ವಿಭಾಗಗಳು

ಸುದ್ದಿಪತ್ರ


 

ಸರ್ಟಿಫಿಕೇಟುಗಳ ಗೊಡವೆಯಿಲ್ಲದ ಶಿಕ್ಷಣ ಯಾವಾಗ?

ನಮ್ಮ ಶಿಕ್ಷಣ ಮಟ್ಟದಲ್ಲಿ ನ್ಯೂನತೆಗಳೇನು ಎಂದು ಅನೇಕರು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಮೊದಲನೆಯದೇ ಅಂಕಪಟ್ಟಿ ವ್ಯವಸ್ಥೆ. ಹೆಚ್ಚು ಅಂಕ ಪಡೆದವನು ಹೆಚ್ಚು ಬುದ್ಧಿವಂತ ಎಂದು ವಗರ್ೀಕರಿಸುವುದೇ ತಪ್ಪು. ಹೆಚ್ಚು ಅಂಕ ಪಡೆದವ ಈ ನಾಲ್ಕಾರು ವಿಷಯಗಳನ್ನು ಸೂಕ್ತವಾಗಿ ಒಪ್ಪಿಸಬಲ್ಲವನಷ್ಟೇ. ಆತ ಆಟದಲ್ಲಿ, ಇತರೆ ಕಲೆಗಳಲ್ಲಿ ಬೇರೆಯವರಿಗಿಂತ ದಡ್ಡನಿರಬಹುದು. ಇದನ್ನು ಹೇಗೆ ತಳ್ಳಿ ಹಾಕುವಿರಿ?

facebook_1516586472029ಸಕರ್ಾರದ ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾಕರ್ಿನ ಮೈದಾನದಲ್ಲಿ ಬಲು ದೊಡ್ಡ ಸಂಖ್ಯೆಯಲ್ಲಿ ಸಕರ್ಾರಿ ನೌಕರರು ಸೇರಿದ್ದರು. ನೌಕರರಿಗೆ ಕೊಡಬೇಕಾದ ಪಿಂಚಣಿ ಹಣವನ್ನು ತಡೆದು ಅದನ್ನು ಮ್ಯೂಚ್ಯುವಲ್ ಫಂಡ್ಗಳಲ್ಲಿ, ಷೇರು ಮಾರುಕಟ್ಟೆಗಳಲ್ಲಿ ಹೂಡುವ ಬಲು ಕೆಟ್ಟ ಆಲೋಚನೆಯ ಭಾಗ ಈ ಹೊಸ ಪಿಂಚಣಿ ಯೋಜನೆ. ಯಾರಿಗೆ ಶೇರು ಮಾರುಕಟ್ಟೆಯ ಮೇಲೆ ಅಭಿಮಾನ, ಪ್ರೀತಿ, ವಿಶ್ವಾಸವಿದೆಯೋ ಅವರಿಗೆಲ್ಲ ಇದು ಬಲು ಆನಂದದಾಯಕ ಯೋಜನೆ. ಆದರೆ ಈ ದೇಶದ ತೊಂಭತ್ತೊಂಭತ್ತು ಪ್ರತಿಶತ ಜನರಿಗೆ ಈ ಮಾರುಕಟ್ಟೆ ಜೂಜಾಟಕ್ಕಿಂತ ಭಿನ್ನವಲ್ಲ. ಇವರುಗಳು ಇದನ್ನು ಒಪ್ಪುವುದಿರಲಿ; ಯೋಚಿಸುವುದೂ ಕಷ್ಟ. ಬಹುಶಃ ಶೇರು ಮಾರುಕಟ್ಟೆಯ ರುಚಿ ತೋರಿಸುವ ಸಕರ್ಾರಗಳ ಪ್ರಯತ್ನವಿದ್ದರೂ ಇರಬಹುದು. ಈ ಬಗೆಯ ತಲೆಕೆಟ್ಟ ಐಡಿಯಾ ಸಕರ್ಾರಕ್ಕೆ ಬರೋದಾದ್ರೂ ಎಲ್ಲಿಂದ ಅಂತ ಯಾವಾಗಲಾದರೂ ಯೋಚಿಸಿದ್ದೀರಾ? ಮೂಲವನ್ನು ಕೆದಕಿದ್ದೀರಾ? ಇವೆಲ್ಲ ನಮಗೆ ಸಾಲ ಕೊಟ್ಟ ದೇಶಗಳ ಆಗ್ರಹ ಮತ್ತು ಐಡಿಯಾಗಳಷ್ಟೇ. ನಾವು ನಮ್ಮ ಎಲ್ಲಾ ಕ್ಯಾಪಿಟಲ್ ಖಚರ್ುಗಳನ್ನು ನಿಭಾಯಿಸುವುದು ಸಾಲದಲ್ಲಿಯೇ. ರಾಜ್ಯದ ರಸ್ತೆಗಳು, ಅಣೇಕಟ್ಟುಗಳು, ಹೊಸ ಕಾಲೇಜು ನಿಮರ್ಾಣ, ವಿಶ್ವವಿದ್ಯಾಲಯಗಳನ್ನು ಮೇಲ್ದಜರ್ೆಗೇರಿಸುವುದು ಇವೆಲ್ಲವೂ ಸಾಲದ ಹಣದಲ್ಲಿಯೇ ನಡೆಯುವಂಥದ್ದು. ರಾಜ್ಯದಲ್ಲಿ ಸಂಗ್ರಹವಾದ ತೆರಿಗೆ ಹಣವನ್ನು ಸಂಬಳ ಕೊಡುವುದಕ್ಕೆ ಬಳಸಿಕೊಂಡು ಉಳಿದದ್ದನ್ನು ಅನ್ನಭಾಗ್ಯ, ಶಾದಿಭಾಗ್ಯ, ಇಂದಿರಾ ಕ್ಯಾಂಟೀನುಗಳಿಗೆಂದು ಖಚರ್ು ಮಾಡಿಬಿಡುತ್ತೇವೆ. ಉಚಿತವಾದ ಕೊಡುಗೆ ನೀಡಲೆಂದು ನೌಕರರ ಹೊಟ್ಟೆಯ ಮೇಲೆ ಹೊಡೆಯಲೂ ಹಿಂಜರಿಯಲಾರೆವು ನಾವು. ಹೀಗಾಗಿಯೇ ಈ ಹೋರಾಟ ಬರಿಯ ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೊಳಿಸಲೆಂದು ಅಲ್ಲ, ಬದಲಿಗೆ ಜನರ ಬಯಕೆಯೇ ಇಲ್ಲದೇ ಅನವಶ್ಯಕವಾಗಿ ಭಾಗ್ಯಗಳನ್ನು ಕರುಣಿಸುವ ಪ್ರಭುತ್ವದ ಧಾಷ್ಟ್ರ್ಯದ ವಿರುದ್ಧ ಆಗಬೇಕು. ಪ್ರಧಾನಿಯೋ, ಮುಖ್ಯಮಂತ್ರಿಯೋ ಮನಸೋ ಇಚ್ಛೆ ಜನರ ಹಣವನ್ನು ಖಚರ್ು ಮಾಡುವುದಕ್ಕೆ ಕಡಿವಾಣ ಹಾಕಲಿಲ್ಲವೆಂದರೆ ಹೊಸ ಪಿಂಚಣಿ ಯೋಜನೆಯನ್ನು ತಡೆ ಹಿಡಿಯುವುದು ಹೆಚ್ಚು ಕಡಿಮೆ ಅಸಾಧ್ಯ.

ಕಾಡುವ ಸಮಸ್ಯೆ ಅದೊಂದೇ ಅಲ್ಲ. ಈ ಹೋರಾಟದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದು ಸಕರ್ಾರಿ ಶಿಕ್ಷಕರೇ. ಅದಾಗಲೇ ಸಕರ್ಾರಿ ಶಾಲೆಗಳನ್ನು ದಾಸೋಹ ಕೇಂದ್ರವಾಗಿಸಿದೆ ಸಕರ್ಾರ. ಸೈಕಲ್ ವಿತರಣೆಯ ನೆಪದಲ್ಲಿ ಹಿಂದಿನ ಸಕರ್ಾರ ಸೈಕಲ್ ಶಾಪ್ ಆಗಿಸಿತ್ತು. ಚುನಾವಣೆ ಬಂದರೆ ಶಿಕ್ಷಕರು ಬೇಕು, ಜನಗಣತಿಯ ಹೊತ್ತಲ್ಲೂ ಅವರು ಬೇಕು. ಸ್ಪಷ್ಟವಾಗಿ ಹೇಳಬೇಕೆಂದರೆ ಪ್ರತಿಯೊಂದರ ಲೆಕ್ಕ ಬರೆದಿಟ್ಟು ಮೇಲಧಿಕಾರಿಗಳಿಗೆ ಒಪ್ಪಿಸುವ ಗುಮಾಸ್ತನ ಕೆಲಸ ಅವರದ್ದು. ನನ್ನ ಅಂದಾಜಿನ ಪ್ರಕಾರ ಈ ನಾಡಿನಲ್ಲಿ ಪೊಲೀಸರ ನಂತರ ಹೆಚ್ಚು ಶೋಷಣೆಗೊಳಗಾದವರು ಶಿಕ್ಷಕರೇ. ಸಮಾಜದಿಂದ ಬೈಗುಳಗಳನ್ನು ಕೇಳುವಲ್ಲಿಯೂ ಇವೆರಡೂ ವೃತ್ತಿ ಬಾಂಧವರೇ ಮುಂದು. ಈಗ ಸಮಾಜದ ಬೈಗುಳಗಳಷ್ಟೇ ಅಲ್ಲದೇ ಸಕರ್ಾರ ಪಿಂಚಣಿಯಲ್ಲೂ ಕೈಯ್ಯಾಡಿಸುವುದು ನಿಜಕ್ಕೂ ದುರಂತವೇ ಸರಿ.

2

ಶಿಕ್ಷಣದ ಅತ್ಯಂತ ಸದೃಢ ಸ್ತಂಭವೇ ಶಿಕ್ಷಕ. ಆದರೆ ಅವನನ್ನು ಶಿಕ್ಷಣ ನೀಡುವುದೊಂದಕ್ಕೆ ಬಿಟ್ಟು ಮತ್ತೆಲ್ಲಕ್ಕೂ ಬಳಸುತ್ತಿದ್ದೇವೆ. ವಾಸ್ತವವಾಗಿ ಜಾಗತಿಕ ಮಟ್ಟದಲ್ಲಿ ಶಿಕ್ಷಣವೆನ್ನುವುದು ‘ಪಾಠ ಮಾಡುವುದು’ ಎಂಬ ಕಲ್ಪನೆಯಿಂದ ಬಹಳ ದೂರ ಬಂದಿದೆ. ಪಶ್ಚಿಮದ ರಾಷ್ಟ್ರಗಳು ಹೊಸ ಹೊಸ ಬದಲಾವಣೆಗೆ ಸದಾ ತೆರೆದುಕೊಂಡಿರುತ್ತವೆ. ಸರಿ ಎಂದು ಅಧ್ಯಯನಗಳು ಹೇಳಿದ್ದನ್ನು ಮುಲಾಜಿಲ್ಲದೇ ಪ್ರಯೋಗಕ್ಕೆ ಒಳಪಡಿಸಿ ಫಲಿತಾಂಶ ಪಡೆಯುತ್ತವೆ. ನಾವಾದರೋ ಬದಲಾವಣೆಯಾಗಲು ಬಿಡುವುದೇ ಇಲ್ಲ. ನಮ್ಮ ತಾತನ ಕಾಲದ್ದು ಒಂದಿನಿತೂ ಬದಲಾಗದಂತೆ ಉಳಿಯುವಂತೆ ಮಾಡುವಲ್ಲಿ ನಮ್ಮದು ಕಟ್ಟುನಿಟ್ಟಾದ ಪ್ರಯತ್ನ. ನಮ್ಮ ಪ್ರಾಚೀನ ಗುರುಕುಲ ಶೈಲಿಯ ಶಿಕ್ಷಣವನ್ನು ಮೆಕಾಲೆ ಬದಲಾಯಿಸಲೆಂದು ನಿಂತಾಗ ನಾವು ಸುಮ್ಮನೆ ಒಪ್ಪಿಕೊಂಡವರಲ್ಲ. ಅದನ್ನು ಪ್ರತಿಭಟಿಸಿದ್ದೆವು, ಧಿಕ್ಕರಿಸಿದ್ದೆವು. ಬ್ರಿಟೀಷರು ಬಗೆ ಬಗೆಯ ಪ್ರಚಾರದ ತಂತ್ರಗಳನ್ನು ಬಳಸಿದರು. ಓದಿದವರಿಗೆ ಗುಮಾಸ್ತರ ಉದ್ಯೋಗ ಕೊಟ್ಟು ಇಂಗ್ಲೀಷ್ ಬಾಬುಗಳನ್ನಾಗಿ ರೂಪಿಸಿದರು. ಇಂಗ್ಲೀಷ್ ಕಲಿತವರು ಇತರೆಲ್ಲರಿಗಿಂತಲೂ ಹೆಚ್ಚು ನಾಗರಿಕರೆಂದು ನಂಬಿಸಿದರು. ಅನೇಕ ದಶಕಗಳ ವ್ಯವಸ್ಥಿತ ಪ್ರಯೋಗದ ನಂತರ ಕೊನೆಗೂ ಭಾರತೀಯ ಶಿಕ್ಷಣವನ್ನು ಸಂಪೂರ್ಣ ಪಶ್ಚಿಮದ ಶಿಕ್ಷಣದಿಂದ ಬದಲಾಯಿಸಿಯೇ ಬಿಟ್ಟರು.

ಆರಂಭದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಹೆಣಗಾಡುತ್ತಿದ್ದ ಭಾರತೀಯ ಸಮಾಜ ಬರುಬರುತ್ತ ಅದನ್ನು ರಕ್ತಗತವಾಗಿಸಿಕೊಂಡುಬಿಡ್ತು. ಗುಮಾಸ್ತರಾಗಲು ಬೇಕಾದ ಶಿಕ್ಷಣ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ದಾಸ್ಯಕ್ಕೆ ಪ್ರೇರಣೆ ಕೊಡುವ ಶಿಕ್ಷಣಕ್ಕೆ ನಾವು ಪ್ರಜ್ಞಾಪೂರ್ವಕವಾಗಿ ಸಿದ್ಧರಾಗಿಬಿಟ್ಟೆವು. ಆಮೇಲ್ನೋಡಿ ನಾವೇ ಆಂಗ್ಲ ಮಾಧ್ಯಮದ ಶಾಲೆಗೆ ಕಳಿಸುವುದು ಗೌರವವೆಂದು ಪ್ರಚಾರ ಮಾಡಿದೆವು. ಅಕ್ಷರ ಕಲಿಯುವುದೇ ಸಾಧನೆ ಎಂದೆವು. ಮಕ್ಕಳು ಹೆಚ್ಚು ಹೆಚ್ಚು ಅಂಕ ಗಳಿಸಿದರೆ ಅವರನ್ನು ಬುದ್ಧಿವಂತರೆಂದು ಗೌರವಿಸುವ ರೂಢಿ ತಂದೆವು. ಅಲ್ಲಿಗೆ ಶಿಕ್ಷಣ ಸಂಪೂರ್ಣ ದಾರಿ ತಪ್ಪಿತು.

ಅಚ್ಚರಿ ಏನು ಗೊತ್ತೇ? ದಾರಿ ತಪ್ಪಿದೆ ಎನ್ನುವುದು ಹೊಸದಾಗಿ ಕೇಳಿಬರುತ್ತಿರುವ ಮಾತಲ್ಲ. ಇದು ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಆದರೆ ಇದನ್ನು ಬದಲಾಯಿಸಲು ಸಾಧ್ಯವಾ? ಖಂಡಿತ ಸಾಧ್ಯವಿಲ್ಲ. ಏಕೆಂದರೆ ಬದಲಾವಣೆಯನ್ನು ನಾವು ಪಟ್ಟಾಗಿ ವಿರೋಧಿಸುತ್ತೇವಲ್ಲ! ಮೆಕಾಲೆ ತರುವ ಬದಲಾವಣೆಗೆ ನಾವು ಹೇಗೆ ತಡೆಯಾಗಿದ್ದೇವೋ ಅಷ್ಟೇ ಹೊಸ ಪರಿವರ್ತನೆಗೂ ಅಡ್ಡಲಾಗಿ ನಿಂತಿದ್ದೇವೆ. ನಮಗೆಲ್ಲಾ ಮಗ ಬುದ್ಧಿವಂತನಾಗಬೇಕೆಂದರೆ ಹೆಚ್ಚಿನ ಅಂಕ ಗಳಿಸಬೇಕು ಎಂಬುದಷ್ಟೇ ತಲೆಯಲ್ಲಿ. ಶಾಲೆ ನಡೆಸುವವರಿಗೆ ನೂರಕ್ಕೆ ನೂರು ಜನರೂ ಪಾಸಾಗಿದ್ದಾರೆಂದು ಘೋಷಿಸುವ ಧಾವಂತ. ಈ ಎಲ್ಲಾ ಗಡಿಬಿಡಿಗಳಲ್ಲಿ ವಿದ್ಯಾಥರ್ಿ ಮತ್ತು ಅವನ ಅಂತರಂಗದ ಸಾಮಥ್ರ್ಯವನ್ನು ನಾವು ಮರೆತೇ ಬಿಟ್ಟಿದ್ದೇವೆ. ನಮಗೆ ಗೊತ್ತಿರುವುದನ್ನು ಅವನ ತಲೆಗೆ ತುರುಕುವುದನ್ನು ಶಿಕ್ಷಣವೆನ್ನುತ್ತಿದ್ದೇವೆ. ಓದು ಮುಗಿದ ಕೂಡಲೇ ಕಾಲೇಜುಗಳು ಕೊಟ್ಟ ಅಂಕ ಪಟ್ಟಿಗಳ ಆಧಾರದ ಮೇಲೆ ಅವನಿಗೆ ಕೆಲಸ ಸಿಕ್ಕಿಬಿಡಬೇಕೆಂಬ ಆತುರವೂ ನಮಗಿದೆ. ಅದಕ್ಕೇ ಪ್ರತಿಯೊಂದು ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಉದ್ದೇಶ ವಿದ್ಯಾಥರ್ಿಗಳಲ್ಲಿನ ಎಷ್ಟು ಕೌಶಲ್ಯವನ್ನು ಹೊರತೆಗೆದೆವೆಂದಲ್ಲ; ಬದಲಿಗೆ ಎಷ್ಟು ವಿದ್ಯಾಥರ್ಿಗಳಿಗೆ ಉದ್ಯೋಗ ಕೊಡಿಸಿದ್ದೇವೆ ಎಂಬುದೇ ಆಗಿದೆ.

3

ಇವೆಲ್ಲದರ ಪರಿಣಾಮವೇನು ಗೊತ್ತೇ? ಭಾರತೀಯ ಶಿಕ್ಷಣದ ಗುಣಮಟ್ಟ ಜಾಗತಿಕ ಮಟ್ಟದಲ್ಲಿ ಕಳಪೆ ಮಟ್ಟದ್ದೆಂದು ಗುರುತಿಸಲ್ಪಟ್ಟಿದೆ. 2014 ರಲ್ಲಿ ಭಾರತದ ಶೈಕ್ಷಣಿಕ ರ್ಯಾಂಕಿಂಗ್ ಅಂತರಾಷ್ಟ್ಟರೀಯ ಮಟ್ಟದಲ್ಲಿ 93 ನೇ ಅಂಕಕ್ಕೆ ಕುಸಿದಿತ್ತು. ಇಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿನ ಹುದುಗಿ ಹೋಗಿರುವ ಭ್ರಷ್ಟಾಚಾರವನ್ನು ಪ್ರಪಂಚ ಅತ್ಯಂತ ಕೆಟ್ಟದೃಷ್ಟಿಯಲ್ಲಿ ನೋಡುತ್ತದೆ. ಶಿಕ್ಷಣವೆನ್ನುವುದು ಇಲ್ಲೊಂದು ಉದ್ಯಮವಾಗಿದೆಯಲ್ಲ ಈ ಕುರಿತಂತೆಯೂ ತಿಳಿದವರು ಬೇಸರಿಸುತ್ತಾರೆ. ಹೀಗಾಗಿಯೇ ಜಗತ್ತಿನ ಹತ್ತಾರು ರಾಷ್ಟ್ರಗಳಿಂದ ಭಾರತದೆಡೆಗೆ ಅಧ್ಯಯನಕ್ಕೆ ಬರುತ್ತಿದ್ದ ಜನರ ಬಗೆಗಿನ ಮಾತುಗಳೆಲ್ಲ ಈಗ ಕಥೆಗಳಷ್ಟೇ. ಉಲ್ಟಾ ಭಾರತೀಯರೇ ಜಗತ್ತಿನ ಮೂಲೆಮೂಲೆಗೂ ಅಧ್ಯಯನಕ್ಕೆಂದು ಹೋಗುತ್ತಾರೆ. ಒಂದು ಕಾಲದಲ್ಲಿ ನಾವು ನಮ್ಮವರನ್ನು ಶಿಕ್ಷಕರನ್ನಾಗಿ ಇತರ ರಾಷ್ಟ್ರಗಳಿಗೆ ಕಳಿಸುತ್ತಿದ್ದೆವು. ಈಗ ನಾವೇ ಅತಿಥಿ ಉಪನ್ಯಾಸಕರಾಗಿ ಬೇರೆಯ ರಾಷ್ಟ್ರಗಳಿಂದ ಕರೆಸಿಕೊಳ್ಳುತ್ತೇವೆ. 2012 ರ ಅಂಕಿ ಅಂಶಗಳ ಪ್ರಕಾರ ಭಾರತದಿಂದ ಅಮೇರಿಕಾಕ್ಕೆ ಸುಮಾರು ಒಂದು ಲಕ್ಷದಷ್ಟು ಜನ ಅಧ್ಯಯನಕ್ಕೆಂದು ಹೋಗಿದ್ದರು. ಆಸ್ಟ್ರೇಲಿಯಾ, ನ್ಯೂಜéಿಲ್ಯಾಂಡ್ಗಳಿಗೂ ಸರಾಸರಿ 15 ಸಾವಿರದಷ್ಟು ಜನ. ಕೊನೆಗೆ ಚೀನಾಕ್ಕೂ ಹತ್ತು ಸಾವಿರಕ್ಕೂ ಮಿಕ್ಕಿದಷ್ಟು ಜನ ಅಧ್ಯಯನಕ್ಕೆಂದು ಧಾವಿಸಿದ್ದರು. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ ಎನ್ನುವುದನ್ನು ಮರೆಯದಿರಿ.

ನಮ್ಮ ಶಿಕ್ಷಣ ಮಟ್ಟದಲ್ಲಿ ನ್ಯೂನತೆಗಳೇನು ಎಂದು ಅನೇಕರು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಮೊದಲನೆಯದೇ ಅಂಕಪಟ್ಟಿ ವ್ಯವಸ್ಥೆ. ಹೆಚ್ಚು ಅಂಕ ಪಡೆದವನು ಹೆಚ್ಚು ಬುದ್ಧಿವಂತ ಎಂದು ವಗರ್ೀಕರಿಸುವುದೇ ತಪ್ಪು. ಹೆಚ್ಚು ಅಂಕ ಪಡೆದವ ಈ ನಾಲ್ಕಾರು ವಿಷಯಗಳನ್ನು ಸೂಕ್ತವಾಗಿ ಒಪ್ಪಿಸಬಲ್ಲವನಷ್ಟೇ. ಆತ ಆಟದಲ್ಲಿ, ಇತರೆ ಕಲೆಗಳಲ್ಲಿ ಬೇರೆಯವರಿಗಿಂತ ದಡ್ಡನಿರಬಹುದು. ಇದನ್ನು ಹೇಗೆ ತಳ್ಳಿ ಹಾಕುವಿರಿ? ತೆಂಡೂಲ್ಕರ್ ಹತ್ತನೇ ತರಗತಿಯಲ್ಲಿ ಫೇಲು. ಆದರೆ ಆತನ ತರಗತಿಯಲ್ಲಿ ಮೇಷ್ಟರಿಂದ ಶಭಾಸ್ ಎನಿಸಿಕೊಂಡ ಮುಂದಿನ ಬೆಂಚಿನ ಹುಡುಗರಿಗಿಂತ ಹೆಚ್ಚು ಹಣ, ಕೀತರ್ಿ ಗಳಿಸಿದ್ದಾನೆ. ಆತ ಕ್ರಿಕೆಟ್ನ ದೇವರೇ ಆಗಿಬಿಟ್ಟ. ಶಾಲೆಯಲ್ಲಿ ಅದಕ್ಕೆ ಮೌಲ್ಯವೇ ಇಲ್ಲವಲ್ಲ! ಇನ್ನು ನಮ್ಮ ಶಿಕ್ಷಣ ಕ್ರಮದಲ್ಲಿ ಪ್ರವೇಶ ಪರೀಕ್ಷೆ ಮತ್ತು ವಾಷರ್ಿಕ ಪರೀಕ್ಷೆಗಳಂತೂ ಅತ್ಯುಗ್ರ. ಒಂದಿಡೀ ವರ್ಷ ಸಮರ್ಥವಾಗಿದ್ದು, ಕೊನೆಯ ಮೂರು ಗಂಟೆಯಲ್ಲಿ ಕಕ್ಕಾಬಿಕ್ಕಿಯಾದವ ಉಪಯೋಗಕ್ಕಿಲ್ಲದವನಷ್ಟೇ! ಹೇಗಿದು ಲೆಕ್ಕಾಚಾರ.

ಈ ಅಂಕಪಟ್ಟಿಯ ಗಲಾಟೆಯಿಂದಾಗಿಯೇ ನಮ್ಮಲ್ಲಿ ಕೌಶಲ್ಯದ ನಷ್ಟವಾಗಿರೋದು. ಇತ್ತೀಚೆಗೆ ಬೆಳಗಾವಿಯಲ್ಲಿ ನೇಕಾರ ಕುಟುಂಬದ ನಾಲ್ಕಾರು ಹೆಣ್ಣುಮಕ್ಕಳು ಸಿಕ್ಕಿದ್ದರು. ಅವರ ಮೊಗದಲ್ಲಿ ಅಪಾರವಾದ ಉತ್ಸಾಹವಿತ್ತು. ನೇಕಾರಿಕೆಯಲ್ಲಿ ಎಂತಹ ಕೆಲಸವನ್ನೂ ನಿಭಾಯಿಸಬಲ್ಲೆವೆಂಬ ಆತ್ಮವಿಶ್ವಾಸ ಚಿಮ್ಮುತ್ತಿತ್ತು. ಸುಮ್ಮನಿರಲಾಗದೇ ನೀವೇಕೆ ಆಧುನಿಕ ಫ್ಯಾಷನ್ ಡಿಸೈನಿಂಗ್ ಕಲಿತು ನೇಕಾರಿಕೆಗೆ ಜಾಗತಿಕ ತಂತ್ರಗಳ ಸ್ಪರ್ಶ ಕೊಡಬಾರದು ಎಂದು ಕೇಳಿದೆ. ಅಷ್ಟೂ ಹೊತ್ತು ಸಂತಸದಿಂದ ಮಾತನಾಡುತ್ತಿದ್ದ ತಾಯಂದಿರು ಮ್ಲಾನ ವದನರಾದರು. ನಾವು ಶಾಲೆಗೆ ಹೋಗಿ ಕಲಿತವರಲ್ಲ; ನಮ್ಮ ಬಳಿ ಸಟರ್ಿಫಿಕೇಟುಗಳಿಲ್ಲ. ಹೀಗಾಗಿ ನಮಗೆ ಯಾರೂ ಶಿಕ್ಷಣ ನೀಡುವುದಿಲ್ಲ ಎಂದುಬಿಟ್ಟರು. ನಿಜಕ್ಕೂ ಎದೆಗೆ ತಿವಿದಂತಹ ಅನುಭವವಿದು. ಕೌಶಲವಿದೆ ಆದರೆ ಅದನ್ನು ವೃದ್ಧಿಸಿಕೊಳ್ಳುವಲ್ಲಿ ಶಾಲಾ ಸಟರ್ಿಫಿಕೇಟುಗಳೇ ಅಡ್ಡ. ಏನು ಮಾಡಬೇಕು ಹೇಳಿ. ಕೌಶಲವೆಂದರೆ ಗೊತ್ತಿಲ್ಲದವರ ತಲೆಗೆ ಹೊಸದೇನೋ ತುಂಬುವುದಲ್ಲ. ಅದಾಗಲೇ ಅಡಗಿರುವ ಕೌಶಲ್ಯಕ್ಕೆ ಹೊಸ ತಂತ್ರವನ್ನು ಜೋಡಿಸಿ ಆಧುನಿಕ ಯುಗಕ್ಕೆ ಹೊಂದುವಂತೆ ರೂಪಿಸುವಂತಹ ಪ್ರಯತ್ನ. ಹೀಗೆ ಯೋಚಿಸುವಾಗಲೇ ನನಗನಿಸೋದು, ಬೆಳಗಾವಿ-ಬಾಗಲಕೋಟೆಗಳಿಗೆ ಹೊಂದುವಂತ ಬನಹಟ್ಟಿ-ರಬಕವಿ-ಮಹಾಲಿಂಗಪುರಗಳಲ್ಲೋ ನಾವೊಂದು ಫ್ಯಾಷನ್ ಡಿಸೈನಿಂಗ್ ಕಾಲೇಜು ತೆರೆದು ನೇಕಾರರ ಹೊಸ ಪೀಳಿಗೆಗೆ ಆಧುನಿಕ ಸ್ಪರ್ಶ ಕೊಡಲು ಸಾಧ್ಯವಾದರೆ ನಾವು ಜಗತ್ತಿನ ಮಾರುಕಟ್ಟೆಯನ್ನು ಮುಟ್ಟುವುದು ಕಷ್ಟವಲ್ಲ. ಹಾಗೆಯೇ ಅಥಣಿಯಲ್ಲಿ ಚರ್ಮ ಉದ್ಯೋಗಿಗಳು ಸಾಕಷ್ಟು ಚುರುಕಾಗಿದ್ದಾರೆ. ಇಂತಹವರಿಗಾಗಿ ಉಪಯೋಗವಾಗುವಂತೆ ನಾವೇಕೆ ಒಂದು ವಿದ್ಯಾಲಯವನ್ನು ತೆರೆಯಬಾರದು ಹೇಳಿ. ಕಿನ್ನಾಳ-ಚೆನ್ನಪಟ್ಟಣದ ಬೊಂಬೆ ಕಾಮರ್ಿಕರಿಗೆ ಆಧುನಿಕ ಸ್ಪರ್ಶ ನೀಡುವಂತಹ ಶಿಕ್ಷಣ ನೀಡಬಾರದೇ ಹೇಳಿ. ಆದರೆ ಒಂದನ್ನಂತೂ ನೆನಪಿನಲ್ಲಿಡಬೇಕು. ಹೀಗೆ ತೆರೆದ ವಿಶೇಷ ಕಾಲೇಜುಗಳಲ್ಲಿ ಆರಂಭದಿಂದ ಕಲಿಸುವ ಇಂಜಿನಿಯರಿಂಗ್ ಕಾಲೇಜಿನ ಪದ್ಧತಿ ಅನುಸರಿಸಬಾರದು. ಬದಲಿಗೆ ಅವರಿಗೆ ತಿಳಿದಿರುವ ಅಂಶದಿಂದ ಮುಂದಕ್ಕೆ ಕಲಿಸಬೇಕು. ವಿಶೇಷವಾಗಿ ಆಧುನಿಕ ತಂತ್ರಜ್ಞಾನದ ಪರಿಚಯವಿರಬೇಕು. ಅದರೊಟ್ಟಿಗೆ ಈ ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಆಯಾ ವಿದ್ಯೆಯ ಅನುಭವವೇ ಮಾಪಕವಾಗಬೇಕೇ ಹೊರತು ಅಧ್ಯಯನದ ಸಟರ್ಿಫಿಕೇಟುಗಳಲ್ಲ!

4

ನಮ್ಮ ಶಿಕ್ಷಣದಲ್ಲಿನ ದೋಷ ಇದೇ. ನಮ್ಮ ಕಾಲೇಜುಗಳಲ್ಲಿ ಅತ್ಯುನ್ನತ ಶ್ರೇಣಿಯ ಯೋಜನೆಗಳನ್ನು ನಾವು ಪ್ರಸ್ತುತ ಪಡಿಸುವುದಿಲ್ಲ. ಅದಕ್ಕೆ ಸರಿಯಾಗಿ ಕಳಪೆ ದಜರ್ೆಯ ಶಿಕ್ಷಕರನ್ನು ಆರಿಸಿಕೊಳ್ಳುತ್ತೇವೆ. ಹಳೆ ಹಪ್ಪಟ್ಟು ಪಠ್ಯಕ್ರಮ ಅಳವಡಿಸಿಕೊಂಡಿರುತ್ತೇವೆ. ಮತ್ತು ಆಯಾ ಕಾಲೇಜುಗಳಿಗೆ ತಕ್ಕಂತಹ ಶೈಕ್ಷಣಿಕ ವಾತಾವರಣವೂ ಇರುವುದಿಲ್ಲ. ಇಷ್ಟೆಲ್ಲಾ ದೋಷಗಳಿದ್ದಾಗ ಅನ್ಯ ರಾಷ್ಟ್ರದ ಜನ ಇಲ್ಲಿ ವಿದ್ಯೆ ಪಡೆಯಲು ಬರುವುದಾದರೂ ಹೇಗೆ ಯೋಚಿಸಿ. ನಾವೀಗ ಹೊಸದಾಗಿ ಆಲೋಚಿಸಬೇಕಿದೆ. ಪ್ರಾಥಮಿಕ ಶಾಲಾ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಬದಲಾವಣೆಗೆ ಮನಸು ಮಾಡಬೇಕಿದೆ. ಅನ್ನ ಭಾಗ್ಯದ ಅಕ್ಕಿ ಕೊಟ್ಟು ‘ಉಣ್ಣು’ ಎನ್ನುವುದಕ್ಕಿಂತ ಅಕ್ಕಿಯನ್ನು ತಾನೇ ದುಡಿದುಕೊಳ್ಳಬಲ್ಲ ಸಾಮಥ್ರ್ಯವನ್ನು ತುಂಬುವ ಶಿಕ್ಷಣ ನೀಡಬೇಕಿದೆ. ಹಾಗಂತ ಇದ್ಯಾವುದೂ ಸುಲಭವಲ್ಲ. ಒಂದೆಡೆ ನಾವು ಶಿಕ್ಷಕರನ್ನು ಹರಿತಗೊಳಿಸಬೇಕು ಮತ್ತೊಂದೆಡೆ ಪೋಷಕರನ್ನು ವಿಶಾಲವಾಗಿಸಬೇಕು. ಎಲ್ಲಕ್ಕೂ ಮಿಗಿಲಾಗಿ ತುಕ್ಕು ಹಿಡಿದ ಆಳುವವರ ತಲೆಯನ್ನು ಒಂದಷ್ಟು ಉಪ್ಪಿನ ಕಾಗದದಿಂದ ಉಜ್ಜಬೇಕು. ಇಲ್ಲವಾದರೆ ಸೈನಿಕರನ್ನೇ ಅತ್ಯಾಚಾರಿಗಳು ಎಂದವರೆಲ್ಲ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿಬಿಡುತ್ತಾರೆ. ಜನರಿಗೆ ಕುಳಿತಲ್ಲೇ ಊಟ ಪೂರೈಸಿ , ವಿದ್ಯೆಯೂ ಬೇಡ, ಕೌಶಲವೂ ಬೇಡ ಎನ್ನುವಂತಹ ಯೋಜನೆಗಳು ರೂಪುಗೊಳ್ಳುತ್ತವೆ. ಕಳೆದ ಒಂದು ದಶಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬೇಕಾದ ಬದಲಾವಣೆಗಳ ಕುರಿತಂತೆ ವಿಶೇಷ ಸಂಶೋಧನೆಗಳು ನಡೆದೇ ಇಲ್ಲವೆಂದರೆ ನೀವು ನಂಬಲೇಬೇಕು.

ಕನರ್ಾಟಕ ಶೈಕ್ಚಣಿಕವಾಗಿ ನಿಜಕ್ಕೂ ಸಂಕಟದಲ್ಲಿದೆ. ಬದಲಾವಣೆ ಖಂಡಿತ ಬೇಕಿದೆ.

Comments are closed.