ವಿಭಾಗಗಳು

ಸುದ್ದಿಪತ್ರ


 

ನಿಧಿ ತುಂಬಿದ ಪಾತ್ರೆ, ಯಾರು ಹೊಣೆ ತೆಗೆದು ನೋಡದಿದ್ರೆ?

ಆ ವೇಳೆಗಾಗಲೇ ರಾಜಾಶ್ರಯ ಪಡೆದ ಅರಬ್ಬೀ, ಪಷರ್ಿಯನ್ಗಳು ಈ ನೆಲದಲ್ಲಿ ಸಾಕಷ್ಟು ಬೆಳೆದಿದ್ದವು. ಮುಂದೆ ಇವೆರಡೂ ಸೇರಿಕೊಂಡು ಉದರ್ು ಹುಟ್ಟಿತು. ಅನಿವಾರ್ಯತೆಯ ಕಾರಣದಿಂದ ಸಾಮಾನ್ಯ ಜನ ಈ ಭಾಷೆಗಳಿಗೆ ಜೋತು ಬಿದ್ದರು. ಸಂಸ್ಕೃತವನ್ನು ಬಿಡಲು ಸಾಧ್ಯವೇ ಇಲ್ಲದವರು ಮಾತ್ರ ತಮ್ಮದೇ ಲೋಕವೊಂದನ್ನು ಸೃಷ್ಟಿಸಿಕೊಂಡು ವೇದಾಧ್ಯಯನ ಮಾಡುತ್ತ ಉಳಿದರು. ಹೀಗೆ ಆಕ್ರಮಣಕಾರರ ಭಾಷೆಯಿಂದ ಸಂಸ್ಕೃತವನ್ನು ಕಾಪಿಡುವ ಭರದಲ್ಲಿ ಸಂಸ್ಕೃತ ತನ್ನವರಿಂದಲೂ ದೂರವಾಯ್ತು. ಕೆಲವು ಪಂಡಿತರು ನವಾಬರನ್ನು ಮೆಚ್ಚಿಸಲು ಸಂಸ್ಕೃತದ ಜ್ಞಾನವನ್ನು ಯಥೇಚ್ಛವಾಗಿ ಧಾರೆಯೆರೆದರು. ಇನ್ನೂ ಕೆಲವರು ಸಂಸ್ಕೃತವನ್ನು ಮೂಲ ಸ್ವರೂಪದಲ್ಲಿ ಉಳಿಸಲು ಹರಸಾಹಸ ಮಾಡಿದರು. ಈ ಸಾಹಸಿಗರು ಇತಿಹಾಸದ ಪುಟದಿಂದ ಕಣ್ಮರೆಯಾಗಿರಬಹುದು. ಆದರೆ ಅವರ ಪ್ರಯತ್ನದ ಫಲ ಸಂಸ್ಕೃತ ಮತ್ತೆ ವಿಶ್ವಭಾಷೆಯಾಗುತ್ತಿದೆ!

ambedkar2

ಸೆಪ್ಟೆಂಬರ್ 11, 1949ರ ದಿ ಸಂಡೇ ಹಿಂದುಸ್ತಾನ್ ಪತ್ರಿಕೆಯ ವರದಿ ನಿಮ್ಮೆದುರಿಗಿಡುತ್ತಿದ್ದೇನೆ. ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂದು ಒತ್ತಾಯ ಮಾಡುತ್ತಿರುವವರಲ್ಲಿ ಭಾರತದ ಕಾನೂನು ಮಂತ್ರಿ ಡಾ. ಬಿ.ಆರ್ ಅಂಬೇಡ್ಕರ್ ಕೂಡ ಸೇರಿದ್ದಾರೆ. ವಿದೇಶಾಂಗ ಖಾತೆಯ ಬದಲಿ ಮಂತ್ರಿಯಾಗಿರುವ ಡಾ|| ಬಿ.ವಿ. ಕೇಸ್ಕರ್ ಮತ್ತು ನಾಜಿರುದ್ದೀನ್ ಅಹ್ಮದ್ರೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಕುರಿತಂತೆ ಪ್ರಶ್ನಿಸಿದ ಪಿ ಟಿ ಐ ಪ್ರತಿನಿಧಿಗೆ ಡಾ|| ಅಂಬೇಡ್ಕರರು ‘ ಸಂಸ್ಕೃತ ಅದೇಕೆ ಬೇಡ?’ ಎಂದು ಖಾರವಾಗಿಯೇ ಕೇಳಿದ್ದಾರೆ. ಅಧಿಕೃತ ಭಾಷೆಯ ಕುರಿತಂತೆ ಸಂವಿಧಾನ ಸಭೆಯಲ್ಲಿ ಚಚರ್ೆ ಬಂದಾಗ ಸಂಸ್ಕೃತವನ್ನ ಆರಿಸಿಕೊಳ್ಳುವಂತೆ ತಿದ್ದುಪಡಿ ಮಾಡಬೇಕೆಂಬುದಕ್ಕೆ ಇವರೆಲ್ಲರೂ ದನಿಗೂಡಿಸಲಿದ್ದಾರೆ.

ಇಲ್ಲಿಗೇ ಮುಗಿಯಲಿಲ್ಲ. ಈ ವರದಿ ಪ್ರಕಟವಾಗೋ ಒಂದು ದಿನ ಮುನ್ನ ನಡೆದ ಆಲ್ ಇಂಡಿಯಾ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ನ ಸಮಿತಿಯ ಸದಸ್ಯರ ಸಭೆಯಲ್ಲಿ ಬಾಬಾ ಸಾಹೇಬರು ಮಾತನಾಡಿದರು. ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯಾಗಿಸಲು ಒತ್ತಾಯಿಸಿ ಗೊತ್ತುವಳಿ ಮಂಡಿಸುವಂತೆ ಆಗ್ರಹಿಸಿದರು. ಬಿ.ಪಿ ಮೌರ್ಯರಂತಹ ಕೆಲವು ತರುಣ ಸದಸ್ಯರು ಇದನ್ನು ಬಲುವಾಗಿ ವಿರೋಧಿಸಿ ಸಭೆಯಿಂದ ಹೊರ ನಡೆಯುವ ಬೆದರಿಕೆಯನ್ನೊಡ್ಡಿದ ಮೇಲೆ ಬಾಬಾ ಸಾಹೇಬರು ನಿಲುವಳಿಯನ್ನು ಮರಳಿ ಪಡೆದರು.

ಕಥೆ ಮುಂದುವರೆಯಿತು. 2001 ರ ಫೆಬ್ರುವರಿಯಲ್ಲಿ ಎನ್.ಸಿ.ಇ.ಆರ್.ಟಿ ಯ ನಿದರ್ೇಶಕರಿಗೆ ಬರೆದ ಪತ್ರದಲ್ಲಿ ಅದೇ ಬಿ.ಪಿ ಮೌರ್ಯ ‘ಸಂಸ್ಕೃತ ಅತ್ಯಂತ ವೈಜ್ಞಾನಿಕವಾದ ಮತ್ತು ನಿಖರ ವ್ಯಾಕರಣ ಹೊಂದಿರುವ ಪ್ರಾಚೀನವಾದ ಭಾಷೆ ಎಂಬುದು ಸ್ಥಾಪಿತ ಸತ್ಯ. ಅನುಭವದ ಕೊರತೆಯಿಂದಾಗಿ ನಾನು ಸಂಸ್ಕೃತವನ್ನು ಅಧಿಕೃತ ಭಾಷೆಯಾಗಿಸುವ ಬಾಬಾ ಸಾಹೇಬರ ನಿಲುವಳಿಯನ್ನು ಅಂದು ವಿರೋಧಿಸಿದೆ. ಕೊನೆಗೆ ನಿಲುವಳಿ ಬಿದ್ದು ಹೋಯಿತು. ಆದರೆ ಅವರು ಪತ್ರಿಕಾ ಹೇಳಿಕೆ ನೀಡಿ ಸಂಸ್ಕೃತವನ್ನು ಸ್ವತಂತ್ರ ಭಾರತದ ರಾಷ್ಟ್ರ ಭಾಷೆಯಾಗಿಸಬೇಕೆಂದು ಆಗ್ರಹ ಮಾಡಿದರು’ ಎಂದು ನೊಂದುಕೊಂಡರು.

ಅದು ಬಿಡಿ. ಭಾರತಕ್ಕೆ ಇಸ್ಲಾಂನ ಮೊದಲ ಪ್ರವೇಶವಾಗುವುದಕ್ಕೆ ಬಹು ಮುಂಚೆಯೇ ಸಂಸ್ಕೃತ ಅರಬ್ ರಾಷ್ಟ್ರಕ್ಕೆ ನುಗ್ಗಿತ್ತು! ಪ್ರವಾದಿ ಮಹಮ್ಮದರ ಸಮಕಾಲೀನರೂ, ವೈದ್ಯರೂ ಆಗಿದ್ದ ಅಲ್ ಹರೀತಾ ಭಾರತಕ್ಕೆ ಬಂದು ಆಯುವರ್ೇದ ಅಧ್ಯಯನ ಮಾಡಿದ್ದರೆಂದು ಹೇಳುತ್ತಾರೆ. ಖಲೀಫಾ ಅಲ್-ಮನ್ಜೂರ್ರ ಆದೇಶದಂತೆ ಇಬ್ರಾಹೀಂ ಆಲ್ ಫಜಾರಿ ಮತ್ತು ಯಾಕೂಬ್ರು ಭಾರತದ ಪಂಡಿತರ ಸಹಕಾರದಿಂದ ‘ಸೂರ್ಯಸಿದ್ಧಾಂತ’ವೆಂಬ ಖಗೋಳ ಶಾಸ್ತ್ರದ ಕೃತಿಯನ್ನು ಅರಬ್ಬೀಗೆ ಅನುವಾದಿಸಿದರು. ಇದೇ ವೇಳೆ ವೈದ್ಯಕೀಯ ಗ್ರಂಥಗಳೂ ಸಂಸ್ಕೃತದಿಂದ ಅರಬ್ಬೀ ಭಾಷೆಗೆ ತಜರ್ುಮೆಗೊಂಡವು. ಜಾಹೀರ್ ಇಬ್ನ್ ಅಬಿ ಉಸಯ್ಬಿಯಾ ರಂತಹ ಕೆಲವರು ಅಂದಿನ ದಿನಗಳಲ್ಲಿ ಭಾರತದಿಂದ ಅರಬ್ ರಾಷ್ಟ್ರಗಳೆಡೆಗೆ ಸಂಸ್ಕೃತ ಕಲಿಸಲೆಂದು ಬಂದಿದ್ದ ಅಪಾರ ಸಂಖ್ಯೆಯ ಪಂಡಿತರ ಹೆಸರುಗಳನ್ನೂ ಉಲ್ಲೇಖಿಸುತ್ತಾರೆ.

ಮಹಮ್ಮದ್ ಘಜ್ನಿಯ ಸೇನೆಯೊಂದಿಗೆ ಬಂದ ಅಹ್ಮದ್ ಅಲ್ ಬರೂನಿ ಭಾರತಕ್ಕೆ ಬಂದ ಮೊದಲ ಮುಸಲ್ಮಾನ ವಿಜ್ಞಾನಿ. ಗ್ರೀಕ್, ರೋಮನ್, ಪ್ರಾಚೀನ ಇರಾನಿಯನ್ ವಿಜ್ಞಾನದಿಂದ ಪರಿಪುಷ್ಟನಾಗಿದ್ದ ಈತ ಇಲ್ಲಿಗೆ ಬಂದೊಡನೆ ಸಂಸ್ಕೃತ ಕಲಿತು ರಾಮಾಯಣ- ಮಹಾಭಾರತ-ಪುರಾಣಗಳನ್ನು ಓದಿದ್ದಲ್ಲದೇ ವಿಜ್ಞಾನಕ್ಕೆ ಸಂಬಂಧಿಸಿದ ಭಿನ್ನ ಭಿನ್ನ ಶಾಖೆಯ ಕೃತಿಗಳನ್ನೂ ಓದಿದ. ಆಮೇಲೆಯೇ ಆತ ತನ್ನ ಪ್ರಸಿದ್ಧ ಕೃತಿ ‘ತೆಹರೀಕೆ ಮಾ ಲಿಲ್ ಹಿಂದ್’ ನ್ನು ಬರೆದಿದ್ದು.

ಅಮೀರ್ ಖುಸ್ರು ಇದೇ ಪರಂಪರೆಯನ್ನು ಮುಂದುವರೆಸಿದವ. ಅಬ್ದುಲ್ ಅಜೀಜ್ ಶಮ್ಜಲ್ ಹೌರಿ    ಬೃಹತ್ಸಂಹಿತೆಯನ್ನು ಅನುವಾದಿಸಿದ.

ವಾಸ್ತವವಾಗಿ ಇಸ್ಲಾಂ ಆಕ್ರಮಣಗಳು ಈ ದೇಶದ ಸಂಸ್ಕೃತಿಯ ಹಂದರವನ್ನೇ ಕೆಡವಲು ನಿಂತುಬಿಟ್ಟವು. ಅವರು ಮೂತರ್ಿಗಳನ್ನು   ದೇವಾಲಯಗಳನ್ನು ಕೆಡವಿದರು. ಮತಾಂತರವನ್ನೂ ಮಾಡಲಾಯ್ತು. ಇವೆಲ್ಲವನ್ನೂ ಸ್ಥಿರಗೊಳಿಸಿ ಇಸ್ಲಾಂ ಪ್ರಭುತ್ವ ಸ್ಥಾಪನೆಯ ಪ್ರಯತ್ನವಾಗಿಯೇ ಅವರು ಪಷರ್ಿಯನ್ ಮತ್ತು ಅರಾಬಿಕ್ ಭಾಷೆಯನು ್ನಇಲ್ಲಿನ ಅಧಿಕೃತ ಭಾಷೆಯಾಗಿ ಹೇರಿದರು. ಸುಮಾರು ಒಂದು ಸಾವಿರ ವರ್ಷಗಳ ಕಾಲ ಆಳುವ ದೊರೆಗಳ ಕೃಪೆಯಿಂದ ಪೋಷಿತವಾದ ಈ ಭಾಷೆಗಳು ಸಂಸ್ಕೃತವನ್ನು ತುಳಿದು ನಿಲ್ಲುವ ಯತ್ನ ಮಾಡಿದವು.

ಆದರೆ ಅದಾಗಲೇ ಸಂಸ್ಕೃತ ಭಾರತದ ಭಿನ್ನ ಭಿನ್ನ ಭಾಷೆಗಳ ಮೂಲಕ ಉಸಿರಾಟ ನಡೆಸಲಾರಂಭಿಸಿತ್ತು. ಪಾಲಿ, ಪ್ರಾಕೃತಗಳಾಗಲಿ, ವೃಜ, ಅವಧ್ಗಳೇ ಆಗಲಿ ಸಂಸ್ಕೃತ ಅಪಭ್ರಂಶಗಳನ್ನು ಬಳಸಿಯೇ ಸಂಸ್ಕೃತವನ್ನು ಜೀವಂತವಾಗಿರಿಸಿದ್ದವು. ದಕ್ಷಿಣದ ಭಾಷೆಗಳೂ ಅಷ್ಟೇ. ಪದಗಳ ಬಳಕೆಯಿಂದ ಹಿಡಿದು ವ್ಯಾಕರಣದ ಪ್ರಯೋಗದವರೆಗೆ ಸಂಸ್ಕೃತವನ್ನೇ ಅನುಸರಿಸಿ ಅದನ್ನು ಉಸಿರಾಡುವಂತೆ ಮಾಡಿದ್ದವು.

ಹಾಗಂತ ಸ್ವತಃ ಸಂಸ್ಕೃತ ಸತ್ತು ಹೋಗಿರಲಿಲ್ಲ. ತನ್ನ ಸತ್ವ್ತವನ್ನೆಲ್ಲ ಜಗತ್ತಿಗೆ ಧಾರೆ ಎರೆದಿದ್ದರಿಂದ ಅದು ವಿಶಾಲ ಅರಳೀ ವೃಕ್ಷದಂತೆ ಬೆಳೆದು ನಿಂತಿತ್ತು. ಅದರ ಸೊಗಡು ಮುಸಲ್ಮಾನರ ಆಸ್ಥಾನದಲ್ಲಿದ್ದ ಕವಿಗಳನ್ನು ಸೆಳೆದು ಬಿಟ್ಟಿತ್ತು. ಔರಂಗಜೇಬಿನ ಅಧಿಕಾರಾವಧಿಯಲ್ಲೂ ಫಕೀರುಲ್ಲಾ, ಮಿಜರ್ಾ ಕೌಶಾನ್ ಜಮೀರ್, ಮಿಜರ್ಾ ಫಕ್ರುದ್ದೀನ್ರಂತಹ ಕವಿಗಳು ಸಂಸ್ಕೃತದೆಡೆಗೆ ಒಲವು ತೋರಿದ್ದು ಹೀಗೆಯೇ. ಮಿಜರ್ಾ ಫಕ್ರುದ್ದೀನರಂತೂ ತುಹಫತುಲ್ ಹಿಂದ್ (ಭಾರತದ ಕೊಡುಗೆ) ಎನ್ನುವ ಕೃತಿ ಬರೆದು ಸಂಸ್ಕೃತ ಸಾಹಿತ್ಯವನ್ನು ಯಥೇಚ್ಛವಾಗಿ ಉಲ್ಲೇಖ ಮಾಡಿದ್ದರು.

ಎಲ್ಲಾ ಬಿಡಿ. ಔರಂಗಜೇಬನ ಅಣ್ಣ, ಅಕ್ಬರನ ಮರಿಮೊಮ್ಮಗ ದಾರಾಶಿಕೋ ಉಪನಿಷತ್ತುಗಳ ಎಣೆಯಿಲ್ಲದ ಸೌಂದರ್ಯಕ್ಕೆ ಮರುಳಾಗಿ ಇವುಗಳನ್ನು ಸಿರಿ-ಉಲ್-ಅಕ್ಬರ್ ಎಂಬ ಹೆಸರಿನಲ್ಲಿ ಪಷರ್ಿಯನ್ ಭಾಷೆಗೆ ಅನುವಾದಿಸಿ ತನ್ನವರೂ ಈ ಸೊಗಡನ್ನು ಅರಿಯುವಂತೆ ಮಾಡಿದ.

Dara_Shukoh

ಮೊಘಲರು ಜಗತ್ತಿಗೆ ಕೊಟ್ಟ ಸ್ಮರಣೀಯ ಸಂಸ್ಕೃತ ಪಂಡಿತರು ಇಬ್ಬರು. ಒಬ್ಬ ಸಿರಾಜುದ್ದೀನ್ ಅಲಿಖಾನ್ ಮತ್ತೊಬ್ಬ ಗುಲಾಮ ಅಲಿ ಆಜಾದ್ ಬಿಲ್ಗಿರಾಮಿ. ಸಂಸ್ಕೃತ ಮತ್ತು ಅರಬ್ಬೀ ಭಾಷೆಗಳ ಸೊಗಡನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಸಮಾಜಕ್ಕೆ ನೀಡುವ ಪ್ರಯತ್ನ ಮಾಡಿದವರು ಅವರು.

ಸಂಸ್ಕೃತದ ವ್ಯಾಪ್ತಿ ಹೇಗೆ ವಿಸ್ತಾರಗೊಂಡಿತ್ತೆಂದರೆ, ನವಾಬರು, ಬಾದಷಹರು ಪಷರ್ಿಯಾ, ಅರಬ್ಬೀಗಳನ್ನು ತಲೆ ಮೇಲೆಯೇ ಹೊತ್ತು ತಿರುಗಾಡುತ್ತಿದ್ದರಾದರೂ ಸಂಸ್ಕೃತವನ್ನು ಕೊಡವಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಒಂದು ಕಾಲಘಟ್ಟದಲ್ಲಂತೂ ಸಂಸ್ಕೃತದೊಡನೆ ಇತರೆ ಭಾಷೆಗಳ ಕಲಸು ಮೇಲೋಗರದ ಸಾಹಿತ್ಯಗಳು ಹುಟ್ಟಿದವು.

ರಹೀಮ ಕಾವ್ಯವೊಂದರ ನಾಲ್ಕು ಸಾಲುಗಳನ್ನು ನೋಡಿ.

ಏಕಸ್ಮಿನ್ ದಿವಸಾವಸಾನ ಸಮಯೆ ಮೈ ಥಾ ಖಡಾ ಬಾಗಾ ಮೆ

ಕಾಚಿತ್ ತತ್ರ ಕುರಂಗ ಬಾಲನಯನಾ ಗುಲ್ತೋಡ್ ತೀ ಥಿ ಖಡೀ

ತಾಂ ದೃಷ್ಟ್ವಾ ನವಯೌವ್ವನಾಂ ಶಶಿಮುಖೀಂ ಮೈ ಮೋಹಾ ಮೆ ಜಾ ಪಡಾ

ನೋ ಜೀವಾಮಿ ವಿನಾ ತ್ವಯಾ ಶೃಣು ಪ್ರಿಯೆ ತು ಯಾರಾ ಕೈಸೆ ಮಿಲೇ

ತೋಟದಲ್ಲಿ ಕಂಡ ಹುಡುಗಿಯನ್ನು ಬಿಟ್ಟಿರಲಾಗದಷ್ಟು ಮೋಹಕ್ಕೆ ಒಳಗಾದ ಕವಿ ಬರೆದಿರುವ ಗೀತೆ ಇದು. ಪ್ರತಿ ಪಾದದ ಮೊದಲರ್ಧ ಸಂಸ್ಕೃತವಾದರೆ ಉಳಿದಾರ್ಧ ಉದರ್ು! ಹೌದು, ಯಾರು ಅದೆಷ್ಟೇ ಪ್ರಯತ್ನ ಮಾಡಿದರೂ ಸಂಸ್ಕೃತವನ್ನು ಕೊಲ್ಲುವುದು ಸಾದ್ಯವೇ ಆಗಲಿಲ್ಲ. ತನ್ನ ಸಹಜ ಸೌಂದರ್ಯ ಮತ್ತು ಸತ್ವಯುತವಾದ ಸಾಹಿತ್ಯದಿಂದ ಎಂಥವರನ್ನು ಆಕಷರ್ಿಸುತ್ತಿತ್ತು ಅದು. ಅದನ್ನು ಮೇಲ್ವರ್ಗದವರ ಭಾಷೆ ಎಂದು ಸಾಬೀತು ಪಡಿಸಲು ಹೆಣಗಾಡಿ ಅನೇಕರು ಅದರೆದುರು ನತಮಸ್ತಕರಾದರು ಅಷ್ಟೇ!

ಕೆಲವೊಮ್ಮೆ ಹಿಂದೂಗಳು ಮುಸಲ್ಮಾನರಾಗಿ ಮತಾಂತರ ಹೊಂದಿಯೂ ಸಂಸ್ಕೃತವನ್ನು ಉಳಿಸಿರಬಹುದೆನ್ನಿಸುತ್ತದೆ. ಜೈನುಲ್ ಅಬೇದಿನ್ ಕಾಲಕ್ಕೆ ಕಾಶ್ಮೀರದಲ್ಲಿ ಸಂಸ್ಕೃತಕ್ಕೆ ವಿಶೇಷ ಪ್ರಾಶಸ್ತ್ಯ ದೊರೆತಿತ್ತು. ಶೀರ್ಯಭಟ್ಟ ಅಥರ್ವವೇದವನ್ನು ಕಲಿಸಲೆಂದೇ ಪಾಠಶಾಲೆಯನ್ನು ಶುರುಮಾಡಿದ್ದ. ಜೈನುಲ್ನ ಮಕ್ಕಳಾದ ಹೈದರ್ ಶಾಹ್ ಮತ್ತು ಬಹರ್ಾಮ್ ಖಾನ್ರೂ ಸಂಸ್ಕೃತ ಕಲಿತಿದ್ದರು. ಹೈದರ್ನ ಮಗ ಹಸನ್ ರಾಹ್ ಸಂಸ್ಕೃತವನ್ನು ಕಲಿತದ್ದಲ್ಲದೇ ಶ್ಲೋಕಗಳನ್ನು ಪುಂಖಾನುಪುಂಖವಾಗಿ ಉಲ್ಲೇಖಿಸುತ್ತಿದ್ದ. ಅಕ್ಬರ್ನ ಆಸ್ಥಾನದಲ್ಲಿ ಕವಿ ರಹೀಮ್ ಖಾನಾ ಖಾನ್, ರಹೀಮ ರತ್ನಾವಳೀಯಂತಹ ಕೃತಿಗಳನ್ನು ಬರೆದದ್ದಲ್ಲದೇ, ಖಾನಾಖಾನ್ ಅಂಕಿತವನ್ನು ಬಳಸುತ್ತಿದ್ದ.

ಅಲೀಘಡ ಮುಸ್ಲೀಂ ವಿಶ್ವವಿದ್ಯಾಲಯದಲ್ಲೂ ಪಂಡಿತ್ ಹಬೀಬುರ್ ರಹಮಾನ್ ಶಾಸ್ತ್ರಿಯಂತಹ ಅನೇಕ ವಿದ್ವಾಂಸರು ಸಂಸ್ಕೃತ-ಅರಬ್ಬೀ; ಹಿಂದೂ-ಇಸ್ಲಾಂ ಗಳ ತುಲನಾತ್ಮಕ ಅಧ್ಯಯನಕ್ಕೆ ಸಂಸ್ಕೃತ ಪಾಂಡಿತ್ಯವನ್ನು ಬಳಸಿದರು.

ಈಗಲೂ ಉತ್ತರ ಪ್ರದೇಶದ ನಾಡ್ವಾ ಮದರಸದಾ ಮುಫ್ತಿ ಮೊಹಮ್ಮದ್ ಪರವಾರ್ ಫಾರೂಕಿಯನ್ನು ಪಂಡಿತ್ ಎಂದೇ ಸಂಬೋಧಿಸುತ್ತಾರೆ. ಪಂಡಿತ್ ಗುಲಾಮ್ ದಸ್ತಗೀರ್ ಬಿರಜ್ದಾಕ್ ವಾರಣಾಸಿ ಮೂಲದ ವಿಶ್ವ ಸಂಸ್ಕೃತ ಪ್ರತಿಷ್ಠಾನದ ಕಾರ್ಯದಶರ್ಿಯಾಗಿದ್ದನ್ನು ಟೈಮ್ಸ್ ಆಫ್ ಇಂಡಿಯಾ 2009ರಲ್ಲಿ ವರದಿ ಮಾಡಿತ್ತು.

ಮುಸಲ್ಮಾನರು ಸಂಸ್ಕೃತವನ್ನು ಪ್ರೋತ್ಸಾಹಿಸಿದ್ದು, ಕಲಿತಿದ್ದು ಆರಂಭಿಕ ದಿನಗಳಲ್ಲಲ್ಲ. ಘಜ್ನಿ-ಘೋರಿಯರಿಗೆ ನಾಶ ಮಾಡುವುದಷ್ಟೇ ಉದ್ದೇಶವಾಗಿತ್ತು. ಆನಂತರ ಬಂದವರೂ ಕಡಿಮೆಯೇನಿಲ್ಲ. ಆದರೆ ಒಂದು ಹಂತದ ನಂತರ ಭಾರತೀಯರೊಂದಿಗೆ ಏಕರಸವಾದರೆ ಮಾತ್ರ ಆಳ್ವಿಕೆ ಸಾಧ್ಯವೆಂದೆನಿಸಿತಲ್ಲ; ಆಗ ಶಾಸನ ಸಡಿಲಗೊಳ್ಳಲಾರಂಭಿಸಿತು. ಸಂಸ್ಕೃತಕ್ಕೆ ಮಾನ್ಯತೆ ಕೊಡುವುದರ ಮೂಲಕ ಹಿಂದೂಗಳನ್ನು ಒಲಿಸಿಕೊಳ್ಳುವ ಪ್ರಯತ್ನವೂ ಶುರುವಾಯಿತು.

ಆದರೆ ಆ ವೇಳೆಗಾಗಲೇ ರಾಜಾಶ್ರಯ ಪಡೆದ ಅರಬ್ಬೀ, ಪಷರ್ಿಯನ್ಗಳು ಈ ನೆಲದಲ್ಲಿ ಸಾಕಷ್ಟು ಬೆಳೆದಿದ್ದವು. ಮುಂದೆ ಇವೆರಡೂ ಸೇರಿಕೊಂಡು ಉದರ್ು ಹುಟ್ಟಿತು. ಅನಿವಾರ್ಯತೆಯ ಕಾರಣದಿಂದ ಸಾಮಾನ್ಯ ಜನ ಈ ಭಾಷೆಗಳಿಗೆ ಜೋತು ಬಿದ್ದರು. ಸಂಸ್ಕೃತವನ್ನು ಬಿಡಲು ಸಾಧ್ಯವೇ ಇಲ್ಲದವರು ಮಾತ್ರ ತಮ್ಮದೇ ಲೋಕವೊಂದನ್ನು ಸೃಷ್ಟಿಸಿಕೊಂಡು ವೇದಾಧ್ಯಯನ ಮಾಡುತ್ತ ಉಳಿದರು. ಹೀಗೆ ಆಕ್ರಮಣಕಾರರ ಭಾಷೆಯಿಂದ ಸಂಸ್ಕೃತವನ್ನು ಕಾಪಿಡುವ ಭರದಲ್ಲಿ ಸಂಸ್ಕೃತ ತನ್ನವರಿಂದಲೂ ದೂರವಾಯ್ತು. ಕೆಲವು ಪಂಡಿತರು ನವಾಬರನ್ನು ಮೆಚ್ಚಿಸಲು ಸಂಸ್ಕೃತದ ಜ್ಞಾನವನ್ನು ಯಥೇಚ್ಛವಾಗಿ ಧಾರೆಯೆರೆದರು. ಇನ್ನೂ ಕೆಲವರು ಸಂಸ್ಕೃತವನ್ನು ಮೂಲ ಸ್ವರೂಪದಲ್ಲಿ ಉಳಿಸಲು ಹರಸಾಹಸ ಮಾಡಿದರು. ಈ ಸಾಹಸಿಗರು ಇತಿಹಾಸದ ಪುಟದಿಂದ ಕಣ್ಮರೆಯಾಗಿರಬಹುದು. ಆದರೆ ಅವರ ಪ್ರಯತ್ನದ ಫಲ ಸಂಸ್ಕೃತ ಮತ್ತೆ ವಿಶ್ವಭಾಷೆಯಾಗುತ್ತಿದೆ!

ಇಸ್ಲಾಂನ ಆಕ್ರಮಣ ಮೆತ್ತಗಾಗಿ ಹಿಂದೂ ಸಾಮ್ರಾಜ್ಯ ಭರತಖಂಡಕ್ಕೆ ವಿಸ್ತಾರಗೊಳ್ಳಬೇಕೆನ್ನುವ ಹೊತ್ತಿಗೇ ಕ್ರಿಶ್ಚಿಯನ್ನರ ಆಕ್ರಮಣವಾಯ್ತು. ಮುಸಲ್ಮಾನರು ಸ್ಥೂಲವಾಗಿ ಭಾಷೆಯ ಬೆಳವಣಿಗೆಯಾಗಬಾರದೆಂದು ಪ್ರಯತ್ನ ಹಾಕಿದರೆ, ಕ್ರಿಶ್ಚಿಯನ್ನರ ಕಾಲಕ್ಕೆ ಸಾಹಿತ್ಯ ಗ್ರಂಥಗಳನ್ನು ತಿರುಚುವ ಪ್ರಯತ್ನ ಶುರು ಮಾಡಲಾಯ್ತು. ನಮ್ಮ ಪದಗಳಿಗೆ ಅವರು ವ್ಯಾಖ್ಯೆ ನೀಡಲಾರಂಭಿಸಿದರು. ಹೊಸ ಹೊಸ ಕಲ್ಪನೆಗಳು ಬುದ್ಧಿವಂತರಲ್ಲಿ ಗರಿಗೆದರುವಂತೆ ನೋಡಿಕೊಂಡರು. ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರ ನಡುವಣ ಆಗಾಗ ಹೊತ್ತಿ ಆರುತ್ತಿದ್ದಂತಹ ಬೆಂಕಿ ಧಗಧಗನೆ ಉರಿಯುವಂತೆ ಮಾಡಿದರು. ಪಶ್ಚಿಮದಲ್ಲಿ ಚಚರ್್ನ ‘ಪ್ರೀಸ್ಟ್’ ಮಾಡುವ ಅತ್ಯಾಚಾರವನ್ನು ಮಾಡುವವರು ಇಲ್ಲಿ ಯಾರಿದ್ದಾರೆಂದು ಹುಡುಕಾಡಿದರು. ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದವ ಕಂಡ. ಪುರೋಹಿತಷಾಹೀ ಪರಂಪರೆಯ ಕಲ್ಪನೆ ಅವತೀರ್ಣಗೊಂಡಿದ್ದು ಹಾಗೇ! ಅವನ ವಿರುದ್ಧ ತೊಡೆತಟ್ಟುವಂತೆ ಪ್ರಚೋದಿಸಿದರು. ಅವನಾಡುವ ಭಾಷೆ ಅದು ಶೋಷಣೆ ಮಾಡುವಂಥದ್ದೆಂದು ಬೋಧಿಸಿದರು. ಅಲ್ಲಿಗೆ ಸಂಸ್ಕೃತ ಮೇಲ್ವರ್ಗದವರು ಕೆಳವರ್ಗದವರನ್ನು ಶೋಷಿಸಲು ಬಳಸುವ ಭಾಷೆಯಾಗಿ ಹೋಯ್ತು.

ಇಸ್ಲಾಂನ ಆಕ್ರಮಣ ಕಾಲದಲ್ಲಿ ಪ್ರತಿರೋಧಕ್ಕಾಗಿಯಾದರೂ ಸಟೆದು ನಿಂತಿದ್ದ ಸಂಸ್ಕೃತ ಈಗ ಆಂತರಿಕವಾಗಿ ಕುಸಿಯಲಾರಂಭಿಸಿತು. ‘ಮೃತ ಭಾಷೆ ಸಂಸ್ಕೃತ’ ಎಂಬುದು ನುಡಿಕಟ್ಟಾಯಿತು. ಜಗತ್ತಿನ ಅನೇಕ ಹಳೆಯ ಭಾಷೆಗಳಂತೆಯೇ ಶವಪೆಟ್ಟಿಗೆ ಸೇರಬೇಕಿತ್ತು ಸಂಸ್ಕೃತ. ಹಾಗಾಗಲಿಲ್ಲ. ಮನುಷ್ಯ ನಿಮರ್ಿತವಾದುದು ಸಾಯುತ್ತೆ; ದೇವವಾಣಿಗೆ ಸಾವುಂಟೇನು?

ಕ್ರಿಶ್ಚಿಯನ್ ಆಕ್ರಮಣಕಾರರು ಸಂಸ್ಕೃತವನ್ನು ಒಂದು ಧರ್ಮದ ಭಾಷೆ, ಜಾತಿಯ ಭಾಷೆ ಎಂದು ಪ್ರತಿಬಿಂಬಿಸಿದರು. ಅಲ್ಲಾಹ್ ನ ವಾಣಿ ಅರಬ್ಬೀ, ಗಾಡ್ ನ ವಾಣಿ ಹೀಬ್ರೂ ಆಗಿದ್ದರೂ ಅವುಗಳಿಗೆ ಜಾತಿಯ ಸೋಂಕು ಮೆತ್ತಲಿಲ್ಲ. ಸಂಸ್ಕೃತ ಹಾಗೆ ಕರೆಯಲ್ಪಟ್ಟಿತು. ಈ ಕಾರಣಕ್ಕಾಗಿಯೇ ಅದನ್ನು ದ್ವೇಷಿಸುವ ಜನ ಹುಟ್ಟಿಕೊಂಡರು. ಕಾಲಕ್ರಮೇಣ ಪುರೋಹಿತರ ವಿರುದ್ಧ ಸಟೆದು ನಿಂತಿದ್ದ ದಲಿತರನ್ನು ಭಾರತದ ಶ್ರೇಷ್ಠ ನಿಧಿಯಿಂದ ದೂರವಿರಿಸುವಲ್ಲಿ ಬ್ರಿಟಿಷರು ಯಶಸ್ವಿಯಾಗಿಬಿಟ್ಟರು.

ಅಂಬೇಡ್ಕರರಿಗೆ ಇದು ಚೆನ್ನಾಗಿ ಗೊತ್ತಿದ್ದುದರಿಂದಲೇ ಅವರು ತಮ್ಮ ಜನಾಂಗ ಈ ಮೋಸಕ್ಕೆ ಬಲಿಯಾಗದೇ ಶ್ರೇಷ್ಠವಾದುದನ್ನು ಅರಿಯುವ ಅವಕಾಶವನ್ನು ಗಳಿಸಿಕೊಳ್ಳಬೇಕೆಂದು ಆಶಿಸಿದ್ದರು.

ಅವರ ಮನೋಗತ ಇನ್ನಾದರೂ ಈಡೇರಲಿ!!

Comments are closed.