ವಿಭಾಗಗಳು

ಸುದ್ದಿಪತ್ರ


 

ರಾಜ್ಯವೇಕೆ? ರಾಜ್ಯ ಸರ್ಕಾರವನ್ನು ಬಂದ್ ಮಾಡಿ!

ಮಹಾದಾಯೀ ನೀರಿನ ಸಮಸ್ಯೆ ಬಲು ಜೋರಾಗಿದೆ. ಮತ್ತಿದು ನಿನ್ನೆ, ಮೊನ್ನಯದಲ್ಲ. ನ್ಯಾಯಾಲಯದ ಮೆಟ್ಟಿಲೇರಿ ಕುಳಿತಿರುವ ಅಹವಾಲು ಇದು. ನ್ಯಾಯಾಲಯ ತೀಪರ್ು ಕೊಟ್ಟರೆ ಕುಡಿವ ನೀರಿಗೆ ನಮಗೆ ಗೋವಾ ನಿರಾಕರಿಸುವಂತೆಯೇ ಇಲ್ಲ. ಆದರೆ ಆ ನೆಪ ಹೇಳುತ್ತ ನಾವು ಈ ನೀರನ್ನು ಕೃಷಿಗೂ ಬಳಸಿಬಿಡುತ್ತೇವೆಂದು ಗೋವಾ ನ್ಯಾಯಾಲಯವನ್ನು ಒಪ್ಪಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿ ಕುಳಿತಿದ್ದೇವೆ. ಅತ್ತ ಸಮರ್ಥವಾಗಿ ನ್ಯಾಯಾಲಯದಲ್ಲಿ ಬಡಿದಾಡುವುದೂ ಇಲ್ಲ, ಇತ್ತ ಗೋವಾದವರೊಂದಿಗೆ ದೋಸ್ತಿ ಬೆಳೆಸಿ ನಮಗೆ ಬೇಕಾದ್ದನ್ನು ಪಡೆಯುವುದೂ ಇಲ್ಲ.

ಅಂತೂ ಕನರ್ಾಟಕ ರಾಜ್ಯವನ್ನು ಒಂದಿಡೀ ದಿನ ಬಂದ್ ಮಾಡುವ ಪ್ರಹಸನವನ್ನು ಮಾಡಿದ್ದಾಯ್ತು. ಸ್ವತಃ ಮುಖ್ಯಮಂತ್ರಿಗಳೇ ಆದೇಶಿಸಿ ಸಕರ್ಾರೀ ಕಚೇರಿಗಳನ್ನೆಲ್ಲ ವ್ಯವಸ್ಥಿತವಾಗಿ ಮುಚ್ಚಿಸುವ ಪ್ರಯತ್ನ ಮಾಡಿದಾಗಲೂ ರಾಜ್ಯಾದ್ಯಂತ ಬಂದ್ಗೆ ವ್ಯಕ್ತವಾದ ಮಿಶ್ರ ಪ್ರತಿಕ್ರಿಯೆ ಆಳುತ್ತೇನೆಂದು ಭಾವಿಸಿರುವ ಸಕರ್ಾರಕ್ಕೆ ಸರಿಯಾದ ತಪರಾಕಿ. ಇದು ಬರಲಿರುವ ಕರಾಳ ದಿನಗಳ ಮುನ್ಸೂಚನೆಯೇ ಸರಿ. ಬಹುಶಃ ಜಗತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆಳುವ ಪಕ್ಷದ ಮುಖ್ಯಸ್ಥರು ತಾವೇ ಕುಮ್ಮಕ್ಕು ಕೊಟ್ಟು ಬಂದ್ ಮಾಡಿಸಿರುವ ಉದಾಹರಣೆ ಇದೇ ಮೊದಲಿರಬೇಕು. ಮಹಾದಾಯೀ ನೀರು ಬರದಿರಲು ಕಾರಣರ್ಯಾರೆಂಬುದು ಅಲ್ಲಿನ ಪ್ರತಿಯೊಬ್ಬ ರೈತನಿಗೂ ಗೊತ್ತಿದೆ. ಯಡ್ಯೂರಪ್ಪ ಪರಿವರ್ತನಾ ರ್ಯಾಲಿಯಲ್ಲಿ ಶುಭಸುದ್ದಿ ನೀಡುವ ಮಾತಾಡಿದೊಡನೆ ತಡಬಡಾಯಿಸಿದ ಸಿದ್ದರಾಮಯ್ಯನವರು ಗೋವಾದ ಕಾಂಗ್ರೆಸ್ಸಿಗರನ್ನು ಎತ್ತಿ ಕಟ್ಟಿ ಯಾವ ಶುಭ ಸುದ್ದಿಯೂ ಬರದಂತೆ ತಡೆದದ್ದೂ ಗೊತ್ತಿದೆ. ಜನ ಸಿದ್ದರಾಮಯ್ಯನವರು ರಾಜಕೀಯ ಶುರು ಮಾಡಿದಾಗಿನ ಕಾಲದಷ್ಟು ದಡ್ಡರಲ್ಲ; ಎಚ್ಚೆತ್ತುಕೊಂಡಿದ್ದಾರೆ. ಪ್ರತೀ ಘಟನೆಯನ್ನೂ ಅಳೆದು ಸುರಿದು ತಮ್ಮ ಲಾಭವನ್ನು ಖಾತ್ರಿ ಪಡಿಸಿಕೊಂಡು ಎದುರಿಗಿರುವವರಿಗೆ ಪಾಠ ಕಲಿಸುತ್ತಾರೆ. ಈ ಅರೆಬರೆಯಾಗಿ ಬೆಂಬಲ ಪಡೆದ ಬಂದ್ ಇದಕ್ಕೆ ಸಾಕ್ಷಿ. ನನ್ನ ಅಂದಾಜಿನ ಪ್ರಕಾರ ಮುಂದಿನ ದಿನಗಳ ರಾಜಕೀಯ ಭವಿಷ್ಯದ ದಿಕ್ಸೂಚಿ ಈ ಬಂದ್!!

featured
BENGALURU, JAN 25 (UNI):- Pro Bandh activists burning an effigy during Karnataka Bandh on Mahadayi river water issue,in Bengaluru on Thrusday.UNI PHOTO-108U

ಹೌದು. ಮಹಾದಾಯೀ ನೀರಿನ ಸಮಸ್ಯೆ ಬಲು ಜೋರಾಗಿದೆ. ಮತ್ತಿದು ನಿನ್ನೆ, ಮೊನ್ನಯದಲ್ಲ. ನ್ಯಾಯಾಲಯದ ಮೆಟ್ಟಿಲೇರಿ ಕುಳಿತಿರುವ ಅಹವಾಲು ಇದು. ನ್ಯಾಯಾಲಯ ತೀಪರ್ು ಕೊಟ್ಟರೆ ಕುಡಿವ ನೀರಿಗೆ ನಮಗೆ ಗೋವಾ ನಿರಾಕರಿಸುವಂತೆಯೇ ಇಲ್ಲ. ಆದರೆ ಆ ನೆಪ ಹೇಳುತ್ತ ನಾವು ಈ ನೀರನ್ನು ಕೃಷಿಗೂ ಬಳಸಿಬಿಡುತ್ತೇವೆಂದು ಗೋವಾ ನ್ಯಾಯಾಲಯವನ್ನು ಒಪ್ಪಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿ ಕುಳಿತಿದ್ದೇವೆ. ಅತ್ತ ಸಮರ್ಥವಾಗಿ ನ್ಯಾಯಾಲಯದಲ್ಲಿ ಬಡಿದಾಡುವುದೂ ಇಲ್ಲ, ಇತ್ತ ಗೋವಾದವರೊಂದಿಗೆ ದೋಸ್ತಿ ಬೆಳೆಸಿ ನಮಗೆ ಬೇಕಾದ್ದನ್ನು ಪಡೆಯುವುದೂ ಇಲ್ಲ. ಮುಖ್ಯಮಂತ್ರಿಯಾದವರು ಒಂದು ಪಕ್ಷದವರಲ್ಲ ಆತ ನಾಡಿಗೆ ಮುಖ್ಯಮಂತ್ರಿ. ರಾಜ್ಯದ ಒಳಿತಿಗಾಗಿ ಶೀಷರ್ಾಸನ ಹಾಕಲಿಕ್ಕೂ ಸಿದ್ಧರಾಗಿರಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿ ಯಾರಿದ್ದಾಗಲೂ ತಾವು ರಾಜ್ಯಕ್ಕೆ ಬೇಕಾದ ಒಳಿತನ್ನು ಸೆಳೆದು ತರಲು ಮುಲಾಜು ನೋಡಬಾರದು. ಆದರೆ ನಮ್ಮ ದುದರ್ೈವ. ಪ್ರಧಾನ ಮಂತ್ರಿಗಳು ನೀತಿ ಆಯೋಗದ ಸಭೆ ಕರೆದರೆ ಹೋಗೆನೆಂದು ಹಠ ಹಿಡಿದು ಕೂರುವಂತಹವರು ನಮಗೆ ಮುಖ್ಯಮಂತ್ರಿ. ಬಿಹಾರದ ನಿತೀಶರು, ಪಂಜಾಬಿನ ಅಮರಿಂದರ್ ಸಿಂಗರು ಮೋದಿಯವರೊಂದಿಗೆ ಬೆಳೆಸಿಕೊಂಡಿರುವ ಬಾಂಧವ್ಯವನ್ನು ಗಮನಿಸಿದರೆ ಕನರ್ಾಟಕ ಅದೆಷ್ಟು ಹಿಂದುಳಿದಿದೆಯೆಂದು ಎಂಥವನಿಗೂ ಅರಿವಾದೀತು. ಇಷ್ಟಕ್ಕೂ ಅಮರಿಂದರ್ ಸಿಂಗ್ರು ಕಾಂಗ್ರೆಸ್ಸಿನ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಹೈಕಮಾಂಡಿನವರು ಅದೆಲ್ಲಿ ತನ್ನನ್ನು ಸರಿಸಿ ಪರಮೇಶ್ವರರನ್ನೋ, ಖಗರ್ೆಯವರನ್ನೋ ಗಾದಿಗೆ ಕೂರಿಸಿಬಿಡುವರೆಂದು ಹೆದರುವ ಮುಖ್ಯಮಂತ್ರಿಗಳು ಪಕ್ಷಾಧ್ಯಕ್ಷರನ್ನು ಮೆಚ್ಚಿಸುವ ಎಲ್ಲ ಕಾರ್ಯಗಳಿಗಾಗಿ ರಾಜ್ಯದ ವಿಕಾಸವನ್ನೂ ಬಲಿಕೊಡಲು ಸಿದ್ಧರಾಗಿಬಿಟ್ಟಿದ್ದಾರೆ. ಬಹುಶಃ ಸದಾ ಸಿದ್ಧ ಸಕರ್ಾರ ಎಂಬ ಅವರ ಜಾಹೀರಾತಿನ ಹೇಳಿಕೆಯ ಅರ್ಥ ಇದೇ ಇರಬೇಕು. ಪ್ರಧಾನಿಯೊಂದಿಗೆ ಬೇಡ ಬಿಡಿ. ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಾದರೂ ಅವರಿಗೆ ಒಳ್ಳೆಯ ಬಾಂಧವ್ಯ ಇದೆಯಾ? ಬಹುಶಃ ಕೇರಳದ ಪಿಣರಾಯೀಯನ್ನು ಕಂಡರೆ ಅವರಿಗೆ ಅಪಾರವಾದ ಒಲವಿರಬೇಕು. ರಾಜಕೀಯ ಹತ್ಯೆಗಳಲ್ಲಿ ಇಬ್ಬರದೂ ಸಮಾನ ಮನಸ್ಥಿತಿಯಲ್ಲವೇ! ತನ್ನ ರಾಜ್ಯದ ಬೆಳವಣಿಗೆಯಲ್ಲಿ ಅಕ್ಕಪಕ್ಕದ ರಾಜ್ಯಗಳ ಸಹಯೋಗ ಬೇಡವೇ? ಆ ರಾಜ್ಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರೀತಿಯಿಂದ ವ್ಯವಹಾರ ಮಾಡುವುದು ಬೇಡವೇ? ಅದೂ ಸರಿಯೇ. ನಮ್ಮ ಮುಖ್ಯಮಂತ್ರಿಗಳಿಗೆ ಕನ್ನಡಿಗರೊಂದಿಗೆ ಪ್ರೀತಿಯಿಂದ ವ್ಯವಹಾರ ಮಾಡುವಂಥ ಸಜ್ಜನಿಕೆಯ ಭಾವವಿಲ್ಲ, ಇನ್ನು ಪಕ್ಕದ ರಾಜ್ಯಗಳೊಂದಿಗೆ ದೂರದ ಮಾತು. ನಮ್ಮೊಂದಿಗೆ ಇತಿಹಾಸದ ಕಾಲದಿಂದಲೂ ಸಮರಸತೆಯಿಂದ ಬೆರೆಯದ ರಾಜ್ಯ ತಮಿಳುನಾಡೊಂದೇ. ಅದನ್ನುಳಿದು ಕೇರಳ, ಆಂಧ್ರ, ಮಹಾರಾಷ್ಟ್ರ, ಗೋವಾಗಳೊಂದಿಗೆ ನಾವು ಚೆನ್ನಾಗಿಯೇ ಇದ್ದೆವು. ಯಡಿಯೂರಪ್ಪನವರು ತಮಿಳುನಾಡಿನೊಂದಿಗೂ ಸತ್ಸಂಬಂಧ ಹೊಂದಲೆಂದು ತಿರುವಳ್ಳುವರ್ ಪ್ರತಿಮೆಯನ್ನು ಇಲ್ಲಿ ಮತ್ತು ಸವಜ್ರ್ಞನ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸುವ ಪ್ರಯತ್ನ ಮಾಡಿದ್ದು ಮರೆಯಲಾದೀತೇನು? ಅದರಿಂದ ಬಾಂಧವ್ಯ ಸುಧಾರಿಸಿಬಿಟ್ಟಿತಾ ಹೇಳಲಾರೆ ಆದರೆ ಆ ದಿಕ್ಕಿನ ಪ್ರಯತ್ನವಾದರೂ ಆಗಿತ್ತೆಂಬುದು ಸತ್ಯ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈಗಿನ ಮುಖ್ಯಮಂತ್ರಿಗಳು ಈ ದಿಕ್ಕಿನಲ್ಲಿ ಒಂದಾದರೂ ಪ್ರಯತ್ನ ಮಾಡಿದ್ದ ಉದಾಹರಣೆ ಇದ್ದರೆ ಹೇಳಿ, ನನಗಂತೂ ನೆನಪಾಗುತ್ತಿಲ್ಲ. ಸಿದ್ದರಾಮಯ್ಯನವರ ಕಾಲಕ್ಕೆ ಈ ನಾಡಿನ ಬಾಂಧವ್ಯ ಮಹಾರಾಷ್ಟ್ರದೊಂದಿಗೆ ಹಳಸಿತು, ತಮಿಳುನಾಡಿನೊಂದಿಗೆ ಕೆಟ್ಟುಹೋಯಿತು ಮತ್ತು ಗೋವಾದೊಂದಿಗೆ ಸುಧಾರಿಸಲಾಗದ ಹಂತಕ್ಕೆ ತಲುಪಿತು. ಪಾಕೀಸ್ತಾನದೊಂದಿಗೆ ಚೆನ್ನಾಗಿರುವ ಬಾಂಧವ್ಯ ಹೊಂದಬೇಕೆಂದು ತಾಕೀತು ಮಾಡುವ, ಅವರೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಳ್ಳುವ ಕಾಂಗ್ರೆಸ್ಸಿನ ರಾಷ್ಟ್ರ ನಾಯಕರಿಗೆ ಈ ಸಂಗತಿ ಗೋಚರಿಸದಿರುವುದು ಅತ್ಯಾಶ್ಚರ್ಯ. ಸಂಬಂಧಗಳು ಚೆನ್ನಾಗಿದ್ದರೆ ಅನೇಕ ಬಾರಿ ನ್ಯಾಯಾಲಯಕ್ಕೆ ಹೋಗಬೇಕಾದ ಅಗತ್ಯವೇ ಇಲ್ಲ. ಇಬ್ಬರೂ ಮುಖ್ಯಮಂತ್ರಿಗಳು ಊಟದ ಟೇಬಲ್ಲಿನಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಬಾಂಗ್ಲಾದೊಂದಿಗಿನ ಸಮಸ್ಯೆಯನ್ನು ಒಂದೇ ಭೇಟಿಯಲ್ಲಿ ಪರಿಹರಿಸಿಕೊಂಡ ಮೋದಿಯವರದ್ದು ಇದೇ ಮಾದರಿ. ಅದನ್ನು ರಾಹುಲನಿಗೆ ಅಪ್ಪುಗೆಯ ರಾಜತಾಂತ್ರಿಕತೆ ಎಂದಷ್ಟೇ ಆಡಿಕೊಳ್ಳಲು ಗೊತ್ತು; ಅದೇ ಮಾದರಿಯನ್ನು ಸೆಲ್ಫೀ ತೆಗೆದುಕೊಳ್ಳುವವರೊಂದಿಗಲ್ಲ ಬದಲಿಗೆ ಅಕ್ಕಪಕ್ಕದ ಮುಖ್ಯಮಂತ್ರಿಗಳೊಂದಿಗೆ ಆಚರಿಸಿ ಎಂದು ನಮಮ್ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದರೆ ರಾಜ್ಯ ಉದ್ಧಾರವಾಗಿರುತ್ತಿತ್ತು.

3

ಹೇಗೆ ಅಂತ ವಿವರಿಸುತ್ತೇನೆ. ಗೋವಾದ ಬಾಯ್ಣಾದಲ್ಲಿ ಅನಧಿಕೃತ ಮನೆಗಳನ್ನು ಕೆಡವಿದರಲ್ಲ ಅವತ್ತು ನಮಗೆಲ್ಲರಿಗೂ ಬೇಸರವಾಗಿತ್ತು. ಮತ್ತಿದು ಇವತ್ತಿನ ಕಥೆಯಲ್ಲ. ಈ ಹಿಂದೆಯೂ ಹಿಂಗೇ ಆಗಿತ್ತು. ಅಲ್ಲಿ ನಡೆಯುವ ಅನಧಿಕೃತ ಚಟುವಟಿಕೆಗಳನ್ನು ನಿಯಂತ್ರಿಸಲು ನ್ಯಾಯಾಲಯದ ಆದೇಶ ಪಡೆದೇ ಈ ಕಾರ್ಯಕ್ಕೆ ಕೈಹಾಕಲಾಗಿತ್ತು. ಕನ್ನಡವೆಂಬ ಭಾವನೆಗೆ ಧಕ್ಕೆ ಬಂದಿರುವುದು ನಿಜವಾದರೂ ಅಲ್ಲಿನ ಗೋವೆಯನ್ನರು ಅದನ್ನು ಕನ್ನಡದವರಿಗೆ ಹೀಗೆ ಮಾಡಬೇಕೆಂಬ ಕಾರಣಕ್ಕಾಗಿ ಮಾಡಿರಲಿಲ್ಲ. ಇಷ್ಟಕ್ಕೂ ಉರುಳಿದ ಮನೆಗಳಲ್ಲಿ ಕನ್ನಡಿಗರದ್ದಷ್ಟೇ ಅಲ್ಲ, ಆಂಧ್ರ, ಒರಿಸ್ಸಾದ ಜನರದ್ದೂ ಇತ್ತು. ಅವರ್ಯಾರೂ ನಮ್ಮಂತೆ ಬೀದಿಪಾಲಾದವರೊಂದಿಗೆ ನಿಲ್ಲಲಿಲ್ಲ. ಈ ಹೊತ್ತಲ್ಲಿ ಮುಖ್ಯಮಂತ್ರಿಗಳಾದವರು ಮಾಡಬೇಕಿದ್ದ ಕೆಲಸವೇನು ಗೊತ್ತೇ? ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ವಿವರ ಪಡೆದು ನಿರಾಶ್ರಿತರಿಗೆ ಸಹಾಯ ಮಾಡುವಲ್ಲಿ ಒತ್ತಾಯ ಮಾಡಬೇಕಿತ್ತು ಅಗತ್ಯಬಿದ್ದರೆ ಒತ್ತಡವನ್ನೂ ಹೇರಬೇಕಿತ್ತು. ಆದರೆ ಇವರೇನು ಮಾಡಿದರು ಗೊತ್ತೇ? ವೀರಾವೇಶದ ಮಾತುಗಳನ್ನಾಡಿ, ಎಚ್ಚರಿಕೆ ಕೊಟ್ಟರು; ಹಾಗು ಕೂಗಾಡಲಿಕ್ಕೆಂದೇ ಒಂದಷ್ಟು ಸಂಘಟನೆಗಳಿವೆ ಎಂಬುದನ್ನೂ ಮರೆತು ಪಾಠ ಕಲಿಸುವ ಮಾತನಾಡಿದರು. ಹಾಗೆ ಸುಮ್ಮನೆ ಯೋಚಿಸಿ. ಇಲ್ಲಿನ ಮಾವರ್ಾಡಿಗಳ ಮೇಲೆ ನಾವು ಆಗಾಗ ಕೂಗಾಡುತ್ತೇವಲ್ಲ ಆಗೇನಾದರೂ ರಾಜಸ್ಥಾನದ ಮುಖ್ಯಮಂತ್ರಿ ನಮಗೆ ಎಚ್ಚರಿಕೆ ಕೊಡಲು ಬಂದರೆ ನಾವೇನು ಮಾಡಬಹುದು! ಗೋವೆಯನ್ನರಿಗಾದದ್ದೂ ಅದೇ. ಗೋವಾದ ಕಾಲು ಭಾಗದ ಜನಸಂಖ್ಯೆ ಕನ್ನಡಿಗರದ್ದೇ. ಅಲ್ಲಿನ ಎಲ್ಲ ಪ್ರಮುಖಹುದ್ದೆಗಳಲ್ಲೂ ನಮ್ಮವರೇ ಇದ್ದಾರೆ. ಇವೆಲ್ಲವನ್ನೂ ಕಂಡು ಆಕ್ರೋಶಗೊಂಡಿರುವ ಅಲ್ಲಿನ ಪ್ರಜೆಗೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ಕೋಪ ತರಿಸದಿರುತ್ತೇನು? ಪುಣ್ಯಾತ್ಮ ಸಿದ್ದರಾಮಯ್ಯ ಇಲ್ಲಿಗೇ ನಿಲ್ಲಿಸಲಿಲ್ಲ. ಮನೆ ಕಳಕೊಂಡವರಿಗೆಲ್ಲ ಗೋವಾದಲ್ಲಿಯೇ ನಿವೇಶನ ಕೊಡಿಸಿ ಮನೆ ಕಟ್ಟಿಕೊಡುವುದಾಗಿ ಭರವಸೆ ಕೊಟ್ಟುಬಿಟ್ಟರು. ಅಲ್ಲಿಗೆ ಇವರ ಮಾತುಗಳೆಲ್ಲ ಬೊಗಳೆಯೆಂದು ಸಾಬೀತಾಗಿಹೋಯ್ತು. ಮತ್ತೊಂದು ರಾಜ್ಯದಲ್ಲಿ ನಿವೇಶನ ಕೊಂಡುಕೊಳ್ಳಲು, ಮನೆ ಕಟ್ಟಿಕೊಡಲು ಯಾವ ರಾಜ್ಯದಲ್ಲೂ ಬಜೆಟ್ ಮೀಸಲಿಡುವಂತಿಲ್ಲ ಎಂಬ ಸಾಮಾನ್ಯ ಜ್ಞಾನ ಆಥರ್ಿಕ ತಜ್ಞ ಸಿದ್ದರಾಮಯ್ಯನವರಿಗಿಲ್ಲದೇಹೋದುದು ದುದರ್ೈವ. ತಾವು ನಾಲ್ಕಾರು ಮತಗಳಿಸಲೆಂದು ಗೋವಾದ ನಿರಾಶ್ರಿತರ ಬದುಕನ್ನೇ ಅಂಧಕಾರಕ್ಕೆ ದೂಡಿದ ಸಾಧನೆ ಅವರದ್ದು.

ದಕ್ಷಿಣ ಗೋವೆಯ ಸಂಸದ ನಾರಾಯಣ್ ಸವಾಯ್ಕರ್ ಅವರೊಂದಿಗೆ ಮಾತನಾಡುತ್ತ ಕುಳಿತಾಗ ನಾವು ಮಾಡಿದ ಒಂದೊಂದೇ ತಪ್ಪಿನ ಅರಿವಾಗಿ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿತ್ತು ನಮಗೆಲ್ಲ. ಸಿದ್ದರಾಮಯ್ಯನವರ ಇದೇ ಉದ್ಧಟತನದ ಕಾರಣದಿಂದಾಗಿ ಇಂದು ಮಹಾದಾಯೀಯೂ ಕಗ್ಗಂಟಾಯ್ತು. ಮನೋಹರ್ ಪರಿಕ್ಕರ್ ಯಡ್ಯೂರಪ್ಪನವರ ಮಾತಿಗೆ ನೀರು ಬಿಟ್ಟುಬಿಟ್ಟರೆ ವೋಟ್ ಬ್ಯಾಂಕ್ ಅದೇ ನೀರಿನಲ್ಲಿ ಕೊಚ್ಚಿಹೋಗುತ್ತದೆಯೆಂಬ ಹೆದರಿಕೆಯಿಂದ ಅವರು ಕಾಂಗ್ರೆಸ್ಸಿಗರನ್ನು ಎತ್ತಿಕಟ್ಟಿ ಆ ಕೆಲಸವಾಗದಂತೆ ನೋಡಿಕೊಂಡರಲ್ಲ. ಅದೂ ಸಾಲದೆಂಬಂತೆ ರೈತರ ಚಿಂತೆ ಬಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲೆಂದೇ ಅಮಿತ್ ಶಾಹ್ ಬರುವ ದಿನ ಅವರಿಗೆ ಬಂದ್ ಬಿಸಿ ಅನುಭವವಾಗಲೆಂದು ಪ್ರಯತ್ನ ಪಟ್ಟರಲ್ಲ! ಇಷ್ಟಕ್ಕೂ ಒಂದು ದಿನದ ಬಂದ್ನ ನಷ್ಟವೆಷ್ಟು ಗೊತ್ತೇ? ಬೆಂಗಳೂರೊಂದರಲ್ಲೇ ಬಸ್ಸು ಸಂಚರಿಸದೇ ನಾಲ್ಕು ಕೋಟಿ ನಷ್ಟವಾಗಿದೆ. ಏಫ್ಕೆಸಿಸಿಐನ ಪ್ರಕಾರ ಬೆಂಗಳೂರಿನಲ್ಲಿ ಮುಚ್ಚಿದ ಕಾಖರ್ಾನೆಗಳ ಕಾರಣದಿಂದಾಗಿ ಎರಡು ಸಾವಿರ ಕೋಟಿ ನಷ್ಟವಾಗಿದೆ. ಜಿಡಿಪಿಯ ಲೆಕ್ಕಾಚಾರದಲ್ಲಿ ಹೇಳುವುದಾದರೆ ಒಂದು ದಿನದ ಬಂದ್ನಿಂದಾಗಿ ಒಟ್ಟಾರೆ ಉತ್ಪನ್ನಕ್ಕೆ ನೂರು ಕೋಟಿ ಖೋತಾ ಆಗಲಿದೆ. ಇಡಿಯ ರಾಜ್ಯದ ಅಳತೆಗೋಲು ಹಿಡಿದರೆ ಡೆಕ್ಕನ್ ಕ್ರೊನಿಕಲ್ ವರದಿಯ ಪ್ರಕಾರ ರಾಜ್ಯಸಕರ್ಾರ ಪ್ರಾಯೋಜಿತ ಬಂದ್ನಿಂದಾಗಿ ಒಟ್ಟಾರೆ 24ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಎಲ್ಲಕ್ಕೂ ಹೆಚ್ಚಾಗಿ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಲ್ಪಟ್ಟು ಭವಿಷ್ಯದ ಪೀಳಿಗೆಯನ್ನು ಮಾನಸಿಕವಾಗಿ ಕದಡುವ ಪ್ರಯತ್ನವಾಗಿದ್ದರೆ; ಅತ್ತ ಐಟಿ-ಬಿಟಿ ಕಂಪನಿಗಳನ್ನು ಒತ್ತಾಯದಿಂದ ಬಾಗಿಲು ಮುಚ್ಚಿಸಿ ಬೆಂಗಳೂರಿನತ್ತ ಮುಖ ಮಾಡಿರುವ ಹೂಡಿಕೆದಾರರ ಮನಸ್ಸನ್ನೂ ಕದಡಿಬಿಟ್ಟಿದ್ದೇವೆ. ತಾನು ಮುಖ್ಯಮಂತ್ರಿಯಾಗಿರುವ ರಾಜ್ಯದ ಅಭಿವೃದ್ಧಿಯನ್ನು ತಾನೇ ಹಾಳುಗೆಡಹುವ ಪ್ರಯತ್ನ ಮಾಡುವ ಮತ್ತೊಬ್ಬ ಮುಖ್ಯಮಂತ್ರಿ ನಾನಂತೂ ಕಂಡಿರಲಿಲ್ಲ.

ಅಂದಹಾಗೆ ಫೆಬ್ರವರಿ ನಾಲ್ಕಕ್ಕೆ ಬೆಂಗಳೂರಿಗೆ ಮೋದಿ ಬರಲಿದ್ದಾರೆ. ಅವತ್ತು ಮತ್ತೊಮ್ಮೆ ಬಂದ್ ಇದೆಯಂತೆ!!

Comments are closed.