ವಿಭಾಗಗಳು

ಸುದ್ದಿಪತ್ರ


 

ಮದುವೆಗಾಗಿ ಮತಾಂತರ, ಕೆಟ್ಟ ಟ್ರೆಂಡ್ ಅಲ್ಲವೆ?

ಮದುವೆಗಾಗಿ ಮತಾಂತರವಾಗುವ/ ಮಾಡುವ ಪ್ರಕ್ರಿಯೆಗೆ ದೊಡ್ಡ ಇತಿಹಾಸವೇ ಇದೆ. ಇದೊಂದು ಅತಿ ಕೆಟ್ಟ ಹುನ್ನಾರ. ಮದುವೆಗಾಗಿ ಜಾತಿಯನ್ನೂ ಬಿಡಬಲ್ಲ ವ್ಯಕ್ತಿಯು ತಾನು ಹೊಸತಾಗಿ ಸೆರಿಕೊಂಡ ಧರ್ಮಕ್ಕೆ ಅದೆಷ್ಟು ನಿಷಟನಾಗಿರಬಲ್ಲ? ಕೇವಲ ಸಂಖ್ಯೆ ಹೆಚ್ಚಿಸಿಕೊಳ್ಳುವುದೆ ಧರ್ಮದ  ಮೇಲ್ಮೆಯೆ? ಈ ಬಗ್ಗೆ ಎಲ್ಲ ಧರ್ಮಗಳೂ ಯೋಚಿಸಬೇಕಲ್ಲವೆ? ಏಕೆಂದರೆ, ಮದುವೆಯ ಹೆಬ್ಬಯಕೆಗೆ ಬಿದ್ದು ಕುರುಡಾದವರು ಈ ಎಲ್ಲದರ ಬಗ್ಗೆ ಯೋಚಿಸುವುದಿಲ್ಲ, ಅಂತಹ ನೈತಿಕತೆಯನ್ನೂ ಉಳಿಸಿಕೊಂಡಿರುವುದಿಲ್ಲ.

ಜವಾಬ್ದಾರಿಯುತ ಐಎಎಸ್ ಆಫಿಸರ್ ಮಣಿವಣ್ಣನ್ ಮದುವೆಗಾಗಿ ಮತಾಂತರವಾಗಿದ್ದಾರೆ. ಇದು ಮಣಿವಣ್ಣನ್ ಪಾಲಿಗೂ ಒಳ್ಳೆಯದಲ್ಲ, ಇಸ್ಲಾಮಿಗೂ ಒಳ್ಳೆಯದಲ್ಲ. ಮದುವೆಗಾಗಿ ಇಂಥವರನ್ನು ಮತಾಂತರಗೊಳಿಸಿಕೊಂಡು ಅದು ಬೆಳೆಯಬಲ್ಲದೆ? ಮಣಿವಣ್ಣನ್‌ಗೇನೋ ಇದರಿಂದ ಲಾಭವೇ. ಏಕೆಂದರೆ, ಆತ ಮತ್ತೂ ಮೂರು ಮುಸ್ಲಿಮ್ ಹೆಣ್ಣ್ಣುಮಕ್ಕಳನ್ನು ಮದುವೆಯಾಗಬಹುದು! ಮದುವೆಗಾಗಿ ಧರ್ಮ ತೊರೆಯುವ ಜನ ಮುಂದೆ ಇನ್ಯಾವುದೋ ಕಾರಣಕ್ಕೆ ಮದುವೆಯನ್ನೇ ಮುರಿದುಕೊಳ್ಳುವುದಿಲ್ಲ ಅನ್ನುವುದಕ್ಕೆ ಖಾತ್ರಿ ಏನು? ಈ ಹೊತ್ತು ಇಂತಹ ಮತ್ತಷ್ಟು ಘಟನೆಗಳು ನೆನಪಾಗ್ತಿವೆ. ಮೈಸೂರಿನ ಆತ್ಮೀಯರೊಬ್ಬರ ಮಗಳು, ಹೆಚ್ ಪಿ ಕಂಪನಿಯಲ್ಲಿ ಐದಂಕಿಯ ಸಂಬಳ ಪಡೆಯುತ್ತಿದ್ದವಳು; ಮೂರುವಾರದ ಹಿಂದೆ ಸಹೋದ್ಯೋಗಿಯ ಹಿಂದೆ ಹೋಗಿದ್ದಾಳೆ. ಅಪ್ಪ-ಅಮ್ಮ ಆಘಾತದಿಂದ ಚೇತರಿಸಿಕೊಂಡೇ ಇಲ್ಲ. ಹೀಗೆ ಹಾರಿಸಿಕೊಂಡು ಹೋದವ ಕ್ರಿಸ್ತನ ಕುಲದವನೆಂಬುದಂತೂ ಆ ತಾಯಿಗೆ ಸಹಿಸಲೂ ಆಗುತ್ತಿಲ್ಲ. ಆಕೆ ಮಗಳನ್ನು ಮುದ್ದಾಗಿ ಬೆಳೆಸಿ ಕಟುಕನ ಕೈಲಿ ಕೊಟ್ಟೆವು ಎನ್ನುತ್ತಿದ್ದಾಳೆ. ಆಕೆಯ ನೋವು ಅಗಾಧವೆನಿಸುತ್ತಿದೆ. ಹೀಗೇಕೆ? ಇಪ್ಪತ್ತೆ ದು ವರ್ಷ ಪ್ರೀತಿಯಿಂದ ಬೆಳೆಸಿದ ಮಗಳು ಇದ್ದಕ್ಕಿದ್ದಂತೆತ ಮನೆಬಿಟ್ಟು ಓಡಿಹೋಗೋದೇಕೆ? ಎರಡು ವರ್ಷದಿಂದ ಕಣ್ಣುಂದೆ ಕಾಣುತ್ತಿರುವ ಹುಡುಗ ಉಳಿದೆಲ್ಲರಿಗಿಂತ ಹತ್ತಿರದವನಾಗಿಬಟ್ಟನೇ? ಅವನ ಸಂಸ್ಕೃತಿ ಅವನ ಆಚರಣೆಗಳು ತನ್ನ ಆಚರಣೆಗಳಿಗೆ ವಿರುದ್ಧವಾಗಿರುವಾಗ ಬದುಕು ಸುಗಮವಾಗಿರೋದು ಹೇಗೆ ಅಂತ ಒಮ್ಮೆ ಯೋಚಿಸಬೇಕೆನಿಸೋಲ್ಲವೇ? ಕೊನೆಗೆ ದೈಹಿಕ ವಾಂಛೆಗಳೇ ಎಲ್ಲಕ್ಕಿಂತಲೂ ದೊಡ್ಡದೇ? ನನ್ನೆದುರು ಪ್ರಶ್ನೆಗಳ ರಾಶಿ. ಇಷ್ಟಕ್ಕೂ ಅನೇಕ ಹುಡುಗಿಯರು ಹೀಗೆ ಓಡಿಹೋದ ಕಥನಗಳನ್ನು ಕೇಳಿದ್ದೇನೆ. ಆದರೆ ಈ ಬಾರಿ ಮಾತ್ರ ಇದೊಂಥರಾ ಕಸಿವಿಸಿ ಏಕೆಂದರೆ ಎರಡು ತಿಂಗಳ ಹಿಂದೆ ಆ ಹುಡುಗಿಯೊಂದಿಗೆ ನಾನು ಮಾತನಾಡಿದ್ದೆ. ಆ ಹುಡುಗನ ನಡತೆಯ ಕುರಿತಂತೆ ಹುಡುಗಿ ಹೇಳಿದ ಮಾತು ಕೇಳಿದಾಗ ಗಾಬರಿಗೊಂಡಿದ್ದೆ. ಅವಳನ್ನು ಸಮಾಧಾನಪಡಿಸಿ ನೆಮ್ಮದಿಯ ಬದುಕು ನಡೆಸಿ ತಂದೆ-ತಾಯಿಯರ ಆನಂದದ ಕೂಸಾಗುವಂತೆ ಕೇಳಿಕೊಂಡಿದ್ದೆ. ಎಲ್ಲದಕ್ಕೂ ಆಯ್ತೆಂದು ಗೋಣಾಡಿಸಿದ್ದಳು. ಅಪ್ಪ-ಅಮ್ಮನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದಳು. ಮಧ್ಯೆ ಒಮ್ಮೆ ಕರೆ ಮಾಡಿ, ನಾನೀಗ ಆರಾಮಾಗಿದ್ದೇನೆ ಎಂದೂ ದೃಢವಾಗಿ ಹೇಲಿದ್ದಳು. ಈಗ ಇದ್ದಕ್ಕಿದ್ದಂತೆ ಈ ಸುದ್ದಿ. ಮದುವೆಯಾದ ಮೂರು ದಿನಕ್ಕೇ ಕೆಲಸಕ್ಕೆ ರಾಜೀನಾಮೆ ಇಟ್ಟು ಗಂಡನೊಟ್ಟಿಗೆ ಇದ್ದುಬಿಟ್ಟಿದ್ದಾಳೆ ಸುಂದರಿ. ಹಾಗಂತ ಅವನೇ ಹೇಲಿರಬೇಕು. ಮೊದಲ ದಿನವೇ ಬಗ್ಗೆ ಬೆಂಡಾಗಿದ್ದಾಳೆ. ಇನ್ನು ಮುಂದೆ ಆಕೆ ಆ ಮನೆಯೊಳಗೆ ಏನೇನು ಕಾಣಬೇಕೇ ದೇವರೇ ಬಲ್ಲ. ನನ್ನ ಮನಸ್ಸು ಇದನ್ನು ಯೋಚಿಸುತ್ತಿರುವಂತೆ ಸ್ವಲ್ಪ ಹಿಂದೊಡಿತು. ಸುಮಾರು ನಾಲ್ಕು ವರ್ಷ ಕಳೆದಿರಬಹುದು. ಮುದ್ದಾದ ಹುಡುಗಿಯೊಬ್ಬಳನ್ನು ನನ್ನ ಬಳಿ ತಂದು ಮಾತನಾಡಿಸಿ ಎಂದರು. ತಂದೆ ಇಲ್ಲದ ಹುಡುಗಿ. ತಾಯಿಯ ಆರೈಕೆಯಲ್ಲಿ ಬೆಳೆದವಳು. ಬೆಳಿಗ್ಗೆ ಕೆಲಸಕ್ಕೆಂದು ಹೊರಡುವ ತಾಯಿ ರಾತ್ರಿ ಬರುವಾಗ ಎಂಟು ಗಂಟೆ. ಮನೆಯಲ್ಲಿ ಮಗಳದ್ದೇ ಕಾರುಬಾರು. ಅದ್ಯಾವುದೋ ಮಾಯೆಯಲ್ಲಿ ಮುಸ್ಲಿಂ ಹುಡುಗನೊಬ್ಬ ಗಂಟುಬಿದ್ದ. ಕಾಲೇಜಿಗಿಂತ ಹೆಚ್ಚಾಗಿ ಇವಳ ಮನೆಯಲ್ಲಿಯೇ ಕಾಲಕಳೆಯತೊಡಗಿದೆ. ಈಗ ಹುಡುಗಿ ಅವನನ್ನೇ ಮದುವೆಯಾಗೋದು ಅಂತಿದ್ದಾಳೆ! ಹುಡುಗನ ಮನೆಗೆಲ್ಲ ಹೋಗಿ ಬಂದಿದ್ದಾಳೆ. ‘ಹುಡುಗನ ಅಪ್ಪ ಅದೆಷ್ಟು ಒಳ್ಳೆಯವರು ಗೊತ್ತಾ? ನನ್ನನ್ನೇ ತೊಡೆಯ ಮೇಲೆ ಕೂರಿಸಿಕೊಂಡು ಮುತ್ತು ಕೊಡ್ತಾರೆ” ಅಂತಾಳೆ. ಬರೊಬ್ಬರಿ ೧೮ರ ಪೋರಿ! ಅಯ್ಯೋ ಹುಡುಗೀ, ಸೊಸೆಯನ್ನೂ ಮಾನಭಂಗ ಮಾಡಿ ತನ್ನ ಹೆಂಡತಿಯಾಗಿಸಿಕೊಂಡ ಅನೇಕ ಕುಟುಂಬಗಳಿವೆಯಮ್ಮಾ ಅವರಲ್ಲಿ ಅಂತ ಬಾಯಿಬಿಟ್ಟು ಹೇಳಬೇಕೆನಿಸಿತು. ಉಪಯೋಗವಿಲ್ಲವೆಂದು ಸುಮ್ಮನಾಗಿಬಿಟ್ಟೆ. ಆಕೆಯ ತಾಯಿ ಕಣ್ಣು ಕೆಂಪು ಮಾಡಿಕೊಂಡು ಮೈಮೇಲೆ ಏರಿಹೋಗ್ತಾರೆ. ಆಕೆಯನ್ನು ಸಮಾಧಾನಪಡಿಸಿ ‘ತುಂಬ ತಡವಾಗಿದೆ’ ಎಂದಷ್ಟೇ ಹೇಳಿ ಸುಮ್ಮನಾದೆ. ಆ ಹುಡುಗಿ ಈಗ ಅದೆಲ್ಲಿದ್ದಾಳೋ? ಅದೆಷ್ಟು ಜನರಿಗೆ ಮೈಚೆಲ್ಲಿ ಅಸಹ್ಯಕರವಾದ ಬದುಕು ನಡೆಸುತ್ತಿದ್ದಾಳೋ ದೇವರೇ ಬಲ್ಲ. ಅಕಸ್ಮಾತ್ ನಾನೆಂದುಕೊಂಡಂತೆ ಆಗಿಲ್ಲದೇ ಆಕೆ ಅಲ್ಲಿಯೂ ನೆಮ್ಮದಿಯ ಬದುಕು ನಡೆಸುತ್ತಿದ್ದರೆ ದೇವರು ತಂಪಾಗಿರಲಿ! ಸರಿಸುಮಾರು ಅದೇ ಸಮಯಕ್ಕೆ ಮುಸ್ಲಿಂ ಪತ್ರಿಕೋದ್ಯಮಿಯೊಬ್ಬ ತನ್ನ ಕಚೇರಿಯಲ್ಲಿ ಡಿಟಿಪಿ ಕೆಲಸ ಮಾಡುವ ಹುಡುಗಿಯ ಬಳಿ ಆಗಾಗ ಚಪ್ರಾಸಿಯನ್ನು ಕಳಿಸಿ ಲೇಖನಗಳನ್ನು ಓದಲು ತೋರಿಸುತ್ತಿದ್ದ. ಮುಸ್ಲಿಂ ಚಪರಾಸಿ, ಹಿಂದೂ ಹುಡುಗಿ! ಏಕಾಂತದಲ್ಲಿ ಅದ್ಯಾವ ಭಾವನೆಗಳು ಮನೆಮಾಡಿದ್ದವೋ ಏನೋ? ಅದೊಂದು ದಿನ ಹುಡುಗಿ ಹಣೆಯ ಮೇಲಿನ ಕುಂಕುಮ ಒರೆಸಿಕೊಂಡು ಬಂದು ಇವನು ನನ್ನ ಗಂಡ ಅಂತ ಪರಿಚಯಿಸಿಯೇಬಿಟ್ಟಳು. ಆ ಮುಸಲ್ಮಾನ ಎಡಿಟರನೇ ಅವರಿಬ್ಬರ ಪಾಲಿಗೆ ಪುರೋಹಿತ. ಈಗ ಅವರಿಬ್ಬರೂ ಗೊಣಗಾಡದೇ ಅವನಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚೆನ್ನಯ್ಯ ಎನ್ನುವವರೊಬ್ಬರು ಅದೊಮ್ಮೆ ರಾಮಕೃಷ್ಣಾಶ್ರಮದಲ್ಲಿ ಭೇಟಿಯಾಗಿ ನನ್ನ ಮಗಳ ಬದುಕು ಉಳಿಸಿಕೊಡಿ ಎಂದು ಗೋಗರೆದಿದ್ದು ಈಗ ನೆನಪಾಗ್ತಾ ಇದೆ. ಅವಳು ಮನೆಯ ಪಕ್ಕದಲ್ಲಿರೋ ಪ್ಯಾಸ್ಟರನ ಮನೆಗೆ ನಿತ್ಯವೂ ಪ್ರಾರ್ಥನೆಗೆ ಹೋಗ್ತಾಳೆ. ಚೆನ್ನಯ್ಯ ಮಗಳನ್ನು ಚಿಕ್ಕಂದಿನಿಂದಲೂ ಸ್ವತಂತ್ರವಾಗಿ ಬೆಳೆಸಿದವರು. ಪೂಜೆ ಮಾಡಿದರೆ ಹಿಂದುವಾಗಿಬಿಟ್ಟಾಳೆಂಬ ಹೆದರಿಕೆಯಿಂದ (!) ಆಕೆಯನ್ನು ಧರ್ಮನಿರಪೇಕ್ಷ ಹುಡುಗಿಯಾಗಿಯೇ ಬೆಳೆಸಿದರು. ಧರ್ಮವೇ ಇಲ್ಲದ ಹೃದಯದ ನಿರ್ವಾತವನ್ನು ಪ್ಯಾಸ್ಟರ್ ತುಂಬಿದ. ಅವಳು ಓದುವ ಪುಸ್ತಕವನ್ನು ಚೆನ್ನಯ್ಯ ನಮ್ಮ ಕೈಗಿತ್ತರು. ನಾನು ದಂಗಾಗಿಬಿಟ್ಟೆ. ಬರಿ ದೇವದೂಷಣೆಯ ಕೃತಿಗಳು. ಹಿಂದೂ ದೇವರನ್ನು ತೆಗಳುವ, ಕ್ರಿಸ್ತನನ್ನು ವೈಭವೀಕರಿಸುವ ವಿದೇಶೀ ಲೇಖಕರ ಬರಹಗಳು. ಆ ಪುಣ್ಯಾತಗಿತ್ತಿ ಪ್ಯಾಸ್ಟರನಿಗೆ ನಮ್ಮಪ್ಪ-ಅಮ್ಮನನ್ನೂ ಕ್ರಿಸ್ತನ ಬುಡಕ್ಕೆ ತರುವವರೆಗೆ ನಾನು ಮತಾಂತರಗೊಳ್ಳಲಾರೆನೆಂದು ಮಾತು ಕೊಟ್ಟಿದ್ದಾಳಂತೆ. ತನ್ನ ಜೊತೆ ಕೆಲಸ ಮಾಡುವ ಕ್ರಿಸ್ತನ ಭಂಟನೊಡನೆ ಪ್ರೀತಿಯಾಗಿ ಅವನನ್ನೇ ವರಿಸುವ ಹಂತಕ್ಕೂ ಬಂದು ಮುಟ್ಟಿದ್ದಾಳೆ. ಚೆನ್ನಯ್ಯ ಗೋಗರೆದರು. ಕೈಮುಗಿದರು; ನಾವೂ ಪ್ಯಾಸ್ಟರನಿಗೆ ಬುದ್ಧಿಹೇಳಿದೆವು, ಧರ್ಮದೇಟುಕೊಟ್ಟೆವು. ಮುಂದೇನಾಯ್ತೊ? ಗೊತ್ತಾಗಲಿಲ್ಲ. ಇವು ಕೆಲವು ಸ್ಯಾಂಪಲ್ ಕಥೆಗಳಷ್ಟೆ. ಮದುವೆಗಾಗಿ ಮತಾಂತರ ಅನ್ನುವ ಟೊಳ್ಳು ರಿವಾಜಿನ ಬಗೆಗಳನ್ನು ಪರಿಚಯಿಸಲು. ಈ ಥರದ ಮದುವೆಯ ಜಾತಿ ರಾಜಕೀಯಕ್ಕೆ ದೊಡ್ಡ ಇತಿಹಾಸವೇ ಇದೆ. ಇದರಿಂದ ಉಂಟಾಗುವ ಸಾಮಾಜಿಕ ನಷ್ಟಗಳು ಚಿಕ್ಕವೇನಲ್ಲ. ಕೇವಲ ತಮ್ಮತಮ್ಮ ವೈಯಕ್ತಿಕ ವಾಂಛೆಗಳಿಗಾಗಿ ಮತ್ತೊಂದು ಮತವನ್ನು ಅಪ್ಪಿಕೊಳ್ಳುವ ನಗೆಪಾಟಲಿನ ಕೆಲಸ ಶೋಭೆ ತರುವಂಥದ್ದಲ್ಲ. ಇಂದು ಮಣಿವಣ್ಣನ್ ಮತಾಂತರಗೊಂಡ ಸುದ್ದಿ ಬಂದಿದೆ. ಪ್ರೀತಿಸಿ ಮದುವೆಯಾದ ಹುಡುಗಿಗೆ ವಿಚ್ಛೇದನ ನೀಡಿ; ಸಲ್ಮಾಳಿಗಾಗಿ ಅಬ್ದುಲ್ ಕಲಾಂ ಮಣಿಯಾಗಿ ಮತ್ತೊಬ್ಬಳ ಮುಂದೆ ನಿಂತಿದ್ದಾನೆ. ಛೀ! ಹುಡುಗ ಹುಡುಗಿಯನ್ನು ಮದುವೆಯಾಗುವಾಗ ಹುಡುಗಿಯ ಮತ ಪರಿವರ್ತನೆ ಮಾಡಬೇಕೆಂದು ವಾದಿಸುವವರಿಗೆ, ಮಣಿವಣ್ಣನ್‌ಗೇನಾಗಿತ್ತು ಧಾಡಿ ಎಂದು ಕೇಳುವ ಧಾವಂತವಿಲ್ಲ, ತಾಕತ್ತೂ ಇಲ್ಲ.

2 Responses to ಮದುವೆಗಾಗಿ ಮತಾಂತರ, ಕೆಟ್ಟ ಟ್ರೆಂಡ್ ಅಲ್ಲವೆ?

  1. prathibha

    maduvegaagi matantara maado agatyave iralilla. IAS officer aagi ishtu ondu naitikate arthavaagalilla andare eshtara mattige aatma gaurava irabahudu.

  2. chaithra nayak

    che! enta naachike gedina kelasa……. vidyavantaru e reethi avivekada kelasa maduttiruvudu nodidare namma deshada jana avidyavantaragiddare chennagiruttittu…… avaravara dharmada rakshaneyalli desha subhikshavagiruttittu…..