ವಿಭಾಗಗಳು

ಸುದ್ದಿಪತ್ರ


 

ಅಮೆರಿಕದ ಕಳ್ಳತನಕ್ಕೆ ನಮ್ಮ ಪ್ರತಿರೋಧವೇ ಇಲ್ಲ..

Saturday, July 20th, 2013

ಜಗತ್ತು ಹೇಗಾಗಿಬಿಟ್ಟಿದೆ ನೋಡಿ. ನಮ್ಮ ನಡೆ-ನುಡಿ ಎಲ್ಲವನ್ನೂ ಗಮನಿಸುವವನೊಬ್ಬನಿರುತ್ತಾನೆ ಅಂತ ಯಾವಾಗಲೂ ಹೇಳುತ್ತಿದ್ದೇವಲ್ಲ, ಆತ ಯಾರೂಂತ ಈಗ ಗೊತ್ತಾಗಿಹೋಗಿದೆ! ಹ್ಹಾಂ, ನಾನು God Particle ಬಗ್ಗೆ ಮಾತನಾಡುತ್ತಿಲ್ಲ. ಅಮೆರಿಕದ ಬೇಹುಗಾರಿಕೆ ಸಂಸ್ಥೆಗಳ ಸಾಮರ್ಥ್ಯ ಕೊಂಡಾಡುತ್ತಿದ್ದೇನೆ ಅಷ್ಟೇ. ಹೌದು. ನೀವು ಮನೆಯಲ್ಲಿಯೇ ಕುಳಿತು -ಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದರೆ ನಿಮ್ಮನ್ನು ನೋಡುವವರ‍್ಯಾರೂ ಇಲ್ಲ ಅಂದುಕೊಳ್ಳಬೇಡಿ. ನೀವು ಅಪ್ಪ-ಅಮ್ಮನ ಕಣ್ತಪ್ಪಿಸಬಹುದು. ಅಮೆರಿಕದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (ಎನ್‌ಎಸ್‌ಎ)ಯದ್ದಲ್ಲ. ನೀವು ಮೊಬೈಲ್‌ನಲ್ಲಿ ಫೇಸ್‌ಬುಕ್ ಬಳಸುವಾಗ ನೀವು ಓಡಾಡುತ್ತಿರುವ ದಾರಿಯೂ ಗಮನದಲ್ಲಿರುತ್ತದೆನ್ನುವುದನ್ನು ಮರೆಯಬೇಡಿ. ನೀವು […]

Quick programmes

Saturday, July 13th, 2013

July 16th Sindhnur          17th Raichur          18th Devadurga All programmes related to svami vivekananda Rathayatra July 19 to Shimoga          20th 4pm program on business ethics, Shimoga           21st 10am AVOPA, Shimoga                     6pm Pravachana, Gayatri mandir, Tadas, Hubli           22nd 10am Gurupurnima, Gayatri Mandir, Tadas,  Hubli           23&24th meeting at Hampi           25th […]

ಹದಿನಾಲ್ಕರ ಬಾಲೆಗೆ ಹೆದರಿದ ತಾಲಿಬಾನಿ ಹೇಡಿಗಳು!

Friday, July 12th, 2013

Reblogged from ನೆಲದ ಮಾತು: ’ನನ್ನ ಪಾಕಿಸ್ತಾನದ ಕನಸು ಇಂತಹದುಲ್ಲ. ಅಲ್ಲಿ ಶಾಂತಿ ಇರಬೇಕು. ನೆರೆಯವರೊಂದಿಗೆ ಸೌಹಾರ್ದ ಗೆಳೆತನವಿರಬೇಕು. ನನ್ನ ಪಾಕಿಸ್ತಾನದಲ್ಲಿ ಹಗರಣಗಳಿರಬಾರದು. ಶತ್ರುಗಳಿಲ್ಲದ ರಾಷ್ಟ್ರವಾಗಿರಬೇಕು ಅದು.’ ಹಾಗಂತ ಪಟಪಟನೆ ಮಾತನಾಡುತ್ತ ಇಂತಹದೊಂದು ರಾಷ್ಟ್ರದ ನಿರ್ಮಾಣಕ್ಕೆ ಅಗತ್ಯಬಿದ್ದಲ್ಲಿ ಓದು ಮುಗಿಸಿ ರಾಜಕಾರಣಕ್ಕೂ ಧುಮುಕುವೆನೆಂದು ಪತ್ರಕರ್ತರ ಮುಂದೆ ಹೇಳಿದ್ದು ಬೆನಜಿರ್ ಭುಟ್ಟೋ ಅಲ್ಲ. ಹದಿಮೂರರ ಬಾಲೆ ಮಲಾನಾ ಯೂಸುಫ್ ಜಾಯ್. ಹೌದು. ಮೊನ್ನೆ ದುಷ್ಟ ತಾಲಿಬಾನಿಗಳು ಗುಂಡು ಹಾರಿಸಿ ಕೊಲ್ಲುವ ಯತ್ನ ನಡೆಸಿದ್ದು ಈ ಹುಡುಗಿಯ ಮೇಲೆಯೇ. ಈಗ […]

ಜಾಗೋ ಭಾರತ್ ಅಂಕಣ….

Saturday, July 6th, 2013

http://epapervijayavani.in/Details.aspx?id=6980&boxid=21755546      

ಅನುಭಾವ ಬಿಂದುಗಳು (ಹೊಸ ಕಂತು)

Wednesday, July 3rd, 2013

ಅನುಭವಿಸಿದರೆ ಒಂಟಿತನವೂ ಹಾಯೆನಿಸುತ್ತದೆ. ~ ಇನ್ನೇಕೆ ದಾರಿ ನನಗೆ… ನಿನ್ನ ಹೆಜ್ಜೆ ಗುರುತು ಸಿಕ್ಕಿತಲ್ಲ. ~ ಅರೆ! ಅರಳಿದ ಪದ್ಮದ ಸೌಂದರ್ಯಕ್ಕೆ ಸೋತ ಕುಂಡಲಿನಿಯ ಹಾವು ಕುಣಿಯುತ್ತ ಸಹಸ್ರಾರ ಸೇರಿದೆ ~ ನೀನು ನನಗಿಷ್ಟ ಅದು ಕನ್ನಡಿಗೂ ಗೊತ್ತು. ಅದಕ್ಕೇ ಅವಕ್ಕೆ ನೀನಂದರೆ ಅಷ್ಟಕ್ಕಷ್ಟೇ. ~ ಕಣ್ಣಿಲ್ಲದವಗೆ ಮಾತ್ರ ಕತ್ತಲಿನ ಅನುಭವ. ~ ಹೃದಯದ ತಂತು ಎಲ್ಲರೂ ಮೀಟಲಲ್ಲ. ಸಂಗೀತ ಆಲಿಸುವ ತಾಳ್ಮೆಯೂ ಬೇಕಲ್ಲ! ~ ಸೂರ್ಯೋದಯದೊಂದಿಗೆ ಶುರುವಾಗೋ ನನ್ನ ಗರತಿತ್ವ ಸೂರ್ಯಾಸ್ತಕ್ಕೆ ಮುಗಿದುಹೋಗುತ್ತೆ! ~ ನಂಬಿಕೆಯೇ […]

ಶೋಧಕ ಶಕ್ತಿಗೊಂದು ಪ್ರೇರಣೆ – INSPIRE

Friday, June 28th, 2013

ಭಾರತದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಇದ್ದರೆ ಅದು ಇಚ್ಛಾಶಕ್ತಿಗೆ ಮಾತ್ರ. ಈಗ ಹೊಸತೊಂದು ಮಾರ್ಗ ಅರಸಬೇಕಿದೆ. ನಮ್ಮಲ್ಲಿನ ಶೋಧಕ ಶಕ್ತಿಯನ್ನು ಅನಾವರಣಗೊಳಿಸುತ್ತ ಹೆಜ್ಜೆ ಇಡಬೇಕಿದೆ. ಅದಕ್ಕೇ ಒಂದು ವೈಚಾರಿಕ ನೆಲೆಕಟ್ಟಿನ, ಸಮಸ್ಯೆಯ ಆಳಕ್ಕೆ ಹೊಕ್ಕಬಲ್ಲ ಸಾಮರ್ಥ್ಯದ ನವ ಪೀಳಿಗೆ ಬೇಕೆಂಬ ಕೂಗು ಹೊರಟಿರೋದು. ಇಂತಹ ಪೀಳಿಗೆಯ ನಿರ್ಮಾಣಕ್ಕೆ ವೈಜ್ಞಾನಿಕ ತಳಹದಿ ಬೇಕಲ್ಲ, ಅದನ್ನು ಕೊಡುವ ಪ್ರಯತ್ನ INSPIREನದು. ಮೂಲ ವಿಜ್ಞಾನದಲ್ಲಿ ಆಸಕ್ತಿಯುಳ್ಳವರು ದಿನ ಕಳೆದಂತೆ ಕಾಣುತ್ತಲೇ ಇಲ್ಲವಾಗಿದ್ದಾರೆ. ಎಲ್ಲರಿಗೂ ಇಂಜಿನಿಯರ್, ಡಾಕ್ಟರುಗಳೇ ಆಗಬೇಕು. ಅತ್ತ ರಕ್ಷಣಾ ಇಲಾಖೆ, […]

ಹೇ ಕಾಶ್ಮೀರ….!

Wednesday, June 26th, 2013

ನಿನ್ನ ವರ್ತಮಾನ ನಾನು ಇತಿಹಾಸ, ಭವಿಷ್ಯ ಎಲ್ಲವೂ ನಾನು. ನಿನ್ನ ಶೃಂಗಾರಕ್ಕೆ ವೈಯಾರಕ್ಕೆ ಸೌಂದರ್ಯಕ್ಕೆ ಕಾರಣ ನಾನೇ. ನೀ ಮಾಡುವ ಪೂಜೆ ನೀ ಬರೆವ ಕವನ ಅದು ನಾನೇ. ನೀನು ಇಲ್ಲವೆಂದು ವಾದಿಸು ಹೌದೆಂದು ಭಾವಿಸು ನಿನ್ನೊಳಗಿನ ನಾನು ನಾನೇ. ನಿನ್ನ ಒಂದೊಂದು ತುತ್ತಿಗೆ ನಾನೆಷ್ಟು ಹಸಿದೆ ಸಿಡಿವ ಮೋಡದಂತೆ ಸುರಿದೆ. ನಿನಗೆ ತಿಳಿಯಲಿಲ್ಲ… ಏಣಿಯ ಒದ್ದು ಮತ್ತೊಬ್ಬನ ಆಲಂಗಿಸಿದೆ. ಸಿದ್ಧಾಂತವ ಬದಲಿಸಿದೆ ವೇದಾಂತವ ತೊರೆದೆ ಬದಲಾದೆ ನೀನು ಬದಲಾದೆ… ಛೇ!! ನಾ ಬಿಟ್ಟ ಮರುಕ್ಷಣ ನೀನಿಲ್ಲವಾಗುವೆ […]

ಧರ್ಮನಾಶಕ್ಕೆ ಕಟಿಬದ್ಧರಾಗಿ ನಿಂತವರ ಎದುರು…

Friday, June 21st, 2013

ಹಿಂದೂ ಧರ್ಮವನ್ನು ಅನುಸರಿಸುವವರು ಜೀವ ಉಳಿಸುವಲ್ಲಿ, ಸ್ನೇಹ ಬೆಳೆಸುವಲ್ಲಿ ನಿರತರಾಗುವರು. ಸದ್ಯಕ್ಕಂತೂ ಬೇರೆಯವರ‍್ಯಾರೂ ಹಾಗೆ ಕಾಣುತ್ತಿಲ್ಲ. ಅದಕ್ಕೇ ಹಿಂದೂ ರಾಷ್ಟ್ರದ ನಿರ್ಮಾಣವಾದರೆ ಅದು ಜಗತ್ತಿಗೇ ಒಳಿತನ್ನು ಮಾಡುವಂಥದ್ದಾಗುವುದು. ಅದು ಭಗವಂತನ ಇಚ್ಛೆಯೂ ಹೌದು. ಗೋವಾ! ಐದು ಶತಕಗಳ ಹಿಂದೆ ಹಿಂದೂಗಳು ಕ್ರಿಶ್ಚಿಯನ್ನರ ದಾಳಿಯಿಂದ ನಲುಗಿ ಹೋಗಿದ್ದ ಜಾಗ. ದೇವಸ್ಥಾನಗಳನ್ನು, ಆಚಾರ ಪದ್ಧತಿಗಳನ್ನು, ಕೊನೆಗೆ ತುಳಸೀಕಟ್ಟೆಯನ್ನು ಉಳಿಸಿಕೊಳ್ಳಲೆಂದು ರಕ್ತದ ಕೋಡಿ ಹರಿದಿತ್ತು. ಹಿಂದೂ ರಾಷ್ಟ್ರದ ನಾಶಕ್ಕೆ ಕಟಿಬದ್ಧರಾಗಿದ್ದ ರಾಕ್ಷಸರೋಪಾದಿಯಲ್ಲಿ ಸಂತ ಝೇವಿಯರ್ ಮತ್ತು ಸೇನಾಪತಿ ಅಲ್ಬುಕರ್ಕ್ ನಿಂತಿದ್ದರು. ಭೂಮಿಯ […]

ಐಪಿಎಲ್ – ಅಡ್ವಾಣಿ ಬಿಡಿ, ರೂಪಾಯಿ ಉಳಿಸಿಕೊಡಿ

Friday, June 14th, 2013

ವರ್ಲ್ಡ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಮನಮೋಹನ ಸಿಂಗರನ್ನು ಇಲ್ಲಿನ ಇಂಗ್ಲಿಶ್ ಮಾಧ್ಯಮಗಳು ಆರ್ಥಿಕ ತಜ್ಞರೆಂದು ಬಿಂಬಿಸಿ ಹಿಮಾಲಯದೆತ್ತರಕ್ಕೊಯ್ದು ಕೂರಿಸಿಯೇ ಬಿಟ್ಟರು. ಆದರೆ ವಾಸ್ತವವಾಗಿ ಅವರು ವಲ್ಡ್ ಬ್ಯಾಂಕಿನ ಆಶಯಗಳನ್ನು ಈಡೇರಿಸಲೆಂದೇ ಬಂದ ಕೈಗೊಂಬೆಯಾಗಿದ್ದರು. ಹೀಗಾಗಿಯೇ ಚುನಾವಣೆಯನ್ನೇ ಗೆಲ್ಲದೆ ವಿತ್ತ ಮಂತ್ರಿಯಾಗಿದ್ದು, ಪ್ರಧಾನ ಮಂತ್ರಿಯೂ ಆಗಿದ್ದು! ಅಡ್ವಾಣಿಯ ರಾಜೀನಾಮೆಯ ಬಿರುಗಾಳಿ ಮೋದಿ ಪ್ರಧಾನಿ ಗಾದಿಗೆ ಹತ್ತಿರವಾದ ಸುದ್ದಿಗೆ ಬೀಳಲಿದ್ದ ಕೆಟ್ಟ ದೃಷ್ಟಿಗೆ ದೃಷ್ಟಿಬೊಟ್ಟಾಯ್ತು ಅಷ್ಟೇ. ಅದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಅವರಿಂದಾಗಲಿಲ್ಲ. ಇರಲಿ. ಗಾಯವನ್ನು ಕೆರೆದಷ್ಟೂ ದೊಡ್ಡದಾಗುತ್ತದೆ ಹೊರತು ಗುಣವಾಗೋದಿಲ್ಲ. ಬಿಡಿ. […]

The Crusader Saint of Chalkewadi!

Sunday, June 9th, 2013

The unavoidable noise pollution that ensues during the election period for the Lok Sabha and the Vidhan Sabha does not touch the village of Chalkewadi, which remains unperturbed and unaffected by it.  – Chakravarthy Sulibele – Translated By Sunitha Off late, there has been an extensive debate about saints and seers. They have become easy […]