ವಿಭಾಗಗಳು

ಸುದ್ದಿಪತ್ರ


 

‘ನರೇಂದ್ರನ ಬಟ್ಟೆ’ ಆರೋಪಗಳು ಹೊಸತಲ್ಲ!

ನಿಮ್ಮನ್ನು ತಾತ್ತ್ವಿಕವಾಗಿ ವಿರೋಧಿಸಲಾಗದಿದ್ದರೆ ನೀವು ಧರಿಸುವ ಬಟ್ಟೆಯ ಕುರಿತಂತೆ ವ್ಯಂಗ್ಯದ ಮಾತುಗಳನ್ನಾಡುವುದು ದೇಶದ ಪ್ರಧಾನಿಯೊಂದಿಗೂ ನಾವು ನೋಡಿದ್ದೇವೆ. ಇಷ್ಟಕ್ಕೂ ಅಗತ್ಯ ಬಿದ್ದಾಗ ವೈಭವದ ಬಟ್ಟೆ ಧರಿಸಬಲ್ಲ ಸ್ವಾಮೀಜಿಗೆ ಅದು ಬೇಡವೆನಿಸಿದಾಗ ಕಿತ್ತೊಗೆಯುವ ಸಾಮಥ್ರ್ಯವೂ ಇತ್ತು. ಸನ್ಯಾಸವೆಂದರೆ ಬಟ್ಟೆಯೆಂಬ ಕಲ್ಪನೆಯೇ ಮೂರ್ಖತನದ್ದು. ಸನ್ಯಾಸವೆಂದರೆ ಅದನ್ನು ಕಿತ್ತೆಸೆಯಬಲ್ಲ ಮನಸ್ಥಿತಿ. ಅದು ವಿವೇಕಾನಂದರಿಗೆ ಜೋರಾಗಿಯೇ ಇತ್ತು.

ಸರ್ವಧರ್ಮ ಸಮ್ಮೇಳನದ ಸಭೆಯಲ್ಲಿ ವಿವೇಕಾನಂದರ ಪ್ರಭಾವ ನಿಜಕ್ಕೂ ಇತ್ತಾ? ಅಥವಾ ಇದು ರಾಮಕೃಷ್ಣ ಆಶ್ರಮಗಳು ಮಾಡಿದ ಅನಗತ್ಯ ಪ್ರಚಾರವಾ? ಹಾಗಂತ ಒಂದಷ್ಟು ಜನ ಕ್ರಿಶ್ಚಿಯನ್ ಮತ ಪ್ರೇರಿತ ಬುದ್ಧಿಜೀವಿಗಳು ಬಡಬಡಿಸುತ್ತಿರುತ್ತಾರೆ. ಸಹಜವೇ. ವಿವೇಕಾನಂದರ 125 ವರ್ಷಗಳ ಹಿಂದಿನ ಆ ಭಾಷಣದಿಂದ ನೇರ ಲಾಭ ಹಿಂದುತ್ವಕ್ಕೇ ಆದರೆ, ನೇರ ಹೊಡೆತ ಮಾತ್ರ ಕ್ರಿಸ್ತಾನುಯಾಯಿಗಳಿಗೇ ಆಗಿದ್ದು. ಅಂದಿನ ಗಾಯ ಇಂದಿಗೂ ಮಾಗಿಲ್ಲ.

ಸಮ್ಮೇಳನದ ಯೋಜನೆಯ ಅಧ್ಯಕ್ಷರಾಗಿದ್ದವರು ಫಸರ್್ ಪ್ರೆಸ್ಬಿಟೇರಿಯನ್ ಚಚರ್್ನ ಹಿರಿಯ ಪಾದ್ರಿ ಜಾನ್ ಬರೋಸ್. ಆರಂಭದಲ್ಲಿ ಅವರಿಗೆ ವಿವೇಕಾನಂದರು ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದನ್ನು ಕೇಳಿ ಆನಂದವಾಗಿತ್ತು. ಸ್ವಾಮೀಜಿಯೊಂದಿಗೆ ಸಜ್ಜನ ಸಂಪರ್ಕವನ್ನೂ ಅವರು ಹೊಂದಿದ್ದರು. ಆದರೆ ಚಿಕಾಗೋ ಭಾಷಣದ ನಂತರ ಸ್ವಾಮೀಜಿ ಹಿಂದುತ್ವವನ್ನು ಜನರ ಮುಂದಿಟ್ಟ ರೀತಿ ಮತ್ತು ಜಗತ್ತೆಲ್ಲವನ್ನೂ ಕ್ರಿಸ್ತನ ಅನುಸರಿಸುವವರಿಂದ ತುಂಬಿಸಬೇಕೆಂಬ ಕ್ರಿಶ್ಚಿಯನ್ನರ ಭೂತ ಬಿಡಿಸಿದ ಪರಿ ಅನನ್ಯವಾಗಿತ್ತು. ಅಮೇರಿಕಾದ ಬುದ್ಧಿವಂತ ವರ್ಗ ಹಿಂದೂ ಧರ್ಮದೆಡೆಗೆ ಸೆಳೆತಕ್ಕೆ ಒಳಗಾಗಿತ್ತು. ಚಿಕಾಗೋ ಈವ್ನಿಂಗ್ ಜರ್ನಲ್ ಪತ್ರಿಕೆ ವಿವೇಕಾನಂದರ ಮೊದಲ ಭಾಷಣದ ಮೂರು ದಿನಗಳ ನಂತರ ಬರೆದ ಸಂಪಾದಕೀಯದಲ್ಲಿ, ‘ಹೆಚ್ಚು ಹೆಚ್ಚು ಅತ್ತ ಗಮನ ಹರಿಸಿದಷ್ಟೂ ಇಲ್ಲಿಯವರೆಗಿನ ನಮ್ಮ ಮೌಢ್ಯತೆಯ ಅರಿವು ನಮಗಾಗುತ್ತದೆ. ಅಂತಹವರನ್ನು ಮತಾಂತರಿಸಲು ನಮ್ಮವರನ್ನು ಕಳಿಸುವ ನಾವೆಷ್ಟು ಮೂರ್ಖರು. ಅವರ ಪ್ರಾಂತದಲ್ಲಿ ಪ್ರಚಾರ ಮಾಡಿಕೊಳ್ಳುವಷ್ಟು ಸಮರ್ಥರಲ್ಲವೇನು ಅವರು? ಅಥವಾ ದೇವರ ಕುರಿತ ನಮ್ಮ ಕಲ್ಪನೆ ಅವರದ್ದಕ್ಕಿಂತ ಉದಾತ್ತವಾದುದೇ? ಯಾವ ಅಧಿಕಾರದ ಆಧಾರದ ಮೇಲೆ ಅವರಿಗೆ ಮಾರ್ಗದರ್ಶನ ಮಾಡುವ ಸೋಗು ಹಾಕುತ್ತೇವೆ ನಾವು? ಈ ಪ್ರಶ್ನೆಗಳನ್ನು ಕ್ರಿಶ್ಚಿಯನ್ ಚಚರ್ುಗಳಷ್ಟೇ ಅಲ್ಲದೇ ಇಡಿಯ ಪಶ್ಚಿಮ ತನ್ನ ತಾನು ಕೇಳಿಕೊಳ್ಳಬೇಕು.’ ಎಂದಿತ್ತು.

1

ಪತ್ರಿಕೆ ಬಿಡಿ, ಸ್ವತಃ ಸಮ್ಮೇಳನದ ಕಾರ್ಯದಶರ್ಿ ಜಂಕಿನ್ ಲಾಯ್ಡ್ ಜೋನ್ಸ್ನ ಹೇಳಿಕೆ ಅಕ್ಟೋಬರ್ 2 ರ ಚಿಕಾಗೋ ಹೆರಾಲ್ಡ್ನಲ್ಲಿ ಪ್ರಕಟವಾಗಿತ್ತು. ಅದರಲ್ಲಿ, ‘ಪೂರ್ವದ ಅನಾಗರಿಕ ಮತಗಳು ತಮ್ಮನ್ನು ತಾವು ಬಲು ಸುಂದರವಾಗಿ ಪ್ರಸ್ತುತ ಪಡಿಸಿಕೊಂಡವು. ಅವರೆದುರಿಗೆ ಕ್ರಿಶ್ಚಿಯನ್ ಮತ ತನ್ನ ತಾನು ರಕ್ಷಿಸಿಕೊಳ್ಳಬೇಕಾದ ಸ್ಥಿತಿಗೆ ಬಂದುಬಿಟ್ಟಿತ್ತು. ಪೂರ್ವದಿಂದ ಬಂದವರು ಕೇಳುಗರಿಗೆ ಅನೂಹ್ಯ ಸತ್ಯಗಳನ್ನೂ ಹೇಳಿ ಅವರನ್ನು ಗೆದ್ದುಬಿಟ್ಟರು. ಅವರು ತಮ್ಮೂರಿನಿಂದ ಬರುವಾಗ ಆಕಾರ, ಸಿದ್ಧಾಂತಗಳ ಮೂಟೆಯನ್ನು ಹೊತ್ತು ತರಲಿಲ್ಲ. ಬಂದವರು ಪ್ರವಾದಿಗಳಂತೆ ಬಂದರೇ ಹೊರತು ಪಾದ್ರಿಗಳಂತಲ್ಲ’ ಎಂದಿತ್ತು. ಸಮ್ಮೇಳನದಲ್ಲಿ ವಿವೇಕಾನಂದರಿಗೆ ದೊರೆತ ಚಪ್ಪಾಳೆಗಳ ಕುರಿತಂತೆಯೂ ಪಾದ್ರಿಗಳಿಗೆ ಹೊಟ್ಟೆಯುರಿ ಸಾಕಷ್ಟಿತ್ತು. ವಿವೇಕಾನಂದರನ್ನಷ್ಟೇ ಅಲ್ಲ, ಕ್ರಿಸ್ತೇತರ ಎಲ್ಲ ಮತಗಳನ್ನು ಕಂಡಾಗಲೂ ಬೆಂಕಿಯನ್ನುಗುಳುತ್ತಿದ್ದ ಪಾದ್ರಿ ಬ್ರಾಡ್ಮನ್ ದಿ ಇಂಡಿಪೆಂಡೆಂಟ್ ಪತ್ರಿಕೆಗೆ ಡಿಸೆಂಬರ್ನಲ್ಲಿ ಬರೆದ ಲೇಖನದಲ್ಲಿ, ‘ಚಪ್ಪಾಳೆಗಳ ಅರ್ಥ ಗೊಂದಲದ್ದು. ಅದು ಒಪ್ಪುವುದರ ಸಂಕೇತವಾಗಿಯಲ್ಲ; ಹೇಗೆ ಎಂದು ಪ್ರಶ್ನಿಸುವುದಕ್ಕಾಗಿ, ಭಾವನೆಗಳನ್ನು ಮೆಚ್ಚಿದುದಕ್ಕಲ್ಲ; ಭಾಷಣ ಶೈಲಿ ಇಷ್ಟವಾದುದಕ್ಕೆ ಹೊಡೆದ ಚಪ್ಪಾಳೆಯಾಗಿತ್ತು. ಪಾಪ ಮತ್ತು ಅದರಿಂದ ಪಾರಾಗಲು ಕ್ರಿಸ್ತನೊಂದೇ ಮಾರ್ಗ ಎಂಬ ಚಚರ್ಿನ ಹೇಳಿಕೆಗಳಿಗೆ ದೊರೆತಷ್ಟು ಆನಂದದಾಯಕ ಚಪ್ಪಾಳೆಗಳು ಮತ್ತ್ಯಾರಿಗೂ ದಕ್ಕದಿದ್ದುದೇ ಈ ಸಮ್ಮೇಳನ ಕ್ರಿಶ್ಚಿಯನ್ ಸಮ್ಮೇಳನ ಎಂಬುದನ್ನು ಸಾಬೀತುಪಡಿಸುತ್ತದೆ’ ಎಂದು ಕೊಚ್ಚಿಕೊಂಡಿದ್ದ. ಖ್ಯಾತ ಲೇಖಕ ಮವರ್ಿನ್ ಮೇರಿ ಸ್ನೇಲ್ ತುಂಬ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದ, ‘ಅಮೇರಿಕಾ ಹಿಂದುತ್ವ ಮತ್ತು ವಿವೇಕಾನಂದರು ಮಾತ್ರ ನೀಗಿಸಬಲ್ಲ ಆಧ್ಯಾತ್ಮಿಕ ಹಸಿವಿನಿಂದ ಬಳಲುತ್ತಿದೆ.’

ಸ್ವಾಮೀಜಿ ಅಮೇರಿಕಾದಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿಯಾಗಿತ್ತು. ತನ್ನ ಕೊಳಕನ್ನೆಲ್ಲ ಮುಚ್ಚಿಟ್ಟು ಕ್ರಿಸ್ತ ಮತ ಇತರರ ರಾಡಿಯನ್ನು ಆಡಿಕೊಳ್ಳುತ್ತಿತ್ತು. ತಾನೊಂದೇ ಸತ್ಯ ಉಳಿದವರೆಲ್ಲ ಜೀವಿಸಲೂ ಅನರ್ಹರೆಂಬ ಅದರ ಧಾಷ್ಟ್ರ್ಯವೇ ಈಗ ಅದಕ್ಕೆ ಮುಳುವಾಗಿತ್ತು. ಅನೇಕ ದಶಕಗಳಿಂದ ಅವರು ಹಿಂದುತ್ವದ ಕುರಿತಂತೆ, ಪೂರ್ವದ ಕುರಿತಂತೆ ಹೇಳಿಕೊಂಡು ಬಂದ ಸುಳ್ಳುಗಳನ್ನು ವಿವೇಕಾನಂದರು ತಮ್ಮ ಮೂರುವರೆ ನಿಮಿಷದ ಭಾಷಣದಿಂದ ನುಚ್ಚುನೂರು ಮಾಡಿ ಹಾಕಿದ್ದರು. ಮಲಾಚಿ ಮಾಟರ್ಿನ್ ಎಂಬ ಲೇಖಕನೊಬ್ಬ ವಿವೇಕಾನಂದರ ಪ್ರಭಾವದಿಂದ ಹಿಂದುತ್ವದ ಗ್ರಹಿಕೆಯನ್ನು ಮುಂದಿರಿಸಿದ್ದು ಹೇಗೆ ಗೊತ್ತೇ? ‘ಹಿಂದುತ್ವ ವ್ಯಕ್ತಿಯ ಆತ್ಮಗೌರವದ ಬಗ್ಗೆ ಲಕ್ಷ್ಯವಿಟ್ಟಿದೆ. ಅದರ ಭರವಸೆ ವ್ಯಕ್ತಿಯ ಆಲೋಚನಾ ಶಕ್ತಿ ಮತ್ತು ಒಟ್ಟಾರೆ ವ್ಯಕ್ತಿತ್ವದ ಮೇಲೆ ಪೂರ್ಣ ಭರವಸೆಯನ್ನಿಟ್ಟಿದೆ. ಸಂಘಟಿತ ಮತಗಳು ಆತನ ವಿಚಾರಗಳಲ್ಲಿ ಕೈಯಾಡಿಸದೇ, ತಲೆ ಹಾಕದೇ ಮುಕ್ತವಾಗಿ ಬಿಟ್ಟರೆ ಸಾಕು’. ಆಗಿನ ದಿನಗಳಲ್ಲಿ ಇದು ಪಶ್ಚಿಮದಲ್ಲಿ ಬಲು ಮಹತ್ವದ ಚಚರ್ೆಯಾಗಿತ್ತು. ಜಗತ್ತನ್ನು ಉದ್ಧರಿಸಲು ನಿಂತ ಕ್ರಿಶ್ಚಿಯನ್ ಪಂಥ ತನ್ನ ತಾನು ಸುಧಾರಿಸಿಕೊಳ್ಳುವ ಅಗತ್ಯವನ್ನು ಮನಗಾಣಬೇಕಿತ್ತು. ಆದರೆ ಮೂಲಭೂತವಾದಿಗಳು ಬಿಡಬೇಕಲ್ಲ. ಗಲಾಟೆಯೆಬ್ಬಿಸಿ ರಾಡಿ ಮಾಡಿದರು.

4

ಪ್ರೆಸ್ಬಿಟೇರಿಯನ್ ಚಚರ್ಿನವರು ನಡೆಸುತ್ತಿದ್ದ ಪತ್ರಿಕೆ ದಿ ಇಂಪೀರಿಯಲ್ನಲ್ಲಿ ವಿವೇಕಾನಂದರ ಕುರಿತಂತೆ ಬಲು ಅವಹೇಳನಕಾರಿಯಾದ, ತುಚ್ಛ ಪದಗಳ ಲೇಖನವೊಂದು ಪ್ರಕಟಗೊಂಡಿತು. ಕ್ರಿಶ್ಚಿಯನ್ ಮಿಶನರಿಗಳು ಮದ್ರಾಸಿನಲ್ಲಿ ಆ ಪತ್ರಿಕೆಯನ್ನು ಮುಂದಿಟ್ಟುಕೊಂಡು ವಿವೇಕಾನಂದರ ಅಪಪ್ರಚಾರ ಮಾಡಲು ಆರಂಭಿಸಿದರು. ಈ ವೇಳೆಗೆ ಅಳಸಿಂಗ ಪೆರುಮಾಳರಿಗೆ ಪತ್ರ ಬರೆದ ವಿವೇಕಾನಂದರು ‘ಇಲ್ಲಿ ಪೌರಸ್ತ್ಯ ದೇಶಗಳ ಮತಗಳು ಒಳನುಗ್ಗಿದ್ದರಿಂದ ಅಲ್ಲಿ ಮಿಶನರಿಗಳ ವೈಭವದ ಬದುಕಿಗೆ ಕಡಿವಾಣ ಬಿದ್ದಿದೆಯೆಂದರೆ ನಾನೇನು ಮಾಡಲಿ. ಒಳ್ಳೆಯದೇ ಆಯ್ತು. ನಾನಂತೂ ಕೊಳಕ್ಕಿಳಿದಿದ್ದೇನೆ. ಚೆನ್ನಾಗಿ ಸ್ನಾನ ಮಾಡಿಯೇ ಬರುತ್ತೇನೆ’ ಎಂದಿದ್ದರು. ಇಷ್ಟಕ್ಕೂ ಆ ಪತ್ರಿಕೆಗೆ ಅಮೇರಿಕನ್ನರ ನಡುವೆ ಕಿಂಚಿತ್ತು ಮೌಲ್ಯವಿರಲಿಲ್ಲ. ಬಹುಶಃ ನಮ್ಮ ನಡುವಿನ ಟ್ಯಾಬ್ಲಾಯ್ಡ್ಗಳಂತಿರಬಹುದು ಅದು. ಸಮಾಜ ಗೌರವಿಸುವ ವ್ಯಕ್ತಿಯನ್ನು ಟೀಕಿಸಿ ತಮ್ಮ ಪ್ರಚಾರ ಹೆಚ್ಚಿಸಿಕೊಳ್ಳುವ ರೀತಿಯ ಪತ್ರಿಕೋದ್ಯಮದ ಪಾಲಿಗೆ ಸೇರಿದ್ದು! ಆದರೆ ಒಂದಂತೂ ಸತ್ಯ. ವಿವೇಕಾನಂದರ ಭಾಷಣಗಳು ಜೋರು ಜೋರಾಗಿ ನಡೆಯುತ್ತಿದ್ದಂತೆ ಅಮೇರಿಕಾದಲ್ಲಿ ಮಿಶನರಿಗಳ ಚಟುವಟಿಕೆಗಳಿಗೆಂದು ಹರಿದು ಬರುತ್ತಿದ್ದ ಹಣ ಕಡಿಮೆಯಾಗುತ್ತ ಹೋಯಿತು. ಅದಕ್ಕೆ ಸ್ವಾಮೀಜಿ ಭಾರತದಲ್ಲಿನ ಮಿಶನರಿಗಳ ವೈಭವದ ಬದುಕಿಗೆ ಬಿದ್ದ ಕಡಿವಾಣದ ಮಾತಾಡಿದ್ದು. ಪಶ್ಚಿಮ ಹಾಗೆಯೇ. ತೀರಾ ಇತ್ತೀಚಿನವರೆಗೂ ಅವರು ಭಾರತದ ಬಡತನದ ಚಿತ್ರಗಳನ್ನು ಜಗತ್ತಿನ ಮುಂದಿರಿಸಿಯೇ ಹಣ ಪೀಕುತ್ತಿದ್ದುದು. ಇಲ್ಲಿನ ಅನೇಕ ಎನ್ಜಿಓಗಳೂ ಭಾರತ ಹಿಂದುಳಿದಿದೆ ಎಂಬುದನ್ನು ಮತ್ತೆ ಮತ್ತೆ ಹೇಳಿಯೇ ಜಾಗತಿಕ ಮಟ್ಟದಲ್ಲಿ ಧನ ಸಂಗ್ರಹಣೆಗೆ ನಿಂತಿರೋದು. ಹೀಗಾಗಿಯೇ ಬದಲಾಗುತ್ತಿರುವ ಭಾರತದ ಚಿತ್ರಣ ನೋಡಿದರೆ ಮೈಯ್ಯೆಲ್ಲಾ ಪರಚಿಕೊಳ್ಳುವಂತಾಗೋದು ಅವರಿಗೆ. ನರೇಂದ್ರಮೋದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುತ್ತಿದ್ದಂತೆ ಇವರುಗಳ ಅಸಹಿಷ್ಣುತೆ ಹೆಚ್ಚಾಗುತ್ತಿರುವುದು ಮತ್ತೇಕೆ ಹೇಳಿ.

ವಿವೇಕಾನಂದರು ಅಂದೇ ಚಚರ್ುಗಳ ದಾಳಿಗೆ ಒಳಗಾಗಿದ್ದರು. ಮಿಶನರಿ ರಿವ್ಯೂ ಆಫ್ ದಿ ವಲ್ಡರ್್ ಪತ್ರಿಕೆ ತನ್ನ ಜುಲೈ ತಿಂಗಳ ವರದಿಯಲ್ಲಿ ವಿವೇಕಾನಂದರು ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಅವರ ವೈಯಕ್ತಿಕ ಅಂಶಗಳನ್ನು ಕೆದಕುವ ಕೆಲಸಕ್ಕೆ ಕೈ ಹಾಕಿತು. ಅವರ ಹೆಸರು ವಿವೇಕಾನಂದ ಅಲ್ಲ, ನರೇಂದ್ರನಾಥ ಎಂಬುದನ್ನು ಸ್ಫೋಟಕ ಸುದ್ದಿಯಂತೆ ಬಿಂಬಿಸಿತು. ಅವರು ಬ್ರಾಹ್ಮಣ ಸನ್ಯಾಸಿಯಲ್ಲ ಎಂದಿತು. ‘ವೈಭವದ ಬಟ್ಟೆ ಧರಿಸಿಕೊಂಡು ಜನರ ಮುಂದೆ ನಿಂತ ಈತ ತನ್ನ ತಾನು ಬಡ ಫಕೀರನೆಂದು ಪರಿಚಯಿಸಿಕೊಂಡ. ಅದು ಅವನ ಸನ್ಯಾಸಿ ಪರಂಪರೆಯ ವಸ್ತ್ರವಂತೂ ಅಲ್ಲ. ಭಾರತದ ಸನ್ಯಾಸಿ ಪರಂಪರೆಯ ಬಟ್ಟೆ ಕಾವಿಯ ಬಣ್ಣದ್ದು. ಕೆಲವೊಮ್ಮೆ ಹಬ್ಬದ ದಿನಗಳಲ್ಲಿ ಇವರು ಪೂರ್ಣ ನಗ್ನರಾಗಿಯೂ ಬರುತ್ತಾರೆ. ಅವೆಲ್ಲವನ್ನು ಬಿಟ್ಟು ಆತ ಈ ಬಗೆಯ ಕಣ್ಣುಕುಕ್ಕುವ ಬಟ್ಟೆ ಧರಿಸಿದ್ದು ಅಮೇರಿಕನ್ನರ ಮೆಚ್ಚಿಸಲು ಮತ್ತು ತನ್ನ ಕೇಳುಗರ ಭಾವನೆಗಳಿಗೆ ಪ್ರತಿಸ್ಪಂದಿಸಲು ಮಾತ್ರ. ಸಂಪ್ರದಾಯವಾದಿ ಹಿಂದುತ್ವದ ಕುರಿತಂತೆ ಅವನ ಭಾಷಣವೂ ಆತ ಧರಿಸಿದ ಬಟ್ಟೆಯಷ್ಟೇ ನಿಖರವಾದುದು’ ಎಂದು ವ್ಯಂಗ್ಯಮಾಡಿತ್ತು.

5

ನಿಮ್ಮನ್ನು ತಾತ್ತ್ವಿಕವಾಗಿ ವಿರೋಧಿಸಲಾಗದಿದ್ದರೆ ನೀವು ಧರಿಸುವ ಬಟ್ಟೆಯ ಕುರಿತಂತೆ ವ್ಯಂಗ್ಯದ ಮಾತುಗಳನ್ನಾಡುವುದು ದೇಶದ ಪ್ರಧಾನಿಯೊಂದಿಗೂ ನಾವು ನೋಡಿದ್ದೇವೆ. ಇಷ್ಟಕ್ಕೂ ಅಗತ್ಯ ಬಿದ್ದಾಗ ವೈಭವದ ಬಟ್ಟೆ ಧರಿಸಬಲ್ಲ ಸ್ವಾಮೀಜಿಗೆ ಅದು ಬೇಡವೆನಿಸಿದಾಗ ಕಿತ್ತೊಗೆಯುವ ಸಾಮಥ್ರ್ಯವೂ ಇತ್ತು. ಸನ್ಯಾಸವೆಂದರೆ ಬಟ್ಟೆಯೆಂಬ ಕಲ್ಪನೆಯೇ ಮೂರ್ಖತನದ್ದು. ಸನ್ಯಾಸವೆಂದರೆ ಅದನ್ನು ಕಿತ್ತೆಸೆಯಬಲ್ಲ ಮನಸ್ಥಿತಿ. ಅದು ವಿವೇಕಾನಂದರಿಗೆ ಜೋರಾಗಿಯೇ ಇತ್ತು. ಅವರೇ ಪಶ್ಚಿಮದಿಂದ ಬರೆದ ಪತ್ರದಲ್ಲಿ, ‘ನಾನು ಹರಿದ ಬಟ್ಟೆ ಧರಿಸಿ, ತಲೆ ಕೂದಲು ತೆಗಿಸಿಕೊಂಡು, ಭಿಕ್ಷಾನ್ನ ಉಂಡು ಮರದಡಿ ಮಲಗಲೆಂದು ಹಾತೊರೆಯುತ್ತಿದ್ದೇನೆ’ ಎಂದಿದ್ದರು. ಕ್ರಿಶ್ಚಿಯನ್ ಪಾದ್ರಿಗಳಿಗೆ ಇದು ಅರ್ಥವಾಗುವುದಾದರೂ ಹೇಗೆ? ಅವರು ಕೂಗಾಡಿ ರಂಪಾಟ ಮಾಡುವ ವೇಳೆಗಾಗಲೇ ವಿವೇಕಾನಂದರು ಚಚರ್ುಗಳಿಗೆ ಬಲವಾದ ಹೊಡೆತ ಕೊಟ್ಟಿದ್ದರು. ಕ್ರೈಸ್ತ ಮತವೇ ಜಗತ್ತಿನ ಶ್ರೇಷ್ಠ ಮಾರ್ಗವೆಂದು ಎಲ್ಲರ ಮುಂದೆ ಪ್ರಚುರಪಡಿಸಿ ಅದರಡಿಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳನ್ನೂ ಒಂದು ಮಾಡಬೇಕೆಂಬ ಸಮ್ಮೇಳನದ ಆಶಯಕ್ಕೆ ವಿವೇಕಾನಂದರು ತಣ್ಣೀರೆರಚಿಬಿಟ್ಟಿದ್ದರು. ಬ್ಯಾಪ್ಟಿಷ್ಟ್ ಮಿಶನರಿ ಮ್ಯಾಗಜéಿನ್ ತಮ್ಮ ಸೋಲನ್ನು ವಿಸ್ತಾರವಾಗಿ ವಣರ್ಿಸುತ್ತಾ ‘ಪವಿತ್ರ ವಿಚಾರಗಳು ಧರ್ಮ ಸಮ್ಮೇಳನದಲ್ಲಿ ಆಧಾರವಿಲ್ಲದ ಸುಳ್ಳುಗಳ ಮತ್ತು ಕ್ರೌರ್ಯದೆದುರಿಗೆ ತಲೆಬಾಗುವುದನ್ನು ಕಂಡಿದ್ದು ಜಗತ್ತಿನ ಇತಿಹಾಸದಲ್ಲಿಯೇ ವಿರಳ ದೃಶ್ಯ’ ಎಂದಿತ್ತು. ಮಿಶನರಿ ರಿವ್ಯೂ ಆಫ್ ದಿ ವಲ್ಡರ್್, ‘ಧರ್ಮ ಸಮ್ಮೇಳನ ನಡೆಸಿ ತಪ್ಪು ಮಾಡಿಬಿಟ್ಟೆವು’ ಎಂದು ನೊಂದುಕೊಂಡಿತ್ತು.

ಜಗತ್ತಿನ ಒಳಿತಿಗೆ ಆಗಬೇಕಾದ್ದು ಆಗಿತ್ತು. ಕ್ರೈಸ್ತಮತಕ್ಕೆ ಆಗಬಾರದ್ದು ಆಗಿತ್ತು. ಅಂದಿನ ದಿನಗಳಲ್ಲಿ ಅಮೇರಿಕಾದಲ್ಲಿ ಕ್ರೈಸ್ತಮತ ತನ್ಮೂಲಕ ಇಡಿಯ ವಿಶ್ವದಲ್ಲಿ ಅದೆಷ್ಟು ಕಿರಿಕಿರಿಗೆ ಒಳಗಾಗಿತ್ತೆಂದರೆ ವಿವೇಕಾನಂದರ ವಿಚಾರಧಾರೆಗಳನ್ನು ಟೀಕಿಸುತ್ತ ಕಾಲಕಳೆಯುವುದರಲ್ಲಿ ನಮಗೆ ನಾವೇ ದ್ರೋಹಮಾಡಿಕೊಳ್ಳುತ್ತೇವೆ ಎಂಬರ್ಥದ ಮಾತುಗಳನ್ನಾಡಿದ ಬಿಶಪ್ ಕೇನ್ರ ವಿರುದ್ಧ ಮಿಶನರಿಗಳ ಆಕ್ರೋಶ ತಿರುಗಿತು. ಬಿಶಪ್ ಕೇನ್ ಧರ್ಮ ಸಮ್ಮೇಳನದಲ್ಲಿ ಕ್ಯಾಥೋಲಿಕ್ ಪಂಥದ ಕುರಿತಂತೆ ಮಾತನಾಡಲೆಂದು ಬಂದವರು. ಆಕ್ರೋಶ ಎಷ್ಟಿತ್ತೆಂದರೆ ಕ್ಯಾಥೊಲಿಕ್ ವಿಶ್ವವಿದ್ಯಾಲಯದ ಧಮರ್ೋಪದೇಶಕ ಹುದ್ದೆಯಿಂದ ಅವರನ್ನು ಕಿತ್ತೆಸೆಯಲಾಯ್ತು. ಈ ಕಥೆ ಇಲ್ಲಿಗೇ ನಿಲ್ಲಲಿಲ್ಲ. ವಿಶ್ವದೆಲ್ಲೆಡೆ ಕ್ರಿಶ್ಚಿಯನ್ ಪಂಥದ ಕುರಿತಂತೆ ಎದ್ದ ಪ್ರಶ್ನೆಗಳು ಒಂದೆಡೆಯಾದರೆ ಭಾರತದಲ್ಲಿ ಮಿಶನರಿ ಚಟುವಟಿಕೆಗಳಿಗೂ ತೀವ್ರ ಹಿನ್ನಡೆಯಾಗಿತ್ತು. ಇದನ್ನು ಸರಿದೂಗಿಸುವ ತುತರ್ಿಗೆ ಬಿದ್ದಿತ್ತು ಚಚರ್ುಗಳು. ಚಿಕಾಗೋದ ಶ್ರೀಮತಿ ಕ್ಯಾರೋಲಿನ್ ಹಸ್ಕೆಲ್ ಇದಕ್ಕಾಗಿ 20 ಸಾವಿರ ಡಾಲರುಗಳನ್ನು ತೆಗೆದಿಟ್ಟು ವಿವೇಕಾನಂದರ ವಿರುದ್ಧ ಅಪಪ್ರಚಾರ ಮತ್ತು ಕ್ರೈಸ್ತ ಮತದ ವ್ಯಾಪಕ ಪ್ರಚಾರಕ್ಕೆ ಭಾರತಕ್ಕೆ ಹೋಗಬಲ್ಲ ಸಮರ್ಥರನ್ನೂ ಹುಡುಕಾಡಿದಳು. ಧರ್ಮಸಮ್ಮೇಳನದಲ್ಲಿ ಭಾಗವಹಿಸಿ ಹಿಂದುತ್ವವನ್ನು ಜರಿದು ಕ್ರೈಸ್ತ ಮತದ್ದೇ ಗುಣಗಾನ ಮಾಡಿದ ಪ್ರತಾಪ್ ಮಜುಂದಾರರೂ ಈಗ ಸಾಲುವಂತಿರಲಿಲ್ಲ. ಅದಕ್ಕೆ ಸೂಕ್ತವೆನಿಸಿದ್ದು ಸ್ವತಃ ಸಮ್ಮೇಳನದ ಯೋಜನೆಯ ಅಧ್ಯಕ್ಷ ಬರೋಸ್!

John_Henry_Barrows (1)

ಚಿಕಾಗೋ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಬರೋಸ್ ಫಸರ್್ ಪ್ರೆಸ್ಬಿಟೇರಿಯನ್ ಚಚರ್ಿನ ಪಾದ್ರಿ ಹುದ್ದೆಗೆ ರಾಜಿನಾಮೆ ಇತ್ತು ಭಾರತದತ್ತ ಧಾವಿಸಿದ. ಇಲ್ಲಿ ಅನೇಕ ಕೇಂದ್ರಗಳಲ್ಲಿ ಭಾಷಣ ಮಾಡಿ ಮತ್ತದೇ ಹಳೆಯ ಹಾಡು ಹಾಡಿದ. ವಿವೇಕಾನಂದರ ಬಟ್ಟೆ, ಊಟ, ಒಡನಾಟ ಇವುಗಳ ಬಗ್ಗೆ ಹೇಳಿ ಇಲ್ಲಿ ಅವರಿಗಿರುವ ಗೌರವ ಹಾಳುಮಾಡುವ ಇರಾದೆ ಅವನದ್ದು. ಅಮೇರಿಕದ ಔಟ್ಲುಕ್ ಪತ್ರಿಕೆ ಬರೆದ ಎರಡು ಸಾಲು ಈ ಹೊತ್ತಲ್ಲಿ ಓದಲು ಮಜವೆನಿಸುತ್ತದೆ, ‘ಕುತೂಹಲಕಾರಿಯೂ, ಆಸಕ್ತಿಕರವೂ ಆದ ಒಂದು ಅಂಶವೆಂದರೆ ಭಾರತಕ್ಕೆ ಕ್ರೈಸ್ತಮತದ ಕುರಿತಂತೆ ತಿಳಿಹೇಳಲು ಚಿಕಾಗೋ ತನ್ನ ಒಬ್ಬ ಪ್ರಮುಖ ಪಾದ್ರಿಯನ್ನು ಕಳೆದುಕೊಳ್ಳಬೇಕಾಗಿ ಬಂತು. ಇಲ್ಲಿಯವರೆಗೂ ಪ್ರಮುಖವೂ, ಸಿರಿವಂತವೂ ಆಗಿದ್ದ ಚಚರ್ೊಂದನ್ನು ಮುಚ್ಚಬೇಕಾಯ್ತು’.

125 ವರ್ಷಗಳ ಹಿಂದೆ ಅಮೇರಿಕಾದಲ್ಲಿ ಕಾಲಿಟ್ಟ ಸ್ವಾಮಿ ವಿವೇಕಾನಂದರು ಊದಿದ ಕಹಳೆ ಅಮೇರಿಕಾದ ಚಿಂತನೆಯ ಪಾಲಿಗೆ ಹೊಸ ಲೋಕ ತೆರೆದಿದ್ದಂತೂ ಹೌದು. ಜೊತೆಗೆ ಅಲ್ಲಿನ ಜನಕ್ಕೆ ನಿಜವಾದ ಆಧ್ಯಾತ್ಮವನ್ನೂ ಪರಿಚಯಿಸಿತು. ಲೇಖಕ ಜಾಕ್ಸನ್ ಹೇಳುವಂತೆ ಅವರು ನಿಸ್ಸಂಶಯವಾಗಿ ಅಮೇರಿಕನ್ ಹಿಂದುತ್ವದ ಪ್ರತಿಪಾದಕರು ಮತ್ತು ಪೂರ್ವ ದೇಶದ ಗುರುಗಳಿಗೆ ಮುಂದಿನ ದಿನಗಳಲ್ಲಿ ಅಮೇರಿಕದ ಹೆಬ್ಬಾಗಿಲು ತೆರೆಯುವಂತೆ ಮಾಡಿದವರು’. ಹೌದಲ್ಲವೇ? ನಿಂದನೆಯ ತುತ್ತೂರಿಗಳನ್ನು, ಅವಗಣನೆಯ ಡೋಲುಗಳನ್ನು ಯಾರೆಷ್ಟೇ ಬಡಿದರೂ ಆಗಬೇಕಾದ್ದು ಆಗಿಬಿಟ್ಟದೆ. ಅದನ್ನು ಮತ್ತೆ ನೆನಪಿಸಿಕೊಳ್ಳುತ್ತಾ ಹಿಂದುತ್ವದ ಹೊಸ ಅಲೆಯನ್ನು ಎಬ್ಬಿಸಬೇಕಾದ ಕರ್ತವ್ಯ ನಮ್ಮ ಹೆಗಲ ಮೇಲಿದೆ.

Comments are closed.