ವಿಭಾಗಗಳು

ಸುದ್ದಿಪತ್ರ


 

ಭಾರತದಿಂದ ಹೊರಟ ಅಲೆಕ್ಸಾಂಡರ್ ಅಕ್ಷರಶಃ ಬೈರಾಗಿಯಾಗಿದ್ದ!

ಬ್ರಾಹ್ಮಣರ ಜನಪದವೂ ಹೀಗೆಯೇ ಗ್ರೀಕರ ಕತ್ತಿಗೆ ಆಹುತಿಯಾಯ್ತು. ಹಾಗೆ ನೋಡಿದರೆ ಅಲೆಗ್ಸಾಂಡರ್ ಆದಿಯಾಗಿ ಈ ದೇಶದ ಮೇಲೆ ಆಕ್ರಮಣ ಮಾಡಿದ ಪ್ರತಿಯೊಬ್ಬರಿಗೂ ಬ್ರಾಹ್ಮಣರನ್ನು ಕಂಡರೆ ಕಂಠಮಟ್ಟ ದ್ವೇಷ. ಈ ಬ್ರಾಹ್ಮಣರು ಸಂತರಂತೆ, ತತ್ವ್ತಜ್ಞಾನಿಗಳಂತೆ ಊರೂರು ಅಲೆದಾಡುತ್ತಿದ್ದರು. ಎ.ಎ ಸ್ಮಿತ್ ತಮ್ಮ ಲೈಫ್ ಆಫ್ ಅಲೆಗ್ಸಾಂಡರ್ನಲ್ಲಿ, ‘ಈ ಬ್ರಾಹ್ಮಣರು ಅಲೆಗ್ಸಾಂಡರ್ನನ್ನು ಹೈರಾಣು ಮಾಡಿಬಿಟ್ಟಿದ್ದರು. ಅಲೆಗ್ಸಾಂಡರ್ನ ಭಯದಿಂದ ಯುದ್ಧ ತ್ಯಾಗ ಮಾಡಿದ್ದ ರಾಜರಿಗೆ ಪ್ರೇರಣೆ ಕೊಟ್ಟು ಅವನ ವಿರುದ್ಧ ಪಿತೂರಿ ನಡೆಸುವಂತೆ ಮಾಡುತ್ತಿದ್ದರು. ಅಂತಹ ಅನೇಕರನ್ನು ಹುಡುಹುಡುಕಿ ಆತ ನೇಣಿಗೇರಿಸಿದ್ದ’. ಗ್ರೀಕ್ನ ಸಾಮಾನ್ಯ ನಗರವೊಂದಕ್ಕೆ ಸಮವಾಗಿದ್ದ ಈ ಜನಪದವೂ ಆ ಬೃಹತ್ ಸೇನೆಯೆದುರು ತಡೆಗೋಡೆಯಾಗಿ ನಿಂತು ಕೊನೆಯುಸಿರಿನವರೆಗೆ ಕಾದಾಡಿತು.

Alexander-the-Great-s-Tomb-May-Have-Been-Discovered-in-Greece-377910-2
‘ಅಲೆಗ್ಸಾಂಡರ್ ಜಗದ್ವಿಜಯಿಯಾಗುವ ಕನಸು ಕಂಡಿರದಿದ್ದರೆ ಸಂತನಾಗಿರುತ್ತಿದ್ದ’ ಎನ್ನುತ್ತಾರೆ ಅನೇಕರು! ಬಹುಶಃ ಗುರು ಅರಿಸ್ಟಾಟಲ್ರ ಪ್ರಭಾವ ಇದ್ದಿರಬಹುದು. ಆದರೆ ಅವನ ಯುದ್ಧಾಕಾಂಕ್ಷೆಯ ವಾಂಛೆಯ ನಡುವೆ ಆತ್ಮ ನಿರೀಕ್ಷಣೆಗೆ ಮಸಿ ಹಿಡಿದಿತ್ತು. ಭಾರತಕ್ಕೆ ಕಾಲಿಟ್ಟೊಡನೆ ಆತನ ಅಂತಮರ್ುಖತೆ ಜಾಗೃತವಾಗಿರಬೇಕು. ತಕ್ಷಶಿಲೆಯಲ್ಲಿ ಸ್ವಲ್ಪ ದಿನಗಳ ಕಾಲ ತಂಗಿದ್ದಾಗ ಆತ ಅನೇಕ ಸಾಧುಗಳನ್ನು ಭೇಟಿಯಾಗಿದ್ದ. ಒಬ್ಬ ಸಾಧುವಂತೂ ತನ್ನೆದುರಿಗೆ ನಿಂತು ಅಲೆಗ್ಸಾಂಡರ್ ಜಗತ್ತಿನ ಸಮಸ್ತ ಐಶ್ವರ್ಯದ ಒಡೆಯನಾಗುವ ತನ್ನ ಬಯಕೆಯನ್ನು ಮುಂದಿರಿಸುತ್ತಿದ್ದರೆ, ‘ಅದರಿಂದ ನನಗೇನೂ ಆಗಬೇಕಿಲ್ಲ. ಮೊದಲು ನನ್ನ ಮತ್ತು ಸೂರ್ಯನ ನಡುವಿಂದ ಪಕ್ಕಕ್ಕೆ ಸರಿ’ ಎಂದನಂತೆ ನಿವರ್ಿಕಾರವಾಗಿ. ಜಗತ್ತಿನ ಚಕ್ರವತರ್ಿಯೊಬ್ಬನಿಂದ ತನಗೆ ಬೇಡಲು ಏನೂ ಇಲ್ಲ ಎಂಬಂತಹ ಭಾವನೆ ಹೊಂದಿರುವ ಇಲ್ಲಿನ ಸಂತರು ಅವನ ತಲೆ ಸಾಕಷ್ಟು ಕೆಡಿಸಿರಲು ಸಾಕು!
ಗ್ರೀಕರು ಮತ್ತು ನೈಲ್ ನದಿಯ ಸಂಬಂಧದ ಕುರಿತಂತೆ ಹೇಳಿದಾಗ ಅನೇಕರು ಅಚ್ಚರಿಯಿಂದ ಹುಬ್ಬೇರಿಸುತ್ತಾರೆ. ಅಲೆಗ್ಸಾಂಡರ್ ನೈಲ್ನಲ್ಲಿ ಕಂಡಂತಹ ಮೊಸಳೆಗಳನ್ನು ಸಿಂಧು ನದಿಯಲ್ಲಿ ಕಂಡು ರೋಮಾಂಚಿತನಾಗಿಬಿಟ್ಟಿದ್ದ. ಈಜಿಪ್ಟ್ನ ದಂಡೆಗಳಲ್ಲಿ ಕಂಡ ಕಮಲಗಳನ್ನು ಇಲ್ಲಿ ಕಂಡಾಗಲಂತೂ ಅವನ ಭಾವನೆಗಳು ಗರಿಗೆದರಿಬಿಟ್ಟಿದ್ದವು. ತನ್ನ ತಾಯಿಗೆ ಇಲ್ಲಿಂದ ಬರೆದ ಪತ್ರವೊಂದರಲ್ಲಿ ‘ನೈಲ್ ನದಿಯ ಸೆಲೆಯನ್ನು ಹೊಂದಿರುವ ಭೂಭಾಗವನ್ನು ಸಂದಶರ್ಿಸಿದೆ’ ಎಂದು ಹೆಮ್ಮೆಪಟ್ಟಿದ್ದನ್ನು ಎ ಹಿಸ್ಟರಿ ಆಫ್ ಗ್ರೀಸ್ನಲ್ಲಿ ಕೆನೋಪ್ ತಿಲರ್್ವಾಲ್ ಉಲ್ಲೇಖಿಸುತ್ತಾರೆ. ಭಾರತದಿಂದ ಇಥಿಯೋಪಿಯಾದೆಡೆ ಹರಿಯುವಾಗ ಅದು ವಿಸ್ತಾರ ಮರುಭೂಮಿಯನ್ನು ಹಾದು ತನ್ನ ಮೂಲ ಹೆಸರನ್ನು ಕಳೆದುಕೊಂಡಿರಬೇಕು ಎಂದೂ ಆತ ಭಾವಿಸಿದ್ದ.
ಭಾರತ ಅಲೆಗ್ಸಾಂಡರನಿಗೆ ನಿಧಿಯ ಗಣಿಯಾಗಿ ಕಂಡಿತ್ತು. ಒಂದೆಡೆ ತನ್ನೂರಿನಲ್ಲಿ ಕೇಳಿದ ಕಥೆಗಳಿಗಿಂತ ಹೆಚ್ಚಿನ ವೈಭವವಿತ್ತು. ಗುರುಗಳು ಹೇಳಿದಂತೆ ಸಂತರ ದರ್ಶನವಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ತಾನು ಊಹಿಸಲೂ ಆಗದಿದ್ದ ಕ್ಷಾತ್ರತೇಜದ ಪುರುಷಸಿಂಹರನ್ನು ಆತ ಕಂಡಿದ್ದ. ಪುರೂರವನೊಂದಿಗಿನ ಕಾದಾಟ ಗ್ರೀಕರನ್ನು ಹೈರಾಣು ಮಾಡಿತ್ತು. ಕಾಲಿಟ್ಟೆಡೆಯೆಲ್ಲ ಪ್ರಬಲ ಪ್ರತಿರೋಧವನ್ನು ಕಂಡಾಗ ಎಲ್ಲರ ಎದೆಯೊಡೆದಿತ್ತು. ಇಷ್ಟಕ್ಕೂ ಅಲೆಗ್ಸಾಂಡರನ ಸೇನೆ ಇದುವರೆಗೂ ಕಾದಾಡಿದ್ದು ಸವರ್ೆಸಾಮಾನ್ಯವಾದ, ಗ್ರೀಕ್ ಸೇನೆಗೆ ಸಂಖ್ಯೆಯಲ್ಲಿ ಸಮವೇ ಅಲ್ಲದ ಗಣರಾಜ್ಯಗಳೊಂದಿಗೆ. ನಿಜವಾದ ಯುದ್ಧ ಮಗಧ ಸಾಮ್ರಾಜ್ಯದೊಂದಿಗೆ ಇನ್ನು ಶುರುವಾಗಬೇಕಿತ್ತು. ಅವರ ಬಳಿಯಿರುವ ಸೇನೆ, ಆನೆಗಳು, ಕುದುರೆಗಳೆಲ್ಲವೂ ಗ್ರೀಕ್ ಸೇನೆಗಿಂತಲೂ ಸಾಕಷ್ಟು ಪಟ್ಟು ಹೆಚ್ಚಿಗಿದ್ದವು. ಅವರನ್ನೆದುರಿಸಿ ಗೆಲ್ಲುವುದಿರಲಿ ಮರಳಿ ಊರು ಸೇರುವುದು ಕಷ್ಟವೆಂದರಿತೇ ಗ್ರೀಕ್ ಸೇನೆ ಪ್ರತಿಭಟಿಸಿತು. ಮರಳಿ ಹೊರಡಲು ನಿಶ್ಚಯಿಸಿತು. ಈ ಕಾರಣಕ್ಕಾಗಿ ಅಲೆಗ್ಸಾಂಡರ್ ಜಗತ್ತನ್ನು ಗೆಲ್ಲುವ ಕನಸ್ಸಿಗೆ ಭಾರತದಲ್ಲಿ ಎಳ್ಳುನೀರು ಬಿಟ್ಟು ಹೊರಡಬೇಕಾಯಿತು.
ರಷ್ಯಾದ ಮಾರ್ಷಲ್ ಜುಖೋವ್ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಮಾತನಾಡುತ್ತಾ ‘ರಷ್ಯಾದಲ್ಲಿ ನೆಪೋಲಿಯನ್ ಅನುಭವಿಸಿದ್ದ ನಷ್ಟಕ್ಕಿಂತ ಹೆಚ್ಚು ಅಲೆಗ್ಸಾಂಡರ್ ಭಾರತದಲ್ಲಿ ಅನುಭವಿಸಿದ್ದ’ ಎಂದಿದ್ದರು. ಊಹಿಸಿಕೊಳ್ಳಿ. ಆರು ಲಕ್ಷ ಸೇನೆಯೊಂದಿಗೆ ರಷ್ಯಾ ಏರಿ ಹೋಗಿದ್ದ ನೆಪೋಲಿಯನ್ ಮರಳುವಾಗ ಇದ್ದವರು 30 ಸಾವಿರ ಸೈನಿಕರು! ಇದಕ್ಕಿಂತಲೂ ಹೆಚ್ಚಿನ ನಷ್ಟವೆಂದರೆ ಎಂಥದ್ದಿರಬೇಕು.

alexander-great-mosaic
ಜುಖೋವ್ರ ಪ್ರಕಾರ ಗ್ರೀಕರಿಗೆ ಭಾರತದ ಗಡಿ ನುಸುಳುತ್ತಿದ್ದಂತೆ ಸಮಸ್ಯೆಗಳ ಸರಮಾಲೆಯೇ ಶುರುವಾಯಿತು. ಕುಣಾರ್, ಸ್ವಾತ್, ಬುನೇರ್, ಪೇಷಾವರ್ ಕಣಿವೆಗಳಲ್ಲಿ ಹರಡಿಕೊಂಡಿದ್ದ ಸಣ್ಣ ಸಣ್ಣ ರಾಜ್ಯಗಳು ಬಲವಾದ ಪ್ರತಿರೋಧ ಒಡ್ಡಿದವು. ಅಶ್ವಕರದ್ದಂತೂ ಪುಟ್ಟ ಗಣರಾಜ್ಯವಾದರೂ ಅಲೆಗ್ಸಾಂಡರ್ನ ಕಣ್ಣಲ್ಲಿ ನೀರು ತರಿಸಲು ಸಾಕಷ್ಟಾಗಿದ್ದವು. ಆರ್ ಸಿ ಮುಜುಂದಾರರು ತಮ್ಮ ‘ಏನ್ಶಿಯಂಟ್ ಇಂಡಿಯಾ’ದಲ್ಲಿ ಗ್ರೀಕರ ದೊರೆಯನ್ನು ಅಡ್ಡಗಟ್ಟಿದ ಅಶ್ವಕರ ರಾಣಿ ಕೃಪಾಳ ಕುರಿತಂತೆ ಉಲ್ಲೇಖಿಸುತ್ತಾರೆ. ಆಕೆಯ ಶೌರ್ಯ ಪ್ರತಾಪಕ್ಕೆ ಮಣಿದ ಅಲೆಗ್ಸಾಂಡರ್ ಅಶ್ವಕರೊಂದಿಗೆ ಸಂಧಾನ ಮಾಡಿಕೊಂಡು ಮುಂದುವರೆಯಬೇಕಾದ ಪರಿಸ್ಥಿತಿ ಬಂದಿತೆಂದೂ ಹೇಳುತ್ತಾರೆ.
ಜುಖೋವ್ ಯುದ್ಧ ನಿಷ್ಣಾತರೇ ಆಗಿದ್ದರಿಂದ ಭಾರತದಲ್ಲಿನ ಗ್ರೀಕರ ಕದನವನ್ನು ಸೈನಿಕರ ದೃಷ್ಟಿಯಿಂದಲೇ ವಿವರಿಸಿದ್ದಾರೆ. ಭಾರತೀಯ ಸೈನಿಕರ ಬಳಿಯಿದ್ದ 2 ಕಿ.ಮೀ ಉದ್ದದ ಭಜರ್ಿಗಳು ಗ್ರೀಕರನ್ನು ನಡುಗಿಸಿಬಿಟ್ಟಿದ್ದವಂತೆ. ದೂರದಿಂದ ಹಾದು ಬರುತ್ತಿದ್ದ ಈ ಭಜರ್ಿಗಳು ಶತ್ರು ಸೈನಿಕರನ್ನು ಇರಿದು ಕೊಲ್ಲುತ್ತಿದ್ದವಲ್ಲದೇ ಸೇನಾವ್ಯೂಹವನ್ನೇ ಛಿದ್ರಗೊಳಿಸಿಬಿಡುತ್ತಿದ್ದವು. ಹೀಗೆ ದಾರಿ ಮಾಡಿಕೊಂಡ ಮೇಲೆ ಆನೆಗಳು ನುಗ್ಗಿ ತಮ್ಮ ಸೊಂಡಿಲಿಗೆ ಸಿಕ್ಕವರನ್ನು ತಿವಿದು ಎಸೆಯುತ್ತಿದ್ದವು; ಕಾಲಿಗೆ ಸಿಕ್ಕವರ ತುಳಿದು ಅಪ್ಪಚ್ಚಿಗೈಯ್ಯುತ್ತಿದ್ದವು. ಮೇಲೆ ಕುಳಿತಿದ್ದ ಸೈನಿಕ ತನ್ನ ಬಾಣಗಳಿಂದ ಗುರಿಯಿಟ್ಟು ದಾಳಿಗೈಯ್ಯುತ್ತಿದ್ದ. (ಇಷ್ಟಕ್ಕೂ ಅಚ್ಚರಿಯೇನು ಗೊತ್ತೇ? ಗ್ರೀಕ್ ಸೈನಿಕರು ಮೊದಲ ಬಾರಿಗೆ ಆನೆಗಳನ್ನು ನೋಡಿದ್ದೇ ಪಷರ್ಿಯಾದೊಂದಿಗಿನ ಕದನದಲ್ಲಂತೆ; ಅದೂ ಭಾರತದಿಂದ ಆಮದಾದ ಆನೆಗಳು! ಹಾಗಂತ ಎ ಹಿಸ್ಟರಿ ಆಫ್ ಗ್ರೀಸ್ನಲ್ಲಿ ಉಲ್ಲೇಖವಿದೆ.) ಈಗ ಕಾಲಾಳುಗಳು ಸಂದಿಗೊಂದಿಗಳಲ್ಲಿ ನುಗ್ಗುತ್ತ ಎದುರಾಳಿಗಳನ್ನು ಕಂಡಕಂಡಲ್ಲಿ ಧ್ವಂಸಗೈದುಬಿಡುತ್ತಿದ್ದರು. ಗ್ರೀಕ್ ಸೈನ್ಯಕ್ಕೆ ಈ ಪರಿಯ ಯುದ್ಧ ಹೊಸತಾಗಿತ್ತು. ಅವರು ತತ್ತರಿಸಿ ಹೋಗಿದ್ದರು.
ಬುದ್ಧಿವಂತನಾದ ಅಲೆಗ್ಸಾಂಡರ್ ಮುಂದಿನ ಸೋಲನ್ನು ಗ್ರಹಿಸಿದ. ಸ್ವಾಭಿಮಾನಿ ಭಾರತೀಯರನ್ನು ತನ್ನ ಸೇನೆಯ ಕಾಲಾಳುಗಳಾಗಿ ಭಾರತದ ವಿರುದ್ಧವೇ ಬಳಸಲಾಗದೆಂಬುದನ್ನು ಅರಿತ. ಕೊನೆಗೆ ತನ್ನ ಸೈನಿಕರ ಪ್ರತಿಭಟನೆಯನ್ನು ಮುಂದಿಟ್ಟು ಊರಿಗೆ ಮರಳುವ ಯೋಜನೆ ಮುಂದಿರಿಸಿದ. ಅಲೆಗ್ಸಾಂಡರ್ನಂತಹ ಮಹಾಸೇನಾನಿಗಳು ಪ್ರತಿಭಟಿಸುವ ಸೈನಿಕರಿಗೆ ಎಂತಹ ಶಿಕ್ಷೆ ಕೊಡಬಹುದೆಂಬುದರ ಅರಿವಿದ್ದಾಗಲೂ ಸೈನಿಕರು ಆತನ ಮಹತ್ವಾಕಾಂಕ್ಷೆಗೆ ಅಡ್ಡ ನಿಂತರೆಂದು ನಂಬುವುದು ಕಷ್ಟ. ಇರಲಿ. ಅಲೆಗ್ಸಾಂಡರ್ ಮರಳಿ ಹೋಗುವ ಘೋಷಣೆ ಕೇಳಿ ಆತನ ಸೇನೆ ಆನಂದ ಭಾಷ್ಪ ಸುರಿಸಿತಂತೆ!
ಹೋಗುವವ ಸುಮ್ಮನೆ ಹೋಗಲಿಲ್ಲ. ಗೆದ್ದಲ್ಲೆಲ್ಲ ಕಮಾನುಗಳನ್ನು ಕಟ್ಟಿಸಿ ಅನೇಕ ಊರುಗಳಿಗೆ ಹೊಸ ನಾಮಕರಣ ಮಾಡಿದ. ಹಾಗಂತ ಮರಳುವ ಪ್ರಯತ್ನ ಸಲೀಸಾಗಿರಲಿಲ್ಲ. ನದಿಯ ಮೂಲಕ ತನ್ನ ಸೇನೆಯನ್ನು ಸಾಗಿಸಬೇಕಾಗಿದ್ದರಿಂದ ದೊಡ್ಡ ದೊಡ್ಡ ದೋಣಿಗಳನ್ನು ನಿಮರ್ಿಸಬೇಕಾಗಿ ಬಂತು. ಒಂದು ಅಂದಾಜಿನ ಪ್ರಕಾರ ಎರಡು ಸಾವಿರ ಭಿನ್ನ ಭಿನ್ನ ದೋಣಿಗಳು ನಿಮರ್ಾಣವಾದವು. ಬಹುತೇಕ ಭಾರತೀಯರೇ ನಿಮರ್ಿಸಿದಂಥವು. ಪ್ಲುಟಾಕರ್್ನ ಪ್ರಕಾರ ಹೀಗೆ ಮರಳುವಾಗ ಅಲೆಗ್ಸಾಂಡರ್ನ ಹಣಕಾಸಿನ ಪರಿಸ್ಥಿತಿ ಅದೆಷ್ಟು ಕೆಟ್ಟದಾಗಿತ್ತೆಂದರೆ ತನ್ನ ಮಿತ್ರರನೇಕರ ಸಹಾಯ ಪಡೆಯಬೇಕಾಗಿ ಬಂತು. ದೋಣಿಯ ಅಧಿಕಾರಿಗಳೇ ತಮ್ಮ ಹಣದಲ್ಲಿ ದೋಣಿಗಳ ನಿಮರ್ಾಣ ಮಾಡಿಕೊಳ್ಳಬೇಕಾಗಿ ಬಂತು. ಎರಡು ವಿಭಾಗ ಮಾಡಿ ಈ ಮಹಾ ಹಿಮ್ಮೆಟ್ಟುವಿಕೆ ನಡೆಯಿತು.
ಸುಮ್ಮನೆ ಮರಳಿಬಿಟ್ಟರೆ ಅವಮಾನವೆಂದೆಣಿಸಿ ದಾರಿಯಲ್ಲಿ ಸಿಕ್ಕ ರಾಜ್ಯಗಳನ್ನು ಮಣಿಸಿ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಅಲೆಗ್ಸಾಂಡರನ ಪ್ರಯತ್ನ ಇದ್ದೇ ಇತ್ತು. ಅಗ್ರಶ್ರೇಣಿಗಳ ರಾಜ್ಯವೂ ಅದರಲ್ಲೊಂದು. ಶರಣಾಗತಿಗೆ ಒಪ್ಪದ ಈ ವೀರರು ಕದನಕ್ಕೆ ನಿಂತರು. ಅವರ ಪ್ರತಿರೋಧ ಎಷ್ಟು ತೀವ್ರವಾಗಿತ್ತೆಂದರೆ ಅನೇಕ ಗ್ರೀಕ್ ಸೈನಿಕರ ಮಾರಣ ಹೋಮವಾಗದೇ ಅಲೆಗ್ಸಾಂಡರ್ ಕೋಟೆಯೊಳಗೆ ಪ್ರವೇಶಿಸಲು ಆಗಲಿಲ್ಲ. ಇತಿಹಾಸಕಾರ ಕುಟರ್ಿಯಸ್ನ ಪ್ರಕಾರ ‘ಇನ್ನು ಕದನ ಸಾಧ್ಯವಿಲ್ಲದಾದಾಗ ಆ ವೀರರು ತಮ್ಮ ಮನೆಗಳಿಗೆ ಬೆಂಕಿ ಇಟ್ಟರು. ಹೆಂಗಸರು ಮತ್ತು ಮಕ್ಕಳು ತಮ್ಮನ್ನು ತಾವು ಬೆಂಕಿಗೆ ಸಮಪರ್ಿಸಿಕೊಂಡರು’.
ಬ್ರಾಹ್ಮಣರ ಜನಪದವೂ ಹೀಗೆಯೇ ಗ್ರೀಕರ ಕತ್ತಿಗೆ ಆಹುತಿಯಾಯ್ತು. ಹಾಗೆ ನೋಡಿದರೆ ಅಲೆಗ್ಸಾಂಡರ್ ಆದಿಯಾಗಿ ಈ ದೇಶದ ಮೇಲೆ ಆಕ್ರಮಣ ಮಾಡಿದ ಪ್ರತಿಯೊಬ್ಬರಿಗೂ ಬ್ರಾಹ್ಮಣರನ್ನು ಕಂಡರೆ ಕಂಠಮಟ್ಟ ದ್ವೇಷ. ಈ ಬ್ರಾಹ್ಮಣರು ಸಂತರಂತೆ, ತತ್ವ್ತಜ್ಞಾನಿಗಳಂತೆ ಊರೂರು ಅಲೆದಾಡುತ್ತಿದ್ದರು. ಎ.ಎ ಸ್ಮಿತ್ ತಮ್ಮ ಲೈಫ್ ಆಫ್ ಅಲೆಗ್ಸಾಂಡರ್ನಲ್ಲಿ, ‘ಈ ಬ್ರಾಹ್ಮಣರು ಅಲೆಗ್ಸಾಂಡರ್ನನ್ನು ಹೈರಾಣು ಮಾಡಿಬಿಟ್ಟಿದ್ದರು. ಅಲೆಗ್ಸಾಂಡರ್ನ ಭಯದಿಂದ ಯುದ್ಧ ತ್ಯಾಗ ಮಾಡಿದ್ದ ರಾಜರಿಗೆ ಪ್ರೇರಣೆ ಕೊಟ್ಟು ಅವನ ವಿರುದ್ಧ ಪಿತೂರಿ ನಡೆಸುವಂತೆ ಮಾಡುತ್ತಿದ್ದರು. ಅಂತಹ ಅನೇಕರನ್ನು ಹುಡುಹುಡುಕಿ ಆತ ನೇಣಿಗೇರಿಸಿದ್ದ’. ಗ್ರೀಕ್ನ ಸಾಮಾನ್ಯ ನಗರವೊಂದಕ್ಕೆ ಸಮವಾಗಿದ್ದ ಈ ಜನಪದವೂ ಆ ಬೃಹತ್ ಸೇನೆಯೆದುರು ತಡೆಗೋಡೆಯಾಗಿ ನಿಂತು ಕೊನೆಯುಸಿರಿನವರೆಗೆ ಕಾದಾಡಿತು.
ಗ್ರೀಕ್ ಸೇನೆ ಭಾರತದಲ್ಲಿದ್ದ ಒಂದೇ ಒಂದು ದಿನವೂ ನೆಮ್ಮದಿಯಿಂದಿರಲಿಲ್ಲ. ಪ್ರತಿದಿನವೂ ಒಂದಲ್ಲ ಒಂದು ಕದನ. ನೂರಾರು ಜನರ ಸಾವು-ನೋವು! ಪಷರ್ಿಯಾ ಹೇಗೆ ಗಾಳಿ ಗೋಪುರದಂತೆ ಉದುರಿಬಿದ್ದಿತ್ತೋ ಭಾರತವೂ ಹಾಗೆಯೇ ಎಂದು ಭಾವಿಸಿದ್ದ ಅಲೆಗ್ಸಾಂಡರ್. ಎಡವಟ್ಟಾಯ್ತು. ಕುಡಿತದ ಚಟ ಅವನನ್ನು ಹೇಗೆ ಅಪ್ಪಿಕೊಂಡಿತೆಂದರೆ ಆರೋಗ್ಯ ದಿನೇ ದಿನೇ ಕೆಡಲಾರಂಭಿಸಿತು. ಆತ ಭೇಟಿಯಾದ ಸಂತನೊಬ್ಬ ಸೂಕ್ಷ್ಮವಾಗಿ ತಿಳಿಹೇಳಿದ. ಕೇಂದ್ರದಿಂದ ದೂರ ತಿರುಗಾಡುತ್ತಿದ್ದರೆ ರಾಜ್ಯ ಬಲಾಢ್ಯವಾಗಿರಲಾರದು. ಕೇಂದ್ರದಲ್ಲಿ ನೆಲೆನಿಂತು ಎಲ್ಲವನ್ನೂ ಸಂಭಾಳಿಸಬೇಕು. ಅಲೆಗ್ಸಾಂಡರ್ ಲಗುಬಗೆಯಿಂದ ಹೊರಟ. ಒಂದು ಪಡೆ ಪಷರ್ಿಯಾದ ಮೂಲಕ ಹಾದು ಬಲೂಚಿಸ್ತಾನಕ್ಕೆ ಭೂಮಾರ್ಗದ ಮೂಲಕ ಕಠಿಣ ಯಾತ್ರೆ ಮಾಡಿ ತಲುಪಿತು. ಮತ್ತೊಂದು ಪಡೆ ಸ್ವತಃ ಅಲೆಗ್ಸಾಂಡರ್ನ ನೇತೃತ್ವದಲ್ಲಿ ಸಮುದ್ರ ಮಾರ್ಗ ಕ್ರಮಿಸಿ ಊರು ಸೇರಿಕೊಂಡಿತು.
ಸಿಂಧು ನದಿ ಸಾಗರ ಸೇರುವಲ್ಲಿ ಭಯಾನಕ ಅಲೆಗಳೇಳುತ್ತವೆಂಬ ಎಚ್ಚರಿಕೆಯನ್ನು ಭಾರತೀಯ ನಾವಿಕರು ಗ್ರೀಕ್ ಸೇನೆಗೆ ಅದಾಗಲೇ ಕೊಟ್ಟಿದ್ದರು. ಆ ತೀರಕ್ಕಿಂತಲೂ ಸಾಕಷ್ಟು ದೂರದಲ್ಲಿಯೇ ಅಲೆಗಳ ಸದ್ದು ಕೇಳಿ ಗ್ರೀಕ್ ನಾವಿಕರು ಬೆಚ್ಚಿ ಬಿದ್ದಿದ್ದರು. ಭಾರತೀಯರು ನಿಮರ್ಿಸಿದ್ದ ಹಡಗುಗಳು ಈ ಅಲೆಗಳನ್ನು ಎದುರಿಸಿ ಬಲಾಢ್ಯವಾಗಿ ಉಳಿದವು. ಉಳಿದವೆಲ್ಲ ಆ ಅಬ್ಬರಕ್ಕೆ ಸಿಲುಕಿ ನುಚ್ಚು ನೂರಾದವು. ಎರಡು ಹಡಗುಗಳಂತೂ ಒಂದಕ್ಕೊಂದು ಢಿಕ್ಕಿ ಹೊಡೆದು ಅನೇಕ ಸೈನಿಕರು ಸಾವನ್ನಪ್ಪಿದರು. ಒಮ್ಮೆಯಂತೂ ಸ್ವತಃ ಅಲೆಗ್ಸಾಂಡರ್ನೂ ಅಪಾಯವನ್ನು ಅರಿತು ಸಮುದ್ರಕ್ಕೆ ಜಿಗಿದುಬಿಡುವ ಆಲೋಚನೆ ಮಾಡಿದ್ದನಂತೆ!
ಅಂತೂ ಅಲೆಗ್ಸಾಂಡರ್ ನಿರಾಶೆಗೊಂಡು, ಅವಮಾನಿತನಾಗಿ ತನ್ನ ನಾಡು ಸೇರಿಕೊಂಡ. ಆತ ಮತ್ತೆ ಸೈನ್ಯ ಕಟ್ಟಿ ಭಾರತಕ್ಕೆ ಲಗ್ಗೆ ಹಾಕಬೇಕೆಂಬ ಕನಸು ಹೊತ್ತಿದ್ದನಂತೆ. ಆದರೆ ಅವನ ಪಾಲಿನ ಆ ದಿನ ಮತ್ತೆ ಬರಲೇ ಇಲ್ಲ. ಪಂಜಾಬಿನ ಅರ್ಧಭಾಗದವರೆಗೂ ಬಂದು, ಕಷ್ಟಪಟ್ಟು ಗೆದ್ದು ಹೋದುದಷ್ಟೇ ಅವನ ಭಾಗ್ಯ. ತಾನು ಗೆದ್ದ ಸಿಂಧುನದಿಯವರೆಗಿನ ಭಾಗಕ್ಕೆ ಮುಖ್ಯಸ್ಥನಾಗಿ ಅಂಭಿಯನ್ನು ನೇಮಿಸಿದ. ಪಂಜಾಬಿನ ಭಾಗಕ್ಕೆ ಪುರೂರವನನ್ನು ಸತ್ರಪನನ್ನಾಗಿಸಿದ. ಉಳಿದ ಚಿಕ್ಕ ಭಾಗಕ್ಕೆ ತನ್ನ ನಂಬುಗೆಯ ಫಿಲಿಪ್ ಮತ್ತು ನಿಕಾವರ್ರವರನ್ನು ನೇಮಿಸಿ ಅವರಡಿಯಲ್ಲಿ ಸದಾಸನ್ನದ್ಧ ಗ್ರೀಕ್ ಪಡೆಯೊಂದನ್ನು ಇರಿಸಿದ.

alexander_bronze1
ತನ್ನೂರಿಗೆ ಮರಳಿದ ಒಂದೂವರೆ ವರ್ಷದಲ್ಲಿಯೇ ತೀರಿಕೊಂಡ. ಅವನು ಬದುಕ್ಕಿದ್ದಾಗಲೇ ಭಾರತದಲ್ಲಿ ಅಲ್ಲಲ್ಲಿ ವಿದ್ರೋಹದ ಚಟುವಟಿಕೆಗಳು ನಡೆದೇ ಇದ್ದವು. ಈಗ ಸತ್ತನೆಂದು ಗೊತ್ತಾದ ಮೇಲೆ ಬಿಟ್ಟಾರೇನು? ತಕ್ಷಣಕ್ಕೆ ನಿಕಾವರ್ ಮತ್ತು ಫಿಲಿಪ್ರನ್ನು ಹಿಡಿದು ಕೊಂದರು. ಗ್ರೀಕ್ ಸೇನೆ ಅಸಹಾಯಕವಾಗಿ ನಿಂತಿತ್ತು. ಗಡಿಯುದ್ದಕ್ಕೂ ಅಲೆಗ್ಸಾಂಡರ್ನ ವಶವಾಗಿ ದಾಸ್ಯದ ಸಂಕೇತವಾಗಿ ನಿಂತಿದ್ದ ರಾಜ್ಯಗಳು ಆ ಕ್ಷಣಕ್ಕೆ ದಾಸ್ಯದ ಧೂಳು ಕೆಡವಿಕೊಂಡು ಮೇಲೆದ್ದು ನಿಂತವು. ಆತ ತೀರಿಕೊಂಡ ಆರೇ ತಿಂಗಳೊಳಗೆ ಪಂಜಾಬಿನಿಂದ ಹಿಡಿದು ಸಿಂಧ್ನವರೆಗಿನ ಅಲೆಗ್ಸಾಂಡರ್ನ ವಶವಾಗಿದ್ದ ರಾಜ್ಯಗಳೆಲ್ಲ ಸ್ವತಂತ್ರಗೊಂಡುಬಿಟ್ಟವು.
ಅಲೆಗ್ಸಾಂಡರ್ನ ಜಗತ್ತು ಛಿದ್ರ ಛಿದ್ರಗೊಂಡಿತ್ತು. ಒಬ್ಬ ಮಹಾಸೇನಾನಿ ಭಾರತದ ಸಂಪರ್ಕಕ್ಕೆ ಬಂದು, ಸಾಯುವ ವೇಳೆಗೆ ಸಂತನಾಗಿ, ರಿಕ್ತ ಹಸ್ತನಾಗಿ ಮರಳಿದ್ದ! ಅವನು ಕೆಲವು ಇತಿಹಾಸಕಾರರ ಪಾಲಿಗೆ ಜಗತ್ತನ್ನೇ ಗೆದ್ದ ವೀರನಾಗಿದ್ದ ನಿಜ; ಆದರೆ ಆ ಜಗತ್ತಿನಲ್ಲಿ ಭಾರತವೇ ಇರಲಿಲ್ಲ! ಭಾರತವೇ ಇಲ್ಲದ್ದು ಜಗತ್ತು ಹೇಗಾಗಲೂ ಸಾಧ್ಯ?!
ಅಂದಹಾಗೆ, ಅಲೆಗ್ಸಾಂಡರ್ ತಕ್ಷಶಿಲಾ ಗೆದ್ದು ಮುನ್ನುಗ್ಗುತ್ತಿರುವಾಗ ಅದೇ ವಿಶ್ವವಿದ್ಯಾಲಯದಲ್ಲಿ ಈ ಎಲ್ಲಾ ವಿದ್ಯಮಾನಗಳನ್ನು ಇಬ್ಬರು ಗಮನಿಸುತ್ತಾ ಕೂತಿದ್ದರು. ಒಬ್ಬ ಗುರು. ಮತ್ತೊಬ್ಬ ಶಿಷ್ಯ. ಸ್ವಾಭಿಮಾನದ ಮುದ್ದೆಯಾಗಿದ್ದ ಈರ್ವರೂ ರಾಜಕೀಯ ಪರಿಸ್ಥಿತಿಗಳ ವಿಶ್ಲೇಷಣೆಗೆ ತೊಡಗಿದ್ದರು. ಮಗಧ ಸಾಮ್ರಾಜ್ಯದ ನಂದರು ಮನಸು ಮಾಡಿದ್ದರೆ ಈ ಗಣರಾಜ್ಯಗಳಿಗೆ ಸಹಕಾರ ನೀಡಿ ಅಲೆಗ್ಸಾಂಡರ್ನನ್ನು ಗಡಿಯಿಂದಲೇ ಓಡಿಸಬಹುದಿತ್ತೆಂಬುದು ಅವರಿಗೆ ಗೊತ್ತಿರದ ಸಂಗತಿಯಾಗಿರಲಿಲ್ಲ. ಆದರೇನು? ಅಧಿಕಾರವಿರಲಿಲ್ಲ. ಹಾಗಂತ ಸುಮ್ಮನಿರುವಂತೆಯೂ ಇಲ್ಲ. ರಾಷ್ಟ್ರ ರಕ್ಷಣೆಗಾಗಿ ಎಂತಹ ಕಾರ್ಯಕ್ಕೂ ಕೈ ಹಾಕಲೇಬೇಕಲ್ಲ! ಅವರು ಸಿದ್ಧರಾದರು.
ಹೌದು. ಗುರು ಚಾಣಕ್ಯ, ಶಿಷ್ಯ ಚಂದ್ರಗುಪ್ತ ಮುಂದಿನ ತಯಾರಿ ಆರಂಭಿಸಿದರು!

Comments are closed.