ವಿಭಾಗಗಳು

ಸುದ್ದಿಪತ್ರ


 

ಬೆಳಕಿನ ನಾಡಿಗೆ ಬೆಳಕಾದ ಪೀಯೂಷ್ ಗೋಯಲ್!!

ಪೀಯೂಷ್ ಗೋಯಲ್ರೂ ಅಸಾಮಾನ್ಯರೇ. ಪಾಸು ಮಾಡಲು ಎಲ್ಲರೂ ಏದುಸಿರು ಬಿಡುವ ಸಿಎ ಪರೀಕ್ಷೆಯಲ್ಲಿ ದೇಶಕ್ಕೇ ಎರಡನೇ ರ್ಯಾಂಕು ಪಡೆದವರು. ಅದು ಸಾಲದೆಂಬಂತೆ ಮುಂಬೈನ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾಥರ್ಿಯಾಗಿಯೂ ಎರಡನೇ ರ್ಯಾಂಕು ತಮ್ಮದಾಗಿಸಿಕೊಂಡವರು. ಅನೇಕ ಕಂಪನಿಗಳಿಗೆ ಮಾರ್ಗದರ್ಶಕರಾಗಿ ಬೆಳವಣಿಗೆಯ ಹಾದಿ ತೋರಿಕೊಟ್ಟವರು. ಭಾರತೀಯ ಸ್ಟೇಟ್ ಬ್ಯಾಂಕು, ಬ್ಯಾಂಕ್ ಆಫ್ ಬರೋಡಾದಂತಹ ಅನೇಕ ಬ್ಯಾಂಕುಗಳಿಗೂ ಮಾರ್ಗದರ್ಶಕರಾಗಿದ್ದವರು ಪೀಯೂಷ್ ಗೋಯಲ್. ಯಾಲೆ ವಿಶ್ವವಿದ್ಯಾಲಯ, ಆಕ್ಸ್ಫಡರ್್ ವಿಶ್ವಿವಿದ್ಯಾಲಯಗಳಲ್ಲಿ ನಾಯಕತ್ವ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೇ ಸದ್ಯ ಹಾರ್ವಡರ್್ ವಿಶ್ವವಿದ್ಯಾಲಯದೊಂದಿಗೆ ಕ್ರಿಯಾಶೀಲರಾಗಿದ್ದಾರೆ.

goyal-pti

‘ಕಲ್ಲಿದ್ದಲ್ಲಿನ ದಾಸ್ತಾನು ಖಾಲಿ’, ‘ಇನ್ನೊಂದು ವಾರದಲ್ಲಿ ಸ್ಥಗಿತಗೊಳ್ಳಲಿರುವ ದೇಶದ ಬಹುತೇಕ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು’, ‘ಭಾರತ ಬ್ಲ್ಯಾಕ್ ಔಟ್’- ಈ ಬಗೆಯ ಸುದ್ದಿಗಳನ್ನು ಪತ್ರಿಕೆಯಲ್ಲಿ ಓದಿ ಎರಡು ವರ್ಷಗಳಂತೂ ಆಗಿಯೇ ಹೋಯ್ತಲ್ಲವೇ? ಇಂದು ದೇಶದ ಕನಿಷ್ಠ ನೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಬಳಿ ಮುಂದಿನ 23 ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲಿನ ದಾಸ್ತಾನು ಬಾಕಿ ಇದೆ. ಅಷ್ಟೇ ಅಲ್ಲ. ಕೋಲ್ ಇಂಡಿಯಾ ಲಿಮಿಟೆಡ್ ಅದಾಗಲೇ ಸಂಗ್ರಹಿಸಿಟ್ಟಿರುವ ಕಲ್ಲಿದ್ದಲು ಖಾಲಿಯಾಗುವವರೆಗೆ ಮತ್ತೆ ಗಣಿಗೆ ಕೈ ಹಾಕುವುದಿಲ್ಲವೆಂದು ಹೇಳಿಕೆ ಕೊಡಬೇಕಾದ ಪರಿಸ್ಥಿತಿ ಬಂದು ಬಿಟ್ಟಿತ್ತು! ಇದಕ್ಕೆಲ್ಲ ಕಾರಣವೇನು ಗೊತ್ತೇ? ಕೊರತೆ ಸೃಷ್ಟಿಸಿ ವಿದೇಶಗಳಿಂದ ಆಮದು ಮಾಡಿಕೊಂಡು ಲೂಟಿಗೈಯ್ಯುತ್ತಿದ್ದ ರಾಜಕಾರಣಿಗಳು-ಅಧಿಕಾರಿಗಳಿಗೆ ಕಡಿವಾಣ ಬಿದ್ದಿದೆ. ಒಟ್ಟಾರೆ ನಿರಂತರ ವಿದ್ಯುತ್ ಪೂರೈಕೆಯ ಜೊತೆಜೊತೆಗೇ ಸಕರ್ಾರದ ಬೊಕ್ಕಸಕ್ಕೂ ಸಾವಿರಾರು ಕೋಟಿ ರೂಪಾಯಿ ಆದಾಯವಾಗಿದೆ. ದೂರದೃಷ್ಟಿ ಇಟ್ಟುಕೊಂಡು ಹಗಲುರಾತ್ರಿ ದುಡಿಯುತ್ತಿರುವ ಕೇಂದ್ರ ಮಂತ್ರಿ ಪೀಯೂಶ್ ಗೋಯಲ್ರಿಗೆ ಈ ಎಲ್ಲಾ ಯಶಸ್ಸಿನ ಕೀತರ್ಿ ಸಲ್ಲಬೇಕು. ನರೇಂದ್ರ ಮೋದಿ ಸಕರ್ಾರದ ನಂಬಿಕಸ್ತ, ಕ್ರಿಯಾಶೀಲ ಮಂತ್ರಿಗಳಲ್ಲಿ ಅವರೂ ಒಬ್ಬರು!
ಮೋದಿ ಸಕರ್ಾರ ಅಧಿಕಾರಕ್ಕೆ ಬರುವಾಗಲೇ 24 ಗಂಟೆ ವಿದ್ಯುತ್ ಕೊಡುವ ಭರವಸೆಯ ಮಾತಾಡಿತ್ತು. ಗುಜರಾತಿನಲ್ಲಿ ಈ ಸಾಧನೆ ಮಾಡಿದ ಮೋದಿಯವರಿಗೆ ರಾಷ್ಟ್ರದ ಮಟ್ಟದಲ್ಲಿ ಇದನ್ನು ಮಾಡುವುದು ಸುಲಭವಲ್ಲವೆಂದು ಎಲ್ಲರಿಗೂ ಅನಿಸಿತ್ತು. ಆಗ ಅವರು ಹುಡುಕಿಕೊಂಡ ರತ್ನ ಪೀಯೂಷ್ ಗೋಯಲ್. ಮೋದಿಯ ಆಯ್ಕೆಯೆಂದರೆ ಹಾಗೆಯೇ. ಅದರಲ್ಲೂ ತಮ್ಮ ಕನಸಿನ ಕಾರ್ಯಕ್ಷೇತ್ರಕ್ಕೆಲ್ಲ ಸಮರ್ಥರನ್ನೇ ಕರೆತಂದು ನಿರಾಳವಾಗಿಬಿಟ್ಟಿದ್ದಾರೆ.
ಪೀಯೂಷ್ ಗೋಯಲ್ರೂ ಅಸಾಮಾನ್ಯರೇ. ಪಾಸು ಮಾಡಲು ಎಲ್ಲರೂ ಏದುಸಿರು ಬಿಡುವ ಸಿಎ ಪರೀಕ್ಷೆಯಲ್ಲಿ ದೇಶಕ್ಕೇ ಎರಡನೇ ರ್ಯಾಂಕು ಪಡೆದವರು. ಅದು ಸಾಲದೆಂಬಂತೆ ಮುಂಬೈನ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾಥರ್ಿಯಾಗಿಯೂ ಎರಡನೇ ರ್ಯಾಂಕು ತಮ್ಮದಾಗಿಸಿಕೊಂಡವರು. ಅನೇಕ ಕಂಪನಿಗಳಿಗೆ ಮಾರ್ಗದರ್ಶಕರಾಗಿ ಬೆಳವಣಿಗೆಯ ಹಾದಿ ತೋರಿಕೊಟ್ಟವರು. ಭಾರತೀಯ ಸ್ಟೇಟ್ ಬ್ಯಾಂಕು, ಬ್ಯಾಂಕ್ ಆಫ್ ಬರೋಡಾದಂತಹ ಅನೇಕ ಬ್ಯಾಂಕುಗಳಿಗೂ ಮಾರ್ಗದರ್ಶಕರಾಗಿದ್ದವರು ಪೀಯೂಷ್ ಗೋಯಲ್. ಯಾಲೆ ವಿಶ್ವವಿದ್ಯಾಲಯ, ಆಕ್ಸ್ಫಡರ್್ ವಿಶ್ವಿವಿದ್ಯಾಲಯಗಳಲ್ಲಿ ನಾಯಕತ್ವ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೇ ಸದ್ಯ ಹಾರ್ವಡರ್್ ವಿಶ್ವವಿದ್ಯಾಲಯದೊಂದಿಗೆ ಕ್ರಿಯಾಶೀಲರಾಗಿದ್ದಾರೆ. ಒಂದು ನಿಮಿಷವೂ ಸುಮ್ಮನೆ ಕೂರುವ ಜಾಯಮಾನದವರಲ್ಲ ಅವರು. ಅವರ ತೀವ್ರ ಚಟುವಟಿಕೆಯಿಂದಾಗಿ ಕತ್ತಲಲ್ಲಿಯೇ ಇರುತ್ತಿದ್ದ ವಿದ್ಯುತ್ ವಿಭಾಗ ಅಕ್ಷರಶಃ ಬೆಳಕಿಗೆ ಬಂದುಬಿಟ್ಟಿದೆ. ದೇಶವನ್ನು ವಿದ್ಯುತ್ ಕೊರತೆಯಿಂದ ಹೆಚ್ಚುವರಿ ವಿದ್ಯುತ್ನತ್ತ ಕೊಂಡೊಯ್ಯಬೇಕೆಂದರೆ ಹೆಚ್ಚುವರಿ ಕೆಲಸ ಮಾಡಲೇಬೇಕಲ್ಲ. ಹೀಗಾಗಿ ಮೋದಿಯೊಂದಿಗೆ ಹದಿನೆಂಟು ಗಂಟೆಗಳ ಕೆಲಸ ಇವರಿಗೂ ಅನಿವಾರ್ಯವೇ. ಈ ಪ್ರಯಾಸದಿಂದಾಗಿಯೇ ಕಳೆದ ಎರಡು ವರ್ಷಗಳಲ್ಲಿ 7654 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಲಾಗಿದೆ. ಅಧಿಕಾರಕ್ಕೆ ಬಂದ ಸಾವಿರ ದಿನಗಳೊಳಗಾಗಿ 18ಸಾವಿರ ಹಳ್ಳಿಗಳಿಗೆ ಸಂಪರ್ಕ ಕೊಡಿಸುವೆವೆಂದು ಮೋದಿ ದೇಶಕ್ಕೆ ಕೊಟ್ಟ ಮಾತಿಗೆ ಪೀಯೂಷ್ ಗೋಯಲ್ ಇಪ್ಪತ್ನಾಲ್ಕು ಗಂಟೆ ದುಡಿದರೂ ಕಮ್ಮಿಯೇ. ಅಲ್ಲದೇ ಮತ್ತೇನು? ಸ್ವಾತಂತ್ರ್ಯ ಬಂದು 70 ವರ್ಷಗಳಾದ ಮೇಲೂ ಸುಮಾರು 20 ಸಾವಿರ ಹಳ್ಳಿಗಳು ವಿದ್ಯುತ್ ಸಂಪರ್ಕದಿಂದಲೇ ವಂಚಿತವಾಗಿದ್ದವೆಂದರೆ ಏನರ್ಥ? ಸಮಾನತೆಯ, ಸಮಾಜವಾದದ ಮಾತನಾಡುವ ಬರಹಗಾರರು, ಪತ್ರಕರ್ತರು ಎಂದಾದರೂ ಕಾಂಗ್ರೆಸ್ಸನ್ನು ಪ್ರಶ್ನಿಸಿದ್ದರೇನು?
ಅದು ಬಿಡಿ. ಕನರ್ಾಟಕ ಪದೇ ಪದೇ ಲೋಡ್ ಶೆಡ್ಡಿಂಗ್ನ ಮಾತಾಡುತ್ತದೆಯಲ್ಲ ಏಕೆ ಗೊತ್ತೇ? ವಿದ್ಯುತ್ ಕೊಳ್ಳುವ ಸಾಮಥ್ರ್ಯವಿಲ್ಲ ಅಂತ. ಹಾಗಂತ ದೇಶದಲ್ಲಿ ವಿದ್ಯುತ್ ಕೊರತೆ ಇಲ್ಲ. ಮೋದಿ ಸಕರ್ಾರ ಅಧಿಕಾರಕ್ಕೆ ಬರುವಾಗ ಒಂದು ಯೂನಿಟ್ ವಿದ್ಯುತ್ ಗೆ 12ರಿಂದ 15 ರೂ ವರೆಗೂ ಕೊಟ್ಟು ಕೊಂಡುಕೊಳ್ಳಬೇಕಿತ್ತು. ಈಗ ಹಾಗಿಲ್ಲ. ಪಾರದರ್ಶಕವಾದ ಉತ್ಪಾದನೆ, ಹಂಚಿಕೆ ಮತ್ತು ಕಲ್ಲಿದ್ದಲಿನ ಆಮದು ನಿಂತಿದ್ದರಿಂದ ಒಂದು ಯೂನಿಟ್ ವಿದ್ಯುತ್ ಬೆಲೆ 3 ರಿಂದ 5 ರೂಪಾಯಿಗೆ ಇಳಿದಿದೆ. ಡಿಸೆಂಬರ್ ತಿಂಗಳಲ್ಲಂತೂ ಈ ಬೆಲೆ 3 ರೂಪಾಯಿಗಿಂತ ಕಡಿಮೆ ಇತ್ತು. ಸೌರ ಶಕ್ತಿಯಿಂದ ಉತ್ಪಾದನೆಯಾದ ವಿದ್ಯುತ್ ಕೂಡ ಮೊದಲೆಲ್ಲ ಯುನಿಟ್ಟಿಗೆ ಹತ್ತಾರು ರೂಪಾಯಿಗಳಂತೆ ಮಾರಾಟವಾಗುತ್ತಿತ್ತು. ಈಗ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯಿಂದಾಗಿ ಪೂರೈಕೆದಾರರು ನಾಲ್ಕೂವರೆ ರೂಪಾಯಿಗೆ ಪೂರೈಸುವ ಭರವಸೆ ಕೊಟ್ಟಿದ್ದಾರೆ.
ಒಂದಂತೂ ಸತ್ಯ. ಮಂತ್ರಿಗಳು, ಅಧಿಕಾರಿಗಳು ನುಂಗುವುದನ್ನು ಕಡಿಮೆ ಮಾಡಿದರೆ ಅದರ ಲಾಭವೆಲ್ಲ ಜನರಿಗೆ ಸಿಗುವುದೆಂಬುದನ್ನು ಕೇಂದ್ರ ಸಕರ್ಾರ ಸಾಬೀತು ಮಾಡಿಬಿಟ್ಟಿತು. ಹೌದಲ್ಲವೇ ಮತ್ತೇ? ಮೊದಲೆಲ್ಲ 300 ರೂಪಾಯಿಗೆ ಮಾರಾಟವಾಗುತ್ತಿದ್ದ ಎಲ್ಇಡಿ ಬಲ್ಬುಗಳು ಈಗ 80 ರೂಪಾಯಿಗೆ ಸಿಗುತ್ತಿರೋದು ಹೇಗೆ? ಮಧ್ಯೆ 220 ರೂಪಾಯಿ ಎಲ್ಲಿಗೆ, ಯಾರಿಗೆ ಹೋಗುತ್ತಿತ್ತು? ಕೆಲವರು ತಿಂದು ಕೊಬ್ಬಿ ಬೆಳೆಯುವ ಪದ್ಧತಿ ಬಿಟ್ಟು ಎಲ್ಲರಿಗೂ ಲಾಭ ಹಂಚುವ ಅಕ್ಷರಶಃ ಸಮಾಜವಾದಿ ಚಿಂತನೆಯೇ ಮೋದಿಯವರದ್ದು.
ಪೀಯೂಷ್ ಗೋಯಲ್ರಿಗೆ ಮತ್ತೊಂದು ಕನಸಿದೆ. ‘ಒಂದು ದೇಶ, ಒಂದು ಗ್ರಿಡ್ ಮತ್ತು ಒಂದೇ ದರ’ದ್ದು. ಅದರರ್ಥವೇನು ಗೊತ್ತೇ? ಇಡಿಯ ದೇಶದಲ್ಲಿ ವಿದ್ಯುತ್ತನ್ನು ಪೂರೈಸುವ ಒಂದೇ ಗ್ರಿಡ್ ಇರಬೇಕು. ಇದರಿಂದ ಯಾವ ರಾಜ್ಯಗಳು ವಿದ್ಯುತ್ ಪಡೆದರೂ ಒಂದೇ ಬೆಲೆ ತೆರುವಂತೆ ಇರಬೇಕು ಅಂತ. ಸದ್ಯದ ಮಟ್ಟಿಗೆ ದಕ್ಷಿಣ ಭಾರತದ ರಾಜ್ಯಗಳಿಗೆ ವಿದ್ಯುತ್ ಪೂರೈಕೆ ಕಠಿಣವಾಗಿರುವುದರಿಂದ ಇಲ್ಲಿ ಬೆಲೆ ಹೆಚ್ಚಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಸಮಸ್ಯೆಗೆಲ್ಲ ಪರಿಹಾರ ದೊರಕಿಸುವ ಹಠ ಅವರದ್ದು.

powerlines
ಯಾವ ದೇಶ ವಿದ್ಯುತ್ತಿನ ಕ್ಷೇತ್ರದಲ್ಲಿ, ಇಂಧನದ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದೋ ಅಂತಹ ದೇಶ ಸಶಕ್ತವಾಗುವುದರಲ್ಲಿ ಅನುಮಾನವೇ ಇಲ್ಲ. ವಿದ್ಯುತ್ತಿನ ಕೊರತೆಯಾದರೆ ಯಾವ ಕಂಪನಿಗಳು ತಾನೇ ಅಂತಹ ರಾಷ್ಟ್ರಕ್ಕೆ ಕಾಲಿಡಬಲ್ಲವು ಹೇಳಿ. ಅದಕ್ಕಾಗಿ ಡೀಸೆಲ್ ಜನರೇಟರ್ಗಳನ್ನು ಬಳಸೋಣವೆಂದರೆ ಇಂಧನಕ್ಕಾಗಿಯೂ ಅರಬ್ ರಾಷ್ಟ್ರಗಳೆದುರು ಕೈಚಾಚಿ ಕುಳಿತಿರಬೇಕು. ಅವರು ಹೇಳಿದಂತೆಯೇ ಕೇಳುವುದೆಂದರೆ ಮತ್ತೆ ಗುಲಾಮಿತನವೇ. ಹಾಗಿದ್ದರೆ ಪರಿಹಾರವೇನು? ಯಾರಿಗೂ ಬಾಗದ ರೀತಿಯಲ್ಲಿ ವಿದ್ಯುತ್ ಸೃಷ್ಟಿಸಿಕೊಳ್ಳಬೇಕು. ಹಾಗೆಂದೇ ಮೊದಲ ಹಂತದಲ್ಲಿ ಕಲ್ಲಿದ್ದಲನ್ನು ಹೆಚ್ಚು ಹೆಚ್ಚು ಉತ್ಖನನ ಮಾಡಿ ಆಮದು ನಿಲ್ಲಿಸಿದರು. ಆನಂತರ ಅವರ ಚಿತ್ತ ಹರಿದದ್ದು ಸೌರ ಶಕ್ತಿಯೇ ಮೊದಲಾದ ಪುನರ್ನವೀಕರಿಸಬಹುದಾದ ಶಕ್ತಿ ಮೂಲಗಳ ಕಡೆಗೆ. ಮಂತ್ರಿಗಳ ಇರಾದೆ ಏನು ಗೊತ್ತೇ? 2022ರ ವೇಳೆಗೆ 175 ಗಿಗಾ ವ್ಯಾಟ್ಗಳಷ್ಟು ವಿದ್ಯುತ್ತನ್ನು ಪುನರ್ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಪಡೆಯುವಂತಾಗಬೇಕು. ಅದರಲ್ಲಿ ಸೌರ ಶಕ್ತಿಯ ಪಾಲು 100 ಗಿಗಾವ್ಯಾಟ್ನಷ್ಟಿರಬೇಕು! ಇವರು ಕನಸು ಕಾಣುವಾಗ ದೇಶದಲ್ಲಿ ಉತ್ಪಾದನೆಯಾಗುತ್ತಿದ್ದ ಸೌರ ವಿದ್ಯುತ್ ಎಷ್ಟು ಗೊತ್ತೇ? ಏಳು ಗಿಗಾವ್ಯಾಟ್ಗಳಿಗಿಂತಲೂ ಕಡಿಮೆ. ಕಳೆದ ಎರಡು ವರ್ಷಗಳಲ್ಲಿ ಪೀಯೂಷ್ ಗೋಯಲ್ ಅದನ್ನು 20 ಗಿಗಾವ್ಯಾಟ್ಗಳಿಗೆ ಏರಿಸಿದ್ದಾರೆ. ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ಅವರ ಮಾತುಕತೆಯ ವೇಗ ನೋಡಿದರೆ ಗುರಿ ಮುಟ್ಟಲು ಅವರು 2022ರ ವರೆಗೆ ಕಾಯುವರೆಂದು ನನಗಂತೂ ಅನಿಸುತ್ತಿಲ್ಲ. ಅದರ ಜೊತೆ ಜೊತೆಗೆ ನೀರು ಮತ್ತು ಗಾಳಿಯಿಂದ ವಿದ್ಯುತ್ ಉತ್ಪಾದಿಸುವಲ್ಲಿಯೂ ಅವರು ವಿಶೇಷ ಗಮನ ಹರಿಸುತ್ತಿದ್ದಾರೆ.
ಇಷ್ಟಕ್ಕೇ ನಿಂತಿಲ್ಲ ಅವರು. ಎಲೆಕ್ಟ್ರಿಕ್ ಕಾರುಗಳ ಉತ್ಪಾದಕರೊಂದಿಗೆ ಮಾತನಾಡಿ ಭಾರತಕ್ಕೆ ಈ ಕಾರುಗಳು ಹೆಚ್ಚು ಹೆಚ್ಚು ಬರುವಂತೆ ಮಾಡುವಲ್ಲಿ ಆಸ್ಥೆ ವಹಿಸುತ್ತಿದ್ದಾರೆ. ಹೇಗಿದ್ದರೂ ಶಕ್ತಿ ಉತ್ಪಾದನೆಯಂತೂ ಬಳಕೆಯನ್ನೂ ಮೀರಿಸುವಂತಾಗುತ್ತಿದೆ ಇನ್ನು ಅದರ ಬಳಕೆಯನ್ನೂ ಹೆಚ್ಚು ಮಾಡಿಬಿಟ್ಟರೆ ಪೆಟ್ರೋಲು-ಡೀಸೆಲ್ಲುಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಹಾಗಾದಲ್ಲಿ ಆಮದು ಕಡಿಮೆಯಾಗಿ ರೂಪಾಯಿ ಬಲಗೊಳ್ಳುತ್ತದೆ. ಒಮ್ಮೆ ನಮ್ಮ ಕರೆನ್ಸಿ ಬಲಾಢ್ಯವಾಗುತ್ತ ಸಾಗಿದಂತೆ ಸಹಜವಾಗಿಯೇ ನಾವು ಸದೃಢರೂ, ಸಮರ್ಥರೂ ಆಗುತ್ತೇವೆ. ಓಹ್! ವಿದ್ಯುತ್ ಹೆಚ್ಚು ಉತ್ಪಾದಿಸುವುದರ ಹಿಂದೆ ಏನೆಲ್ಲ ಆಲೋಚನೆಗಳಿವೆ.
ಮರೆತಿದ್ದೆ. ರೈಲ್ವೇ ಸಚಿವ ಸುರೇಶ್ ಪ್ರಭು ಮತ್ತು ಪಿಯೂಷ್ ಗೋಯಲ್ರೂ ಸೇರಿ ಸಾವಿರಾರು ಕಿ.ಮೀ ಉದ್ದದ ರೈಲು ಹಳಿಗಳನ್ನು ವಿದ್ಯುತ್ ಚಾಲಿತ ರೈಲಿಗೆ ಅನುಕೂಲಕರವಾಗಿ ಮಾರ್ಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ವೇಗದ ರೈಲಿಗೆ ಬೇಕಾದ ಪೂರ್ವಭಾವಿ ತಯಾರಿಗಳು ಸದ್ದಿಲ್ಲದೇ ನಡೆಯುತ್ತಿವೆ. ಮೋದಿ ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಅಂತರ್ಗಂಗೆಯಂತೆ ಹರಿಯುತ್ತಿರುವ ಅನೇಕ ಬೆಳವಣಿಗೆಗಳಾಗುತ್ತಿವೆ. ಇವೆಲ್ಲ ಫಲ ಕೊಡಲಾರಂಭಿಸಿದರೆ ಮಾತನಾಡಲು ಎದುರಾಳಿಗಳೇ ಇರಲಾರರು.
ಎಷ್ಟು ವಿಚಿತ್ರ ಅಲ್ಲವಾ? ಎರಡು ವರ್ಷದ ಹಿಂದೆ ವಿದ್ಯುತ್ ಕಡಿಮೆ ಬಳಸಿ ಅಂತ ಹೇಳೋದೇ ಸಕರ್ಾರಿ ಜಾಹಿರಾತಾಗಿರುತ್ತಿತ್ತು. ಈಗ ವಿದ್ಯುತ್ ವ್ಯರ್ಥ ಮಾಡಬೇಡಿ ಆದರೆ ಚೆನ್ನಾಗಿ ಬಳಸಿ, ಏನಾದರೂ ಉತ್ಪಾದನೆ ಮಾಡಿ ರಾಷ್ಟ್ರದ ಆದಾಯ ಹೆಚ್ಚಿಸಿ ಅಂತ ಹೇಳುವ ಮಂತ್ರಿ-ಪ್ರಧಾನ ಮಂತ್ರಿಗಳಿದ್ದಾರೆ. ಅಚ್ಛೇದಿನ್ ಅಂದರೆ ಇದೇ ತಾನೇ!!

Comments are closed.