ವಿಭಾಗಗಳು

ಸುದ್ದಿಪತ್ರ


 

ಸ್ವಾಮಿ ವಿವೇಕಾನಂದರ ಹೆಸರಲ್ಲಿ ಅದೆಷ್ಟು ಸುಳ್ಳು ಹೇಳುತ್ತೀರಿ?

ಮಿಷನರಿಗಳಿಗೆ ವಿವೇಕಾನಂದರ ಪ್ರಭಾವವನ್ನು ಕಡಿಮೆ ಮಾಡಲು ಸುಳ್ಳಿನ ಮೊರೆ ಹೋಗದೆ ಬೇರೆ ಮಾರ್ಗವೇ ಇರಲಿಲ್ಲ. ಇತ್ತ ಅವರು ದನದ ಮಾಂಸ ತಿಂದರೆಂದು ಹೇಳಿ, ಹಿಂದೂಗಳಿಗೆ ಅವರಲ್ಲಿದ್ದ ಶ್ರದ್ಧೆ ಕಡಿಮೆ ಮಾಡಬೇಕು; ಅಮೆರಿಕಾದ ಬಗ್ಗೆ ಅಪಪ್ರಚಾರ ಮಾಡಿದರೆಂದು ಹೇಳಿ, ತಮ್ಮವರಲ್ಲಿ ಅವರ ಬಗ್ಗೆ ಆಕ್ರೋಶ ಹುಟ್ಟುವಂತೆ ಮಾಡಬೇಕು. ಮಿಷನರಿಗಳು ಸೋತರು. ಅವರ ಆತ್ಮ, ಭಾರತದ ಬುದ್ಧಿಜೀವಿಗಳನ್ನು ಹೊಕ್ಕಿತು ಅಷ್ಟೇ.

Swami Vivekananda – The Man and His Mission11

ಹಳೆಯ ಜೋಕೊಂದು ನಿಮಗೆ ನೆನಪಿರಬೇಕು. ಗಂಡ ಹೆಂಡತಿಗೆ ಹೇಳಿದ್ನಂತೆ, ದಶರಥ ಮೂರು ಮದುವೆಯಾಗಿದ್ದ, ನನಗಿನ್ನೂ ಎರಡು ಆಯ್ಕೆಗಳು ಬಾಕಿ ಇವೆ! ಹೆಂಡತಿ ತಡ ಮಾಡಲಿಲ್ಲ, ದ್ರೌಪದಿ ನೆನಪಿದ್ದಾಳೆ ತಾನೆ? ಅಂದಳು. ಗಂಡ ಹ್ಯಾಪು ಮೋರೆ ಹಾಕಿಕೊಂಡು, ತಮಾಷೆ ಮಾಡಿದೆ ಕಣೇ ಅನ್ನುತ್ತ ಹೆಹೆ ಎಂದು ನಕ್ಕನಂತೆ.
ತಾವು ಮಾಡುವ ದುಷ್ಟ ಕೆಲಸಕ್ಕೆ ದೊಡ್ಡವರ ಸಮರ್ಥನೆ ತಂದಿಡುವುದು ಹೇತ್ಲಾಂಡಿಗಳ ಸಹಜ ಅಭ್ಯಾಸ. ಇತ್ತೀಚೆಗೆ ಗೋಮಾಂಸ ಭಕ್ಷಣೆಯ ನೆವದಲ್ಲಿ ಸ್ವಾಮಿ ವಿವೇಕಾನಂದರನ್ನು ಎಳೆತಂದ ಪರಿ ಇದೆಯಲ್ಲ, ಇದು ಅಂತಹದ್ದೆ ಒಂದು ಬಗೆ. ವೇದಗಳನ್ನು ತನಗೆ ಬೇಕಾದಂತೆ ತಿರುಚಿ, ಗೀತೆಯಲ್ಲಿ ತನಗೆ ಬೇಕಾದ ಸಾಲುಗಳನ್ನು ಮಾತ್ರ ಆರಿಸಿ, ಹಿಂದೂ ಧರ್ಮಕ್ಕಿಂತ ಇಸ್ಲಾಮ್ ಶ್ರೇಷ್ಠ ಎನ್ನುವ ಜಾಕಿರ್ ನಾಯಕನಿಗೂ ಇವರಿಗೂ ಯಾವ ವ್ಯತ್ಯಾಸವೂ ಇಲ್ಲ. ಇವರೆಲ್ಲ ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದರಚುವ ಜಾಹೀರಾತಿನ ಬಾಲ ಕಲಾವಿದರಷ್ಟೇ.

ಆದರೂ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಬೇಕೇಬೇಕಲ್ಲ? ದನದ ಮಾಂಸ ಮತ್ತು ವಿವೇಕಾನಂದರ ಕುರಿತಂತೆ ಮುಂದಿಟ್ಟಿರುವ ಚಚರ್ೆಗಳಿಗೆ ಸಮರ್ಥವಾದ ದಾಖಲೆಗಳನ್ನು ತಂದೊದಗಿಸಲೇ ಬೇಕಲ್ಲ?

ಸ್ವಾಮಿ ವಿವೇಕಾನಂದರು ದನದ ಮಾಂಸ ತಿಂದಿದ್ದರೆಂಬುದು ಇವರ ಮೊದಲ ಪಿರಿಪಿರಿ. ಇರಲಿ. ಅದೊಮ್ಮೆ ದಕ್ಷಿಣೇಶ್ವರಕ್ಕೆ ಬಂದ ನರೇಂದ್ರ, ನಾನಿಂದು ನಿಷಿದ್ಧ ಆಹಾರ ತಿಂದುಬಂದಿದ್ದೀನೆಂದು ಹೇಳಿದ. ಕೂಡಲೆ ರಾಮಕೃಷ್ಣರು, ಸದಾ ಭಗವಂತನಲ್ಲೆ ರಮಿಸುತ್ತಿರುವವ ಯಾವ ಆಹಾರವನ್ನೆ ತಿಂದರೂ ಅದು ಯಜ್ಞಕ್ಕೆ ಬಳಸುವ ಹವಿಷಾನ್ನವನ್ನು ತಿಂದಂತೆ ಎಂದಂದು ನಕ್ಕರು. ಹೌದು, ನರೇಂದ್ರ ಪರಿವಾರದ ಹಿನ್ನೆಲೆಯಿಂದ ನೋಡುವುದಾದರೆ ಮಾಂಸಾಹಾರಿಯೇ. ಆತ ಬಹುತೇಕರು ಭಾವಿಸಿರುವಂತೆ ಬ್ರಾಹ್ಮಣ ಸನ್ಯಾಸಿಯಾಗಿರಲಿಲ್ಲ. ವಿದೇಶಗಳಲ್ಲಿ ಅನೇಕರು ಸ್ವಾಮಿ ವಿವೇಕಾನಂದರ ಖ್ಯಾತಿ ಸಹಿಸಲಾಗದೆ ಅವರು ಸನ್ಯಾಸಿಯೇ ಅಲ್ಲವೆಂದು ಪತ್ರಿಕೆಗಳಲ್ಲಿ ಬರೆಸಿ ಹುಯಿಲೆಬ್ಬಿಸಿದ್ದರು. ಹೀಗೆ ಗಲಾಟೆ ಮಾಡುತ್ತ ಸ್ವಾಮೀಜಿ ಹೆಸರು ಕೆಡಿಸುವಲ್ಲಿ ನಮ್ಮವರ ಪಾತ್ರವೂ ಸಾಕಷ್ಟಿತ್ತು. ಕೆಲವರಿಗೆ ತಮ್ಮ ನಡುವಿನ ವ್ಯಕ್ತಿಯೊಬ್ಬ ಈ ಪರಿ ಹೆಸರು ಮಾಡಿದ್ದು ಕಿರಿಕಿರಿಯಾಗಿತ್ತು. ಇನ್ನು ಕೆಲವರಿಗೆ ಮಿಷನರಿಗಳ ಋಣಸಂದಾಯ ಮಾಡಬೇಕಿತ್ತು. ಸರ್ವಧರ್ಮ ಸಮ್ಮೇಳನದ ಆಯೋಜಕರಲ್ಲಿ ಒಬ್ಬರಾಗಿದ್ದ ಡಾ.ಬರೋಸ್, ವಿವೇಕಾನಂದರಲ್ಲಿ ಹಿಂದೂ ಧರ್ಮವನ್ನು ಜಗದ್ವಿಖ್ಯಾತಗೊಳಿಸುವ ಶಕ್ತಿಯನ್ನು ಕಂಡು ಅಸೂಯೆಯಿಂದ ಕುದ್ದುಹೋಗಿದ್ದ. ಅಮೆರಿಕಾದಲ್ಲಿದ್ದಷ್ಟೂ ದಿನ ಅವರನ್ನು ಕಾಡಿದ. ಅಲ್ಲದೆ, `ಚಿಕಾಗೋದಲ್ಲೊಮ್ಮೆ ನಾನು ಸ್ವಾಮೀಜಿಯನ್ನು ಊಟಕ್ಕೆ ಕರೆದೆ. ಅವರು ದನದ ಮಾಂಸ ಬೇಕೆಂದು ಹೇಳಿದ್ದಲ್ಲದೆ, ಎಲ್ಲ ಮಾಂಸಗಳ ನಡುವೆ ನಾನು ದನದ ಮಾಂಸವನ್ನು ಹೆಚ್ಚು ಇಷ್ಟಪಡುತ್ತೇನೆ ಎಂದೂ ಹೇಳಿದ್ದರು ಎಂದು ಟ್ರಿಪ್ಲಿಕೆನ್ ಸಾಹಿತ್ಯ ಸಂಘದ ಭಾಷಣದಲ್ಲಿ ಹೇಳಿದ. ಈ ಮಾತುಗಳು ಅಪ್ಪಟ ಸುಳ್ಳೆಂದು ವಿವೇಕಾನಂದರ ಪಾಶ್ಚಾತ್ಯ ಶಿಷ್ಯರು ದಾಖಲಿಸುತ್ತಾರೆ. (ಲೈಫ್ ಆಫ್ ಸ್ವಾಮಿ ವಿವೇಕಾನಂದ, ಬೈ ವೆಸ್ಟನರ್್ ಅಂಡ್ ಈಸ್ಟನರ್್ ಡಿಸೈಪಲ್ಸ್; 2 : 273)

ಇದೇ ಬರೋಸ್, ಅಮೆರಿಕಾಕ್ಕೆ ಹೋಗಿ ವಿವೇಕಾನಂದರು ಭಾರತದಲ್ಲಿ ಅಮೆರಿಕನ್ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುತ್ತಿದ್ದಾರೆಂದು ಪುಕಾರು ಹಬ್ಬಿಸಿದ್ದ. ಅದಕ್ಕೆ ಪ್ರತಿಯಾಗಿ ವಿವೇಕಾನಂದರ ವಿದೇಶೀ ಶಿಷ್ಯೆ, ಅವರು ಅಮೆರಿಕಾದ ಮಹಿಳೆಯರ ಕುರಿತಂತೆ, ನಾನು ಮಹಿಳೆಯಾಗಿ ಮರುಜನ್ಮ ಪಡೆಯುವುದೇ ಆದರೆ ಅಮೆರಿಕನ್ ಮಹಿಳೆಯಾಗಿ ಬರುತ್ತೇನೆ ಎಂದು ಹೇಳಿದ್ದನ್ನು ಹೆಮ್ಮೆಯಿಂದ ದಾಖಲಿಸಿದ್ದಾಳೆ. (- ಅದೇ ಪುಸ್ತಕ, ಪುಟ 272)

ಮಿಷನರಿಗಳಿಗೆ ವಿವೇಕಾನಂದರ ಪ್ರಭಾವವನ್ನು ಕಡಿಮೆ ಮಾಡಲು ಸುಳ್ಳಿನ ಮೊರೆ ಹೋಗದೆ ಬೇರೆ ಮಾರ್ಗವೇ ಇರಲಿಲ್ಲ. ಇತ್ತ ಅವರು ದನದ ಮಾಂಸ ತಿಂದರೆಂದು ಹೇಳಿ, ಹಿಂದೂಗಳಿಗೆ ಅವರಲ್ಲಿದ್ದ ಶ್ರದ್ಧೆ ಕಡಿಮೆ ಮಾಡಬೇಕು; ಅಮೆರಿಕಾದ ಬಗ್ಗೆ ಅಪಪ್ರಚಾರ ಮಾಡಿದರೆಂದು ಹೇಳಿ, ತಮ್ಮವರಲ್ಲಿ ಅವರ ಬಗ್ಗೆ ಆಕ್ರೋಶ ಹುಟ್ಟುವಂತೆ ಮಾಡಬೇಕು. ಮಿಷನರಿಗಳು ಸೋತರು. ಅವರ ಆತ್ಮ, ಭಾರತದ ಬುದ್ಧಿಜೀವಿಗಳನ್ನು ಹೊಕ್ಕಿತು ಅಷ್ಟೇ.

ಮೇರಿ ಲೂಯಿ ಬಕರ್್, ವಿವೇಕಾನಂದರ ಕಾಲಾನಂತರ ಪಶ್ಚಿಮದ ಅನೇಕ ಪತ್ರಿಕೆಗಳನ್ನು ಜಾಲಾಡಿ ಸ್ವಾಮೀಜಿಯ ಒಡನಾಟದಲ್ಲಿದ್ದ ಜನರನ್ನು ಭೇಟಿ ಮಾಡಿ ಹೊಸಹೊಸ ವಿಚಾರಗಳನ್ನು ಹೆಕ್ಕಿ ತೆಗೆದಳು. ಅದರಲ್ಲಿ ಒಂದೆಡೆ ಆಕೆ ಬರೆಯುತ್ತಾಳೆ, ಸ್ವಾಮಿ ವಿವೇಕಾನಂದರು ಮಾರ್ಗರೆಟ್ ನೊಬೆಲ್ಳ ತಾಯಿಗೆ ಮಗನಂತಿದ್ದರು. ನೊಬೆಲ್ಳ ಕಿರಿಯ ಸಹೋದರಿ, ತಾನೂ ಅಕ್ಕನಂತೆ ವಿವೇಕಾನಂದರ ಸೇವಾಕಾರ್ಯಗಳಿಗೆ ಸಮಪರ್ಿಸಿಕೊಳ್ಳಬೇಕೆಂಬ ತೀವ್ರ ಆಕಾಂಕ್ಷೆಯನ್ನು ಹೊಂದಿದ್ದಳು. ಆಕೆಯ ತಮ್ಮ ರಿಚ್ಮಂಡನಂತೂ ಅಕ್ಕನ ದುಃಖಕ್ಕೆ ಪರಿಹಾರ, ಮತ್ತು ಕ್ರಿಸ್ತನಂತೆ ಬದುಕಿನ ಅರ್ಥ, ಮತ್ತು ಭಗವಂತನ ಕುರಿತ ಪ್ರಶ್ನೆಗಳಿಗೆ ಸಮರ್ಥ ಪರಿಹಾರ ಕೊಡಬಲ್ಲ ಏಕೈಕ ವ್ಯಕ್ತಿ ವಿವೇಕಾನಂದ ಎಂದು ಭಾವಿಸಿದ್ದ. ಈ ಪರಿಯ ಪ್ರೀತಿ ಇದ್ದರೂ ಅದೊಮ್ಮೆ ರಿಚ್ಮಂಡ್ ತಮಾಷೆಗೆ ಸ್ವಾಮೀಜಿಗೆ ತನ್ನ ಅಕ್ಕನ ವಿರುದ್ಧ ದೂರು ಕೊಟ್ಟ; ನಿವೇದಿತಾ ಹಿಂದೂ ಆಚರಣೆಗಳನ್ನು ಐರಿಷ್ ಕುಟುಂಬದ ಮೇಲೆ ಹೇರುತ್ತಿದ್ದಾಳೆ. ದನದ ಮಾಂಸವನ್ನು ಮನೆಯಲ್ಲಿ ಅಡುಗೆಗೆ ಬಳಸದಂತೆ ತಡೆದಿದ್ದಾಳೆ ಎಂದ! (- ಸ್ವಾಮಿ ವಿವೇಕಾನಂದ ಇನ್ ದ ವೆಸ್ಟ್ ನ್ಯೂ ಡಿಸ್ಕವರೀಸ್; 5:74).

ಈ ಸಾಲುಗಳ ಅರ್ಥವೇನು? ದನದ ಮಾಂಸವನ್ನು ವಿವೇಕಾನಂದರು ತಿಂದು ತೇಗಿದ್ದು ನಿಜವೇ ಆಗಿದ್ದರೆ, ನಿವೇದಿತೆ ತನ್ನ ಮನೆಯ ಆಹಾರದ ಪಟ್ಟಿಯಿಂದ ಅದನ್ನು ಹೊರಗಿಡಲು ತಾಕೀತು ಮಾಡಿದ್ದೇಕೆ? ಅಮೆರಿಕನ್ ಶಿಷ್ಯೆ ಜೋಸೆಫೀನ್ ಮ್ಯಾಕ್ಲಾಯ್ಡ್, ಆರೋಗ್ಯ ಸರಿ ಇಲ್ಲವೆಂಬುದನ್ನು ಸ್ವಾಮೀಜಿ ಯಾವತ್ತೂ ತೋರ್ಪಡಿಸಿಕೊಳ್ತಿರಲಿಲ್ಲ. ಬೆಳಗ್ಗೆ ತಿಂಡಿ ತಿನ್ನುತ್ತಿದ್ದರು. ಮಧ್ಯಾಹ್ನದ ಊಟಕ್ಕೆ ಸಾಧಾರಣವಾಗಿ ಆಡಿನ ಮಾಂಸವಿರುತ್ತಿತ್ತು ಮತ್ತು ದನದ ಮಾಂಸ ಎಂದಿಗೂ ಇಲ್ಲ. ತರಕಾರಿ – ಹಣ್ಣುಗಳನ್ನು ಮೇಜಿನ ಮೇಲಿಡಲಾಗುತ್ತಿತ್ತು. ಜೊತೆಗೆ ಅವರಿಗಿಷ್ಟವಾಗುವ ಬಟಾಣಿ ಕಾಳುಗಳನ್ನೂ ಇಡಲಾಗುತ್ತಿತ್ತು ಎಂದು ಬರೆದುಕೊಂಡಿದ್ದಾಳೆ. (ಅದೇ ಪುಸ್ತಕ, 5:225)

ದನದ ಮಾಂಸ ಎಂದಿಗೂ ಇಲ್ಲವೆಂದು ಸ್ಪಷ್ಟವಾದ ಮೇಲೂ ಸ್ವಾಮೀಜಿ ದನದ ಮಾಂಸ ತಿನ್ನುತ್ತಿದ್ದರೆಂಬ ಉಲ್ಲೇಖ ಈ ಪುಣ್ಯಾತ್ಮರಿಗೆ ದೊರೆತದ್ದೆಲ್ಲಿ!?

ಮೇರಿ ಲೂಯಿಯ ಸಂಶೋಧನೆಯ ಈ ಆರೂ ಸಂಪುಟಗಳಲ್ಲಿ ನಾಲ್ಕು ಕಡೆ, ದೇಶೀ ಮತ್ತು ವಿದೇಶೀ ಭಕ್ತರು ಸಂಕಲಿಸಿರುವ ಅವರ ಜೀವನ ಚರಿತ್ರೆಯ ಎರಡು ಸಂಪುಟಗಳಲ್ಲಿ ಏಳು ಕಡೆ, ಮತ್ತು ಕೃತಿಶ್ರೇಣಿಯ ಒಂಭತ್ತು ಸಂಪುಟಗಳಲ್ಲಿ ಹದಿನಾಲ್ಕು ಕಡೆ ದನದ ಮಾಂಸದ ಉಲ್ಲೇಖ ಬರುತ್ತದೆ. ಆದರೆ ಇವಿಷ್ಟರಲ್ಲಿ ಯಾವುದೂ ಸ್ವಾಮೀಜಿ ಅದನ್ನು ತಿಂದರೆಂದು ಸಮಥರ್ಿಸುವುದಿಲ್ಲ. ಬದಲಿಗೆ, ಅವರು ಅದರಿಂದ ದೂರವಿದ್ದರೆಂಬುದನ್ನೆ ಮತ್ತಮತ್ತೆ ದಾಖಲಿಸುತ್ತವೆ. ಮರುಳರಿಗೆ, ದುರುಳರಿಗೆ ಇದನ್ನು ಅರ್ಥ ಮಾಡಿಸುವುದು ಹೇಗೆ?

ವೇದ ಕಾಲದಲ್ಲಿ ಗೋಮಾಂಸ ಭಕ್ಷಣೆಯ ಕುರಿತಂತೆ ಇರುವ ವಿವೇಕಾನಂದರ ಮಾತುಗಳು ಅವರ ಕೃತಿಶ್ರೇಣಿಯಿಂದ ಹೆಕ್ಕಿ ತೆಗೆದಂಥವು. 1893 ಜನವರಿ 28ರಂದು ಮಧುರಾ ಮೇಲ್ ಪ್ರಕಟಿಸಿದ ವರದಿಯಲ್ಲಿ, ಸ್ವಾಮೀಜಿ, `ಪರಿಪೂರ್ಣ ಧರ್ಮವೆಂದರೆ ವೈದಿಕ ಧರ್ಮ. ವೇದಗಳಲ್ಲಿ ಕಡ್ಡಾಯ ಮತ್ತು ಐಚ್ಛಿಕವೆಂಬ ಎರಡು ಭಾಗಗಳಿವೆ. ಈ ಕಡ್ಡಾಯವಾದ ಕಟ್ಟಳೆಗಳೇ ಹಿಂದೂ ಧರ್ಮ. ಐಚ್ಛಿಕವಾದದ್ದು ಕಾಲಧರ್ಮವನ್ನು ಅನುಸರಿಸಿ ಬದಲಾಗುತ್ತಿರುತ್ತವೆ. ಋಷಿಗಳು ಅವುಗಳನ್ನು ಬದಲಿಸುವರು ಎಂದಿದ್ದಾರೆ ಎಂದು ಬರೆದಿತ್ತು. (ಕಂಪ್ಲೀಟ್ ವಕ್ಸರ್್, 1:523 )

ಈ ಐಚ್ಛಿಕ ಭಾಗಗಳಲ್ಲಿಯೇ ಶೂದ್ರರನ್ನು ಮದುವೆಯಾಗುತ್ತಿದ್ದ, ಮಾಂಸಾಹಾರಿಗಳಾಗಿದ್ದ ಬ್ರಾಹ್ಮಣರ ಉಲ್ಲೇಖಗಳನ್ನು ಸ್ವಾಮೀಜಿ ತಂದಿದ್ದಾರೆ. ಅಷ್ಟೇ ಅಲ್ಲ, ಒಂದು ಕಾಲದಲ್ಲಿ ದನದ ಮಾಂಸ ಸೇವಿಸುವುದು ನೈತಿಕವಾಗಿತ್ತು. ಅಂದಿನ ವಾತಾವರಣ ತಂಪಿನದಾಗಿತ್ತು. ದವಸ ಧಾನ್ಯಗಳ ಪರಿಚಯವೂ ಅಷ್ಟಾಗಿರಲಿಲ್ಲ. ಮಾಂಸವೇ ಆಗ ಮುಖ್ಯ ಆಹಾರವಾಗಿತ್ತು. ಆ ಕಾಲ ಮತ್ತು ಅಂತಹ ಪರಿಸ್ಥಿತಿಗಳಲ್ಲಿ ದನದ ಮಾಂಸ ಅತ್ಯಗತ್ಯವಾಗಿತ್ತು. ಆದರೆ ಈಗ ದನದ ಮಾಂಸ ಸೇವನೆ ನಿಷಿದ್ಧವಾಗಿದೆ (- ಕಂಪ್ಲೀಟ್ ವಕ್ಸರ್್, 6: 109) – ಎಂದು ಹೇಳುವ ಮೂಲಕ ಹತ್ತು ಸಾವಿರ ವರ್ಷಗಳ ಹಿಂದಿನ ಪದ್ಧತಿಯನ್ನು ನಮ್ಮೆದುರು ಅನಾವರಣ ಮಾಡಿದ್ದಾರೆ.

ಶೀತಲಯುಗ ಮುಗಿದೊಡನೆ ಶುರುವಾಗಿದ್ದು ಋಗ್ವೇದ ಪೂರ್ವ ಕಾಲ. ಅದನ್ನು ಅನುಸರಿಸಿದ್ದು ಋಗ್ವೇದದ ಕಾಲ ಎನ್ನುವ ಇತ್ತೀಚಿನ ಸಂಶೋಧನೆಗಳನ್ನು ಒಪ್ಪುವುದೇ ಆದರೆ, ಈ ಮಾತು ಬಲು ತೂಕದ್ದೇ. ಋಷಿಗಳು ದನದ ಮಾಂಸವನ್ನು ತಿನ್ನುತ್ತಿದ್ದರೆನ್ನುವುದು ಭಾರತದ ಇತಿಹಾಸವನ್ನು ಕೃಷಿಯುಗಕ್ಕೂ ಹಿಂದಕ್ಕೊಯ್ಯುತ್ತದೆ. ನಿನ್ನೆ ಮೊನ್ನೆ ಹುಟ್ಟಿದ ಸಂಸ್ಕೃತಿಯಲ್ಲ ಇದು, ಸಹಸ್ರ ಸಹಸ್ರ ವರ್ಷಗಳ ಹಿಂದಿನದು ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಸ್ವಾಮಿ ವಿವೇಕಾನಂದರು, ದನದ ಮಾಂಸವನ್ನು ತಿನ್ನದೆ ಯಾವ ಬ್ರಾಹ್ಮಣನೂ ಬ್ರಾಹ್ಮಣನಾಗಿ ಉಳಿಯಲಾಗದ ಕಾಲವೊಂದಿತ್ತು. ಕಾಲಕ್ರಮೇಣ ನಮ್ಮದು ಕೃಷಿಪ್ರಧಾನ ಜೀವನ ಪದ್ಧತಿಯಾಗಿ ಬೆಳೆದುದರಿಂದ, ಅತ್ಯುತ್ತಮ ಎತ್ತುಗಳನ್ನು ಕೊಲ್ಲುವುದು ದನದ ಕುಲದ ನಾಶಕ್ಕೆ ಕಾರಣವೆಂದರಿತು, ಗೋಹತ್ಯೆಯನ್ನು ಮಹಾಪಾಪವೆಂದು ಪರಿಗಣಿಸಲು ಪ್ರಾರಂಭಿಸಿದರು ಎಂದಿದ್ದಾರೆ (ಕಂಪ್ಲೀಟ್ ವಕ್ರ್ಸ; 3: 174).

ಅಷ್ಟೇ ಅಲ್ಲ, ಮಧುರೆಯ ಬಿನ್ನವತ್ತಳೆಗೆ ಕೊಟ್ಟ ಈ ಉತ್ತರದಲ್ಲಿ, ಇತರ ರಾಷ್ಟ್ರಗಳಂತೆ ನಾವು ಪ್ರಗತಿಗಾಮಿಗಳಾಗುವುದು ಮಾತ್ರವಲ್ಲ, ಹಿಂದೂಗಳಿಗೆ ಮಾತ್ರ ಸಾಧ್ಯವಾಗುವಂಥಹ ಸಂಪ್ರದಾಯ ನಿಷ್ಠೆಯನ್ನೂ ಕಾಪಾಡಿಕೊಳ್ಳೋಣ ಎಂದು ಘೋಷಿಸಿದ್ದರು.

ವಿವೇಕಾನಂದರ ಮಾತೇ ಬುದ್ಧಿವರ್ಗಕ್ಕೆ ಆಧಾರವೆನ್ನುವುದಾದರೆ, ಇಂದು ದೇಶದಲ್ಲಿ ಆಗುತ್ತಿರುವುದು ಸಮರ್ಥವಾಗಿಯೇ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಗುರುತಿಸಿಕೊಳ್ಳುವ ರೀತಿ ಪ್ರಗತಿಗಾಮಿಯಾದರೆ, ಗೋಹತ್ಯಾ ನಿಷೇಧ ಸಂಪ್ರದಾಯ ನಿಷ್ಠೆಯೇ.

svamiji

ಸ್ವಾಮೀಜಿ ಭಕ್ತಿಯೋಗದ ತಯಾರಿ ಕುರಿತಂತೆ ಮಾತನಾಡುತ್ತಾ, ದನದ ಮಾಂಸದ ಪ್ರಚಾರ ಮಾಡಿದ ಜ್ಞಾನಪಿತ್ಥರನೇಕರ ಹುಬ್ಬು ಮೇಲೇರಿಸಬಲ್ಲ ಸ್ಫೋಟಕ ಮಾಹಿತಿ ಹೊರಹಾಕುತ್ತಾರೆ. `ಇಂಗ್ಲೆಂಡಿನಲ್ಲಿ ಕಟುಕನೊಬ್ಬ ನ್ಯಾಯಾಲಯದ ಉನ್ನತ ಹುದ್ದೆಗೇರುವಂತಿಲ್ಲ. ಏಕೆಂದರೆ ಆತ ವ್ಯಕ್ತಿತ್ವದಿಂದ ಕ್ರೂರಿಯಾಗಿರುತ್ತಾನೆ ಎನ್ನುತ್ತಾರೆ. ( ಕಂಪ್ಲೀಟ್ ವಕ್ಸರ್್, 4: 5). ಬುದ್ಧಿಜೀವಿಗಳ ದೃಷ್ಟಿಯಲ್ಲಿ ಮುಂದುವರಿದ ರಾಷ್ಟ್ರದ ಪರಿಸ್ಥಿತಿ ಇದು!

ದಲಾವಣೆಗಳು ಕಾಲಕಾಲಕ್ಕೆ ಆಗಿವೆ. ಜಾಟರು ಕ್ರಿಶ್ಚಿಯನ್ನರನ್ನು, ಮುಸ್ಲಿಮರನ್ನು ಮದುವೆಯಾಗಿಯೂ ಹಿಂದೂವಾಗುಳಿಯುತ್ತಿದ್ದ ಕಾಲವೊಂದಿತ್ತು. ಪಂಜಾಬಿನ ಹಳ್ಳಿಗಳಲ್ಲಿ ಹಂದಿಯನ್ನು ತಿನ್ನದವ ಹಿಂದುವೇ ಆಗಿರುತ್ತಿರಲಿಲ್ಲ. ನೇಪಾಳದಲ್ಲಿ ಬ್ರಾಹ್ಮಣ ಯಾವ ವರ್ಣದವರನ್ನು ಬೇಕಿದ್ದರೂ ಮದುವೆಯಾಗಬಹುದಾಗಿತ್ತು. ಅದೇ ವೇಳೆಗೆ ಬಂಗಾಳದಲ್ಲಿ ತನ್ನದೇ ಕುಲದ ಉಪಜಾತಿಯವರನ್ನೂ ಬ್ರಾಹ್ಮಣ ಮದುವೆಯಾಗುವಂತಿರಲಿಲ್ಲ. ಇಷ್ಟೆಲ್ಲ ಇದ್ದಾಗ್ಯೂ ಹಿಂದೂಗಳ ನಡುವೆ ಇದ್ದ ಏಕಮಾತ್ರ ಸಮಾನ ಅಂಶವೆಂದರೆ, ಗೋವಿನ ಮಾಂಸ ತಿನ್ನದಿರುವುದು ಮಾತ್ರ. ( – ಕಂಪ್ಲೀಟ್ ವಕ್ಸರ್್; 3: 445) ಎಂಬುದನ್ನು ಸ್ವಾಮೀಜಿ ಸ್ಪಷ್ಟವಾಗಿ ಗುರುತಿಸಿದ್ದರು. ಅನೇಕ ಕಡೆಗಳಲ್ಲಿ ಈ ಮಾತನ್ನು ಅವರು ಪುನರುಚ್ಚರಿಸಿದ್ದಾರೆ. ಹಿಂದೂ ಧರ್ಮದ ತಳಪಾಯವನ್ನು ಗುರುತಿಸಿ, ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವುದು ನನ್ನ ಉದ್ದೇಶ. ಸದ್ಯದ ಪರಿಸ್ಥಿತಿಯಲ್ಲಿ ಹಿಂದೂ ಛತ್ರದಡಿಯಲ್ಲಿ ಮೂರು ಗುಂಪುಗಳಿವೆ. ಸಂಪ್ರದಾಯವಾದಿ, ಮುಸಲ್ಮಾನರ ಕಾಲದ ಪ್ರಭಾವಕ್ಕೊಳಗಾದವರು, ಮತ್ತು ಪ್ರಸ್ತುತ ಕಾಲದ ಪ್ರಭಾವಕ್ಕೊಳಗಾದ ಗುಂಪುಗಳು. ಇಷ್ಟಾದರೂ ಉತ್ತರದಿಂದ ಹಿಡಿದು ದಕ್ಷಿಣದವರೆಗೆ ಎಲ್ಲ ಹಿಂದೂಗಳೂ ಒಂದು ಸಮಾನ ವಿಚಾರವನ್ನು ಒಪ್ಪುತ್ತಾರೆಂದರೆ, ಅದು ಗೋಮಾಂಸ ತಿನ್ನಬಾರದೆಂಬುದು ಮಾತ್ರ ( ಕಂಪ್ಲೀಟ್ ವಕ್ಸರ್್; 5: 226)
ಹುಶಃ ಓದುಗರಿಗೆ ಈಗ ಅರ್ಥವಾಗಿರಬೇಕು. ಹಿಂದುತ್ವ ನಾಶದ ಏಕೈಕ ಮಾರ್ಗ ಗೋವಿನ ಮೇಲಿರುವ ಪ್ರೇಮ ನಾಶ ಎನ್ನುವುದನ್ನು ಅಥರ್ೈಸಿಕೊಂಡಿರುವ ಕ್ಷುದ್ರ ಶಕ್ತಿಗಳ ಪ್ರಯತ್ನವಿದು. ಮಹಾರಾಷ್ಟ್ರ, ಹಯರ್ಾಣಾದಿಯಾಗಿ ಒಂದೊಂದೇ ರಾಜ್ಯಗಳು ಗೋಹತ್ಯಾ ನಿಷೇಧ ಜಾರಿಗೆ ತರುತ್ತಾ ರಾಷ್ಟ್ರೀಯ ಪುನಜರ್ಾಗೃತಿಗೆ ಪ್ರಯತ್ನಿಸುತ್ತಿರುವುದು ಇವರಿಗೆ ಸಹಿಸಲಾಗುತ್ತಿಲ್ಲ. ಇಂತಹಾ ಢೋಂಗಿ ಸುಧಾರಣಾವಾದಿಗಳನ್ನು ಗಮನದಲ್ಲಿರಿಸಿಕೊಂಡೇ ಸ್ವಾಮಿ ವಿವೇಕಾನಂದರು ನಮ್ಮ ಸ್ಮೃತಿಕಾರರು ಜಾತಿ ಪದ್ಧತಿಯನ್ನು ವಿರೋಧಿಸಿದ್ದರು. ಆದರೆ ಅವರು ಇಂದಿನ ಆಧುನಿಕರಂತೆ ಅಲ್ಲ. ಜಾತಿ ಪದ್ಧತಿಯನ್ನು ರದ್ದು ಮಾಡಬೇಕು ಎಂದರೆ ಊರಿನ ಜನರೆಲ್ಲ ಒಟ್ಟಿಗೆ ಕುಳಿತು ದನದ ಮಾಂಸ ತಿಂದು ಶರಾಬು ಕುಡಿಯಬೇಕೆಂದೇನಿಲ್ಲ ಎಂದು ಮುಖದ ತುಂಬ ಉಗಿದಿದ್ದಾರೆ. ನಿಜವಾದ ಸಮಾಜಸುಧಾರಕ ಮಾತ್ರ ಇದನ್ನು ಅಥರ್ೈಸಿಕೊಳ್ಳಬಲ್ಲ. ಉಳಿದವರು ಮುಖ ಒರೆಸಿಕೊಂಡು ಮತ್ತೆ ದನದ ಮಾಂಸ ತಿಂದು ಬೊಂಬಡಾ ಬಜಾಯಿಸಬಲ್ಲವರು ಅಷ್ಟೇ.
ಬಿಡಿ. ಅಲೆಗ್ಸಾಂಡರನ ವಿಜಯ ಯಾತ್ರೆಯೇ ಹಿಂದೂ ಧರ್ಮವನ್ನು ಅಲುಗಾಡಿಸಲಿಲ್ಲ. ಮುಸಲ್ಮಾನರ ದಂಡಯಾತ್ರೆಗಳು, ದಾಳಿಗಳು ದಂಡವಾದವು. ಸೂರ್ಯ ಮುಳುಗದ ಕ್ರಿಶ್ಚಿಯನ್ ಸಾಮ್ರಾಜ್ಯವು ಅಸ್ತಗೊಂಡಿತು. ಈಗ ನಿಜವಾದ ಹಿಂದೂ ಪುನಜರ್ಾಗೃತಿಯ ಹೊತ್ತು. ಜಾತಿಮತಪಂಥಗಳ ಎಲ್ಲೆಯನ್ನು ಮೀರುವುದಷ್ಟೇ ಅಲ್ಲ, ಈ ಧರ್ಮ ಗಡಿಯನ್ನೂ ದಾಟಿ ವಿಶ್ವವನ್ನಪ್ಪುವ ಕಾಲ ಸನ್ನಿಹಿತವಾಗುತ್ತಿದೆ. ಕಾಡ್ಗಿಚ್ಚು ಕಂಡಾಗ ನರಿಗಳು ಊಳಿಡುವುದು ಸಹಜ. ಚಿಂತಿಸಬೇಕಾಗಿಲ್ಲ. ಅಷ್ಟೇ

Comments are closed.