ವಿಭಾಗಗಳು

ಸುದ್ದಿಪತ್ರ


 

ಬಿಜೆಪಿಯ ರಾಜ್ಯಾಧ್ಯಕ್ಷರಿಗೊಂದು ಪ್ರೀತಿಯ ಪತ್ರ!!

ಪರಿವಾರವಾದದಿಂದ ಸ್ವಲ್ಪ ದೂರವಿರಿ, ರಾಜ್ಯದ ಜನತೆ ನಿಮ್ಮ ಪರಿವಾರವಾಗಲಿ. ಸಂತರ ಆಶೀವರ್ಾದ ಬೇಕೆ ಬೇಕು, ಹಾಗಂತ ಒಂದು ಜಾತಿಗೆ ಸೀಮಿತರಾಗಿಬಿಡಬೇಡಿ. ನಿಷ್ಠಾವಂತರ ಪಡೆ ಕಟ್ಟಿಕೊಳ್ಳಬೇಕು, ಅವರದ್ದೇ ಗುಂಪುಗಾರಿಕೆಯಾಗಿಬಿಡಬಾರದಷ್ಟೇ! ಹಿರಿಯರಿಗೆ ಗೌರವ ಕೊಡಬೇಕೆನ್ನುವ ಭರದಲ್ಲಿ ರಾಜ್ಯಕ್ಕಿಂತ ಹೆಚ್ಚಿನ ನಿಷ್ಠೆ ಅವರಿಗೆ ತೋರದಿದ್ದರಾಯ್ತು. ಮೈಮೂಳೆ ಸವೆಯುವಷ್ಟು ಓಡಾಡಿ, ಆರೋಗ್ಯದ ಕಡೆಗೆ ಗಮನಕೊಡಿ. ಪ್ರಪಂಚದ ಯಾವ ಸುಖ-ಸಂತೋಷ ಬೇಕಾದರೂ ಅನುಭವಿಸಿ ಆದರೆ ಹಿನ್ನೆಲೆಯಲ್ಲಿ ಆಧ್ಯಾತ್ಮದ ಘಮವನ್ನು ತೊರೆಯದಿರಿ. ಪ್ರಿಯವಾದ ಮಾತುಗಳನ್ನಾಡುವವರು ಬಹಳ ಆದರೆ ಕಟುವಾದರೂ ಸತ್ಯ ಹೇಳುವ ಕೆಲವರನ್ನಾದರೂ ಜೊತೆಯಲ್ಲಿರಿಸಿಕೊಳ್ಳಿ. ಹೊಗಳಿಕೆಗೆ ಉಬ್ಬಿಬಿಡಬೇಡಿ, ತೆಗಳಿದವರ ಗುರಿಯಿಟ್ಟು ಮುಗಿಸಿಬಿಡಬೇಡಿ!

bs-yeddyurappa

ಆದರಣೀಯ ಯಡಿಯೂರಪ್ಪನವರಿಗೆ,
ನಮಸ್ಕಾರಗಳು. ರಾಜ್ಯ ಬಿಜೆಪಿಯ ಚುಕ್ಕಾಣಿ ನಿಮ್ಮ ತೆಕ್ಕೆಗೆ ಬಂದಿರೋದು ಅನೇಕರಿಗೆ ಖುಷಿ ತಂದಿದೆ. ಸಹಜವೇ ಬಿಡಿ. ರಾಜ್ಯ ಸಕರ್ಾರ ತಪ್ಪುಗಳ ಮೇಲೆ ತಪ್ಪು ಮಾಡುವಾಗಲೂ ವಿರೋಧ ಪಕ್ಷ ಸತ್ತಂತೆ ಬಿದ್ದುಕೊಂಡಿತ್ತು. ದನಿಯೇರಿಸಬಲ್ಲ ಕಂಠಗಳೇ ಅಲ್ಲಿರಲಿಲ್ಲ. ಕರೆಂಟಿನ ಸಮಸ್ಯೆ, ಶಿಕ್ಷಣ ಇಲಾಖೆಯಲ್ಲಿನ ರಾದ್ಧಾಂತಗಳು, ವಾಚು-ಕಾರುಗಳ ಹಗರಣಗಳು, ಮುಖ್ಯಮಂತ್ರಿಗಳ ಪುತ್ರವ್ಯಾಮೋಹ, ಮಂತ್ರಿ ಪತ್ನಿಯ ಲಂಚ ಪ್ರಕರಣ, ಕಂಡ ಕಂಡಲ್ಲಿ ಹಿಂದೂಗಳ ಚೂರಿ ಇರಿದು ಕೊಂದ ಕೇರಳದ ಗೂಂಡಾಗಳು ಜೊತೆಗೆ ಲೋಕಾಯುಕ್ತವನ್ನೇ ನುಂಗಿಬಿಟ್ಟ ಸಕರ್ಾರ. ಯಾವ ಹೊತ್ತಲ್ಲೂ ವಿರೋಧ ಪಕ್ಷ ವಿರೋಧಿಸಲೇ ಇಲ್ಲ. ಸಿದ್ಧರಾಮಯ್ಯನ ವಿರೋಧಿಸ ಹೊರಟರೆ ಪಾಪಗಳೆಲ್ಲ ತಮ್ಮ ಕಾಲಿಗೆ ಸುತ್ತಿಕೊಳ್ಳುತ್ತವೆಂದು ಕೆಲವರು ಹೆದರಿಕೊಂಡಂತಿತ್ತು. ಇನ್ನು ಕೆಲವರು ರಾಜ್ಯಾಧ್ಯಕ್ಷರ ನೇಮಕವಾದ ಮೇಲೆ ವಿರೋಧಿಸಿದರಾಯ್ತೆಂಬಂತಿತ್ತು. ಬಹುಪಾಲು ಜನ ಸಿದ್ಧರಾಮಯ್ಯನ ತಪ್ಪುಗಳಿಂದಲೇ ನಾವು ಚುನಾವಣೆ ಗೆದ್ದು ಗದ್ದುಗೆ ಹಿಡಿಯಬಹುದೆಂಬ ಕನಸು ಕಾಣುತ್ತಿದ್ದರು. ಇದೊಂಥರಾ ಪಟ್ಟದರಸಿ ಸತ್ತರೆ ತಾನೇ ಒಡತಿ ಎಂದು ಕನಸು ಕಾಣುವ ಬೆಲೆವೆಣ್ಣಿನಂತೆ!
ಸಾಮಾನ್ಯ ಜನರೇ ಬೀದಿಗಿಳಿದು ಹೋರಾಟ ಆರಂಭಿಸಿಬಿಟ್ಟಿದ್ದರು. 108ರ ವಾಹನ ಸಿಬ್ಬಂದಿವರ್ಗ ತಿಂಗಳುಗಟ್ಟಲೆ ಪ್ರತಿಭಟನೆ ಕೂತರು; ಉಪನ್ಯಾಸಕರು ಬೇಡಿಕೆ ಈಡೇರಿಕೆ ಆಗ್ರಹಿಸಿ ಬೀದಿಗೆ ಬಂದರು. ಊಹೂಂ. ವಿರೋಧ ಪಕ್ಷ ನೇತೃತ್ವ ವಹಿಸಲೇ ಇಲ್ಲ. ಎಲ್ಲರೂ ಮುಂದಿನ ಮುಖ್ಯಮಂತ್ರಿ ಗಾದಿಗೆ ಕಣ್ಣಿಟ್ಟು ಕುಳಿತರೆ ಹೊರತು ಸದ್ಯದ ಜನರ ನೋವುಗಳಿಗೆ ಸ್ಪಂದಿಸಲೇ ಇಲ್ಲ.
ಆಗಲೇ ನಿಮ್ಮ ಮೇಲಿನ ಒಲವು ಜನತೆಗೆ ತೀವ್ರವಾಗಿದ್ದು. ನೀವು ಮುಂದೆ ನಿಂತಿದ್ದರೆ ಈ ಗತಿ ಜನತೆಗೆ ಬರುತ್ತಿರಲಿಲ್ಲವೆಂದು ಊರೂರಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದರು. ಹುಬ್ಬಳ್ಳಿಗೆ ಸೀಮಿತರಾಗುವ ಸಾಮಥ್ರ್ಯ ಇರಬಹುದಾದವರು ರಾಜ್ಯದ ಚುಕ್ಕಾಣಿ ಬಿಟ್ಟರೆ ಸಾಕಿತ್ತು; ಕೇಂದ್ರ ಬಿಜೆಪಿ ನಿಮ್ಮನ್ನು ಹೆಸರಿಸಿತು. ವಾವ್! ಇದು ನಿಮಗೆ ಸಿಕ್ಕ ಗೌರವವೇ ಸರಿ. ಇಲ್ಲಿನ ಯಾರೊಬ್ಬರನ್ನೂ ಮಾತನಾಡಿಸದೇ, ಸಂಘದ ಮಜರ್ಿ-ಮುಲಾಜಿಗೆ ಒಳಗಾಗದೇ ಮೋದಿ-ಅಮಿತ್ ಷಾಹ್ ಜೋಡಿ ನಿಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿಸಿದ್ದು ಸಾಮಾನ್ಯ ಸಂಗತಿಯಲ್ಲ. ಅದು ಹೆಮ್ಮೆ ಪಡಬೇಕಾದ ಸಂಗತಿಯೇ. ಅದರೊಟ್ಟಿಗೆ ವಿಶ್ವಾಸದ ಜವಾಬ್ದಾರಿಗಳು ನಿಮ್ಮ ಹೆಗಲೇರಿವೆ ಎಂಬುದನ್ನು ಮರೆಯದಿರಿ.
ನಿಮ್ಮ ಬೆನ್ನಿಗೆ ಮೆತ್ತಿಕೊಂಡ ಹಳೆಯ ಮಸಿಗಳು ಒಂದಷ್ಟಿವೆ. ನೀವೆಷ್ಟೇ ಅಲ್ಲಗಳೆದರೂ ಅದನ್ನು ಸಲೀಸಾಗಿ ತೊಳೆಯುವುದು ಬಲು ಕಷ್ಟ. ಹಳೆಯದನ್ನು ಸರಿಪಡಿಸಿಕೊಳ್ಳುವ ಮಾರ್ಗವೆಂದರೆ ಮುಂದಿನ ದಾರಿಯನ್ನು ಎಚ್ಚರಿಕೆಯಿಂದ ಇಡೋದು. ನನಗೆ ಗೊತ್ತು. ರಾಜ್ಯಾಧ್ಯಕ್ಷರಾದೊಡನೆ ನಿಮ್ಮ ಸುತ್ತಮುತ್ತ ಅದೇ ಹಳೆಯ ಮುಖಗಳು ಬಂದು ಸೇರಿಕೊಂಡಿವೆ. ಅವರು ನಿಮ್ಮನ್ನು ಹೊಗಳುವ ಮತ್ತು ಎದುರಾಳಿಗಳನ್ನು ತೆಗಳುವ ತಮ್ಮ ಹಳೆಯ ಚಾಳಿ ಮುಂದುವರಿಸಿಯೇ ಇರುತ್ತಾರೆ. ಈ ಬಾರಿ ಏನಾದರೂ ನೀವು ಈ ಮಾತುಗಳಿಗೆ ಕಿವಿ ತೆರೆದಿಟ್ಟುಕೊಂಡು ದಾರಿ ತಪ್ಪಿದಿರೋ ಕತೆ ಮುಗಿದಂತೆಯೇ. ಅದಾಗಲೇ ನಿಮ್ಮ ರಾಜ್ಯಾಧ್ಯಕ್ಷ ಪಟ್ಟಕ್ಕೆ ಅಭಿನಂದನೆ ಕೋರಿ ಊರತುಂಬಾ ಹಾಕಿರುವ ಬ್ಯಾನರುಗಳಲ್ಲಿನ ಮುಖಗಳನ್ನು ನೋಡಿ ಹಾಗೆ ಹೇಳಬೇಕೆನ್ನಿಸಿತು ಅಷ್ಟೇ.
ನಿಮ್ಮ ಶಕ್ತಿ ಇರುವುದು ನಿಮ್ಮ ಕೆಲಸದ ಶೈಲಿಯಲ್ಲಿ, ನಿಮ್ಮ ಹೋರಾಟದ ಮನೋಭಾವದಲ್ಲಿ. ಬಹುಶಃ ಈ ವಿಚಾರಗಳಲ್ಲಿ ನಿಮಗೆ ಸರಿಸಾಟಿಯಾಗಬಲ್ಲ ಮತ್ತೊಬ್ಬ ನಾಯಕರು ರಾಜ್ಯ ಬಿಜೆಪಿಯಲ್ಲಿಲ್ಲ. ಆದರೆ ಇದೇ ವೇಳೆಗೆ ನಿಮ್ಮ ಶಕ್ತಿ ಕಳೆದು ಹೋಗುವುದು ಅನವಶ್ಯಕ ಮಾತುಗಳಲ್ಲಿ. ಕಳೆದ ಬಾರಿ ನಿಮ್ಮ ಸಕರ್ಾರ ಉರುಳಲು ಮುಖ್ಯ ಕಾರಣವೇ ಈ ಅನವಶ್ಯಕ ಮಾತುಗಳ ಜಟಾಪಟಿ. ಅದರಲ್ಲೂ ಸ್ವಂತ ಪಾಟರ್ಿಯವರ ಮೇಲೆಯೇ ನೀವು-ನಿಮ್ಮ ತಂಡ ಆಡಿದ ಮಾತುಗಳು ಅದಕ್ಕೆ ಪ್ರತಿಯಾಗಿ ಅವರು ಕೊಟ್ಟ ಉತ್ತರ ಜನರಿಗೆ ಮೊದಮೊದಲು ಮನರಂಜನೆಯಾಯ್ತು; ಆಮೇಲೆ ಕಿರಿಕಿರಿಯಾಯ್ತು, ಅಸಹ್ಯವಾಯ್ತು! ಸ್ವಲ್ಪ ಅತ್ತ ಗಮನ ಇಡಿ. ಆಡುವ ಒಂದು ಮಾತು ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಎಂತಹ ರಾದ್ಧಾಂತ ಬೇಕಿದ್ದರೂ ಸೃಷ್ಟಿಸಬಹುದು. ಎಚ್ಚರವಿರಲಿ.
ಕಾಂಗ್ರೆಸ್ಸು ಸಾಮಾನ್ಯ ಪಕ್ಷವಲ್ಲ. ಅದು ಸ್ವಾತಂತ್ರ್ಯ ಬಂದಾಗಿನಿಂದಲೂ ಈ ದೇಶದ ಜನರನ್ನು ಕಂಡಿದೆ. ಅವರನ್ನು ಬೆರಳ ತುದಿಯಲ್ಲಿ ಆಡಿಸುವುದು ಗೊತ್ತು ಅದಕ್ಕೆ. ಅಂತಹ ಕಾಂಗ್ರೆಸ್ಸನ್ನು ತನ್ನಿಚ್ಛೆಗೆ ತಕ್ಕಂತೆ ಆಡಿಸುತ್ತಿರುವ ಈಗಿನ ಮುಖ್ಯಮಂತ್ರಿಯೂ ಸಾಮಾನ್ಯರಲ್ಲ. ಅವರ ತಂತ್ರ ಶಕ್ತಿಗೆ ನಿಮ್ಮ ಇಚ್ಛಾಶಕ್ತಿಯೊಂದೇ ಪ್ರಬಲ ಗೋಡೆಯಾಗಿ ನಿಲ್ಲಬಲ್ಲದೆಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ. ಅದಕ್ಕೇ ನಿಮಗೆ ಪಟ್ಟ ಕಟ್ಟಿದೊಡನೆ ಕಾಂಗ್ರೆಸ್ಸಿನ ಪಾಳಯದಲ್ಲಿ ಉತ್ಪಾತವೇ ಆಗಿದೆ. ಆಳುವ ಸಕರ್ಾರ ಈ ಬರಗಾಲದ ಹೊತ್ತಲ್ಲಿ ರಾಜ್ಯವನ್ನು ಮರೆತು ದೆಹಲಿಯ ಮಟ್ಟದ ರಾಜಕಾರಣದಲ್ಲಿ ಕಾಲ ತಳ್ಳುತ್ತಿದೆ. ಇಲ್ಲಿಯೇ ಇದ್ದ ಪ್ರತ್ಯೇಕತಾವಾದಿಗಳಿಗೆ ನೀವು ಸಾಕಷ್ಟು ಬಲ ತಂದುಕೊಟ್ಟಿದ್ದೀರಿ. ಕೇಂದ್ರದಲ್ಲಿ ತಮ್ಮ ಸಕರ್ಾರ ಇಲ್ಲದಿರುವುದರಿಂದ ಹಳೆಯ ಆರೋಪಗಳಿಗೆ ನಿಮ್ಮನ್ನು ಸಿಕ್ಕಿಸಿ ಹಾಕುವುದೂ ಅವರಿಗೀಗ ಕಷ್ಟ. ಹಾಗಂತ ಸುಮ್ಮನೆ ಬಿಟ್ಟರೆ ನೀವು ತಿರುಗಾಡುತ್ತಿರುವ ವೇಗಕ್ಕೇ ಸಕರ್ಾರ ಉರುಳಿಬಿಡುತ್ತದೆ. ಅಷ್ಟರೊಳಗೆ ಮತ್ತೊಬ್ಬ ಮುಖ್ಯಮಂತ್ರಿಯನ್ನು ತರುವ ಸಾಧ್ಯತೆ ಇದೆಯಾ? ಕಾಂಗ್ರೆಸ್ಸು ಅಂತಹ ಮೂರ್ಖ ಕೆಲಸ ಮಾಡಲಾರದು. ಹಾಗಂತ ಸುಮ್ಮನೆ ಕೂರುವುದೂ ಇಲ್ಲ. ನಿಮ್ಮ ನಡೆಯನ್ನು ನಿರ್ಬಂಧಿಸುವ ಸಾಹಸವನ್ನು ಮಾಡೀತು. ಇತ್ತ ಅದಕ್ಕೆ ಬೆಂಬಲ ಕೊಡಲು ನಿಮ್ಮದೇ ಸುತ್ತಮುತ್ತ ನಿಮ್ಮದೇ ಒಂದಷ್ಟು ಜನ ಕಾಯುತ್ತ ಕುಳಿತಿದ್ದಾರೆ. ಪ್ರತಿ ಹೆಜ್ಜೆ ಎಚ್ಚರದಿಂದಿಡಿ.
ಏಕೆ ಗೊತ್ತಾ? ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಇಷ್ಟು ಬೇಗ ನಿಮ್ಮನ್ನು ಈ ಗಾದಿಗೆ ಕೂರಿಸಿರುವುದರಲ್ಲಿ ಎಷ್ಟು ಲಾಭವಿದೆಯೋ, ಸ್ವಲ್ಪ ಎಡವಟ್ಟಾದರೇ ಅಷ್ಟೇ ನಷ್ಟವೂ ಸಂಭವಿಸುವ ಸಾಧ್ಯತೆ ಇದೆ. ಕೇರಂ ಬೋಡರ್ಿನಲ್ಲಿ ರಾಣಿಯನ್ನು ಮೊದಲೇ ಕಳಕೊಂಡರೆ ಆಮೇಲಿನ ಆಟ ಎಷ್ಟು ನೀರಸವೋ ಹಾಗಾಗುವ ಸಾಧ್ಯತೆಗಳೂ ಇಲ್ಲದಿಲ್ಲ.

yeddyurappa - PTI_0
ದೇಶದ ಪ್ರಧಾನ ಮಂತ್ರಿ ಹಠಕ್ಕೆ ಬಿದ್ದವರಂತೆ ರಾಷ್ಟ್ರ ನಿಮರ್ಾಣದ ಕೈಂಕರ್ಯ ಮಾಡುತ್ತಿದ್ದಾರೆ. ದಿನದ ಹದಿನೆಂಟು ತಾಸು ಕೆಲಸ ಮಾಡುತ್ತ ಒಳಗಿನ ಎದುರಾಳಿಗಳನ್ನು ಸಂಭಾಳಿಸುತ್ತಾ, ಹೊರಗಿನ ಎದುರಳಿಗಳನ್ನು ಆಟ ಆಡಿಸುತ್ತಾ ಸಾಹಸದ ನಡೆ ನಡೆಯುತ್ತಿರುವ ಪರಿ ಇದೆಯಲ್ಲಾ ರೋಮಾಂಚನಕಾರಿಯಾದುದು. ಅವರು ಪ್ರಧಾನಿಯಾಗಿ ಸಂಸತ್ತು ಪ್ರವೇಶಿಸಿದ ದಿನ ನೀವು ಭಾವುಕರಾಗಿ ‘ನನಗೆ ಯಾವ ಪದವಿಯೂ ಬೇಡ, ರಾಷ್ಟ್ರದ ಸೇವೆಗೈಯ್ಯುವ ಅವಕಾಶವಷ್ಟೇ ಸಾಕು’ ಎಂಬರ್ಥದ ಪತ್ರ ಬರೆದಿದ್ದು ಇನ್ನೂ ಹಸಿರಾಗಿಯೇ ಇದೆ. ಆ ಮಾತುಗಳನ್ನು ಸ್ಮೃತಿಯಿಂದ ಆರಲು ಬಿಡಬೇಡಿ. ದೇಶಕ್ಕೆ ಸಮರ್ಥ ನಾಯಕ ಸಿಕ್ಕಂತೆ ರಾಜ್ಯಕ್ಕೂ ಒಳ್ಳೆಯ ನಾಯಕನೊಬ್ಬನ ನಿರೀಕ್ಷೆ ಎಲ್ಲರಿಗೂ ಇದ್ದೇ ಇದೆ. ನೀವೀಗ ಅದನ್ನೇ ಗುರಿಯಾಗಿಸಿಕೊಂಡು ಹೆಜ್ಜೆ ಇಡಬೇಕು.
ಪರಿವಾರವಾದದಿಂದ ಸ್ವಲ್ಪ ದೂರವಿರಿ, ರಾಜ್ಯದ ಜನತೆ ನಿಮ್ಮ ಪರಿವಾರವಾಗಲಿ. ಸಂತರ ಆಶೀವರ್ಾದ ಬೇಕೆ ಬೇಕು, ಹಾಗಂತ ಒಂದು ಜಾತಿಗೆ ಸೀಮಿತರಾಗಿಬಿಡಬೇಡಿ. ನಿಷ್ಠಾವಂತರ ಪಡೆ ಕಟ್ಟಿಕೊಳ್ಳಬೇಕು, ಅವರದ್ದೇ ಗುಂಪುಗಾರಿಕೆಯಾಗಿಬಿಡಬಾರದಷ್ಟೇ! ಹಿರಿಯರಿಗೆ ಗೌರವ ಕೊಡಬೇಕೆನ್ನುವ ಭರದಲ್ಲಿ ರಾಜ್ಯಕ್ಕಿಂತ ಹೆಚ್ಚಿನ ನಿಷ್ಠೆ ಅವರಿಗೆ ತೋರದಿದ್ದರಾಯ್ತು. ಮೈಮೂಳೆ ಸವೆಯುವಷ್ಟು ಓಡಾಡಿ, ಆರೋಗ್ಯದ ಕಡೆಗೆ ಗಮನಕೊಡಿ. ಪ್ರಪಂಚದ ಯಾವ ಸುಖ-ಸಂತೋಷ ಬೇಕಾದರೂ ಅನುಭವಿಸಿ ಆದರೆ ಹಿನ್ನೆಲೆಯಲ್ಲಿ ಆಧ್ಯಾತ್ಮದ ಘಮವನ್ನು ತೊರೆಯದಿರಿ. ಪ್ರಿಯವಾದ ಮಾತುಗಳನ್ನಾಡುವವರು ಬಹಳ ಆದರೆ ಕಟುವಾದರೂ ಸತ್ಯ ಹೇಳುವ ಕೆಲವರನ್ನಾದರೂ ಜೊತೆಯಲ್ಲಿರಿಸಿಕೊಳ್ಳಿ. ಹೊಗಳಿಕೆಗೆ ಉಬ್ಬಿಬಿಡಬೇಡಿ, ತೆಗಳಿದವರ ಗುರಿಯಿಟ್ಟು ಮುಗಿಸಿಬಿಡಬೇಡಿ!
ಸಂಪಾದಿಸಬೇಕಾದಷ್ಟೂ ನಿಮ್ಮ ಪದತಲದಲ್ಲಿದೆ. ಇನ್ನೇನಿದ್ದರೂ ಕೀತರ್ಿವಂತರಾಗುವತ್ತ ದಾಪುಗಾಲಿಡಿ. ಬಹಳ ಕಷ್ಟವೆನಿಸಿದರೂ ರಾಜಕಾರಣದಲ್ಲಿ ಮೋದಿಯವರ ಹೆಜ್ಜೆಯನ್ನು ತುಳಿಯಲೆತ್ನಿಸಿ.
ನಾನು ತುಂಬಾ ಚಿಕ್ಕವನು. ರಾಜಕೀಯದ ಎಬಿಸಿಡಿ ನನಗೆ ಗೊತ್ತಿಲ್ಲ; ಗೊತ್ತಾಗಿಸಿಕೊಳ್ಳುವ ಬಯಕೆಯೂ ಇಲ್ಲ. ಆದರೆ ನಿಮ್ಮ ಹತ್ತಿರದವರ್ಯಾರೂ ನಿಮ್ಮೊಂದಿಗೆ ಹೀಗೆ ಮಾತನಾಡಲು ನಿರಾಕರಿಸಿದರೆಂದೇ ಈ ಪತ್ರ ನಿಮಗೆ ಬರೆಯುತ್ತಿರೋದು ನಿಮ್ಮಿಂದ ರಾಜ್ಯಕ್ಕೆ, ದೇಶಕ್ಕೆ ಮಹತ್ವವಾದ ಕೊಡುಗೆ ದಕ್ಕಬೇಕಿದೆ. ಆ ಆಸೆಯಿಂದಲೇ ಈ ಮಾತುಗಳನ್ನು ಹೇಳುತ್ತಿರೋದು.
ನಿಮ್ಮ ಸುಂದರ ಭವಿಷ್ಯದಲ್ಲಿ ರಾಜ್ಯದ ನೆಮ್ಮದಿಯೂ ಅಡಗಿದೆ ಎಂದು ಭಾವಿಸಿ ಶುಭ ಹಾರೈಸುತ್ತೇನೆ.
ಶುಭಾಕಾಂಕ್ಷೆಗಳು!

Comments are closed.