ವಿಭಾಗಗಳು

ಸುದ್ದಿಪತ್ರ


 

ಕಾಶ್ಮೀರವಿಂದು ಹೊತ್ತುರಿಯುತ್ತಿರುವುದು ಏಕೆ ಗೊತ್ತೆ?

Thursday, January 15th, 2009

ನೆಹರೂ `ಜಾತ್ಯತೀತ’ ಮನಸಿನ ಬಗ್ಗೆ ಈಗಾಗಲೇ ತಿಳಿದಿದ್ದಾಗಿದೆ.  ಪರಧರ್ಮ ಸಹಿಷ್ಣುತೆ ಹಿಂದೂವಿನ ಪರಮಗುಣ. ಆದರೆ ಜಾತ್ಯತೀತತೆಯ ಹಿನ್ನೆಲೆಯಲ್ಲಿ ಅವರ ಮನದಲ್ಲಿ ಹಿಂದೂ ದ್ವೇಷ ಮನೆ ಮಾಡಿತ್ತಲ್ಲ ಅದನ್ನು ಮಾತ್ರ ಸಹಿಸುವುದು ಸಾಧ್ಯವೇ ಇಲ್ಲ. ಕಾಶ್ಮೀರದ ವಿಚಾರದಲ್ಲಾದದ್ದೂ ಅದೇ. ನೆಹರೂರ ಮೊಂಡುತನ ಇಡೀ ಕಾಶ್ಮೀರವನ್ನು ಉರಿಯುವ ಕುಂಡವಾಗಿಸಿಬಿಟ್ಟಿತು. ಸ್ವಾತಂತ್ರ್ಯಾನಂತರ ಸರ್ದಾರ ಪಟೇಲರು ರಾಜ್ಯವಿಲೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅದನ್ನು ಯಶಸ್ವಿಯಾಗಿ ಮುಗಿಸಿದರು. ಹೈದರಾಬಾದ್‌ನ ನಿಜಾಮ ಕೂಡ ಮಿಸುಕಾಡದೇ ಶರಣಾಗುವಂತೆ ಮಾಡಿದ್ದು ಪಟೇಲರ ಬುದ್ಧಿಮತ್ತೆಗೆ ಸಾಕ್ಷಿ. ನೆಹರೂ ಕಾಶ್ಮೀರದ ವಿಲೀನವನ್ನು ತಾನೇ ಮಾಡುವುದಾಗಿ […]

ಸಾಂಸ್ಕೃತಿಕ ಆಕ್ರಮಣಗಳು ಮತ್ತು ಪರಿಣಾಮಗಳು

Tuesday, December 23rd, 2008

ರಾಷ್ಟ್ರವೆಂದರೇನು? ಬರಿಯ ಕಲ್ಲು – ಮಣ್ಣೇ? ನಾವು ಕಟ್ಟಿ ನಿಲ್ಲಿರುವ ಕಟ್ಟಡಗಳೇ? ಹರಿಯುವ ನದಿಯೇ? ಎದೆಯೆತ್ತಿ ನಿಂತಿರುವ ಪರ್ವತ ಸಮೂಹಗಳೇ? ಅಲ್ಲಿ ಜನಿಸಿರುವ ಮಹಾಪುರುಷರೇ? ಅಥವಾ ಅವರು ಬರೆದಿರುವ ಗ್ರಂಥಗಳೇ? ಊಹೂಂ… ಉತ್ತರ ಅಷ್ಟು ಸುಲಭವೇನಲ್ಲ. ಬಹಳ ಬಾರಿ ರಾಷ್ಟ್ರವೆಂದೊಡನೆ ನಾವು ಇಂಥ ವಿಷಯಗಳ ಸುತ್ತಲೇ ಅಡ್ಡಾಡುತ್ತಿರುತ್ತೇವೆ. ವಾಸ್ತವವಾಗಿ, ರಾಷ್ಟ್ರ ಸಂಸ್ಕೃತಿಯ ಪ್ರವಾಹ. ಸಂಸ್ಕೃತಿ ಇವುಗಳೆಲ್ಲವನ್ನೂ ಒಳಗೊಂಡಂತಹ, ಇವುಗಳನ್ನೂ ಮೀರಿದಂತಹ ಅಂಶ. ರಾಷ್ಟ್ರಕವಿ ಕುವೆಂಪು ಇದನ್ನು ಸಮರ್ಥವಾಗಿ ಚಿತ್ರಿಸುತ್ತಾರೆ. ಮಾನವನನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಪ್ರಗತಿಯ ಬಗೆಗಳನ್ನು ವಿವರಿಸುತ್ತಾರೆ.  […]

ಅಮೆರಿಕನ್ನರಿಂದ ಪಾಠ ಕಲಿಯಲಿದು ಸಕಾಲ…

Friday, November 28th, 2008

ಮನಸ್ಸೇನೋ ಕುದಿಯುತ್ತಿದೆ. ಆದರೇನು? ಸ್ವಲ್ಪ ಕಾಲ ಸುಮ್ಮನಿರೋಣ. ಅದು ಅಮೆರಿಕ ಕಲಿಸಿದ ಪಾಠ. ವಿಶ್ವ ವ್ಯಾಪಾರಕೇಂದ್ರ ಕಟ್ಟಡಗಳು ಉರುಳಿಬಿದ್ದಾಗ ಅಮೆರಿಕನ್ನರು ಅಧ್ಯಕ್ಷರ ಮೇಲೆ ಎದುರಾಡಾಲಿಲ್ಲ. ಸುಮ್ಮನಿದ್ದರು. ಆಫ್ಘಾನಿಸ್ಥಾನದ ಮೇಲೆ ಮುಗಿಬಿದ್ದರು. ತಮ್ಮ ದೇಶದಲ್ಲಿ ಕಳಕೊಂಡ ಒಂದೊಂದು ಜೀವದ ಲೆಕ್ಕ ಚುಕ್ತಾ ಮಾಡಿದರು. ಇಷ್ಟಕ್ಕೂ ನಾವೀಗ ನೇರ ಆಕ್ರಮಣವನ್ನೇನೂ ಮಾಡಬೇಕಿಲ್ಲ. ಪಾಕಿಸ್ಥಾನದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದರೂ ಸಾಕು. ಅದರೊಂದಿಗೆ ಸಂಬಂಧ ಹೊಂದಿರುವ ದೇಶಗಳತ್ತ ಮುನಿಸಿ ಕುಂತರೂ ಸಾಕು. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಆಘಾತವನ್ನೇ ನೀಡಿದಂತಾಗುತ್ತದೆ. ಭಾರತದ ಹಿಂದಿನ ವೈಭವವನ್ನು […]

ವಿವೇಕಾನಂದನೆಂಬ ವೀರ ಸಂನ್ಯಾಸಿ

Friday, September 19th, 2008

ಸೆಪ್ಟೆಂಬರ್ ಹನ್ನೊಂದು ಅಂತಾದರೂ ಕರೆಯಿರಿ, ೯/೧೧ ಅಂತಾದರೂ ಹೇಳಿ. ಮನಸ್ಸು ಅಮೆರಿಕಾದತ್ತ ಧಾವಿಸಿಬಿಡುತ್ತದೆ. ವಿಶ್ವ ವ್ಯಾಪರ ಕೇಂದ್ರದ ಎರಡು ಕಟ್ಟಡಗಳನ್ನು ಭಯೋತ್ಪಾದಕರು ಉರುಳಿಸಿದ್ದು ಕಣ್ಮುಂದೆ ಅಲೆಅಲೆಯಾಗಿ ತೇಲಿ ಹೋಗುತ್ತದೆ. ಅಲ್ಲದೆ ಮತ್ತೇನು? ಉರುಳುವ ಕಟ್ಟಡಗಳನ್ನು ಟಿವಿಯ ಮುಂದೆ ಕುಳಿತು ನೇರ ಪ್ರಸಾರದಲ್ಲಿ ನೋಡಿದವರಲ್ಲವೆ ನಾವು!? ಆದರೆ ಈ ಅಮೆರಿಕಾ ಸೆಪ್ಟೆಂಬರ್ ಹನ್ನೊಂದರಂದೇ ಇನ್ನೊಂದು ಸಾತ್ತ್ವಿಕ ಸುನಾಮಿಗೆ ಸಿಲುಕಿ ಅಲುಗಾಡಿದ್ದು ಬಹುತೆಕರಿಗೆ ಮರೆತೇಹೋಗಿದೆ. ಅವತ್ತು ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ […]

ಅಣು ಒಪ್ಪಂದದ ಆಜೂ ಬಾಜು- ನಮ್ಮೊಳಗಿನ ಚರ್ಚೆ

Friday, July 25th, 2008

ಅಣು ಒಪ್ಪಂದದ ಕುರಿತಾದ ‘ಅಧಿವೇಶನ’ ಕೊನೆಗೂ ಪ್ರಹಸನವಾಗಿಯೇಬಿಡ್ತು. ಎರಡೂ ದಿನ ಅಣು ಒಪ್ಪಂದದ ಕುರಿತು ಘನವಾದ ಚರ್ಚೆಗಳಾಗುತ್ತದೆಂದು ಭಾವಿಸಿದ್ದವರಿಗೆ ತೀವ್ರ ನಿರಾಶೆ. ಟೀವಿ ಮುಂದೆ ಕುಳಿತು ಕಲಾಪ ವೀಕ್ಷಿಸಿದ್ದವರನ್ನು ಬಿಡಿ, ಸರ್ಕಾರದ ಅನುಮತಿ ಪಡೆದು ಜೈಲಿನಿಂದ ನೇರವಾಗಿ ಬಂದು ಅಧಿವೇಶನದಲ್ಲಿ ಕುಳಿತಿದ್ದ ಎಸ್ ಪಿ ಯ ಸಂಸದ ಕೂಡ ತನಗೆ ‘ಒಪ್ಪಂದ ಏನೆಂದೇ ಅರ್ಥವಾಗಲಿಲ್ಲ’ ಎಂದಿದ್ದು ಹಾಸ್ಯಾಸ್ಪದವೇನಲ್ಲ. ಜವಾಬ್ದಾರಿಯುತವಾಗಿ ಮಾತಾಡಬೇಕಿದ್ದ ಪ್ರಧಾನ ಮಂತ್ರಿ, ರಕ್ಷಣಾ ಮಂತ್ರಿಗಳು ಯುಪಿಎ ಯ ಸಾಧನೆ ಹೇಳಲು ಸಮಯ ವ್ಯಯ ಮಾಡಿದರೆ, ಪ್ರತಿಪಕ್ಷದ […]

ಏಸು ಕ್ರಿಸ್ತ ಮತ್ತು ಭಾರತ…

Friday, May 16th, 2008

ಶಿಲುಬೆಗೇರಿಸಲಾಗಿದ್ದ ಏಸುಕ್ರಿಸ್ತರು ಮೃತರಾಗಲಿಲ್ಲ. ತಮ್ಮ ಅನುಯಾಯಿಗಳ ಸಹಾಯದಿಂದ ಬದುಕುಳಿದ ಅವರು ಗ್ರೇಟ್ ಬ್ರಿಟನ್ನಿನ ಕಡೆ ಹೊರಟರು. ಅಲ್ಲಿಂದ ಮೆಡಿಟರೇನಿಯನ್ ಪ್ರಾಂತ್ಯಕ್ಕೆ, ಅಲ್ಲಿಂದ ತಮ್ಮ ಗುರಿಯಾಗಿದ್ದ ಭಾರತಕ್ಕೆ! ಮುಂದಿನ ಓದಿಗೆ ಇಲ್ಲಿ ಕ್ಲಿಕ್ ಮಾಡಿ ಅಂದ ಹಾಗೆ, ಡಾವಿಂಚಿ ಕೋಡ್ ನೋಡಿರುವಿರಾ? ಸುಮ್ಮನೆ ಕೇಳಿದೆ. – ವಂದೇ, ಚಕ್ರವರ್ತಿ, ಸೂಲಿಬೆಲೆ

ಕ್ರಾಂತಿಯೋಗಿ ಬಾಬಾ ರಾಮದೇವ್

Thursday, May 8th, 2008

ಅದು ಕ್ರಾಂತಿಯ ಹೊಸ ರೂಪ. ಸಹಸ್ರ ಸಹಸ್ರ ಸಂಖ್ಯೆಯ ಜನರನ್ನು ಒಂದೇ ದಿಕ್ಕಿನೆಡೆಗೆ ಮುನ್ನಡೆಸಿ, ಜಾಗೃತಗೊಳಿಸುವ ಕ್ರಾಂತಿ ಅದು. ಬಾಬಾ ರಾಮ್ ದೇವ್, ಆ ಕ್ರಾಂತಿಯ ಹೆಸರು. ಬಾಬಾ ರಾಮ್ ದೇವ್, ಸವಾಲುಗಳನ್ನು ಕೆಚ್ಚೆದೆಯಿಂದ ಸ್ವೀಕರಿಸುವ ಸಂಕೇತ. ಬಾಬಾ ರಾಮ್ ದೇವ್, ತಾನು ನಂಬಿದ ಸತ್ಯವನ್ನು ದೃಢವಾಗಿ ಪ್ರತಿಪಾದಿಸಬಲ್ಲ ಶ್ರದ್ಧಾ ಮೂರ್ತಿ.  ದೇಶದ ಯಾವ ಭಾಗಕ್ಕೆ ನದೆದರೂ ಇಂದು ಬೆಳಗಿನ ವೇಳೆ ‘ಆಸ್ಥಾ’ ಚಾನೆಲ್ ನಲ್ಲಿ ಬಾಬಾ ರಾಮದೇವರನ್ನು ನೋಡುತ್ತ, ಅವರ ಮಾತು ಕೇಳುತ್ತ, ಯೋಗ ಮಾಡುವವರ […]

ಜರಾ ಯಾದ್ ಕರೋ ಕುರ್ಬಾನಿ….

Tuesday, March 18th, 2008

ಅದು ೧೯೩೧ನೆ ಇಸವಿ, ಮಾರ್ಚ್ ೨೩. ಲಾಹೋರಿನ ಸೆರೆಮನೆಯ ಮುಂದೆ ಸಾವಿರಾರು ಜನ ಸೇರಿದ್ದರು. ‘ವಂದೇ ಮಾತರಂ’ ಘೋಷಣೆ ಮುಗಿಲು ಮುಟ್ಟಿತ್ತು. ಆ ಜನ ಸಂದಣಿಯಲ್ಲಿ ಎಲ್ಲರಿಗಿಂತ ವೃದ್ಧ ತಾಯ್ತಂದೆಯರು ನಿಂತಿದ್ದರು. ಅವರ ಕಂಗಳಲ್ಲಿ ಮುಂದೇನಾಗುವುದೋ ಎಂಬ ಕಾತರತೆ. ಪಾಪಿ ಬ್ರಿಟಿಷರು ತಮ್ಮ ಮಕ್ಕಳನ್ನು ನಿರ್ದಯವಾಗಿ ಗಲ್ಲಿಗೇರಿಸುತ್ತಾರಲ್ಲ ಅನ್ನುವ ದುಗುಡ. ಆದರೂ ಕಣ್ಣಲ್ಲಿ ಹನಿ ನೀರಿಲ್ಲ! ಅಂಥ ಧೀರತನ. ಹ್ಹ್! ಆ ಎದೆಗಾರಿಕೆ ಬ್ರಿಟಿಷರಿಗಿರಬೇಕಲ್ಲ? ಹೊರಗೆ ನೆರೆದ ಜನ ಸಂದಣಿಯನ್ನು ಕಂಡೇ ನಡುಗಿಹೋಗಿದ್ದರು. ಅವರೆಲ್ಲಿ ಸೆರೆಮನೆಯ ಗೋಡೆ […]

ಇತಿಹಾಸದ ಪುಟಗಳಲ್ಲಿ ಮುಲಾಜಿನ ಗೋಜಲು

Thursday, February 7th, 2008

ರಾಮಾಯಣದ ಅತ್ಯಂತ ಮಹತ್ವದ ತಿರುವ ಕಂಡ ಪ್ರಸಂಗ ಅದು. ದಶರಥ ತಾನು ಕೈಕೇಯಿಗೆ ಯಾವಗಲೋ ಕೊಟ್ಟ ಮಾತನ್ನು ಈಡೇರಿಸಲಿಕ್ಕಾಗಿ ಪಟ್ಟಾಭಿಷಕ್ತನಾಗಬೇಕಿದ್ದ ರಾಮನನ್ನು ಹದಿನಾಲ್ಕು ವರ್ಷ ವನವಾಸಕ್ಕೆ ತೆರಳುವಂತೆ ಕೇಳಿಕೊಳ್ಳುತ್ತಾನೆ. ರಾಮನೇನೋ ತಂದೆಯ ಆಜ್ಞಾಪಾಲನೆಗೆ ಸಿದ್ಧನಾಗಿಬಿಟ್ಟ. ಆದರೆ ಲಕ್ಷ್ಮಣನ ಮುಖ ಕೆಂಪುಕೆಂಪಾಯಿತು. “ಅಣ್ಣ, ಅಪ್ಪನನ್ನು ಕೊಂದು ರಾಜ್ಯ ವಶಪಡಿಸಿಕೊಳ್ಳೋಣ” ಎಂದ. ರಾಮ ತಮ್ಮನನ್ನು ಸಂತೈಸುತ್ತ, ” ತಂದೆಯ ಮಾತನ್ನು ನಡೆಸಿಕೊದುವುದೆ ಪುತ್ರಧರ್ಮ. ಅದರಲ್ಲಿಯೆ ನಮಗೆ ಶ್ರೇಯಸ್ಸು” ಎಂದುಬಿಟ್ಟ. ತಂದೆಯ ಮಾತಿಗಾಗಿ ರಾಜ್ಯಬಿಟ್ಟು ತೆರಳಿದ ರಾಮ, ಮರಳಿ ಬರುವ ವೇಳೆಗೆ […]

ಗಾಂಧಿ ಎಂಬ ‘ಮಹಾತ್ಮ’

Saturday, February 2nd, 2008

ಸೋಮನಾಥ ದೇವಾಲಯ ಹಿಂದೂಗಳ ಮೇಲಿನ ಅತ್ಯಾಚಾರದ ಪ್ರತೀಕವಾಗಿ ನಿಂತಿತ್ತು. ಅದನ್ನು ಮತ್ತೆ ನಿರ್ಮಣ ಮಡಿ, ದಾಳಿಕೋರರ ಅತ್ಯಾಚಾರದ ನೆನಪುಗಳನ್ನು ಮೆಟ್ಟಿನಿಲ್ಲುವ ಕೆಲಸ ಆಗಬೇಕಿತ್ತು. ವಿಷಯ ಪ್ರಧಾನಿ ನೆಹರೂ ಬಳಿ ಬಂದಾಗ, ಸರ್ಕಾರ ಒಂದು ಪೈಸೆ ಕೊಡಲಾರದು ಎಂದುಬಿಟ್ಟರು. ಸೋಮನಾಥ ಮಂದಿರ ಕಟ್ಟುವುದರಿಂದ ಮುಸಲ್ಮಾನರಿಗೆ ನೋವಾದೀತೆಂಬ ಭಯ ಅವರಿಗಿತ್ತು. ಗೃಹ ಮಂತ್ರಿ ಪಟೇಲರು ಕಂಗಾಲಾದರು, ಗಾಂಧೀಜಿ ಬಳಿ ಓಡಿದರು. ನೆಹರೂಗೆ ಬುದ್ಧಿ ಹೇಳುವಂತೆ ಗೋಗರೆದರು. ಆಗ ‘ಸೋಮನಾಥ ದೇವಾಲಯ ಹಿಂದೂಗಳ ಶ್ರದ್ಧೆಯ ತಾಣ. ಅದರ ನಿರ್ಮಾಣಕ್ಕೆ ಸರ್ಕಾರ ಹಣ […]