ವಿಭಾಗಗಳು

ಸುದ್ದಿಪತ್ರ


 

ಜಗತ್ತನ್ನೇ ಗೆದ್ದ ಅಲೆಗ್ಸಾಂಡರ್ ಭಾರತದಲ್ಲಿ ಸೋತಿದ್ದ!

ಅಲೆಗ್ಸಾಂಡರ್ ತಾನೇ ತಲೆ ಕೊಡಲು ಸಿದ್ಧನಾಗಿದ್ದ. ಸೈನಿಕರು ಅವನ ಶೌರ್ಯಕ್ಕೆ ಬೆರಗಾಗಿ ತಾವೂ ಏಣಿಗಳನ್ನು ಹಿಡಿದು ಸರಸರನೆ ಕೋಟೆಯ ಗೋಡೆಗಳನ್ನು ಏರಲಾರಂಭಿಸಿದರು. ಹೀಗೆ ನುಗ್ಗಿ ಬಂದ ಸೇನೆಯ ಹಿಂಡು ನೋಡಿ ಮಾಳವ-ಶೂದ್ರಕರು ಒಮ್ಮೆ ಗಾಬರಿಯಾಗಿರಬೇಕು. ಆದರೆ ಅವರ ಕಣ್ಣು ಏರಿ ಬರುತ್ತಿದ್ದ ಅಲೆಗ್ಸಾಂಡರ್ನ ಮೇಲೆಯೇ ಇತ್ತು. ಕೋಟೆಯ ಗೋಡೆಯನ್ನೂ ಹಾರಿ ಶತ್ರುಗಳ ನಟ್ಟನಡುವೆ ನುಗ್ಗಿದ ಅಲೆಗ್ಸಾಂಡರ್ ಮತ್ತವನ ಸೇನೆ ನೇರ ಹಣಾಹಣಿಗೆ ನಿಂತುಬಿಟ್ಟಿತು. ಜಗತ್ತನ್ನೇ ಗೆಲ್ಲುವ ಕನಸಿನೊಂದಿಗೆ ಬಂದ ವೀರ ಭಾರತದಲ್ಲಿ ಹೀಗೊಂದು ಕದನ ನಡೆಸಬೇಕಾದೀತೆಂದು ಕನಸು ಮನಸಲ್ಲೂ ಎಣಿಸಿರಲಿಕ್ಕಿಲ್ಲ. ಚಿನ್ನದ ಕಿರೀಟ ಧರಿಸಿ ಮಿರ ಮಿರ ಮಿಂಚುತ್ತಿದ್ದ ಆತ ಭಾರತೀಯ ಪಡೆಗೆ ಎದ್ದು ಕಾಣುತ್ತಿದ್ದ.

 

1000509261001_2144688514001_Alexander-the-Great-Rise-to-Powerಅಲೆಗ್ಸಾಂಡರ್ನ ಸೇನೆ ಭಾರತದಲ್ಲಿನ ಸಣ್ಣ-ಪುಟ್ಟ ರಾಜರುಗಳನ್ನು ಗೆಲ್ಲುವಲ್ಲಿ ಹೈರಾಣಾಗಿಬಿಟ್ಟಿತ್ತು. ಪಂಜಾಬಿನ ಬಿಯಾಸ್ (ವ್ಯಾಸ್) ನದಿಯ ದಡದಾಚೆಗೆ ನೆಲೆನಿಂತಿದ್ದ ಮಹಾ ವೀರರಾಗಿದ್ದ ಯೌಧೇಯರನ್ನೆದುರಿಸಬೇಕೆಂಬ ಹುಚ್ಚು ಆವೇಶ ಅಲೆಗ್ಸಾಂಡರನಿಗಿತ್ತು. ಜಗತ್ತನ್ನು ಗೆಲ್ಲಬೇಕೆಂಬ ತುಡಿತದಿಂದ ಹೊರಟ ಅಲೆಗ್ಸಾಂಡರನಿಗೆ ಈ ಯುದ್ಧಗಳಿಂದ ಹೆಸರು-ಕೀತರ್ಿ-ಸಂಪತ್ತು-ಸಾರ್ವಭೌಮತೆ ಎಲ್ಲವೂ ದೊರೆಯುತ್ತದೆ ನಿಜ; ಆದರೆ ಆ ಸೈನಿಕರ ಕಥೆಯೇನು? ಅವರಂತೂ ಅಡಿಗಡಿಗೂ ಭಾರತೀಯ ಸೈನಿಕರ ಗಡಿಕಾಯ್ದುಕೊಳ್ಳುವ ಆವೇಶವನ್ನು ನೋಡಿದ್ದಾರೆ. ಅವರೊಡನೆ ಕಾದಾಡುತ್ತ ತನ್ನವರು ಇಹಲೋಕವನ್ನೇ ಬಿಟ್ಟಿದ್ದನ್ನು ನೋಡಿದ್ದಾರೆ. ಮತ್ತೀಗ ಎದುರಿಸಬೇಕಿರೋದು ಅಕ್ಷರಶಃ ಯೌಧೇಯರನ್ನು. ಅವರು ರಣಕಲಿಗಳೇ ಆಗಿದ್ದರು. ಮಾತೃಭೂಮಿಯ ರಕ್ಷಣೆಯಲ್ಲಿ ಅವರ ಸಾಹಸ, ರಾಷ್ಟ್ರ ನಿಷ್ಠೆಗಳು ದಂತ ಕಥೆಯಾಗಿ ಹರಡಿ ಬಿಟ್ಟಿದ್ದವು. ಅವರೊಡನೆ ಕಾದಾಡಿ ಗೆಲ್ಲುವ ದೈರ್ಯ ಅಲೆಗ್ಸಾಂಡರನ ಸೈನಿಕರಿಗಿರಲಿಲ್ಲ. ಅವರಿಗೀಗ ಮರಳಿ ಹೋಗುವ ಆತುರವಿತ್ತು. ಹೆಂಡತಿ-ಮಕ್ಕಳನ್ನು ಕೂಡಿಕೊಳ್ಳಬೇಕೆಂಬ ತವಕವಿತ್ತು. ಯಾರದೋ ಮಹತ್ವಾಕಾಂಕ್ಷೆಗೆ ಬಲಿಯಾಗಲು ಅವರು ಸಿದ್ಧರಿರಲಿಲ್ಲ.

ಪಷರ್ಿಯಾವನ್ನು ಗೆದ್ದು ಅಲೆಗ್ಸಾಂಡರ್ ಬೀಗಿದ್ದಾಗ ಗ್ರೀಕ್ ಜನತೆಗೆ ಆತ ದೇವರ ಮಗನಾಗಿ ಕಂಡಿದ್ದ. ಗ್ರೀಕ್ ದೇವತೆ ಜಿಯಸ್ನ ಮಗನೇ ಭುವಿಗೆ ಬಂದಿರುವುದರಿಂದ ಆತನಿಗೆ ಸೋಲೆಂಬುದೇ ಇಲ್ಲವೆಂದು ಅವರು ದೃಢವಾಗಿ ನಂಬಿದ್ದರು. ಅಂದಿನ ದಿನಗಳಲ್ಲಿ ಅವರ ಪಾಲಿಗೆ ಪಷರ್ಿಯಾವೇ ಬಲು ಕಠಿಣವಾದ ಸೈನಿಕ ಸವಾಲಾಗಿತ್ತು. ಭಾರತಕ್ಕೆ ಎಂದೂ ಯಾರ ಮೇಲೆಯೂ ಏರಿ ಹೋಗಿ ಗೊತ್ತಿಲ್ಲವಾದ್ದರಿಂದ ಈ ದೇಶ ವ್ಯಾಪಾರಿಗಳ ಮತ್ತು ತತ್ತ್ವಜ್ಞಾನಿಗಳ ನಾಡು ಎಂದಷ್ಟೇ ಗ್ರೀಕ್ ಭಾವಿಸಿತ್ತು. ಪಷರ್ಿಯಾದಂತ ಸದೃಢ ನಾಡೇ ಗಾಳಿಗೋಪುರದಂತೆ ಕುಸಿದು ಬಿದ್ದ ಮೇಲೆ ಭರತವರ್ಷ ಯಾವಲೆಕ್ಕವೆಂದೇ ಭಾವಿಸಿ ಬಂದಿತ್ತು ಗ್ರೀಕ್ಸೇನೆ. ಸ್ವತಃ ಅಲೆಗ್ಸಾಂಡರ್ ಕೂಡ ಅದೇ ಭ್ರಮೆಯಲ್ಲಿದ್ದ. ಇಂತಹ ಅದೆಷ್ಟು ಸ್ವಘೋಷಿತ ದೇವರ ಮಕ್ಕಳುಗಳನ್ನು ನುಂಗಿ ನೀರು ಕುಡಿದಿದೆಯೋ ಬಾರತ, ಲೆಕ್ಕ ಇಡುವುದು ಕಷ್ಟ!

ಇಲ್ಲಿನ ರಾಜರುಗಳ ಪ್ರತಿರೋಧ ಗ್ರೀಕ್ ಸೇನೆಯನ್ನು ಹೈರಾಣು ಮಾಡಿತು. ಅನೇಕ ಯುದ್ಧಗಳನ್ನು ಅವರು ಗೆದ್ದರು ನಿಜ, ಆದರೆ ಅದಕ್ಕೆ ತೆತ್ತ ಬೆಲೆ ಮಾತ್ರ ಅಪಾರ. ಈಗವರು ಮುಂದಿನ ಯುದ್ಧಕ್ಕೆ ನಿರಾಕರಿಸಿದರು. ಮರಳಿ ತಾಯ್ನಾಡಿಗೆ ಹೋಗುವ ಒತ್ತಡ ಹಾಕತೊಡಗಿದರು.

bangal-war-elephants

ಮಹತ್ವಾಕಾಂಕ್ಷಿ ಅಲೆಗ್ಸಾಂಡರ್ ಯೌಧೇಯರನ್ನು ಬಲಿಹಾಕಿ, ಮಗಧ ಸಾಮ್ರಾಜ್ಯದ ಮೇಲೇರಿ ಹೋಗುವ ಯೋಜನೆ ಹಾಕಿದ್ದ. ಸೈನಿಕರು ಜೊತೆಗೂಡದಾದಾಗ ಅವರೆಲ್ಲರನ್ನೂ ಸೇರಿಸಿ ಪ್ರಬೋಧಕ ಭಾಷಣವನ್ನೂ ಮಾಡಿದ. ಗಂಗಾ ನದಿ ಮತ್ತು ಪೂರ್ವ ಸಮುದ್ರಗಳು ಬಲು ದೂರದಲ್ಲಿಲ್ಲ ಎಂಬುದನ್ನು ವಣರ್ಿಸಿದ. ಹಿಂದೆ ಗೆದ್ದು ವಿಜಯ ಧ್ವಜ ಹಾರಿಸಿದ್ದನ್ನು ನೆನಪಿಸಿಕೊಟ್ಟ. ಮರಳಿ ಹೋದರೆ ಅದಾಗಲೇ ಗೆದ್ದ ರಾಷ್ಟ್ರಗಳೂ ಆಡಿಕೊಂಡು ನಗುತ್ತವೆಂಬುದನ್ನು ಮನಗಾಣಿಸಿದ. ಊಹೂಂ, ಯಾವುದೂ ಉಪಯೋಗವಾಗಲಿಲ್ಲ. ದೇವರ ಮಗನ ದೈವತ್ವ ಭಾರತದಲ್ಲಿ ಮಣ್ಣುಗೂಡಿತ್ತು.

ಅವನ ಭಾಷಣದ ಪರಿಣಾಮ ಪ್ರತಿಕೂಲವೇ ಆಗಿತ್ತು. ಅಲೆಗ್ಸಾಂಡರನ ಮಹತ್ವಾಕಾಂಕ್ಷೆ ಈಗ ನಿಚ್ಚಳವಾಗಿ ತೆರೆದುಕೊಂಡಿತು. ಅವನ ಸೈನ್ಯ ಒಂದಿಂಚೂ ಮುಂದೆ ಹೋಗಲಾರೆವೆಂದು ಪಟ್ಟು ಹಿಡಿದು ಕುಳಿತವು. ಅಲೆಗ್ಸಾಂಡರ್ ಹತಾಶನಾದ. ತನ್ನ ಡೇರೆಯನ್ನು ಹೊಕ್ಕ. ಹೊರ ಬರುವುದಿರಲಿ, ಯಾರನ್ನೂ ಮಾತನಾಡಿಸಲೂ ಇಲ್ಲ. ಹಾಗಂತ ಬಿಟ್ಟು ಕೊಡುವ ಜಾಯಮಾನವೂ ಅವನದಲ್ಲ. ಮೂರು ದಿನಗಳ ನಂತರ ಹೊರಬಂದು ಈಗ ಗೆದ್ದ ಪ್ರದೇಶಗಳ ದಿಕ್ಕಿನಿಂದಲೇ ಮರಳಿಬಿಟ್ಟರೆ ಅವಮಾನ ಕಟ್ಟಿಟ್ಟ ಬುತ್ತಿ ಎಂದ. ನಾವು ಅತ್ತ ಹೋಗುತ್ತಿದ್ದಂತೆ ಇತ್ತ ಅವರು ದಂಗೆಯೆದ್ದು ಬಿಡುವರೆಂದು ತಿಳಿಹೇಳಿದ. ಉಳಿದದ್ದು ಒಂದೇ ಮಾರ್ಗ. ಮರಳಿ ಹೋಗಲು ಬೇರೊಂದು ಮಾರ್ಗ ಅರಸುವುದು. ದಾರಿಯಲ್ಲಿ ಹರಡಿಕೊಂಡಿರುವ ರಾಜ್ಯಗಳನ್ನು ಸೋಲಿಸಿ ಗ್ರೀಕ್ ಸಾಮ್ರಾಜ್ಯಕ್ಕೆ ಇನ್ನಷ್ಟು ಬಲ ತುಂಬುವುದು!

ಸಿಂಧು ನದಿಯ ದಡದುದ್ದಕ್ಕೂ ಸಾಗಿ ಸಮುದ್ರವನ್ನು ತಲುಪಿ ನಾವೆಗಳ ಮೂಲಕ ಗ್ರೀಕನ್ನು ಸೇರುವ ಯೋಜನೆ ರೂಪುಗೊಂಡಿತು. ಎಲ್ಲರೂ ಒಪ್ಪಿಕೊಂಡರು. ಅಲೆಗ್ಸಾಂಡರ್ ತನಗೆ ತಾನೇ ಭರವಸೆ ತಂದುಕೊಂಡ, ‘ಮುಂದಿನ ದಾಳಿಯಲ್ಲಿ ಗಂಗಾ ತಟವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ವಿಶಾಲ ಭಾರತದ ಅಧಿಪತಿಯಾಗುವೆ’. ಪಾಪ. ಆ ಮುಂದಿನ ವರ್ಷ ಇತಿಹಾಸದಲ್ಲಿ ಬರಲೇ ಇಲ್ಲ!

ಅಲೆಗ್ಸಾಂಡರ್ನ ಸೇನೆಯನ್ನು ಕೂಡಿಕೊಳ್ಳಲು ಬ್ಯಾಬಿಲೋನ್, ಗ್ರೀಸ್ಗಳಿಂದ ಹೊಸ ತುಕಡಿಗಳು ಬಂದಿದ್ದವು. ಸಹಜವಾಗಿಯೇ ಎಲ್ಲರ ಉತ್ಸಾಹ ನೂರ್ಮಡಿಯಾಗಿತ್ತು. ನೂರಾರು ನೌಕೆಗಳ ತುಂಬ ಯುದ್ಧ ವೀರರು ರಣಕೇಕೆ ಹಾಕುತ್ತ ಸಾಗುತ್ತಿದ್ದರು. ದಾರಿಯುದ್ದಕ್ಕೂ ಇರುವ ಸಣ್ಣ-ಪುಟ್ಟ ರಾಜ್ಯಗಳು ಏಕಾಂಗಿಯಾಗಿ ಕಾದಾಡುತ್ತ ಅಲೆಗ್ಸಾಂಡರ್ನ್ನು ಎದುರಿಸುತ್ತಿದ್ದವು. ಅವನ ಬೃಹತ್ ಸೇನೆಗೆ ಸಾಕಷ್ಟು ಹಾನಿ ಮಾಡಲು ಸಫಲರಾಗುತ್ತಿದ್ದರೂ ಅದನ್ನು ಗೆಲುವಾಗಿ ಪರಿವತರ್ಿಸುವಲ್ಲಿ ವಿಫಲರಾಗುತ್ತಿದ್ದರು. ಈ ಎಲ್ಲ ಸಣ್ಣ-ಸಣ್ಣ ರಾಜ್ಯಗಳು ಒಟ್ಟಾಗಿ ಕಾದಾಡಿದ್ದರೆ ಅಲೆಗ್ಸಾಂಡರ್ನ ಸಮಾಧಿ ಈ ನೆಲದಲ್ಲಿಯೇ ಕಟ್ಟಬಹುದಿತ್ತೇನೋ?

ಇದು ಬರಿಯ ಬಾಯ್ಮಾತಲ್ಲ; ಸತ್ಯವೇ ಸರಿ. ಸಿಂಧೂ ದಂಡೆಯ ಮೇಲೆಯೇ ಮಾಳವ ಮತ್ತು ಶೂದ್ರಕರೆಂಬ ಎರಡು ಸ್ವತಂತ್ರ ರಾಜ್ಯಗಳಿದ್ದವು. ಇಬ್ಬರೂ ಸ್ವಾತಂತ್ರ್ಯ ಪ್ರಿಯರು, ಮಹಾ ಕದನಕಲಿಗಳು ಮತ್ತು ಪರಮ ದೇಶಭಕ್ತರು. ಅಲೆಗ್ಸಾಂಡರ್ ದಂಡೆತ್ತಿ ಬಂದುದನ್ನು ಗಮನಿಸುತ್ತಲೇ ಇದ್ದ ಈ ರಾಜ್ಯಗಳು ಸೋಲಿಗೆ ಕಾರಣ ವಿಶ್ಲೇಷಿಸಿದವು. ತಾವಿಬ್ಬರೂ ತಮ್ಮ ನಡುವಿನ ವೈರತ್ವ ಮರೆತು, ಒಂದಾದರು. ಅಷ್ಟೇ ಅಲ್ಲ. ಹೆಣ್ಣು ಮಕ್ಕಳನ್ನು ಎದುರು ರಾಜ್ಯದ ತರುಣರಿಗೆ ಮದುವೆ ಮಾಡಿಕೊಟ್ಟು ಬಾಂಧವ್ಯವನ್ನು ಗಟ್ಟಿ ಮಾಡಿಕೊಂಡರು. ಅಲೆಗ್ಸಾಂಡರನಿಗೆ ಒಂದಾದ ಇವರನ್ನೆದುರಿಸುವುದು ಸುಲಭವಾಗಿರಲಿಲ್ಲ.

ಮಾಳವ-ಶೂದ್ರಕರು ಸೇರಿ ಕಟ್ಟಿದ ಈ ಪಡೆ ಹೊಸ ಉತ್ಸಾಹದಿಂದ ಕಾದಾಡಲಾರಂಭಿಸಿತು. ಗ್ರೀಕ್ ಸೇನೆ ಒಂದಡಿ ಮುಂದೆ ಹೋಗಲಾರದೇ ಚಡಪಡಿಸಿತು. ಯುದ್ಧ ಪ್ರವೀಣನಾಗಿದ್ದ ಅಲೆಗ್ಸಾಂಡರ್ ಏಣಿಗಳನ್ನು ತರಿಸಿ ಕೋಟೆಯ ಗೋಡೆಗಳಿಗೆ ಆನಿಸಿದ. ಅದನ್ನು ಏರುವಂತೆ ತನ್ನ ಸೈನಿಕರಿಗೆ ಆಜ್ಞೆ ಕೊಟ್ಟ. ಎದುರಾಳಿ ಸೈನಿಕರ ಪರಾಕ್ರಮವನ್ನು ಕಂಡಿದ್ದ ಗ್ರೀಕ್ ಸೇನೆ ನಾಯಕನ ಮಾತನ್ನೂ ಕೇಳಲಿಲ್ಲ. ಎಲ್ಲರೂ ಕಾಲ್ಬೆರಳಿಂದ ನೆಲವನ್ನು ಕೊರೆಯುತ್ತ ನಿಂತರು. ಘೋರ ಸೋಲಿನ ಕಾಮರ್ೋಡಕ್ಕೆ ಬೆದರಿದ ಅಲೆಗ್ಸಾಂಡರ್ ತಡ ಮಾಡಲಿಲ್ಲ. ತಾನೇ ಏಣಿಯೊಂದನ್ನು ಹಿಡಿದು ಏರ ತೊಡಗಿದ. ಈಗ ಗ್ರೀಕ್ ಸೈನಿಕರ ರಟ್ಟೆಗಳಲ್ಲಿ ಮಿಂಚು ಹರಿಯಿತು. ನಾಯಕನ ಸಾಹಸ ಅವರನ್ನು ನಾಚಿಸಿತ್ತು.

ಯುದ್ಧ ಗೆಲ್ಲುವುದು ಸೈನಿಕರ ಸಂಖ್ಯೆಯೋ, ಶಸ್ತ್ರ ಬಲವೋ ಅಲ್ಲ. ನಾಯಕನ ಉತ್ಸಾಹ ಮತ್ತು ಮುನ್ನುಗ್ಗಿ ಕಾದಾಡುವ ಗುಣ. ಸ್ವಾಮಿ ವಿವೇಕಾನಂದರು ಯೂರೋಪಿನಲ್ಲಿರುವಾಗ 1857 ರ ಸಂಗ್ರಾಮದಲ್ಲಿ ಭಾರತೀಯರು ಸೋಲಲು ಕಾರಣವೇನೆಂದು ಕೇಳಿದರು. ಆಗ ಜನರಲ್ ಸ್ಟ್ರಾಂಗ್ ‘ಭಾರತದ ನಾಯಕರು ಮುನ್ನುಗ್ಗಿ ಕಾದಾಡಲಿಲ್ಲ, ಹಿಂದೆ ನಿಂತು ಕಾದಾಡುವಂತೆ ಹೇಳುತ್ತಿದ್ದರು’ ಎಂದರು. ಅದಕ್ಕೇ ಸ್ವಾಮೀಜಿ ಹೇಳಿದ್ದು, ‘ಜೋ ಸಿರ್ದಾರ್ ವೋ ಹೀ ಸರದಾರ್’ – ಯಾರು ತಲೆ ಕೊಡಬಲ್ಲನೋ, ಅವನೇ ನಾಯಕನೂ ಆಗಬಲ್ಲ.

ಅಲೆಗ್ಸಾಂಡರ್ ತಾನೇ ತಲೆ ಕೊಡಲು ಸಿದ್ಧನಾಗಿದ್ದ. ಸೈನಿಕರು ಅವನ ಶೌರ್ಯಕ್ಕೆ ಬೆರಗಾಗಿ ತಾವೂ ಏಣಿಗಳನ್ನು ಹಿಡಿದು ಸರಸರನೆ ಕೋಟೆಯ ಗೋಡೆಗಳನ್ನು ಏರಲಾರಂಭಿಸಿದರು. ಹೀಗೆ ನುಗ್ಗಿ ಬಂದ ಸೇನೆಯ ಹಿಂಡು ನೋಡಿ ಮಾಳವ-ಶೂದ್ರಕರು ಒಮ್ಮೆ ಗಾಬರಿಯಾಗಿರಬೇಕು. ಆದರೆ ಅವರ ಕಣ್ಣು ಏರಿ ಬರುತ್ತಿದ್ದ ಅಲೆಗ್ಸಾಂಡರ್ನ ಮೇಲೆಯೇ ಇತ್ತು. ಕೋಟೆಯ ಗೋಡೆಯನ್ನೂ ಹಾರಿ ಶತ್ರುಗಳ ನಟ್ಟನಡುವೆ ನುಗ್ಗಿದ ಅಲೆಗ್ಸಾಂಡರ್ ಮತ್ತವನ ಸೇನೆ ನೇರ ಹಣಾಹಣಿಗೆ ನಿಂತುಬಿಟ್ಟಿತು. ಜಗತ್ತನ್ನೇ ಗೆಲ್ಲುವ ಕನಸಿನೊಂದಿಗೆ ಬಂದ ವೀರ ಭಾರತದಲ್ಲಿ ಹೀಗೊಂದು ಕದನ ನಡೆಸಬೇಕಾದೀತೆಂದು ಕನಸು ಮನಸಲ್ಲೂ ಎಣಿಸಿರಲಿಕ್ಕಿಲ್ಲ. ಚಿನ್ನದ ಕಿರೀಟ ಧರಿಸಿ ಮಿರ ಮಿರ ಮಿಂಚುತ್ತಿದ್ದ ಆತ ಭಾರತೀಯ ಪಡೆಗೆ ಎದ್ದು ಕಾಣುತ್ತಿದ್ದ.

ГИДАСП_ред

ಆಗಲೇ ಭಾರತದ ಸೇನಾನಿಯೊಬ್ಬ ವಿಷಪೂರಿತ ಬಾಣವೊಂದನ್ನು ಬತ್ತಳಿಕೆಯಿಂದ ತೆಗೆದ. ಬಿಲ್ಲಿಗೆ ಹೂಡಿ ದಾರವನ್ನೆಳೆದ. ತನ್ನ ಸೈನಿಕರೊಂದಿಗೊಡಗೂಡಿ ಕಾದಾಡುತ್ತಿದ್ದ ಅಲೆಗ್ಸಾಂಡರನಿಗೆ ಗುರಿಯಿಟ್ಟು ಬಾಣಬಿಟ್ಟ. ಆಹಾ! ಬಾಣ ಗುರಿ ತಪ್ಪಲಿಲ್ಲ. ಇಡಿಯ ಭಾರತದ ಆಕ್ರೋಶವನ್ನೇ ತನ್ನೊಳಗೆ ಹೊತ್ತು ನಡೆದಿತ್ತು ಆ ಬಾಣ. ನೇರವಾಗಿ ಅವನ ಎದೆಗೇ ನಾಟಿತು. ಅಲೆಗ್ಸಾಂಡರ್ ಕುಸಿದು ಬಿದ್ದ. ಪ್ರಜ್ಞಾಶೂನ್ಯನಾದ. ಗ್ರೀಕ್ ಸೇನೆ ಗೊಂದಲಕ್ಕೆ ಬಿತ್ತು. ಒಂದಷ್ಟು ಸೈನಿಕರು ತಕ್ಷಣಕ್ಕೆ ಸುತ್ತುವರೆದರು. ‘ಅಲೆಗ್ಸಾಂಡರ್ ಏಟು ತಿಂದ, ಪ್ರಜ್ಞಾಶೂನ್ಯನಾದ’ ಸುದ್ದಿ ಬಾಯಿಂದ ಬಾಯಿಗೆ ಹರಡಿ, ಮೊದಲೇ ಓಡಿ ಹೋಗಲು ಕಾಯುತ್ತಿದ್ದ ಸೇನೆ ಅಲೆಗ್ಸಾಂಡರನನ್ನು ಹೊತ್ತೊಯ್ದು ಡೇರೆ ಸೇರಿಕೊಂಡುಬಿಟ್ಟಿತು. ಅನೇಕ ದಿನಗಳ ಕಾಲ ಆತನ ಪ್ರಜ್ಞೆ ಮರಳಲೇ ಇಲ್ಲ. ಸುದ್ದಿ ತವರು ರಾಷ್ಟ್ರಕ್ಕೂ ಮುಟ್ಟಿತು. ಅಲೆಗ್ಸಾಂಡರನ ದೈವೀ ಪೊರೆ ಕಳಚಿಬಿದ್ದಿತ್ತು. ಆತ ಗೆದ್ದಿದ್ದ ರಾಜ್ಯಗಳು ಬಂಡೆದ್ದು ಆತನ ಅಧೀನದಿಂದ ಕೊಡವಿಕೊಂಡುಬಿಡುವ ಪ್ರಯತ್ನ ನಡೆಸಿದವು. ಪಷರ್ಿಯಾ ಕೂಡ ಆ ದಾರಿಯಲ್ಲಿತ್ತು!

ಇತ್ತ ಮಾಳವ-ಶೂದ್ರಕರಲ್ಲಿ ಹಬ್ಬದ ವಾತಾವರಣ. ಭಾರತವನ್ನು ಗೆಲ್ಲುವೆನೆಂದು ಬಂದ ಮಹಾಸೇನಾನಿಯನ್ನು ಹೊಡೆದುರುಳಿಸಿ ಭಾರತದ ಕೀತರ್ಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ಐತಿಹಾಸಿಕ ಗೌರವ ಅವರಿಗೆ!

ಅನೇಕ ದಿನಗಳ ಕಾಲ  ಶುಶ್ರೂಷೆಯ ನಂತರ ಮೇಲೆದ್ದ ಅಲೆಗ್ಸಾಂಡರ್ ಈಗ ಸಂಧಾನಕ್ಕೆ ಸಿದ್ಧವಾಗಿಬಿಟ್ಟಿದ್ದ. ಅವನು ಬಲು ಹುಷಾರು. ಎದುರಾಳಿಗಳು ಕೈಲಾಗದವರಂತೆ ಕಂಡರೆ ಅತ್ಯಂತ ಬರ್ಬರವಾಗಿ ಅವರನ್ನು ಕೊಂದುಬಿಡುತ್ತಿದ್ದ. ಶಕ್ತ ಎದುರಾಳಿಗಳೆದುರಿಗೆ ಪ್ರೀತಿ-ಆದರ ತೋರಿದ ನಾಟಕ ಮಾಡುತ್ತ ಅವರನ್ನು ಒಲಿಸಿಕೊಂಡುಬಿಡುತ್ತಿದ್ದ.

ಅವನ ಕ್ರೌರ್ಯಕ್ಕೆ ಮಸಾಗಾ ವೀರರೇ ಉದಾಹರಣೆ. ಮಹಿಳೆಯರನ್ನೂ ಒಳಗೊಂಡ ಏಳು ಸಾವಿರದಷ್ಟು ಸಶಸ್ತ್ರ ಮಸಾಗಾ ಸೈನಿಕರನ್ನು ಬಂಧಿಸಿದ ಅಲೆಗ್ಸಾಂಡರ್ ಅವರಿಗೆ ಮೂರು ಆಯ್ಕೆಗಳನ್ನು ಕೊಟ್ಟ. ಮೊದಲನೆಯದ್ದು, ಗ್ರೀಕ್ ಸೇನೆಯೊಂದಿಗೆ ಸೇರಿ ಭಾರತೀಯರ ವಿರುದ್ಧ ಕಾದಾಡುವುದು. ಎರಡನೆಯದು ಜೀತದಾಳುಗಳಾಗಿ ತನ್ನೊಂದಿಗೆ ಬರುವುದು. ಮೂರನೆಯದು ಸಾವಿಗೆ ಸಿದ್ಧರಾಗೋದು.

ಮಸಾಗಾದ ವೀರರು ಆಲೋಚಿಸಲು ಒಂದು ದಿನ ಕೊಡಬೇಕೆಂದು ಕೇಳಿಕೊಂಡು ಗುಡ್ಡದ ಮೇಲೆ ಕುಳಿತರು. ಪರಕೀಯರ ಸೇನೆಗೆ ಬೆಂಬಲವಾಗಿ ನಿಂತು ರಾಷ್ಟ್ರ ದ್ರೋಹದ ಕೆಲಸ ಮಾಡಲು ಅಲ್ಲಿರುವವರಾರೂ ಒಪ್ಪಲಿಲ್ಲ. ಗ್ರೀಕರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿಬಿಡಬೇಕೆಂದು ನಿಶ್ಚಯಿಸಿದರು. ಅಷ್ಟರೊಳಗೆ ಧಾವಿಸಿ ಬಂದ ಗ್ರೀಕ್ ಸೇನೆ ಇವರ ಮೇಲೆ ಮುಗಿಬಿತ್ತು. ಆರಂಭದಲ್ಲಿ ಸ್ವಲ್ಪ ಗೊಂದಲಕ್ಕೊಳಗಾದ ಆ ದೇಶಭಕ್ತ ವೀರರು ಕೆಲ ಹೊತ್ತಿನಲ್ಲಿಯೇ ಕತ್ತಿ ಹಿಡಿದು ನಿಂತರು. ವೃತ್ತಾಕಾರದ ವ್ಯೂಹ ರಚಿಸಿ ಒಳಗೆ ಹೆಂಗಸರು ಮಕ್ಕಳನ್ನಿಟ್ಟರು. ಅನೇಕ ಮಹಿಳೆಯರೂ ಶತ್ರುವಿನೊಂದಿಗೆ ಕಾದಾಡಲೆಂದು ನಿಂತರು. ಅಲ್ಲೊಂದು ಘನಘೋರ ಕದನ ನಡೆಯಿತು. ‘ಅಗೌರವದಿಂದ ಬದುಕುವುದನ್ನು ಧಿಕ್ಕರಿಸಿದ ಶೂರರು ಕಾದಾಡುತ್ತ ವೀರ ಮರಣವನ್ನಪ್ಪಿದರು’ ಎಂದು ವಿನ್ಸೆಂಟ್ ಸ್ಮಿತ್ ತನ್ನ ಅಲರ್ಿ ಹಿಸ್ಟರಿ ಆಫ್ ಇಂಡಿಯಾದಲ್ಲಿ ಉದ್ಗರಿಸಿದ್ದಾನೆ.

Le_Brun_Alexander_and_Porus

ಹೆಂಗಸರು, ಮಕ್ಕಳನ್ನೂ ಬಿಡದೇ ಕೊಲ್ಲುವಷ್ಟು ಕ್ರೌರ್ಯದ ಆಗರವಾಗಿದ್ದ ಅಲೆಗ್ಸಾಂಡರ್ ಈಗ ಮಾಳವ ಮತ್ತು ಶೂದ್ರಕರೆದುರಿಗೆ ಮೆತ್ತಗಾಗಿ ನಿಂತಿದ್ದ. ಅತ್ತಲಿಂದ ಬಂದ ನೂರು ಜನ ವೀರಾಧಿವೀರರ ಸ್ವಾಗತಕ್ಕೆ ಅದ್ದೂರಿ ತಯಾರಿ ಮಾಡಿದ್ದ. ಚಿನ್ನದ ಆಸನಗಳನ್ನೂ ಹಾಕಲಾಗಿತ್ತು. ಭೂರಿ ಭೋಜನ ಮತ್ತು ವಿಶೇಷ ಕ್ರೀಡೆಗಳನ್ನು ಏರ್ಪಡಿಸಿದ್ದ. ಎಲ್ಲದರ ನಂತರ ಒಪ್ಪಂದಕ್ಕೆ ಸಹಿ ಹಾಕಲಾಯ್ತು. ಕದನ ವಿರಾಮವಾಗಬೇಕು. ಗ್ರೀಕ್ ಸೇನೆಯ ಮುತ್ತಿಗೆ ತೆರವಾಗಬೇಕು. ಹಾಗೆಯೇ ಮರಳುತ್ತಿರುವ ಗ್ರೀಕ್ ಸೈನಿಕರಿಗೆ ಮಾಳವ-ಶೂದ್ರಕರು ತೊಂದರೆ ಕೊಡಬಾರದು. ಇವು ಒಪ್ಪಂದದ ಪ್ರಮುಖ ಅಂಶಗಳು.

ಹೌದು. ವಿಶ್ವಗುರುವಿನ ಮುಂದಿನ ಹಾದಿ ವಿಶಿಷ್ಟವಾದುದು. ಸಾತ್ವಿಕ ಅಂಶಗಳು ಸಾಕಷ್ಟಾದವು. ಸರಸ್ವತಿ ತೀರದ ಋಷಿಗಳಿಂದ ಹಿಡಿದು ಪೂರ್ವ-ಪಶ್ಚಿಮಗಳನ್ನು ಆಚ್ಛಾದಿಸಿದ ಬುದ್ಧನವರೆಗೆ, ಓಂಕಾರದಿಂದ ಶುರುಮಾಡಿ, ಸುಷುಮ್ನಾದ ಮೂಲಕ ಸಹಸ್ರಾರ ಮುಟ್ಟಿದ ಕುಂಡಲಿನಿಯವರೆಗೆ ಎಲ್ಲವನ್ನೂ ಬಿಂದುವಿನಷ್ಟು ತಿಳಿದದ್ದಾಯ್ತು. ಇನ್ನೇನಿದ್ದರೂ ಶಸ್ತ್ರರಕ್ಷಿತ ಭಾರತದ ಗುಣಗಾನವಷ್ಟೇ. ಅಲ್ಲದೇ ಮತ್ತೇನು? ಸೋಲಿನ ಸುಳ್ಳಿನ ಇತಿಹಾಸ ಕೇಳಿ ಸಾಕಾಗಿದೆ. ಇನ್ನು ಮುಂದೆ ರಣೋದ್ಘೋಷದ ಕೇಕೆ ಮೊಳಗಬೇಕಿದೆ. ಓಜಸ್ವೀ ಭಾರತದ ಕ್ಷಾತ್ರ ಪರಂಪರೆ ಅನಾವರಣಗೊಳ್ಳಬೇಕಿದೆ.

Comments are closed.