ವಿಭಾಗಗಳು

ಸುದ್ದಿಪತ್ರ


 

ಚಿತೆಯ ಕಟ್ಟಿಗೆ ಕದ್ದು ನೀರು ಕಾಯಿಸಿಕೊಂಡವರು!

ಮುಖ್ಯಮಂತ್ರಿಗಳು ಮಾಡಿದ ಪ್ರತಿಯೊಂದು ಕೆಲಸವನ್ನೂ ವರದಿ ಮಾಡಿ ಅದನ್ನು ಬೆಂಬಲಿಸುವ ಒಂದಷ್ಟು ‘ನೆಕ್ಕು ಜೀವಿ’ಗಳು ಮೂರು ವರ್ಷಗಳಲ್ಲಿ ಜೇಬು ತುಂಬಿಸಿಕೊಂಡು ನಿರಾಳವಾದರು. ಗಣಪತಿಯವರ ಕೇಸಿನಲ್ಲೂ ಅಷ್ಟೇ. ಕೆಲವು ‘ಸುದ್ದಿ’ ಮನೆಯ ಕಂಟಕಗಳು ಡಿವೈಎಸ್ಪಿ ಹಿಂದೂ ಸಂಘಟನೆಗಳ ಪರವಾಗಿ ನಿಂತು ಚಚರ್್ ಗಲಾಟೆಯಲ್ಲಿ ತನಿಖೆ ನಡೆಸುತ್ತಿದ್ದರೆಂದು ಬರೆದಿದ್ದಾರೆ. ಸತ್ತವ ಸಾವಿಗೆ ಕಾರಣವನ್ನೂ ಹೇಳಿ ಸತ್ತ ಮೇಲೆ ಅಂಥವರ ಬೆಂಬಲಕ್ಕೆ ನಿಂತ ಈ ಕ್ಷುದ್ರ ಜೀವಿ, ಕಾಮ್ರೇಡುಗಳಿಗೆ ಅದೇನೆನ್ನಬೇಕೋ ದೇವರೇ ಬಲ್ಲ.

s3

ಎಲ್ಲಾ ಬಗೆಯ ಭಾಗ್ಯಗಳನ್ನು ಆಸ್ವಾದಿಸುತ್ತಾ ಕನರ್ಾಟಕಕ್ಕೆ ದೌಭರ್ಾಗ್ಯ ಅಮರಿಕೊಂಡಿದ್ದು ಗೊತ್ತಾಗಲೇ ಇಲ್ಲ. ಬಲಿಯನ್ನು ಪಾತಾಳಕ್ಕೆ ತಳ್ಳಿದ ವಿಷ್ಣುವಿನ ಕಥೆ ಗೊತ್ತಲ್ಲ. ಆತನನ್ನು ಪಾತಾಳದಿಂದ ಎಲ್ಲಾ ಲಕ್ಷ್ಮಿಯರು ಬಿಟ್ಟು ಹೋದರಂತೆ. ವಿದ್ಯಾಲಕ್ಷ್ಮಿ, ಧನ-ಧಾನ್ಯ ಲಕ್ಷ್ಮಿಯರು ಎಲ್ಲಾ ಒಬ್ಬೊಬ್ಬರಾಗಿ ಹೊರಟರಂತೆ. ಬಲಿ ತಲೆಕೆಡಿಸಿಕೊಳ್ಳಲೇ ಇಲ್ಲ. ಕೊನೆಯದಾಗಿ ಧೈರ್ಯಲಕ್ಷ್ಮಿ ಹೊರಟಾಗ ಬಲಿ ಆಕೆಯ ಕಾಲಿಗೆ ಬಿದ್ದು ಯಾರು ಹೋದರೂ ದುಃಖವಿಲ್ಲ, ನೀನೊಬ್ಬಳಿದ್ದರೆ ಸಾಕೆಂದು ಕಾಡಿ-ಬೇಡಿ ಉಳಿಸಿಕೊಂಡನಂತೆ. ಧೈರ್ಯಲಕ್ಷ್ಮಿಯೊಂದಿಗೆ ಉಳಿದವರೆಲ್ಲ ಜೊತೆಯಾಗಿ ಸೇರಿಕೊಂಡುಬಿಟ್ಟರಂತೆ. ಕಳೆದ ಮೂರು ವರ್ಷಗಳ ಸಿದ್ಧರಾಮಯ್ಯನ ಸಕರ್ಾರದ ಅವಧಿಯಲ್ಲಿ ಭಾಗ್ಯದ ಘೋಷಣೆಗಳಾದವು. ಭಾಗ್ಯಲಕ್ಷ್ಮಿ ಉಳಿಯಲಿಲ್ಲ. ಪರೀಕ್ಷಾ ಪತ್ರಿಕೆಗಳು ಸೋರಿ ಹೋಗುವ ಅಸಹ್ಯಕರ ವಾತಾವರಣದಲ್ಲಿ ವಿದ್ಯಾಲಕ್ಷ್ಮಿ ಉಳಿಯಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ವಾತಾವರಣವನ್ನು ರೈತನಿಗೆ ಸೃಷ್ಟಿಸಿಕೊಟ್ಟೆವು. ‘ಧಾನ್ಯಲಕ್ಷ್ಮಿ’ ಉಳಿಯಲಿಲ್ಲ. ಧಾನ್ಯಲಕ್ಷ್ಮಿಯನ್ನು ಒತ್ತಾಯ ಪೂರ್ವಕವಾಗಿ ಉಳಿಸಿಕೊಳ್ಳಲೆಂದು ಹಣ ನೀರಿನಂತೆ ಖಚರ್ು ಮಾಡಿದೆವು. ‘ಧನಲಕ್ಷ್ಮಿ’ ಜಾಗ ಖಾಲಿ ಮಾಡಿದಳು. ಎಲ್ಲಾ ಹೋಗಲೆಂದು ಸುಮ್ಮನಾದರೆ ‘ಧೈರ್ಯಲಕ್ಷ್ಮಿ’ಯೇ ಝಾಡಿಸಿ ವದ್ದು ಹೋದಳು. ರಾಜ್ಯದ ಪಾಲಿಗೆ ಧೈರ್ಯದ ದ್ಯೋತಕವಾದ ಪೊಲೀಸರು ಅಧೀರರಾಗಿ ರಾಜೀನಾಮೆ ಕೊಟ್ಟರು. ಇಲ್ಲವೇ ಆತ್ಮಹತ್ಯೆಯನ್ನೇ ಮಾಡಿಕೊಂಡರು. ಆಗಲಾದರು ಸಿದ್ಧರಾಮಯ್ಯ ಎಚ್ಚೆತ್ತು ಧೈರ್ಯಲಕ್ಷ್ಮಿಯ ಆರಾಧನೆಗೆ ಮುಂದಾಗಿದ್ದರೆ ರಾಜ್ಯದ ಎಲ್ಲಾ ಸಂಪತ್ತುಗಳು ಉಳಿದಿರುತ್ತಿದ್ದವೇನೋ? ಆದರೆ ಮುಖ್ಯಮಂತ್ರಿಗಳಿಗೆ ಮೂಢ ನಂಬಿಕೆ ವಿಧೇಯಕದಲ್ಲಿರುವಷ್ಟು ಆಸಕ್ತಿ ಅಧಿಕಾರಿಗಳ ಸಾವಿನ ರಹಸ್ಯ ಬೇಧಿಸುವಲ್ಲಿಲ್ಲ.

MOH_Jan-10-2015-Yoga_(15)
Chief Minister Siddaramaiah, Yoga Guru Vachananda Swamy, Ministers Olympic Association President and MLC Govindraj during the inauguration of the Karnataka Olympic and Shwasa Yoga Association organised Yoga Campaign at Kanteerava Indoor Stadium in Bengaluru on Saturday.

ರಾಜ್ಯದ ಪೊಲೀಸ್ ವ್ಯವಸ್ಥೆ ಜಾಜರ್್ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಹದಗೆಡಲು ಶುರುವಾಗಿತ್ತು. ಅನೇಕ ಸಮರ್ಥರನ್ನು ಬದಿಗೆ ಸರಿಸಿ ಅವರನ್ನು ಪಟ್ಟದ ಮೇಲೆ ಕೂರಿಸಿದಾಗಲೇ ಗಬ್ಬು ವಾಸನೆ ಎಲ್ಲರಿಗೂ ಬಡಿದಿತ್ತು. ಕೋಮುವಾದಿಗಳ ವಾಸನೆಯನ್ನು ಬಲುಬೇಗ ಗ್ರಹಿಸುವ ಮುಖ್ಯಮಂತ್ರಿಗಳ ನಾಸಿಕಾಗ್ರ ಈ ವಿಷಯದಲ್ಲಿ ಸೋತಿದ್ದೇಕೆ ದೇವರೇ ಬಲ್ಲ!
ಮಲ್ಲಿಕಾಜರ್ುನ ಬಂಡೆಯವರನ್ನು ಸದ್ದಿಲ್ಲದೇ ‘ಕೊಲೆ’ ಮಾಡಿಬಿಟ್ಟರಲ್ಲ, ಡಿಪಾಟರ್್ಮೆಂಟಿನವರು ಅದಕ್ಕೆ ಗೃಹಸಚಿವರ ಬೆಂಬಲ ಇರಲಿಲ್ಲವೆಂಬುದನ್ನು ನಂಬುವುದು ಸಾಧ್ಯವೇನು? ಅಕಸ್ಮಾತ್ ಗೃಹಸಚಿವರ ಕೈವಾಡ ಇಲ್ಲವಾದಲ್ಲಿ ಬಂಡೆಯವರ ಕೊಲೆ ಪ್ರಕರಣ ತಾಕರ್ಿಕ ಅಂತ್ಯ ಕಾಣಲಿಲ್ಲವೇಕೆ? ಹೋಗಲಿ. ಕಳ್ಳರನ್ನು ಅಟ್ಟಿಸಿಕೊಂಡು ಹೋದ ಎಸ್ಸೈ ಜಗದೀಶರನ್ನು ಕಳ್ಳರೇ ಚೂರಿ ಇರಿದು ಕೊಂದು ಬಿಟ್ಟರಲ್ಲ ಅವತ್ತಾದರೂ ಸಕರ್ಾರಕ್ಕೆ ನಾಚಿಕೆಯಾಗಿತ್ತಾ? ಗೃಹ ಸಚಿವರು ತಲೆತಗ್ಗಿಸಿ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸುವ ಕೊನೆಗೆ ತಮ್ಮನ್ನು ತಾವು ಸುಧಾರಿಸಿಕೊಳ್ಳುವ ಮಾತಾಡಿದ್ದರಾ? ನಮಗಿಂತ ಬೇಗ ಅವರುಗಳೇ ಅದನ್ನು ಮರೆತುಬಿಟ್ಟರು.
ಬಿಡಿ. ಡಿಕೆ ರವಿಯವರ ಸಾವಿನ ಸುದ್ದಿ ಇಡಿಯ ದೇಶವನ್ನು ಬೆಚ್ಚಿ ಬೀಳಿಸಿತ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ತಯಾರಿಯಲ್ಲಿದ್ದರು ಜನ. ಸಿದ್ದು ಸಕರ್ಾರ ಜಗ್ಗಲಿಲ್ಲ. ಸಾವಿಗೆ ಕಂಬನಿ ಸುರಿಸಿದ ಡಿಕೆ ರವಿಯವರ ನಾಯಿಯಷ್ಟು ನಿಯತ್ತೂ ಆಳುವವರಿಗಿರಲಿಲ್ಲ. ಸಿಬಿಐಗೆ ಕೇಸು ವಹಿಸಲು ಮೀನ ಮೇಷ ಎಣಿಸಿದ್ದರು ಮುಖ್ಯಮಂತ್ರಿಗಳು. ಏಕೆ ಗೊತ್ತಾ? ಡಿಕೆ ರವಿ ಜಾಜರ್್ಗೆ ಸಂಬಂಧಿಸಿದ ಕಟ್ಟಡವೊಂದಕ್ಕೆ ದಾಳಿ ಮಾಡಿ ಮಹತ್ವದ ಕಡತಗಳನ್ನು ವಶಪಡಿಸಿಕೊಂಡಿದ್ದರೆಂದು ಸುದ್ದಿ ಬಂತು. ಆಮೇಲೇನು? ಸತ್ತವರ ಕತೆ ಮುಗಿಯಿತು. ಅವರ ಚಿತೆಗೆಂದು ತಂದ ಕಟ್ಟಿಗೆಗಳಿಂದ ಜಾಜರ್್ ಮತ್ತು ಸಿದ್ಧರಾಮಯ್ಯನವರು ನೀರು ಕಾಯಿಸಿಕೊಂಡು ಸ್ನಾನ ಮಾಡಿಬಿಟ್ಟಿರಬೇಕು! ಮಗನ ಸಾವಿಗೆ ನ್ಯಾಯ ಕೇಳಲು ವರ್ಷದ ನಂತರ ವಿಧಾನಸೌಧದ ಬಾಗಿಲಿಗೆ ಬಂದ ಡಿಕೆ ರವಿಯವರ ತಂದೆ-ತಾಯಿಯರನ್ನು ಸೌಜನ್ಯಕ್ಕೂ ಗೌರವಿಸಲಿಲ್ಲ ಸಕರ್ಾರ. ಥೂ! ನಾಚಿಕೆಗೇಡು.

s1
ಇಡಿಯ ರಾಜ್ಯವೇ ಧಿಗ್ಗನೆದ್ದು ಪ್ರತಿಭಟನೆಗೆ ನಿಂತರೂ ತನ್ನ ಕೂದಲೂ ಕೊಂಕಲಿಲ್ಲವೆಂದಾದ ಮೇಲೆ ಜಾಜರ್್ ಮಂತ್ರಿಯಾಗುಳಿಯಲಿಲ್ಲ, ಸವರ್ಾಧಿಕಾರಿಯೇ ಆಗಿಬಿಟ್ಟರು. ಪೊಲೀಸ್ ಇಲಾಖೆ ಧಂಧೆಗೆ ಇಳಿಯಿತು. ಜಾಜರ್್ ಆಪ್ತ ಅಧಿಕಾರಿಗಳು ತಮ್ಮ ಕೆಳಗಿನವರನ್ನು ವಸೂಲಿಗೆ ಓಡಿಸಿದರು. ವಿರೋಧಿಸಿದವರಿಗೆ ಸಹಿಸಲಾಗದ ಕಿರುಕುಳ ಕೊಟ್ಟರು. ಈ ಕಿರುಕುಳಗಳನ್ನು ಸಹಿಸಲಾಗದೇ ಕೈ ಚಾಚಿದ ಪೇದೆಗಳು ಅತ್ತ ಜನರೆದುರು ಮಾನ ಕಳೆದುಕೊಂಡರು ಇತ್ತ ಅಧಿಕಾರಿಗಳೆದುರು ಮೂಕರ್ಾಸಿನ ಕಿಮ್ಮತ್ತಿಗಿಲ್ಲದಂತಾದರು.
ಆಗಲೇ ಇಡಿಯ ವ್ಯವಸ್ಥೆ ಸಿಡಿದು ನಿಂತಿದ್ದು. ಅಷ್ಟಕ್ಕೆ ಸರಿಯಾಗಿ ಗೃಹ ಸಚಿವರಾಗಿ ಪರಮೇಶ್ವರ್ ಬಂದು ಕುಳಿತರೂ ಲಾಭವಾಗಲಿಲ್ಲ. ಆಯಕಟ್ಟಿನ ಜಾಗದಲ್ಲೆಲ್ಲಾ ಹಿಡಿತ ಸ್ಥಾಪಿಸಿದ ಜಾಜರ್್ ಬೆಂಬಲಿತ ಅಭ್ಯಥರ್ಿಗಳ ಕಿರಿಕಿರಿ ನಡೆದೇ ಇತ್ತು. ಶಶಿಧರ್ ನೇತೃತ್ವದಲ್ಲಿ ಪೊಲೀಸರು ಬೀದಿಗಿಳಿಯುವ ಸಿದ್ಧತೆ ನಡೆಸಿದರು. ಅದು ಪರಮೇಶ್ವರ್ರಿಗೆ ಖಾತೆಗೆ ‘ವೆಲ್ಕಮ್’.
ಸರಿಸುಮಾರು ಅದೇ ವೇಳೆಗೆ ಇಂತಹುದೇ ಕಿರುಕುಳಗಳಿಂದ ಬೇಸತ್ತ ಅನುಪಮಾ ಶೆಣೈ ತನ್ನ ರಾಜೀನಾಮೆಯನ್ನು ಬಿಸಾಕಿ ಎದ್ದು ನಡೆದರು. ಆಕೆ ಸಕರ್ಾರದ ವಿರುದ್ಧ ನಡೆಸಿದ ಏಕಪಕ್ಷೀಯ ದಾಳಿಯನ್ನು ಮೌನವಾಗಿ ನೋಡಿದರಷ್ಟೇ ಎಲ್ಲ. ಆಕೆ ರಾಜೀನಾಮೆ ಕೊಡಬಾರದಿತ್ತು ಅಂತ ಭಾರೀ ಧೈರ್ಯವಂತರಂತೆ ಮಾತಾಡಿದವರೆಲ್ಲ ಇಂದು ಡಿವೈಎಸ್ಪಿ ಗಣಪತಿಯವರ ಸಾವಿನ ನಂತರ ಒಂದಾದರೂ ಜೀವ ಉಳಿಯಿತಲ್ಲ ಎಂದು ಗೊಣಗಾಡುತ್ತಿದ್ದಾರೆ. ಹೇಳಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತವಾಗಿದೆಯಾ?
ಡಿವೈಎಸ್ಪಿ ಗಣಪತಿಯವರು ತೀರಿಕೊಳ್ಳುವ ಮುನ್ನ ತಮಗಿರುವ ಎಲ್ಲಾ ಬಗೆಯ ಒತ್ತಡಗಳನ್ನೂ ಖಾಸಗಿ ಚಾನಲ್ಗೆ ವಿವರಿಸಿದ್ದಾರೆ. ತಮ್ಮ ಸಾವಿನ ಅಷ್ಟು ಕಾರಣವನ್ನೂ ಹಿಂದಿನ ಗೃಹಸಚಿವ ಜಾಜರ್್ರಿಗೇ ತಗುಲಿಸಿದ್ದಾರೆ. ಇಷ್ಟಾದರೂ ಸಚಿವರ ವಿರುದ್ಧ ಸಕರ್ಾರದಲ್ಲಿ ಯಾರೂ ಸೊಲ್ಲೆತ್ತದಿರುವುದು ವಿಶೇಷ. ಜಾಜರ್್ನ ಬೆಂಬಲಕ್ಕೆ ನಿಲ್ಲುವಂತೆ ಮಂತ್ರಿಗಳಿಗೆ ಆದೇಶಿಸಿರುವ ನಡೆಯಂತೂ ಅಸಹ್ಯಕರ. ಸಾಧಾರಣ ಕೊಲೆಯೊಂದರಲ್ಲಿ ಸಂಬಂಧವೇ ಇಲ್ಲದ ವ್ಯಕ್ತಿಯ ಹಿಂದೆ ಬಿದ್ದು ಅಟ್ಟಿಸಿಕೊಂಡು ಹೋಗಿ ಹಿಡಿಯುವ ಪೊಲೀಸರಿಗೆ ಕಣ್ಣೆದುರಿಗೆ ಕಾಣುತ್ತಿರುವ ಆರೋಪಿಯನ್ನು ಹಿಡಿಯುವುದು ಸಾಧ್ಯವಿಲ್ಲವಾ? ಪ್ರಭಾವಿಯೆಂಬುದೊಂದೇ ಜಾಜರ್್ನ ಹಿಂದಿರುವ ಶಕ್ತಿಯಾ ಅಥವಾ ಸಿಎಂ ಆಪ್ತನೆಂಬುದೊಂದೇ ಧೈರ್ಯವಾ?
ಅಂದ ಹಾಗೆ ಸಿಎಂ ಆಪ್ತ ಮರಿಗೌಡ ಮೈಸೂರಿನ ಡಿ ಸಿ ಶಿಖಾಗೆ ಬಹಿರಂಗವಾಗಿ ಅವಮಾನ ಮಾಡಿ ಆಕೆ ಖಡಕ್ಕಾಗಿದ್ದರಿಂದಲೇ ಈಗ ವಿಲವಿಲ ವದ್ದಾಡುತ್ತಿರುವುದು ನಿಮಗೆ ಗೊತ್ತೇ ಇದೆ. ಅದಾಗಲೇ ಮಂತ್ರಿ ಮಾಗಧರನೇಕರು ಶಿಖಾರ ಗಂಡನನ್ನು ಓಲೈಸುವ, ಬೆದರಿಸುವ ಮೂಲಕ ಆಕೆಯನ್ನು ಮೆತ್ತಗಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಪೊಲೀಸರ ಮೇಲೆ ರಾಜಕಾರಣಿಗಳ ಸವಾರಿ ಯಾವಾಗಲೂ ಇದ್ದದ್ದೇ. ಆದರೆ ಇಷ್ಟು ನೀಚ ಮಟ್ಟಕ್ಕೆ ಎಂದೂ ಇಳಿದಿರಲಿಲ್ಲ. ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಗೋ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಅಯೋಗ್ಯನೊಬ್ಬನನ್ನು ಆ್ಯಂಟಿ ನಕ್ಸಲ್ ಸ್ಕ್ವಾಡ್ನ ಪೊಲೀಸರು ಅನುಮಾನದ ಕಾರಣದಿಂದ ಗುಂಡು ಹಾರಿಸಿ ಕೊಂದುಬಿಟ್ಟರು. ಆತ ಮುಸಲ್ಮಾನನೆಂಬ ಒಂದೇ ಕಾರಣಕ್ಕೇ ಮುಖ್ಯಮಂತ್ರಿಗಳು ಅವನ ಪರವಾಗಿ ನಿಂತರು. ಅವನ ಮನೆಯವರನ್ನು ಕರೆತಂದ ಮಂತ್ರಿಗಳನ್ನು ಸಮಾಧಾನಿಸಿ 10 ಲಕ್ಷ ಪರಿಹಾರವನ್ನೂ ಕೊಟ್ಟರು. ಅವನನ್ನು ಕೊಂದ ಪೇದೆ ವಿಚಾರಣೆ ಎದುರಿಸಬೇಕಾಯ್ತು. ಅಲ್ಲಿಗೆ ರಾಜ್ಯದ ಮುಂದಿನ ದಿಕ್ಕು ಸ್ಪಷ್ಟವಾಗಿ ನಿಧರ್ಾರವಾಗಿತ್ತು. ಮುಖ್ಯಮಂತ್ರಿಗಳು ಮಾಡಿದ ಪ್ರತಿಯೊಂದು ಕೆಲಸವನ್ನೂ ವರದಿ ಮಾಡಿ ಅದನ್ನು ಬೆಂಬಲಿಸುವ ಒಂದಷ್ಟು ‘ನೆಕ್ಕು ಜೀವಿ’ಗಳು ಮೂರು ವರ್ಷಗಳಲ್ಲಿ ಜೇಬು ತುಂಬಿಸಿಕೊಂಡು ನಿರಾಳವಾದರು. ಗಣಪತಿಯವರ ಕೇಸಿನಲ್ಲೂ ಅಷ್ಟೇ. ಕೆಲವು ‘ಸುದ್ದಿ’ ಮನೆಯ ಕಂಟಕಗಳು ಡಿವೈಎಸ್ಪಿ ಹಿಂದೂ ಸಂಘಟನೆಗಳ ಪರವಾಗಿ ನಿಂತು ಚಚರ್್ ಗಲಾಟೆಯಲ್ಲಿ ತನಿಖೆ ನಡೆಸುತ್ತಿದ್ದರೆಂದು ಬರೆದಿದ್ದಾರೆ. ಸತ್ತವ ಸಾವಿಗೆ ಕಾರಣವನ್ನೂ ಹೇಳಿ ಸತ್ತ ಮೇಲೆ ಅಂಥವರ ಬೆಂಬಲಕ್ಕೆ ನಿಂತ ಈ ಕ್ಷುದ್ರ ಜೀವಿ, ಕಾಮ್ರೇಡುಗಳಿಗೆ ಅದೇನೆನ್ನಬೇಕೋ ದೇವರೇ ಬಲ್ಲ.

3-d-278v
ಛೀ! ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಕೈಗೆ ಅಧಿಕಾರ ಕೊಟ್ಟಾಗ ರಾಜ್ಯದ ಜನತೆಗೆ ಭರ್ಜರಿ ಕನಸುಗಳಿದ್ದವು. ಇಂದು ಅವೆಲ್ಲವೂ ಛಿದ್ರವಾಗಿಬಿಟ್ಟಿವೆ. ಮುಖ್ಯಮಂತ್ರಿಗಳೇ ಕೂತಲ್ಲೆಲ್ಲಾ ಕನಸು ಕಾಣುತ್ತಾ ಇಡಿಯ ರಾಜ್ಯವನ್ನು ಕತ್ತಲೆಗೆ ದೂಡಿಬಿಟ್ಟಿದ್ದಾರೆ. ಅಯ್ಯೋ ರಾಮ! ಇನ್ನು ಎರಡು ವರ್ಷ ಬಾಕಿ ಇದೆ!!

Comments are closed.