ವಿಭಾಗಗಳು

ಸುದ್ದಿಪತ್ರ


 

ವರ್ಣ ಜಾತಿಯಾಯ್ತು, ಜಾತಿ ದ್ವೀಪವಾಯ್ತು..

ಸಕರ್ಾರದ ಸವಲತ್ತುಗಳನ್ನು ಅನುಭವಿಸುವ, ಇತರರನ್ನು ಆಳುವ ನಿಯಮಗಳನ್ನು ರೂಪಿಸುವ ಹೊಣೆ ಹೊತ್ತ ಜನಾಂಗ ಸಹಜವಾಗಿಯೇ ಕಾಲಕ್ರಮದಲ್ಲಿ ತನ್ನಿಚ್ಛೆಗೆ ತಕ್ಕಂತಹ ನಿಯಮಗಳನ್ನು ರೂಪಿಸುತ್ತದೆ. ಅದರಲ್ಲೂ ಯೋಗ್ಯತೆ-ಅಧ್ಯಯನಗಳಿಲ್ಲದ ಮಗ, ಅಪ್ಪನ ಜಾಗಕ್ಕೆ ಬಂದು ರಾಜನಿಗೆ ಸಲಹೆಗಾರನಾಗಿ ತನ್ನಿಚ್ಛೆಗೆ ತಕ್ಕಂತೆ ಸಕರ್ಾರವನ್ನೇ ಕುಣಿಸುವುದು ನಡೆಯಲಾರಂಭಿಸಿದರೆ ನಾಡಿನ ಹಿತ, ರಕ್ಷಣೆ ಎಲ್ಲವೂ ಮಣ್ಣುಗೂಡಿಬಿಡುತ್ತದೆ. ಆಗಲೇ ಜಾತಿಗಳ ನಡುವೆ, ಭಾಷೆಗಳ ನಡುವೆ ಸಂಘರ್ಷ ಶುರುವಾಗೋದು. ಜತನದಿಂದ ಕಟ್ಟಿದ ಸೌಧ ಕುಸಿದು ಬೀಳುವುದು. ವರ್ಣಪದ್ಧತಿ ಹೀಗೆಯೇ ಆಯಿತೆನ್ನುತ್ತಾರೆ ಅಂಬೇಡ್ಕರ್.

ಬಹಳ ಹಿಂದೆ ಸ್ವದೇಶೀ ಆಂದೋಲನದ ನೇಕಾರ ರಾಜೀವ ದೀಕ್ಷಿತರು ಒಂದು ಕ್ರಿಯಾಯೋಗ್ಯ ಸಿದ್ಧಾಂತದ ಕುರಿತಂತೆ ಮಾತನಾಡಿದ್ದು ಚೆನ್ನಾಗಿ ನೆನಪಿದೆ. ಸಕರ್ಾರಿ ಉದ್ಯೋಗವನ್ನು ಒಬ್ಬ ವ್ಯಕ್ತಿಗೆ ಮೂರೇ ವರ್ಷಗಳಿಗೆ ನಿಗದಿ ಮಾಡಬೇಕು. ಆನಂತರ ಆತನ ಸಾಧನೆಯನ್ನು ಅವಲೋಕಿಸಿ ಅವಧಿಯನ್ನು ವಿಸ್ತರಿಸಬೇಕು ಇಲ್ಲವೇ ಅವನಿಂದ ಉದ್ಯೋಗವನ್ನು ಕಸಿದು ಬೇರೆಯವರಿಗೆ, ಸಮರ್ಥರಿಗೆ ಕೊಡಬೇಕು ಅಂತ. ಅಂದಿನ ದಿನಗಳಲ್ಲಿ ಈ ವಿಚಾರ ನಮಗೆ ಬಲು ಕ್ರಾಂತಿಕಾರಿ ಎನಿಸುತ್ತಿತ್ತು. ಏಕೆಂದರೆ ಇಂದು ಸಕರ್ಾರಿ ನೌಕರಿಗೆ ಒಮ್ಮೆ ಹೊಕ್ಕರೆ ಅವನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ, ಅವಶ್ಯಕತೆಗಳೂ ಹೆಚ್ಚುತ್ತ ಹೋಗುತ್ತೆ. ಸುಮ್ಮನೆ ಯಾವಾಗಲಾದರೊಮ್ಮೆ ನಮ್ಮ ವಿಶ್ವವಿದ್ಯಾಲಯಗಳಿಗೆ ಭೇಟಿಕೊಟ್ಟು ನೋಡಿ. ದಿನಕ್ಕೆ ಒಂದೆರಡು ಗಂಟೆ ಪಾಠ ಮಾಡಿ ತಿಂಗಳ ಕೊನೆಯಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವವರಿದ್ದಾರೆ. ಆದರೆ ಪ್ರಾಮಾಣಿಕವಾಗಿ ಅವರನ್ನು ಪರೀಕ್ಷೆಗೆ ಒಳ ಪಡಿಸಿದರೆ ಇವರಲ್ಲಿ 90 ಪ್ರತಿಶತ ಜನರನ್ನು ಮೂರು ವರ್ಷಗಳ ನಂತರ ಕೆಲಸದಲ್ಲಿ ಮುಂದುವರಿಸುವುದು ಅಸಾಧ್ಯವೇ ಸರಿ. ಆದರೆ ನಾವವರಿಗೆ ಜೀವನ ಪರ್ಯಂತ ಸಕರ್ಾರಿ ಉದ್ಯೋಗಿಯಾಗುವ ಅವಕಾಶ ಕಲ್ಪಿಸಿಕೊಟ್ಟು ಸಕಲ ಸವಲತ್ತುಗಳನ್ನು ನೀಡಿದ್ದೇವೆ.
ಒಂದು ಕ್ಷಣ ಆಲೋಚಿಸಿ. ಸಕರ್ಾರದ ನಿಯಮಗಳನ್ನು ಸ್ವಲ್ಪ ಸಡಿಲಿಸಿ ಒಮ್ಮೆ ಸಕರ್ಾರಿ ಹುದ್ದೆ ಗಿಟ್ಟಿಸಿದವನ ಮಕ್ಕಳಿಗೂ ಸಕರ್ಾರಿ ನೌಕರಿ ಖಾತ್ರಿಯೆಂಬ ನಿಯಮ ಬಂದುಬಿಟ್ಟರೆ? ಆಗ ಈ ನಿಯಮದ ವ್ಯಾಪ್ತಿಗೆ ಒಳಪಡುವವರೆಲ್ಲ ಆನಂದದಿಂದ ಕುಣಿದಾಡುತ್ತಾರೆ, ಅನ್ನಭಾಗ್ಯ ಪರಂಪರೆಗೇ ಖಾತ್ರಿಯಾಗಿ ತೃಪ್ತಿ ಹೊಂದುತ್ತಾರೆ. ಸಮಾಜದ ದೃಷ್ಟಿಯಲ್ಲಿ ಶೋಷಕರಾಗುತ್ತಾರೆ. ಹಾಗೆಯೇ ಈ ವ್ಯಾಪ್ತಿಯಿಂದ ಹೊರಗಿರುವವರು ಜೀವನ ಪರ್ಯಂತ ನರಳುತ್ತಾರೆ ಮತ್ತು ಶೋಷಿತರಾಗಿ ಕಾಲಕ್ರಮದಲ್ಲಿ ತುಳಿತಕ್ಕೊಳಗಾದ ಜನಾಂಗವಾಗಿಬಿಡುತ್ತಾರೆ.

1

ಅಲ್ಲದೇ ಮತ್ತೇನು? ಸಕರ್ಾರದ ಸವಲತ್ತುಗಳನ್ನು ಅನುಭವಿಸುವ, ಇತರರನ್ನು ಆಳುವ ನಿಯಮಗಳನ್ನು ರೂಪಿಸುವ ಹೊಣೆ ಹೊತ್ತ ಜನಾಂಗ ಸಹಜವಾಗಿಯೇ ಕಾಲಕ್ರಮದಲ್ಲಿ ತನ್ನಿಚ್ಛೆಗೆ ತಕ್ಕಂತಹ ನಿಯಮಗಳನ್ನು ರೂಪಿಸುತ್ತದೆ. ಅದರಲ್ಲೂ ಯೋಗ್ಯತೆ-ಅಧ್ಯಯನಗಳಿಲ್ಲದ ಮಗ, ಅಪ್ಪನ ಜಾಗಕ್ಕೆ ಬಂದು ರಾಜನಿಗೆ ಸಲಹೆಗಾರನಾಗಿ ತನ್ನಿಚ್ಛೆಗೆ ತಕ್ಕಂತೆ ಸಕರ್ಾರವನ್ನೇ ಕುಣಿಸುವುದು ನಡೆಯಲಾರಂಭಿಸಿದರೆ ನಾಡಿನ ಹಿತ, ರಕ್ಷಣೆ ಎಲ್ಲವೂ ಮಣ್ಣುಗೂಡಿಬಿಡುತ್ತದೆ. ಆಗಲೇ ಜಾತಿಗಳ ನಡುವೆ, ಭಾಷೆಗಳ ನಡುವೆ ಸಂಘರ್ಷ ಶುರುವಾಗೋದು. ಜತನದಿಂದ ಕಟ್ಟಿದ ಸೌಧ ಕುಸಿದು ಬೀಳುವುದು. ವರ್ಣಪದ್ಧತಿ ಹೀಗೆಯೇ ಆಯಿತೆನ್ನುತ್ತಾರೆ ಅಂಬೇಡ್ಕರ್. ಆರಂಭದಲ್ಲಿ ಸೀಮಿತ ಅವಧಿಯವರೆಗೆ ನಿರ್ಣಯಗೊಳ್ಳುತ್ತಿದ್ದ ವರ್ಣ ಕ್ರಮೇಣ ಜೀವಿತಾವಧಿಗೆ ವಿಸ್ತಾರಗೊಂಡಿತು. ಅಶೋಕನ ನಂತರವಂತೂ ಅದು ಮಕ್ಕಳಿಗೂ ಹಬ್ಬಿ ವರ್ಣವೇ ಬಲಾಢ್ಯವಾದ ಜಾತಿ ವ್ಯವಸ್ಥೆಯಾಗಿ ಮಾಪರ್ಾಡಾಯಿತು. ಅವರ ಸಮಗ್ರ ಬರಹ ಮತ್ತು ಭಾಷಣಗಳ ಸಂಪುಟ 3 ರಲ್ಲಿ ‘ಬುದ್ಧ ಪೂರ್ವ ದಿನಗಳ ಚಾತುರ್ವರ್ಣ, ಬದಲಾವಣೆಗೆ ಬಗ್ಗಬಲ್ಲ ಮುಕ್ತ ವ್ಯವಸ್ಥೆಯಾಗಿತ್ತು. ಏಕೆಂದರೆ ಆಗ ವರ್ಣವ್ಯವಸ್ಥೆಗೂ ವಿವಾಹ ವ್ಯವಸ್ಥೆಗೂ ಯಾವ ಸಂಬಂಧವೂ ಇರಲಿಲ್ಲ. ಚಾತುರ್ವರ್ಣ ವ್ಯವಸ್ಥೆಯು ಈ ನಾಲ್ಕು ವರ್ಣಗಳ ಪ್ರತ್ಯೇಕ ಅಸ್ತಿತ್ವವನ್ನು ಗುರುತಿಸಿದರೂ ಅದು ವರ್ಣಗಳ ಅಂತವರ್ಿವಾಹವನ್ನು ನಿಷೇಧಿಸಿರಲಿಲ್ಲ’ ಎನ್ನುತ್ತ ಅದಕ್ಕೆ ಪೂರಕವಾದ ಅನೇಕ ನಿದರ್ಶನಗಳನ್ನು ಮುಂದಿಡುತ್ತಾರೆ. ಕ್ಷತ್ರಿಯ ಶಂತನು-ಶೂದ್ರ ಗಂಗೆ; ಬ್ರಾಹ್ಮಣ ಪರಾಶರ-ಬೆಸ್ತ ಮತ್ಸ್ಯಗಂಧಿ, ಕ್ಷತ್ರಿಯ ಯಯಾತಿ-ಬ್ರಾಹ್ಮಣ ದೇವಯಾನಿ ಇವರೆಲ್ಲರ ವಿವಾಹ ಸಂಬಂಧಗಳು ವರ್ಣ ಸಂಕರಗಳೇ. ಹೀಗೆ ಮುಕ್ತವಾಗಿ ವರ್ಣಗಳ ಪದ್ಧತಿಯೊಂದಿಗೆ ಬದುಕಿದ್ದ ಭಾರತೀಯ ಸಮಾಜ ತಮ್ಮ-ತಮ್ಮ ನಡುವೆ ಕೆಡವಲಾಗದ ಗೋಡೆಯನ್ನು ಪುಷ್ಯಮಿತ್ರನ ಕಾಲದಲ್ಲಿ ಕಟ್ಟಿಕೊಳ್ಳಲು ಕಾರಣವೇನು? ಅದನ್ನು ಅರಿಯಬೇಕಾದರೆ ಅಶೋಕನ ಕಾಲಘಟ್ಟವನ್ನು ಕೂಲಂಕುಷವಾಗಿ ಅಧ್ಯಯನ ನಡೆಸಲೇಬೇಕು.

2

ಬುದ್ಧ ಒಂದು ಹೊಸ ಅಲೆಯನ್ನೇ ಭಾರತದಲ್ಲಿ ಸೃಷ್ಟಿಸಿದ್ದ. ಬಹುಶಃ ಆತನ ಬರುವಿಗೂ ಮುನ್ನವೇ ಬ್ರಾಹ್ಮಣ ವರ್ಣ ಶಿಥಿಲವಾಗಿದ್ದಿರಬೇಕು. ಪರಮಾತ್ಮ ಸಾಕ್ಷಾತ್ಕಾರ, ತಪಸ್ಸು ಇವುಗಳೆಲ್ಲ ಸಾಕಷ್ಟು ಕಳೆಗುಂದಿಯೂ ಇದ್ದಿರಬಹುದು. ಹಾಗಂತ ಪರಿವ್ರಾಜಕರ ಕೊರತೆ ಇರಲಿಲ್ಲ. ಬುದ್ಧನಾಗುವ ಮುನ್ನ ರಾಜಕುವರ ಸಿದ್ಧಾರ್ಥ ರೋಗಿಯನ್ನು, ವೃದ್ಧನನ್ನೂ, ಸಾವನ್ನು ಕಂಡು ಗಾಬರಿಗೊಳಗಾಗುತ್ತಾನಲ್ಲಾ ಆನಂತರವೇ ಆತ ದಾರಿಯಲ್ಲಿ ಶಿರೋ ಮಂಡನ ಮಾಡಿಸಿಕೊಂಡು, ಕಾಷಾಯ ವಸ್ತ್ರ ಧರಿಸಿ ಶಾಂತಚಿತ್ತದಲ್ಲಿ ಕುಳಿತಿದ್ದ ಸನ್ಯಾಸಿಯನ್ನು ದಶರ್ಿಸೋದು. ತನ್ನ ಸಾರಥಿಯನ್ನು ಪ್ರಶ್ನಿಸಿದಾಗ ಆತ ಅವನನ್ನು ಪಬಜ್ಜಿತನೆಂದು ಪರಿಚಯಿಸುತ್ತಾನೆ. ಪಬಜ್ಜಿತನೆಂದರೆ ಗೃಹತ್ಯಾಗಮಾಡಿ ಧರ್ಮವನ್ನೇ ಆಚರಿಸುವವನು. ಕುಶಲವಾದುದನ್ನು ಪುಣ್ಯವಾದುದನ್ನೇ ಮಾಡುವವನು. ಅಹಿಂಸೆಯನ್ನೂ ಆಚರಿಸುತ್ತಾ ಭೂತಾನುಕಂಪಿಯಾಗಿರುವವನು. ಈ ವ್ಯಾಖ್ಯೆಗಳಿಂದ ಪ್ರಭಾವಿತನಾದ ಬುದ್ಧ ತಕ್ಷಣಕ್ಕೆ ನಿಶ್ಚಯಿಸಿ ಸಾರಥಿಗೆ ಹೇಳಿದ ‘ನಾನು ಪಬಜ್ಜಿತನಾಗುತ್ತೇನೆ’.
ಹೌದು. ಶಿಥಿಲತೆಯ ನಡುವೆಯೂ ಬ್ರಾಹ್ಮಣವರ್ಣ ತ್ಯಾಗಕ್ಕೆ ಸಿದ್ಧವಾಗಿತ್ತು. ಧರ್ಮ ಕಾರ್ಯಕ್ಕೆ ಸಮಾಜವನ್ನು ಪ್ರೇರೇಪಿಸುತ್ತಿತ್ತು. ಸ್ವತಃ ಸಿದ್ಧಾರ್ಥ ಪ್ರಭಾವಿತನಾಗಿ ಪರಿವ್ರಾಜಕನಾಗಿ ಆನಂದವನ್ನು ಅರಸುತ್ತ ಹೊರಟ. ಋಷಿ-ಮುನಿಗಳ ದರ್ಶನ ಮಾಡಿದ. ಮಹಷರ್ಿಯೋರ್ವರ ಆಶ್ರಮಕ್ಕೆ ಬಂದು ಕಠಿಣ ಸಾಧನೆಯಲ್ಲಿ ನಿರತರಾಗಿರುವವರನ್ನು ಕಂಡ. ಅವರ ಗುರಿ ಸ್ವರ್ಗ ಸಾಧನೆ ಎಂದರಿತು ಸಮಾಧಾನವಿಲ್ಲದವನಾಗಿ ಮುಂದುವರಿದ. ಬುದ್ಧನಿಗೆ ಸಕಲ ಪ್ರಾಣಿಗಳ ಸಂಕುಲಕ್ಕೆ ಸಮಾಧಾನ ಬೇಕಿತ್ತು, ಸ್ವರ್ಗವಲ್ಲ. ಅಲಾರಕಾಲಮನ ಆಶ್ರಮಕ್ಕೆ ಹೋದ. ಅಲ್ಲಿ ಒಂದಷ್ಟು ದಿನ ಸಾಧನೆಯಲ್ಲಿ ನಿರತನಾಗಿ ಜ್ಞಾನ ಮಾರ್ಗದಲ್ಲಿ ನಡೆದ. ಬೋಧನೆ ಮಾತ್ರದಿಂದ ಪರಮತತ್ತ್ವದ ಪ್ರಾಪ್ತಿಯಾಗಲಾರದೆಂದು ಅರಿತ ಆತ ಅಲ್ಲಿಂದಲೂ ಮುಂದೆ ನಡೆದ. ತಾನೇ ಒಂದೆಡೆ ನೆಲೆನಿಂತು ಕಠಿಣವಾಗಿ ದೇಹದಂಡನೆ ಮಾಡುತ್ತ ಅನ್ನ-ಆಹಾರ, ನೀರು-ಗಾಳಿಯನ್ನೂ ತಡೆದು ದೇಹವನ್ನು ಮೂಳೆ ಚಕ್ಕಳವಾಗಿಸಿದ. ಕೊನೆಗೊಮ್ಮೆ ಮಧ್ಯಮ ಮಾರ್ಗದಲ್ಲಿ ನಡೆದು ಬುದ್ಧತ್ವವನ್ನು ತನ್ನದಾಗಿಸಿಕೊಂಡ. ಈ ಹೊತ್ತಿನಲ್ಲಿಯೇ ಅವನನ್ನು ಭೇಟಿ ಮಾಡಿದ ಹುಹುಂಕಾರನೆಂಬ ಬ್ರಾಹ್ಮಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬುದ್ಧ ‘ಯಾವನು ದುಷ್ಕೃತ್ಯಗಳಿಂದ ಮುಕ್ತನಾಗಿ ನಿರಹಂಕಾರಿಯಾಗಿದ್ದು, ಕಶ್ಮಲಗಳನ್ನು ಕಿತ್ತು ಹಾಕಿರುತ್ತಾನೋ; ಉತ್ಸಾಹಿಯಾಗಿದ್ದು ಜ್ಞಾನಮಾರ್ಗದಲ್ಲಿ ಪವಿತ್ರ ಜೀವನ ಸಾಗಿಸುತ್ತಾನೋ; ಲೋಕವಿಷಯಗಳಿಗೆ ಅಂಟಿಕೊಳ್ಳದೇ ಪವಿತ್ರ ತತ್ತ್ವಗಳನ್ನು ನುಡಿಯುತ್ತಾನೋ ಅಂಥವನು ಬ್ರಾಹ್ಮಣ’ ಎಂದ.
ಅನುಮಾನವೇ ಇಲ್ಲ. ಬುದ್ಧ ಇಲ್ಲಿ ವಣರ್ಿಸುತ್ತಿರುವ ಗುಣ ವಿಶೇಷಣಗಳೆಲ್ಲ ಬ್ರಾಹ್ಮಣ ವರ್ಣಕ್ಕೆ ಸಂಬಂಧಿಸಿದವೇ ಹೊರತು ಜಾತಿಗಲ್ಲ! ಆದರೆ ಇವೆಲ್ಲ ಗುಣವಿಶೇಷಣಗಳು ಬುದ್ಧನಿಗಿದ್ದರೂ ಆತನನ್ನು ಬ್ರಾಹ್ಮಣನೆಂದು ಒಪ್ಪಿಕೊಳ್ಳಲು ಅಂದಿನ ಸಮಾಜ ತಯಾರಾಗಿರಲಿಕ್ಕಿಲ್ಲ. ಬುದ್ಧನಿಗೆ ಬ್ರಾಹ್ಮಣತ್ವ ದಯಪಾಲಿಸುವ ಗುರುವಿನ ಸಮ್ಮುಖದಲ್ಲಿ ಅಧ್ಯಯನವಾಗಿರಲಿಲ್ಲ. ಈ ಪ್ರಶ್ನೆ ಬುದ್ಧನನ್ನು ಕಾಡಿರುವುದು ಅವನ ಜೀವನದಲ್ಲಿ ನೋಡಬಹುದು.

3

ಬುದ್ಧತ್ವ ಪಡೆದು ನಿರಂಜನ ನದಿ ತೀರದ ವೃಕ್ಷದಡಿಯಲ್ಲಿ ಏಕಾಂಗಿಯಾಗಿ ಧ್ಯಾನಮಗ್ನನಾದ ಬುದ್ಧ ಯಾರೊಬ್ಬ ಪೂಜ್ಯರಿಗೂ ಭಯ-ಭಕ್ತಿ ತೋರದೇ ಏಕಾಕಿಯಾಗಿರುವುದು ಸರಿಯಿಲ್ಲವೆಂದು ಆಲೋಚಿಸಿ ತನಗೆ ತಾನೇ ಹೇಳಿಕೊಂಡ. ‘ದೇವನಾಗಲಿ, ಬ್ರಹ್ಮನಾಗಲಿ, ಮಾದನಾಗಲಿ, ಸಮಣ-ಬ್ರಾಹ್ಮಣರೇ ಆಗಲಿ, ಮಾನವರಾಗಲಿ ಶೀಲದಲ್ಲಿ ನನಗಿಂತಲೂ ಮಿಗಿಲಾದವರಲ್ಲ. ಸತ್ಯ ಹೀಗಿದ್ದಾಗ ಯಾರ ಸಂಗದಲ್ಲಿದ್ದು ನಾನು ಮನ್ನಣೆ ಗೌರವ ತೋರಲಿ’ ಹೀಗೆಂದುಕೊಳ್ಳುವಾಗಲೇ ‘ತನ್ನಿಂದಲೇ ಕಂಡುಕೊಂಡ ಈ ಪವಿತ್ರ ಧಮ್ಮಕ್ಕೆ ನಾನು ಮನ್ನಣೆ, ಗೌರವ ತೋರುತ್ತ ಅದರ ಆಶ್ರಯದಲ್ಲಿದ್ದರೆ ಯೋಗ್ಯವಲ್ಲವೇ?’ ಎಂದಿತು ಅವನ ಮನಸ್ಸು. ಆಗಲೇ ಬ್ರಹ್ಮಸಹಂಪತಿಯು ದರ್ಶನ ನೀಡಿ ‘ಧಮ್ಮವನ್ನು ವ್ಯಾಖ್ಯಾನಿಸು, ಧಮ್ಮವನ್ನು ಉಪದೇಶಿಸು. ಇಲ್ಲಿ ಕೆಲವರಿಗೆ ಕಣ್ಣಿನ ಮೇಲೆ ತುಸು ಧೂಳು ಕೂತಿದೆ. ಅವರು ಧಮ್ಮವನ್ನು ಕೇಳದಿದ್ದರೆ ನಾಶವಾಗುತ್ತಾರೆ’ ಎಂದಿದ್ದು.
ಈಗ ಬುದ್ಧ ಧಮ್ಮೋಪದೇಶಕ್ಕೆ ಸಿದ್ಧನಾದ. ತನ್ನೊಂದಿಗೆ ತಪಶ್ಚಯರ್ೆಯ ಕಾಲದಲ್ಲಿದ್ದ ಐವರಿಗೆ ಧಮ್ಮ ಬೋಧಿಸಿದ. ಮುಂದೆ ಕಾಶಿಯ ಧನಿಕನ ಮಗ ಯಸ ಬುದ್ಧನ ಪ್ರಭಾವಕ್ಕೆ ಒಳಗಾಗಿ ಸಿರಿವಂತಿಕೆಯನ್ನು ತೊರೆದು ಭಿಕ್ಷುವಾದ. ಮುವ್ವತ್ತು ತರುಣರು ಗಣಿಕೆಯೋರ್ವಳನ್ನು ಅರಸುತ್ತ ಬುದ್ಧನ ಬಳಿಗೆ ಬಂದು ‘ಸ್ವಾಮಿ ನೀವು ಹೆಂಗಸನ್ನು ನೋಡಿದ್ದೀರಾ?’ ಎಂದರು. ಬುದ್ಧ ಮರುಪ್ರಶ್ನಿಸಿದ ‘ಹೆಂಗಸನ್ನು ಹುಡುಕುವುದು ಸರಿಯೋ? ನಿಮ್ಮನ್ನೇ ನೀವು ಅರಸುವುದೋ?’ ತರುಣರು ತಬ್ಬಿಬ್ಬಾದರು. ತಮ್ಮನ್ನು ತಾವು ಅರಸುವ ಅಂತಮರ್ುಖಿ ಹುಡುಕಾಟಕ್ಕೆ ಅವರೀಗ ಸಿದ್ಧವಾಗಿದ್ದರು. ಬುದ್ಧನ ಅನುಯಾಯಿಗಳಾಗಿ ಭಿಕ್ಷುಗಳಾದರು. ಇನ್ನು ಯಜ್ಞ-ಯಾಗಾದಿಗಳನ್ನು ಮಾಡಿಕೊಂಡು ಜನರ ಗೌರವ ಸಂಪಾದಿಸಿಕೊಂಡು ನೆಮ್ಮದಿಯಿಂದ ಜಟಿಲ ಕಶ್ಯಪರು ಬುದ್ಧನ ಪ್ರಭಾವಕ್ಕೆ ಒಳಗಾಗಿ ಅವನ ಅನುಯಾಯಿಗಳಾದ ಮೇಲೆ ಜನ ಸಾಮಾನ್ಯರಿಗೆ ಅನುಮಾನವುಳಿಯಲಿಲ್ಲ. ಬಿಂಬಸಾರ ಬುದ್ಧನ ಸಂಘಕ್ಕೆ ಶರಣು ಹೋದ ಮೇಲಂತೂ ಭಾರತ ಹೊಸ ದಿಕ್ಕಿನತ್ತ ವಾಲುವ ಲಕ್ಷಣಗಳು ಗೋಚರಿಸಲಾರಂಭಿಸಿದವು. ಬುದ್ಧ ಜೊತೆಗೆ ಬಂದವರನ್ನೆಲ್ಲಾ ಭಿಕ್ಷುಗಳನ್ನಾಗಿ ಪರಿವತರ್ಿಸಿದ. ಅಲ್ಲಿಯವರೆಗೂ ಸಂನ್ಯಾಸ ಆಶ್ರಮಗಳಲ್ಲಿ ಕೊನೆಯದಾಗಿತ್ತು. ಬ್ರಹ್ಮಚರ್ಯದಲ್ಲಿದ್ದು, ಗೃಹಸ್ಥನಾಗಿ, ಆನಂತರ ವಾನಪ್ರಸ್ಥಿಯಾಗಿ ಕೊನೆಗೆ ಸನ್ಯಾಸತ್ವ ಸ್ವೀಕಾರ ಮಾಡಿ ಧರ್ಮ ಮಾರ್ಗದಲ್ಲಿ ನಡೆಯುವ ಜನರಿಗೆ ಪ್ರೇರಣೆ ಕೊಡುವುದು. ಅಲ್ಲಲ್ಲಿ, ಆಗೀಗ ಅದಕ್ಕೆ ಅಪವಾದಗಳು ಇದ್ದವಾದರೂ ಸಾಮಾನ್ಯವಾಗಿ ಮೋಕ್ಷಮಾರ್ಗ ಹೀಗೆಯೇ ಇತ್ತು. ಬುದ್ಧ ಈ ಮಾರ್ಗವನ್ನು ಭಿನ್ನಗೊಳಿಸಿದ. ಅನೇಕ ಶತಮಾನಗಳಿಂದ ಕಟ್ಟಿಕೊಂಡು ಬಂದಿದ್ದ ಹಂದರ ಈಗ ಪುಡಿ-ಪುಡಿಯಾಗಲಾರಂಭಿಸಿತ್ತು. ಆಚಾರಗಳ ಶಿಥಿಲತೆಯಿಂದ ದೂರವಿದ್ದು, ಅತ್ಯಂತ ಸರಳವಾಗಿ ಕಂಡ ಬುದ್ಧನ ಚಿಂತನೆಗಳು ಬ್ರಾಹ್ಮಣ ತರುಣ ವರ್ಗವನ್ನು ಸೆಳೆಯಿತು. ಬಹುಶಃ ಅದು ಆಗಿನ ಕಾಲದ ಮಹಾವಲಸೆ.
ಚಾಣಕ್ಯ ನಂದರನ್ನು ಮಟ್ಟಹಾಕಲೆಂದು ಪಣ ತೊಡುವಲ್ಲಿ ಈ ಕಾರಣವೂ ಬಲವಾದುದೇ. ಈ ಮಹಾಮತಾಂತರ ತಡೆಗಟ್ಟಲೆಂದೇ ಆತ ಚಂದ್ರಗುಪ್ತ ಮೌರ್ಯನನ್ನು ಆಯ್ದುಕೊಂಡು ಅವನಿಗೆ ಪಟ್ಟಾಧಿಕಾರ ಕೊಡಿಸುವ ನಿಶ್ಚಯಮಾಡಿದ್ದು. ಕೆ.ಎಸ್. ನಾರಾಯಣಾಚಾರ್ಯರು ತಮ್ಮ ಕೃತಿ ಆಚಾರ್ಯ ಚಾಣಕ್ಯದಲ್ಲಿ ‘ಚಾಣಕ್ಯನುದಿಸಿದ ಕಾಲ ನಮ್ಮ ದೇಶಕ್ಕೆ ಸಂಸ್ಕೃತಿಗೆ ಮಹಾಭಯಂಕರ ಕಾಲವಾಗಿತ್ತು. ಸನಾತನ ಧರ್ಮಕ್ಕೆ ಗ್ರಹಣ ಹಿಡಿದು ಅದರ ಮೌಲ್ಯಗಳು ಅಪಹಾಸ್ಯಕ್ಕೀಡಾಗಿದ್ದವು. ಶೀಲ, ಸಂಯಮ, ದೇವರು, ಪುಣ್ಯ-ಪಾಪ, ಪರಲೋಕಗಳನ್ನು ಹೀಗಳೆಯುವ ಧರ್ಮಗಳು ತಲೆಯೆತ್ತಿ ಜನರಿಗೆ ಬದುಕಲು ಗುರಿ ತಿಳಿಯದೇ ಗೊಂದಲವಾಗಿತ್ತು. ಬುದ್ಧ, ಮಹಾವೀರರು ಕ್ಷತ್ರಿಯರಾಗಿ ಜನಿಸಿಯೂ ಕ್ಷತ್ರ ವರ್ಣವನ್ನು ತ್ಯಜಿಸಿ ಸಂನ್ಯಾಸ ಧರ್ಮವೇ ಶ್ರೇಷ್ಠವೆಂದು ಬೋಧಿಸಿ ಇಡೀ ಮಗಧ ರಾಜ್ಯವೇ ‘ವಿಹಾರ’ವಾಗಿ(ಬಿಹಾರ) ಭಿಕ್ಷುಗಳ ತಾಣವಾಗಿ, ಬೀದಿಗೊಂದು ಬಸದಿ, ಮಠ, ಊರಿಗೊಬ್ಬ ಜಗದ್ಗುರು, ಓಣಿಗೆ ನೂರು ಭಿಕ್ಷುಕರು ಆಗಿಬಿಟ್ಟರು!’ ಎಂದು ಅಂದಿನ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಬುದ್ಧ ತೀರಿಕೊಂಡ ಶತಮಾನದ ನಂತರ ಜನಿಸಿದ ಚಾಣಕ್ಯ ಈ ಸಮಸ್ಯೆಯನ್ನು ಎದುರಿಸಿ ನಿಂತಿದ್ದೇ ಮಹಾಸಾಹಸ.
ಭಿಕ್ಷುಗಳಾಗಿ ಮನೆ-ಮಠವನ್ನು ಸಂಕಟಕ್ಕೆ ದೂಡುವ, ರಾಷ್ಟ್ರದ ಉತ್ಪಾದಕತೆಯನ್ನು ಕುಂಠಿತಗೊಳಿಸುವ ಈ ಪರಂಪರೆಯೊಂದಿಗೆ ಚಾಣಕ್ಯನಿಗೆ ಭೇದ ಖಂಡಿತ ಇತ್ತು. ಹೀಗಾಗಿಯೇ ‘ಹೆಂಡತಿ ಮಕ್ಕಳಿಗೆ ಜೀವನಾಧಾರವನ್ನೇರ್ಪಡಿಸದೇ ಸಂನ್ಯಾಸ ತೆಗೆದುಕೊಳ್ಳುವವನಿಗೆ; ಮತ್ತು ಸ್ತ್ರೀಯರನ್ನೂ ಸಂನ್ಯಾಸಿಗಳನ್ನಾಗಿ ಮಾಡುವವನಿಗೆ ಹಾಗೆ ಪ್ರೇರೇಪಿಸುವವನಿಗೆ 250 ಪಣ ದಂಡ ವಿಧಿಸಬೇಕು’ ಎಂಬ ನಿಯಮ ಚಾಣಕ್ಯ ಮಾಡಿದ್ದು! ಅಷ್ಟೇ ಅಲ್ಲ. ‘ರಾಣಿವಾಸದವರಿಗೆ ಬೌದ್ಧ ಸಂನ್ಯಾಸಿಗಳೊಡನೆ, ಮಾಯಾವಾದಿಗಳೊಡನೆ, ಮಾಯ ಮಾಟ ಮಾಡುವ ವಾಮಾಚಾರಿಗಳೊಡನೆ ಸಂಪರ್ಕವಿಲ್ಲದಂತೆ ರಾಜನು ಎಚ್ಚರಿಕೆ ವಹಿಸಬೇಕು’ ಎಂದು ಚಾಣಕ್ಯ ನಿಯಮ ಮಾಡಿದ ಹಿಂದೆಯೂ ಬಲವಾದ ಕಾರಣ ಇರಲೇಬೇಕಲ್ಲ. ಮುಂದೆ ಅಶೋಕ ತನ್ನ ಪತ್ನಿಯ ಕಾರಣದಿಂದಾಗಿ ಬೌದ್ಧ ಮತದತ್ತ ಆಕಷರ್ಿತನಾಗಿ ಎಲ್ಲರನ್ನೂ ಭಿಕ್ಷುಗಳನ್ನಾಗಿ ಮಾಡುತ್ತಾ ರಾಜ್ಯದ ಆದಾಯ ಕಡಿಮೆ, ಖಚರ್ು ಹೆಚ್ಚು ಮಾಡಿಕೊಂಡಿದ್ದನ್ನು ಓದಿಯೇ ಇದ್ದೇವೆ. ಚಾಣಕ್ಯನಿಗೆ ಹಾಗೊಂದು ದೂರದೃಷ್ಟಿ ಇದ್ದೇ ಇತ್ತು. ಬುದ್ಧನ ನಂತರ ಕಂಡುಬಂದ ಪತನವನ್ನು ಚಾಣಕ್ಯ ತಡೆಹಿಡಿದು ಮತ್ತೊಮ್ಮೆ ಭಾರತದ ರೈಲನ್ನು ಹಳಿಯ ಮೇಲಿಟ್ಟಿದ್ದ. ಅಶೋಕನ ಕಾಲಕ್ಕೆ ಮತ್ತದು ಹಳಿ ತಪ್ಪಿತು. ಆಗ ಉಂಟಾದ ಮಾಗದ ಗಾಯವನ್ನು ಸರಿಪಡಿಸಲು ಅತಿ ಕಠೋರ ನಿರ್ಣಯಗಳನ್ನು ಕೈಗೊಳ್ಳಬೇಕಾಯಿತು.
ಈ ವ್ಯವಸ್ಥಾ ಪರಿವರ್ತನೆಯಿಂದಾಗಿ ವರ್ಣಗಳು, ಜಾತಿಗಳಾದವು. ಒಂದೊಂದು ಜಾತಿಯೂ ದ್ವೀಪಗಳಾದವು. ಅದರಿಂದಲೂ ಲಾಭವೇ ಆಯಿತು. ಹಿಂದೂ ಧರ್ಮಕ್ಕೆ ವಿಶೇಷ ಗುಣವೊಂದು ಸಿದ್ಧಿಸಿತು. ಆಕ್ರಮಣಗಳಾದಾಗ ಆಮೆಯಂತೆ ಮುದುಡಿ ಚಿಪ್ಪಿನೊಳಗೆ ಸೇರಿಕೊಳ್ಳುವ ಮತ್ತೆ ಹೊರಬಂದು ಗಾಳಿಗೆ ಮೈಯ್ಯೊಡ್ಡುವ ಸ್ಥಿತಿ ಸ್ಥಾಪಕತ್ವ ಗುಣವೇ ಮುಂದೆ ಮುಸಲ್ಮಾನ ಆಕ್ರಮಣದ ವೇಳೆಗೆ ಹಿಂದೂ ಧರ್ಮವನ್ನು ರಕ್ಷಿಸಿತು. ಇಲ್ಲವಾದಲ್ಲಿ ಬೌದ್ಧ ಧರ್ಮ ನಾಲ್ಕೂ ದಿಕ್ಕಿಗೆ ದಿಕ್ಕಾಪಾಲಾದಂತೆ ಹಿಂದೂ ಧರ್ಮವೂ ಚದುರಿ ಹೋಗುವ ಭಯವಿತ್ತು. ಅಂಬೇಡ್ಕರರ ಈ ಕುರಿತಂತ ವಾದ ಬಲು ರೋಚಕವಾದುದು!

Comments are closed.