ವಿಭಾಗಗಳು

ಸುದ್ದಿಪತ್ರ


 

ರಾಷ್ಟ್ರಭಾಷೆಯಲ್ಲ , ಸಂಸ್ಕೃತ ವಿಶ್ವಭಾಷೆಯಾಗಲಿ!!

ಸಂಸ್ಕೃತದ ಅರ್ಥವೇ ಹಾಗೆ. ‘ಸಮ್ಯಕ್ ಕೃತಂ’. ಯಾವುದು ಪರಿಪೂರ್ಣ ರೂಪದಲ್ಲಿದೆಯೋ ಅದೇ ಸಂಸ್ಕೃತ ಅಂತ. ಬ್ರಹ್ಮ ಇದನ್ನು ಋಷಿಗಳಿಗೆ ಕೊಟ್ಟಿದ್ದಂತೆ. ಅಲ್ಲಿಂದ ದೇವತೆಗಳಿಗೆ. ಹೀಗಾಗಿ ಇದನ್ನು ದೇವಭಾಷೆ ಅಂತಾನೂ ಕರೀತಾರೆ. ದೇವರಿಲ್ಲದ ಕಲ್ಪನೆ ನಮ್ಮಲ್ಲಿ ಇಲ್ಲವೇ ಇಲ್ಲ. ವ್ಯಾಕರಣ ರಚನೆಗೆ ಬೇಕಾದ ಮೂಲ ಸೂತ್ರಗಳು ಶಿವನ ಢಮರುವಿನಿಂದ ಹೊರಟ ಸದ್ದುಗಳು ಎನ್ನಲಾಗುತ್ತದೆ. ಈ ಸೂತ್ರಗಳ ಜಾಡು ಹಿಡಿದೇ ಪಾಣಿನಿಯು ತನ್ನ ಸೂತ್ರಗಳಿಗೆ ರೂಪು ಕೊಟ್ಟಿರೋದು. ಇವೆಲ್ಲ ಕೇಳಲಿಕ್ಕೆ ಅದೆಷ್ಟು ಸುಂದರ ಅಲ್ಲವೇ? ಭಾಷೆಯನ್ನೂ ಕೂಡ ದೈವತ್ವಕ್ಕೇರಿಸುವ ಪರಿ ಇದೇ.

WHITE-LOGO_400x400

1786 ರ ಫೆಬ್ರವರಿ 2 ರಂದು ಕಲ್ಕತ್ತಾದ ಏಷಿಯಾಟಿಕ್ ಸೊಸೈಟಿಯಲ್ಲಿ ಮನಮೋಹಕ ಭಾಷಣ ಮಾಡಿದ ವಿಲಿಯಂ ಜೋನ್ಸ್ ಸಂಸ್ಕೃತ-ಗ್ರೀಕ್- ಲ್ಯಾಟಿನ್ಗಳ ನಡುವಣ ಸಂಬಂಧವನ್ನು ಸುಂದರವಾಗಿ ವಿವರಿಸಿದ. ಆತನ ವಿದ್ವತ್ ಪೂರ್ಣ ವಿವರಣೆಗಳಲ್ಲಿ ಸಭಿಕರು ಕೊಚ್ಚಿ ಹೋಗಿದ್ದರು. ಈ ಹಂತದಲ್ಲಿಯೇ ಆತ ಈ ಮೂರು ಭಾಷೆಗಳು ಉಗಮವಾಗಿರೋದು ಒಂದೇ ಭಾಷೆಯಿಂದ ಎಂಬುದನ್ನು ಸಿದ್ಧ ಪಡಿಸಿದ ಮತ್ತು ಅದು ಸಂಸ್ಕೃತವಾಗಿರಲಾರದು ಎಂದೂ ಷರಾ ಬರೆದುಬಿಟ್ಟ. ಇಂಡೋ-ಯುರೋಪಿಯನ್ ಭಾಷೆಯೊಂದು ಈ ಭಾಷೆಗಳಿಗೆ ಜನ್ಮಕೊಟ್ಟು ಕಣ್ಮರೆಯಾಗಿರಬಹುದೆಂದು ವಾದಿಸಿದ. ಅಲ್ಲಿಂದಾಚೆಗೆ ನಾವುಗಳು ಈ ವಾದಕ್ಕೆ ಜೋತು ಬಿದ್ದೆವಲ್ಲದೇ ಅದನ್ನು ಸಾಬೀತು ಪಡಿಸುವಲ್ಲಿ ನಮ್ಮ ಪಾಂಡಿತ್ಯವನ್ನೆಲ್ಲಾ ಸವೆಸಿದೆವು.

ಈ ಲೇಖನ ಸರಣಿಯ ಆರಂಭದಲ್ಲಿಯೇ ವೇದಕಾಲೀನ ಸಂಸ್ಕೃತಿಯ ಕಾಲ ಗಣನೆಯ ಕುರಿತಂತೆ ಚಚರ್ಿಸಿದ್ದು ನಿಮಗೆ ನೆನಪಿರಬೇಕು. ಈ ದೇಶದ ಸರಸ್ವತಿ ನದಿ ಬಯಲಿನಲ್ಲಿ ವೇದಗಳು ಉತ್ಕಂಠದಿಂದ ಮೊಳಗುವ ಕಾಲಕ್ಕೆ ಜಗತ್ತಿನ ಸಂಸ್ಕೃತಿಗಳಲ್ಲಿ ಲಿಪಿಗಳ ಬಳಕೆ ಬಿಡಿ, ಭಾಷೆಯ ಬಳಕೆಯೂ ಇರಲಿಲ್ಲ. ವಿಲಿಯಂ ಜೋನ್ಸ್ಗೆ ಇದು ತಿಳಿದಿರಲಿಲ್ಲವೆಂದಲ್ಲ. ಆತ ಬ್ರಿಟಿಷ್ ಸಕರ್ಾರದ ನೌಕರನಾಗಿದ್ದ; ಭಾರತವನ್ನೂ ಇತರ ರಾಷ್ಟ್ರಗಳಂತೆ ಶಾಶ್ವತವಾಗಿ ಬ್ರಿಟೀಷ್ ಕಾಲೋನಿಯಾಗಿಸುವ ತುಡಿತ ಅವನಲ್ಲಿತ್ತು.

ಸಂಸ್ಕೃತ ಭಾಷೆ ಹುಟ್ಟಿದಾಗಿನಿಂದಲೂ ಪರಿಪೂರ್ಣ ಭಾಷೆ. ಅದನ್ನು ಹಳೆ ಸಂಸ್ಕೃತ, ಆಧುನಿಕ ಸಂಸ್ಕೃತವೆಂದು ವಿಂಗಡಿಸೋದು ಕಷ್ಟ. ಅಕ್ಷರಗಳ ಬಳಕೆ, ಪದಗಳ ರಚನೆ, ವ್ಯಾಕರಣ ಎಲ್ಲವೂ ಅಂದಿನಿಂದ ಇಂದಿನವರೆಗೆ ಒಂದೇ ಬಗೆ. ಹಾಗೆ ಭಾಷೆಯನ್ನು ಕಾಲದ ಆಧಾರದಲ್ಲಿ ವಿಂಗಡಿಸಿಯೇ ನೋಡಬೇಕೆಂದರೆ ವೇದಕಾಲದ ಸಂಸ್ಕೃತ, ಉಪನಿಷತ್ ಕಾಲದ್ದು ಮತ್ತು ಪುರಾಣ ಯುಗದ್ದೆಂದು ಬೇರ್ಪಡಿಸಬಹುದೇನೋ? ಹಾಗಂತ ಇದು ಪರಿಪೂರ್ಣತೆಯೆಡೆಗಿನ ಯಾತ್ರೆ ಅಲ್ಲ. ಬದಲಾಗಿ ಕಾಠಿಣ್ಯದಿಂದ ಲಾಲಿತ್ಯದೆಡೆಗಿನ ಮಾರ್ಗ ಅಷ್ಟೇ. ವೇದದಲ್ಲಿ ಬಳಕೆಯಾದ ಪದಗಳು ಅದೇ ಅರ್ಥ ಮತ್ತು ವಿಧಾನದಿಂದ ಗೀತೆಯಲ್ಲೂ ಬಳಕೆಯಾಗುತ್ತವೆ, ಪುರಾಣಗಳಲ್ಲೂ ಬಳಸಲ್ಪಡುತ್ತವೆ. ಅಂದರೆ ಎಂಟ್ಹತ್ತು ಸಾವಿರ ವರ್ಷಗಳ ನಂತರವೂ ಸವೆಯದೇ ಉಳಿದಿದೆ ಅಂತಾಯ್ತು. ಇದೇ ಸಂಸ್ಕೃತದ ಮೂಲ ಸಾಮಥ್ರ್ಯ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಲ್ಲಿ ಪದಗಳ ಹುಟ್ಟುವಿಕೆ ಧಾತುಗಳ ಆಧಾರದ ಮೇಲೆ ನಡೆಯುವಂತಹುದು. ಧಾತುವಿನ ಅರ್ಥ ವ್ಯತ್ಯಾಸವಾಗದ ಹೊರತು ಪದಗಳು ಪ್ರಭೆ ಕಳೆದುಕೊಳ್ಳಲಾರವು. ಉದಾಹರಣೆಗೆ ‘ಕೃ’ ಧಾತು ‘ಮಾಡು’ ಎಂಬುದನ್ನು ಸೂಚಿಸುತ್ತದೆ. ಅಂದ ಮೇಲೆ ಇದರ ಆಧಾರದ ಮೇಲೆ ಹುಟ್ಟಿದ ಪ್ರತಿಯೊಂದು ಪದವೂ ಅದರ ಸುತ್ತಮುತ್ತಲೇ ತಿರುಗಾಡುತ್ತದೆ. ಸುಕೃತ, ವಿಕೃತ, ತಿರಸ್ಕೃತ, ಪರಿಷ್ಕೃತ, ಸಕ್ರಿಯ, ನಿಷ್ಕ್ರಿಯ ಎಲ್ಲವೂ. ಧಾತುಗಳ ಆಧಾರದ ಮೇಲೆ ಪದಗಳ ಉತ್ಪತ್ತಿ, ಅಳವಡಿಸಿಕೊಳ್ಳುವಿಕೆ ಇವೆಲ್ಲವೂ ಅಂದಿನಿಂದ ಇಂದಿನವರೆಗೂ ಒಂದೇ ಬಗೆಯಾಗಿರುವುದರಿಂದ ಸಂಸ್ಕೃತ ಒಂದು ರೀತಿಯಲ್ಲಿ ಪರಿಪೂರ್ಣ ಭಾಷೆ.

ಇದು ಬಿಡಿ. ಭಾಷೆಗೆ ಎರಡು ಮಗ್ಗುಲುಗಳಿವೆ. ಒಂದು ಮಾತನಾಡೋದು, ಮತ್ತೊಂದು ಬರೆಯೋದು. ಮಾತನಾಡುವಾಗ ಹೊರಟ ಶಬ್ದವನ್ನು ಅಕ್ಷರಗಳಲ್ಲಿ ಹಿಡಿದಿಡುವುದನ್ನು ಲಿಪಿ ಅಂತಾರೆ ಸರಿ. ಆದರೆ ಮಾತನಾಡಿದ್ದೆಲ್ಲವನ್ನೂ ಲಿಪಿಬದ್ಧಗೊಳಿಸುವುದು ಸುಲಭದ ಮಾತಲ್ಲ. ಅದರ ಹಿಂದೆ ಬಲು ದೊಡ್ಡ ವಿಜ್ಞಾನವೇ ಇದೆ. ಅದನ್ನು ಮತ್ತೊಮ್ಮೆ ಚಚರ್ಿಸೋಣ. ಸಂಸ್ಕೃತದ ವೈಷಿಷ್ಟ್ಯವದೇನು ಗೊತ್ತೇ? ಅದರಲ್ಲಿ ಏನನ್ನು ಹೇಳುವೆವೋ ಅದನ್ನೇ ಬರೆಯಲು ಸಾಧ್ಯ ಮತ್ತು ಬರೆದದ್ದನ್ನು ಹಾಗೆಯೇ ಓದಬಹುದು ಕೂಡ. ಇಂಗ್ಲೀಷಿಗೆ ಈ ಭಾಗ್ಯವಿಲ್ಲ. ಅಲ್ಲಿ ಬರವಣಿಗೆಯ ನಿಯಮಗಳಿಲ್ಲ. ಉಚ್ಚಾರವೂ ಅಷ್ಟೇ. ಒಂದೇ ಪದವನ್ನು ಬೇರೆ-ಬೇರೆಯವರು ಬೇರೆ-ಬೇರೆ ರೀತಿಯಲ್ಲಿ ಓದಿಬಿಡುತ್ತಾರೆ. ಅಲ್ಲಿಗೆ ಆಗತಾನೆ ಇಂಗ್ಲೀಷ್ ಕಲಿತವ ಪಡ್ಚ.

ಐಲರ್ೆಂಡಿನ ವಿದ್ಯಾಥರ್ಿಗಳಾದರೂ ಸರಿ, ರಾಮೇಶ್ವರದ ಗುರುಕುಲದ ಮಕ್ಕಳಾದರೂ ಸರಿ. ಈಶಾವಾಸ್ಯೋಪನಿಷತ್ತಿನ ಮಂತ್ರ ಹೇಳಲಾರಂಭಿಸಿದರೆ ಭಿನ್ನತೆಗಳು ಗೋಚರವಾಗೋದು ಕಡಿಮೆ. ಇದಕ್ಕೇನು ಕಾರಣವಿರಬಹುದು?

ಭಾಷೆಯ ದೃಷ್ಟಿಯಿಂದ ಸ್ವರಗಳು ಮತ್ತು ವ್ಯಂಜನಗಳನ್ನು ಪ್ರತ್ಯೇಕಿಸಿದ್ದಾರಲ್ಲ ಆಧಾರವದೇನು ಗೊತ್ತೇ? ಯಾವ ಅಕ್ಷರಗಳನ್ನು ಸ್ವತಂತ್ರವಾಗಿ ಉಚ್ಚರಿಸಲಾಗದೋ ಅವು ವ್ಯಂಜನಗಳು ಮತ್ತು ಯಾವುದು ಸ್ವತಂತ್ರ ಅಸ್ತಿತ್ವ ಹೊಂದಿದೆಯೋ ಅವು ಸ್ವರಗಳು! ವ್ಯಂಜನಗಳು ಅಧರ್ಾಕ್ಷರಗಳಷ್ಟೇ. ಕ್, ಗ್, ಚ್ ಇತ್ಯಾದಿ. ಇವು ಸ್ವರಗಳೊಂದಿಗೆ ಕೂಡಿ ಕ,ಕಾ,ಕಿ,ಕೀ ಇತ್ಯಾದಿಗಳಾಗುತ್ತವೆ. ‘ಕತ್ತಲಗಟ್ಟು ಕ, ಕ ದೀರ್ಘ ಕಾ’ ಅಂತ ಚಿಕ್ಕಂದಿನಲ್ಲಿ ಕಲಿತದ್ದು ನೆನಪಿಸಿಕೊಳ್ಳಿ. ಅವೆಲ್ಲ ವ್ಯಂಜನ ಮತ್ತು ಸ್ವರಗಳ ಜೊತೆಗೂಡುವಿಕೆಯ ವಿವರಣೆಗಳು. ಹೀಗೆ ಪ್ರತಿಯೊಂದು ವ್ಯಂಜನವೂ ಸ್ವರದೊಂದಿಗೆ ಸೇರಿಯೇ ಅಕ್ಷರವಾಗೋದರಿಂದ ಉಚ್ಚಾರದ ದೃಷ್ಟಿಯಿಂದ ಸಮಗ್ರ ಭಾಷೆ ಸಂಸ್ಕೃತವೇ! ಇಂಗ್ಲೀಷ್ ಬಿಡಿ. ಇಡಿಯ ಜಗತ್ತಿನಲ್ಲಿ ಮತ್ತೊಂದು ಭಾಷೆ ಈ ಬಗೆಯ ಗುಣಗಳನ್ನು ಹೊಂದಿಲ್ಲ.

ಈ ಕಾರಣದಿಂದಾಗಿಯೇ ಜಾಗತಿಕ ಭಾಷೆ ಎಂದು ಕರೆಸಿಕೊಂಡ ಮೇಲೂ ಇಂಗ್ಲೀಷನ್ನು ಸಮರ್ಥವಾಗಿ ಮಾತನಾಡುತ್ತಿದ್ದೇನೆಂಬ ಧೈರ್ಯ ಇರೋರು ಸಿಗೋದು ವಿರಳ. ಇದು ಸರಿ ಎನ್ನುವ ಬೆಂಚ್ಮಾಕರ್ಿನ ವ್ಯಾಕರಣವೇ ಅಲ್ಲಿಲ್ಲ. ಹತ್ತು ವರ್ಷಗಳ ಹಿಂದಿನ ಇಂಗ್ಲೀಷಿಗೂ ಇಂದಿನದಕ್ಕೂ ಸಾಕಷ್ಟು ವ್ಯತ್ಯಾಸಗಳು. ಒಟ್ಟಿನಲ್ಲಿ ಅರ್ಥವಾದರೆ ಸಾಕು ಎಂಬ ಭಾವ ಅಷ್ಟೇ.

ಸಂಸ್ಕೃತದ ವ್ಯಾಕರಣ ಹಾಗಲ್ಲ. ವೇದಗಳಲ್ಲಿ ಬಳಸಿರುವ ಕ್ರಿಯಾ ಪದಗಳ ಶೈಲಿಗೂ ಇಂದಿನ ಆಡು ಭಾಷೆಯಲ್ಲಿ ಬಳಕೆಯಾಗುತ್ತಿರುವುದಕ್ಕೂ ಬಹುವಾದ ವ್ಯತ್ಯಾಸಗಳೇನು ಇಲ್ಲ. ಅಲ್ಲಲ್ಲಿ ಕಂಡು ಬರುವ ಕೆಲವು ಭಿನ್ನತೆಗಳೂ ಶೈಲಿಯ ಕಾರಣದ್ದೇ ಹೊರತು ಅದು ಬೆಳವಣಿಗೆಯನ್ನು ತೋರುವಂತಹುದಲ್ಲ. ಭಾಗವತದ ಮನಮೋಹಿಸುವ ಸಂಸ್ಕೃತವನ್ನು ವೇದಗಳ ಸಂಸ್ಕೃತಕ್ಕಿಂತ ನವೀನ ಎನ್ನುವಂತಿಲ್ಲ. ಏಕೆಂದರೆ ವೇದಗಳು ಆಚರಣೆಗಳ ವಿಚಾರಕ್ಕಷ್ಟೇ ಸೀಮಿತವಾದರೆ ಭಾಗವತ ಭಕ್ತಿಯ ಜಾಗೃತಿಯ ಉದ್ದೇಶದಿಂದ ಬರೆದದ್ದು. ಅವರವರ ಶೈಲಿ ಬೇರೆ ಅಷ್ಟೇ. ಸಂಸ್ಕೃತ ಅದೊಂದೇ!

ಸಂಸ್ಕೃತದ ಅರ್ಥವೇ ಹಾಗೆ. ‘ಸಮ್ಯಕ್ ಕೃತಂ’. ಯಾವುದು ಪರಿಪೂರ್ಣ ರೂಪದಲ್ಲಿದೆಯೋ ಅದೇ ಸಂಸ್ಕೃತ ಅಂತ. ಬ್ರಹ್ಮ ಇದನ್ನು ಋಷಿಗಳಿಗೆ ಕೊಟ್ಟಿದ್ದಂತೆ. ಅಲ್ಲಿಂದ ದೇವತೆಗಳಿಗೆ. ಹೀಗಾಗಿ ಇದನ್ನು ದೇವಭಾಷೆ ಅಂತಾನೂ ಕರೀತಾರೆ. ದೇವರಿಲ್ಲದ ಕಲ್ಪನೆ ನಮ್ಮಲ್ಲಿ ಇಲ್ಲವೇ ಇಲ್ಲ. ವ್ಯಾಕರಣ ರಚನೆಗೆ ಬೇಕಾದ ಮೂಲ ಸೂತ್ರಗಳು ಶಿವನ ಢಮರುವಿನಿಂದ ಹೊರಟ ಸದ್ದುಗಳು ಎನ್ನಲಾಗುತ್ತದೆ. ಈ ಸೂತ್ರಗಳ ಜಾಡು ಹಿಡಿದೇ ಪಾಣಿನಿಯು ತನ್ನ ಸೂತ್ರಗಳಿಗೆ ರೂಪು ಕೊಟ್ಟಿರೋದು. ಇವೆಲ್ಲ ಕೇಳಲಿಕ್ಕೆ ಅದೆಷ್ಟು ಸುಂದರ ಅಲ್ಲವೇ? ಭಾಷೆಯನ್ನೂ ಕೂಡ ದೈವತ್ವಕ್ಕೇರಿಸುವ ಪರಿ ಇದೇ.

ಈ ಕಾರಣಕ್ಕಾಗಿಯೇ ಶಾಸ್ತ್ರಗಳ ಭಾಷೆಯೂ ಸಂಸ್ಕೃತವೇ. ಅನೇಕ ಮತ-ಪಂಥಗಳ ಸಮಸ್ಯೆಯೇನು ಗೊತ್ತೇ? ಅವರ ಶಾಸ್ತ್ರಗಳಲ್ಲಿ ಬಳಸಿರುವ ಭಾಷೆ ಬೇರೆ, ಅವರಾಡುವ ಭಾಷೆಯೇ ಬೇರೆ. ಬೈಬಲ್ನ ಭಾಷೆ ಹೀಬ್ರೂ. ಅದನ್ನು ಶಾಸ್ತ್ರೀಯ ಹೀಬ್ರೂ ಅಂತಾನೂ ಕರೀತಾರೆ. ಈಗ ಬಹುತೇಕರು ಅದನ್ನು ಓದೋದು ತಂತಮ್ಮ ಭಾಷೆಯಲ್ಲಿಯೇ. ಆದರೆ ಭಾರತೀಯ ಶಾಸ್ತ್ರಗ್ರಂಥಗಳನ್ನು ಮಾತ್ರ ಈಗಲೂ ಸಂಸ್ಕೃತದಲ್ಲಿಯೇ ಓದಿ ತಿಳಿದುಕೊಳ್ಳಬಹುದು. ಸಾವಿರಾರು ವರ್ಷಗಳ ಸಾಹಿತ್ಯವನ್ನು ಈಗಲೂ ಮೂಲದಲ್ಲಿಯೇ ಅಥರ್ೈಸಿಕೊಳ್ಳೋದು ತಮಾಷೆಯ ಮಾತೇನು? ಹಾಗಿದ್ದರೆ ಮೃತ ಭಾಷೆ ಅಂತ ಇವರು ಸಂಬೋಧಿಸಿದ್ದಾದರೂ ಯಾವುದನ್ನು? ಹೇಳಿ ನೋಡೋಣ.

Devimahatmya_Sanskrit_MS_Nepal_11c

ಇದೇ ಮೃತ ಭಾಷೆಯಿಂದಲೇ ಜಗತ್ತಿನ ಅನೇಕ ಭಾಷೆಗಳು ಪರಿಪುಷ್ಟಿಗೊಂಡಿವೆ ಅನ್ನೋದನ್ನು ಮರೆಯುವುದುಂಟೇ? ಪ್ಯಾಲೆಸ್ತೇನಿನಲ್ಲಿ ಮಾತನಾಡುತ್ತಿದ್ದ ಹೀಬ್ರೂ ಭಾಷೆಯಲ್ಲಿ ಸ್ವರಗಳೇ ಇರಲಿಲ್ಲ. ಮುಂದೆ ಅವುಗಳಲ್ಲಿ ಸ್ವರಗಳು ಸೇರಿಕೊಂಡಿದ್ದು ಸಂಸ್ಕೃತದ ಪ್ರಭಾವದಿಂದಲೇ ಇರಬಹುದೆಂಬ ತರ್ಕ ಈಗ ನಡೆಯುತ್ತಿದೆ. ಪಷರ್ಿಯನ್ ಭಾಷೆಯೊಳಗಂತು ಸಂಸ್ಕೃತ ಅಚ್ಚರಿಯೆನಿಸುವಷ್ಟು ಸೇರಿಕೊಂಡು ಬಿಟ್ಟಿದೆ. ಪಾಸರ್ಿಗಳ ಪ್ರವಾದಿ ಜೋರಾಷ್ಟರನಿಂದ ಕೊಡಲ್ಪಟ್ಟ ಮತಗ್ರಂಥ ಅವೆಸ್ತಾ ‘ಪಹ್ಲವಿ’ ಭಾಷೆಯಲ್ಲಿದ್ದು ಸಂಸ್ಕೃತದ ಅಪಭ್ರಂಶಗಳು ಸಾಕಷ್ಟು ಸೇರಿಕೊಂಡಿವೆ. ಪದಗಳು ಬಿಡಿ ಅದರಲ್ಲಿ ಉಲ್ಲೇಖಗೊಂಡ ಅನೇಕ ಆಚರಣೆಗಳು ವೈದಿಕ ಆಚರಣೆಗಳನ್ನು ಹೋಲುವಂತಿವೆ. ಭಾರತದ ವ್ಯಾಪಾರಿಗಳು, ತತ್ತ್ವಶಾಸ್ತ್ರಜ್ಞರು ಜಗತ್ತಿನಾದ್ಯಂತ ಭ್ರಮಣೆ ಮಾಡುತ್ತಿದ್ದುದರಿಂದ ಪ್ರಭಾವ ಆಗಿರುವ ಸಾಧ್ಯತೆಗಳನ್ನು ವಿದ್ವಾಂಸರು ಅನುಮೋದಿಸುತ್ತಾರೆ!

ಇನ್ನು ಇಂಗ್ಲೀಷ್ನ ಮೇಲಂತೂ ಕಣ್ಣಿಗೆ ಕಾಣುವಷ್ಟು ಸಂಸ್ಕೃತದ ಪ್ರಭಾವ ಇದೆ. ‘ಮಾತೃ’ ಎನ್ನುವ ತಾಯಿ ಎಂಬರ್ಥದ ಸಂಸ್ಕೃತದ ಪದ ಲ್ಯಾಟಿನ್ನಿನ ಮೂಲಕ ಸಾಗಿ ಇಂಗ್ಲೀಷಿಗೆ ಬರುವಾಗ ಮದರ್ ಆಯಿತು. ಪಿತೃ, ಫಾದರ್ ಆಯಿತು. ಸಂಖ್ಯೆಗಳು, ತಿಂಗಳುಗಳು, ವಾರಗಳು ಹೀಗೆ ಅನೇಕ ಪದಗಳು ಸುತ್ತಿ ಬಳಸಿ ಇಂಗ್ಲೀಷು ಸೇರಿಕೊಂಡವು. ಹೀಗೆ ಇಂಗ್ಲೀಷಿಗೆ ಬರುವ ಮುನ್ನ ಅದು ಉಳಿದ ಭಾಷೆಗಳನ್ನು ಪ್ರಭಾವಿಸಿಯೇ ಬಂದಿರುವುದನ್ನು ಮರೆಯುವಂತಿಲ್ಲ. ಹೀಗಾಗಿ ಎಲ್ಲಾ ಭಾಷೆಗಳ ತಾಯಿ ಭಾಷೆ ಅಂತ ಇದನ್ನು ಕರೆಯೋದು. ಅದನ್ನು ಒಪ್ಪಿದರೆ ಭಾರತದ ಸಾರ್ವಭೌಮತೆಯನ್ನು ಒಪ್ಪಿಕೊಂಡಂತಾಗುತ್ತದೆಂದು ಹೆದರಿಯೇ ವಿಲಿಯಂ ಜೋನ್ಸ್ ಹೊಸದೊಂದು ಇಂಡೋ-ಯುರೋಪಿಯನ್ ಭಾಷೆಯ ಕಲ್ಪನೆಯನ್ನು ಹುಟ್ಟು ಹಾಕಿದ್ದು.

ಇದನ್ನು ಸರಿಯಾಗಿ ಬಿತ್ತಿ ಬೇಳೆ ತೆಗೆಯಬೇಕೆಂದು ಅವರು ತಮಗೆ ಬೇಕಾದ ಪ್ರೊಫೆಸರುಗಳನ್ನು ಭಾರತದಲ್ಲಿ ಸೃಷ್ಟಿ ಮಾಡಿದರು. ಆ ಮೂಲಕ ಭಾರತ ವಿರೋಧಿ ಭಾರತೀಯರ ಹೊಸ ಪೀಳಿಗೆಯನ್ನು ನಿಮರ್ಾಣ ಮಾಡಿದರು! ಅವರುಗಳೇ ಸಂಸ್ಕೃತವನ್ನು ಬ್ರಾಹ್ಮಣರ ಭಾಷೆ ಎಂದು ಜರಿದರು; ಆರ್ಯ ಭಾಷೆ, ದ್ರಾವಿಡ ಭಾಷೆ ಎಂಬ ಗೋಡೆ ಕಟ್ಟಿ ಸಂಸ್ಕೃತದೊಂದಿಗೆ ಆಕ್ರೋಶ ಹುಟ್ಟುವಂತೆ ನೋಡಿಕೊಂಡರು.

ಇಷ್ಟಕ್ಕೂ ಒಂದು ಪ್ರಶ್ನೆ ಕೇಳಿಕೊಂಡು ನೋಡಿ. ಜಗತ್ತಿನ ಭಾಷೆಗಳಿಗೆಲ್ಲಾ ತನ್ನ ಸತ್ತ್ವವನ್ನು ಧಾರೆ ಎರೆದ ಸಂಸ್ಕೃತ, ತನ್ನ ದೇಶದ ಭಾಷೆಗೆ ಶಕ್ತಿ ತುಂಬಲಿಲ್ಲವೇನು? ಖಂಡಿತ ತುಂಬಿದೆ. ಉತ್ತರ ಭಾರತದ ಸಾಮಾನ್ಯರ ನಡುವೆ ವ್ಯಾಪಕವಾಗಿದ್ದ ಪ್ರಾಕೃತದೊಳಗೆ ಸಂಸ್ಕೃತದ ಅಪಭ್ರಂಶಗಳು ಎಷ್ಟೊಂದಿವೆ! ಬುದ್ಧನ ಬೋಧನೆಗಳು ಪಾಲಿಯಲ್ಲಿವೆ ಎನ್ನುತ್ತೇವಲ್ಲ; ಧಮ್ಮಪದವನ್ನು ಓದಿನೋಡಿ ಸಂಸ್ಕೃತಕ್ಕೆ ಅದೆಷ್ಟೊಂದು ಹತ್ತಿರ ಅದು. ಅಷ್ಟೇಕೆ ಕನ್ನಡದಲ್ಲಿ ನಾವು ಬಳಸುವ ಬಹುತೇಕ ಪದಗಳು ಸಂಸ್ಕೃತದ್ದೇ. ನಾವು ಉಪಯೋಗಿಸುವ ವ್ಯಾಕರಣವೂ ಸಂಸ್ಕೃತದ್ದೇ!

ಇದೊಳ್ಳೇ ಕತೆಯಾಯಿತಲ್ಲ. ಯಾರನ್ನೂ ಮುಟ್ಟಿಸಿಕೊಳ್ಳದ ಬ್ರಾಹ್ಮಣ ತನ್ನ ಭಾಷೆಯನ್ನು ಮಾತ್ರ ಹೀಗೆ ಎಲ್ಲರೂ ಬಳಸಿಕೊಳ್ಳಲು ಬಿಟ್ಟುಕೊಟ್ಟಿದ್ದು ಹೇಗೆ? ಹೀಗೆ ಹೇಳುತ್ತಿದ್ದುದರ ಹಿಂದೊಂದು ಷಡ್ಯಂತ್ರವಿದೆ ಎನಿಸೋದಿಲ್ವ!

ಮೊದಲು ಸಂಸ್ಕೃತ ಮೂಲಭಾಷೆ ಅಲ್ಲವೆಂದರು. ಅದರ ಮೌಲ್ಯ ಅನಾವರಣಗೊಳ್ಳುತ್ತ ನಡೆದಂತೆ ಅದೀಗ ಸತ್ತು ಹೋಗಿದೆ ಎಂದರು. ಅದು ಭಾರತೀಯ ಭಾಷೆಗಳ ಮೂಲಕ ಉಸಿರಾಡುತ್ತಿರುವುದು ಅರಿವಾದ ಮೇಲೆ ಅದನ್ನು ಮೇಲ್ವರ್ಗದವರ ಭಾಷೆಯೆಂದು ಗೂಬೆ ಕೂರಿಸಿದರು. ಅನೇಕ ಸಂಘಟನೆಗಳ ಮೂಲಕ ಅದನ್ನು ಮನೆಮಾತಾಗಿಸುವ ಪ್ರಯತ್ನ ಯಶಸ್ವಿಯಾದ ಮೇಲಂತೂ ಎಲ್ಲರೂ ತೆಪ್ಪಗಾಗಿಬಿಟ್ಟಿದ್ದಾರೆ.

ಸಂಸ್ಕೃತವ್ನನು ಎಲ್ಲರೂ ತಿಳಿಯುವುದರಿಂದ ನಿಜಕ್ಕೂ ಒಂದಷ್ಟು ಲಾಭವಿದೆ. ತಿಳಿದಿದ್ದೇವೆಂದು ಹೇಳಿ ಮೋಸ ಮಾಡುವ ಮೇಲ್ವರ್ಗದ ಕೆಲವರಿಂದ ಬಚಾವಾಗಬಹುದು. ಭಾರತೀಯವಾದುದೆಲ್ಲ ಬೊಗಳೆಯೆಂದು ಜರಿಯುವ ಎಡಪಂಥೀಯರ ಸುಳ್ಳುಗಳನ್ನು ಸಮರ್ಥವಾಗಿ ಎದುರಿಸಬಹುದು.

ಮೊದಲೆಲ್ಲ ಹಾಗೆಯೇ ಇತ್ತು. ಕನ್ನಡದ ಪಂಡಿತರೆಂದರೆ ಅವರು ಸಂಸ್ಕೃತವನ್ನು ಚೆನ್ನಾಗಿ ತಿಳಿದವರೇ ಆಗಿರುತ್ತಿದ್ದರು. ಡಿವಿಜಿಯಿಂದ ಹಿಡಿದು ಕುವೆಂಪುವರೆಗೆ ಎಲ್ಲರೂ ಸಂಸ್ಕೃತ ಪಂಡಿತರೇ! ಅವರ ಸಾಹಿತ್ಯದ ಲಾಲಿತ್ಯದ ಹಿಂದಿರೋದು ಸಂಸ್ಕೃತದ ಶಕ್ತಿ ಎಂಬುದನ್ನು ಎಲ್ಲರೂ ಬಲ್ಲರು. ಸಂಸ್ಕೃತವನ್ನು ಜೀಣರ್ಿಸಿಕೊಂಡು ಕನ್ನಡವನ್ನು ಶ್ರೀಮಂತಗೊಳಿಸಿದವರು ಅವರು. ಆದರೆ ಕಾಲಕ್ರಮೇಣ ಸಂಸ್ಕೃತ ವಿರೋಧ ಅದೆಷ್ಟು ತೀವ್ರವಾಯಿತೆಂದರೆ ಭಾಷೆಯ ಹಿಡಿತವೂ ಕಳೆಯಿತು; ಅವತ್ತಿನ ಹಾಡುಗಳು ಮಧುರವಾಗಿದ್ದವು, ಅವತ್ತಿನ ಲೇಖಕರು ಸುಂದರವಾಗಿ ಬರೆಯುತ್ತಿದ್ದರು ಅಂತೆಲ್ಲ ಹೇಳ್ತೀವಲ್ಲ ಆಗೆಲ್ಲ ಅರಿವಿಲ್ಲದೇ ಈ ಲಾಲಿತ್ಯದ್ದೇ ಪ್ರಶ್ನೆ ನಮ್ಮೆದುರಿಗಿರೋದು.

ಸಂಸ್ಕೃತ ಮತ್ತೆ ವ್ಯಾಪಕಗೊಂಡರೆ ತಾಯಿಯನ್ನು ಕಂಡ ಕರುಗಳಂತೆ ಜಗತ್ತಿನ ಭಾಷೆಗಳೆಲ್ಲ ಅನುಸರಿಸಲು ಶುರುಮಾಡುತ್ತವೆ. ಭಾರತೀಯ ಸಾಹಿತ್ಯವನ್ನು ಜಗತ್ತಿನ ಜನರು ತೆರೆದ ಕಣ್ಣಿಂದ ನೋಡುವುದು ಸಾಧ್ಯವಾಗುತ್ತದೆ. ಒಮ್ಮೆ ಬ್ರಿಟೀಷರ ಕನ್ನಡಕ ಕಿತ್ತೆಸೆಯಿತೆಂದರೆ ಜಗತ್ತು ಶ್ರೇಷ್ಠತೆಯೆಡೆಗೆ ತಂತಾನೆ ಹೆಜ್ಜೆ ಹಾಕಲು ಶುರುಮಾಡುತ್ತದೆ.

ಅದಕ್ಕೇ ವಿಶ್ವಶಾಂತಿಗೆಂದು ವಿಶ್ವಗುರುವಿನ ಮಾರ್ಗದರ್ಶನ ಬೇಕು; ಅದಕ್ಕೊಂದು ವಿಶ್ವಭಾಷೆ ಬೇಕು ಅನ್ನೋದು

Comments are closed.