ವಿಭಾಗಗಳು

ಸುದ್ದಿಪತ್ರ

ದೇವರ ಮಗನಾದರೂ ಸಾವು ಭಯಾನಕವೇ…!

ತನ್ನ ಕತ್ತಿಗೆ ಮೋಸದಿಂದ ಬಲಿಯಾಗುವ ಮುನ್ನ ಕೊನೆಯ ಹಸಿ ರಕ್ತವನ್ನು ಸುರಿಸಿದ ಮಸಾಗ ವೀರರು ಅವನೆದುರಿಗೆ ರುದ್ರ ನರ್ತನ ಮಾಡುತ್ತಿದ್ದರು. ಈತನ ಕ್ರೌರ್ಯಕ್ಕೆ, ಸೈನಿಕರ ಕಾಮುಕತೆಗೆ ಬಲಿಯಾಗಲು ಒಪ್ಪದೇ ತಮ್ಮ ತಾವು ಚಿತೆಗೆ ಅಪರ್ಿಸಿಕೊಂಡ ಭಾರತದ ಸ್ತ್ರೀ ರತ್ನಗಳು ಅವನನ್ನು ಅಣಕಿಸುವಂತಿತ್ತು. ಗಂಗೆಯವರೆಗೂ ಸಾಗಿ ಇಡಿಯ ಭರತಖಂಡವನ್ನು ಪಾದದ ಬುಡಕ್ಕೆ ಕೊಡವಿಕೊಳ್ಳುವ ಅವನ ಬಯಕೆಯ ದಾವಾನಲಕ್ಕೆ ತಣ್ಣೀರೆರೆಚಿದ ಭಾರತದ ಸಾರ್ವಭೌಮ ಶಕ್ತಿ ಅವನೆದುರು ಉರಿಗಣ್ಣು ಮಾಡಿಕೊಂಡು ನಿಂತರೆ, ತನ್ನ ತಾನು ಗೆದ್ದು ಜಗತ್ತನ್ನು ಕಡೆಗಣ್ಣಿಂದಲೂ ಬಯಸದ ಇಲ್ಲಿನ ಸಂತಶಕ್ತಿ ಅವನೆದುರು ಪ್ರೇಮದ ಭಾವದಿಂದ ನಿಂತಿತ್ತು. ಬರಸೆಳೆದು ಅಪ್ಪಲು ಸಿದ್ಧವಾಗಿತ್ತು.

The_Death_of_Alexander_the_Great_after_the_painting_by_Karl_von_Piloty_(1886)

‘ಭಾರತಕ್ಕೆ ಹೋಗುವಾಗ ದೇವಳಕ್ಕೆ ಹೋಗುವಂತೆ ತಲೆ ತಗ್ಗಿಸಿಕೊಂಡು ಹೋಗು; ಎದೆಯೆತ್ತಿ ಕತ್ತಿ ಹಿಡಿದುಕೊಂಡಲ್ಲ’ ಎಂದಿದ್ದರಂತೆ ಅಲೆಗ್ಸಾಂಡರನ ಗುರು ಅರಿಸ್ಟಾಟಲ್. ಹೌದು. ಅದು ಬಾಯಿಂದ ಬಾಯಿಗೆ ಹರಡಿರುವ ಆಧಾರ ರಹಿತ ಮಾತೇ ಇರಬಹುದೆಂದು ಭಾವಿಸಿದರೂ ಕಾಲಕ್ರಮದಲ್ಲಿ ಆ ಮಾತು ಸತ್ಯವಾಯಿತು. ಭಾರತಕ್ಕೆ ಬರುವಾಗ ‘ದೇವರ ಮಗ’ನಾಗಿ ಅಹಂಕಾರದಿಂದ ಮೆರೆದು ಬಂದ ಅಲೆಗ್ಸಾಂಡರ್ ಮರಳಿ ಹೋಗುವಾಗ ದಯನೀಯ ಸ್ಥಿತಿಯಲ್ಲಿ ಹೊರಟಿದ್ದ. ಆರಂಭದ ದಿನಗಳಲ್ಲಿಯೇ ಆತ ಭೇಟಿ ಮಾಡಿದ ಸಂತನೊಬ್ಬ ಈ ಹಿನ್ನೆಲೆಯ ಸಂದೇಶ ಅವನಿಗೆ ಕೊಟ್ಟಾಗಿತ್ತು.
ಅವನೆದುರಿಗೆ ನಿಂತ ಸಂತ ಹೆಜ್ಜೆಯ ಮೇಲೆ ಹೆಜ್ಜೆ ಬಡಿಯುತ್ತಾ ನಿಂತಿದ್ದನಂತೆ. ಇದರರ್ಥವೇನೆಂದು ಚಕ್ರವತರ್ಿ ಕೇಳಿದ್ದಕ್ಕೆ “ಅಂತಿಮವಾಗಿ ಪ್ರತಿಯೊಬ್ಬರೂ ತಾವು ನಿಂತಷ್ಟೇ ಭಾಗದ ಒಡೆಯರು. ಇಡಿಯ ಜಗತ್ತನ್ನೇ ಗೆದ್ದರೂ ಇದಕ್ಕಿಂತ ಹೆಚ್ಚು ಭಾಗದಲ್ಲಿ ನೀನು ನಿಲ್ಲಲಾರೆ’ ಎಂದು ಸೂಕ್ಷ್ಮವಾಗಿ ಹೇಳಿದ್ದ. ಅಲೆಗ್ಸಾಂಡರನ ಸೂಕ್ಷ್ಮ ಮನಸ್ಸು ಇದನ್ನು ಗ್ರಹಿಸಿತ್ತಾದರೂ ಒಪ್ಪುವುದಕ್ಕೆ ಸಿದ್ಧವಾಗಿರಲಿಲ್ಲ. ಆದರೆ ಸತತ ಸೋಲು ಅವನನ್ನು ಧೈರ್ಯಗೆಡಿಸಿತ್ತು. ಮುಂದೆ ಎದುರಿಸಬೇಕಿದ್ದ ಮಹಾಸೇನೆಯನ್ನು ನೆನೆದೇ ಆತ ನಿದ್ದೆಗೆಟ್ಟಿದ್ದ. ಕೊನೆಗೂ ರಿಕ್ತ ಹಸ್ತನಾಗಿ ತನ್ನ ಸೇನೆಯೊಂದಿಗೆ ಮರಳಿದ. ಭಾರತ ಅವನನ್ನು ಬಲುವಾಗಿ ಕಾಡುತ್ತಿತ್ತು. ಒಂದೆಡೆ ಜಗತ್ತನ್ನು ಅಂಕೆಯಲ್ಲಿರಿಸಿಕೊಳ್ಳುವ ಮಹತ್ವಾಕಾಂಕ್ಷೆ. ಮತ್ತೊಂದೆಡೆ ಸಂತತ್ವ ಧಾರಣೆ ಮಾಡಿ ಮುಕ್ತನಾಗುವ ತವಕ. ಇವೆರಡರ ನಡುವೆ ಅವನು ಸಾಕಷ್ಟು ತೊಳಲಾಡಿದ್ದಿರಬೇಕು. ಎಡ್ವಡರ್್ ಜೇಮ್ಸ್ ಚಿನಾಕ್ ತಮ್ಮ ಕೃತಿಯಲ್ಲಿ ಈ ಕುರಿತಂತೆ ಗಂಭೀರ ಚಚರ್ೆ ನಡೆಸಿದ್ದಾರಲ್ಲದೇ ಜಗವ ಗೆಲ್ಲುವ ಹುಚ್ಚು ಅವನಿಂದ ಕೊನೆಗೂ ದೂರವೇ ಆಗಲಿಲ್ಲವೆಂದು ಷರಾ ಬರೆಯುತ್ತಾರೆ.
ಭಾರತ ಅವನನ್ನು ಬದುಕಿನ ಕೊನೆಯ ಕ್ಷಣದವರೆಗೂ ಕಾಡಿತು. ತಕ್ಷಶಿಲಾದಲ್ಲಿ ತಮ್ಮ ಗುರು ದಂಡಮೀಶನನ್ನು ಭೇಟಿ ಮಾಡಿಸಿದ ‘ಕ್ಯಾಲನಸ್’ (ಆತನ ಮೂಲ ಹೆಸರು ಗೊತ್ತಿಲ್ಲ. ಎಲ್ಲರನ್ನೂ ಮಿತ್ರ-ಗ್ರೀಕರ ಭಾಷೆಯಲ್ಲಿ ಕ್ಯಾಲೋ- ಎಂದೇ ಸಂಬೋಧಿಸುತ್ತಿದ್ದರಿಂದ ಹಾಗೆ ಕರೆದಿರಬಹುದೆನ್ನತ್ತಾರೆ) ಈ ಕಾಡುವಿಕೆಯ ಮಹತ್ವದ ಕೊಂಡಿ. ದಂಡಮೀಶ ಗ್ರೀಕ್ರೊಂದಿಗೆ ಬರಲೊಪ್ಪದಿದ್ದಾಗ ಅಲೆಗ್ಸಾಂಡರ್ ಈತನನ್ನೇ ತನ್ನೊಡನೆ ಬರುವಂತೆ ಕೇಳಿಕೊಂಡಿದ್ದ. ಎಂದಿನಂತೆ ಬಹುಮೂಲ್ಯ ಉಡುಗೊರೆಗಳ ಆಮಿಷವನ್ನೂ ಒಡ್ಡಿದ್ದ. ನಕ್ಕ ಕ್ಯಾಲನಸ್, ನನಗೇ ಇಚ್ಛೆಯಿಲ್ಲವಾದಲ್ಲಿ ನೀನು ಒತ್ತಾಯದಿಂದ ಕರೆದೊಯ್ದೂ ಉಪಯೋಗವಿಲ್ಲವೆಂದು ತಿಳಿ ಹೇಳಿದ. ಆದರೆ ಅಲೆಗ್ಸಾಂಡರ್ ತನ್ನ ಮನಸ್ಸನ್ನು ತೆರೆದಿಟ್ಟು ಕ್ಯಾಲನಸ್ನ ಶಿಷ್ಯತ್ವ ಸ್ವೀಕರಿಸಿದ ಮೇಲೆ ಆತನೊಂದಿಗೆ ಹೊರಡಲು ಸಿದ್ಧನಾಗಿದ್ದ. ಆಗ ಆತನಿಗೆ ಎಪ್ಪತ್ತರ ಆಜೂಬಾಜು ಇರಬೇಕು. (ಈ ಕುರಿತಂತೆ ಪ್ಲುಟಾಕರ್್, ಡಿಯೋಡರಸ್, ನ್ಯರ್ಚಸ್ರಾದಿಯಾಗಿ ಎಲ್ಲರೂ ಸಾಕಷ್ಟು ವಿವರವಾದ ಮಾಹಿತಿಗಳನ್ನು ಕೊಟ್ಟಿದ್ದಾರೆ) ಪಷರ್ಿಯಾ ದಾಟುತ್ತಿದ್ದಂತೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಕ್ಯಾಲನಸ್ನ ಆರೋಗ್ಯ ಹದಗೆಟ್ಟಿತು. ಈ ಹಿಂದೆ ಆತನಿಗೆ ಆರೋಗ್ಯ ಕೆಟ್ಟ ಉದಾಹರಣೆಯೇ ಇರಲಿಲ್ಲವೆಂದು ಸ್ಟ್ರಾಬೋ ಹೇಳುತ್ತಾರೆ. ಕ್ಯಾಲನಸ್ನಿಗೆ ಈ ಭರತ ಭೂಮಿಯನ್ನು ಬಿಟ್ಟು ಬಂದುದು ಒಗ್ಗಲಿಲ್ಲವೆನಿಸುತ್ತದೆ. ಆತ ಶಿಷ್ಯ ಅಲೆಗ್ಸಾಂಡರನ ಬಳಿೆ ಹೋಗಿ ಅನಾರೋಗ್ಯಪೀಡಿತ ದೇಹವನ್ನು ತುಂಬ ಕಾಲ ಉಳಿಸಿಕೊಳ್ಳುವ ಇಚ್ಛೆ ತನಗಿಲ್ಲವೆಂದೂ ಅದನ್ನು ಅಗ್ನಿಗೆ ಆಹುತಿ ಮಾಡಿಬಿಡಬೇಕೆಂದೂ ತನ್ನಿಚ್ಛೆಯನ್ನು ತೋಡಿಕೊಂಡ. ಅಲೆಗ್ಸಾಂಡರ್ಗೆ ಇದು ಹೊಸ ವಿಷಯ. ಅನಾರೋಗ್ಯದಿಂದ ತನ್ನ ಬದುಕಿನ ಶೈಲಿ ಬದಲಾಗುವುದನ್ನು ಒಪ್ಪದೇ ಬದುಕನ್ನೇ ಕೊನೆಗೊಳಿಸಿಕೊಳ್ಳುವ ಈ ಮಾರ್ಗವನ್ನು ಆತ ಕೇಳಿಯೇ ಇರಲಿಲ್ಲ. ಗುರುಗಳನ್ನು ಪರಿಪರಿಯಾಗಿ ಕೇಳಿಕೊಂಡ. ಉಳಿಸಿಕೊಳ್ಳುವ ಎಲ್ಲ ಸಾಹಸಗಳನ್ನೂ ಮಾಡಿದ. ಇನ್ನು ಸಾಧ್ಯವಿಲ್ಲವೆನಿಸಿದಾಗ ಚಿತೆಯನ್ನು ನಿಮರ್ಿಸಲು ಸೇವಕರಿಗೆ ಆಜ್ಞಾಪಿಸಿದ.
ಇತ್ತ ಕ್ಯಾಲನಸ್ ತನ್ನ ನಿರ್ಗಮನದ ತಯಾರಿ ಮಾಡಿಕೊಂಡ. ಅಲೆಗ್ಸಾಂಡರ್ ತನಗೆಂದೇ ಕೊಟ್ಟ ಅತ್ಯಮೂಲ್ಯ ಉಡುಗೊರೆಗಳನ್ನು ಹಿಂದು-ಮುಂದು ನೋಡದೇ ಹಂಚಿಬಿಟ್ಟ. ತನ್ನ ಬಳಿ ಇದ್ದ ವಿಶೇಷ ಕುದುರೆಯನ್ನು ತನ್ನ ಗ್ರೀಕ್ ಶಿಷ್ಯನೊಬ್ಬನಿಗೆ ಕೊಟ್ಟು ಕೈ ತೊಳೆದುಕೊಂಡ. ಚಿತೆ ಏರುವ ಮುನ್ನ ಮೈಮೇಲಿದ್ದುದು ಒಂದು ಹೂವಿನ ಹಾರ ಮಾತ್ರ!
ಚಿತೆಯೇರಲು ಹೊರಟ ಕ್ಯಾಲನಸ್ನ ಮೆರವಣಿಗೆ ಬಲು ಜೋರಾಗಿತ್ತು. ಮುಂದೆ ಕುದುರೆಗಳು ಅದರ ಹಿಂದೆ ಜನ. ಶಸ್ತ್ರ ಸಜ್ಜಿತರಾದ ಸೈನಿಕರೂ ಕೂಡ. ರಾಜೋಚಿತ ಮಯರ್ಾದೆಗೆ ಬೇಕಾದ ಬಟ್ಟೆ, ವೈಭವದ ಆಭರಣ ಎಲ್ಲವನ್ನೂ ಕ್ಯಾಲನಸ್ನ ಎದುರಿಗಿಡಲಾಗಿತ್ತು. ಅಲಂಕೃತ ಕುದುರೆಯೊಂದು ಆತನನ್ನು ಹೊರಲು ಸಿದ್ಧವಾಗಿತ್ತು. ಆದರೆ ಆತ ಅಕ್ಷರಶಃ ಬೈರಾಗಿಯಾಗಿ ಹೊರಟ. ಕುದುರೆಯೇರಲಾಗಲಿಲ್ಲ, ಎಲ್ಲರೊಡನೆ ಹೆಜ್ಜೆ ಹಾಕಿದ. ಉಚ್ಚ ಕಂಠದಲ್ಲಿ ಮಂತ್ರಗಳನ್ನು ಘೋಷಿಸಲಾರಂಭಿಸಿದ. ಮರಣ ಕಾಲದ ಮಂತ್ರಗಳಂತೂ ಅಲ್ಲೊಂದು ಭಯಾನಕ ವಾತಾವರಣ ನಿಮರ್ಿಸಿಬಿಟ್ಟಿದ್ದವು. ಕುತೂಹಲ ಮಿಶ್ರಿತ ಭಯದಿಂದ ಎವೆಯಿಕ್ಕದೇ ಎಲ್ಲರೂ ನೋಡುತ್ತಿರುವಾಗಲೇ ಕ್ಯಾಲನಸ್ ಚಿತೆಯ ಮೇಲೆ ಮಲಗಿಕೊಂಡ. ಮನದಲ್ಲಿ ಅಳುಕು, ಆತಂಕ ಯಾವುದೂ ಇರಲಿಲ್ಲ. ಅಲೆಗ್ಸಾಂಡರ್ ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದನೋ ಇಲ್ಲವೋ ಎಂಬುದಕ್ಕೆ ಇತಿಹಾಸಕಾರರ ಭಿನ್ನ ಮತಗಳಿವೆ. ಆದರೆ ಚಿತೆಯೇರುವ ಮುನ್ನ ಕ್ಯಾಲನಸ್ ನಾವಿಬ್ಬರೂ ಬ್ಯಾಬಿಲೋನ್ನಲ್ಲಿ ಭೇಟಿಯಾಗೋಣ ಎಂದಿದ್ದನ್ನಂತೂ ಅನೇಕ ಇತಿಹಾಸಕಾರರು ಒಪ್ಪುತ್ತಾರೆ. ಆ ವೇಳೆಗೆ ಅತ್ತ ಹೋಗುವ ಆಲೋಚನೆಯೂ ಅಲೆಗ್ಸಾಂಡರನಿಗಿರಲಿಲ್ಲ. ಮುಂದೆ ಆತ ಅಲ್ಲಿಯೇ ಪ್ರಾಣ ಬಿಟ್ಟ! ಇದು ಅಲೆಗ್ಸಾಂಡರನಿಗೆ ಸಿಕ್ಕ ಸಾವಿನ ಮೊದಲ ಮುನ್ಸೂಚನೆ ಎನ್ನುತ್ತಾರೆ ಅನೇಕರು!
ಪ್ರಶಾಂತವಾಗಿ ಮಲಗಿದ್ದ ಜೀವಂತ ಕ್ಯಾಲನಸ್ನ ಚಿತೆಗೆ ಸಾಯೋಜಿತರಾಗಿದ್ದವರು ಬೆಂಕಿ ಹಚ್ಚಿದರು. ನ್ಯರ್ಚಸ್ ಪ್ರಕಾರ ಆಗ ರಣಕಹಳೆಗಳು ಮೊಳಗಿದವಂತೆ. ಸೈನಿಕರು ಯುದ್ಧೋನ್ಮಾದರ ಘೋಷಣೆಗಳನ್ನು ಕೂಗಿದರಂತೆ. ಆನೆಗಳೂ ಯುದ್ಧ ಸನ್ನದ್ಧವೇನೋ ಎಂಬಂತೆ ಘೀಳಿಟ್ಟವಂತೆ. ಇವೆಲ್ಲವೂ ಅಲೆಗ್ಸಾಂಡರನ ಆಣತಿಯ ಮೇರೆಗೇ ನಡೆದದ್ದು. ದೇಹ ಭಾವನೆಯನ್ನೇ ಬಿಟ್ಟ ವೀರನೊಬ್ಬನ ಬೀಳ್ಕೊಡುಗೆ ಇದಕ್ಕಿಂತ ರೋಚಕವಾಗಿರುವುದು ಸಾಧ್ಯವೇ ಇಲ್ಲ!
ಬೆಂಕಿಯ ಕೆನ್ನಾಲೆಗಳು ಕ್ಯಾಲನಸ್ನ ದೇಹವನ್ನೇ ಆವರಿಸಿಕೊಳ್ಳುತ್ತಿದ್ದರೂ ಆತ ಒಂದಿನಿತೂ ಮಿಸುಕಾಡಲಿಲ್ಲ. ದೇಹ ನಿಶ್ಚಲವಾದ ಮರದ ಕೊರಡಿನಂತೆ ಬೆಂಕಿಗೆ ಅಪರ್ಿತವಾಯ್ತು. ಮಾನವ ತನ್ನ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಂಡರೆ ದೇಹ ನಿಜರ್ೀವ ತುಂಡೆಂಬುದು ಗ್ರೀಕರಿಗೆ ಕಣ್ಣೆದುರಿನ ಪಾಠವಾಯ್ತು. ಭಾರತದ ಕುರಿತಂತೆ ಗ್ರೀಕರ ಶ್ರದ್ಧಾ-ಭಕ್ತಿಗಳು ನೂರ್ಮಡಿಯಾದವು.
ಅಲೆಗ್ಸಾಂಡರ್ ಮತ್ತೆ ಮತ್ತೆ ಯೋಚಿಸಿದ. ಸಂಪತ್ತು ಎಷ್ಟೇ ಗಳಿಸಿದರೂ ಕೊನೆಗೊಮ್ಮೆ ನಾವೆಲ್ಲ ಕೆಲಸಕ್ಕೆ ಬಾರದ ನಿಶ್ಚಲ ಮರದ ತುಂಡೇ! ಆದರೇನು? ಮರುಕ್ಷಣವೇ ಅವನೊಳಗಿನ ಚಕ್ರವತರ್ಿ ಜಾಗೃತನಾದ. ಭಾರತವನ್ನು ಗೆಲ್ಲಲಾಗದ ಹತಾಶೆ ಅವನನ್ನು ಕಾಡುತ್ತಲೇ ಇತ್ತು. ದಾರಿಯುದ್ದಕ್ಕೂ ಸಿಕ್ಕ ರಾಷ್ಟ್ರಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸುತ್ತ ಹೋಗುವ ತನ್ನ ತುಡಿತವನ್ನು ಸಾಕಾರಗೊಳಿಸಿಕೊಳ್ಳತ್ತ ನಡೆದ.
ಈ ನಡುವೆಯೇ ಒಂದು ವಿಚಿತ್ರ ಘಟನೆ ನಡೆಯಿತು. ಬ್ಯಾಬಿಲೋನಿನಲ್ಲಿ ವಾಸವಾಗಿದ್ದ ಜ್ಯೋತಿಷಿ ಪೈಥಾಗೋರಸ್ನ ಬಳಿ ಶಾಸ್ತ್ರ ಕೇಳಲು ಕೆಲವರು ಬಂದರು. ಯಾವುದಾದರೂ ಪ್ರಾಣಿಯನ್ನು ಬಲಿ ನೀಡಿ. ಅದರ ಪಿತ್ಥಜನಕಾಂಗ (ಲಿವರ್) ನೋಡಿ ವ್ಯಕ್ತಿಯ ಭವಿಷ್ಯ ಹೇಳುವ ಕಲೆ ಆತನಿಗೆ ಸಿದ್ಧಿಸಿತ್ತು. (ಈಗಲೂ ಅರುಣಾಚಲದಲ್ಲಿ ಈ ರೀತಿಯ ಆಚರಣೆ ನಡೆಸುವ ಅಪಾತಾನಿ ಎಂಬ ಜನಾಂಗದ ಜನರನ್ನು ನಾನು ಕಂಡಿದ್ದೇನೆ) ಅಲೆಗ್ಸಾಂಡರನ ಕುರಿತಂತೆ ಕೇಳಿದಾಗ ಆತ ಪ್ರಾಣಿಯೊಂದನ್ನು ಬಲಿಕೊಟ್ಟು ಶಾಸ್ತ್ರ ನೋಡಿದ. ಅಲೆಗ್ಸಾಂಡರನ ಸಾವು ಸನಿಹದಲ್ಲಿದೆ ಎಂಬುದನ್ನು ಬರೆದು ತಿಳಿಸಿದ. ಚಕ್ರವತರ್ಿಯ ಆಪ್ತರು ಇದನ್ನು ಮುಚ್ಚಿಟ್ಟರು. ಅಲೆಗ್ಸಾಂಡರ್ ಬಿಡಲಿಲ್ಲ. ಬ್ಯಾಬಿಲೋನ್ಗೆ ಕಾಲಿಟ್ಟೊಡನೆ ಪೈಥಾಗೋರಸ್ನ ಕರೆಸಿ ಎಲ್ಲ ವಿವರ ಪಡೆದ. ನಿದರ್ಾಕ್ಷಿಣ್ಯವಾಗಿ ಸತ್ಯ ಹೇಳಿದ ಆತನಿಗೆ ಉಡುಗೊರೆ ಕೊಡುವ ಮುನ್ನ ಒಟ್ಟಾರೆ ಶಕುನದ ಅರ್ಥ ಏನೆಂದು ಕೇಳಿದ. ಅತ್ತಲಿಂದ ‘ಸರ್ವನಾಶ’ ಎಂದಷ್ಟೇ ಉತ್ತರ ಬಂತು. ಅಲೆಗ್ಸಾಂಡರ್ನ ಹೃದಯ ಭಾರವಾಯಿತು!
ಚಾಲ್ಡಿಯನ್ನರು ಅಲೆಗ್ಸಾಂಡರನ ಎದುರುಗೊಂಡಾಗ ಬ್ಯಾಬಿಲೋನ್ಗೆ ಹೋಗದಿರುವಂತೆ ತಮ್ಮ ದೇವರು ಸೂಚಿಸಿದ್ದಾರೆಂಬ ಎಚ್ಚರಿಕೆಯನ್ನು ಕೊಟ್ಟಿದ್ದೂ ಆತನಿಗೀಗ ನೆನಪಾಗುತ್ತಿತ್ತು. ಒಂದೆಡೆ ಸಾವಿನ ಭಯ, ಅದು ಸರ್ವನಾಶವಾಗಿ ಪರಿವರ್ತನೆಯಾಗುವ ಅಳುಕು. ಮತ್ತೊಂದೆಡೆ ಜಗತ್ತನ್ನೇ ಆಳುವ ತುಡಿತ. ಕೊನೆಗೆ ಚಕ್ರವತರ್ಿಯೇ ಗೆದ್ದ. ತನ್ನ ಸೇನೆಯನ್ನು ಸಿದ್ಧಗೊಳಿಸಿ ಸಮುದ್ರದ ಮೂಲಕ ಹಾದು ಮತ್ತೊಂದಷ್ಟು ಭೂಪ್ರದೇಶಗಳನ್ನು ಗೆಲ್ಲುವ ಆದೇಶ ಕೊಟ್ಟ.
ಸೇನೆಯ ತುಕಡಿಯೊಂದು ಸಮರ್ಥ ಮಾರ್ಗದರ್ಶಕರಿಲ್ಲದೇ ಸಮುದ್ರದಲ್ಲಿ ದಾರಿ ತಪ್ಪಿತು. ಅವರನ್ನು ಸರಿದಾರಿಗೆ ತರಲು ನಾವಿಕನನ್ನು ಕಳಿಸಿದ ರಾಜ ತಾನೂ ಅವರೊಂದಿಗೆ ನಡೆದ. ಸ್ವಲ್ಪ ದೂರ ಹೋಗುತ್ತಿದ್ದಂತೆ ಬೀಸಿದ ಗಾಳಿ ಮ್ಯಾಸಿಡೋನಿಯಾದ ಘನತೆಯಾಗಿ ಅವನ ತಲೆಯ ಮೇಲಿದ್ದ ಟೋಪಿಯನ್ನು ಹಾರಿಸಿಕೊಂಡು ಸಮುದ್ರಕ್ಕೆಸೆಯಿತು. ತಲೆಗೆ ಕಟ್ಟಿದ ರಿಬ್ಬನ್ ಹಾರಿಹೋಗಿ ದಡದ ಮೇಲಿದ್ದ ರಾಜನ ಸಮಾಧಿಯ ಬಳಿಯ ಗಿಡದ ಕೊಂಬೆಗೆ ಸಿಕ್ಕು ನೇತಾಡತೊಡಗಿತು. ಶಕುನಗಳನ್ನು ಬಲುವಾಗಿ ನಂಬುವ ಗ್ರೀಕರಿಗೆ ಇದು ಬಲುದೊಡ್ಡ ಸಂದೇಶ. ಅಷ್ಟರೊಳಗೆ ಮುಲಾಜಿಲ್ಲದೇ ನೀರಿಗೆ ಧುಮುಕಿದ ಸೈನಿಕನೊಬ್ಬ ಟೋಪಿಯನ್ನು ಕೈಗೆತ್ತಿಕೊಂಡ, ಈಜುವಾಗ ಒದ್ದೆಯಾದೀತೆಂಬ ಭಾವನೆಯಿಂದ ಅದನ್ನು ತಲೆಗೇರಿಸಿಕೊಂಡು ಬಂದು ರಾಜನ ಕೈಗಿತ್ತ. ಮ್ಯಾಸಿಡೋನಿಯಾದ ಘನತೆಯ ಸಂಕೇತವಾದ ಟೋಪಿ ಕೈಗೆ ಬಂದಿತ್ತು. ಆದರೆ ತಾನು ಮಾತ್ರ ತಲೆಗೇರಿಸಬೇಕಿದ್ದ ಈ ಟೋಪಿಯನ್ನು ಮತ್ತ್ಯಾರೋ ಏರಿಸಿಕೊಂಡದ್ದು ಅಹಂಕಾರಕ್ಕೆ ಪೆಟ್ಟು ನೀಡಿತ್ತು. ಅಲೆಗ್ಸಾಂಡರ್ ಅವನಿಗೆ ಕೈತುಂಬಾ ಉಡುಗೊರೆ ಕೊಟ್ಟ ಜೊತೆ-ಜೊತೆಗೇ ಅವನ ತಲೆ ಕಡಿದೆಸೆಯುವ ಆಜ್ಞೆ ಕೂಡ!

Alexander-And-The-Gymnosophists
ಈಗವನ ಮಂಡೆ ಬಿಸಿಯಾಗಿತ್ತು. ಮರಳಿ ಬಂದು ರಾಜಸಭೆಯಲ್ಲಿ ಕೆಲಕಾಲ ಸಿಂಹಾಸನಸ್ಥನಾದ. ತನ್ನ ಪಟ್ಟ ಅಬಾಧಿತವೆಂಬುದನ್ನು ತನಗೆ ತಾನೇ ಪುನರುಚ್ಚರಿಸಿಕೊಂಡ. ಮತ್ತೆ-ಮತ್ತೆ ಕಾಡುತ್ತಿರುವ ಶಕುನಗಳು ತನ್ನ ಬಾಧಿಸಲಾರವೆಂಬುದನ್ನು ಮನಸ್ಸಿಗೆ ಬೋಧಿಸಿದ. ಒತ್ತಾಯದ ಧೈರ್ಯ ತಂದುಕೊಂಡು ಅಲ್ಲಿಂದ ಹೊರಟ. ಆಗಲೇ ಸುದ್ದಿ ಬಂತು ರಾಜಸಭೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿದ ವ್ಯಕ್ತಿಯೊಬ್ಬ ಕಾವಲು ಪಡೆಯ ಕಣ್ತಪ್ಪಿಸಿ ರಾಜನ ಸಿಂಹಾಸನದ ಮೇಲೆ ಕುಳಿತು ಬಿಟ್ಟಿದ್ದ. ಅಲೆಗ್ಸಾಂಡರನ ಹೃದಯದ ಗಾಯವನ್ನು ಇದು ಕೆರೆದು ಹುಣ್ಣಾಗಿಸಿತ್ತು. ತನ್ನನ್ನು ಈ ಪದವಿಯಿಂದ ಕೆಳಗಿಳಿಸುವ ಷಡ್ಯಂತ್ರ ನಡೆಯುತ್ತಿರಬಹುದೆಂದು ಹೆದರಿದ. ಅವನನ್ನು ಕ್ರೂರವಾಗಿ ಶಿಕ್ಷಿಸುವ ಆಜ್ಞೆ ಕೊಟ್ಟ. ಆತನಾದರೋ ಒಂದಿನಿತೂ ಬಾಯಿಬಿಡಲಿಲ್ಲ. ಪಾಪ! ಏನು ಹೇಳಿಯಾನು? ಖಾಲಿಯಿದ್ದ ಸಿಂಹಾಸನ ಏರಿಬಿಡಬೇಕೆಂಬ ಸಹಜ ಕುತೂಹಲವಷ್ಟೇ ಅವನಿಗೆ. ಜಗತ್ತಿನ ಚಕ್ರವತರ್ಿಯಾಗುವ ಹುಚ್ಚು ತವಕ ಅಲೆಗ್ಸಾಂಡರನಿಗಿರಲಿಲ್ಲವೇ ಹಾಗೇ!
ಒಂದೊಂದು ಘಟನೆಯೂ ಅಂತರಾಳವನ್ನು ಕಲಕುತ್ತಲೇ ಇದ್ದವು. ಆತ ಭಾರತದ ಸಂತರ ಮಾರ್ಗದರ್ಶನದಂತೆ ಶಾಂತವಾಗಿದ್ದರೆ ಬಚಾವಾಗಿರುತ್ತಿದ್ದ. ತಡವಾಗಿ ಹೋಯ್ತು. ಕುಡಿತದ ದಾಸನಾದ. ತಡರಾತ್ರಿಯವರೆಗೂ ಕುಡಿಯುತ್ತಿದ್ದ. ಅಮಲಿನಿಂದಿಳಿದೊಡನೆ ಸ್ನಾನ ಮಾಡಿ ಭಗವಂತನಿಗೆ ಬಲಿ ಸಮಪರ್ಿಸುತ್ತಿದ್ದ. ತನ್ನ ಆರೋಗ್ಯ, ಶಾಶ್ವತ ಚಕ್ರವತರ್ಿ ಪಟ್ಟದ ಪ್ರಾರ್ಥನೆ ನಡೆಸುವಂತೆ ಕೇಳಿಕೊಳ್ಳುತ್ತಿದ್ದ.
ಯಾವುದೂ ಉಪಯೋಗಕ್ಕೆ ಬರಲಿಲ್ಲ. ಅಲೆಗ್ಸಾಂಡರನಿಗೆ ಮೈಸುಡುವ ಜ್ವರ ಅಮರಿಕೊಂಡಿತು. ಅದು ನಿಧಾನವಾಗಿ ದೇಹದ ಅಣುರಣವನ್ನೂ ವ್ಯಾಪಿಸಿಕೊಂಡಿತು. ಮಲೇರಿಯಾ ಆಗಿರಬಹುದೆಂದು ಕೆಲವರು ಭಾವಿಸುತ್ತಾರೆ. ಮತ್ತೂ ಕೆಲವರು ಆಪ್ತರು ಮಾಡಿಸಿದ ವಿಷಪ್ರಾಶನ ಎಂದೂ ನಂಬುತ್ತಾರೆ. ಯಾವುದನ್ನೂ ದೃಢವಾಗಿ ಹೇಳಬಲ್ಲವರಿಲ್ಲ. ಅಲೆಗ್ಸಾಂಡರ್ ಹಾಸಿಗೆಗೆ ಒರಗಿ ಬಿಟ್ಟ. ಕೆಲವು ಕಾಲ ಮಾತನಾಡುತ್ತಿದ್ದ. ಆನಂತರ ಮಾತನಾಡುವುದನ್ನೂ ನಿಲ್ಲಿಸಿಬಿಟ್ಟ. ಅವನನ್ನು ನೋಡುವ ಅವಕಾಶ ಅನೇಕರಿಗಿರಲಿಲ್ಲ. ಆತನ ಈಗಿನ ಸ್ಥಿತಿಯ ಸುದ್ದಿ ಹಬ್ಬಿದರೆ ದಂಗೆಯಾದೀತೆಂಬ ಹೆದರಿಕೆ. ಅಷ್ಟರೊಳಗೆ ಆತ ತೀರಿಕೊಂಡಿದ್ದಾನೆಂಬ ಸುದ್ದಿ ಸೈನ್ಯದೊಳಗೆ ಹರಡಿ ಹಿರಿಯ ಅಧಿಕಾರಿಗಳು- ಪರಿವಾರದವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಆಕ್ರೋಶದ ಧಗೆ ಹೊತ್ತಿತು. ಆನಂತರವೇ ಆತನನ್ನು ಭೇಟಿ ಮಾಡುವ ಅವಕಾಶ ಅನೇಕರಿಗೆ ಸಿಕ್ಕಿದ್ದು. ಅವನೀಗ ಯಾರನ್ನೂ ಗುರುತು ಹಿಡಿಯುವ ಶಕ್ತಿಯನ್ನೂ ಕಳಕೊಂಡಿದ್ದ.
ಅವನೊಳಗಿನ ಗೊಂದಲಕ್ಕೀಗ ತೆರೆ ಬೀಳುವ ಹಂತ ಬಂದಿತ್ತು. ಅವನೆದುರಿಗೆ ದಂಡಮೀಶರು, ಕ್ಯಾಲನಸ್ರು ಭಾರತದ ಅನೇಕ ಸಂತರು ಕಾಣಿಸಿಕೊಳ್ಳುತ್ತಿದ್ದರು. ಗ್ರೀಕ್ ಸಾಮ್ರಾಜ್ಯಕ್ಕೆದುರಾಗಿ ನಿಂತ ಪುರೂರವ ತೊಡೆ ತಟ್ಟಿದಂತೆ ಭಾಸವಾಗುತ್ತಿತ್ತು. ತನ್ನ ಕತ್ತಿಗೆ ಮೋಸದಿಂದ ಬಲಿಯಾಗುವ ಮುನ್ನ ಕೊನೆಯ ಹಸಿ ರಕ್ತವನ್ನು ಸುರಿಸಿದ ಮಸಾಗ ವೀರರು ಅವನೆದುರಿಗೆ ರುದ್ರ ನರ್ತನ ಮಾಡುತ್ತಿದ್ದರು. ಈತನ ಕ್ರೌರ್ಯಕ್ಕೆ, ಸೈನಿಕರ ಕಾಮುಕತೆಗೆ ಬಲಿಯಾಗಲು ಒಪ್ಪದೇ ತಮ್ಮ ತಾವು ಚಿತೆಗೆ ಅಪರ್ಿಸಿಕೊಂಡ ಭಾರತದ ಸ್ತ್ರೀ ರತ್ನಗಳು ಅವನನ್ನು ಅಣಕಿಸುವಂತಿತ್ತು. ಗಂಗೆಯವರೆಗೂ ಸಾಗಿ ಇಡಿಯ ಭರತಖಂಡವನ್ನು ಪಾದದ ಬುಡಕ್ಕೆ ಕೊಡವಿಕೊಳ್ಳುವ ಅವನ ಬಯಕೆಯ ದಾವಾನಲಕ್ಕೆ ತಣ್ಣೀರೆರೆಚಿದ ಭಾರತದ ಸಾರ್ವಭೌಮ ಶಕ್ತಿ ಅವನೆದುರು ಉರಿಗಣ್ಣು ಮಾಡಿಕೊಂಡು ನಿಂತರೆ, ತನ್ನ ತಾನು ಗೆದ್ದು ಜಗತ್ತನ್ನು ಕಡೆಗಣ್ಣಿಂದಲೂ ಬಯಸದ ಇಲ್ಲಿನ ಸಂತಶಕ್ತಿ ಅವನೆದುರು ಪ್ರೇಮದ ಭಾವದಿಂದ ನಿಂತಿತ್ತು. ಬರಸೆಳೆದು ಅಪ್ಪಲು ಸಿದ್ಧವಾಗಿತ್ತು.
ಗುರು ಅರಿಸ್ಟಾಟಲ್ರ ಮಾತು ಈಗ ಅವನಿಗೆ ನೆನಪಾಗಲಾರಂಭಿಸಿತು. ಭಾರತದ ಬಳಿ ಸೇರುವಾಗ ಮಂದಿರಕ್ಕೆ ಹೋಗುವಂತೆ ಹೋಗಬೇಕು.
ಅಲೆಗ್ಸಾಂಡರನ ತುಮುಲ ಅವನಿಗೆ. ಅವನೇ ಹೊತ್ತಿಸಿದ ಜಗದ್ವಿಜಯದ ಅಗ್ನಿಗೆ ಬಲಿಯಾದವರು ಅವನ ಬದಿಯಲ್ಲಿ ನಿಂತು ಕೇಳಿದರು, ‘ನಿನ್ನ ನಂತರದ ಒಡೆತನ ಯಾರಿಗೆ’. ಅಲೆಗ್ಸಾಂಡರ್ ನಿರಮ್ಮಳವಾಗಿ ಉತ್ತರಿಸಿದ, ‘ಎಲ್ಲರಿಗಿಂತಲೂ ಶ್ರೇಷ್ಠನಿಗೆ’. ತನ್ನತಾನರಿತವನೇ ಸರ್ವ ಶ್ರೇಷ್ಠ ಎಂಬ ಋಷಿವಾಕ್ಯ ಅವನೊಳಗೆ ಆಗ ಕಡೆಗೋಲು ಕಡೆಯುತ್ತಿತ್ತಾ? ಊಹೂಂ, ಗೊತ್ತಿಲ್ಲ. ಅವನೇ ಹೇಳಬೇಕಷ್ಟೇ!
ಚಕ್ರವತರ್ಿಯ ಅಂತ್ಯವಾಯ್ತು. ಭಾರತ ಮಹಾಸಾಮ್ರಾಜ್ಯವೊಂದಕ್ಕೆ ತನ್ನ ಆಧ್ಯಾತ್ಮದ ಬಲೆ ಬೀಸಿ ಆಳ್ವಿಕೆ ನಡೆಸಿಬಿಟ್ಟಿತು! ವಿಶ್ವಗುರುವಾಗುದು ಹೀಗೆಯೇ..

Comments are closed.

Leave a Reply