ವಿಭಾಗಗಳು

ಸುದ್ದಿಪತ್ರ


 

ಭಾರತ ಒಡೆಯಹೊರಟವರಿಗೆ, ಬಲೂಚಿಸ್ತಾನವೇ ಉತ್ತರ!!

ಒಂದು ಮುಸ್ಲೀಂ ರಾಷ್ಟ್ರ ಮತ್ತೊಂದನ್ನು ಮಟ್ಟಹಾಕಲು ತೈಲನಿಧಿಯನ್ನೇ ಆಯುಧವಾಗಿ ಬಳಸುತ್ತಿವೆ. ಒಂದು ರಾಷ್ಟ್ರ ಹಠಕ್ಕೆ ಬಿದ್ದು ತೈಲದ ಬೆಲೆ ಇಳಿಸಿದರಾಯ್ತು, ಮೆರೆಯುತ್ತಿರುವ ಇತರೆ ರಾಷ್ಟ್ರಗಳೆಲ್ಲ ಬೀದಿಗೆ ಬಂದುಬಿಡುತ್ತವೆ. ಈಗಾಗಲೇ ಅರಬ್ ರಾಷ್ಟ್ರಗಳು ಭಯಾನಕವಾದ ಬೇಗುದಿ ಅನುಭವಿಸುತ್ತಿವೆ. ಇದೇ ಬೆಲೆ ಇನ್ನೊಂದು ವರ್ಷ ಮುಂದುವರಿದರೆ ಅನೇಕ ರಾಜರು ದಿವಾಳಿಯಾಗುತ್ತಾರೆ. ಕೆಲಸಕ್ಕೆಂದು ಆ ರಾಷ್ಟ್ರಗಳಿಗೆ ಹೋದ ಅನ್ಯದೇಶೀಯರು ಮರಳಿಬಿಡುತ್ತಾರೆ. ಅಲ್ಲಿಗೆ ಶಾಲೆಗೆ ಹೋಗದ, ಕೂತು ತಿಂದ, ಐಷಾರಾಮಿ ಬದುಕು ಸವೆಸಿ ಈಗ ಭಿಕಾರಿಯಾದ, ಏಕಕಾಲಕ್ಕೇ ಮತಾಂಧನೂ ಪಶ್ಚಿಮದ ದಾಸನೂ ಆದ ಜನರಿಂದ ಮುಸ್ಲೀಂ ರಾಷ್ಟ್ರಗಳು ತುಂಬಿ ಹೋಗುತ್ತವೆ. ಖಲೀಫಾಗಳ ಕಾಲಕ್ಕೆ ಹೇಗೆ ಆಂತರಿಕ ಸಂಘರ್ಷಗಳು ನಡೆದವೋ ಅವುಗಳು ನೂರುಪಟ್ಟಾಗಿ ಮರುಕಳಿಸಿದರೂ ಅಚ್ಚರಿಯಿಲ್ಲ.

_85731828_hi002058953

ಜಗತ್ತಿನ ಒಟ್ಟಾರೆ ರಾಜಕೀಯವನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ, ‘ಮುಸಲ್ಮಾನರು ಮೂಲಭೂತವಾದಿಗಳಾಗಿದ್ದಷ್ಟೂ ಮತ್ತು ಹಿಂದೂಗಳು ಆಧುನಿಕತೆಗೆ ಒಗ್ಗಿಕೊಂಡಷ್ಟೂ ಪಶ್ಚಿಮದ ಬಂಡವಾಳಶಾಹಿಗಳಿಗೆ ಲಾಭ’.
ಇದು ಅರ್ಥವಾಗೋದು ಬಲು ಕಷ್ಟವೇನಲ್ಲ. ಹಿಂದೂಗಳು ವೇದಗಳಿಗೆ ಮರಳಿದರೆ ಜಾತಿ ಪದ್ಧತಿ ನಾಶವಾಗುತ್ತದೆ, ಬೌದ್ಧಿಕ ಸಾಮಥ್ರ್ಯ ವಿಸ್ತಾರಗೊಳ್ಳುತ್ತದೆ. ಜಗತ್ತಿನ ಮೇಲಿದ್ದ ತಮ್ಮ ಹಿಡಿತವನ್ನು ನೆನಪಿಸಿಕೊಂಡು ಅವರು ಮತ್ತೆ ಬೆಳೆದು ನಿಲ್ಲುತ್ತಾರೆ. ಅದು ಪಶ್ಚಿಮದ ಏಕಸ್ವಾಮ್ಯಕ್ಕೆ ಧಕ್ಕೆ. ಅದೇ ವೇಳೆಗೆ ಮೂಲಭೂತವಾದಿಗಳಾಗಿರುವ ಮುಸಲ್ಮಾನರು ತಮ್ಮ ರಾಷ್ಟ್ರಗಳನ್ನು ಬೆಳವಣಿಗೆಯಾಗಲು ಬಿಡದೇ ಜನರನ್ನು ಆಧುನಿಕ ಶಿಕ್ಷಣದಿಂದ ವಂಚಿತರನ್ನಾಗಿಸಿ ತಂತ್ರಜ್ಞಾನದ ಓಟದಲ್ಲಿ ಹಿಂದೆ ನಿಲ್ಲುವಂತೆ ಮಾಡುತ್ತಾರೆ. ಹೀಗಾಗಿ ಬಡತನದಿಂದ ಪಶ್ಚಿಮಕ್ಕೆ ಕೆಳಹಂತದ ಕೂಲಿಕಾಮರ್ಿಕರಾಗಿ ಹೊರಡುತ್ತಾರೆ. ಹಣ ಸಂಗ್ರಹಗೊಂಡರೂ ಅದನ್ನು ಪಶ್ಚಿಮ ರಾಷ್ಟ್ರಗಳಿಗೇ ಕೊಟ್ಟು ಮತ್ತೊಂದು ರಾಷ್ಟ್ರದ ನಾಶಕ್ಕೆ ಶಸ್ತ್ರ ಖರೀದಿ ಮಾಡುತ್ತಾರೆ! ಹೇಗಾದರೂ ಪಶ್ಚಿಮಕ್ಕೇ ಲಾಭ.
ಸುಮ್ಮನೆ ಅವಗಾಹನೆಗೆ ಅಂತ ಹೇಳೋದು. 1947ರಲ್ಲಿ ಪಶ್ಚಿಮದಿಂದ ಸ್ವಾತಂತ್ರ್ಯವನ್ನು ಭಾರತ-ಪಾಕೀಸ್ತಾನ ಎರಡೂ ಪಡಕೊಂಡಿದ್ದವು. 69 ವರ್ಷಗಳ ನಂತರ ಭಾರತ ಮತ್ತು ಪಾಕೀಸ್ತಾನಗಳು ತುಲನೆ ಮಾಡಲಾಗದ ಸ್ಥಿತಿಗೆ ತಲುಪಿಬಿಟ್ಟಿವೆ. ಕಳೆದ ಎರಡು ವರ್ಷಗಳಲ್ಲಿಯಂತೂ ಭಾರತ ತನ್ನ ಮೂಲಸ್ವರೂಪದೆಡೆಗೆ ಸಾಗುವ ಪ್ರಯತ್ನ ಮಾಡುತ್ತ ಪಶ್ಚಿಮ ಹುಬ್ಬೇರಿಸುವಂತಹ ಬೆಳವಣಿಗೆ ಸಾಧಿಸುತ್ತಿದೆ. ಅತ್ತ ಪಾಕೀಸ್ತಾನ ಅಮೇರಿಕಾ, ಚೀನಾ ಮತ್ತು ಅರಬ್ ರಾಷ್ಟ್ರಗಳ ಹಣಕ್ಕಾಗಿ ಜೊಲ್ಲು ಸುರಿಸುತ್ತ ನೇಪಾಳ-ಬಾಂಗ್ಲಾಗಳ ಮೂಲಕ ಖೋಟಾ ನೋಟು, ಗಾಂಜಾ ಅಕ್ರಮ ಸಾಗಣೆ ಮಾಡುತ್ತಾ ಮಧ್ಯಯುಗೀನ ಬದುಕು ನಡೆಸುತ್ತಿದೆ .

d0a70-coachtosyriachoicetruthfb
ಇದು ಇಂದು ನಿನ್ನೆಯ ಕತೆಯಲ್ಲ, ಆರಂಭದಿಂದಲೂ ಕೂಡ ಹಾಗೆಯೇ. ಪ್ರವಾದಿ ಮೊಹಮ್ಮದ್ ಪೈಗಂಬರರು ಮತ ಸ್ಥಾಪನೆಯ ವೇಳೆ ವಿಶ್ವಾಸವಿಲ್ಲದವರೊಟ್ಟಿಗೆ ಕಾದಾಡಬೇಕಾಗಿ ಬಂದಿತ್ತು ನಿಜ. ಆದರೆ ಅವರ ಕಾಲಾನಂತರ ಖಲೀಫಾ ಪಟ್ಟವನ್ನಲಂಕರಿಸಿದವರೆಲ್ಲ ವಿಸ್ತರಣೆಯ ನೆಪದಲ್ಲಿ ಅನೇಕ ಕದನಗಳನ್ನು ಬೇರೆಯವರೊಂದಿಗೆ ಮತ್ತು ತಮ್ಮವರೊಂದಿಗೂ ಮಾಡಬೇಕಾಗಿ ಬಂತು. ಮೊದಲ ಖಲೀಫಾ ಅಬೂ ಬಕರ್ 60ಕ್ಕೂ ಹೆಚ್ಚಿನ ಪೂರ್ಣ ಪ್ರಮಾಣದ ಯುದ್ಧ ನಡೆಸಿದನೆಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ‘ಕೆಚ್ಚಿನಿಂದ ಹೋರಾಡಿರಿ, ಶರಣಾಗದೇ ಸಾವನ್ನಪ್ಪಿರಿ’ ಎಂಬ ಅಬೂಬಕರ್ ರವರ ಪ್ರಸಿದ್ಧ ಮಾತು ಹೋರಾಟಗಾರರಲ್ಲಿ ವೀರ್ಯ ತುಂಬಿತ್ತು. ‘ಕೃಷಿ ಪದ್ಧತಿಗೆ ಬೆನ್ನೊಡ್ಡಿ, ಅಲೆಮಾರಿಗಳಾಗಿ ದೋಚಿ ಹೊಟ್ಟೆ ಹೊರೆದುಕೊಳ್ಳುವ ಪರಿಪಾಠವಿರಿಸಿಕೊಂಡಿದ್ದ ಬೆದೋವಿನ್ ಬುಡಕಟ್ಟಿನ ಜನಾಂಗಕ್ಕೆ ಅಬೂಬಕರ್ನ ಕರೆ ಅತ್ಯಂತ ಸ್ವಾಭಾವಿಕವೂ, ಲಾಭದಾಯಕವೂ, ಉಪಯುಕ್ತವೂ ಆಗಿತ್ತು’ ಎಂದಿದ್ದಾನೆ ಲಾಸಿಯೋ ಲೀರಿ. ಅವನ ನಂತರ ಖಲೀಫಾ ಆಗಿ ನೇಮಕಗೊಂಡ ಓಮರ್ ಕೂಡ ಯುದ್ಧದ ಮೂಲಕ ಮತ ವಿಸ್ತರಿಸುತ್ತಲೇ ನಡೆದ. ಪಷರ್ಿಯಾದ ಮೇಲೆ ಜಯಗಳಿಸಿ ಇಸ್ಲಾಂಗೆ ಎಲ್ಲರನ್ನೂ ಎಳೆದು ತಂದ. ಹೀಗೆ ವಶಪಡಿಸಿಕೊಂಡ ಗುಲಾಮರಲ್ಲಿಯೇ ಒಬ್ಬನಾಗಿದ್ದ ಲೂಲುವಾ ಓಮರ್ನಿಗೆ ಆಪ್ತನಾಗಿ ಸಮಯ ಸಾಧಿಸಿ ಅವನನ್ನು ಕೊಂದುಬಿಟ್ಟ. ಇಂದಿಗೂ ಪಷರ್ಿಯನ್ನರ ಈ ಹಗೆತನ ಮುಂದುವರಿದೇ ಇದೆ. ಅವರ ಪಾಲಿಗೆ ಅಬೂ ಲೂಲುವಾ ದೇಶಭಕ್ತ! ಮುಂದಿನ ಖಲೀಫಾನದ್ದೂ ಇದೇ ಕತೆ. ಪ್ರವಾದಿಯವರ ಅಳಿಯನ ನೇತೃತ್ವದ ನೂರಾರು ಜನ ಖಲೀಫಾರ ಕೋಣೆಗೆ ನುಗ್ಗಿ ಅವರನ್ನು ಕೊಂದು ಹೆಂಡತಿಯ ಕೈಬೆರಳುಗಳನ್ನು ಕತ್ತರಿಸಿ ಹಾಕಿದರು. ಮುಂದೆ ಅಲಿ ಖಲೀಫಾ ಆದಮೇಲೆ ಎಲ್ಲವೂ ಸರಿಯಾಗುತ್ತದೆಂದೆಣಿಸಿದರೆ, ಹಾಗಾಗಲಿಲ್ಲ. ಮತ್ತೆ ಕಿರಿಕಿರಿ. ಭಿನ್ನ ಭಿನ್ನ ಬುಡಕಟ್ಟುಗಳು ಬಡಿದಾಡಲಾರಂಭಿಸಿದವು. ಪ್ರತಿಯೊಂದು ಬುಡಕಟ್ಟಿಗೂ ತಾನೇ ಶ್ರೇಷ್ಠ ಮತ್ತು ತಾವು ಅನುಸರಿಸುವ ಇಸ್ಲಾಂನ ಮಾರ್ಗವೇ ಪ್ರವಾದಿ ಪ್ರಣೀತ ಎಂದು ದೃಢವಾದ ನಂಬಿಕೆ ಇತ್ತು.
ಮೊದಮೊದಲು ದಾರು ಉಲ್ ಹಬರ್್ನ್ನು ದಾರ್ ಉಲ್ ಇಸ್ಲಾಂ ಮಾಡಿ ಬಿಡುವ ಪ್ರಯತ್ನದಲ್ಲಿ ಕದನಗಳು ನಡೆದರೂ ಆಮೇಲಾಮೇಲೆ ಒಂದು ಇಸ್ಲಾಂ ಪಂಥವೇ ಮತ್ತೊಂದರೊಂದಿಗೆ ಬಡಿದಾಡುವ ಪೃಥೆ ಶುರುವಾಯಿತು. ಅರಬ್ನ ಬುಡಕಟ್ಟು ಜನಾಂಗಗಳು ತಮ್ಮ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಭರದಲ್ಲಿ ಕುರಾನ್ ಮತ್ತು ಹದಿಸ್ಗಳನ್ನು ತಮಗೆ ತಕ್ಕಂತೆ ವ್ಯಾಖ್ಯಾನಿಸಿ ಇತರರನ್ನು ಹೀಗೆಳೆದರು. ಹೆಚ್ಚು ಹೆಚ್ಚು ಮೂಲಭೂತವಾದ ಹೆಚ್ಚು ಹೆಚ್ಚು ಸ್ಪಷ್ಟತೆಯ ಕಡೆಗೆ ಕೊಂಡೊಯ್ಯುತ್ತದೆಯೆಂದು ಅವರು ನಂಬಿ ಅದಕ್ಕೆ ತಕ್ಕಂತೆ ನಡೆದುಕೊಂಡರು. ಬರಬರುತ್ತಾ ಇಸ್ಲಾಂ ರಾಷ್ಟ್ರಗಳು ಆಂತರಿಕ ಜಗಳಗಳಿಂದ ತಮ್ಮ ಪ್ರಭುತ್ವ ಕಳೆದುಕೊಂಡವು. ಅದರಲ್ಲೂ ಭಾರತ, ಇರಾನ್, ಟಕರ್ಿಗಳಲ್ಲಿ ತಮ್ಮ ಸಾಮಥ್ರ್ಯ ಕ್ಷೀಣಿಸಿದ ಮೇಲೆ ಇಸ್ಲಾಂನ ಏಕಸ್ವಾಮ್ಯ ಹೆಚ್ಚು ಕಡಿಮೆ ನಶಿಸಿಹೋಗಿತ್ತು. ಪಶ್ಚಿಮ ರಾಷ್ಟ್ರಗಳೂ ಮುಸ್ಲೀಂ ರಾಷ್ಟ್ರಗಳ ಮೇಲಿನ ಪ್ರಭುತ್ವವನ್ನು ಆನಂದಿಸಲಾರಂಭಿಸಿದವು.
ಆದರೆ 20ನೇ ಶತಮಾನದ ಆರಂಭದಲ್ಲಿ ತೈಲ ನಿಕ್ಷೇಪ ದೊರೆತ ನಂತರ ಮುಸ್ಲೀಂ ರಾಷ್ಟ್ರಗಳ ದೆಸೆಯೇ ಬದಲಾಯ್ತು. ಇಂದು ಅರಬ್ ರಾಷ್ಟ್ರಗಳಿಗೆ ಕಾಲಿಟ್ಟರೆ ಕಂಡುಬರುವ ಕಣ್ಣು ಕೋರೈಸುವ ಅಭಿವೃದ್ಧಿ, ಸಂಪತ್ತು ಎಲ್ಲವೂ ತೈಲ ನಿಕ್ಷೇಪದ ಪ್ರಭಾವವೇ. ದುದರ್ೈವವೆಂದರೆ ಇದೇ ನಿಕ್ಷೇಪ ಇಸ್ಲಾಂ ಜಗತ್ತಿಗೆ ಶಾಪವಾಗಿ ಪರಿಣಮಿಸಿದೆ. ತೈಲದಿಂದ ದೊರೆತ ಹಣ ಈ ರಾಷ್ಟ್ರಗಳ ಸಮ ಪ್ರಮಾಣದ ಅಭಿವೃದ್ಧಿಗೆ ತಡೆ ಒಡ್ಡಿದೆ. ಒಂದೆಡೆ ಆಧುನಿಕ ವಿಜ್ಞಾನವನ್ನು ತೆಗಳುವ ಮತಾಂಧರನ್ನು ಬೆಳೆಯಗೊಟ್ಟು ಮತ್ತೊಂದೆಡೆ ಬೆಳವಣಿಗೆಗೆಂದು ಪಶ್ಚಿಮದ ಎಲ್ಲಾ ತಂತ್ರಜ್ಞಾನಗಳನ್ನೂ ಅಪ್ಪಿಕೊಳ್ಳುತ್ತಿರುವ ಈ ರಾಷ್ಟ್ರಗಳು ಒಂದು ರೀತಿಯಲ್ಲಿ ಆಧುನಿಕ ಜಗತ್ತಿನಲ್ಲಿ ಮಧ್ಯಯುಗೀನ ಜೀವನ ನಡೆಸುತ್ತಿವೆ. ಅದಕ್ಕೇ ಅಮೇರಿಕಾ-ಯೂರೋಪುಗಳು ಕೆಳವರ್ಗದ ಅತಿ ಕಡಿಮೆ ಸಂಬಳದ ನೌಕರರಿಗಾಗಿ ಮತ್ತು ತಮ್ಮ ಶಸ್ತ್ರಾಸ್ತ್ರಗಳ ಮಾರಾಟಕ್ಕಾಗಿ ಇಸ್ಲಾಂ ರಾಷ್ಟ್ರಗಳನ್ನು ಅವಲಂಬಿಸಿವೆ. ಆ ಮೂಲಕ ಮತ್ತೆ ಅವರನ್ನು ಕಾಲಡಿ ಇಟ್ಟುಕೊಂಡು ಮೆರೆಯುತ್ತಿದೆ.

oil-dollar
ಯಾವುವೂ ತಿಳಿದವರ ಪಾಲಿಗೆ ಹೊಸ ಸಂಗತಿಯಲ್ಲ. ಸದ್ದಾಂ ಹುಸೇನನನ್ನು ಅಮೇರಿಕಾ ಮುಲಾಜಿಲ್ಲದೇ ನೇಣಿಗೇರಿಸಿತ್ತಲ್ಲ ಅಂದು ಜಗತ್ತಿನ ಯಾವುದಾದರೂ ಮುಸ್ಲೀಂ ರಾಷ್ಟ್ರಗಳು ದನಿ ಎತ್ತಿದ್ದವಾ? ಸದ್ದಾಂ ತೈಲ ಮಾರಾಟದ ವಿಚಾರದಲ್ಲಿ ಅಮೇರಿಕಾದ ಏಕಸ್ವಾಮ್ಯ ಮುರಿಯಲು ಒಪೇಕ್ ರಾಷ್ಟ್ರಗಳನ್ನು ಪ್ರಭಾವಿಸುವ ಪ್ರಯತ್ನದಲ್ಲಿದ್ದುದು ಸುಳ್ಳಾ? ಹಾಗೇನಾದರೂ ಸದ್ದಾಂ ತನ್ನ ಪ್ರಯತ್ನದಲ್ಲಿ ಗೆದ್ದು ಬಿಟ್ಟಿದ್ದರೆ ಜಾಗತಿಕ ಸ್ಥಿತಿಗತಿಗಳೇ ಬೇರೆಯಾಗಿಬಿಟ್ಟಿರುತ್ತಿದ್ದವು. ಅಮೇರಿಕಾ ಬಿಡಲಿಲ್ಲ. ತನ್ನ ಪತ್ರಕರ್ತರ ಬಳಗ ಬಳಸಿಕೊಂಡು ಅವನನ್ನು ಕ್ರೂರಿಯೆಂದು ಚಿತ್ರಿಸಿತು; ಪ್ರಪಂಚವನ್ನು ನಾಶ ಮಾಡಬಲ್ಲಷ್ಟು ಶಸ್ತ್ರಾಸ್ತ್ರ ಹೊಂದಿದ್ದಾನೆಂದು ಪುಕಾರು ಹಬ್ಬಿಸಿತು. ಅವನನ್ನು ಕೊಲ್ಲುವುದರಲ್ಲಿ ಮನುಕುಲದ ಹಿತವಿದೆಯೆಂದು ಇಲ್ಲಿನ ಬಾಡಿಗೆ ಪತ್ರಕರ್ತರೂ ಬರೆದರು. ಕೊನೆಗೊಮ್ಮೆ ಅವನನ್ನು ಬಂಧಿಸಿ ನೇಣಿಗೇರಿಸಲಾಯ್ತು. ಇರಾನ್ನೊಡನೆ ಯುದ್ಧ ಮಾಡುವಾಗ ಇದೇ ಸದ್ದಾಂಗೆ ಶಸ್ತ್ರಾಸ್ತ್ರ ಮಾರಿ ಹಣ ಗಳಿಸಿದ್ದು ಅಮೇರಿಕಾ. ಈಗ ಅವನು ಎದುರು ಬಿದ್ದಾಗ ಸಲೀಸಾಗಿ ಅವನನ್ನು ಮುಗಿಸಿಬಿಟ್ಟಿತು. ಅಫ್ಘಾನಿಸ್ತಾನದ್ದೂ ಇದೇ ಕತೆ. ರಷ್ಯಾದೊಂದಿಗೆ ವೈರತ್ವ ಇರುವವರೆಗೆ ಅಮೇರಿಕಾ ಆ ರಾಷ್ಟ್ರವನ್ನು ಚಿನ್ನದ ಹರಿವಾಣದಲ್ಲಿಟ್ಟು ನೋಡಿಕೊಂಡಿತು. ಮೂಲಭೂತವಾದಿಗಳಿಗೆ ಪ್ರೋತ್ಸಾಹ ನೀಡಿತು. ಹಣವನ್ನು ಶಸ್ತ್ರಾಸ್ತ್ರಗಳನ್ನೂ ತಲುಪಿಸಿತು. ಜಗತ್ತಿನೆಲ್ಲ ಮುಸಲ್ಮಾನ ರಾಷ್ಟ್ರಗಳೂ ಅವರ ಬೆಂಬಲಕ್ಕೆ ನಿಲ್ಲುವಂತೆ ಮಾಧ್ಯಮಗಳ ಮೂಲಕ ಪ್ರಚೋದಿಸಿತು. ರಷ್ಯಾ ಸೋತು ಹಿಮ್ಮಟ್ಟಿ ಛಿದ್ರವಾದ ಮೇಲೆ ಅಫ್ಘಾನಿಸ್ತಾನದ ಮೇಲಿನ ಪಶ್ಚಿಮದ ಮೋಹ ಕಡಿಮೆಯಾಯಿತು. ಅಷ್ಟೇ ಅಲ್ಲ. ಮುಂದೊಮ್ಮೆ ವಲ್ಡರ್್ ಟ್ರೇಡ್ ಸೆಂಟರ್ನ ದಾಳಿಯ ನೆಪದಲ್ಲಿ ಒಸಾಮಾನನ್ನು ಹುಡುಕುತ್ತ ಅಫ್ಘಾನಿಸ್ತಾನವನ್ನೇ ಭೂಲೋಕದ ನರಕ ಮಾಡಿಬಿಟ್ಟಿತು. ಅಲ್ಲಿಯವರೆಗೂ ಜಗತ್ತಿನ ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿದ್ದ ಒಸಾಮಾ ಕದ್ದು-ಮುಚ್ಚಿ ಬದುಕಬೇಕಾದ ಪರಿಸ್ಥಿತಿ ಬಂತು. ಸ್ವತಃ ಸೌದಿ ಅರೇಬಿಯಾ ಬೆಂಬಲಕ್ಕೆ ಬರಲಿಲ್ಲ. ಅವರು ಅದಾಗಲೇ ಅಮೇರಿಕಾದ ಗುಲಾಮರಾಗಿ ಆಗಿತ್ತು. ಬೇಕೆಂದಾಗ ಬೆಳೆಸುವ ಬೇಡವೆಂದಾಗ ಬಲಿಕೊಡುವ ಅಮೇರಿಕದವರ ತಾಳಕ್ಕೆ ಸೌದಿಯೂ ಸೇರಿದಂತೆ ಇಸ್ಲಾಂ ರಾಷ್ಟ್ರಗಳು ಕುಣಿದಾಡುತ್ತಿದ್ದವು!
ಪಶ್ಚಿಮ ರಾಷ್ಟ್ರಗಳು ಇಸ್ಲಾಂನ ಕುರಿತಂತೆ ಇತರರಿಗೆಲ್ಲ ಭಯ ಹುಟ್ಟಿಸುತ್ತಲೇ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಿವೆ. ಇಸ್ಲಾಂ ರಾಷ್ಟ್ರಗಳ ಬಳಿ ಇರುವ ತೈಲ ನಿಕ್ಷೇಪವನ್ನು ಹೊರತೆಗೆಯುವ ಎಲ್ಲಾ ಗುತ್ತಿಗೆಗಳು ಅವರ ಬಳಿಯಲ್ಲಿಯೇ ಇವೆ. ತೈಲವನ್ನು ತೆಗೆದು ಅದನ್ನು ಮಾರೋದೂ ಅವರೇ. ಇವೆಲ್ಲಕ್ಕೂ ದೊಡ್ಡ ಮೊತ್ತದ ಹಣ ಪಡೆದ ಮೇಲೂ ಉಳಿದ ಹಣದಿಂದ ಸಿರಿವಂತರಾದ ಮುಸ್ಲೀಂ ದೊರೆಗಳನ್ನು ಯುದ್ಧಕ್ಕೆ ಅಥವಾ ತಮ್ಮೊಳಗಿನ ಸಂಘರ್ಷಕ್ಕೆ ಪ್ರೇರೇಪಿಸಿ ಶಸ್ತ್ರ ಮಾರಿ ಹಣವನ್ನೂ ಮಾಡಿಕೊಳ್ಳುತ್ತಾರೆ. ಇಸ್ಲಾಂನ ಧ್ವಜವನ್ನು ಜಗತ್ತಿನಲ್ಲೆಲ್ಲಾ ಹಾರಿಸುತ್ತೇವೆನ್ನುತ್ತಲೇ ಬೆಪ್ಪುತಕ್ಕಡಿಗಳಾಗುತ್ತಾರೆ ಸೌದಿಯ ದೊರೆಗಳು!

isis-iraq-syria-crisis
ಇಂದು ಇಸ್ಲಾಂ ರಾಷ್ಟ್ರಗಳು ಶಕ್ತಿಹೀನ ಚಿಕ್ಕ ಚಿಕ್ಕ ರಾಷ್ಟ್ರಗಳಾಗಿ ತುಂಡಾಗಿ ಹೋಗಿವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಸಾಂಸ್ಕೃತಿಕವಾಗಿ, ಸೈನಿಕ ದೃಷ್ಟಿಯಿಂದಲೂ ಜಗತ್ತಿಗೆ ಸವಾಲಾಗಿ ನಿಲ್ಲಬಲ್ಲ ಒಂದೇ ಒಂದು ಮುಸ್ಲೀಂ ರಾಷ್ಟ್ರ ಭೂಮಿಯ ಮೇಲೆ ಉಳಿದಿಲ್ಲ. ಈ ರಾಷ್ಟ್ರಗಳು ಫ್ರಾನ್ಸ್, ಜರ್ಮನಿಗಳಂತೆ ಬುದ್ಧಿವಂತವಾಗಿಲ್ಲ, ಅಮೇರಿಕದಂತೆ ಯುದ್ಧ ನಿಪುಣವಾಗಿಲ್ಲ, ಭಾರತದಂತೆ ಸರ್ವಮಾನ್ಯವಾಗಿಲ್ಲ, ಕೊನೆಗೆ ಚೀನಾದಂತೆ ಬಲಿಷ್ಠ ಉತ್ಪಾದಕ ರಾಷ್ಟ್ರವೂ ಆಗಿಲ್ಲ. ಅವರೆಲ್ಲಾ ತಮ್ಮ ಹಣದಲ್ಲಿ ಎಷ್ಟು ಕುರಾನ್ ಮುದ್ರಿಸಿದ್ದೇವೆ, ಜೀಹಾದ್ಗಾಗಿ ಎಷ್ಟು ಖಚರ್ು ಮಾಡಿದ್ದೇವೆ ಎಂದು ಲೆಕ್ಕ ಕೊಡುವುದರಲ್ಲಿಯೇ ತೃಪ್ತವಾಗಿವೆ. ಹೀಗಾಗಿ ಇಂದು ಅತ್ಯಂತ ಹಿಂದುಳಿದ ಬಡರಾಷ್ಟ್ರಗಳ ಪಟ್ಟಿಯಲ್ಲೂ ಇಸ್ಲಾಂ ಅನುಸರಿಸುವ ರಾಷ್ಟ್ರಗಳೇ ಮುಂದೆ ನಿಂತಿರೋದು!
ಇವೆಲ್ಲಾ ಮುಸಲ್ಮಾನರಿಗೆ ಅರ್ಥವಾಗುತ್ತಿಲ್ಲವಾ? ಅರ್ಥವಾಗಿರುವುದರಿಂದಲೇ ಆಧುನಿಕತೆಯೆಡೆಗೆ ದುಬೈ, ಬಹರೈನ್ಗಳೆಲ್ಲ ಹೊರಳಿಬಿಟ್ಟಿವೆ. ಅವರೆಲ್ಲ ಈಗ ಬದುಕುವ ಹೊಸ ಮಾರ್ಗ ಹುಡುಕುತ್ತಿದ್ದಾರೆ. ಮಧ್ಯಯುಗದಲ್ಲಿ ಬದುಕಿದರಾಗದು. 21ನೇ ಶತಮಾನದಲ್ಲಿ ಹೆಜ್ಜೆ ಹಾಕಬೇಕೆಂದು ಅವರಿಗೆ ಅರಿವಾಗಿದೆ.
ಆದರೇನು? ಒಳಸೇರಿಕೊಂಡ ಕದನದ ಹುಚ್ಚು ಒಂದಿನಿತೂ ಆರಿಲ್ಲ. ಒಂದು ಮುಸ್ಲೀಂ ರಾಷ್ಟ್ರ ಮತ್ತೊಂದನ್ನು ಮಟ್ಟಹಾಕಲು ತೈಲನಿಧಿಯನ್ನೇ ಆಯುಧವಾಗಿ ಬಳಸುತ್ತಿವೆ. ಒಂದು ರಾಷ್ಟ್ರ ಹಠಕ್ಕೆ ಬಿದ್ದು ತೈಲದ ಬೆಲೆ ಇಳಿಸಿದರಾಯ್ತು, ಮೆರೆಯುತ್ತಿರುವ ಇತರೆ ರಾಷ್ಟ್ರಗಳೆಲ್ಲ ಬೀದಿಗೆ ಬಂದುಬಿಡುತ್ತವೆ. ಈಗಾಗಲೇ ಅರಬ್ ರಾಷ್ಟ್ರಗಳು ಭಯಾನಕವಾದ ಬೇಗುದಿ ಅನುಭವಿಸುತ್ತಿವೆ. ಇದೇ ಬೆಲೆ ಇನ್ನೊಂದು ವರ್ಷ ಮುಂದುವರಿದರೆ ಅನೇಕ ರಾಜರು ದಿವಾಳಿಯಾಗುತ್ತಾರೆ. ಕೆಲಸಕ್ಕೆಂದು ಆ ರಾಷ್ಟ್ರಗಳಿಗೆ ಹೋದ ಅನ್ಯದೇಶೀಯರು ಮರಳಿಬಿಡುತ್ತಾರೆ. ಅಲ್ಲಿಗೆ ಶಾಲೆಗೆ ಹೋಗದ, ಕೂತು ತಿಂದ, ಐಷಾರಾಮಿ ಬದುಕು ಸವೆಸಿ ಈಗ ಭಿಕಾರಿಯಾದ, ಏಕಕಾಲಕ್ಕೇ ಮತಾಂಧನೂ ಪಶ್ಚಿಮದ ದಾಸನೂ ಆದ ಜನರಿಂದ ಮುಸ್ಲೀಂ ರಾಷ್ಟ್ರಗಳು ತುಂಬಿ ಹೋಗುತ್ತವೆ. ಖಲೀಫಾಗಳ ಕಾಲಕ್ಕೆ ಹೇಗೆ ಆಂತರಿಕ ಸಂಘರ್ಷಗಳು ನಡೆದವೋ ಅವುಗಳು ನೂರುಪಟ್ಟಾಗಿ ಮರುಕಳಿಸಿದರೂ ಅಚ್ಚರಿಯಿಲ್ಲ.

qna_Saudi-Terrorism-15122015
ಭಾರತದ ಮುಸಲ್ಮಾನರು ತುತರ್ಾಗಿ ಗಮನಿಸಬೇಕಾದ ಅಂಶವೇ ಇದು. ಭಾರತದೊಂದಿಗೆ ಇರುವುದೆಂದರೆ ಅಭಿವೃದ್ಧಿಯೊಂದಿಗೆ ಬದುಕೋದು ಅಂತ. ಇಲ್ಲಿ ನೆಲೆಸಿರೋದೆಂದರೆ ನೆಮ್ಮದಿಯನ್ನು ಅನುಭವಿಸೋದು ಅಂತರ್ಥ. ಇದನ್ನು ಪೂರ್ಣ ಇಸ್ಲಾಂ ರಾಷ್ಟ್ರ ಮಾಡಿಬಿಡುವುದೆಂದರೆ ಮತ್ತೊಂದು ಬಾಂಗ್ಲಾವನ್ನೋ, ಪಾಕೀಸ್ತಾನವನ್ನೋ ಇರಾಕ್-ಇರಾನ್ಗಳನ್ನೋ ಸೃಷ್ಟಿಸುವುದು ಅಂತಲೇ ಅರ್ಥ. ಆಮೇಲೆ ಗೊತ್ತಲ್ಲ. ನಾವೇನಿದ್ದರೂ ಅಮೇರಿಕಾದ ಕೈಗೊಂಬೆಗಳಾಗಿ ಚೀನಾದ ಕಾಲೆಳೆಯುತ್ತಲೋ, ಐಸಿಸ್ನ ಉಗ್ರಗಾಮಿಗಳಿಗೆ ತರಬೇತು ಕೊಟ್ಟು ಯುವಕರನ್ನು ಪೂರೈಸುತ್ತಲೋ ಹೇತ್ಲಾಂಡಿ ರಾಷ್ಟ್ರವಾಗಿ ಬದುಕಬೇಕಷ್ಟೇ. ಅಲ್ಲದೇ ಮತ್ತೇನು? ತಮಗಿರುವ ಘನ ಪರಂಪರೆಯನ್ನು ಮರೆತು ಪಾಕೀಸ್ತಾನ ದಿನ ದೂಡುತ್ತಿರುವ ಪರಿಸ್ಥಿತಿ ಕಂಡರೆ ಇದು ಅರಿವಾಗದೇನು? ಅದಕ್ಕೇ ಭಾರತದಲ್ಲಿ ಜೆಎನ್ಯುನಲ್ಲಿನ ಜೀಹಾದಿ ಕಾಮ್ರೇಡ್ ಪಡೆ ಭಾರತದಿಂದ ಬಿಡುಗಡೆ ಕೇಳುವ ವೇಳೆಗೆ ಪಾಕ್ ಆಕ್ರಮಿತ ಕಾಶ್ಮೀರದ ಜನ ಪಾಕೀಸ್ತಾನದಿಂದಲೇ ಬಿಡುಗಡೆ ಬಯಸುತ್ತಿದ್ದಾರೆ. ಅತ್ತ ಪಾಕೀಸ್ತಾನಕ್ಕೆ ಸೇರಿಕೊಂಡ ಬಲೂಚಿಸ್ತಾನದ ಜನ ಪಾಕೀಸ್ತಾನದಿಂದ ಸ್ವಾತಂತ್ರ್ಯ ಬಯಸಿ ಭಾರತದೊಳಕ್ಕೆ ಸೇರಿಕೊಳ್ಳಲು ತೀವ್ರತರದ ಹೋರಾಟ ನಡೆಸಿದ್ದಾರೆ.
ಮೂಲಭೂತವಾದ ಆರಂಭದಲ್ಲಿ ಅನ್ಯರ ಮನೆಗಳನ್ನು ಸುಟ್ಟಿತ್ತಲ್ಲ; ಈಗ ಸ್ವಂತ ಮನೆಗಳನ್ನೇ ಸುಡಲಾರಂಭಿಸಿದೆ. ಈ ಹೊತ್ತಲ್ಲಿ ಪ್ರತ್ಯೇಕತೆಯ ಬೊಂಬಡಾ ಬಜಾಯಿಸುವದನ್ನು ನಿಲ್ಲಿಸಿ, ಶಾಂತಿಯ ಪಾಠ ಹೇಳಿ ಸೆಕ್ಯುಲರ್ ಇಸ್ಲಾಂನ ಬೋಧನೆ ಜಗತ್ತಿಗೆ ನೀಡಬಲ್ಲ ಹೊಣೆಯನ್ನು ಭಾರತದ ಮುಸಲ್ಮಾನರು ಹೊರೋದು ಬೇಡವೇ?

Comments are closed.