ವಿಭಾಗಗಳು

ಸುದ್ದಿಪತ್ರ


 

ತೆರಿಗೆಯ ಕಿರಿಕಿರಿಗೂ ಇತಿಹಾಸವಿದೆ!

ಸ್ವಾತಂತ್ರ್ಯ ಬಂದ ಅರವತ್ತು ವರ್ಷ ಆಳಿದ ಪುಣ್ಯಾತ್ಮರು ಭಾರತದ ಖಜಾನೆ ತುಂಬದಂತೆ ನೋಡಿಕೊಂಡರು, ಇಲ್ಲಿದ್ದರೆ ಆಕ್ರಮಣವಾದೀತೆಂದು ಹಣವನ್ನು ವಿದೇಶಕ್ಕೆ ಸಾಗಿಸಿ ಅಲ್ಲಿ ಕೂಡಿಟ್ಟರು. ಕೊನೆಗೆ ಬೊಕ್ಕಸದಲ್ಲಿ ಕ್ರೋಢೀಕರಣದಿಂದ ಸಮಸ್ಯೆಯಾಗುವುದೆಂದರಿತು ಭಾರತವನ್ನು ಸಾಲದಲ್ಲಿರುವಂತೆ ನೋಡಿಕೊಂಡರು. ಸಿರಿವಂತ ರಾಷ್ಟ್ರದ ಮೇಲೆ ಎಲ್ಲರೂ ಕಣ್ಣು ಹಾಕುತ್ತಾರೆ, ಬಡವಾಗಿದ್ದರೆ ಅನುಕಂಪ ತೋರುತ್ತಾರೆ ಎಂಬ ತರ್ಕ ಇರಬೇಕು ಅವರದ್ದು!

ಬೆಂಗಳೂರಿನ ಹೊಟೇಲೊಂದಕ್ಕೆ ಊಟಕ್ಕೆ ಹೋಗಿದ್ದಾಗ ಪಕ್ಕದಲ್ಲೇ ಕೂತ ಮಾಲೀಕರು, ಮೋದಿಯನ್ನು ಮನಸೋ ಇಚ್ಛೆ ತೆಗಳಿದರು; ಜಿಎಸ್ಟಿ ಸರಿಯಿಲ್ಲವೆಂದರು. ಏಕೆಂದು ಕೇಳಿದಾಗ ಮೊದಲೆಲ್ಲ ಮೂರು ಮದುವೆಯಾಗಿ ಇಪ್ಪತ್ತೆರಡು ಮಕ್ಕಳನ್ನು ಹೊಂದಿದ್ದ ವ್ಯಕ್ತಿಯೊಬ್ಬ ದಿನಕ್ಕೆ ಹತ್ತು ಸಾವಿರ ರೂಪಾಯಿಯ ಸಿಹಿಯನ್ನು ಅವರಂಗಡಿಯಿಂದ ಒಯ್ಯುತ್ತಿದ್ದನಂತೆ. ನೋಟು ಅಮಾನ್ಯೀಕರಣದ ನಂತರ ವಾರಕ್ಕೊಮ್ಮೆ ಒಯ್ಯುತ್ತಾನಂತೆ. ಜಿಎಸ್ಟಿಯ ನಂತರ ಹೋಟೆಲ್ಲಿಗೆ ಬರುವವರೂ ಕಡಿಮೆಯಾಗಿದ್ದಾರಂತೆ.  ಹೀಗೇಕೆಯಾಯ್ತು ಎಂದು ಅವರನ್ನು ಕೇಳಿದರೆ ಕಪ್ಪು ಹಣದ ಚಲಾವಣೆ ನಿಂತುಹೋಗಿದೆಯಲ್ಲ ಅದಕ್ಕೇ ಎಂದು ನಿಟ್ಟುಸಿರು ಬಿಡುತ್ತಾರೆ. ತೆರಿಗೆ ವ್ಯವಸ್ಥೆಗಳ ಕುರಿತಂತೆ ಭಾರತ ಹಿಂದೆಂದೂ ಇಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಬಜೆಟ್ಗಳಲ್ಲಿ ತೆರಿಗೆಗೆ ಒಳಪಡುವ ಆದಾಯದ ವ್ಯಾಪ್ತಿಯನ್ನು ಹಿಗ್ಗಿಸಿದರೆ ಸಾಕೆಂದು ಕುಳಿತಿರುತ್ತಿದ್ದ ಜನ ನಾವು. ಈಗ ತೆರಿಗೆ ವ್ಯವಸ್ಥೆಯಲ್ಲಿ ಸಣ್ಣ ಬದಲಾವಣೆಯನ್ನೂ ವಿಶೇಷವಾಗಿ ಗಮನಿಸುತ್ತಿದ್ದೇವೆ. ಅದರಿಂದಾಗುವ ಸಮಸ್ಯೆಗಳ ಕುರಿತಂತೆ ಅರ್ಥಶಾಸ್ತ್ರಜ್ಞರನ್ನೂ ಮೀರಿಸುವಂತೆ ಚಚರ್ೆ ಮಾಡುತ್ತಿದ್ದೇವೆ. ಹಾಗೇ ಸುಮ್ಮನೆ ಆಲೋಚಿಸಿ. ಮನಮೋಹನ ಸಿಂಗರು ಪ್ರಧಾನಿಯಾಗಿದ್ದಾಗ ಅರ್ಥಶಾಸ್ತ್ರವಾಗಲೀ, ವಿದೇಶಾಂಗವಾಗಲೀ; ರಕ್ಷಣೆಯಾಗಲೀ, ಮೂಲ ಸೌಕರ್ಯಗಳ ಕುರಿತಂತೆಯೇ ಆಗಲಿ ಸಾಮಾನ್ಯ ಜನರೇನು, ಮಂತ್ರಿಮಾಗಧರೂ ಮಾತನಾಡುತ್ತಿರಲಿಲ್ಲ. ಮೋದಿ ಪ್ರಧಾನಿಯಾದ ಮೇಲೆ ಇವೆಲ್ಲದರ ಕುರಿತಂತೆ ನಿರುತ ಚಚರ್ೆಯಾಗುವಂತೆ ನೋಡಿಕೊಂಡಿದ್ದಾರಲ್ಲ ಅದಕ್ಕೇ ಅವರಿಗೊಂದು ಅಭಿನಂದನೆ ಹೇಳಬೇಕು. ಮುಂದಿನ ದಿನಗಳಲ್ಲಿ ಚುನಾವಣೆಯ ವೇಳೆಗೆ ಜನ ಈ ಕುರಿತಂತೆ ಪಕ್ಷಗಳನ್ನು ಪ್ರಶ್ನಿಸಿದರೆ ಅಚ್ಚರಿ ಪಡುವ ಅಗತ್ಯವಿಲ್ಲ. ಇದಕ್ಕಿಂತ ಹೆಚ್ಚು ಅಚ್ಛೇ ದಿನ್ ಇನ್ನೇನು ಬೇಕು ಹೇಳಿ.

ಜಿಎಸ್ಟಿಯ ಕುರಿತಂತೆ ಎಲ್ಲೆಡೆ ಪರ-ವಿರೋಧದ ಚಚರ್ೆಗಳು ಜೋರಾಗಿವೆ. ಒಂದು ದೇಶಕ್ಕೆ ಒಂದೇ ತೆರಿಗೆ ಎಂದು ಪ್ರಧಾನಿಗಳು ಹೇಳುವಾಗ, ಇದೊಂದು ಕ್ರಾಂತಿಕಾರೀ ಹೆಜ್ಜೆ ಎಂದು ತಿಳಿದವರು ಅಭಿನಂದಿಸುವಾಗ ಒಟ್ಟಾರೆ ತೆರಿಗೆ ವ್ಯವಸ್ಥೆಯ ಕುರಿತು ಒಮ್ಮೆ ಆಲೋಚಿಸಬೇಕೆನಿಸುವುದಿಲ್ಲವೇನು? ಈಗಿನ ಎಲ್ಲ ವ್ಯವಸ್ಥೆಗಳನ್ನು ರೂಪಿಸಿರುವ ಬ್ರಿಟೀಷರ ಆಗಮನಕ್ಕೂ ಮುನ್ನ ಇಲ್ಲಿನ ತೆರಿಗೆ ಪದ್ಧತಿ ಹೇಗಿತ್ತೆಂದು ತಿಳಿಯಬೇಕೆನಿಸುವುದಿಲ್ಲವೇನು?

1

ವೇದಯುಗದ ಕಾಲದಲ್ಲಿ ಭಾರತದ ತೆರಿಗೆಯ ಕಲ್ಪನೆ ಭಿನ್ನವಾಗಿತ್ತು. ಇಂದು ಯಾವುದೆಲ್ಲವನ್ನೂ ಕೆಲವರ ಮೇಲೆ ತೆರಿಗೆಯ ಭಾರ ಹೇರಿ ಉಳಿದವರಿಗೆ ಭಾಗ್ಯವಾಗಿ ಕರುಣಿಸುತ್ತಿದ್ದೇವೆಯೋ ಅವೆಲ್ಲವನ್ನೂ ಅಂದು ದಾನದ ರೂಪದಲ್ಲಿ ನೋಡಲಾಗುತ್ತಿತ್ತು. ಅನ್ನಭಾಗ್ಯ ಅಂತ ಇಂದು ನಾವು ಕರೆದಿರುವುದು ಅಂದು ಅನ್ನದಾನವೆನಿಸಿಕೊಂಡಿತ್ತು. ವಿದ್ಯೆಯೂ ಗುರುಕುಲಗಳ ಮೂಲಕ ದಾನವಾಗಿ ಕೊಡಲ್ಪಡುತ್ತಿತ್ತು. ವ್ಯವಸ್ಥೆಯೇ ದಾನವಾಗಿ ಬಂದ ಧನ, ದವಸ-ಧಾನ್ಯಗಳ ಆಧಾರದ ಮೇಲೆ ನಡೆಯುತ್ತಿತ್ತು. ಆನಂತರದ ದಿನಗಳಲ್ಲಿಯೇ ರಾಜ್ಯ ಚಾಲನೆಗೆ ಪ್ರತಿಯೊಬ್ಬರೂ ಕಡ್ಡಾಯ ದಾನ ಮಾಡಬೇಕಾದ ವ್ಯವಸ್ಥೆ ಬಂದಿರಬೇಕೆಂದು ‘ಟ್ಯಾಕ್ಸೇಶನ್ ಅಂಡ್ ರೆವಿನ್ಯೂ ಕಲೆಕ್ಷನ್ ಇನ್ ಏನ್ಶಿಯೆಂಟ್ ಇಂಡಿಯಾ’ ಕೃತಿಯಲ್ಲಿ ಸಂಜೀವ್ ಕುಮಾರ್ ಶಮರ್ಾ ಅಭಿಪ್ರಾಯ ಪಡುತ್ತಾರೆ. ಬಲಿ, ಭಾಗ, ಕರ, ಶುಲ್ಕ, ಸುಂಕ ಇವುಗಳೆಲ್ಲ ಹಂತ ಹಂತವಾಗಿಯೇ ವಿಕಸನಗೊಂಡವು. ಸರಳವಾಗಿದ್ದ ಈ ವ್ಯವಸ್ಥೆ ರಾಜ್ಯಾಡಳಿತ ವಿಸ್ತಾರವಾದಂತೆಲ್ಲ ಸಂಕೀರ್ಣವಾಗುತ್ತ ಸಾಗಿತು. ಕೌಟಿಲ್ಯನ ಅರ್ಥಶಾಸ್ತ್ರ ಇಂಥದ್ದೇ ವ್ಯವಸ್ಥೆಯ ಪರಿಚಯ ನೀಡುವಂಥದ್ದು. ಹಾಗಂತ ಕರ ಸಂಗ್ರಹವೇ ರಾಜನ ಮೂಲ ಉದ್ದೇಶವಾಗಿರಲಿಲ್ಲ. ಧರ್ಮ, ಅರ್ಥ, ಕಾಮ, ಮೋಕ್ಷಗಳ ಪರಿಕಲ್ಪನೆಯಲ್ಲಿ ಜನರನ್ನು ಧರ್ಮ ಮಾರ್ಗದಲ್ಲಿ ಅರ್ಥಗಳಿಕೆಗೆ ಪ್ರೇರೇಪಿಸಿ ಅದರಲ್ಲಿ ಒಂದು ಪಾಲನ್ನು ತೆರಿಗೆಯಾಗಿ ಸಂಗ್ರಹಿಸಬೇಕಾಗಿತ್ತಷ್ಟೇ. ತೆರಿಗೆ ಹೆಚ್ಚು ಸಂಗ್ರಹವಾಗಿ ರಾಜ್ಯದ ಕಾಮನೆಗಳು ಪೂರೈಕೆಯಾಗಬೇಕೆಂದರೆ ಜನರ ಅರ್ಥ ಗಳಿಕೆಯ ಸಾಮಥ್ರ್ಯ ವೃದ್ಧಿಸುವಂತೆ ನೋಡಿಕೊಳ್ಳಬೇಕಾಗಿತ್ತು. ಅದಕ್ಕೆಂದೇ ವ್ಯಾಪಾರ, ಕೃಷಿ, ಇನ್ನಿತರ ಉದ್ದಿಮೆಗಳೆಲ್ಲ ಜೋರಾಗಿ ನಡೆಯುವಂತೆ ವ್ಯವಸ್ಥೆ ಮಾಡಬೇಕಾಗಿದ್ದು ರಾಜನದ್ದೇ ಕರ್ತವ್ಯವಾಗಿತ್ತು. ಅಂದ ಮಾತ್ರಕ್ಕೆ ಹೆಚ್ಚು ಹೆಚ್ಚು ಹಣ ಗಳಿಸಬಲ್ಲವರಷ್ಟೇ ರಾಜನ ಪ್ರಜೆಗಳಲ್ಲವಲ್ಲ; ಸಂಗೀತ, ಸಾಹಿತ್ಯ, ಕಲೆಯನ್ನೇ ನೆಚ್ಚಿ ಜೀವನ ನಡೆಸುವವರಿಗೂ, ತ್ಯಾಗಿಗಳಾಗಿ ಸಮಾಜದ ಒಳಿತಿಗಾಗಿ ಬದುಕುವವರಿಗೂ ರಾಜ್ಯ ಆಶ್ರಯ ನೀಡಬೇಕಿತ್ತಲ್ಲ ಅದಕ್ಕೆಲ್ಲ ಸಂಗ್ರಹಗೊಂಡ ತೆರಿಗೆ ಬಳಕೆಯಾಗುತ್ತಿತ್ತು. ಇಷ್ಟಕ್ಕೂ ಭಾರತೀಯ ಸಾಹಿತ್ಯಗಳಲ್ಲಿ ರಾಜನೆಂದರೆ ಪ್ರಜಾ ನಾಯಕನಲ್ಲ, ಪ್ರಜಾ ರಂಜಕ ಮಾತ್ರ. ಆತನಿಗೆ ಯಾವ ಒಡೆತನವೂ ಇಲ್ಲ ಬದಲಿಗೆ ಆತ ಎಲ್ಲವನ್ನೂ ಸಂಭಾಳಿಸುವವ ಅಷ್ಟೇ. ಹೀಗಿದ್ದರೂ ರಾಜನೊಬ್ಬನ ಬೊಕ್ಕಸ ಸದಾ ತುಂಬಿರುವುದು ಅಕ್ಕಪಕ್ಕದ ರಾಜ್ಯಗಳೆದುರು ಆತನ ಸಾಮಥ್ರ್ಯವನ್ನು ಬಿಂಬಿಸುತ್ತಿತ್ತು. ಬೊಕ್ಕಸದಲ್ಲಿ ತುಂಬಿರುವ ಹಣವನ್ನು ರಾಜನೂ ಬಲು ಎಚ್ಚರಿಕೆಯಿಂದಲೇ ಬಳಸಬೇಕಿತ್ತು. ಆತನೂ ಸದಾ ಮೋಕ್ಷಗಾಮಿಯಾಗಿಯೇ ಆಲೋಚಿಸುತ್ತ ತ್ಯಾಗ ಜೀವಿಯಾಗಿರಬೇಕಿತ್ತೆಂದು ಪ್ರಜೆಗಳು ಅಪೇಕ್ಷಿಸುತ್ತಿದ್ದರು. ಜನಕ, ದಶರಥರೆಲ್ಲ ಅದಕ್ಕೆ ಉದಾಹರಣೆ. ರಾಜನಿಗೆ ಸ್ವಾರ್ಥ ಇಣುಕಿದಾಗ ಬುದ್ಧಿಹೇಳಲು ವಿಧುರನಂಥವರು ಮಂತ್ರಿಗಳಾಗಿ ಇದ್ದೇ ಇರುತ್ತಿದ್ದರು. ನ್ಯಾಯ ಕೊಡುವ ರಾಜ ತನಗೂ ಅದೇ ಶಾಸ್ತ್ರಬದ್ಧ ನ್ಯಾಯ ಹೊಂದುತ್ತದೆಂದು ಅರಿತಿದ್ದ. ಅಮೋಘವರ್ಷ ನೃಪತುಂಗ ರಾಜದ್ರೋಹಕ್ಕಾಗಿ ತನ್ನ ಮಗನಿಗೂ ಕಠಿಣ ಶಿಕ್ಷೆ ವಿಧಿಸಿದ್ದನ್ನು ಈ ಹೊತ್ತಲ್ಲಿ ಸ್ಮರಿಸಿಕೊಳ್ಳಲೇ ಬೇಕು.

ಕಾಲಕ್ರಮದಲ್ಲಿ ಮಂದಿರಗಳು ತೆರಿಗೆ ಸಂಗ್ರಹದಲ್ಲಿ ಮಹತ್ವದ ಪಾತ್ರ ವಹಿಸಿತೆನಿಸುತ್ತದೆ. ರಾಜ ಮಾಡಬೇಕಾದ ಎಲ್ಲ ಕೆಲಸಗಳನ್ನೂ ಒಂದು ಮಂದಿರ ಸುತ್ತಮುತ್ತಲಿನ ಹಳ್ಳಿಗಳಿಗೆ ತಾನೇ ಮಾಡುತ್ತಿತ್ತು. ಅನ್ನದಾನ, ವಿದ್ಯಾದಾನ, ಆರೋಗ್ಯದಾನ ಎಲ್ಲಕ್ಕೂ ಮಿಗಿಲಾಗಿ ಜನರನ್ನು ಸದಾ ಧರ್ಮ ಮಾರ್ಗದಲ್ಲಿರುವಂತೆ ಪ್ರೇರೇಪಿಸುತ್ತಿತ್ತು ಮಂದಿರ. ಅನೇಕ ಬಾರಿ ರಾಜ ಮಂದಿರಕ್ಕೆ ಹೊಂದಿಕೊಂಡ ಹಳ್ಳಿಗಳನ್ನು ಉಂಬಳಿಯಾಗಿ ಮಂದಿರಕ್ಕೇ ಕೊಟ್ಟು ಅಲ್ಲಿನ ಕರವನ್ನು ಮಂದಿರಗಳಿಗೇ ಒಪ್ಪಿಸಿಬಿಡುವ ವ್ಯವಸ್ಥೆ ಮಾಡುತ್ತಿದ್ದ. ಇವೆಲ್ಲವೂ ಸಭ್ಯ ಸಮಾಜಕ್ಕೆ ಬೇಕಾದ ಸಭ್ಯ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದವು. ಕಾಲಕ್ರಮದಲ್ಲಿ ರಾಜನ ಬೊಕ್ಕಸದಂತೆ ಮಂದಿರಗಳ ಬೊಕ್ಕಸಗಳೂ ದಾನದಿಂದ ಶ್ರೀಮಂತಗೊಂಡು ತುಂಬಿ ತುಳುಕಾಡುತ್ತಿದ್ದವು. ಕೆಲವರಂತೂ ಈ ಹಣವೇ ಆಕ್ರಮಣಕಾರಿಗಳನ್ನು ಆಕಷರ್ಿಸಿದ್ದೆಂದು ನಂಬುತ್ತಾರೆ. ಆದರೆ ಭಾರತದಲ್ಲಿ ತುಂಬಿ ತುಳುಕಾಡುತ್ತಿದ್ದ ಶ್ರೀಮಂತಿಕೆ ಜಗತ್ತಿನ ಎಲ್ಲ ದರೋಡೆಕೋರರನ್ನೂ, ಕಳ್ಳ-ಕಾಕರನ್ನೂ ಆಕಷರ್ಿಸಿತೆಂದು ಹೇಳಲು ಮಾತ್ರ ಹಿಂಜರಿಯುತ್ತಾರೆ. ಈಶಾನ್ಯದಿಂದ ಬಂದ ಮುಸಲ್ಮಾನರನ್ನು ಸೆಳೆದಿದ್ದು ಸಂಪತ್ತೆಂದು ಒಪ್ಪೋಣ. ಆದರೆ ಅವರಿಗೆ ಇಲ್ಲಿರುವ ಜನರನ್ನು ಕೊಲೆಗೈಯ್ಯಲು ಪ್ರೇರೇಪಿಸಿದ್ದು, ಮಂದಿರಗಳನ್ನು ಧ್ವಂಸಗೈದು, ಮೂತರ್ಿಗಳನ್ನು ಭಂಜಿಸಲು ತಾಕೀತು ಮಾಡಿದ್ದು ಯಾರು? ಅವರು ಅನುಸರಿಸುತ್ತಿದ್ದ ಪಂಥವೇನು? ಹೀಗೆ ಇತಿಹಾಸಕಾರರನ್ನು ಕೇಳಿದರೆ ಅವರು ಉತ್ತರಿಸಲಾರರು. ಅವರ ದೃಷ್ಟಿಯಲ್ಲಿ ನಾವು ಸಂಪತ್ತನ್ನು ಕೂಡಿಟ್ಟುಕೊಂಡಿದ್ದೇ ತಪ್ಪು, ಈ ತಪ್ಪು ತಿದ್ದಲೆಂದು ಅನ್ಯರು ಆಕ್ರಮಣ ಮಾಡಿದರು. ಇದನ್ನು ಅರಿತೇ ಸ್ವಾತಂತ್ರ್ಯ ಬಂದ ಅರವತ್ತು ವರ್ಷ ಆಳಿದ ಪುಣ್ಯಾತ್ಮರು ಭಾರತದ ಖಜಾನೆ ತುಂಬದಂತೆ ನೋಡಿಕೊಂಡರು, ಇಲ್ಲಿದ್ದರೆ ಆಕ್ರಮಣವಾದೀತೆಂದು ಹಣವನ್ನು ವಿದೇಶಕ್ಕೆ ಸಾಗಿಸಿ ಅಲ್ಲಿ ಕೂಡಿಟ್ಟರು. ಕೊನೆಗೆ ಬೊಕ್ಕಸದಲ್ಲಿ ಕ್ರೋಢೀಕರಣದಿಂದ ಸಮಸ್ಯೆಯಾಗುವುದೆಂದರಿತು ಭಾರತವನ್ನು ಸಾಲದಲ್ಲಿರುವಂತೆ ನೋಡಿಕೊಂಡರು. ಸಿರಿವಂತ ರಾಷ್ಟ್ರದ ಮೇಲೆ ಎಲ್ಲರೂ ಕಣ್ಣು ಹಾಕುತ್ತಾರೆ, ಬಡವಾಗಿದ್ದರೆ ಅನುಕಂಪ ತೋರುತ್ತಾರೆ ಎಂಬ ತರ್ಕ ಇರಬೇಕು ಅವರದ್ದು!

2

ಭಾರತದಲ್ಲಿ ತೆರಿಗೆ ಪದ್ಧತಿಗೆ ಸಮರ್ಥ ಸ್ವರೂಪ ಕೊಟ್ಟಿದ್ದು ಚಾಣಕ್ಯನೇ. ಬಹುಶಃ ಆದಾಯ ತೆರಿಗೆಯ ವಿಸ್ತಾರ ರೂಪ ಅಲ್ಲಿಯೇ ನಮಗೆ ಸಿಗೋದು. ವ್ಯಾಪಾರಿಗಳು ತಮ್ಮ ಲಾಭದ ಹದಿನೈದರಿಂದ ಇಪ್ಪತ್ತು ಪ್ರತಿಶತ ಕೊಡಬೇಕು ಮತ್ತು ರೈತರು ಹತ್ತರಿಂದ ಹದಿನೈದು ಪ್ರತಿಶತದಷ್ಟು ಆದಾಯ ತೆರಿಗೆ ಕಟ್ಟಬೇಕೆಂದು ಆತ ನಿಯಮ ಮಾಡಿದ್ದ. ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ತೆರಿಗೆ ಸಂಗ್ರಹಣೆಯ ಪದ್ಧತಿ ಅತ್ಯುತ್ಕೃಷ್ಟವಾಗಿ ರೂಪಿಸಲ್ಪಟ್ಟಿತ್ತು. ಮುಸಲ್ಮಾನರ ಕಾಲದಲ್ಲಿ ತೆರಿಗೆ ಪದ್ಧತಿ ಸ್ವಲ್ಪ ವಿಕಟವಾಯಿತು. ಎಲ್ಲವನ್ನೂ ಮತೀಯ ದೃಷ್ಟಿಕೋನದಿಂದಲೇ ನೋಡುವ ಆ ರಾಜರುಗಳ ಆಳ್ವಿಕೆಯ ಕಾಲದಲ್ಲಿ ಹಿಂದುವಾಗಿರಬೇಕೆಂದರೂ ಜೇಸಿಯಾ ತೆರಿಗೆ ಕಟ್ಟಬೇಕಿತ್ತು. ಇದೊಂದು ರೀತಿಯಲ್ಲಿ ಪೆಟ್ರೋಲಿಗೆ ಬಗೆ ಬಗೆಯ ಸೆಸ್ಗಳನ್ನು ಕಟ್ಟಿದಂತೆ. ಹಾಗೆ ನೋಡಿದರೆ ಬೊಕ್ಕಸದ ಹಣವನ್ನು ಎಚ್ಚರಿಕೆಯಿಂದ ಬಳಸಬೇಕೆಂಬ ಹಿಂದೂ ನಿಯಮವನ್ನು ಮೀರಿ ವತರ್ಿಸಿದ್ದು ಮುಸಲ್ಮಾನ ನವಾಬರೇ. ಮುಂದೊಮ್ಮೆ ಬ್ರಿಟೀಷರೂ ಲೂಟಿ ಮಾಡಿದ ಹಣದಲ್ಲಿ ಐಷಾರಾಮಿ ಬದುಕು ನಡೆಸುವ ತಮ್ಮಲ್ಲಿನ ಅಧಿಕಾರಿಗಳನ್ನು ‘ನವಾಬ’ ಎಂದು ಆಡಿಕೊಳ್ಳುವಷ್ಟರ ಮಟ್ಟಿಗೆ! ಹಿಂದೂ ರಾಜರುಗಳೂ ಚೌಕಟ್ಟಿನೊಳಗೇ ಚೆನ್ನಾದ ಬದುಕನ್ನು ನಡೆಸಿದ್ದರೆಂಬುದನ್ನು ಮರೆಯುವಂತಿಲ್ಲ. ಹರ್ಷವರ್ಧನನಂತೂ ವರ್ಷದ ಕೊನೆಯಲ್ಲಿ ಬೊಕ್ಕಸದಲ್ಲಿರುವ ಹಣವನ್ನೆಲ್ಲಾ ಜನತೆಗೆ ದಾನ ಮಾಡಿ ನದಿಯಲ್ಲಿ ಸ್ನಾನ ಮಾಡಿದ ನಂತರ ತನ್ನ ಸೋದರಿ ಕೊಟ್ಟ ಹೊಸ ಬಟ್ಟೆಯಿಂದ ಮತ್ತೆ ಅಧಿಕಾರ ಶುರು ಮಾಡುತ್ತಿದ್ದನಂತೆ. ಈ ಬಗೆಯ ತ್ಯಾಗದ ಪರಂಪರೆ ಮೊಘಲರ ಕಾಲಕ್ಕೆ ನಿಂತೇ ಹೋಗಿತ್ತು. ಅವರ ಜನಾನಾಗಳು, ಅದರ ನಿರ್ವಹಣೆ, ವೈಭವದ ಬದುಕನ್ನೆಲ್ಲ ಜನರ ತೆರಿಗೆಯಲ್ಲಿ ಮತ್ತು ಯುದ್ಧದಲ್ಲಿ ಗೆದ್ದ ಹಣದಲ್ಲಿಯೇ ನಿರ್ವಹಿಸಬೇಕಿತ್ತಲ್ಲ. ಆಗಲೇ ತೆರಿಗೆಯ ನೆಪದ ಶೋಷಣೆ ಶುರುವಾಗಿದ್ದು. ಮುಂದೆ ಅದು ಅಸಹನೀಯ ಸ್ಥಿತಿಯನ್ನು ತಲುಪಿದ್ದು ಮಾತ್ರ ಬ್ರಿಟೀಷರ ಕಾಲಾವಧಿಯಲ್ಲಿಯೇ.

3

ಭಾರತದ ತೆರಿಗೆ ವ್ಯವಸ್ಥೆಯನ್ನು ಅತ್ಯಂತ ಸಂಕೀರ್ಣಗೊಳಿಸಿ ಹದಗೆಡುವಂತೆ ಮಾಡಿ ಭಾರತವನ್ನು ಇಂದಿನ ದುಸ್ಥಿತಿಗೆ ತಳ್ಳಿದ್ದು ಈಸ್ಟ್ ಇಂಡಿಯಾ ಕಂಪನಿಯ ದುರಾಡಳಿತವೇ. ಈ ಕುರಿತಂತೆ ಅನೇಕ ಸಾಹಿತ್ಯಗಳು ಲಭ್ಯವಿವೆಯಾದರೂ ಶಶಿ ತರೂರ್ರು ಇತ್ತೀಚೆಗೆ ಬರೆದಿರುವ ದಿ ಎರಾ ಆಫ್ ಡಾಕರ್್ನೆಸ್ ಅಧ್ಯಯನಯೋಗ್ಯವಾದುದು. ಭಾರತವನ್ನು ಆಂಗ್ಲರು ಲೂಟಿ ಮಾಡಿದ ವಿವರವನ್ನು ನೀವು ಆಂಗ್ಲರ ಮಾತುಗಳಲ್ಲಿಯೇ ಕೇಳಬೇಕು. ಊಟಿಯನ್ನು ಕಟ್ಟಿದವನೆಂದು ಗುರುತಿಸಲ್ಪಡುವ ಜಾನ್ ಸುಲಿವನ್ 1840ರಲ್ಲಿ ಹೇಳಿದ ನುಡಿ ಉಲ್ಲೇಖನೀಯ. ‘ಸಣ್ಣ ನ್ಯಾಯಾಲಯಗಳು ಕಾಣೆಯಾದವು, ವ್ಯಾಪಾರ ಸ್ತಬ್ಧವಾಯ್ತು, ಬಂಡವಾಳ ನಶಿಸಿತು, ಭಾರತೀಯರು ಬಡವರಾದರು, ಇಂಗ್ಲೀಷರು ಸಂಪದ್ಭರಿತರಾದರು. ಸ್ಪಂಜಿನಂತೆ ಗಂಗಾ ತಟದಿಂದ ಸಿರಿವಂತಿಕೆಯನ್ನು ಹೀರಿ ಅದನ್ನು ಥೇಮ್ಸ್ ನದಿಯ ದಂಡೆಗಳಲ್ಲಿ ಹಿಂಡಿ ಹರಿಸಲಾಯ್ತು’ ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ್ದ. ಇಲ್ಲಿಗೆ ಬಂದಾಗ ಬ್ರಿಟೀಷರು ಹೇಗಿದ್ದರು ಗೊತ್ತೇನು? ಮೊದಲ ಬಾರಿಗೆ ಇಂಗ್ಲೀಷರ ಪರವಾಗಿ ರಾಜನೆದುರು ನಿಂತಿದ್ದ ವಿಲಿಯಂ ಹಾಕಿನ್ಸ್ನ್ನು ರಾಜ ಆಡಿಕೊಂಡಿದ್ದ. ಆತನ ಉಡುಗೊರೆಯನ್ನು ನಿರಾಕರಿಸಲಾಗಿತ್ತು. ಸರ್ ಥಾಮಸ್ ರೋ ಜಹಾಂಗೀರನೆದುರು ದೈನೇಸಿಯಾಗಿ ವ್ಯಾಪಾರದ ಅನುಮತಿಗಾಗಿ ಗೋಗರೆದು ನಿಂತಿದ್ದ. ಮೊಘಲರ ಸಿರಿವಂತಿಕೆಯ ಎದುರು ಇಂಗ್ಲೀಷರ ಬುದ್ಧಿಗೆ ಮಂಕು ಬಡಿದಿತ್ತು. ಆದರೆ ಕಾಲಚಕ್ರ ಹೇಗೆ ತಿರುಗಿ ನಿಂತಿತೆಂದರೆ ಇದೇ ಬಿಳಿಯರು 1757ರಲ್ಲಿ ಮೋಸದಿಂದ ಸಿರಜುದ್ದೌಲನನ್ನು ಸೋಲಿಸಿದ ನಂತರ ಅದರ ಸೂತ್ರಧಾರಿ ರಾಬಟರ್್ ಕ್ಲೈವ್ ಅಲ್ಲಿನ ಬೊಕ್ಕಸದಲ್ಲಿದ್ದ ಇಪ್ಪತ್ತೈದು ಲಕ್ಷ ಪೌಂಡುಗಳಷ್ಟು ಹಣವನ್ನು (ಅಂದಿನ ಲೆಕ್ಕದಲ್ಲಿ!) ಇಂಗ್ಲೆಂಡಿನ ಬೊಕ್ಕಸಕ್ಕೆ ವಗರ್ಾಯಿಸಿದ. ಬೇಡುವ ಸ್ಥಿತಿಯಲ್ಲಿದ್ದ ಇಂಗ್ಲೆಂಡು ಏಕಾಕಿ ಇಷ್ಟೊಂದು ಹಣವನ್ನು ನೋಡಿ ಬಾಯಿ ಕಳಕೊಂಡಿರಬೇಕು. ಅದಾದ ಮೇಲೆ ಈಸ್ಟ್ ಇಂಡಿಯಾ ಕಂಪನಿ ನೂರು ವರ್ಷಗಳ ಕಾಲ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಬಂಗಾಳದ ಅನೇಕ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹಿಸುವ ಅಧಿಕಾರವನ್ನು ಕಂಪನಿ ಸಕರ್ಾರ ಪಡೆದುಕೊಂಡಿತು. 1765ರಿಂದ 1815ರವರೆಗೆ ಕಂಪನಿ ಭಾರತದಿಂದ ಪ್ರತೀವರ್ಷ ಒಂದು ಕೋಟಿ ಎಂಭತ್ತು ಲಕ್ಷ ಪೌಂಡುಗಳಷ್ಟು ಹಣವನ್ನು ತೆರಿಗೆ ಹೇರಿ ಸಂಗ್ರಹಿಸಿಕೊಂಡು ಹೋಗುತ್ತಿತ್ತೆಂದು ವರದಿಗಳು ಹೇಳುತ್ತವೆ. ಹದಿನೆಂಟನೇ ಶತಮಾನದ ಅಂತ್ಯದಲ್ಲಿ ತಮ್ಮಿಂದ ಆಳಲ್ಪಡುತ್ತಿದ್ದ ಶೇಕಡಾ ಅರವತ್ತೈದರಷ್ಟು ಜನ ಅವರ ಮೇಲೆ ಹೇರಲಾದ ಶೇಕಡಾ ಐವತ್ತರಷ್ಟು ಆದಾಯ ತೆರಿಗೆಯನ್ನು ಕಟ್ಟಲಾಗದೇ ತಮ್ಮ ಜಮೀನನ್ನು ಬಿಟ್ಟು ಓಡಿ ಹೋಗಿದ್ದರೆಂದು ಬ್ರಿಟೀಷರು ಕುಪಿತರಾಗಿದ್ದರಂತೆ. ಖ್ಯಾತ ಇತಿಹಾಸ ತಜ್ಞ ವಿಲ್ ಡ್ಯುರಂಟ್ ‘ತೆರಿಗೆ ಕಟ್ಟಲಾಗದವರನ್ನು ಜೈಲಿಗೆ ತಳ್ಳಲಾಗುತ್ತಿತ್ತು, ಬಿಸಿಲಲ್ಲಿ ಒಣಗಿಸಲಾಗುತ್ತಿತ್ತು; ಅನೇಕರು ತಮ್ಮ ಮಕ್ಕಳನ್ನು ಮಾರಿ ಬಂದ ಹಣದಲ್ಲಿ ತೆರಿಗೆ ಕಟ್ಟಿದ ಉಲ್ಲೆಖಗಳಿವೆ. ಮೊದಲಬಾರಿಗೆ ಈಸ್ಟ್ ಇಂಡಿಯಾ ಕಂಪನಿ ಭಾರತದ ಇತಿಹಾಸದಲ್ಲಿ ತನ್ನ ಜೀವನೋಪಾಯವಾಗಿದ್ದ ಜಮೀನಿನಿಂದಲೇ ದೂರವಿರುವ ಜಮೀನು ರಹಿತ ರೈತರನ್ನು ಸೃಷ್ಟಿಸಿತು’ ಎಂದು ನೊಂದುಕೊಂಡಿದ್ದಾರೆ. ಕಂಪನಿ ಸಕರ್ಾರದ ಹೊತ್ತಲ್ಲಿ ಭ್ರಷ್ಟಾಚಾರ ತುದಿ ಮುಟ್ಟಿತ್ತು. ತೆರಿಗೆಯ ಸುಲಿಗೆ ಒಂದೆಡೆಯಾದರೆ ಲಂಚ ಪಡೆಯುವುದು, ದರೋಡೆ ಮಾಡುವುದು ಮತ್ತು ಅಗತ್ಯಬಿದ್ದರೆ ಕೊಲೆಯನ್ನೂ ಮಾಡುತ್ತಿದ್ದರು ಸಕರ್ಾರದ ಪ್ರತಿನಿಧಿಗಳು. ಭಾರತದ ಕುರಿತಂತೆ ಪ್ರಕಟಗೊಂಡ ಆಕ್ಸ್ಫಡರ್್ ಇತಿಹಾಸ ಕೃತಿ ‘ಭಾರತದಲ್ಲಿ ಪ್ರತಿಯೊಬ್ಬರೂ ಮತ್ತು ಪ್ರತಿಯೊಂದೂ ಮಾರಾಟಕ್ಕಿದೆ’ ಎಂದು ಬರೆದಿತ್ತು.

ತೆರಿಗೆ ವ್ಯವಸ್ಥೆ ಮತ್ತು ಭ್ರಷ್ಟಾಚಾರದ ಕುರಿತಂತೆ ಹೇಳಲು ಸಾಕಷ್ಟಿದೆ. ಆದರೆ ಒಂದಂತೂ ಸತ್ಯ. ಅವರು ಹಾಳು ಮಾಡಿಟ್ಟುಹೋಗಿದ್ದನ್ನು ಸರಿ ಪಡಿಸುವ ಅವಕಾಶ ನಮಗೆ ಖಂಡಿತ ಇತ್ತು. ಆದರೆ ನಮ್ಮನ್ನು ಆಳಿದವರು ರಾಬಟರ್್ ಕ್ಲೈವ್ನಿಗಿಂತ ಕೆಟ್ಟದಾಗಿ ನಮ್ಮನ್ನು ಲೂಟಿಗೈದರು. ಅವನಂತೆ ವಿದೇಶದಲ್ಲಿ ಕೂಡಿಟ್ಟರು. ಐಷಾರಾಮಿ ಬದುಕನ್ನು ನಡೆಸಿದರು. ಕೊನೆಗೆ ಭಾರತೀಯರನ್ನು ದಾರಿದ್ರ್ಯಕ್ಕೆ ತಳ್ಳಿ ಅಧಿಕಾರವನ್ನು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಖಾತ್ರಿ ಮಾಡಿ ಹೋದರು.

ಮೊಘಲರಿಂದ ಶುರುವಾದ ಈ ಅವಾಂತರ ಆಧುನಿಕ ಮೊಘಲರವರಿಗೆ ನಡೆದೇ ಬಂತು. ಇವರೆಲ್ಲರೂ ಮಾಡಿದ ಕೊಳಕನ್ನು ತೊಳೆಯುವಾಗ ಒಂದಷ್ಟು ಕಷ್ಟವಾಗೋದು ಸಹಜವೇ. ಸಹಿಸಿಕೊಳ್ಳಬೇಕಷ್ಟೇ. ಆಗ ಮಾತ್ರ ಹಳೆಯ ವೈಭವ ಮರುಕಳಿಸೀತು, ಏನಂತೀರಿ?

Comments are closed.