ವಿಭಾಗಗಳು

ಸುದ್ದಿಪತ್ರ


 

ನನ್ನ ಮಾತು

ಹೆಸರು ಮಿಥುನ್ ಚಕ್ರವರ್ತಿ. ಚಕ್ರವರ್ತಿ ಸೂಲಿಬೆಲೆ ಅಂತಾನೂ ಹೇಳಬಹುದು. ಹುಟ್ಟಿದ್ದು ಕಾರವಾರದ ಹೊನ್ನಾವರದಲ್ಲಿ. ಬೆಳೆದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಸೂಲಿಬೆಲೆ ಎಂಬ ಊರಿನಲ್ಲಿ.

ಓದಿಕೊಂಡಿದ್ದು ಕಂಪ್ಯೂಟರ್ ಇಂಜಿನಿಯರಿಂಗ್. ಸಾರ್ವಜನಿಕ ಜೀವನಕ್ಕೆ ಧುಮುಕಿದ್ದು ರಾಜೀವ ದೀಕ್ಷಿತರ ಆಜಾದಿ ಬಚಾವೋ ಆಂದೋಲನದ ಮೂಲಕ. ನೆಲ ಅಂದರೆ ವಿಶೇಷ ಪ್ರೀತಿ. ರಾಷ್ಟ್ರದ ಬಗ್ಗೆ ಚಿಂತಿಸೋದು, ಮಾತನಾಡೋದು, ಅದಕ್ಕೆ ಸಂಬಂಧ ಪಟ್ಟದ್ದನ್ನ ಓದೋದು- ಬರೆಯೋದು ನನಗೆ ಅಚ್ಚು ಮೆಚ್ಚು. ಸಧ್ಯಕ್ಕೆ, ನಮ್ಮನ್ನು ಹೊತ್ತ ನೆಲದ ಮಾತನ್ನ ಮಣ್ಣಿನ ಮಕ್ಕಳಿಗೆ ಮುಟ್ಟಿಸೋ ಕೆಲಸ ಮಾಡ್ತಿದ್ದೇನೆ. ಅದಕ್ಕೆ ಈ ಬ್ಲಾಗ್ ಕೂಡ ಒಂದು ದಾರಿಯಂತೆ ಕಂಡು ಇಲ್ಲಿಗೂ ಬಂದೆ.

ನೀವೆಲ್ಲ ನನ್ನ ಜೊತೆಗೂಡುತ್ತೀರೆಂಬ ನಿರೀಕ್ಷೆಯಲ್ಲಿ…

– ಚಕ್ರವರ್ತಿ, ಸೂಲಿಬೆಲೆ.