ವಿಭಾಗಗಳು

ಸುದ್ದಿಪತ್ರ


 

ಶತ್ರು ಹೆದರಿದರೆ ಯುದ್ಧ ಅರ್ಧ ಗೆದ್ದಂತೆ!

ಚಾಣಕ್ಯರು ಆರಂಭದಲ್ಲಿಯೇ ನಿಶ್ಚಯಿಸಿದ್ದರು, ಯುದ್ಧವನ್ನು ರಕ್ತರಹಿತವಾದ ಪ್ರೀತಿಯಿಂದಲೇ ಗೆಲ್ಲಬೇಕು, ಕುಟಿಲ ತಂತ್ರಗಳಿಂದ ಜಯಗಳಿಸಿ ನಂದರ ಮೂಲೋತ್ಪಾಟನೆ ಮಾಡಬೇಕು; ಆಯರ್ಾವರ್ತವನ್ನು ಒಂದುಗೂಡಿಸಬೇಕು ಮತ್ತು ಹೀಗೆ ನಿಮರ್ಿತ ಚಂದ್ರಗುಪ್ತನ ಸಾಮ್ರಾಜ್ಯಕ್ಕೆ ಅಮಾತ್ಯ ರಾಕ್ಷಸನೇ ಮಂತ್ರಿಯಾಗಿರಬೇಕು. ಹೌದು. ಚಾಣಕ್ಯರ ಆಲೋಚನೆಗಳಿಗೆ ಅವರ ಆಲೋಚನೆಗಳೇ ಸರಿಸಾಟಿ.

4

ಊಟಕ್ಕೆ ಕೂತವನನ್ನೆಬ್ಬಿಸಿದರೆ ರೌರವ ನರಕ ಪ್ರಾಪ್ತಿಯಂತೆ. ಚಾಣಕ್ಯನನ್ನು ಅನ್ನ ಛತ್ರದಿಂದ ನಂದರ ಆಜ್ಞೆಯಂತೆ ಹಿಡಿದೆಳೆದು ಹೊರದಬ್ಬಿದರು ರಾಜಭಟರು. ಆ ಗಡಿಬಿಡಿಯಲ್ಲಿ ಅವನ ಶಿಖೆ ಬಿಚ್ಚಿ ಹೋಯ್ತು. ಮಹಾಕ್ರೋಧದಿಂದ ಜ್ವಾಲೆಯಾಗಿ ಉರಿಯಲಾರಂಭಿಸಿದ ಚಾಣಕ್ಯನ ಕಣ್ಣುಗಳು ಕೆಂಪಾದವು. ಹುಬ್ಬುಗಳು ಗಂಟಿಕ್ಕಿದವು. ಹಲ್ಲುಗಳು ಕಟಕಟ ಸದ್ದು ಮಾಡಲಾರಂಭಿಸಿದವು. ಪಾದಗಳು ನೆಲವನ್ನು ಎರಡು ಬಾರಿ ಬಡಿದ ಸದ್ದು ಎಂಥವನನ್ನೂ ನಡುಗಿಸುವಂತಿದ್ದವು. ಮೃತ್ಯು ದೇವತೆಯೇ ಆವಾಹನೆಯಾದಂತಿತ್ತು. ಬಾಗಿಲ ಬಳಿಯಿಂದ ಹೊರಟು ನಿಂತವನು ಮತ್ತೆ ತಿರುಗಿ ನಂದರ ಕಂಗಳಲ್ಲಿ ಕಣ್ಣಿಟ್ಟು ನೋಡಿ ‘ನಂದಾಧಮರೇ. ಅನ್ನ ಬಯಸಿ ಬಂದವನಿಗೆ ನಿರಾಕರಿಸಿದವರ ಆಯುಷ್ಯ ನಷ್ಟವಾಗುವುದು. ಭೋಜನ ಪಂಕ್ತಿಯಲ್ಲಿ ಸರಳವಾಗಿ ಕುಳಿತಿದ್ದ ನನ್ನ ಬ್ರಾಹ್ಮಣಾಧಮನೆಂದಿರಿ, ತುಚ್ಛನೆಂದು ಜರಿದು ಎಲ್ಲರೆದುರೂ ಅವಮಾನ ಮಾಡಿ ಹೊರದಬ್ಬಿದಿರಿ. ಮುಂದೊಂದು ದಿನ ನಿಮ್ಮನ್ನು ಸಂಹಾರ ಮಾಡಿ, ಕಾಲುಗಳಿಗೆ ಹಗ್ಗ ಕಟ್ಟಿ ಹದ್ದು, ನಾಯಿಗಳಿಗೆ ಆಹಾರವಾಗಿಸಿ ಬಿಸಾಡಿಸುವೆ’ ಎಂದ. ಅಷ್ಟಕ್ಕೇ ಸುಮ್ಮನಾಗದೇ ತನ್ನ ತಪಃ ಶಕ್ತಿಯ ಸಾಮಥ್ರ್ಯವನ್ನು ಅವರ ಮುಂದೆ ಬಿಚ್ಚಿಟ್ಟು ಕ್ಷಣಾರ್ಧದಲ್ಲಿಯೇ ಭಸ್ಮ ಮಾಡಿಬಿಡುವ ತಾಕತ್ತನ್ನು ಹೇಳಿಕೊಂಡ ಚಾಣಕ್ಯ ‘ದಂಡನೀತಿ ಶಾಸ್ತ್ರ ಪ್ರವೀಣನೇ ಆಗಿರುವುದು ನಿಜವಾದರೆ, ಪರಶುರಾಮ ದುಷ್ಟ ಕ್ಷತ್ರಿಯ ಸಂಕುಲವನ್ನು ನಾಶಮಾಡಿ ವಿಶ್ರಮಿಸಿಕೊಂಡಂತೆ ನಿಮ್ಮನ್ನೂ ಮೂಲೋತ್ಪಾಟನೆ ಮಾಡಿ ವಿಶ್ರಾಂತಿ ಪಡೆಯುವೆ. ಅಲ್ಲಿಯವರೆಗೂ ಕಾಳಸರ್ಪದಂತೆ ಬಿಚ್ಚಿಕೊಂಡಿರುವ ಈ ನನ್ನ ಶಿಖೆಯನ್ನು ಕಟ್ಟಲಾರೆ’ ಎಂದ ಚಾಣಕ್ಯ ಭವಿಷ್ಯವನ್ನು ನಂದರ ಮುಂದೆ ತೆರೆದಿಟ್ಟನೋ ಇಲ್ಲವೋ ಗೊತ್ತಿಲ್ಲ ನೆರೆದಿದ್ದ ಜನಕ್ಕಂತೂ ಹೊಸ ಕನಸುಗಳನ್ನು ಕಟ್ಟುಕೊಟ್ಟಿದ್ದ. ಈ ಸುದ್ದಿ ಕ್ಷಣ ಮಾತ್ರದಲ್ಲಿ ಕಾಡ್ಗಿಚ್ಚಿನಂತೆ ಊರಿಗೆಲ್ಲ ಹಬ್ಬಿತು. ನಂದರ ನಾಶಕ್ಕೆ ಮಹಾ ತಪಸ್ವಿ ಚಾಣಕ್ಯನೇ ನಿಂತಿರುವುದರಿಂದ ಇನ್ನು ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ವಿಶ್ವಾಸ ಜನಕ್ಕೆ ಬಲು ಬೇಗ ಬಂತು. ಚಾಣಕ್ಯನ ಮೊದಲ ಬಾಣ ಸರಿಯಾಗಿಯೇ ನಾಟಿತ್ತು. ಯುದ್ಧವನ್ನು ಗೆಲ್ಲಲು ಮೊದಲು ಸ್ಥಳೀಯರ ವಿಶ್ವಾಸ ಗೆಲ್ಲಬೇಕು. ರಾಜನಿಗೆ ಬಲವೇ ಅವನ ಜನತೆ. ಅವರೇ ನಂಬಿಕೆ ಕಳಕೊಂಡರೆಂದರೆ ರಕ್ತಪಾತವಿಲ್ಲದೆಯೇ ಯುದ್ಧ ಗೆಲ್ಲೋದು ಸುಲಭ!
ವಾಸ್ತವವಾಗಿ ತಪಸ್ವಿಗಳ ಕೋಪಕ್ಕೆ ತುತ್ತಾಗಲೆಂದೇ ಚಂದ್ರಗುಪ್ತನನ್ನು ಈ ಧರ್ಮಛತ್ರದ ಮೇಲ್ವಿಚಾರಕರಾಗಿ ನೇಮಿಸಿದ್ದರಂತೆ ನಂದರು. ಹಾಗಂತ ನಾರಾಯಣ ಶರ್ಮರ ಮುದ್ರಾ ಮಂಜೂಷದ ವಿವರಣೆ. ಚಂದ್ರಗುಪ್ತನ ಪರಿವಾರವಷ್ಟನ್ನೂ ನಂದರು ಸಮಯ ನೋಡಿ ಮೋಸದಿಂದ ಕೊಂದು ಬಿಟ್ಟರಲ್ಲ ಆಗ ಉಳಿದವನು ತರುಣ ಚಂದ್ರಗುಪ್ತನೊಬ್ಬನೇ. ಅವನನ್ನೂ ಕಾರಾಗೃಹದಲ್ಲಿಟ್ಟು ತಮ್ಮೆದುರಿಗೆ ನಿಲ್ಲದಂತೆ ಮಾಡಿಬಿಟ್ಟಿದ್ದರು. ಪಕ್ಕದ ರಾಜ್ಯದ ರಾಜನಿಗೆ ಈ ವಿಷಯ ಚಾರರ ಮೂಲಕ ತಿಳಿದು ಅವನೊಂದು ಉಪಾಯ ಹೂಡಿದ. ಏಕ ಎರಕದ ಬೋನಿನಲ್ಲಿ ಸಿಂಹವೊಂದನ್ನಿಟ್ಟು, ಬೋನು ಮುರಿಯದೇ ಅದನ್ನು ಹೊರತರಬೇಕೆಂದು ಸವಾಲೆಸೆದು ಪಾಟಲೀಪುತ್ರಕ್ಕೆ ಕಳಿಸಿದ. ಬೋನಿನೊಂದಿಗೆ ಬಂದವ ಈಟಿಯಿಂದ ಮಾಂಸ ಕೊಟ್ಟರೆ ಕಚ್ಚಿ ಬಾಲ ಅಲಗಾಡಿಸುತ್ತಿದ್ದ ಸಿಂಹ ಎದೆ ನಡುಕ ಹುಟ್ಟಿಸುತ್ತಿತ್ತು. ಇಡಿಯ ರಾಜ್ಯದಲ್ಲಿ ಸವಾಲು ಸ್ವೀಕರಿಸುವವರು ಯಾರೂ ಇರಲಿಲ್ಲ. ಗೆದ್ದವನಿಗೆ ಬಹುಮಾನ ಕೊಡುವ ಡಂಗುರದಿಂದಲೂ ಲಾಭವಾಗಲಿಲ್ಲ. ಕಾರಾಗೃಹದಲ್ಲಿದ್ದ ಚಂದ್ರಗುಪ್ತ ಪ್ರಯತ್ನ ಮಾಡುವೆನೆಂದ. ಬೋನಿನೊಳಗಿರುವುದು ಮೇಣದ ಸಿಂಹ. ಅದರ ಬಾಯೊಳಗಿರುವ ಕಬ್ಬಿಣವನ್ನು ಈಟಿಯೊಳಗಿನ ಆಯಸ್ಕಾಂತ ಸೆಳೆಯುತ್ತಿದೆಯೆಂದು ಅರಿವಾದೊಡನೆ ಚಂದ್ರಗುಪ್ತ ಈಟಿ ಕಸಿದುಕೊಂಡು ಸಿಂಹವನ್ನು ಹಿಡಿದ. ಒಳಗೇ ಗರಗರನೇ ತಿರುಗಿಸಿ ಬೆಂಕಿಯ ಶಾಖಕ್ಕೆ ಸಿಂಹ ಕರಗುವಂತೆ ಮಾಡಿದ. ಅವನ ಸಾಹಸ ಮತ್ತು ಬುದ್ಧಿಮತ್ತೆ ಜನಮಾನಸದಲ್ಲಿ ಅಚ್ಚೊತ್ತಿತು.
ಚಂದ್ರಗುಪ್ತ ಬದುಕಿರುವ ಸುದ್ದಿಯೇ ಜನರಿಗೆ ರೋಮಾಂಚನ ಉಂಟುಮಾಡಿತ್ತು. ಈಗ ಅವನ ಬುದ್ಧಿ ಮತ್ತೆಯನ್ನು ಕಣ್ಣಾರೆ ಕಂಡ ಪುರ ಜನರು ಆತನೇ ಮಗಧ ಸಾಮ್ರಾಜ್ಯದೊಡೆಯನಾದರೆ ಒಳಿತೆಂದು ಕನಸು ಕಾಣತೊಡಗಿದರು! ಜನರ ಭಾವನೆಗಳ ಬಿಸಿ ತಾಕಿದೊಡನೆ ಜಾಗೃತರಾದ ನಂದರು ಚಂದ್ರಗುಪ್ತನನ್ನು ಮತ್ತೆ ಜೈಲಿಗೆ ಕಳಿಸದೇ ಧರ್ಮಛತ್ರ ನೋಡಿಕೊಳ್ಳುವ ಜವಾಬ್ದಾರಿ ವಹಿಸಿದರು. ಕ್ಷತ್ರಿಯನಾದ ಆತ ಬಹುಕಾಲ ಶ್ರದ್ಧೆಯಿಂದ ಈ ಕಾರ್ಯ ಮಾಡಲಾಗದೇ ಅಲ್ಲಿಗೆ ಬರುವ ತಪಸ್ವಿಗಳ ಶಾಪಕ್ಕೆ ಸಿಕ್ಕಿ ಬಲಿಯಾಗಿಬಿಡುವನೆಂಬ ದೂರದೃಷ್ಟಿ ಅದು! ವಿಧಿ ವಿಪರೀತವಾಗಿತ್ತು. ಅದು ನಂದರ ವಿರುದ್ಧವೇ ತಿರುಗಿ ಬಿದ್ದಿತ್ತು. ಅದೂ ಕಾಲವಾಗಿ ಕಾಡಬಲ್ಲ, ಕಾಳ ಸರ್ಪದಂತೆ ಶಿಖೆ ಬಿಚ್ಚಿಟ್ಟುಕೊಂಡು ಭುಸುಗುಡುತ್ತಿರುವ ಚಾಣಕ್ಯನ ರೂಪದಲ್ಲಿ!
ಅಪಮಾನಿತನಾದ ಚಾಣಕ್ಯ ಹೊರಗೆ ಕೋಪಿಷ್ಟನಾದಂತೆ ಕಂಡರೂ ಒಳಗೆ ಪರಮ ಶಾಂತ ಸಲಿಲ ಧಾರೆಯಂತಿದ್ದ. ‘ತಾನು ದೇಹವಲ್ಲ, ಆತ್ಮ’ ಎಂದರಿಯದ ಬ್ರಾಹ್ಮಣನಲ್ಲ ಆತ. ತನ್ನ ಗೌರವ, ಸಾಧನೆಗಳು ಶಿಖೆಯಲ್ಲಡಗಿಲ್ಲವೆಂಬ ಸತ್ಯವೂ ಅವನಿಗೆ ಗೊತ್ತಿರಲಿಲ್ಲವೆಂದಲ್ಲ. ನಂದರ ಮೂಲೋತ್ಪಾಟನೆಗಾಗಿ ಆತ ಮಹಾ ನಾಟಕವೊಂದನ್ನು ರಚಿಸಿದ್ದ ಅಷ್ಟೇ. ಕಾಕತಾಳೀಯವೋ ಏನೋ? ಅಂದೇ ಸುರಿದಿದ್ದ ಮಿಂಚು-ಗುಡುಗು ಸಹಿತ ಮಳೆ ಭೂಮಿಯನ್ನು ತಣಿಸಿತ್ತು, ನಂದರೊಳಗೆ ಹೆದರಿಕೆಯ ಬೆಂಕಿ ಭುಗಿಲೆದ್ದಿತ್ತು. ಚಾಣಕ್ಯನ ಶಾಪಕ್ಕೆ ಪ್ರಕೃತಿಯ ಸ್ಪಂದನೆಯಿದು ಎಂದೇ ಎಲ್ಲರೂ ಭಾವಿಸಿದ್ದರು. ಯುದ್ಧಕ್ಕೆ ಮುನ್ನವೇ ಶತ್ರು ಹೆದರಿಕೆಯಿಂದ ಅರ್ಧ ಸತ್ತಿದ್ದ!
ಪಾಟಲೀಪುತ್ರದ ಹೊರಗೆ ಹಾಯಾಗಿ ಕುಳಿತ ಚಾಣಕ್ಯ ಮುಂದಿನ ಕಾರ್ಯಚಟುವಟಿಕೆಯ ಬಗ್ಗೆ ಲೆಕ್ಕಾಚಾರ ಹಾಕುವಾಗಲೇ ಏದುಸಿರು ಬಿಡುತ್ತ ಚಂದ್ರಗುಪ್ತ ಧಾವಿಸಿ ಬಂದ. ತನ್ನ ಮೇಲುಸ್ತವಾರಿಯ ಧರ್ಮಛತ್ರದಲ್ಲಿ ನಡೆದ ಈ ದುರದೃಷ್ಟಕರ ಘಟನೆಯಿಂದ ಆತನ ಮನಸ್ಸಿಗೆ ಗಾಸಿಯಾಗಿತ್ತು. ಕಾಲಿಗೆ ಬಿದ್ದು ಕ್ಷಮೆ ಕೇಳಿದವನನ್ನು ಆಚಾರ್ಯರು ಮೈದಡವಿ ಎಬ್ಬಿಸಿದರು. ‘ಶತ್ರುಗಳ ಭಯ ಬಿಡು. ನಂದರನ್ನು ನಿಗ್ರಹಿಸಿ ಎಲ್ಲಾ ಸಾಮಂತರಾಜರುಗಳ ಮೂಲಕ ನಿನಗೆ ಕಪ್ಪಕಾಣಿಕೆ ಸಿಗುವಂತೆ ಮಾಡಿಸಿ, ಅಖಂಡ ಆಯರ್ಾವರ್ತಕ್ಕೆ ನಿನ್ನನ್ನು ಪಟ್ಟಾಭಿಷಿಕ್ತನಾಗಿಸಿದ ನಂತರ ನಾನು ತಪೋವನಕ್ಕೆ ಹೊರಟುಬಿಡುತ್ತೇನೆ. ನೀನು ಸಿದ್ಧನಾಗಿರು’ ಎಂದರು.

4
ನಿಜವಾದ ಬ್ರಾಹ್ಮಣವರ್ಣದ ಪ್ರತೀಕರಾಗಿ ನಿಂತಿದ್ದವರು ಚಾಣಕ್ಯರು ಮಾತ್ರ. ಉಳಿದವರೆಲ್ಲ ನಂದರ ಸೇವೆಯಲ್ಲಿ ಲಾಭವನ್ನು ಕಾಣುತ್ತ ಧರ್ಮಗ್ಲಾನಿಯಾಗುವುದನ್ನು ಕಂಡೂ ಕಾಣದಂತೆ ಹೀನ-ದೀನ, ದಾರಿದ್ರ್ಯದ ಬದುಕು ಸವೆಸುತ್ತಿದ್ದರು! ಬಹುತೇಕರು ಈಗಲೂ ಹಾಗೆಯೇ. ಊಟದ ಪಂಕ್ತಿಯಲ್ಲಿ ಮಾತ್ರ ಬ್ರಾಹ್ಮಣರು. ಆಚರಣೆಯ ವಿಚಾರಕ್ಕೆ ಬಂದಾಗ ಶೂನ್ಯ. ಆದರೆ ಆಚಾರ್ಯ ಚಾಣಕ್ಯರು ಲೋಕದ ಸಂಕಟವನ್ನು ಸಹಿಸಲಾಗದೇ ತಮ್ಮೆಲ್ಲಾ ಪಾಂಡಿತ್ಯವನ್ನು ರಾಷ್ಟ್ರ ನಿಮರ್ಾಣ ಕೈಂಕರ್ಯಕ್ಕೆ ಧಾರೆ ಎರೆದರು. ಚಂದ್ರಗುಪ್ತನನ್ನು ಪಟ್ಟಕ್ಕೆ ಕೂರಿಸಿ ಸ್ವಲ್ಪ ಕಾಲ ಮಂತ್ರಿ ಪದವಿಯಲ್ಲಿದ್ದು ಅವನಿಗೆ ಮಾರ್ಗದರ್ಶನ ಮಾಡಿದರು. ಹಾಗೆ ಮಂತ್ರಿಯಾಗಿರುವಾಗಲೂ ರಾಜನ ಸವಲತ್ತುಗಳನ್ನು ಅನುಭವಿಸದೇ ನದಿ ತೀರದಲ್ಲಿ ಕುಟೀರದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಿದ ಮಹಾ ಮೇಧಾವೀ ಆತ. ಬ್ರಾಹ್ಮಣನ ಬೌದ್ಧಿಕ ಸಾಮಥ್ರ್ಯ ರಾಷ್ಟ್ರ ನಿಮರ್ಾಣಕ್ಕೆ ಮಾತ್ರ ಎಂಬುದನ್ನು ಸಮರ್ಥವಾಗಿ ಜಗದ ಮುಂದೆ ತೆರೆದಿಟ್ಟವರು ಚಾಣಕ್ಯ!
ಚಂದ್ರಗುಪ್ತನೊಂದಿಗೆ ರಾಜ್ಯ ವಿಚಾರವಾಗಿ ಚಚರ್ಿಸಲಾರಂಭಿಸಿದ ಚಾಣಕ್ಯ ನಂದರಿಗೆ ಆಪ್ತರಾರು? ದ್ವೇಷಿಗಳಾರೆಂದು ತಿಳಿದುಕೊಂಡು ಸೇನೆಯಲ್ಲಿ ಚಂದ್ರಗುಪ್ತನಿಗೆ ಸಹಾಯಕರಾಗಬಲ್ಲ ಮಿತ್ರರಾರೆಂಬುದನ್ನು ಅರಿತುಕೊಂಡ. ಅವನಿಗೀಗ ಮುಂದಿನ ನಡೆ ಸ್ಪಷ್ಟವಾಗತೊಡಗಿತ್ತು. ಕಾಶ್ಮೀರ, ಮಲಯ, ಸಿಂಧು, ಪಾರಸೀಕ, ಕಾಂಭೋಜ, ಚೀನ-ಹೂಣ ರಾಜರುಗಳ ಮೇಲೆ ಹಿಡಿತ ಹೊಂದಿರುವ ಪರ್ವತ ರಾಜ್ಯದ ದೊರೆ ಪರ್ವತೇಶ್ವರ ನಂದರೊಂದಿಗೆ ಮಿತೃತ್ವದಿಂದಿಲ್ಲವೆಂಬುದು ಅರಿವಿಗೆ ಬಂದಿತ್ತು. ಪರ್ವತೇಶ್ವರನದು ಮಗಧದೊಂದಿಗೆ ಶತ್ರುತ್ವವಲ್ಲದಿದ್ದರೂ ಎರಡೂ ಪಕ್ಷದ ನಡುವೆ ಪ್ರೇಮಪೂರ್ಣ ವಾತಾವರಣವಿರಲಿಲ್ಲ. ಹೀಗಾಗಿಯೇ ಚಂದ್ರಗುಪ್ತನ ಪತ್ತೆ ಹಚ್ಚಲೆಂದು ಆತ ಮೇಣದ ಸಿಂಹವನ್ನು ಕಳಿಸಿದ. ಈ ತ್ವೇಷಮಯವಾದ ವಾತಾವರಣದ ಲಾಭ ಪಡೆಯಲೇಬೇಕೆಂಬುದು ಚಾಣಕ್ಯನ ತಲೆಯಲ್ಲಿ ಹುಳುವಾಗಿ ಕೊರೆಯಲಾರಂಭಿಸಿತು. ಚಂದ್ರಗುಪ್ತನ ತಂದೆಯ ಆಪ್ತರಾಗಿದ್ದು ಈಗ ಸೇನೆಯ ಸೇನಾಪತಿಗಳಾಗಿರುವ ಬಾಗುರಾಯಣನೇ ಮೊದಲಾದವರು ಸೂಕ್ಷ್ಮ ಸಂದರ್ಭದಲ್ಲಿ ಚಂದ್ರಗುಪ್ತನೊಂದಿಗೆ ನಿಲ್ಲುವ ವಿಶ್ವಾಸವಿತ್ತು. ಚಾಣಕ್ಯನೆಂಬ ಸೂಪರ್ ಕಂಪ್ಯೂಟರಿನೊಳಗೆ ಯೋಜನೆಗಳು ಮಿಂಚಿನ ವೇಗದಲ್ಲಿ ಸಿದ್ಧವಾಗುತ್ತಿದ್ದವು. ಇಡಿಯ ಯೋಜನೆ ಹಾಳುಮಾಡಬಹುದಾದ ಕಣ್ಣೆದುರಿಗಿದ್ದ ‘ವೈರಸ್ಸು’ ಒಂದೇ ಒಂದು. ನಂದರ ಮಹಾಮಾತ್ಯ ರಾಕ್ಷಸ!
ಅಮಾತ್ಯ ರಾಕ್ಷಸನೆಂದೇ ಪ್ರಸಿದ್ಧಿಯಾದ ಸುಬುದ್ಧಿ ಶರ್ಮ ಚಾಣಕ್ಯರಿಗೆ ಪ್ರತಿಸ್ಪಧರ್ಿಯಾಗಿಯೇ ನಿಂತವನು. ಆತನ ಕುರಿತಂತೆಯೂ ಇತಿಹಾಸಕಾರರಲ್ಲಿ ಅಭಿಪ್ರಾಯ ಭೇದಗಳು ಸಾಕಷ್ಟಿವೆ. ಆದರೆ ಆತನ ಕಾರ್ಯಕುಶಲತೆಯ ಬಗ್ಗೆ ಮಾತ್ರ ಎಲ್ಲರಿಗೂ ಒಮ್ಮತ. ಅವನ ಚಾಕಚಕ್ಯತೆಯಿಂದಾಗಿಯೇ ಮಗಧ ಸಿಂಹಾಸನ ಅಷ್ಟು ದೀರ್ಘಕಾಲ ಬಲಾಢ್ಯವಾಗಿ ಉಳಿದಿದ್ದು. ಸುತ್ತಲೂ ಪರ್ವತೇಶ್ವರನಂತಹ ಬಲಿಷ್ಠ ರಾಜರಿದ್ದರೂ ಅವರು ಮಗಧದ ಮೇಲೆ ಏರಿ ಹೋಗುವ ಧೈರ್ಯ ಮಾಡದಿದ್ದುದಕ್ಕೆ ರಾಕ್ಷಸನೇ ಕಾರಣ. ಅವನ ಗೂಢಚಯರ್ಾ ನೈಪುಣ್ಯ, ಯೋಜನೆಗಳಲ್ಲಿನ ಚಾಕಚಕ್ಯತೆ ಅವನನ್ನು ವಿಶಿಷ್ಟ ಸ್ಥಾನದಲ್ಲಿ ನಿಲ್ಲಿಸಿತ್ತು. ಅಷ್ಟೇ ಅಲ್ಲ. ಯುದ್ಧೋನ್ಮುಖರಾದರೆ ಪ್ರತಿ ಪಕ್ಷದ ಲಕ್ಷಮಂದಿಯನ್ನಾದರೂ ಕ್ಷೊಭೆಗೊಳಪಡಿಸಬಲ್ಲ ಸಾಮಥ್ರ್ಯವುಳ್ಳವನೆಂದು ಅವನ ಬಗ್ಗೆ ಹಾಡಿ ಹೊಗಳಿದ್ದಾರೆ ಮುದ್ರಾ ಮಂಜೂಷದಲ್ಲಿ. ರಾಜನಿಗೆ ಅವನ ನಿಷ್ಠೆ ಎಂತಹುದೆಂದರೆ ಆತ ತಂದ ಎಲ್ಲಾ ಯೋಜನೆಗಳನ್ನೂ ಸಮರ್ಥವಾಗಿ ಜಾರಿಗೆ ತರಲು ಹಗಲು-ರಾತ್ರಿ ಶ್ರಮಿಸುತ್ತಿದ್ದ. ಜನರ ಮೇಲೆ ತೆರಿಗೆಯ ಭಾರ ಹೇರುವ ನಂದರು ಅದನ್ನು ಸಂಗ್ರಹಿಸಿ ಬೊಕ್ಕಸ ತುಂಬುವ ಜವಾಬ್ದಾರಿಯನ್ನು ಅಮಾತ್ಯರ ಕೈಲಿಟ್ಟು ತಾವು ಹುಡುಗಿಯರ ಮೇಳದಲ್ಲಿ ಮೈಮರೆತು ಕೂತುಬಿಡುತ್ತಿದ್ದರು. ಈ ಅವೈಜ್ಞಾನಿಕ ತೆರಿಗೆಯನ್ನು ಬಲು ಜತನದಿಂದ ಜನರಿಂದ ವಸೂಲಿ ಮಾಡುತ್ತಿದ್ದರಿಂದ ರಾಜರ ಪಾಲಿಗೆ ದಕ್ಷನಾದ ಅಮಾತ್ಯ ಜನರ ಪಾಲಿಗೆ ಕ್ರೂರಿಯಾದ, ಕೋಪಕ್ಕೆ ಜನ ಕರೆದ ರಾಕ್ಷಸನೆಂಬ ಹೆಸರೇ ಅವನ ನಿಜನಾಮವಾಗಿಬಿಟ್ಟಿತ್ತು. ಅವನ ಈ ಹೆಸರೇ ಅನೇಕರಲ್ಲಿ ಹೆದರಿಕೆ ಹುಟ್ಟಿಸಿಬಿಟ್ಟಿತ್ತು. ಕಾಲಕ್ರಮದಲ್ಲಿ ಅಮಾತ್ಯ ರಾಕ್ಷಸನಿಗೆ ಅರಿವಿಗೆ ಬಾರದಂತೆ ಯಾವ ಕೆಲಸವನ್ನೂ ಮಾಡುವುದು ಕಷ್ಟ. ಆತ ನೇಮಿಸಿದ ಚಾರರೂ ಊರತುಂಬಾ ಮತ್ತು ಹೊರನಾಡಿನಲ್ಲೂ ಹರಡಿಕೊಂಡಿದ್ದಾರೆಂದು ಜನ ನಂಬಲಾರಂಭಿಸಿದರು!
ಒಟ್ಟಾರೆ ಚಂದ್ರಗುಪ್ತನನ್ನು ಪಟ್ಟಕ್ಕೇರಿಸಿ ಆಯರ್ಾವರ್ತವನ್ನು ಒಂದುಗೂಡಿಸುವ ಚಾಣಕ್ಯನ ಹೋರಾಟ ಅಮಾತ್ಯ ರಾಕ್ಷಸನ ಕಣ್ತಪ್ಪಿಸಿ ಮಾಡಿದ ಸಂಘಟನೆಯಷ್ಟೇ! ಚಾಣಕ್ಯರು ಆರಂಭದಲ್ಲಿಯೇ ನಿಶ್ಚಯಿಸಿದ್ದರು, ಯುದ್ಧವನ್ನು ರಕ್ತರಹಿತವಾದ ಪ್ರೀತಿಯಿಂದಲೇ ಗೆಲ್ಲಬೇಕು, ಕುಟಿಲ ತಂತ್ರಗಳಿಂದ ಜಯಗಳಿಸಿ ನಂದರ ಮೂಲೋತ್ಪಾಟನೆ ಮಾಡಬೇಕು; ಆಯರ್ಾವರ್ತವನ್ನು ಒಂದುಗೂಡಿಸಬೇಕು ಮತ್ತು ಹೀಗೆ ನಿಮರ್ಿತ ಚಂದ್ರಗುಪ್ತನ ಸಾಮ್ರಾಜ್ಯಕ್ಕೆ ಅಮಾತ್ಯ ರಾಕ್ಷಸನೇ ಮಂತ್ರಿಯಾಗಿರಬೇಕು. ಹೌದು. ಚಾಣಕ್ಯರ ಆಲೋಚನೆಗಳಿಗೆ ಅವರ ಆಲೋಚನೆಗಳೇ ಸರಿಸಾಟಿ.
ಗೂಢಚಾರರ ಮೂಲಕವೇ ಶತ್ರುರಾಜರುಗಳ ಗುಟ್ಟನ್ನೂ ಅರಿಯುತ್ತಿದ್ದ ಅಮಾತ್ಯ ರಾಕ್ಷಸನ ವಿರುದ್ಧ ಚಾಣಕ್ಯನ ದಾಳ ಪ್ರಯೋಗ ಶುರುವಾಯ್ತು. ಗುರುಕುಲದಲ್ಲಿ ಸಹಪಾಠಿಯಾಗಿದ್ದು ಈಗ ಆಶ್ರಮವೊಂದರಲ್ಲಿ ಶಿಷ್ಯರೊಂದಿಗೆ ಹಾಯಾಗಿ ಕಾಲಕಳೆಯುತ್ತಿರುವ ಇಂದುಶರ್ಮನನ್ನು ಚಾಣಕ್ಯ ಭೇಟಿಯಾದ. ಅವನನ್ನು ರಾಷ್ಟ್ರಕಾರ್ಯದ ತನ್ನ ಮಾತುಗಳಿಂದ ಉದ್ದೀಪಿಸಿದ. ಆಯರ್ಾವರ್ತವನ್ನು ಒಂದು ಗೂಡಿಸುವ ಕಲ್ಪನೆಯನ್ನು ಹರಿಬಿಟ್ಟು ಇಂದುಶರ್ಮ ಬೌದ್ಧ ಸನ್ಯಾಸಿಯ ವೇಷ ಧರಿಸುವಂತೆ ಪ್ರೇರೇಪಿಸಿದ. ಜೀವಸಿದ್ಧಿಯಾಗಿ ತನ್ನ ಶಿಷ್ಯರಿಗೂ ಸೂಕ್ತ ಹೆಸರು ಕೊಟ್ಟು ಪಾಟಲೀಪುತ್ರದಲ್ಲಿರುವಂತೆ ಕೇಳಿಕೊಂಡ. ಅಮಾತ್ಯ ರಾಕ್ಷಸ ಮತ್ತು ಇತರೆ ಅಧಿಕಾರಿಗಳಿಗೆ ಜ್ಯೋತಿಷ್ಯವೇ ಮೊದಲಾದ ವಿದ್ಯಾ ಕೌಶಲಗಳಿಂದ ಬೆರಗುಗೊಳಿಸುತ್ತಾ ಆಪ್ತರಾಗಿ ರಾಜಕಾರ್ಯಗಳನ್ನು ತಿಳಿದು, ನಮಗೆ ತಿಳಿಸಿದರೆ ಸಾಕು ಎಂದ.
ಸ್ವಲ್ಪ ಕಸಿವಿಸಿಯಾಯ್ತು ಇಂದುಶರ್ಮನಿಗೆ. ವೈದಿಕ ಪರಂಪರೆಯ ಆಚಾರ್ಯರಾಗಿ ಈಗ ಸೈದ್ಧಾಂತಿಕ ವೈರಿಯಾದ ಬುದ್ಧಾನುಯಾಯಿಯ ವೇಷ ಹಾಕಬೇಕಲ್ಲ ಎಂಬುದೇ ಸಂಕಟ. ಆದರೆ ಬೌದ್ಧಭಿಕ್ಷುಗಳೊಂದಿಗಿನ ಚಚರ್ೆಗಾಗಿ ಅವರ ಪಂಥವನ್ನೂ ಅರೆದು ಕುಡಿದ ಇಂದುಶರ್ಮನೇ ಈ ಕಾರ್ಯಕ್ಕೆ ಸೂಕ್ತವೆಂದು ಆಚಾರ್ಯರು ನಿಶ್ಚಯಿಸಿಯಾಗಿತ್ತು ಅಷ್ಟೇ. ಜೀವಸಿದ್ಧಿ ತನ್ನ ಬುದ್ಧಿ ಬಳಸಿ ಬಲುಬೇಗ ಅಮಾತ್ಯ ರಾಕ್ಷಸರಿಗೆ ಆಪ್ತರಾದುದೇ ಅಲ್ಲದೇ ಅರಮನೆಗೆ ಹತ್ತಿರದಲ್ಲಿಯೇ ಉಳಿದುಕೊಂಡು ಚಾಣಕ್ಯನ ಪಾಲಿಗೆ ಮಾಹಿತಿ ಕೋಶವಾದ. ತನ್ನ ಬುದ್ಧಿವಂತಿಕೆಯಿಂದಲೇ ರಾಜ್ಯದ ರಕ್ಷಣೆ ಮಾಡಿದ್ದ ಅಮಾತ್ಯ ರಾಕ್ಷಸನಿಗೆ ಈ ಸುಳಿವೂ ಹತ್ತಲಿಲ್ಲ.
ಚಾಣಕ್ಯರ ಆಲೋಚನೆಗಳು ದಶದಿಕ್ಕುಗಳಲ್ಲಿ ಹರಿಯಲಾರಂಭಿಸಿತ್ತು. ರಾಕ್ಷಸನ ಸುತ್ತಲೂ ತನ್ನ ಗೂಢಚಾರರನ್ನು ನೇಮಿಸಿ, ಪರ್ವತ ರಾಜನ ಒಲಿಸಿಕೊಳ್ಳುವ ಮಾರ್ಗದ ಕುರಿತಂತೆ ಧ್ಯಾನಿಸಲಾರಂಭಿಸಿದರು. ಆಗಲೇ ಹೊಳೆದಿದ್ದು ಆ ಉಪಾಯ. ಆಚಾರ್ಯರ ಕಂಗಳಲ್ಲಿ ಮಿಂಚು ಕಂಡಿತು.

Comments are closed.