ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

Tuesday, October 3rd, 2017

ಏನೇ ಹೇಳಿ ಎದೆಯೊಳಗೆ ಅಮೃತ ಕುಂಭವೇ ಇದ್ದರೂ ಬಾಯಿಗೂ ಚರಂಡಿಗೂ ವ್ಯತ್ಯಾಸವೇ ಇಲ್ಲ

ಏನೇ ಹೇಳಿ

Tuesday, October 3rd, 2017

ಕಣ್ಣ ಮೀರಿದ ಸೃಷ್ಟಿಸಿದವ ಕಣ್ಣಿಗೇ ಕಾಣಲಾರ ಏನೇ ಹೇಳಿ ಕಂಡದ್ದರ ಹಿಂದೆ ಓಡುತ್ತ ಕಣ್ಣನೇ ನೆನಪಾರಿದ!

ಐತಿಹಾಸಿಕ ಸಜರ್ಿಕಲ್ ಸ್ಟ್ರೈಕ್ಗೆ ವರ್ಷದ ಸಂಭ್ರಮ!

Sunday, October 1st, 2017

ಮೊದಲೆಲ್ಲ ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ, ಭಯೋತ್ಪಾದಕರ ಮೇಲೆ ಕರುಣೆ ಹುಟ್ಟುವಂತಹ ಸಿನಿಮಾಗಳೆ ರಾರಾಜಿಸುತ್ತಿದ್ದವು. ಇಂದು ಜನ ಅವುಗಳತ್ತ ಕಡೆಗಣ್ಣಿಂದಲೂ ನೋಡುತ್ತಿಲ್ಲ. ಬಾಲಿವುಡ್ಡನ್ನು ಆಳುತ್ತಿದ್ದ ಶಾರುಖ್, ಅಮೀರರೆಲ್ಲ ಸಾಲು ಸಾಲು ತೋಪೆದ್ದ ಸಿನಿಮಾಗಳಿಂದ ಬೀದಿಗೆ ಬಂದುಬಿಟ್ಟಿದ್ದಾರೆ. ದೇಶಭಕ್ತಿಗೆ ಮೇರುವಿನಷ್ಟು ಮೌಲ್ಯ ಬಂದಿರುವ ವಿಶೇಷವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಐತಿಹಾಸಿಕ ಸಜರ್ಿಕಲ್ ಸ್ಟ್ರೈಕ್ಗೆ ವರ್ಷದ ಸಂಭ್ರಮ! ‘ಆಧ್ಯಾತ್ಮದ ಮೂಲ ಅವಶ್ಯಕತೆಯೇ ನಿಭರ್ೀತಿ. ಹೇಡಿಗಳು ಎಂದಿಗೂ ನೀತಿವಂತರಾಗಿರುವುದಿಲ್ಲ’ ಈ ಸಾಲುಗಳನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಶಿವ್ ಅರೂರರ ‘ಇಂಡಿಯಾಸ್ […]

  ಗೋವಾದ ಕನ್ನಡಿಗರ ಸಮಸ್ಯೆಗೆ ಪರಿಹಾರವೇನು?

Saturday, September 30th, 2017

ಹೇಗೆ ಕನರ್ಾಟಕದಲ್ಲಿ ಕನ್ನಡ ಪ್ರೇಮವೆಂದರೆ ತಮಿಳು-ಹಿಂದಿ ದ್ವೇಷವೆಂಬುದನ್ನು ನಾವು ಮುಂದಿಡುತ್ತೇವೆಯೋ ಹಾಗೆಯೇ ಅಲ್ಲಿ ಗೋವಾದ ಪ್ರೇಮವೆಂದರೆ ಕನರ್ಾಟಕದ ವಿರೋಧವೆಂಬಂತಾಗಿದೆ. ಅಲ್ಲಿನ ಒಟ್ಟೂ ಜನಸಂಖ್ಯೆ ಹದಿನೈದು ಲಕ್ಷವಾದರೆ, ಕನ್ನಡಿಗರೇ ಮೂರು ಲಕ್ಷದಷ್ಟಿದ್ದಾರಂತೆ! ಅಂದರೆ ಪ್ರತಿ ಐವರಲ್ಲಿ ಒಬ್ಬ ಕನ್ನಡಿಗ. ಹೀಗೆ ಬಂದಿರುವ ಅನೇಕರಲ್ಲಿ ಮುಸಲ್ಮಾನರೂ ದೊಡ್ಡ ಪ್ರಮಾಣದಲ್ಲಿರುವುದರಿಂದ ಅವರಿಂದ ನಿಮರ್ಾಣಗೊಂಡಿರುವ ಎಲ್ಲ ಪ್ರತ್ಯೇಕತಾವಾದಿ ಸಮಸ್ಯೆಗಳಿಗೂ ಅವರೀಗ ಕನರ್ಾಟಕವನ್ನೇ ದೂರುತ್ತಿದ್ದಾರೆ. ಅದಷ್ಟೇ ಅಲ್ಲ. ಇಲ್ಲಿನ ಗಣಿ ಉದ್ಯಮದಲ್ಲಿ ಬಹುಪಾಲು ಮುಖ್ಯ ಸ್ಥಾನದಲ್ಲಿ ಕನ್ನಡಿಗರೇ ಇದ್ದಾರೆ. ಬ್ಯಾಂಕುಗಳಲ್ಲಿ ಕನ್ನಡಿಗರಿದ್ದಾರೆ. ಇಲ್ಲಿನ ಹೋಟೆಲ್ ಉದ್ಯಮ […]

ಏನೇ ಹೇಳಿ

Friday, September 29th, 2017

ಅವಳ ಮುಂಗುರುಳ ಬಣ್ಣಿಸುತ್ತ ರಾತ್ರಿ ಕಳೆದೆ ಕಣ್ಣು ಅದೆಷ್ಟು ಬತ್ತಿದೆಯೆಂದರೆ ಅವನ ಬೆಳಕೂ ನೋಡಲಾಗುತ್ತಿಲ್ಲ ಏನೇ ಹೇಳಿ ಕುರುಡರ ಸಂತೆಯಲ್ಲಿ ನಾನೂ ಒಬ್ಬನಾಗಿಬಿಟ್ಟೆ!

ಏನೇ ಹೇಳಿ

Friday, September 29th, 2017

ನೆರಳಲ್ಲಿ ಜೊತೆಯಾಗಲು ಬೇಕಾದಷ್ಟು ಜನ ಸಿಗ್ತಾರೆ ಏನೇ ಹೇಳಿ ಬಿಸಿಲಲ್ಲೂ ಕೈಹಿಡಿದು ಹೆಜ್ಜೆ ಹಾಕೋರೆ ಶಾಶ್ವತ!

ಏನೇ ಹೇಳಿ

Friday, September 29th, 2017

ಏನೇ ಹೇಳಿ ಹೃದಯದಲ್ಲೇ ಅಂಧಕಾರ ತುಂಬಿದ್ದಾಗ ಕರೆಂಟ್ ಇದ್ರೆಷ್ಟು, ಹೋದ್ರೆಷ್ಟು!

ಏನೇ ಹೇಳಿ

Friday, September 29th, 2017

ಏನೇ ಹೇಳಿ ಸ್ಪರ್ಶ ಮಾತನಾಡಿದೊಡೆ ಕಾಮವಾಗುವ ಪ್ರೇಮ, ಕಣ್ಣಿನ ಭಾಷೆ ಪ್ರಯೋಗಿಸಿದರೆ ಭಕ್ತಿಯಾಗಿಬಿಡುತ್ತೆ!

ಏನೇ ಹೇಳಿ

Tuesday, September 26th, 2017

ನೀವು ಕೊಟ್ಟದ್ದನ್ನು ಎದಿರಿನವ ಬೇಡವೆಂದರೆ ಅದು ಮರಳಿ ನಿಮಗೇ. ಬೈಗುಳವಾದರೂ, ಪ್ರೀತಿಯಾದರೂ.. ಏನೇ ಹೇಳಿ ಬೇಡವೆಂದರೂ ನಮ್ಮ ಜೇಬಿಗೆ ತುರುಕುವ ಕಲೆ ಗೊತ್ತಿರೋದು ಅವನೊಬ್ಬನಿಗೇ!!

ಏನೇ ಹೇಳಿ

Tuesday, September 26th, 2017

ಏನೇ ಹೇಳಿ Expiry Date ಆಗಿ ಹೋಗುವ ಮುನ್ನ ಯಾರದ್ದಾದ್ರೂ ಬಳಕೆಗೆ ಬಂದರಷ್ಟೇ ಸಾರ್ಥಕ.