ವಿಭಾಗಗಳು

ಸುದ್ದಿಪತ್ರ


 

ನಮೋ ಬ್ರಿಗೇಡಿನ ಆ ಒಂದು ವರ್ಷದ ನೆನಪು

ನರೇಂದ್ರ ಮೋದಿ ಪ್ರಧಾನಿ ಗದ್ದುಗೆಯಲ್ಲಿ ಕೂತು ಬರೋಬ್ಬರಿ ಒಂದು ವರ್ಷವಾಯ್ತು. ಎಲ್ಲರೂ ಒಂದು ವರ್ಷದ ಅವರ ಸಾಧನೆ, ತಿರುಗಾಟ, ಕೊರತೆ, ಗೆದ್ದಿದ್ದು – ಎಡವಿದ್ದು ಎಲ್ಲವನ್ನೂ ವಿಶ್ಲೇಷಿಸುತ್ತಿದ್ದಾರೆ. ವರ್ಷ ಏಕ, ಸಾಧನೆ ಅನೇಕ ಎನ್ನುವ ಹೆಸರಲ್ಲಿ ಕೇಂದ್ರ ಸರ್ಕಾರದ ಜಾಹೀರಾತುಗಳು ಎಲ್ಲಡೆ ರಾರಾಜಿಸುತ್ತಿವೆ. ನಾನು ಅವುಗಳನ್ನೆ ಮತ್ತೆ ನಿಮ್ಮ ಮುಂದಿರಿಸಲು ಬಯಸುವುದಿಲ್ಲ. ನನ್ನ ಮನಸ್ಸು ಸುಮಾರು ಎರಡು ವರ್ಷಗಳ ಹಿಂದೋಡುತ್ತದೆ.
ಆಗಿನ್ನೂ ಮನಮೋಹನ ಸಿಂಗರು ಅಧಿಕಾರದಲ್ಲಿದ್ದರು. ಹತ್ತು ವರ್ಷಗಳಲ್ಲಿ ಹತ್ತಾರು ಹಗರಣಗಳ ಮೂಲಕ ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳಿಗೆ ಕಿರೀಟಪ್ರಾಯರಾಗಿದ್ದರು. ವಾಜಪೇಯಿಯವರ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದೇ ಅಚ್ಚರಿ. ಅದರಲ್ಲಿ ಯುಪಿಎ ಮರುಕಳಿಸಿದ ಮೇಲಂತೂ ಮುಂದಿನ ಪ್ರಧಾನಿ ರಾಹುಲ್ ಗಾಂಧಿಯೆಂದು ನಿಶ್ಚಯ ಮಾಡಿಯಾಗಿತ್ತು. ತೊಡಕಾಗಬಲ್ಲ ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿಯಾಗಿಸುವ ಔದಾರ್ಯ ಕಾಂಗ್ರೆಸ್ ತೋರಿದ್ದು ಅದಕ್ಕೇ. ಹಾಗೆ ನೋಡಿದರೆ, ಆ ನಿರ್ಧಾರವೇ ಅವರಿಗೆ ಮುಳುವಾಗಿದ್ದು. ಅವರ ಲೆಕ್ಕಾಚಾರದಲ್ಲಿ ಅಡ್ವಾಣಿ ಮತ್ತೆ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ, ರಾಹುಲ್ ಗಾಂಧಿಯನ್ನು ಅವರೆದುರು ಗೆಲ್ಲಿಸಿಬಿಡಬಹುದೆಂಬ ವಿಶ್ವಾಸ ಅವರಲ್ಲಿತ್ತು. ಇಲ್ಲಿ ಆದದ್ದು ಬೇರೆಯೇ.
ಮೋದಿ ಪ್ರಧಾನಿ ಅಭ್ಯರ್ಥಿಯಾಗಬೇಕೆಂಬ ಚರ್ಚೆ ಶುರುವಾಯ್ತು. ಕಿಡಿ ಕಾಡ್ಗಿಚ್ಚಾಗುತ್ತಿದ್ದಂತೆ ಒಳಗೊಳಗೆ ಕಚ್ಚಾಟವೂ ಶುರುವಾಯ್ತು. ಅಡ್ವಾಣಿಗೆ ಹತ್ತಿರವಿದ್ದು ಮೋದಿ ವಿರುದ್ಧ ಕತ್ತಿ ಮಸೆಯುವವರೂ ಸಾಕಷ್ಟು ಜನ ಇದ್ದರು, ವಾತಾವರಣ ಬಿಸಿಯಾಗಿತ್ತು.
ಬೆಂಗಳೂರಿನ ಕೆಲವು ತರುಣರು ಪ್ರಧಾನಿ ಪಟ್ಟಕ್ಕೆ ಮೋದಿ ಅಂತ ಫೇಸ್‍ಬುಕ್ ಪೇಜ್ ಶುರು ಮಾಡಿದರು. ಮಂಗಳೂರಿನಲ್ಲಿ ಅದಾಗಲೇ ‘ಮೋದಿಫೈಡ್’ ಸ್ಟಿಕ್ಕರ್‍ಗಳು ತಿರುಗಾಡಲಾರಂಭಿಸಿದವು. ಭಾಜಪದ ವಲಯವೇ ಇನ್ನೂ ಗೊಂದಲದಲ್ಲಿತ್ತು. ಅವರಿಗೆ ಯಾರ ಪರ ಜೈಕಾರ ಹೇಳಿದರೆ ರಾಜಕೀಯ ಭವಿಷ್ಯ ಏನಾಗುವುದೋ ಎಂಬ ಆತಂಕ ಇದ್ದೇ ಇತ್ತು. ಈ ತರುಣರಿಗಿರಲಿಲ್ಲ. ಆನ್‍ಲೈನ್‍ನಲ್ಲಿ ಭರ್ಜರಿ ಪ್ರಚಾರ ದೊರೆತು ಸಾವಿರಾರು ಜನ ಪೇಜ್ ಲೈಕ್ ಮಾಡಿದಮೇಲಂತೂ ಅವರ ಉತ್ಸಾಹ ನೂರ್ಮಡಿಯಾಯ್ತು. ಆಗಲೇ ಅವರುಗಳ ಮನಸಲ್ಲಿ ನರೇಂದ್ರ ಮೋದಿಯವರ ಹೆಸರಲ್ಲಿ ಸೇನೆ ಕಟ್ಟುವ ಬಯಕೆ ಟಿಸಿಲೊಡೆದಿದ್ದು. ಅದೇ ಮುಂದೆ ‘ನಮೋ ಬ್ರಿಗೇಡ್’ ಆಗಿ ರಾಜ್ಯವ್ಯಾಪಿ ಹರಡಿದ್ದು.
ನಾನಾಗ ಇವುಗಳಿಂದ ಬಲು ದೂರವಿದ್ದೆ. ಮೋದಿ ಪ್ರಧಾನ ಮಂತ್ರಿಯಾಗಲೆಂಬ ತುಡಿತ ಹೊಂದಿದ್ದ ಅಸಂಖ್ಯರಲ್ಲಿ ಒಬ್ಬನಾಗಿ, ಅಡ್ವಾಣಿಯವರಿಗೆ ಹಿಡಿ ಶಾಪ ಹಾಕುತ್ತ ಕೂತಿದ್ದ ಅನೇಕರಲ್ಲಿ ಒಬ್ಬನಾಗಿದ್ದೆ! ಮಿತ್ರ ಚೇತನ್, ಗ್ರಂಥಾಲಯವೊಂದರಲ್ಲಿ ಅಧ್ಯಯನ ನಿರತನಾಗಿದ್ದ ನನ್ನnamo ಬಳಿ ಬಂದು ನಮೋ ಬ್ರಿಗೇಡ್‍ನ ಕಲ್ಪನೆ ಬಿಚ್ಚಿಟ್ಟ. ಖುಷಿಯಾಯ್ತು. ಮಂಗಳೂರಿನ ಉದ್ಯಮಿ, ಮತ್ತೊಬ್ಬ ಮಿತ್ರ ನರೇಶ್ ಶೆಣೈ ಇದರ ಹಿಂದೆ ನಿಂತಿದ್ದುದು ಸಂತಸ ಹೆಚ್ಚಿಸಿತು. ಉದ್ಘಾಟನೆಯೂ ಆಯ್ತು. ನೆನಪಿಡಿ. ಆಗಲೂ ಮೋದಿಯವರ ಪರವಾಗಿ ಪಕ್ಷದ ವಲಯದಲ್ಲಿ ದೊಡ್ಡ ಸಂಖ್ಯೆ ಇರಲಿಲ್ಲ.
ನಮೋ ಬ್ರಿಗೇಡ್ ಬಲು ಬೇಗ ಹರಡಿಕೊಂಡಿತು. ಲಭ್ಯವಿರುವ ಎಲ್ಲ ಸಾಧನಗಳನ್ನು ಬಳಸಿತು. ರಾಷ್ಟ್ರಮಟ್ಟದಲ್ಲಿ ಮೋದಿ ನೀಡುವ ಎಲ್ಲ ಕಲ್ಪನೆಗಳನ್ನೂ ಕರ್ನಾಟಕದಲ್ಲಿ ಭೂಮಿ ಮಟ್ಟಕ್ಕಿಳಿಸುವ ಸಂಘಟನೆ ಬ್ರಿಗೇಡ್ ಎನ್ನುವಷ್ಟರ ಮಟ್ಟಿಗೆ ಇದು ಹಬ್ಬಿಕೊಂಡಿತು. ಅದೆಷ್ಟು ಬೈಕ್ ರ್ಯಾಲಿಗಳು ನಡೆದವೋ ಲೆಕ್ಕ ಸಿಗಲಾರದು. ಅದೆಷ್ಟು ಮೋದಿ ಕಟೌಟ್‍ಗಳು ಊರ ತುಂಬ ರಾರಾಜಿಸಿದವೋ ಗೊತ್ತಿಲ್ಲ. ಅಂಕಿ ಅಂಶಗಳ ಕಲ್ಪನೆ ಮೀರಿ ಊರೂರಲ್ಲಿ ಭಾಷಣಗಳು ನಡೆದವು. ಭಾಷಣ ಮಾಡುವವರಿಗಾಗಿ ಮೋದಿ ಸಾಧನೆಯ ಕುರಿತಂತೆ ಅಭ್ಯಸ ವರ್ಗ ಬೇರೆ!
‘ನಮೋ ಬ್ರಿಗೇಡ್’ ಪಾರ್ಟಿಯಾಗಿ ಮುಂದೊಮ್ಮೆ ಕಂಟಕವಾಗಿಬಿಡುತ್ತಾ ಅನ್ನೋ ಹೆದರಿಕೆ ಅನೇಕರಿಗಿತ್ತು. ಕೆಲವರಿಗೆ ಇದರೊಳಗೆ ನುಗ್ಗಿ ಒಂದಷ್ಟು ಕೆಲಸ ಮಾಡಿ ಟಿಕೆಟ್ ಕೇಳಿಬಿಡುವ ಬಯಕೆಯೂ ಇತ್ತು. ಆದರೆ ಬ್ರಿಗೇಡ್ ಸಂಕಲ್ಪ ಗಟ್ಟಿಯಾಗಿತ್ತು. “ಈ ಸಂಘಟನೆಯವರ್ಯಾರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಮತ್ತು ಈಗಾಗಲೇ ರಾಜಕಾರಣದಲ್ಲಿರುವವರನ್ನು ವೇದಿಕೆ ಹತ್ತಿಸುವುದಿಲ್ಲ”. ಪಾಪ! ಆಕಾಂಕ್ಷಿಗಳು ದಊರ ಉಳಿದರು; ಅವಕಾಶ ಸಿಕ್ಕಾಗೆಲ್ಲ ಬ್ರಿಗೇಡನ್ನು ಜರಿದರು.
ನಮೋ ಬ್ರಿಗೇಡ್, ಮೋದಿ ಪ್ರಧಾನಿಯಾಗಲೆಂಬ ಏಕೈಕ ಉದ್ದೇಶದಿಂದ ದುಡಿಯುತ್ತಿದ್ದುದರಿಂದ ಈ ಆರೋಪಗಳೆಲ್ಲ ಹೆಗಲ ಮೇಲಿನ ಧೂಳಾಯ್ತು ಅಷ್ಟೇ. ಹೊಸ ಹೊಸ ಪ್ರಯೋಗಗಳಿಗೆ ತಂಡ ಅಣಿಯಾಗುತ್ತಲೇ ಇತ್ತು. ‘ನಮೋ ತೇರು’ ಇಡಿಯ ನಾಡಿನ ಪ್ರದಕ್ಷಿಣೆ ಹಾಕಿತು. ನಮೋ ಹೆಸರಲ್ಲಿ ತಂದ ‘ನಮೋ ವಾಣಿ’ ಪತ್ರಿಕೆ, ಫೋನಿನಲ್ಲಿ ನಮೋ ಮಾತು ಕೇಳಿಸುವ ‘ನಮೋ ಸುನೋ’, ಶುರು ಮಾಡಿ ಕಯಸುಟ್ಟುಕೊಮಡ ‘ನಮೋ ರೇಡಿಯೋ’, ಗೀತ ಕಥನ ‘ನಮೋ ಭಾರತ್’ ಇವೆಲ್ಲವನ್ನೂ ಸೇರಿಸಿಕೊಂಡು ಮಲ್ಪೆಯಲ್ಲಿ ನಡೆಸಿದ ಬೃಹತ್ ‘ನಮೋ ಉತ್ಸವ್’ ಒಂದೊಂದನ್ನೂ ನೆನಪಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ. ಚುನಾವಣೆಗೆ ತಿಂಗಳ ಮುನ್ನ ಶುರುವಾದ ‘ನಮ್ಮ ಮನೆ, ನಮೋ ಮನೆ’ ಸ್ಟಿಕ್ಕರುಗಳ ವಿತರಣೆಯಂತೂ ಹಳ್ಳಿ ಹಳ್ಳಿಯ ಮೂಲೆಮೂಲೆಯನ್ನೂ ತಲುಪಿತು. ಇಂದಿಗೂ ಅನೇಕ ಮನೆಗಳ ಮೇಲೆ ಅದು ರಾರಾಜಿಸುತ್ತಿದೆ!
ಓಹ್! ಅವತ್ತಿನ ದಿನಗಳಲ್ಲಿ ಬೇರೇನೂ ಆಕಾಂಕ್ಷೆಯಿಲ್ಲದೆ ಬೀದಿ ಬೀದಿಗಳಲ್ಲಿ ನಿಂತು ನರೇಂದ್ರ ಮೋದಿಗೆ ಓಟು ಕೇಳುತ್ತಿದ್ದ ತರುಣರನ್ನು ನೆನೆಸಿಕೊಂಡಾಗಲೆಲ್ಲ ರೋಮಾಂಚನವಾಗುತ್ತದೆ. ಸುಪ್ತ ದೇಶಭಕ್ತಿ ವ್ಯಕ್ತವಾಗುವ ರೀತಿ ಎಂಥದ್ದೆಂಬ ಅಚ್ಚರಿ ಈಗಲೂ ಆವರಿಸಿಕೊಳ್ಳುತ್ತದೆ.
ಹಾಗಂತ ಬ್ರಿಗೇಡ್ ಬರಿಯ ರಸ್ತೆ ಬದಿ ನಿಂತು ಕೆಲಸ ಮಾಡುವ ಕಾರ್ಯಕರ್ತರ ದಂಡಾಗಿರಲಿಲ್ಲ. ಇದು ಜನರ ಬೌದ್ಧಿಕ ಶಕ್ತಿವೃದ್ಧಿಗೂ ಸಾಕಷ್ಟು ಕೆಲಸ ಮಾಡಿತ್ತು. ಮೋದಿ – ಮುಸ್ಲಿಮ್ – ಮೀಡಿಯಾ ಬರೆದ ಮಧು ಕಿಶ್ವರ್, ಮೋದಿಯ ಆಪ್ತ ಜಫರ್ ಸರೇಶ್‍ವಾಲಾ ರಾಜ್ಯ ಪ್ರವಾಸ ಮಾಡಿದರು. ಸೂಫಿ ಚಿಸ್ತಿ ಕರ್ನಾಟಕದ ಮುಸಲ್ಮಾನರಿಗೆಂದೇ ಬ್ರಿಗೇಡ್ ಕರೆತಂದ ಗುಜರಾತಿ ಮೌಲ್ವಿ. ಮೋದಿಯವರ ಆರ್ಥಿಕ ಯೋಜನೆ ಎಂಬ ಶೀರ್ಷಿಕೆಯಡಿಯಲ್ಲಿ ಅನಿಲ್ ಬೇಕಿಲ್‍ರನ್ನು ನಾವು ಔರಂಗಾಬಾದಿನಿಂದ ಕರೆಸಿದ್ದೆವು. ಆಗೆಲ್ಲ ಅನೇಕರು ಮೂಗು ಮುರಿದಿದ್ದರು. ಈಗ ಮೋದಿಯವರು ಇದೇ ಚಿಂತನೆಯನ್ನು ಆಡಳಿತದಲ್ಲಿ ಬಳಸಿಕೊಳ್ಳುವುದನ್ನು ಕಂಡಾಗ ಗಾಬರಿಯಾಗುತ್ತಿದ್ದಾರೆ. ಜನಧನ್ ಯೋಜನೆ ಮತ್ತು ಖರೀದಿಯಲ್ಲು ನಗದು ನಿಷೇಧದ ಈ ಕಲ್ಪನೆಗಳೆಲ್ಲ ನಮೋ ಬ್ರಿಗೇಡ್ ಬಲು ಹಿಂದೆಯೇ ಹೇಳಿದಂಥವು. ನರೇಂದ್ರ ಮೋದಿಯವರ ಅಂತರಂಗವನ್ನು ಅರಿತದ್ದು ಬ್ರಿಗೇಡ್ ಎಂಬುದು ಅತಿಶಯೋಕ್ತಿ ಎನ್ನಿಸಿದರೆ ಕ್ಷಮಿಸಿಬಿಡಿ!
ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಸುಬ್ರಮಣಿಯನ್ ಸ್ವಾಮಿ ಬಂದಿದ್ದಂತೂ ಹೆಮ್ಮೆಯ ಪ್ರಸಂಗವೇ. ಅವರು ರಾಹುಲ್ ಗಾಂಧಿಯನ್ನು ಬುದ್ಧು ಎಂದು ಕರೆದು ಕಾಂಗ್ರೆಸ್ಸಿಗರು ಮಂಗಳೂರಲ್ಲಿ ರಾದ್ಧಾಂತ ಎಬ್ಬಿಸಿದ್ದೂ ಉಲ್ಲೇಖಿಸಲೇಬೇಕಾದ ಘಟನೆಯಾಯ್ತು.
ಇವುಗಳನ್ನೂ ಬಿಟ್ಟು ಅನೇಕ ಕಾರ್ಯಕ್ರಮಗಳು ನಡೆದಿವೆ. ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪಟಾಕಿ ಸರ ಸಿಡಿದಂತೆ ಅದೆಷ್ಟು ತೀವ್ರಗತಿಯಲ್ಲಿ ತರುಣರು ರಾಜ್ಯಾದ್ಯಂತ ಅಲೆದಾಡಿದರೋ! ಪ್ರತಿಫಲವೂ ಬಂತು. ಚೆನಾವಣೆಗೆ ಹಿಂದೆ ಮುಂದೆ ರಾತ್ರಿ – ಹಗಲುಗಳ ವ್ಯತ್ಯಾಸ ಅರಿತವರಿರಲಿಲ್ಲ. ಸುಮಾರು ಒಂದು ತಿಂಗಳ ದೀರ್ಘ ಕಾಯುವಿಕೆ. ಕೊನೆಗೂ ಫಲಿತಾಂಶದ ದಿನ ನಮ್ಮನ್ನು ನಾವೇ ನಂಬಲಾಗದ ಪರಿಸ್ಥಿತಿ. 300 ಸಿಟುಗಳನ್ನು ಮೋದಿ ಬಾಚಿ ತಬ್ಬಿಕೊಂಡಿದ್ದರು. ನನಗೆ ಚೆನ್ನಾಗಿ ನೆನಪಿದೆ. ಮೋದಿ ಪರವಾದ ಚಟುವಟಿಕೆ ನಡೆಸುವಾಗ ಬೆಂಗಳೂರಿನ ಸ್ವಾಮೀಜಿಯೊಬ್ಬರು ನನ್ನನ್ನು ಕರೆದು ಮೋದಿಗಿರುವ ಕಂಟಕ ನಿವಾರಣೆಗಾಗಿ ಹೋಮವೊಂದನ್ನು ಮಾಡುವಂತೆ ಹೇಳಿದ್ದರು. ಶಿವಮೊಗ್ಗದಲ್ಲಿ ಬಾಲಗುರೂಜಿಯವರನ್ನು ಕೇಳಿಕೊಂಡಿದ್ದೆವು. ಅವರು ಹೋಮ ಮುಗಿಸಿ ಮುನ್ನೂರಕ್ಕಿಂತಲೂ ಕಡಿಮೆ ಸೀಟುಗಳು ಸಾಧ್ಯವೇ ಇಲ್ಲ ಅಂದಿದ್ದರು. ನಾನು ಅಸಾಧ್ಯವೆಂದುಕೊಂಡು ನಕ್ಕಿದ್ದೆ ಅಷ್ಟೇ.
ಮೋದಿ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿಯೇಹೋಯ್ತು. ಅವರು ಧಾವಿಸುತ್ತಿರುವ ಪರಿ ನೋಡಿದರೆ 68 ವರ್ಷಗಳ ಕೊಳೆ ತೊಳೆದುಬಿಡುವ ಧಾವಂತವಿದೆ. ವಿರೋಧ ಪಕ್ಷಗಳು ಹೈರಾಣಾಗಿ ಹೋಗಿವೆ. ವಿರೋಧಕ್ಕಾಗಿ ವಿರೋಧ ಎನ್ನುವಂತಾಗಿದೆ ಅವರ ಸ್ಥಿತಿ. ಭಾರತದ ರಕ್ಷಣಾ ಇಲಾಖೆ ಗುಟುರು ಹಾಕಿದ ಗೂಳಿಯಂತಾಗಿದೆ ಈಗ. ಆರ್ಥಿಕ ಪರಿಸ್ಥಿತಿ ದಿನೇದಿನೇ ಸುಧಾರಿಸುತ್ತಿದೆ. ಶಿಕ್ಷಣ ಇಲಾಖೆಯ ಗತ್ತು ಗೈರತ್ತುಗಳು ಬದಲಾಗಿ ರಾಷ್ಟ್ರೀಯತೆಗೆ ಬಲ ಬಂದಿದೆ. ರೈಲ್ವೇ ಇಲಾಖೆ ಕಾಯಕಲ್ಪಕ್ಕೆ ಸಜ್ಜಾಗಿದೆ. ಅನಗತ್ಯವಾಗಿ ತೊಳಲಾಡುತ್ತಿದ್ದ ಸಾವಿರಾರು ಕಾನೂನುಗಳು ಮನೆಗೆ ಹೋಗಲಿವೆ.
ಎಷ್ಟೊಂದು ಬದಲಾವಣೆಗಳು! ನಮೋ ಬ್ರಿಗೇಡ್ ಕಟ್ಟಿ ಓಡಾಟ ಮಾಡಿ ಒಂದೊಂದು ವರ್ಷ ಪರಿತಾಪಪಟ್ಟಿದ್ದೂ ಸಾರ್ಥಕವಾಯ್ತು. ಅಷ್ಟೇ ಅಲ್ಲ, ಈ ಬ್ರಿಗೇಡ್ ಮೋದಿ ಪ್ರಧಾನಿಯಾದ ನಂತರ ವಿಸರ್ಜನೆಯಾಗುವುದೆಂಬ ಮಾತನ್ನು ಉಳಿಸಿಕೊಂಡಿರುವುದಕ್ಕೂ ಹೆಮ್ಮೆಯಾಯ್ತು! ಹಾ! ಅಂದಿನ ಆ ನಮೋ ಬ್ರಿಗೇಡ್ ಇಂದು ಅನೇಕ ರೂಪಾಂತರ ಪಡಕೊಂಡು, ರಾಷ್ಟ್ರೀಯವಾಹಿನಿಗೆ ತರುಣರನ್ನು ತರಲು ಶ್ರಮಿಸುತ್ತಿರುವ ಸಂಗತಿಯೂ ಆಶಾದಾಯಕವೇ. ಒಂದು ವರ್ಷ ತುಂಬಿದಾಗ ನೆನಪಿಸಿಕೊಳ್ಳಲು ಅನೇಕ ಸಂಗತಿಗಳಿವೆ. ನಮಗೆ ಈ ಒಂದು ವರ್ಷಕ್ಕಿಂತ ಅದರ ಹಿಂದಿನ ಒಂದು ವರ್ಷ ನೆನಪಿನಲ್ಲಿ ಉಳಿಯುವಂಥದ್ದು.
ಕಂಟಕ ನಿವಾರಣೆಗಾಗಿ ಹೋಮವೊಂದನ್ನು ಮಾಡುವಂತೆ ಹೇಳಿದ್ದರು. ಶಿವಮೊಗ್ಗದಲ್ಲಿ ಬಾಲಗುರೂಜಿಯವರನ್ನು ಕೇಳಿಕೊಂಡಿದ್ದೆವು. ಅವರು ಹೋಮ ಮುಗಿಸಿ ಮುನ್ನೂರಕ್ಕಿಂತಲೂ ಕಡಿಮೆ ಸೀಟುಗಳು ಸಾಧ್ಯವೇ ಇಲ್ಲ ಅಂದಿದ್ದರು. ನಾನು ಅಸಾಧ್ಯವೆಂದುಕೊಂಡು ನಕ್ಕಿದ್ದೆ ಅಷ್ಟೇ.
ಮೋದಿ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿಯೇಹೋಯ್ತು. ಅವರು ಧಾವಿಸುತ್ತಿರುವ ಪರಿ ನೋಡಿದರೆ 68 ವರ್ಷಗಳ ಕೊಳೆ ತೊಳೆದುಬಿಡುವ ಧಾವಂತವಿದೆ. ವಿರೋಧ ಪಕ್ಷಗಳು ಹೈರಾಣಾಗಿ ಹೋಗಿವೆ. ವಿರೋಧಕ್ಕಾಗಿ ವಿರೋಧ ಎನ್ನುವಂತಾಗಿದೆ ಅವರ ಸ್ಥಿತಿ. ಭಾರತದ ರಕ್ಷಣಾ ಇಲಾಖೆ ಗುಟುರು ಹಾಕಿದ ಗೂಳಿಯಂತಾಗಿದೆ ಈಗ. ಆರ್ಥಿಕ ಪರಿಸ್ಥಿತಿ ದಿನೇದಿನೇ ಸುಧಾರಿಸುತ್ತಿದೆ. ಶಿಕ್ಷಣ ಇಲಾಖೆಯ ಗತ್ತು ಗೈರತ್ತುಗಳು ಬದಲಾಗಿ ರಾಷ್ಟ್ರೀಯತೆಗೆ ಬಲ ಬಂದಿದೆ. ರೈಲ್ವೇ ಇಲಾಖೆ ಕಾಯಕಲ್ಪಕ್ಕೆ ಸಜ್ಜಾಗಿದೆ. ಅನಗತ್ಯವಾಗಿ ತೊಳಲಾಡುತ್ತಿದ್ದ ಸಾವಿರಾರು ಕಾನೂನುಗಳು ಮನೆಗೆ ಹೋಗಲಿವೆ.
ಎಷ್ಟೊಂದು ಬದಲಾವಣೆಗಳು! ನಮೋ ಬ್ರಿಗೇಡ್ ಕಟ್ಟಿ ಓಡಾಟ ಮಾಡಿ ಒಂದೊಂದು ವರ್ಷ ಪರಿತಾಪಪಟ್ಟಿದ್ದೂ ಸಾರ್ಥಕವಾಯ್ತು. ಅಷ್ಟೇ ಅಲ್ಲ, ಈ ಬ್ರಿಗೇಡ್ ಮೋದಿ ಪ್ರಧಾನಿಯಾದ ನಂತರ ವಿಸರ್ಜನೆಯಾಗುವುದೆಂಬ ಮಾತನ್ನು ಉಳಿಸಿಕೊಂಡಿರುವುದಕ್ಕೂ ಹೆಮ್ಮೆಯಾಯ್ತು! ಹಾ! ಅಂದಿನ ಆ ನಮೋ ಬ್ರಿಗೇಡ್ ಇಂದು ಅನೇಕ ರೂಪಾಂತರ ಪಡಕೊಂಡು, ರಾಷ್ಟ್ರೀಯವಾಹಿನಿಗೆ ತರುಣರನ್ನು ತರಲು ಶ್ರಮಿಸುತ್ತಿರುವ ಸಂಗತಿಯೂ ಆಶಾದಾಯಕವೇ. ಒಂದು ವರ್ಷ ತುಂಬಿದಾಗ ನೆನಪಿಸಿಕೊಳ್ಳಲು ಅನೇಕ ಸಂಗತಿಗಳಿವೆ. ನಮಗೆ ಈ ಒಂದು ವರ್ಷಕ್ಕಿಂತ ಅದರ ಹಿಂದಿನ ಒಂದು ವರ್ಷ ನೆನಪಿನಲ್ಲಿ ಉಳಿಯುವಂಥದ್ದು.

1 Response to ನಮೋ ಬ್ರಿಗೇಡಿನ ಆ ಒಂದು ವರ್ಷದ ನೆನಪು

  1. Vivek

    Gd i feel proud