ವಿಭಾಗಗಳು

ಸುದ್ದಿಪತ್ರ


 

ವಿವೇಕ ಕುಂಭದ ಕೊನೆಯಲ್ಲಿ ನನ್ನ ಕನಸಿನ ಕನರ್ಾಟಕ!

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ ಅಂತ!

ಈ ಜನವರಿ ಹನ್ನೆರಡು ನಾಡಿನ ಪಾಲಿಗೆ ವಿಶಿಷ್ಟವಾದ ದಿನವೇ ಸರಿ. ಚುನಾವಣೆ ಬಂದೊಡನೆ ತಮ್ಮ ತಾವು ಪದೇ ಪದೇ ಹಿಂದೂ ಎಂದು ಹೇಳಿಕೊಳ್ಳಲು ಹೆಣಗಾಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಟ್ಟಿಟರ್ನಲ್ಲಿ ಶುಭಾಶಯವನ್ನಷ್ಟೇ ಕೋರಲು ಸೀಮಿತಗೊಳಿಸಿಬಿಟ್ಟಿದ್ದರು. ಕೊನೆಯ ಪಕ್ಷ ಅದನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತಾರೆಂಬುದೂ ಅವರು ಮರೆತಿದ್ದಾರೆನಿಸುವಂತಿತ್ತು. ಒಂದಂತೂ ಸತ್ಯ. ವ್ಯಕ್ತಿಯೊಬ್ಬನ ಮೇಲೆ ಸಮಾಜಕ್ಕೆ ಅಸಡ್ಡೆ ಮೂಡಬೇಕೆಂದರೆ ಸಕರ್ಾರ ಅವನ ಜಯಂತಿಯನ್ನು ಆಚರಿಸುವಂತೆ ಮಾಡಿದರೆ ಸಾಕು. ಅದರಲ್ಲೂ ಬರಿಯ ಮತ ರಾಜಕಾರಣ ಮಾಡುವವರು ಇದರ ಜವಾಬ್ದಾರಿ ಹೊತ್ತರಂತೂ ಕಥೆ ಮುಗಿದಂತೆಯೇ! ಟಿಪ್ಪೂ ಕನ್ನಡದ ಗೌರವದ ಸಂಕೇತವಾಗಿ ಅಲ್ಪ ಸ್ವಲ್ಪ ಜನರ ನಡುವೆ ಜೀವಂತವಾಗಿದ್ದ. ಮುಖ್ಯಮಂತ್ರಿಗಳು ಮುಸ್ಲೀಂ ಮತಗಳ ಸೆಳೆಯಲು ಟಿಪ್ಪೂ ಜಯಂತಿ ಶುರು ಮಾಡಿದರು ನೋಡಿ ಈಗಾತ ಮುಸಲ್ಮಾನರ ನಾಯಕನಾಗಿ ಬಿಂಬಿತವಾಗತೊಡಗಿದ. ಆತನ ವಿರೋಧಕ್ಕೆಂದೇ ಒಂದಷ್ಟು ಜನ ಸಿದ್ಧವಾದರು. ಇನ್ನೂ ಕೆಲವು ವರ್ಷಗಳ ನಂತರ ಆತನನ್ನು ಹೊತ್ತು ಮೆರೆಸುವವರೂ ಆಚರಣೆ ನಿಲ್ಲಿಸಿಬಿಟ್ಟರೆಂದರೆ ಟಿಪ್ಪೂ ಕಥೆ ಮುಗಿಸಿಬಿಟ್ಟಂತೆ!! ಈ ಹಿನ್ನೆಲೆಯಲ್ಲಿ ತಾವು ಜಯಂತಿ ಆಚರಿಸದೇ ವಿವೇಕಾನಂದರನ್ನು ಕನ್ನಡಿಗರ ನಡುವೆ ಜೀವಂತವಾಗಿರಿಸಲು ಸಹಕರಿಸಿದ ಮುಖ್ಯಮಂತ್ರಿಗಳಿಗೆ ಹೇಗೆ ಧನ್ಯವಾದ ಹೇಳುವುದೋ ತಿಳಿಯದಾಗಿದೆ. ಈಗಂತೂ ಜಯಂತಿಯ ಆಚರಣೆಗಳು ರಜೆ ನೀಡುವುದಕ್ಕೆ ಸೀಮಿತವಾಗಿಬಿಟ್ಟಿವೆ. ಯಾವುದಾದರೂ ಜಾತಿಯ ಸಂಘಟನೆಗಳು ತಮ್ಮ ನಾಯಕರ ಜಯಂತಿ ಆಚರಣೆಗೆ ಸಕರ್ಾರೀ ರೂಪ ಬಯಸುವುದಾದರೆ ಒಂದು ಗಂಟೆ ಅವರ ವಿಚಾರಧಾರೆ ಚಚರ್ಿಸಬೇಕೆಂದೋ ಅಥವಾ ಒಂದು ಗಂಟೆ ಹೆಚ್ಚು ಕೆಲಸ ಮಾಡಬೇಕೆಂದೋ ಆಗ್ರಹ ಮಾಡಬೇಕೇ ಹೊರತು ರಜೆ ಕೊಡಿರೆಂದು ಅಲ್ಲ. ಕನಸಿನ ಕನರ್ಾಟಕದ ಮೊದಲ ನಿರ್ಣಯ ಇದೇ ಆಗಿರಬೇಕೆಂದು ನನ್ನ ಅಭಿಪ್ರಾಯ.

FB_IMG_1515977978607

ಒಂದೆಡೆ ಮುಖ್ಯಮಂತ್ರಿಗಳು ವಿವೇಕಾನಂದರ ಜಯಂತಿಯನ್ನು ಅಸಡ್ಡೆಯಿಂದ ಕಂಡು ನಾಡಿನ ತರುಣರಿಗೆ ಅವಮಾನ ಮಾಡಿದರೆ ಅತ್ತ ಬೆಳಗಾವಿಯ ಮುಗಳಖೋಡದಲ್ಲಿ, ಪರಮ ಪೂಜ್ಯ ಮುರುಘರಾಜೇಂದ್ರ ಸ್ವಾಮಿಗಳು ಹತ್ತು ಸಾವಿರ ತರುಣರನ್ನು ವಿವೇಕಾನಂದರ ರೂಪಧಾರಿಗಳಾಗಿಸುವ ಸಂಕಲ್ಪ ಹೊತ್ತಿದ್ದರು. ನೆನಪಿಡಿ, ಹತ್ತು ಸಾವಿರ! ಮೊದಲಿಗೆ ಅಷ್ಟು ಜನರನ್ನು ಭೇಟಿ ಮಾಡಬೇಕು, ಅವರನ್ನು ಕಾರ್ಯಕ್ರಮದತ್ತ ಭಿನ್ನ ಭಿನ್ನ ಗಾಡಿಗಳಲ್ಲಿ ತರಬೇಕು, ಅವರಿಗಾಗಿ ಬಟ್ಟೆ ತರಬೇಕು, ಅದನ್ನು ತೊಡಿಸಬೇಕು. ವಿವೇಕಾನಂದರಂತೆ ಪೇಟ ತೊಡಿಸಬೇಕು, ಅವರಿಗೆ ಕುಳಿತಲ್ಲೇ ನೀರು, ಊಟ ತಲುಪಿಸಬೇಕು. ಓಹ್ ಎಲ್ಲವೂ ಸಾಹಸವೇ. ಆದರೆ ತೊಟ್ಟ ಸಂಕಲ್ಪವನ್ನು ಬಿಡದೇ ಸಾಧಿಸುವ ದಾಖಲೆಯಿರುವ ಮುಗಳಖೋಡ ಮಠ ಇದನ್ನು ಲೀಲಾಜಾಲವಾಗಿ ನಿಭಾಯಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಒಂದು ಲಕ್ಷ ಮೀಟರ್ ಬಟ್ಟೆಗೆ ಹೇಳಿಯಾಯ್ತು. ಪೇಟ ಕಟ್ಟುವವರಿಗಾಗಿ ಹುಡುಕಾಟ ಶುರುವಾಗಿತ್ತು. ಅತ್ತ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳನ್ನು ನೋಂದಾಯಿಸುವ ಕೆಲಸವೂ ಭರದಿಂದ ಸಾಗಿತು. ನೋಂದಣಿ ಎಂದರೆ ಸುಮ್ಮನೆ ಹೆಸರು ಬರಕೊಂಡು ಬಂದು ಬಿಡುವುದಲ್ಲ; ವಿದ್ಯಾಥರ್ಿಗಳ ಸಹಮತಿ ಪತ್ರ ಪಡೆದು ಅವರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರಗಳನ್ನೊಳಗೊಂಡ ಪತ್ರಕ ತಯಾರು ಮಾಡಿಕೊಳ್ಳುವುದು. ಅದನ್ನು ಕಂಪ್ಯೂಟರ್ಗೆ ಅಳವಡಿಸಿ ಬಾರ್ಕೋಡ್ ತಯಾರು ಮಾಡಿ ವೈಯಕ್ತಿಕವಾದ ಗುರುತಿನ ಚೀಟಿ ತಯಾರಿಸುವುದು. ಹತ್ತಾರು ಕಾರ್ಯಕರ್ತರು ದಿನ ರಾತ್ರಿಗಳೆನ್ನದೇ ದುಡಿಯಲಾರಂಭಿಸಿದರು. ಹಳ್ಳಿಗಳ ತರುಣ ಸಂಘಟನೆಗಳನ್ನು ಭೇಟಿ ಮಾಡಿ ಅವರನ್ನೂ ಈ ಕಾರ್ಯಕ್ಕೆ ಜೋಡಿಸಿಕೊಳ್ಳುವ ಪ್ರಯಾಸ ಶುರುವಾಗಿತ್ತು. ಹದಿನೈದರಿಂದ ಮುವ್ವತ್ತೊಂಭತ್ತರ ನಡುವೆ ಇರುವ ತರುಣರನ್ನೆಲ್ಲ ರೂಪಧಾರಿಗಳಾಗಿಸುವ ಸಂಕಲ್ಪ ಕೈಗೊಳ್ಳಲಾಗಿತ್ತು. ಸ್ವಾಮಿ ವಿವೇಕಾನಂದರು ಬದುಕಿದ್ದು ಮುವ್ವತ್ತೊಂಬತ್ತೇ ವರ್ಷವಾದ್ದರಿಂದ ಈ ನಿಯಮ!
ಹತ್ತು ಸಾವಿರ ಸಂಖ್ಯೆ ತಲುಪುವುದು ಸುಲಭದ ಸಂಗತಿಯಾಗಿರಲಿಲ್ಲ. ಅಷ್ಟು ಜನರನ್ನು ಕಾರ್ಯಕ್ರಮವೊಂದಕ್ಕೆ ಕರೆತರಲು ಹೆಣಗಾಡುವ ರಾಜಕೀಯ ಪಕ್ಷಗಳಿವೆ ಅಂದಮೇಲೆ ಅಷ್ಟು ಜನರನ್ನು ವಿವೇಕಾನಂದರ ರೂಪಧಾರಿಗಳಾಗಿಸಲು ಪ್ರೇರೇಪಿಸಿ ಕರೆತರುವುದು ಹೆಚ್ಚು ಕಡಿಮೆ ಅಸಾಧ್ಯವೇ ಆಗಿತ್ತು. ಹಳ್ಳಿಗರಲ್ಲಿ ಮನೆ ಮಾಡಿರುವ ಸನ್ಯಾಸಿಯ ವೇಷ ಧರಿಸುವುದು ಸಲ್ಲದೆಂಬ ಮೌಢ್ಯವನ್ನು ಎದುರಿಸಿ ನಿಂತು ಈ ಕೆಲಸ ಮಾಡಬೇಕಿತ್ತು. ನಿಧಾನವಾಗಿ ಒಂದು ವಾತಾವರಣ ರೂಪುಗೊಳ್ಳತೊಡಗಿತು. ನೋಂದಣಿಯಾಗುವವರ ಸಂಖ್ಯೆ ವಿರಾಟ್ ಕೊಹ್ಲಿಯ ಶತಕಗಳಂತೆ ಏರತೊಡಗಿತು. ಮೂರು, ಐದು, ಎಂಟು, ಹತ್ತು ಕೊನೆಗೆ ಹದಿನಾರು ಸಾವಿರಕ್ಕೇರಿತು ಆಕಾಂಕ್ಷೆ ಹೊಂದಿದ ವಿದ್ಯಾಥರ್ಿಗಳ ಸಂಖ್ಯೆ. ಒಂದು ಹಂತದಲ್ಲಿ ಇನ್ನು ನೋಂದಣಿ ಇಲ್ಲವೆಂದು ಖಡಾಖಂಡಿತವಾಗಿ ಹೇಳಲಾಯ್ತು. ಆಗಲೇ ಅವರಿವರ ಪ್ರಭಾವ ಬಳಸಿ ನೋಂದಣಿಗೆ ಬೇಡಿಕೊಳ್ಳುವವರ ಸಂಖ್ಯೆ ಹೆಚ್ಚಿದ್ದು. ಬಿಸಿ ಅದಾಗಲೇ ಶುರುವಾಗಿತ್ತು.

ಹಾಗಂತ ಇದನ್ನು ವೇಷ ಧಾರಣೆಗೆ ಸೀಮಿತಗೊಳಿಸುವ ಬಯಕೆ ಯಾರಿಗೂ ಇರಲಿಲ್ಲ. ಸ್ವಾಮಿಜಿಯವರ ಸಂಕಲ್ಪ ವಿವೇಕ ಆವಾಹನೆಯದ್ದಾಗಿತ್ತು. ಅದಕ್ಕೇ ವಿವೇಕಾನಂದರ ವಿಚಾರಧಾರೆಯನ್ನು ಮುಟ್ಟಿಸುವ ಅದನ್ನು ಸಾರ್ವಜನಿಕರ ಮನದಲ್ಲಿ ಇಂಗುವಂತೆ ಮಾಡುವ ಜವಾಬ್ದಾರಿ ಎಲ್ಲರಿಗೂ ಇದ್ದೇ ಇತ್ತು. ಅದಕ್ಕೇ ಆಸುಪಾಸಿನ ಊರೂರಲ್ಲಿ ವಿವೇಕಾನಂದರ ವಿಡಿಯೋ ಪ್ರದರ್ಶನ ಮಾಡಲಾಯ್ತು. ಅದು ಸಾಲದೆಂದು ಪಂಜಿನ ಮೆರವಣಿಗೆಗಳನ್ನು ಆಯೋಜಿಸಿ ಅದನ್ನೂ ಕಾರ್ಯಕ್ರಮದ ಮತ್ತು ವಿವೇಕಾನಂದರ ವಿಚಾರಧಾರೆಯ ಪ್ರಚಾರಕ್ಕೆಂದು ಬಳಸಿಕೊಳ್ಳಲಾಯ್ತು. ಕೆಲವು ಹಳ್ಳಿಗಳಲ್ಲಿ ಈ ಕಾರ್ಯಕ್ರಮಕ್ಕೇ ಸಾವಿರಾರು ಜನ ಸೇರಿ ಅಚ್ಚರಿಯನ್ನು ಮೂಡಿಸಿದ್ದರು. ಇದು ಬರಲಿರುವ ಕಾರ್ಯಕ್ರಮದ ಕುರಿತಂತೆ ಹೆದರಿಕೆಯನ್ನು ಹುಟ್ಟಿಸಲು ಖಂಡಿತ ಸಾಕಿತ್ತು.

FB_IMG_1515977880628

ಇತ್ತ ವೇದಿಕೆಯ ತಯಾರಿಯೂ ಭರ್ಜರಿಯಾಗಿ ನಡೆದಿತ್ತು. ಐವತ್ತು ಸಾವಿರ ಜನ ಕುಳಿತು ವೀಕ್ಷಿಸಬಲ್ಲ ಭರ್ಜರಿ ವೇದಿಕೆ, ಹತ್ತು ಸಾವಿರ ಜನ ರೂಪಧಾರಿಗಳು ನಿಲ್ಲಬಲ್ಲ ವ್ಯವಸ್ಥೆ. ಸೆಖೆಯನ್ನು ಕಡಿಮೆ ಮಾಡಲೆಂದೇ ಗಿರಗಿರ ಸುತ್ತುವ ಫ್ಯಾನುಗಳು ಓಹ್ ಅದೊಂದು ಸ್ವಗರ್ಾನುಭೂತಿ. ಮುಂಚಿನ ಕೆಲವು ದಿನಗಳ ಕಾಲ ಈ ಕಾರ್ಯಕ್ರಮವನ್ನು ಹೆಗಲ ಮೇಲೆ ಹೊತ್ತು ಮೆರೆಸುತ್ತಿದ್ದ ತರುಣರಿಗೆ ಕೈತುಂಬಾ ಕೆಲಸ. ಬರುತ್ತೇವೆಂದು ಹೇಳಿದ್ದ ಹಳ್ಳಿಗರನ್ನು ಮತ್ತೊಮ್ಮೆ ಮಾತಾಡಿಸಬೇಕು, ಅವರ ಆಗಮನವನ್ನು ಖಾತ್ರಿಪಡಿಸಿಕೊಳ್ಳಬೇಕು. ಇತ್ತ ಅವರಿಗೆ ಕೊಡಬೇಕಾದ ಗುರುತಿನ ಚೀಟಿಗಳನ್ನು ಸಿದ್ಧ ಮಾಡಿಕೊಳ್ಳಬೇಕು. ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆಗಳಿಗೆ ಭಂಗಬರದಂತೆ ನೋಡಿಕೊಳ್ಳಬೇಕು. ಬಂದ ಮಕ್ಕಳಿಗೆ ಚಾಕಲೇಟು ಹಂಚಬೇಕು; ಬೇಗ ಬಂದವರಿಗೆ ತಿಂಡಿಯೂ ಕೊಡಬೇಕು. ಎಲ್ಲಕ್ಕೂ ಮಿಗಿಲಾಗಿ ಹತ್ತು ಸಾವಿರ ಜನರನ್ನು ಸಾಲಾಗಿ ನಿಲ್ಲಿಸಬೇಕು, ಇದು ಜಾಗತಿಕ ದಾಖಲೆಯಾಗಬೇಕಿರುವುದರಿಂದ ಬಂದಿರುವ ನಿಣರ್ಾಯಕರು ಹೇಳುವ ನಿಯಮಗಳನ್ನು ಪೂರೈಸಬೇಕು. ಫುಟ್ ಕೌಂಟ್ ಮಶೀನು, ಬಾರ್ ಕೋಡ್ ಸ್ಕ್ಯಾನರ್ಗಳಲ್ಲಿ ಕೆಲಸ ಮಾಡುವಂತೆ ತರುಣರನ್ನು ಸಿದ್ಧಪಡಿಸಬೇಕು. ಮಕ್ಕಳನ್ನು ಹೊತ್ತು ತರುವ ನೂರಾರು ಬಸ್ಗಳ ಪಾಕರ್ಿಂಗ್ ವ್ಯವಸ್ಥೆಗೆ ನಿಲ್ಲಬೇಕು. ಎದೆ ಬಡಿತ ಜೋರಾಗುವ ಹೊತ್ತು ಅದು.
ಜನವರಿ ಹನ್ನೆರಡರ ಬೆಳಗ್ಗೆ ಒಂಭತ್ತು ಗಂಟೆಯ ವೇಳೆಗೆ ಬಸ್ಸುಗಳು ಬರಲಾರಂಭಿಸಿದವು. ಏಶಿಯ ಬುಕ್ ಆಫ್ ರೆಕಾಡ್ಸರ್್, ಇಂಡಿಯಾ ಬುಕ್ ಆಫ್ ರೆಕಾಡ್ಸರ್್ ಮತ್ತು ಗೋಲ್ಡನ್ ಬುಕ್ ಆಫ್ ರೆಕಾಡ್ಸರ್್ನ ತೀಪರ್ುಗಾರರು ಬರಲು ಸ್ವಲ್ಪ ತಡಮಾಡಿದ್ದು ಎಲ್ಲ ಎಡವಟ್ಟುಗಳಿಗೂ ಕಾರಣವಾಗಿಬಿಡ್ತು. ಅವರೆದುರಿಗೆ ಫುಟ್ಕೌಂಟ್ ಶುರುವಾಗಬೇಕಾದ್ದರಿಂದ ಹೊರಗೆ ಕಾಯುತ್ತಿದ್ದ ತರುಣರನ್ನು ಒಳಬಿಡುವಂತಿರಲಿಲ್ಲ. ಹತ್ತುಗಂಟೆಗೆ ಎಲ್ಲ ಸಮಸ್ಯೆ ತೀರಿ ಮೊದಲ ಹುಡುಗನನ್ನು ಒಳಬಿಡುವಾಗಾಗಲೇ ಹೊರಗೆ ಐದು ಸಾವಿರಕ್ಕೂ ಹೆಚ್ಚು ಜನ ಸೇರಿಯಾಗಿತ್ತು. ಐದು ಸಾವಿರ ಹತ್ತಾಗಲು ಬಹಳ ಹೊತ್ತು ಹಿಡಿಯಲಿಲ್ಲ. ಅದು ನೋಡನೋಡುತ್ತಲೇ ಹದಿನೈದಾಯ್ತು. ರೆಜಿಸ್ಟ್ರೇಶನ್ ಕೌಂಟರಿನಲ್ಲಿ ವ್ಯವಸ್ಥೆ ಮುರಿದು ಬಿತ್ತು. ಬಂದ ಪ್ರತಿಯೊಬ್ಬರಿಗೂ ವಿವೇಕಾನಂದರ ರೂಪಧಾರಿಗಳಾಗುವ ಹುಚ್ಚು ಆವರಿಸಿಕೊಂಡುಬಿಟ್ಟಿತ್ತು. ನಿಜಕ್ಕೂ ಬಲು ದೊಡ್ಡ ಸವಾಲು. ಪ್ರೀತಿಯ ಮಾತುಗಳು, ಕೋಪಾವೇಶ, ಪೊಲೀಸರ ಲಾಠಿ ದರ್ಶನ ಎಲ್ಲವೂ ಆಯ್ತು. ಸಮಸ್ಯೆಗಳು ಎದುರಾದಾಗಲೇ ಪರಿಹಾರಕ್ಕೆ ಹುಡುಕಾಟ ಶುರುವಾಗೋದು. ಅಲ್ಲಲ್ಲಿ ನಿಂತ ತರುಣರೇ ತಂತಮ್ಮ ಮಟ್ಟದ ಪರಿಹಾರಗಳನ್ನು ಹುಡುಕಿಕೊಂಡರು. ಒಂದಿಡೀ ವಿಸ್ತಾರದ ತಾತ್ಕಾಲಿಕ ಕೋಣೆಯಲ್ಲಿ ನೂರಿಪ್ಪತ್ತು ಜನ ಕಾರ್ಯಕರ್ತರು ಒಳಬಂದವರಿಗೆ ಪಂಚೆಯುಡಿಸಿ, ಶಲ್ಯ ಹಾಕಿಸಲಾರಂಭಿಸಿದರು. ಅಲ್ಲಿಂದಲೂ ಒಳದಾಟಿ ಬಂದವರಿಗೆ ಪೇಟ ತೊಡಿಸುವ ಕಾರ್ಯ ಆರಂಭವಾಯಿತು. ನೋಡನೋಡುತ್ತಲೇ ಕೇಸರೀ ಪಡೆ ಸಭಾಂಗಣವನ್ನು ಆವರಿಸಿಕೊಳ್ಳುತ್ತ ಹೋಯ್ತು. ಮೊದಲ ಅರ್ಧ ಗಂಟೆಯಲ್ಲಿ ಒಂದು ಸಾವಿರ ಜನರು ರೂಪಧಾರಿಗಳಾಗಿದ್ದರು. ಇದೇ ವೇಗದಲ್ಲಿ ನಡೆದರೆ ಕನಿಷ್ಠ ಐದು ಗಂಟೆ ಬೇಕು. ಅದರರ್ಥ ಮೊದಲು ಬಂದು ಕುಳಿತವ ಐದೈದು ಗಂಟೆ ಹಾಗೆಯೇ ಕುಳಿತಿರಬೇಕು. ಅವರನ್ನು ಸಮಾಧಾನವಾಗಿರಿಸಲು ವೇದಿಕೆಯ ಮೇಲೆ ಕಾರ್ಯಕ್ರಮಗಳು ಶುರುವಾದವು. ಸ್ಥಳೀಯ ಕಲಾವಿದರು ತಮ್ಮ ಗಾಯನದಿಂದ ಅವರನ್ನು ರಂಜಿಸಿದರು. ಬೆಂಗಳೂರಿನಿಂದ ಬಂದಿದ್ದ ಪೃಥ್ವೀಶ್ ರೂಬಿ ಕ್ಯೂಬ್ ಬಳಸಿ ವಿವೇಕಾನಂದರ ಚಿತ್ರವನ್ನು ರೂಪಿಸಿದ್ದು ಅಪರೂಪದ್ದಾಗಿತ್ತು. ಮಧ್ಯಾನ್ಹ ಎರಡೂವರೆಯ ವೇಳೆಗೆ ಹತ್ತು ಸಾವಿರದ ಸಂಖ್ಯೆಯನ್ನು ದಾಟಿ ವಿವೇಕ ವೇಷಧಾರಿಗಳು ಸಭಾಂಗಣದಲ್ಲೆಲ್ಲ ಕೇಸರೀ ಪಡೆಯಾಗಿ ರಾರಾಜಿಸಿದರು. ಆಗಾಗ ಅವರು ಹೇಳುತ್ತಿದ್ದ ವಿವೇಕಾನಂದರ ಮಾತುಗಳು, ಕೂಗುತ್ತಿದ್ದ ಘೋಷಣೆಗಳು ಅಲ್ಲೊಂದು ರುದ್ರ ಭಯಂಕರ ವಾತಾವರಣವನ್ನೇ ಸೃಷ್ಟಿಸಿಬಿಟ್ಟಿತ್ತು. ಎರಡೂವರೆಗೆ ಆ ಮಕ್ಕಳ ತಲೆಯಮೇಲೆ ಹಾದು ಹೋದ ಡ್ರೋನ್ಗಳು ದಾಖಲೆಗೆ ಬೇಕಾದ ಎಲ್ಲ ಆವಶ್ಯಕತೆಗಳನ್ನೂ ಪೂರೈಸಿದ್ದವು.

ಸಹಸ್ರ ಸಹಸ್ರ ಸಂಖ್ಯೆಯ ವಿವೇಕಾನಂದರನ್ನು ನೋಡುವ ಭಾಗ್ಯ ನೆರೆದಿದ್ದವರಲ್ಲೆಲ್ಲ ಆನಂದದ ಹೊನಲನ್ನು ಹರಿಸಿತ್ತು. ವೇದಿಕೆಯ ಮೇಲೆ ನಿಂತು ನೋಡುತ್ತಿದ್ದವರಂತೂ ಮೈಮರೆತುಬಿಟ್ಟಿದ್ದರು. ಇಂತಹುದೊಂದು ವಿಶಾಲ ಸಂಕಲ್ಪಗೈದಿದ್ದ ಮುಗಳಖೋಡದ ಸ್ವಾಮಿಗಳಂತೂ ವಿವೇಕಾನಂದರ ಭಾವದೊಳಗೆ ಮೈಮರೆತಿದ್ದರು. ವಿವೇಕಾನಂದರೇ ಸ್ಥಾಪಿಸಿದ ಅದ್ವೈತಾಶ್ರಮದ ಈಗಿನ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಕುಂಭಮೇಳದ ನಂತರ ಕಂಡುಬಂದ ಶ್ರೇಷ್ಠ ದೃಶ್ಯವಿದೆಂದು ಉದ್ಗರಿಸಿದರು. ಸಹಜವಾಗಿಯೇ ‘ವಿವೇಕ ಕುಂಭ’ವೆಂದು ಈ ಕಾರ್ಯಕ್ರಮಕ್ಕೆ ಹೊಸದಾಗಿ ನಾಮಕರಣವಾಯ್ತು.

FB_IMG_1515977947286

ಸ್ವಾಮಿ ವಿವೇಕಾನಂದರು ಹೇಳುತ್ತಾರಲ್ಲ, ಇಂಪಾದ ನಾದವ ಕೇಳಿ, ಕೇಳಿ ತರುಣ ವರ್ಗ ಮಲಗಿಬಿಟ್ಟಿದೆ ಅವರನ್ನು ಜಾಗೃತಗೊಳಿಸಲು ಭೇರಿ-ನಗಾರಿಗಳೇ ಬೇಕಿದೆ ಅಂತ. ಅದನ್ನು ಸಾಕಾರಗೊಳಿಸಲೆಂದೇ 880ಕ್ಕೂ ಹೆಚ್ಚು ದೇಸೀ ವಾದ್ಯಗಳು ಭರ್ಜರಿ ಸದ್ದಿಗೆ ಸಿದ್ಧವಾಗಿ ನಿಂತಿದ್ದವು. ಒಂದೊಂದೂ ವಾದ್ಯವೂ ನೂರುನೂರು ಸಂಖ್ಯೆಯಲ್ಲಿ ನೆರೆದಿದ್ದವು. ಅಷ್ಟೂ ಏಕಕಾಲದಲ್ಲಿ ಮೊಳಗಿದಾಗ ವೇದಿಕೆಯೆಲ್ಲ ಒಮ್ಮೆ ಅಲುಗಾಡಿದಂತಹ ಅನುಭವ! ನರೇಂದ್ರ ಮೋದಿ ಆನಂತರ ಮಾತನಾಡಿ ಅರ್ಧ ಗಂಟೆಯಲ್ಲಿ ನಾಡಿಗೆ ಬೇಕಾದ ಎಲ್ಲ ಸಂದೇಶವನ್ನೂ ಕೊಟ್ಟರು. ಸ್ವತಃ ಶ್ರೀಮಠಕ್ಕೂ ಸಾಗಬೇಕಾದ ಮುಂದಿನ ದಾರಿಯ ಕುರಿತಂತೆ ಸೂಕ್ಷ್ಮವಾಗಿ ತಿಳಿಹೇಳಿ ವಿವೇಕಾನಂದರ ಸಂದೇಶ ಸಮರ್ಥವಾಗಿ ಮುಟ್ಟುವ ಕುರಿತಂತೆ ಎಚ್ಚರಿಕೆ ವಹಿಸಿದರು. ನಾಯಕನ ರೀತಿಯೇ ಅದು. ಮಹಾಪುರುಷರನ್ನು ವೋಟಿಗಾಗಿ ಬಳಸುವುದಲ್ಲ ಬದಲಿಗೆ ಅವರ ವಿಚಾರ ಧಾರೆಯನ್ನು ರಾಷ್ಟ್ರ ನಿಮರ್ಾಣಕ್ಕಾಗಿ ಬಳಸುವುದು. ಸಿದ್ದರಾಮಯ್ಯನವರು ಇದನ್ನು ಅರಿಯೋದು ಯಾವಾಗ? ವಿವೇಕಾನಂದರ ಜಯಂತಿ ಮಾಡದೇ ತಾವು ಹಿಂದೂಗಳ ವಿರುದ್ಧದ ಸೇಡನ್ನು ತೀರಿಸಿಕೊಂಡಿದ್ದೇವೆಂದು ಭಾವಿಸಿರಬಹುದು ಆದರೆ ನರೇಂದ್ರ ಮೋದಿ ತಮ್ಮ ಮಾತುಗಳ ಮೂಲಕ ವಿವೇಕಾನಂದರ ಜಯಂತಿಯಂದು ನೆರೆದಿದ್ದ ಸಾವಿರಾರು ಜನರಿಗೆ ಪ್ರೇರಣೆ ನೀಡಿದರು. ಅವರ ಅರ್ಧ ಗಂಟೆಯ ಭಾಷಣದ ಪರಿಣಾಮವದೇನು ಗೊತ್ತೇ? ಮರುದಿನವೇ ಮುಗಳಖೋಡದ ಸ್ವಾಮೀಜಿ ಐದು ಗ್ರಾಮಗಳನ್ನು ಸ್ಮಾಟರ್್ವಿಲೇಜ್ ಆಗಿಸುವ ಸಂಕಲ್ಪ ಘೋಷಿಸಿಯೇ ಬಿಟ್ಟರು. ಸ್ಮಾಟರ್್ ವಿಲೇಜ್ ಆಗುವುದೆಂದರೆ ಹಳ್ಳಿಗಳು ಬಯಲು ಶೌಚಾಲಯ ಮುಕ್ತವಾಗೋದು, ಹೊಗೆ ರಹಿತವಾಗೋದು, ಮೂಲ ಸೌಕರ್ಯಗಳಲ್ಲಿ ಪಟ್ಟಣಗಳಿಗೆ ಸರಿಸಮವಾಗೋದು. ಪಾನ ಮುಕ್ತವಾಗೋದು, ಹೆಣ್ಣುಮಕ್ಕಳು ಸಶಕ್ತರಾಗೋದು, ರೈತ ಸ್ವಾವಲಂಬಿಯಾಗೋದು, ತರುಣ ಭಾಗ್ಯಗಳಿಗೆ ಕೈಚಾಚದೇ ಕೈತುಂಬಾ ಉದ್ಯೋಗ ಹೊಂದುವುದು ಮತ್ತು ಹಳ್ಳಿಗಳು ಡಿಜಿಟೈಸ್ ಆಗೋದು. ಒಟ್ಟಾರೆ ಹಳ್ಳಿಗಳ ಜನ ಪಟ್ಟಣಕ್ಕೆ ಬರುವ ಅಗತ್ಯವಿಲ್ಲದೇ ತಂತಮ್ಮ ಹಳ್ಳಿಗಳಲ್ಲೇ ಆನಂದದಿಂದಿರೋದು ಅಷ್ಟೇ.

FB_IMG_1515977964519

ಸಾವಿರಾರು ವಿವೇಕಾನಂದರ ಸಮ್ಮುಖದಲ್ಲಿ ಮಾತನಾಡಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿಯವರು ಸಿದ್ದರಾಮಯ್ಯನವರು ಐದು ವರ್ಷಗಳಲ್ಲಿ ಮಾಡಲಾಗದ್ದನ್ನು ಮಾಡಿ ತೋರಿಸಿಬಿಟ್ಟರು. ಪ್ರಧಾನಮಂತ್ರಿಯವರಿಗೆ ಚೆನ್ನಾಗಿ ಗೊತ್ತು ಹತ್ತು ಸಾವಿರ ವಿವೇಕಾನಂದ ರೂಪಧಾರಿಗಳನ್ನು ನಿಮರ್ಿಸುವ ಸಂಕಲ್ಪ ಹೊತ್ತ ಸಂತ ಮನಸು ಮಾಡಿದರೆ ಜನ ಜೀವನವನ್ನೇ ಬದಲಾಯಿಸಬಲ್ಲ ಅಂತ! ನಮಗೆ ಅರಿವಿಲ್ಲದೇ ವಿವೇಕ ಕುಂಭದಲ್ಲಿ ನನ್ನ ಕನಸಿನ ಕನರ್ಾಟಕ ಮೈದಳೆದಿತ್ತು!

Comments are closed.