ವಿಭಾಗಗಳು

ಸುದ್ದಿಪತ್ರ


 

ದಡ್ಡ ಭಾರತೀಯರೆಂಬ ಹೆಡ್ಡ ಮಾನಸಿಕತೆ

ಮದ್ರಾಸ್ ಪ್ರೆಸಿಡೆನ್ಸಿಯ ದಾಖಲೆಗಳು ಹೇಳುವುದನ್ನು ನಂಬುವುದಾದರೆ ವೈದ್ಯಕೀಯ ಶಸ್ತ್ರ ಚಿಕಿತ್ಸೆಯಲ್ಲಿಯೂ ಭಿನ್ನ ಭಿನ್ನ ಜಾತಿಯ ಜನರಿದ್ದರು. ಇನ್ನೂ ಅಚ್ಚರಿಯ ಸಂಗತಿಯೇನು ಗೊತ್ತೇ? ಬ್ರಿಟೀಷರ ಪ್ರಕಾರ ಕ್ಷೌರಿಕರೇ ಶಸ್ತ್ರ ಚಿಕಿತ್ಸೆಯನ್ನು ಮಾಡುವಲ್ಲಿ ನಿಷ್ಣಾತರಾಗಿದ್ದರು!

ಗಾಂಧೀಜಿ ಭಾರತದ ಅಂತಃಸತ್ತ್ವವನ್ನು ಅರಿತಿದ್ದವರು. ಅನೇಕ ಬಾರಿ ಮೇಲ್ನೋಟಕ್ಕೆ ಕಾಣುವ ಸಂಗತಿಗಳಿಗೆ ಪ್ರತಿಕ್ರಿಯಿಸುತ್ತಲೇ ನಮ್ಮ ಆಯಸ್ಸು ಕಳೆದು ಹೋಗುತ್ತದೆ. ಗಾಂಧೀಜಿ ಭಾರತದ ಹೃದಯಕ್ಕೆ ಕಿವಿಯಿಟ್ಟು ಆಲಿಸಿದವರು. ಅದಕ್ಕೇ ಗಾಂಧೀಜಿಯವರನ್ನು ಮಣಿಸಲು ಬ್ರಿಟೀಷರು ಅವರ ಸುತ್ತಮುತ್ತಲಿನವರನ್ನೇ ತೆಕ್ಕೆಗೆ ಸೆಳೆದುಕೊಂಡು ಗಾಂಧೀಜಿಯವರ ಹೋರಾಟವನ್ನು ಮೂಲೆಗುಂಪಾಗಿಸಬೇಕಾಯ್ತು. ಗಾಂಧೀಜಿ ನಿಜಕ್ಕೂ ಬ್ರಿಟೀಷರಿಗೆ ಬಹುದೊಡ್ಡ ಸವಾಲೇ ಆಗಿದ್ದರು. 1931 ರ ಅಕ್ಟೋಬರ್ 20 ರಂದು ದುಂಡುಮೇಜಿನ ಸಭೆಯಲ್ಲಿ ಭಾರತದ ಭವಿಷ್ಯದ ಕುರಿತಂತೆ ಮಾತನಾಡಿದ ಗಾಂಧೀಜಿ ಬಿಳಿಯರಿಗೆ, ಅವರ ಕೃತ್ಯಗಳಿಗೆ ಕೈಗನ್ನಡಿಯಾಗಿ ನಿಂತುಬಿಟ್ಟಿದ್ದರು. ಭಾರತೀಯ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಮತ್ತು ಅದನ್ನು ವಿರೂಪಗೊಳಿಸಿರುವ ಬಿಳಿಯರ ನೀತಿಯ ಕುರಿತಂತೆ ಮಾತಾಡುತ್ತ, ‘ಭಾರತ ಕಳೆದ 50 ಅಥವಾ 100 ವರ್ಷಗಳ ಹಿಂದೆ ಇದ್ದುದಕ್ಕಿಂತ ಇಂದು ಹೆಚ್ಚು ಅನಕ್ಷರಸ್ಥ ದೇಶವಾಗಿದೆ.’ ಎಂದು ಆರೋಪಿಸಿದರಲ್ಲದೇ ಅದಕ್ಕೆ ಪೂರಕವಾಗಿ ಅನೇಕ ಸಂಗತಿಗಳನ್ನು ಉದಾಹರಿಸುತ್ತ ತಾನು ಹೇಳಿದ್ದನ್ನು ಸಮಥರ್ಿಸಿಕೊಳ್ಳುವಲ್ಲಿ ಯಾವ ಅಳುಕೂ ಇಲ್ಲವೆಂದೂ, ಯಾರು ಬೇಕಾದರೂ ಇದನ್ನು ಸವಾಲಾಗಿ ಸ್ವೀಕರಿಸಬಹುದೆಂದೂ ಪಂಥಾಹ್ವಾನ ನೀಡಿದರು.

 

1ಸ್ವಾಮಿ ವಿವೇಕಾನಂದರ ನಂತರ ಯೂರೋಪಿನಲ್ಲಿ ಅತ್ಯಂತ ಪ್ರಭಾವೀ ಭಾರತೀಯರಾಗಿದ್ದವರು ಗಾಂಧೀಜಿಯೇ. ಹೀಗಾಗಿ ಅವರ ಮಾತುಗಳು ಬಲುಬೇಗ ಜನಜನಿತವಾದವು. ಭಾರತೀಯರು ಅನಾಗರೀಕರು ಮತ್ತು ಅನಕ್ಷರಸ್ಥರೆಂಬ ಮಿಶನರಿಗಳ ಗಿಣಿ ಪಾಠವನ್ನು ಈಗ ಸಾಬೀತು ಮಾಡಲು ಗಾಂಧೀಜಿಯನ್ನು ಸುಳ್ಳೆಂದು ಜರಿಯುವವರು ಬೇಕೇ ಬೇಕಿತ್ತು.

ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್ನ ಸ್ಥಾಪಕನೂ, ಢಾಕಾ ವಿಶ್ವವಿದ್ಯಾಲಯದ ಕುಲಪತಿಯೂ ಅಲ್ಲದೇ ಭಾರತದ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಬೇರೆ-ಬೇರೆ ಹುದ್ದೆಯನ್ನು ಅಲಂಕರಿಸಿದ ಸರ್ ಫಿಲಿಪ್ ಹಟರ್ಾಗ್ ಈ ಸವಾಲನ್ನು ಸ್ವೀಕರಿಸಲು ಮುಂದೆ ಬಂದ. ಗಾಂಧೀಜಿಯೊಂದಿಗೆ ವಾಗ್ವಾದಕ್ಕೆ ತೊಡಗಿದ. ಗಾಂಧೀಜಿ ತಾವು ಯಂಗ್ ಇಂಡಿಯಾಕ್ಕೆ ಆಧಾರ ಸಹಿತವಾಗಿ ಬರೆದ ಲೇಖನವನ್ನು ಅವನ ಕೈಲಿಟ್ಟರು. ಅವನಿಗೆ ತೃಪ್ತಿಯಾಗಲಿಲ್ಲ. ಭಾರತೀಯ ಶಿಕ್ಷಣ ಪದ್ಧತಿಯ ಶ್ರೇಷ್ಠತೆಯನ್ನು ಅವನ ಸುಪ್ತ ಪ್ರಜ್ಞೆಯೂ ನಿರಾಕರಿಸಿಬಿಟ್ಟಿತ್ತು. ಬರಿಯ ಹಟರ್ಾಗನಷ್ಟೇ ಅಲ್ಲ ವಿಲಿಯಂ ವಿಲ್ಬರ್ ಫೋಸರ್್, ಮೆಕಾಲೆಯಂತಹ ಅನೇಕರು ಅಂಥದ್ದೇ ಮಾನಸಿಕ ಸ್ಥಿತಿ ಉಳ್ಳವರು. ವಿಲ್ಬರ್ ಫೋಸರ್್ ‘ಭಾರತೀಯರು ಧಾಮರ್ಿಕ ಮೂಢನಂಬಿಕೆಗಳ ಕಬಂಧ ಬಾಹುಗಳಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಇಲ್ಲಿನವರ ನೈತಿಕ ಸಾಮಾಜಿಕ ನಡವಳಿಕೆಗಳು ತೀರಾ ಕೆಳಮಟ್ಟದಲ್ಲಿರುವುದರಿಂದ ಅವರು ಉದ್ಧಾರವಾಗುತ್ತಿಲ್ಲ’ ಎನ್ನುವಾಗಿನ ಅವನ ಧಿಮಾಕು ಹದಗೆಟ್ಟ ಮಾನಸಿಕತೆಯಿಂದ ಹುಟ್ಟಿದ್ದೇ. 1500ನೇ ಇಸ್ವಿಯ ನಂತರ ಅಮೇರಿಕಾವನ್ನು ಆಕ್ರಮಿಸಿಕೊಂಡಮೇಲೆ ಯೂರೋಪಿಯನ್ನರು ಅಲ್ಲಿನ ಮೂಲನಿವಾಸಿಗಳನ್ನು ಕೋಟಿಗಳ ಲೆಕ್ಕದಲ್ಲಿ ಕೊಂದು ಬಿಸಾಡಿದರಲ್ಲ ಅದು ನೈತಿಕತೆಯ ಪರಾಕಾಷ್ಠೆಯೇ ಎಂಬುದನ್ನು ಅವರೆಂದಿಗೂ ಒರೆಗೆ ಹಚ್ಚಿ ನೋಡಲೇ ಇಲ್ಲ. ಬಿಳಿಯರು ಕರಿಯರಿಗಿಂತ ಶ್ರೇಷ್ಠ ಎಂಬ ಏಕೈಕ ನಂಬಿಕೆಯಿಂದಲೇ ಇತರರನ್ನು ಬದುಕಲು ಬಿಡದ ಅವರ ಸಾಮಾಜಿಕ ನಡವಳಿಕೆಯನ್ನು ವಿಲ್ಬರ್ ಫೋಸರ್್ಥರದವರು ಪ್ರಶ್ನಿಸಿಕೊಳ್ಳಹೋಗಲೇ ಇಲ್ಲ. ಇವನಂಥವನೇ ಜೇಮ್ಸ್ ಮಿಲ್ ಕೂಡ. 1817 ರಲ್ಲಿ ಅವನು ಬರೆದ ‘ಹಿಸ್ಟ್ರಿ ಆಫ್ ಬ್ರಿಟೀಷ್ ಇಂಡಿಯಾ’ ಇಂತಹುದ್ದೇ ಅಪದ್ಧಗಳ ಸಂಕಲನ. ‘ಅಸ್ಥಿರತೆ, ಅಪ್ರಾಮಾಣಿಕತೆ, ಅನೈತಿಕತೆ, ಲಂಚಕೋರತನ ಇವು ಹಿಂದೂ-ಮುಸಲ್ಮಾನರ ಸೂಕ್ಷ್ಮಗುಣಗಳಾಗಿವೆ. ಮುಸಲ್ಮಾನರಾದರೋ ಸಂಪತ್ತು ಬಂದರೆ ಸಂತೋಷವಾಗಿರಬಲ್ಲರು. ಹಿಂದುಗಳಾದರೆ ಯಾವಾಗಲೂ ದರಿದ್ರರು, ಬೈರಾಗಿಗಳು. ನಿಜ ಹೇಳಬೇಕೆಂದರೆ ಹಿಂದೂಗಳು ನಪುಂಸಕರು ಹಾಗೂ ಎಲ್ಲ ಬಗೆಯಿಂದಲೂ ಗುಲಾಮರಾಗುವುದಕ್ಕೆ ಯೋಗ್ಯರು’ ಎನ್ನುತ್ತಾನೆ ಮಿಲ್ ಮಹಾಶಯ. ಇವನಂಥವನನ್ನು ಓದಿಕೊಂಡೇ ಭಾರತದ ಕುರಿತು ಅಭಿಪ್ರಾಯ ರೂಪಿಸಿಕೊಂಡ ಕಾಲರ್್ಮಾಕ್ಸರ್್ ‘ಭಾರತೀಯ ಜೀವನವು ಯಾವಾಗಲೂ ಅನಾಗರಿಕ, ಸ್ಥಗಿತ, ಅನೈಸಗರ್ಿಕ ಹಾಗೂ ಋಣಾತ್ಮಕ ಧೋರಣೆಯನ್ನುಳ್ಳದ್ದಾಗಿತ್ತು’ ಎನ್ನುತ್ತಾನೆ.

ಈಗ ಎಲ್ಲವನ್ನೂ ತಾಳೆಹಾಕಿ ನೋಡಿ. ಭಾರತದ ಇತಿಹಾಸ ರಚಿಸಿದವರು ಮಾಕ್ಸರ್್ವಾದಿಗಳು. ಅವನ ಭಾರತದ ಕಲ್ಪನೆ ರೂಪುಗೊಂಡಿದ್ದು ಭಾರತ ಮತ್ತು ಹಿಂದೂ ದ್ವೇಷಿಗಳಿಂದ. ಹೀಗಿರುವಾಗ ಇಲ್ಲಿನ ಇತಿಹಾಸ ರಚನಾಕಾರರು ತಿರುಚಿದ ಇತಿಹಾಸವನ್ನಲ್ಲದೇ ಮತ್ತೇನನ್ನೂ ಉಣಬಡಿಸಿಯಾರು ಹೇಳಿ. ತಮ್ಮ ಸಿದ್ಧಾಂತ ಪ್ರವರ್ತಕ ಮಾಕ್ಸರ್್ನನ್ನು ಸತ್ಯ ಮಾಡಲೆಂದೇ ಇವರೆಲ್ಲ ಭಾರತೀಯವಾದುದನ್ನು ಹಳಿದರು. ಇಲ್ಲಿನ ಪರಂಪರೆಯನ್ನು, ಆಚರಣೆಗಳನ್ನು ಹೀಗಳೆದರು. ನಾವೂ ದಶಕಗಳ ಕಾಲ ಅದನ್ನೇ ಓದುತ್ತ ನಂಬಿದೆವು. ಅದನ್ನೇ ಆಧಾರವಾಗಿರಿಸಿಕೊಂಡು ಹೊಸ-ಹೊಸ ಸಿದ್ಧಾಂತಗಳ ಮಂಡಿಸಿದೆವು! ನಮ್ಮ ಪ್ರಾಚೀನ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಆದದ್ದೂ ಇದೇ!

ಗಾಂಧೀಜಿ ದುಂಡು ಮೇಜಿನ ಪರಿಷತ್ತಿನಲ್ಲಿ ಸವಾಲೆಸೆಯುವ ಬಲು ಮುನ್ನವೇ 1822 ರಲ್ಲಿ ಥಾಮಸ್ ಮನ್ರೋ ದೇಶದ ಬೇರೆ ಬೇರೆ ಭಾಗದ ಕಲೆಕ್ಟರುಗಳಿಗೆ ಪತ್ರ ಬರೆದು ಸ್ಥಳೀಯ ಶಿಕ್ಷಣದ ಕುರಿತಂತೆ ಒಂದಷ್ಟು ಮಾಹಿತಿ ಕೇಳಿದ್ದ. ಈ ಪತ್ರದ ಮೊದಲ ಸಾಲು ಹೇಗಿತ್ತು ಗೊತ್ತೇ? ‘ಇಂಗ್ಲೆಂಡಿನಲ್ಲಿ ಮತ್ತು ಭಾರತದಲ್ಲಿಯೂ ಭಾರತೀಯರ ದಡ್ಡತನದ ಕುರಿತಂತೆ ಮತ್ತು ಅವರಿಗೆ ಜ್ಞಾನ ನೀಡುವ ಕುರಿತಾಗಿ ಸಾಕಷ್ಟು ಚಚರ್ೆಗಳು ನಡೆದಿವೆ’ ಎಂದಿದ್ದ. ಭಾರತೀಯರು ದಡ್ಡರೆಂದು ಅವರು ಮಾನಸಿಕವಾಗಿ ನಿಶ್ಚಯಿಸಿಯಾಗಿತ್ತು. ಇದನ್ನು ಸಾಬೀತು ಪಡಿಸಲೆಂದೇ ಆತ ದಾಖಲೆಗಳನ್ನು ಬಯಸಿದ್ದ. ಇದಕ್ಕೆ ಉತ್ತರವಾಗಿ ಕೆಲವರು ಶ್ರಮವಹಿಸಿ ದಾಖಲೆಗಳನ್ನು ಸಂಗ್ರಹಿಸಿದ್ದರು ಮತ್ತೂ ಕೆಲವರು ಕಾಟಾಚಾರದಿಂದ ಕೆಲವು ಸಾಲು ಗೀಚಿ ಕಳಿಸಿದ್ದರು. ಮತ್ತದೇ ‘ದಡ್ಡ ಭಾರತೀಯರ ಶಿಕ್ಷಣ’ವೆಂಬ ಅಸಡ್ಡೆ. ಬಳ್ಳಾರಿಯ ಕಲೆಕ್ಟರ್ ಎಡಿ ಕಾಂಟ್ಬೆಲ್ ಬರೆದ ಪತ್ರ ಬಹು ಮೂಲ್ಯವಾದುದು. ಆತ ಹೇಳುತ್ತಾನೆ, ‘ಹಿಂದೂಗಳ ಮಕ್ಕಳಿಗೆ ಐದು ತುಂಬಿದಾಗ ಶಾಲೆಗೆ ಕಳುಹಿಸುವುದಕ್ಕೆ ತೊಡಗುತ್ತಾರೆ. ವಿದ್ಯಾಥರ್ಿಯ ಮನೆಗೇ ಮಾಸ್ತರರನ್ನು ಕರೆತರಲಾಗುತ್ತದೆ. ಪ್ರತಿಯೊಬ್ಬರೂ ಗಣಪತಿಯ ಎದುರಿಗೆ ವೃತ್ತಾಕಾರವಾಗಿ ಕುಳಿತುಕೊಳ್ಳುತ್ತಾರಾದರೂ ಕಲಿಕೆ ಶುರುಮಾಡುವ ವಿದ್ಯಾಥರ್ಿಯನ್ನು ಗುರುಗಳೆದುರಿಗೆ ಕೂರಿಸಲಾಗುತ್ತದೆ. ಗಣಪತಿಯ ಪ್ರಾರ್ಥನೆಯ ನಂತರ ಗುರುಗಳು ವಿದ್ಯಾಥರ್ಿಯಿಂದ ಅಕ್ಕಿಯಲ್ಲಿ ಓಂಕಾರ ಬರೆಯಿಸಿ ಶಿಕ್ಷಣ ಆರಂಭಿಸುತ್ತಾರೆ. ಶಾಲೆಯಲ್ಲಿ ಕೆಲವರು 5 ವರ್ಷ ಮಾತ್ರ ಕಲಿಯುತ್ತಾರೆ’ ಹೀಗೆ ಆತ ತನ್ನ ಪಾಲಿನ ವರದಿ ಒಪ್ಪಿಸುತ್ತಾನೆ. ತಮ್ಮ ಶಿಕ್ಷಣದ ಬಗ್ಗೆ ಅಪಾರವಾಗಿ ಕೊಚ್ಚಿಕೊಳ್ಳುವ ಯೂರೋಪಿಯನ್ನರ ಪರಿಸ್ಥಿತಿ ಆಗ ಹೇಗಿತ್ತು ಗೊತ್ತೇ? 1835ರಲ್ಲಿ ಮಕ್ಕಳು ಶಾಲೆ ಕಲಿಯುತ್ತಿದ್ದ ಅವಧಿಯು ಕೇವಲ ಒಂದು ವರ್ಷಕ್ಕ್ಕೆ ಸೀಮಿತವಾಗಿತ್ತು. ಅದು 1851ರಲ್ಲಿ ಎರಡು ವರ್ಷಕ್ಕೆ ಮಾತ್ರವೇ ಏರಿತ್ತು. ಅದೂ ಕೂಡ ಭಾನುವಾರ ಮಾತ್ರ 2 ರಿಂದ 3 ಗಂಟೆಗಳ ಕಾಲ ಶಾಲೆಗೆ ಹೋಗುವವರು! ಅಷ್ಟೇ ಅಲ್ಲ, 1835 ರ ವೇಳೆಗೂ ಇಂಗ್ಲೆಂಡಿನ ಕೆಲವು ಶಾಲೆಗಳಲ್ಲಿ ಬರವಣಿಗೆಯನ್ನು ಕೆಡುಕೆಂದು ಭಾವಿಸಿ ಕೈಬಿಡಲಾಗಿತ್ತು, ಎಂಬುದಂತೂ ಯೂರೋಪಿನ ಶಿಕ್ಷಣ ಪದ್ಧತಿಗೆ ಕೈಗನ್ನಡಿ. ನಮ್ಮಲ್ಲಾದರೋ ಶಿಕ್ಷಣ ಶುರುವಾಗುತ್ತಿದ್ದುದೇ ಓಂಕಾರ ಬರೆಯುವುದರಿಂದ!

ಬಳ್ಳಾರಿಯ ಕಲೆಕ್ಟರ್ ತನ್ನ ಪತ್ರದಲ್ಲಿ ಮುಂದುವರಿಸಿ ಬೆಳಿಗ್ಗೆ 6 ಗಂಟೆಗೆ ಶುರುವಾಗುವ ಶಾಲೆಯ ಕುರಿತಂತೆ ಮಕ್ಕಳು ಬಳಸುವ ಸ್ಲೇಟು, ಬಳಪಗಳ ಕುರಿತಂತೆ ವಿವರಿಸುವುದಲ್ಲದೇ ‘ಅಕ್ಷರಾಭ್ಯಾಸ ಮಾಡಿದ ಮೇಲೆ ವಿದ್ಯಾಥರ್ಿಯು ಕಾಗುಣಿತವನ್ನು ಕಲಿಯುತ್ತಾನೆ. ಆಮೇಲೆ ನಾಮಪದಗಳು. ಬಳಿಕ ಲೆಕ್ಕಪಾಠ. ಆಮೇಲೆ ಮಗ್ಗಿ. ಅನಂತರ ಸುಲಭವಾಗಿ ಕೂಡುವ, ಕಳೆಯುವ, ಗುಣಾಕಾರ, ಭಾಗಾಕಾರ ಮತ್ತು ಅಳತೆ ಪ್ರಮಾಣಗಳನ್ನು ಕಲಿಸಲಾಗುತ್ತದೆ. ದಿನಕ್ಕೊಮ್ಮೆ ಎದ್ದು ನಿಂತು ಸಾಲಾಗಿ ಕಲಿತ ಎಲ್ಲವನ್ನೂ ಸಮರ್ಪಕವಾಗಿ ಒಪ್ಪಿಸಲೇಬೇಕಾಗುತ್ತದೆ’ ಎನ್ನುತ್ತಾನೆ. ಅಲ್ಲಿ ಕಲಿಸುತ್ತಿದ್ದ ವ್ಯಾಕರಣ ಸಂಬಂಧಿ, ಧರ್ಮ ಸಂಬಂಧಿ ಕೃತಿಗಳ ಉಲ್ಲೇಖ ಮಾಡುವ ಆತ ಸ್ವತಃ ಇಂಗ್ಲೆಂಡಿಗೊಂದು ಸಲಹೆ ಕೊಡುತ್ತಾನೆ ‘ಹೆಚ್ಚು ಜಾಣರಾದವರು ಕಡಿಮೆ ಜಾಣರಾದವರಿಗೆ ಕಲಿಸುವುದರಿಂದ ಅವರ ಜ್ಞಾನವೂ ಏಕಕಾಲಕ್ಕೆ ಹೆಚ್ಚಾಗುತ್ತದೆ. ಇದು ಮೆಚ್ಚತಕ್ಕದ್ದು. ಇಂಗ್ಲೆಂಡಿನಲ್ಲಿಯೂ ನಾವಿದನ್ನು ಅನುಸರಿಸಬಹುದು’.

ಗುಂಟೂರಿನ ಕಲೆಕ್ಟರ್ ಜೆ.ಸಿ.ವಿಶ್ ವಿದ್ಯಾಥರ್ಿಗಳು ಶಾಲೆಗೆ ಹೋಗುವ ಸಮಯ ಬರೆದಿದ್ದಾರೆ. ಅವರ ಪ್ರಕಾರ ‘ಸಾಮಾನ್ಯವಾಗಿ ವಿದ್ಯಾಥರ್ಿಗಳು ಬೆಳಗ್ಗೆ 6 ಗಂಟೆಗೆ ಶಾಲೆಗೆ ಬರುತ್ತಾರೆ. ಹಾಗೆಯೇ ಬೆಳಗ್ಗೆ 9 ಗಂಟೆಯವರೆಗೆ ಶಾಲೆಯಲ್ಲಿದ್ದು ಉಪಾಹಾರಕ್ಕೆ ಮನೆಗೆ ಹೋಗುತ್ತಾರೆ. ಮತ್ತೆ 11 ಗಂಟೆಗೆ ಮರಳಿ ಶಾಲೆಗೆ ಬರುತ್ತಾರೆ. ಮಧ್ಯಾಹ್ನ 3 ರವರೆಗೆ ಶಾಲೆಯಲ್ಲಿದ್ದು ಊಟಕ್ಕೆ ಹೋಗುತ್ತಾರೆ. ಅನಂತರ ಸಂಜೆ ನಾಲ್ಕರಿಂದ ಏಳರವರೆಗೆ ಮತ್ತೆ ಶಾಲೆಯಲ್ಲಿರುತ್ತಾರೆ. ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆಯ ವೇಳೆಗೆ ಓದುತ್ತಿರುತ್ತಾರಾದರೆ, ಮಧ್ಯಾಹ್ನದ ವೇಳೆ ಬರವಣಿಗೆಯಲ್ಲಿ ತೊಡಗುತ್ತಾರೆ’ ಬಲು ವೈಜ್ಞಾನಿಕವಾದ ಮಾದರಿ ಇದು. ಇಂಗ್ಲೆಂಡು ಆಗಿನ್ನೂ ವಿಜ್ಞಾನ ಮತ್ತು ಬೈಬಲ್ಲುಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಹೆಣಗಾಡುತ್ತಿತ್ತು.

ಪ್ರಾಥಮಿಕ, ಪ್ರೌಢಶಾಲೆಗಳಷ್ಟೇ ಅಲ್ಲ. ವೇದಾಂತ, ಕಾನೂನು, ಜ್ಯೋತಿಷ್ಯ ಮೊದಲಾದ ಉನ್ನತ ವಿದ್ಯೆ ಕಲಿಸುವ ಖಾಸಗಿ ವಿದ್ಯಾಲಯಗಳು ಸುಮಾರು 171 ಕಡೆಗಳಲ್ಲಿ ಗುಂಟೂರು ಜಿಲ್ಲೆಯಲ್ಲಿಯೇ ಇತ್ತೆಂದು ಅವನ ವರದಿ. ಸ್ಥಿತಿವಂತ ಪೋಷಕರು ತಾವೇ ಹಣಕೊಟ್ಟು ಮಕ್ಕಳನ್ನು ಅಧ್ಯಯನಕ್ಕೆ ಕಳಿಸಿದರೆ, ಬಡ ಪೋಷಕರ ಮಕ್ಕಳಿಗೆ ಆ ಹಳ್ಳಿಯೇ ಈ ಖರ್ಚನ್ನು ನಿಭಾಯಿಸುತ್ತಿತ್ತು. ಇದು ಶಿಕ್ಷಣಕ್ಕೆ ಗ್ರಾಮ-ಸಮಾಜಗಳು ಕೊಡುತ್ತಿದ್ದ ಮಹತ್ವ. ವಿದ್ಯಾಥರ್ಿಗಳು ಇನ್ನೂ ಆಳವಾಗಿ ಅಧ್ಯಯನ ಮಾಡಬೇಕೆಂದು ಬಯಸಿದರೆ ವಾರಣಾಸಿಗೋ, ನವದ್ವೀಪಕ್ಕೋ ಹೋಗಿ ಅಧ್ಯಯನ ಮಾಡುತ್ತಾರೆಂದು ವಿಶ್ ಉಲ್ಲೇಖಿಸುತ್ತಾನೆ.

ಈ ಎಲ್ಲಾ ದಾಖಲೆಗಳು ಅನೇಕ ದಶಕಗಳ ನಮ್ಮ ನಂಬಿಕೆಗೆ ಕೊಡಲಿಯ ಆಘಾತವೇ ಸರಿ. ಬ್ರಿಟಿಷ್ ಕಲೆಕ್ಟರುಗಳೇ ಕೊಡುವ ಇನ್ನೊಂದಷ್ಟು ಮಾಹಿತಿಗಳಂತೂ ಅನೇಕರ ನಿದ್ದೆ ಕೆಡಿಸುತ್ತವೆ. ಅನುಮಾನವೇ ಇಲ್ಲ.ಸಾಧಾರಣವಾಗಿ ಭಾರತದಲ್ಲಿ ಶಿಕ್ಷಣವೆಂದರೆ ಉನ್ನತವರ್ಗದವರ ಸ್ವತ್ತೆಂದು ನಾವೆಲ್ಲ ಭಾವಿಸಿಕೊಂಡಿದ್ದೇವೆ. ಹಿಂದೂಗಳ ವಿಷಯದಲ್ಲಂತೂ ಅದು ಬ್ರಾಹ್ಮಣರಿಗೆ ಮಾತ್ರ ಸಂಬಂಧಿಸಿದ್ದೆಂದು ನಮ್ಮೆಲ್ಲರ ಒಕ್ಕೊರಲ ಅಭಿಮತ. ಆದರೆ 1822-25 ರ ನಡುವಿನ ಅವಧಿಯ ದಾಖಲೆಗಳು ಬೇರೆಯದ್ದೇ ಕಥೆ ಹೇಳುತ್ತವೆ. ‘ತಮಿಳು ನಾಡಿನಲ್ಲಿ ಬ್ರಾಹ್ಮಣ ವಿದ್ಯಾವಂತರ ಸಂಖ್ಯೆ ದಕ್ಷಿಣ ಆಕರ್ಾಟಿನಲ್ಲಿ ಕೇವಲ ಶೇಕಡಾ 13 ರಷ್ಟಿದ್ದರೆ, ಮದ್ರಾಸಿನಲ್ಲಿ ಅದು ಶೇಕಡಾ 23 ರಷ್ಟಿತ್ತು. ಶೂದ್ರರು ಮತ್ತು ಇತರ ಜಾತಿಗಳವರ ಶಿಕ್ಷಣ ಪ್ರಮಾಣ ದಕ್ಷಿಣ ಆಕರ್ಾಟಿನಲ್ಲಿ ಪ್ರತಿಶತ 84 ರಷ್ಟಿದ್ದರೆ, ತಿರುವನ್ವೇಲಿಯಲ್ಲಿ ಪ್ರತಿಶತ 70 ರಷ್ಟಿತ್ತು’ ಯಾವುದೋ ಒಂದು ರಾಜ್ಯವೆಂದು ಭಾವಿಸಬೇಡಿ. ಕೇರಳದ ಮಲಬಾರಿನಲ್ಲಿ ಶೇಕಡಾ 20 ರಷ್ಟು ಬ್ರಾಹ್ಮಣ ವಿದ್ಯಾಥರ್ಿಗಳಾಗಿದ್ದರೆ ಶೂದ್ರ ಮತ್ತಿತರ ವಿದ್ಯಾಥರ್ಿಗಳ ಸಂಖ್ಯೆ ಶೇಕಡಾ 54 ರಷ್ಟಿತ್ತು! ಇನ್ನು ನಮ್ಮದೇ ಬಳ್ಳಾರಿಗೆ ಬಂದರೆ ಬ್ರಾಹ್ಮಣ ಮತ್ತು ವೈಶ್ಯ ವಿದ್ಯಾಥರ್ಿಗಳ ಪ್ರಮಾಣ ಸುಮಾರು ಶೇಕಡಾ 33 ರಷ್ಟಿದ್ದರೆ ಶೂದ್ರರು ಮತ್ತು ಇತರೆ ಜಾತಿಗಳ ವಿದ್ಯಾಥರ್ಿಗಳ ಸಂಖ್ಯೆ 63%ದಷ್ಟು! ಆಂಧ್ರ-ಒರಿಸ್ಸಾಗಳಲ್ಲೂ ಇದೇ ಸ್ಥಿತಿಯಿರುವುದನ್ನು ಧರ್ಮಪಾಲ್ಜಿ ಲಭ್ಯ ದಾಖಲೆಗಳ ಮೂಲಕ ತಮ್ಮ ಕೃತಿಯಲ್ಲಿ ಸ್ಪಷ್ಟವಾಗಿ ನಮೂದಿಸುತ್ತಾರೆ.

ಹಾಗಂತ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಮಾತ್ರ ಹೀಗಲ್ಲ. ಉನ್ನತ ಶಿಕ್ಷಣದಲ್ಲೂ ಬ್ರಾಹ್ಮಣರು ಕಡಿಮೆ ಸಂಖ್ಯೆಯಲ್ಲಿಯೇ ಇದ್ದರು. ಧರ್ಮಪಾಲರ ಪ್ರಕಾರ ಉನ್ನತ ಶಿಕ್ಷಣ ವೃತ್ತಿ ಪರತೆಯನ್ನು ಬಯಸುತ್ತಿದ್ದುದರಿಂದ ಬ್ರಾಹ್ಮಣರು ಅತ್ತ ತಲೆ ಹಾಕುವುದು ಕಡಿಮೆ ಮಾಡಿರಬೇಕು! ಮಲಬಾರಿನ ದಾಖಲೆಗಳ ಪ್ರಕಾರ 194 ಜನ ವೈದ್ಯಕೀಯ ವಿದ್ಯಾಥರ್ಿಗಳಲ್ಲಿ 31 ಜನ ಮಾತ್ರ ಬ್ರಾಹ್ಮಣರು. ಒಟ್ಟಾರೆ ಮದ್ರಾಸ್ ಪ್ರೆಸಿಡೆನ್ಸಿಯ ದಾಖಲೆಗಳು ಹೇಳುವುದನ್ನು ನಂಬುವುದಾದರೆ ವೈದ್ಯಕೀಯ ಶಸ್ತ್ರ ಚಿಕಿತ್ಸೆಯಲ್ಲಿಯೂ ಭಿನ್ನ ಭಿನ್ನ ಜಾತಿಯ ಜನರಿದ್ದರು. ಇನ್ನೂ ಅಚ್ಚರಿಯ ಸಂಗತಿಯೇನು ಗೊತ್ತೇ? ಬ್ರಿಟೀಷರ ಪ್ರಕಾರ ಕ್ಷೌರಿಕರೇ ಶಸ್ತ್ರ ಚಿಕಿತ್ಸೆಯನ್ನು ಮಾಡುವಲ್ಲಿ ನಿಷ್ಣಾತರಾಗಿದ್ದರು!

ಅಬ್ಬಾ! ಇವೆಲ್ಲವನ್ನು ಈಗ ಓದುತ್ತಿದ್ದರೆ ಯಾವುದು ಸತ್ಯ ಯಾವುದು ಸುಳ್ಳು ಎಂದು ವಿಂಗಡಿಸಲೂ ಸಾಧ್ಯವಿಲ್ಲದಷ್ಟು ದೂರಕ್ಕೆ ಬಂದಿದ್ದೇವೆ ಎನಿಸುತ್ತಲ್ಲವೇ? ಅಷ್ಟು ಆಳಕ್ಕೆ ಇಳಿದು ಎತ್ತರಕ್ಕೆ ಬೆಳೆದಿದ್ದ ಭಾರತೀಯ ಶಿಕ್ಷಣ ಈ ಹಂತಕ್ಕೆ ಬಂದದ್ದೇಕೆ? ಪ್ರಶ್ನೆಯಿದೆ. ಗಂಭೀರವಾಗಿ ಕಾಡುವ ಪ್ರಶ್ನೆಯಿದೆ. ಉತ್ತರವೂ ಬ್ರಿಟೀಷರ ದಾಖಲೆಗಳಲ್ಲಿಯೇ ಹುದುಗಿದೆ! ಸತ್ಯ ಅರಸುವ ಮನಸ್ಥಿತಿಯಿಂದ ಕೂತರೆ ಅದು ಖಂಡಿತ ಕಣ್ಣಿಗೆ ರಾಚುತ್ತದೆ

Comments are closed.