ವಿಭಾಗಗಳು

ಸುದ್ದಿಪತ್ರ


 

ತಕ್ಷಶಿಲೆಗೂ ಪ್ರಾಚೀನ, ವೇದಕಾಲದ ಶಿಕ್ಷಣ!

ವಾಸ್ತವವಾಗಿ ವೇದಾಧ್ಯಯನ ಎರಡು ಭಾಗಗಳಲ್ಲಿರುವಂಥದ್ದು. ಮೊದಲನೆಯದು ಆಲೋಚನೆ, ತತ್ತ್ವ, ಧ್ಯಾನ, ತಪಸ್ಸುಗಳ ಕುರಿತಂಥ ಜ್ಞಾನಕಾಂಡವಾದರೆ ಮತ್ತೊಂದು ಯಜ್ಞ, ಆಚರಣೆ, ಮಂತ್ರೋಚ್ಚಾರಗಳಿಗೆ ಸಂಬಂಧಿಸಿದ ಕರ್ಮಕಾಂಡ. ಎಷ್ಟೇ ಬೇಡವೆಂದರೂ ಕಾಲಕ್ರಮದಲ್ಲಿ ವಿದ್ಯಾಥರ್ಿಗಳು ಅಧ್ಯಯನಶೀಲರಾಗಿ ಉಚ್ಚಾರಣೆ, ಆಚರಣೆಗಳನ್ನು ಗಮನವಿಟ್ಟು ಅಧ್ಯಯನ ಮಾಡಿ ಯಜ್ಞಯಾಗಾದಿಗಳನ್ನು ಸರಿಯಾಗಿ ನಡೆಸಿಕೊಡುವ ಪುರೋಹಿತರಷ್ಟೇ ಆಗತೊಡಗಿದರು. ವೇದಗಳ ದರ್ಶನದ ಮೂಲ ಉದ್ದೇಶವೇ ಬದಿಗೆ ಸರಿಯಲ್ಪಟ್ಟಿತು. ಆಗಲೇ ಉಪನಿಷತ್ತುಗಳ ಹೊಸ ಲೋಕ ತೆರೆದುಕೊಂಡು ಋಗ್ವೇದದ ಹೃದಯಬಡಿತ ಎಲ್ಲೆಲ್ಲೂ ಪ್ರತಿಧ್ವನಿಸತೊಡಗಿದ್ದು.

1

ತಕ್ಷಶಿಲೆಯ ಕುರಿತಂತಹ ವಿವರಗಳು ಮೈನವಿರೇಳಿಸುವಂಥದ್ದು. ಹಾಗಂತ ಅದಕ್ಕೂ ಮೊದಲು ಶಿಕ್ಷಣ ನೀಡುವ ಪದ್ಧತಿ ಇರಲಿಲ್ಲವೇನು ಎಂದರೆ ‘ಖಂಡಿತ ಇತ್ತು’ ಎಂಬುದೊಂದೇ ಉತ್ತರವಾಗಬಲ್ಲುದು. ಬಿಳಿಯ ಚರಿತ್ರಕಾರರ ಪಾಲಿಗೆ ತಕ್ಷಶಿಲೆಯೇ ನುಂಗಲಾರದ ತುತ್ತು; ಇನ್ನು ಅದಕ್ಕೂ ಹಿಂದಿನ ಶಿಕ್ಷಣ ಕ್ರಮವನ್ನು ದಾಖಲಿಸಿ ಜಗತ್ತಿಗೆ ಪ್ರಚುರಪಡಿಸುವುದಾದರೂ ಹೇಗೆ ಹೇಳಿ.
ವಾಸ್ತವವಾಗಿ ವೇದ ಕಾಲದ ಶಿಕ್ಷಣ ಕ್ರಮ, ವೇದೋತ್ತರ ಕಾಲದ ಶಿಕ್ಷಣ ಮತ್ತು ಸೂತ್ರಕಾಲದ ಶಿಕ್ಷಣ ಪದ್ಧತಿಗಳೆಲ್ಲ ಅಧ್ಯಯನ ಯೋಗ್ಯವೇ. ಉಪನಿಷತ್ತುಗಳು ಅನಾವರಣಗೊಂಡಿರೋದೇ ಗುರು-ಶಿಷ್ಯರ ಚಚರ್ೆ, ಸಂವಾದಗಳ ಮೂಲಕ. ಅಂದಮೇಲೆ ವಿಸ್ತಾರವಾಗಿ ರೂಪುಗೊಂಡಿರುವಂತಹ ಶಿಕ್ಷಣದ ಹಂದರ ಇದ್ದಿರಲೇಬೇಕಲ್ಲ. ಹಾಗೊಂದು ವ್ಯವಸ್ಥಿತ ಪದ್ಧತಿ ಇದ್ದುದರಿಂದಲೇ ಲೆಕ್ಕಾಚಾರಕ್ಕೆ ಸಿಗದಷ್ಟು ಪ್ರಾಚೀನವಾದ ಋಗ್ವೇದ ಸಾಹಿತ್ಯಗಳೂ ಇಂದು ಮೂಲರೂಪದಲ್ಲಿ ನಮ್ಮ ಕೈಗೆಟಕುತ್ತಿರುವುದು. ಭಾರತೀಯ ಸಂಸ್ಕೃತಿಯ ಕುರಿತಂತೆ ಜಗತ್ತಿಗೆ ಕಾಡುವ ಪ್ರಶ್ನೆಗಳಲ್ಲಿ ಇದೂ ಒಂದು. ತರಗತಿಯಲ್ಲಿ ಮೇಷ್ಟ್ರು ಹೇಳಿಕೊಟ್ಟ ನಾಲ್ಕು ಸಾಲನ್ನು ಐದನೇ ಸಾಲು ಕೇಳುವುದರೊಳಗೆ ಮರೆತು ಹೋಗುವ ಕಾಲಘಟ್ಟದಲ್ಲಿ ನಿಂತು ಹತ್ತಾರು ಸಾವಿರ ಸಾಲುಗಳನ್ನು ಒಂದಿನಿತೂ ಉಚ್ಚಾರ ದೋಷವೂ ಇಲ್ಲದೇ ಮುಂದಿನ ಪೀಳಿಗೆಗೆ ತಲುಪಿಸುವ ಶಿಕ್ಷಣದ ವ್ಯವಸ್ಥೆ ಅನನ್ಯವೇ ಆಗಿರಬೇಕು.
ವೇದಗಳ ಕಾಲದಲ್ಲಿ ಗುರುವಾಗುವ ಪ್ರಕ್ರಿಯೆಗೆ ತಪಸ್ಸಿನ ಅಗತ್ಯವಿತ್ತು. ಕಠಿಣ ತಪಸ್ಸಿನ ನಂತರ ಸಮಾಧಿಸ್ಥನಾಗಿ ದರ್ಶನ ಪಡಕೊಂಡ ಸತ್ಯವನ್ನು ಋಷಿ ಸೂಕ್ತಗಳ ರೂಪದಲ್ಲಿ ಕ್ರೋಢೀಕರಿಸಿ ಅದನ್ನು ಮುಂದಿನ ಪೀಳಿಗೆಗೆ ಹಂಚುವ ಗುರುವಾಗುತ್ತಿದ್ದ. ಮೂಲ ಸ್ವರೂಪದಲ್ಲಿ ಜ್ಞಾನದ ಸಾಕ್ಷಾತ್ಕಾರ ಮಾಡಿಕೊಂಡವನೇ ಅದನ್ನು ಶಿಷ್ಯನಿಗೆ ಕಲಿಸುತ್ತಿದ್ದರಿಂದ ಬಹುಶಃ ಜಗತ್ತಿನ ಅತ್ಯಂತ ಶ್ರೇಷ್ಠ ಮಾದರಿಯ ಶಿಕ್ಷಣ ಅದಾಗಿರಬೇಕು. ಸುಮ್ಮನೇ ಕಲ್ಪಿಸಿಕೊಳ್ಳಿ, ತಮ್ಮ ತಮ್ಮ ಸಿದ್ಧಾಂತಗಳ ಕುರಿತಂತೆ ಸಿ ವಿ ರಾಮನ್, ಐನ್ಸ್ಟೀನ್, ಸ್ಟೀಫನ್ ಹಾಕಿಂಗ್ರು ತಾವೇ ಪಾಠ ಮಾಡುವಂತಿದ್ದರೆ ಆ ವಿದ್ಯಾಥರ್ಿಗಳ ಭಾಗ್ಯ ಹೇಗಿರಬಹುದು?!

5
ಪುತ್ರನೇ ಋಷಿಗಳ ಮೊದಲ ಶಿಷ್ಯನಾಗಿರುತ್ತಿದ್ದ. ಅವನೊಂದಿಗೆ ಇತರರೂ ಬಂದು ಸೇರುತ್ತಿದ್ದರು. ಋಷಿ ಮನೆಯೇ ವಿದ್ಯಾಲಯ. ಬರವಣಿಗೆಯೇ ಇಲ್ಲದ ಕಾಲವದು. ಹೀಗಾಗಿ ಮಂತ್ರಗಳು ಎಡವಟ್ಟಾಗದಂತೆ ಮುಂದಿನವರು ಕಲಿಯಲು ಸರಿ-ತಪ್ಪುಗಳ ಗುರುತಿಸಲು ಅನುಕೂಲವಾಗುವಂತೆ ಪದಪಾಠ, ಕ್ರಮಪಾಠ, ಜಟಾಪಾಠಗಳನ್ನೆಲ್ಲಾ ರೂಢಿಸಲಾಯಿತು. ಬರವಣಿಗೆಯಿಲ್ಲದೇ ಕೇಳಿ ನೆನಪಿಟ್ಟುಕೊಂಡದ್ದರಿಂದಲೇ ಇವು ಶೃತಿಗಳೆನಿಸಿದವು. ಜೈಮಿನಿಯ ಪೂರ್ವ ಮೀಮಾಂಸೆಯ ಪ್ರಕಾರ ಮಂತ್ರದ ಪ್ರತಿ ಅಕ್ಷರವನ್ನೂ ನಿಯಮಿತ ರೂಪದಲ್ಲಿಯೇ ಉಚ್ಚರಿಸುವ ಮಾತ್ರದಿಂದಲೇ ಅನೇಕ ಆಧ್ಯಾತ್ಮಿಕ ಲಾಭಗಳುಂಟಾಗುವವಂತೆ. ಹೀಗಾಗಿಯೇ ಉಚ್ಚಾರಣೆಯ ಕ್ರಮ ವ್ಯವಸ್ಥಿತವಾಗಿರುವಂತೆ ರೂಪಿಸಲು ಅನೇಕ ಮಾರ್ಗಗಳನ್ನು ಅನ್ವೇಷಿಸಲಾಗಿತ್ತು. ಹಾಗಂತ ಬರಿಯ ಕಂಠಪಾಠದಿಂದ ಉನ್ನತಿ ಸಾಧ್ಯವಿಲ್ಲವೆಂದು ಋಷಿಗಳು ಅರಿತಿದ್ದರು. ಉಚ್ಚರಿಸುವ ಪದಗಳ ಅರ್ಥದ ಮೇಲೆ ಧ್ಯಾನಿಸುತ್ತಾ ಹೋದಂತೆ ವಿಭಿನ್ನ ಆಧ್ಯಾತ್ಮಿಕ ಅನುಭೂತಿಗಳಾಗುತ್ತವೆಂಬುದನ್ನು ಶಿಷ್ಯರಿಗೆ ತಿಳಿಸುತ್ತಿದ್ದರು. ಅದರಂತೆ ತಪಸ್ಸು ಗೈಯ್ಯಲು ಪ್ರೇರಣೆಯನ್ನೂ ಕೊಡುತ್ತಿದ್ದರು.
ಯಾಸ್ಕರು ತಮ್ಮ ನಿರುಕ್ತದಲ್ಲಿ ಉಲ್ಲೇಖಿಸಿರುವ ಅನೇಕ ಸಂಗತಿಗಳನ್ನು ಅವಲೋಕಿಸಿದರೆ ಅಂದಿನ ಶಿಕ್ಷಣ ಪದ್ಧತಿಯ ರೂಪು-ರೇಷೆಗಳು ಗರಿಬಿಚ್ಚಿಕೊಳ್ಳುತ್ತವೆ. ವಿದ್ಯಾಧಿದೇವತೆ ಬ್ರಾಹ್ಮಣನ ಬಳಿ ಬಂದು ಕೇಳಿಕೊಂಡಳಂತೆ, ‘ನಾನು ನಿನ್ನ ಪಾಲಿನ ನಿಧಿ, ನನ್ನನ್ನು ರಕ್ಷಿಸು. ಅಸೂಯೆ ಹೊಂದಿರುವವನಿಗೆ, ಸರಳತೆ ಮತ್ತು ನೇರವಂತಿಕೆ ಇಲ್ಲದವನಿಗೆ ಮತ್ತು ಆತ್ಮಸಂಯಮ ಇಲ್ಲದವನಿಗೆ ನನ್ನನ್ನು ನೀಡಬೇಡ. ಆಗ ಮಾತ್ರವೇ ನಾನು ಶಕ್ತಿಸ್ರೋತವಾಗಿರುವುದು ಸಾಧ್ಯ’ ಎಂದಳಂತೆ. ಅಷ್ಟೇ ಅಲ್ಲ. ‘ಶುಚಿಯಾಗಿರುವವನಿಗೆ, ಅನುರಾಗರಹಿತನಿಗೆ, ಬುದ್ಧಿಮತ್ತೆಯುಳ್ಳವನಿಗೆ, ಬ್ರಹ್ಮಚರ್ಯದಲ್ಲಿ ನೆಲೆನಿಂತವನಿಗೆ ಮಾತ್ರ ವಿದ್ಯೆ ಅನುಗ್ರಹಿಸು’ ಎಂದೂ ಆದೇಶಿಸಿದಳಂತೆ. ಅಲ್ಲಿಗೆ ವಿದ್ಯಾಥರ್ಿಯೊಬ್ಬನಿಗೆ ಗುರುಕುಲ ಶಿಕ್ಷಣಕ್ಕೆ ಅರ್ಹತೆಗಳೇನೆಂಬುದು ನಿಶ್ಚಿತವಾದಂತಾಯಿತು!
ಹೀಗೆ ಗುರುವಿನ ಮನೆಗೆ ವ್ರತಗಳನ್ನು ಪಾಲಿಸುವ ಸಂಕಲ್ಪದೊಂದಿಗೆ ಬಂದ ಶಿಷ್ಯನಿಗೆ ಗುರುಗಳೇ ಉಪನಯನ ಮಾಡಿಸುತ್ತಿದ್ದರು. ಉಪನಯನವೆಂದರೆ ‘ಎರಡನೇ ಹುಟ್ಟು’ ಎಂದೇ ಭಾವಿಸಲಾಗುತ್ತಿತ್ತು. ಮನುವಿನ ಮಾತಿನಂತೆ ಸಾವಿತ್ರಿಯೇ (ಗಾಯತ್ರಿ ಮಂತ್ರ) ತಾಯಿಯಾಗಿ, ಬೋಧಿಸುವ ಆಚಾರ್ಯರೇ ತಂದೆಯಾಗಿ ಶಿಷ್ಯ ಮರುಹುಟ್ಟು ಪಡೆದುದರ ಸಂಕೇತ ಉಪನಯನ. ಆಪಸ್ತಂಭನ ಪ್ರಕಾರ ‘ತಂದೆ-ತಾಯಿಯರು ಸಾಧಾರಣ ದೇಹಕ್ಕೆ ಜನ್ಮ ಕೊಟ್ಟರೆ ಜ್ಞಾನದ ಮೂಲದಿಂದ ಪಡೆದ ಈ ಹುಟ್ಟು ಅತ್ಯಂತ ಶ್ರೇಷ್ಠವಾದುದು!’ ಹೀಗೆ ಎರಡನೇ ಬಾರಿ ಹುಟ್ಟಿದುದರಿಂದಲೇ ಆತ ದ್ವಿಜ. ನೆನಪಿಡಿ. ಋಗ್ವೇದ ಕಾಲದಲ್ಲಿ ವಿದ್ಯೆ ಪಡೆಯಲು ಯಾಸ್ಕರು ಹೇಳಿದ ಅರ್ಹತೆ ಹೊಂದಿರುವವರೆಲ್ಲ ದ್ವಿಜರಾಗಿ ಗುರುವಿನಿಂದ ದೀಕ್ಷಿತರಾಗುತ್ತಿದ್ದರು. ಸಂಕಲ್ಪಬದ್ಧರಾಗಿ ಅಧ್ಯಯನಶೀಲರಾಗುತ್ತಿದ್ದರು. ಸೂಯರ್ೋದಯಕ್ಕೆ ಮುನ್ನವೇ ಎದ್ದು ಮಂತ್ರಪಠಣ

3

ಶುರುಮಾಡಿಬಿಡುತ್ತಿದ್ದರು. ಅಧ್ಯಯನದ ಆರಂಭಿಕ ಹಂತದಲ್ಲಿ ಇಡಿಯ ವಾತಾವರಣ ಮಳೆಗಾಲದ ಕಪ್ಪೆಗಳು ವಟಗುಟ್ಟುವಂತೆ ಇರುತ್ತಿತ್ತಂತೆ. ಕಾಲಕ್ರಮದಲ್ಲಿ ಪ್ರತಿಯೊಬ್ಬ ವಿದ್ಯಾಥರ್ಿಯೂ ಸ್ವಂತ ಅಧ್ಯಯನಕ್ಕೆ, ತಪಸ್ಸಿಗೆ ತೊಡಗಿ ಯೋಗಿಯಾಗಿ ಕಂಠಸ್ಥ ಮಾಡಿಕೊಂಡದ್ದನ್ನೂ ಹೃದ್ಗತ ಮಾಡಿಕೊಳ್ಳಬೇಕಾಗಿತ್ತು. ಈ ಹೊತ್ತಿನಲ್ಲಿ ನಿರುತ ಶಾಂತಿ-ಧ್ಯಾನಗಳ ಮೂಲಕ ಕಲಿತದ್ದನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲೆತ್ನಿಸುತ್ತಿದ್ದರು. ಪರಬ್ರಹ್ಮ ತತ್ವದ ಸಾಕ್ಷಾತ್ಕಾರವಾದೊಡನೆ ಶಿಷ್ಯರು ಮತ್ತೆ ಚಟುವಟಿಕೆಯಲ್ಲಿ ನಿರತರಾಗಿ ತಾವು ತಿಳಿದದ್ದನ್ನೂ ಬೋಧಿಸಲಾರಂಭಿಸುತ್ತಿದ್ದರು. ಈಗ ಅವರೇ ಗುರು. ಅಂದಮೇಲೆ ಗುರುವಾಗಲು ಮೊದಲ ಅರ್ಹತೆ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳುವುದಲ್ಲ ಅದರ ಹಿಂದಿರುವ ವಿಜ್ಞಾನವನ್ನು ಹೃದಯಸ್ಥ ಮಾಡಿಕೊಳ್ಳುವುದಾಗಿತ್ತು. ಸತ್ಯಕಾಮ ಜಾಬಾಲನನ್ನು ಗುರುಗಳು ಈ ರೀತಿಯ ಶಾಂತಿ-ಧ್ಯಾನಗಳಿಗಾಗಿ ಗೋವುಗಳೊಂದಿಗೆ ಕಾಡಿಗೆ ಕಳಿಸಿದ್ದು ಗೊತ್ತಲ್ಲ. ಅಲ್ಲಿಂದ ಮರಳಿ ಬರುವಾಗ ಕಲಿತದ್ದನ್ನೆಲ್ಲ ಸಾಕ್ಷಾತ್ಕರಿಸಿಕೊಂಡು ಬಂದ ಸತ್ಯಕಾಮನ ತೇಜಸ್ಸು ಎಲ್ಲರನ್ನೂ ತನ್ನೆಡೆಗೆ ಆಕಷರ್ಿಸುವಷ್ಟು ಪ್ರಭಾವಿಯಾಗಿಬಿಟ್ಟಿತ್ತು! ಒಟ್ಟಿನಲ್ಲಿ ವೇದಕಾಲದಲ್ಲಿ ಶಿಕ್ಷಣವೆನ್ನುವುದು ಬರಿಯ ಮಾಹಿತಿಗಳ ಸಂಕಲನವಲ್ಲ ಬದಲಿಗೆ ಅನುಭವಕ್ಕೆ ನಿಲುಕಬೇಕಾದ ಮತ್ತು ದರ್ಶನ ಪಡಕೊಳ್ಳಬೇಕಾದ ಸತ್ಯದ ಅನಾವರಣವಾಗಿತ್ತು.
ಹೀಗೆ ಗುರುವಿನ ಪದತಲದಲ್ಲಿ ಕುಳಿತು ಅಧ್ಯಯನ ಪೂರೈಸಿಕೊಂಡ ವಿದ್ಯಾಥರ್ಿ ಮುಂದೆ ತನ್ನ ಸಾಮಥ್ರ್ಯವನ್ನು ಬ್ರಾಹ್ಮಣ ಸಂಘವೆನ್ನುವ ವಿದ್ವತ್ ಸಭೆಗಳಲ್ಲಿ ಪರೀಕ್ಷೆಗೆ ಒಡ್ಡುತ್ತಿದ್ದ. ಜ್ಞಾನಿಗಳೊಂದಿಗೆ ಒರೆಗೆ ಹಚ್ಚಿ ನೋಡುತ್ತಿದ್ದ. (ಅಂದಹಾಗೆ ಬ್ರಾಹ್ಮಣ ಸಂಘವೆಂದರೆ ಇಂದಿನ ಬ್ರಾಹ್ಮಣ ಜಾತಿಯ ಕಲ್ಪನೆಯಲ್ಲಿರಬೇಡಿ. ಸದಾ ಬ್ರಹ್ಮ ಮಾರ್ಗದಲ್ಲಿ ನಡೆಯುವಲ್ಲಿ ಪ್ರಯತ್ನಶಿಲವಾಗಿರುವ ವರ್ಣದ ಕಲ್ಪನೆ ಅದು. ಹೀಗಾಗಿ ಅಂದಿನ ದಿನಗಳಲ್ಲಿ ವಿದ್ಯಾಥರ್ಿಗಳೆಲ್ಲ ಬ್ರಾಹ್ಮಣರೇ ಆಗಿರುತ್ತಿದ್ದರು.) ರಾಧಾ ಕುಮುದ ಮುಖಜರ್ಿಯವರು ತಮ್ಮ ಪ್ರಾಚೀನ ಭಾರತೀಯ ಶಿಕ್ಷಣದಲ್ಲಿ ಋಗ್ವೇದವನ್ನು ಉಲ್ಲೇಖಿಸಿ, ‘ಅಧ್ಯಯನದ ಅಂಶಗಳನ್ನೆಲ್ಲ ಕಲೆಹಾಕಿ, ಅದನ್ನು ಮತ್ತಷ್ಟು ಪರಿಪಕ್ವಗೊಳಿಸುವ ಕ್ರಿಯೆಯಲ್ಲಿ ಜ್ಞಾನಿಗಳು ಜೊತೆಗೂಡುವ ಒಕ್ಕೂಟದ ಪರಿಕಲ್ಪನೆ ಮೊತ್ತ ಮೊದಲ ಬಾರಿಗೆ ಋಗ್ವೇದ ಕಾಲದಲ್ಲಿಯೇ ಭಾರತದಲ್ಲಿ ಪ್ರಚುರಗೊಂಡಿತ್ತು’ ಎಂದು ದೃಢವಾಗಿ ವಾದಿಸುತ್ತಾರೆ.
ಋಗ್ವೇದ ಕಾಲದ ಶಿಕ್ಷಣದ ವೈಶಿಷ್ಟ್ಯವೇನು ಗೊತ್ತೇ? ಸ್ತ್ರೀಯರಿಗೂ ಸಮಾನವಾಗಿ ಶಿಕ್ಷಣ ಸಿಗುತ್ತಿತ್ತು. ಅವರೂ ಕೂಡ ಬ್ರಹ್ಮಚರ್ಯ ವ್ರತವನ್ನು ಪಾಲಿಸುತ್ತ ಗುರುಮುಖೇನ ಅಧ್ಯಯನ ನಡೆಸಿ ಋಷಿಕಾ ಅಥವಾ ಬ್ರಹ್ಮವಾದಿನಿಯರೆನಿಸಿಕೊಳ್ಳುತ್ತಿದ್ದರು. ಬ್ರಹ್ಮಚರ್ಯವನ್ನೂ ಪೂರ್ಣಗೊಳಿಸಿದ ಸುಶಿಕ್ಷಿತ ಯುವತಿಯನ್ನು ತನ್ನಂತೆ ಅಧ್ಯಯನ ಹೊಂದಿದ ಯುವಕನಿಗೇ ಕೊಟ್ಟು ಮದುವೆ ಮಾಡಬೇಕೆಂದು ಸೂಚನೆ ವೇದ ಗ್ರಂಥಗಳಲ್ಲಿ ಅಲ್ಲಲ್ಲಿ ಕಂಡು ಬರುತ್ತವೆ. ಗಂಡ ಯಜ್ಞಕ್ಕೆಂದು ಕುಳಿತಾಗ ಹೆಂಡತಿ ಪೂರ್ಣ ಪ್ರಮಾಣದಲ್ಲಿ ಅವನೊಂದಿಗೆ ಸೂಕ್ತಗಳನ್ನು ಹೇಳುತ್ತ ಪಾಲ್ಗೊಳ್ಳುವುದನ್ನು ಋಗ್ವೇದ ಉಲ್ಲೇಖಿಸಿದೆ. ರೋಮಶಾ, ಲೋಪಾಮುದ್ರಾ, ಅಪಾಲಾ, ವಿಶ್ವವಾರಾ ಮುಂತಾಗಿ ಅನೇಕ ಋಷಿಕೆಯರನ್ನು ಋಗ್ವೇದವೇ ಉಲ್ಲೇಖಿಸಿದೆ.
ಜಾತಿ-ಮತಗಳ ತಾಕಲಾಟವಿರದಿದ್ದ ಶಿಕ್ಷಣ ಪ್ರಸರಣ ಆಗಿನದ್ದು. ಯಜುವರ್ೇದದಲ್ಲಿ ಬ್ರಾಹ್ಮಣ, ಕ್ಷತ್ರಿಯ, ಶೂದ್ರ, ಅನಾರ್ಯ, ಚಾರಣ (ವೈಶ್ಯ) ಎಲ್ಲರಿಗೂ ವೇದ ಶಿಕ್ಷಣ ಕೊಡಬೇಕು ಎಂದಿದೆ. (‘ಯಥೇಮಾಮ್ ವಾಚಮ್ ಕಲ್ಯಾಣೀಮಾವದಾನಿ ಜನೇಭ್ಯಃ ಬ್ರಾಹ್ಮಣ-ರಾಜನ್ಯಾಭ್ಯಾಂ ಶೂದ್ರಾಯ ಚಾಯರ್ಾಯ ಚಸ್ವಾಯ ಚಾರಣಾಯ’ ಯಜುವರ್ೇದ ಅಧ್ಯಾಯ 26, ಮಂಡಲ 2) ಋಗ್ವೇದ ಕಾಲದಲ್ಲಿ ವರ್ಣ ಪದ್ಧತಿ ವ್ಯಾಪಕವಾಗಿಯೇ ಇತ್ತು. ಹಾಗಂತ ಪರಮ ತತ್ತ್ವವನ್ನು ಪಡೆಯಲು ಎಲ್ಲರಿಗೂ ಅಧಿಕಾರವಿತ್ತು. ಸಾಧಾರಣವಾಗಿ ಋಷಿಗಳು ಬ್ರಾಹ್ಮಣರೇ ಆಗಿರುತ್ತಿದ್ದರೂ ಕ್ಷತ್ರಿಯರು ಪರಬ್ರಹ್ಮನನ್ನು ಅರಿತು ಋಷಿಯಾದ ಉದಾಹರಣೆಗಳು ಋಗ್ವೇದದಲ್ಲಿಯೇ ಇವೆ. ಅಂಬರೀಷ, ತ್ರಸದಸ್ಯೂ, ಪುರುಮಿಳ, ಅಜಾಮಿಳ ಹೀಗೆ ಅನೇಕರು. ಯಜುವರ್ೇದ, ಸಾಮವೇದ, ಅಥರ್ವಣ ವೇದಗಳ ಕಾಲದಲ್ಲಿಯೂ ಶಿಕ್ಷಣ ಇದೇ ಪದ್ಧತಿಯಲ್ಲಿಯೇ ಮುಂದುವರಿದಿತ್ತೆಂದು ಪಂಡಿತರು ಭಾವಿಸುತ್ತಾರೆ.
ಭಾರತೀಯ ಶಿಕ್ಷಣದ ಪರಮೋಚ್ಚ ಹಂತ ಬಹುಶಃ ಉಪನಿಷತ್ತುಗಳ ಕಾಲಘಟ್ಟವೇ ಇರಬೇಕು. ಅವುಗಳು ವೇದದ ಕೊನೆಯ ಭಾಗಗಳು. ಹೀಗಾಗಿ ವೇದಾಂತವೆಂದೇ ಅದನ್ನು ಕರೆದಿರೋದು. ವಾಸ್ತವವಾಗಿ ವೇದಾಧ್ಯಯನ ಎರಡು ಭಾಗಗಳಲ್ಲಿರುವಂಥದ್ದು. ಮೊದಲನೆಯದು ಆಲೋಚನೆ, ತತ್ತ್ವ, ಧ್ಯಾನ, ತಪಸ್ಸುಗಳ ಕುರಿತಂಥ ಜ್ಞಾನಕಾಂಡವಾದರೆ ಮತ್ತೊಂದು ಯಜ್ಞ, ಆಚರಣೆ, ಮಂತ್ರೋಚ್ಚಾರಗಳಿಗೆ ಸಂಬಂಧಿಸಿದ ಕರ್ಮಕಾಂಡ. ಎಷ್ಟೇ ಬೇಡವೆಂದರೂ ಕಾಲಕ್ರಮದಲ್ಲಿ ವಿದ್ಯಾಥರ್ಿಗಳು ಅಧ್ಯಯನಶೀಲರಾಗಿ ಉಚ್ಚಾರಣೆ, ಆಚರಣೆಗಳನ್ನು ಗಮನವಿಟ್ಟು ಅಧ್ಯಯನ ಮಾಡಿ ಯಜ್ಞಯಾಗಾದಿಗಳನ್ನು ಸರಿಯಾಗಿ ನಡೆಸಿಕೊಡುವ ಪುರೋಹಿತರಷ್ಟೇ ಆಗತೊಡಗಿದರು. ವೇದಗಳ ದರ್ಶನದ ಮೂಲ ಉದ್ದೇಶವೇ ಬದಿಗೆ ಸರಿಯಲ್ಪಟ್ಟಿತು. ಆಗಲೇ ಉಪನಿಷತ್ತುಗಳ ಹೊಸ ಲೋಕ ತೆರೆದುಕೊಂಡು ಋಗ್ವೇದದ ಹೃದಯಬಡಿತ ಎಲ್ಲೆಲ್ಲೂ ಪ್ರತಿಧ್ವನಿಸತೊಡಗಿದ್ದು.
ಉಪನಿಷತ್ತುಗಳ ಅಧ್ಯಯನ ಒಂದು ರೀತಿಯಲ್ಲಿ ಉನ್ನತ ವ್ಯಾಸಾಂಗವೇ. ಅದಾಗಲೇ ಒಂದು ಹಂತದ ಶಿಕ್ಷಣ ಮುಗಿಸಿದ ಶಿಷ್ಯ ಗುರುಗಳ ಬಳಿ ಸಾರಿ, ಕುಳಿತು ತನ್ನ ಪ್ರಶ್ನೆಗಳನ್ನು ಕೇಳಿ ಅನುಮಾನ ಪರಿಹರಿಸಿಕೊಳ್ಳುವ ಪ್ರಕ್ರಿಯೆ. ಪ್ರತಿಯೊಂದು ವೇದಗಳಿಗೂ ಅವುಗಳದೇ ಆದ ಉಪನಿಷತ್ತಿನ ಶಾಖೆಗಳಿವೆ. ಇವೆಲ್ಲವೂ ಸಾಕ್ಷಾತ್ಕರಿಸಿಕೊಂಡ ಸತ್ಯಗಳಾಗಿ ಶ್ರೇಷ್ಠ ಸಾಹಿತ್ಯವಾಗಿ ಜಗತ್ತನ್ನು ಆಕಷರ್ಿಸುತ್ತಿವೆ. ಈ ವೇಳೆಗಾಗಲೇ ಭಾರತೀಯ ಶಿಕ್ಷಣ ವ್ಯವಸ್ಥೆ ಅತ್ಯುನ್ನತ ಸ್ಥಿತಿಯನ್ನು ತಲುಪಿಯಾಗಿತ್ತು. ಸಮಾಜವು ವ್ಯವಸ್ಥಿತವಾಗಿ ಶಾಖೆ, ಚರಣ, ಪರಿಷತ್ತು, ಕುಲ, ಗೋತ್ರಗಳಲ್ಲಿ ಹಂಚಲ್ಪಟ್ಟಿತ್ತು. ತನ್ಮೂಲಕ ಆಯಾ ವೇದಗಳನ್ನು ಉಳಿಸುವ, ಅಥರ್ೈಸುವ, ಸಂಶೋಧನೆ ನಡೆಸುವ ಜವಾಬ್ದಾರಿ ಭಿನ್ನ ಭಿನ್ನ ವರ್ಗಗಳ ಹೆಗಲೇರಿತ್ತು. ಈಗಲೂ ಪ್ರವರ ಹೇಳುವಾಗ ಗೋತ್ರವನ್ನು, ಶಾಖೆಯನ್ನೆಲ್ಲಾ ನೆನಪಿಸಿಕೊಳ್ಳುತ್ತಾರಲ್ಲ ಅದು ಇದರದ್ದೇ ಭಾಗ. ಒಂದು ಶಾಖೆಯ ವ್ಯಕ್ತಿ ಮತ್ತೊಂದು ಶಾಖೆಯ ನಿಯಮಗಳನ್ನು ಪಾಲಿಸಬಾರದೆಂದು ಕಟ್ಟು ನಿಟ್ಟಿನ ಆಜ್ಞೆ ಇತ್ತು. ಕೆಲವೊಮ್ಮೆ ದೇಹದ ಮೇಲೆ ಒಂದಷ್ಟು ಗುರುತುಗಳನ್ನು ಮಾಡಿಕೊಂಡು ಆಯಾ ಶಾಖೆಯ ಪ್ರತ್ಯೇಕತೆಯನ್ನೂ ಗುರುತಿಸಿಕೊಳ್ಳುತ್ತಿದ್ದರಂತೆ. ಹಾಗಂತ ಪರಾಶರರ ಗೃಹ್ಯಸೂತ್ರಗಳ ಮೇಲಿನ ತನ್ನ ಬರಹದಲ್ಲಿ ಮ್ಯಾಕ್ಸ್ ಮುಲ್ಲರ್ ದಾಖಲಿಸಿದ್ದಾನೆ. ಆರಂಭದಲ್ಲಿ ವೇದಗಳ ಸಂಹಿತೆಗಳನ್ನು ಮೂಲ ಸ್ವರೂಪದಲ್ಲಿ ಉಳಿಸುವ ಸಮಪರ್ಿತ ಪಡೆಯ ನಿಮರ್ಾಣಕ್ಕೆ ಮಾಡಿಕೊಂಡ ನಿಯಮಗಳೆಲ್ಲ ಕಾಲಕ್ರಮದಲ್ಲಿ ಕಠೋರವಾಗಿ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಿರಲಿಕ್ಕೆ ಸಾಕು. ಇಂತಹ ಹೊತ್ತಲ್ಲಿಯೇ ಮತ್ತೆ ಮೂಲ ಸತ್ತ್ವದೆಡೆಗೆ ಹೊರಳುವ ಉಪನಿಷತ್ತುಗಳು ಕ್ರಾಂತಿಕಾರಕ ಎನಿಸಿ, ವೈಚಾರಿಕ ಪರಂಪರೆಗೆ ಪ್ರಚೋದನೆ ನೀಡಿದ್ದಿರಬೇಕು.
ಆಗಿನ ಶಾಲೆಗಳು ಈಗಿನವುಗಳಂತೆ ಪ್ರತ್ಯೇಕ ಕಟ್ಟಡಗಳಾಗಿರಲಿಲ್ಲ. ಅವು ಬೌದ್ಧಿಕವಾಗಿ ಮುಂದುವರಿದ, ಧರ್ಮಮಾರ್ಗದಲ್ಲಿ ನಡೆವ, ಸುಸಂಸ್ಕೃತರ ವಠಾರದಂತಿರುತ್ತಿದ್ದವು. ರಾಷ್ಟ್ರದುನ್ನತಿಯ ಕುರಿತಂತೆ ಸದಾ ಚಿಂತನಶೀಲರಾಗಿರುತ್ತಿದ್ದ ಇಂಥವರಿಂದಲೇ ಸಂಸ್ಕೃತಿ ವಿಸ್ತಾರವಾಗಿ ಹಬ್ಬಿತು. ವೇದಕಾಲದ ಜನ ಜೀವನ ಪದ್ಧತಿ ದೂರ ದೇಶಗಳಿಗೂ ಹರಡಲು ಇವರುಗಳೇ ಕಾರಣ. ಈ ಶಾಲೆಗಳಲ್ಲಿ ಸ್ವಾಧ್ಯಾಯಕ್ಕೆ ವಿಶೇಷ ಮಹತ್ವವಿತ್ತು, ಆದರೂ ಗುರುಮುಖೇನ ಕಲಿಯುವುದು ಶ್ರೇಷ್ಠ ಎಂದು ಭಾವಿಸಲಾಗಿತ್ತು. ಅನೇಕ ಬಾರಿ ತಂದೆಯೇ ಮಗನಿಗೆ ಗುರುವಾಗಿ ಪರಬ್ರಹ್ಮತತ್ತ್ವದ ಶ್ರೇಷ್ಠ ತತ್ತ್ವಗಳನ್ನು ತಿಳಿ ಹೇಳುತ್ತಿದ್ದ ಉಲ್ಲೇಖಗಳೂ ಇವೆ. ವಿದ್ಯಾಥರ್ಿಯಾದವ ಭಿಕ್ಷೆ ಬೇಡಿ ಉಣ್ಣಬೇಕಿತ್ತು. ಹಾಗಂತ ಅಗತ್ಯಕ್ಕಿಂತಲೂ ಹೆಚ್ಚಿಗೆ ತರುವಂತಿಲ್ಲ ಎಂಬ ಕಠಿಣ ನಿಯಮವೂ ಇತ್ತು. ಇದರ ಉದ್ದೇಶ ಬಲು ಸ್ಪಷ್ಟ. ಬಡತನವನ್ನು ಆವಾಹಿಸಿಕೊಂಡು ಜೀವಿಸುವುದರಿಂದ ಅಹಂಕಾರ ನಾಶವಾಗುತ್ತದೆ. ಆಗ ವಿದ್ಯಾದೇವತೆಯ ಕೃಪೆ ಸಲೀಸು ಅಂತ. ವಿದ್ಯಾಥರ್ಿ ಪವಿತ್ರಾಗ್ನಿಯನ್ನು ಸದಾ ಜ್ವಲಿಸುವಂತೆ ನೋಡಿಕೊಳ್ಳಬೇಕಿತ್ತು. ಅದಕ್ಕೆ ಬೇಕಾದ ಕಟ್ಟಿಗೆ ಆಯ್ದು ತರುವುದು ಅವನದ್ದೇ ಕೆಲಸ. ‘ಕೈಲಿ ಸಮಿತ್ತುಗಳನ್ನು ಹಿಡಿದು ಗುರುವನ್ನು ಅರಸಿಕೊಂಡು ಹೋಗು’ ಎಂದು ತಮ್ಮ ಮಕ್ಕಳಿಗೆ ತಂದೆ ಹೇಳಿಕಳಿಸುತ್ತಿದ್ದ ವಾಕ್ಯಗಳು ಕೆಲವು ಉಪನಿಷತ್ತುಗಳಲ್ಲಿ ಕಂಡು ಬರುತ್ತದೆ. ಗುರು ತನ್ನೊಳಗೆ ಹೊತ್ತಿಸಿದ ಅಗ್ನಿ ಆರದಂತೆ ಕಾಪಾಡಿಕೊಳ್ಳುವ ಸಂಕೇತವೂ ಈ ಕ್ರಿಯೆಯಲ್ಲಿ ಇರಬಹುದು. ಆಗಿನ ಕಾಲದಲ್ಲಿ ಗುರುಕುಲದ ಪಾಲಿಗೆ ಸಂಪತ್ತಾಗಿದ್ದ ದನಗಳನ್ನು ನೋಡಿಕೊಳ್ಳುವುದೂ ಶಿಷ್ಯನದೇ ಕೆಲಸವಾಗಿತ್ತು. ಇವೆಲ್ಲವುಗಳನ್ನು ಸರಿದೂಗಿಸಿಕೊಂಡು ಶಿಷ್ಯ ವೇದಾಧ್ಯಯನ ಮಾಡಬೇಕಿತ್ತು. ಅವನಿಗೆ ವಿಧಿಸಿದ ಬೇರೆ ಬೇರೆ ಕೆಲಸಗಳಲ್ಲಿ ಅವನ ಶ್ರದ್ಧೆಯನ್ನು ಸೂಕ್ಷ್ಮವಾಗಿ ಗಮನಿಸಿ ಅವನನ್ನು ಅಳೆದು-ತೂಗಿ ಗುರುಗಳು ಶಿಕ್ಷಣ ನೀಡುತ್ತಿದ್ದರು.
ಹೀಗಾಗಿ ಅಂದಿನ ಶಿಕ್ಷಣ ಸಿಲೆಬಸ್ ಮುಗಿಸುವ ಭರಾಟೆಯ ಶಿಕ್ಷಣವಾಗಿರಲಿಲ್ಲ. ಸಾಮಥ್ರ್ಯದ ಪರೀಕ್ಷೆ ವಿದ್ವತ್ ಗೋಷ್ಠಿಯಲ್ಲಿ ನಡೆಯುತ್ತಿದ್ದರಿಂದ ‘ಹಂಡ್ರೆಡ್ ಪಸರ್ೆಂಟ್ ರಿಸಲ್ಟ್’ನ ತಾಕಲಾಟವಿರಲಿಲ್ಲ, ಪ್ರಶ್ನೆ ಪತ್ರಿಕೆ ಸೋರಿ ಹೋಗುವ ಹೆದರಿಕೆಯೂ ಇರಲಿಲ್ಲ. ಶಿಕ್ಷಣ ತ್ಯಾಗಿಗಳ ಸ್ವತ್ತಾಗಿದ್ದರಿಂದ, ಸಾಕ್ಷಾತ್ಕಾರವೇ ಪ್ರಮಾಣವಾಗಿದ್ದರಿಂದ ಬದಲಾಗುವ ಮಂತ್ರಿಗಳಾಗಲಿ, ಬುದ್ಧಿ ಜೀವಿಗಳಾಗಲಿ ಸಮಾಜದ ದಿಕ್ಕನ್ನು ನಿರ್ಧರಿಸುವಂತಿರಲಿಲ್ಲ.
ಛೇ! ಎಷ್ಟೊಂದು ದೂರ ಬಂದುಬಿಟ್ಟೆವಲ್ಲ. . .

Comments are closed.