ವಿಭಾಗಗಳು

ಸುದ್ದಿಪತ್ರ


 

 ವಿಶ್ವವನ್ನು ಸುಸಂಕೃತಗೊಳಿಸಲು ಭಾರತೀಯನ ಸಾಹಸಯಾತ್ರೆ!

ಕಾಂಬೋಡಿಯಾ ಜನಕ್ಕೆ ವಸ್ತ್ರದ ಪರಿಕಲ್ಪನೆ, ಶಿಕ್ಷಣ, ಮಾನವೀಯ ಬದುಕಿನ ರೀತಿ-ನೀತಿ, ಕಾನೂನು ಕಟ್ಟು-ಕಟ್ಟಳೆಗಳ ಪರಿಚಯ ಜೊತೆಗೆ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳ ಪರಿಕಲ್ಪನೆ, ಸಂಸ್ಕೃತ ಭಾಷೆ ಎಲ್ಲವೂ ಭಾರತದಿಂದ ದೊರೆತಿದ್ದೆ!

Hinduism_Expansion_in_Asia.svg

ಉತ್ತರದ ಹಿಮಾಲಯ ಶ್ರೇಣಿ, ಪೂರ್ವದ ಘನವಾದ ಕಾಡು, ಪಶ್ಚಿಮದ ವಿಶಾಲ ಮರುಭೂಮಿ ಮತ್ತು ದಕ್ಷಿಣವನ್ನು ಆವರಿಸಿರುವ ಸಮುದ್ರದ ಅಲೆಗಳು! ಭಾರತವನ್ನು ಜಗತ್ತಿನಿಂದ ಪ್ರತ್ಯೇಕಗೊಳಿಸಲು ಇವಿಷ್ಟು ಸಾಕಿತ್ತು. ಆದರೆ ವಿಜ್ಞಾನದ ತುಡಿತ, ತಂತ್ರಜ್ಞಾನದ ಶೋಧ, ಸಾಹಸ ಮನೋಭಾವ ಮತ್ತು ಬಲಾಢ್ಯ ಇಚ್ಛಾಶಕ್ತಿ ಹೊಂದಿದ್ದ ಭಾರತೀಯ ಈ ಪ್ರಾಕೃತಿಕ ಗೋಡೆಯೊಳಗೆ ಬಂಧಿತನಾಗಿರಲು ಸಿದ್ಧನಿರಲಿಲ್ಲ. ಭೂಮಂಡಲದ ಬೇರೆ ಬೇರೆ ಭಾಗಗಳಲ್ಲಿ ಇರಬಹುದಾದ ಜನರನ್ನು ಭೇಟಿಮಾಡುವ, ಅವರನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಸಂಕಲ್ಪ ಮಾಡಿದ. ಆಗಲೇ ಅವತೀರ್ಣಗೊಂಡದ್ದು ಆ ಮಾತು, ‘ಕೃಣ್ವಂತೋ ವಿಶ್ವಮಾರ್ಯಂ’ ವಿಶ್ವವನ್ನೇ ಆರ್ಯವಾಗಿಸೋಣ. ಇಲ್ಲಿ ಆರ್ಯವೆಂದರೆ ಬ್ರಿಟೀಷರು ತಲೆಯೊಳಗೆ ಬಿಟ್ಟ ಜನಾಂಗವೆಂಬ ಹುಳುವಲ್ಲ. ಆರ್ಯವೆಂದರೆ ಸಭ್ಯರು, ಸುಸಂಸ್ಕೃತರು ಅಂತ.

ಹಿಮಪರ್ವತವನ್ನೇರಿ, ಮರುಭೂಮಿಯಲ್ಲಿ ದಾರಿ ಸವೆಸಿ ಮತ್ತೊಂದು ರಾಷ್ಟ್ರಕ್ಕೆ ಹೋಗುವಷ್ಟೇ ಸವಾಲು ಸಮುದ್ರ ಮಾರ್ಗವನ್ನು ದಾಟುವುದೂ ಆಗಿತ್ತು. ಹೀಗಾಗಿ ಭಾರತ ನೌಕಾಯಾನಕ್ಕೆ ಮನಸ್ಸು ಮಾಡಿತು. ಸಮುದ್ರವನ್ನು ದಾಟಿ ಹೋಗಬಲ್ಲ ವಿಶಾಲ ನೌಕೆಗಳ ನಿಮರ್ಾಣ ಶುರುವಾಯ್ತು. ಕಾಲಕ್ರಮದಲ್ಲಿ ಈ ವಿಜ್ಞಾನ ಅದೆಷ್ಟು ವಿಸ್ತಾರವಾಗಿ ಬೆಳೆಯಿತೆಂದರೆ ದಕ್ಷಿಣ-ಪಶ್ಚಿಮ ಭಾರತದಲ್ಲಿ ಅನೇಕ ಬಂದರುಗಳು ನಿಮರ್ಾಣಗೊಂಡವು. ಪೆರಿಪ್ಲಸ್ ಆಫ್ ದ ಎರಿಥ್ರಿಯಸ್ ಸೀ ಎಂಬ ಕೃತಿಯಲ್ಲಿ ಗ್ರಂಥಕರ್ತ ಚೋಲ, ದಾಭೋಲ, ಮಾಲವಣ, ಗೋವಾ, ಚೆನ್ನಾನೂರು, ಕೊಟ್ಟಾಯಂ, ಕನ್ಯಾಕುಮಾರಿ, ಕೋಣಾರ್ಕ, ಮಸಲೀಪಟ್ಟಣ, ನಾಗಾಪಟ್ಟಣ ಮೊದಲಾದ ಬಂದರುಗಳ ಉಲ್ಲೇಖ ಮಾಡಿದ್ದಾರೆ. ನಮ್ಮ ಇತಿಹಾಸದ ಪ್ರಕಾರ ನಾವು ಅರಬ್ಬೀ ಸಮುದ್ರವನ್ನು ರತ್ನಾಕರವೆಂದೂ, ಬಂಗಾಳಕೊಲ್ಲಿಯನ್ನು ಮಹೋದಧಿ ಎಂದೂ ಕರೆಯುತ್ತಿದ್ದೆವು.

ಆರಾರು ತಿಂಗಳುಗಳ ಕಾಲ ನೌಕೆಯಲ್ಲಿದ್ದು ಯಾತ್ರೆ ಮಾಡುವಷ್ಟು ಸಾಹಸಿಗರಾಗಿದ್ದರು ಭಾರತೀಯರು. ಈ ಸಂದರ್ಭದಲ್ಲಿ ಬೀಸುವ ವಿವಿಧ ಬಗೆಯ ಬಿರುಗಾಳಿಯ ಕುರಿತಂತೆ ಅವರ ಅಧ್ಯಯನ ವಿಸ್ತೃತವಾಗಿತ್ತು. ಸಮುದ್ರದ ನಡುವೆ ಸುರಿಯುವ ಕುಡಿಯಲು ಯೋಗ್ಯವಾದ ಮಳೆ ನೀರನ್ನು ಸಂಗ್ರಹಿಸುವ ಕುರಿತಂತೆಯೂ ತಂತ್ರಜ್ಞಾನ ಅಭಿವೃದ್ಧಿ ಪಡಿಸಿಕೊಂಡಿದ್ದರು. ಎಲ್ಲಕ್ಕೂ ಮಿಗಿಲಾಗಿ ದಿಕ್ಕು ನಿಧರ್ಾರ ಮಾಡಲು ನಕ್ಷತ್ರಗಳ ಸ್ಥಾನವನ್ನು, ಚಂದ್ರನ ಚಲನೆಯನ್ನು ಅಧ್ಯಯನ ಮಾಡುವ ಖಗೋಳ ಶಾಸ್ತ್ರವನ್ನು ವಿಶೇಷವಾಗಿ ದುಡಿಸಿಕೊಳ್ಳುತ್ತಿದ್ದರು. ಈ ಸಾಹಸಿಗಳು ತಾವೊಬ್ಬರೇ ಹೋಗಲಿಲ್ಲ. ಭೌತಿಕ ವಸ್ತುಗಳನ್ನಷ್ಟೇ ಕೊಂಡೊಯ್ಯಲಿಲ್ಲ. ಬದಲಿಗೆ ಇಲ್ಲಿನ ಆಚಾರ-ವಿಚಾರ, ಸಂಸ್ಕೃತಿ-ಪರಂಪರೆ, ಭಾಷೆ-ವಿಜ್ಞಾನ ಎಲ್ಲವನ್ನೂ ಒಯ್ದರು. ಶ್ರೇಷ್ಠ ನಾಗರೀಕತೆಯನ್ನು ಪರಿಚಯಿಸಿ ಅವರನ್ನೂ ಶ್ರೇಷ್ಠರಾಗಲು ಪ್ರೇರೇಪಿಸಿದರು. ಇಂಡೋನೇಶಿಯಾ, ಕಾಂಬೋಡಿಯಾ, ಇಂಡೋಚೈನಾ, ಬೋನರ್ಿಯಾ, ಬಾಲಿ, ಜಾವಾ, ಸುಮಾತ್ರಗಳಷ್ಟೇ ಅಲ್ಲದೇ ದೂರದ ಅಮೇರಿಕಾದ ಮಾಯನ್ನರವರೆಗೆ ಭಾರತದ ಪ್ರಭಾವ ಹರಡಲು ಕಾರಣವಾಗಿದ್ದು ಇದೇ ಸಾಹಸಮಯ ನೌಕಾ ಯಾತ್ರೆ!

ಹಾಗೊಂದು ಸಾಹಸಯಾತ್ರೆ ಕಾಂಬೋಡಿಯಾಕ್ಕೆ.

ಬಲು ಹಿಂದೆ ಕಾಡಿನಿಂದಲೇ ಆವೃತವಾಗಿದ್ದ ಭೂಭಾಗ ಅದು. ಮಾಯನ್ಮಾರ್ನ್ನು ಏರಿ ನಿಂತರೆ ದೂರಕ್ಕೆ ಕಾಣುವ ದ್ವೀಪ ಗುಚ್ಛವೇ ಕಾಂಬೋಡಿಯಾ. ಎರಡು ಸಾವಿರ ವರ್ಷಕ್ಕೂ ಮುನ್ನ ಅಲ್ಲಿ ವಾಸವಾಗಿದ್ದವರು ಕಾಡಿನ ಜನ ಮಾತ್ರ. ಕೈಯಲ್ಲಿ ಭಜರ್ಿಯನ್ನು ಹಿಡಿದು ಬೇಟೆಯಾಡುವುದು ಮತ್ತು ಭೂಮಿಯ ಮೇಲೆ ಸಹಜವಾಗಿಯೇ ಬೆಳೆದ ವನಸ್ಪತಿಯನ್ನು ಸೇವಿಸುವುದು ಅವರ ಆಹಾರ ಪದ್ಧತಿಯಾಗಿತ್ತು. ಪ್ರಕೃತಿಯ ವೈಚಿತ್ರ್ಯಗಳನ್ನು ಪಿಳಿ-ಪಿಳಿ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. ಈ ಪಂಗಡವನ್ನು ಆಳುತ್ತಿದ್ದವಳು ‘ಸೋಮಾ’ ಎಂಬ ನಾಗಕನ್ಯೆ. ತನ್ನೆಲ್ಲಾ ಅನುಯಾಯಿಗಳಂತೆ ತಾನೂ ಕೂಡ ಬಟ್ಟೆ ಹಾಕದೇ ನಗ್ನಳಾಗಿರುವುದನ್ನು ರೂಢಿಸಿಕೊಂಡವಳು ಆಕೆ. ಮತ್ತೊಂದು ನಾಗರೀಕತೆ, ಬೇರೊಂದು ಜನಾಂಗ ಬಿಡಿ; ಅವರಿಗೆ ಬಟ್ಟೆಯ ಪರಿಕಲ್ಪನೆಯೂ ಇರಲಿಲ್ಲ.

ಅದೊಮ್ಮೆ ಬಹು ವಿಸ್ತಾರವಾಗಿದ್ದ ಹಡುಗೊಂದರಲ್ಲಿ ದೊಡ್ಡ ಸಂಖ್ಯೆಯ ಜನರು ಬಂದು ಕಾಂಬೋಡಿಯಾದ ತೀರದಲ್ಲಿಳಿದರು. ತೇಜಸ್ವೀ ಮುಖ ಮಂಡಲದ ಈ ಜನ ಮೈಮೇಲೆ ಬಣ್ಣ ಬಣ್ಣದ ಬಟ್ಟೆಗಳನ್ನು, ಆಭರಣಗಳನ್ನು ಧರಿಸಿದ್ದರು. ಕಾಂಬೋಡಿಯಾದ ಜನರ ಶಾಂತಿ ಕದಡಿತು. ಸೋಮಾ ತನ್ನವರನ್ನೆಲ್ಲಾ ಕಲೆ ಹಾಕಿ ಯುದ್ಧ ಸನ್ನದ್ಧಳಾಗಿ ಈ ಹೊಸ ಜನರೆದುರಿಗೆ ನಿಂತಳು. ಮೊದಲ ನೋಟದಲ್ಲಿಯೇ ಯುದ್ಧಕ್ಕೆ ಬಂದ ಜನರಲ್ಲವೆಂದೆನಿಸಿತು ಆಕೆಗೆ. ಈಕೆಯನ್ನು ಕಂಡೊಡನೆ ಹಡಗಿನ ಜನರ ಮುಖ್ಯಸ್ಥನಾಗಿದ್ದ ಶೈಲರಾಜ ಕೌಂಡಿನ್ಯ ಎದುರಿಗೆ ಬಂದ. ತನ್ನ ಸೈನಿಕನ ಮೂಲಕ ಸುಂದರವಾದ ವಸ್ತ್ರವನ್ನು ತರಿಸಿಕೊಂಡು ಆಕೆಯ ಕೈಗಿಟ್ಟ. ಅದನ್ನು ಏನು ಮಾಡಬೇಕೆಂದು ಆಕೆಗೆ ತೋಚಲಿಲ್ಲ. ಆದರೆ ಸ್ತ್ರೀ ಸಹಜವಾದ ಲಜ್ಜೆ ಜಾಗೃತವಾಗಿ ಆಕೆ ಅದನ್ನು ಮೈಮೇಲೆ ಸುತ್ತಿಕೊಂಡಳು. ಕೌಂಡಿನ್ಯ ಅಲ್ಲಿಯೇ ಉಳಿದ. ಇಡಿಯ ದೇಶಕ್ಕೆ ಭಾರತದ ಸಂಸ್ಕೃತಿ ಪರಿಚಯಿಸಿದ. ಬಲಾಢ್ಯವಾದ ರಾಷ್ಟ್ರ ಕಟ್ಟಿದ. ಕಾಲಕ್ರಮದಲ್ಲಿ ಸೋಮಾಳನ್ನು ವಿವಾಹವಾದ. ಕಂಬು ಕೌಂಡಿನ್ಯ ಕಟ್ಟಿದ ಈ ದೇಶ ಕಂಬುಜವಾಗಿ, ಆನಂತರ ಕಾಂಬೋಡಿಯಾ ಎನಿಸಿಕೊಂಡಿತು. ಇವಿಷ್ಟೂ ಇಲ್ಲಿ ಸಿಕ್ಕ ಶಿಲಾಫಲಕವೊಂದರಲ್ಲಿ ಉಲ್ಲೇಖಗೊಂಡ ವಿಚಾರಗಳು. ಅಚ್ಚರಿಯೇನು ಗೊತ್ತೇ? ಈ ಶಿಲಾಫಲಕ ಸಂಸ್ಕೃತ ಭಾಷೆಯಲ್ಲಿದೆ. ಈ ಫಲಕದ ಪ್ರಕಾರ ಚಿರಂಜೀವಿ ಅಶ್ವತ್ಥಾಮ ಕೌಂಡಿನ್ಯರಿಗೆ ಭಜರ್ಿ ಕೊಟ್ಟಿದ್ದನಂತೆ. ಈ ಭಜರ್ಿಯನ್ನು ತಿರುಗಿಸಿ ಎಸೆದ ಕೌಂಡಿನ್ಯ ಅದು ಹೋಗಿ ಬಿದ್ದಲ್ಲಿ ರಾಜಧಾನಿಯನ್ನು ನಿಮರ್ಿಸಿದ. ಈ ರಾಜಧಾನಿಯನ್ನು ವ್ಯಾಧಪುರ ಎನ್ನಲಾಯ್ತು.

ಕಾಂಬೋಡಿಯಾ ಜನಕ್ಕೆ ವಸ್ತ್ರದ ಪರಿಕಲ್ಪನೆ, ಶಿಕ್ಷಣ, ಮಾನವೀಯ ಬದುಕಿನ ರೀತಿ-ನೀತಿ, ಕಾನೂನು ಕಟ್ಟು-ಕಟ್ಟಳೆಗಳ ಪರಿಚಯ ಜೊತೆಗೆ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳ ಪರಿಕಲ್ಪನೆ, ಸಂಸ್ಕೃತ ಭಾಷೆ ಎಲ್ಲವೂ ಭಾರತದಿಂದ ದೊರೆತಿದ್ದೆ!

dancing-cambodia

ಸಮುದ್ರದಿಂದ ಸದಾ ಸಮಸ್ಯೆಗೆ ಸಿಲುಕುವ ಈ ದೇಶಕ್ಕೆ ರಕ್ಷಣೆ ಕೊಡಿಸುವ ಎತ್ತರದ ಗೋಡೆಗಳನ್ನು ನಿಮರ್ಿಸಿದ ಕೌಂಡಿನ್ಯ ಆನಂತರ ಕೃಷಿಯ ಕಲ್ಪನೆಯನ್ನು ಬಿಚ್ಚಿಟ್ಟ. ಬೇಟೆಯಾಡಿಯೇ ಬದುಕುತ್ತಿದ್ದ ಜನ ಈಗ ನೆಲೆ ನಿಂತರು. ಕೃಷಿಕರಾದರು. ನಿಧಾನವಾಗಿ ಧರ್ಮ ಚಿಂತನೆ ಆರಂಭಿಸಿದರು. ಆನಂತರವೇ ಕಾಂಬೋಡಿಯಾದಲ್ಲಿ ಭಾರತ ಬಲವಾಗಿ ಬೇರೂರಿದ್ದು. ಮುಂದಿನ 600 ವರ್ಷಗಳ ಕಾಲ ಕೌಂಡಿನ್ಯ ಸ್ಥಾಪಿಸಿದ ಈ ಸಾಮ್ರಾಜ್ಯ ಬಲಾಢ್ಯವಾಗಿ ಬೆಳೆದು ನಿಂತಿತು. ಚೀನಾದ ಸಂಪರ್ಕದಲ್ಲಿಯೇ ಕಾಂಬೋಡಿಯಾ ಇದ್ದರೂ ಅದರ ಅಂತರ್ಮನಸ್ಸಿನ ಸಂಬಂಧ ಇದ್ದದ್ದು ಭಾರತದೊಂದಿಗೇ! ಹೀಗಾಗಿಯೇ ಚೀನೀ ರಾಜದೂತರೂ ಇಲ್ಲಿಗೆ ಬಂದಾಗ ‘ಕಾಂಬೋಡಿಯಾ ವೈಭವ ಸಂಪನ್ನವಾಗಿತ್ತು. ತೆರಿಗೆ ಕಟ್ಟಲು ಚಿನ್ನ, ಬೆಳ್ಳಿ, ಮುತ್ತನ್ನು ಬಳಸುತ್ತಿದ್ದರು. ಮನೆಗಳಲ್ಲಿ ಚಿನ್ನದ ಪಾತ್ರೆಗಳ ಬಳಕೆ ಮಾಡುತ್ತಿದ್ದರು. ಜನ ಸತ್ಯ ನಿಷ್ಠರೂ, ಶಾಂತ ಸ್ವಭಾವದವರೂ ಆಗಿದ್ದರು. ಬೆಳಗಿನ ಸ್ನಾನ ಅನಿವಾರ್ಯವಾಗಿತ್ತು. ಆನಂತರ ಪೂಜೆ-ಪಾರಾಯಣ ನಡೆಸುತ್ತಿದ್ದರು’ ಎಂದು ಉದ್ಗರಿಸಿದ್ದರು. ಬೇಟೆಯಾಡಿ ಜೀವಿಸುತ್ತಿದ್ದ ಕಾಡಿನ ಜನರಿಗೆ ಈ ಪರಿಯ ಸಂಸ್ಕಾರ ನೀಡಿ ಅವರನ್ನು ನಾಗರೀಕರನ್ನಾಗಿಸಿದ ಕೀತರ್ಿ ಭಾರತಕ್ಕೇ.

ವಿಷ್ಣುವಿನ ಮಂದಿರಗಳ ನಿಮರ್ಾಣವಾಗಿತ್ತು. ರಾಜಾ ಜಯವಮರ್ಾ ಪ್ರತಿ ದಿನ ಮುಂಜಾನೆ ಸಮಸ್ತ ಪರಿವಾರದೊಂದಿಗೆ ಸೇರಿ ಶಿವನ ಪೂಜೆ ಮಾಡುತ್ತಿದ್ದ. ಸಾಮ್ರಾಟ ಈಶಾನ ವಮರ್ಾ ಶಿವ ಮತ್ತು ವಿಷ್ಣುವಿನ ಪೂಜೆಗೆ ಮಹತ್ವದ ರೂಪ ಕಲ್ಪಿಸಿಕೊಟ್ಟು, ಹರಿಹರೇಶ್ವರ ಮಂದಿರ ನಿಮರ್ಾಣ ಮಾಡಿಸಿದ. ಆನಂತರದ ದಿನಗಳಲ್ಲಿ ಆಕ್ರಮಣಕ್ಕೊಳಗಾಗಿ ಮೂತರ್ಿ ಭಗ್ನವಾಯಿತು. ಇಂದಿಗೂ ಇದರ ಅವಶೇಷ ಮೋಮ್ ಪೆನ್ನ ಸಂಗ್ರಹಾಲಯದಲ್ಲಿದೆ. ಕಾಂಬೋಡಿಯಾದ ರಕ್ಷಣೆಯನ್ನು, ಅಭಿವೃದ್ಧಿಯನ್ನು ಬಯಸಿ ‘ಹಿರಣ್ಯಧಾಮಾ’ ಎಂಬ ಸಂತನನ್ನು ಭಾರತದಿಂದ ಕರೆಸಿಕೊಂಡು ಪುರಶ್ಚರಣ ಮಾಡಿಸಿದ ಉಲ್ಲೇಖವಿದೆ. ಆತನ ತಾಂತ್ರಿಕ ವಿಧಿಯ ಯಜ್ಞದ ನಂತರ ಕಾಂಬೋಡಿಯಾ ಸಂಪತ್ತಿನ ವೈಭವದಿಂದ ಮೆರೆಯಿತೆಂದೂ ಹೇಳುತ್ತಾರೆ.

ಕ್ರಿ.ಶ. ಸಾವಿರದ ಆಸುಪಾಸಿನಲ್ಲಿ ಅಧಿಕಾರ ಸ್ವೀಕರಿಸಿದ ಐದನೇ ಜಯವರ್ಮ ಶಿಕ್ಷಣಕ್ಕೆ ಮಹತ್ವ ಕೊಟ್ಟ. ಹಿಂದೂ ಶಾಸ್ತ್ರಗ್ರಂಥಗಳ ಅಧ್ಯಯನ ಕಾಂಬೋಡಿಯಾದಲ್ಲಿ ಬಲು ಜೋರಾಗಿ ನಡೆಯುತ್ತಿತ್ತು. ರಾಜಾ ಸ್ವತಃ ಶಾಸ್ತ್ರ, ಶಿಲ್ಪ, ಭಾಷೆ, ನೃತ್ಯ-ಸಂಗೀತಗಳಲ್ಲಿ ಪಂಡಿತನಾಗಿದ್ದ. ಶಿಲಾಶಾಸನವೊಂದರಲ್ಲಿ ಆಚಾರ್ಯ ಭೂಪೇಂದ್ರ ಪಂಡಿತರ ಆಶ್ರಮದ ಉಲ್ಲೇಖವಿದೆ. ಈ ಗುರುಕುಲ ನಿರಂತರ ಯಜ್ಞ ಧೂಮದ ಸುವಾಸನೆಯಿಂದ ತುಂಬಿತ್ತಲ್ಲದೇ, ಕಠಿಣ ಶಾಸ್ತ್ರಾಧ್ಯಯನದಲ್ಲಿದ್ದ ವಿಚಾರಗಳ ಚಚರ್ೆ ನಡೆಸುತ್ತಿದ್ದ ವಿದ್ಯಾಥರ್ಿಗಳಿಂದಲೂ ತುಳುಕಾಡುತ್ತಿತ್ತು ಎನ್ನುತ್ತದೆ ಆ ಫಲಕ. ಈ ಗುರುಕುಲದಲ್ಲಿ ಹೆಣ್ಣು ಮಕ್ಕಳು ಕಲಿಯುತ್ತಿದ್ದರಷ್ಟೇ ಅಲ್ಲ; ‘ತಿಲಕಾ’ ಎಂಬ ವಿದುಷಿಗೆ ತುಂಬಿದ ಸಭೆಯಲ್ಲಿ ‘ವಾಗೀಶ್ವರೀ ಭಗವತಿ’ ಎಂಬ ಬಿರುದು ಕೊಟ್ಟಿದ್ದೂ ಹೆಮ್ಮೆಯಿಂದ ಕಾಬೋಡಿಯಾದ ಇತಿಹಾಸಕಾರರು ಹೇಳಿಕೊಳ್ಳುತ್ತಾರೆ. ಈ ಬಗೆಯ ಕನಿಷ್ಟ ನೂರು ಗುರುಕುಲಗಳು ಅಲ್ಲಿದ್ದವಂತೆ! ಅತ್ಯಂತ ಶ್ರೇಷ್ಠ ಪಂಡಿತರಿಗೆ ಆಶ್ರಯ ನೀಡಲು ರಾಜ ಸದಾ ಉತ್ಸುಕನಾಗಿದ್ದ. ಹೀಗಾಗಿ ಜಗತ್ತಿನ ಮೂಲೆ ಮೂಲೆಯಿಂದಲೂ ಜನ ಕಾಂಬೋಡಿಯಾದ ಗುಣಗಾನ ಮಾಡುತ್ತಿದ್ದರು. ಭಾರತದಿಂದ ಬಂದ ಪಂಡಿತರಿಗಂತೂ ಎಲ್ಲಕ್ಕಿಂತಲೂ ಹೆಚ್ಚು ಗೌರವ. ರಾಜ ತನ್ನ ಸೋದರಿ ಇಂದ್ರಲಕ್ಷ್ಮೀಯ ಮದುವೆಯನ್ನು ಭಾರತದ ದಿವಾಕರ ಭಟ್ಟನೊಂದಿಗೆ ನೆರವೇರಿಸಿದ್ದು ಈ ಕಾರಣದಿಂದಲೇ!

ಒಟ್ಟಾರೆಯಾಗಿ ನೋಡುವುದಾದರೆ ಕಾಂಬೋಡಿಯಾ ಎಲ್ಲಾ ವಿಧದಿಂದಲೂ ಸಮರ್ಥ ದೇಶವಾಗಿ ನಿಂತಿತ್ತು. ಮೈಮೇಲೆ ಬಟ್ಟೆ ಹಾಕದ ಕಾಡಿನ ಜನಾಂಗದವರು ಈಗ ತಮ್ಮನ್ನು ತಾವು ಆಳಿಕೊಳ್ಳುತ್ತಿದ್ದರು. ಉತ್ಕೃಷ್ಟವಾದ ಭಾಷೆ ಮಾತನಾಡುತ್ತಿದ್ದರು. ಶಾಸ್ತ್ರಗಳ ಚಚರ್ೆ ಮಾಡುತ್ತಿದ್ದರು. ಪೂಜಾ ಪದ್ಧತಿ ರೂಢಿಸಿಕೊಂಡಿದ್ದರು. ಚೀನಿ ಯಾತ್ರಿಕರಂತೂ ಕಾಂಬೋಡಿಯಾಕ್ಕೆ ಭೇಟಿ ಕೊಟ್ಟು ಬರೆದ ಸಾಲುಗಳು ಬೆರಗುಹುಟ್ಟಿಸುವಂಥವು. ‘ರಾಜ ಹೊರಗೆ ಬಂದರೆ ಅವನೊಂದಿಗೆ ಸ್ವರ್ಣ ಕತ್ತಿ ಇರುತ್ತಿತ್ತು. ಸವರ್ೋಚ್ಚ ಅಧಿಕಾರಿಯೂ ಸ್ವರ್ಣ ಪಲ್ಲಕ್ಕಿಯಲ್ಲಿ ಬರುತ್ತಿದ್ದ. ಪಲ್ಲಕ್ಕಿ ಹೊರುವ ದಂಡಗಳೂ ಚಿನ್ನದವೇ ಆಗಿರುತ್ತಿತ್ತು. ಅಶ್ವಾರೋಹಿಗಳು ಅವರ ಹಿಂದೆ ವಾದ್ಯವೃಂದ. ಇವರನ್ನನುಸರಿಸಿ ಕೈಯಲ್ಲಿ ಮೊಂಬತ್ತಿಗಳನ್ನು ಹಿಡಿದ ಸುಂದರ ಸ್ತ್ರೀಯರು. ಇವರ ಹಿಂದೆ ಕತ್ತಿ ಭಜರ್ಿಗಳನ್ನು ಹಿಡಿದ ರಾಜನ ಅಂತಃಪುರದ ಅಂಗರಕ್ಷಕಿಯರ ಪಡೆ. ಆಮೇಲೆ ಸುವಣರ್ಾಲಂಕೃತ ಆನೆ-ಅಶ್ವಗಳು, ಮಂತ್ರಿಗಣ. ಎಲ್ಲಕ್ಕೂ ಹಿಂದೆ ಆನೆಯ ಮೇಲೆ ನಿಂತು ಬರುವ ರಾಜ’ ಹೀಗೆ ಹೊಟ್ಟೆ ಉರಿಯುವಂತೆ ವಣರ್ಿಸುತ್ತಾರೆ. ಈ ಕಾರಣಕ್ಕಾಗಿಯೇ ಭಾರತದ ಕುರಿತಂತೆ ಜಗತ್ತಿಗೆ ಗೌರವ. ಸುಮಾರು 600 ವರ್ಷಗಳಲ್ಲಿಯೇ ಎಲ್ಲ ಬಗೆಯ ಆಂತರಿಕ ಸಂಘರ್ಷಗಳನ್ನೂ ಮೆಟ್ಟಿ ನಿಂತು ಭಾರತ ಕಾಂಬೋಡಿಯಾದ ನಕ್ಷೆ ಬದಲಾಯಿಸಿತು. ಹಾಗಂತ ಅಲ್ಲಿನ ಮೂಲ ನಿವಾಸಿಗಳ ನಾಶ ಮಾಡಲಿಲ್ಲ. ಅವರ ಸಂಪತ್ತನ್ನು ಲೂಟಿ ಮಾಡಿ ಮಾತೃ ದೇಶಕ್ಕೊಯ್ಯಲಿಲ್ಲ. ಅವರ ಇತಿಹಾಸವನ್ನು ತಿರುಚಿ ಅವರನ್ನು ಕೆಲಸಕ್ಕೆ ಬಾರದವರೆಂದು ಹೇಳಲಿಲ್ಲ. ಬದಲಿಗೆ ಸಂಸ್ಕಾರದ ಸಂದೇಶಗಳನ್ನು ಕೊಟ್ಟು ಕಾಡಿನೊಳಗೊಂದು ನಾಡನ್ನು ಕಟ್ಟಿಕೊಟ್ಟಿತು ಭಾರತ!

ಮುಂದೆ ಚೀನಾದ ಮಂಗೋಲಿಯನ್ನರ ನಾಯಕ ಕುಬ್ಲಾಯ್ ಖಾನ್ ತನ್ನ ಮಿಡತೆಗಳ ಹಿಂಡಿನಂತ ಸೈನಿಕರನ್ನು ತೆಗೆದುಕೊಂಡು ಸಭ್ಯ-ನಾಗರೀಕ ಕಾಂಬೋಡಿಯನ್ನರ ಮೇಲೆ ಮುಗಿಬಿದ್ದ. ಕಾಂಬೋಡಿಯಾದ ವೈಭವ ಲೂಟಿಯಾಗಿ ಹೋಯ್ತು. ಥಾಯ್ಲ್ಯಾಂಡ್, ಲಾವೋಸ್, ವಿಯೆಟ್ನಾಂಗಳು ಕಾಲಕ್ರಮದಲ್ಲಿ ಸ್ವತಂತ್ರ ರಾಷ್ಟ್ರಗಳಾಗಿ ರೂಪುಗೊಂಡವು. ಆಮೇಲಿನ ದಿನಗಳಲ್ಲಿ ಡಚ್, ಫ್ರೆಂಚ್, ಪೋಚರ್ುಗೀಸರು ದಾಳಿಗೈದರು. ಸಂಸ್ಕೃತಿ ಕಲಸು ಮೇಲೋಗರವಾಯ್ತು.

ಭಾರತದ ಯಾತ್ರಿಕನೊಬ್ಬನ ನೌಕಾಯಾನದ ಸಾಹಸದಿಂದ ಶುರುವಾದ ಈ ಸಾಮ್ರಾಜ್ಯ ನಿಮರ್ಾಣದ ಕತೆ ದುಃಖಾಂತವಾಯಿತು. ಆದರೆ ಭಾರತದ ಸತ್ಕೀತರ್ಿಯ ಕುರುಹುಗಳು ಇಂದಿಗೂ ಕಾಂಬೋಡಿಯಾದ ಮೂಲೆ ಮೂಲೆಯಲ್ಲೂ ಕಾಣಸಿಗುತ್ತದೆ. ಕಾಂಬೋಡಿಯಾ ಪ್ರವೇಶಿಸಿದ ಬುದ್ಧನ ಚಿಂತನೆಗಳು ಇಂದಿಗೂ ಅಲ್ಲಿ ಭಾರತವನ್ನು ಜೀವಂತವಾಗಿರಿಸಿವೆ. ಎಲ್ಲಕ್ಕೂ ಮಿಗಿಲಾಗಿ ಜಗತ್ತಿನ ಅತ್ಯಂತ ದೊಡ್ಡ ಮಂದಿರ ‘ಅಂಕೋರ್ವಾಟ್’ ಇಂದಿಗೂ ಹಿಂದೂ ಸಂಸ್ಕೃತಿಯ ಪಳೆಯುಳಿಕೆಯಾಗಿ ಕಾಂಬೋಡಿಯಾದ ನಡುವೆ ನಿಂತಿದೆ. ಇಂದಿಗೂ ಕಾಂಬೋಡಿಯಾದಲ್ಲಿ ಮನೆ ಕಟ್ಟಲೆಂದು ಭೂಮಿ ಅಗೆದರೆ ದೇವಸ್ಥಾನದ ಕಲ್ಲುಗಳು ಸಿಗುತ್ತವೆ ಎನ್ನುತ್ತಾರೆ. ಆ ಮಟ್ಟಿಗೆ ವ್ಯಾಪ್ತವಾಗಿತ್ತು ಹಿಂದೂ ಸಂಸ್ಕೃತಿ. ಆದರೇನು? ಎಲ್ಲವೂ ಕಟುಕರ ದಾಳಿಗೆ ನಾಶವಾಯಿತು.

ಕಾಂಬೋಡಿಯಾ ಆಳಿದ ಜಯವರ್ಮನ ಕುರಿತಂತೆ ಬರೆದಿರುವ ಸಾಲುಗಳಲ್ಲಿ

ರಾಷ್ಟ್ರದುಃಖಂ ಹಿ ಭತ್ರ್ಯಣಾಂ ದುಃಖಂ ದುಃಖಂ ತು ನಾತ್ಮನಃ||

ರಾಜಾ ತನ್ನ ದುಃಖದಿಂದ ದುಃಖಿತನಾಗಲಾರ. ಆತ ರಾಷ್ಟ್ರದ ದುಃಖದಿಂದಲೇ ದುಃಖಿತನಾಗೋದು ಎಂದಿದೆ. ಸತ್ಯವೇ ಸರಿ. ಅನಾಗರಿಕವಾಗಿದ್ದ ಭೂಭಾಗ ಕಾಂಬೋಡಿಯಾ ಎಂಬ ಸುಸಂಸ್ಕೃತ ರಾಷ್ಟ್ರವಾಯ್ತು. ಮತ್ತೆ ವೈಭವವನ್ನು ಕಳೆದುಕೊಂಡು ಸಾಮಾನ್ಯವಾಗಿಹೋಯ್ತು. ದುಃಖವಲ್ಲವೇನು?

1 Response to  ವಿಶ್ವವನ್ನು ಸುಸಂಕೃತಗೊಳಿಸಲು ಭಾರತೀಯನ ಸಾಹಸಯಾತ್ರೆ!

  1. raaghu

    Really good article for youth, about our great indian culture