ವಿಭಾಗಗಳು

ಸುದ್ದಿಪತ್ರ


 

ಭಯೋತ್ಪಾದಕತೆ ಮುಕ್ತ ಕಾಶ್ಮೀರ ಇನ್ನು ಕನಸಲ್ಲ!

ಕಾಶ್ಮೀರಿಗಳದ್ದು ಎಲ್ಲರೊಂದಿಗೆ ಬೆರೆತುಹೋಗುವ ಪರಮ ಶಾಂತ ಮನೋಭಾವ. ಧಾಮರ್ಿಕವಾಗಿ ಪರಮ ಸಹಿಷ್ಣುಗಳು. ಅತಿಥಿಗಳನ್ನು ದೇವರೆಂದು ಭಾವಿಸಿ ಗೌರವಿಸುವ ಪರಂಪರೆ ಅವರದ್ದು, ಈಗಲೂ ಕೂಡ. ಇದನ್ನೇ ಕಾಶ್ಮೀರಿಯತ್ ಅಂತ ಕರೆಯೋದು ಅವರು. ಆದರೆ ಇಸ್ಲಾಂನ ಸಿದ್ಧಾಂತಗಳಿಗೆ ಎಲ್ಲವನ್ನೂ ಹಾಳು ಮಾಡುವ ಗುಣವಿದೆ. ಕಾಶ್ಮೀರದ ಸಮಸ್ಯೆಗಳಿಗೆ ಅನೇಕ ದಿಕ್ಕಿನ ಉತ್ತರವಿದೆ. ಉತ್ತರವನ್ನು ವಿಶಾಲವಾಗಿ ಯೋಚಿಸಿದರೆ ಭಾರತದ ಅನೇಕ ಸಮಸ್ಯೆಗಳಿಗೂ ಪರಿಹಾರ ದೊರೆತೀತು.

4

ವಾಸ್ತವವಾಗಿ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವ ಯಾವ ಬಯಕೆಯೂ ಪಟೇಲರಿಗಿರಲಿಲ್ಲ. ಜಿನ್ನಾನ ಪ್ರತ್ಯೇಕತೆಯ ವೈರಸ್ಗೆ ತುತ್ತಾದ ಯಾವ ಮುಸ್ಲೀಂ ಮಾನಸಿಕತೆಯೂ ಭಾರತೀಯತೆಯ ಮಾತಾಡಲಾರದೆಂದು ಸ್ಪಷ್ಟವಾಗಿ ಅವರಿಗೆ ಗೊತ್ತಿತ್ತು. ನೆಹರೂ ಕಾಶ್ಮೀರ ಭಾರತಕ್ಕೆ ಸೇರಬೇಕೆಂದು ಹಠ ಹಿಡಿದು ಕುಳಿತಿದ್ದರು. ಅದು ತಮ್ಮ ಮೂಲ ನೆಲೆ ಎಂಬ ಭ್ರಮೆಯಿಂದ! ಆದರೆ ಯಾವಾಗ ಜಿನ್ನಾ ಹಿಂದೂ ಬಹುಸಂಖ್ಯಾತವಾಗಿರುವ ಜುನಾಗಢದ ಮೇಲೆ ರಾಜ ಮುಸಲ್ಮಾನನಾಗಿದ್ದಾನೆಂಬ ಏಕೈಕ ಕಾರಣಕ್ಕೆ ಕಣ್ಣು ಹಾಕಿ ಅದನ್ನು ತನಗೆ ಬೇಕೆಂದು ಬಡಬಡಾಯಿಸಲಾರಂಭಿಸಿದನೋ ಆಗ ಪಟೇಲರು ಚುರುಕಾದರು. ಜುನಾಗಢವನ್ನೂ ಕೊಡಲಾರೆ, ಕಾಶ್ಮೀರವನ್ನು ಬಿಡಲಾರೆ ಎಂದು ಟೊಂಕ ಕಟ್ಟಿ ನಿಂತರು. ರಾಜಾ ಹರಿಸಿಂಗ್ ವಿಲೀನ ಪತ್ರಕ್ಕೆ ಸಹಿ ಹಾಕಿದ ನಂತರವಂತೂ ಕಥೆ ಬೇರೆಯೇ ಆಯ್ತು. ಯುದ್ಧ ಮಾಡಿ ಕಾಶ್ಮೀರ ಕೈಗೆತ್ತಿಕೊಳ್ಳಬೇಕೆಂದಿದ್ದ ಜಿನ್ನಾನಿಗೆ ಭಾರತ ಯುದ್ಧದ ಮೂಲಕವೇ ಉತ್ತರಿಸಿತು. ಪಾಕೀಸ್ತಾನ ಅಂಡು ಸುಟ್ಟ ಬೆಕ್ಕಿನಂತಾಗಿ ಸೋತು ಸುಣ್ಣವಾಗುವ ಹೊತ್ತಿಗೆ ನೆಹರು ವಿಶ್ವಸಂಸ್ಥೆಯತ್ತ ಅಹವಾಲನ್ನು ಒಯ್ದು ಎಲ್ಲವನ್ನೂ ಕೆಡಿಸಿಟ್ಟುಬಿಟ್ಟರು. ವಿಶ್ವಸಂಸ್ಥೆ ಎರಡು ಪರಿಹಾರ ಹೇಳಿತು. ಮೊದಲನೆಯದು ಎರಡೂ ಪಕ್ಷಗಳು ತಂತಮ್ಮ ವಶದಲ್ಲಿರುವ ಅನ್ಯರ ಭೂಭಾಗವನ್ನು ಬಿಟ್ಟು ಹಿಂದೆ ಸರಿಯಬೇಕು ಎರಡನೆಯದು ಆನಂತರ ಅಂತರಾಷ್ಟ್ರೀಯ ಪ್ರಮುಖರ ನೇತೃತ್ವದಲ್ಲಿ ಜನಮತಗಣನೆ ನಡೆಯಬೇಕು. ಭಾರತ ಅದಕ್ಕೆ ಒಪ್ಪಿ ತಾನು ವಶಪಡಿಸಿಕೊಂಡಿದ್ದ ಭೂಭಾಗದಿಂದ ಹಿಂದೆ ಸರಿಯಿತು ಆದರೆ ಪಾಕೀಸ್ತಾನ ಆಕ್ರಮಿಸಿದ ಭಾಗವನ್ನು ಬಿಟ್ಟು ಕೊಡಲಿಲ್ಲ. ಮೊದಲನೆಯ ನಿಯಮವೇ ಪೂರ್ಣಗೊಳ್ಳದ್ದರಿಂದ ಭಾರತ ಜನಮತಗಣನೆ ನಡೆಸುವ ಪ್ರಶ್ನೆಯೇ ಉದ್ಭವಿಸಲಿಲ್ಲ. ಮುಂದೆ ನೆಹರು ಕಾಶ್ಮೀರದಲ್ಲಿ ಮೂಗು ತೂರಿಸಿ ಅಬ್ದುಲ್ಲಾ ಕುಟುಂಬವನ್ನು ಅಧಿಕಾರಕ್ಕೆ ತರಲು ನಿಯಮವನ್ನೆಲ್ಲ ಗಾಳಿಗೆ ತೂರಿ ಚುನಾವಣೆ ನಡೆಸಿದರು. ರಾಜಕೀಯವಾದ ಈ ಉತ್ಪಾತದಿಂದ ಕಾಶ್ಮೀರದ ಜನತೆಯಲ್ಲಿ ಗೊಂದಲವುಂಟಾಯ್ತು. ತಮ್ಮೊಂದಿಗೆ ಷಡ್ಯಂತ್ರ ನಡೆಸಲಾಗುತ್ತಿದೆಯೆಂಬ ಅನುಮಾನ ಬಲವಾಯ್ತು. ಅಲ್ಲಿಗೆ ಪ್ರತ್ಯೇಕತೆಯ ಬೀಜ ಮೊಳಕೆಯೊಡೆದಿತ್ತು.

ಕಶ್ಯಪರಿಂದ ನಿಮರ್ಾಣವಾದ ಭೂಪ್ರದೇಶವಿದು. ಸರ್ವಜ್ಞ ಪೀಠದ ಸ್ಥಾನ. ವೇದಗಳು ಉಗಮಗೊಂಡಿದ್ದೂ ಇಲ್ಲೇ ಅಂತಾರೆ. ಬಹಳ ಹಿಂದಿನಿಂದಲೂ ಅದಕ್ಕೆ ಗೌರವ ಕೊಟ್ಟುಕೊಂಡೇ ಬರಲಾಗಿದೆ. ಆಚರಣೆಯ ವಿಚಾರಕ್ಕೆ ಬಂದರೆ ಶೈವ ಪರಂಪರೆಯ ಕೇಂದ್ರವಾಗಿತ್ತು ಕಾಶ್ಮೀರ. ಆನಂತರ ಬುದ್ಧನ ಪ್ರಭಾವ ಬಲು ಜೋರಾಗಿಯೇ ಆಯಿತು. ಇರಾನಿನಿಂದ ಬಂದ ಸೂಫಿಗಳು ಇಸ್ಲಾಂನ್ನು ಹರಡಿಸಲು ಶುರು ಮಾಡಿದರು. ಮೊಗಲರು ಇದನ್ನು ಮೊದಲ ಬಾರಿಗೆ ತಮ್ಮ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ ನಂತರ ಇಸ್ಲಾಂ ವ್ಯಾಪಕವಾಗಿ ಹಬ್ಬಲಾರಂಭಿಸಿತು. ಆಮೇಲೆ ಅಫಘನ್ರು ಇದನ್ನು ತಮ್ಮ ತೆಕ್ಕೆಗೆಳೆದುಕೊಂಡರು. ಆನಂತರ ಸಿಖರು ಅಫಘನ್ರಿಂದ ಕಸಿದರು. ಮುಂದೆ ಬ್ರಿಟಿಷರು ಇದರ ಮೇಲೆ ಪ್ರಭುತ್ವ ಸ್ಥಾಪಿಸಿ ಸಿಖರೊಡನೆ ಕಾದಾಡಲು ಸಹಕಾರಿಯಾಗುವರೆಂಬ ಕಾರಣಕ್ಕೆ ಡೋಗ್ರಾಗಳ ಕೈಲಿ ಇದನ್ನಿಟ್ಟರು. ಸ್ವಾತಂತ್ರ್ಯದ ಕಾಲಕ್ಕೆ ಇದು ಡೋಗ್ರಾಗಳ ಕೈಲೇ ಇತ್ತು.

ಇದ್ಯಾವುದರಿಂದಲೂ ಕಾಶ್ಮೀರಿಗಳು ತಲೆ ಕೆಡಿಸಿಕೊಂಡವರಲ್ಲ. ಅವರದ್ದು ಎಲ್ಲರೊಂದಿಗೆ ಬೆರೆತುಹೋಗುವ ಪರಮ ಶಾಂತ ಮನೋಭಾವ. ಧಾಮರ್ಿಕವಾಗಿ ಪರಮ ಸಹಿಷ್ಣುಗಳು. ಅತಿಥಿಗಳನ್ನು ದೇವರೆಂದು ಭಾವಿಸಿ ಗೌರವಿಸುವ ಪರಂಪರೆ ಅವರದ್ದು, ಈಗಲೂ ಕೂಡ. ಇದನ್ನೇ ಕಾಶ್ಮೀರಿಯತ್ ಅಂತ ಕರೆಯೋದು ಅವರು. ಆದರೆ ಇಸ್ಲಾಂನ ಸಿದ್ಧಾಂತಗಳಿಗೆ ಎಲ್ಲವನ್ನೂ ಹಾಳು ಮಾಡುವ ಗುಣವಿದೆ. 90ರ ದಶಕದಲ್ಲಿ ಶುರುವಾದ ಜಿಹಾದಿ ಉನ್ಮತ್ತತೆ ಕಾಶ್ಮೀರಿಯತ್ನ್ನು ಹಾಳುಗೆಡವಿ ಬಿಸಾಡಿತು. ಪಂಡಿತರ ಮಾರಣಹೋಮ ನಡೆದು ಸೌಮ್ಯವಾದ ಕಾಶ್ಮೀರ ಉರಿಯುವ ಅಗ್ನಿಕುಂಡವಾಯ್ತು. ಆಮೇಲಿನ ಕಾಶ್ಮೀರ ಬೇರೆಯೇ ಆಯ್ತು. ಆಳುವ ಸಕರ್ಾರಗಳೂ ಸಮಸ್ಯೆಯನ್ನು ಗ್ರಹಿಸಿ ಪರಿಹರಿಸುವಲ್ಲಿ ಸೋತವು. ಪಾಕೀಸ್ತಾನದ ಪ್ರಚೋದನೆಯನ್ನು ಎಲ್ಲರೂ ಗುರುತಿಸಿದ್ದರಾದರೂ ಅದನ್ನು ನಿವಾರಿಸುವ ಆಲೋಚನೆ ಮಾಡಲಿಲ್ಲ. ಪ್ರತ್ಯೇಕತಾವಾದಿಗಳಿಗೆ ಹಣ ಕೊಡುತ್ತಿರುವುದು ಪಾಕಿಸ್ತಾನವೆಂದು ಗೊತ್ತಿದ್ದಾಗಲೂ ಅವರೊಂದಿಗೆ ಮಾತುಕತೆಗೆ ವೇದಿಕೆ ಕಲ್ಪಿಸಲಾಯಿತು. ಅವರನ್ನು ದೆಹಲಿಗೆ ಕರೆಸಿ ವೈಭವದ ಆತಿಥ್ಯ ನೀಡಲಾಯ್ತು. ಭಾರತದ ಪರವಾಗಿ ನಿಂತ ಕಾಶ್ಮೀರಿಗಳಿಗೆ ಸಿಗದ ಗೌರವ ಪಾಕಿಸ್ತಾನದ ಅಂಡು ನೆಕ್ಕುವವರಿಗೆ ದಕ್ಕಿತು. ಸಹಜವಾಗಿಯೇ ಪಾಕೀಸ್ತಾನ ಪ್ರೇಮ ಉದ್ದಿಮೆಯಾಯ್ತು. ಪಾಕೀಸ್ತಾನ ಜéಿಂದಾಬಾದ್ ಎಂದಾಗ, ಪಾಕೀ ಬಾವುಟಗಳು ಹಾರಾಡಿದಾಗಲೆಲ್ಲ ಕೇಂದ್ರ ಸಕರ್ಾರಗಳು ಕಾಶ್ಮೀರವನ್ನು ಒಲಿಸಿಕೊಳ್ಳಲು ಅಲ್ಲಿನ ಸಕರ್ಾರಕ್ಕೆ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಲಾರಂಭಿಸಿದವು. ಪತನದ ಮೊದಲ ಹೆಜ್ಜೆಗಳು ಇವೆಲ್ಲ. ಸ್ವತಃ ವಾಜಪೇಯಿಯವರೂ ಈ ಸಮಸ್ಯೆಗೆ ಭಿನ್ನವಾಗಿ ಆಲೋಚಿಸಲಿಲ್ಲ. ಅವರು ಪ್ರೇಮ ಮಾರ್ಗವನ್ನು ಅನುಸರಿಸುವ ಪ್ರಯತ್ನದಲ್ಲಿದ್ದರು. ಪಾಕೀಸ್ತಾನದೊಂದಿಗೆ ಶಾಂತಿಯ ಹಸ್ತ ಚಾಚಿ ಇಬ್ಬರೂ ಗೆಲ್ಲುವ ಹೊಸ ಮಾರ್ಗ ಶೋಧಿಸಿ ಕೊಟ್ಟಿದ್ದರು. ಪುಂಡ ಪಾಕ್ ಒಪ್ಪಿಕೊಳ್ಳಲಿಲ್ಲ.

5

ಕಾಶ್ಮೀರದ ಸಮಸ್ಯೆಗಳಿಗೆ ಅನೇಕ ದಿಕ್ಕಿನ ಉತ್ತರವಿದೆ. ಉತ್ತರವನ್ನು ವಿಶಾಲವಾಗಿ ಯೋಚಿಸಿದರೆ ಭಾರತದ ಅನೇಕ ಸಮಸ್ಯೆಗಳಿಗೂ ಪರಿಹಾರ ದೊರೆತೀತು. ಹಾಗೇ ಸುಮ್ಮನೆ ಅವಲೋಕನಕ್ಕೆ ಇರಲಿ ಅಂತ ಹೇಳುತ್ತಿದ್ದೇನೆ, ಕಾಶ್ಮೀರದ ಯಾವ್ಯಾವ ಭಾಗ ಯಾವ್ಯಾವ ರಾಷ್ಟ್ರದ ಬಳಿ ಇದೆಯೋ ಅದನ್ನೇ ಅಂತರಾಷ್ಟ್ರೀಯ ಗಡಿ ಮಾಡಿಬಿಡೋಣ. ಕಾಶ್ಮೀರದ ಪ್ರತ್ಯೇಕತಾವಾದಿ ಕಲ್ಲೆಸೆತಗಾರರೂ ಸೇರಿದಂತೆ ಯಾರ್ಯಾರಿಗೆ ಭಾರತದಲ್ಲಿರುವ ಮನಸಿಲ್ಲವೋ ಅವರನ್ನೆಲ್ಲ ಗಡಿಯಾಚೆ ಕಳಿಸಿಬಿಡೋಣ. ಇದರಲ್ಲಿ ಪಾಕೀಸ್ತಾನವನ್ನು ಸ್ವರ್ಗದಂತೆ ಕಂಡವರೂ, ಅವರ ಪರವಾಗಿ ಟೀವಿಯಲ್ಲಿ ಗಂಟೆಗಟ್ಟಲೆ ವಾದ ಮಾಡಿದ ಪತ್ರಕರ್ತರೂ ಇರಲಿ. ಇಷ್ಟೂ ಜನ ಪಾಕೀ ಪ್ರೇಮಿಗಳು ಒಮ್ಮೆ ಖಾಲಿಯಾದ ಮೇಲೆ ಭಾರತವೇ ನೆಮ್ಮದಿಯ ತಾಣವಾಗಿಬಿಡುತ್ತದೆ. ಅಲ್ಲಿಂದಾಚೆಗೆ ಪ್ರತ್ಯೇಕತೆಯ ಮಾತಾಡಿದವರನ್ನು ಮುಲಾಜಿಲ್ಲದೇ ಸಂಪೂರ್ಣ ದಮನ ಮಾಡಿದರಾಯ್ತು.

ಇದಕ್ಕೆ ಒಪ್ಪಲಿಲ್ಲವೆಂದರೆ ಮತ್ತೊಂದು ಮಾರ್ಗವಿದೆ. ಕಾಶ್ಮೀರವನ್ನು ಭಾರತ ಪಾಕೀಸ್ತಾನಕ್ಕೆ ಗೌರವದಿಂದಲೇ ಹಸ್ತಾಂತರಿಸಿಬಿಡಬೇಕು. ಆದರೆ ಹಾಗೆ ಕೊಟ್ಟುಬಿಡುವ ಮುನ್ನ ಅಂಬೇಡ್ಕರರು ತಮ್ಮ ಥಾಟ್ಸ್ ಆನ್ ಪಾಕೀಸ್ತಾನದಲ್ಲಿ ಹೇಳಿರುವಂತೆ ಇಲ್ಲಿನ ಎಲ್ಲ ಮುಸಲ್ಮಾನರನ್ನು ಅವರು ಸ್ವೀಕರಿಸಬೇಕು ಹಾಗೂ ಅಲ್ಲಿನ ಎಲ್ಲ ಹಿಂದೂಗಳನ್ನು ಭಾರತ ಒಪ್ಪಿಕೊಳ್ಳಬೇಕು. ಹಾಗೆ ಮತ್ತೊಂದು ರಾಷ್ಟ್ರಕ್ಕೆ ಹೋಗಲೊಪ್ಪದ ಆಯಾ ಪ್ರಜೆಗಳು ದುಬೈ, ಸೌದಿ, ಅಬುದಾಬಿಗಳಲ್ಲೆಲ್ಲ ಇರುವಂತೆ ಶಾಶ್ವತ ವಿಸಾದಡಿಯಲ್ಲಿ ಇಲ್ಲಿರಬೇಕು. ಅವರಿಗೆ ಮತ ಚಲಾವಣೆಯ ಅಧಿಕಾರವಿರಲಾರದು ಮತ್ತು ಸಕರ್ಾರೀ ನೌಕರಿಯನ್ನು ಪಡೆಯಲಾಗದು. ಹೀಗೆ ಜನರನ್ನು ಹಂಚಿಬಿಡುವುದರಲ್ಲಿ ಅರ್ಥವಿದೆ. ಮುಂದೊಮ್ಮೆ ಇಲ್ಲಿ ಉಳಿದವರು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಕೇರಳಗಳನ್ನೂ ಪ್ರತ್ಯೇಕ ಮಾಡಿರೆಂದು ಬೊಬ್ಬೆ ಹಾಕಿದ್ದಲ್ಲಿ ಅಚ್ಚರಿಯಿಲ್ಲ. ಅದಕ್ಕೇ 1947 ರಲ್ಲಿ ಕೈಚೆಲ್ಲಿದ ಅವಕಾಶವನ್ನು ಈಗ ಉಪಯೋಗಿಸಿಕೊಂಡರಾಯ್ತು. ಒಮ್ಮೆ ಈ ಐಡಿಯಾ ಮುಂದಿಟ್ಟು ನಾಡಿನ ಜನರನ್ನು ಕಾಶ್ಮೀರ ಯಾರಿಗೆ ಸೇರಬೇಕು ಅಂತ ಕೇಳಿ ನೋಡಿ. ಕಾಶ್ಮೀರವನ್ನು ಭಾರತ ಮಾತೆಯ ಸಿಂಧೂರವೆಂದು ಹೆಮ್ಮೆಯಿಂದ ಹೇಳುವ ಬಹುತೇಕ ಹಿಂದುಗಳು ಅದು ಪಾಕೀಸ್ತಾನಕ್ಕೆ ಸೇರಿದರೂ ಪರವಾಗಿಲ್ಲ ಅಂತಾರೆ. ಪಾಕೀಸ್ತಾನ ಜéಿಂದಾಬಾದ್ ಎನ್ನುವ ಅನೇಕ ಮುಸಲ್ಮಾನರು ಕಾಶ್ಮೀರ ಕೊಡೋದು ಬೇಡ, ನಾವೂ ಪಾಕಿಸ್ತಾನಕ್ಕೆ ಹೋಗಲಾರೆವು ಎನ್ನುತ್ತಾರೆ. ಸಮಸ್ಯೆಗೆ ಹೊಸ ಆಯಾಮ!

ಸದಾ ವಿವಾದದಲ್ಲಿರುವ ಮಾರ್ಕಂಡೇಯ ಕಾಟ್ಜು ಎರಡು ವರ್ಷಗಳ ಹಿಂದೆ ಒಂದು ಪರಿಹಾರವನ್ನು ಸೂಚಿಸಿದ್ದರು. ಪಾಕಿಸ್ತಾನ, ಬಾಂಗ್ಲಾಗಳನ್ನು ಭಾರತದಲ್ಲಿ ವಿಲೀನಗೊಳಿಸಿ ಒಂದು ಸೆಕ್ಯುಲರ್ ಸಕರ್ಾರ ಅದನ್ನು ಆಳುವಂತಾಗಬೇಕು ಅಂತ. ಆಗೆಲ್ಲ ಅವರು ಮೋದಿಯ ವಿರುದ್ಧ ಕೆಂಡ ಕಾರುತ್ತಿದ್ದರಾದ್ದರಿಂದ ಜಾತ್ಯತೀತ ಸಕರ್ಾರವೆಂದು ಒತ್ತಿ ಹೇಳಿದ್ದರು. ಆದರೆ ಭಾರತ ಜೀಣರ್ಿಸಿಕೊಳ್ಳಲು ಸಿದ್ಧವಿದ್ದರೆ ಕಾಶ್ಮೀರ ಸಮಸ್ಯೆಯ ಕೊನೆಯ ಪರಿಹಾರ ಇದೇ!

6

ಇವೆಲ್ಲಕ್ಕಿಂತಲೂ ಭಿನ್ನವಾಗಿ ಮೋದಿ ಆಲೋಚಿಸುತ್ತಿದ್ದಾರೆ. ಆರಂಭದಲ್ಲಿ ವಾಜಪೇಯಿಯವರ ಚಪ್ಪಲಿಗಳಲ್ಲಿಯೇ ಕಾಲು ತೂರಿಸಿದ ಮೋದಿ, ಪಾಕಿಸ್ತಾನದೊಂದಿಗೆ ಪ್ರೇಮದಿಂದಲೇ ನಡೆದು ಕೊಂಡರು. ಪ್ರವಾಹಕ್ಕೆ ತುತ್ತಾದ ಕಾಶ್ಮೀರಕ್ಕೆ ಖುದ್ದು ಭೇಟಿ ನೀಡಿ ಅವರೊಂದಿಗೆ ನಿಂತರು. ಕಾಶ್ಮೀರಿಯತ್ ಅಷ್ಟರೊಳಗೆ ಜಾಗೃತವಾಗಿ ಕಾಶ್ಮೀರ ಬದಲಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಪ್ರತ್ಯೇಕತಾವಾದಿಗಳು ಮತ್ತೆ ಮೆರೆದಾಡಿದರು. ಅದಕ್ಕೆ ಸರಿಯಾಗಿ ಮೋದಿಯವರೂ ತಮ್ಮ ವರಸೆಯನ್ನು ಬದಲಾಯಿಸಿದರು. ಕತ್ತಿಗೆ ಕತ್ತಿಯೇ ಉತ್ತರವೆಂಬುದನ್ನು ಆಚರಣೆಗೆ ತರಲು ನಿಶ್ಚಯಿಸಲಾಯಿತು. ಮೊದಲಿಗೆ ಪಾಕೀಸ್ತಾನವನ್ನು ಸಜರ್ಿಕಲ್ ದಾಳಿಯಿಂದ ಗಾಬರಿಗೆ ದೂಡಲಾಯ್ತು. ಹಾಗಂತ ಮಾಡಿದ್ದನ್ನು ಮುಚ್ಚಿಡದೇ, ಜಗತ್ತಿನ ಮುಂದೆ ಭರ್ಜರಿಯಾಗಿಯೇ ಕೊಚ್ಚಿಕೊಳ್ಳಲಾಯ್ತು. ಇದು ಭಾರತದ ಬದಲಾದ ಮನೋಗತವನ್ನು ಬಿಚ್ಚಿಡುವಲ್ಲಿ ಸಹಕಾರಿಯಾಯ್ತು. ಈ ದಾಳಿಗೆ ಜಗತ್ತಿನ ಯಾವ ರಾಷ್ಟ್ರಗಳೂ ವಿರೋಧಿಸಿ ಪ್ರತಿಕ್ರಿಯಿಸದಂತೆ ರಾಜತಾಂತ್ರಿಕವಾಗಿ ಸಂಭಾಳಿಸಲಾಯ್ತು. ಅದಕ್ಕಾಗಿ ಕಳೆದ ಮೂರು ವರ್ಷಗಳಿಂದ ಕಂಡ ಕಂಡ ರಾಷ್ಟ್ರಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ವ್ಯವಸ್ಥಿತವಾಗಿ ಹೇಳಿಕೆ ಕೊಡುತ್ತ ಬಂದಿದ್ದು ಸಹಕಾರಿಯಾಗಿತ್ತು. ಬುರ್ಹನ್ ವಾನಿ ಸಾಮಾಜಿಕ ಜಾಲ ತಾಣಗಳಲ್ಲಿ ಮುಕ್ತವಾಗಿ ಹರಿಬಿಟ್ಟ ಗ್ರೂಪ್ ಫೋಟೋ ಅನುಸರಿಸಿದ ಸೈನ್ಯ ಅವನನ್ನೂ ಸೇರಿದಂತೆ ಅದರಲ್ಲಿದ್ದ ಒಬ್ಬೊಬ್ಬರನ್ನು ಯಮಪುರಿಗೆ ಅಟ್ಟುತ್ತ ಬಂತು. ಸದ್ಯದ ವರದಿಯ ಪ್ರಕಾರ ಈ ಗುಂಪಿನಲ್ಲಿದ್ದ ಹನ್ನೊಂದರಲ್ಲಿ ಎಂಟು ಜನ ಅದಾಗಲೇ ಸೈನ್ಯದ ಗುಂಡಿಗೆ ಬಲಿಯಾಗಿಯಾಗಿಬಿಟ್ಟಿದ್ದಾರೆ.

ಭಯೋತ್ಪಾಕದರನ್ನು ಕೊಂದರೇನು? ಚೀನಾ ಬೆಂಬಲವಿರುವವರೆಗೂ ಅವರು ಮೆರೆಯುತ್ತಲೇ ಇರುತ್ತಾರೆ. ಹಾಗೆಂದೇ ಮೋದಿ ತವಾಂಗ್ನಲ್ಲಿ ಚೀನಾವನ್ನು ಎಡತಾಕಿದರು. ಡೋಕ್ಲಾಂನಲ್ಲಿ ಚೀನಾ ಕಾಲು ಕೆರೆದುಕೊಂಡು ಕದನಕ್ಕೆ ಬಂದಾಗ ಅಲ್ಲಿ ಬಲವಾಗಿ ನಿಂತು ಚೀನಾ ಕಾಶ್ಮೀರದಲ್ಲಿ ತಲೆ ಹಾಕದಂತೆ ಸೀಮಿತಗೊಳಿಸಿದರು. ಇತ್ತ ಪಾಕ್ ಗಡಿಯಲ್ಲಿ ಬಲವಾದ ಪಹರೆ ಹಾಕಿ ಚಳಿಗಾಲ ಶುರುವಾಗುವ ಮುನ್ನ ನುಸುಳಲು ಸಿದ್ಧವಾಗಿದ್ದ ಭಯೋತ್ಪಾದಕ ಪಡೆಯ ಆಸೆಗೆ ತಣ್ಣೀರೆರೆಚಿದರು. ಆಪರೇಷನ್ ಆಲ್ ಔಟ್ಗೆ ಹಸಿರು ನಿಶಾನೆ ತೋರಿ ಒಳಗೆ ಅಡಗಿ ಕುಳಿತಿದ್ದ ಉಗ್ರರ ಮೇಲೆ ಮುಗಿಬೀಳುವಂತೆ ಸೇನೆಗೆ ಆದೇಶಿಸಿದರು. ಈಗ ನೋಡಿ. ಅತ್ತ ಪಾಕೀಸ್ತಾನಕ್ಕೆ ಚೀನಾ ಬೆಂಬಲ ನಿಂತಿದೆ, ಪಾಕಿನ ಬೆಂಬಲ ಇಲ್ಲಿ ಅಡಗಿಕುಳಿತ ಉಗ್ರರಿಗೆ ಇಲ್ಲವಾಗಿದೆ. ಪರಿಸ್ಥಿತಿ ಹೇಗಿದೆಯೆಂದರೆ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಕಾಶ್ಮೀರದಲ್ಲಿ ಮೆರೆದಾಡುತ್ತಿದ್ದ ಭಯೋತ್ಪಾದಕರೆಲ್ಲ ಪ್ರಾಣವುಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಕುರಿತಂತೆ ಮೇ ತಿಂಗಳಲ್ಲಿ ರಾಜನಾಥ್ ಸಿಂಗ್ ಪತ್ರಿಕಾ ಗೋಷ್ಠಿ ನಡೆಸಿ ಕಾಶ್ಮೀರದ ಸಮಸ್ಯೆಗೆ ನಾವೊಂದು ಶಾಶ್ವತ ಪರಿಹಾರ ಹುಡುಕಿದ್ದೇವೆ ಎಂದಿದ್ದರು. ಪತ್ರಕರ್ತರು ತಿರುಗಿಸಿ-ಮುರುಗಿಸಿ ಅದೇನೆಂದು ಕೇಳಿದರೂ ಗೃಹ ಸಚಿವರು ಬಾಯ್ಬಿಡಲಿಲ್ಲ. ಯಾರಿಗೆ ಎಷ್ಟು ಹೇಳಬೇಕು ಅಷ್ಟು ಸುದ್ದಿ ಮುಟ್ಟಿತ್ತು. ಮರು ದಿನವೇ ಉರಿದೆದ್ದ ಕಾಂಗ್ರೆಸ್ಸು ಕಾಶ್ಮೀರದಲ್ಲಿ ಎಡವಟ್ಟಾದರೆ ಸುಮ್ಮನಿರಲಾರೆವೆಂದು ಬೊಬ್ಬಿಟ್ಟಿತು.

7

ಮೋದಿ ಸಕರ್ಾರ ಈಗ ಒಂದು ಹೆಜ್ಜೆ ಮುಂದೆ ಹೋಗಿ ಭಯೋತ್ಪಾದಕರಿಗೆ ಹಣ ನೀಡುವ ಸಂಸ್ಥೆ ಮತ್ತು ವ್ಯಕ್ತಿಗಳ ಮೇಲೆ ನಿಗಾ ಇರಿಸಿತು. ಡೀಮಾನಿಟೈಜéೇಷನ್ ನಂತರ ಕುಗ್ಗಿಹೋಗಿದ್ದ ಭಯೋತ್ಪಾದಕರು ಬ್ಯಾಂಕ್ ಲೂಟಿ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿ ಚುರುಕಾಯ್ತು. ಜೂನ್ ತಿಂಗಳಲ್ಲಿ ಇಪ್ಪತ್ತಾರು ಕಡೆ ನಡೆದ ಐಟಿ ದಾಳಿಯಲ್ಲಿ ಅನೇಕ ಮಹತ್ವದ ದಾಖಲೆಯನ್ನು ವಶ ಪಡಿಸಿಕೊಂಡಿತು. ಪ್ರತ್ಯೇಕತಾವಾದಿಗಳಿಗೆ ಹರಿದುಬರುತ್ತಿದ್ದ್ ಹಣದ ಮೂಲಕ್ಕೇ ಕೊಕ್ಕೆ ಹಾಕಿತು. ತೀರಾ ನಾಲ್ಕೈದು ದಿನಗಳ ಹಿಂದೆ ಎನ್ಐಏ ಝಹೂರ್ ಅಹ್ಮದ್ ಶಾಹ್ ಮನೆಯ ಮೇಲೆ ದಾಳಿ ನಡೆಸಿತು. ಆತ ಟ್ರೈಸನ್ ಎಂಬ ಕಂಪನಿ ನಡೆಸುತ್ತ ಆ ಮೂಲಕ ಐಎಸ್ಐನ ಹಣವನ್ನು ಸೂಕ್ತವಾಗಿ ಭಾರತದಲ್ಲಿ ವಿಲೇವಾರಿ ಮಾಡುವ ಚಟುವಟಿಕೆ ಮಾಡುತ್ತಿದ್ದ. ಹುರಿಯತ್ನ ನಾಯಕನಾಗಿದ್ದ ಅಬ್ದುಲ್ ಗನಿ ಲೋನ್ನ ಕಾರು ಚಾಲಕನಾಗಿದ್ದಾಗಲೇ ಐಎಸ್ಐಗಳೊಂದಿಗೆ ಬಲವಾದ ಸಂಪರ್ಕ ಸಾಧಿಸಿದ್ದನಂತೆ ಆತ. ಪಾಕೀ ಸೈನ್ಯದ ನಿವೃತ್ತ ಅಧಿಕಾರಿಗಳನ್ನು ಕೆಲಸಕ್ಕಿಟ್ಟುಕೊಂಡು ಭಯೋತ್ಪಾದಕರನ್ನು ಒಳನುಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ. ಈ ಕಾರಣಕ್ಕೇ ಎರಡು ಬಾರಿ ಬಂಧನಕ್ಕೊಳಗಾಗಿ ಬಿಡುಗಡೆಯೂ ಆಗಿದ್ದ. ಭಯೋತ್ಪಾದಕರಿಗೆ ಒಳನುಸುಳಲು, ಇಲ್ಲಿಗೆ ಬಂದ ಮೇಲೆ ಅವರ ಕಷ್ಟ ನಷ್ಟಗಳನ್ನು ಪೂರೈಸಲು ಇವನೇ ಮಹತ್ವದ ಕೊಂಡಿ. ಗಿಲಾನಿಯ ಆಪ್ತ ಕೂಡ. ಆತ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಅವನು ಬಾಯ್ಬಿಡುವ ಹೆಸರುಗಳು ಉತ್ಪಾತ ಸೃಷ್ಟಿಸಲಿವೆ. ಅನೇಕರು ಬಟಾಬಯಲಾಗಲಿದ್ದಾರೆ. ಈ ರೀತಿಯ ಒಂದಷ್ಟು ಟ್ರಂಪ್ ಕಾಡರ್್ಗಳನ್ನಿಟ್ಟುಕೊಂಡೇ ಮೋದಿ ಮೆಹಬೂಬಾ ಮಫ್ತಿಯಂಥವರನ್ನೂ ತೆಪ್ಪಗೆ ಕೂರಿಸಿರೋದು.

ಒಂದಂತೂ ನಿಜ. ಬರಲಿರುವ ಡಿಸೆಂಬರ್ನೊಳಗೆ ಕಾಶ್ಮೀರದ ಸಮಸ್ಯೆಗೊಂದು ಶಾಶ್ವತ ಪರಿಹಾರ ಪಕ್ಕಾ! ಅಲ್ಲಿಯವರೆಗೂ ಡೋಕ್ಲಾಂನ ಗಲಾಟೆ ನಿಲ್ಲುವುದೂ ಅನುಮಾನ!!

Comments are closed.