ವಿಭಾಗಗಳು

ಸುದ್ದಿಪತ್ರ


 

ಸಾವಿನ ಮನೆಯ ಸುತ್ತ ಎಂತೆಂಥ ಜನ!

‘ಸೇವೆಯೆಂದರೆ ಊಟ ಕೊಡುವುದಲ್ಲ; ಅದನ್ನು ಗಳಿಸಿಕೊಳ್ಳುವ ಮಾರ್ಗ ಕಲಿಸಿಕೊಡುವುದು’ ಹಾಗೆಂಬ ಮಾತೊಂದಿದೆ. ಕಿದ್ವಾಯ್ ಆಸ್ಪತ್ರೆಯಲ್ಲಿ ಈ ಮಾತು ಸಾಕಾರಗೊಳ್ಳುತ್ತಿರುವುದನ್ನು ನೋಡಿದಾಗ ಎಂಥವನಿಗೂ ಭಾವ ತುಂಬಿ ಬರದೇ ಇರದು.
ಮಾಡಲಿಕ್ಕೆ ಎಷ್ಟೊಂದು ಕೆಲಸವಿದೆ. ಜೊತೆಗೂಡಲು ಕೈಗಳು ಬೇಕು. ಹಾಗೆಯೇ ನೋಡಲು ಎಷ್ಟೊಂದು ಸುಂದರ ಸಂಗತಿಗಳಿವೆ, ನೋಡುವ ದೃಷ್ಟಿ ಬೇಕು ಅಷ್ಟೇ. ಸಮಾಜದಲ್ಲಿ ನೊಂದವರು, ತುಡಿತಕ್ಕೊಳಗಾದವರು ಎಷ್ಟು ಸಂಖ್ಯೆಯಲ್ಲಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಕೈ ಚಾಚುವವರು, ಕೈ ಹಿಡಿದವರೂ ಇದ್ದಾರೆ. ‘ನಾನು ಇದ್ದಲ್ಲೇ ಇರುವೆ, ಮುಂದೆ ಬರಲಾರೆ’ ಎಂದು ದೃಢವಾಗಿ ನಿಶ್ಚಯಿಸಿದರೆ ಯಾರೂ-ಏನೂ ಮಾಡಲು ಸಾಧ್ಯವಿಲ್ಲ. ಆದರೆ ಮುಂದೆ ಹೋಗಲು ಬೇರೆಯವರನ್ನೂ ಬಿಡಲಾರೆ ಎಂದು ಅಡ್ಡ ನಿಂತರೆ ಮಾತ್ರ ಕಷ್ಟ. ನೆನಪಿಡಿ. ಹೀಗೆ ಮಾಡಿ ಇದ್ದ ನಾಲ್ಕು ದಿನ ನಾಯಕರಾಗಿ ಮೆರೆಯಬಹುದೇನೋ, ಆದರೆ ಕಾಲಗರ್ಭದಲ್ಲಿ ಅಂಥವರು ಕಸದ ಬುಟ್ಟಿಯಲ್ಲಿ ಬಿದ್ದಿರುತ್ತಾರೆ ಅಷ್ಟೇ!

IMG_1999_resizedಒಂದೊಂದು ಯುಗವೂ ಒಂದೊಂದು ವರ್ಣದವರ ಸ್ವತ್ತಂತೆ. ಸತ್ಯಯುಗ ಬ್ರಾಹ್ಮಣರಿಗೆ, ತ್ರೇತಾಯುಗ ಕ್ಷತ್ರಿಯರಿಗೆ, ದ್ವಾಪರಯುಗ ವೈಶ್ಯರಿಗೆ ಮತ್ತು ಕಲಿಯುಗ ಶೂದ್ರವರ್ಣದವರಿಗೆ ಅಂತ. ಆಯಾ ಯುಗವನ್ನು ಅವರವರೇ ಆಳುತ್ತಾರಂತೆ. ಈ ಕಲ್ಪನೆ ಅದೆಷ್ಟರ ಮಟ್ಟಿಗೆ ಸತ್ಯವೋ ಗೊತ್ತಿಲ್ಲ. ನಮ್ಮ ಕಾಲದಲ್ಲಂತೂ ದಲಿತರನ್ನು ಬಳಸಿಕೊಳ್ಳುವ ಆ ಮೂಲಕ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಚಟವಂತೂ ಬಲು ಜೋರಾಗಿ ನಡೆದಿದೆ. ಹೈದರಾಬಾದ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ತರುಣನ ಸಾವು ನೆಪಮಾತ್ರ. ಭೂಮಿಯನ್ನು ಅಗೆದರೆ ಅದೆಷ್ಟು ಅನಾಥ ಶವಗಳು ಸಿಗುವವೋ ದೇವರೇ ಬಲ್ಲ! ಈ ಶವ ಸಂಸ್ಕಾರದ ಅಗ್ನಿಯಲ್ಲಿ ಚಳಿ ಕಾಯಿಸುತ್ತ ಕುಳಿತಿರುವವರಿಗೂ ಲೆಕ್ಕವಿಲ್ಲ.
ಬಿಡಿ. ಕಳೆದ ಒಂದು ವಾರದಿಂದ ಇದೇ ಬಲುವಾಗಿ ಚಚರ್ೆ ನಡೆದಿರುವುದರಿಂದ ಇದರ ಆಳಕ್ಕೆ ಹೋಗಲಿಚ್ಛಿಸುವುದಿಲ್ಲ. ಇದೇ ದಲಿತರೊಡನೆ, ಶೋಷಿತರೊಡನೆ, ಅನಾಥರೊಡನೆ ಕೈ ಜೋಡಿಸಿ ದುಡಿಯುತ್ತಿರುವ ಮಿತ್ರರ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕಷ್ಟೇ.
ರೋಹಿತ್ ವೆಮುಲನ ಸಾವಿನ ಸುದ್ದಿ ಕದ ತಟ್ಟಿದ ಮೂರ್ನಾಲ್ಕು ದಿನಗಳಲ್ಲಿಯೇ ಬೆಂಗಳೂರಿನ ರಾಮಕೃಷ್ಣಾಶ್ರಮಕ್ಕೆ ಹೊಂದಿಕೊಂಡ ವಿದ್ಯಾಥರ್ಿ ನಿಲಯದಲ್ಲಿ ಸರಳ ಸಭೆಯೊಂದು ನಡೆದಿತ್ತು. ಸ್ವಾಮೀಜಿಯೊಬ್ಬರು, ಜೊತೆಗೆ ಮೂರ್ನಾಲ್ಕು ಜನರಷ್ಟೇ ಸಭೆಯಲ್ಲಿ. ಕ್ಯಾನ್ಸರ್ ಪೀಡಿತ ರೋಗಿಯೊಬ್ಬನಿಗೆ ದಾರ ಸುತ್ತುವ ಯಂತ್ರವೊಂದನ್ನು ಉಡುಗೊರೆಯಾಗಿ ಕೊಡುವ ಕಾರ್ಯಕ್ರಮ ಅದು. ಅದನ್ನು ಪಡೆದವರ ಕಂಗಳು ಭಾವದಿಂದ ತುಂಬಿ ಹೋಗಿದ್ದರೆ, ಕೊಟ್ಟವರ ಹೃದಯ ತುಂಬಿ ಬಂದಿತ್ತು!
ವಾಸ್ತವವಾಗಿ ನಡೆದದ್ದಿಷ್ಟೇ. ನರೇಂದ್ರ ಮೋದಿ ತಮ್ಮ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಯೋಜನೆಗೆ ಕೈ ಜೋಡಿಸುವಂತೆ ರಾಮಕೃಷ್ಣಾಶ್ರಮಕ್ಕೆ ಪತ್ರ ಬರೆದ ನಂತರ ಅವರ ದೇಶದ ಎಲ್ಲಾ ಶಾಖೆಗಳೂ ಚುರುಕುಗೊಂಡಿದ್ದವು. ಬೆಂಗಳೂರಿನ ಆಶ್ರಮ ಕೆಲವು ಆಸಕ್ತ ನಾಗರಿಕರ ಸಹಕಾರದೊಂದಿಗೆ ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನವೆಂಬ ತಂಡವನ್ನು ಕಟ್ಟಿತು. ನನೆಗುದಿಗೆ ಬಿದ್ದ ದೇವಾಲಯಗಳನ್ನು ಸ್ವಚ್ಛಗೊಳಿಸಿ ಪರಂಪರೆಯನ್ನು ಉಳಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಡಲಾಯ್ತು. ಪ್ರತೀ ಭಾನುವಾರ ಬಿಟ್ಟೂ ಬಿಡದೇ ಸಂಕಲ್ಪವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ವೇಗದ ಓಟವೇ ಶುರುವಾಯ್ತು.
ವಿವೇಕಾನಂದರ ಚಿಂತನೆಯ ನಶೆಯೇ ಹಾಗೆ. ಒಮ್ಮೆ ತಲೆಗೇರಿತೆಂದರೆ ಮತ್ತೆ ಇಳಿಯಲಾರದು; ಸುಮ್ಮನಿರಲೂ ಬಿಡಲಾರದು. ಮಂದಿರದ ಆವರಣವನ್ನು ಸ್ವಚ್ಛಗೊಳಿಸುತ್ತ ಈ ತಂಡ ತಿಂಗಳಿಗೊಮ್ಮೆ ಕಿದ್ವಾಯ್ ಕ್ಯಾನ್ಸರ್ ಆಸ್ಪತ್ರೆಗೆ ಹೋಗುವ ಅಲ್ಲಿನ ರೋಗಿಗಳ ಮನಸ್ಸಿಗೆ ಸಾಂತ್ವನ ನೀಡುವ, ಭಜನೆ-ಭೋಜನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಅದು ಪ್ರತಿಷ್ಠಾನಕ್ಕೆ ಬಲುದೊಡ್ಡ ತಿರುವು.
ದುಃಖದಲ್ಲಿ ನೊಂದು, ಪರಿವಾರದವರಿಂದಲೂ ದೂರವಾಗಿ ಬೆಂದು ಹೋಗಿರುವ ಅನೇಕರಿಗೆ ಭಜನೆ-ಪ್ರವಚನಗಳು ತಂಪೆರೆದವು. ಉಳಿದಿರುವ ಕೊನೆಯ ಕೆಲವು ದಿನಗಳನ್ನು ನೆಮ್ಮದಿಯಿಂದ ಕಳೆಯಲು ಅನೇಕರು ಚಡಪಡಿಸುತ್ತಿದ್ದರು. ಈಗವರಿಗೆ ರಾಜಮಾರ್ಗ ದೊರೆಯಿತು. ಆಸ್ಪತ್ರೆಯ ಅಧಿಕಾರಿಗಳೂ ಈ ಬೆಳವಣಿಗೆಯಿಂದ ಪ್ರಭಾವಿತರಾಗಿ ಪೂರ್ಣ ಸಹಕಾರಕ್ಕೆ ನಿಂತರು.
ಆಗ ನಡೆದ ಒಂದು ಘಟನೆಯೇ ಪ್ರತಿಷ್ಠಾನದ ಉದ್ದೇಶವನ್ನು ಬಯಲಗಲ ವಿಸ್ತಾರ ಮಾಡಿದ್ದು. ಪ್ರತಿಷ್ಠಾನದ ಮಿತ್ರರೊಬ್ಬರು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನ ಚಿತ್ರವನ್ನು ತಮ್ಮ ಸ್ಮಾಟರ್್ ಫೋನಿನಲ್ಲಿ ತೆಗೆದು ಅದಕ್ಕೆ ತೋರಿಸುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಓಡಿ ಬಂದ ತಾಯಿ ಅದನ್ನು ನೋಡುತ್ತ ಕಂಗಳನ್ನೂ ತುಂಬಿಕೊಂಡು ‘ಸಾರ್ ಈ ಮಗು ಬದುಕೋದು ಇನ್ನು ಕೆಲವೇ ದಿನ ಅಂದಿದ್ದಾರೆ ವೈದ್ಯರು; ಇದರ ಒಂದೇ ಒಂದು ಫೋಟೋ ನಮ್ಮ ಹತ್ತಿರ ಇಲ್ಲ. ಇದನ್ನು ನಂಗೆ ಕೊಡುತ್ತೀರಾ’ ಎಂದಿತು. ಅನೇಕರ ಕರುಳು ಚುರ್ ಎಂದುಬಿಟ್ಟಿತು. ಆ ಮಗುವಿನ ಫೋಟೋ ಆ ತಾಯಿಗೆ ಕೊಡುವುದಿರಲಿ ಬದಲಿಗೆ ಅಲ್ಲಿನ 70ಕ್ಕೂ ಹೆಚ್ಚು ಮಕ್ಕಳಿಗೆ ಕೃಷ್ಣ ವೇಷ ಹಾಕಿಸಿ, ಅಲಂಕಾರ ಮಾಡಿಸಿ ಸಂಭ್ರಮಿಸುವಂತೆ ಮಾಡಲಾಯಿತು. 30ಕ್ಕೂ ಹೆಚ್ಚು ಮುಸ್ಲೀಂ ಮಕ್ಕಳ ತಾಯಂದಿರೂ ಧಾವಿಸಿ ಬಂದು ಮಕ್ಕಳಿಗೆ ಅಲಂಕಾರ ಮಾಡಿಸಿಕೊಂಡು ಫೋಟೋ ತೆಗೆಸಿಕೊಂಡರು. ಕಾರ್ಯಕ್ರಮಕ್ಕೆ ಬಲು ಆಸ್ಥೆಯಿಂದ ಪೇಜಾವರ ಶ್ರೀಗಳು ಬಂದು ಮಕ್ಕಳಿಗೆ ಕೃಷ್ಣ ಪ್ರಸಾದ ಕೊಟ್ಟು ಆನಂದಿಸಿದರು. ಕೊಳದ ಮಠದ ಮತ್ತು ರಾಮಕೃಷ್ಣಾಶ್ರಮದ ಶ್ರೀಗಳೂ ಭಾಗವಹಿಸಿ ಭಾವುಕರಾಗಿಬಿಟ್ಟಿದ್ದರು, ಕಾರ್ಯಕ್ರಮ ಮುಗಿವ ವೇಳೆಗಾಗಲೇ ಆ ಮಕ್ಕಳ ಚಿತ್ರಗಳನ್ನು ಪ್ರಿಂಟ್ ಹಾಕಿಸಿ, ಚೌಕಟ್ಟೂ ಹಾಕಿಸಿ ಕೊಟ್ಟಾಗ ಆ ತಾಯಂದಿರ ಮುಖಗಳು ಊರಗಲವಾಗಿಬಿಟ್ಟಿದ್ದವು. ಕೃಷ್ಣ-ರಾಧೆಯರಾಗಿ ತಮ್ಮ ಮಕ್ಕಳನ್ನೇ ಅವರು ಜೀವಮಾನದಲ್ಲಿ ನೋಡುವುದು ಸಾಧ್ಯವಿತ್ತೋ ಇಲ್ಲವೋ ದೇವರೇ ಬಲ್ಲ.
ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪ್ರತಿಷ್ಠಾನ ಮತ್ತೊಂದು ಬಲವಾದ ಹೆಜ್ಜೆ ಊರಿತು. ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ದಿನಕ್ಕೊಂದರ್ಧ ಗಂಟೆ ಮಾತ್ರ ವೈದ್ಯರ ಭೇಟಿ. ಆಮೇಲೆ ಇಡಿಯ ದಿನ ಅಕ್ಕಪಕ್ಕದವರೊಡನೆ ಹರಟೆಯಷ್ಟೇ. ಅದರಲ್ಲೂ ಬಹುಪಾಲು ದುಃಖಭರಿತ ಮಾತುಕತೆಗಳೇ. ತಮ್ಮ ನಡುವಿನ ಯಾರಾದರೊಬ್ಬರು ತೀರಿಕೊಂಡರೆ ಮುಗಿದೇ ಹೋಯ್ತು. ಉಳಿದವರೆಲ್ಲ ತಮ್ಮ ಸಾವನ್ನೂ ಕಾಯುತ್ತ ಕೂರುವ ಭಯಾನಕ ದೃಶ್ಯ! ಇಂಥವರ ಕೈಲಿ ದಿನಕ್ಕೊಂದೆರಡು ಮೂರು ಗಂಟೆ ಕೆಲಸ ಮಾಡಿಸಿದರೆ ಅವರ ದುಃಖವನ್ನೂ ಹೋಗಲಾಡಿಸಬಹುದು, ಕೈಗೆ ಒಂದಷ್ಟು ದುಡ್ಡನ್ನೂ ಕೊಡಬಹುದೆಂದು ಆಲೋಚಿಸಿ ಪ್ರತಿಷ್ಠಾನ ಕಾರ್ಯಪ್ರವೃತ್ತವಾಯ್ತು. ಕವರ್ ಮಾಡುವ, ಬುಟ್ಟಿ ಹೆಣೆಯುವ, ದಾರದ ಉಂಡೆ ಸುತ್ತುವ ಅನೇಕ ಬಗೆಯ ಕೆಲಸಗಳಲ್ಲಿ ತರಬೇತಿ ನೀಡಲಾಯ್ತು.
ಓಹ್! ಅದೊಂದು ಅದ್ಭುತ ಪ್ರಯೋಗ. ದಿನಕ್ಕೆ ಮೂರು ಗಂಟೆ ದುಡಿಮೆ. ಅವರು ಕೆಲಸ ಮಾಡುವ ಜಾಗದಲ್ಲಿ ಭಜನೆ-ಪ್ರವಚಗಳ ದಬರ್ಾರು. ಎಲ್ಲರೂ ಶಾಂತವಾಗಿ ತಂತಮ್ಮ ಕೆಲಸದಲ್ಲಿ ನಿರತರಾಗಿರುವುದನ್ನು ನೋಡುವುದೇ ಆನಂದ. ರೋಗಿಗಳು ಕ್ರಿಯಾಶೀಲರಾಗಿರುವುದರಿಂದ ವೈದ್ಯರಿಗೂ ಖುಷಿ. ಆರೋಗ್ಯ ಸುಧಾರಿಸಿಕೊಳ್ಳಲು ಇದಕ್ಕಿಂತ ಮಹತ್ವದ ಮಾರ್ಗವೇ ಇಲ್ಲ.
ಕಿದ್ವಾಯ್ಯ ಆವರಣದಲ್ಲಿ ಈಗ ಸಾವಿರಾರು ಪೇಪರ್ ಕವರ್ಗಳು ನಿಮರ್ಾಣಗೊಳ್ಳತ್ತಿವೆ. ನೂರಾರು ನೈಲಾನ್ ಬುಟ್ಟಿಗಳು ಹೆಣೆಯಲ್ಪಡುತ್ತಿವೆ. ದಾರದ ಉಂಡೆಗಳು ಲಾಟುಗಟ್ಟಲೇ ತಯಾರಾಗುತ್ತಿವೆ. ಇವುಗಳಿಗೆ ಬೇಡಿಕೆಯೂ ಶುರುವಾಗಿದೆ.
ಇವರುಗಳ ನಡುವೆಯೇ ಎರಡು ಮಕ್ಕಳ ತಂದೆಯಾಗಿ ಕೈಲಿ ಕೆಲಸವೇ ಇಲ್ಲದೇ ನೊಂದುಕೊಂಡಿದ್ದ ರೋಗಿಯೊಬ್ಬ ದಾರದ ಉಂಡೆ ಮಾಡುವುದನ್ನು ಕಲಿತ, ಪರಿಣಿತನಾದ. ಆಸ್ಪತ್ರೆಯಿಂದ ಹೋಗುವ ಮುನ್ನ ಪ್ರತಿಷ್ಠಾನದವರ ಬಳಿ ಬಂದು ‘ಈ ಯಂತ್ರ ನನಗೆ ಕೊಡಿಸಿದರೆ ಇದರಿಂದ ನನ್ನ ಮಕ್ಕಳನ್ನು ನಾನೇ ಸಾಕುತ್ತೇನೆ’ ಎಂದ. ಆತನ ಸ್ವಾಭಿಮಾನ, ಮನೋಸ್ಥೈರ್ಯ ಎರಡೂ ಜೋರಾಗಿಯೇ ಇತ್ತು. ಹೊಸದೊಂದು ಯಂತ್ರವನ್ನೂ ತರಿಸಿ ಅವನ ಕೈಗಿಡಲಾಯ್ತು. ಆತನಿಗೆ ಬದುಕಿನ ಹೊರೆ ಇಷ್ಟು ಸಲೀಸಾಗಿ ಇಳಿಯುವುದೆಂಬ ಭಾವನೆಯೇ ಇರಲಿಲ್ಲ.

IMG_1996_resized
‘ಸೇವೆಯೆಂದರೆ ಊಟ ಕೊಡುವುದಲ್ಲ; ಅದನ್ನು ಗಳಿಸಿಕೊಳ್ಳುವ ಮಾರ್ಗ ಕಲಿಸಿಕೊಡುವುದು’ ಹಾಗೆಂಬ ಮಾತೊಂದಿದೆ. ಕಿದ್ವಾಯ್ ಆಸ್ಪತ್ರೆಯಲ್ಲಿ ಈ ಮಾತು ಸಾಕಾರಗೊಳ್ಳುತ್ತಿರುವುದನ್ನು ನೋಡಿದಾಗ ಎಂಥವನಿಗೂ ಭಾವ ತುಂಬಿ ಬರದೇ ಇರದು.
ಮಾಡಲಿಕ್ಕೆ ಎಷ್ಟೊಂದು ಕೆಲಸವಿದೆ. ಜೊತೆಗೂಡಲು ಕೈಗಳು ಬೇಕು. ಹಾಗೆಯೇ ನೋಡಲು ಎಷ್ಟೊಂದು ಸುಂದರ ಸಂಗತಿಗಳಿವೆ, ನೋಡುವ ದೃಷ್ಟಿ ಬೇಕು ಅಷ್ಟೇ. ಸಮಾಜದಲ್ಲಿ ನೊಂದವರು, ತುಡಿತಕ್ಕೊಳಗಾದವರು ಎಷ್ಟು ಸಂಖ್ಯೆಯಲ್ಲಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಕೈ ಚಾಚುವವರು, ಕೈ ಹಿಡಿದವರೂ ಇದ್ದಾರೆ. ‘ನಾನು ಇದ್ದಲ್ಲೇ ಇರುವೆ, ಮುಂದೆ ಬರಲಾರೆ’ ಎಂದು ದೃಢವಾಗಿ ನಿಶ್ಚಯಿಸಿದರೆ ಯಾರೂ-ಏನೂ ಮಾಡಲು ಸಾಧ್ಯವಿಲ್ಲ. ಆದರೆ ಮುಂದೆ ಹೋಗಲು ಬೇರೆಯವರನ್ನೂ ಬಿಡಲಾರೆ ಎಂದು ಅಡ್ಡ ನಿಂತರೆ ಮಾತ್ರ ಕಷ್ಟ. ನೆನಪಿಡಿ. ಹೀಗೆ ಮಾಡಿ ಇದ್ದ ನಾಲ್ಕು ದಿನ ನಾಯಕರಾಗಿ ಮೆರೆಯಬಹುದೇನೋ, ಆದರೆ ಕಾಲಗರ್ಭದಲ್ಲಿ ಅಂಥವರು ಕಸದ ಬುಟ್ಟಿಯಲ್ಲಿ ಬಿದ್ದಿರುತ್ತಾರೆ ಅಷ್ಟೇ!
ಸ್ವಾಮಿ ವಿವೇಕಾನಂದ ಶ್ರೇಷ್ಠ ಭಾರತ ಪ್ರತಿಷ್ಠಾನದ ಕೆಲಸದ ವೈಖರಿ ಮನಮುಟ್ಟುವಂತಿದೆ, ಹೃದಯ ತಟ್ಟುವಂತಿದೆ. ಇದು ಎಲ್ಲೆಡೆ ವಿಸ್ತಾರಗೊಳ್ಳಬೇಕು. ಈ ರೀತಿಯ ಮಾದರಿಗಳು ಅನುಕರಿಸಲ್ಪಡಬೇಕು. ಹಾಗೇನಾದರೂ ನಿಮಗೆ ಈ ನಿಟ್ಟಿನಲ್ಲಿ ಆಸಕ್ತಿಯಿದ್ದರೆ ಪ್ರತಿಷ್ಠಾನದ ಪ್ರಮುಖರಾದ ಆನಂದ್ (9448308249)ಅವರನ್ನು ಒಮ್ಮೆ ಮಾತನಾಡಿಸಿ. ಅಭಿನಂದಿಸಿ; ನಿಮ್ಮೊಡನೆ ನಾವಿದ್ದೇವೆ ಎನ್ನಿ.
ಏಕೆಂದರೆ ಸಾವಿನ ಮನೆಯಲ್ಲಿ ರಾಜಕೀಯದ ದಾಳ ಉರುಳಿಸುವವರ ಮಧ್ಯೆ, ಸಾಯುವವರಲ್ಲೂ ಆನಂದದ ಚಿಲುಮೆ ಹರಿಸುವ ಜನ ಇವರು

Comments are closed.