದರೆ ಇದರಲ್ಲಿ ಹಿಂದೂಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಐದು ವರ್ಷಗಳ ಹಿಂದೆ ಹಿಂದೂಗಳಲ್ಲಿ ಶೇಕಡಾ 1.39 ರಷ್ಟು ಜನ ದನದ ಮಾಂಸ ತಿನ್ನುವವರಿದ್ದರೆ ಮುಸಲ್ಮಾನರಲ್ಲಿ ಈ ಪ್ರಮಾಣ 42 ಪ್ರತಿಶತದಷ್ಟಿತ್ತು! ನ್ಯಾಶನಲ್ ಸ್ಯಾಂಪಲ್ ಸರ್ವೆನ ಆಫಿಸ್ನಿಂದ ಸಂಪಾದಿತ ಈ ಸವರ್ೇ ಸುಮಾರು ಮೂರು ವರ್ಷಗಳ ಕಾಲ ಮಾಹಿತಿ ಕಲೆ ಹಾಕಿತ್ತು. ಆಹಾರದ ಹಕ್ಕು ಎಂದು ಅರಚುವ ಅನೇಕರಿಗೆ ಮುಸಲ್ಮಾನರಲ್ಲಿಯೇ ಅರ್ಧಕ್ಕಿಂತಲೂ ಹೆಚ್ಚು ಜನ ಗೋಮಾಂಸ ತಿನ್ನುವುದಿಲ್ಲವಷ್ಟೇ ಅಲ್ಲ ಅಂತಹವರೊಂದಿಗೆ ಸಂಬಂಧವನ್ನೂ ಬೆಳೆಸುವುದಿಲ್ಲವೆಂಬುದು ಗೊತ್ತೇ ಇಲ್ಲ.

03
ಗೋವನ್ನು ಹಿಂದೂ-ಮುಸಲ್ಮಾನರ ನಡುವಣ ಕದನದ ಕೇಂದ್ರ ಬಿಂದು ಮಾಡಿ ಶಾಶ್ವತವಾಗಿ ಆಳಬೇಕೆಂಬ ಬ್ರಿಟೀಷರ ಬುದ್ಧಿಯೇ ಇಲ್ಲಿನ ರಾಷ್ಟ್ರವಿರೋಧಿ ಚಿಂತಕರಿಗೆ ಅನ್ನ ನೀಡುತ್ತಿದೆ. ಗೋವಧೆಯನ್ನು ಸಮರ್ಥಿಸಿಕೊಳ್ಳುತ್ತಲೇ ಈ ಎಡಪಂಥೀಯ ವಿಚಾರವಾದಿಗಳು ಈ ದೇಶದ 60 ಪ್ರತಿಶತಕ್ಕೂ ಹೆಚ್ಚಿರುವ ರೈತರ ಪಾಲಿಗೆ ಕಂಟಕವಾಗಿಬಿಟ್ಟಿದ್ದಾರೆ. ಇವರೆಲ್ಲರ ನಡುವೆ ಕೇಂದ್ರ ಸರ್ಕಾರ ಗೋವನ್ನು ಉಳಿಸಿ ರೈತನ ಸಂಪತ್ತು ವೃದ್ಧಿಸುವ ಕೆಲಸಕ್ಕೆ ಕೈ ಹಾಕಿದೆಯಲ್ಲ ಅಭಿನಂದಿಸಲೇಬೇಕು ಬಿಡಿ.

Comments are closed.