ವಿಭಾಗಗಳು

ಸುದ್ದಿಪತ್ರ


 

ಮಗಧ ಸಾಮ್ರಾಜ್ಯ ಕಲಿಸುವ ನೂರೆಂಟು ಪಾಠಗಳು..

ಪುರಾಣಗಳ ಪ್ರಕಾರ ಈ ಶಿಶುನಾಗನ ವಂಶದ ಆಳ್ವಿಕೆಯ ಅವಧಿ ಯಾವುದು ಗೊತ್ತೇ? ಕ್ರಿ.ಪೂ 20 ರಿಂದ ಕ್ರಿ.ಪೂ 17ನೇ ಶತಮಾನಗಳ ನಡುವೆ. ಬಿಂಬಸಾರನನ್ನು ಈ ವಂಶದ ನಾಲ್ಕನೇ ರಾಜನೆಂದು ಪುರಾಣ ಹೇಳುವುದರಿಂದ ಬುದ್ಧನನ್ನು ಕ್ರಿ.ಪೂ 18 ಮತ್ತು 19ನೇ ಶತಮಾನದ ನಡುವೆ ಸೇರಿಸಲು ಯಾವ ತೊಂದರೆಯೂ ಇರಲಾರದು. ಪಶ್ಚಿಮದ ಇತಿಹಾಸಕಾರರು, ಬುದ್ಧನ ಕಾಲವನ್ನು ತಮ್ಮಿಚ್ಛೆಗೆ ತಕ್ಕಂತೆ ತಾಳೆ ಹಾಕಿ ಭಾರತದ ಇತಿಹಾಸದ ಅನೇಕ ಶತಮಾನಗಳನ್ನೇ ಗಾಢಾಂಧಕಾರಕ್ಕೆ ತಳ್ಳಿಬಿಟ್ಟರು.

Magadha

ಪ್ರಾಚೀನ ಭಾರತದ ಸಾಮ್ರಾಜ್ಯ ಭಿನ್ನ ಭಿನ್ನ ಗಣರಾಜ್ಯಗಳಿಂದ ಕೂಡಿದಂಥವಾಗಿದ್ದವು. ಎಲ್ಲರೂ ತಮ್ಮ-ತಮ್ಮ ಕ್ಷೇತ್ರದ ಅಭಿವೃದ್ಧಿ-ಗೌರವಗಳೆಡೆಗೆ ಗಮನ ಹರಿಸಿಕೊಂಡು ನೆಮ್ಮದಿಯಿಂದಲೇ ಇದ್ದರು. ಹಾಗಂತ ಮಹತ್ವಾಕಾಂಕ್ಷೆ ಇರಲಿಲ್ಲವೆಂದಲ್ಲ. ಸಮರ್ಥನಾದ ರಾಜ ಅಶ್ವಮೇಧದಂತಹ ಯಾಗ ಮಾಡಿಸಿ ಉಳಿದೆಲ್ಲಾ ರಾಜರುಗಳಿಗೆ ಸವಾಲೊಡ್ಡುತ್ತಿದ್ದ. ರಾಜರು ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಂಡರೆ ಸರಿ, ಇಲ್ಲವಾದಲ್ಲಿ ಸೈನಿಕ ಸಮರಗಳು ನಡೆಯುತ್ತಿದ್ದವು. ಹಾಗಂತ ಸಾಮಾನ್ಯ ಪ್ರಜೆಗಳು ತುಂಬಾ ಗೊಂದಲಕ್ಕೊಳಗಾದ ಪ್ರಸಂಗಗಳಿಲ್ಲ. ಇನ್ನು ಮತ ಪರಿವರ್ತನೆಗಳಂತೂ ಬಲುದೂರದ ಮಾತು. ಒಂದು ರಾಜ್ಯದಲ್ಲಿಯೇ ಅನೇಕ ಬಗೆಯ ಪಂಥಗಳಿಗೆ ರಾಜ ಆಶ್ರಯ ಕೊಡುತ್ತಿದ್ದ; ಸ್ವತಃ ತನ್ನ ಪಂಥವನ್ನು ಅನುಸರಿಸಿರೆಂದು ತಾಕೀತು ಮಾಡುತ್ತಿರಲಿಲ್ಲ. ಈ ರೀತಿಯ ಬಲವಂತದ ಮತವಿಸ್ತಾರ ಪಶ್ಚಿಮದ ಕಲ್ಪನೆ.
ಆದರೆ ಒಂದಂತೂ ಸತ್ಯ. ರಾಜ ಯಾವ ಪಂಥದ ಅನುಯಾಯಿಯೋ ಅವರಿಗೆ ಸ್ವಲ್ಪ ವಿಶೇಷ ಸಹಾನುಭೂತಿ ಆಡಳಿತದಲ್ಲಿರುತ್ತಿತ್ತು. ಹೀಗಾಗಿಯೇ ಜೈನ-ಬೌದ್ಧರಷ್ಟೇ ಅಲ್ಲ ಕೆಲವೆಡೆ ಬ್ರಾಹ್ಮಣರೂ ರಾಜನನ್ನು ತಮ್ಮ ತೆಕ್ಕೆಗೆ ಸೇರಿದವನೆಂದು ಬಿಂಬಿಸಲು ಹೆಣಗಾಡುತ್ತಾರೆ. ಒಬ್ಬನೇ ರಾಜ ಬೌದ್ಧ ಸಾಹಿತ್ಯಗಳಲ್ಲಿ ಬುದ್ಧಾನುಯಾಯಿಯಾಗಿ ಕಂಡು ಬಂದರೆ, ಜೈನ ಸಾಹಿತ್ಯಗಳಲ್ಲಿ ಜೈನ ಮತಾನುಯಾಯಿಯಾಗಿ ಕಂಡು ಬರುತ್ತಾನೆ! ಈ ಪೂರ್ವತಯಾರಿ ಇಟ್ಟುಕೊಂಡೇ ಗ್ರಹಿಕೆಗೆ ಕುಳಿತರೆ ಇತಿಹಾಸದಲ್ಲಿ ಕಂಡು ಬರುವ ಗೊಂದಲಗಳನ್ನು ನಿವಾರಿಸಿಕೊಳ್ಳುವುದು ಕಷ್ಟವಲ್ಲ.
ಅಕ್ಕಪಕ್ಕದ ಮಹಾಜನಪದಗಳಲ್ಲೆಲ್ಲಾ ಪಾರಮ್ಯಕ್ಕೇರಿ ಸಾರ್ವಭೌಮತ್ವ ಸ್ಥಾಪಿಸಲು ಯತ್ನಿಸಿದ ಮೊದಲ ರಾಜ್ಯವೇ ಮಗಧವೆನ್ನುತ್ತದೆ ಇತಿಹಾಸ. ಪುರಾಣಗಳ ಪ್ರಕಾರ ಮಗಧ ಸಾಮ್ರಾಜ್ಯ ಕಲಿಯುಗದ ಆರಂಭದಲ್ಲಿಯೇ ಶುರುವಾಯಿತು. ಮೊದಲು ಬೃಹದ್ರಥನ ವಂಶಜರು ಆಳಿದರು. ಆನಂತರ ಪ್ರದ್ಯೋತರು. ಇವರ ಕೊನೆಯ ದೊರೆಯನ್ನು ವಾರಣಾಸಿಯ ಅರಸ ಶಿಶುನಾಗ ಹೊರದಬ್ಬಿದ ಮೇಲೆ ಅವನ ವಂಶಜರು ಆಳಲಾರಂಭಿಸಿದರು. ಅವರಲ್ಲಿಯೇ ಬಿಂಬಸಾರ ಒಬ್ಬ.
ಬಿಂಬಸಾರ ಮಗಧ ಸಾಮ್ರಾಜ್ಯವನ್ನು ವಿಸ್ತಾರಗೊಳಿಸಿದ ಸಾಹಸಿ. ಅಕ್ಕಪಕ್ಕದ ರಾಜ್ಯಗಳೊಂದಿಗೆ ಮದುವೆಗಳ ಮೂಲಕ, ಮಿಸುಕಾಡಿದವರನ್ನು ತನ್ನ ಶಕ್ತಿಯ ಮೂಲಕ ಸೆಳೆದುಕೊಂಡ. ಅವನಿಗೆ ಅನೇಕ ಹೆಂಡಂದಿರು. ಹೀಗಾಗಿ ರಾಜಕುವರರುಗಳ ನಡುವಿನ ಕಿತ್ತಾಟ, ಅವರವರ ಪರಿವಾರಗಳ ಜನಪದಗಳ ಕಾದಾಟ ಇದ್ದದ್ದೇ. ಈತ ನಿಮರ್ಿಸಿದ ರಾಜಗೃಹವೆಂಬ ರಾಜಧಾನಿಯ ದ್ವಾರವನ್ನು ಪ್ರತಿ ಸಂಜೆಯೂ ಮುಚ್ಚಲಾಗುತ್ತಿತ್ತಂತೆ. ಆನಂತರ ಅರಸನನ್ನೂ ಕೂಡ ಒಳಗೆ ಬಿಡಲಾಗುತ್ತಿರಲಿಲ್ಲವಂತೆ! ಅಂಗರಾಜ್ಯವನ್ನು ಗೆದ್ದು ವಿಸ್ತರಿಸಲು ಆರಂಭಿಸಿದ ಈತನ ಸಾಮ್ರಾಜ್ಯ ಕ್ರಮೇಣ ಇಡಿಯ ದೇಶವನ್ನು ಆವರಿಸಿಕೊಂಡಿತು.
ಸಿದ್ಧಾರ್ಥ, ಗೌತಮ ಬುದ್ಧವಾಗುವುದಕ್ಕಿಂತ ಏಳು ವರ್ಷ ಮುನ್ನವೇ ಬಿಂಬಸಾರ ಅವನನ್ನು ಭೇಟಿಯಾಗಿದ್ದನಂತೆ. ಅವನಿಂದ ಪ್ರಭಾವಿತನಾಗಿ ಅವನನ್ನು ತನ್ನಲ್ಲಿಯೇ ಉಳಿಸಿಕೊಳ್ಳಬೇಕೆಂದು ಇಚ್ಛಿಸಿದ್ದನಂತೆ. ಮುಂದೆ ಬುದ್ಧ ತನ್ನ ಪ್ರಭಾವೀ ಶಿಷ್ಯರೊಂದಿಗೆ ಕೂಡಿ ರಾಜಗೃಹಕ್ಕೆ ಎರಡನೇ ಬಾರಿಗೆ ಬಂದಾಗ ಮತ್ತೆ ಸಂಧಿಸಿದ. ಈ ಬಾರಿ ಬುದ್ಧನ ಅನುಯಾಯಿಗಳಿಗೆ ತಾನೇ ಊಟ ಬಡಿಸಿ, ಉದ್ಯಾನವನವೊಂದನ್ನು ಬುದ್ಧ ಸಂಘಕ್ಕೆ ದಾನವಾಗಿ ನೀಡಿದ. ಗಂಗಾನದಿ ದಾಟಿಸಿದ ಅಂಬಿಗನಿಗೆ ನೀಡಲು ಬುದ್ಧನ ಬಳಿ ಹಣವಿರಲಿಲ್ಲವೆಂಬುದನ್ನು ಕೇಳಿ ಅವನು ಸನ್ಯಾಸಿಗಳಿಗೆ ತೆಪ್ಪ ಶುಲ್ಕವನ್ನೇ ಮನ್ನಾ ಮಾಡಿದ್ದನಂತೆ. ಬೌದ್ಧ ಮತದೆಡೆಗೆ ಬಿಂಬಸಾರನನ್ನು ಸೆಳೆಯುವಲ್ಲಿ ಅವನ ನಾಲ್ಕನೆಯ ಮಡದಿ ಖೇಮಾಳ ಪಾತ್ರ ಬಲು ಮಹತ್ವದ್ದು.

bimbisara
ಲಿಚ್ಛವಿಯ ಚೇಟಕನ ಮಗಳು ಬಿಂಬಸಾರನ ಮನಸ್ಸನ್ನು ಮಹಾವೀರನತ್ತ ಆಕಷರ್ಿತವಾಗುವಂತೆ ಮಾಡಿದಳು. ರಾಜ್ಯದಲ್ಲಿ ಚಳಿ ತೀವ್ರವಾದಾಗ ಮಹಾವೀರನ ಪೂಜೆಗೆ ಆಕೆ ಪತಿಯನ್ನೊಯ್ದಿದ್ದಳೆಂದು ಜೈನ ಕಥಾಕಾರರು ನಿರೂಪಿಸುತ್ತಾರೆ.
ಆತ ನಿಜವಾಗಿಯೂ ಯಾವ ಪಂಥದವನೋ ಹೇಳಲಾಗದು. ಆದರೆ ಮಡದಿಯರ ಪ್ರಭಾವ ಅವನ ಮೇಲೆ ಜೋರಾಗಿಯೇ ಆಗಿದ್ದಿರಬಹುದು. ರಾಜಕುವರರು ಕೂಡ ಅಧಿಕಾರದಾಹಿಗಳಾಗಿದ್ದರಿಂದ ಗೊಂದಲಕ್ಕೆ ಸಿಲುಕಿದ್ದ ಬಿಂಬಸಾರ. ಅತ್ತ ಮಗ ಅಜಾತಶತ್ರು ತನ್ನ ಪೌರುಷದಿಂದ ಸಿಂಹಾಸನಕ್ಕೆ ಸಹಜವಾಗಿಯೇ ಅಧಿಕಾರಿಯಾಗಿದ್ದ. ತಂದೆಯೂ ಪಟ್ಟವನ್ನು ಅವನಿಗೇ ಕಟ್ಟುವುದಾಗಿ ಭರವಸೆ ಇತ್ತಿದ್ದರು. ಕಾಯುವ ವ್ಯವಧಾನ ಅಜಾತಶತ್ರುವಿಗಿರಲಿಲ್ಲವಷ್ಟೇ! ತಂದೆಯನ್ನೇ ಕಾರಾಗೃಹಕ್ಕೆ ತಳ್ಳಿ ಪಟ್ಟವೇರಿದ. ಅಲ್ಲಿಯೇ ಬಿಂಬಸಾರ ಮೃತನಾದನ್ನೆನ್ನುತ್ತವೆ ಬೌದ್ಧ ಸಾಹಿತ್ಯಗಳು. ಜೈನ ಸಾಹಿತ್ಯಗಳು ಸ್ವಲ್ಪ ಔದಾರ್ಯ ತೋರಿ ಪಿತೃಹತ್ಯಾದೋಷದಿಂದ ಅಜಾತಶತ್ರುವನ್ನು ಪಾರುಗಾಣಿಸುತ್ತದೆ!
ಅಜಾತಶತ್ರುವಿನ ಮೊದಲ ಯುದ್ಧವೇ ಕೋಸಲ ದೇಶದೊಂದಿಗೆ. ಅದು ತನ್ನ ತಂದೆಯ ಮಾವನ ಮನೆ. ಪ್ರಸೇನಜಿತ ಅದರ ರಾಜ. ಘನಘೋರ ಕಾಳಗ ನಡೆಯಿತು. ಅಜಾತ ಶತ್ರು ಗೆದ್ದ. ಆದರೆ ಕೋಸಲದ ಸೈನಿಕರು ಮೋಸದಿಂದ ಅವನನ್ನು ಬಂಧಿಸಿ ಪ್ರಸೇನಜಿತನೆದುರಿಗೆ ಎಳತಂದು ನಿಲ್ಲಿಸಿದರು. ದ್ವೇಷ ಆರಿತ್ತು. ಇಬ್ಬರೂ ಗೆಲವು-ಸೋಲುಗಳನ್ನು ಸಮಾನವಾಗಿ ಅನುಭವಿಸಿದರು.
ಮಗಧ ವಿಸ್ತಾರವಾಗುತ್ತಿತ್ತು. ಅಜಾತಶತ್ರು ಈಗ ಬಲಾಢ್ಯನಾಗಿದ್ದ. ಲಿಚ್ಛವಿ ಗಣರಾಜ್ಯದತ್ತ ಕಣ್ಣು ಹಾಯಿಸಿದ. ಹಾಗಂತ ಈ ಬಾರಿಯ ಯುದ್ಧ ಸುಲಭವಾಗಿರಲಿಲ್ಲ. ಅತ್ತ ಅಜಾತಶತ್ರುವಿನೆದುರು ಸೋಲುಂಡಿದ್ದ ಚೇಟಕ, ಕೋಸಲ, ಕಾಶಿಗಳು ಒಗ್ಗಟ್ಟಾಗಿ ನಿಂತರು. ಲೋಕದ ಜಂಜಡಗಳಿಂದ ದೂರವಿದ್ದು ಶಿಷ್ಯರಿಗೆ ಆಧ್ಯಾತ್ಮ ಜ್ಞಾನ ದಾನ ಮಾಡುತ್ತ ಕಾಲ ದೂಡುತ್ತಿದ್ದ ಬುದ್ಧನೂ ಲಿಚ್ಛವಿಗಳ ಜೊತೆಗೆ ನಿಂತ. ಐಕಮತ್ಯಕ್ಕೆ ಬೇಕಾದ ಮೂಲಸೂತ್ರಗಳನ್ನು ಬೋಧಿಸಿದ. ‘ಆಗಾಗ ಬೃಹತ್ ಸಭೆಗಳನ್ನು ಆಯೋಜಿಸಿರಿ, ಆಂತರಿಕ ಐಕಮತ್ಯಕ್ಕೆ ಭಂಗತರದಿರಿ, ಕ್ರಾಂತಿಕಾರಿ ಕಾನೂನು, ಕಾರ್ಯಕ್ರಮಗಳನ್ನು ಜಾರಿಗೆ ತರಬೇಡಿ, ಪ್ರಾಚೀನ ಸಂಪ್ರದಾಯಗಳನ್ನು ಗೌರವಿಸಿ ಮತ್ತು ಸಮಾಜದ ಹಿರಿಯರು, ಪ್ರಾಚೀನ ಸಂಸ್ಥೆಗಳು, ದೇಗುಲಗಳು, ಋಷಿಗಳು ಮತ್ತು ಸ್ತ್ರೀಯರನ್ನು ಗೌರವದಿಂದ ಕಾಣಿ’ ಹೀಗೇ ಆಳುವ ದೊರೆಗಳಿಗೆ ನಾಡನ್ನೇ ಕೋಟೆಯಾಗಿಸುವ ಉಪಾಯಗಳನ್ನು ಕೊಟ್ಟ. ಹೀಗೆ ಬಲಗೊಂಡ ರಾಜ್ಯವನ್ನು ಶತ್ರುಗಳು ಸೋಲಿಸಲು ಸಾಧ್ಯವಿಲ್ಲವೆಂದು ತಿಳಿಹೇಳಿದ.
ಹಗಲು ರಾತ್ರಿ ಬುದ್ಧನ ಜಪ ಮಾಡುವ ತಥಾಕಥಿತ ರಾಜಕಾರಣಿಗಳು ಬುದ್ಧ ಹೇಳಿದ ಒಂದನ್ನಾದರೂ ಮಾಡುತ್ತಾರಾ? ಯೋಚಿಸಿ ನೋಡಿ. ಆಂತರಿಕ ಐಕಮತ್ಯವನ್ನು ಹಾಳು ಮಾಡುವುದೇ ಅವರ ಜೀವನದ ಗುರಿ. ಪ್ರಾಚೀನ ಸಂಸ್ಥೆಗಳು, ದೇಗುಲಗಳು, ಋಷಿಗಳು ಯಾರ ಮೇಲೂ ನಯಾಪೈಸೆಯಷ್ಟು ಗೌರವವಿಟ್ಟಿಲ್ಲದ ಜನಕ್ಕೆ ಬುದ್ಧನ ಹೆಸರು ಹೇಳುವ ಅಧಿಕಾರವಿದೆಯೇನು?
ಬಿಡಿ. ಅಜಾತ ಶತ್ರು ಲಿಚ್ಛವಿಗಳ ಶಕ್ತಿ ಅರಿತಿದ್ದ. ಅವನು ತನ್ನ ಮಂತ್ರಿ ವಸ್ಮಕಾರನನ್ನು ಲಿಚ್ಛವಿಗಳನ್ನು ಆಂತರಿಕವಾಗಿ ಭಂಜಿಸುವ ಕೆಲಸಕ್ಕೆ ನೇಮಿಸಿದ. ಮೂರು ವರ್ಷಗಳ ಪರಿಶ್ರಮ. ‘ವಿವಿಧ ವರ್ಗಗಳ ನಡುವೆ, ಬಡವ ಬಲ್ಲಿದರ ನಡುವೆ, ಬಲಶಾಲಿ ಬಲಹೀನರ ನಡುವೆ ಮಾತ್ಸರ್ಯದ ಸೋಂಕಿನಿಂದ ಲಿಚ್ಛವಿಗಳು ಹಳೆಯ ಸಾಮಾಜಿಕ ಸಂಲಗ್ನತೆ ಕಳೆದುಕೊಂಡು ಪರಿವತರ್ಿತ ಜನತೆಯಾದರು’.
ಅಜಾತಶತ್ರು ಪಾಟಲಿಪುತ್ರದಲ್ಲಿ ಹೊಸ ರಾಜಧಾನಿಗೆ ಬುನಾದಿ ಹಾಕಿದ. ಅದು ಯುದ್ಧ ಮಾಡಲು ಅನುಕೂಲವಾಗಲೆಂದೇ ಮಾಡಿದ ಯೋಜನೆ. ಅಲ್ಲಿಯೇ ಬಲಾಢ್ಯ ಕೋಟೆ ನಿಮರ್ಿಸಿದ. ಅಷ್ಟೇ ಅಲ್ಲ. ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಹೊಸ ಹೊಸ ಸಂಶೋಧನೆಗಳನ್ನು ಮಾಡಿಸಿದ. ಭಾರವಾದ ಕಲ್ಲುಗುಂಡುಗಳನ್ನೆಸೆಯುವ ಮಹಾಶಿಲಾ ಕಂಟಕ, ಈಗಿನ ಬೋಫೋಸರ್್ ಗನ್ನುಗಳಂತೆ ಕೆಲಸ ಮಾಡುತ್ತಿತ್ತು. ಕುದುರೆ ಹಾಗೂ ಸಾರಥಿಯ ಸಹಾಯವಿಲ್ಲದೇ ಸ್ವಯಂಚಾಲಿತ ಯಂತ್ರದ ಸಹಾಯದಿಂದ ಚಲಿಸುತ್ತಿದ್ದ. ರಥಮುಸಲ ಎದುರಿಗೆ ಸಿಕ್ಕವರನ್ನು ಗದಾಪ್ರಹಾರಕ್ಕೆ ಒಳಪಡಿಸುತ್ತಿತ್ತಂತೆ. ಆಧುನಿಕ ಯುಗದ ಯುದ್ಧ ಟ್ಯಾಂಕುಗಳಂತೆ!
ಒಂದೆಡೆ ಒಳಗೊಳಗೆ ಒಡೆಯುತ್ತಿರುವ ಲಿಚ್ಛವಿಗಳು. ಮತ್ತೊಂದೆಡೆ ಬಲಾಢ್ಯಗೊಳ್ಳುತ್ತಿರುವ ಮಗಧ. ಎಲ್ಲವೂ ಅಂದುಕೊಂಡಂತೆ ಆಗಿದೆ ಎಂದೆನಿಸಿದಾಗಲೇ ಅಜಾತಶತ್ರು ತನ್ನ ಸೇನೆಯನ್ನು ತೆಗೆದುಕೊಂಡು ಲಿಚ್ಛವಿಗಳ ಮೇಲೆ ಏರಿಹೋದ. ರಾಷ್ಟ್ರರಕ್ಷಣೆಯ ಆ ಹೊತ್ತಲ್ಲಿ ಮೊದಲು ಕಾದಾಡಬೇಕಾದವರಾರು ಎಂಬುದರ ಕುರಿತಂತೆ ಲಿಚ್ಛವಿಗಳಲ್ಲಿ ವಾಗ್ಯುದ್ಧ ಶುರುವಾಯಿತಂತೆ. ಏಕತೆಯ ಕೊರತೆಯಿಂದ ಹರಿದು ಹಂಚಿ ಹೋಗಿದ್ದ ಲಿಚ್ಛವಿಗಳನ್ನು ಸುಲಭವಾಗಿ ವಶಪಡಿಸಿಕೊಂಡ ಅಜಾತಶತ್ರು.
ಹಾಗೆ ಯೋಚಿಸಿ. ಇತಿಹಾಸ ಮರುಕಳಿಸುತ್ತಿಲ್ಲವೇ? ಹೊರ ನಾಡಿನ ಶಕ್ತಿಗಳು ಇಲ್ಲಿನ ಪತ್ರಕರ್ತರ ಮೂಲಕ, ಎನ್ ಜಿ ಓಗಳ ಮೂಲಕ, ಮಿಶನರಿಗಳ ಮೂಲಕ ಈ ದೇಶದ ಆಂತರಿಕ ಐಕಮತ್ಯ ನಾಶಮಾಡುವಲ್ಲಿ ನಿರತವಾಗಿಲ್ಲವೇನು? ಹೀಗೆ ತಮ್ಮ ತಮ್ಮ ನಡುವೆ ಕೆಡವಲಾಗದ ಗೋಡೆ ಕಟ್ಟಿಕೊಂಡ ಅಸಂಖ್ಯ ಸಮಾಜಗಳು ಚೀನಾ ಬಿಡಿ, ಪಾಕೀಸ್ತಾನವನ್ನೂ ಎದುರಿಸಲಾರವು!
ಲಿಚ್ಛವಿಗಳೊಂದಿಗೆ ಆತ ಚೇಟ-ಕೋಸಲ-ಕಾಶಿಗಳೆಲ್ಲದರ ಒಕ್ಕೂಟವನ್ನು ಎದುರಿಸಬೇಕಿತ್ತು. ಈ ಯುದ್ಧಗಳು ಅವನ ಜೀವನದ ಬಹುಪಾಲು ಸಮಯ ನುಂಗಿಹಾಕಿತು. ಅಷ್ಟಾದರೂ ಆತ ಎಲ್ಲರನ್ನು ಮಟ್ಟಹಾಕಿ ಬಲಾಢ್ಯ ಮಗಧ ಸಾಮ್ರಾಜ್ಯ ನಿಮರ್ಿಸಿ ನಿಟ್ಟುಸಿರುಬಿಟ್ಟ.
ಬೌದ್ಧ ಮತ್ತು ಜೈನ ಸಾಹಿತ್ಯಗಳೆರಡೂ ಅಜಾತಶತ್ರುವನ್ನು ತಮ್ಮತಮ್ಮ ಅನುಯಾಯಿಯೆಂದೇ ವಣರ್ಿಸುತ್ತವೆ. ಜೈನ ಸಾಹಿತ್ಯಗಳು ಅವನನ್ನು ಪಿತೃಹತ್ಯಾದೋಷದಿಂದಲೇ ಪಾರುಗಾಣಿಸಿದ್ದನ್ನು ನೋಡಿದ್ದೇವಲ್ಲ. ಆದರೆ ಅಜಾತಶತ್ರುವಿನ ಬುದ್ಧಪ್ರೇಮ ಮೂಲದಲ್ಲಿ ಬುದ್ಧದ್ವೇಷವಾಗಿತ್ತೆನ್ನುತ್ತವೆ ಅನೇಕ ಸಾಹಿತ್ಯಗಳು.
ಅದಕ್ಕೆ ಕಾರಣವೂ ಇದೆ. ಬುದ್ಧನನ್ನು ವಿರೋಧಿಸುತ್ತಿದ್ದ ದೇವದತ್ತ ಅಜಾತಶತ್ರುವಿಗೆ ಬಲು ಆಪ್ತ. ಅವನ ಮಾತು ಕೇಳಿಯೇ ತಂದೆ ಬಿಂಬಸಾರನನ್ನು ಕಾರಾಗೃಹಕ್ಕೆ ತಳ್ಳಿ ಕೊಲ್ಲಿಸಿದ್ದು ಅವನು. ಈಗ ಅದೇ ದೇವದತ್ತನ ಮಾತಿಗೆ ಕಟ್ಟುಬಿದ್ದು ಬುದ್ಧನನ್ನು ಕೊಲ್ಲಿಸಲು ಹೊರಟಿದ್ದನಂತೆ. ಅದು ಹೇಗೋ ಮನಸ್ಸು ಬದಲಾಯ್ತು. ಆತ ಬುದ್ಧನಿಗೆ ಶರಣಾದ. ಅದೊಮ್ಮೆ ತನ್ನ ವೈದ್ಯನೊಂದಿಗೆ ಬುದ್ಧ ದರ್ಶನಕ್ಕೆಂದು ಬಂದ. ಹುಣ್ಣಿಮೆಯ ರಾತ್ರಿ ಮಾವಿನ ತೋಪಿನಲ್ಲಿದ್ದ ಗಾಢ ಮೌನ ರಾಜನ ಮನಸ್ಸನ್ನು ಭೇದಿಸಿತು. ಹೆದರಿದ ಆತ ‘ಶತ್ರುಗಳು ನನ್ನ ಬಂಧಿಸಲು ಕಾದುಕೊಂಡಿಲ್ಲ ತಾನೇ?’ ಎಂದು ವೈದ್ಯರನ್ನು ಕೇಳಿದ. ಒಂದು ಕ್ಷಣ ಅವರನ್ನೇ ಅನುಮಾನಿಸಿದ. ಕೊನೆಗೆ ಸಾವಿರಾರು ಭಿಕ್ಷುಗಳಿದ್ದರೂ ಇಡಿಯ ಸಭೆಯಿಂದ ಯಾವ ಶಬ್ದವೂ ಕೇಳಿ ಬರದ ಆ ವೈಚಿತ್ರ್ಯಕ್ಕೆ ಬೆಕ್ಕಸ ಬೆರಗಾದ. ಅಪೂರ್ವ ಶಾಂತಿಯನ್ನು ಬುದ್ಧನ ಪದತಲದಲ್ಲಿ ಅನುಭವಿಸಿದ. ಪಿತೃಹತ್ಯಾದೋಷ ಅವನನ್ನು ಮಾನಸಿಕವಾಗಿ ಬಾಧಿಸುತಲಿತ್ತು. ತನ್ನಾತ್ಮಕ್ಕೆ ತಾನೇ ಉತ್ತರಿಸಲಾಗದೇ ಪೀಡಿತನಾಗಿದ್ದವನನ್ನು ಬುದ್ಧ ಸಂತೈಸಿದ. ಅನೇಕ ಯುದ್ಧಗಳಲ್ಲಿ ವೀರಾವೇಶದಿಂದ ಕಾದಾಡಿದ ಅಜಾತಶತ್ರು ಬುದ್ಧನೆದುರು ಶಾಂತವಾಗಿದ್ದ; ಮಗುವಾಗಿದ್ದ.
ಮನಸ್ಸು ಶಾಂತವಾಗಿತ್ತು. ಪಾಪ ಆರಿರಲಿಲ್ಲ. ಮೊದಲ ಬಾರಿಗೆ ಬುದ್ಧನ ಶಾಂತ ಮುಖವನ್ನು ಸಂದಶರ್ಿಸಿದೊಡನೆ ಅಜಾತಶತ್ರು ಉದ್ಗರಿಸಿದ್ದನಂತೆ ‘ನನ್ನ ಮಗ ಉದಾಯಿಬದ್ಧನೂ ಸಹ ಈ ಭಿಕ್ಷುಗಳಂತೆ ಶಾಂತನಾಗಿದ್ದರೆ!’
ಪುರಾಣಗಳ ಪ್ರಕಾರ ಈ ಶಿಶುನಾಗನ ವಂಶದ ಆಳ್ವಿಕೆಯ ಅವಧಿ ಯಾವುದು ಗೊತ್ತೇ? ಕ್ರಿ.ಪೂ 20 ರಿಂದ ಕ್ರಿ.ಪೂ 17ನೇ ಶತಮಾನಗಳ ನಡುವೆ. ಬಿಂಬಸಾರನನ್ನು ಈ ವಂಶದ ನಾಲ್ಕನೇ ರಾಜನೆಂದು ಪುರಾಣ ಹೇಳುವುದರಿಂದ ಬುದ್ಧನನ್ನು ಕ್ರಿ.ಪೂ 18 ಮತ್ತು 19ನೇ ಶತಮಾನದ ನಡುವೆ ಸೇರಿಸಲು ಯಾವ ತೊಂದರೆಯೂ ಇರಲಾರದು. ಪಶ್ಚಿಮದ ಇತಿಹಾಸಕಾರರು, ಬುದ್ಧನ ಕಾಲವನ್ನು ತಮ್ಮಿಚ್ಛೆಗೆ ತಕ್ಕಂತೆ ತಾಳೆ ಹಾಕಿ ಭಾರತದ ಇತಿಹಾಸದ ಅನೇಕ ಶತಮಾನಗಳನ್ನೇ ಗಾಢಾಂಧಕಾರಕ್ಕೆ ತಳ್ಳಿಬಿಟ್ಟರು.
ಅಂದಹಾಗೆ ಕೋಸಲದ ಪ್ರಸೇನಜಿತನನ್ನು ಮರೆತಿಲ್ಲ ತಾನೇ? ಆತನಿಗೆ ಬುದ್ಧನ ಶಾಕ್ಯಕುಲದ ಬಗ್ಗೆ ಅಪಾರ ಅಭಿಮಾನವಿತ್ತು. ಅವನು ಅದೇ ಕುಲದ ಹೆಣ್ಣೊಬ್ಬಳನ್ನು ರಾಣಿಯಾಗಿಸಿಕೊಳ್ಳಬೇಕೆಂಬ ಬಯಕೆಯಿಂದ ಶಾಕ್ಯ ಹಿರಿಯರಲ್ಲಿ ಕೇಳಿಕೊಂಡ. ಪ್ರಸೇನಜಿತನ ಮಾತನ್ನು ಧಿಕ್ಕರಿಸಲಾಗದೇ, ತಾವು ಶ್ರೇಷ್ಠರೆಂಬ ಭಾವವನ್ನು ಬಿಟ್ಟುಕೊಡಲಾಗದೇ ಅವರು ಶಾಕ್ಯ ಮುಖಂಡನಿಗೆ ದಾಸಿಯಲ್ಲಿ ಹುಟ್ಟಿದ ಹೆಣ್ಣನ್ನು ಶಾಕ್ಯಕುಲದ ಸ್ತ್ರೀಯೆಂದು ನಂಬಿಸಿ ಮದುವೆ ಮಾಡಿಕೊಟ್ಟರು. ವಿಡೂಢಕನೆಂಬ ಮಗನೂ ಜನಿಸಿದ. ನಿಜ ಬಯಲಾಯ್ತು. ಪ್ರಸೇನಜಿತ ಉರಿದ ಕೆಂಡವಾದ. ಹೆಂಡತಿ-ಮಗು ಇಬ್ಬರನ್ನೂ ತ್ಯಜಿಸಿದ. ಆಮೇಲೆ ಬುದ್ಧನೇ ಸಂಧಾನ ಮಾಡಿ, ತಿಳಿ ಹೇಳಿ ಒಪ್ಪಿಸಿ ಪ್ರಸೇನಜಿತ ಮತ್ತೆ ಸ್ವೀಕಾರ ಮಾಡುವಂತೆ ಮಾಡಿದ.
ಇದರೊಟ್ಟಿಗೆ ಕೌಟುಂಬಿಕ ಕಲಹಗಳು ಶುರುವಾದವು. ಪ್ರಸೇನಜಿತ ಬುದ್ಧನ ಅನುಯಾಯಿಯಾಗಿ ಸದಾ ಅವನೊಡನೆ ಇರುತ್ತಿದ್ದುದು ಪ್ರಜೆಗಳಿಗೆ ಸರಿಕಾಣಲಿಲ್ಲ. ಮಂತ್ರಿಯೂ ತಿರುಗಿ ಬಿದ್ದ. ಒಮ್ಮೆ ರಾಜ ಬುದ್ಧನೊಂದಿಗೆ ಕಾಲಕಳೆದಿರುವಾಗಲೇ ಇತ್ತ ವಿಡೂಢಕನನ್ನು ರಾಜನೆಂದು ಘೋಷಿಸಿಬಿಟ್ಟರು. ಪ್ರಸೇನಜಿತ ಅಜಾತಶತ್ರುವಿನ ಸಹಾಯ ಕೋರಿ ಅತ್ತ ಓಡಿದ. ರಾಜಗೃಹದ ದ್ವಾರದಲ್ಲಿ ಮೃತಪಟ್ಟ.
ವಿಡೂಢಕ ಶಾಕ್ಯ ದೇಶದ ಮೇಲೆ ದಾಳಿ ಮಾಡಿದ. ಅತ್ಯಂತ ಕ್ರೂರವಾಗಿ ಶಾಕ್ಯಕುಲದ ಹತ್ಯೆ ಮಾಡಿದ. ತನ್ನ ತಾಯಿಯ ವಿಚಾರವಾಗಿ ಮಾಡಿದ ಮೋಸ ವಿಡೂಢಕನನ್ನು ಕಾಡಿರಬೇಕು. ಶ್ರೇಷ್ಠ ಆಧ್ಯಾತ್ಮಿಕ ಆಚಾರ್ಯನನ್ನು ಕೊಡುಗೆಯಾಗಿ ಕೊಟ್ಟ ಜನಾಂಗವೊಂದು ಹೀಗೆ ನಾಶವಾಗಿಬಿಟ್ಟತು.

Comments are closed.