ವಿಭಾಗಗಳು

ಸುದ್ದಿಪತ್ರ


 

ದೇಹವೆಂಬ ವೀಣೆ, ಅದ ನುಡಿಸುವವನು ಅವನೆ..

blue_sonic_wave_by_haven4303

ಕಳೆದ ಮಾಚರ್್ ತಿಂಗಳಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೀಶೆಲ್ಸ್ಗೆ ಭೇಟಿ ಕೊಟ್ಟಿದ್ದು ನೆನಪಿದೆ ತಾನೇ? ಅಲ್ಲಿನ ಕರಾವಳಿ ತೀರದಲ್ಲಿ ಭಾರತದ ನೌಕಾಸೇನೆಗೆ ಬೆಂಬಲ ನೀಡಬಲ್ಲ ರೆಡಾರ್ ಸ್ಥಾಪಿಸಲು ಒಪ್ಪಂದ ಮಾಡಿಕೊಂಡದ್ದು ಆಗಲೇ. ಅಷ್ಟೇ ಅಲ್ಲ ಮಾರಿಷಸ್, ಮಾಲ್ಡೀವ್ಸ್ಗಳಲ್ಲೂ ರೆಡಾರ್ ಸ್ಥಾಪಿಸುವ; ಶ್ರೀಲಂಕಾದ ಹತ್ತಾರು ಕಡೆಗಳಲ್ಲಿ ಸಂಕೇತ ಗ್ರಾಹಕಗಳನ್ನು ಸ್ಥಾಪಿಸಿ ಚೀನಾ ಸೇನೆಯ ಚಲನವಲನ ದಾಖಲಿಸುವಲ್ಲಿ ಮಹತ್ವದ ಹೆಜ್ಜೆ ಇಡುವ ಮಾತಾಡಿದ್ದು ಆಗಲೇ.
ರಾಜತಾಂತ್ರಿಕ ವಿಚಾರಗಳೆಲ್ಲ ಒತ್ತಟ್ಟಿಗಿರಲಿ; ಇಲ್ಲಿ ನಮಗೀಗ ಬೇಕಿರೋದು ರೆಡಾರ್ ಕೆಲಸ ಮಾಡುವ ವಿಧಾನ ಮಾತ್ರ. ರೆಡಾರ್ ಯಂತ್ರ ರೇಡಿಯೋ ತರಂಗಗಳೊಂದಿಗೆ ಶಬ್ದ ಸಂಕೇತಗಳನ್ನು ಗಾಳಿಯಲ್ಲಿ ತೇಲಿ ಬಿಡುತ್ತದೆ. ಇದು ದಾರಿಯಲ್ಲಿ ಯಾವುದೇ ಅಡೆತಡೆಯಿಲ್ಲದೇ ಹೋದರೆ ಹಾಗೆಯೇ ಹಾದು ಹೋಗಿಬಿಡುತ್ತದೆ. ಯಾವುದಾದರೂ ವಿಮಾನ ಅಡ್ಡ ಬಂದರೆ ಅದಕ್ಕೆ ಬಡಿದು ಕಣ್ಣೆವೆ ಮುಚ್ಚುವುದರೊಳಗೆ ಮರಳಿ ರೆಡಾರ್ ಯಂತ್ರದತ್ತ ಬಂದುಬಿಡುತ್ತದೆ. ಮರಳಿ ಬಂದ ಶಬ್ದದಲ್ಲಿನ ಬದಲಾವಣೆ ಗಮನಿಸಿ ಗಾಳಿಯಲ್ಲಿ ಸಾಗುತ್ತಿರುವ ವಸ್ತು ಯಾವುದೆಂದು ವಿಜ್ಞಾನಿಗಳು ಗುರುತಿಸುತ್ತಾರೆ.
ನಮ್ಮ ಶರೀರವೇ ರೆಡಾರ್ ಯಂತ್ರ. ಮಂತ್ರದೊಳಗಿನ ಸೂಕ್ಷ್ಮ ತರಂಗಗಳು ಆಕಾಶವನ್ನು ಆವರಿಸಿಕೊಳ್ಳುತ್ತವೆ. ವಿಶ್ವದೊಳಗೆ ಒಂದಾಗಿರುವ ಈ ಮಂತ್ರದ ಮೂಲವನ್ನು ಬಡಿದು ಮರಳಿ ಬರುತ್ತವೆ. ಮತ್ತೆ ಈ ದೇಹ ಅದನ್ನು ಸ್ವೀಕರಿಸುತ್ತದೆ. ಬಲು ಸರಳ. ಹೀಗಾಗಿಯೇ ಮಂತ್ರ ರೂಪುಗೊಂಡಿರುವ ರೀತಿ ಬಲು ವಿಶಿಷ್ಟ. ಪ್ರತೀ ಮಂತ್ರಕ್ಕೂ ಒಬ್ಬ ದರ್ಶನಕಾರ ಇರುತ್ತಾನೆ. ಈ ಮಂತ್ರ ಯಾವ ವೈಶ್ವಿಕ ಶಕ್ತಿಯ ಅನುಭೂತಿ ಪಡೆಯಲೆಂದು ರಚಿತವೋ ಆ ಶಕ್ತಿಯ ದೇವತಾ ರೂಪ ಇರುತ್ತದೆ. ಜೊತೆಗೆ ಇಡಿಯ ಮಂತ್ರದ ಸಾರವನ್ನೂ ತನ್ನೊಳಗೆ ಅಡಗಿಸಿಟ್ಟುಕೊಂಡಿರುವ ಬೀಜ ಮಂತ್ರ ಮತ್ತು ಅದಕ್ಕೆ ಸೂಕ್ತವಾದ ಛಂದಸ್ಸು.
ಈಗ ರೆಡಾರ್ ಕೆಲಸ ಮಾಡುವ ರೀತಿಯೊಂದಿಗೆ ತಾಳೆ ಹಾಕಿ ನೋಡಿ. ವಿಶ್ವಶಕ್ತಿಯಿಂದ ನಮಗೆ ಬೇಕಾದ ಶಕ್ತಿಯನ್ನು ಪಡೆಯಲೆಂದು ಶಬ್ದ ತರಂಗಗಳನ್ನು ಬೀಜ ಮಂತ್ರದ ರೂಪದಲ್ಲಿ ಕಳಿಸುತ್ತೇವೆ. ಅದಕ್ಕೆ ರೂಪುಗೊಂಡಿರುವ ಛಂದಸ್ಸು ರೇಡಿಯೋ ತರಂಗಗಳಿದ್ದಂತೆ. ಸಮರ್ಪಕವಾದ ರೀತಿಯಲ್ಲಿ ನಿರಂತರವಾಗಿ ಮಂತ್ರೋಚ್ಚಾರಣೆ ನಡೆಸುತ್ತಿದ್ದರೆ ಅದು ಆಯಾ ದೇವತಾ ತತ್ತ್ವವನ್ನು ಮುಟ್ಟಿ ಅಷ್ಟೇ ವೇಗದಲ್ಲಿ ಪ್ರತಿಫಲಿಸಿ ಮರಳಿಬಿಡುತ್ತದೆ. ಎಲ್ಲಿಂದ ಈ ಮಂತ್ರ ಹೊರಟಿತ್ತೋ ಅಲ್ಲಿಗೆ ಆ ತತ್ತ್ವದ ಶಕ್ತಿಯನ್ನು ಎಳೆದು ತಂದು ಬಿಡುತ್ತದೆ! ಅದಕ್ಕೇ ಮಂತ್ರ ಸಾಕ್ಷಾತ್ಕಾರಕ್ಕೆ ಗುರುಗಳು ಬೇಕು ಅನ್ನೋದು. ಮಂತ್ರವನ್ನು ಸಾಕ್ಷಾತ್ಕರಿಸಿಕೊಂಡ ಗುರು ಅದನ್ನು ತನ್ನದಾಗಿಸಿಕೊಳ್ಳುವ ಮಾರ್ಗ ತಿಳಿಸಿಕೊಡುತ್ತಾನಲ್ಲ ಆಗ ಅದು ಸುಲಭ ಸಿದ್ಧಿ.
ಅಷ್ಟೇ ಅಲ್ಲ. ನಮ್ಮಲ್ಲಿ ಅನೇಕ ಬಾರಿ ಗುರುಗಳೇ ಸಮರ್ಥ ಶಿಷ್ಯನನ್ನು ಅರಸಿಕೊಂಡು ಹೋಗುತ್ತಾರೆ ಅಂತಾರಲ್ಲ ಅದೂ ಹೀಗೆಯೇ ಇರಬೇಕು. ಆಕಾಶದಲ್ಲಿ ಹರಡಿಕೊಂಡ ಈ ಸೂಕ್ಷ್ಮ ತರಂಗಗಳನ್ನು ಗ್ರಹಿಸಬಲ್ಲ ಸಾಮಥ್ರ್ಯ ಇರುವ ಈ ಮಹಾಮಹಿಮರು ಅದರ ಮೂಲವನ್ನು ಹುಡುಕಿಕೊಂಡು ಬಂದುಬಿಡುತ್ತಾರೆ. ಅಂತಹ ಸದ್ಗುರುಗಳಿಗೆ ನೀವು ಬಾಯ್ಮಾತಿನಲ್ಲಿ ಏನನ್ನೂ ಹೇಳಬೇಕಿಲ್ಲ; ಅವರು ಮನಸ್ಸಿನಿಂದ ಹೊರಡುವ ಶಕ್ತಿತರಂಗಗಳನ್ನು ಕೇಳಬಲ್ಲರು.
ಹೌದು. ನೀವು ಬಾಯಿಂದ ಸುಳ್ಳು ಹೇಳಬಹುದು. ಆದರೆ ನಿಮ್ಮ ಮನಸ್ಸು, ಚಿತ್ತಗಳು ಸುಳ್ಳು ಹೇಳಲಾರವು. ಅದಕ್ಕೇ ಮಂತ್ರಗಳನ್ನು ಮನಸಲ್ಲೇ ಹೇಳಿಕೊಳ್ಳಬೇಕು ಅನ್ನೋದು. ಜೋರಾಗಿ ಹೇಳಿಕೊಂಡವು ಎಲ್ಲರಿಗೂ ಕೇಳುತ್ತವೆ ನಿಜ; ಆದರವು ಗಾಳಿಗೇ ಅಂತೆ. ತುಟಿ ಅಲುಗಾಡಿಸುತ್ತ ಮಣ ಮಣಿಸುವ ಮಂತ್ರಗಳು ಪರವಾಗಿಲ್ಲ. ಮನಸೊಳಗೇ ಹೇಳಿಕೊಂಡವು ಉತ್ತಮ. ಇನ್ನು ನಮ್ಮ ಪ್ರಯಾಸವೇ ಇಲ್ಲದೇ ಆತ್ಮಸ್ಥವಾಗಿ ಸದಾ ನಡೆಯುವ ಜಪ ಅತ್ಯಂತ ಶ್ರೇಷ್ಠವಂತೆ!
ಕಂಪ್ಯೂಟರ್ ಜಗತ್ತಿನಲ್ಲೂ ಹಾಗೆಯೇ. ‘ಜಾವಾ’ ಕಲಿತವ ಮೇಲ್ನೋಟಕ್ಕೆ ಕಾಣುವುದೆಲ್ಲವನ್ನೂ ಮಾಡಬಲ್ಲ. ‘ಸಿ’ ಲ್ಯಾಂಗ್ವೇಜ್ ಗೊತ್ತಿದ್ದರೆ ಆತ ಸ್ವಲ್ಪ ಆಳಕ್ಕಿಳಿಯಬಲ್ಲ. ಮೆಷಿನ್ ಲೆವೆಲ್ ಲ್ಯಾಂಗ್ವೇಜ್ ಕಲಿತು ಹಾಡರ್್ವೇರ್ನ್ನು ಚೆನ್ನಾಗಿ ದುಡಿಸಿಕೊಳ್ಳಬಲ್ಲವ ಸೂಕ್ತ ಸಂದರ್ಭದಲ್ಲಿ ಯಾರನ್ನು ಬೇಕಾದರೂ ಆಡಿಸಬಲ್ಲ.
ಮಂತ್ರಗಳು ಮೆಷಿನ್ ಲೆವೆಲ್ ಲ್ಯಾಂಗ್ವೇಜ್ ಇದ್ದಂತೆ. ಅದನ್ನು ಅದೆಷ್ಟು ಸೂಕ್ಷ್ಮ ರೂಪದಲ್ಲಿ ಬಳಸುವೆವೋ ಅಷ್ಟು ಶಕ್ತಿ ಹೆಚ್ಚು. ಇದೂ ತರ್ಕಕ್ಕೆ ನಿಲುಕದ್ದೇನಲ್ಲ. ಪ್ರತೀ ಬಾರಿ ಒಂದು ಅಕ್ಷರ ಮಾತಾಡುವಾಗ ದೇಹದಲ್ಲಿ ಆಗುವ ಪ್ರಕಿಯೆಗಳನ್ನು ಗಮನಿಸಿ. ಆ ಅಕ್ಷರ ಉದ್ದೀಪನೆಗೆ ಮೆದುಳಿನ ನರಗಳು ಚುರುಕಾಗುತ್ತವೆ. ಅಲ್ಲಿ ಉತ್ಪಾದನೆಯಾದ ವಿದ್ಯುತ್ ಕಾಂತೀಯ ಪ್ರೇರಣೆಯಿಂದಾಗಿ ಮುಖದಲ್ಲಿನ ಅಂಗಾಂಗಗಳು ಗಾಳಿಯನ್ನು ಬಳಸಿಕೊಂಡು ಧ್ವನಿಪೆಟ್ಟಿಗೆಯಿಂದ ಶಬ್ದ ಹೊರಡಿಸುತ್ತವೆ. ಒಂದು ಶಬ್ದ ಹೊರಡಲು ಇಡಿಯ ದೇಹದ ಅವಯವಗಳು ಕೆಲಸ ಮಾಡುತ್ತವೆ. ದೇಹ ಆಯಾಸಗೊಂಡ ದಿನ ಮಾತನಾಡುವ ಶಕ್ತಿಯು ಕುಂಠಿತವಾದಂತೆ ಭಾಸವಾಗೋದು ಅದಕ್ಕೇ.
ಈಗ ಮಹತ್ವದ ವಿಚಾರ. ಮೆದುಳು ಶಬ್ದವನ್ನು ಉತ್ಪಾದಿಸುವ ಸಂದೇಶ ಕೊಟ್ಟುಬಿಡುತ್ತದೆ; ದೇಹವೂ ಎಲ್ಲ ಶಕ್ತಿಯನ್ನು ಹಾಕಿ ಆ ಸದ್ದನ್ನು ಹೊರಡಿಸಲು ಸಿದ್ಧವಾಗಿಬಿಡುತ್ತದೆ. ಆದರೆ ನೀವದಕ್ಕೆ ಅವಕಾಶ ಕೊಡದೇ ಮೌನವಾಗಿದ್ದರೆ ಏನಾದೀತು? ಮೆದುಳಿನಿಂದ ಹೊರಟ ಈ ವಿದ್ಯುತ್ ಕಂಪನಗಳು ದೇಹವನ್ನು ಆವರಿಸಿಕೊಂಡುಬಿಡುತ್ತವೆ. ದೇಹದ ಪ್ರತಿಯೊಂದು ನರಗಳೂ ಉದ್ದೀಪನಗೊಳ್ಳುತ್ತವೆ.
ಇದನ್ನೂ ನೀವು ಗಮನಿಸಿಯೇ ಇರುತ್ತೀರಿ. ನಿಮ್ಮೆದುರಿಗೆ ನಿಂತ ವ್ಯಕ್ತಿಯ ಮೇಲಿನ ಕೋಪದಿಂದ ಬಾಯ್ತುಂಬ ಬೈಗುಳ ಬರಲು ಕಾತರಿಸುತ್ತದೆ. ಆದರೆ ಪರಿಸರ ಅದಕ್ಕೆ ಪೂರಕವಾಗಿಲ್ಲವೆಂದು ಅರಿತಾದೊಡನೆ ನೀವು ಪ್ರಯತ್ನ ಪೂರ್ವಕವಾಗಿ ಸುಮ್ಮನಾಗುತ್ತೀರಿ. ಮುಂದೇನು ಗೊತ್ತೇ? ದೇಹದೊಳಗೆ ಬೆಂಕಿ ಹಬ್ಬಿದಂತಾಗುತ್ತದೆ. ರಕ್ತ ಪರಿಚಲನೆ ವೇಗವಾಗುತ್ತದೆ. ಕೊನೆಗೆ ರಕ್ತದೊತ್ತಡವೂ ಹೆಚ್ಚಾಗುತ್ತದೆ. ಬೈಗುಳವನ್ನು ನುಂಗಿಕೊಂಡರೆ ದೇಹ ಇಷ್ಟೆಲ್ಲಾ ಬದಲಾವಣೆ ತೋರುತ್ತದೆನ್ನುವುದಾದರೆ ಮಂತ್ರವನ್ನು ಮನಸ್ಸೊಳಗೇ ಉಚ್ಚರಿಸಿದರೆ ಅದೇಕೆ ಶ್ರೇಷ್ಠ ಪರಿಣಾಮ ಕೊಡಲಾರದು!
‘ದೇಹವೊಂದು ದೇವವೀಣೆ, ನರನರವೂ ತಂತಿ ತಾನೇ?’ ಹಾಡು ಕೇಳಿದ್ದೀರಲ್ಲ. ಇಡಾ, ಪಿಂಗಳಾ, ಸುಷುಮ್ನಾದಿಯಾಗಿ ಹರಡಿಕೊಂಡಿರುವ ಈ ನರಗಳನ್ನು ಉದ್ದೀಪಿಸಲೆಂದೇ ಈ ಮಂತ್ರಶಕ್ತಿಯ ಬಳಕೆಯಾಗೋದು. ಮತ್ತೆ ಮತ್ತೆ ಮಂತ್ರದ ಪುನರುಚ್ಚಾರ ಆಗೋದರಿಂದ ದೇಹವೆಂಬ ವೀಣೆ ನುಡಿಸಲು ಯೋಗ್ಯವಾಗುತ್ತದೆ. ಆಗ ಯಾವ ತತ್ತ್ವದ ಸಾಕ್ಷಾತ್ಕಾರ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೆವೋ ಆ ದೇವನೇ ವೈಣಿಕನಾಗಿ ಈ ವೀಣೆ ನುಡಿಸಲಾರಂಭಿಸುತ್ತಾನೆ.
ಮಂತ್ರಗಳಿಂದ ಉಂಟಾದ ಸೂಕ್ಷ್ಮ ತರಂಗಗಳನ್ನು ಕಿವಿ ಕೇಳಲಾರದು ನಿಜ. ಹಾಗಂತ ಅದನ್ನು ಇಲ್ಲವೆಂದು ಪ್ರತಿಪಾದಿಸಲಾಗದು. ಮರದ ಮೇಲೆ ಹತ್ತುವ ಕಟ್ಟಿರುವೆಗಳು ಮರವನ್ನು ಬಿಟ್ಟು ಭೂಮಿಯೊಳಗಿನ ಗೂಡು ಹೊಕ್ಕವೆಂದರೆ ಮಳೆ ಖಾತ್ರಿ ಅಂತ ಅನೇಕ ರೈತರು ಹೇಳುತ್ತಾರೆ. ಈ ಇರುವೆಗಳು ಮಳೆಯಾಗುವ ಮುಂಚಿನ ಸೂಕ್ಷ್ಮ ಶಬ್ದಗಳನ್ನು ಗ್ರಹಿಸುತ್ತವೆ. ಅದು ನಮ್ಮಿಂದ ಸಾಧ್ಯವಿಲ್ಲವಷ್ಟೇ. ನಮ್ಮ ಸುತ್ತಲೂ ಇರುವ ನಾವು ಕೇಳಲಾಗದ ಸಂಕೇತಗಳಲ್ಲಿ ಮಂತ್ರದ ತರಂಗಗಳೂ ಇವೆ. ಇವು ನಮ್ಮೆಲ್ಲರನ್ನು ದಾಟಿಕೊಂಡು ಸಾಗುತ್ತಲೇ ಇರುತ್ತವೆ. ತನಗೆ ಪೂರಕವಾದ ಮತ್ತೊಂದು ತರಂಗಕ್ಕೆ ಬಡಿದೊಡನೆ ಮರಳಿ ಬಂದು ಉಚ್ಚರಿಸಿದವನ ಸೇರುತ್ತವೆ. ಹೀಗಾಗಿ ಸಾಧಕನೊಬ್ಬ ದಿನೇ ದಿನೇ ತನ್ನ ಬೆಳವಣಿಗೆ ಗುರುತಿಸಲು ಸಾಧ್ಯವಾಗೋದು.
ಸನಾತನ ಪರಂಪರೆಯ ಋಷಿಗಳು ಅದೆಷ್ಟು ಕೃಪಾಶೀಲರೆಂದರೆ ಈ ಸಾಧನೆಯ ಪ್ರತಿಯೊಂದು ಹಂತವನ್ನೂ ಎಳೆಎಳೆಯಾಗಿ ಹಲಸಿನ ತೊಳೆಯಂತೆ ಬಿಡಿಸಿಟ್ಟು ನಮ್ಮ ಕೈಲಿಟ್ಟಿದ್ದಾರೆ. ‘ಭಾರತೀಯರು ಎಲ್ಲವನ್ನೂ ಮುಚ್ಚಿಟ್ಟು ಯಾರ ಕೈಗೆ ಸಿಗದಂತೆ ನೋಡಿಕೊಂಡರು’ ಎಂಬ ಆರೋಪ ಮಾಡುತ್ತೇವಲ್ಲ, ಅದು ಅಪ್ಪಟ ಸುಳ್ಳು. ಅದು ನಮ್ಮನ್ನು ಅರಿಯಲಾಗದ ಬಿಳಿಯರು ನಮಗೆ ಕುಡಿಸಿ ಹೋದ ಸುರೆ. ಅದರ ಮತ್ತಿನಲ್ಲಿಯೇ ಈಗಲೂ ಬಡಬಡಿಸುತ್ತಿದ್ದೇವೆ ಅಷ್ಟೇ. ಆದರೆ ವಾಸ್ತವವಾಗಿ ನಮ್ಮ ಪೂರ್ವಜರು ತಾವು ಕಂಡದ್ದೆಲ್ಲವನ್ನು ಧಾರೆ ಎರೆದರು. ನಾಶವಾಗದಂತೆ ಉಳಿಸಿಕೊಳ್ಳುವ ಮಾರ್ಗವನ್ನು ಕಲಿಸಿಕೊಟ್ಟರು. ಶ್ರದ್ಧೆ ನಮಗೆ ಕಡಿಮೆಯಾಯಿತಷ್ಟೇ. ಪ್ಯಾಂಟು, ಶಟರ್ು, ಸೂಟು, ಟೈಗಳ ನಡುವೆ, ಅಬ್ಬರದ ಇಂಗ್ಲೀಷಿನ ಭರಾಟೆಯ ಮಧ್ಯೆ ನಾವು ಮೈಮರೆತುಬಿಟ್ಟೆವು.
ಬಿಡಿ. ಅದು ಪ್ರತ್ಯೇಕವಾಗಿ ಚಚರ್ಿಸಬೇಕಾದ ವಿಷಯ. ಸದ್ಯಕ್ಕೆ ಗಾಯತ್ರಿ ಮಂತ್ರವನ್ನೇ ನಮ್ಮ ಹಿರಿಯರು ಜಪಯೋಗ್ಯವಾಗಿಸಿ ಕೊಟ್ಟ ವ್ಯವಸ್ಥೆ ನೋಡಿ. ಸಕಲ ವಿಶ್ವದ ಚಾಲಕ ಶಕ್ತಿಯಾಗಿರುವ ಸವಿತೃ ದೇವತೆಯನ್ನು ಒಲಿಸಿಕೊಳ್ಳುವ ಮಹಾಮಂತ್ರ ಅದು. ‘ಯತ್ ಬ್ರಹ್ಮಾಂಡೆ, ತತ್ ಪಿಂಡಾಂಡೆ’. ಯಾವುದು ಬ್ರಹ್ಮಾಂಡದಲ್ಲಿದೆಯೋ ಅದೇ ದೇಹದೊಳಗೂ ಇದೆ ಎನ್ನುವುದನ್ನು ಒಪ್ಪುವುದೇ ಆದರೆ ಯಾವ ಸವಿತೃ ದೇವತೆ ವಿಶ್ವದ ಚಲನೆಗೆ ಕಾರಣವೋ ಆತನೇ ಈ ಜೀವದ ಚಲನೆಗೂ ಕಾರಣ. ಒಮ್ಮೆ ಇವೆರಡನ್ನು ಶಕ್ತಿಯ ಮಟ್ಟದಲ್ಲಿ ಒಂದುಗೂಡಿಸಿ ಬಿಟ್ಟರೆ ಮತ್ತೆ ಕೇಳಲೇ ಬೇಡಿ. ಅಂತಹ ವ್ಯಕ್ತಿಯು ಯಾವ ಭೌತಿಕ ಶಕ್ತಿಗಳಿಗೂ ನಿಲುಕದ ಶಕ್ತಿಯ ಗಣಿಯಾಗಿಬಿಡುತ್ತಾನೆ. ಆತನಿಂದ ಹೊರಟ ಒಂದೊಂದು ಆಲೋಚನೆಯೂ ಸಾಮೂಹಿಕ ಪರಿವರ್ತನೆ ತರಬಲ್ಲಂಥವಾಗಿಬಿಡುತ್ತದೆ.
ಋಷಿ ವಿಶ್ವಾಮಿತ್ರರು ಈ ಮಂತ್ರವನ್ನು ಪಡಕೊಂಡಮೇಲೆ ಅದರ ಜಪಕ್ಕೆ ನಿಯಮಿತ ರೂಪು-ರೇಷೆಗಳನ್ನು ಜೋಡಿಸಲಾಯ್ತು. ಜಪಕ್ಕೆ ಮುನ್ನ ಹಿಂದಿನ ರಾತ್ರಿಯವರೆಗೂ ಮಾಡಿದ ಪಾಪಗಳನ್ನು ತೊಳೆದುಕೊಂಡು; ಒಳಗೆ ಕುಳಿತ ಪಾಪ ಪುರುಷನನ್ನು ನಿಶ್ವಾಸದೊಂದಿಗೆ ಹೊರದಬ್ಬಿ ಮನಸ್ಸನ್ನು ಸ್ವಚ್ಛಗೊಳಿಸುವ ಕ್ರಿಯೆ ಮೊದಲ ಹಂತ. ಆಮೇಲೆ ಜಪನಿರತವಾಗುವ ಕೈ ಬೆರಳುಗಳಿಗೆ ಮನಸ್ಸು, ಹೃದಯ, ಬುದ್ಧಿಗಳಿಗೆ ಮಂತ್ರಸ್ನಾನ. ಆನಂತರ ಸವಿತೃದೇವತೆಯನ್ನು ತನ್ನೊಳಗೇ ಆವಾಹಿಸಿಕೊಂಡು ನಿರಂತರ ಜಪ ಮಾಡೋದು. ಹೀಗೆ ಮಾಡುವ ಮುನ್ನ ಮನಸ್ಸಿನ ಸುತ್ತ ಆವರಿಸಿರುವ ದುಷ್ಟ ಶಕ್ತಿಗಳನ್ನು ಓಡಿಸುವ, ಕುಳಿತುಕೊಳ್ಳಲು ಅವಕಾಶ ಕೊಟ್ಟ ಪೃಥ್ವಿ ದೇವಿಗೆ ನಮಿಸಿ ಆಸನ ಶುದ್ಧಿ ಮಾಡಿಸುವ ಪ್ರಕ್ರಿಯೆಯನ್ನೂ ಅವರು ಮರೆಯಲಿಲ್ಲ.sound-wave

ಜಪ ನಿರಂತರವಾಗಿ ನಡೆಯಲಾರಂಭಿಸಿದಂತೆ ದೇಹದ ಸುತ್ತ ಶಾಬ್ದಿಕ ತರಂಗಗಳು ಮತ್ತು ಭಾವನಾ ತರಂಗಗಳು ಆವರಿಸಲಾರಂಭಿಸುತ್ತವೆ. ಪ್ರತಿಯೊಂದು ಕ್ರಿಯೆಯಲ್ಲಿಯೂ ಮನಸ್ಸು ಅದೆಷ್ಟು ತಲ್ಲೀನವಾಗುತ್ತದೋ ಅಷ್ಟು ವಿಸ್ತಾರವಾದ ತರಂಗಗಳು ನಿಮರ್ಾಣಗೊಳ್ಳುತ್ತವೆ. ಕೊಳದ ಮಧ್ಯೆ ಬಿದ್ದ ಕಲ್ಲೊಂದು ದಡದವರೆಗೂ ತರಂಗಗಳನ್ನು ವಿಸ್ತರಿಸುವುದೋ ಹಾಗೆ ಶ್ರದ್ಧೆಯೊಂದಿಗೆ ಮಾಡಿದ ಜಪ ಕೊನೆ- ಮೊದಲಿಲ್ಲದ ವಿಶ್ವಕ್ಕೆ ತನ್ನ ತಾನು ತೆರೆದುಕೊಂಡುಬಿಡುತ್ತದೆ. ಸಹಜವಾಗಿಯೇ ವಿಶ್ವದಲ್ಲಿ ಆಗುವ ಬದಲಾವಣೆಗಳಿಂದ ದೇಹವೂ ಚೈತನ್ನ ಪಡೆಯುತ್ತದೆ.
ಹೀಗಾಗಿಯೇ ಸಾಧನೆ-ಜಪ-ತಪಗಳಲ್ಲಿ ನಿರತರಾದವರು, ಹಿಮಾಲಯದಲ್ಲಿ ತಪಸ್ಸಿಗೆ ಕುಳಿತವರೂ ಸ್ತುತಿಗೆ ಯೋಗ್ಯರೇ. ಸಮಾಜದ ನಡುವೆ ನುಗ್ಗಿ ಕೆಲಸ ಮಾಡುವವರಿಗೆ ಸದಾ ಸ್ಫೂತರ್ಿ ಚೈತನ್ಯಗಳು ದೊರೆಯೋದೇ ಈ ಪುಣ್ಯಾತ್ಮರ ಸಾಧನೆಯ ಭಾವನಾ ತರಂಗಗಳಿಂದ. ಈ ತರಂಗಗಳನ್ನು ಸ್ವೀಕರಿಸಬಲ್ಲ ರೆಡಾರ್ ಸ್ಟೇಶನ್ಗಳು ನಿಮರ್ಾಣಗೊಳ್ಳಬೇಕಷ್ಟೇ. ಇಲ್ಲವಾದಲ್ಲಿ ರಮಣ ಮಹಷರ್ಿಗಳ ಬದುಕಿನ ಘನತೆಯನ್ನು ಸಾಮಾನ್ಯ ಪದಗಳಿಂದ ಕಟ್ಟಿಕೊಡುವುದು ಅಸಾಧ್ಯ. ವಿದ್ವಾರಣ್ಯರು ಸಾಧನೆ, ಅನುಷ್ಠಾನದಲ್ಲಿಯೋ ನಿರತರಾದವರಿರಬಹುದು. ಆದರೆ ಅವರ ಅಂತನರ್ಿಹಿತ ಶಕ್ತಿಯೇ ಹಕ್ಕ-ಬುಕ್ಕರ ಪಾಲಿಗೆ ಹೊಸ ಸಾಮ್ರಾಜ್ಯ ನಿಮರ್ಾಣಕ್ಕೆ ಪ್ರೇರಕವಾಯ್ತು. ಸಮರ್ಥ ರಾಮದಾಸರು ಪರಿಪೂರ್ಣ ಬೈರಾಗಿಯೇ. ಸದಾ ವನವಾಸಿಯೇ ಆತ. ಆದರೆ ಶಿವಾಜಿಗೆ ಅವರಿತ್ತ ಪ್ರೇರಣೆಯಿಂದಾಗಿಯೇ ಹಿಂದೂ ಧರ್ಮ ಪುನರುತ್ಥಾನದ ಹಾದಿ ಹಿಡಿಯಿತೆಂಬುದನ್ನು ಮರೆಯುವುದುಂಟೇನು? ರಾಮಕೃಷ್ಣರು ತಮ್ಮ ದೇಹತ್ಯಾಗದ ಹೊತ್ತಲ್ಲಿ ವಿವೇಕಾನಂದರಿಗೆ ಹರಿಸಿದ ಅಪಾರ ಪ್ರಮಾಣದ ಸಾತ್ತ್ವಿಕ ಶಕ್ತಿಯ ಉಲ್ಲೇಖ ಬಲು ಜೋರಾಗಿಯೇ ಬಂದಿದೆಯಲ್ಲ. ಯೋಗಿ ಅರವಿಂದರಂತೂ ಕ್ರಾಂತಿಕಾರ್ಯಕ್ಕಾಗಿ ಒಂದು ವರ್ಷ ಜೈಲಿನಲ್ಲಿದ್ದಾಗ ಧ್ಯಾನಸ್ಥರಾಗುತ್ತ ಆಗುತ್ತ ಬದುಕಿನ ದಿಕ್ಕನ್ನೇ ಬದಲಾಯಿಸಿಕೊಂಡುಬಿಟ್ಟರು. ಅವರೀಗ ಪಾಂಡಿಚೇರಿಯಲ್ಲಿ ಕುಳಿತು ಹೊರಹಾಕುತ್ತಿದ್ದ ಒಂದೊಂದು ಆಲೋಚನೆಗಳೂ ಸೂಕ್ತ ವ್ಯಕ್ತಿಯನ್ನು ಅರಸಿ ಕೆಲಸ ಮಾಡಿಸಿಬಿಡುತ್ತಿದ್ದವು.
‘ನಾನು ಎದುರಿಗಿರುವವರನ್ನು ಕೊಂದಾಗಿದೆ, ನೀನು ನಿಮಿತ್ತ ಮಾತ್ರ’ ಅಜರ್ುನನಿಗೆ ಶ್ರೀ ಕೃಷ್ಣ ಹೇಳಿದನಲ್ಲ; ಅದೂ ಹೀಗೆಯೇ. ಶ್ರೀಕೃಷ್ಣನ ದುಷ್ಟ ಶಿಕ್ಷಣದ ಆಲೋಚನೆ ಹೊರಟಾಗಿತ್ತು. ಅದನ್ನು ಸ್ವೀಕರಿಸಬಲ್ಲ ಹೃದಯ ಇದ್ದದ್ದು ಅಜರ್ುನ ಮಾತ್ರ. ಹೀಗಾಗಿ ಆತ ನಿಮಿತ್ತವಾದ!
ಮಂತ್ರ ಮತ್ತು ನಿರಂತರ ಜಪ ನಮ್ಮನ್ನು ನಿಮಿತ್ತವಾಗಿಸುತ್ತದೆ. ವಿಶ್ವಶಕ್ತಿ ನಮ್ಮೊಳಗೆ ಪ್ರವಹಿಸಲು ನಮ್ಮನ್ನೂ ಆಣಿಯಾಗಿಸುತ್ತದೆ!

Comments are closed.