ವಿಭಾಗಗಳು

ಸುದ್ದಿಪತ್ರ


 

ವಿಜ್ಞಾನವೂ ವಾಲುತ್ತಿದೆ ಹಿಂದುತ್ವದೆಡೆಗೆ..

ಇಲ್ಲಿನ ಶಿಕ್ಷಣ ಪದ್ಧತಿಯನ್ನು ಸಂಪೂರ್ಣ ಉಧ್ವಸ್ತಗೊಳಿಸಿ ವಿಜ್ಞಾನದ ಹೆಸರಲ್ಲಿ ನಮ್ಮ ತಲೆಯೊಳಗೆ ಬೂಸಾ ಸುರಿದರು. ವೈಜ್ಞಾನಿಕವಾದುದು ಪಶ್ಚಿಮದ್ದು ಮಾತ್ರವೆಂದು ನಂಬಿಸಿದರು. ಸ್ವಾತಂತ್ರ್ಯ ಬಂದು ೬೬ ವರ್ಷ ಕಳೆದೇ ಹೋದರೂ ಈ ಭ್ರಮೆ ಮಾತ್ರ ಕಳಚಲಿಲ್ಲ. ಇಂದು ವಿಜ್ಞಾನ ತನ್ನ ಮಗ್ಗುಲನ್ನು ಬದಲಾಯಿಸಿಬಿಟ್ಟಿದೆ. ಭಾರತ ಪ್ರತಿಧ್ವನಿಸುತ್ತಿದ್ದ ಅಧ್ಯಾತ್ಮ ತತ್ತ್ವಗಳಿಗೆ ಜಗತ್ತು ತಲೆದೂಗಲಾರಂಭಿಸಿದೆ.

“Every Young Brahin… who learns geography in our collages, learns to smile at the Hindu mythologies” ಹೆಚ್ಚು ಕಡಿಮೆ ಎರಡು ಶತಮಾನಗಳ ಹಿಂದೆ ಮೆಕಾಲೆ ಹೇಳಿದ ಮಾತು ಇಂದಿಗೂ ಸುಳ್ಳಾಗಿಲ್ಲ. ವಿeನದ ಮೂಸೆಯಲ್ಲಿ ಅರೆಬೆಂದ ಪಂಡಿತರುಗಳೆಲ್ಲ ಧರ್ಮದ ಟೀಕೆ ಮಾಡುವುದನ್ನು ಕಂಡಾಗ ಮೆಕಾಲೆಯ ವೈರಸ್ಸು ತಲೆಯನ್ನು ಅದೆಷ್ಟು ಕೊರೆದುಬಿಟ್ಟಿದೆಯಲ್ಲ ಅನಿಸುತ್ತೆ.
ಚಾರ್ಲ್ಸ್ ಟ್ರೆವಿಲಿಯಾನ್ ಹೇಳ್ತಾನೆ, “ಹಿಂದು ಧರ್ಮವನ್ನು ನಾಶ ಮಾಡಲು Grammar ಮತ್ತು spelling ಪುಸ್ತಕ ಇದ್ದರೆ ಸಾಕು. ಅನಿಯಮಿತವಾದ, ಅಸಂಖ್ಯವಾದ, ಪುರಾವೆಯೇ ಇಲ್ಲದ ವಿಚಾರಗಳು ಅದೆಷ್ಟಿವೆಯೆಂದರೆ ನಮ್ಮ ಆಧುನಿಕ ವಿಜ್ಞಾನದೆದುರು ಮಂದವಾಗಿಬಿಡುತ್ತವೆ. ಜಗತ್ತು ಆಮೆಯ ಮೇಲೆ ನಿಲ್ಲುವುದಿಲ್ಲ ಅಥವಾ ಜಗತ್ತು ಹಾಲಿನ ಹೊಳೆಯಲ್ಲೋ, ಹೆಂಡದ ಅಲೆಯಲ್ಲೋ ತೇಲುವುದಿಲ್ಲವೆಂದು ತೋರಿಸಿದರೆ ಅವರ ಮತದ ಕಥೆ ಮುಗಿದಂತೆಯೇ”.
witchಹಾಗೆ ನೋಡಿದರೆ ಮಿಷನರಿಗಳು, ವಿಶ್ವದ ಕೇಂದ್ರ ಸೂರ್ಯ, ಭೂಮಿ ಅದನ್ನು ಸುತ್ತುತ್ತಿದೆಯೆಂಬ ವೈಜ್ಞಾನಿಕ ಸತ್ಯವನ್ನು ಒಪ್ಪಲು ಅನೇಕ ದಶಕಗಳನ್ನು ತೆಗೆದುಕೊಂಡವರು; ಹೆಂಗಸರು ಪಿಶಾಚಿಗಳು ಎಂದವರು ಅವರು. ಅದೇ ಜನ ಆಮೇಲಿನ ದಿನಗಳಲ್ಲಿ ಹಿಂದುವಿನ ಮೇಲೆರಗಿದರು. ಇಲ್ಲಿನ ವ್ಯವಸ್ಥೆಯ ಸಮೂಲ ನಾಶಕ್ಕೆ ಯತ್ನಿಸಿದರು. ಈಗಲೂ ಪ್ರಯತ್ನ ನಿಂತಿಲ್ಲ.
ಮೊನ್ನೆ ತಾನೇ ಪುಣೆಯಲ್ಲಿ ನರೇಂದ್ರ ದಾಭೋಲ್ಕರ್ ತೀರಿಕೊಂಡರಲ್ಲ ಆಗ ಮಾಧ್ಯಮಗಳವರು ಪುರೋಗಾಮಿಯೊಬ್ಬರ ಹತ್ಯೆ ಅಂದ್ರು, ಭಾರತದಲ್ಲಿ ವಿeನದ ಕಗ್ಗೊಲೆ ಅಂದ್ರು. ಮಹಾತ್ಮ ಗಾಂಧಿಯನ್ನೇ ಕೊಂದ ದೇಶವಿದು ಅಂತ ದಾಭೋಲ್ಕರ್‌ರನ್ನು ಮಹಾತ್ಮರ ಮಟ್ಟಕ್ಕೇರಿಸಿಬಿಟ್ಟರು! ಹೌದು. ಒಬ್ಬ ಸಾಮಾಜಿಕ ಕಾರ್ಯಕರ್ತನ ಕೊಲೆ ಸಮಾಜದ ಸ್ವಾಸ್ಥ್ಯಕ್ಕೆ ಖಂಡಿತ ಒಳ್ಳೆಯದಲ್ಲ. ಆದರೆ ತಮಿಳುನಾಡು-ಕೇರಳಗಳಲ್ಲಿ ಕೆಲವು ಕೊಲೆಗಳಾದವಲ್ಲ ಆಗೇಕೆ ಇವೆಲ್ಲ ನೆನಪಾಗಲಿಲ್ಲ? ಹೋಗಲಿ ದೇಶಾದ್ಯಂತ ಅನೇಕ ಆರ್‌ಟಿಐ ಕಾರ್ಯಕರ್ತರ ಹತ್ಯೆಗಳಾದವಲ್ಲ ಆಗೇಕೆ ಆಂಗ್ಲ ಮಾಧ್ಯಮಗಳು ಗುಂಪುಗೂಡಲಿಲ್ಲ. ಕನ್ನಡಿಗ ಮಂಜುನಾಥ್‌ರನ್ನು ಹೈವೇ ಮಾಫಿಯಾ ಕೊಂದು ಬಿಸಾಡಿದಾಗ ಅದೇಕೆ ಕಣ್ಣೀರು ಸುರಿಯಲಿಲ್ಲ? ಕಾರಣ ನಿಚ್ಚಳ. ದಾಭೋಲ್ಕರ್ ಮೂಢನಂಬಿಕೆಗಳ ವಿರುದ್ಧ ಹೋರಾಡುತ್ತ ಹಿಂದು ಧರ್ಮವನ್ನು ಮನಸೋಇಚ್ಛೆ ಟೀಕಿಸುತ್ತಿದ್ದರು. ಕೆಲವು ಕಾವಿಧಾರಿಗಳು ಮಾಡುವ ಇಂದ್ರಜಾಲವನ್ನು ಬಯಲಿಗೆಳೆಯುವ ನೆಪದಲ್ಲಿ ಇಡಿಯ ಸಂತ ಸಮಾಜವನ್ನು ನಿಂದಿಸುತ್ತಿದ್ದರು. ಇವರ ಸಾವನ್ನು ವೈಭವೀಕರಿಸುವ ಮೂಲಕ ಹಿಂದುಗಳನ್ನು ತಲೆತಗ್ಗಿಸುವಂತೆ ಮಾಡುವ ಮಿಷನರಿ ಯತ್ನವಿದು!
ಭಾರತವನ್ನು ಈಸ್ಟ್ ಇಂಡಿಯಾ ಕಂಪನಿ ಆಳುವ ಕಾಲದಲ್ಲಿಯೇ ಹಿಂದುಗಳನ್ನು ಕ್ರಿಸ್ತೀಕರಿಸುವ ಯೋಜನೆಗಳನ್ನು ತಯಾರಿಸಿದ್ದರು. ೧೮೧೩ರಲ್ಲಿಯೇ ನಮ್ಮ ಇಂದಿನ ಸಂಸತ್ತಿಗೆ ಸಮಾನವಾದ ಬ್ರಿಟಿಷ್ ಹೌಸ್ ಆ- ಕಾಮನ್ಸ್‌ನಲ್ಲಿ ವಿಲಿಯಂ ವಿಲ್ಬರ್ಸ್ ಮತ್ತು ಅವರ ಅನುಯಾಯಿಗಳು ಭಾರತದ ಕುರಿತಂತೆ, ಹಿಂದು ಧರ್ಮದ ಕುರಿತಂತೆ ಆಡಿರುವ ಮಾತುಗಳು ಕೆರಳಿಸುವಂಥವು. “ಭಾರತೀಯರು ಅನಾಗರಿಕರು, ನೈತಿಕ ಪ್ರಜ್ಞೆ ಇಲ್ಲದವರು, ಮೋಸಗಾರರು, ಕ್ರೂರಿಗಳು, ಹೇಡಿಗಳು ಮತ್ತು ಅವರಲ್ಲಿ ಸಾಕಷ್ಟು ಮೂಢನಂಬಿಕೆಗಳಿವೆ, ಧರ್ಮ ಪ್ರಜ್ಞೆಯೇ ಅವರಲಿಲ್ಲ” ಹೀಗೆಲ್ಲ ಹೇಳಲಾಗಿದೆ. ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುವ ಸುಳ್ಳು ಅಂದರೆ ಇದೇ. ಈ ವಿದ್ಯೆಯಲ್ಲಿ ಆಂಗ್ಲರು ಪರಿಣತಮತಿಗಳು. ಈಗ ಭಾರತದಲ್ಲಿ ಆ ಕೆಲಸವನ್ನು ಮುಂದುವರಿಸಲಿಕ್ಕೆಂದೇ ಆಂಗ್ಲ ಮಾಧ್ಯಮಗಳು ಸಮರ್ಥವಾಗಿ ದುಡಿಯುತ್ತಿವೆ.

1-ARYABHATTಬಿಡಿ. ಇಷ್ಟಕ್ಕೂ ಇವರು ಹೇಳುವ ಹಿಂದು ಧರ್ಮದ ಮೂಢನಂಬಿಕೆಗಳು ಯಾವುವು ಗೊತ್ತೇನು? ನಾವು ಹಾವಿಗೆ ಹಾಲೆರೆಯುತ್ತೇವೆ, ಅನೇಕ ದೇವರನ್ನು ಪೂಜಿಸುತ್ತೇವೆ, ಸಂತರ ಕಾಲಿಗೆ ಬೀಳುತ್ತೇವೆ, ಗೋವನ್ನು ತಾಯಿ ಅಂತೇವೆ. ಜಾತಕ ಬರೆಸುತ್ತೇವೆ, ಗ್ರಹಗತಿ ನಂಬುತ್ತೇವೆ. ಬರಿ ಇಂಥದ್ದೇ ಪಟ್ಟಿಗಳು. ಒಬ್ಬ ಹಿಂದು ಇವೆಲ್ಲವನ್ನು ಮಾಡುತ್ತಲೇ ಇದನ್ನು ಮೀರಬಲ್ಲ ಅನ್ನೋದು ಅವರಿಗೆ ಅರ್ಥವೇ ಆಗೋದಿಲ್ಲ. ಹೀಗಾಗಿ ಆಗಾಗ ಜ್ಯೋತಿಷಿಗಳ ಬಳಿಗೆ ಹೋಗಿ “ನನ್ನ ಜೇಬಿನಲ್ಲಿರುವ ನೋಟಿನಲ್ಲಿರುವ ನಂಬರನ್ನು ಹೇಳಿ ನೋಡೋಣ” ಅಂತೆಲ್ಲ ಪರಮ ಅವೈಜ್ಞಾನಿಕ ಪ್ರಶ್ನೆ ಕೇಳುತ್ತಾರೆ. ಇದೇ ಪರಮ ವಿಚಿತ್ರ. ಧರ್ಮಕ್ಕೂ ರಿಲಿಜನ್‌ಗೂ ವ್ಯತ್ಯಾಸ ಗೊತ್ತಿಲ್ಲದವರು, ವಿeನ ಮತ್ತು ಅಧ್ಯಾತ್ಮದ ನಡುವಣ ಸೂಕ್ಷ್ಮ ಎಳೆ ಗುರುತಿಸಲಾಗದವರೆಲ್ಲ ಪ್ರಶ್ನೆ ಕೇಳುತ್ತಾರೆ. ಒಂಥರಾ ಗಣಿತ ಸಿದ್ಧಾಂತಿಯನ್ನು ಆಗ ತಾನೇ ಲೆಕ್ಕ ಕಲಿತ ಹುಡುಗ ಪ್ರಶ್ನಿಸಿದಂತೆ. ಸೋಲುವುದರಿಂದ ಆ ಹುಡುಗನಿಗೇನೂ ನಷ್ಟವಿಲ್ಲ; ಗೆದ್ದರೆ ಸಿದ್ಧಾಂತಿಗೆ ಲಾಭವಾದರೂ ಏನು? ಹಾಗಂತ ಪಂಡಿತ ಉತ್ತರಿಸದೇ ಕಡೆಗಣಿಸಿದರೆ ಮಾತ್ರ ಜನರಿಗೆ ಆನಂದವೋ ಆನಂದ. ಇದೇ ಮಾರ್ಗವನ್ನು ಅನುಸರಿಸಿದ್ದು ಮಿಷನರಿಗಳು. ಇಲ್ಲಿನ ಶಿಕ್ಷಣ ಪದ್ಧತಿಯನ್ನು ಸಂಪೂರ್ಣ ಉಧ್ವಸ್ತಗೊಳಿಸಿ ವಿeನದ ಹೆಸರಲ್ಲಿ ನಮ್ಮ ತಲೆಯೊಳಗೆ ಬೂಸಾ ಸುರಿದರು. ವೈeನಿಕವಾದುದು ಪಶ್ಚಿಮದ್ದು ಮಾತ್ರವೆಂದು ನಂಬಿಸಿದರು. ಸ್ವಾತಂತ್ರ್ಯ ಬಂದು ೬೬ ವರ್ಷ ಕಳೆದೇ ಹೋದರೂ ಈ ಭ್ರಮೆ ಮಾತ್ರ ಕಳಚಲಿಲ್ಲ. ಇಂದು ವಿಜ್ಞಾನ ತನ್ನ ಮಗ್ಗುಲನ್ನು ಬದಲಾಯಿಸಿಬಿಟ್ಟಿದೆ. ದಲೈ ಲಾಮಾರ ಅವಿರತ ಪ್ರಯತ್ನದಿಂದಾಗಿ ಭಾರತ ಪ್ರತಿಧ್ವನಿಸುತ್ತಿದ್ದ ಅಧ್ಯಾತ್ಮ ತತ್ತ್ವಗಳಿಗೆ ಜಗತ್ತು ತಲೆದೂಗಲಾರಂಭಿಸಿದೆ.

ಬಹುಶಃ ೨೦ನೇ ಶತಮಾನದ ಕೊನೆಯ ದಶಕವಿರಬಹುದು. ದಲೈ ಲಾಮಾ ಒಂದಷ್ಟು ನರವಿಜ್ಞಾನಿಗಳೊಂದಿಗೆ ಮಾತನಾಡುತ್ತಾ ಮಿದುಳನ್ನು ನಮ್ಮ ಕ್ರಿಯೆಗಳಿಂದ ನಿಯಂತ್ರಿಸೋದು ಸಾಧ್ಯ ಎಂದುಬಿಟ್ಟರು. ಅಲ್ಲಿಯವರೆಗೆ ಮಿದುಳು ಎಲ್ಲವನ್ನೂ ನಿಯಂತ್ರಿಸುತ್ತದೆಯೆಂಬ ನಂಬಿಕೆಯಿತ್ತು. ದಲೈ ಲಾಮಾರನ್ನು ವಿಜ್ಞಾನಿಗಳು ವಿರೋಧಿಸಿದರು. ಆದರೆ ಧ್ಯಾನದಲ್ಲಿ ಸಿದ್ಧಹಸ್ತರಾದ ಕೆಲವು ಸಾಧುಗಳನ್ನು ಎದುರಿಗೆ ಕೂರಿಸಿ ಪ್ರಾತ್ಯಕ್ಷಿಕೆ ನೀಡಿದಾಗ ಅಚ್ಚರಿಗೊಳ್ಳುವ ಸರದಿ ವಿಜ್ಞಾನಿಗಳದಾಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಒಂದೇ ವಸ್ತುವನ್ನು ಧ್ಯಾನಿಸುವ ಹಾಗೂ ಚಿಟಿಕೆ ಹೊಡೆಯುವಷ್ಟರಲ್ಲಿ ೧೭ ಬಾರಿ ಬೇರೆಡೆಗೆ ಧ್ಯಾನ ಹರಿಸಿ ಮರಳಿ ಬರುವ ಸಾಧನೆಯ ಪ್ರಾತ್ಯಕ್ಷಿಕೆ ನೀಡಲಾಯ್ತು. ಇದುವರೆಗೂ ಇದನ್ನು ಅಸಾಧ್ಯವೆಂದೇ ಭಾವಿಸಲಾಗಿತ್ತು. ಅಲ್ಲಿಂದಾಚೆಗೆ ನರವಿeನಿಗಳ ಸಮಾವೇಶಕ್ಕೆ ಉದ್ಘಾಟನೆಗೆಂದು ದಲೈ ಲಾಮಾರನ್ನು ಅಮೆರಿಕಕ್ಕೆ ಆಹ್ವಾನಿಸಿದಾಗ ಅಲ್ಲೋಲಕಲ್ಲೋಲವಾಯ್ತು, “ಧರ್ಮಗುರುವೊಬ್ಬ ವಿಜ್ಞಾನ ಸಮಾವೇಶಕ್ಕಾ!?” ಮಿದುಳಿನ ಸಾಮರ್ಥ್ಯದ ಕುರಿತ ದಲೈ ಲಾಮಾರ ಅನುಭವದ ಮಾತುಗಳನ್ನು ಕೇಳಿದ ಮೇಲಿಯೇ “ವಿಜ್ಞಾನ ವಿಜ್ಞಾನಿಗಳ ಸ್ವತ್ತಲ್ಲ” ಎಂಬುದು ಅರಿವಾಗಿದ್ದು! ಅಲ್ಲಿಂದಾಚೆಗೆ ನರವಿeನ ಹೊಸ ಹಾದಿ ಹಿಡಿದು ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಆಯಾಮ ದೊರಕಿತು. ನಾವಾಡುವ ಒಂದು ಮಾತು ಮನಸ್ಸಿನ ಮೇಲೆ ಪ್ರಭಾವ ಬೀರಿ ಮಿದುಳಿನ ಮೂಲಕ ದೇಹವನ್ನು ನಿಯಂತ್ರಿಸಬಲ್ಲುದೆಂಬುದನ್ನು ವಿeನಿಗಳು ಅರಿತರು. ಔಷಧ ಎಷ್ಟು ಕೆಲಸ ಮಾಡುವುದೋ, ಔಷಧ ತೆಗೆದುಕೊಂಡಿದ್ದೇನೆಂದು ದೃಢವಾಗಿ ನಂಬುವುದೂ ಅಷ್ಟೇ ಕೆಲಸ ಮಾಡುತ್ತದೆಂದು ಪ್ರಯೋಗಗಳು ಸಾಬೀತುಪಡಿಸಿದವು. ಈ ಪ್ರಯೋಗ ಸರ್ಜರಿಗಳ ಮೇಲೂ ಯಶಸ್ವಿಯಾದ ಮೇಲೆ ಅನುಮಾನಕ್ಕೆ ಎಡೆಯೇ ಇರಲಿಲ್ಲ. ಅಮೆರಿಕ “ನಮಗೆ ವೈದ್ಯರು ಬೇಡ, ರೋಗಿಯ ಶ್ರದ್ಧೆಯನ್ನೇ ಬಳಸಿ ಗುಣಪಡಿಸುವವರು ಬೇಕು” ಎಂಬ ಹೊಸ ಕರೆ ಕೊಟ್ಟಿತು. ಇದನ್ನೇ ನಾವು ಕೈಗುಣ ಅಂತ ಕರೆದಿದ್ದು. ಶ್ರದ್ಧೆಯನ್ನೇ ಆಧಾರವಾಗಿಟ್ಟುಕೊಂಡ ಅನೇಕ ಸಾಧುಗಳು ಈ ಆಧಾರದ ಮೇಲೆಯೇ ಮಿದುಳನ್ನು ಕ್ರಿಯಾಶೀಲಗೊಳಿಸಿದ್ದು. ನಂಬಿ ನಡಕೊಂಡವರಿಗೆ ನೂರೆಂಟು ದಾರಿ ದಕ್ಕುತ್ತೆ ಅಂತೀವಲ್ಲ ಅದೂ ಹೀಗೆಯೇ. ಈ ನಮ್ಮ ದೃಢ ನಂಬಿಕೆಯೇ ಮಿಷನರಿಗಳಿಗೆ ಮುಳುವಾಯ್ತು. ಅವರ ಎಲ್ಲ ಯೋಜನೆಗಳನ್ನು ಒಬ್ಬ ಗಟ್ಟಿ ಮನಸ್ಸಿನ ಸಂತ ತಲೆಕೆಳಗು ಮಾಡುತ್ತಿದ್ದ. ಅದಕ್ಕೆ ಅಂಥವರನ್ನು ಮೂಢರು ಎನ್ನಲಾಯ್ತು. ಮೋಸಗಾರರೆಂದು ಜರಿಯಲಾಯ್ತು. ಸಾಯಿಬಾಬಾ ಕೊಡುತ್ತಿದ್ದ ವಿಭೂತಿಗೆ ನೂರೆಂಟು ಅರ್ಥ ಹೇಳಿದರು. ನಿಜ. ಆದರೆ ಭಕ್ತರ ಶ್ರದ್ಧೆಯನ್ನು ಒಂದು ಪ್ರತಿಶತವೂ ಅಲುಗಾಡಿಸಲಾಗಲಿಲ್ಲ. ಹಾಗಂತ ನಾನೇನು ಢೋಂಗಿಗಳನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಕೆಲವು ಶಿಕ್ಷಕರು ಮಕ್ಕಳಿಗೆಂದು ಕೊಡುವ ಮಧ್ಯಾಹ್ನದೂಟದ ಅಕ್ಕಿಯನ್ನು ಕದ್ದೊಯ್ದರೆ ಯೋಜನೆಯನ್ನೇ ದೂರುವುದೆಷ್ಟು ತಪ್ಪೋ ಹಾಗೆಯೇ ಕೆಲವರು ಮಾಡುವ ತಪ್ಪಿಗೆ ಹಿಂದುತ್ವವನ್ನು ಹೀಗಳೆಯುವುದು ಅಷ್ಟೇ ತಪ್ಪು.

science-and-hinduism-2

ಇಷ್ಟಕ್ಕೂ ಒಬ್ಬ ವ್ಯಕ್ತಿ, ಒಂದು ಗ್ರಂಥ, ಒಂದು ವಿಚಾರ ಇದು ಮಾತ್ರ ಸತ್ಯ ಎನ್ನುವುದು ಮೌಢ್ಯವೋ, ಸತ್ಯದ ಹಲವು ಆಯಾಮಗಳನ್ನು ಒಪ್ಪಿ ಸಾಧಿಸುವುದು ಮೌಢ್ಯವೋ ಯೋಚಿಸಿ. ಕೂಡುವ ಲೆಕ್ಕದಲ್ಲಿ ಒಂದಕ್ಕೆ ಐದು ಸೇರಿಸಿ, ಎರಡಕ್ಕೆ ನಾಲ್ಕು ಸೇರಿಸಿ, ಮೂರಕ್ಕೆ ಮೂರು ಸೇರಿಸಿ ಆರು ಮಾಡಬಹುದು. ಲೆಕ್ಕದ ಹುಡುಗನಿಗೆ ತಾನು ಮಾಡಿದ್ದೇ ಸರಿ ಎನಿಸಬಹುದು; ಆದರೆ ಎಲ್ಲವನ್ನೂ ಅರಿತ ಉಪಾಧ್ಯಾಯರಿಗೆ ಮೂರೂ ಸರಿ ಅಂತ ಗೊತ್ತಲ್ಲವೇ? ತನ್ನದ್ದೇ ಸರಿ ಎನ್ನುವ ಮತಗಳು ಬೇಕಾದಷ್ಟಿವೆ. ಎಲ್ಲರನ್ನೂ ಒಪ್ಪುವ ಧರ್ಮ ಒಂದೇ ಅದು ಹಿಂದು!
ಇದನ್ನು ಸಹಿಸಲಾಗದೇ ತಮ್ಮ ಮತವನ್ನು ಹೇರುವ ಪ್ರಯತ್ನವನ್ನು ಮಿಷನರಿಗಳು ಮಾಡುತ್ತಲೇ ಬಂದಿದ್ದಾರೆ. ದಾಭೋಲ್ಕರರಿಗೆ ವಿದೇಶೀ ಹಣ ಹರಿದು ಬಂದುದರ ಕುರಿತಂತೆ ಈ ಹಿಂದೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅವರು ಈ ಹಣದ ಕುರಿತಂತೆ ಲೆಕ್ಕ ಇಡಲಿಲ್ಲವೆಂಬ ಸುದ್ದಿಯೂ ಜೋರಾಗಿತ್ತು. ಈಗ ಅದೆಲ್ಲವೂ ಅವರ ಸಾವಿನೊಂದಿಗೆ ಮುಚ್ಚಿಹೋಗಿದೆ. ಪುಣೆಯಲ್ಲಿ ಪಕ್ಷಗಳೆಲ್ಲ ಸೇರಿ ಕರೆದ ಬಂದ್‌ಗೆ ಪ್ರತಿಕ್ರಿಯೆ ಸಾಮಾನ್ಯವಾಗಿತ್ತು. ಅತ್ತ ಅವರ ಸಾವಿನೊಂದಿಗೆ ಮೂಢನಂಬಿಕೆಗಳನ್ನು ನಿಷೇಧಿಸುವ ಕಾನೂನು ಒಪ್ಪಲು ಮಹಾರಾಷ್ಟ್ರ ಸರ್ಕಾರ ಮುಂದೆ ನಿಂತಿದೆ. ಯಾವ ನಂಬಿಕೆ ಮೂಢವೆಂದು ನಿರ್ಧರಿಸುವವರು ಯಾರು?
ಹಳ್ಳಿಗಳಲ್ಲಿ ಪ್ಲೇಗಮ್ಮನೆಂಬ ದೇವಿಯಿದ್ದಾಳೆ. ಆಕೆಗೆ ಈಗಲೂ ಪೂಜೆ ನಡೆಯುತ್ತದೆ. ಪ್ಲೇಗ್ ಸಾಂಕ್ರಾಮಿಕ ರೋಗವೆಂದರಿತ ಆಗಿನ ಹಿರಿಯರು ಜನರನ್ನು ಊರ ಹೊರಗೆ ಕರೆ ತರಲು ಅಲ್ಲೊಂದು ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಆಕೆಯ ಕೃಪೆಯ ಮೇಲೆ ದೃಢವಿಶ್ವಾಸವಿರಿಸಿದ್ದ ಜನರಿಗೆ ಪ್ಲೇಗ್‌ನಿಂದ ಮುಕ್ತಿ ದೊರೆಯಿತು ; ಊರಿನಿಂದ ಹೊರಗೆ ಬಂದಿದ್ದರಿಂದ ಅದು ಹರಡುವುದೂ ನಿಂತಿತು. ಈಗ ಹೇಳಿ ಅವತ್ತು ಪೂಜಿಸಿದ್ದು ನಂಬಿಕೆಯಾ? ಮೌಢ್ಯವಾ?
ದೇವರಿಗೆ ಬಲಿ ಕೊಡುವುದನ್ನು ನಿಷೇಧಿಸಬೇಕೆಂದು ವಾದ ಮಾಡುವಾಗ ಜೊತೆಗೂಡುವವರು ಕುರಿಬಲಿಯ ಕುರಿತಂತೆಯೂ ಇದೇ ನಿಲುವು ತಳೆಯುವರೇನು? ವಿಭೂತಿ ಪಡೆದ ಸಿರಿವಂತರು ಕೊಟ್ಟ ಹಣದಿಂದ ಸಾಯಿಬಾಬಾ ಬಡವರಿಗೆ ಅಂತ ಆಸ್ಪತ್ರೆ ಕಟ್ಟಿಸಿದರು, ಕುಡಿಯುವ ನೀರು ಕೊಟ್ಟರು. ಬೆನ್ನಿಹಿನ್ ಅಕ್ಷರಶಃ ರೋಗ ಗುಣಪಡಿಸುವ ನಾಟಕ ಮಾಡಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದು ಓಡಿದನಲ್ಲ ; ಎಲ್ಲಿತ್ತು ಅಂಧಶ್ರದ್ಧೆ ನಿರ್ಮೂಲನ ಸಮಿತಿ? ಎಲ್ಲಿದ್ದವು ಆಂಗ್ಲ ಮಾಧ್ಯಮಗಳು? ಈ ರೀತಿಯ ಸಮಿತಿಗಳು ಇಲ್ಲಿಯೂ ಹುಟ್ಟಿಕೊಂಡಿವೆ. ನಾವು ನಂಬಿಕೊಂಡ ವಿಚಾರಗಳನ್ನು ವೈeನಿಕವಾಗಿ ಪ್ರಶ್ನಿಸುತ್ತೇವೆ ಅಂತಾರೆ. ಆದರೆ ಅವರ ವಿeನದ ತಳಹದಿಯೇ ನಡುಗುತ್ತಿದೆ. ಅದು ಹಿಂದುತ್ವದೆಡೆಗೆ ವಾಲುತ್ತಿದೆ!
ಯಾಕೋ ದಾಭೋಲ್ಕರ್ ಹತ್ಯೆಯಾಯಿತೆಂದು ತಿಳಿದು ಬಂದಾಗ ನಿಮ್ಮ ಬಳಿ ಇಷ್ಟನ್ನೂ ನಿವೇದಿಸಿಕೊಳ್ಳಬೇಕೆನ್ನಿಸಿತು ಅಷ್ಟೇ.

Comments are closed.