ವಿಭಾಗಗಳು

ಸುದ್ದಿಪತ್ರ


 

ಮೋದಿಯವರ ಆರೋಗ್ಯ, ಆಯಸ್ಸು ದೇಶದ ಅಗತ್ಯ!

ಅಬ್ಬಾ! ಒಬ್ಬ ಮನುಷ್ಯ ಎಷ್ಟಲ್ಲಾ ದಿಕ್ಕಿನಲ್ಲಿ ಆಲೋಚಿಸಬಲ್ಲ. ಪಕ್ಕ ಪಕ್ಕದ ರಾಷ್ಟ್ರಗಳು ಉಗುಳುವ ವಿಷಕ್ಕೆ ಪರಿಹಾರ ಹುಡುಕಬೇಕು; ತನ್ನೊಂದಿಗೇ ಇರುವ ವಿಷ ಸರ್ಪಗಳ ಹಲ್ಲು ಮುರಿಯಲು ಹೆಣಗಾಡಬೇಕು. ಅಂತರರಾಷ್ಟ್ರೀಯ ಸಂಬಂಧಗಳನ್ನು ವೃದ್ಧಿಗೊಳಿಸಬೇಕು. ಒಳಗಿನ ಜನರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸ್ಥಳೀಯ ಚುನಾವಣೆಗಳ ಪ್ರಚಾರಕ್ಕೆ ಬರಬೇಕು; ವಿಶ್ವ ಸಮ್ಮೇಳನಗಳಿಗೂ ಹೋಗಬೇಕು. ಈ ಮನುಷ್ಯ ಖಂಡಿತ ಸಾಮಾನ್ಯನಲ್ಲ: ಕುದುರೆಯ ಮೇಲೇರಿ ಬಂದಿದ್ದರೆ ಈತನನ್ನು ‘ಕಲ್ಕಿ’ಯೆಂದೇ ಕರೆದು ಬಿಡುತ್ತಿದ್ದರೇನೋ!

modi11

ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕೆ ರಾಷ್ಟ್ರಾಧ್ಯಕ್ಷ ಪ್ರಣಬ್ ಮುಖಜರ್ಿ ಮಾಡಿರುವ ಟ್ವೀಟ್ಗಳನ್ನು ಓದಿದ್ದೀರಾ? ಬಂಗಾಳದ ವಯೋವೃದ್ಧ ನಾಯಕ ತನ್ನೊಳಗೆ ಮಡುಗಟ್ಟಿದ್ದ ಅಷ್ಟೂ ಮೋದಿ ಪ್ರೀತಿಯನ್ನು ಹೊರಹಾಕಿ ‘ನಮೋ’ ಎಂದು ಬಿಟ್ಟಿದ್ದಾರೆ. ಅವರನ್ನು ಜಗಮೆಚ್ಚಿದ, ಜನಮೆಚ್ಚಿದ ನಾಯಕ ಎಂದೆಲ್ಲ ಹೊಗಳಿದ್ದಾರೆ.
ಅನುಮಾನ ಖಂಡಿತ ಇಲ್ಲ. ಮೋದಿಯಂತಹ ಮತ್ತೊಬ್ಬ ನಾಯಕನನ್ನು ಈ ದೇಶ ಹಿಂದೆಂದೂ ಕಂಡೇ ಇರಲಿಲ್ಲ. ಅವರ ಮುತ್ಸದ್ದಿತನ, ವಿದೇಶನೀತಿ, ಆಂತರಿಕ ಭಿನ್ನಮತವನ್ನು ತಟ್ಟಿ-ಮೆಟ್ಟುವ ಬಗೆ, ಜನಾನುರಾಗ, ಭಾರತೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಬಗೆ ಎಲ್ಲವೂ ಅನನ್ಯವಾದುದು.
ಬಿಡಿ ನಾನೇನು ಹೊಗಳುಭಟ್ಟನಲ್ಲ. ಆದರೆ ಮೋದಿ ಭಾರತದ ಸ್ವಾಭಿಮಾನವನ್ನು ನೂರ್ಮಡಿಗೊಳಿಸುತ್ತಿರುವ ರೀತಿ ನೋಡಿದಾಗ ಭಾವವುಕ್ಕಿ ಬರುತ್ತದೆ ಅಷ್ಟೇ.
ಕಳೆದ ಒಂದು ವಾರದ ಹಿಂದೆ ಅಜಿತ್ ದೋವಲ್ ಇರಾನ್ ಮತ್ತು ಇಸ್ರೇಲ್ಗಳಿಗೆ ಗುಪ್ತ ಭೇಟಿ ಕೊಟ್ಟು ಬಂದ ಸುದ್ದಿ ಓದಿದ್ದಿರಾ? ಅದರಲ್ಲೇನು ವಿಶೇಷವೆಂದು ಕೇಳಬೇಡಿ. ಈ ಎರಡೂ ರಾಷ್ಟ್ರಗಳು ಬದ್ಧ ವೈರಿಗಳು. ಇವರಿಬ್ಬರನ್ನೂ ಭೇಟಿ ಮಾಡಿ ಮಾತುಕತೆ ನಡೆಸುವುದರ ಹಿಂದೆ ಇರಬಹುದಾದ ಒಳಸುಳಿಗಳೇನು ಎಂದು ಬಲುವಾಗಿ ತಲೆಕೆಟ್ಟತ್ತು. ಅದೋ ಸುದ್ದಿ ಹೊರಬಂತು. ಭಾರತ ಸದ್ಯದಲ್ಲಿಯೇ ಇರಾನಿನ ಛಾಬಹಾರ್ ಬಂದರಿನ ಅಭಿವೃದ್ಧಿಗೆ ಬಲು ದೊಡ್ಡ ಮೊತ್ತವನ್ನು ಹೂಡಲಿದೆ. ಹೆಚ್ಚು ಕಡಿಮೆ ಹತ್ತು ಮಂತ್ರಿಗಳ ಚಟುವಟಿಕೆಯನ್ನು ಬಯಸುವ ಈ ಯೋಜನೆ ಬಹುಶಃ ನಮ್ಮ ಪಾಲಿಗೆ ಅತಿ ದೊಡ್ಡ ಯೋಜನೆಯೇ ಸರಿ.
ಈ ಯೋಜನೆಯಿಂದ ಪಾಕೀಸ್ತಾನವನ್ನು ಮುಟ್ಟದೆ ಅಫ್ಘಾನಿಸ್ತಾನಕ್ಕೆ ಹೋಗುವ, ಅಲ್ಲಿಂದ ರಷ್ಯಾದೆಡೆಗೆ ಸಾಗುವ ನಮ್ಮ ಪ್ರಯತ್ನ ಸಲೀಸಾಗಲಿದೆ. ಜೊತೆಗೆ ಅಪಾರ ಎಣ್ಣೆಯ ಗಣಿಯಾಗಿರುವ ಇರಾನ್ ನಮ್ಮೊಂದಿಗೆ ಕೈ ಜೋಡಿಸುವುದರಿಂದ ನಮಗೆ ಆಗುವ ದೀರ್ಘಕಾಲೀನ ಲಾಭವೂ ಬರೆದು ಮುಗಿಸಲಾಗದ್ದು! ಇಷ್ಟಕ್ಕೂ ಗುಜರಾತಿನ ಕಾಂಡ್ಲಾ ಬಂದರಿನಿಂದ ಇರಾನಿನ ಛಾಬಹಾರ್ಗೆ ಇರುವ ದೂರ ಮುಂಬೈ-ದೆಹಲಿಗಳ ದೂರಕ್ಕಿಂತ ಕಡಿಮೆ. ನಮ್ಮ ಪಾಲಿಗೆ ಅತ್ಯಂತ ಆಯಕಟ್ಟಿನ ಜಾಗವಾಗಲಿದೆ ಇದು. ಮೋದಿ ಹೀಗೆ ಇನ್ನೊಂದು ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ದುಡಿದರೆಂದರೆ ಪಾಕೀಸ್ತಾನ ‘ಡಮ್ಮಿ’ಯಾಗಿಬಿಡುತ್ತದೆ; ಸಿದ್ದರಾಮಯ್ಯನವರ ‘ಅನ್ನಭಾಗ್ಯ’ ಯೋಜನೆಯ ಫಲಾನುಭವಿಗಳಾಗಬೇಕಾಗುತ್ತದೆ ಅಷ್ಟೇ.
ಭಾರತ ಈಗ ಕಣ್ಣು ನೆಟ್ಟಿರುವುದು ಅಕ್ಷರಶಃ ಚೀನಾ ಮೇಲೆಯೇ. ಚೀನಾ ವಿರೋಧಿಗಳೊಂದಿಗೆ ಅತ್ಯಂತ ಘನಿಷ್ಠವಾದ ಸಂಬಂಧ ಬೆಳೆಸುತ್ತಿರುವ ನಾವು ಡ್ರ್ಯಾಗನ್ಗೆ ಹೆದರುವ ಕಾಲ ಈಗಿಲ್ಲ. ಜಪಾನ್ನೊಂದಿಗೆ ಭಾರತ ಆತ್ಮ ಬಂಧುತ್ವವನ್ನು ಅದೆಷ್ಟು ಗಟ್ಟಿಗೊಳಿಸಿಕೊಂಡಿದೆಯೆಂದರೆ ಇತ್ತೀಚೆಗೆ ಚೀನಾ ಜಪಾನ್ ಮೇಲೆ ವಿಜಯ ಪತಾಕೆ ಹಾರಿಸಿದ ನೆನಪಲ್ಲಿ ಮನಮೋಹಕ ಪರೇಡ್ ನಡೆಸಿತಲ್ಲ ಆಗ ಭಾರತದ ಸೈನಿಕರಿಗೂ ಆಹ್ವಾನವಿತ್ತಿತ್ತು. ಪಾಕೀಸ್ತಾನ, ರಷ್ಯಾದ ಸೈನಿಕರೂ ಭಾಗವಹಿಸಿದ್ದರು. ಭಾರತ ಮಾತ್ರ ಭಾಗವಹಿಸಲು ನಿರಾಕರಿಸಿತ್ತು. ಅದಕ್ಕೆ ಕೊಟ್ಟ ಕಾರಣ ಎರಡು. ಮೊದಲನೆಯದು ಮಾನವತೆಯ ಕಂಟಕ ಪಾಕೀಸ್ತಾನದ ಸೈನಿಕರು ಭಾಗವಹಿಸಿರುವ ಪರೇಡ್; ಎರಡನೆಯದು ಇದರಲ್ಲಿ ಭಾಗವಹಿಸುವುದರಿಂದ ದೀರ್ಘಕಾಲದ ಸನ್ಮಿತ್ರ ಜಪಾನ್ಗೆ ನೋವಾಗಬಹುದೆನ್ನುವ ತುಡಿತ. ಎರಡೇ ವರ್ಷದ ಹಿಂದೆ ಭಾರತದ ಪ್ರಧಾನ ಮಂತ್ರಿ, ವಿದೇಶಾಂಗ ಸಚಿವರು ಚೀನಾದೆದುರಿಗೆ ತಲೆ ಬಾಗಿ ನಿಲ್ಲುತ್ತಿದ್ದ ದೃಶ್ಯ ಈಗಲೂ ಕಣ್ಮುಂದೆ ಕಟ್ಟಿನಿಂತಿದೆ. ಮೋದಿ ಆ ಚಿತ್ರವನ್ನು ಬದಲಾಯಿಸಿಬಿಟ್ಟಿದ್ದಾರೆ.
ಆದರೆ ಚೀನಾ ಮಾತ್ರ ಹಠಮಾರಿ ಹೆಂಡತಿಯಂತೆ ಪಾಕೀಸ್ತಾನವನ್ನು ಚಿವುಟಿ ಗಡಿ ಉಲ್ಲಂಘಿಸಿ ಒಳ ನುಸುಳಲು ಕುಮ್ಮಕ್ಕು ಕೊಡುತ್ತಿದೆ. ಕಾಶ್ಮೀರದಲ್ಲಿ ಪುಂಡ-ಪೋಕರಿಗಳ ಮೂಲಕ ನರೇಂದ್ರ ಮೋದಿಯವರ ತಲೆ ಕೆಡಿಸುವ ಸಹಜ ಪ್ರಯತ್ನ ಶುರುಮಾಡಿದೆ. ಆದರೆ ಈ ಬಾರಿ ನಾವು ಬದಲಾಗಿದ್ದೇವೆ ಅಷ್ಟೇ. ನಾವೀಗ ಪಾಕಿಸ್ತಾನಕ್ಕೆ ಗುರಿಯಿಡಲೇ ಇಲ್ಲ. ನೇರ ವಿಯೆಟ್ನಾಂಗೆ ಕೈ ಹಾಕಿದೆವು. ಚೀನಾದೊಂದಿಗೆ ಬದ್ಧ ವೈರತ್ವ ಸಾಧಿಸುತ್ತ ಬಂದಿರುವ ರಾಷ್ಟ್ರ ಅದು. ಅದರ ರಾಷ್ಟ್ರೀಯ ದಿವಸವನ್ನು ದೆಹಲಿಯಲ್ಲಿ ಆಚರಿಸುವಾಗ ಅಜಿತ್ ದೋವಲ್, ವಿಕೆ ಸಿಂಗ್ರೂ ಭಾಗವಹಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಈಗಂತೂ ಎರಡೂ ರಾಷ್ಟ್ರಗಳ ಸಂಬಂಧ ಅದೆಷ್ಟು ವೃದ್ಧಿಯಾಗಿದೆಯೆಂದರೆ ಚೀನಾದ ವಿರೋಧದ ನಡುವೆಯೂ ಅಲ್ಲಿನ ಸಮುದ್ರದಲ್ಲಿ ಎಣ್ಣೆ ತೆಗೆಯುವ ಗುತ್ತಿಗೆಯನ್ನು ಭಾರತ ಪಡೆದುಕೊಂಡಿದೆ. ‘ನೀವು ಕಾಶ್ಮೀರ ಮುಟ್ಟಿದರೆ ನಾವು ವಿಯೆಟ್ನಾಂಗೆ ಕೈ ಹಾಕುತ್ತೇವೆ’ ಎಂದು ಚೀನಾಕ್ಕೆ ಸಂದೇಶ ಕೊಡುವುದಿದೆಯಲ್ಲ ಅದು 56 ಇಂಚಿನ ಎದೆಯವ ಮಾತ್ರ ಮಾಡಲು ಸಾಧ್ಯ!

modi10
ಭಾರತ ಗಡಸುತನ ತೋರುತ್ತಿದ್ದಂತೆ ಚೀನಾದ ವಿರೋಧಿಯಾಗಿದ್ದ ದಕ್ಷಿಣ ಕೊರಿಯಾ ಕೂಡ ಭಾರತದತ್ತ ವಾಲಲಾರಂಭಿಸಿದೆ. ಚೆನ್ನೈ ಬಂದರಿಗೆ ಕಳೆದೆರಡು ದಿನಗಳ ಹಿಂದೆ ಬಂದಿಳಿದ ದಕ್ಷಿಣ ಕೊರಿಯಾದ ಯುದ್ಧ ನೌಕೆಗಳು ಮೇಲ್ನೋಟಕ್ಕೆ ಸ್ನೇಹ ವೃದ್ಧಿಗೆ ಬಂದವೆನಿಸಿದರೂ ವಾಸ್ತವ ಸ್ಥಿತಿ ಬೇರೆಯೇ ಇದೆ. ಅದು ಜಗತ್ತಿಗೂ ಗೊತ್ತಿದೆ, ಚೀನಾಕ್ಕೂ ಕೂಡ. ಮುಂದೊಮ್ಮೆ ಚೀನಾ ಏಕಪಕ್ಷೀಯವಾಗಿ ದಾಳಿಯ ನಿಧರ್ಾರ ಕೈಗೊಂಡರೆ ನಮಗೆ ದೊರೆಯಬಹುದಾದ ಸಹಕಾರ, ತಾಕುವ ಸಮಯ ಎಲ್ಲವುಗಳ ಅಧ್ಯಯನ ನಡೆಯುತ್ತಿದೆ. ಚೀನಾದ ಎದೆ ಢವಗುಟ್ಟುತ್ತಿರುವುದು ಅದಕ್ಕೇ!
ಇದರ ಪರಿಣಾಮ ಹೇಗಿದೆ ಗೊತ್ತೇನು? ಚೀನಾದ ವಿರುದ್ಧ ಕತ್ತಿ ಮಸೆಯುತ್ತಿದ್ದ ರಾಷ್ಟ್ರಗಳೆಲ್ಲ ನಮ್ಮೊಂದಿಗೆ ಅಂಟುಕೊಂಡಿವೆ. ಅದಾಗಲೇ ಅಮೇರಿಕಾ ಪಾಕಿಸ್ತಾನಕ್ಕೆ ನೀಡುತ್ತಿದ್ದ ಸೈನಿಕ ಧನಸಹಾಯವನ್ನೆಲ್ಲ ತಡೆಯುತ್ತೇನೆಂದು ಹೇಳಿ ಅಚ್ಚರಿ ಮೂಡಿಸಿದ್ದಲ್ಲದೇ ಭಾರತದೊಂದಿಗೆ ಸೇರಿ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ನಿರತವಾಗುವುದಾಗಿ ಭಾರತದ ಅಮೇರಿಕ ರಾಯಭಾರಿ ರಿಚಡರ್್ ವಮರ್ಾ ಹೇಳಿದ್ದಾರೆ. ಅದಾಗಲೇ ರಷ್ಯಾದೊಂದಿಗೆ ಸಬ್ಮೆರಿನ್ ತಯಾರಿಕೆಯ ಒಪ್ಪಂದವಾಗಿದೆ; ಇಸ್ರೇಲ್ ಶಸ್ತ್ರಾಸ್ತ್ರಗಳ ಪೂರೈಕೆಗೆ ಒಪ್ಪಿದೆ. ಇದರ ಜೊತೆ ಜೊತೆಗೆ ಭಾರತ-ಅಮೇರಿಕದ ಜಂಟಿ ಸೈನಿಕ ಸಮರಾಭ್ಯಾಸಗಳು ಬೇರೆ!
ಈ ಬಗೆಯ ಬದಲಾವಣೆಗಳು ಕಂಡು ಬಂದಂತೆಲ್ಲ ಭಾರತದ ಸಾಮಥ್ರ್ಯ ಅದೆಷ್ಟು ಹಿಗ್ಗುತ್ತಿದೆಯೆಂದರೆ ಚೀನಾದ ಪಟಾಕಿಗಳನ್ನು ನಿಷೇಧಿಸುವ ಧಾಷ್ಟ್ರ್ಯವನ್ನು ಈ ಬಾರಿ ತೋರಲಾಗಿದೆ. ಇದು ಬರಿ ಆದೇಶವಲ್ಲ; ಚೀನೀ ಪಟಾಕಿ ಮಾರುವವರಿಗೆ ಕಠಿಣ ಶಿಕ್ಷೆಯ ಬೆದರಿಕೆಯನ್ನೂ ಒಡ್ಡಲಾಗಿದೆ. ಅಲ್ಲಿಗೆ ಚೀನಾದ ಕೈಕಾಲು ಮುರಿದು ಹಾಕಿದಂತೆಯೇ. ಕಳೆದ ಹತ್ತು ವರ್ಷಗಳ ಯುಪಿಎ ಸಕರ್ಾರ ಹೇಡಿಯಂತೆ ನಮ್ಮೆಲ್ಲ ಆಂತರಿಕ ಗುಟ್ಟುಗಳನ್ನು ಅಮೇರಿಕ-ಚೀನಾಗಳಿಗೆ ಅರಿವಿಲ್ಲದೇ ಬಿಟ್ಟುಕೊಡುತ್ತಿತ್ತು. ಸೋರುತ್ತಿದೆಯೆಂದು ಅರಿವಾದ ನಂತರವೂ ಕೈಲಾಗದೇ ಸುಮ್ಮನೆ ಕುಂತಿತ್ತು. ಮೋದಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಭಾರತ್ ಆಪರೇಟಿಂಗ್ ಸಿಸ್ಟಮ್ಸ್ ಸೆಲ್ಯೂಷನ್ಸ್ ಎಂಬ ಆಪರೇಟಂಗ್ ಸಿಸ್ಟಮ್ನ್ನು ಸಕರ್ಾರಿ ಕಚೇರಿಗೆ ಕಡ್ಡಾಯವಾಗಿ ಅಳವಡಿಸುವ ಮಾತಾಡುವ ಮೂಲಕ ಡಿಜಿಟಲ್ ಇಂಡಿಯಾದ ಮೂಲ ಸ್ವರೂಪ ಅನಾವರಣಗೊಳಿಸಿದ್ದಾರೆ! ಇನ್ನು ಮುಂದೆ ಈ ರಾಷ್ಟ್ರಗಳು ನಮ್ಮ ಅಮೂಲ್ಯ ಮಾಹಿತಿಯನ್ನು ಸುಲಭಕ್ಕೆ ಕದಿಯಲಾರವು. ನಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರುವ ಮುನ್ನ ಯಾರಿಗೂ ಅರಿಯಲಾಗದು!
ಅಬ್ಬಾ! ಒಬ್ಬ ಮನುಷ್ಯ ಎಷ್ಟಲ್ಲಾ ದಿಕ್ಕಿನಲ್ಲಿ ಆಲೋಚಿಸಬಲ್ಲ. ಪಕ್ಕ ಪಕ್ಕದ ರಾಷ್ಟ್ರಗಳು ಉಗುಳುವ ವಿಷಕ್ಕೆ ಪರಿಹಾರ ಹುಡುಕಬೇಕು; ತನ್ನೊಂದಿಗೇ ಇರುವ ವಿಷ ಸರ್ಪಗಳ ಹಲ್ಲು ಮುರಿಯಲು ಹೆಣಗಾಡಬೇಕು. ಅಂತರರಾಷ್ಟ್ರೀಯ ಸಂಬಂಧಗಳನ್ನು ವೃದ್ಧಿಗೊಳಿಸಬೇಕು. ಒಳಗಿನ ಜನರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸ್ಥಳೀಯ ಚುನಾವಣೆಗಳ ಪ್ರಚಾರಕ್ಕೆ ಬರಬೇಕು; ವಿಶ್ವ ಸಮ್ಮೇಳನಗಳಿಗೂ ಹೋಗಬೇಕು. ಈ ಮನುಷ್ಯ ಖಂಡಿತ ಸಾಮಾನ್ಯನಲ್ಲ: ಕುದುರೆಯ ಮೇಲೇರಿ ಬಂದಿದ್ದರೆ ಈತನನ್ನು ‘ಕಲ್ಕಿ’ಯೆಂದೇ ಕರೆದು ಬಿಡುತ್ತಿದ್ದರೇನೋ!
ಅಲ್ಲದೇ ಮತ್ತೇನು? ನವಾಜ್ ಷರೀಫ್ರ ಕೆನ್ನೆಗೆ ಬಾರಿಸಿ, ಚೀನಾದ ಅಧ್ಯಕ್ಷರ ಕಣ್ಣಿಗೆ ಕಣ್ಣು ಬೆರೆಸಿ ಬಂದು ರೇಡಿಯೋ ಕೇಳುತ್ತಿರುವ ಜನರೊಂದಿಗೆ ಅಷ್ಟೇ ಸಮಾಧಾನ ಚಿತ್ತದಿಂದ ಮಾತನಾಡುವ ಈ ಪುಣ್ಯಾತ್ಮ ಸಹಸ್ರಾವಧಾನಿಯಲ್ಲ, ಲಕ್ಷಾವಧಾನಿಯೇ ಸರಿ!

narendramodi
ಅಂದಹಾಗೆ ಮೊನ್ನೆ ಚೌತಿಯ ದಿನ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭತರ್ಿ 65 ತುಂಬಿತು. ಯಾವ ರಾಜಕೀಯ ನಾಯಕರಿಗೂ ಹೀಗೆ ಶುಭಕೋರಿದ್ದು ನನಗೆ ನೆನಪಿಲ್ಲ. ಆದರೆ ಮೋದಿ ಭಿನ್ನ. ಅವರ ಆಯಸ್ಸು, ಆರೋಗ್ಯ ಮತ್ತು ಅಧಿಕಾರ ಗಟ್ಟಿಯಾಗಿರಬೇಕು. ಅದು ಭಾರತದ ಅಗತ್ಯ. ಜನ್ಮ ದಿನದ ಶುಭಾಶಯಗಳು ಮೋದೀಜಿ..

Comments are closed.