ವಿಭಾಗಗಳು

ಸುದ್ದಿಪತ್ರ


 

ಭಾರತವನ್ನು ತೆಪ್ಪಗಾಗಿಸಲು ಚೀನಾದ ಛದ್ಮ ಯುದ್ಧ!

ಚೀನಾ ಬಾಂಧವ್ಯಗಳನ್ನು ಲೆಕ್ಕಕ್ಕಿಟ್ಟುಕೊಳ್ಳುವುದೇ ಇಲ್ಲ. ಅದಕ್ಕೇನಿದ್ದರೂ ತನ್ನ ಗಡಿ ವಿಸ್ತರಣೆಯಾಗುತ್ತಿರಬೇಕಷ್ಟೇ. ಭಾರತದ ಕಮ್ಯುನಿಷ್ಟರ ಬುದ್ಧಿಯೂ ಅದೇ ಅಲ್ಲವೇ? ತಮಗೆ ಪೂರಕವೆನಿಸಿದರೆ ಪರಿಸರ ಎನ್ನಿ, ಬುಡುಕಟ್ಟು ಜನರ ನಂಬಿಕೆ ಎನ್ನಿ. ತಮಗೆ ಬೇಡವಾದಾಗ ಅವುಗಳನ್ನೇ ಮೂಢನಂಬಿಕೆ ಎಂದುಬಿಡಿ. ಒಟ್ಟಿನಲ್ಲಿ ಅಡಿಪಾಯ ವಿಸ್ತರಿಸಿಕೊಳ್ಳುತ್ತ ಸಾಗಬೇಕು.

ಅನೇಕ ಬಾರಿ ಟೌನ್ಹಾಲ್ ಮುಂದೆ ಪ್ರತಿಭಟನೆಯ ನಾಟಕ ಮಾಡುವ ಎಡಚರನ್ನು ಕಂಡಾಗ ಆಶ್ಚರ್ಯವೆನಿಸುತ್ತದೆ. ಪ್ರಜ್ಞಾವಂತ ಭಾರತೀಯರನ್ನು ಕಳೆದ ಆರೇಳು ದಶಕಗಳಿಂದ ಮೋಸ ಮಾಡುತ್ತಲೇ ಇದ್ದಾರಲ್ಲ ಅಂತ. ಬಹುಶಃ ಸಾಮಾಜಿಕ ಜಾಲತಾಣಗಳು ಕ್ರಿಯಾಶೀಲವಾಗಿರದೇ ಇದ್ದರೆ ಈಗಲೂ ಅವರು ಹೇಳಿದ ಸುಳ್ಳುಗಳನ್ನೇ ಸತ್ಯವೆಂದು ನಾವೆಲ್ಲ ನಂಬುತ್ತಲೇ ಇರುತ್ತಿದ್ದೆವೇನೋ? ದಿನಗಳೆದಂತೆ ಅವರ ಒಂದೊಂದು ನಾಟಕಗಳೂ ಸಮಾಜದ ಕಣ್ಣೆದುರಿಗೆ ಪೂರ್ಣವಾಗಿ ತೆರೆದುಕೊಳ್ಳುತ್ತಿವೆ. ಅವರೀಗ ತರುಣರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಬೆತ್ತಲಾಗಿ ನಿಂತಿದ್ದಾರೆ. ಪರಿಸರದ ಕಾಳಜಿ, ವನ್ಯ ಜೀವಿಗಳ ಚಿಂತೆ, ಬಡವರ ಅನ್ನದ ನೋವು ಇವೆಲ್ಲವೂ ತಮಗೊಬ್ಬರಿಗೇ ಇರುವುದೆಂದು ಊರತುಂಬಾ ಹೇಳಿಕೊಂಡು ತಿರುಗಾಡುತ್ತಿದ್ದವರೆಲ್ಲ ಚೀನಾ ಡೋಕ್ಲಾಂನಲ್ಲಿ ಒಳನುಸುಳುವಿಕೆ ನಡೆಸುತ್ತಿದ್ದಂತೆ ತೆಪ್ಪಗಾಗಿಬಿಟ್ಟಿದ್ದಾರೆ. ಒಬ್ಬರಾದರೂ ಬಾಯ್ಬಿಟ್ಟು ಮಾತಾಡುತ್ತಿಲ್ಲ. ಮಾತಾಡಿದರೂ ನರೇಂದ್ರ ಮೋದಿಯನ್ನು ವಿರೋಧಿಸುವ ನೆಪವಿಟ್ಟುಕೊಂಡು ಭಾರತೀಯ ಸೇನೆಯ ಆಕ್ರಮಣಕಾರಿ ಮನೋಭಾವವನ್ನು ತೆಗಳುತ್ತಿದ್ದಾರೆ. ಮೋದಿ ತನ್ನ ಆಪ್ತರಿಗೆ ಶಸ್ತ್ರಾಸ್ತ್ರ ಡೀಲ್ ಮಾಡಿಕೊಳ್ಳುವ ಅವಕಾಶಕೊಡಲೆಂದೇ ಯುದ್ಧಭೀತಿಯನ್ನು ಹುಟ್ಟಿಸುತ್ತಿದ್ದಾರೆ ಎಂದು ಇತ್ತೀಚೆಗೆ ಭೂಪನೊಬ್ಬ ಚಿತ್ರದುರ್ಗದಲ್ಲಿ ಭಾಷಣ ಮಾಡಿ ಹೋಗಿದ್ದನ್ನು ಕೇಳಿ ಮೈಯ್ಯೆಲ್ಲ ನಗು ಬಂತು. ಚೀನಾದ ಎಂಜಲು ತಿಂದದ್ದಕ್ಕೆ ಇಷ್ಟಾದರೂ ಮಾಡಬೇಕಲ್ಲ ಇವರೆಲ್ಲ. ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಓದಿದ್ದರಿಂದಲೇ ಮಾನವೀಯರಾಗಿದ್ದೀವಿ ಎನ್ನುವ ಇವರು ಬ್ರಹ್ಮಪುತ್ರ ನದಿಯನ್ನಿಟ್ಟುಕೊಂಡು ಪ್ರಕೃತಿಯೊಂದಿಗೆ ನಡೆಸುತ್ತಿರುವ ಸರಸದ ವಿರುದ್ಧ ಒಮ್ಮೆಯಾದರೂ ದನಿಯೆತ್ತಿದ್ದಾರಾ ಕೇಳಿನೋಡಿ.
ಹೌದು. ಅಸ್ಸಾಂನ ಜನರ ನಿದ್ದೆಕೆಡಿಸಿದ ಪ್ರವಾಹ ಬಂತಲ್ಲ ಇತ್ತೀಚೆಗೆ, ಅದು ಪ್ರಾಕೃತಿಕ ವಿಕೋಪವಾಗಿರಲಿಲ್ಲ ಬದಲಿಗೆ ಚೀನಾ ಚಾಲಿತ ವ್ಯವಸ್ಥಿತ ಪ್ರಯತ್ನವಾಗಿತ್ತು. ಅಸ್ಸಾಂನ ಆರೋಗ್ಯ ಸಚಿವ ಮತ್ತು ವಕ್ತಾರ ಇತ್ತೀಚೆಗೆ ಪತ್ರಿಕಾ ಗೋಷ್ಠಿ ಕರೆದು ಅಸ್ಸಾಂನ ಜನರ ನಿದ್ದೆ ಕೆಡಿಸಿದ ಆಗಸ್ಟ್ ಎಂಟರ ನಂತರದ ಮೂರನೇ ಸುತ್ತಿನ ಪ್ರವಾಹಕ್ಕೂ ಅಲ್ಲಿ ಸುರಿದ ಮಳೆಗೂ ತಾಳೆಯಾಗುತ್ತಿಲ್ಲ, ಅದು ಚೀನಾ ಮುನ್ಸೂಚನೆ ಕೊಡದೇ ಹರಿಸಿದ ಹೆಚ್ಚಿನ ನೀರಿನ ಕಾರಣದಿಂದಾಗಿ ಉಂಟಾದ ಪ್ರವಾಹ ಎಂದು ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ. ಅವರು ಕೇಂದ್ರ ಸಕರ್ಾರದ ಮೇಲೆ ಒತ್ತಡ ಹಾಕಿ ಭಾರತ ಮತ್ತು ಬಾಂಗ್ಲಾ ದೇಶಗಳ ಹಕ್ಕಾದ ಜಲ ಸಂಬಂಧೀ ಅಂಕಿ ಅಂಶಗಳನ್ನು ಕಾಲಕಾಲಕ್ಕೆ ಪಡೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲಿಗೆ ಡೋಕ್ಲಾಂನಲ್ಲಿ ಭಾರತವನ್ನು ಎದುರಿಸಲಾಗದ ಚೀನಾ ತನ್ನ ಹಳೆಯ ಚಾಳಿಯ ಮೂಲಕ ಭಾರತವನ್ನು ಹಣಿಯುವ ತಂತ್ರಕ್ಕೆ ಕೈಹಾಕಿರುವುದು ಖಾತ್ರಿಯಾಯ್ತು.

2

ಭಾರತ ಚೀನಾಗಳ ನಡುವೆ ಬ್ರಹ್ಮಪುತ್ರ ನೀರಿನ ಹಂಚಿಕೆಯ ವಿವಾದ ಟಿಬೇಟ್ನ್ನು ನೆಹರು ಪ್ರಶ್ನಿಸದೆಯೇ ಚೀನಾಕ್ಕೆ ಬಿಟ್ಟುಕೊಟ್ಟರಲ್ಲ ಅಂದಿನಿಂದಲೇ ಶುರುವಾಯ್ತು. ಬ್ರಹ್ಮಪುತ್ರ ಕೈಲಾಸ ಪರ್ವತ ಶ್ರೇಣಿಯ ಟಿಬೆಟ್ನಲ್ಲಿ ಉಗಮಗೊಳ್ಳುವ ನದಿ. ಅದು ಮುಂದೆ ಚೀನಾ, ಭಾರತ, ಬಾಂಗ್ಲಾದೇಶಗಳ ಮೂಲಕ ಹಾದು ಸಮುದ್ರವನ್ನು ಸೇರಿಕೊಳ್ಳುತ್ತದೆ. ಈ ನದಿಯಿಂದ ಉಪಕೃತರಾದವರಲ್ಲಿ ನೇಪಾಳ, ಭೂತಾನ, ಬಮರ್ಾಗಳೂ ಸೇರುತ್ತವೆ. ಬ್ರಹ್ಮಪುತ್ರ ಹರಿವು 1625 ಕಿಲೋ ಮೀಟರಿನಷ್ಟು. ಚೀನಾದಲ್ಲಿ ಯಾಲರ್ುಂಗ್ ಸಾಂಗ್ಪೊ ಎಂದು ಕರೆಯಲ್ಪಡುವ ಈ ನದಿ, ಅರುಣಾಚಲಕ್ಕೆ ಬಂದೊಡನೆ ಸಿಯಾಂಗ್ ಎನ್ನಲ್ಪಡುತ್ತದೆ. ಇನ್ನೂ ಅನೇಕ ನದಿಗಳನ್ನು ತನ್ನೊಡಲಿಗೆ ಹಾಕಿಕೊಳ್ಳುತ್ತ ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದಾಗುವ ನದಿ ಆಲಸ್ಯದಿಂದ ಬಳುಕುತ್ತ ಬಾಂಗ್ಲಾದೇಶಕ್ಕೆ ಹೋಗುವಾಗ ಜಮುನಾ ಆಗುತ್ತಾಳೆ. ಅಲ್ಲಿ ಗಂಗೆ ಮತ್ತು ಮೇಘನೆಯರೊಂದಿಗೆ ಸೇರಿ ಬಂಗಾಳ ಕೊಲ್ಲಿಯಲ್ಲಿ ತನ್ನ ತಾನು ಸಮಪರ್ಿಸಿಕೊಳ್ಳುವ ಮುನ್ನ ಜಗತ್ತಿನ ಅತ್ಯಂತ ವಿಸ್ತಾರ ಪಾತ್ರವುಳ್ಳ ನದಿಯಾಗುತ್ತಾಳೆ. ಒಟ್ಟಾರೆ ಹರಿವಿನ ಪಾತ್ರ ಭಾರತದಲ್ಲಿ ಸುಮಾರು ಶೇಕಡಾ ಅರವತ್ತರಷ್ಟಿದ್ದರೆ, ಚೀನಾದಲ್ಲಿ ಅದರ ಪ್ರಮಾಣ ಶೇಕಡಾ ಇಪ್ಪತ್ತರಷ್ಟು ಮಾತ್ರ.

ಚೀನಾ ಬ್ರಹ್ಮಪುತ್ರ ಉಗಮ ಸ್ಥಾನದಲ್ಲಿ ಎರಡು ಬಗೆಯ ಯೋಜನೆಗಳಿಗೆ ಅನೇಕ ವರ್ಷಗಳಿಂದ ತಯಾರಿ ನಡೆಸುತ್ತಿದೆ. ಮೊದಲನೆಯದು ಜಲವಿದ್ಯುತ್ ಯೋಜನೆ, ಎರಡನೆಯದು ಈ ನೀರನ್ನು ಉತ್ತರ ದಿಕ್ಕಿಗೆ ತಿರುಗಿಸಿ ಅಲ್ಲಿ ಕಂಡು ಬಂದಿರುವ ನೀರಿನ ಬವಣೆಯನ್ನು ನೀಗಿಸುವ ಯೋಜನೆ. ಎರಡೂ ಯೋಜನೆಗಳು ಭಾರತದ ಪಾಲಿಗೆ ಬಲು ಭಯಾನಕವೇ. ನದಿ ತಿರುಗಿಸಿಬಿಟ್ಟರೆ ಈಶಾನ್ಯ ರಾಜ್ಯಗಳು ನೀರಿಲ್ಲದೇ ತಪಿಸುತ್ತವೆ, ಜಲ ವಿದ್ಯುತ್ಗೆಂದು ಡ್ಯಾಮ್ ಕಟ್ಟಿ ನೀರು ನಿಲ್ಲಿಸಿಕೊಂಡರೆ ಅವರು ಮನಸಿಗೆ ಬಂದಾಗ ಅದನ್ನು ಹೊರ ಚೆಲ್ಲಿದರೆ ಸದಾ ಪ್ರವಾಹದ ಭೀತಿಯಲ್ಲಿಯೇ ಇರಬೇಕಾಗುತ್ತದೆ ಈಶಾನ್ಯ ಭಾರತ. 1962ರ ಭಾರತ ಚೀನಾ ಗಡಿ ಕದನದ ನಂತರದಿಂದಲಂತೂ ಬ್ರಹ್ಮಪುತ್ರದ ಹೆಸರು ಹೇಳಿಯೇ ಭಾರತವನ್ನು ಮೆತ್ತಗೆ ಮಾಡುವ ತಂತ್ರವನ್ನು ಅನುಸರಿಸುತ್ತಿದೆ ಚೀನಾ. ಗ್ಲೋಬಲ್ ವಾಮರ್ಿಂಗ್ನ ಪರಿಣಾಮದಿಂದಾಗಿ ಕರಗುತ್ತಿರುವ ಹಿಮಾಲಯ ಬ್ರಹ್ಮಪುತ್ರದ ಹರಿವನ್ನು ಅಳತೆಗೆ ಸಿಗದಂತೆ ಮಾಡುತ್ತಿದೆ. ಇದರ ಲಾಭವನ್ನು ಪಡೆದುಕೊಂಡೇ ಚೀನಾ ಬೇಕಾದಾಗ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹದ ಪರಿಸ್ಥಿತಿ ನಿಮರ್ಾಣ ಮಾಡುತ್ತಿದೆ. ವಾಸ್ತವವಾಗಿ ಜಲ ಸಂಬಂಧಿ ಅಂಕಿ ಅಂಶಗಳನ್ನು ಸಂಬಂಧಪಟ್ಟ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಬೇಕೆಂಬ ಅಂತರಾಷ್ಟ್ರೀಯ ನಿಯಮವೇ ಇದೆ. ಆದರೆ ಚೀನಾ ಅದನ್ನು ನಿರಾಕರಿಸುತ್ತಲೇ ಬಂದಿದೆ. ಅಣೇಕಟ್ಟಿನಲ್ಲಿ ನೀರಿನ ಸಂಗ್ರಹ, ನದಿಯ ಜಲಾನಯನದಲ್ಲಿ ಆಗುತ್ತಿರುವ ಮಳೆ, ನದಿಯ ಹರಿವಿನ ಪಾತ್ರದುದ್ದಕ್ಕೂ ಆಗುತ್ತಿರುವ ಮಳೆ ಇವೆಲ್ಲವನ್ನೂ ಅಧ್ಯಯನ ಮಾಡಿದರೆ ಬರಲಿರುವ ಪ್ರವಾಹವನ್ನು ಊಹಿಸಬಹುದು. ಚೀನಾ ಅಂಕಿ ಅಂಶ ಕೊಡುವುದಿರಲಿ, ನೀರು ಹರಿಸುವಾಗಲೂ ಭಾರತದ ಗಮನಕ್ಕೆ ತರುವುದಿಲ್ಲ. 2000ದಲ್ಲಿ ಒಮ್ಮೆ ಹೀಗೆ ಅಂಕಿಅಂಶ ಹಂಚಿಕೊಳ್ಳದೇ ಏಕಾ ಏಕಿ ಪ್ರವಾಹದ ವಾತಾವರಣ ನಿಮರ್ಾಣವಾಗಿ 40 ಕ್ಕೂ ಹೆಚ್ಚು ಜನ ತೀರಿಕೊಂಡಿದ್ದರು. 2002ರಲ್ಲಿ ಭಾರತ ಸಕರ್ಾರ ಚೀನಾದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿ ಅಂಕಿ ಅಂಶಗಳನ್ನು ಹಂಚಿಕೊಳ್ಳುವುದಾಗಿ ಮಾತು ಕೊಟ್ಟಿತು. ಕೊಟ್ಟ ಮಾತು ಪ್ರಾಣ ಹೋದರೂ ಉಳಿಸಿಕೊಳ್ಳಲೇನು ಅದು ಭಾರತವೇ? ಪಾಕಿಸ್ತಾನಕ್ಕೆ ಕಾಶ್ಮೀರದಿಂದ ಹರಿಯುವ ನೀರನ್ನು ತಡೆಯಲಾರೆವೆಂದು ಕೊಟ್ಟ ಮಾತಿಗೆ ಇಂದಿಗೂ ಬದ್ಧರಾಗಿದ್ದೇವೆ. ಈ ನಡುವೆ ಪಾಕೀಸ್ತಾನ ಅದೆಷ್ಟು ಬಾರಿ ಭಯೋತ್ಪಾದನೆಯ ಮೂಲಕ ಬೆನ್ನಿಗಿರಿಯಿತೋ? ಪ್ರತ್ಯಕ್ಷ ಕದನಕ್ಕಿಳಿದು ಭಾರತವನ್ನು ಮೆತ್ತಗೆ ಮಾಡುವ ಪ್ರಯತ್ನ ಮಾಡಿತೋ? ಭಾರತ ಮಾತ್ರ ಎಂದಿನಂತೆ ಗೆದ್ದ ನಂತರವೂ ನೀರ ಬಾಂಧವ್ಯವನ್ನು ಕೆಡಿಸಿಕೊಳ್ಳಲಿಲ್ಲ.

3

ಚೀನಾ ಈ ಬಗೆಯ ಬಾಂಧವ್ಯಗಳನ್ನು ಲೆಕ್ಕಕ್ಕಿಟ್ಟುಕೊಳ್ಳುವುದೇ ಇಲ್ಲ. ಅದಕ್ಕೇನಿದ್ದರೂ ತನ್ನ ಗಡಿ ವಿಸ್ತರಣೆಯಾಗುತ್ತಿರಬೇಕಷ್ಟೇ. ಭಾರತದ ಕಮ್ಯುನಿಷ್ಟರ ಬುದ್ಧಿಯೂ ಅದೇ ಅಲ್ಲವೇ? ತಮಗೆ ಪೂರಕವೆನಿಸಿದರೆ ಪರಿಸರ ಎನ್ನಿ, ಬುಡುಕಟ್ಟು ಜನರ ನಂಬಿಕೆ ಎನ್ನಿ. ತಮಗೆ ಬೇಡವಾದಾಗ ಅವುಗಳನ್ನೇ ಮೂಢನಂಬಿಕೆ ಎಂದುಬಿಡಿ. ಒಟ್ಟಿನಲ್ಲಿ ಅಡಿಪಾಯ ವಿಸ್ತರಿಸಿಕೊಳ್ಳುತ್ತ ಸಾಗಬೇಕು. 2003 ರ ಆರಂಭದಲ್ಲಿ ಭಾರತದ ಹಿತಾಸಕ್ತಿಯನ್ನು ಗೌಣ ಮಾಡಿ ಚೀನಿ ವಿಜ್ಞಾನಿಗಳು ಬ್ರಹ್ಮಪುತ್ರದ ಜಲಾನಯನ ಪ್ರದೇಶದಲ್ಲಿ 68 ಮಿಲಿಯನ್ ಕಿಲೊ ವ್ಯಾಟ್ಗಳಷ್ಟು ಬೃಹತ್ ಜಲ ವಿದ್ಯುತ್ ಯೋಜನೆಗಳನ್ನು ಪ್ರಸ್ತುತಪಡಿಸಿದರು. ಇದು ಚೀನಾದ ಶೇಕಡಾ 10 ರಷ್ಟು ವಿದ್ಯುತ್ ಸಮಸ್ಯೆ ನೀಗಿಸಬಲ್ಲ ಯೋಜನೆಯಾಗಿತ್ತು. ಆದರೆ ಈ ನೀರನ್ನೇ ನಂಬಿ ಕುಳಿತ ನೆರೆ ರಾಷ್ಟ್ರಗಳ ಕೃಷಿ ಪರಿವಾರಕ್ಕೇ ಸಂಚಕಾರ ತರಲು ಸಾಕಿತ್ತು. ಇದನ್ನು ಜಲ ಯುದ್ಧವೆಂದೇ ಅನೇಕರು ಆರೋಪಿಸಿದರು. ನೆರೆ ರಾಷ್ಟ್ರಗಳ ಪ್ರತಿರೋಧಕ್ಕೆ ತೆಪ್ಪಗಾದ ಚೀನಿ ಸಕರ್ಾರ ಇವೆಲ್ಲ ಬಾರತ ಹುಟ್ಟಿಸುತ್ತಿರುವ ಭ್ರಮೆ, ತನಗೆ ಅಂತಹ ಯಾವ ಆಲೋಚನೆಯೂ ಇಲ್ಲವೆಂದು ಕೈಚೆಲ್ಲಿತು. ಆದರೆ ಒಳಗಿಂದೊಳಗೆ ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. 2015 ರ ನವೆಂಬರ್ನಲ್ಲಿ ಒಂದೂವರೆ ಬಿಲಿಯನ್ ಡಾಲರುಗಳ ಜéಾಂಗ್ಮು ಜಲವಿದ್ಯುತ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದಾಗಲೇ ಚೀನಾ ಮುಂದೇನು ಮಾಡಬಹುದೆಂದು ಅಂದಾಜಾಗಿದ್ದು. ಇದರ ಇನ್ನೂ ಐದು ಹಂತಗಳು ಒಂದೊಂದಾಗಿ ಉದ್ಘಾಟನೆಗೊಳ್ಳುವ ಸಮಯ ಸನಿಹದಲ್ಲಿದೆ. ಈ ಹಂತದಲ್ಲಿಯೇ ಬ್ರಹ್ಮಪುತ್ರ ಜಲವಿದ್ಯುತ್ ಯೋಜನೆಯನ್ನು ಘೋಷಿಸಿತು ಚೀನಾ. ನೀರನ್ನು ಅಗತ್ಯವಿದ್ದಷ್ಟು ಉಳಿಸಿಕೊಳ್ಳಲಾಗುತ್ತದೆ ಇದರಿಂದ ನದಿಯ ಮುಂದಿನ ಹರಿವಿಗೆ ಧಕ್ಕೆಯಾಗಲಾರದು ಎಂಬ ಚೀನೀ ವಾದ ಒಪ್ಪಿಕೊಳ್ಳಲು ಖಂಡಿತ ಯೋಗ್ಯವಲ್ಲ. ಭಾರತ ಸಕರ್ಾರದ ಜಲಮೂಲಕ್ಕೆ ಸಂಬಂಧಿಸಿದ ಮಾಜಿ ಕಾರ್ಯದಶರ್ಿ ರಾಮಸ್ವಾಮಿ ಅಯ್ಯರ್ ಅವರ ಪ್ರಕಾರ, ಜಲ ವಿದ್ಯುತ್ ಯೋಜನೆಗೆ ನೀರನ್ನು ಸಂಗ್ರಹಿಸಿ ಟಬರ್ೈನುಗಳಿಗೆ ಅಗತ್ಯಬಿದ್ದಾಗ ನೀರನ್ನು ಹರಿಸುವ ಪ್ರಕ್ರಿಯೆ ಇದೆಯಲ್ಲ ಅದೇ ನೀರನ್ನು ವಿಷಕಾರಿಯಾಗಿಸಿಬಿಡುತ್ತದೆ. ಜಲ ಚರಗಳು ಬದುಕಲು ಯೋಗ್ಯವಲ್ಲದ ಸ್ಥಿತಿಯನ್ನು ನಿಮರ್ಾಣ ಮಾಡಿಬಿಡುತ್ತದೆ. ಅವುಗಳನ್ನೇ ನಂಬಿಕೊಂಡು ಬದುಕಿರುವ ಇತರ ರಾಷ್ಟ್ರಗಳ ಕಥೆಯೇನು? ಹಾಗಂತ ಅಭಿವೃದ್ಧಿಯ ಆಲೋಚನೆ ಮಾಡಲೇಬಾರದೆಂದಲ್ಲ, ಅಕ್ಕಪಕ್ಕದ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಷ್ಟೇ. ಸದ್ಯಕ್ಕಂತೂ ಚೀನಾವನ್ನು ಅದರ ಯಾವ ನೆರೆಯ ರಾಷ್ಟ್ರಗಳೂ ನಂಬುವ ಸ್ಥಿತಿಯಲ್ಲಿಲ್ಲ. ಭಾರತದ ವಿರುದ್ಧವಂತೂ ಚೀನಾ ನೀರಿನ ಶಸ್ತ್ರವನ್ನೇ ಬಳಸುವ ಎಲ್ಲ ಯೋಜನೆಗಳನ್ನು ರೂಪಿಸುತ್ತಿದೆಯೆಂದು ಯುದ್ಧ ತಜ್ಞ ಬ್ರಹ್ಮಾ ಚೆಲ್ಲಾನಿ ಬಲು ಹಿಂದೆಯೇ ಎಚ್ಚರಿಕೆ ಕೊಟ್ಟಿದ್ದರು. ಈಗ ಅದು ಸತ್ಯವಾಗುವ ಎಲ್ಲ ಲಕ್ಷಣಗಳನ್ನು ತೋರುತ್ತಿದೆ.

ಬ್ರಹ್ಮಪುತ್ರದುದ್ದಕ್ಕೂ ಜಲ ವಿದ್ಯುತ್ ಯೋಜನೆಗಳನ್ನು ಘೋಷಿಸಿದ ಕೆಲವು ದಿನಗಳಲ್ಲಿಯೇ ತಿಕ್ಕಾಟ ಆರಂಭವಾಗಿತ್ತು. ಭಾರತ ಆಗಲೇ ಸೂಕ್ಷ್ಮವಾಗಿ ಪ್ರತಿಕ್ರಿಯಿಸಲಾರಂಭಿಸಿತ್ತು. ಪ್ರತಿಕ್ರಿಯೆ ಖಾರವಾಗಿದ್ದುದಕ್ಕೆ ಎಕಾನಾಮಿಕ್ ಟೈಮ್ಸ್ ಸೂಕ್ತ ಕಾರಣಗಳನ್ನೂ ಪಟ್ಟಿ ಮಾಡಿತ್ತು. ಎಲ್ಲಕ್ಕೂ ಮೊದಲನೆಯದಾಗಿ ಹೀಗೆ ಅಣೇಕಟ್ಟು ಕಟ್ಟುವ ಮುನ್ನ ಯಾವ ದ್ವಿಪಕ್ಷೀಯ ಒಪ್ಪಂದಗಳನ್ನೂ ಚೀನಾ ಮಾಡಿಕೊಂಡಿರಲಿಲ್ಲ. ಈ ಅಣೇಕಟ್ಟಿನ ನಿಮರ್ಾಣದಿಂದ ಅರುಣಾಚಲದ ಮೇಲಿನ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಬಹುದೆಂದು ಚೀನಾದ ಲೆಕ್ಕಾಚಾರವಿತ್ತು. ಒಮ್ಮೆ ಈ ಅಣೇಕಟ್ಟು ನಿಮರ್ಾಣಗೊಂಡರೆ ಭಾರತದ ನದಿಗಳಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿಬಿಡುತ್ತದೆಂಬ ತಜ್ಞರ ಅಭಿಪ್ರಾಯ. ನದಿ ಹುಚ್ಚಾಪಟ್ಟೆ ಹರಿಯುವಾಗ ನೀರಿನ ಕುರಿತ ಅಂಕಿ ಅಂಶವನ್ನು ಕೊಡಲಾರದೆಂದು ಚೀನಾ ಹೇಳಿಬಿಟ್ಟರೆ ಅದು ಅಪಾಯಕಾರಿಯಾಗಿಬಿಡುತ್ತದೆ ಎಂಬ ಸಹಜ ಆತಂಕ. ಒಮ್ಮೆ ಜಲ ವಿದ್ಯುತ್ ಯೋಜನೆಯ ಹೆಸರಲ್ಲಿ ಅಣೇಕಟ್ಟು ಕಟ್ಟಿಕೊಂಡರೆ ನದಿಯನ್ನು ತಿರುಗಿಸುವ ಚೀನಾ ಕಲ್ಪನೆಗೆ ಇಂಬು ಕೊಟ್ಟಂತಾಗುತ್ತದೆ. ಈ ಬೃಹತ್ ಅಣೇಕಟ್ಟುಗಳು ಒಡೆದರೆ ಅದರ ನೇರ ಪ್ರಭಾವ ಭಾರತದ ಈಶಾನ್ಯ ರಾಜ್ಯಗಳ ಮೇಲೆಯೇ. 2001ರಲ್ಲಿ ಟಿಬೇಟಿನ ಕೃತಕ ಅಣೇಕಟ್ಟೊಂದು ಒಡೆದುದರ ಪರಿಣಾಮವಾಗಿ ಅರುಣಾಚಲದಲ್ಲಿ ಪ್ರವಾಹದ ಪರಿಸ್ಥಿತಿ ನಿಮರ್ಾಣವಾಗಿ 26ಕ್ಕೂ ಹೆಚ್ಚು ಜನ ತೀರಿಕೊಂಡಿದ್ದರು ಮತ್ತು 140 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ನಷ್ಟವಾಗಿತ್ತು.

4

ನರೇಂದ್ರ ಮೋದಿಯವರ ಆಗಮನದ ನಂತರ ಭಾರತ ಆಕ್ರಮಕ ರಾಜತಾಂತ್ರಿಕ ನೀತಿಯನ್ನು ಅನುಸರಿಸುವುದನ್ನು ಗಮನಿಸುತ್ತಿದ್ದ ಚೀನಾ ಹೇಗಾದರೂ ಮಾಡಿ ಭಾರತದ ಬೆಳವಣಿಗೆಯ ಓಟಕ್ಕೆ ತಡೆ ಹಾಕಲೇಬೇಕೆಂದು ನಿರ್ಧರಿಸಿಬಿಟ್ಟಿತ್ತು. ಅದಕ್ಕೆ ಪೂರಕವಾಗಿಯೇ ತಾನು 2014ರಲ್ಲಿ ಸಿಕ್ಕಿಂಗೆ ಬಲು ಹತ್ತಿರದಲ್ಲಿ ಹಾದು ಹೋಗುವ ನದಿಗೆ ಅಡ್ಡಲಾಗಿ ಅಣೇಕಟ್ಟು ನಿಮರ್ಿಸುವ ಲಾಲ್ಹೊ ಯೋಜನೆಯನ್ನು ಘೋಷಿಸಿದ್ದು. ಈ ಹಿನ್ನೆಲೆಯಲ್ಲಿಯೇ ಈ ನದಿಗೆ ಸೇರಿಕೊಳ್ಳುವ ನದಿಯೊಂದನ್ನು ಅಡ್ಡಗಟ್ಟಿದ್ದು ಚೀನಾ. ಈ ಯೋಜನೆಯ ಜೊತೆಜೊತೆಯಲ್ಲಿಯೇ ನೇಪಾಳಕ್ಕೆ ರಸ್ತೆ ಯೋಜನೆಯನ್ನು ಬಿಚ್ಚಿಟ್ಟ ಚೀನಾ ಅಲ್ಲಿಂದ ವಿರೋಧವಿಲ್ಲದಂತೆ ಮಾಡಿಕೊಂಡಿತ್ತು. ಪರಿಸ್ಥಿತಿಯ ಸೂಕ್ಷ್ಮತೆ ಗ್ರಹಿಸಿದ ಭಾರತ ಹಂತ ಹಂತವಾಗಿ ಇವೆಲ್ಲವನ್ನೂ ವಿರೋಧಿಸುತ್ತ ಚೀನಾಕ್ಕೆ ಉಸಿರುಗಟ್ಟಿಸುವ ವಾತಾವರಣ ನಿಮರ್ಿಸಿತ್ತು. ಆಗಲೇ ಡೋಕ್ಲಾಂನಲ್ಲಿ ತಗಾದೆ ತೆಗೆದು ತನ್ನೊಂದಿಗೆ ಆಟ ಆಡಿದರೆ ಯುದ್ಧವೇ ಗತಿ ಎಂದು ಎಚ್ಚರಿಸಲು ಪ್ರಯತ್ನ ಪಟ್ಟಿದ್ದು ಚೀನಾ. ಅದು ತಿರುಗು ಬಾಣವಾದಾಗ ಅಸ್ಸಾಂನಲ್ಲಿ ಕೃತಕ ಪ್ರವಾಹ ಪರಿಸ್ಥಿತಿ ಉಂಟು ಮಾಡುವ ಹೀನ ಕೃತ್ಯಕ್ಕಿಳಿಯಿತು. ಅಸ್ಸಾಂನಲ್ಲಿ ಅದಾಗಲೇ 70 ಜನ ಪ್ರಾಣ ಕಳಕೊಂಡಿದ್ದಾರೆ. 25 ಲಕ್ಷ ಜನ ತೊಂದರೆಗೀಡಾಗಿದ್ದಾರೆ. ಘೇಂಡಾಮೃಗಗಳು ಸತ್ತಿವೆ. ಮನುಕುಲದ ಮಾತಾಡುವ ಮಾವೋವಾದಿಗಳು ಮಾತ್ರ ಬಾಯಿಗೆ ಬೀಗ ಜಡಿದು ಕುಂತಿದ್ದಾರೆ. ಚೀನಿ ಬಿಸ್ಕತ್ತುಗಳನ್ನು ತಿಂದವರಿಂದ ಹೆಚ್ಚಿನದೇನು ನಿರೀಕ್ಷಿಸಲು ಸಾಧ್ಯ ಹೇಳಿ.

ಈ ನಡುವೆ ಡೋಕ್ಲಾಂನಿಂದ ಭಾರತ ಹಿಂದೆ ಸರಿಯುವವರೆಗೂ ಜಲ ಸಂಬಂಧೀ ಅಂಕಿಅಂಶಗಳನ್ನು ಹಂಚಿಕೊಳ್ಳಲಾಗದೆಂದು ಚೀನಾ ಖಡಾಖಂಡಿತವಾಗಿ ಹೇಳಿಬಿಟ್ಟಿದೆ. ಪ್ರತ್ಯಕ್ಷ ಯುದ್ಧ ಮಾಡಲು ಹಿಂದೇಟು ಹಾಕಿದ ಚೀನಾ ಈಗ ಜನಸಾಮಾನ್ಯರನ್ನು, ವನ್ಯ ಜೀವಿಗಳನ್ನು ಕೊಲ್ಲುವ, ಪರಿಸರ ಸಂಪತ್ತನ್ನು ನಾಶ ಮಾಡುವ ಜಲ ಕದನವೆಂಬ ಛದ್ಮಯುದ್ಧಕ್ಕೆ ಇಳಿದಿದೆ. ಈ ಪ್ರಮಾಣದ ಹತಾಶೆಯಾ?

Comments are closed.