ವಿಭಾಗಗಳು

ಸುದ್ದಿಪತ್ರ


 

ಮಗೂ, ಶ್ವೇತಕೇತೂ….

Sunday, January 20th, 2008

ಅಹಂಕಾರದಿಂದ ಬೀಗಿದ ಮಗ ಅಪ್ಪನೆದುರು ನಿಂತ. “ತಂದೆ, ನಾ ಎಲ್ಲ ಕಲಿತಿರುವೆ ನಿನಗಿಂತ ನಾ ತಿಳಿದವನೀಗ” ಎಂದ. ಅಪ್ಪ ನಕ್ಕ, “ಓಹೋ! ಯಾವುದನರಿತು ಮತ್ತೇನೂ ಕಲಿಯಬೇಕಿಲ್ಲವೋ ಅದನ್ನೂ…. ಅದನ್ನೂ ಅರಿತುಬಿಟ್ಟೆಯಾ!?” ಮಗ ತಬ್ಬಿಬ್ಬು. ಅಪ್ಪ ಕೇಳುತ್ತಲೇ ಹೋದ, ಯಾರು ನೀನು? ನೀನು ಯಾರು? ದೇಹ ನೀನಾದರೆ, ನಿನ್ನ ಶವ ನೀನಾ? ಮನವು ನೀನಾದರೆ, ಬುದ್ಧಿ ಯಾರದು? ಬುದ್ಧಿ ನೀನಾದರೆ, ಚೈತನ್ಯವದೆಲ್ಲಿ? ತಿಳಿಯಲಿರುವುದದೆಷ್ಟು? ಇದನರಿತರೆ ಉಳಿಯುವುದು ಇನ್ನೆಷ್ಟು!? ಮಗೂ ಶ್ವೇತಕೇತು, ನಿನ್ನನರಿ. ನಿನ್ನನರಿ, ನಿನ್ನನರಿ. ಅದಕ್ಕಾಗಿ ‘ನಿನ್ನ’ ಮರಿ!