ವಿಭಾಗಗಳು

ಸುದ್ದಿಪತ್ರ


 

ಸುತ್ತಲೂ ಕಾಡ್ಗಿಚ್ಚು, ಮೇಣದ ಮುದ್ದೆಯಾಗಿತ್ತು ಮಗಧ!

ಚಾಣಕ್ಯ ಎರಡನೇ ಹಂತದ ಯುದ್ಧ ಗೆದ್ದಿದ್ದ. ಮೊದಲು ನಂದರ ಎದೆಯಲ್ಲಿ ನಡುಕ ಹುಟ್ಟುವಂತೆ ಸುತ್ತಲೂ ಸೈನಿಕರ ಪಡೆ ನಿಲ್ಲಿಸಿದ್ದ. ಅವರ ಕಂಗಳಲ್ಲಿ ನೃತ್ಯ ಮಾಡುತ್ತಿರುವ ಈ ಭಯವನ್ನು ಪುರದ ಜನರು ನೋಡುವಂತೆ ಮಾಡಿದ್ದ. ಪ್ರಜೆಗಳು ಈಗ ಹೊಸ ರಾಜನ ಆಗಮನಕ್ಕೆ ಕಾಯುತ್ತಿರುತ್ತಾರೆ. ಊರ ತುಂಬಾ ಅದರದ್ದೇ ಚಚರ್ೆ. ಜನರ ಚಚರ್ೆ ಕ್ರಮೇಣ ಸೈನ್ಯದಲ್ಲಿ, ಅಧಿಕಾರಿ ವಲಯದಲ್ಲಿ, ವ್ಯಾಪಾರಿಗಳ ಸಮ್ಮುಖದಲ್ಲಿ ಪ್ರತಿಧ್ವನಿಸಲಾರಂಭಿಸುತ್ತದೆ. ನಿಜವಾದ ಯುದ್ಧ ನಡೆವಾಗ ಇವರೆಲ್ಲಾ ಸಹಜವಾಗಿಯೇ ನಂದರ ವಿರುದ್ಧ ನಿಂತುಬಿಡುತ್ತಾರೆ. ಅಮಾಯಕರ ರಕ್ತ ಹರಿಯದೇ ಯುದ್ಧ ಗೆಲ್ಲುವ ಉಪಾಯ.

13

ಚಾಣಕ್ಯ ನಿಜಾರ್ಥದ ಬ್ರಾಹ್ಮಣ. ಹೀಗಾಗಿ ಸದಾ ಆಲೋಚನಾಮಗ್ನ. ಆತ ಗುರುಕುಲದಲ್ಲಿ ಆಚಾರ್ಯನಾಗಿದ್ದರಿಂದ ಅವನಿಗೆ ಎಲ್ಲರೂ ಸಮಾನರೇ. ರಾಷ್ಟ್ರಭಕ್ತಿ ರಕ್ತದ ಕಣಕಣದಲ್ಲಿ ಹರಡಿಕೊಂಡಿದ್ದರಿಂದ ರಾಷ್ಟ್ರದ ಘನತೆ-ಗೌರವಗಳೊಂದಿಗೆ ಯಾವ ಒಪ್ಪಂದಕ್ಕೂ ಆತ ಸಿದ್ಧನಿರಲಿಲ್ಲ. ಅದಕ್ಕೇ ಆತ ಕಠಿಣ ಹೃದಯಿ ಅಂತ ಅನೇಕ ಬಾರಿ ಅನ್ನಿಸೋದು. ಇಷ್ಟಕ್ಕೂ ಚಾಣಕ್ಯನದ್ದೆಂದೇ ಹೇಳಲಾಗುವ ಮಾತೊಂದಿದೆ.
ತ್ಯಜೇದೇಕಂ ಕುಲಸ್ಯಾಥರ್ೇ, ಗ್ರಾಮಸ್ಯಾಥರ್ೇ ಕುಲಂ ತ್ಯಜೇತ್|
ಗ್ರಾಮಂ ಜನಪದಸ್ಯಾಥರ್ೇ ಆತ್ಮಾಥರ್ೇ ಪೃಥಿವೀಂ ತ್ಯಜೇತ್||
ತನ್ನ ಕುಟುಂಬದ, ಕುಲದ ರಕ್ಷಣೆಗಾಗಿ ವ್ಯಕ್ತಿಯೊಬ್ಬನ ಸಖ್ಯ ಬಿಡಬೇಕಾದ ಪ್ರಸಂಗ ಬಂದರೆ; ಊರಿನ ಉನ್ನತಿಗಾಗಿ, ಒಳಿತಿಗಾಗಿ ತನ್ನ ಪರಿವಾರವನ್ನೋ, ಕುಲವನ್ನೋ ಬಿಡಬೇಕಾಗಿ ಬಂದರೆ; ರಾಜ್ಯದ ಪ್ರಗತಿಗಾಗಿ ಹಳ್ಳಿಯನ್ನು ಬಿಡಬೇಕಾಗಿ ಬಂದರೆ ಮತ್ತು ಕೊನೆಗೆ ಆತ್ಮೋನ್ನತಿಗಾಗಿ ಭೂಮಿಯನ್ನೇ ಬಿಡಬೇಕಾಗಿ ಬಂದರೂ ಮುಲಾಜಿಲ್ಲದೇ ಬಿಡಬೇಕಂತೆ.
ಚಾಣಕ್ಯನಂತೂ ಆಯರ್ಾವರ್ತವನ್ನು ಮತ್ತೆ ಸಂಘಟಿಸುವಲ್ಲಿ ಕಟಿಬದ್ಧನಾಗಿದ್ದ. ಆತನಿಗೆ ವ್ಯಕ್ತಿ, ಜಾತಿ, ಕುಲ, ಮನೆ, ಮಠ, ಊರು-ಕೇರಿ, ಬಂಧು-ಬಳಗ ಎಲ್ಲಕ್ಕಿಂತಲೂ ಮಿಗಿಲಾಗಿ ಕಣ್ಣಿಗೆ ಕಾಣುತ್ತಿದ್ದ ಏಕೈಕ ಲಕ್ಷ್ಯ ರಾಷ್ಟ್ರ, ರಾಷ್ಟ್ರವೊಂದೇ. ಈ ಬಗೆಯ ಮಾನಸಿಕ ಸ್ಥಿತಿಯಿಂದ ರೂಪುಗೊಂಡವರು ಮಾತ್ರ ದೇಶ ಮತ್ತು ರಾಜ್ಯಗಳನ್ನಾಳಲು ಯೋಗ್ಯರು. ಉಳಿದವರು ಸ್ವಂತ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳಲು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲರು. ಕೊನೆಗೆ ದೇಶವನ್ನೇ ಅಡವಿಡಲೂ ಹೇಸಲಾರರು!
ಅಮಾತ್ಯ ರಾಕ್ಷಸನದು ಚಾಣಕ್ಯನ ವಿರುದ್ಧ ವ್ಯಕ್ತಿತ್ವ. ಆತ ಸಮರ್ಥ, ಪ್ರತಿಭಾ ಸಂಪನ್ನ. ಆದರೆ ನಿಷ್ಠೆ ಮಾತ್ರ ದುಷ್ಟ ರಾಜನಿಗೆ. ಇಂಥವರು ಯಾವಾಗಲೂ ಇರುತ್ತಾರೆ. ಅವರು ದೇಶವನ್ನು ಪ್ರಗತಿಯ ಹಾದಿಯಲ್ಲಿ ಒಯ್ಯಬಲ್ಲ ಎಲ್ಲಾ ಶಕ್ತಿಯನ್ನು ತಮ್ಮೊಳಗಿರಿಸಿಕೊಂಡೂ, ದೇಶಕ್ಕಿಂತಲೂ ಮಿಗಿಲಾಗಿ ಒಂದು ಪರಿವಾರಕ್ಕೋ, ಒಬ್ಬ ವ್ಯಕ್ತಿಗೋ ನಿಷ್ಠರಾಗಿ ದೇಹ ಸವೆಸುಬಿಡುತ್ತಾರೆ. ಕಾಲಗರ್ಭದಲ್ಲಿ ಇವರೆಲ್ಲಾ ಅಮಾತ್ಯ ರಾಕ್ಷಸರಾಗಿ ನಂದರ ಅಡಿಯಾಳುಗಳಂತೆ ಗುರುತಿಸಲ್ಪಡಬಹುದೇ ಹೊರತು ದೇಶಭಕ್ತ ಚಾಣಕ್ಯ, ಚಂದ್ರಗುಪ್ತರಂತಲ್ಲ!
ಅಮಾತ್ಯ ರಾಕ್ಷಸ ಚಾಣಕ್ಯನ ತಂತ್ರದ ಸುಳಿಯಲ್ಲಿ ಸಿಕ್ಕು ಬಿದ್ದಿದ್ದ. ಚಾಣಕ್ಯನೇ ಕಳಿಸಿದ ಇಂದುಶರ್ಮ ಈಗ ಜೀವಸಿದ್ಧಿಯಾಗಿ ರಾಕ್ಷಸನ ಪಾಲಿಗೆ ಆಪ್ತ ಜ್ಯೋತಿಷಿಯಾಗಿಬಿಟ್ಟಿದ್ದ. ನಂದರಿಗೆ ಬ್ರಾಹ್ಮಣ ದ್ವೇಷ ಕಂಠಮಟ್ಟ ಇತ್ತು. ಹಂತ-ಹಂತವಾಗಿ ಅವರನ್ನು ನಾಶ ಮಾಡುವ ಬಯಕೆ ಅವರಿಗಿತ್ತು. ಹೀಗಾಗಿ ಮೈಗಳ್ಳರೆಂದೆಲ್ಲಾ ಅವರನ್ನು ಹೀಯಾಳಿಸಿ ಧರ್ಮಛತ್ರಗಳನ್ನು ಮುಚ್ಚಿಸಲಾಯಿತು. ಮಂದಿರಗಳಿಗೆ ಸಿಗಬಹುದಾದ ರಾಜ್ಯದ ಸವಲತ್ತುಗಳನ್ನು ನಿಲ್ಲಿಸಲಾಯ್ತು. ಬ್ರಾಹ್ಮಣರ ಅನ್ನ ಮಾರ್ಗವಾಗಿದ್ದ ಜ್ಯೋತಿಷ್ಯವನ್ನು, ಹೋಮ-ಹವನಗಳನ್ನೂ ನಿಲ್ಲಿಸಿ, ಮೂಢನಂಬಿಕೆ ನಿಷೇಧ ಜಾರಿಗೆ ತರುವ ಕುರಿತಂತೆ ರಾಜನ ಮನಸ್ಸು ತುಡಿಯುತ್ತಿತ್ತು. ಇವೆಲ್ಲವನ್ನೂ ಆಚರಣೆಗೆ ತರಬೇಕಿದ್ದ ಮಂತ್ರಿ ಮಹೋದಯ ಅಮಾತ್ಯ ರಾಕ್ಷಸನೇ ಜೀವಸಿದ್ಧಿಯ ಬಳಿ ಜ್ಯೋತಿಷ್ಯ ಕೇಳುತ್ತಿದ್ದ, ಗ್ರಹಗತಿಯ ಆಧಾರದ ಮೇಲೆ, ಮುಂದೊದಗಬಹುದಾದ ಕುರಿತಂತೆ ಪ್ರಶ್ನೆ ಇಡುತ್ತಿದ್ದ!
ಬಿಡಿ. ಜೀವಸಿದ್ಧಿ ಈಗ ಸಿದ್ಧಿಪುರುಷನಂತಾಗಿಬಿಟ್ಟಿದ್ದ. ಮಗಧ ಸಾಮ್ರಾಜ್ಯಕ್ಕೊದಗಿದ ಕಂಟಕಗಳನ್ನು ನಾಟಕೀಯವಾಗಿ ಬಣ್ಣಿಸಿದ. ‘ಸುತ್ತಲೂ ಆವರಿಸಿಕೊಳ್ಳುತ್ತಿದೆ ಕಾಡ್ಗಿಚ್ಚು; ಒಳಗಿನಿಂದ ಶಿಖಾ ಬಿಚ್ಚಿದ ಬ್ರಾಹ್ಮಣನ ಶಾಪ ಮಗಧ ಸಿಂಹಾಸನವನ್ನು ಮೇಣದ ಮುದ್ದೆ ಮಾಡಿಬಿಟ್ಟಿದೆ. ಇನ್ನು ಕರಗುವುದೊಂದೇ ಬಾಕಿ’ ಎಂದ. ಹೆಚ್ಚಿನ ವಿವರ ಕೇಳೋಣವೆಂದರೆ ಜೀವಸಿದ್ಧಿ ಮಾತನಾಡದ ಸ್ಥಿತಿಗೆ ತಲುಪಿಬಿಟ್ಟಿದ್ದ. ಮುಚ್ಚಿದ ಕಣ್ಣನ್ನು ತೆರೆಯದೇ ಆತ ಸಮಾಧಿಯ ಲೋಕಕ್ಕೆ ಹೋದ. ಜೀವಸಿದ್ಧಿ ಯಾವಾಗಲೂ ಹಾಗೇ. ಮಾತನಾಡಿದ್ದು ಸಾಕೆನಿಸಿದಾಗ, ಮುಂದಿನ ಪ್ರಶ್ನೆಗೆ ಉತ್ತರ ನೀಡುವುದು ಸರಿಯಲ್ಲವೆನಿಸಿದಾಗ ಧ್ಯಾನಸ್ಥನಾಗಿಬಿಡುತ್ತಿದ್ದ. ರಾಕ್ಷಸನಿಗೆ ಅನುಭವವಿದ್ದುದರಿಂದ ಕೆದಕಲು ಹೋಗಲಿಲ್ಲ. ಆದರೆ ಮನಸ್ಸಿನ ತಳಮಳ ಕಡಿಮೆಯಾಗಲಿಲ್ಲ.

15
ತನ್ನ ಕೋಣೆಗೆ ಬಂದವ ಶತಪಥ ಹಾಕಲಾರಂಭಿಸಿದ. ಮಗಧ ಸಾಮ್ರಾಜ್ಯದೆದುರು ನಿಲ್ಲಬಲ್ಲ ಸಮರ್ಥರು ಸುತ್ತಲೂ ಯಾರಿದ್ದಾರೆಂದು ತಲೆಕೆರೆದುಕೊಂಡ. ಪರ್ವತೇಶನೊಬ್ಬನೇ ಅಂತಹ ಶಕ್ತಿವಂತ. ಆದರೆ ಬೃಹತ್ ಸಾಮ್ರಾಜ್ಯವನ್ನೆದುರಿಸಿ ತೋಳೇರಿಸಿಕೊಂಡು ನಿಲ್ಲುವ ಧಾಷ್ಟ್ರ್ಯ ಆತ ತೋರಲಾರನೆಂಬ ಭರವಸೆ ಇತ್ತು ರಾಕ್ಷಸನಿಗೆ. ಇಷ್ಟಕ್ಕೂ ಲಂಪಾಕಾಧಿಪತಿಯ ವಿರುದ್ಧ ಕದನ ಮಾಡುವ ಕಿರಿಕಿರಿ ಅವನನ್ನು ಕಾಡುತ್ತಿರುವುದರಿಂದ ಆತ ತೋಳೇರಿಸಲಾರನೆಂಬುದು ಅವರ ರಾಜತಾಂತ್ರಿಕ ನೈಪುಣ್ಯದ ಕಾರಣಕ್ಕಿದ್ದ ವಿಶ್ವಾಸ. ಊಹೂಂ. ಎಷ್ಟು ಯೋಚಿಸಿದರೂ ಅಂದಾಜಾಗಲಿಲ್ಲ. ಜೀವಸಿದ್ಧಿಯ ಲೆಕ್ಕಾಚಾರವೇ ತಲೆಕೆಳಗಾಗಿರಬೇಕೆಂದು ಮನಸ್ಸಿಗೆ ಸಮಾಧಾನ ಮಾಡಿಕೊಂಡು ತಣ್ಣಗಾದ.
ಅಷ್ಟರಲ್ಲಿಯೇ ಅತ್ಯಂತ ವೇಗವಾಗಿ ಧಾವಿಸಿ ಬರುತ್ತಿರುವ ಗೂಢಚಾರನೊಬ್ಬನ ಧಾವಂತ, ಮುಖದಲ್ಲಿನ ಚಿಂತೆಯ ಗೆರೆಗಳನ್ನು ಕಂಡೇ ಅನಾಹುತವನ್ನು ಊಹಿಸಿದ್ದ ರಾಕ್ಷಸ. ಆತ ಎದುರಿಗೆ ನಿಂತು ನಮಸ್ಕರಿಸಿ, ‘ಗಡಿಯಲ್ಲಿದ್ದ ನಮ್ಮ ಜನರು ಹೊರಗಿನಿಂದ ಬಂದ ಶತ್ರುಗಳ ಉಪಟಳ ತಾಳಲಾರದೇ ಓಡಿಹೋಗಿದ್ದಾರೆ’ ಎಂದ. ರಾಕ್ಷಸ ನಿಟ್ಟುಸಿರು ಬಿಟ್ಟ. ಇಂತಹ ಸಮಸ್ಯೆಗಳನ್ನು ಸೂಕ್ತ ಧನ-ಸಮ್ಮಾನ ಸಿಗದ ಪಾಳೇಗಾರರು ಆಗಾಗ ಸೃಷ್ಟಿಸುತ್ತಾರೆ. ಇದನ್ನು ಸರಿಮಾಡುವುದು ದೊಡ್ಡ ಸಮಸ್ಯೆಯಲ್ಲವೆಂದು ಅವನಿಗಿಂತ ಹೆಚ್ಚು ಬಲ್ಲವರಾರು. ಗೂಢಚಾರನನ್ನು ಸೂಕ್ತವಾಗಿ ಸನ್ಮಾನಿಸಿ ಬೀಳ್ಕೊಟ್ಟ!
ಅವನು ಅತ್ತ ಹೊರಡುತ್ತಿದ್ದಂತೆ ಅನತಿ ಕಾಲದಲ್ಲಿಯೇ ಮತ್ತೊಬ್ಬ ಗೂಢಚಾರ ಧಾವಿಸಿ ಬಂದು ‘ಗಡಿಯಗುಂಟ ಇದ್ದ ನಮ್ಮ ದುರ್ಗಮ ಪಾಳಯಗಳನ್ನು ಪಾರಸೀಕರು ವಶಪಡಿಸಿಕೊಂಡರಂತೆ’ ಎಂದ. ಈ ಬಾರಿ ರಾಕ್ಷಸ ಸ್ವಲ್ಪ ಗಲಿಬಿಲಿಗೊಳಗಾದ. ಆದರೆ ಈ ಹೊರ ದೇಶದ ಆಕ್ರಮಣಕಾರಿಗಳನ್ನು ಮೆಟ್ಟಿ ನಿಲ್ಲುವುದು ಬಲು ದೊಡ್ಡ ಸಂಗತಿಯಾಗಿರಲಿಲ್ಲ. ಅದಕ್ಕೆ ತಕ್ಕ ಸೇನೆ ಕಳಿಸಿದರಾಯ್ತೆಂದುಕೊಂಡು ಸಮಾಧಾನಿಸಿಕೊಂಡ.
ಮಧ್ಯಾಹ್ನ ಒಂದಷ್ಟು ಊಟ ಮಾಡಿ ಅಮಾತ್ಯ ರಾಕ್ಷಸ ಕೈ ಚಾಚಿ ಮಲಗಿದ್ದನಷ್ಟೇ. ಮತ್ತೊಬ್ಬ ಗೂಢಚಾರ ಬಂದ. ‘ಕಾಶಿಪ್ರಸ್ಥದ ಭಾಗದಲ್ಲಿ ಶಕ ಸೇನೆಯೊಂದಿಗೆ ನಡೆದ ಯುದ್ಧದಲ್ಲಿ ನಮ್ಮ ಸೇನೆ ಸೋತು ಗಡಿಯ ಭಾಗ ಅವರ ವಶವಾಗಿದೆ’ ಎಂದ. ರಾಕ್ಷಸನ ನಿದ್ದೆ ಹಾರಿಹೋಯಿತು. ದೂರದೂರದ ನಾಡಿನಿಂದ ಮಗಧ ಸಾಮ್ರಾಜ್ಯದ ಮೇಲೆ ಏರಿ ಬರುತ್ತಿರುವ ಈ ದುಷ್ಟರನ್ನು ಅಟ್ಟಿ ಮೆಟ್ಟಬೇಕೆಂದು ಹಲ್ಲು ಕಡಿಯುತ್ತ ಬಂದ ರಾಕ್ಷಸನೆದುರಿಗೆ ಮತ್ತೊಬ್ಬ ಗೂಢಚಾರ ಹಾಜರಾಗಿ ‘ಸಿಂಧು ದೇಶದಿಂದ ಕುದುರೆಗಳ ಮೇಲೆ ಏರಿ ಬಂದ ವೀರರ ಕಂಡು ಹೆದರಿದ ನಮ್ಮ ಗಡಿಸೇನೆಯ ಕಾವಲು ಪಡೆ ಕದನವನ್ನೇ ಮಾಡದೇ ಶರಣಾಗಿಬಿಟ್ಟಿತಂತೆ!’ ಎಂದು ಸುದ್ದಿ ಒಪ್ಪಿಸಿದ. ಈ ಬಾರಿ ರಾಕ್ಷಸ ಇದನ್ನು ಸಹಜವಾಗಿ ಸ್ವೀಕರಿಸಲು ಸಿದ್ಧವಿರಲಿಲ್ಲ. ಪಾರಸೀಕ, ಸಿಂಧೂ ಪ್ರಾಂತ್ಯದ ರಾಜರುಗಳೆಲ್ಲ ಪರ್ವತ ರಾಜನ ಅಧೀನದಲ್ಲಿರುವವರು. ಹಾಗೆ ಏಕಾಕಿ ಅವರು ದಾಳಿ ಮಾಡುವುದು ಸಾಧ್ಯವೇ ಇಲ್ಲ. ಹಾಗಿದ್ದಲ್ಲಿ ಪರ್ವತೇಶನೇ ಸೈನ್ಯಸಮೇತ ಏರಿ ಬಂದಿದ್ದಾನೆಯೇ, ಅಷ್ಟೆಲ್ಲಾ ಧಾಷ್ಟ್ರ್ಯ ಅವನಿಗೆ ಬಂದಿದ್ದಾದರೂ ಹೇಗೆ? ತನ್ನ ಆಪ್ತರೊಡನೆ ಕೂಡಿ ಸಮಾಲೋಚಿಸತೊಡಗಿದ.
ಅಷ್ಟರೊಳಗೆ ಸತ್ತೇ ಹೋದವನಂತೆ ಕಾಣುತ್ತಿದ್ದ ಗೂಢಚಾರನೊಬ್ಬ ಏದುಸಿರು ಬಿಡುತ್ತ ಓಡೋಡಿ ಬಂದ. ಆತ ಪರ್ವತೇಶ್ವರನ ಸೇನೆಯ ಹೊರಗೆ ಗೂಢಚಯರ್ೆ ನಡೆಸುವಾಗ ಚಾಣಕ್ಯನ ಪಡೆಯವರ ಕೈಗೆ ಸಿಕ್ಕಿಬಿದ್ದಿದ್ದ. ಅವನು ರಾಕ್ಷಸನ ಗೂಢಚಾರನೆಂಬುದು ಗೊತ್ತಾದೊಡನೆ ಚಾಣಕ್ಯ ಅವನಿಗೆ ಇಡಿಯ ಸೇನೆಯ ದರ್ಶನ ಮಾಡಿಸಿದ. ಚಂದ್ರಗುಪ್ತನ ಸೇರುವಿಕೆಯಿಂದ ಸೇನೆಯ ಸಾಮಥ್ರ್ಯ ವೃದ್ಧಿಯಾಗಿರುವುದನ್ನು ನೋಡುವಂತೆ ಮಾಡಿದ. ಚಾಣಕ್ಯರಂತೂ ದಂತಕಥೆಯೇ ಆಗಿಬಿಟ್ಟದ್ದರಿಂದ ಎಲ್ಲಿಗೆ ಕಾಲಿಟ್ಟರೂ ಅವರ ಕುರಿತಂತೆ ರಂಗು-ರಂಗಿನ ಕಥೆ ಗೂಢಚಾರರಿಗೆ ಕೇಳಲು ಸಿಗುತ್ತಿತ್ತು. ಎಲ್ಲಾ ಸುತ್ತಾಡಿಸಿ ಅವರಿಗೊಂದಷ್ಟು ಛಡಿ ಏಟು ಕೊಡಿಸಿ ಕಾರಾಗೃಹದಿಂದ ತಪ್ಪಿಸಿಕೊಳ್ಳಲು ವ್ಯವಸ್ಥೆ ಮಾಡುವಂತೆ ಚಾಣಕ್ಯನ ಆದೇಶವಿತ್ತು. ತಾವೇ ತಪ್ಪಿಸಿಕೊಂಡು ಬಂದೆವೆಂದು ಬೀಗಿದ ಈ ಗೂಢಚಾರರು ರಾಕ್ಷಸನಿಗೆ ಚಾಚೂ ತಪ್ಪದೆ ಎಲ್ಲ ವರದಿಯನ್ನೂ ಮುಟ್ಟಿಸಿದರು. ಲಂಪಾಕಾಧಿಪತಿಯೊಡನೆ ನಡೆಯಬೇಕಿದ್ದ ಯುದ್ಧವನ್ನು ರಕ್ತಪಾತವಿಲ್ಲದೇ ಚಾಣಕ್ಯ ತಪ್ಪಿಸಿದ್ದನ್ನಂತೂ ಚಾರನೂ ಕೊಂಡಾಡತೊಡಗಿದ್ದ! ರಾಕ್ಷಸನ ಕಂಗಳು ನಿಗಿ ನಿಗಿ ಕೆಂಡವಾದವು. ಅವನ ಶೌರ್ಯಕ್ಕೆ ಪ್ರತಿಸ್ಪಧರ್ಿಗಳಿದ್ದರು; ಬುದ್ಧಿವಂತಿಕೆಗೆ ಯಾರೂ ಎದುರಿಲ್ಲವೆಂದು ಭಾವಿಸಿದ್ದ ಆತ. ಅದರಿಂದಲೇ ನಂದ ಸಾಮ್ರಾಜ್ಯವನ್ನು ಇಷ್ಟೂ ಕಾಲ ಕಾಪಾಡಿದ್ದೇನೆಂಬ ಹಮ್ಮು ಕೂಡ. ಈಗ ಚಾಣಕ್ಯನ ಕೌಶಲ ಊರಲ್ಲೆಲ್ಲಾ ಚಚರ್ೆಗೆ ಬಂದಿತ್ತು. ತನ್ನ ಗೂಢಚಾರನೂ ಅವನನ್ನು ಹೊಗಳುವಷ್ಟು. ರಾಕ್ಷಸನ ಅಂತರಂಗ ಕೋಪದಿಂದ ಕೊತಕೊತನೆ ಕುದಿಯುತ್ತಿತ್ತು. ಅಲ್ಲಿಗೆ ಚಾಣಕ್ಯನ ಕೆಲಸ ಅರ್ಧದಷ್ಟು ಮುಗಿದಿತ್ತು. ಕೋಪಕ್ಕೆ ದಾಸನಾದೊಡನೆ ಬುದ್ಧಿ ಸ್ತಿಮಿತ ಕಳೆದುಕೊಳ್ಳುವುದು ಗೊತ್ತಿಲ್ಲದ ಸಂಗತಿಯೇನಲ್ಲ. ರಾಕ್ಷಸನ ತಪ್ಪು ಹೆಜ್ಜೆಗಳೇ ನಂದರ ಚಿತೆಗೆ ಕಟ್ಟಿಗೆಗಳಾಗಲಿವೆ ಎಂಬುದು ಚಾಣಕ್ಯರಿಗೆ ಸ್ಪಷ್ಟವಾಗಿ ತಿಳಿದಿತ್ತು.
ರಾಕ್ಷಸ ಮೊದಲು ಮಹಾರಾಜರಿಗೆ ವಿಷಯ ಮುಟ್ಟಿಸಿದ. ಸುತ್ತಲೂ ಆವರಿಸಿರುವ ಶತ್ರು ಪಾಳಯದ ರಣಕೇಳಿಯನ್ನು ರಾಕ್ಷಸನ ಬಾಯಲ್ಲಿ ಕೇಳಿಯೇ ಅವರ ಎದೆ ಬಡಿತ ಜೋರಾಯ್ತು. ಇವೆಲ್ಲಕ್ಕೂ ಕಾರಣ ಧರ್ಮಛತ್ರದಿಂದ ಹೊರದಬ್ಬಲ್ಪಟ್ಟ ಚಾಣಕ್ಯ ಮತ್ತು ತಮ್ಮದೇ ಸೆರೆಯಿಂದ ಬಿಡುಗಡೆಯಾದ ಚಂದ್ರಗುಪ್ತನೆಂದು ಅರಿತ ಮೇಲಂತೂ ಅವರ ಬುದ್ಧಿ ಸ್ತಿಮಿತ ಕಳೆದುಕೊಂಡಿತು. ಬ್ರಾಹ್ಮಣರನ್ನು ಮನಸೋ ಇಚ್ಛೆ ತೆಗಳಲಾರಂಭಿಸಿದರು. ಎದುರಿಗಿದ್ದ ರಾಕ್ಷಸನೂ ಬ್ರಾಹ್ಮಣನೇ ಎಂಬುದು ಮರೆತು ಹೋಗಿತ್ತು ಅವರಿಗೆ. ರಾಜನೆಂದರೆ ತನ್ನೆಲ್ಲಾ ಪ್ರಜೆಗಳನ್ನು ಮಕ್ಕಳಂತೆ ಕಾಣುವವನು ಮಾತ್ರ. ಒಂದು ವರ್ಗದ ಪರವಾಗಿ ನಿಂತು ಮತ್ತೊಂದು ವರ್ಗವನ್ನು ತುಳಿಯುವವನು ಹೇಗೆ ರಾಜನೆನಿಸಿಕೊಂಡಾನು? ತುಳಿಯುವ ಭರದಲ್ಲಿ ಆತ ಇತರರಿಗೆ ಒಳಿತುಂಟುಮಾಡುವುದನ್ನೇ ಮರೆತುಬಿಡುತ್ತಾನೆ. ಪ್ರಜೆಗಳ ಪಾಲಿಗೆ ಅಂತಹ ರಾಜ ಭಾಗ್ಯವಂತನಾಗದೇ ಕಂಟಕಗಳ ಸರಮಾಲೆಯನ್ನೇ ಹೊತ್ತು ತರುತ್ತಾನೆ. ನಂದರೂ ಈಗ ನಾಡಿಗೆ ಕಂಟಕಪ್ರಾಯರೇ ಆಗಿದ್ದರು. ಅವರನ್ನು ಮಟ್ಟ ಹಾಕಲು ಚಾಣಕ್ಯ ಗಡಿಗೆ ಬಂದು ನಿಂತಿದ್ದ.

'Chess as Art - New York' by
ನಂದರ ಕೋಪಾವೇಶಗಳು ತಣ್ಣಗಾಗಲು ಬಹುಕಾಲ ಹಿಡಿಯಲಿಲ್ಲ. ಧನನಂದ ಒಡನೆಯೇ ರಾಕ್ಷಸನತ್ತ ತಿರುಗಿ ಮುಂದೇನು ಮಾಡುವುದೆಂದು ಪ್ರಶ್ನಾರ್ಥಕವಾಗಿ ನೋಡಿದ. ರಾಕ್ಷಸ ಮನಸಿನಲ್ಲಿಯೇ ಲೆಕ್ಕಹಾಕುತ್ತಾ ಸೈನ್ಯದ ದೃಷ್ಟಿಯಿಂದ ನಾನು ಯೋಚಿಸುತ್ತೇನೆ, ಗ್ರಹಚಾರದ ಪರಿಹಾರದ ಕುರಿತಂತೆ ಜೀವಸಿದ್ಧಿಯವರನ್ನೊಮ್ಮೆ ಕೇಳಿದರೆ ಒಳಿತೆಂದ. ತಕ್ಷಣವೇ ಜೀವಸಿದ್ಧಿಯವರಿಗೆ ಆಹ್ವಾನ ಸಂದಿತು. ಇದನ್ನು ಮೊದಲೇ ಊಹಿಸಿದ್ದ ಅವರು ರಾಜಗೃಹಕ್ಕೆ ಬಂದರು. ಮಂದಸ್ಮಿತರಾಗಿ ಕುಳಿತರು. ರಾಕ್ಷಸ ಹಿಂದಿನ ದಿನ ಅವರು ಹೇಳಿದ್ದನ್ನೆಲ್ಲಾ ನೆನಪಿಸಿಕೊಟ್ಟು ಅಂತೆಯೇ ನಡೆಯುತ್ತಿದೆ ಎಂದ. ಅವನ ಗಮನವೀಗ ‘ಮೇಣದ ಮುದ್ದೆಯಾಗಿರುವ ಮಗಧ’ದ ಮೇಲಿತ್ತು. ಅದನ್ನು ಕರಗದಂತೆ ತಡೆಯುವ ಉಪಾಯಕ್ಕಾಗಿ ಭಿನ್ನವಿಸಿಕೊಂಡ. ಜೀವಸಿದ್ಧಿ ಕಣ್ಮುಚ್ಚಿ ಕುಳಿತ, ಬಗೆ ಬಗೆಯ ಲೆಕ್ಕಾಚಾರ ಹಾಕಿದ. ಗುಣಿಸಿ, ಭಾಗಿಸಿ, ಕೂಡಿ, ಕಳೆದೂ ಇದ್ದಿರಬಹುದು ಯಾರಿಗೆ ಗೊತ್ತು? ಕೊನೆಯಲ್ಲೊಮ್ಮೆ ‘ನದಿತೀರದಲ್ಲಿ ಜಪಶೀಲರಾದ ತಪಸ್ವಿಗಳಿಂದ ಶತ್ರುಪಲಾಯನ ಜಪಾರಂಭವಾಗುವಂತೆ ಮಾಡಿಸಿದರೆ ಅನಿಷ್ಟ ನಿವೃತ್ತಿ ಖಾತ್ರಿ’ ಎಂದ. ಹಾಗೆಂದು ಮುದ್ರಾಮಂಜೂಷದ ವಿವರಣೆ. ಬುದ್ಧಾನುಯಾಯಿಯಾದವನೊಬ್ಬ ಹೀಗೆ ಬ್ರಾಹ್ಮಣ ಆಚರಣೆಗಳನ್ನು ಸೂಚಿಸಬಲ್ಲನೇ ಎಂಬುದಕ್ಕೆ ರುದ್ರಮೂತರ್ಿ ಶಾಸ್ತ್ರಿಗಳು ತಮ್ಮ ಕೃತಿಯಲ್ಲಿ ಉತ್ತರಿಸುತ್ತಾರೆ. ಆತ ಆರಂಭದಲ್ಲಿಯೇ ಕದ್ದು ಮುಚ್ಚಿ ಈ ಬಗೆಯ ಅನೇಕ ಅಧ್ಯಯನಗಳನ್ನು ಮಾಡಿಯೂ ಹೊರಗೆ ವೇಷಧಾರಿಯಾಗಿದ್ದೇನೆಂದು ರಾಕ್ಷಸನ ಬಳಿ ತಪ್ಪೊಪ್ಪಿಕೊಂಡು ಬಿಟ್ಟಿದ್ದರಂತೆ! ರಾಜಾಶ್ರಯ ಬ್ರಾಹ್ಮಣವಿರೋಧಿಗಳಿಗಿದ್ದುದರಿಂದ ಇಂತಹ ಕಪಟವನ್ನು ರಾಕ್ಷಸ ಸ್ವೀಕರಿಸಿದ್ದ.
ಈಗ ಜೀವಸಿದ್ಧಿ ಇಂತಹುದೊಂದು ಜಪಯಜ್ಞದ ಕಲ್ಪನೆ ಮುಂದಿಟ್ಟಾಗ ನಂದರು ಎದುರಾಡಲಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲು ಜೀವಸಿದ್ಧಿಯವರನ್ನೇ ಕೇಳಿಕೊಂಡರು. ಅದೋ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿತ್ತು. ಚಾಣಕ್ಯನಿಂದ ನೇಮಿಸಲ್ಪಟ್ಟ ಬೇರೆ ಬೇರೆ ಗೂಢಚಾರರೆಲ್ಲ ಈ ನೆಪದಲ್ಲಿ ಆಗಾಗ ಸೇರಲು ಅನುಕೂಲವಾಗಿತ್ತು. ಗಂಗಾ ಸರಯೂ ಸಂಗಮ ಸ್ಥಾನದಲ್ಲಿ ವಿಶಾಲ ಜಪಶಾಲೆಯ ನಿಮರ್ಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲು ರಾಜಾಜ್ಞೆಯಾಗಿತ್ತು.
ನದೀತೀರದಲ್ಲಿ ಬ್ರಾಹ್ಮಣರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳು ರೂಪುಗೊಳ್ಳುತ್ತಿವೆ ಎಂಬ ಸುದ್ದಿ ರಾಜ್ಯಾದ್ಯಂತ ಕಾಡ್ಗಿಚ್ಚಾಯ್ತು. ಬ್ರಾಹ್ಮಣರನ್ನು ಕಂಡರೆ ಉರಿದು ಬೀಳುತ್ತಿದ್ದ ರಾಜ ಈಗ ಏಕಾಏಕಿ ಅವರ ಸಹಕಾರ ಬೇಡತೊಡಗಿದ್ದಾನೆಂಬುದೇ ಜನರನ್ನು ಅಚ್ಚರಿಗೆ ದೂಡಿತ್ತು. ಶತ್ರುಪಲಾಯನ ಜಪ ಎಂಬ ಶಬ್ದ ಕೇಳಿದ ಮೇಲಂತೂ ರಾಜರು ಹೆದರಿರುವುದು ಅನುಮಾನಕ್ಕೆಡೆಯಿಲ್ಲದಂತೆ ಸ್ಫುಟವಾಗಿತ್ತು. ಶತ್ರುವಾಗಿ ಚಂದ್ರಗುಪ್ತ-ಚಾಣಕ್ಯರು ನಂದರನ್ನು ಮುಗಿಸಿಬಿಡುವರೆಂಬ ವಿಶ್ವಾಸ ಸಾಮಾನ್ಯ ಜನರಲ್ಲೂ ಬೇರೂರಿಬಿಟ್ಟಿತ್ತು.
ಅಲ್ಲಿಗೆ ಚಾಣಕ್ಯ ಎರಡನೇ ಹಂತದ ಯುದ್ಧ ಗೆದ್ದಿದ್ದ. ಮೊದಲು ನಂದರ ಎದೆಯಲ್ಲಿ ನಡುಕ ಹುಟ್ಟುವಂತೆ ಸುತ್ತಲೂ ಸೈನಿಕರ ಪಡೆ ನಿಲ್ಲಿಸಿದ್ದ. ಅವರ ಕಂಗಳಲ್ಲಿ ನೃತ್ಯ ಮಾಡುತ್ತಿರುವ ಈ ಭಯವನ್ನು ಪುರದ ಜನರು ನೋಡುವಂತೆ ಮಾಡಿದ್ದ. ಪ್ರಜೆಗಳು ಈಗ ಹೊಸ ರಾಜನ ಆಗಮನಕ್ಕೆ ಕಾಯುತ್ತಿರುತ್ತಾರೆ. ಊರ ತುಂಬಾ ಅದರದ್ದೇ ಚಚರ್ೆ. ಜನರ ಚಚರ್ೆ ಕ್ರಮೇಣ ಸೈನ್ಯದಲ್ಲಿ, ಅಧಿಕಾರಿ ವಲಯದಲ್ಲಿ, ವ್ಯಾಪಾರಿಗಳ ಸಮ್ಮುಖದಲ್ಲಿ ಪ್ರತಿಧ್ವನಿಸಲಾರಂಭಿಸುತ್ತದೆ. ನಿಜವಾದ ಯುದ್ಧ ನಡೆವಾಗ ಇವರೆಲ್ಲಾ ಸಹಜವಾಗಿಯೇ ನಂದರ ವಿರುದ್ಧ ನಿಂತುಬಿಡುತ್ತಾರೆ. ಅಮಾಯಕರ ರಕ್ತ ಹರಿಯದೇ ಯುದ್ಧ ಗೆಲ್ಲುವ ಉಪಾಯ.
ಓಹ್! ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆ ಉಪಯೋಗಕ್ಕೆ ಬರುತ್ತಿದ್ದ ನೀತಿಯಲ್ಲ; ಇಂದಿಗೂ ಗೆಲ್ಲುವ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಚಾಣಕ್ಯ ತಂತ್ರವೇ!

Comments are closed.