ವಿಭಾಗಗಳು

ಸುದ್ದಿಪತ್ರ


 

ಜೆ.ಎನ್.ಯು ಪ್ರತ್ಯೇಕತೆಯ ಬೇರುಗಳು ಎಲ್ಲಿ ಅಡಗಿವೆ ಗೊತ್ತಾ?

ಮಾವೋವಾದಿಗಳಿಗೆ, ಮಿಶನರಿಗಳಿಗೆ, ಜೀಹಾದಿಗಳಿಗೆ ನೆಲಮಟ್ಟದಲ್ಲಿ ಸಾಕಷ್ಟು ಶಕ್ತಿ ಇದೆ ನಿಜ. ಅದಕ್ಕೆ ಪೂರಕವಾದ ಬೌದ್ಧಿಕ ವಾತಾವರಣವನ್ನೂ ನಿಮರ್ಿಸಬೇಕಲ್ಲ. ಅದಕ್ಕೆಂದೇ ನಿಮರ್ಾಣಗೊಂಡಿದ್ದು ವಿಶ್ವವಿದ್ಯಾಲಯಗಳು. ನಾವು ಕಟ್ಟಿದ ತೆರಿಗೆ ಹಣವನ್ನು ಬಳಸಿಯೇ ಹೇಗೆ ಬ್ರಿಟೀಷರು ನಮ್ಮ ವಿರುದ್ಧ ಪಡೆ ಕಟ್ಟಿದರೋ ಹಾಗೆಯೇ ನಮ್ಮದೇ ಸಕರ್ಾರಗಳು ದೇಶದ್ರೋಹಿಗಳನ್ನು ಸಲಹುವ ಅನಿವಾರ್ಯತೆಗೆ ಸಿಲುಕಿದ್ದನ್ನು ವಿಶ್ವವಿದ್ಯಾಲಯಗಳೆಂದು ಕರೆಯಬಹುದೇನೋ?

RED-CORRIDOR-OF-INDIA

ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ 1941ರ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಸಮಾರೋಪ ಭಾಷಣದಲ್ಲಿ ದಾರ್ಶನಿಕರಂತೆ ನುಡಿದಿದ್ದರು, ‘ಜಾತಿ ಮತ್ತು ಪಂಥಗಳ ರೂಪದಲ್ಲಿರುವ ನಮ್ಮ ಹಳೆಯ ಶತ್ರುಗಳ ಜೊತೆಯಲ್ಲಿ ಪರಸ್ಪರ ವಿರೋಧವುಳ್ಳ ರಾಜಕೀಯ ಸಿದ್ಧಾಂಥಗಳನ್ನು ಹೊಂದಿದ ರಾಜಕೀಯ ಪಕ್ಷಗಳನ್ನು ನಾವು ಪಡೆಯಲಿದ್ದೇವೆ ಎಂಬುದು ನನ್ನನ್ನು ಆತಂಕಗೊಳಿಸುತ್ತದೆ. ಭಾರತೀಯರು ತಮ್ಮ ರಾಜಕೀಯ ಸಿದ್ಧಾಂತಕ್ಕಿಂತ ದೇಶ ಮುಖ್ಯವೆಂದು ಎತ್ತಿ ಹಿಡಿಯುವರೇ? ಅಥವಾ ದೇಶಕ್ಕಿಂತ ಅದನ್ನೇ ಮೇಲಿನ ಸ್ಥಾನದಲ್ಲಿ ಇಡುವರೇ? ನನಗೆ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ಖಂಡಿತ. ಪಕ್ಷಗಳು ಸಿದ್ಧಾಂತವನ್ನು ದೇಶಕ್ಕಿಂತ ಮೇಲೆ ಇಟ್ಟರೆ ನಮ್ಮ ದೇಶ ಮತ್ತೊಮ್ಮೆ ಎರಡನೆಯ ಬಾರಿಗೆ ವಿಪತ್ತಿಗೀಡಾಗುವುದು ಮತ್ತು ಶಾಶ್ವತವಾಗಿ ಅದನ್ನು ಕಳೆದುಕೊಳ್ಳಲೂಬಹುದು. ಅದರ ವಿರುದ್ಧ ನಾವೆಲ್ಲರೂ ಒಂದಾಗಿರಬೇಕು. ನಮ್ಮ ಕೊನೆಯ ಹನಿ ರಕ್ತ ಇರುವ ತನಕವೂ ನಾವು ನಮ್ಮ ಸ್ವಾತಂತ್ಯ್ರ ಕಾಪಾಡಿಕೊಳ್ಳಲು ದೃಢ ನಿಶ್ಚಯ ಹೊಂದಿರಬೇಕು’.
ಸ್ವಾತಂತ್ರ್ಯಕ್ಕೂ ಬಲು ಮುನ್ನವೇ ಜೆಎನ್ಯು ಮಾದರಿಯ ಘಟನೆಗಳನ್ನು ಊಹಿಸಿದ್ದರು ಅಂಬೇಡ್ಕರ್. ಅವರ ಮಾತುಗಳನ್ನು ದೇಶ ವಿಭಜನೆಯ ಶಕ್ತಿಗಳಿಗೆ ಬೆಂಬಲ ನೀಡಲು ಧಾವಿಸಿದ ರಾಜಕೀಯ ಧುರೀಣರು ಕೇಳಿಸಿಕೊಳ್ಳಬಲ್ಲರೇ? ಇಷ್ಟಕ್ಕೂ ಬಾಬಾ ಸಾಹೇಬರು ಊಹಿಸಿದ ಆ ರಾಜಕೀಯ ಪಂಥಗಳು ಯಾವುವಿರಬಹುದು ಯೋಚಿಸಿ. ಕಮ್ಯುನಿಸಂ ಸಿದ್ಧಾಂತದ ಮೇಲೆ ಬೆಳೆದ ರಾಜಕೀಯ ಪಂಥಗಳು; ಇಸ್ಲಾಂನ ಜೀಹಾದಿ ಸಿದ್ಧಾಂತದ ಮೇಲೆ ಕಟ್ಟಲ್ಪಟ್ಟ ಕಟ್ಟರ್ ಪಂಥದ ಪಕ್ಷಗಳು, ಮಿಶನರಿಗಳ ಹೊಸ ಸಂಶೋಧನೆ ಆರ್ಯವಾದದಿಂದ ಹುಟ್ಟಿದ ದ್ರವಿಡ ಪಂಥಗಳು, ಬ್ರಾಹ್ಮಣ ಶೋಷಕ ಎಂಬ ಸಿದ್ಧಾಂತದೊಂದಿಗೆ ತಳುಕು ಹಾಕಿಕೊಂಡು ಜನ್ಮ ತಳೆದ ದಲಿತ ಪಂಥದ ಪಕ್ಷಗಳು. ಉಗ್ರ ಹಿಂದುತ್ವವಾದೀ ಪ್ರತಿಪಾದಕ ಪಂಥವಾಗಿ ರೂಪುಗೊಂಡ ಪಕ್ಷಗಳು. ಇವೆಲ್ಲವುಗಳೊಟ್ಟಿಗೆ ಯಾವ ಸಿದ್ಧಾಂತಕ್ಕೂ ಅಂಟಿಕೊಳ್ಳದೇ ವೋಟು ಸಿಗುವಲ್ಲೆಲ್ಲಾ ಜೊಲ್ಲು ಸುರಿಸಿ ಧಾವಿಸುವ ಅವಕಾಶವಾದವನ್ನೇ ಪಂಥವಾಗಿಸಿಕೊಂಡ ಪಕ್ಷಗಳು!
ಇವೆಲ್ಲವೂ ಸ್ವಾತಂತ್ರ್ಯಾನಂತರ ನಾಯಿಕೊಡೆಗಳಂತೆ ಹುಟ್ಟಿಕೊಂಡವು. ತಮ್ಮ ತಮ್ಮ ಸಿದ್ಧಾಂತವನ್ನು ಇತರೆಲ್ಲರಿಗಿಂತಲೂ ಶ್ರೇಷ್ಠವೆಂದು ಬಿಂಬಿಸುವ ಪ್ರಯತ್ನದಲ್ಲಿ ದೇಶದ ಹಿತಾಸಕ್ತಿಯನ್ನು ಮೂಲೆಗೆ ತಳ್ಳಿದವು. ಬಾಬಾ ಸಾಹೇಬರು ಯಾವುದು ಆಗಬಾರದೆಂದು ಹೆದರಿ ನುಡಿದಿದ್ದರೋ ಅತ್ತಲೇ ಸಾಗಿತು ಭಾರತ.
ಎಲ್ಲಕ್ಕೂ ವಿಲಕ್ಷಣ ಸಂಗತಿಯೆಂದರೆ ಜಗತ್ತಿನಲ್ಲಿ ಕಟು ವೈರಿಗಳಾದ ಮೂರು ಸೈದ್ಧಾಂತಿಕ ಪಂಥಗಳು ಭಾರತದಲ್ಲಿ ಕೈ ಜೋಡಿಸಿ ನಿಂತವು. ಉಳಿದೆಲ್ಲರನ್ನೂ ಮಟ್ಟಹಾಕಿ ಈ ದೇಶವನ್ನು ತುಂಡುಮಾಡಿ ಹಂಚಿಕೊಳ್ಳುವ ನಿಧರ್ಾರಕ್ಕೆ ಸ್ವಾತಂತ್ರ್ಯದ ಹೊಸ್ತಿಲಲ್ಲಿಯೇ ಬಂದುಬಿಟ್ಟವು. ಮೊದಲನೆಯವರು ಪಶ್ಚಿಮದ ಹಣವನ್ನು ತಂದು ಭಾರತದೊಳಗೆ ವಿರೋಧಿ ಶಕ್ತಿಯನ್ನು ರೂಪಿಸುತ್ತಿರುವ ಕ್ರಿಶ್ಚಿಯನ್ ಇವ್ಯಾಂಜಲಿಸ್ಟರು. ಚೀನಾದೊಂದಿಗೆ ಬಲವಾದ ಬಾಂಧವ್ಯ ಹೊಂದಿ ಶಸ್ತ್ರಗಳನ್ನು ತಂದು ಭಾರತವನ್ನು ಅಸ್ಥಿರ ಗೊಳಿಸುತ್ತಿರುವ ಮಾವೋವಾದಿಗಳು ಎರಡನೆಯವರು. ಮತ್ತು ಅರಬ್ ರಾಷ್ಟ್ರಗಳೊಂದಿಗೆ ಗಟ್ಟಿಯಾಗಿ ನಿಂತು ಈ ದೇಶವನ್ನು ಮತ್ತಷ್ಟು ತುಂಡು ಮಾಡಲು ಪ್ರೇರೇಪಣೆ ಕೊಡುತ್ತಿರುವ ಇಸ್ಲಾಮಿ ಜೀಹಾದಿಗಳು ಮೂರನೆಯವರು.

XianMiss
ಪಶ್ಚಿಮದಲ್ಲಿ ಕ್ರಿಶ್ಚಿಯನ್ನರು ಮತ್ತು ಜಿಹಾದಿಗಳು ಬದ್ಧ ವೈರಿಗಳು. ರಷ್ಯಾ-ಚೀನಾಗಳು ತಮ್ಮ ಭೂಮಿಯಲ್ಲಿ ಜೀಹಾದಿಗಳು ಉಸಿರೆತ್ತಲೂ ಬಿಡಲಾರರು. ಇನ್ನು ಮಾವೋವಾದಿಗಳನ್ನು ಕಂಡರೆ ಜಗತ್ತಿಗೇ ಅಸಹ್ಯ. ಹೀಗಿರುವಾಗ ಭಾರತದಲ್ಲಿ ಮಾತ್ರ ಇವರೆಲ್ಲಾ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರೂ ಭಾರತೀಯ ಅನುಯಾಯಿಗಳನ್ನೇ ಹೊಂದಿಕೊಂಡು ಭದ್ರವಾದ ನೆಲೆ ನಿಮರ್ಿಸಿಕೊಂಡಿದ್ದಾರೆ. ಬೌದ್ಧಿಕ ಸಮರಕ್ಕೂ, ಸೇನಾ ಸಮರಕ್ಕೂ ಸಜ್ಜಾಗಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಯಾವುದನ್ನೂ ಅಧಿಕೃತ ದಾಖಲೆಯಿಲ್ಲದೇ ಮಾತನಾಡುತ್ತಿಲ್ಲ. ಮಾವೋವಾದಿಗಳ ಸಾಮಥ್ರ್ಯವನ್ನೇ ನೋಡಿ. ಇಂಡಿಯಾ ಟುಡೇಯ 2007ರ ವರದಿಯ ಪ್ರಕಾರ ಭಾರತದಲ್ಲಿ 15 ಸಾವಿರಕ್ಕೂ ಹೆಚ್ಚು ಬಂದೂಕುಧಾರಿ ಮಾವೋವಾದಿಗಳಿದ್ದಾರೆ. 16 ರಾಜ್ಯಗಳ 170 ಜಿಲ್ಲೆಗಳಲ್ಲಿ ಅವರು ಕ್ರಿಯಾಶೀಲರಾಗಿದ್ದಾರೆ. ನೇಪಾಳದಿಂದ ಶುರುಮಾಡಿ ಛತ್ತೀಸ್ ಗಢ್, ಒರಿಸ್ಸಾ, ಆಂಧ್ರಗಳನ್ನು ದಾಟಿ ಭಾರತದ ದಕ್ಷಿಣ ತೀರ ಮುಟ್ಟಬಲ್ಲ ರೆಡ್ ಕಾರಿಡಾರ್ಗೆ ಬೇಕಾದ ಎಲ್ಲಾ ತಯಾರಿಯನ್ನೂ ಅವರು ಮಾಡಿಕೊಂಡಿದ್ದಾರೆ. ಭಾರತ ಒಡೆದರೆ ಚೀನಾದ ಪ್ರಭಾವಕ್ಕೆ ನೇರವಾಗಿ ಬರುವಂತಹ ರಾಜ್ಯಗಳು ಇವು. ಅಂದಹಾಗೆ ಮೊನ್ನೆ ಜೆ.ಎನ್.ಯು ನಲ್ಲಿ ದೇಶ ತುಂಡರಿಸುವ ಮಾತುಗಳು ಕೇಳಿಬಂದವಲ್ಲ ಆ ಕಾರ್ಯಕ್ರಮವನ್ನು ಆಯೋಜಿಸಿದ್ದು ಡೆಮೊಕ್ರ್ಯಾಟಿಕ್ ಸ್ಟುಡೆಂಟ್ಸ್ ಯುನಿಯನ್ ಎಂಬ ಮಾವೋವಾದಿ ಸಂಘಟನೆ! ಉದ್ದೇಶವೇನೆಂದು ಸ್ಪಷ್ಟವಾಯಿತಲ್ಲವೇ?
ಇನ್ನು ರೆಡ್ ಕಾರಿಡಾರ್ನಲ್ಲಿ ಮಾವೋವಾದಿಗಳ ಪ್ರಾಬಲ್ಯವಿರುವ ಛತ್ತೀಸ್ಗಢ್, ಒರಿಸ್ಸಾ, ಜಾರ್ಖಂಡ್ಗಳು ಕೊನೆಗೆ ಆಂಧ್ರಪ್ರದೇಶವೂ ಕ್ರಿಶ್ಚಿಯನ್ ಇವ್ಯಾಂಜಲಿಸಂನ ಬಹುಮುಖ್ಯ ಕೇಂದ್ರಗಳೇ ಆಗಿವೆ. ಇಲ್ಲೆಲ್ಲಾ ಭಾರತೀಯ ಏಕತೆ- ಅಖಂಡತೆ ನಾಶ ಮಾಡುವಲ್ಲಿ ಕ್ರಿಶ್ಚಿಯನ್ನರು ಮತ್ತು ಮಾವೋವಾದಿಗಳು ಒಂದಾಗಿದ್ದಾರೆ. ಈ ಭಾಗದಲ್ಲೆಲ್ಲಾ ನಕ್ಸಲರ ದರ್ಪ ಹೇಗಿದೆಯೆಂದರೆ ಸ್ವತಃ ಪೊಲೀಸರೂ ಅನೇಕ ಕಡೆಗಳಲ್ಲಿ ಹಳ್ಳಿಗಳಿಗೆ ಹೋಗಲು ಹೆದರುತ್ತಾರೆ. ಅಲ್ಲೆಲ್ಲಾ ಸಶಸ್ತ್ರ ನಕ್ಸಲ್ ಪಡೆ ಮಿಶನರಿಗಳನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಹಳ್ಳಿಗಳಲ್ಲಿ ಜನರನ್ನು ಸೇರಿಸುತ್ತಾರೆ. ಅಮೇಲೆ ಮಿಶನರಿಗಳ ಏಸುವಿನ ಗುಣಗಾನ ನಡೆಯುತ್ತದೆ. ಕಿರು ಚಿತ್ರಗಳನ್ನೂ ತೋರಿಸುತ್ತಾರೆ. ನಡುವೆ ಬರುವ ಬಂದೂಕುಧಾರಿಗಳು ಮಾವೋವಾದದ ಮೇಲೆ ಭಾಷಣ ಮಾಡುತ್ತಾರೆ. ಮತ್ತೆ ಸಿನಿಮಾ ಮುಂದುವರಿಯುತ್ತದೆ. ಅಲ್ಲಿಗೆ ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಾಯ್ತು; ಮಾವೋವಾದಿಗಳ ಭೂಮಿ ವಿಸ್ತಾರವಾಯ್ತು. ಇಬ್ಬರ ಪ್ರಭಾವದಿಂದ ಭಾರತ ಆಂತರಿಕವಾಗಿ ಜರ್ಝರಿತಗೊಂಡು ತುಂಡು-ತುಂಡಾಗಲು ತಯಾರಾಯ್ತು.
ಈ ಎರಡು ದೇಶ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸಿರುವ ಮತ್ತೊಂದು ಶಕ್ತಿ ಇಸ್ಲಾಮೀ ಜೀಹಾದ್ ಬಳಗ. ಅಂತರರಾಷ್ಟ್ರೀಯ ಗುಪ್ತಚರ ವರದಿಯ ಪ್ರಕಾರ ಪಾಕೀಸ್ತಾನೀ ಗುಪ್ತಚರದಳ ನಕ್ಸಲರಿಗೆ ಮದ್ದು ಗುಂಡುಗಳನ್ನು ಒದಗಿಸಲು ಶಸ್ತ್ರಾಸ್ತ್ರಗಳನ್ನು ಮಾರಲು ಸಂಬಂಧಗಳನ್ನು ಗಟ್ಟಿ ಮಾಡಿಕೊಂಡಿದೆ. ನೇಪಾಳದ ಮೂಲಕ ಭಾರತಕ್ಕೆ ನಕಲಿ ನೋಟುಗಳು ಹರಿದು ಬರುತ್ತವೆ ಅಂತಾರಲ್ಲ. ಅದರೊಟ್ಟಿಗೆ ಶಸ್ತ್ರಗಳೂ ದಾಂಗುಡಿ ಇಡುತ್ತವೆ. ಭಾರತವನ್ನು ಒಳಗಿನಿಂದ ತಿವಿಯಲು, ಕಡಿದು ರಕ್ತ ಹರಿಸಲು ಬಳಕೆಯಾಗುತ್ತವೆ.
ಇವುಗಳು ಸಕರ್ಾರಕ್ಕೆ ಗೊತ್ತಿಲ್ಲವೆಂದಲ್ಲ. ನಮ್ಮ ಗುಪ್ತಚರ ಇಲಾಖೆಯ ಬಳಿ ಪ್ರತಿಯೊಂದರ ವಿವರವೂ ಇದೆ. ಆದರೇನು? ಯಾರ ಮೇಲೂ, ಯಾವಾಗಲೂ ಕಾಯರ್ಾಚರಣೆ ನಡೆಸದಂತೆ ಅವರ ಕೈ ಕಟ್ಟಿಬಿಟ್ಟಿವೆ. ಹೀಗೆ ಈ ದೇಶದ ರಾಷ್ಟ್ರವಾದಿ ಶಕ್ತಿಗಳನ್ನೆಲ್ಲಾ ಮಿಸುಕಾಡದಂತೆ ಬಂಧಿಸಿರುವ ಬೃಹತ್ ಶಕ್ತಿ ಯಾವುದೆಂದು ಯಾವಾಗಲಾದರೂ ಯೋಚಿಸಿದ್ದೀರಾ? ಈ ಪ್ರಶ್ನೆಗೆ ಉತ್ತರ ಹುಡುಕಿದರೆ ಜೆ.ಎನ್.ಯು ಗಲಾಟೆಗೆ ನಿಮಗೆ ಉತ್ತರ ಸಿಕ್ಕು ಬಿಡುತ್ತದೆ.
ಮಾವೋವಾದಿಗಳಿಗೆ, ಮಿಶನರಿಗಳಿಗೆ, ಜೀಹಾದಿಗಳಿಗೆ ನೆಲಮಟ್ಟದಲ್ಲಿ ಸಾಕಷ್ಟು ಶಕ್ತಿ ಇದೆ ನಿಜ. ಅದಕ್ಕೆ ಪೂರಕವಾದ ಬೌದ್ಧಿಕ ವಾತಾವರಣವನ್ನೂ ನಿಮರ್ಿಸಬೇಕಲ್ಲ. ಅದಕ್ಕೆಂದೇ ನಿಮರ್ಾಣಗೊಂಡಿದ್ದು ವಿಶ್ವವಿದ್ಯಾಲಯಗಳು. ನಾವು ಕಟ್ಟಿದ ತೆರಿಗೆ ಹಣವನ್ನು ಬಳಸಿಯೇ ಹೇಗೆ ಬ್ರಿಟೀಷರು ನಮ್ಮ ವಿರುದ್ಧ ಪಡೆ ಕಟ್ಟಿದರೋ ಹಾಗೆಯೇ ನಮ್ಮದೇ ಸಕರ್ಾರಗಳು ದೇಶದ್ರೋಹಿಗಳನ್ನು ಸಲಹುವ ಅನಿವಾರ್ಯತೆಗೆ ಸಿಲುಕಿದ್ದನ್ನು ವಿಶ್ವವಿದ್ಯಾಲಯಗಳೆಂದು ಕರೆಯಬಹುದೇನೋ? ಸ್ವಾತಂತ್ರ್ಯದ ಕಾಲದಿಂದಲೂ ಈ ದೇಶದ ಶಿಕ್ಷಣ ಎಡಪಂಥಿಯರ ಕೈಲೇ ಇತ್ತು. ಸ್ವತಃ ನೆಹರೂ ಈ ಪಂಥದ ಆರಾಧಕರಾಗಿದ್ದರಿಂದ ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಕ್ಷೇತ್ರಗಳಲ್ಲೆಲ್ಲಾ ಅವರುಗಳೇ ತುಂಬಿಕೊಂಡರು. ಬ್ರಿಟೀಷರು ಹೇಳಿದ ಇತಿಹಾಸವನ್ನೇ ಮತ್ತೊಮ್ಮೆ ಬಾಯಿಪಾಠ ಮಾಡಿಸಲು ಇವರು ಸಿದ್ಧರಾಗಿ ನಿಂತರು. ಸ್ವಾತಂತ್ರ್ಯಾನಂತರ ಜಾತಿ-ಮತ-ಪಂಥಗಳನ್ನು ಮೀರಿ ನಿಂತ ಹೊಸ ಭಾರತ ಮೈದಳೆಯಬೇಕಿತ್ತು. ಆದರೆ ಇವರೆಲ್ಲ ಸೇರಿ ಹತ್ತಾರು ಭಾರತಗಳ ನಿಮರ್ಾಣಕ್ಕೆ ನೀಲನಕ್ಷೆ ರೂಪಿಸಲಾರಂಭಿಸಿದರು.
ಜೆ.ಎನ್.ಯು ಕೂಡ ಇದಕ್ಕೆ ಹೊರತಲ್ಲ. ಇಲ್ಲಿನ ಆರಂಭದ ದಿನಗಳಲ್ಲಿಯೇ ಇಲ್ಲಿಗೆ ಬಂದು ಸೇರಿಕೊಂಡ, ಈಗಲೂ ಪ್ರೊಫೆಸರ್ ಎಮೆರಿಟಾ ಗೌರವ ಪಡೆದು ಇಲ್ಲಿಯೇ ತಳವೂರಿರುವ ರೋಮಿಲಾ ಥಾಪರ್ ಈ ದೇಶದ ಪಾಲಿಗೆ ಶ್ರೇಷ್ಠ ಇತಿಹಾಸ ಲೇಖಕಿ.

romila

ಆಕೆಯ ಇತಿಹಾಸ ಕೃತಿಗಳಷ್ಟೂ ಭಾರತೀಯ ಪರಂಪರೆಯ ಕುರಿತಂತೆ ಅಸಡ್ಡೆ ಹೊಂದಿರುವಂಥದ್ದೇ. ಮಾಕ್ಸರ್್ನ ಚಿಂತನೆಗೆ ಹೊಂದುವಂತೆ ಭಾರತದ ಇತಿಹಾಸವನ್ನು ಆಕೆ ಎಷ್ಟು ಲೀಲಾಜಾಲವಾಗಿ ತಿರುಚಿಟ್ಟಳೆಂದರೆ ಅದನ್ನೇ ನಂಬಿಕೊಂಡು ಆಕೆಯ ಇತಿಹಾಸದ ಪುಸ್ತಕಗಳಿಂದಲೇ ಉದ್ಧರಿಸಿ ಇತಿಹಾಸದ ತರಗತಿಗಳಲ್ಲಿ ಈಗಲೂ ಪಾಠ ನಡೆಯುತ್ತದೆ. ಆಕೆ ಬಲವಾಗಿ ಪ್ರತಿಪಾದಿಸಿದ ಮಿಶನರಿಗಳ ಆರ್ಯವಾದ ಜಗತ್ತೆಲ್ಲಾ ಧಿಕ್ಕರಿಸಿದ ಮೇಲೂ ಭಾರತದಲ್ಲಿ ಮೆರೆದಾಡುತ್ತಿದೆ. ಅಷ್ಟೇ ಅಲ್ಲ. ಶೋಷಕ ಬ್ರಾಹ್ಮಣ ಮತ್ತು ಶೋಷಿತ ದಲಿತ ವರ್ಗದ ಕಲ್ಪನೆಯನ್ನು ಜೀವಂತವಾಗಿಡುವಲ್ಲಿ ಈಕೆಯ, ವಿಶ್ವವಿದ್ಯಾಲಯದ ಮತ್ತು ಕಾಮ್ರೇಡುಗಳ ಪ್ರಯತ್ನ ಹೇಳತೀರದು. ಈಕೆಯಂಥವರು ತುಂಬಿದ ವಿಷವನ್ನುಂಡು ಬೆಳೆಯುವ ವಿದ್ಯಾಥರ್ಿಗಳು ಮೈತುಂಬಾ ವಿಷವಾಗುತ್ತಾರೆ. ಮುಂದೆ ಇಲ್ಲಿಂದಲೇ ಕಾಲೇಜುಗಳಿಗೆ ಶಿಕ್ಷಕರಾಗಿ ಹೊರಡುತ್ತಾರೆ, ವಕೀಲರಾಗುತ್ತಾರೆ, ಪತ್ರಕರ್ತರಾಗುತ್ತಾರೆ, ವ್ಯವಸ್ಥೆಯ ಭಾಗವಾಗುತ್ತಾರೆ. ಕೊನೆಗೆ ವಿದ್ಯಾಥರ್ಿ ನಾಯಕತ್ವದಿಂದ ಮುಂದೆ ಬಂದು ರಾಜಕೀಯ ಧುರೀಣರೂ ಆಗುತ್ತಾರೆ. ಅಲ್ಲಿಗೆ ವಿಷ ಸಮ ಪ್ರಮಾಣದಲ್ಲಿ ಎಲ್ಲೆಡೆ ಹರಡಿಕೊಳ್ಳುತ್ತದೆ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಪತ್ರಿಕೆಗಳ ಬರಹಗಳು, ಎಲೆಕ್ಟ್ರಾನಿಕ್ ಮಾಧ್ಯಮದ ಮಾತುಗಳು, ಪ್ರಶಸ್ತಿ ಪಡೆದ ಸಿನಿಮಾಗಳು, ಪ್ರಶಸ್ತಿ ಪಡೆದ ಸಾಹಿತಿ-ಬುದ್ಧಿಜೀವಿಗಳು ಇವರೆಲ್ಲರ ಚಿಂತನೆಯ ಧಾಟಿ ಒಂದೇ ಇರುವುದನ್ನು ಗಮನಿಸಿದ್ದೀರೇನು? ಇವೆಲ್ಲವೂ ಕಾಕತಾಳೀಯವೇನಲ್ಲ; ವ್ಯವಸ್ಥಿತ ಪ್ರಯತ್ನ.
ನೆನಪುಮಾಡಿಕೊಳ್ಳಿ. ಇದೇ ಜೆ.ಎನ.ಯುಗೆ ಮತ್ತೆ ಮತ್ತೆ ಭೇಟಿಕೊಡುವ ತನ್ನ ಹಿಂದೂ ವಿರೋಧಿ ಚಿಂತನೆಗಳಿಂದ ಜಗದ್ವಿಖ್ಯಾತಳಾದ, ಬೂಕರ್ ಪ್ರಶಸ್ತಿ ವಿಜೇತ ಅರುಂಧತಿ ರಾಯ್ 2010ರಲ್ಲಿ ಮಾವೋವಾದಿಗಳ ಉಗ್ರಗಾಮಿಗಳನ್ನು ಸಮಥರ್ಿಸಿಕೊಂಡು ‘Walking with the Comrade’ ಲೇಖನ ಬರೆದಿದ್ದಳು. ಆಕೆ ಹಾಗೆ ಸಮರ್ಥನೆಗೆ ನಿಲ್ಲೋದು ಹೊಸತೇನಲ್ಲ. ಆದರೆ ಸಮಥರ್ಿಸಿಕೊಂಡಿದ್ದ ರೀತಿ ಚಚರ್ೆಗೆ ಗ್ರಾಸವಾಗಿತ್ತು. ಅವಳ ದೃಷ್ಟಿಯಲ್ಲಿ ಶಸ್ತ್ರ ಹಿಡಿದ ಸೈನಿಕ ಸಕರ್ಾರದ ಪ್ರತಿನಿಧಿಯಾಗಿದ್ದ ಮತ್ತು ಅವನನ್ನು ಕೊಲ್ಲುವುದು ಯೋಗ್ಯವೇ ಆಗಿತ್ತು. ಅಷ್ಟೇ ಅಲ್ಲ. ಈ ದೇಶದಲ್ಲಿ ಅಹಿಂಸಾತ್ಮಕ ಹೋರಾಟಗಳು, ಸತ್ಯಾಗ್ರಹಗಳು ವಿಫಲಗೊಂಡಿರುವುದರಿಂದ ಕಾಡಿನ ಜನರಿಗೆ ಉಳಿದಿರುವುದು ಒಂದೇ ಮಾರ್ಗ, ಸಕರ್ಾರದ ಹಿಂಸೆಗೆ ವಿರುದ್ಧವಾಗಿ ಪ್ರತಿ ಹಿಂಸೆ ಮಾತ್ರ ಎಂದು ನಕ್ಸಲರನ್ನು ಅವರು ಮಾಡುವ ಹತ್ಯೆಗಳನ್ನು ಸಮಥರ್ಿಸಿದ್ದಳು. ಕೊನೆಗೆ ಗಾಂಧಿಯ ಹೋರಾಟಕ್ಕೆ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗ ಬೇಕು. ಅಷ್ಟು ಜನರಿಲ್ಲದೆಡೆ ಬಂದೂಕೊಂದೇ ಮಾರ್ಗ ಎಂದ ಈಕೆ ‘ಗಾಂಧಿ ಗನ್ನನ್ನು ಕೈಗೆತ್ತಿಕೊಳ್ಳಿ’ ಎಂದು ಅಣಕಿಸುವುದನ್ನೂ ಮರೆಯಲಿಲ್ಲ.
ನಕ್ಸಲರ ನಡುವೆ ಅರುಂಧತಿ ರಾಯ್ ಅದೆಷ್ಟು ಪ್ರಖ್ಯಾತಳೆಂದರೆ ಸಕರ್ಾರದೊಂದಿಗೆ ಮಾತುಕತೆ ನಡೆಸಲು ಆಕೆಯನ್ನು ಮಧ್ಯವತರ್ಿಯಾಗುವಂತೆ ಕೇಳಿಕೊಳ್ಳಲಾಯ್ತು ಕೂಡ!
ನಕ್ಸಲರನ್ನು ಬಂದೂಕು ಹಿಡಿದ ಗಾಂಧಿಗಳೆಂದು ಈಕೆ ಕರೆದ ರೀತಿ ಬೌದ್ಧಿಕ ವಲಯದಲ್ಲಿ ಚಚರ್ೆಗೆ ಬಂತು. ಆಕೆಯ ಅನೇಕ ಬೆಂಬಲಿಗರು ಹುಟ್ಟಿಕೊಂಡರು. ಪತ್ರಿಕೆಗಳಲ್ಲಿ ಈ ಕುರಿತಂತೆ ಲೇಖನಗಳು ಪ್ರಕಟಗೊಂಡವು. ಕೊನೆಗೆ ನಕ್ಸಲರು ಸಮಾಜದ ಉದ್ಧಾರಕ್ಕಾಗಿ ಬಂದೂಕು ಹಿಡಿದವರೆಂದು ಭಾರತೀಯರೇ ಮಾತಾಡಿಕೊಳ್ಳುವ ಮಟ್ಟಿಗೆ ಬಂತು. ಆಗಲೇ ದಾಂತೇವಾಡಾದಲ್ಲಿ 76 ಜನ ಸಿ.ಆರ್.ಪಿ.ಎಫ್ ಯೋಧರನ್ನು ನಕ್ಸಲರು ಹೃದಯ ವಿದ್ರಾವಕವೆನ್ನುವಂತೆ ಕೊಂದು ಬಿಸಾಡಿದ್ದು. ಈಕೆಯ ಕಣ್ಣಲ್ಲಿ ಒಂದು ಹನಿ ನೀರಿರಲಿಲ್ಲ. ಸಕರ್ಾರಕ್ಕೆ ಕೇಳುವಂತೆ ಮಾಡುವ ಮಾರ್ಗ ಇದೊಂದೇ ಎಂದುಬಿಟ್ಟಳು, ಮಹಾತಾಯಿ!
ಅದೇ ಹೊತ್ತಲ್ಲಿ ಜವಹರಲಾಲ್ ನೆಹರೂ ಯುನಿವಸರ್ಿಟಿಯಲ್ಲಿ ನಕ್ಸಲರು ಸೈನಿಕರನ್ನು ಕೊಂದ ಹಬ್ಬ ಆಚರಿಸಲಾಗುತ್ತಿತ್ತು. ಅದಕ್ಕೆ ಪ್ರೇರಣೆ ಇದೇ ಅರುಂಧತಿ ರಾಯ್ ಆಗಿದ್ದಳೆಂಬುದರಲ್ಲಿ ಯಾವ ಅನುಮಾನವೂ ಉಳಿದಿರಲಿಲ್ಲ.

arundhati-roy-afp-640x480
ಅಂದ ಹಾಗೆ. ಅರುಂಧತಿ ರಾಯ್ ಪೂತರ್ಿ ಹೆಸರೇನು ಗೊತ್ತೇ? ಸುಜೆನ್ನಾ ಅರುಂಧತಿ ರಾಯ್. ತಾಯಿ ಮಲೆಯಾಳಿ ಸಿರಿಯನ್ ಕ್ರಿಶ್ಚಿಯನ್ ಮೇರಿ ರಾಯ್. ಈಕೆ ಮಾಕ್ಸರ್್ವಾದದಿಂದ ಪ್ರಭಾವಿತಗೊಂಡ ಕಾಮ್ರೇಡ್. ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಯಾಸಿನ್ ಮಲಿಕನೊಂದಿಗೆ ಕುಳಿತು ಕಾಶ್ಮೀರವನ್ನು ಸ್ವತಂತ್ರವಾಗಿಸಲು ಬಿಡಬೇಕು ಎನ್ನುವವಳು! ನಾನು ಏನು ಹೇಳಲು ಹೊರಟಿದ್ದೇನೆ ಗೊತ್ತಾಯಿತಲ್ಲ! ಕ್ರಿಶ್ಚಿಯನ್ ಇವ್ಯಾಂಜಲಿಸ್ಟ್, ಮಾವೋವಾದ ಮತ್ತು ಜೀಹಾದಿ ಗುಂಪು ಒಂದು ರಾಷ್ಟ್ರದಲ್ಲಿ ಜೊತೆಗೂಡಿರುವುದಷ್ಟೇ ಅಲ್ಲ; ಒಬ್ಬ ವ್ಯಕ್ತಿಯಲ್ಲಿ ಸೇರಿಕೊಂಡಿವೆ!
ಹೇ ರಾಮ್!

Comments are closed.