ವಿಭಾಗಗಳು

ಸುದ್ದಿಪತ್ರ


 

ಬೇಕಿದ್ದು ನೀರು, ಹೊತ್ತಿದ್ದು ಬೆಂಕಿ!

ಸುಪ್ರೀಂ ಕೋಟರ್್ಗೆ ಈ ವಿಚಾರವನ್ನೊಯ್ಯುವ ಮೊದಲೇ ಜಯಲಲಿತಾಳೊಂದಿಗೆ ಮಾತುಕತೆ ಸಾಧ್ಯವಿರಲಿಲ್ಲವೇ? ಅಥವಾ ರಾಜ್ಯ ಒಂದು ಹೆಜ್ಜೆ ಮುಂದಿಟ್ಟು ತಮಿಳುನಾಡಿನ ಮತ್ತು ಕನರ್ಾಟಕದ ಪ್ರಗತಿಪರ ರೈತರನ್ನು ಸೇರಿಸಿ ಒಂದು ವಿಚಾರ ಸಂಕಿರಣ ಮಾಡಿಸಿ ಮಧ್ಯಮ ಮಾರ್ಗದ ಗೆರೆ ಎಳೆಯಲು ಸಾಧ್ಯವಿರಲಿಲ್ಲವೇ? ತಮಿಳುನಾಡಿನ ಪ್ರವಾಹದ ಸಂದರ್ಭದಲ್ಲಿ ಕನರ್ಾಟಕ ತೋರಿದ ಮಾನವೀಯತೆಯಿಂದಾಗಿ ಆ ರಾಜ್ಯ ಕರಗಿ ಹೋಗಿದ್ದಾಗ ಇಂತಹುದೊಂದು ಪ್ರಯತ್ನ ಮಾಡಿದ್ದರೆ ನಗು ನಗುತ್ತ ಸಮಸ್ಯೆಗೆ ಪರಿಹಾರ ಹುಡುಕಬಹುದಿತ್ತು. ನಮ್ಮ ಮುಖ್ಯಮಂತ್ರಿಗಳಿಗೆ ಇವಕ್ಕೆಲ್ಲ ಎಲ್ಲಿ ಪುರಸೊತ್ತು? ಪ್ರಧಾನಮಂತ್ರಿಗಳು ಚೀನಾಕ್ಕೆ ಕರೆದರೆ ಹೋಗದ, ಪ್ರಮುಖ ಸಭೆಗಳಿಗೆ ಆಹ್ವಾನಿಸಿದರೆ ಹೋಗದ ಮುಖ್ಯಮಂತ್ರಿಗಳು ನಮ್ಮ ಕಷ್ಟಕ್ಕೆ ಅವರು ತಕ್ಷಣ ಸ್ಪಂದಿಸಿಬಿಡಬೇಕೆಂದು ಯೋಚಿಸುತ್ತಾರಲ್ಲ ಅದೇ ದೌಭರ್ಾಗ್ಯ. ಪಕ್ಷ ಬೇರಾದರೇನು? ರಾಜ್ಯದ ಹಿತಾಸಕ್ತಿಯೇ ಮುಖ್ಯವಾಗಿರಿಸಿಕೊಂಡ ಮುಖ್ಯಮಂತ್ರಿಗಳು ಪ್ರಧಾನಿಯೊಂದಿಗೆ ಕ್ರಿಯಾಶೀಲವಾಗಿ ವತರ್ಿಸಿದ್ದರೆ ಇಂದು ಕಾವೇರಿ-ಮಹಾದಾಯಿ ಎರಡರ ಸ್ಥಿತಿಯೂ ಹಿಂಗಾಗುತ್ತಿರಲಿಲ್ಲ. ಛೇ!

21

ಮಧ್ಯಪ್ರದೇಶ, ರಾಜಸ್ತಾನಗಳಲ್ಲಿ ಪ್ರವಾಹದ ವಾತಾವರಣ ನಿಮರ್ಾಣವಾಗಿತ್ತಲ್ಲ ಅದಕ್ಕೂ ಕೆಲ ದಿನಗಳ ಮುಂಚೆ ಆ ರಾಜ್ಯಗಳು ಬರಪೀಡಿತ ರಾಜ್ಯವಾಗುವ ಭಯದಲ್ಲಿದ್ದವು. ಅಸ್ಸಾಂನಲ್ಲಿ ಭಯಾನಕವಾದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತಲ್ಲ ಅಲ್ಲಿ ಮಾನ್ಸೂನ್ ಮಳೆ ಕೊರತೆಯಾಗಿ ಈಗ ನೀರಿಗೆ ತತ್ಸಾರವಾಗಿದೆ. ಪಕ್ಕದ ತಮಿಳುನಾಡು ನಾಲ್ಕಾರು ದಶಕಗಳಷ್ಟು ಹಳೆಯ ದಿನಗಳನ್ನು ನೆನಪಿಸುವ ಭೀಕರ ಪ್ರವಾಹಕ್ಕೆ ಈ ಬಾರಿ ತುತ್ತಾಗಿತ್ತು. ಅದೋ! ಅದಾದ ಕೆಲವೇ ತಿಂಗಳಲ್ಲಿ ಕನರ್ಾಟಕ-ತಮಿಳುನಾಡುಗಳು ನೀರಿಗಾಗಿ ಕಿತ್ತಾಡುತ್ತಿವೆ.
ಎಲ್ಲಾ ಚುಕ್ಕಿಗಳನ್ನು ಸೇರಿಸಿ ಚಿತ್ರ ಬಿಡಿಸಿ ನೋಡಿ ಪ್ರಕೃತಿ ಭವಿಷ್ಯದಲ್ಲಿ ನಡೆಸಲಿರುವ ತಾಂಡವ ನೃತ್ಯದ ಅನಾವರಣವಾಗೋದು ಖಚಿತ. ಈಗ ತೋರುತ್ತಿರೋದು ಟ್ರೇಲರ್ ಮಾತ್ರ, ನೆನಪಿರಲಿ.
ಭೂಮಂಡಲದ ತಾಪಮಾನ ಏರಿದಂತೆಲ್ಲ ಮಾನ್ಸೂನ್ ಪೂರ್ವ ಮಳೆ ಜೋರಾಗುತ್ತದೆ. ಆ ಹೊತ್ತಿಗೆ ನದಿಯ ಹರಿವಿಗೆ ಜೊತೆಯಾಗಿ ಬೀಸುವ ಗಾಳಿ ನದಿ ನೀರಿನ ಮಟ್ಟ ಏರುವಂತೆ ಮಾಡಿ ಪ್ರವಾಹ ತಂದೊಡ್ಡುತ್ತದೆ. ಅದರ ಕಾಲಾವಧಿ ಮುಗಿಯುತ್ತಿದ್ದಂತೆ ಮಳೆಯೂ ನಿಂತು ಬರಗಾಲ ತಂದುಬಿಡುತ್ತದೆ. ಕನರ್ಾಟಕದ್ದೂ ಅದೇ ಕತೆ. ಮಾನ್ಸೂನ್ ಶುರುವಾಗುವ ಮುನ್ನವೇ ರೈತರ ಮುಖದಲ್ಲಿ ಮಂದಹಾಸ ತರಬಲ್ಲಷ್ಟು ಮಳೆಯಾಯ್ತು. ಆಮೇಲೆ? ಮಳೆಯೇ ಇಲ್ಲ. ಬಹುಪಾಲು ಕನರ್ಾಟಕ ಬರಗಾಲದ ತೆಕ್ಕೆಗೆ ಬಿತ್ತು. ಇನ್ನು ಮಳೆಯೆಲ್ಲಿ? ಚಳಿಗಾಲವೇ ಶುರುವಾಯ್ತು. ಬರಗಾಲ ಬಂದರಂತೂ ಬೊಕ್ಕಸಕ್ಕೆ ನಷ್ಟ ಸರಿ ಪ್ರವಾಹವೂ ಕಡಿಮೆ ಖಚರ್ಿನ ಬಾಬ್ತಲ್ಲ. 1953 ರಿಂದ 2011 ರವರೆಗೆ ಭಾರತ ಎಂಟೂಕಾಲು ಲಕ್ಷಕೋಟಿ ರೂಪಾಯಿಯನ್ನು ಇದಕ್ಕಾಗಿ ವೆಚ್ಚಮಾಡಿದೆ. ವರ್ಷಕ್ಕೆ ಶೇಕಡಾ 10ರಷ್ಟು ಸೇರಿಸುತ್ತಾ ಹೋದರೆ 2015ರ ವೇಳೆಗೆ ಹನ್ನೊಂದುವರೆ ಲಕ್ಷದಷ್ಟು ಖಚರ್ಾಯ್ತು. ಕನರ್ಾಟಕದ ಸುಮಾರು ಹತ್ತು ವರ್ಷಗಳ ಬಜೆಟ್ಗೆ ಸರಿದೂಗುವ ಮೊತ್ತ ಅದು!
ನೀರು ಭೂಮಿಯನ್ನು ಹೈರಾಣು ಮಾಡುತ್ತಿದೆ. ರಾಷ್ಟ್ರ-ರಾಷ್ಟ್ರಗಳ ಕದನಕ್ಕೆ ಅದು ಕಾರಣವೆಂದು ನಾನು ಚಿಕ್ಕಂದಿನಲ್ಲಿ ಶಾಲೆಯಲ್ಲಿ ಓದುತ್ತಿದ್ದೆ. ಸಿಂಧುವಿಗಾಗಿ ಪಾಕಿಸ್ತಾನದೊಂದಿಗೆ, ಬ್ರಹ್ಮಪುತ್ರಕ್ಕಾಗಿ ಚೀನಾದೊಂದಿಗೆ ಬಡಿದಾಡುತ್ತಿದ್ದೆವು. ಕ್ರಮೇಣ ಕಾವೇರಿ, ಕೃಷ್ಣಗಳಿಗಾಗಿ ಪಕ್ಕದ ರಾಜ್ಯಗಳೊಂದಿಗೆ ತಿಕ್ಕಾಟ ಶುರುವಾಯ್ತು. ನೇತ್ರಾವತಿ ನದಿಯ ತಿರುವಿನ ಯೋಜನೆ ಮುಂದಿಟ್ಟುಕೊಂಡು ದಕ್ಷಿಣ ಕನ್ನಡ, ಕೋಲಾರಗಳು ಬಡಿದಾಡುತ್ತಿವೆ. ಮತ್ತೆ ಕುಡಿಯುವ ಕಾವೇರಿಗಾಗಿ ಮಂಡ್ಯ-ಬೆಂಗಳೂರುಗಳು! ಇನ್ನು ನೀರಿನ ಕಾದಾಟ ಮನೆಯೊಳಗೆ ಅಪ್ಪ-ಮಕ್ಕಳನ್ನು ಕಿತ್ತಾಡಿಸೋದೊಂದು ಬಾಕಿ ಅಷ್ಟೇ.

24
ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಇಂದು ನಿನ್ನೆಯದಲ್ಲ. ಅದು ಕನರ್ಾಟಕದಲ್ಲಿ ಹುಟ್ಟಿ, ತಮಿಳುನಾಡಿನಲ್ಲಿ ಹರಿದು, ಕೇರಳ, ಪಾಂಡಿಚೇರಿಗಳನ್ನು ಮುಟ್ಟಿ ಸಮುದ್ರ ಸೇರುತ್ತದೆ. ನದಿಯ ಕುರಿತಂತೆ ಜಗದ ನಿಯಮವೇ ಹಾಗಿದೆ. ಅದು ಹರಿಯುವ ಜಾಗದವರಿಗೆಲ್ಲ ಅದರ ಮೇಲೆ ಅಧಿಕಾರ ಇದ್ದೇ ಇದೆ. ಹೀಗಾಗಿ ಅದರ ಹರಿವು ಬದಲಾಯಿಸಲು, ತಡೆಯಲು ಪ್ರತಿಯೊಬ್ಬರ ಅನುಮತಿ ಬೇಕು. ಯಾರಾದರೂ ನೀರನ್ನು ತಡೆದರೆ ಮತ್ತೊಬ್ಬರ ಪಾಲನ್ನು ಸೂಕ್ತವಾಗಿ ಹಂಚುವ ಒಪ್ಪಿಗೆಯೊಂದಿಗೇ ತಡೆಯಬೇಕು. 1892 ರಷ್ಟು ಹಿಂದೆಯೇ ಮೈಸೂರು ರಾಜ್ಯ ಮತ್ತು ತಮಿಳುನಾಡುಗಳೊಂದಿಗೆ ನಡೆದ ಒಪ್ಪಂದ 1924 ರ ವೇಳೆಗೆ ಕಿರಿಕಿರಿಯಾಗುವ ಹಂತಕ್ಕೆ ತಲುಪಿತ್ತು. 1990 ರಲ್ಲಿ ಇದನ್ನು ಬಗೆಹರಿಸಲೆಂದೇ ಟ್ರಿಬ್ಯುನಲ್ ರಚಿಸಿ ಅಹವಾಲು ಆಲಿಸಲು ಮತ್ತು ನಿರ್ಣಯ ನೀಡಲು ಕೇಳಿಕೊಳ್ಳಲಾಯ್ತು. ಭೂಪಟವನ್ನು ನೋಡಿದರೇನೇ ಗೊತ್ತಾಗುತ್ತೆ ಹುಟ್ಟುವುದು ನಮ್ಮಲ್ಲಾದರೂ ಬಹುಪಾಲು ಕಾವೇರಿ ಹರಿಯುವುದು ತಮಿಳುನಾಡಿನಲ್ಲಿಯೇ. ಹೀಗಾಗಿಯೇ ಅದರ ಅಧಿಕಾರ ಹೆಚ್ಚಿನದೆಂದೇ ಟ್ರಿಬ್ಯುನಲ್ ತೀಪರ್ು ಕೊಟ್ಟಿತು. ಅಷ್ಟಾದರೂ ಕೊಟ್ಟ ನೀರು ಸಾಲಲಿಲ್ಲವೆಂದು ತಮಿಳುನಾಡು ಕೂಗುವುದು ಮತ್ತಷ್ಟು ಕೊಡಲಾಗದೆಂದು ಕನರ್ಾಟಕ ಕೂಗುವುದು ತಪ್ಪಲಿಲ್ಲ. ಕಾಲ ಕಳೆದಂತೆ ದಕ್ಷಿಣ ಕನರ್ಾಟಕದ ಜನಸಂಖ್ಯೆ ಏರುತ್ತ ಹೋಯ್ತು. ಬೆಂಗಳೂರಿಗೂ ಕಾವೇರಿಯೇ ಕುಡಿಯುವ ನೀರಿನ ಸ್ರೋತವಾಗಿದ್ದರಿಂದ ಎಷ್ಟು ನೀರಿದ್ದರೂ ಸಾಲದೆಂಬಂತಾಯ್ತು. ಒಂದು ದಶಕದಲ್ಲಿ ನೀರನ್ನು ಉಳಿಸುವ, ಭೂಮಿಯಡಿಯ ನೀರನ್ನು ಏರಿಸುವ ಯಾವ ಪ್ರಯತ್ನವನ್ನು ಮಾಡದ ಸಕರ್ಾರಗಳು ಬೆಂಗಳೂರಿಗೆ ಜನರನ್ನು ಕೈ ಬೀಸಿ ಕರೆಯಿತು, ಇರುವ ಕೆರೆಗಳಿಗೆ ಮಣ್ಣು ತುಂಬಿ ಬೆಂಗಳೂರನ್ನು ವಿಸ್ತರಿಸಿತು. ಜನಸಂಖ್ಯೆ ಹೆಚ್ಚುತ್ತಿದ್ದಂತೆ ಬೆಂಗಳೂರಿಗರ ಸ್ರೋತವಾಗಿದ್ದ ವೃಷಭಾವತಿ ನದಿ ಅಕ್ಷರಶಃ ಚರಂಡಿ ನೀರು ಸಾಗುವ ದಾರಿಯಾಯ್ತು. ನಾವು ಯಾರೂ ಎಂದಿಗೂ ತಲೆಕೆಡಿಸಿಕೊಳ್ಳಲಿಲ್ಲ.
ಹೋಗಲಿ. ಪ್ರತೀ ವರ್ಷ ಸುರಿಯುವ ಮಳೆಯನ್ನು ಹಿಡಿದಿಟ್ಟುಕೊಳ್ಳುವ ಯೋಜನೆಯಾದರೂ ರೂಪಿಸಿದ್ದೇವಾ? ಅದೂ ಇಲ್ಲ.
ಸಿಂಗಾಪುರದ ಕತೆ ಗೊತ್ತಲ್ಲ. ಸುತ್ತಲೂ ಸಮುದ್ರ ಹೊಂದಿರುವ ಅವರಿಗೆ ಕುಡಿಯುವ ನೀರಿಗೆ ಬಲು ಕಷ್ಟ. ಮಲೇಶಿಯಾದಿಂದ ನೀರನ್ನು ‘ಆಮದು’ ಮಾಡಿಕೊಳ್ಳಬೇಕಾದ ಪರಿಸ್ಥಿತಿ. ದೀರ್ಘಕಾಲದ ಒಪ್ಪಂದದಂತೆ ಮಲೇಶಿಯಾ ಅವರಿಗೆ ನೀರನ್ನು ಪೂರೈಕೆ ಮಾಡುತ್ತಿತ್ತು. ಆಗಾಗ ನೀರು ಕೊಡುವುದಿಲ್ಲವೆಂದು ಗದರಿಸುತ್ತಲೂ ಇತ್ತು. 2011 ಕ್ಕೆ ಮುಗಿಯಲಿರುವ ಈ ಒಪ್ಪಂದವನ್ನು 2061 ರ ವರೆಗೆ ವಿಸ್ತರಿಸಬೇಕೆಂದು 1998ರಲ್ಲಿಯೇ ಮಾತುಕತೆ ಶುರುಮಾಡಿದ ಸಿಂಗಾಪುರ ಮಲೇಶಿಯಾದ ಧಿಮಾಕು ನೋಡಿ ಸಮುದ್ರದ ನೀರನ್ನು ತಿಳಿಗೊಳಿಸುವ ಯೋಜನೆ ರೂಪಿಸಿತು. ಜೊತೆಜೊತೆಗೆ ಆಕಾಶದಿಂದ ಸುರಿಯುವ ಮಳೆಯನ್ನು ಭೂಮಿಯಡಿಯಲ್ಲಿ ಹಿಡಿದಿಡುವ ಆಲೋಚನೆಗೂ ರೆಕ್ಕೆ ಪುಕ್ಕ ಬಂತು. ಮಲೇಶಿಯಾದೊಂದಿಗಿನ ನೀರಿನ ಕುರಿತ ಒಪ್ಪಂದ 2003ರಲ್ಲಿ ಮುರಿದು ಬಿತ್ತು. ಸಿಂಗಪೂರ ಕುಡಿಯುವ ನೀರಿಲ್ಲದೇ ಸಾಯುವುದೆಂದು ಅಕ್ಕಪಕ್ಕದ ರಾಷ್ಟ್ರಗಳು ಭಾವಿಸುತ್ತಿರುವಾಗಲೇ ಮಳೆ ನೀರು ಸಂಗ್ರಹಿಸಿ, ಸಮುದ್ರದ ನೀರನ್ನೂ ಭಟ್ಟಿ ಇಳಿಸಿ ರಾಷ್ಟ್ರಕ್ಕೆ ಸಾಕಾಗುವಷ್ಟು ನೀರನ್ನು ಕಾಪಾಡಿಕೊಂಡಿತ್ತು ಅದು! ಇಂದು ನೀರಿನ ವಿಚಾರದಲ್ಲಿ ಮಲೇಶಿಯಾದೆದುರು ಎದೆಯೆತ್ತಿ ನಿಂತಿದೆ ಸಿಂಗಾಪೂರ.
ಎರಡು ವರ್ಷಗಳ ಹಿಂದೆ ನಾವು ಯುವಾಬ್ರಿಗೇಡಿನ ಮೂಲಕ ಕಲ್ಯಾಣಿ ಸ್ವಚ್ಛತೆಗೆ ನಿಂತಾಗ ಅನೇಕರು ನಕ್ಕರು, ಮೂದಲಿಸಿದರು. ಇಂದು ಮಳೆಗಾಲದಲ್ಲಿ ಆ ಕಲ್ಯಾಣಿಗಳ ಮೂಲಕ ಭೂಮಿಗೆ ಇಂಗುವ ನೀರು ಎಷ್ಟು ಆನಂದ ತರುವುದೆಂದು ನಮಗೆ ಮಾತ್ರ ಗೊತ್ತು.
ನೀರು ರಾಜಕೀಯದ ವಿಷಯವೇ ಅಲ್ಲ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಇಂದು ಇರುತ್ತಾರೆ, ನಾಳೆ ಮೈಸೂರಿನ ಮನೆಯಲ್ಲಿ ಕಾವೇರಿ ಬತ್ತಿ ಹೋದರೂ ಬೋರ್ವೆಲ್ನ ನೀರು ಕುಡಿದು ಹಾಯಾಗಿದ್ದುಬಿಡುತ್ತಾರೆ. ದುಡ್ಡು ಕೊಟ್ಟಾದರೂ ನೀರು ತರಿಸಿಕೊಳ್ಳುತ್ತಾರೆ. ಆದರೆ ನಮ್ಮ ಕಥೆ ಹಾಗಲ್ಲ. ನಾವು ನಮಗಷ್ಟೇ ಅಲ್ಲ, ಮುಂದಿನ ಪೀಳಿಗೆಗೂ ನೀರುಳಿಸಬೇಕೆಂಬುದನ್ನು ಮರೆಯದಿರಿ. ಇಲ್ಲಿ ಭಾಷೆ, ಭೂಪ್ರದೇಶದ ಭಾವನೆಗಳನ್ನು ಬದಿಗಿಟ್ಟು ಭೂಮಂಡಲದ ಒಳಿತಿನ ದೃಷ್ಟಿಯಿಂದ ನೋಡಿ. ಭೂತಾಪಮಾನ ಏರಿಕೆಯಾಗಿ ಉಂಟಾಗುತ್ತಿರುವ ಪ್ರಾಕೃತಿಕ ಏರುಪೇರುಗಳಿಗೆ ಭಾರತ-ಚೀನಾ ಎಂಬ ಭೇದವಿಲ್ಲ ನೆನಪಿರಲಿ. ಅದು ಬಲಿ ತೆಗೆದುಕೊಳ್ಳುವಾಗ ಕನ್ನಡ ಮಾತಾಡುವವರನ್ನು ಉಳಿಸಿ ತಮಿಳು ಭಾಷಿಗರನ್ನು ಮಾತ್ರ ಕೊಲ್ಲೋಣವೆಂದು ಆಲೋಚಿಸುವುದೇ ಇಲ್ಲ. ಹೀಗಿರುವಾಗ ಶಾಶ್ವತ ಪರಿಹಾರದ ಕಡೆ ಹೊರಳುವಷ್ಟು ಸಂಯಮ ತೋರಿಸೋಣ.
ಸುಮ್ಮನೆ ಯೋಚಿಸಿ. ಕಾವೇರಿಯ ಅಷ್ಟೂ ಹೋರಾಟದಲ್ಲಿ ಎರಡೂ ದಿಕ್ಕಿನ ವಿಜ್ಞಾನಿಗಳು ಭಾಗವಹಿಸಿದ್ದಾರಾ? ಕನರ್ಾಟಕದಲ್ಲಿ ನೀರಿಗಾಗಿ ಕೆಲಸ ಮಾಡುತ್ತಿರುವ ಪಡ್ರೆ, ಶಿವಾನಂದ ಕಳವೆ, ನಾಗೇಶ್ ಹೆಗಡೆ ಮುಂತಾದವರು ಬೀದಿಗೆ ಬಂದು ಗಲಾಟೆ ಮಾಡಿದ್ದಾರಾ? ಹಾಗೆ ಕೇಳಿದೊಡನೆ ಕನ್ನಡದ ಹೋರಾಟಗಾರರೆನಿಸಿಕೊಂಡವರು ‘ಅವರೆಲ್ಲ ಕನ್ನಡಿಗರೇ ಅಲ್ಲ, ಓಡಿಸಿಬಿಡಿ’ ಎಂದು ಬೊಬ್ಬಿಡಬಹುದೇನೋ? ಆದರೆ ಅವರು ಹೋರಾಟಕ್ಕೆ ಬರದಿರಲು ಮುಖ್ಯ ಕಾರಣವೇನು ಗೊತ್ತೇ? ಬರಬರುತ್ತಾ ಕಾವೇರಿಯ ನೀರು ಸಹಜವಾಗಿಯೇ ಕಡಿಮೆಯಾಗುತ್ತ ಹೋಗುತ್ತೆ. ಅದರ ಜಲಾನಯ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತ ಹೋಗುತ್ತಿದೆ. ಹೀಗಾಗಿ ಇನ್ನೊಂದೈವತ್ತು ವರ್ಷಗಳಲ್ಲಿ ನೀರಿಗಾಗಿ ಬೆಂಕಿ ಹಚ್ಚುವುದಿರಲಿ, ಹಚ್ಚಿದ ಬೆಂಕಿಯನ್ನು ಆರಿಸಲು ಕಾವೇರಿಯಲ್ಲಿ ನೀರಿರಲಾರದು. ಬೆಂಗಳೂರಿನ ತುಂಬಾ ಅಂತರರಾಷ್ಟ್ರೀಯ ಮಟ್ಟದ ಉದ್ಯಮಿಗಳು ತುಂಬಿರುವುದರಿಂದ ಅವರಿಗೆ ಕುಡಿಯುವ ನೀರು ಕೊಡಲೇಬೇಕೆಂಬ ಹಟಕ್ಕೆ ಬಿದ್ದ ಸಕರ್ಾರಗಳು ರೈತರ ಅಹವಾಲು ಕೇಳುವುದೂ ಇಲ್ಲ ಎಂಬುದು ಅವರಿಗೆಲ್ಲ ಗೊತ್ತಿದೆ. ಆ ಕರಾಳ ದಿನಗಳನ್ನು ತಪ್ಪಿಸಲು ಏನು ಮಾಡಬೇಕೆಂದು ಅವರು ಗಂಭೀರ ಚಿಂತನೆಯಲ್ಲಿದ್ದಾರೆ ನಾವಿಲ್ಲಿ ತಮಿಳಿಗರನ್ನು ಬಡಿದು, ಲಾರಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ತೀರಿಸಿಕೊಳ್ಳುತ್ತಿದ್ದೇವೆ.

Protest in Bengaluru
Bengaluru : Pro-Kannada activists burn the tyres during Karnataka Bandh called in against the Supreme Court verdict on Cauvery water in Bengaluru on Friday. PTI Photo by Shailendra Bhojak (PTI9_9_2016_000097B)

ಬಂದ್ಗಳು, ಗಲಾಟೆಗಳು, ಸುಟ್ಟ ಟೈರುಗಳು, ಮುಚ್ಚಿದ ಶಾಲೆಗಳು ಇವೆಲ್ಲವನ್ನೂ ಎದುರಿಗಿಟ್ಟುಕೊಂಡು ಒಮ್ಮೆ ಹಿಂದೆ ತಿರುಗಿ ನೋಡಿ. ನಾವು ಮಾಡಿದ್ದು ಸರಿಯಾ? ಸುಪ್ರೀಂ ಕೋಟರ್್ಗೆ ಈ ವಿಚಾರವನ್ನೊಯ್ಯುವ ಮೊದಲೇ ಜಯಲಲಿತಾಳೊಂದಿಗೆ ಮಾತುಕತೆ ಸಾಧ್ಯವಿರಲಿಲ್ಲವೇ? ಅಥವಾ ರಾಜ್ಯ ಒಂದು ಹೆಜ್ಜೆ ಮುಂದಿಟ್ಟು ತಮಿಳುನಾಡಿನ ಮತ್ತು ಕನರ್ಾಟಕದ ಪ್ರಗತಿಪರ ರೈತರನ್ನು ಸೇರಿಸಿ ಒಂದು ವಿಚಾರ ಸಂಕಿರಣ ಮಾಡಿಸಿ ಮಧ್ಯಮ ಮಾರ್ಗದ ಗೆರೆ ಎಳೆಯಲು ಸಾಧ್ಯವಿರಲಿಲ್ಲವೇ? ತಮಿಳುನಾಡಿನ ಪ್ರವಾಹದ ಸಂದರ್ಭದಲ್ಲಿ ಕನರ್ಾಟಕ ತೋರಿದ ಮಾನವೀಯತೆಯಿಂದಾಗಿ ಆ ರಾಜ್ಯ ಕರಗಿ ಹೋಗಿದ್ದಾಗ ಇಂತಹುದೊಂದು ಪ್ರಯತ್ನ ಮಾಡಿದ್ದರೆ ನಗು ನಗುತ್ತ ಸಮಸ್ಯೆಗೆ ಪರಿಹಾರ ಹುಡುಕಬಹುದಿತ್ತು. ನಮ್ಮ ಮುಖ್ಯಮಂತ್ರಿಗಳಿಗೆ ಇವಕ್ಕೆಲ್ಲ ಎಲ್ಲಿ ಪುರಸೊತ್ತು? ಪ್ರಧಾನಮಂತ್ರಿಗಳು ಚೀನಾಕ್ಕೆ ಕರೆದರೆ ಹೋಗದ, ಪ್ರಮುಖ ಸಭೆಗಳಿಗೆ ಆಹ್ವಾನಿಸಿದರೆ ಹೋಗದ ಮುಖ್ಯಮಂತ್ರಿಗಳು ನಮ್ಮ ಕಷ್ಟಕ್ಕೆ ಅವರು ತಕ್ಷಣ ಸ್ಪಂದಿಸಿಬಿಡಬೇಕೆಂದು ಯೋಚಿಸುತ್ತಾರಲ್ಲ ಅದೇ ದೌಭರ್ಾಗ್ಯ. ಪಕ್ಷ ಬೇರಾದರೇನು? ರಾಜ್ಯದ ಹಿತಾಸಕ್ತಿಯೇ ಮುಖ್ಯವಾಗಿರಿಸಿಕೊಂಡ ಮುಖ್ಯಮಂತ್ರಿಗಳು ಪ್ರಧಾನಿಯೊಂದಿಗೆ ಕ್ರಿಯಾಶೀಲವಾಗಿ ವತರ್ಿಸಿದ್ದರೆ ಇಂದು ಕಾವೇರಿ-ಮಹಾದಾಯಿ ಎರಡರ ಸ್ಥಿತಿಯೂ ಹಿಂಗಾಗುತ್ತಿರಲಿಲ್ಲ. ಛೇ!
ಮಾಧ್ಯಮಗಳೂ ಅಷ್ಟೇ. ಇಂಜಿನಿಯರಿಂಗ್ ಕಾಲೇಜಿನ ಹುಡುಗನನ್ನು ಕೆಲವು ಪುಂಡರು ಕನ್ನಡದ ಹೆಸರಲ್ಲಿ ಹೊಡೆದದ್ದನ್ನು ಚಪ್ಪರಿಸಿ ಪ್ರಸಾರ ಮಾಡಿದವು. ಸಹಜವಾಗಿಯೇ ಅತ್ತಲಿಂದ ಪ್ರತಿಕ್ರಿಯೆ ಬಂತು. ನೈತಿಕ ಪೊಲೀಸ್ಗಿರಿಯನ್ನು ಸದಾ ವಿರೋಧಿಸಿಕೊಂಡು ಬಂದ ಮಾಧ್ಯಮಗಳು ಭಾಷೆಯ ವಿಷಯದಲ್ಲಿ ಈ ಸೂಕ್ಷ್ಮತೆಯನ್ನು ಮರೆತದ್ದೇಕೆ? ಎರಡು ಭಿನ್ನ ಕೋಮುಗಳ ಕದನ ಎಂದು ವರದಿ ಬರೆಯುವ ಪತ್ರಕರ್ತರು ತಮಿಳು ಭಾಷಿಗರು ಕನ್ನಡಿಗರನ್ನು ಬಡಿದರೆಂದು ವರದಿ ಮಾಡಿದ್ದಾದರೂ ಏಕೆ? ಗಲಾಟೆ ಆಗಿಬಿಡಲೆಂಬ ಬಯಕೆಯಿಂದಲೇನಾ?
ಹೋಗಲಿ. ಕೊನೆಗೂ ಸಂಪಾದಿಸಿದ್ದೇನು? ಬೆಂಗಳೂರಿನ ಈ ಕಾಮಸರ್್ ಕಂಪನಿಗಳಿಗೆ ಹೊಡೆತ ಬಿತ್ತು. ಕೆಎಸ್ಸಾಟರ್ಿಸಿಗೆ ನಷ್ಟವಾಯ್ತು. ಸಣ್ಣ ಉದ್ದಿಮೆಗಳಿಗೆ ಸಾವಿರ ಕೋಟಿಯಷ್ಟು ಹೊಡೆತ. ಕ್ಯಾಬ್ ಕಂಪನಿಗಳಿಗೆ ಎರಡು ಸಾವಿರ ಕೋಟಿ. ಒಟ್ಟಾರೆ ಅಂದಾಜು 25 ಸಾವಿರು ಕೋಟಿ ರೂಪಾಯಿ ನಷ್ಟ. ಜೊತೆಗೆ ಕೆಟ್ಟ ಹೆಸರು ಬೇರೆ. ಇಷ್ಟಾಗಿಯೂ ತಮಿಳುನಾಡಿಗೆ ಹರಿವ ನೀರು ನಿಲ್ಲಲಿಲ್ಲ. ಅಣೇಕಟ್ಟಿನ ನೀರಿನ ಮಟ್ಟ ಇಳಿಯುವುದನ್ನು ತಡೆಯಲಾಗಲಿಲ್ಲ.
ಬಿಡಿ. ನನಗಿರೋದು ಒಂದೇ ಪ್ರಶ್ನೆ. ಗಲಾಟೆಯಾಗುವಾಗ, ಬೆಂಕಿ ಹಚ್ಚುವಾಗ ಸುಮ್ಮನಿದ್ದ, ಪೊಲೀಸುಪಡೆ, ಸಕರ್ಾರಕ್ಕೆ ಸುತ್ತಲಿಂದ ಛೀಮಾರಿ ಬಿದ್ದೊಡನೆ ಕ್ರಿಯಾಶೀಲವಾಗಿ ಮರು ದಿನವೇ ಗಲಾಟೆ ನಿಲ್ಲುವಂತೆ ನೋಡಿಕೊಂಡಿತಲ್ಲ. ನಡೆದ ಗಲಾಟೆ, ಹಚ್ಚಿದ ಬೆಂಕಿ ಎಲ್ಲವೂ ಸಕರ್ಾರ ಪ್ರೇರಿತ ಹೋರಾಟವಾ? ನಾವು ನೀವೆಲ್ಲರೂ ಕೈಗೊಂಬೆಗಳಾಗಿಬಿಟ್ಟೆವಾ? ಉತ್ತರ ಗೊತ್ತಾದರೆ ನನಗೂ ಹೇಳಿ. ಕಾಯುತ್ತಿರುತ್ತೇನೆ.

Comments are closed.