ವಿಭಾಗಗಳು

ಸುದ್ದಿಪತ್ರ


 

ನರೇಂದ್ರ ಮೋದಿ ಕೊಟ್ಟ ಮಾತಿಗೆ ತಪ್ಪಿದ್ದಾರಾ?

ಮೋದಿಯವರ ಸಕರ್ಾರ ಬಂದಾಗಿನಿಂದ ಅರಚಾಡುವ ಬುದ್ಧಿಜೀವಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಿಹಾರದ ಚುನಾವಣೆಯ ವೇಳೆಗೆ ಅಸಹಿಷ್ಣುತೆಯನ್ನು ಮುಂದಿಟ್ಟುಕೊಂಡು ಪ್ರಶಸ್ತಿ ಮರಳಿಸಿದ ಅನೇಕ ಸಾಹಿತಿಗಳು ಈಗ ಮೂಲೆಗುಂಪಾಗಿಬಿಟ್ಟಿದ್ದಾರೆ. ತೀಸ್ತಾ ಸೇತಲ್ವಾಡ್ ತನ್ನ ಅವ್ಯವಹಾರದ ಬ್ಯಾಂಕ್ ಅಕೌಂಟನ್ನು ಮತ್ತೆ ಉಪಯೋಗಿಸಲು ಅನುವು ಮಾಡಿಕೊಡಿರೆಂದು ನ್ಯಾಯಾಲಯದ ಅನುಮತಿ ಕೇಳುತ್ತಿದ್ದಾಳೆ. ಹಿಂದೂಗಳ ಅವಹೇಳನ, ಹಿಂದೂ ಧರ್ಮದ ಮೇಲಿನ ತನ್ನ ಭಾಷಣ ಜನ್ಮ ಸಿದ್ಧ ಹಕ್ಕೆಂದು ಭಾವಿಸಿದ ಅಮೀರ್ ಖಾನ್ ಅನಿವಾರ್ಯವಾಗಿ, ಕೆಲವೊಮ್ಮೆ ಅನವಶ್ಯಕವಾಗಿ ದೇಶ ಭಕ್ತಿಯ ಪ್ರದರ್ಶನ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ್ದಾನೆ.

11

ಗುಜರಾತಿನ ಚುನಾವಣೆಯಲ್ಲಿ ಭಾಜಪಾದ ಗೆಲುವಿನ ನಂತರ ತಡಬಡಾಯಿಸಿ ಹೋಗಿರುವ ಕೆಲವರು ಬಾಯಿಗೆ ಬಂದಂತೆಲ್ಲ ಮಾತಾಡುತ್ತಿದ್ದಾರೆ. ಉಡುಪಿಗೆ ಬಂದು ಪೇಜಾವರ ಶ್ರೀಗಳ ಕುರಿತಂತೆ ಲಘುವಾಗಿ ಮಾತಾಡಿದ ಜಿಗ್ನೇಶ್ ಈಗ ಮೋದಿಯವರ ಕುರಿತಂತೆಯೂ ಅದೇ ದನಿಯಲ್ಲಿ ಉಸುರಿದ್ದಾನೆ. ಬಿಡಿ. ಮಹಾತ್ಮರ ಬಗ್ಗೆ ಲಘುವಾಗಿ ಮಾತನಾಡುವುದು ಅವನ ಪಾಳಯದವರಿಗೆ ರೂಢಿ. ಮೋದಿ ಈ ನಾಲ್ಕು ವರ್ಷದಲ್ಲಿ ಅದೇನು ಕಿಸಿದಿದ್ದಾರೆಂದು ಕೇಳುವವರಿಗಾಗಿ ಈ ಲೇಖನ. ಒಮ್ಮೆ ಓದಿ.

1. ತಮ್ಮ ತಾವು ಸಮಾಜವಾದಿಗಳು ಎಂದು ಕರೆದುಕೊಂಡವರೆಲ್ಲ ಮಾತನಾಡುತ್ತಲೇ ಕಾಲಕಳೆದರು ಆದರೆ ಮೋದಿ ಬಡವರ ಉದ್ಧಾರಕ್ಕೆ ಸಿರಿವಂತರನ್ನು ತಾವಾಗಿಯೇ ಬರುವಂತೆ ಮಾಡಿದರು. ಅವರ ಗಿವ್ ಇಟ್ ಅಪ್ ಕರೆ ಅದೇ. ಮನೆಯಲ್ಲಿ ಬಳಸುವ ಸಿಲಿಂಡರಿಗೆ ಹಣ ಕೊಡುವ ಸಾಮಥ್ರ್ಯವಿದ್ದವರು ಸಕರ್ಾರದ ಸಬ್ಸಿಡಿ ತೆಗೆದುಕೊಳ್ಳಬೇಡಿರೆಂದರು. ಅವರ ಕೋರಿಕೆಗೆ ಲಕ್ಷಾಂತರ ಜನ ಪ್ರತಿಸ್ಪಂದಿಸಿದರು. ಕಳೆದ ವರ್ಷದ ವರದಿ ಬಂದಾಗ ಒಂದು ಕೋಟಿ ಪರಿವಾರಗಳು ಬಡವರ ಮನೆಯಲ್ಲಿ ಕಟ್ಟಿಗೆಯ ಅಗ್ನಿ ಉರಿಯಲೆಂದು ತಾವು ಸಬ್ಸಿಡಿ ತ್ಯಾಗ ಮಾಡಿದ್ದರು. ಒಂದು ಕೋಟಿ ಜನರ ಮನಸ್ಸನ್ನು ಪರಿವರ್ತನೆ ಮಾಡುವುದೆಂದರೆ ಖಂಡಿತ ತಮಾಷೆಯಲ್ಲ. ಅಷ್ಟಕ್ಕೇ ಸಕರ್ಾರ ಸುಮ್ಮನಾಗಲಿಲ್ಲ್ಲ. ವಾಷರ್ಿಕ ಹತ್ತು ಲಕ್ಷಕ್ಕಿಂತ ಹೆಚ್ಚು ಆದಾಯವಿರುವವರು ಸಬ್ಸಿಡಿಗೆ ಅರ್ಹರಲ್ಲವೆಂದು ಕಾನೂನು ರೂಪಿಸಿತು. ಈಗ ತಾವಾಗಿಯೇ ಸಬ್ಸಿಡಿ ತ್ಯಾಗ ಮಾಡದವರಿಗೆ ಅನಿವಾರ್ಯತೆ ಸೃಷ್ಟಿಯಾಯ್ತು. ಅದಾಗಲೇ ಒಂದು ಕೋಟಿ ಪರಿವಾರಗಳು ಈ ಯೋಜನೆಯನ್ನು ಒಪ್ಪಿಕೊಂಡಿದ್ದರಿಂದ ಉಳಿದವರೂ ತೆಪ್ಪಗಿರಲೇಬೇಕಾಗಿತ್ತು. ಸಮಾಜವಾದಕ್ಕೆ ಗೆಲುವಾಗಿತ್ತು.

2. ಗುಡ್ಗವನರ್ೆನ್ಸ್ ಅನ್ನೋದು ಸಮಾಜದ ಕೊನೆಯ ವ್ಯಕ್ತಿಯೂ ಆನಂದದ ಬದುಕನ್ನು ನಡೆಸುವಂತಹ ಸೌಲಭ್ಯಗಳನ್ನು ಒದಗಿಸಿಕೊಡೋದು. ಮೋದಿಯವರ ಸಕರ್ಾರ ಅಧಿಕಾರಕ್ಕೆ ಬಂದ ಮೇಲೆ 712 ಜಿಲ್ಲೆಯ ಮೂರುಕಾಲು ಕೋಟಿ ಬಿಪಿಎಲ್ ಕಾಡರ್್ ಹೊಂದಿರುವ ಮನೆಗಳಿಗೆ ಸಿಲಿಂಡರ್ನ್ನು ಉಜ್ವಲ ಯೋಜನೆಯಲ್ಲಿ ದೊರಕುವಂತೆ ಮಾಡಲಾಗಿದೆ. ಆ ಮನೆಗಳಲ್ಲಿ ಇಂದು ಹೊಗೆಯಿಲ್ಲದ ಅಡುಗೆಯಾಗುತ್ತಿದೆಯೆಂದರೆ ಅದು ನರೇಂದ್ರ ಮೋದಿಯವರ ಕೊಡುಗೆ!

2

3. ಇಷ್ಟೂ ವರ್ಷ ಆಳಿದ್ದವರು ಬ್ಯಾಂಕುಗಳನ್ನು ನಿಮರ್ಿಸಿ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿಗಷ್ಟೇ ಅದರೊಂದಿಗೆ ಸಂಪರ್ಕ ಇರುವಂತೆ ನೋಡಿಕೊಂಡಿದ್ದರು. ಮೋದಿ ಮತ್ತೆ ಬಡವರಿಗೆ ಆಸರೆಯಾಗಿ ನಿಂತು ಶೂನ್ಯ ಬ್ಯಾಲೆನ್ಸಿನ ಅಕೌಂಟುಗಳಿಗೆ ಪ್ರೇರಣೆ ನೀಡಿದರು. ಒಂದೇ ವಾರದಲ್ಲಿ ಒಂದೂ ಮುಕ್ಕಾಲು ಕೋಟಿಗಿಂತಲೂ ಅಧಿಕ ಅಕೌಂಟುಗಳನ್ನು ತೆರೆದು ಜಾಗತಿಕ ದಾಖಲೆ ಬರೆದರು. ಇದುವರೆಗೂ ಮುವ್ವತ್ತು ಕೋಟಿಗೂ ಅಧಿಕ ಅಕೌಂಟುಗಳು ತೆರೆಯಲ್ಪಟ್ಟಿವೆ; 70 ಸಾವಿರ ಕೋಟಿಗೂ ಮಿಕ್ಕಿ ಹಣ ಜಮೆಯಾಗಿದೆ. ಕೆಲವು ಸಿನಿಕರು ಇದರಿಂದಾದ ಲಾಭವೇನೆಂದು ಖಂಡಿತ ಕೇಳಬಹುದು. ಈ ಅಕೌಂಟುಗಳಿಗೆ ನೇರ ನರೇಗಾದಂತಹ, ಗ್ಯಾಸ್ ಸಬ್ಸಿಡಿಯಂತಹ ಸಕರ್ಾರದಿಂದ ಬರುವ ಹಣ ವರ್ಗವಣೆಯಾಗುವುದರಿಂದ ಭ್ರಷ್ಟ ಮಧ್ಯವತರ್ಿಗಳಿಂದ ಬಡವರನ್ನು ಕಾಪಾಡಿದಂತಾಗಿದೆ. ಸುಮಾರು ಹದಿನೈದು ಕೋಟಿಗೂ ಹೆಚ್ಚಿನ ಜನ ಸಕರ್ಾರದ ಸೌಲಭ್ಯಗಳ ಲಾಭವನ್ನು ಈಗ ನೇರವಾಗಿ ಪಡೆಯುತ್ತಿದ್ದಾರೆ.

4. ಹ್ಞಾಂ! ಪದೇ ಪದೇ ಬ್ಯಾಂಕಿನೊಂದಿಗೆ ವ್ಯವಹಾರಮಾಡುವುದನ್ನು ಕಲಿತ ಈ ಬಡ ಜನರಿಗೆ ಬರುಬರುತ್ತ ಸಕರ್ಾರಿ ಸಾಲಗಳನ್ನೂ ಪಡೆಯುವ ಧೈರ್ಯ ಒದಗುತ್ತದೆ. ಆಮೇಲೆ ಸಾಲ ನೀಡುವ ಮಧ್ಯವತರ್ಿಗಳ ಕಾಟವೂ ತಪ್ಪುತ್ತದೆ. ಅವರ ಬದುಕನ್ನು ಮೋದಿ ಹಾಳು ಮಾಡಿದರಲ್ಲ ಎಂದು ಯಾರಾದರೂ ಜರಿದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಸಮಾಜವಾದಿ, ಕಮ್ಯುನಿಸ್ಟ್ ಮಿತ್ರರು ಅದಕ್ಕೆ ಉತ್ತರಿಸಬೇಕಷ್ಟೇ!

5. ನನ್ನೆಲ್ಲ ಬಡವರ ಪರವಾದ, ಜೀವಪರವಾದ ಕಾಳಜಿಯ ಮಿತ್ರರು ರಿಯಲ್ ಎಸ್ಟೇಟ್ ಉದ್ದಿಮೆ ಆಕಾಶದಿಂದ ಪಾತಾಳಕ್ಕೆ ಕುಸಿದು ಸಾಮಾನ್ಯರೂ ಜಾಗ ಖರೀದಿ ಮಾಡುವ ಕನಸು ಕಟ್ಟುವ ವಾತಾವರಣ ನಿಮರ್ಾಣವಾಗಿರುವುದನ್ನು ಗಮನಿಸಿರಲೇಬೇಕು ಎಂದುಕೊಳ್ಳುತ್ತೇನೆ.

3

6. ಸ್ವಚ್ಛ ಭಾರತದ ಲಾಭವಂತೂ ಅನೇಕ. 41 ಲಕ್ಷ ವೈಯಕ್ತಿಕ, ಎರಡೂವರೆ ಲಕ್ಷ ಸಾರ್ವಜನಿಕ ಶೌಚಾಲಯಗಳು ನಿಮರ್ಾಣಗೊಂಡಿವೆ. ಸಾವಿರದ ಮುನ್ನೂರಕ್ಕೂ ಹೆಚ್ಚು ಗ್ರಾಮಗಳು ಬಯಲು ಶೌಚಾಲಯ ಮುಕ್ತಗೊಂಡಿವೆ. ತ್ಯಾಜ್ಯ ವಿಲೇವಾರಿಗೆ ತೆಗೆದುಕೊಂಡಿರುವ ಕ್ರಮವಂತೂ ಅತ್ಯದ್ಭುತ. ಎಲ್ಲವನ್ನೂ ಬದಿಗಿಟ್ಟು ನೋಡಿದರೂ ನಮ್ಮ ಪುಢಾರಿಗಳು ಪೊರಕೆ ಹಿಡಿದು ನಿಲ್ಲುವ ದೃಶ್ಯ ನೋಡಲು ಸಿಕ್ಕಿತಲ್ಲ ಅದೇ ಈ ನಾಲ್ಕು ವರ್ಷಗಳ ಮ್ಯಾಜಿಕ್ಕು! ನಮ್ಮೂರು ಸ್ವಚ್ಛವಾಗಿರಬೇಕು ಅದಕ್ಕೆ ನಾವೇ ಕೈಜೋಡಿಸಬೇಕು ಎಂಬ ಮಾನಸಿಕ ಸ್ಥಿತಿಯನ್ನು ನಿಮರ್ಿಸಲು ಸಾಧ್ಯವಾಗಿದೆಯಲ್ಲ; ಅದು ನಾಲ್ಕು ವರ್ಷಗಳ ಮಹತ್ಸಾಧನೆ. ಭಾರತದ ಜನಸಂಖ್ಯೆ ಅಪಾರವಾಗಿರುವುದರಿಂದ ಇದನ್ನು ಸ್ವಚ್ಛವಾಗಿಸಲು ಸಾಧ್ಯವೇ ಇಲ್ಲವೆಂದು ಭಾವಿಸಿಕೊಂಡಿದ್ದವರ ಮನದೊಳಗೂ ಒಂದು ಕನಸಿನ ಸಸಿಯನ್ನು ಚಿಗುರಿಸಿದ್ದು ಮೋದಿಯೇ!

7. ಮೇಕ್ ಇನ್ ಇಂಡಿಯಾದಡಿಯಲ್ಲಿ ಆಶ್ವಾಸನೆ ದೊರೆತ ಹೂಡಿಕೆಯಲ್ಲಿ ಅದಾಗಲೇ ಕಾಲುಭಾಗದಷ್ಟು ಕೆಲಸ ಆರಂಭಿಸಿಯಾಗಿದೆ. ಅಮೇರಿಕಾದ ಚಿಪ್ ಕಂಪನಿ ಕ್ವಾಲ್ಕಾಂ ಬೆಂಗಳೂರಿನಲ್ಲಿ ತನ್ನ ತರಬೇತಿಯನ್ನು ಶುರು ಮಾಡಿದ್ದು ಅವುಗಳಲ್ಲಿ ಒಂದು. 2015-16ರಲ್ಲಿ ಐವತ್ತೈದುವರೆ ಬಿಲಿಯನ್ ಅಮೇರಿಕನ್ ಡಾಲರಗಳಷ್ಟು ದಾಖಲೆಯ ಹೂಡಿಕೆಯಾಗಿತ್ತು. ರಕ್ಷಣಾ ಕ್ಷೇತ್ರದಲ್ಲಿ ಭಾರತ ದೈತ್ಯವಾಗುವತ್ತ ದಾಪುಗಾಲಿಡುತ್ತಿರುವುದು ನಿಸ್ಸಂಶಯವಾಗಿ ಮೇಕ್ ಇನ್ ಇಂಡಿಯಾದ ಸಾಧನೆಯೇ.

8. ನೋಟು ಅಮಾನ್ಯೀಕರಣವನ್ನು ಸರ್ಕಸ್ಸು ಅಂತಲೇ ಅನೇಕರು ಜರಿದರು. ಜಿಎಸ್ಟಿಯನ್ನು ಪ್ರತಿಷ್ಠೆಯ ಪ್ರಶ್ನೆ ಎಂದರು ಹಲವರು. ಆದರೆ ಭಾರತ ಎಂದೆಂದಿಗೂ ಆಥರ್ಿಕ ಶಿಸ್ತಿಗೆ ಒಳಪಡುವ ರಾಷ್ಟ್ರವೇ ಅಲ್ಲ ಎಂದು ಕೊಂಡಿದ್ದವರಿಗೆ ಇದು ಆಘಾತವುಂಟುಮಾಡಿತು ಅಷ್ಟೇ ಭಾರತದ ಮೇಲಿನ ಅವರ ಕಳೆದುಹೋಗಿದ್ದ ವಿಶ್ವಾಸ ಮರಳಿ ಬಂದಿತ್ತು. ಇದರಿಂದಾಗಿಯೇ ಹೂಡಿಕೆಯ ಭರವಸೆಯು ಹಿಂದೆಂದಿಗಿಂತಲೂ ಅಧಿಕವಾಗಿದ್ದು. ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ನಲ್ಲಿ 81ನೇ ಸ್ಥಾನದಿಂದ 66ಕ್ಕೇರಿದ್ದು. ಗ್ಲೋಬಲ್ ಕಾಂಪಿಟೀಟಿವ್ ಇಂಡೆಕ್ಸ್ನಲ್ಲಿ 71ರಿಂದ 39ನೇ ಸ್ಥಾನಕ್ಕೇರಿದ್ದು. ಮೂಡಿಯ ವರದಿ ಮತ್ತು ಈಸ್ ಆಫ್ ಡುಯಿಂಗ್ ಬಿಸಿನೆಸ್ ಇಂಡೆಕ್ಸ್ನಲ್ಲೂ ಭಾರತ ಅಗಾಧ ಪ್ರಗತಿ ಸಾಧಿಸಿದ್ದು ಈ ಎಲ್ಲ ಪ್ರಯಾಸಗಳಿಂದಲೇ.

9. ತರಂಗಗಳ ಸ್ಪೆಕ್ಟ್ರಂ ಮಾರಾಟದ ಹಗರಣ ನೆನಪಿರಬೇಕಲ್ಲ. ಮೋದಿ ಅಧಿಕಾರಕ್ಕೆ ಬಂದೊಡನೆ ಪಾರದರ್ಶಕ ವ್ಯವಸ್ಥೆ ತಂದು ಇವುಗಳನ್ನು ಹರಾಜು ಹಾಕಿದ ಪರಿಣಾಮ ಸಕರ್ಾರದ ಬೊಕ್ಕಸಕ್ಕೆ ಒಂದು ಲಕ್ಷಕೋಟಿಗೂ ಹೆಚ್ಚು ಆದಾಯ ಬಂತು. ಡಿಜಿಟಲ್ ಇಂಡಿಯಾದಡಿಯಲ್ಲಿ ಮೊದಲೆರಡು ವರ್ಷಗಳಲ್ಲಿ ನಾಲ್ಕು ಬಿಲಿಯನ್ ಡಾಲರುಗಳಿಗಿಂತಲೂ ಹೆಚ್ಚಿನ ಹಣ ಹರಿದು ಬಂದಿದೆ. 48 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯತ್ಗಳಲ್ಲಿ ಭಾರತ್ ನೆಟ್ ಅಡಿಯಲ್ಲಿ ಇಂಟರ್ನೆಟ್ ಹೆದ್ದಾರಿ ನಿಮರ್ಿಸಲಾಗಿದೆ. ಒಂದು ಲಕ್ಷ ಕಿಮೀಗೂ ಹೆಚ್ಚು ಓಎಫ್ಸಿ ಕೇಬಲ್ ಹಾಕಲಾಗಿದೆ. ಹಳೆಯ ಸಕರ್ಾರದ ಲೆಕ್ಕ ಹೇಳದಿದ್ದರೆ ಒಳಿತು.

10. ಹೆದ್ದಾರಿಗಳ ಕೆಲಸವೂ ಬಲು ವೇಗವಾಗಿ ನಡೆಯುತ್ತಿದೆ. ಮೋದಿ ಸಕರ್ಾರ ಅಧಿಕಾರ ಸ್ವೀಕರಿಸಿದಾಗ ದಿನಕ್ಕೆ ಎರಡು ಕಿಮೀನಷ್ಟು ಹೆದ್ದಾರಿ ನಿಮರ್ಾಣವಾಗುತ್ತಿತ್ತು; ಇಂದು ನಾವು ದಿನಕ್ಕೆ 28 ಕಿಮೀನಷ್ಟು ವೇಗ ಪಡೆದಿದ್ದೇವೆ. ಇದೇ ವೇಗ ಮುಂದುವರೆದರೆ ಮುಂದಿನ ವರ್ಷದ ವೇಳೆಗೆ ದಿನಕ್ಕೆ 40 ಕಿಮೀನಷ್ಟು ಹೆದ್ದಾರಿ ಹಾಸುವ ಸಾಮಥ್ರ್ಯ ನಮಗೆ ಸಿದ್ಧಿಸುತ್ತದೆ. ಮುಂದಿನೆರಡು ವರ್ಷಗಳಲ್ಲಿ 12 ಬಂದರುಗಳು ಜಲ ಹೆದ್ದಾರಿಗೂ ದಾರಿ ಮಾಡಿಕೊಡಲಿವೆ. ಜಲಮಾರ್ಗ ಅತ್ಯಂತ ಕಡಿಮೆ ವೆಚ್ಚದ ಪ್ರಯಾಣವೆಂದರಿತ ಸಕರ್ಾರ 111 ಜಲಮಾರ್ಗದ ಕೊಂಡಿಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುತ್ತಿದೆ. ಮುಂಬೈನಿಂದ ಗೋವಾಕ್ಕೆ ಮತ್ತು ಮುಂಬೈ ಅಂಡಮಾನಿಗೆ ಮುಂದಿನ ತಿಂಗಳಿನಿಂದಲೇ ಹಡಗು ಯಾನ ಶುರುವಾಗಲಿದೆ. ಇನ್ನೊಂದೆರಡು ವರ್ಷಗಳಲ್ಲಿ ನಾವು ಜಾಗತಿಕ ಮಟ್ಟದ ಶ್ರೇಷ್ಠ ರಸ್ತೆಗಳನ್ನು ಹೊಂದಿರುವ ರಾಷ್ಟ್ರವಾಗುತ್ತೇವೆ.

4

11. ಇವೆಲ್ಲ ಒತ್ತಟ್ಟಿಗಿರಲಿ. ಮೋದಿಯವರ ಸಕರ್ಾರ ಬಂದಾಗಿನಿಂದ ಅರಚಾಡುವ ಬುದ್ಧಿಜೀವಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಬಿಹಾರದ ಚುನಾವಣೆಯ ವೇಳೆಗೆ ಅಸಹಿಷ್ಣುತೆಯನ್ನು ಮುಂದಿಟ್ಟುಕೊಂಡು ಪ್ರಶಸ್ತಿ ಮರಳಿಸಿದ ಅನೇಕ ಸಾಹಿತಿಗಳು ಈಗ ಮೂಲೆಗುಂಪಾಗಿಬಿಟ್ಟಿದ್ದಾರೆ. ತೀಸ್ತಾ ಸೇತಲ್ವಾಡ್ ತನ್ನ ಅವ್ಯವಹಾರದ ಬ್ಯಾಂಕ್ ಅಕೌಂಟನ್ನು ಮತ್ತೆ ಉಪಯೋಗಿಸಲು ಅನುವು ಮಾಡಿಕೊಡಿರೆಂದು ನ್ಯಾಯಾಲಯದ ಅನುಮತಿ ಕೇಳುತ್ತಿದ್ದಾಳೆ. ಹಿಂದೂಗಳ ಅವಹೇಳನ, ಹಿಂದೂ ಧರ್ಮದ ಮೇಲಿನ ತನ್ನ ಭಾಷಣ ಜನ್ಮ ಸಿದ್ಧ ಹಕ್ಕೆಂದು ಭಾವಿಸಿದ ಅಮೀರ್ ಖಾನ್ ಅನಿವಾರ್ಯವಾಗಿ, ಕೆಲವೊಮ್ಮೆ ಅನವಶ್ಯಕವಾಗಿ ದೇಶ ಭಕ್ತಿಯ ಪ್ರದರ್ಶನ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ್ದಾನೆ. ಎಡಪಂಥೀಯರ ದೇಹ ಭಾರದಿಂದ ನಲುಗಿಹೋಗಿರುತ್ತಿದ್ದ ಲಿಟರೇಚರ್ ಫೆಸ್ಟ್ಗಳಿಗೆ ಈಗ ಬಲ ಪಂಥೀಯರು ಅನಿವಾರ್ಯವಾಗಿದ್ದಾರೆ. ಮುಖ್ಯ ಮಾಧ್ಯಮಗಳಲ್ಲಿ ಲವ್ ಜೀಹಾದ್ ಚಚರ್ೆಗೆ ತರುವುದು ಟಿಆರ್ಪಿಯ ದೃಷ್ಟಿಯಿಂದಲೂ ಅಗತ್ಯವಾಗಿಬಿಟ್ಟಿದೆ. ಬೇಡವೆಂದರೂ ಸ್ತ್ರೀವಾದಿಗಳು ಟ್ರಿಪಲ್ ತಲಾಖ್ ಚಚರ್ೆ ಮಾಡಲೇಬೇಕಾಯ್ತಲ್ಲದೇ ಅಲ್ಲಿ ಮಹಿಳೆಯರ ಪರವಾಗಿಯೇ ನಿಲ್ಲಬೇಕಾಯ್ತು. ರಾಮ ಮಂದಿರದ ಗಲಾಟೆ ನಿಣರ್ಾಯಕ ಹಂತವಂತೂ ತಲುಪಿಬಿಟ್ಟಿತು. ಆಳುವವರ ಬಕೇಟು ಹಿಡಿದು ತಮ್ಮ ಹಗರಣಗಳ ಮೇಲೆ ಪರದೆ ಎಳೆದು ಕೂತಿರುತ್ತಿದ್ದ ವಿರೋಧ ಪಕ್ಷಗಳವರು ಮೊದಲ ಬಾರಿಗೆ ಕಂಬಿ ಎಣಿಸುವುದದಾವಾಗ ಎಂಬ ಆತಂಕಕ್ಕೆ ದೂಡಲ್ಪಟ್ಟಿದ್ದಾರೆ.

12. ಎಲ್ಲ ಬದಿಗಿಟ್ಟು ನೋಡಿದರೂ ರಾಜಕೀಯ ವಲಯದಲ್ಲಿ ಮೋದಿ ಹವಾ ಭೂಕಂಪನವನ್ನೇ ಸೃಷ್ಟಿಸಿದೆ. ಎರಡು ಪಾಟರ್ಿಗಳ ಕದನ ಬೇಡವೆನ್ನುತ್ತಿದ್ದ ಪಕ್ಷಗಳೆಲ್ಲ ಮೋದಿಯನ್ನು ಸೋಲಿಸುವುದಕ್ಕಾಗಿ ತಾವೆಲ್ಲ ಸೇರಿ ಒಂದು ಗುಂಪು ಕಟ್ಟಿಕೊಳ್ಳುತ್ತಿವೆ. ಮುಸ್ಲೀಂ ತುಷ್ಟೀಕರಣದಲ್ಲೇ ಬದುಕು ಕಟ್ಟಿಕೊಂಡ ಕಾಂಗ್ರೆಸ್ಸು ಮಂದಿರಕ್ಕೆ ಹೋಗಿ ಹಿಂದೂ ಪರವಾಗಿರುವ ಸಂದೇಶ ಕೊಡಬೇಕಾಯ್ತು. ರಾಹುಲ್ ಗಾಂಧಿ ತನ್ನ ತಾನು ಶಿವಭಕ್ತ ಎಂದುಕೊಳ್ಳಬೇಕಾಯ್ತು. ಕೊನೆಗೆ ಜನಿವಾರಧಾರಿ ಹಿಂದೂ ಎಂದು ಘೋಷಿಸಿಕೊಳ್ಳುವ ಮೂಲಕ ಬ್ರಾಹ್ಮಣನಾಗಿ ಮತ್ತೆ ಮೇಲ್ವರ್ಗದವರ ರಾಜಕಾರಣಕ್ಕೇ ಜೋತುಬೀಳಬೇಕಾಯ್ತು. ಕಾಂಗ್ರೆಸ್ಸಿನ ಅಧಿವೇಶನದಲ್ಲಿ ವಂದೇ ಮಾತರಂ ಮೊಳಗಿ ಇತಿಹಾಸವನ್ನೇ ಸೃಷ್ಟಿಸಿತು!

ಅಬ್ಬ. ನನಗಿರುವ ಸ್ಥಳದ ಮಿತಿಯಿಂದಾಗಿ ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಹೇಳಲಿಕ್ಕೆ ಇನ್ನೂ ಸಾಕಷ್ಟಿದೆ. ನಾಲ್ಕೇ ವರ್ಷದಲ್ಲಿ ಮೋದಿ ಎಂಬ ಈ ವ್ಯಕ್ತಿ ಎಷ್ಟೆಲ್ಲಾ ಸಾಧನೆಗೈದು ನಾಡಿನ ಭಾಗ್ಯವಿಧಾತನಾಗಿಬಿಟ್ಟನಪ್ಪ! ಅಂದಹಾಗೆ ಇನ್ನೂ ಒಂದು ಭತರ್ಿ ವರ್ಷ ಬಾಕಿ ಇದೆ.

Comments are closed.