ವಿಭಾಗಗಳು

ಸುದ್ದಿಪತ್ರ


 

ಭಗತ್ ಸಿಂಗನ ಹೋರಾಟದಲ್ಲೂ ಕಮ್ಯುನಿಸಂನ ವಾಸನೆ ಹಿಡಿದ ಕಾಮ್ರೇಡುಗಳು

ಭಗತ್ಸಿಂಗ್ ನಾನೇಕೆ ನಾಸ್ತಿಕ ಎಂಬ ಕೃತಿಯಲ್ಲಿ ದೇವರನ್ನು ನಂಬದಿರಲು ಕಾರಣಗಳನ್ನು ಪಟ್ಟಿ ಮಾಡುತ್ತಾನೆ. ಅದನ್ನು ಹಿಡುಕೊಂಡೇ ಎಡಚರೆಲ್ಲ ಭಗತ್ನನ್ನು ತಮ್ಮವನೆನ್ನೋದು. ವಿವೇಕಾನಂದರೂ 33 ಕೋಟಿ ದೇವತೆಗಳನ್ನು ಗಂಟು ಕಟ್ಟಿ ಸಮುದ್ರಕ್ಕೆಸೆಯಿರಿ ಅಂದಿದ್ದರು. ಗೀತೆ ಓದುವುದಕ್ಕಿಂತ ಫುಟ್ಬಾಲ್ ಆಡುವುದು ಭಗವಂತನಿಗೆ ಹತ್ತಿರ ಹೋಗುವ ಮಾರ್ಗ ಎಂದಿದ್ದರು. ಹಾಗಂತ ಅವರು ದೇವರು, ಧರ್ಮದ ವಿರುದ್ಧವೆಂದೇನಲ್ಲ. ಕಾರ್ಯಕರ್ತರನ್ನು ಆಲಸ್ಯದಿಂದ ಅಥವಾ ತೋರಿಕೆಯ ನಿಷ್ಕ್ರಿಯತೆಯಿಂದ ಸಕ್ರಿಯ ಹೋರಾಟದೆಡೆಗೆ ಸೆಳೆದು ತರಲು ಉಪಯುಕ್ತ ಮಾರ್ಗ ಅದು. ಸ್ವತಃ ಭಗತ್ ಈ ಕೃತಿ ಬರೆದ ನಂತರವೂ, ಲೆನಿನ್ನ್ನು ಓದಿದ ನಂತರವೂ ಅವನು ಗುಣುಗುಣಿಸುತ್ತಿದ್ದ ಹಾಡು ಯಾವುದು ಗೊತ್ತೇ? ‘ಮೇರಾ ರಂಗದೇ ಬಸಂತಿ ಚೋಲಾ’. ಬಸಂತಿ ಅಂದರೆ ಯಾವ ಬಣ್ಣ ಎಂಬ ಅಂದಾಜಿದೆಯೇನು? ಕಮ್ಯುನಿಸ್ಟರ ಬದ್ಧ ವೈರತ್ವದ ಕೇಸರಿ ಬಣ್ಣ!

b1

ಘಟನೆ 1
ಭಗತ್ಸಿಂಗ್ ನ ವಕೀಲರಾದ ಪ್ರಾಣನಾಥ ಮೆಹತಾ ಕೊನೆಯ ದಿನಗಳಲ್ಲಿ ಅವನನ್ನು ‘ನಿನ್ನ ಅಂತಿಮ ಇಚ್ಛೆ ಏನು?’ ಎಂದು ಕೇಳಿದ್ದರು. ಭಗತ್ ಕೊಟ್ಟ ಉತ್ತರವೇನು ಗೊತ್ತೇ? ‘ಮತ್ತೊಮ್ಮೆ ಇಲ್ಲಿ ಹುಟ್ಟಿ ಬಂದು, ಮಾತೃಭೂಮಿಗೆ ಇನ್ನೂ ಹೆಚ್ಚಿನ ಸೇವೆ ಮಾಡಬೇಕು’.
ಘಟನೆ 2
1919 ರ ಏಪ್ರಿಲ್ 13 ರಂದು ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದುಹೋಯಿತು. ಮಾರನೆಯ ದಿನ ಶಾಲೆಯಿಂದ ಭಗತ್ ಮನೆಗೆ ಬೇಗ ಬರಲಿಲ್ಲ. ಆತ ನೇರವಾಗಿ ಅಮೃತ್ಸರದ ಜಲಿಯನ್ ವಾಲಾಭಾಗ್ಗೆ ಹೋಗಿದ್ದ. ಜನರ ರಕ್ತದಿಂದ ತೊಯ್ದಿದ್ದ ಮಣ್ಣನ್ನು ಕೈಯ್ಯಲ್ಲಿ ಹಿಡಿದು ಹಣೆಗೆ ಹಚ್ಚಿಕೊಂಡ. ಸ್ವಲ್ಪ ಮಣ್ಣನ್ನು ಶೀಷೆಗೆ ತುಂಬಿಕೊಂಡು ಮರಳಿ ಬಂದ. ತನ್ನ ತಂಗಿಗೆ ಅದನ್ನು ತೋರಿಸಿ ಎಲ್ಲವನ್ನೂ ವಿವರಿಸಿದ. ನಂತರ ಹೂವುಗಳನ್ನು ಕಿತ್ತೊಕೊಂಡು ಬಂದು ಆ ಸೀಸೆಯ ನಾಲ್ಕೂ ಕಡೆ ಹೂವುಗಳನ್ನಿಟ್ಟು ಭಕ್ತಿಯಿಂದ ನಮಿಸಿದ.
ಈ ಎರಡೂ ಘಟನೆ ಭಗತ್ನ ಬದುಕಿನ ಅಂತಿಮ ಕಾಲದ ಮತ್ತು ಆರಂಭದ ಘಟ್ಟದ ಜೀವನ ಪದ್ಧತಿಯನ್ನು ವಿವರಿಸುವಂತಿದೆ. ಚಿಕ್ಕಂದಿನಲ್ಲಿ ರಕ್ತ ಮಿಶ್ರಿತ ಮಣ್ಣನ್ನು ಪೂಜೆ ಮಾಡುವ ಕಲ್ಪನೆಯಿಂದ ಹಿಡಿದು ಅಂತಿಮ ಕಾಲದಲ್ಲಿ ಈ ಮಾತೃಭೂಮಿಯ ಸೇವೆಗಾಗಿ ಮರು ಹುಟ್ಟು ಪಡೆಯುವ ಚಿಂತನೆಯವರೆಗೆ ಆತನ ಆಲೋಚನಾ ಪಕ್ವತೆಯ ಭಿನ್ನ ಭಿನ್ನ ಹಂತಗಳನ್ನು ಸೂಚಿಸುತ್ತದೆ. ಅದ್ಯಾವ ಕಮ್ಯುನಿಸ್ಟ್ ಚಿಂತಕ ಹೂಗಳನ್ನಿಟ್ಟು ಪೂಜೆ ಮಾಡುವ ಮಾತನಾಡಬಲ್ಲ ಹೇಳಿ. ಹಾಗೆಂದೊಡನೆ ಕಮ್ಯುನಿಸ್ಟ್ ಬಾಯಿ ಬಡುಕರು ಇದು ನಂಬಲರ್ಹ ಘಟನೆಯೇ ಅಲ್ಲ ಅಂತಾರೆ. ಮಿತ್ರರೇ ಈ ಎರಡು ಘಟನೆಗಳು ಭಗತ್ನ ಸಹೋದರ ಕುಲತಾರ್ ಸಿಂಹನ ಮಗಳು ಶ್ರೀಮತಿ ವೀರೇಂದ್ರ ಸಿಂಧು ದಾಖಲಿಸಿರುವಂಥದ್ದು. ಚಿಕ್ಕಪ್ಪನ ಬಗ್ಗೆ ಬರೆದಿರುವ ಅಧಿಕೃತ ಕೃತಿಗಿಂತ ರಷಿಯಾದ ಲೇಖಕರು ತಮ್ಮ ಸಿದ್ಧಾಂತದ ಪ್ರಚಾರಕ್ಕೆಂದೇ ಬರೆದ ಬೂಸಾ ಸಾಹಿತ್ಯವನ್ನೇ ಸತ್ಯವೆಂದು ನಂಬುವವರಿಗೆ ಯಾರೇನು ಮಾಡಲಾದೀತು?
ಸತ್ಯ ಹೇಳಿ. ಯಾವನಾದರೂ ಕಾಮ್ರೇಡು ಭಗತ್ನಂತೆ ಹಿಂದೂ ಧರ್ಮದ ಅಡಿಪಾಯವಾದ ಪುನರ್ಜನ್ಮದ ಕುರಿತಂತೆ ಮಾತನಾಡುವುದುಂಟೇ? ರಷ್ಯಾ-ಚೀನಾಗಳ ತಾಳಕ್ಕೆ ಕುಣಿಯುವ ಈ ಚೀನಾ ಚೀಲಾಗಳು ಭಾರತವನ್ನು ಭಗತ್ನಂತೆ ಮಾತೃಭೂಮಿ ಎನ್ನುವುದುಂಟೇ? ನಾನೇಕೆ ನಾಸ್ತಿಕನೆಂಬ ಭಗತ್ಸಿಂಗ್ನ ಪುಸ್ತಕದಲ್ಲಿ ತಮಗೆ ಬೇಕಾದ್ದನ್ನು ಮಾತ್ರ ಹೇಳಿ ಉಳಿದಿದ್ದನ್ನು ತಿದ್ದಿ, ತೀಡಿ, ತೆಗೆದು ಹಿಂದೂ ಧರ್ಮವನ್ನು ಎದುರಿಸಲು ಬೇಕಾದ್ದಷ್ಟನ್ನೇ ಸಮಾಜದ ಮುಂದಿರಿಸಿರುವ ವಾಮಪಂಥಿ ದಳದವರಿಗೆ ಭಗತ್ನನ್ನು ಅಥರ್ೈಸಿಕೊಳ್ಳಲು ನಾಲ್ಕಾರು ಜನ್ಮವಾದರೂ ಬೇಕಾದೀತು.
ಭಗತ್ಸಿಂಗ್ಗೆ ಬಾಲ್ಯದಲ್ಲಿಯೇ ಗದರ್ ಚಳವಳಿಯ ತೀವ್ರ ಪ್ರಭಾವ ಆಗಿತ್ತು. 16ನೇ ವಯಸ್ಸಿನಲ್ಲಿಯೇ ನಗು-ನಗುತ್ತ ನೇಣಿಗೇರಿದ ಕತರ್ಾರ್ ಸಿಂಗ್ ಸರಾಭಾ ಅವನ ಆರಾಧ್ಯ ದೈವವಾಗಿದ್ದ. ಅವನೇ ಪ್ರೇರಣೆಯೂ ಆಗಿದ್ದ. ಭಗತ್ಗೆ ಬುದ್ಧಿ ಬಲಿತ ಕಾಲಕ್ಕೆ ಗದರ್ ಚಳವಳಿ ತೀವ್ರವಾದ ಹಂತ ಮುಟ್ಟಿತ್ತು. ಪಶ್ಚಿಮದಲ್ಲಿ ಶುರುವಾದ ಈ ಚಳುವಳಿಗೆ ಅಲ್ಲಿ ಹೆಚ್ಚಿನ ಮಟ್ಟದ ಬೆಂಬಲ ದೊರಕಿದ್ದೇ ಪಂಜಾಬಿನ ಮಧ್ಯಮ ವರ್ಗದ ರೈತರಿಂದ. ಅವರೆಲ್ಲ ಕ್ರಾಂತಿಯ ನೆಪದಲ್ಲಿ ಭಾರತಕ್ಕೆ ಬಂದು ಪಂಜಾಬಿನ ಹಳ್ಳಿ-ಹಳ್ಳಿಯಲ್ಲಿ ಸೇರಿಕೊಂಡರು. ಕಮ್ಯುನಿಸ್ಟ್ ವಿಚಾರಧಾರೆ ಪಂಜಾಬಿನ ಮೂಲೆ ಮೂಲೆಗೂ ಹಬ್ಬಿತು. ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರತರವಾದ ಪಾತ್ರ ವಹಿಸಿದ್ದ ಕುಟುಂಬ ಭಗತ್ರದ್ದು. ಹೀಗಾಗಿ ಕ್ರಾಂತಿಕಾರಿಗಳು ಮನೆಗೆ ಬರುವುದು, ಮಾತು-ಕತೆ ನಡೆಸುವುದು, ಕ್ರಾಂತಿ ಯೋಜನೆ ರೂಪಿಸೋದು ಸವರ್ೇ ಸಾಮಾನ್ಯವಾಗಿತ್ತು. ಸಹಜವಾಗಿಯೇ ಭಗತ್ನಿಗೆ ಈ ಚಿಂತನೆಗಳತ್ತ ಒಲವು ಹರಿಯಿತು. ಮಸೀದಿಯೊಂದರೆದುರಿಗೆ ಮನೆ ಕಟ್ಟಿಕೊಂಡ ಹಿಂದೂ ವ್ಯಕ್ತಿಯೊಬ್ಬ ಪ್ರತಿನಿತ್ಯ ಅಜಾನ್ ಕೇಳಿ ಕೇಳಿ ಅದು ಹೃದ್ಗತವಾದರೆ ಅಚ್ಚರಿ ಪಡಬೇಕಿಲ್ಲ. ಹಾಗಂತ ಆತ ಇಸ್ಲಾಂ ಸ್ವೀಕರಿಸಿಬಿಟ್ಟಿದ್ದಾನೆ ಎಂದು ಬೊಬ್ಬಿಡಬೇಕಿಲ್ಲ.
ಭಗತ್ನದ್ದೂ ಅದೇ ಕಥೆ. ಕಮ್ಯುನಿಸ್ಟ್ ಸಿದ್ಧಾಂತವನ್ನು ಪ್ರಚಾರ ಮಾಡುತ್ತ ತಿರುಗಾಡುವ ಅಷ್ಟೆಲ್ಲಾ ಜನ ಸುತ್ತಲೂ ಇದ್ದರೂ ಭಗತ್ ಕಮ್ಯುನಿಸ್ಟ್ ಪಾಟರ್ಿಗೆ ಎಂದೂ ಸೇರಲೇ ಇಲ್ಲ. ಬದಲಿಗೆ ಯೌವ್ವನದಲ್ಲಿ ಪರಿಪೂರ್ಣ ಬುದ್ಧಿಮತ್ತೆಯೊಂದಿಗೆ ಆತ ಆಯ್ದುಕೊಂಡದ್ದು ರಾಮಪ್ರಸಾದ್ ಬಿಸ್ಮಿಲ್ರ ಕ್ರಾಂತಿಕಾರಿ ಪಡೆಯನ್ನು. ನೆನಪಿರಲಿ. ರಾಮಪ್ರಸಾದ್ ಬಿಸ್ಮಿಲ್ ಅದಾಗಲೇ ಕಟ್ಟರ್ ಹಿಂದೂವಾದಿಯಾಗಿ ಆರ್ಯ ಸಮಾಜದೊಂದಿಗೆ ಗುರುತಿಸಿಕೊಂಡಿದ್ದರು. ನೂರಾರು ಮುಸಲ್ಮಾನರನ್ನು ಶುದ್ಧಿ ಚಳುವಳಿಯ ಮೂಲಕ ಪರಾವರ್ತನಗೊಳಿಸಿದ್ದರು. ಹಾಗೆ ನೋಡಿದರೆ ಭಗತ್ನ ರಾಜಕೀಯ ಗುರು ರಾಮ್ ಪ್ರಸಾದ್ ಬಿಸ್ಮಿಲ್ಲರೇ. ಇನ್ನು ಕಾಕೋರಿ ಕಾಂಡದ ನಂತರ ಎಲ್ಲ ಮಿತ್ರ ಕ್ರಾಂತಿಕಾರಿಗಳು ಜೈಲುಪಾಲಾಗಿ ಕೆಲವರು ನೇಣಿಗೇರಿದ ನಂತರ, ಭಗತ್ ತನ್ನ ನಾಯಕರಾಗಿ ಸ್ವೀಕರಿಸಿ ಅನುಸರಿಸಿದ್ದು ಚಂದ್ರಶೇಖರ್ ಆಜಾದ್ರನ್ನು. ಯಾವ ಚಂದ್ರಶೇಖರ್ ಆಜಾದರು ಪಂಡಿತ್ ಜಿ ಎಂದೇ ಖ್ಯಾತರಾಗಿದ್ದರೋ ಹಿಂದೂ ಧರ್ಮದ ಮೌಲ್ಯಗಳಿಗೆ ಪೂರಕವಾಗಿ ಬದುಕಿದ್ದರೋ ಅದೇ ಆಜಾದ್ರ ಛಾಯೆಯಲ್ಲಿ ಹೆಜ್ಜೆ ಇಟ್ಟವ ಭಗತ್. ಅಷ್ಟೇ ಅಲ್ಲ. ಭಗತ್ಸಿಂಗ್ 1857 ರ ಮಹಾಸಂಗ್ರಾಮದ ‘ಸಾವರ್ಕರ’ರ ಪುಸ್ತಕವನ್ನು ಮರುಮುದ್ರಿಸಿ ಕ್ರಾಂತಿಕಾರ್ಯಕ್ಕೆ ಹಣ ಸಂಗ್ರಹಿಸಿದ್ದರು.

b4
ಹೋಗಲಿ, ಲಾಲಾ ಲಜಪತ್ ರಾಯ್ರನ್ನು ಸ್ಕಾಟ್ ಬಡಿದು ಕೊಂದಿದ್ದ ಅಂತ ಕುಪಿತರಾಗಿ ಭಗತ್ ಆತನ ಹತ್ಯೆಗೆ ರೂಪುರೇಷೆ ಸಿದ್ಧಪಡಿಸಿ ಅಂತಿಮವಾಗಿ ಸ್ಯಾಂಡರ್ಸ್ನ ಸಂಹಾರದಲ್ಲಿ ಯೋಜನೆ ಕೊನೆಗೊಂಡಿತಲ್ಲ; ಇಷ್ಟಕ್ಕೂ ಆ ಲಾಲಾ ಲಜಪತ್ರಾಯರು ಯಾರು ಗೊತ್ತೇ? ಆರ್ಯ ಸಮಾಜದ ದಯಾನಂದ ಸರಸ್ವತಿಯವರ ಚಿಂತನೆಗಳಿಗೆ ಮಾರುಹೋದವರು. ಮುಸಲ್ಮಾನರನ್ನೆಲ್ಲ ಒಂದೆಡೆ ಸೇರಿಸಿ ಅವರಿಗಾಗಿ ಪ್ರತ್ಯೇಕ ರಾಷ್ಟ್ರ ಮಾಡಿ ಕೊಟ್ಟುಬಿಟ್ಟರೆ ಹಿಂದೂಗಳು ನೆಮ್ಮದಿಯಿಂದ ಇರಬಲ್ಲರೆಂಬ ಹೇಳಿಕೆಯಿಂದ ವಿವಾದಕ್ಕೆ ಒಳಗಾದವರು. ಎಲ್ಲಕ್ಕೂ ಮಿಗಿಲಾಗಿ ಕಮ್ಯುನಿಸ್ಟರು ಕಂಠಮಟ್ಟ ದ್ವೇಷಿಸುತ್ತಿದ್ದ ಹಿಂದೂ ಮಹಾ ಸಭಾದ ನಾಯಕರು ಅವರು. ಅದ್ಯಾವ ಮುಖ ಇಟ್ಟುಕೊಂಡು ಇವರ ಪರವಾಗಿ ಕಾದಾಡಿದವರನ್ನು ಕಮ್ಯುನಿಸ್ಟ್ ಅಂತಾರೆಯೋ ದೇವರೇ ಬಲ್ಲ.
ಕಮ್ಯುನಿಸ್ಟರ ಬಾಯಿ ಬಡುಕುತನಕ್ಕೆ ಕೊನೆಯೇ ಇಲ್ಲ. ಸುಳ್ಳುಗಳನ್ನೇ ಪದೇ ಪದೇ ಹೇಳಿ ಅದನ್ನೇ ಸತ್ಯವೆಂದು ನಂಬಿಸಿ ಬಿಡುವಲ್ಲಿ ನಿಸ್ಸೀಮರು ಅವರು. ಮೊದಲೆಲ್ಲ ಜನ ಅವರು ಹೇಳಿದ್ದನ್ನೇ ಸತ್ಯವೆಂದು ನಂಬಿ ಸುಮ್ಮನಾಗಿಬಿಡುತ್ತಿದ್ದರು. ಈಗ ಸಾಮಾಜಿಕ ಜಾಲತಾಣಗಳು ಮುಂಚೂಣಿಗೆ ಬಂದ ಮೇಲೆ ಅರ್ಧ ನಿಮಿಷದಲ್ಲಿ ಅವರು ಹೇಳಿದ ಸುಳ್ಳನ್ನು ಸುಳ್ಳೆಂದು ಸಾಬೀತು ಪಡಿಸುವವರು ಸಿದ್ಧರಾಗಿಬಿಟ್ಟಿದ್ದಾರೆ. ಹೀಗಾಗಿ ಅವಸಾನದತ್ತ ಬಂದು ನಿಂತಿದೆ ಕಮ್ಯುನಿಸಂ. ಪಾಪ! ಸತ್ಯದ ಯುಗದಲ್ಲಿ ಅವರ ಸುಳ್ಳುಗಳಿಗೆ ಕಿಂಚಿತ್ತೂ ಬೆಲೆಯಿಲ್ಲ!
ಕಮ್ಯುನಿಸ್ಟರ ಒಂದೊಂದೇ ಹೇಳಿಕೆ ಗಮನಿಸಿ. ಭಗತ್ಸಿಂಗ್ ಹಿಂದೂಸ್ತಾನ ಸೋಶಿಯಲಿಸ್ಟಿಕ್ ರಿಪಬ್ಲಿಕ್ ಆಮರ್ಿ ಕಟ್ಟಿದ. ಹೀಗಾಗಿ ಆತ ಕಮ್ಯುನಿಸ್ಟು ಅಂತಾರೆ. ಸೋಶಿಯಲಿಸಂಗೂ ಕಮ್ಯುನಿಸಂಗೂ ಅಜಗಜಾಂತರವಿದೆ. ಇದನ್ನೊಪ್ಪದ ಎಡಚರು ಸಮಾಜವಾದ ಕಮ್ಯುನಿಸಮ್ಮಿನ ಆರಂಭಿಕ ಹಂತ ಅಂತಾರೆ. ಸರಿ ಹಾಗಾದರೆ, ಹಿಟ್ಲರ್ ತನ್ನ ಚಿಂತನೆಗಳನ್ನು ಸಮಾಜವಾದೀ ರಾಷ್ಟ್ರೀಯತೆಯ ಆಧಾರವುಳ್ಳದ್ದು ಅಂತಾನಲ್ಲ ಹಾಗಿದ್ದರೆ ಹಿಟ್ಲರ್ ಕೂಡ ಕಮ್ಯುನಿಸ್ಟ್ ವಿಚಾರಧಾರೆಯವನಾ ಅಂದರೆ ನಿದ್ದೆ ಕಣ್ಣಲ್ಲೂ ಬೆಚ್ಚಿ ಬೀಳುತ್ತಾರೆ. ವಾಸ್ತವವಾಗಿ ಬ್ರಿಟೀಷ್ರಂತಹ ಬಂಡವಾಳಶಾಹಿಗಳ ವಿರುದ್ಧ ಅಂದಿನ ದಿನಗಳಲ್ಲಿ ರೈತರು, ಕಾಮರ್ಿಕರು ಒಟ್ಟಾಗಬೇಕೆಂಬ ಕಲ್ಪನೆ ಸಹಜವಾಗಿಯೇ ಇತ್ತು. 1857 ರ ಸಂಗ್ರಾಮದ ವೇಳೆಗೇ ಇದನ್ನು ಸಾಧಿಸಿ ಜಮೀನ್ದಾರರು, ರೈತರು, ಮಾಲೀಕರು, ಕಾಮರ್ಿಕರು ಒಟ್ಟಾಗಿ ಹೋರಾಟ ಸಂಘಟಿಸಿದ ಉದಾಹರಣೆ ಇತ್ತು. ಅದರ ಮುಂದುವರಿದ ಭಾಗವೇ 1947 ರವರೆಗಿನ ಸ್ವಾತಂತ್ರ್ಯ ಹೋರಾಟ. ಇಲ್ಲಿ ಬ್ರಿಟೀಷರ ಮಾತಿನಂತೆ ನಡೆಯುತ್ತಿದ್ದ ಜಮೀನ್ದಾರರ, ಮಾಲೀಕರ ವಿರುದ್ಧ ಸಹಜವಾಗಿ ಆಕ್ರೋಶ ತಿರುಗಿತು. ಅದನ್ನು ಜೋರಾಗಿ ಹೇಳಿದವರನ್ನೆಲ್ಲ ಕಮ್ಯುನಿಸ್ಟ್ ಎಂದು ಪ್ರತ್ಯೇಕಿಸಿಕೊಂಡುಬಿಟ್ಟರು ಈ ಪಾಪಿಗಳು ಅಷ್ಟೇ.
ಸತ್ಯ ಏನು ಗೊತ್ತಾ? ಭಗತ್ಸಿಂಗ್ ಕಮ್ಯುನಿಸ್ಟ್ ಕ್ರಾಂತಿಯಿಂದ ಪ್ರಭಾವಿತನಾಗಿದ್ದಿರಬಹುದು. ಆದರೆ ಭಾರತೀಯತೆಯಿಂದ ಗುಲಗಂಜಿಯಷ್ಟೂ ದೂರವಾಗಿರಲಿಲ್ಲ. ಹೀಗಾಗಿ ಕಡು ಆರ್ಯಸಮಾಜಿಗಳೊಂದಿಗೆ ಬಲು ಪ್ರೀತಿಯಿಂದ ವ್ಯವಹರಿಸಲು ಅವನಿಗೆ ಸಾಧ್ಯವಾಗುತ್ತಿತ್ತು. ಸಾವರ್ಕರರ ಪುಸ್ತಕ ಮರುಮುದ್ರಿಸಿ ಮಾರಾಟಕ್ಕಿಳಿಯಲು ಅವನಿಗೆ ಲೆನಿನ್-ಮಾಕ್ಸರ್್ರು ಅಡ್ಡ ಬರಲಿಲ್ಲ. ಏಕೆಂದರೆ ಅವನ ಬೇರುಗಳು ಭದ್ರವಾಗಿ ಭಾರತದಲ್ಲಿ ನೆಲೆಯೂರಿದ್ದವು.
ಭಗತ್ಸಿಂಗ್ ನಾನೇಕೆ ನಾಸ್ತಿಕ ಎಂಬ ಕೃತಿಯಲ್ಲಿ ದೇವರನ್ನು ನಂಬದಿರಲು ಕಾರಣಗಳನ್ನು ಪಟ್ಟಿ ಮಾಡುತ್ತಾನೆ. ಅದನ್ನು ಹಿಡುಕೊಂಡೇ ಎಡಚರೆಲ್ಲ ಭಗತ್ನನ್ನು ತಮ್ಮವನೆನ್ನೋದು. ವಿವೇಕಾನಂದರೂ 33 ಕೋಟಿ ದೇವತೆಗಳನ್ನು ಗಂಟು ಕಟ್ಟಿ ಸಮುದ್ರಕ್ಕೆಸೆಯಿರಿ ಅಂದಿದ್ದರು. ಗೀತೆ ಓದುವುದಕ್ಕಿಂತ ಫುಟ್ಬಾಲ್ ಆಡುವುದು ಭಗವಂತನಿಗೆ ಹತ್ತಿರ ಹೋಗುವ ಮಾರ್ಗ ಎಂದಿದ್ದರು. ಹಾಗಂತ ಅವರು ದೇವರು, ಧರ್ಮದ ವಿರುದ್ಧವೆಂದೇನಲ್ಲ. ಕಾರ್ಯಕರ್ತರನ್ನು ಆಲಸ್ಯದಿಂದ ಅಥವಾ ತೋರಿಕೆಯ ನಿಷ್ಕ್ರಿಯತೆಯಿಂದ ಸಕ್ರಿಯ ಹೋರಾಟದೆಡೆಗೆ ಸೆಳೆದು ತರಲು ಉಪಯುಕ್ತ ಮಾರ್ಗ ಅದು. ಸ್ವತಃ ಭಗತ್ ಈ ಕೃತಿ ಬರೆದ ನಂತರವೂ, ಲೆನಿನ್ನ್ನು ಓದಿದ ನಂತರವೂ ಅವನು ಗುಣುಗುಣಿಸುತ್ತಿದ್ದ ಹಾಡು ಯಾವುದು ಗೊತ್ತೇ? ‘ಮೇರಾ ರಂಗದೇ ಬಸಂತಿ ಚೋಲಾ’. ಬಸಂತಿ ಅಂದರೆ ಯಾವ ಬಣ್ಣ ಎಂಬ ಅಂದಾಜಿದೆಯೇನು? ಕಮ್ಯುನಿಸ್ಟರ ಬದ್ಧ ವೈರತ್ವದ ಕೇಸರಿ ಬಣ್ಣ!
ಹಾಡಿನ ಮುಂದಿನ ಸಾಲುಗಳು ಬಲು ಸುಂದರ
‘ಇಸೀ ರಂಗ್ ಮೇ ರಂಗ್ ಕೇ ಶಿವಾನೇ ಮಾಂ ಕಾ ಬಂಧನ್ ಖೋಲಾ|
ಯಹೀ ರಂಗ್ ಹಲ್ದೀ ಘಾಟೀ ಮೇಂ ಖುಲ್ಕರ್ ಕೇ ಥಾ ಖೇಲಾ|
ನವ ಬಸಂತ್ ಮೇ ಭಾರತ್ ಕೇ ಹಿತ ವೀರೋಂ ಕಾ ಯಹ್ ಮೇಲಾ|
ಮೇರಾ ರಂಗ್ ದೇ ಬಸಂತಿ ಚೋಲಾ’
ಶಿವಾಜಿ ತಾಯಿಯ ಬಂಧನ ಕಳಚಿದ್ದು ಇದೇ ಬಣ್ಣದಲ್ಲಿ ಹೋಳಿಯಾಡಿ. ಹಲದಿ ಘಾಟಿಯಲ್ಲಿ ರಾಣಾ ಪ್ರತಾಪ್ ಇದೇ ಬಣ್ಣದ ಧೂಳೆಬ್ಬಿಸಿದ್ದ. ಯಾರ ವಿರುದ್ಧ ಗೊತ್ತೇ? ಸೆಕ್ಯುಲರ್ಗಳ ಪ್ರಿಯತಮ ಅಕ್ಬರ್ನ ವಿರುದ್ಧ. ಹೀಗೆಲ್ಲ ಭಗತ್ ತನ್ನೊಳಗೆ ತಾನು ಹಾಡಿಕೊಳ್ಳುತ್ತಿದ್ದುದನ್ನು ಕೇಳಿ ಜೈಲರ್ ರೋಮಾಂಚಿತನಾಗುತ್ತಿದ್ದನಂತೆ! ಅದಕ್ಕೇ ಹೇಳಿದ್ದು. ಭಗತ್ ನಾಸ್ತಿಕನಾಗಿರಬಹುದು ಆದರೆ ಕೇಸರಿಯ ವಿರೋಧಿಯಾಗಿರಲಿಲ್ಲ. ಭಗತ್ ಲೆನಿನ್ ಓದಿರಬಹುದು ಆದರೆ ಶಿವಾಜಿ-ರಾಣಾರ ಪ್ರಭಾವ ಕಡಿಮೆಯಾಗಿರಲಿಲ್ಲ. ಭಗತ್ ಕಾರ್ಯಕರ್ತರಿಗೆ ದೇವರ ಪೂಜೆಯೆಲ್ಲ ಈಗ ಬೇಡ ಎಂದಿರಬಹುದು ಆದರ ದೇಶದ ಪೂಜೆ ಬೇಡ ಎಂದಿರಲಿಲ್ಲ. ಮತ್ತೆ ಅದ್ಯಾವ ದಿಕ್ಕಿನಿಂದ ಆತ ಕಮ್ಯುನಿಸ್ಟ್ರಂತೆ ಕಾಣುತ್ತಾನೋ ದೇವರೇ ಬಲ್ಲ. ಕ್ಷಮಿಸಿ. ಆ ದೇವರನ್ನೂ ನಂಬುವವರಲ್ಲವಲ್ಲ ಅವರು.

b2
ಕಮ್ಯುನಿಸ್ಟರು ಕೊನೆಯದಾಗಿ ಕಣ್ಣೀರಿಟ್ಟು ಒಪ್ಪಿಸುವ ಮಾತು ಒಂದೇ ಒಂದು. ‘ಭಗತ್ಸಿಂಗ್ ಸಾಯುವ ಕಾಲಕ್ಕೆ ಓದಿದ್ದು ಲೆನಿನ್ ಜೀವನ ಚರಿತ್ರೆ’. ಇದನ್ನು ಕೇಳಿದಾಗಲೇ ನಗು ಬರೋದು. ಸಾವರ್ಕರ್ ಲಂಡನ್ನಿನಲ್ಲಿರುವಾಗ ಅನೇಕ ರಷ್ಯನ್ ಕ್ರಾಂತಿಕಾರಿಗಳ ಸಂಪರ್ಕ ಹೊಂದಿದ್ದರು. ಸತ್ಯಶೋಧವೆಂಬ ತಂಡವೊಂದರ ಪ್ರಕಾರ ಲೆನಿನ್ ಭಾರತ ಭವನಕ್ಕೂ ಬಂದು ಹೋಗುತ್ತಿದ್ದರು. ಸ್ವತಃ ಸಾವರ್ಕರ್ ಮ್ಯಾಜಿನಿಯ ಕುರಿತಂತೆ ಜೀವನ ಚರಿತ್ರೆ ಬರೆದಿದ್ದರು. ಅಷ್ಟೇ ಅಲ್ಲ. ಲಾಲಾ ಹರದಯಾಳ್ನಿಗೆ ಪ್ರೇರಣೆ ಕೊಟ್ಟು ಗದರ್ ಹುಟ್ಟಲು ಕಾರಣವಾಗಿದ್ದು ಇದೇ ಸಾವರ್ಕರರೇ. ಮುಂದೆ ಇದೇ ಲಾಲಾ ಹರದಯಾಳ್ರ ಗದರ್ನಿಂದಾಗಿ ಕಮ್ಯುನಿಸ್ಟ್ ಕ್ರಾಂತಿ ಭಾರತದಲ್ಲೆಲ್ಲಾ ಹರಡಿತು. ಅಂದರೆ ಭಾರತದಲ್ಲಿ ಕಮ್ಯುನಿಸಂನ ಜನಕರು ಸಾವರ್ಕರರೇ ಎನ್ನುವ ಮಾತು ತರ್ಕ ಬದ್ಧವಾಗಿ ಸರಿಯಾಗಬೇಕಲ್ಲ! ನನ್ನೆಲ್ಲ ಎಡಚ ಮಿತ್ರರು ಸಾವರ್ಕರರ ಫೋಟೋ ಇಟ್ಟು ಇದೇ ಬಗೆಯ ಕಾರ್ಯಕ್ರಮಗಳನ್ನು ಮಾಡುವುದಾದರೆ ಇನ್ಕ್ವಿಲಾಬ್ ಜಿಂದಾಬಾದ್ಗೆ ನಾನೂ ದನಿಗೂಡಿಸಬಹುದಿತ್ತು, ನೀವೂ ಜೈ ಎನ್ನಬಹುದಿತ್ತು. ಆದರೆ ಈ ಎಡಚರಿಗೆ ಸತ್ಯ ಬೇಕಿಲ್ಲ. ಅವರಿಗೆ ಚೀನಾದ ದೊರೆಗಳು ಕೊಟ್ಟ ಆದೇಶವನ್ನು ಪಾಲಿಸಿ ಭಾರತವನ್ನು ಚೂರು-ಚೂರು ಮಾಡಬಲ್ಲ ತರುಣ ಪಡೆ ಬೇಕು ಅಷ್ಟೇ. ಅದಕ್ಕೇ ಭಗತ್ ಸಿಂಗ್ನ ಹೋರಾಟದ ಕಥನಗಳನ್ನೆಲ್ಲ ಬದಿಗಿಟ್ಟು ಅವನ ಮೇಲೆ ತಮ್ಮ ಸಿದ್ಧಾಂತವನ್ನು ಆರೋಪಿಸಿ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಡಚರು. ಸುಮ್ಮನೆ ನಿಮ್ಮ ನೆನಪಿಗಿರಲಿ ಅಂತ ಹೇಳುತ್ತಿದ್ದೇನೆ. ಭಾರತ್ ತೇರೆ ತುಕಡೆ ಹೋಂಗೆ ಎಂದ ಜೆ.ಎನ್.ಯು ವಿದ್ಯಾಥರ್ಿ ಕನ್ಹಯ್ಯನನ್ನು ಶಶಿ ತರೂರು ಭಗತ್ ಸಿಂಗ್ನಿಗೆ ಹೋಲಿಸಿ ಪ್ರಮಾದವೆಸಗಿದ್ದರಲ್ಲ ಅದೆಲ್ಲ ಇದೇ ಉಪದ್ವ್ಯಾಪಿತನದ ಮುಂದುವರೆದ ಭಾಗಗಳಷ್ಟೇ..

(ಲೇಖನ ಮುಂದುವರೆಯಲಿದೆ)

Comments are closed.