ವಿಭಾಗಗಳು

ಸುದ್ದಿಪತ್ರ


 

ಭಾರತ ಮಾತೆಗೆ ಜೈ ಎನ್ನುವಾಗಿನ ಆನಂದ ಆಜಾದಿ ಘೋಷಣೆಯಲ್ಲೆಲ್ಲಿ?!

1947ರಲ್ಲಿ ಪುಣ್ಯವಶಾತ್ ಇಲ್ಲಿ ಉಳಿದಿದ್ದರಿಂದ ಸುಂದರವಾದ ಬದುಕು ನಡೆಸಲು ಸಾಧ್ಯವಾಗಿದೆ ಎಂಬುದನ್ನು ಇಲ್ಲಿನ ಮುಸಲ್ಮಾನರು ಮರೆಯುವಂತಿಲ್ಲ. ಬಾಂಗ್ಲಾದ ಮುಸಲ್ಮಾನರು ತುತ್ತು ಕೂಳಿನ ಕೂಲಿಗಾಗಿ ಬೇಲಿದಾಟಿ ಭಾರತವನ್ನು ಹೊಕ್ಕುತ್ತಿರುವುದು ಕಣ್ಣೆದುರಿಗಿದೆ. ಪಾಕಿಸ್ತಾನದ ಬಡತನದ ಬೇಗೆ ಜನರಿಗಷ್ಟೇ ಅಲ್ಲ, ಸರ್ಕಾರವನ್ನೂ ಕಾಡುತ್ತಿದೆ. ಇನ್ನು ಚೀನಾದಲ್ಲಿ ಮುಸಲ್ಮಾನರು ಮತಪ್ರಚಾರವನ್ನೂ ಮಾಡುವಂತಿಲ್ಲವೆಂದು ಕೆಂಪು ದೊರೆಗಳು ತಾಕೀತು ಮಾಡಿದ್ದಾರೆ. ಅಫ್ಘಾನಿಸ್ತಾನ ಮತ್ತು ಅದರಾಚೆಗಿನ ಮುಸಲ್ಮಾನರ ಬದುಕು ಮೃಗಾಲಯದ ಪ್ರಾಣಿಗಳಂತೆ. ಚೌಕಟ್ಟಿನಲ್ಲಿಯೇ ಬದುಕಬೇಕು, ಸಾಯಿರೆಂದಾಗ ಸಾಯಬೇಕು ಅಷ್ಟೇ! ಎಲ್ಲವನ್ನೂ ಅವಲೋಕಿಸಿದಾಗ ದೃಗ್ಗೋಚರವಾಗುವ ಸತ್ಯ ಒಂದೇ. ‘ಹಿಂದುವಿನೊಂದಿಗೆ ಬದುಕಿರುವಾಗಲೇ ಮುಸಲ್ಮಾನನಿಗೆ ನೆಮ್ಮದಿ’.

1

ಬುದ್ಧಿಜೀವಿಗಳು ಅಂದರೇನೇ ಹಾಗೆ. ಅವರೊಂದಿಗೆ ಒಂದಷ್ಟು ಸಂತರೂ ಸೇರಿಕೊಂಡುಬಿಟ್ಟಿದ್ದಾರೆ. ತಾವು ಮಾತನಾಡುವ ವಿಷಯಗಳ ಕುರಿತಂತೆ ಪೂರ್ಣ ಅಧ್ಯಯನವನ್ನೇ ಮಾಡದೇ ಬಡಬಡಾಯಿಸಿಬಿಡುತ್ತಾರೆ. ಅವರಿಗೆಲ್ಲ ಹಿಂದು ಧರ್ಮವನ್ನು ಬೈದು ದೊಡ್ಡವರಾಗುವ, ಇಸ್ಲಾಂ-ಕ್ರಿಶ್ಚಿಯಾನಿಟಿಯನ್ನು ಅಟ್ಟಕ್ಕೇರಿಸಿ ವಿಶಾಲರಾಗುವ ತವಕ. ತಪ್ಪೇನಿಲ್ಲ ಬಿಡಿ. ಆದರೆ, ಕಣ್ಣೆದುರಿಗೆ ಕಾಣುವ ಸತ್ಯವನ್ನು ಧಿಕ್ಕರಿಸಿ, ಸುಳ್ಳನ್ನು ವೈಭವೀಕರಿಸುವ ಇಂಥವರು ಸಮಾಜಕ್ಕೆ ಬಲು ಅಪಾಯಕಾರಿ.

ಅಲ್ಲವೇ ಮತ್ತೆ? ಜಾತಿ-ಮತ ಭೇದಗಳಿಗೆ, ಅಸ್ಪೃಶ್ಯತೆಯ ಆಚರಣೆಗೆ ಹಿಂದು ಧರ್ಮವೇ ಕಾರಣವೆಂದು ಬೊಬ್ಬಿಡುವ ಈ ಬುದ್ಧಿವಂತರು, ಜಗತ್ತಿನಲ್ಲಿರುವ ಅಶಾಂತಿಗೆ ಇಸ್ಲಾಂ ಕಾರಣವೆಂದರೆ ಕೆಂಡಕೆಂಡವಾಗಿಬಿಡುತ್ತಾರೆ. ಧರ್ಮ ಇವನ್ನೆ ಬೋಧಿಸುತ್ತಾ ಅಂತ ಪ್ರಶ್ನಿಸುತ್ತಾರೆ. ಹಿಂದು ಧರ್ಮವೂ ಅಸ್ಪೃಶ್ಯತೆಯನ್ನು ಬೋಧಿಸುವುದಿಲ್ಲ ಎನ್ನುವುದನ್ನು ಮರೆಯುತ್ತಾರೆ.

ಮೇಲು-ಕೀಳುಗಳ ಆಚರಣೆ ಪ್ರತಿಯೊಬ್ಬ ವ್ಯಕ್ತಿಗೂ ಅಂಟಿಕೊಂಡು ಬಂದ ರೋಗ. ಪೀಠಾಧಿಶರುಗಳ ಪಲ್ಲಕ್ಕಿ ಉತ್ಸವವನ್ನೆಲ್ಲ ಧಿಕ್ಕರಿಸುವ ಉತ್ತರ ಕರ್ನಾಟಕದ ಸಂತರೊಬ್ಬರು ಭಕ್ತರ ಕೈಲಿ ತಾವು ನಮಸ್ಕಾರ ಮಾಡಿಸಿಕೊಳ್ಳುವುದೂ ತಪ್ಪೆಂದು ಮರೆತೇ ಬಿಡುತ್ತಾರೆ. ಮಾನವನ ಮಾನಸಿಕ ಸಮಸ್ಯೆ ಇದು. ತನ್ನ ಕೆಳಗೆ ಯಾರಾದರೂ ಇರಲೇಬೇಕೆಂದು ಭಾವಿಸುವುದು. ಯೋಗ್ಯತೆಯಿಂದ ಅದನ್ನು ಗಳಿಸಲಾಗದಿದ್ದರೆ, ಪೀಳಿಗೆಯಿಂದ ಬಂದದ್ದನ್ನು ಚಲಾಯಿಸುವುದು. ಬ್ರಾಹ್ಮಣ ತಾನು ಎಲ್ಲರಿಗಿಂತ ಮೇಲೆಂದರೆ, ಒಕ್ಕಲಿಗ-ಲಿಂಗಾಯತರು ಉಳಿದವರಿಗಿಂತ ತಾವು ಮೇಲೆನ್ನುತ್ತಾರೆ. ಕೊನೆಗೆ ದಲಿತರೂ ತಮ್ಮೊಳಗೆ ಯಾರು ಮೇಲೆ-ಕೆಳಗೆ ಎಂಬುದನ್ನು ಲೆಕ್ಕ ಹಾಕುತ್ತಲೇ ಇರುತ್ತಾರೆ. ಇದು ಜಗತ್ತಿನ ಇದೆ. ಮುಸಲ್ಮಾನರೂ ಹೊರತಲ್ಲ. ನೇರವಾಗಿ ಅರಬ್ಬರನ್ನೇ ಪೂರ್ವಜರಾಗಿ ಹೊಂದಿರುವ ‘ಅಶ್ರಫ್’ರು ಉನ್ನತ ಕುಲದವರೆನಿಸಿಕೊಂಡರೆ ಸ್ಥಳೀಯವಾಗಿ ಮತ ಪರಿವರ್ತನೆಯಾದ ‘ಅಜ್ಲಫ್’ಗಳು ಕೆಳಹಂತದವರು. ಕಾಶ್ಮೀರದ ಮುಸಲ್ಮಾನರಿಗೆ ಭಾರತದ ಇತರೆ ಮುಸಲ್ಮಾನರಿಗಿಂತ ತಾವು ಶ್ರೇಷ್ಠರೆಂಬ ಭಾವನೆ ಬಲಿತಿರುವ ಕಾರಣವೇ ಇದು; ಅವರು ಅರಬ್ಬರೊಂದಿಗೆ ಪೂರ್ವಜರನ್ನು ಹಂಚಿಕೊಳ್ಳುವ ಮೇಲ್ವರ್ಗದವರು ಅಂತ! ಅಶ್ರಫ್ರ ಪಂಗಡಕ್ಕೆ ಸೇರಿದವರು ಕೆಳವರ್ಗದ ಹೆಣ್ಣುಮಕ್ಕಳನ್ನು ಮದುವೆಯಾಗಬಹುದು. ಆದರೆ ಕೆಳವರ್ಗದ ಗಂಡಸರು ಮೇಲ್ವರ್ಗದ ಹೆಣ್ಣುಮಕ್ಕಳನ್ನು ಮದುವೆಯಾಗುವಂತಿಲ್ಲ! ಅನೇಕ ಉಲೆಮಾಗಳಂತೂ ಕೊಡು-ಕೊಳ್ಳು ಒಂದೇ ಜಾತಿಯಲ್ಲಿರಬೇಕೆಂದು ಆಗ್ರಹಿಸುವುದೂ ಇದೆ.

ಭಾರತದಲ್ಲಿ ಈ ಗೊಂದಲ ಮದುವೆಯವರೆಗೆ ಸೀಮಿತವಾಗಿದ್ದರೆ ಮುಸಲ್ಮಾನ ರಾಷ್ಟ್ರಗಳಲ್ಲಿ ಇದು ಎಲ್ಲದಕ್ಕೂ ಹಬ್ಬಿದೆ. ಹೀಗಾಗಿಯೇ ನ್ಯಾಯಸಮ್ಮತವಾಗಿಯೇ ಒಂದೊಂದು ಜಾತಿಯೂ ತನಗೆ ಬೇಕಾದಂತೆ ಭಯೋತ್ಪಾದಕರ ತಂಡಗಳನ್ನು ಕಟ್ಟಿಕೊಂಡು ಮತ್ತೊಬ್ಬರ ಮಸೀದಿಗಳನ್ನು ಧ್ವಂಸಗೊಳಿಸುತ್ತದೆ. ಪಾಕಿಸ್ತಾನದಲ್ಲಿ ಆಗಾಗ ನಡೆಯುವ ಬಾಂಬು ಘರ್ಷಣೆಗಳಿಗೆ ಜಾತಿಯೇ ಪ್ರಮುಖ ಕಾರಣ. ಎಲ್ಲಿ ಶಿಯಾ, ಸುನ್ನಿಗಳ ಅನುಪಾತ ಕದನ ನಡೆಸಲು ಪೂರಕವಾಗಿದೆಯೋ ಅ ನಿತ್ಯ ನರಕವೇ! ಇವರಿಬ್ಬರೂ ಅಲ್ಲದ ಮುಗ್ಧ ಜನಾಂಗವೇನಾದರೂ ಇವರ ನಡುವೆ ಸಿಕ್ಕುಬಿದ್ದರೆ ಕಥೆ ಮುಗಿದಂತೆಯೇ. ಧರ್ಮಗುರುಗಳನ್ನು ಒಪ್ಪಿಸಿಯೇ ಹರಿದು ತಿಂದುಬಿಡುತ್ತಾರೆ. ಐಸಿಸ್‌ನ ಕಥೆ ಇದೇ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಅಲ್ಶಾಮ ಸುನ್ನಿ ಜಿಹಾದಿ ಗುಂಪಾಗಿಯೇ ಜನ್ಮ ತಾಳಿದ್ದು. ಅವರ ಹೋರಾಟವಿರೋದು ನೇರ ಕ್ರಿಶ್ಚಿಯನ್ನರೋ ಅಥವಾ ಹಿಂದುಗಳೊಂದಿಗೋ ಅಲ್ಲ. ಜಗತ್ತಿನಾದ್ಯಂತ ಸುನ್ನಿ ಮುಸಲ್ಮಾನರನ್ನು ಅವರು ಗುಡ್ಡೆ ಹಾಕುತ್ತಿರುವುದು ಶಿಯಾಗಳ ಕಗ್ಗೊಲೆಗೆ! 1999ರಲ್ಲಿ ಅಬು ಝಕರಾವಿ ಹುಟ್ಟುಹಾಕಿದ ಈ ತಂಡ 2004ರ ವೇಳೆಗೆ ಇರಾಕಿನ ಅಲಕೈದಾ ಆಗಿ ಗುರುತಿಸಿಕೊಂಡಿತ್ತು. ಮುಂದೆ ಅಬೂ ಬಕ್ರ ಅಲ ಬಗ್ದಾದಿ ಇದಕ್ಕೊಂದು ರೂಪ ಕೊಟ್ಟು ಕ್ರೌರ್ಯದ ಅಧಿಕಾರಿಯಾಗಿ ಮೆರೆದ. 2004ರಲ್ಲಿ ಅಮೆರಿಕದ ಯುದ್ಧಕೈದಿಯಾಗಿ ಸೆರೆ ಸಿಕ್ಕಿದ್ದ ಈತ ಅಲ್ಲಿಂದ ಮರಳಿದ ನಂತರ ತನ್ನ ಯುದ್ಧಕಾಲದಿಂದಲೇ ಅನೇಕ ಭೂಭಾಗದ ಮೇಲೆ ಹಿಡಿತ ಸ್ಥಾಪಿಸಿದ. ಚೆಂಗಿಸ್ ಖಾನ್‌ಗಿಂತಲೂ ಕ್ರೂರವಾಗಿ ಅಧಿಕಾರಿಗಳೊಂದಿಗೆ ನಡೆದುಕೊಂಡ. ಇವರ ಆಕ್ರಮಣಕ್ಕೆ ಕುದರ್‌ಶ್ ಮತ್ತು ಯಜೀದಿ ಜನಾಂಗ ನುಚ್ಚುನೂರಾಯಿತು. ಹೆಣ್ಣುಮಕ್ಕಳು ಭೋಗದ ವಸ್ತುಗಳಾಗಿಬಿಟ್ಟರು.

ಅನುಮಾನ ಬಂದೆಡೆಯೆಲ್ಲ ಬಗೆಹರಿಸಿ ಇವರ ಮಾರ್ಗದ ಕಲ್ಲು-ಮುಳ್ಳುಗಳನ್ನು ತೆರವುಗೊಳಿಸಲು ಅನೇಕ ಮಲ್ವಿಗಳು-ಉಲೆಮಾಗಳಂತೂ ಇದ್ದೇ ಇರುತ್ತಾರೆ! ಹೇಳಿ, ಇವರು ಅಶಾಂತಿಗೆ ಕಾರಣರಲ್ಲವೇನು? ಸಹ-ಮಾನವರನ್ನು ಕೊಂದು ಸ್ವರ್ಗ ಪಡೆಯುವ ಮಾತನ್ನು ಭಗವಂತ ಎಂದಾದರೂ ಹೇಳಿರಲು ಸಾಧ್ಯವೇ? ಇವೆಲ್ಲ ಭಗವಂತನ ವಾಣಿಯನ್ನು ತಿರುಚಿ-ಮುರುಚಿ ವ್ಯಾಖ್ಯಾನಿಸಿದ ಪುಣ್ಯಾತ್ಮರ ಸಾಧನೆ ಅಷ್ಟೇ. ಸ್ವತಃ ಅನೇಕ ಮುಸಲ್ಮಾನ ಪಂಡಿತರು ಇದನ್ನು ವಿರೋಧಿಸಿ ತಮ್ಮದೇ ಆದ ಮಾರ್ಗಗಳನ್ನು ಗುರುತಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ, ಸಹಜೀವನವನ್ನು ನಡೆಸಿ ತಾವೂ ಆನಂದದಿಂದಿರುತ್ತಾರೆ; ಇತರರನ್ನೂ ಬದುಕಲು ಬಿಡುತ್ತಾರೆ. ಅಂಥವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕಾದ್ದು ಸರ್ಕಾರದ, ಸಂಘ ಸಂಸ್ಥೆಗಳ ಕರ್ತವ್ಯ.

ಹಾಗೆ ಸುಮ್ಮನೆ ಆಲೋಚಿಸಿ ನೋಡಿ. ಐಸಿಸ್‌ನ ಕದನ ಶಿಯಾಗಳ ವಿರುದ್ಧ ಸುನ್ನಿ ಜಿಹಾದಿಗಳದ್ದು. 2011ರ ಜನಗಣತಿಯ ಪ್ರಕಾರ ಭಾರತದಲ್ಲಿನ ಮುಸಲ್ಮಾನರ ಜನಸಂಖ್ಯೆ ಸುಮಾರು 18 ಕೋಟಿ. ಇದರಲ್ಲಿ ಸುಮಾರು 30 ಪ್ರತಿಶತದಷ್ಟು ಶಿಯಾಗಳೇ ಇದ್ದಾರೆ. ಅಂದರೆ ಐಸಿಸ್‌ನಂತಹ ಕದನದಲ್ಲಿ ಇಲ್ಲಿನ 5 ಕೋಟಿ ಮುಸಲ್ಮಾನರು ಭಾರತದ ಪರವಾಗಿಯೇ ಇರುತ್ತಾರೆಂದಾಯ್ತು. ಇನ್ನು ಇರಾನಿನಲ್ಲಿ ನೆಲೆ ಕಳೆದುಕೊಂಡು ಗುಜರಾತಿಗೆ ಬಂದು ನೆಲೆಸಿದ ಬೋಹ್ರಾ ಮುಸಲ್ಮಾನರು ವ್ಯಾಪಾರಿಗಳಾಗಿ ಈ ದೇಶದೊಂದಿಗೆ ಏಕರಸವಾಗಿಬಿಟ್ಟಿದ್ದಾರೆ. ಭಾರತದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ವ್ಯಾಪಿಸಿಕೊಂಡಿರುವ ಸೂಫಿಗಳೂ, ಅವರ ಬೇರೆ-ಬೇರೆ ವಿಭಾಗಗಳೂ ದೇಶದೊಂದಿಗೆ ಬಲವಾಗಿ ನಿಲ್ಲುವಂಥವೇ. ಇನ್ನು ಪಂಜಾಬ್-ಸಿಂಧ್ ಪ್ರಾಂತ್ಯಗಳಲ್ಲಿ ಹಬ್ಬಿದ ಮಿರ್ಜಾ ಗುಲಾಮ್ ಅಹಮದ್‌ರ ಕಾದಿಯಾನಿ ಪಂಥವೂ ರಾಷ್ಟ್ರದ ಪ್ರಶ್ನೆ ಬಂದಾಗ ಬಲವಾಗಿ ನಮ್ಮ ಕೈ ಹಿಡಿದುಕೊಂಡಿದೆ. ಇವರೊಟ್ಟಿಗೆ ಹದಿತ್‌ಗಳನ್ನು ಒಪ್ಪದ ಕುರಾನನ್ನೇ ಬಲವಾಗಿ ನಂಬುವ ಅಹ್ಲೆ ಕುರಾನ್ ಮಾರ್ಗಿಗಳೂ ಬದಲಾವಣೆಗಾಗಿ ನಿರಂತರ ಕೆಲಸ ಮಾಡುತ್ತಿರುವವರೇ ಆಗಿದ್ದಾರೆ. ಇದೆಲ್ಲವನ್ನೂ ಲೆಕ್ಕಾಚಾರ ಮಾಡಿದರೆ ಕಟ್ಟರ್‌ಪಂಥಿಯಾಗಿ ದೇಶದ ವಿರುದ್ಧ ನಿಲ್ಲುವವರ ಸಂಖ್ಯೆ ನಿಜಕ್ಕೂ ಅಲ್ಪಸಂಖ್ಯಾತವೇ! ಒಮ್ಮೆ ಅಂಥವರನ್ನು ಗುರುತಿಸಲು ಸಾಧ್ಯವಾದರೆ ಆಮೇಲೆ ಮಟ್ಟಹಾಕುವುದು ಕಷ್ಟದ ಸಂಗತಿಯೇನಲ್ಲ.

3
Shia Muslims hold a protest against Nimra Killing in Saudi Arabia at old city of Lucknow on monday.Express photo by Vishal Srivastav 04.01.2016

ಜೆಎನ್‌ಯು ಪ್ರಕರಣದ ವೈಶಿಷ್ಟ್ಯವೇ ಅದು. ಇಷ್ಟೂ ದಿನ ದೇಶದ ಜನ ಹಿಂದು-ಮುಸಲ್ಮಾನರಾಗಿ ವಿಭಜಿಸಲ್ಪಟ್ಟಿದ್ದರು. ಈ ಬಾರಿ ದೇಶಭಕ್ತ ಮತ್ತು ದೇಶದ್ರೋಹಿಗಳು ಎರಡೂ ಪಂಗಡದಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಟ್ಟರು. ‘ಭಾರತಮಾತಾ ಕಿ ಜೈ’ ಎಂದು ಹೇಳುವ, ಹೇಳಲೊಲ್ಲದ ಜನರನ್ನು ಸ್ಪಷ್ಟವಾಗಿ ಗುರುತಿಸುವಂತಾಯ್ತು. ದೇಶದ ಅಭಿವೃದ್ಧಿಗೆ ಪೂರಕವಾಗಿ ಇರುವ ಮುಸಲ್ಮಾನರನ್ನು ಕೇಂದ್ರ ಸರ್ಕಾರ ಗುರುತಿಸಿ ಮುಂಚೂಣಿಗೆ ತರುವ ಪ್ರಯತ್ನ ಮಾಡಿತು. ಸ್ವತಃ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಚ್ಚರಿಕೆಯ ನಡೆ ಇಟ್ಟರು. ಮೊದಲು ಪಶ್ಚಿಮದ ರಾಷ್ಟ್ರಗಳನ್ನು ಪ್ರಭಾವಿಸಿದರು. ಅಲ್ಲಿನ ಜನ, ಪತ್ರಿಕೆಗಳು ತಮ್ಮ ಬಗ್ಗೆ ಮಾತಾಡುವಂತೆ ಮಾಡಿಕೊಂಡರು. ಪಶ್ಚಿಮದ ಜೀವನವನ್ನೇ ಆದರ್ಶವೆಂದು ಭಾವಿಸಿರುವ ಸಿರಿವಂತ ಅರಬ್ ರಾಷ್ಟ್ರಗಳು ಈಗ ಮೋದಿಯನ್ನು ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತವು. ಸ್ವತಃ ಶೇಖ್‌ಗಳು ಕೈ ಕುಲುಕಿ ಸ್ವಾಗತಿಸಿದರು. ಸುನ್ನಿ ರಾಷ್ಟ್ರಗಳ ಹಣದಿಂದ ಕೊಬ್ಬಿ ಬೆಳೆದ ಜಿಹಾದಿಗಳಿಗೆ ಇಲ್ಲಿ ಗೊಂದಲ ಶುರುವಾಗಿತ್ತು.

5

ಅತ್ತ ಶಿಯಾ ಬಾಹುಳ್ಯದ ಇರಾನ್ ಮೋದಿಯ ಆಗಮನವನ್ನು ಎದುರು ನೋಡಲಾರಂಭಿಸಿತು. ಸುನ್ನಿಗಳಿಗಿಂತ ಭಾರತಕ್ಕೆ ಹತ್ತಿರವಾಗುವ ತವಕ ಅವರದ್ದು. ಆಗಲೇ ಚಬಹಾರ್ ಬಂದರಿನ ಅಭಿವೃದ್ಧಿಯ ನೀಲಿನಕಾಶೆಯನ್ನು ಭಾರತ ರೂಪಿಸಿ ಅವರೆದುರಿಗಿರಿಸಿದ್ದು. ತಾವು ನಂಬುವ, ಒಪ್ಪುವ ಧರ್ಮಗುರುಗಳೇ ಈ ದೇಶದ ಕುರಿತಂತೆ ಒಳ್ಳೆಯ ಮಾತುಗಳನ್ನಾಡುವಾಗ ಇಲ್ಲಿರುವ ಮುಸಲ್ಮಾನರು ತಮ್ಮ ‘ಕಾಲರ್ ಟೈಟ್’ ಮಾಡಿಕೊಳ್ಳದೇ ಇರುವುದು ಹೇಗೆ ಸಾಧ್ಯ?

6

ಭಾರತೀಯ ಮುಸಲ್ಮಾನರೂ ಅರ್ಥಮಾಡಿಕೊಳ್ಳಬೇಕಾದ ಸಂಗತಿಯೊಂದಿದೆ. 2011ರ ಜನಗಣತಿಯ ಪ್ರಕಾರ ಇಂಡೋನೇಷ್ಯಾದಲ್ಲಿ ಬಿಟ್ಟರೆ ಅತಿ ಹೆಚ್ಚು ಮುಸಲ್ಮಾನ ಜನಸಂಖ್ಯೆ ಇರೋದು ಭಾರತದಲ್ಲಿಯೇ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಪಾಕಿಸ್ತಾನಕ್ಕಿಂತಲೂ ಹೆಚ್ಚು ಮುಸಲ್ಮಾನರು ಭಾರತದಲ್ಲಿಯೇ ಇದ್ದಾರೆ. ಜಗತ್ತಿನಲ್ಲಿಯೇ ಎರಡನೇ ಸ್ಥಾನ. ಇಷ್ಟಾದರೂ ಅವರನ್ನು ಅಲ್ಪಸಂಖ್ಯಾತರೆಂದು ಕರೆದು ಇತರೆಲ್ಲರಿಗಿಂತಲೂ ಹೆಚ್ಚು ಸೌಲಭ್ಯಗಳನ್ನು ಕೊಟ್ಟು ನೋಡಿಕೊಳ್ಳಲಾಗುತ್ತಿದೆ. ಸ್ವತಃ ಪಾಕಿಸ್ತಾನದಲ್ಲಿಯೇ ಸುನ್ನಿಗಳೆದುರು ಧೈರ್ಯವಾಗಿ ಬದುಕಲು ಶಿಯಾಗಳು ಹೆಣಗಾಡುತ್ತಿರುವಾಗ ಭಾರತದಲ್ಲಿ ಸಮಾನ ನೆಮ್ಮದಿಯ ಖಾತ್ರಿಯನ್ನು ನೀಡಲಾಗಿದೆ. ಬಹುಸಂಖ್ಯಾತ ಹಿಂದುಗಳು ತಾವು ಬಹುದೇವತಾವಾದಿಗಳಾಗಿದ್ದರೂ ಪ್ರತಿನಿತ್ಯ ಮಸೀದಿಯಿಂದ ಹೊರಡುವ ‘ಅಹ್ ಒಬ್ಬರೇ ಸತ್ಯ’ ಎಂಬ ಮಾತನ್ನು ಶಾಂತವಾಗಿ ಕೇಳುತ್ತಾರೆ. ಈ ಪರಿಯ ಸಹಿಷ್ಣುತೆ ಮತ್ತೆಲ್ಲಿಯಾದರೂ ನೋಡಲು ಸಿಗುವುದೇನು? ಭಗವಂತನ ಸೃಷ್ಟಿಯ ಕಣ್ಣುಕುಕ್ಕುವ ಈ ಸೌಂದರ್ಯ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಇದನ್ನು ಉಳಿಸುವುದು ಬೇಡವೇ?

1947ರಲ್ಲಿ ಪುಣ್ಯವಶಾತ್ ಇಲ್ಲಿ ಉಳಿದಿದ್ದರಿಂದ ಸುಂದರವಾದ ಬದುಕು ನಡೆಸಲು ಸಾಧ್ಯವಾಗಿದೆ ಎಂಬುದನ್ನು ಇಲ್ಲಿನ ಮುಸಲ್ಮಾನರು ಮರೆಯುವಂತಿಲ್ಲ. ಬಾಂಗ್ಲಾದ ಮುಸಲ್ಮಾನರು ತುತ್ತು ಕೂಳಿನ ಕೂಲಿಗಾಗಿ ಬೇಲಿದಾಟಿ ಭಾರತವನ್ನು ಹೊಕ್ಕುತ್ತಿರುವುದು ಕಣ್ಣೆದುರಿಗಿದೆ. ಪಾಕಿಸ್ತಾನದ ಬಡತನದ ಬೇಗೆ ಜನರಿಗಷ್ಟೇ ಅಲ್ಲ, ಸರ್ಕಾರವನ್ನೂ ಕಾಡುತ್ತಿದೆ. ಇನ್ನು ಚೀನಾದಲ್ಲಿ ಮುಸಲ್ಮಾನರು ಮತಪ್ರಚಾರವನ್ನೂ ಮಾಡುವಂತಿಲ್ಲವೆಂದು ಕೆಂಪು ದೊರೆಗಳು ತಾಕೀತು ಮಾಡಿದ್ದಾರೆ. ಅಫ್ಘಾನಿಸ್ತಾನ ಮತ್ತು ಅದರಾಚೆಗಿನ ಮುಸಲ್ಮಾನರ ಬದುಕು ಮೃಗಾಲಯದ ಪ್ರಾಣಿಗಳಂತೆ. ಚೌಕಟ್ಟಿನಲ್ಲಿಯೇ ಬದುಕಬೇಕು, ಸಾಯಿರೆಂದಾಗ ಸಾಯಬೇಕು ಅಷ್ಟೇ! ಎಲ್ಲವನ್ನೂ ಅವಲೋಕಿಸಿದಾಗ ದೃಗ್ಗೋಚರವಾಗುವ ಸತ್ಯ ಒಂದೇ. ‘ಹಿಂದುವಿನೊಂದಿಗೆ ಬದುಕಿರುವಾಗಲೇ ಮುಸಲ್ಮಾನನಿಗೆ ನೆಮ್ಮದಿ’. ಇದನ್ನು ಅರ್ಥೈಸಿಕೊಂಡು ‘ಭಾರತ ಮಾತಾ ಕಿ ಜೈ’ ಎನ್ನುವುದರಲ್ಲಿಯೇ ಜಗತ್ತಿನ ಒಳಿತು ಅಡಗಿದೆ ಹೊರತು, ‘ಆಜಾದಿ’ ಘೋಷಣೆ ಕೂಗುವುದರಲ್ಲಿಲ್ಲ! ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಕ್ರಿಶ್ಚಿಯನ್, ಇಸ್ಲಾಂ ಮತ್ತು ಎಡಪಂಥೀಯ ಗುಂಪುಗಳೆಲ್ಲ ಬರಬರುತ್ತಾ ಶಾಂತವಾಗುತ್ತಿವೆ. ಅಮೆರಿಕದ ರಾಜಕೀಯದಲ್ಲಿ ಬೀಸುತ್ತಿರುವ ಬಿರುಗಾಳಿ, ಕ್ರಿಶ್ಚಿಯನ್ ಮಿಷನರಿಗಳನ್ನೂ ಉಸಿರುಗಟ್ಟಿಸುತ್ತಿದೆ. ಅತ್ತ ಚೀನಾ ಆರ್ಥಿಕವಾಗಿ ಕುಸಿಯುತ್ತಿರುವ ಲಕ್ಷಣ ತೋರುತ್ತಿದ್ದಂತೆ ಇಲ್ಲಿನ ಕಾಮ್ರೇಡುಗಳು ತರಗೆಲೆಗಳಂತಾಗಿಬಿಟ್ಟಿದ್ದಾರೆ. ಬಂಗಾಳದಿಂದಂತೂ ಅವರ ಮೂಲೋತ್ಪಾಟನೆಯೇ ಆದಂತೆ. ಇನ್ನು ಕೇರಳದಲ್ಲೂ ಜಾಗೃತಿಯ ಅಲೆ ಬೀಸುತ್ತಿದೆ. ಕರ್ನಾಟಕವೂ ಸೇರಿದಂತೆ ಕೆಲವೆಡೆ ಕೆಂಪು ಪಳೆಯುಳಿಕೆಗಳು ಫಾಸಿಲ್ಲುಗಳಾಗುತ್ತಿವೆ. ಇನ್ನು ಜಿಹಾದಿ ಉನ್ಮತ್ತತೆಯಿಂದ ಮೆರೆಯುತ್ತಿದ್ದ ಭಯೋತ್ಪಾದಕರು ಭಾರತದ ರಕ್ಷಣಾ ಇಲಾಖೆ ಚುರುಕಾಗುತ್ತಿದ್ದಂತೆ ಕಳೆಗುಂದಿಬಿಟ್ಟಿದ್ದಾರೆ. ಇವರದೆ ವಿಷ ವರ್ತುಲ. ಜಿಹಾದಿಗಳು ಇಲ್ಲಿ ಭಯೋತ್ಪಾದನೆ ನಡೆಸಲು ಇಲ್ಲಿನ ಪ್ರತ್ಯೇಕತಾವಾದಿಗಳು ಬೆಂಬಲ ಕೊಡುತ್ತಾರೆ. ಅವರಿಗೆ ಮಿಷನರಿಗಳ ಹಣ ಸಂದಾಯವಾಗುತ್ತದೆ. ಚೀನಾ ಶಸ್ತ್ರಗಳನ್ನು ಕಾಮ್ರೇಡುಗಳ ಮೂಲಕ ತಲುಪಿಸುತ್ತದೆ. ಬುದ್ಧಿಜೀವಿಗಳು, ಅವರೊಟ್ಟಿಗಿನ ಕೆಲ ಕಾವಿಧಾರಿಗಳು ಜೊತೆಗೆ ಒಂದಷ್ಟು ರಾಜಕಾರಣಿಗಳೂ ಈ ಕೃತ್ಯಗಳಿಗೆ ಬೆಂಬಲ ಸೂಚಿಸಿ ಮಾತನಾಡುತ್ತಾರೆ. ಬಾಟ್ಲಾ ಹೌಸ್ ಎನ್‌ಕೌಂಟರ್ ಮೋಸ ಅಂತಾರೆ, ಇಶ್ರತ್ ಜಹಾನ್‌ಳನ್ನು ಬಿಹಾರದ ಮಗಳು ಅಂತಾರೆ. ಕೊನೆಗೆ ಸಂಜೋತಾ ಎಕ್ಸ್ ಪ್ರೆಸ್‌ನಲ್ಲಿ ಬಾಂಬ್ ಸೋಟಕ್ಕೆ ಕಾರಣರಾದವರೂ ಕೇಸರಿ ಭಯೋತ್ಪಾದಕರು ಎಂದು ಹಬ್ಬಿಸಿಬಿಡುತ್ತಾರೆ. ಅಕಸ್ಮಾತ್ ಸಿಕ್ಕಿಬಿದ್ದರೆ ಮತ್ತದೇ ರಾಗ ಶುರುವಾಗುತ್ತದೆ, ‘ಭಯೋತ್ಪಾದನೆಗೂ ಧರ್ಮಕ್ಕೂ ಸಂಬಂಧವೇ ಇಲ್ಲ; ಯಾವ ಧರ್ಮಗ್ರಂಥವೂ ಮತ್ತೊಬ್ಬರನ್ನು ಕೊಲ್ಲುವಂತೆ ಬೋಧಿಸುವುದಿಲ್ಲ’. ಹಾಗಿದ್ದ ಮೇಲೆ ಜಗತ್ತಿನಲ್ಲಿ ನಡೆಯುತ್ತಿರುವ ಉಗ್ರವಾದದ ಮೂಲ ಬೀಜ ಎಲ್ಲಿದೆ?

ಇದಕ್ಕೆ ಉತ್ತರವಾಗಬಲ್ಲವರು ಭಾರತೀಯ ಮುಸಲ್ಮಾನರು ಮಾತ್ರ. ತಮ್ಮ ಪರಂಪರೆಯ ಶ್ರೇಷ್ಠತೆಯನ್ನು ನೆನೆದು ಜಗತ್ತಿಗೆ ಅದನ್ನು ಹಂಚಲು ಅವರು ಸಿದ್ಧರಾಗಿ ನಿಂತರೆ, ಎಲ್ಲರೊಡನೆ ಒಂದಾಗಿ ಬದುಕುವ ಕಲೆಯನ್ನು ಕಲಿಸಿಕೊಟ್ಟರೆ ‘ವಿಶ್ವಗುರು’ ಭಾರತದ ಕನಸು ಬಲುಬೇಗ ನನಸಾದೀತು.

ಅಂದಹಾಗೆ, ಜೆಎನ್‌ಯು ಪ್ರಕರಣದ ಜಾಡು ಹಿಡಿದು ಹೊರಟು ಹತ್ತು-ಹದಿನೈದು ವಾರಗಳೇ ಕಳೆದವು. ವಿಶ್ವಗುರುತ್ವದ ಹಾದಿಯಲ್ಲಿನ ಅಲೆಗ್ಸಾಂಡರನ ಮೈಲಿಗಲ್ಲು ಹಾಗೆಯೇ ಉಳಿಯಿತು. ಮುಂದಿನ ವಾರದಿಂದ ಎಂದಿನ ದಾರಿಗೆ ಮರಳೋಣ; ಇತಿಹಾಸದ ಪುಟ ತಿರುವಿಹಾಕೋಣ.

Comments are closed.