ವಿಭಾಗಗಳು

ಸುದ್ದಿಪತ್ರ


 

ಬೆಂಗಳೂರಲ್ಲೂ ಜಾಗೋ ಭಾರತ್!

Saturday, January 31st, 2009

ವಿಜಯನಗರದಲ್ಲಿ ವಿಶೇಷ ಕಾರ್ಯಕ್ರಮಗಳು… ದಿನಾಂಕ : ೦೬.೦೨.೨೦೦೯ರ ಶುಕ್ರವಾರ ಸಮಯ: ಸಂಜೆ ೬ರಿಂದ ೯ರವರೆಗೆ ಸ್ಥಳ : ರಾಮಕೃಷ್ಣ ಶಾರದಾ ಶಕ್ತಿ ಕೇಂದ್ರ ೧೪೩೬, ಕಾಳೀಮಂದಿರ ರಸ್ತೆ, ಚಂದ್ರಾ ಬಡಾವಣೆ. ಕಾರ್ಯಕ್ರಮ: ರಾಮಕೃಷ್ಣ ಸ್ಮರಣೋತ್ಸವದ ಪ್ರಯುಕ್ತ ‘ಜಾಗೋ ಭಾರತ್’ ‘ಮಾತು- ಗೀತೆ’ಯ ಕಾರ್ಯಕ್ರಮ. ದೇಶ ಭಕ್ತಿ ಕನ್ನಡ/ ಹಿಂದೀ ಗೀತೆಗಳು ಮತ್ತು ದೇಶ ಭಕ್ತಿ ಸಾರುವ ಚಲನ ಚಿತ್ರ ಗೀತೆಗಳ ಗಾಯನ- ಖ್ಯಾತ ಗಯಕರಾದ ಗಣೇಶ್ ದೇಸಾಯಿ, ಮಾಲಿನೀ ಕೇಶವ ಪ್ರಸಾದ್ ಮತ್ತು ಸಂಗಡಿಗರಿಂದ. ಕಥನ- ನಿರೂಪಣೆ- ಚಕ್ರವರ್ತಿ ಸೂಲಿಬೆಲೆ. […]

ಯುವ ದಿನದ ಶುಭಾಶಯಗಳು

Saturday, January 10th, 2009

ಜನವರಿ ೧೨, ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನ. ವಿವೇಕಾನಂದರ ಚಿಂತನೆಗಳು ಅತ್ಯಂತ ವಿಶಾಲ ಮತ್ತು ಸಾರ್ವಕಾಲಿಕ. ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ. ನಿಮಗೆ-ನಮಗೆಲ್ಲರಿಗೂ ಯುವದಿನದ ಶುಭಾಶಯ. ಸ್ವಾಮಿ ವಿವೇಕಾನಂದರು ತೋರಿದ ಹಾದಿಯಲ್ಲಿ ನಾಲ್ಕು ಹೆಜ್ಜೆ ಒಟ್ಟಾಗಿ ನಡೆಯೋಣ ಬನ್ನಿ…

ಭಯೋತ್ಪಾದನಾ ನಿಗ್ರಹ- ಕೆಲವು ವೈಫಲ್ಯಗಳು

Monday, December 1st, 2008

ಮತ್ತೊಂದು ಮಾಯದ ಗಾಯ! ಸುಖಾಂತ್ಯವಾಯ್ತೆಂದು ಬೀಗಿದ್ದಷ್ಟೆ ಬಂತು. ಸತ್ಯ ಹೇಳಿ. ಒಂಭತ್ತು ಉಗ್ರಗಾಮಿಗಳನ್ನು ಕೊಲ್ಲಲು ೬೨ ಗಂಟೆಗಳಷ್ಟು ದೀರ್ಘ ಕಾಲ ಸವೆಸಿದ್ದನ್ನು (ಅದೂ ಭಾರತದ ಪ್ರಮುಖ ನಗರಿ ಮುಂಬಯ್ ನೊಳಗೆ) ಯಾರಾದರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದೇನು? ಧಿಕ್ಕಾರವಿರಲಿ ಸರ್ಕಾರಗಳಿಗೆ! ಧಿಕ್ಕಾರವಿರಲಿ ನಮ್ಮ ರಕ್ಷಣಾ ಪಡೆಗಳಿಗೆ!! ಮೊದಲನೆಯದೇನೋ ಸರಿ. ಈ ಎರಡನೆಯದೇಕೆ ಎನ್ನುವಿರೇನೋ? ಹೌದು. ಆ ಸಾಲು ಬರೆಯಬೇಕಾದರೆ ನನಗೂ ವಿಪರೀತ ನೋವಿದೆ. ಆದರೆ ಬರೆಯದೇ ವಿಧಿಯಿಲ್ಲ. ಕಾದಾಟದಲ್ಲಿ ಸತ್ತವರಿಗೆ ಶ್ರದ್ಧಾಂಜಲಿ ಅರ್ಪಿಸುವ ಭರದಲ್ಲಿ ಆದದ್ದನ್ನು ಮರೆತುಬಿಟ್ಟರೆ… ಮುಂದಿನ ವರ್ಷ […]

ಮುಂದೇನು ಮಾಡಬಹುದು?

Wednesday, November 19th, 2008

ಶ್ವೇತಾಳ ಸಮಸ್ಯೆಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ. ಬೇಸರದ ಸಂಗತಿಯೆಂದರೆ, ಹಾಗೆ ಸಧ್ಯಕ್ಕೆ ಹಣ ನೀಡು, ಮುಂದೆ ಹೀಗಾಗದಂತೆ ತಡೆಯಲು ಖಂಡಿತವಾಗಿಯೂ ಪ್ರಯತ್ನ ಪಡುವೆವು ಎಂದು ಹೇಳಿದ ನಂತರ ಆಕೆ ಕರೆ ಮಾಡಲೇ ಇಲ್ಲ. ಬಹಳ ನಿರಾಸೆಯಾಗಿರಬೇಕು. ಪ್ರತಿರೋಧ, ಹೋರಾಟಗಳು ತತ್ ಕ್ಷಣದ ಪ್ರಕ್ರಿಯೆ ಆಗಿಬಿಟ್ಟರೆ ಅದರಲ್ಲಿ ಜೋಶ್ ಏನೋ ಇರುವುದು.. ಆದರೆ ಅದು ದೀರ್ಘಕಾಲಿಕ ಪರಿಣಾಮ ಉಳಿಸುವುದು ಕಷ್ಟವೇ. ಈಗ ನಾನಂತೂ ಸುಮ್ಮನೆ ಕುಳಿತುಕೊಳ್ಳುವವನಲ್ಲ. ಆದರೆ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಕೇವಲ ಒಬ್ಬ ಶಿಕ್ಷಕನ ವಿರುದ್ಧ ಹೋರಾಡಲೂ […]

ಶ್ವೇತಾಳಿಗೆ ಏನುತ್ತರಿಸಲಿ ಹೇಳಿ ಪ್ಲೀಸ್…

Thursday, November 13th, 2008

ಮೊನ್ನೆ ಮಧ್ಯಾಹ್ನ ಎರಡು ಗಂಟೆಗೆ ಬನಶಂಕರಿಯ ಡಿಪ್ಲೊಮಾ ಕಾಲೇಜೊಂದರಲ್ಲಿ ಓದುತ್ತಿರುವ ಶ್ವೇತಾ ಕರೆ ಮಾಡಿದ್ದಳು. ‘ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡೋದು ಹೇಗೆ ಸಾರ್?” ಎಂದಳು. ನಾನು ಎಂದಿನಂತೆ, “ಮೊದಲು ನಾವು ಶುದ್ಧವಾಗೋಣ. ನಮ್ಮ ಕೈಯಿಂದ ಅಚಾತುರ್ಯ ನಡೆಯದಿದ್ದರಾಯ್ತು” ಎಂದೆ. ಅದರರ್ಥ, ಲಂಚ ತೊಗೋಳೋದೂ ತಪ್ಪು, ಕೊಡೋದೂ ತಪ್ಪು. ಇಷ್ಟಾದ ಮೇಲೆ ಆ ಹುಡುಗಿ ಹೇಳಿದ ಘಟನೆ ನನ್ನನ್ನ ವಿಷಾದಕ್ಕೆ ನೂಕಿತು. ಅವತ್ತು ಬೆಳಗ್ಗೆ ಆಕೆಗೆ ಪ್ರ್ಯಾಕ್ಟಿಕಲ್ ಎಗ್ಸಾಮ್ ಇತ್ತಂತೆ. ಅದನ್ನು ‘ಟೈಮಿಂಗ್’ ಅಂತ ಕರೀತಾರೆ. ನಿಗದಿತ ಸಮಯದಲ್ಲಿ […]

ಕ್ರಿಸ್ತ ಮತ್ತು ಭಾರತ- ಎರಡು ಅನುಮಾನಗಳು

Friday, May 23rd, 2008

ಟೀನಾ ಮತ್ತು ನೀಲಾಂಜನರು ‘ಕ್ರಿಸ್ತ ಮತ್ತು ಭಾರತ’ ಲೇಖನಕ್ಕೆ ಪ್ರತಿಕ್ರಿಯಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪತ್ರಿಕೆಯಲ್ಲಿ ನಾನು ಬರೆದಿರೋದು ಏಸುಕ್ರಿಸ್ತನ ಬಗ್ಗೆ ನಡೆದ ಸಂಶೋಧನೆಯ ಕೇವಲ ಒಂದು ಭಾಗವಷ್ಟೇ. ಇದು ಪತ್ರಿಕೆಯ ಓದುಗರಿಂದಲೂ ಸಾಕಷ್ಟು ಉದ್ಗಾರ ಹೊರಡಿಸಿದೆ. ಆದರೆ ಇನ್ನೂ ಹೇಳಬೇಕಿರುವ ವಿಷಯಗಳು ಮತ್ತೆಷ್ಟು ಸಂಚಲನ ಉಂಟುಮಾಡಬಹುದೆಂದು ಯೋಚಿಸುತ್ತಿದ್ದೇನೆ. ಇರಲಿ. ಗೆಳತಿ ಟೀನಾ ಹೇಳಿದ ಮೃತ ‘ಸಮುದ್ರದ ದಾಸ್ತಾವೆಜುಗಳು’ ಒಂದು ಕಾಲದಲ್ಲಿ ಜಗತ್ತನ್ನು ಅಲ್ಲಾಡಿಸಿದಂಥವು. ಅವುಗಳನ್ನಷ್ಟೆ ಆಧಾರವಾಗಿಟ್ಟುಕೊಂಡು ಅಧ್ಯಯನಕ್ಕೆ ಕುಳಿತರೆ ಏಸು ಎಂಬ ವ್ಯಕ್ತಿ ಅವತಾರವೆತ್ತಿದ್ದೇ ಸುಳ್ಳು […]

ಭಾನುವಾರದ ಸುಂದರ ಸಂಜೆ…

Monday, February 18th, 2008

ನಿಜಕ್ಕೂ ಫೆಬ್ರವರಿ ಹದಿನೇಳರ ಭಾನುವಾರದ ಸಂಜೆ ನನಗೆ ಅವಿಸ್ಮರಣೀಯವಾದ ಭಾವ ಜಾಗೃತಿಯ ಸಾರ್ಥಕ ಸಮಯವಾಗಿತ್ತು. ಅತ್ಯಂತ ಉಲ್ಲಾಸದಾಯಕವಾಗಿತ್ತು. ಹೀಗೆ ನನ್ನನ್ನು ಆಳವಾಗಿ ತಟ್ಟಿದ ಕಾರ್ಯಕ್ರಮದ ಹೆಸರು- “ವಂದೇ ಮಾತರಂ ಗೀತ ಸಂಧ್ಯಾ” ಮೈತ್ರಿ ಸಂಸ್ಕೃತಿ ಪ್ರತಿಷ್ಟಾನದ ಸಂಸ್ಕೃತೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ‘ಭಾರತ ವೈಭವ’ ಶೀರ್ಷಿಕೆಯಡಿಯಲ್ಲಿ ನಿರೂಪಣೆ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿತ್ತು. ವಂದೇ ಮಾತರಂ ‘ವಂದೇ ಮಾತರಂ…’ ಈ ಎರಡು ಪದಗಳು ಸಾಕು ಮಿಂಚಿನ ಸಂಚಾರಕ್ಕೆ. ಯಾವ ಎರಡು ಪದಗಳನ್ನು ಉಚ್ಚ ಕಂಠದಲ್ಲಿ […]

ರಾಮಕೃಷ್ಣಾಶ್ರಮದಲ್ಲಿ ಪುಸ್ತಕ (ಪ್ರ)ದರ್ಶನ

Sunday, January 6th, 2008

ಸ್ವಾಮಿ ವಿವೇಕಾನಂದ! ಅದು ಬರಿಯ ಹೆಸರಲ್ಲ. ಅದೊಂದು ಶಕ್ತಿ. ಅಸೀಮ ಸ್ಫೂರ್ತಿ. ಅವರನ್ನು ಆಲಿಸುತ್ತ, ಅವರು ನಡೆದು ತೋರಿದ ದಾರಿಯಲ್ಲಿ ಹೆಜ್ಜೆಗಳನ್ನಿಡುತ್ತ ನಡೆದು ಬದುಕಿನ ಉನ್ನತ ಮಜಲುಗಳಿಗೇರಿದ ಯುವಕರ ಸಂಖ್ಯೆ ಅದೆಷ್ಟೋ… ಅದು ರಾಷ್ಟ್ರ ಪ್ರೇಮದ ಮಾತಾಗಿರಲಿ, ಸಮಾಜ ಸೇವಾ ಕ್ಷೇತ್ರವಿರಲಿ, ಅಥವಾ ಸಾಹಿತ್ಯ ಕ್ಷೇತ್ರವೇ ಆಗಿರಲಿ… ಎಲ್ಲೆಲ್ಲೂ ಹೊಸ ಹುಮ್ಮಸ್ಸಿನ ಅಲೆ ಎಬ್ಬಿಸುತ್ತ ಉತ್ಕೃಷ್ಟತೆಯ ಪತಾಕೆ ಹಾರಿಸುತ್ತ ಮೆರೆಯುವ ಏಕೈಕ ಹೆಸರು, ಸ್ವಾಮಿ ವಿವೇಕಾನಂದ. ನಾವು ಮಾಡುವ ಯಾವುದೇ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಲು ವಿವೇಕಾನಂದರ ಮಾತುಗಳು […]

ಕಂಡವರ ದುಡ್ಡಿಗೆ, ಜೀವಕ್ಕೆ ಬೆಲೆಯೇ ಇಲ್ವಾ?

Saturday, December 1st, 2007

ಇವತ್ತಿನ ಸುದ್ದಿ ಕೇಳಿದಿರಾ? ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಏಯ್ಡ್ಸ್ ರೋಗಿಗಳಿಗೆ ಕೊಡುವ ಔಷಧದಲ್ಲಿ ಹೇರಾಫೇರಿ ನಡೆಯುತ್ತಿದೆ. ವಿದೇಶೀ ಔಷಧ ಕಂಪೆನಿಗಳ ಎಕ್ಸ್ ಪೆರಿಮೆಂಟಿಗೆ ನಮ್ಮ ಜನರು ಬಲಿಪಶುಗಳಾಗ್ತಿದಾರೆ. ಮೊನ್ನೆ ’ಔಷಧ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಜೀವಗಳು’ ಲೇಖನವನ್ನೋದಿದ ಕೆಲವು ಪರಿಚಿತರು, “ನೀವು ಹೇಳುವಷ್ಟೆಲ್ಲ ಕುಲಗೆಟ್ಟುಹೋಗಿಲ್ಲ ಬಿಡ್ರಿ! ಸುಮ್ನೆ ಎಲ್ಲಾವ್ದನ್ನೂ ಎಕ್ಸಾಸಿರೇಟ್ ಮಾಡ್ತೀರ” ಅಂದುಬಿಟ್ಟಿದ್ದರು. ಆಗ ನಾನು ತೀರ ನನ್ನ ಸುತ್ತ ಮುತ್ತಲೇ ನಡೆದ ಕೆಲವು ಘಟನೆಗಳನ್ನ ಹೇಳಿ ವಿಷಯದ ಗಂಭೀರತೆಯನ್ನ ಮನದಟ್ಟು ಮಾಡಿಸಬೇಕಾಯ್ತು. ಮತ್ತಿವತ್ತು ಬಂದಿದೆ ಈ ಆಘಾತಕಾರಿ ಸುದ್ದಿ. […]

ನಲುಗುತ್ತಿದೆ ಭಾರತ

Sunday, November 11th, 2007

ಬಲು ಹಳೆಯ ಕತೆ. ಒಬ್ಬ ಕುರುಡ ಮತ್ತೊಬ್ಬ ಕುಂಟನ ಕತೆ. ಒಮ್ಮೆ ಇಬ್ಬರೂ ನಿರ್ಧಾರ ಮಾಡುತ್ತಾರೆ. ಕುರುಡ ಕುಂಟನನ್ನು ಹೆಗಲ ಮೆಲೆ ಕೂರಿಸಿಕೊಳ್ಳುತ್ತಾನೆ. ಕುಂಟ ದಾರಿ ತೋರುತ್ತಾನೆ, ಕುರುಡ ದಾರಿ ಸವೆಸುತ್ತಾನೆ. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಇಬ್ಬರೂ ಹೊಟ್ಟೆ ತುಂಬಿಸಿಕೊಳ್ಳತೊಡಗುತ್ತಾರೆ. ಇದೆಲ್ಲ ಮೊದ ಮೊದಲು ಚೆನ್ನಾಗಿಯೇ ನಡೆದಿತ್ತು. ಬರಬರುತ್ತಾ ಕುಂಟ ಸ್ವಾರ್ಥಿಯಾಗತೊಡಗಿದ. ಭಿಕ್ಷೆಯಲ್ಲಿ ದೊರೆತ ಒಳ್ಳೆಯ ಪದಾರ್ಥಗಳನ್ನು ತಾನು ತಿಂದು, ಹಳಸಿದ, ಅಯೋಗ್ಯ ಆಹಾರವನ್ನು ಕುರುಡನಿಗೆ ಕೊಡತೊಡಗಿದ. ಹೇಗೂ ಕಣ್ಣು ಕಾಣದಲ್ಲ!? ಇತ್ತ ಕುಂಟ ಚೆನ್ನಾಗಿ […]