ವಿಭಾಗಗಳು

ಸುದ್ದಿಪತ್ರ


 

ಪರರ ಕೇಡು ಬಯಸಿದವರ ಅಂತ್ಯ ಬಲು ಕೆಟ್ಟದ್ದೇ!

ಈಗ ಲಂಡನ್ನಿನಲ್ಲಿಯೇ ಬಾಂಬು ಸಿಡಿದಿದೆ. ವಲಸೆ ಬಂದವರಿಂದಾಗಿಯೇ ಕಳೆದ ವರ್ಷದ ಬ್ರುಸೆಲ್ಸ್ ದಾಳಿ ಮತ್ತು 2015 ರಲ್ಲಿ ಜರ್ಮನಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆದಿದ್ದನ್ನು ಮರೆಯುವುದು ಹೇಗೆ? ಅದರದ್ದೇ ಮುಂದುವರಿದ ಭಾಗವಾಗಿ ಪಾರ್ಸನ್ ಗ್ರೀನ್ ಟ್ಯೂಬ್ ಟ್ರೇನ್ನಲ್ಲಿ ದಾಳಿಯಾಗಿದೆ. ಹೊರಗಿನಿಂದ ಬಂದವರು ಎಷ್ಟಾದರೂ ಹೊರಗಿನವರೇ.

ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರಲೇಬೇಕು ಎನ್ನುವುದು ವಿಜ್ಞಾನದ ನಿಯಮ. ಆಧ್ಯಾತ್ಮವೂ ಒಂದಲ್ಲ ಒಂದು ರೀತಿಯಲ್ಲಿ ಅದನ್ನೇ ಹೇಳುತ್ತದೆ. ಕರ್ಮ ಸಿದ್ಧಾಂತದ ಅಡಿಪಾಯವೇ ಅದು. ಇಲ್ಲಿ ಕ್ರಿಯೆ ಮಾತ್ರವಲ್ಲ, ಆಲೋಚನೆಗೂ ಪ್ರತಿಕ್ರಿಯೆಯಿರುತ್ತದೆ. ಅದಕ್ಕೇ ಆಲೋಚನೆ ಮಾಡುವಾಗಲೂ ಎಚ್ಚರಿಕೆ ವಹಿಸಬೇಕು ಎನ್ನುತ್ತಿದ್ದುದು ಸ್ವಾಮಿ ವಿವೇಕಾನಂದರು. ಇಷ್ಟೆಲ್ಲ ಪೀಠಿಕೆ ಏಕೆಂದರೆ, ಲಂಡನ್ನಲ್ಲಿ ಮತ್ತೆ ಭಯೋತ್ಪಾದನಾ ದಾಳಿಯಾಗಿದೆ.

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಆಲೋಚನೆ ಮಾಡಿತಲ್ಲ ಇಂಗ್ಲೆಂಡು ಆಗಲೇ ಭಾರತವನ್ನು ವಿಭಜಿಸುವ ಯೋಜನೆಯನ್ನೂ ಗಟ್ಟಿಗೊಳಿಸಿಕೊಂಡುಬಿಟ್ಟಿತ್ತು. ಹಿಂದೂ-ಮುಸಲ್ಮಾನರು ಜೊತೆಗಿದ್ದರೆ ಕಾದಾಡುತ್ತಲೇ ಇರುತ್ತಾರೆ ಅದಕ್ಕೇ ಅವರನ್ನು ಪ್ರತ್ಯೇಕವಾಗಿರಿಸುವುದು ಶಾಂತಿ-ನೆಮ್ಮದಿಯ ದೃಷ್ಟಿಯಿಂದ ಒಳಿತೆಂದು ಅವರು ಜಗತ್ತನ್ನು ನಂಬಿಸಿಬಿಟ್ಟಿದ್ದರು. ನಮ್ಮಲ್ಲಿ ಸಾಕಷ್ಟು ವಿರೋಧಗಳಿದ್ದರೂ ಮತದ ಅಫೀಮು ಕುಡಿದ ಒಂದಷ್ಟು ಮರ್ಕಟಗಳು ಮತ್ತು ಅಧಿಕಾರದ ಅಮಲೇರಿಸಿಕೊಂಡ ದುಷ್ಟ ರಾಜಕಾರಣಿಗಳು ಕೈಜೋಡಿಸಿಯಾಗಿತ್ತು. ಅನಿವಾರ್ಯವಾಗಿ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಭಾರತ ತಲೆ ಬಾಗಲೇಬೇಕಾಯಿತು. ಮುಸಲ್ಮಾನರ ಮತಾವೇಶವನ್ನು ಕಂಡು ಬಾಬಾ ಸಾಹೇಬ ಅಂಬೇಡ್ಕರರು ಸ್ಪಷ್ಟ ದನಿಯಲ್ಲಿ, ‘ಶತ್ರುಗಳನ್ನು ಹೊರಗಿಟ್ಟು ಯುದ್ಧಮಾಡುವುದು ಅವರನ್ನು ಒಳಗಿಟ್ಟುಕೊಂಡು ಕಾದಾಡುವುದಕ್ಕಿಂತಲೂ ಒಳ್ಳೆಯದು’ ಎಂದಿದ್ದರು.

ಆದರೆ ಆದದ್ದೇನು? ವಿಭಜನೆಯ ನೆಪದಲ್ಲಿ ಸುಮಾರು ಅರವತ್ತು ಲಕ್ಷ ಮುಸಲ್ಮಾನರು ನಾಡಿನೆಲ್ಲೆಡೆಯಿಂದ ಪಾಕೀಸ್ತಾನಕ್ಕೆ ವಗರ್ಾಯಿಸಲ್ಪಟ್ಟರು. ಅತ್ತಲಿಂದ ನಲವತ್ತು ಲಕ್ಷಕ್ಕೂ ಹೆಚ್ಚು ಜನ ಇತ್ತ ಬಂದರು. ಈ ಸರ್ಕಸ್ಸಿನಲ್ಲಿ ಹೆಚ್ಚು ಕಡಿಮೆ ಎರಡು ಲಕ್ಷದಿಂದ ಇಪ್ಪತ್ತು ಲಕ್ಷದಷ್ಟು ಜನ ಕೊಲೆಯಾಗಿ ಹೋದರು. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಎಗ್ಗಿಲ್ಲದೇ ನಡೆಯಿತು. ಅರಾಜಕತೆಯಿಂದಾಗಿ ಸೇಡಿನ ಬೆಂಕಿ ಧಗಧಗನೆ ಉರಿಯಿತು. ಈ ನಡುವೆ ಬ್ರಿಟನ್ ಭಾರತವನ್ನು ಆಳಲಾಗದೇ ಸೋತು ಮರಳಿದ್ದನ್ನು ಜಗತ್ತು ಮಾತನಾಡಲು ಮರೆತೇ ಹೋಗಿತ್ತು. ಅದು ಪಕ್ಕಾ ರಾಜಕಾರಣ. ಜನರ ಗಮನವನ್ನು ತಮ್ಮ ವೈಫಲ್ಯದಿಂದ ಬೇರೆಡೆ ಸೆಳೆಯಲು ಮತ್ತೊಂದು ಸ್ಫೋಟಕ ಸುದ್ದಿಯನ್ನು ಹೊರ ಹಾಕೋದು. ಕನರ್ಾಟಕದ ರಾಜಕಾರಣಿಗಳು ಸಕರ್ಾರದ ವೈಫಲ್ಯದಿಂದ ಜನರನ್ನು ಲಿಂಗಾಯತ ಧರ್ಮದೆಡೆಗೆ ಸೆಳೆದು ತಂದಿಲ್ಲವೇ ಹಾಗೆಯೇ! ನಮಗೂ ಅಷ್ಟೇ. ಮತ-ಪಂಥಗಳ ಸೆಳವು ಅದೆಷ್ಟಿದೆಯೆಂದರೆ ರಾಜ್ಯ, ರಾಷ್ಟ್ರ, ಪ್ರಗತಿ ಇವೆಲ್ಲವೂ ಮೂಲೆಗೆ ಹೋಗಿ ಕುಳಿತುಬಿಡುತ್ತದೆ. ಬ್ರಿಟೀಷರು ಲಕ್ಷಾಂತರ ಜನರನ್ನು ನಡು ರಸ್ತೆಯಲ್ಲಿ ಬಲಿ ಕೊಟ್ಟು ತಮ್ಮ ಮನೋಗತವನ್ನು ಈಡೇರಿಸಿಕೊಂಡುಬಿಟ್ಟಿದ್ದರು. ಇಷ್ಟಕ್ಕೂ ಇಡಿಯ ದೇಶ ಆಗ ಅವರ ಕೈಲೇ ಇತ್ತು. ಮನಸ್ಸು ಮಾಡಿದ್ದರೆ ಜನರ ವಿನಿಮಯವನ್ನು ತೊಂದರೆಯಾಗದಂತೆ, ಎಲ್ಲರಿಗೂ ಒಪ್ಪುವಂತೆ ಮಾಡಿಕೊಟ್ಟು ಅಖಂಡ ಭಾರತೀಯರ ಎದೆಯಲ್ಲಿ ವಿರಾಜಮಾನರಾಗಬಹುದಿತ್ತು. ಅವರು ಹಾಗೆ ಮಾಡಲಿಲ್ಲ. ದಂಗೆಗಳಿಗೆ ಪ್ರೋತ್ಸಾಹ ನೀಡಿ ಭಾರತದ ಜನ ಆಳಿಕೊಳ್ಳಲು ಅಯೋಗ್ಯರೆಂದು ಸಾಬೀತುಪಡಿಸುವ ಹಠಕ್ಕೆ ಬಿದ್ದಿದ್ದರು. ಆ ಹೊತ್ತಲ್ಲಿ ಭಾರತ ಅನುಭವಿಸಿದ ವೇದನೆ, ನಂಬಿಕೆ ಕಳೆದು ಕೊಂಡಿದ್ದ ಇಲ್ಲಿನ ಮುಸಲ್ಮಾನರ ನೋವು ದಾಖಲು ಮಾಡಿ ಮುಗಿಸಬಹುದಾದ್ದಲ್ಲ. ಆದರೆ ಆಳುವ ಅಧಿಕಾರ ಪಡೆದ ನಾಯಕರು ಬ್ರಿಟೀಷರ ಶೂಗಳಲ್ಲಿಯೇ ಕಾಲಿರಿಸಿದರೇ ಹೊರತು ಹೊಸ ಹಾದಿಯಲ್ಲಿ, ಹೊಸ ಹೆಜ್ಜೆ ಹಾಕುವ ಗೋಜಿಗೇ ಹೋಗಲಿಲ್ಲ. ಹಿಂದೂಗಳ ಔದಾರ್ಯದಿಂದ ಇಲ್ಲಿಯೇ ಉಳಿದಿದ್ದ ಮುಸಲ್ಮಾನರನ್ನು ಮುಖ್ಯವಾಹಿನಿಗೆ ಕರೆತಂದು ಅವರನ್ನು ಭಾರತದ ಪ್ರಗತಿಯ ಓಟಕ್ಕೆ ಪಾಲುದಾರರನ್ನಾಗಿ ಮಾಡಿಬಿಡಬೇಕಿತ್ತು; ನಾವು ಅಲ್ಪಸಂಖ್ಯಾತರೆಂಬ ಬಿರುದು ಕೊಟ್ಟು ಅವರನ್ನು ಖಲೀಫಾಗಳಿಗೇ ಅಧಿನರಾಗಿರಿಸಿದೆವೇ ಹೊರತು ಭಾರತ ಭಕ್ತರಾಗಿಸಲಿಲ್ಲ.

12

ಇಸ್ಲಾಂ ಬಲುಬೇಗ ಆವೇಶಕ್ಕೊಳಗಾಗುವ ಪಂಥ. ಅಲ್ಲಿ ಪ್ರತಿಯೊಂದು ವಿಚಾರವನ್ನೂ ಹೇಳುವುದಿಲ್ಲ, ಒತ್ತಾಯದಿಂದ ತುರುಕಲಾಗುತ್ತದೆ. ಹೀಗಾಗಿ ರಕ್ತಗತವಾಗಿಹೋಗಿರುವ ನಂಬಿಕೆಗಳು ಸ್ವಲ್ಪ ಅಲುಗಾಡಿದರೂ ಅವರು ಅದನ್ನು ಸಹಿಸಿಕೊಳ್ಳಲಾರರು. ಸಹ ಮಾನವರೊಡನೆ ಬದುಕಲು ಅವರಿನ್ನೂ ಸಾಕಷ್ಟು ವಿಚಾರವಂತರಾಗಬೇಕಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇಸ್ಲಾಂ ರಾಷ್ಟ್ರಗಳಲ್ಲೇ ಚೆನ್ನಾಗಿ ಬದುಕಲು ಹೆಣಗಾಡುವ ಮುಸಲ್ಮಾನರು, ಸೆಕ್ಯುಲರ್ ರಾಷ್ಟ್ರಗಳಲ್ಲಿ ಅದು ಹೇಗೆ ಬದುಕಬಲ್ಲರು ಹೇಳಿ? ಹಾಗೇನಾದರೂ ಬದುಕುವ ಕಲೆ ಕಲಿಸಿಕೊಟ್ಟು ಅವರನ್ನು ನಾಗರೀಕರಾಗಿಸುವ ಸಾಮಥ್ರ್ಯವಿದ್ದರೆ ಅದು ಭಾರತಕ್ಕೆ ಮಾತ್ರ. ಹೂಣರಂತಹ ಹೂಣರನ್ನೇ ತನ್ನೊಳಗೆ ಸಮ್ಮಿಳಿತಗೊಳಿಸಿಕೊಂಡ ಭಾರತಕ್ಕೆ ಇವರು ಬಲು ದೊಡ್ಡ ಸವಾಲಾಗಿರಲಿಲ್ಲ. ಬಹದ್ದೂರ್ ಷಾಹ್ ಜಫರ್ ಕಾಲಕ್ಕೆ ಅದು ಆಗಿಯೂ ಬಿಡುತ್ತಿತ್ತು. ಆದರೆ ಬಿಳಿಯರು ತಡೆಗೋಡೆಯಾಗಿ ನಿಂತುಬಿಟ್ಟರು ಅಷ್ಟೇ. ಹಿಂದೂ-ಮುಸ್ಲೀಂ ಕಂದಕ ದೊಡ್ಡದು ಮಾಡಿದಷ್ಟೂ ಆಳುವುದು ಸುಲಭವೆಂದು ಅವರ ಅನುಭವ ಹೇಳುತ್ತಿತ್ತು. ಹಾಗೆಂದೇ ಅವರು ವಿಭಿನ್ನ ಪ್ರಯೋಗಗಳನ್ನು ನಡೆಸಿ ಮುಸಲ್ಮಾನರನ್ನು ಭಡಕಾಯಿಸಲು ಶುರು ಮಾಡಿದ್ದು. ಢಾಕಾದ ನವಾಬ ಸಲೀಮುಲ್ಲಾನಿಗೆ ಹಣದ ಆಮಿಷವೊಡ್ಡಿ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ ಮಾಡುವಂತೆ ಅಧಿಕಾರಿಗಳೇ ಸಲಹೆ ಕೊಡುತ್ತಿದ್ದುದು ಈಗ ಇತಿಹಾಸ. ಅವನ ಕೃಪಾ ಪೋಷಿತ ಗೂಂಡಾಗಳು ಅಲ್ಲಿ ಹಿಂದುಗಳ ಬದುಕನ್ನು ನರಕಗೊಳಿಸಿಬಿಟ್ಟರು. ಮುಸಲ್ಮಾನರನ್ನು ಭಡಕಾಯಿಸುವುದು ಬಲು ಸುಲಭ. ಮೆಕ್ಕಾಕ್ಕೆ ಅವಮಾನ, ಪ್ರವಾದಿಗಳಿಗೆ ಅವಮಾನ, ಕುರಾನಿಗೆ ಅವಮಾನ ಎಂದು ಪುಕಾರು ಹಬ್ಬಿಸಿದರಾಯಿತು. ಮೂತರ್ಿ ಪೂಜೆಯನ್ನೇ ಮಾಡುವುದಿಲ್ಲ ಎನ್ನುತ್ತ ಮತದ ಸಂಕೇತಗಳಿಗೆ ಅವಮಾನವಾದರೂ ಸಹಿಸದಂತಾಡುತ್ತಾರೆ. ಹಿಂದುಗಳಾದರೋ ವೈಭವದ ಮೂತರ್ಿ ಪೂಜೆಯನ್ನೇ ಮಾಡಿ ಅದನ್ನೂ ಮೀರಿ ಹೋಗುವುದನ್ನೇ ಆಲೋಚಿಸುತ್ತಿರುತ್ತಾರೆ. ಅದು ಬೇರೊಂದು ಚಚರ್ೆ. ಸದ್ಯದ ಸಂಗತಿ ಎಂದರೆ, ಈ ಬಗೆಯ ಕಿಡಿ ಹೊತ್ತಿಸಿ ಮುಸಲ್ಮಾನರನ್ನು ಅಂದಿನಿಂದ ಇಂದಿನವರೆಗೂ ಭಡಕಾಯಿಸುತ್ತಲೇ ಬಂದರು ಆಳುವ ಧಣಿಗಳು. ಅದಕ್ಕೆ ಅವರೂ ಪೂರಕವಾಗಿ ಪ್ರತಿಸ್ಪಂದಿಸಿದರು. ತಮ್ಮ ತಮ್ಮಲ್ಲೆ ಕಾದಾಡಿ ನಾಶವಾಗಿ ಹೋದವರ ಸಮಾಧಿಯ ಮೇಲೆ ತಮ್ಮ ವಿಜಯ ಪತಾಕೆ ಹಾರಿಸುವ ಹುಚ್ಚು ಬಿಳಿಯರಿಗೆ. ಜಗತ್ತಿನಾದ್ಯಂತ ಇದನ್ನೇ ಮಾಡಿಕೊಂಡು ಬಂದವರು ಅವರು. ಆ ಕುರಿತಂತೆ ಹೆಮ್ಮೆಯಿದೆ ಅವರಿಗೆ. ಅದನ್ನು ಗಮನಿಸಿಯೇ ವಿವೇಕಾನಂದರೊಮ್ಮೆ ತಮ್ಮ ವಿದೇಶದ ಶಿಷ್ಯರಿಗೆ ಭವಿಷ್ಯದ ನಾಶದ ಮುನ್ಸೂಚನೆ ಕೊಡುತ್ತ ಒಂದು ಕಾಲ ಬರುತ್ತದೆ ಆಗ ನಿಮ್ಮಲ್ಲಿ ಒಂದು ಇಟ್ಟಿಗೆಯ ಮೇಲೆ ಮತ್ತೊಂದು ಇಟ್ಟಿಗೆ ನಿಲ್ಲಲಾರದು ಎಂದು ಗಂಭೀರವಾಗಿ ಎಚ್ಚರಿಸಿದ್ದರು. ಅದಕ್ಕೆ ಯಾರು ಕಾರಣರಾಗಬಹುದೆಂಬ ಸೂಕ್ಷ್ಮವನ್ನೂ ಹೇಳಿ, ಅದಕ್ಕೆ ಸಾಕಷ್ಟು ಸಮಯ ಬೇಕೆಂದು ಸಮಾಧಾನವನ್ನೂ ಮಾಡಿದ್ದರು.
ಅಲ್ಲವೇ ಮತ್ತೆ? ಇತರರನ್ನು ಕೊಂದಾದರೂ ಸರಿ ತಾವು ಮತ್ತು ತಮ್ಮವರು ರಾಜ್ಯವಾಳಬೇಕೆಂಬ ಕ್ರೌರ್ಯದಿಂದ ಆಧಿಪತ್ಯ ಸ್ಥಾಪಿಸಿದವರಿಗೆ ಪ್ರತಿಫಲ ದಕ್ಕುವುದಾದರೂ ಯಾವಾಗ? ಸ್ವಾತಂತ್ರ್ಯ ಬಂದ ಮೇಲಾದರೂ ಸುಮ್ಮನಿದ್ದರೇನು? ಪಾಕೀಸ್ತಾನವನ್ನು ಭಡಕಾಯಿಸಿ ನಮ್ಮ ವಿರುದ್ದ ಎತ್ತಿಕಟ್ಟಿ ನಾವು ಭಯೋತ್ಪಾದನೆಯ ಸುಲಭದ ತುತ್ತಾಗುವಂತೆ ನೋಡಿಕೊಂಡರಲ್ಲ. ಅವತ್ತು ನಾವು ಪಾಕೀಸ್ತಾನ ಪ್ರೇರಿತ ಭಯೋತ್ಪಾದನೆಯೆಂದು ಜಗತ್ತಿನ ಮುಂದೆ ಕಣ್ಣೀರಿಡುವಾಗ ‘ಕಾನೂನು-ಸುವ್ಯವಸ್ಥೆ ಕಾಪಾಡಲಾಗದ ಅಪ್ರಯೋಜಕ ರಾಷ್ಟ್ರ ಭಾರತ’ ಎಂದು ಜಗತ್ತಿನ ಮುಂದೆ ಮೂದಲಿಸುತ್ತ ಕುಳಿತಿತ್ತಲ್ಲ ಪಶ್ಚಿಮದ ರಾಷ್ಟ್ರಗಳು; ಈಗ ಅವುಗಳ ಪರಿಸ್ಥಿತಿ ನೋಡಿ. ಭಾರತವೇನೋ ಈ ಬಾಡಿಗೆ ಗೂಂಡಾಗಳನ್ನು, ಮತೋನ್ಮತ್ತರನ್ನು ಎದುರಿಸುವುದನ್ನು ಕಲಿತುಬಿಟ್ಟಿದೆ ಆದರೆ ಬೇರೆಯವರ ಮೇಲೆ ಛೂ ಬಿಡಲೆಂದೇ ತಯಾರು ಮಾಡಿದ ನಾಯಿಗಳು ಈಗ ತನ್ನತ್ತಲೇ ತಿರುಗಿ ನಿಂತಾಗ ಪತರಗುಟ್ಟುವ ಮಾಲೀಕನಂತಾಗಿದೆ ಇಂಗ್ಲೆಂಡು. ಇತರರ ಸರ್ವನಾಶದ ಆಲೋಚನೆಯೊಳಗೆ ತನ್ನದೇ ಸರ್ವನಾಶದ ಬೀಜ ಅಡಗಿದೆ ಎನ್ನುವುದು ಅದಕ್ಕೀಗ ಅರಿವಾಗುತ್ತಿದೆ.

sadiq_khan-680x408

ಲಂಡನ್ನಿನ ಮೇಯರ್ ಆಗಿ ಸಾದಿಕ್ ಖಾನ್ ಆಯ್ಕೆಯಾದ ಕೆಲವೇ ದಿನಗಳಲ್ಲಿ ನ್ಯೂಯಾಕರ್ಿನಲ್ಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಆಗ ಅಲ್ಲಿಯೇ ಇದ್ದ ಸಾಧಿಕ್ ಖಾನ್, ದೊಡ್ಡ ದೊಡ್ಡ ನಗರಗಳಲ್ಲಿ ಭಯೋತ್ಪಾದಕ ದಾಳಿ ದಿನನಿತ್ಯದ ವಹಿವಾಟಿನಂತೆ. ಜನ ಜಾಗೃತರಾಗಿರಬೇಕಷ್ಟೇ ಎಂದಿದ್ದರು. ನನಗೆ ತಿಳಿದಿರುವ ಇಸ್ಲಾಂ ಇಂತಹ ದಾಳಿಗಳನ್ನು ಮಾಡಲು ಹೇಳಲಾರದೆಂದು ಹೇಳಿಕೆ ಕೊಟ್ಟು ಇಸ್ಲಾಂ ಪರ ಬ್ಯಾಟಿಂಗ್ ಮಾಡಲು ನಿಂತರು. ಒಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್ ವಲಸೆಗಾರರ ವಿರುದ್ಧ ಕೊಟ್ಟ ಕಠೋರ ಹೇಳಿಕೆಯನ್ನು ವಿರೋಧಿಸಿದರು ಕೂಡ. ಈಗ ಲಂಡನ್ನಿನಲ್ಲಿಯೇ ಬಾಂಬು ಸಿಡಿದಿದೆ. ವಲಸೆ ಬಂದವರಿಂದಾಗಿಯೇ ಕಳೆದ ವರ್ಷದ ಬ್ರುಸೆಲ್ಸ್ ದಾಳಿ ಮತ್ತು 2015 ರಲ್ಲಿ ಜರ್ಮನಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆದಿದ್ದನ್ನು ಮರೆಯುವುದು ಹೇಗೆ? ಅದರದ್ದೇ ಮುಂದುವರಿದ ಭಾಗವಾಗಿ ಪಾರ್ಸನ್ ಗ್ರೀನ್ ಟ್ಯೂಬ್ ಟ್ರೇನ್ನಲ್ಲಿ ದಾಳಿಯಾಗಿದೆ. ಹೊರಗಿನಿಂದ ಬಂದವರು ಎಷ್ಟಾದರೂ ಹೊರಗಿನವರೇ. ಸಾದಿಕ್ ಖಾನ್ಗೆ ಈಗ ಬುದ್ಧಿ ಬಂದಿರಬಹುದೇನೋ? ‘ಈ ನಗರ ಹೇಡಿತನದಿಂದ ಕೂಡಿದ ಈ ಕ್ರಿಯೆಯನ್ನು ವಿರೋಧಿಸುತ್ತದೆ’ ಎಂಬ ಹೇಳಿಕೆ ಕೊಟ್ಟು ಸದ್ಯಕ್ಕೆ ಸುಮ್ಮನಾಗಿದ್ದಾರೆ.

ಅಂದಹಾಗೆ ಭಾರತದಲ್ಲೂ ವಲಸೆಕೋರರ ಹಾವಳಿ ಸಾಕಷ್ಟಿದೆ. ಬಾಂಗ್ಲಾದೇಶಿಗರಲ್ಲದೇ, ರೋಹಿಂಗ್ಯಾದ ಮುಸಲ್ಮಾನರು ಇಲ್ಲಿ ಬೀಡುಬಿಟ್ಟಿದ್ದಾರೆ. ಢಾಕಾದ ನವಾಬ ಸಲೀಮುಲ್ಲಾನ ಸ್ಥಾನದಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನಜರ್ೀ ಇದ್ದಾರೆ. ಬ್ರಿಟೀಷರ ವೈರಸ್ಸು ಕೊರೆದಿರುವ ಬುದ್ಧಿಜೀವಿಗಳು ಬೆಂಬಲಕ್ಕೆ ಈಗಲೂ ಇದ್ದಾರೆ! ಭಾರತ ಮತ್ತೊಂದು ತುಂಡಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ!

 

Comments are closed.