ವಿಭಾಗಗಳು

ಸುದ್ದಿಪತ್ರ


 

ಯುದ್ಧದ ಹಿಂದೆಯೂ ಅಡಗಿರುವ ಶಬ್ದ ವಿಜ್ಞಾನ!

ಅಶ್ವತ್ಥಾಮ ಅಜರ್ುನನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದು ನಾವು ಕೇಳುತ್ತೇವಲ್ಲ. ಹಾಗೆ ಪ್ರಯೋಗಕ್ಕೆ ನಿಂತಾಗ ಆತ ಕೈಲಿ ಹಿಡಿದಿದ್ದು ಹುಲ್ಲಿನ ಎಸಳು ಮಾತ್ರ. ಮನಸ್ಸನ್ನು ಏಕಾಗ್ರ ಗೊಳಿಸಿಕೊಂಡು ಬ್ರಹ್ಮಾಸ್ತ್ರಕ್ಕೆ ಬೇಕಾದ ಮಂತ್ರೋಚ್ಚಾರಣೆ ಮಾಡುತ್ತಾ ಹುಲ್ಲು ಕಡ್ಡಿಯನ್ನೇ ಶಸ್ತ್ರ ಮಾಡಿಬಿಟ್ಟ. ಬ್ರಹ್ಮಾಸ್ತ್ರವನ್ನು ಎಸೆದಾಗ ಅಲ್ಲಿಯ ವಾತಾವರಣದ ಬಿಸಿ ತಡೆಯಲಾಗದಷ್ಟು ಏರಿತಂತೆ. ನಿಂತಲ್ಲೇ ಸುಟ್ಟು ಹೋಗುವಂತಹ ಅನುಭವ. ಒಂದು ರೀತಿಯಲ್ಲಿ ನೋಡುವುದಾದರೆ ಇಂದಿನ ದಿನ ಮಾನದ ಅಣುಬಾಂಬ್ ಸಿಡಿದಾಗ ಆಗುವ ಅನುಭವವೇ.

brahmastra

ರಾಮಾಯಣ-ಮಹಾಭಾರತಗಳನ್ನು ಯಾರು ಅದೆಷ್ಟೇ ಜರಿದರೂ ಜಗತ್ತಿನಲ್ಲಿ ಅತ್ಯಂತ ಆಕರ್ಷಣೀಯ ಗ್ರಂಥಗಳವು ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನೂ ಒಂದಚ್ಚರಿ ಏನು ಗೊತ್ತೇ? ಜಗತ್ತಿನ ಎಲ್ಲ ಮತಗ್ರಂಥಗಳನ್ನು ಓದಿಸಿದರೆ ಮಾತ್ರ ಅರಿವಾಗುವಂಥದ್ದು. ಓದದೆಯೂ ಪಾತ್ರಗಳು, ಅವುಗಳ ಗುಣಗಳ ರಕ್ತಸಾತ್ ಆಗಿವೆಯೆಂದರೆ ರಾಮ-ಕೃಷ್ಣರ ಕಥೆಗಳು ಮಾತ್ರ. ಈ ದೇಶದ ಮೂಲೆ-ಮೂಲೆಯಲ್ಲೂ ಸ್ಥೂಲ ರೂಪದಲ್ಲಿ ರಾಮ-ರಾವಣರ ಬಗ್ಗೆ, ಲಕ್ಷ್ಮಣ-ಭರತರ ಬಗ್ಗೆ ಗೊತ್ತು. ಕೃಷ್ಣನ ಲೀಲೆಗಳು ಗೊತ್ತು. ಹೇಗೆ? ಇಲ್ಲಿನ ಜನ ರಾಮನನ್ನು ಕೇಳಿಲ್ಲ; ಬದುಕಿದ್ದಾರೆ.

ರಾಮಾಯಣ-ಮಹಾಭಾರತಗಳು ಧಾರಾವಾಹಿಯಾಗಿ ಬರುವಾಗಲಂತೂ ಇಡಿಯ ದೇಶ ಸ್ತಬ್ಧವಾಗಿಬಿಡುತ್ತಿತ್ತು! ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮನೆಯವರೆಲ್ಲಾ ಕುಳಿತು ನೋಡುವಂತಹ ಕಂಪನಗಳನ್ನು ಸೃಷ್ಟಿಸಿತ್ತು. ಆಗೆಲ್ಲಾ ರಾಮ-ರಾವಣರ ಯುದ್ಧ, ಕುರುಕ್ಷೇತ್ರ ಕದನಗಳು ಈಗಿನ ಸ್ಟಾರ್ ವಾರ್ಸ್ಗಳಿಗಿಂತ ರೋಚಕವಾಗಿರುತ್ತಿತ್ತು. ಬಿಲ್ಲು-ಬಾಣಗಳನ್ನು ಹಿಡಿದು ಅಜರ್ುನನಂತೆಯೋ, ಲಕ್ಷ್ಮಣನಾಗಿಯೋ ಕಣ್ಮುಚ್ಚಿ ಏನೋ ಒಂದಷ್ಟು ಮಣಮಣಿಸುತ್ತಾ ಬಾಣ ಬಿಡುವುದೆಲ್ಲ ಆನಂದವೋ ಆನಂದ. ಆಗೆಲ್ಲ ಅಜರ್ುನ-ಕರ್ಣರೆಲ್ಲ ಮನಸ್ಸೊಳಗೇ ಅದೇನು ಹೇಳಿಕೊಳ್ಳುತ್ತಿದ್ದರೋ ತಿಳಿಯುತ್ತಿರಲಿಲ್ಲ. ಈಗ ಅರಿವಾಗುತ್ತಿದೆ.

ಧನುವರ್ೇದ ಅನೇಕ ಬಗೆಯ ಶಸ್ತ್ರಗಳ ಕುರಿತಂತೆ ಮಾತನಾಡುತ್ತದೆ. ಯಂತ್ರಗಳಿಂದೆಸೆಯುವ, ಕೈಯ್ಯಿಂದ ಎಸೆಯುವ ಶಸ್ತ್ರಗಳು ಒಂದೆಡೆಯಾದರೆ ಕೈಯ್ಯಲ್ಲಿ ಹಿಡಿದೇ ಯುದ್ಧ ಮಾಡುವ ಕತ್ತಿ-ಗುರಾಣಿಯಂಥವು ಮತ್ತೊಂದು. ಇನ್ನು ಅತ್ಯಂತ ಕೊನೆಯ ಹಂತ ಮುಷ್ಟಿಯಿಂದಲೇ ಕಾದಾಡುವುದು. ತನ್ನಿಂದ ದೂರ ನಡೆಯುವ ಕದನವೇ ಅತ್ಯಂತ ಶ್ರೇಷ್ಠ ಮಟ್ಟದ ಕದನ. ದೇಹಕ್ಕೆ ಹತ್ತಿರ ಬಂದಂತೆ ಯುದ್ಧ ಭಯಾನಕ ಸ್ವರೂಪ ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿ ಶಸ್ತ್ರಗಳಿಗೆ ಮಂತ್ರ ಶಕ್ತಿಯನ್ನು ತುಂಬಿ ಕಳಿಸುವ ಪ್ರಯತ್ನ ಶುರುವಾಗಿದ್ದು. ಅಲೌಕಿಕ ಅನುಭವಕ್ಕೆ ಮಂತ್ರಗಳು, ಇಚ್ಛೆಯನ್ನು ಪೂರೈಸಲು ಮಂತ್ರಗಳಾದ ಮೇಲೆ ಉಳಿದದ್ದು ಯುದ್ಧ ಕಾಲಕ್ಕೆ ಬೇಕಾಗುವ ಮಂತ್ರಗಳು ಮಾತ್ರ. ಇವುಗಳನ್ನೇ ಅಸ್ತ್ರಗಳು ಎನ್ನಲಾಯ್ತು.

ಇದು ಅತ್ಯಂತ ಸಹಜ ತರ್ಕ. ಮಂತ್ರಗಳು ಮನಸ್ಸನ್ನು ಶಾಂತಗೊಳಿಸಬಲ್ಲವು, ದೇಹದಲ್ಲಿ ಅಗ್ನಿ ಹೆಚ್ಚಿಸುವಂತೆ ಮಾಡಬಲ್ಲವೆಂಬುದನ್ನು ನಾವು ತಿಳಿದಿದ್ದೇವೆ. ದೇಹಕ್ಕೂ ವಿಶ್ವಕ್ಕೂ ನೇರ ಸಂಬಂಧ ಇರುವುದರಿಂದ ಇವೇ ಮಂತ್ರಗಳು ಸೂಕ್ತ ಬಗೆಯಲ್ಲಿ ಉಚ್ಚರಿಸಿದರೆ ವಿಶ್ವದಲ್ಲೂ ಬೆಂಕಿಯನ್ನು ಹೆಚ್ಚಿಸಬುಹುದು. ಪ್ರಾಕೃತಿಕ ನಿಯಮಗಳನ್ನು ಏರುಪೇರು ಮಾಡಬಲ್ಲುದು!

ಅನೇಕ ಬಾರಿ ಈ ಪ್ರಕ್ರಿಯೆಯಲ್ಲಿ ಮುಖ್ಯವಾಗೋದು ಶಸ್ತ್ರವಲ್ಲ. ಬದಲಿಗೆ ಅದರ ಹಿಂದಿನ ಮಂತ್ರವೇ! ಅಶ್ವತ್ಥಾಮ ಅಜರ್ುನನ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದು ನಾವು ಕೇಳುತ್ತೇವಲ್ಲ. ಹಾಗೆ ಪ್ರಯೋಗಕ್ಕೆ ನಿಂತಾಗ ಆತ ಕೈಲಿ ಹಿಡಿದಿದ್ದು ಹುಲ್ಲಿನ ಎಸಳು ಮಾತ್ರ. ಮನಸ್ಸನ್ನು ಏಕಾಗ್ರ ಗೊಳಿಸಿಕೊಂಡು ಬ್ರಹ್ಮಾಸ್ತ್ರಕ್ಕೆ ಬೇಕಾದ ಮಂತ್ರೋಚ್ಚಾರಣೆ ಮಾಡುತ್ತಾ ಹುಲ್ಲು ಕಡ್ಡಿಯನ್ನೇ ಶಸ್ತ್ರ ಮಾಡಿಬಿಟ್ಟ. ಬ್ರಹ್ಮಾಸ್ತ್ರವನ್ನು ಎಸೆದಾಗ ಅಲ್ಲಿಯ ವಾತಾವರಣದ ಬಿಸಿ ತಡೆಯಲಾಗದಷ್ಟು ಏರಿತಂತೆ. ನಿಂತಲ್ಲೇ ಸುಟ್ಟು ಹೋಗುವಂತಹ ಅನುಭವ. ಒಂದು ರೀತಿಯಲ್ಲಿ ನೋಡುವುದಾದರೆ ಇಂದಿನ ದಿನ ಮಾನದ ಅಣುಬಾಂಬ್ ಸಿಡಿದಾಗ ಆಗುವ ಅನುಭವವೇ.

ಹೀಗಾಗಿಯೇ ಅಣುಸ್ಫೋಟದ ಮೊದಲ ದೃಶ್ಯ ಕಂಡಂತಹ ಓಪನ್ ಹೀಮರ್ ಭಗವದ್ಗೀತೆಯ ‘ದಿವಿ ಸೂರ್ಯ ಸಹಸ್ರಸ್ಯ, ಭವೇದ್ಯುಗಪದುತ್ಥಿತಾ’ ಎಂಬ ಶ್ಲೋಕವನ್ನು ನೆನಪಿಸಿಕೊಂಡಿದ್ದು. ಸಾವಿರ ಸೂರ್ಯರು ಒಮ್ಮೆಗೇ ಬೆಳಗಿದ ಬೆಳಗು ಅದು. ಅಷ್ಟೇ ಬೆಂಕಿಯ ಅನುಭವ. ಕೃಷ್ಣ ಇದನ್ನು ಗ್ರಹಿಸಿ ಮುಂದೇನು ಮಾಡಬೇಕೆಂದು ಊಹಿಸಿ ಪೃಥ್ವಿಯನ್ನು ರಕ್ಷಿಸಿದ ಅನ್ನೋದನ್ನು ನಾವೆಲ್ಲರೂ ಕೇಳಿದ್ದೇವೆ.

ಇಂತಹದೊಂದು ಅಸ್ತ್ರದ ಕಲ್ಪನೆ ವಾಸ್ತವವಾಗಿರಲು ಸಾಧ್ಯವೇ? ಖಂಡಿತ ಸಾಧ್ಯ. 1900 ರ ಆರಂಭದಲ್ಲಿ ನಿಕೋಲಸ್ ಟೆಸ್ಲಾ ಎನ್ನುವ ವಿಜ್ಞಾನಿ ಗಾಳಿಯು ಸೂಕ್ತ ಒತ್ತಡದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ವಾಹಕವಾಗಿಬಿಡಬಲ್ಲುದೆಂಬುದನ್ನು ಕಂಡುಹಿಡಿದ. ಅದರರ್ಥ ಒಂದೆಡೆಯಿಂದ ಮತ್ತೊಂದೆಡೆಗೆ ವಿದ್ಯುತ್ ಹರಿಸಲು ತಂತಿಯೇ ಬೇಕಾಗಿಲ್ಲ ಅಂತ! ಈ ಪ್ರಯೋಗಕ್ಕಾಗಿ ಆತ ಅತ್ಯಂತ ಕಡಿಮೆ ಕಂಪನದ ಎಲೆಕ್ಟ್ರಿಕ್ ಸಂಕೇತಗಳನ್ನು ಭೂಮಿಯಿಂದ 50-200 ಮೈಲುಗಳ ಮೇಲಿರುವ ಅಯಾನುಗೋಳಕ್ಕೆ ಕಳುಹಿಸಿದ. ಈ ಅಯಾನುಗೋಳ ಮುಕ್ತವಾಗಿ ಅಡ್ಡಾಡುವ ಎಲೆಕ್ಟ್ರಾನುಗಳಿಂದ ತುಂಬಿಹೋಗಿದೆ. ಇಲ್ಲಿಗೆ ಕಳಿಸಲ್ಪಟ್ಟ ಈ ವಿದ್ಯುತ್ ನ್ನು ಎಲ್ಲಿ ಬೇಕಾದಲ್ಲಿ ಪಡೆದುಕೊಳ್ಳಬಹುದೆಂಬುದು ಟೆಸ್ಲಾ ವಾದವಾಗಿತ್ತು. ಆತ ಒಂದು ಹೆಜ್ಜೆ ಮುಂದುವರೆದು ಮಾನವ ಈ ಬಗೆಯ ಸಂಕೇತಗಳನ್ನು ಹುಟ್ಟು ಹಾಕಬಲ್ಲ, ವಾತಾವರಣಕ್ಕೆ ಎಸೆಯಬಲ್ಲ, ಅದನ್ನು ಸ್ವೀಕರಿಸುವ ಗ್ರಾಹಕವೂ ಆಗಬಲ್ಲ ಎಂದಿದ್ದ. ಅಷ್ಟೇ ಅಲ್ಲದೇ ಭೂಮಿಯಲ್ಲಿ ಆವರಿಸಿರುವ ಕಾಂತೀಯ ಶಕ್ತಿಗೆ ನಮ್ಮ ಮೆದುಳು ಸ್ಪಂದಿಸುವುದನ್ನೂ ಅವನು ಗುರುತಿಸಿದ್ದ. ಅಂದರೆ, ಭೂಮಿಯ ಕಾಂತೀಯ ಶಕ್ತಿಯಲ್ಲಿ ಏರುಪೇರು ಉಂಟಾಗುವಂತೆ ಮಾಡಿದರೆ, ಮೆದುಳಿನ ಮೇಲೆ ನೇರ ಪ್ರಭಾವ ಆಗುತ್ತದೆಂದಾಯ್ತು. ಒಮ್ಮೆ ಮೆದುಳಿನ ಮೇಲೆ ನಿಯಂತ್ರಣ ಪಡೆದರೆ ದೇಹವನ್ನು ತನ್ನಿಚ್ಚೆಗೆ ತಕ್ಕಂತೆ ಕುಣಿಸಬಹುದು ಕೂಡ. ರಣಭೂಮಿಯಿಂದ ಓಡಿ ಹೋಗುವಂತೆ ಮಾಡುವುದೂ ಅಸಾಧ್ಯವಲ್ಲ. ಯುದ್ಧದಲ್ಲಿ ಅಸ್ತ್ರಗಳ ಪ್ರಯೋಗವೂ ಇದೇ ಬಗೆಯದ್ದು.

ವಾತಾವರಣದಲ್ಲಿರುವ ವಿದ್ಯುತ್ ಕಾಂತೀಯ ಸಂಕೇತಗಳ ಮೇಲೆ ಹಿಡಿತ ಸಾಧಿಸಿದವ ಏನು ಬೇಕಿದ್ದರೂ ಮಾಡಬಲ್ಲ. ಹಾಗೆ ನೋಡಿದರೆ ಈ ವಿದ್ಯುತ್ ಸಂಕೇತಗಳೇ ನಮ್ಮೆಲ್ಲ ದಿನ-ನಿತ್ಯದ ನಡೆಯನ್ನು ಏರುಪೇರು ಮಾಡುವಂಥವು. ಹೆಚ್ಚೇಕೆ? ಎದೆಯ ಗೂಡಿನಲ್ಲಿಟ್ಟ ‘ಪೇಸ್ ಮೇಕರ್’ಗಳು ಸಣ್ಣ ಪ್ರಮಾಣದ ವಿದ್ಯುತ್ ಸಂಕೇತಗಳನ್ನು ಹೃದಯಕ್ಕೆ ಕಳುಹಿಸಿ ಸೂಕ್ತ ಆವರ್ತನದೊಂದಿಗೆ ಹೃದಯ ಬಡಿಯುವಂತೆ ಮಾಡುತ್ತವೆ. ಮತಿಭ್ರಮಣೆಯಾದವರಿಗೆ ಅತಿ ಕಡಿಮೆ ಪ್ರಮಾಣದ ವಿದ್ಯುತ್ ಶಾಕ್ ಕೊಟ್ಟು ಮರಳಿ ತರಲು ಯತ್ನಿಸುತ್ತಾರೆ. ದೇಹದ ಕಥೆ ಹೀಗಾದರೆ, ವಾತಾವರಣದಲ್ಲಿ ಹರಡಿರುವ ಆಮ್ಲಜನಕ ಜಲಜನಕಗಳು ಬೆಸೆದು ನೀರಾಗಲು ಅಪಾರ ಪ್ರಮಾಣದ ವಿದ್ಯುತ್ತಿನ ಹರಿವು ಬೇಕು. ಶಕ್ತಿಯ ಈ ರೂಪವನ್ನು ಶಬ್ದಶಕ್ತಿಯ ಮೂಲಕ ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಅಸ್ತ್ರವೆನ್ನಲಾಯ್ತು ಅಷ್ಟೇ.

ರೇಡಿಯೋ ಸಂಕೇತಗಳು ಆವಿಷ್ಕಾರಗೊಂಡಾಗ ಅದನ್ನು ಕೇಳಿದವರು ‘ಮರಕುಟಕ’ ಎಂದೇ ಗೇಲಿ ಮಾಡುತ್ತಿದ್ದರು. ಯಾಕೆ ಗೊತ್ತೇ? ಅವುಗಳು ವಾತಾವರಣದಲ್ಲಿ ಸಾಗುವಾಗ ಆ ಪಕ್ಷಿ ಮರವನ್ನು ಕುಟ್ಟಿದಂತೆ ಸದ್ದು ಮಾಡುತ್ತಿದ್ದವು. ಅಷ್ಟೇಕೆ? ಹೈವೋಲ್ಟೇಜ್ ವಿದ್ಯುತ್ ಹರಿಯುವ ತಂತಿಗಳ ಕೆಳಗೆ ನಿಂತು ನೋಡಿ. ತಲೆ ಗಿರ್ರೆನ್ನುವಂತಹ ಸದ್ದು ಕೇಳಿಬರುತ್ತದೆ. ದೀರ್ಘಕಾಲ ಆ ಸದ್ದು ಕೇಳಿದರೆ ತಲೆ ಕೆಡುವ ಪ್ರಸಂಗವೂ ಇಲ್ಲದಿಲ್ಲ.

ಇದರ ಆಧಾರದ ಮೇಲೆಯೇ ರಷಿಯಾ ನಿಸ್ತಂತು ರೇಡಿಯೋ ಸಂಕೇತಗಳನ್ನು ಕಳಿಸಿ ಓರೆಗಾವ್ನಲ್ಲಿ ಅನೇಕ ಗೋವುಗಳ ಸಾವಿಗೆ ಕಾರಣವಾಯ್ತು; ಗಣಿಯಲ್ಲಿ ಕೆಲಸ ಮಾಡುವ ಕಾಮರ್ಿಕರು ಆಲಸಿಗಳಾಗುವಂತೆ ಮಾಡಿತ್ತು. ಇದರ ಮೂಲ ಗುರುತಿಸಿದ ಅಮೇರಿಕಾ ಆನಂತರದ ದಿನಗಳಲ್ಲಿ ರಷಿಯಾದ ಈ ಸಂಕೇತಗಳನ್ನು ತಟಸ್ಥಗೊಳಿಸುವ ಪ್ರತಿ ಸಂಕೇತಗಳನ್ನು ಕಳಿಸಲಾರಂಭಿಸಿತು. ಅಚ್ಚರಿಯೆಂದರೆ ಇಲ್ಲೆಲ್ಲೂ ಶಸ್ತ್ರಗಳ ಬಳಕೆಯಾಗಿರಲೇ ಇಲ್ಲ. ಈ ರೇಡಿಯೋ ಸಂಕೇತಗಳನ್ನು ಮಂತ್ರವೆಂದು ಭಾವಿಸುವುದಾದರೆ ಇದು ಅಸ್ತ್ರ ಯುದ್ಧವೇ ಸರಿ! ಯುದ್ಧ ಕಲೆ ಆಧುನಿಕಗೊಳ್ಳುತ್ತಾ ಹೋದಂತೆ ಈ ಬಗೆಯ ಕದನದ ಮಹತ್ವವೂ ಹೆಚ್ಚುತ್ತಿದೆ. ರೆಡಾರ್ ಗುರಿಗೂ ಸಿಗದ ವಿಮಾನಗಳು, ಯುದ್ಧದ ವೇಳೆಗೆ ಸರಿಯಾಗಿ ಕೈಕೊಡಬಲ್ಲ ಕಂಪ್ಯೂಟರ್ ಹ್ಯಾಕಿಂಗ್ ವ್ಯವಸ್ಥೆಗಳು, ಸಾಂಕ್ರಾಮಿಕ ರೋಗಗಳನ್ನು ಹಬ್ಬಿಸುವ ವಿಷಕ್ರಿಮಿಗಳ ಹರಡಿಸುವಿಕೆ ಇವೆಲ್ಲಾ ನಾಶಕ್ಕೆ ಬೇಕಾದ ಎಲ್ಲ ಮುನ್ನುಡಿಯನ್ನೂ ಬರೆಯುತ್ತಿವೆ.

ಹಾಗೆ ನೋಡಿದರೆ ಕುರುಕ್ಷೇತ್ರ ಯುದ್ಧವೂ ದ್ವಾಪರ ಯುಗದ ವಿಶ್ವಸಮರವೇ. ಅಲ್ಲಿ ಅತಿರಥ ಮಹಾರಥರೇ ಭಾಗವಹಿಸಿದ್ದರು. ಒಬ್ಬೊಬ್ಬರೂ ಒಂದೊಂದು ಬಗೆಯ ಅಸ್ತ್ರ ಪ್ರಯೋಗದಲ್ಲಿ ನಿಷ್ಣಾತರು. ಪೂರ್ಣ ನಾಶಕಾರಕವಾದ ಬ್ರಹ್ಮಾಸ್ತ್ರ, ಬ್ರಹ್ಮಶಿರಾಸ್ತ್ರಗಳ ಮೇಲೆ ಅಜರ್ುನ, ಕರ್ಣ, ದ್ರೋಣರಾದಿಯಾಗಿ ಕೆಲವರ ಹಿಡಿತವಿತ್ತು. ಅದೇ ವೇಳೆಗೆ ಪರಶುರಾಮನಿಂದ ಭಾರ್ಗವಾಸ್ತ್ರದ ಸಿದ್ಧಿ ಮಾಡಿಕೊಂಡಿದ್ದ ಕುರುಕ್ಷೇತ್ರದ ಏಕೈಕ ವೀರ ಕರ್ಣನಾಗಿದ್ದ. ಇನ್ನು ಐಂದ್ರಾಸ್ತ್ರ, ಆಗ್ನೇಯಾಸ್ತ್ರ, ವರುಣಾಸ್ತ್ರ, ನಾಗಾಸ್ತ್ರ ಎಲ್ಲವೂ ಭಿನ್ನ ಭಿನ್ನ ಆಪತ್ತುಗಳನ್ನು ತರಬಲ್ಲ ಸಾಮಥ್ರ್ಯ ಹೊಂದಿದ್ದವು. ಇಂದ್ರನನ್ನು ಅಜರ್ುನ ಒಲಿಸಿಕೊಂಡು ಪಡೆದದ್ದು ವಜ್ರಾಸ್ತ್ರ ಅಂತಾರೆ. ಕೆಲವು ಅಸ್ತ್ರಗಳನ್ನು ಮತ್ತೆ-ಮತ್ತೆ ಬಳಸಬಹುದು. ಬ್ರಹ್ಮಾಸ್ತ್ರದಂತಹ ಕೆಲವನ್ನು ಒಮ್ಮೆ ಮಾತ್ರ! ಬಳಸುವುದಕ್ಕೂ ಮುನ್ನ ವ್ಯಕ್ತಿ ಪೂರ್ಣ ಪ್ರಮಾಣದಲ್ಲಿ ಆಲೋಚಿಸಬೇಕು. ಅಂತಹ ವಾತಾವರಣ ಸೃಷ್ಟಿಯಾಗಿದೆಯೆಂದೆನಿಸಿದಾಗ ಮಾತ್ರ ಬಳಸಬೇಕು. ಥೇಟ್ ಅಣ್ವಸ್ತ್ರವಿದ್ದಂತೆ. ಅದರ ಪ್ರಯೋಗಕ್ಕೂ ಮುನ್ನ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಮನವರಿಕೆ ಮಾಡಿಕೊಟ್ಟು ಬಳಸುವುದಿಲ್ಲವೇ ಹಾಗೆ. ಉದ್ಧಟತನದಿಂದ ಆತುರಾತುರವಾಗಿ ಇದನ್ನು ಪ್ರಯೋಗಸಿದ್ದರಿಂದಲೇ ಅಶ್ವತ್ಥಾಮ ಶಾಪಕ್ಕೆ ಗುರಿಯಾಗಬೇಕಾಯ್ತು,

brahmastra3

ಅದೆಲ್ಲ ಸರಿ. ಈ ಅಸ್ತ್ರಗಳನ್ನು ಪಡೆಯುವ ಬಗೆ ಹೇಗೆ? ಇವುಗಳ ಕಾರ್ಯವ್ಯಾಪ್ತಿ ಏನು? ಈ ಕುರಿತಂತೆ ಸಾಕಷ್ಟು ಸಂಶೋಧನೆಗಳು ನಡೆಯಬೇಕಿವೆ. ಎಂದಿನಂತೆ ಭಾರತೀಯವಾದುದನ್ನೆಲ್ಲಾ ಶಂಕಿಸಿ ಇದರ ಕುರಿತಂತೆ ಮಾಹಿತಿಯೂ ಇಲ್ಲದಂತೆ ಮಾಡಿಕೊಂಡಿದ್ದೇವೆ. ಒಂದಷ್ಟು ಪುರಾಣಗಳು, ರಾಮಾಯಣ-ಮಹಾಭಾರತಗಳು ಅಸ್ತ್ರಗಳ ಪರಿಣಾಮ ವಿವರಿಸುತ್ತವೆ ಬಿಟ್ಟರೆ ಅದನ್ನು ಗಳಿಸಿಕೊಳ್ಳುವ ವಿಧಾನ ಅಲ್ಲ. ಧನುವರ್ೇದವೂ ಈ ಕುರಿತಂತೆ ಮಹತ್ವವಾದ ಗುಟ್ಟು ಬಿಟ್ಟುಕೊಡುವುದಿಲ್ಲ. ಈ ಕುರಿತಂತೆ ಮನಸ್ಸಿನ ಲೋಕದಲ್ಲಿಯೇ ಅಧ್ಯಯನ ನಡೆಯಬೇಕಿದೆ. ಮಂತ್ರಗಳ ಪುರಶ್ಚರಣದಿಂದ ಅದನ್ನು ಸಿದ್ಧಿಗೊಳಿಸಿಕೊಂಡು ಅಸ್ತ್ರಗಳ ಅನ್ವೇಷಣೆಗೆ ನಿಲ್ಲಬೇಕಿದೆ. ಅಜರ್ುನ-ಕರ್ಣರಾದಿಯಾಗಿ ಎಲ್ಲರೂ ಇದನ್ನೇ ಮಾಡಿದ್ದು.

ಗುರುಕುಲದಲ್ಲಿ ಅವರು ಗುರಿಯಿಡುವುದನ್ನಷ್ಟೇ ಕಲಿಯಲಿಲ್ಲ. ಆಯಾ ಅಸ್ತ್ರಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಗುರುವಿನಿಂದ ಪಡೆದು ನಿರಂತರವಾಗಿ ಜಪಿಸುತ್ತ ಅದನ್ನು ಸಿದ್ಧಿ ಮಾಡಿಕೊಂಡರು. ಅಜರ್ುನನಂತೂ ಈ ಅಸ್ತ್ರಗಳನ್ನು ಬೇಕಾದಾಗ ಬಳಸುವ ಸಾಮಥ್ರ್ಯ ಪಡೆದುಕೊಂಡ. ಯುದ್ಧದ ನಟ್ಟ ನಡುವೆ ಆ ಗೌಜು ಗದ್ದಲದಲ್ಲಿ ಅಜರ್ುನ ಏಕಾಗ್ರ ಚಿತ್ತನಾಗಿ ಗುರುವಿತ್ತ ಮಂತ್ರವನ್ನು ಜಪಿಸಿ ತನಗೆ ಬೇಕಾದ ಕಂಪನವುಳ್ಳ ಸದ್ದನ್ನು ಹುಟ್ಟಿಸಲು ಶಕ್ತವಾಗುತ್ತಿದ್ದ. ಆಗ ಮಳೆಯೂ ಸುರಿಯುತ್ತಿತ್ತು; ಬಿರುಗಾಳಿಯೂ ಬೀಸುತ್ತಿತ್ತು. ಈ ಕದನಕಾಲದಲ್ಲಿ ಮನಸ್ಸನ್ನು ಶೂನ್ಯ ಗೊಳಿಸಲಾಗದ ಕರ್ಣ ಮಂತ್ರದ ಮೇಲೆ ಏಕಾಗ್ರಗೊಳಿಸುವಲ್ಲಿ ಸೋತ.

ಬಿಡಿ. ಇದನ್ನೂ ಬರಿ ಕಥೆಯಾಗಿ ಓದಿದರೆ ಕಥೆಯಷ್ಟೇ. ಇದನ್ನು ಅಥರ್ೈಸಿಕೊಳ್ಳುವ ಪ್ರಯತ್ನ ಮಾಡಿದರೆ ಬಲು ಆಳಕ್ಕೆ ಹೊಕ್ಕಬಹುದು. ನಾನೀಗ ಬಲು ಅಚ್ಚರಿಯ ಸಂಗತಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಸಂಶೋಧಕರ ಅಭಿಪ್ರಾಯದಂತೆ ಏಳು ಹಟ್ಸರ್್ಗಳ ಆಸುಪಾಸಿನ ತರಂಗಗಳು ಮನಸ್ಸನ್ನು ಶಾಂತಗೊಳಿಸುತ್ತವಂತೆ. ಪಿರಮಿಡ್ಗಳಾದಿಯಾಗಿ ಅನೇಕ ಹಳೆಯ ಮಂದಿರಗಳಲ್ಲಿ ಈ ಕಂಪನಾಂಕದ ತರಂಗಗಳಿರುವುದನ್ನು ಅವರು ಗುರುತಿಸಿದ್ದಾರೆ. ಬಹುಶಃ ಹೀಗಾಗಿಯೇ ಅತ್ಯಂತ ಪ್ರಾಚೀನ ಮಂದಿರಗಳ ಗರ್ಭಗುಡಿಯ ಬಳಿ ಬರುತ್ತಿದ್ದಂತೆ ಮನಸ್ಸು ಶಾಂತಲೋಕವನ್ನು ಪ್ರವೇಶಿಸಿದಂತಾಗೋದು. ಅಪರೂಪದ, ಎಂದೂ ಸುಳಿಯದ ಆಲೋಚನೆಗಳು ಮೆದುಳಿನಿಂದ ಹೊರಹೊಮ್ಮೋದು. ಅಷ್ಟೇ ಏಕೆ? ನಿರಂತರವಾಗಿ ಮನೆಯಲ್ಲಿ ಮಂತ್ರೋಚ್ಚಾರಣೆ ಜಪ-ತಪಗಳು ನಡೆಯುತ್ತಿದ್ದರೆ ಅಲ್ಲಿಯೂ ಅಪರೂಪದ ಶಾಂತಿಯ ಅನುಭವವಾಗುತ್ತದೆ. ಆಗೆಲ್ಲಾ ನಾವು ಪಕ್ಕಾ ಇಂಗ್ಲೀಷರಂತೆ ‘ಇಲ್ಲಿ ಏನೋ ವೈಬ್ರೇಷನ್ಸ್ ಇದೆಯಲ್ಲ’ ಅಂದುಬಿಡ್ತೇವೆ. ವೈಬ್ರೇಷನ್ಸ್ ಅನ್ನು ಕಂಪನಗಳು ಅಂತ ಅನುವಾದಿಸುವುದಾದರೆ ಅಕ್ಷರಶಃ ಅವು ಸೂಕ್ಷ್ಮ ಕಂಪನಗಳೇ. ನೀವು ಆಂತರ್ಯದಲ್ಲಿ ಜಪಿಸಿದ ಮಂತ್ರದಿಂದ, ಮನಸ್ಸನ್ನು ಏಕಗೊಳಿಸಿ ಮಾಡಿದ ಧ್ಯಾನದಿಂದ ಉಂಟಾದ ಕಂಪನಗಳು!

ಇದು ಅನುಭವಕ್ಕೆ ಮಾತ್ರ ದಕ್ಕುವಂಥದ್ದು. ಯಾವಾಗಲಾದರೊಮ್ಮೆ ದಕ್ಷಿಣೇಶ್ವರದ ಶಾರದಾ ಮಾತೆಯವರ ನಹಬ್ಬತ್ ಖಾನೆಗೋ, ರಮಣರ ತಪೋಭೂಮಿ ತಿರುವಣ್ಣಾಮಲೈಗೋ ಅಥವಾ ಅರವಿಂದರ ಪಾಂಡಿಚೇರಿಯ ಆಶ್ರ್ರಮಕ್ಕೊ ಹೋಗಿಬನ್ನಿ. ಇವರೆಲ್ಲರ ಸುದೀರ್ಘ ತಪಸ್ಸಿನ ಫಲವಾಗಿ ಇಂದಿಗೂ ಅಲ್ಲೆಲ್ಲಾ ಹರಡಿಕೊಂಡಿರುವ ಕಂಪನಗಳನ್ನು ಅನುಭವಿಸಿ. ಹಾಂ! ನೀವು ಅನುಭವಿಸಿ ಅಷ್ಟೇ. ಅರೆಬೆಂದವರಿಗೆ ವಿವರಿಸ ಹೋದರೆ ಅವರು ಇವನ್ನೆಲ್ಲ ಸುಳ್ಳೆಂದು ಬಿಟ್ಟಾರು. ಬುದ್ಧಿಜೀವಿಗಳು ಎಲ್ಲೆಡೆ ಇದ್ದಾರೆ, ಹುಷಾರ್!

Comments are closed.