ವಿಭಾಗಗಳು

ಸುದ್ದಿಪತ್ರ


 

ದಂಗೆಯಲ್ಲಿ ಪಾಲ್ಗೊಂಡ್ರೆ ಸ್ವರ್ಗ ಖಾತ್ರಿನಾ?!

Saturday, April 4th, 2020

ಇಡಿಯ ಈ ಪ್ರಕರಣದಲ್ಲಿ ನಾವು ಸೋತಿದ್ದೆಲ್ಲಿ ಎಂಬುದು ವಿಶ್ಲೇಷಣೆಗೆ ಒಳಗಾಗಲೇಬೇಕು. ಮೊದಲನೆಯದಾಗಿ ಶಾಹೀನ್ಬಾಗ್ನಲ್ಲಿ ಪ್ರತಿಭಟನೆ ನಡೆಯುವಾಗ ಕೇಂದ್ರದಲ್ಲಿರುವ ಮೋದಿ ಸಕರ್ಾರ ಅದನ್ನು ತೀವ್ರವಾಗಿ ಪರಿಗಣಿಸಲಿಲ್ಲ. ಹೀಗೆ ಮುಸಲ್ಮಾನ ಟೋಳಿ ಬೀದಿಯಲ್ಲಿ ಕುಳಿತಿದ್ದರೆ ಬಹುಸಂಖ್ಯಾತ ಹಿಂದೂಗಳು ರೊಚ್ಚಿಗೇಳುತ್ತಾರೆಂದು ಅವರು ಭಾವಿಸಿದ್ದರು. ಚುನಾವಣೆಯಲ್ಲಿ ಅದರ ಬಲುದೊಡ್ಡ ಪ್ರಭಾವವೇನೂ ಗೋಚರಿಸಿದಂತೆ ಕಾಣಲಿಲ್ಲ. ಮುಸಲ್ಮಾನರು ಆತನನ್ನು ಸುತ್ತುವರೆದುಬಿಟ್ಟಿದ್ದರು. ಹೊಡೆಯುವುದೂ ಆರಂಭವಾಗಿಬಿಟ್ಟಿತ್ತು. ಇನ್ನೇನು ದುರುಳ ರಾಕ್ಷಸರ ಕೈಲಿ ಸಿಕ್ಕು ಸತ್ತೇ ಹೋಗಬೇಕು ಎನ್ನುವಾಗ ಜೇಬಿನಿಂದ ಟೋಪಿ ತೆಗೆದು ಅವರೆದುರು ಹಿಡಿದ ಆ ವ್ಯಕ್ತಿ ‘ನನ್ನ […]

ಟ್ರಂಪ್-ಮೋದಿ ಹೊಸದೊಂದು ಮೋಡಿ!

Saturday, April 4th, 2020

ಯಾರಿಗೂ ಅನುಮಾನವೇ ಇಲ್ಲ. ಟ್ರಂಪ್ನ ಗೆಲುವಿಗೆ ಅಮೇರಿಕಾದಲ್ಲಿರುವ ಭಾರತೀಯರ ಸಹಕಾರ ಅತ್ಯಗತ್ಯ. ಈ ಹಿಂದೆ ಮೋದಿ ಅಮೇರಿಕಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಅದ್ದೂರಿಯಾಗಿ ಜರುಗಿದ ಹೌಡಿ ಮೋದಿ ಕಾರ್ಯಕ್ರಮ ಟ್ರಂಪ್ರ ಗೆಲುವಿಗೆ ಹೊಸ ರೂಪುಕೊಟ್ಟಿದೆ. ಏನೇ ಹೇಳಿ ಅಮೇರಿಕಾ ಯಾವಾಗಲೂ ದೊಡ್ಡಣ್ಣನೇ. ಭಾರತಕ್ಕೆ ಟ್ರಂಪ್ ಬರುವುದು ಖುಷಿಯಾದ ಸಂಗತಿ ಎಂದು ಸಂಭ್ರಮಿಸುವವರ ನಡುವೆಯೇ ಅದನ್ನು ವಿರೋಧಿಸುವ ಜನರಿಗೂ ಕೊರತೆ ಇಲ್ಲ. ವಿರೋಧಿಸುವವರ ಕಾರಣಗಳು ಬಲು ಬಾಲಿಶವಾದ್ದು. ಅವರಿಗೆ ಟ್ರಂಪ್ ಮತ್ತು ಮೋದಿ ಜೊತೆಯಲ್ಲಿರುವುದರ ಅರ್ಥ ಮೋದಿ ಜಾಗತಿಕ […]

ಕರೋನಾ ಜೈವಿಕ ಅಸ್ತ್ರವೇ?!

Friday, April 3rd, 2020

ಮನುಷ್ಯತ್ವ ಎಲ್ಲಕ್ಕಿಂತಲೂ ದೊಡ್ಡದ್ದು ಎಂಬುದನ್ನು ಮರೆತಾಗ ಇಂತಹ ಹೀನಕೃತ್ಯಕ್ಕೆ ಕೈ ಹಾಕುತ್ತೇವೆ. ಕ್ಷಣಿಕವಾದ ಸಾರ್ವಭೌಮತೆಗೆ ಬಲಿಯಾಗಿ ಹೃದಯದೊಳಗೆ ಇರಬೇಕಾಗಿದ್ದ ಮಾರ್ದವತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಇಂತಹ ಕೆಟ್ಟ ಜನರಿಗಿಂತಲೂ ಕರೋನಾ ವೈರಸ್ ಸಾವಿರಪಾಲು ಒಳಿತು ಎನ್ನುವುದು ಸರಿಯಾಗುತ್ತದೇನೋ, ಕ್ಷಮಿಸಿಬಿಡಿ! ದೇಶ-ದೇಶಗಳ ನಡುವಿನ ಕದನಗಳು ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲದು. ಇತ್ತೀಚಿನ ದಿನಗಳಲ್ಲಿ ಮುಕ್ತ ಯುದ್ಧಕ್ಕೆ ಯಾರು ಇಚ್ಛೆ ತೋರದಿದ್ದರೂ ಒಳಗಿಂದೊಳಗೇ ಕತ್ತಿ ಮಸಿಯುತ್ತಾ ಭಿನ್ನ-ಭಿನ್ನ ರೂಪಗಳಲ್ಲಿ ಮತ್ತೊಂದು ರಾಷ್ಟ್ರವನ್ನು ಮುಗಿಸಿಬಿಡಲು ಹಾತೊರೆಯುತ್ತಲೇ ಇರುತ್ತಾರೆ. ಖಂಡಿತವಾಗಿಯೂ ನಾನು ಭಾರತ-ಪಾಕಿಸ್ತಾನದ ಯುದ್ಧದ ಬಗ್ಗೆ […]

ದೆಹಲಿ ದರ್ಬಾರು!

Friday, April 3rd, 2020

ನರೇಂದ್ರಮೋದಿ ಪ್ರಧಾನಿಯಾದಾಗ ಕಾಂಗ್ರೆಸ್ ಪೂಜಕ ಮಾಧ್ಯಮಗಳೆಲ್ಲಾ ಶೇಕಡಾವಾರು ವೋಟುಗಳನ್ನು ಲೆಕ್ಕ ಹಾಕುವುದರಲ್ಲೇ ಮಜ್ಞವಾಗಿಬಿಟ್ಟಿದ್ದವು. ಕಾಂಗ್ರೆಸ್ಸು ಪಡೆದ ಒಟ್ಟಾರೆ ವೋಟುಗಳು ಬಿಜೆಪಿಯ ಒಟ್ಟು ವೋಟುಗಳಿಗಿಂತ ಬಹಳ ಕಡಿಮೆಯೇನಲ್ಲ ಎಂಬುದೇ ಅವರ ವಾದವಾಗಿತ್ತು. ಹೀಗಾಗಿ ಮೋದಿಯ ಗೆಲುವು ಗೆಲುವೇ ಅಲ್ಲ ಎಂಬುದು ಅವರ ಅಂತಿಮ ತೀಪರ್ು. ಚುನಾವಣೆಗಳ ಫಲಿತಾಂಶದ ವಿಶ್ಲೇಷಣೆ ಬಲು ವಿಚಿತ್ರವಾಗಿರುತ್ತದೆ. ಕೆಲವೊಮ್ಮೆ ಗೆದ್ದವರು ವಿಶ್ಲೇಷಣೆಯ ಹೊತ್ತಲ್ಲಿ ಸೋತುಹೋಗುತ್ತಾರೆ. ಇನ್ನೂ ಕೆಲವೊಮ್ಮೆ ಸೋತು ಸುಣ್ಣವಾದವರು ಭಿನ್ನ-ಭಿನ್ನ ವಿಶ್ಲೇಷಣಾ ತಜ್ಞರ ನೆರವು ಪಡೆದುಕೊಂಡು ಗೆದ್ದೆನೆಂದು ಬೀಗುತ್ತಾರೆ. ಇದು ಈಗಿನ ಕಥೆಯಲ್ಲ. […]

ಕಾಶ್ಮೀರದ ಪಂಡಿತರು ಉಳಿದಿದ್ದು ಸಿಖ್ಖರ ಗುರುವಿನಿಂದ!

Friday, April 3rd, 2020

ಪಂಡಿತರೆಂದರೆ ಶಿಕ್ಷಿತರು ಎಂದೇ ಅರ್ಥ. ಟೆಂಟುಗಳಲ್ಲಿ ಬದುಕು ಅಸಹನೀಯವಾಗಿದ್ದರೂ ಮನೆಯ ಹಿರಿಯರು ಮಕ್ಕಳಿಗೆ ಪಾಠ ಮಾಡುವುದನ್ನು ಮರೆಯಲಿಲ್ಲ. ಓದಿಕೊಂಡವರು ಆ ಮಕ್ಕಳಿಗೆಂದೇ ಪುಟ್ಟ ಶಾಲೆಯನ್ನು ತೆರೆದು ಮುಂದಿನ ಪೀಳಿಗೆಯ ಪಂಡಿತತನಕ್ಕೆ ಕೊರತೆಯಾಗದಂತೆ ನೋಡಿಕೊಂಡರು. ಹೀಗಾಗಿಯೇ ಎಲ್ಲವನ್ನೂ ಕಳಕೊಂಡಮೇಲೂ ದೂರದೂರುಗಳಿಗೆ ಹೋಗಿ ನಾವು ಅಧ್ಯಯನ ಮುಂದುವರಿಸಿದ್ದೇವೆ’ ಎಂದ. ಸುಮಾರು 25 ವರ್ಷಗಳ ಹಿಂದಿನ ಮಾತು. ನಾನು ವಿದ್ಯಾಥರ್ಿ ನಿಲಯದಲ್ಲಿದ್ದಾಗ ನನ್ನ ಜೊತೆಗಾರ ಸೂರಜ್ ಹಿಂದಿ ಬಿಟ್ಟರೆ ಬೇರೆ ಮಾತನಾಡುತ್ತಿರಲಿಲ್ಲ. ಇಂಗ್ಲೀಷು ಅವನದ್ದು ಚೆನ್ನಾಗಿತ್ತು. ಹೀಗೇ ಒಮ್ಮೆ ಕುಳಿತು ಅವನ […]

ಕೊಲ್ಲುವವರಿಗೆ ಆಸರೆಯಾದವರು ಕೊಲೆಗಡುಕರೇ!

Friday, April 3rd, 2020

ಕಾಶ್ಮೀರದಲ್ಲಿ 90ರ ದಶಕದ ಮೊದಲ ರಕ್ತ ಹೀರಿದ್ದು ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್ನವರೇ. ಮುಸಲ್ಮಾನರ ನಡುವೆ ಸಾಕಷ್ಟು ಖ್ಯಾತವಾಗಿದ್ದ ಮತ್ತು ಅವರ ಏಳ್ಗೆಗೆ ಸಾಕಷ್ಟು ಶ್ರಮಿಸಿದ್ದ ವಕೀಲರೂ ಆಗಿದ್ದ ಶ್ರೀ ಟೀಕಾಲಾಲ್ ಟಪ್ಲು ಆ ಮೊದಲ ಬಲಿಯಾಗಿಬಿಟ್ಟರು. ಅವರದ್ದು ಒಂದೇ ತಪ್ಪು, ಅವರು ಹಿಂದೂವಾಗಿದ್ದರು ಎನ್ನುವುದು ಅಷ್ಟೇ! ದೆಹಲಿಯ ಚುನಾವಣೆಗಳು ಮುಗಿದಿವೆ. ಶಹೀನ್ಬಾಗ್ ಸದ್ದು ಬಹುಶಃ ಇನ್ನು ಮುಂದೆ ಕೇಳಲಾರದು. ಈ ಲೇಖನ ಓದುವ ವೇಳೆಗೆ ಅಲ್ಲಿನ ಪ್ರತಿಭಟನೆ ಸೂತ್ರಧಾರ ಕೇಜ್ರಿವಾಲರಿಗೆ ಲಾಭವಾಗಲಿದೆಯೋ ಅಥವಾ ನಷ್ಟ ತಂದುಕೊಡಲಿದೆಯೋ ಎಂಬುದು […]

ಪ್ರತಿಭಟಿಸುತ್ತಲೇ ಪ್ರಪಾತಕ್ಕೆ ಬಿದ್ದವರು!

Friday, April 3rd, 2020

ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗದೇ ದೆಹಲಿಗೆ ಪ್ರತಿಭಟನಾಕಾರರು ಹೊರೆಯಾಗಲಾರಂಭಿಸಿದರು. ರಸ್ತೆಗಳು ಅಡ್ಡಗಟ್ಟಲ್ಪಟ್ಟಿದ್ದರಿಂದ ಕಾಖರ್ಾನೆಗೆ ಹೋಗುವ, ಕಛೇರಿಗೆ ಹೋಗುವ, ಶಾಲೆಗೆ ಹೋಗುವ ಮಕ್ಕಳು ಕಿರಿಕಿರಿ ಅನುಭವಿಸಲಾರಂಭಿಸಿದರು. ನಿಧಾನವಾಗಿ ದೆಹಲಿಯ ಒಟ್ಟಾರೆ ಮನಸ್ಥಿತಿ ಈ ಪ್ರತಿಭಟನಾಕಾರರ ವಿರುದ್ಧವೇ ರೂಪುಗೊಳ್ಳುತ್ತಿರುವುದು ಸ್ಪಷ್ಟವಾಗಿ ಕಂಡುಬಂತು. ಸಿಎಎ ಪ್ರತಿಭಟನೆ ಮೇಲ್ನೋಟಕ್ಕೆ ಮುಸಲ್ಮಾನರನ್ನು ಒಗ್ಗೂಡಿಸಿತೆಂದು ಕಂಡರೂ ಆಂತರಿಕವಾಗಿ ಹಿಂದೂಗಳನ್ನು ಹಿಂದೆಂದಿಗಿಂತಲೂ ಬಲವಾಗಿ ಜೋಡಿಸಿಬಿಟ್ಟಿದೆ. ಎಲ್ಲೆಡೆ ಮೌನವಾಗಿಯೇ ಹಿಂದೂಗಳು ಒಟ್ಟುಗೂಡುತ್ತಿರುವ ಆತಂಕವಾದಿಗಳ ವಿರುದ್ಧ ಕುದಿಯುತ್ತಿದ್ದಾರೆ. ಮತ್ತು ಇಷ್ಟು ದಿನ ಸೆಕ್ಯುಲರಿಸಂನ ಸೋಗಿನಲ್ಲಿ ಹಿಂದುತ್ವದ ವಿರೋಧ ಮಾಡುತ್ತಿದ್ದವರೆಲ್ಲರೂ ಈಗ ಒಂದೇ ಛತ್ರದಡಿ […]

ಅಟ್ಟಿಸಿಕೊಂಡು ಬಡಿಯುತ್ತೆ ಸಾಮಾಜಿಕ ಜಾಲತಾಣಗಳು!

Friday, April 3rd, 2020

2013ರಲ್ಲಿ ಮೋದಿಯನ್ನು ಪ್ರಧಾನಿ ಅಭ್ಯಥರ್ಿ ಎಂದು ಘೋಷಿಸಿದಾಗ ಕಾಂಗ್ರೆಸ್ಸು ಹಿಂದೆಂದೂ ಅನುಭವಿಸದಷ್ಟು ತಳಮಳವನ್ನು ಕಂಡಿತ್ತು. ಅಡ್ವಾಣಿಯೇ ಅಭ್ಯಥರ್ಿಯಾಗಿ ರಾಹುಲ್ ಸಲೀಸಾಗಿ ಗದ್ದುಗೆ ಏರಿಬಿಡುತ್ತಾರೆ ಎಂಬ ಅವರ ಭರವಸೆ ದಿಕ್ಕು ತಪ್ಪಿತ್ತು. ಆದರೆ ಮೋದಿ ಗುಜರಾತಿಗೆ ಮಾತ್ರ ಸೀಮಿತವಾದವರು, ಹೆಚ್ಚೆಂದರೆ ಅಲ್ಲಿಂದಾಚೆಗೆ ಒಂದಷ್ಟು ಕಟ್ಟರ್ ಹಿಂದುವಾದಿಗಳು ಮಾತ್ರ ಅವರನ್ನು ಬಯಸುತ್ತಾರೆ ಎಂದರಿತಿದ್ದ ಕಾಂಗ್ರೆಸ್ಸಿಗೆ ಹೋರಾಟ ಕಠಿಣವೇನೂ ಆಗಿರಲಿಲ್ಲ. ಇದು ಸಾಮಾಜಿಕ ಜಾಲತಾಣಗಳ ಯುಗ. ತನ್ನ ವಿಚಾರ ಪ್ರಕಟವಾಗಲು ಯಾರು ಯಾರ ಮಜರ್ಿಗೂ ಕಾಯಬೇಕಿಲ್ಲ. ಅವನ ಫೇಸ್ಬುಕ್ಕು, ಅವನಿಚ್ಛೆ. ವಾಕ್ಸ್ವಾತಂತ್ರ್ಯವನ್ನು […]

ಭಾಗ್ಯಗಳ ನೆಪದಲ್ಲಿ ಬಲಹೀನವಾಯ್ತು ರಾಜ್ಯ!

Wednesday, April 1st, 2020

ಈ ವರ್ಷದ ರಾಜ್ಯದ ಒಟ್ಟಾರೆ ತೆರಿಗೆ ಸಂಗ್ರಹದ ಗುರಿ ಒಂದು ಲಕ್ಷ ಆರುಸಾವಿರ ಕೋಟಿಯಷ್ಟಿದ್ದು ಅದನ್ನು ತಲುಪುವುದು ಬಹುತೇಕ ಅಸಾಧ್ಯವೆನ್ನುವಂತಹ ಸ್ಥಿತಿ ಈಗಲೇ ನಿಮರ್ಾಣವಾಗಿದೆ. ಕೇಂದ್ರದ ಅನುದಾನ ಸಮರ್ಪಕವಾಗಿ ಬರಲಿಲ್ಲವೆಂದರೆ ಕನರ್ಾಟಕದ ಪಾಲಿಗೆ ಮುಂಬರುವ ದಿನಗಳು ಸವಾಲಿನದ್ದಾಗಿರುವುದಂತೂ ಖಚಿತ. 15ನೇ ಹಣಕಾಸು ಆಯೋಗದ ಬಳಿ ಕನರ್ಾಟಕ ಸುಮಾರು ಒಂದೂವರೆ ಲಕ್ಷಕೋಟಿಯಷ್ಟು ಅನುದಾನದ ಬೇಡಿಕೆಯಿಟ್ಟಿದೆ ದಶಕದ ಹಿಂದೆ ಕನರ್ಾಟಕದ ಆಥರ್ಿಕ ಸ್ಥಿತಿ ಅಕ್ಕಪಕ್ಕದ ರಾಜ್ಯಗಳು ಹೊಟ್ಟೆ ಉರಿಸಿಕೊಳ್ಳುವಷ್ಟು ಬಲವಾಗಿತ್ತು. ತೆರಿಗೆ ಸಂಗ್ರಹವಾಗಲಿ, ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತವಾಗಿ ಬಳಸುವ […]

ಸೋನಿಯಾ ಇಟಲಿಯಲ್ಲೂ ನುಸುಳುಕೋರರನ್ನು ಹೊರದಬ್ಬುತ್ತಿದ್ದಾರೆ!

Wednesday, April 1st, 2020

ವಿರೋಧಿಗಳ ಆತ್ಮಸ್ಥೈರ್ಯ ದಿನೇ ದಿನೇ ಕುಸಿಯುತ್ತಿರುವುದು ನಿಚ್ಚಳವಾಗಿ ಕಾಣುತ್ತಿದೆ. ಆರಂಭದಲ್ಲಿ ಇದನ್ನು ಹಿಂದೂ, ಮುಸ್ಲೀಂ ಬೌದ್ಧ, ಜೈನ, ಸಿಖ್ಖರೆಲ್ಲರ ಹೋರಾಟವನ್ನಾಗಿ ಬಿಂಬಿಸಲು ಅವರು ಹೆಣಗಾಡುತ್ತಿದ್ದರು. ಆದರೆ ಕಾಲ ಕಳೆದಂತೆ ಇದು ಇಡಿಯ ಸಮಾಜದ ಹೋರಾಟವಲ್ಲವೆಂದು ಜಗತ್ತಿಗೆ ಅರಿವಾಗುವ ಹಂತಕ್ಕೆ ಬಂದಾಗ ತಿರಂಗಾ ಹಿಡಿದು ಬೀದಿಗೆ ಬರಲಾರಂಭಿಸಿದರು. ಆ ಮೂಲಕವಾದರೂ ರಾಷ್ಟ್ರವಾದಿಗಳನ್ನು ಸೆಳೆಯುವ ಪ್ರಯತ್ನ ಅದಾಗಿತ್ತು. ಮಳೆ ನಿಂತರೂ ಹನಿಯುವುದು ಮಾತ್ರ ನಿಲ್ಲುತ್ತಲೇ ಇಲ್ಲ. ಸಿಎಎ ಪ್ರತಿಭಟನೆಗಳು ನಡೆಯುತ್ತಲೇ ಇವೆ. ವಿರೋಧದ ಕೂಗು ನಿಧಾನವಾಗಿ ಕಡಿಮೆಯಾಗುತ್ತಿದ್ದರೆ ಜಾಗೃತಿಯ ನೆಪದಲ್ಲಿ […]