ವಿಭಾಗಗಳು

ಸುದ್ದಿಪತ್ರ


 

ಏನೇ ಹೇಳಿ

Tuesday, September 26th, 2017

ಒಳಗಿರುವ ಅವನೇ ಹೊರಗಿರುವ ನಾಯಿಗಳಿಗೆ ಬೊಗಳುವಂತೆ ಹೇಳಿದ್ದಾನೆ. ಶಾಂತಿ ಬಯಸಿ ನಾನು ಅವನೆಡೆಗೆ ಹೊರಳಲಿ ಅಂತ. ಏನೇ ಹೇಳಿ ಅವನು ಬಲು ಚತುರ.

‘ನರೇಂದ್ರನ ಬಟ್ಟೆ’ ಆರೋಪಗಳು ಹೊಸತಲ್ಲ!

Monday, September 25th, 2017

ನಿಮ್ಮನ್ನು ತಾತ್ತ್ವಿಕವಾಗಿ ವಿರೋಧಿಸಲಾಗದಿದ್ದರೆ ನೀವು ಧರಿಸುವ ಬಟ್ಟೆಯ ಕುರಿತಂತೆ ವ್ಯಂಗ್ಯದ ಮಾತುಗಳನ್ನಾಡುವುದು ದೇಶದ ಪ್ರಧಾನಿಯೊಂದಿಗೂ ನಾವು ನೋಡಿದ್ದೇವೆ. ಇಷ್ಟಕ್ಕೂ ಅಗತ್ಯ ಬಿದ್ದಾಗ ವೈಭವದ ಬಟ್ಟೆ ಧರಿಸಬಲ್ಲ ಸ್ವಾಮೀಜಿಗೆ ಅದು ಬೇಡವೆನಿಸಿದಾಗ ಕಿತ್ತೊಗೆಯುವ ಸಾಮಥ್ರ್ಯವೂ ಇತ್ತು. ಸನ್ಯಾಸವೆಂದರೆ ಬಟ್ಟೆಯೆಂಬ ಕಲ್ಪನೆಯೇ ಮೂರ್ಖತನದ್ದು. ಸನ್ಯಾಸವೆಂದರೆ ಅದನ್ನು ಕಿತ್ತೆಸೆಯಬಲ್ಲ ಮನಸ್ಥಿತಿ. ಅದು ವಿವೇಕಾನಂದರಿಗೆ ಜೋರಾಗಿಯೇ ಇತ್ತು. ಸರ್ವಧರ್ಮ ಸಮ್ಮೇಳನದ ಸಭೆಯಲ್ಲಿ ವಿವೇಕಾನಂದರ ಪ್ರಭಾವ ನಿಜಕ್ಕೂ ಇತ್ತಾ? ಅಥವಾ ಇದು ರಾಮಕೃಷ್ಣ ಆಶ್ರಮಗಳು ಮಾಡಿದ ಅನಗತ್ಯ ಪ್ರಚಾರವಾ? ಹಾಗಂತ ಒಂದಷ್ಟು ಜನ ಕ್ರಿಶ್ಚಿಯನ್ […]

Friday, September 22nd, 2017

ಏನೇ ಹೇಳಿ ಮನಸ್ಸು ಒಂಥರಾ ಮೋಡದ ಮುದ್ದೆ. ಯಾವಾಗ ಹರಳುಗಟ್ಟುತ್ತೋ, ಯಾವಾಗ ಚೆದುರಿಹೋಗುತ್ತೋ ದೇವರೇ ಬಲ್ಲ. ಮೋಡ ಬಿತ್ತನೆ ಮಾಡುವ ಪುಣ್ಯಾತ್ಮನಿಗಾಗಿ ಕಾಯಬೇಕಷ್ಟೇ!

Friday, September 22nd, 2017

ಏನೇ ಹೇಳಿ ನಾನು ಅವನನ್ನು ಅರಿಯುವಲ್ಲಿ ಸೋತಿರಬಹುದು, ಆದರೆ ಅವನಿಗೆ ನನ್ನ ಪರಿಚಯ ಚೆನ್ನಾಗಿದೆ…

Friday, September 22nd, 2017

ಕೊನೆಯ ಬಾರಿ ಅವನು ಬಾಗಿಲು ಬಡಿವಾಗ ನಾನೇ ಎದ್ದು ಬಾಗಿಲು ತೆಗೆವಂತಿದ್ದರೆ ಸಾಕು ಬದುಕು ಏನೇ ಹೇಳಿ

Friday, September 22nd, 2017

ನಲಿವು ಕನಸನ್ನು ಕಾಣಿಸಬಲ್ಲುದಷ್ಟೇ, ಏನೇ ಹೇಳಿ ನೋವಿನ ನಶೆಯೇ ಅಂತಮರ್ುಖಿಯಾಗಿಸೋದು

ಪಶ್ಚಿಮದ ಧೀ ಪ್ರಚೋದನೆಗೆ ನೂರಿಪ್ಪತ್ತೈದು ವರ್ಷ!

Sunday, September 17th, 2017

ವಿವೇಕಾನಂದರ ನೂರೈವತ್ತನೇ ಜಯಂತಿಯ ವೇಳೆಗೆ ಈ ಎಲ್ಲವನ್ನೂ ಜಗತ್ತಿಗೆ ಮುಟ್ಟಿಸುವಲ್ಲಿ ನಮಗೊಂದು ಅವಕಾಶವಿತ್ತು. ನಾವು ಕಳಕೊಂಡೆವು. ಭಾರತದ ಪ್ರಭಾವ ಪಶ್ಚಿಮವನ್ನೇ ಬದಲಾಯಿಸಿದೆ ಎಂದು ಸಾಬೀತು ಪಡಿಸುವ ಅವಕಾಶವಾಗಿತ್ತು ಅದು. ಕೈಚೆಲ್ಲಿಬಿಟ್ಟೆವು. ಹಾಗಂತ ಅನ್ಯಾಯವಾಗಿಲ್ಲ. ಅವರ ಚಿಕಾಗೋ ಭಾಷಣಕ್ಕೆ ನೂರಿಪ್ಪತ್ತೈದು ತುಂಬಿದೆ. ಹಾಗೆ ನೋಡಿದರೆ 1893 ಭಾರತದ ಪಾಲಿಗೆ ಬಲು ಮಹತ್ವದ ವರ್ಷ. ತಿಲಕರು ಗಣೇಶೋತ್ಸವಕ್ಕೆ ಸಾರ್ವಜನಿಕ ರೂಪ ಕೊಟ್ಟಿದ್ದು, ಅರವಿಂದರು ಬ್ರಿಟೀಷರ ಚಾಕರಿಯನ್ನು ಧಿಕ್ಕರಿಸಿ ಭಾರತಕ್ಕೆ ಮರಳಿದ್ದೂ ಅದೇ ವರ್ಷವೇ. ಚಿಕಾಗೋದಲ್ಲಿ ವಿವೇಕಾನಂದರ ಪ್ರಖ್ಯಾತ ಭಾಷಣ ನಡೆದದ್ದೂ […]

ಪರರ ಕೇಡು ಬಯಸಿದವರ ಅಂತ್ಯ ಬಲು ಕೆಟ್ಟದ್ದೇ!

Sunday, September 17th, 2017

ಈಗ ಲಂಡನ್ನಿನಲ್ಲಿಯೇ ಬಾಂಬು ಸಿಡಿದಿದೆ. ವಲಸೆ ಬಂದವರಿಂದಾಗಿಯೇ ಕಳೆದ ವರ್ಷದ ಬ್ರುಸೆಲ್ಸ್ ದಾಳಿ ಮತ್ತು 2015 ರಲ್ಲಿ ಜರ್ಮನಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆದಿದ್ದನ್ನು ಮರೆಯುವುದು ಹೇಗೆ? ಅದರದ್ದೇ ಮುಂದುವರಿದ ಭಾಗವಾಗಿ ಪಾರ್ಸನ್ ಗ್ರೀನ್ ಟ್ಯೂಬ್ ಟ್ರೇನ್ನಲ್ಲಿ ದಾಳಿಯಾಗಿದೆ. ಹೊರಗಿನಿಂದ ಬಂದವರು ಎಷ್ಟಾದರೂ ಹೊರಗಿನವರೇ. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರಲೇಬೇಕು ಎನ್ನುವುದು ವಿಜ್ಞಾನದ ನಿಯಮ. ಆಧ್ಯಾತ್ಮವೂ ಒಂದಲ್ಲ ಒಂದು ರೀತಿಯಲ್ಲಿ ಅದನ್ನೇ ಹೇಳುತ್ತದೆ. ಕರ್ಮ ಸಿದ್ಧಾಂತದ ಅಡಿಪಾಯವೇ ಅದು. ಇಲ್ಲಿ ಕ್ರಿಯೆ ಮಾತ್ರವಲ್ಲ, ಆಲೋಚನೆಗೂ ಪ್ರತಿಕ್ರಿಯೆಯಿರುತ್ತದೆ. […]

ನಾಡಿಗಾಗಿ ಬದುಕುವ ಪ್ರೇರಣೆ ನೀಡುವ ಸಾಹಿತ್ಯ ಹಬ್ಬ!

Monday, September 4th, 2017

ಬೆಳಗಾವಿಯಲ್ಲಿ ಸಮಾರೋಪ ನಡೆಸುವುದಕ್ಕೊಂದು ಮುಖ್ಯ ಕಾರಣವಿದೆ. ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದೇಶ ಸುತ್ತಾಡುತ್ತಿರುವಾಗ ಅವರು ಬೆಳಗಾವಿಗೆ ಬಂದು ಹನ್ನೆರಡು ದಿನ ಇದ್ದರು. ಇಲ್ಲಿರುವಾಗಲೇ ಅವರು ಅಷ್ಟಾಧ್ಯಾಯಿಯ ಮೇಲೆ ತಮ್ಮ ಪಾಂಡಿತ್ಯವನ್ನು ಸಾಬೀತುಪಡಿಸಿದ್ದು. ಇದೇ ಬೆಳಗಾವಿಯಲ್ಲಿ ನೂರು ವರ್ಷಗಳಷ್ಟು ಹಳೆಯದಾದ ಸರಸ್ವತಿ ವಾಚನಾಲಯವಿದೆ. ಸಾವರ್ಕರರೂ ಭೇಟಿ ಕೊಟ್ಟಂತಹ ವಾಚನಾಲಯವಿದು. ಇವೆಲ್ಲ ಕನ್ನಡ ನಾಡಿನ ಆಸ್ತಿಗಳು. ಇವೆಲ್ಲವನ್ನೂ ನಾಡಿಗೆ ಪ್ರಚುರ ಪಡಿಸಬೇಕಾದ ಕರ್ತವ್ಯವೂ ನಮ್ಮ ಹೆಗಲಮೇಲಿತ್ತು. ಹಾಗೆಂದೇ ಈ ಸ್ಥಳವನ್ನು ಆಯ್ದುಕೊಂಡು ಸಾಹಿತ್ಯ ಸಮ್ಮೇಳನದ ಸಮಾರೋಪದ ಕಾರ್ಯಕ್ರಮಕ್ಕೆ ಯೋಜನೆ ಮಾಡಲಾಯ್ತು. […]

ಭಾರತವನ್ನು ತೆಪ್ಪಗಾಗಿಸಲು ಚೀನಾದ ಛದ್ಮ ಯುದ್ಧ!

Monday, August 28th, 2017

ಚೀನಾ ಬಾಂಧವ್ಯಗಳನ್ನು ಲೆಕ್ಕಕ್ಕಿಟ್ಟುಕೊಳ್ಳುವುದೇ ಇಲ್ಲ. ಅದಕ್ಕೇನಿದ್ದರೂ ತನ್ನ ಗಡಿ ವಿಸ್ತರಣೆಯಾಗುತ್ತಿರಬೇಕಷ್ಟೇ. ಭಾರತದ ಕಮ್ಯುನಿಷ್ಟರ ಬುದ್ಧಿಯೂ ಅದೇ ಅಲ್ಲವೇ? ತಮಗೆ ಪೂರಕವೆನಿಸಿದರೆ ಪರಿಸರ ಎನ್ನಿ, ಬುಡುಕಟ್ಟು ಜನರ ನಂಬಿಕೆ ಎನ್ನಿ. ತಮಗೆ ಬೇಡವಾದಾಗ ಅವುಗಳನ್ನೇ ಮೂಢನಂಬಿಕೆ ಎಂದುಬಿಡಿ. ಒಟ್ಟಿನಲ್ಲಿ ಅಡಿಪಾಯ ವಿಸ್ತರಿಸಿಕೊಳ್ಳುತ್ತ ಸಾಗಬೇಕು. ಅನೇಕ ಬಾರಿ ಟೌನ್ಹಾಲ್ ಮುಂದೆ ಪ್ರತಿಭಟನೆಯ ನಾಟಕ ಮಾಡುವ ಎಡಚರನ್ನು ಕಂಡಾಗ ಆಶ್ಚರ್ಯವೆನಿಸುತ್ತದೆ. ಪ್ರಜ್ಞಾವಂತ ಭಾರತೀಯರನ್ನು ಕಳೆದ ಆರೇಳು ದಶಕಗಳಿಂದ ಮೋಸ ಮಾಡುತ್ತಲೇ ಇದ್ದಾರಲ್ಲ ಅಂತ. ಬಹುಶಃ ಸಾಮಾಜಿಕ ಜಾಲತಾಣಗಳು ಕ್ರಿಯಾಶೀಲವಾಗಿರದೇ ಇದ್ದರೆ ಈಗಲೂ […]