ವಿಭಾಗಗಳು

ಸುದ್ದಿಪತ್ರ

ಸಾಂಸ್ಕಾರ ಭಾರತಿ ~ ಏನು, ಹೇಗೆ?

ಮಾನವನ ಬದುಕು ಸೂಕ್ಷ್ಮ ಸಂವೇದನಗಳ ಆಗರ. ಹೀಗಾಗಿಯೇ ಇತರರ ನೋವು- ನಲಿವುಗಳಲ್ಲಿ ಪಾಲುದಾರರಾಗುವುದಕ್ಕೆ ನಮಗೆ ಸಾಧ್ಯವಾಗುತ್ತದೆ. ಬಹುಶಃ ಈ ಸಂವೇದನೆಗಳೇ ಇತರರ ನೋವಿಗೆ ಕುಣಿಯುವ ಕ್ರೌರ್ಯವನ್ನೂ ಹುಟ್ಟುಹಾಕುತ್ತವೆ. ನಮ್ಮೊಳಗಿನ ಭಾವನೆಗಳು ಸದಾ ಪವಿತ್ರವಾಗಿರುವಂತೆ ಕಾಪಾಡಿಕೊಳ್ಳಬೇಕು. ಅದು ಕಲುಷಿತವಾಗದಂತೆ ನಿರಂತರ ಪ್ರಯತ್ನ ನಡೆಸುತ್ತಿರಬೇಕು. ಆಗಲೇ ಶಾಶ್ವತ ಸುಖ ನಮ್ಮದಾಗುವುದು.
ಹೌದು. ನಮಗೆ ಬೇಕಿರುವುದು ಶಾಶ್ವತ ಸುಖವೇ. ಭಾರತೀಯತೆಯ ಹಾದಿ ತಪ್ಪಿದವರು ಮಾತ್ರ ತಾತ್ಕಾಲಿಕ ಸುಖದೊಂದಿಗೆ ತೃಪ್ತಿ ಪಡೆಯುತ್ತಾರೆ. ನಿಜವಾಗಿ ಶಾಶ್ವತ ಸುಖವನ್ನು ತನ್ನದಾಗಿಸಿಕೊಳ್ಳದವ ಸುಖದ ಸವಿಯನ್ನುಂಡೇ ಇಲ್ಲ ಎಂದರ್ಥ. ಹುಟ್ಟು- ಸಾವು- ಮರು ಹುಟ್ಟುಗಳ ಈ ಚಕ್ರ ತಿರುಗುತ್ತಿರುವಾಗ ಅನೇಕ ಬಾರಿ ರಸ್ತೆ ಸುಗಮವಾಗಿದ್ದಿರಬಹುದು. ಅದು ಸುಖಮಯ ಎನ್ನುವ ವೇಳೆಗೆ ಹಳ್ಳಕೊಳ್ಳಗಳಲ್ಲಿ ಚಕ್ರ ಚಲಿಸಬೇಕಾಗಲೂ ಬಹುದು. ಆದರೆ… ಈ ಚಕ್ರದ ಜಂಜಡದಿಂದ ಮುಕ್ತನಾಗಿಬಿಟ್ಟವ ಎಂದೆಂದಿಗೂ ಆನಂದದ ಸಾಗರದಲ್ಲಿಯೇ ಇರುವವನಾಗುತ್ತಾನೆಯಲ್ಲವೆ? ಇಂತಹ ಆನಂದ ಬೇಕೆನಿಸುವುದಿಲ್ಲವೇನು?

ಯಾರಿಗೆ ಬೇಡ ಹೇಳಿ? ದೇಹಾಲಸ್ಯವಾದಾಗ ವಿಶ್ರಾಂತಿ, ನಾಲ್ಕಾರು ಜನ ಜೊತೆಗೂಡಿದಾಗ ವಿನೋದ, ಸೋತು ಬಸವಳಿದಾಗ ಆತ್ಮವಿಶ್ವಾಸ- ಇವೆಲ್ಲ ಎಲ್ಲರಿಗೂ ಬೇಕಾದವುಗಳೇ. ಇವೆಲ್ಲವುಗಳನ್ನು ನೀಡುತ್ತ, ಮನಸ್ಸನ್ನು ಉಲ್ಲಸಿತಗೊಳಿಸುತ್ತ ಸದಾನಂದದೆಡೆಗೆ, ಮುಕ್ತಿಯೆಡೆಗೆ ನಮ್ಮನ್ನೊಯ್ಯುವ ಸಾಧನ ಬೇಕಲ್ಲವೆ? ನಮ್ಮ ಪೂರ್ವಜರು ಲಲಿತಕಲೆಗಳಲ್ಲಿ ಆ ಸಾಮರ್ಥ್ಯವನ್ನು ಗುರುತಿಸಿದರು. ಮನಸ್ಸಿಗೆ ಶಾಂತಿ, ವಿನೋದ, ವಿಶ್ವಾಸ, ಕೊನೆಗೆ ಮುಕ್ತಿ- ಎಲ್ಲವನ್ನೂ ಕೊಡಬಲ್ಲ ಸಾಮರ್ಥ್ಯ ಕಲೆಗಿರುವುದನ್ನು ಗುರುತಿಸಿ ಅನುಭವಿಸಿದರು.

ಕಲೆ ಎಲ್ಲವನ್ನೂ ಮರೆಸಬಲ್ಲದು. ನೋವನ್ನು, ದುಃಖವನ್ನು, ದ್ವೇಷವನ್ನು, ಉಚ್ಚ- ನೀಚ ಭಾವವನ್ನು, ಕೊನೆಗೆ ತನ್ನನ್ನೂ! ತನ್ನ ತಾನು ಮರೆತು ಸಮಷ್ಟಿಯೊಳಗೆ ಒಂದಾಗುವುದಿದೆಯಲ್ಲ, ಅದೇ ಯೋಗಿಗಳು ಸಾಧಿಸುವ ಸಮಾಧಿ ಸ್ಥಿತಿ. ಕಲೆ ಅಂತಹ ಶ್ರೇಷ್ಠ ಸ್ಥಿತಿಗೆ ನಮ್ಮನ್ನೊಯ್ದು ನಿಲ್ಲಿಸಿಬಿಡುತ್ತದೆ. ಕಲಾರಾಧಕನಲ್ಲಿ, ಕಲಾಪೋಷಕನಲ್ಲಿ ಈ ರೀತಿಯ ಭಾವ ಜಾಗೃತಗೊಳಿಸಿ ಅದು ಮುಟ್ಟುವ ಗುರಿ ಅನನ್ಯವಾದುದು. ಮಾನವರ ಹೃದಯಗಳನ್ನು ಮೀಟಿ ಒಂದೇ ನಾದ ಹೊರಡಿಸಿ ಏಕಾತ್ಮ ಮಾನವತೆ ಸಾಧಿಸುವ ಸಾಮರ್ಥ್ಯ ಇರುವುದು ಕಲೆಗೆ ಮಾತ್ರ. ಅದನ್ನು ’ಸಂಸ್ಕಾರ ಭಾರತಿ’ ಸ್ಪಷ್ಟವಾಗಿ ಗುರುತಿಸಿತು.

ಭಾರತೀಯ ಚಿಂತನೆಗಳು ಅತ್ಯಂತ ಗಾಢವಾಗಿರುವಂಥವು. ನಾವು ಜೀವನವನ್ನು ನೋಡುವ ದೃಉಷ್ಟಿ ಕೋನವೂ ಬೇರೆಯೇ. ಇಲ್ಲಿ ಮನುಷ್ಯ ಎಂದರೆ ಪಾಶ್ಚಿಮತ್ಯರು ತಿಳಿಯುವಂತೆ ಪ್ರಾಣಿಯಲ್ಲ. ಮಾರಾಟದ ವಸ್ತುವೋ ಗುಲಾಮನೋ ಅಲ್ಲ. ಭೋಗದ ಹಿಂದೋಡುವವನೂ ಅಲ್ಲ. ಅವನು ತನ್ನ ಸ್ವರೂಪ ಅರಿಯಲು ಪ್ರಯತ್ನಿಸುತ್ತಿರುವ ಸಿದ್ಧ. ಸಾಕ್ಷಾತ್ ಬ್ರಹ್ಮ! ಹೀಗಾಗಿಯೇ ಆತ ತನ್ನನ್ನು ವೀಣೆ ಎಂದು ಕರೆದುಕೊಳ್ಳುತ್ತಾನೆ. ಭಗವಂತನೇ ವೈಣಿಕ ಎನ್ನುತ್ತಾನೆ. ತಾನು ಸ್ವರವಾಗಿ, ಸಮಜವನ್ನು ಸಂಗೀತ ಎನ್ನುವ ಮೂಲಕ ಸಮಾಜದ ಅಂಗ ತಾನು ಎಂಬುದನ್ನು ಸಾರುತ್ತಾನೆ. ಹಾಗೆ ಹೇಳುವುದಷ್ಟೆ ಅಲ್ಲ, ಅದನ್ನು ಕೃತಿ ರೂಪಕ್ಕಿಳಿಸುವ ಅವನ ಪ್ರಯತ್ನವೂ ನಿರಂತರವೇ. ತನ್ನ ಜೀವನವನ್ನು ಅವನು ಸಂಸ್ಕಾರದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತಾನೆ. ತನ್ನನ್ನು ತಾನು ತಿದ್ದಿಕೊಳ್ಳುವ ಯಾವ ಅವಕಾಶವನ್ನೂ ಬಿಟ್ಟುಕೊಡದೆ ಸಮರ್ಥ ವೀಣೆಯಾಗಿ ರೂಪುಗೊಳ್ಳುತ್ತಾನೆ. ಆಗ ಅವನಿಂದ ಹೊರಡುವ ನದ ಪ್ರಣವ ಮೂಲವೂ ಪ್ರಗತಿಕಾರಕವೂ ಮಂಗಳಕರವೂ ರಾಷ್ಟ್ರಾಭ್ಯುದಯ ಹೇತುವೂ ಆಗಿರುತ್ತದೆ.

ಕಲೆಯ ಸಾಮರ್ಥ್ಯ ಅದು. ದಿಕ್ಕು ತಪ್ಪಿ ಓಡುತ್ತಿರುವ ಇಂದ್ರಿಯಗಳಿಗೆ ಕಡಿವಾಣ ಹಾಕಿ ಮನಸ್ಸನ್ನು ಹಿಡಿತದಲ್ಲಿರಿಸಬಲ್ಲದು. ’ತುಂಬಾ ಬೇಸರಗೊಂಡಿದ್ದೇನೆ’ ಎಂದು ನೊಂದು ಬರುವವನೊಬ್ಬ ಸುಮಧುರ ಗೀತೆಗಳನ್ನು ಆಲಿಸಿ ’ಸಮಾಧಾನವಾಯಿತು’ ಅನ್ನುತ್ತಾನಲ್ಲ, ಅದಕ್ಕೆ ಕಾರಣ, ನಮ್ಮೊಳಗೆ ಅಡಗಿರುವ ಸದ್ಭಾವನೆಗಳನ್ನು, ಸಚ್ಚಿಂತನೆಗಳನ್ನು ಜಗೃತಗೊಳಿಸುವ ಸಾಮರ್ಥ್ಯ ಕಲೆಗೆ ಇರುವುದು! ಕಲೆಯ ಓಟಕ್ಕೆ ಅಡೆತಡೆಗಳಿಲ್ಲ. ಅದು ಲಾಲಿತ್ಯಪೂರ್ಣ. ಹಿಂಡಿದಷ್ಟೂ ರಸ ಸುರಿಸಬಲ್ಲಷ್ಟು ಪಕ್ವವಾದ ಫಲವದು. ಅದೇ ವೇಳೆಗೆ, ಅಲ್ಲೋಲ ಕಲ್ಲೋಲ ಮಾಡಬಲ್ಲ ರುದ್ರ ರಮಣೀಯತೆಯೂ ಕಲೆಗಿದೆ. ಒಟ್ಟಿನಲ್ಲಿ, ಕೊರೆಯುವ ಚಳಿ, ಬೆಚ್ಚಗಿನ ಅಪ್ಪುಗೆ- ’ಕ’, ಇವೆರಡೂ ಆಗಿದೆ.  ಶಾಂತಿಯೂ ಅದೇ, ಕ್ರಾಂತಿಯೂ ಅದೇ! ಇಂತಹ ವಿರಾಟ್ ಸ್ವರೂಪದ ಕಲೆ ಎಂಥವನ ಹೃದಯವನ್ನೂ ಮಂತ್ರ ಮುಗ್ಧಗೊಳಿಸಿ ನಿಷ್ಕಲ್ಮಷವಾಗಿಸಬಲ್ಲದು. ಮಧುರವಾದ ಮಂಜುಳನಾದ ನುಡಿಸಿ ಹೃದಯ- ಹೃದಯಗಳ ಬೆಸೆಯಬಲ್ಲದು. ಅಚಿತಿಮವಾಗಿ, ’ವಸುಧೈಕ ಕುಟುಂಬಕಮ್’ ಎನ್ನುವ ಋಷಿವಾಕ್ಯವನ್ನು ಸಾಕಾರಗೊಳಿಸಬಲ್ಲದು.

ಏಳು ಸ್ವರಗಳು ಸೇರಿ ಸಂಗೀತ ರೂಪುಗೊಂಡಿರುವಂತೆ, ಏಳು ಬಣ್ಣಗಳು ಬಿಳಿಯ ಬಣ್ಣಕ್ಕೆ ಕಾರಣವಾಗಿರುವಂತೆ, ಅರವತ್ನಾಲ್ಕು ಬಗೆಯ ಕಲಾಪ್ರಕಾರಗಳು ವಿಶ್ವಚಕ್ರದ ಅಂಗವಾಗಿ ಸದಾ ತಿರುಗುತ್ತಲಿದೆ. ಸ್ತ್ರೀ- ಪುರುಷರೆಂಬ ಭೇದವಿಲ್ಲದೆ ಸಮಾನವಾಗಿ ಎಲ್ಲರನ್ನೂ ಒಳಗೊಂಡ ವಿಶ್ವಚಕ್ರವಿದು. ಹೀಗಾಗಿಯೇ ಕಲೆ ಸಾರ್ವತ್ರಿಕವಾದುದು, ಸಾರ್ವಕಾಲಿಕವಾದುದು. ಈ ಕಾರಣದಿಂದಲೇ ಕಲಾ ತತ್ತ್ವ ಮಹರ್ಷಿ ಆನಂದ ಕುಮರ ಸ್ವಾಮಿ ಹೇಳಿದ್ದು, ಕಲಾವಿದ ಎಂಬುವವನು ವಿಶೇಷ ತಳಿಯ ಮನುಷ್ಯನೇನಲ್ಲ. ಆದರೆ, ಯಾವುದಾದರೊಂದು ಕ್ಷೇತ್ರದಲ್ಲಿ ಕಲಾವಂತಿಕೆ ಮೈಗೂಡಿಸಿಕೊಳ್ಳದವನು ದಿಟವಾಗಿ ಒಬ್ಬ ಮೈಗಳ್ಳನೇ ಸರಿ’ ಎಂದು.

ಕಲಾ ಜಗತ್ತು ಹತ್ತಿರ ಬರದಂತೆ ಯಾರನ್ನೂ ತಡೆದಿದ್ದೇ ಇಲ್ಲ. ಕಲೆಯ ರಸಾಸ್ವಾದವನ್ನು ಮಾಡದ ವ್ಯಕ್ತಿಯೇನಾದರೂ ಇದ್ದರೆ, ಅದು ಆತನ ದೋಷವೇ ಹೊರತು ಕಲೆಯದಲ್ಲ. ಸಂಸ್ಕಾರ ಭಾರತಿ ಈ ಮಾತನ್ನು ನಂಬಿದೆ. ಕಲೆಯನ್ನು ಅಪ್ಪುವ ಮೂಲಕ, ಕಲೆಯ ಅಪ್ಪುಗೆಯನ್ನು ಇತರರಿಗೂ ಕೊಡಿಸುವ ಮೂಲಕ ರಾಷ್ಟ್ರದ ಪ್ರತಿಯೊಬ್ಬರನ್ನೂ ಬೆಸೆಯುವ ಸಂಕಲ್ಪ ಮಾಡಿ ದಿಟ್ಟ ಹೆಜ್ಜೆ ಇಟ್ಟಿದೆ.

ಕಲೆಯನ್ನು ಅಪ್ಪುವುದೆಂದರೆ ಅದು ಸುಲಭದ ಕೆಲಸವೇನಲ್ಲ. ಕಲಾರಾಧಕರಿಗೆ ಅದೊಂದು ತಪಸ್ಸು. ಒಬ್ಬ ಕಲಾವಿದ ತನ್ನ ಬದುಕಿನ ಕ್ಷಣ ಕ್ಷಣವನ್ನು ಕಲೆಗೆ- ಕಲಾ ಸೇವೆಗೆ ಮೀಸಲಾಗಿಟ್ಟಾಗಲೇ ಅದು ಸಿದ್ಧಿಸುವುದು. ಹೀಗೆ ಕಲಾಸಿದ್ಧಿ ಪಡೆದವ ಪ್ರತಿಯೊಂದು ಕ್ಷಣವೂ ಅನುಭವಿಸುವ ಆನಂದವನ್ನು ಅನ್ಯರು ಊಹಿಸಿಕೊಳ್ಳುವುದೂ ಅಸಾಧ್ಯ. ನಿತ್ಯ ಬದುಕಿನ ಜಂಜಡಗಳು, ನೋವು, ದುಃಖ ದುಮ್ಮಾನಗಳೆಲ್ಲದರ ನಡುವೆ ಆತ ಆನಂದದಿಂದ ಕಾಲ ಕಳೆಯಬಲ್ಲ. ಬರವಣಿಗೆಯನ್ನು ಸರಸ್ವತಿಯ ಆರಾಧನೆಯೆಮದು ಒಲಿಸಿಕೊಂಡ ವೀಸೀ, ಬೇಂದ್ರೆ, ಡಿವಿಜಿ, ರಾಜರತ್ನಮ್ ಮೊದಲಾದವರೆಲ್ಲ ಬದುಕಿನ ದುಗುಡಗಳಿಂದ ಹೊರಬರಲು ಪ್ರೇರಣೆ ಸಾಹಿತ್ಯವೇ ಹೊರತು ಮತ್ತೇನಲ್ಲ. ಈ ಮಾರ್ಗವೇ ಅವರ ಪಾಲಿಗೆ ಸತ್ಯವೂ ಶಿವವೂ ಸುಂದರವೂ ಹೌದು. ಈ ಮಾರ್ಗದಲ್ಲಿಯೇ ಅವರಿಗೆ ಸಮಾಧಿ ಸ್ಥಿತಿಯ ಅನುಭವವೂ ಕೂಡಾ!

ಹಾಗೆಂದ ಮಾತ್ರಕ್ಕೆ ಇತರರಿಗೆ ಅನಂದ ನೀಡುತ್ತ, ಅದರಲ್ಲಿಯೇ ಆನಂದ ಕಣುವ ಕಲಾವಿದ ಕನ್ಣಿರಲ್ಲಿ ಕೈತೊಳೆಯಬೇಕೇನು? ಈ ಪ್ರಶ್ನೆ ಸಮಾಜದ ಜನ ಯೋಚಿಸಬೇಕಾದಂಥದ್ದು. ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಜೇಡ ಹಳ್ಳಿಯ ೯ನೇ ತರಗತಿಯ ವಿದ್ಯಾರ್ಥಿ ಸಿದ್ಧಲಿಂಗ ಸುಮಧುರವಗಿ ಹಾಡುತ್ತಾನೆ. ಅವನ ಗಾಯನದಲ್ಲಿ ಮೈಮರೆಯುವಷ್ಟು ಸೊಗಸಾದ ಗಾಯನ ಅವನದು. ಆದರೇನು?  ಮನೆಯಲ್ಲಿ ಪೂರಕ ವಾತಾವರಣವಿಲ್ಲ. ಸಂಗೀತದಲ್ಲಿಯೇ ಸಾಧನೆ ಮಾಡಬೇಕೆನ್ನುವ ಅವನ ಬಯಕೆಗೆ ಮನೆಯಲ್ಲಿ ಬೆಂಬಲವಿಲ್ಲ. ಬಡತನದಿಂದಾಗಿ ಸಂಗೀತ ಶಿಕ್ಷಕರ ಬಳಿ ಅವನನ್ನು ಕಳುಹಿಸುವ ಸಾಮರ್ಥ್ಯ ತಂದೆ ತಾಯಿಗೂ ಇಲ್ಲ. ಅಂತಹ ಹುಡುಗನನ್ನು ಕಲೆಯ ಮುಖ್ಯವಾಹಿನಿಗೆ ತಂದು ಸೇರಿಸುವುದು ಸಮಾಜದ ಕರ್ತವ್ಯವಲ್ಲವೇನು? ದೇಶದ ಮೂಲೆಮೂಲೆಯಲ್ಲೂ ಅರಳಿ ಸುವಾಸನೆ ಬೀರುತ್ತಿರುವ ಈ ಕಲಾಪುಷ್ಪಗಳನ್ನು ಹೆಣೆದು ತಾಯಿಭಾರತಿಯ ಸಿಂಗಾರ ಮಾಡಬೇಕಾದ ಹೊಣೆ ಯಾರದು? ಸಮಾಜದ ಈ ಕರ್ತವ್ಯವನ್ನು ನಿರ್ವಹಿಸಲೆಂದೇ ಸಂಸ್ಕಾರ ಭಾರತಿ ಕಟಿಬದ್ಧವಾಗಿದೆ. ಕಲಾಸೇವೆಗೆ ವನಸುಮಗಳನ್ನು ಹುಡುಕಿ ತರುವ ಕಾಯಕವನ್ನು ಮಾಡಬೇಕೆಂಬ ಇಚ್ಛೆ, ಸಂಕಲ್ಪ- ಎರಡೂ ಸಂಸ್ಕಾರ ಭಾರತಿಗಿದೆ.

ಕಲೆಯನ್ನು ಮೂಲ ರೂಪದಲ್ಲಿಯೇ ಉಳಿಸುವ, ಆ ದಿಕ್ಕಿನಲ್ಲಿ ಬೆಳೆಸುವ ಅಗತ್ಯ ಇಂದು ಹಿಂದೆಂದಿಗಿಂತ ಹೆಚ್ಚಾಗಿದೆ.   ಕಲಾವಿದರು ತಪಸ್ಸಿನಿಂದ ಸಾಧಿಸಿದ ಸಿದ್ಧಿಯನ್ನು ವ್ಯಾಪಾರದ ಸರಕಾಗಿಸುವ ಅಪಾಯ ಒಂದೆಡೆಯಾದರೆ, ಕಲಾಪ್ರಕಾರಗಳು ವಿರೂಪಗೊಳಿಸಲ್ಪಡುವ, ಅನ್ಯಾನ್ಯ ಅಂಶಗಳ ಮಿಶ್ರಣಕ್ಕೆ ಒಳಪಡಿಸುವ ಅಪಾಯಕಾರಿ ಬೆಳವಣಿಗೆ ಮತ್ತೊಂದು ಕಡೆ ಕಂಡುಬರುತ್ತಿದೆ ಎಂಬ ಶ್ರೀ ಕುಂಬ್ಳೆ ಸುಂದರ ರಾಯರ ಮಾತು ಸಧ್ಯದ ಅಪಾಯವನ್ನು ಬಯಲು ಮಾಡುತ್ತದೆ. ಕಲಾಪ್ರಕಾರಗಳು ವಿರೂಪಗೊಳ್ಳಬಾರದು. ಅದು ಮಾರಾಟದ ಸರಕೂ ಆಗಬಾರದು. ಅದರ ಪಾವಿತ್ರ್ಯ ಹಾಗೆಯೇ ಉಳಿಯುವಂತಾಗಬೇಕು. ’ಟೀವಿಗಳಲ್ಲಿನ ರಿಯಾಲಿಟಿ ಶೋಗಳಲ್ಲಿ ಹಾಡಲು ಬೇಕಾದ ಎರಡು ಗೀತೆಗಳನ್ನು ಕಲಿಸಿಕೊಡಿ ಸಾಕು’ ಎಂದು ಸಂಗೀತದ ಗುರುಗಳ ಬಳಿ ಹೋಗುವವರ ಸಂಖ್ಯೆಯಿಂದು ಹೆಚ್ಚುತ್ತಿದೆ. ನೃತ್ಯದಲ್ಲಿ ಅಸಹ್ಯಕರ ಭಂಗಿಗಳು ಇಣುಕುತ್ತಿವೆ. ನಾಟಕ- ಯಕ್ಷಗಾನಗಳಲ್ಲೂ ಕೀಳು ಅಭಿರುಚಿಯ ಸಂಭಾಷಣೆಗಳು ತೂರಿಕೊಳ್ಳುತ್ತಿವೆ. ಹೀಗೆಲ್ಲ ಇರುವಾಗ, ಪರಿಸ್ಥಿತಿಯನ್ನು ಸರಿಪಡಿಸಲು ಯಾರಾದರೂ ಮುಂದೆ ಬರಬೇಕು. ನೈಜ ಕಳಕಳಿಯಿಂದ, ರಾಷ್ಟ್ರಾಭಿಮಾನದಿಂದ ಈ ಕೆಲಸವನ್ನು ಮಾಡಬಲ್ಲ ಜನ ಬೇಕು. ಸಂಸ್ಕಾರ ಭಾರತಿ ಅಂತಹದೊಂದು ವೇದಿಕೆಯ ನಿರ್ಮಾಣ ಮಾಡಿಕೊಟ್ಟಿದೆ.
ಈ ದೇಶ ಕಂಡ ಅನೇಕ ಕಲಾ ತಪಸ್ವಿಗಳು ತಮ್ಮ ಸಾಧನೆಯಿಂದ, ತಪಸ್ಸಿನಿಂದ ಕಲಾಗಂಗೆಯನ್ನು ಹರಿಸಿದ್ದಾರೆ. ಅದು ಬತ್ತದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಪ್ರತಿಯೊಬ್ಬನ ಜವಾಬ್ದಾರಿಯೂ ಇದರಲ್ಲಿ ಇದ್ದೇ ಇದೆ. ಹೀಗಾಗಿ ರಾಷ್ಟ್ರ ರಕ್ಷಣೆಯ ಜವಾಬ್ದಾರಿ ಹೊತ್ತ ಪ್ರತಿಯೊಬ್ಬರೂ ಸಂಸ್ಕಾರ ಭಾರತಿಯ ಅಂಗವೇ.

ಸಂಸ್ಕಾರ ಭಾರತಿ ಭೂಮಿಕೆ

ಸಂಸ್ಕೃತಿಯ ಮೂಲ ತತ್ತ್ವವೇ ಸಂಸ್ಕಾರ. ಸಂಸ್ಕಾರದಿಂದ ಪರಿಷ್ಕೃತಗೊಂಡಿದ್ದೇ ಸಂಸ್ಕೃತಿ. ಇದನ್ನು ಪ್ರಭಾವಿಯಾಗಿ ಅಭಿವ್ಯಕ್ತಗೊಳಿಸುವ ಮಾಧ್ಯಮವೇ ಕಲೆ. ವೈವಿಧ್ಯಮಯವಾದ ಕಲೆಗಳಿಂದ ಆಯಾ ಕ್ಷೇತ್ರ ಸಮಾಜ ಮತ್ತು ರಾಷ್ಟ್ರಸ ಸಂಸ್ಕೃತಿಯು ಪುಸ್ಫುಟಿತವಾಗಿ ಪ್ರಕಾಶಿತವಾಗುತ್ತಿದೆ.

ಸಂಸ್ಕಾರ ಜೀವನ ಸುರಭಿಯೂ ಹೌದು. ಅದು ಕಣ್ಣಿಗೆ ಕಾಣುವುದಿಲ್ಲ. ಅನುಭವಗಮ್ಯ ಸಂಸ್ಕಾರದ ಕಾರಣದಿಂದಾಗಿಯೇ ನಮಗೆ ದೇಶ ವಿದೇಶಗಳ ನಡುವಿನ ಅಂತರ ಸ್ಪಷ್ಟವಾಗಿ ತಿಳಿಯುತ್ತದೆ. ಸಂಸ್ಕಾರ ನಷ್ಟವಾದರೆ ಸಂಸ್ಕೃತಿ ನಷ್ಟವಾಗುತ್ತದೆ. ಸಂಸ್ಕೃತಿ ನಷ್ಟವಾದರೆ ರಾಷ್ಟ್ರವೇ ನಷ್ಟವಾಗುತ್ತದೆ.

ಕಲೆ ಎಂದರೆ ಮುಕ್ತಿ. ಮುಕ್ತಿ ಎಂದರೆ ಮರಣದ ನಂತರ ಸಿಗುವುದೆಂದರ್ಥವಲ್ಲ. ಲೌಕಿಕ ಜೀವನದ ಜಂಜಾಟ ಸಂಕೀರ್ಣತೆಗಳಿಂದ, ಪಾಪ- ಸಂತಾಪಗಳಿಂದ ಮುಕ್ತಿ ಎಂದರ್ಥ.

ಜೀವನದಲ್ಲಿ ಎಲ್ಲರಿಗೂ ಆನಂದ ಬೇಕು. ಧರ್ಮ, ಸಂಪ್ರದಾಯ, ಅಧ್ಯಯನ, ಯೋಗ, ತ್ಯಾಗ ಮುಂತಾದ ಅನೇಕ ಮಾಧ್ಯಮಗಳಿಂದ ಆನಂದ ಸಿಗುತ್ತದೆ. ಆದರೆ ಸುಗಮ, ರುಚಿಕರ ಹಾಗೂ ಲೋಕ ರಂಜಕವಾದ ಆನಂದವು ಲಲಿತಕಲೆಗಳ ಮಾಧ್ಯಮದಿಂದ ಮಾತ್ರ ಸಿಗಲು ಸಾಧ್ಯ. ಸಂಸ್ಕಾರಯುಕ್ತ ಕಲೆಗಳು ಮಾನವನನ್ನು ಪಶುತ್ವದಿಂದ ದೈವತ್ವಕ್ಕೇರಿಸುತ್ತವೆ.

ಕಲಾ ಸಾಧಕನಿಗೆ ಸಾಧನೆಯೇ ಗುರಿ. ಕಲೆಯೇ ಪೂಜೆ. ತಪಸ್ಸು. ಅದೇ ಅವನಿಗೆ ಮಾನವತೆಯ ಪರ್ಯಾಯ, ರಾಷ್ಟ್ರೋತ್ಥಾನದ ಮಾರ್ಗವೂ ಹೌದು. ಆತ ದೈವತ್ವಕ್ಕೇರುವ ಸೋಪಾನವೂ ಸಹ ಅದೇ ಆಗಿದೆ. ಅಂತಹ ಕಲಾಕಾರ ತನ್ನ ಎಲ್ಲ ವಿಷಯಕಾಮನೆಗಳಿಂದ ಮುಕ್ತನಾಗಿ ತನ್ನದೆಲ್ಲವನ್ನೂ ಕಲಾ ಸಾಧನೆಗೆ ಸಮರ್ಪಿಸುತ್ತಾನೆ.

ಸಂಸ್ಕಾರ ಭಾರತಿಯು ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಯಲ್ಲ. ಅಥವಾ ಕಲಾಶಾಲೆಗಳನ್ನೂ ನಡೆಸುವುದಿಲ್ಲ. ನಮ್ಮ ಸಂಸ್ಕೃತಿಯ ಸರಿಯಾದ ಪರಿಜ~ಜಾನ ಇಲ್ಲದವರು, ಕಲೆಯ ಮೂಲ ಉದ್ದೇಶ ತಿಳಿಯದವರು ಹೇಳುವ ಮಾತೊಂದಿದೆ. ಅದೇನೆಂದರೆ, ಕಲೆಗಾಗಿ ಕಲೆ. ಸಂಸ್ಕಾರಭಾರತಿಯು, ’ಕಲೆ ವಿಲಾಸಕ್ಕಾಗಿ ಅಲ್ಲ. ಆತ್ಮ ವಿಕಾಸಕ್ಕಾಗಿ’ ಎನ್ನುವ ಮಾತಿನಲ್ಲಿ ನಂಬಿಕೆ ಇರಿಸಿದೆ.

ಪ್ರತಿ ವ್ಯಕ್ತಿಯ ಜೀವನದಲ್ಲಿ ಸಮಾಜ ಹಾಗೂ ರಾಷ್ಟ್ರ ಜೀವನದಲ್ಲಿ ಕಲೆಗೆ ಒಂದು ಮಹತ್ವದ ಸ್ಥಾನವಿದೆ. ವ್ಯಕ್ತಿ ಮಾನಸವನ್ನು ಸಮಾಜ ಮಾನಸದ ಜೊತೆಗೆ, ಸಮಾಜದ ಮಾನಸವನ್ನು ರಾಷ್ಟ್ರ ಮಾನಸದ ಜೊತೆಗೆ ಜೋಡಿಸಬಲ್ಲ ಅಲೌಕಿಕ ಶಕ್ತಿ ಭಾರತೀಯ ಕಲೆಗಳಿಗಿದೆ. ಅದು ರಾಷ್ಟ್ರದ ಸೇವೆ, ಆರಾಧನೆಗಳ ಸಮರ್ಥ ಮಾಧ್ಯಮವೂ ಹೌದು. ನಿಜವಾದ ಕಲಾಸಾಧನೆಯಿಂದ ದೊರಕುವ ಸುಖ ಕ್ಷಣಿಕ ಸುಖವಲ್ಲ. ಬದಲಾಗಿ, ಸತ್ ಚಿತ್ ಆನಂದಮಯವಾದ ಸುಖವನ್ನೇ ಅದು ನೀಡುತ್ತದೆ. ನಮ್ಮ ವ್ಯಕ್ತಿತ್ವವನ್ನು ಪರಿಷ್ಕಾರಗೊಳಿಸಿ ಸುಸಂಸ್ಕೃತಗೊಳಿಸುತ್ತದೆ. ನಿಜವಾದ ಅರ್ಥದಲ್ಲಿ ಕಲೆಯೇ ಸಾಧನೆ, ಸಮರ್ಪನೆ ಎಲ್ಲವೂ ಆಗಿದೆ. ಈ ಭಾವ ಸೂತ್ರದಲ್ಲಿ ವ್ಯಕ್ತಿ, ಸಮಾಜ ಹಾಗೂ ರಾಷ್ಟ್ರವನ್ನು ಬೆಸೆಯುವ ಕಾರ್ಯ, ಸಂಸ್ಕಾರ ಭಾರತಿಯದು.

ರಾಷ್ಟ್ರ ಮಟ್ಟದಲ್ಲಿ ಸಂಸ್ಕಾರ ಭಾರತಿ

ಭಾವನಾತ್ಮಕವಾದ ಸಮಾಜ ಪರಿವರ್ತನೆ, ಸಮನ್ವಯಪೂರ್ಣ ಸಮಾಜ ಜೀವನದೆಡೆ ಧರ್ಮ ಸಂಸ್ಕೃತಿಗಳ ಸಂರಕ್ಷಣೆ- ಸಂಘಟನೆಗಾಗಿ ಹಿಂದೂ ರಾಷ್ಟ್ರದ ಸದುನ್ನತಿಗಾಗಿ ತ್ಯಾಗಮಯ ಜೀವನ ನಡೆಸಿದ ಸ್ವರ್ಗೀಯ ಶ್ರೀ ಭಾವುರಾವ್ ದೇವರಸ್, ಸ್ವರ್ಗೀಯ ಶ್ರೀ ಹರಿಭಾವು ವಾಕಣಕರ್ ಮುಂತಾದವರು ನಡೆಸಿದ ಸಹಚಿಂತನದ ಪರಿಣಾಮವಾಗಿ ಸಂಸ್ಕಾರ ಭಾರತಿ ಜನ್ಮ ತಾಳಿತು.

೧೯೫೪ರಲ್ಲಿ ಮೂಡಿಬಂದ ಈ ಕಲ್ಪನೆಯು ವಿಕಾಸವಾಗುತ್ತ ಬಂದು ೧೯೬೧ರಲ್ಲಿ ವಿದ್ಯುಕ್ತವಾಗಿ ಲಕ್ನೋದಲ್ಲಿ ಆರಂಭಗೊಂಡಿತು. ತಮ್ಮ ೮೨ರ ಇಳಿ ವಯಸ್ಸಿನಲ್ಲಿಯೂ ದೇಶಾದ್ಯಂತ ರಭಸದಿಂದ ಸಂಚರಿಸುತ್ತ, ಯುವಕರನ್ನೂ ಮೀರುವ ಉತ್ಸಾಹದಲ್ಲಿರುವ, ಅಪಾರ ಸ್ಮರಣ ಶಕ್ತಿಯುಳ್ಳ ಶ್ರೀ ಯೋಗೀಂದ್ರ ಜೀಯವರು ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿಯಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪೂರ್ವದ್ಲ ಅಸ್ಸಾಮಿನಿಂದ ಪಶ್ಚಿಮದ ಗುಜರಾತ್‌ವರೆಗೆ, ಉತ್ತರದ ಜಮ್ಮು-ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಎಲ್ಲ ರಾಜ್ಯಗಳಲ್ಲಿ ತನ್ನ ೧,೫೦೦ಕ್ಕಿಂತ ಹೆಚ್ಚು ಸಮಿತಿಗಳ ಮೂಲಕ ಚಟುವಟಿಕೆಗಳನ್ನು ನಡೆಸುತ್ತಿವೆ. ಪ್ರತ್ಯೇಕತಾವಾದ, ಆತಂಕವಾದಗಳ ನೆಲೆವೀಡಾಗಿರುವ ಪೂರ್ವಾಂಚಲ ಪ್ರದೇಶಗಳಲ್ಲೂ ಅಲ್ಲಿನ ವನವಾಸಿ ಹಾಗೂ ಜನಪದ ಕಲಾಶ್ರೀಮಂತಿಕೆಯನ್ನು ಗುರುತಿಸಿ, ಆ ಪ್ರದೇಶದ ಬಂಧುಗಳನ್ನು ಸಾಂಸ್ಕೃತಿಕವಾಗಿ ನಮ್ಮ ರಾಷ್ಟ್ರಜೀವನದ ಮುಖ್ಯ ಧಾರೆಯಲ್ಲಿ ಜೋಡಿಸುವ ಕಾರ್ಯದಲ್ಲಿ ಸಂಸ್ಕಾರ ಭಾರತಿಯು ಯಶಸ್ವಿಯಾಗುತ್ತಿದೆ. ಬಹು ಮುಖ್ಯವಾಗಿ ಆ ಪ್ರದೇಶದ ಜನಪದ ಕ್ಷೇತ್ರದ ಯುವಕಲಾವಿದರು ಬಹು ದೊಡ್ಡ ಸಂಖ್ಯೆಯಲ್ಲಿ ನಮ್ಮೊಂದಿಗೆ ಬರುತ್ತಿದ್ದಾರೆ.

ಕರ್ನಾಟಕದಲ್ಲೂ ಸಂಸ್ಕಾರ ಭಾರತಿ

೧೯೮೨ರಲ್ಲಿ ಸಂಸ್ಕಾರ ಭಾರತಿಯು ದೆಹಲಿಯಲ್ಲಿ ನಾಟಕೋತ್ಸವವನ್ನು ಅಖಿಲ ಭಾರತೀಯ ಮಟ್ಟದಲ್ಲಿ ಪ್ರಥಮ ಬಾರಿಗೆ ಏರ್ಪಡಿಸಿತ್ತು. ಆಗ ಮಂಡ್ಯದಿಂದ ಶ್ರೀ ರಾಮಾನುಜಾಚಾಂii ನಾಟಕ ಪ್ರದರ್ಶಿಸಲು ಅವಕಾಶ ದೊರೆಯಿತು. ಯಶಸ್ವಿಯಾಗಿಯೂ ಪ್ರದರ್ಶಿಸಲ್ಪಟ್ಟಿತು. ಇದು ಪ್ರಾಂತದಲ್ಲಿ ಬೆಳೆಯಲು ಅಂಕುರಾರ್ಪಣವಾಯಿತು. ೧೯೯೩ರಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ರಾಷ್ಟ್ರೋತ್ಥಾನ ಕಲಾಕೇಂದ್ರ ಆರಂಭವಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
೧೯೯೫ರಲ್ಲಿ ವಿದ್ಯುಕ್ತವಾಗಿ ಸಂಸ್ಕಾರಭಾರತಿ ಕರ್ನಾಟಕದಲ್ಲಿ ಆರಂಭವಾಗಿ ರಾಷ್ಟ್ರೋತ್ಥಾನ ಕಲಾಕೇಂದ್ರ ಇದರಲ್ಲಿ ವಿಲೀನವಾಯಿತು.  ಪ್ರಸ್ತುತ, ’ಸಂಸ್ಕಾರ ಭಾರತಿ ಕರ್ನಾಟಕ’ ಎಂದು ನೋದಾಯಿಸಿರುವ ಸಂಘಟನೆ ಇದಾಗಿದ್ದು, ರಾಷ್ಟ್ರ, ರಾಜ್ಯ, ಸ್ಥಳೀಯ ಮಟ್ಟಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಕರ್ನಾಟಕದ ಕಲಾಜಗತ್ತಿನಲ್ಲಿ ತನ್ನ ಛಾಪನ್ನು ಮೂಡಿಸುತ್ತಿದೆ.

ಕೆಲವು ರಾಷ್ಟ್ರೀಯ ಕಾರ್ಯಕ್ರಮಗಳು
೧. ಮೈಸೂರಿನಲ್ಲಿ ಸಂಚಾಲನಾ ಸಮಿತಿ ಸಭೆ
೨. ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ, ವಿದ್ಯಾಲಯದ ಆವರಣದಲ್ಲಿ ನಡೆದ ಭವ್ಯ ಭಾರತ ಅಖಿಲ ಭಾರತೀಯ ಚಿತ್ರಕಲಾ ಶಿಬಿರ
೩. ಬೆಂಗಳೂರಿನಲ್ಲಿ ಅಖಿಲ ಭಾರತೀಯ ಭೂ ಅಲಂಕಾರಣ (ರಂಗೋಲಿ) ಶಿಬಿರ
೪. ಚನ್ನೇನಹಳ್ಳಿಯಲ್ಲಿ ಅಖಿಲ ಭಾರತೀಯ ಕಲಾ ಸಾಧಕ ಸಂಗಮ 
೫. ಮೈಸೂರಿನಲ್ಲಿ ಅಖಿಲ ಭಾರತ ಸಂಗೀತವಿದರಿಂದ ’ನಾದ ವೈಭವ’

ಪ್ರಾಂತ ಮಟ್ಟದಲ್ಲಿ
೧. ಉಡುಪಿಯಲ್ಲಿ ಶಾಸ್ತ್ರೀಯ ನೃತ್ಯ ಗುರುಗಳ ಸಮಾವೇಶ
೨. ಶಿವಮೊಗ್ಗದಲ್ಲಿ ಪ್ರಾಂತ ಮಟ್ಟದ ಬೀದಿ ನಾಟಕ ಕಾರ್ಯಾಗಾರ
೩. ಮೈಸೂರಿನಲ್ಲಿ ನಾಟಕ ರಚನಾ ಶಿಬಿರ
೪. ಬೆಂಗಳೂರು, ಹಗರಿಬೊಮ್ಮನ ಹಳ್ಳಿ, ಹಿರೇ ಮಗಳೂರು, ಹುಲಿಯೂರು ದುರ್ಗ, ಕೊಟ್ಟೂರು, ಹಾಲ್ಕುರಿಕೆ, ರಾಯಚೂರು, ಘಟ್ಟಹಳ್ಳಿಗಳಲ್ಲಿ ಪ್ರಾಂತ ಕಾರ್ಯಕರ್ತರ ಸಮಾವೇಶ, ವಿದಾಶಃ ಕಾರ್ಯಾಗಾರ. 

ಸ್ಥಳೀಯ ಸಮಿತಿಗಳಲ್ಲಿ-
ಕದ್ರಿ, ಧರ್ಮಸ್ಥಳಗಳಲ್ಲಿ ವರ್ಣ ವೈಭವ, ಭಾರತ ದರ್ಶನ- ಸಾವಿರ ಕಾರ್ಯಕ್ರಮ, ದೇಶ ಭಕ್ತಿ ಗೀತೆ-ನೃತ್ಯ-ವಿಚಾರಗಳ ಸಮ್ಮಿಲನ; ಹರಿಹರ ಸೇರಿದಂತೆ ನೂರಾರು ಕಡೆಗಳಲ್ಲಿ ಭೂ ಅಲಂಕರಣ (ರಂಗೋಲಿ) ಶಿಬಿರಗಳು, ಶ್ರೀ ಕೃಷ್ಣ ಲೋಕ ಕಾರ್ಯಕ್ರಮಗಳು, ಸಂಸ್ಕಾರ ಶಿಬಿರಗಳು, ದೀಪಾವಳಿ ಮಿಲನ, ಸ್ನೇಹ ಮಿಲನ, ಕುಟುಂಬ ಮಿಲನ, ಕಾರ್ತಿಕೋತ್ಸವ ಕಾರ್ಯಕ್ರಮಗಳು; ನೂರು ಶಾಲೆಗಳಲ್ಲಿ ವಂದೇ ಮಾತರಂ ಉತ್ಸವ ಮತ್ತು ಉಪನ್ಯಾಸ; ಚಿಕ್ಕ ಮಗಳೂರು ತಾಲೂಕಿನ ಭಜನಾ ಶಿಬಿರ, ಸ್ವದೇಶೀ ಮೇಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು; ಹೊರ ಸಂಚಾರ, ಗಮಕ ವಾಚನ ಮುಂತಾದ ಹತ್ತು ಹಲವು ಬಗೆಯ ವಿಭಿನ್ನ- ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನಡೆದಿವೆ.
ಬೆಂಗಳೂರಿನಲ್ಲಿ ಶ್ರೀ ಕೃಷ್ಣಲೋಕದಲ್ಲಿ ೫,೫೦೦ ಮಕ್ಕಳ ಪಾಲ್ಗೊಂಡಿದ್ದಾರೆ. ಅಲ್ಲದೆ, ಪ್ರತಿ ತಿಂಗಳ ಎರಡನೆ ಶುಕ್ರವಾರದಂದು ಚಿತ್ರಕಲಾ ಶಿಬಿರ ಹಾಗೂ ಸಂಗೀತ ಕಾರ್ಯಕ್ರಮಗಳು (ವರ್ತುಲ ಮಾರಮ್ಮ ದೇವಾಲಯದ ಸಹಕಾರದಿಂದ) ಕಳೆದ ೫ ವರ್ಷಗಿಂದ ನಡೆದುಬರುತ್ತಿವೆ. ಪ್ರತಿ ವಾರ ಮಲ್ಲೇಶ್ವರಮ್‌ನಲ್ಲಿ ಕೀರ್ತನ ಕಮ್ಮಟ, ವಿಜಯನಗರದಲ್ಲಿ ಮಕ್ಕಳ ಯಕ್ಷಗಾನ ತರಬೇತಿ ಮೊದಲಾದವುಗಳೂ ನಿರಂತರವಾಗಿ ನಡೆದುಬರುತ್ತಿದೆ.

ಸಮಿತಿ ರಚನೆ
ಸಂಸ್ಕಾರ ಭಾರತಿಯ ಸಮಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹಕಾರ್ಯದರ್ಶಿ, ಖಜಾಂಚಿ, ವಿದಾ ಸಂಚಾಲಕರು (ನಾಟ್ಯ (ನಾಟಕ) ಸಂಗೀತ, ಚಿತ್ರ ಕಲೆ, ಲೋಕ ಕಲೆ (ಗ್ರಾಮೀಣ ಕಲೆ), ಸಾಹಿತ್ಯ, ಪುರಾತತ್ತ್ವ, ಭೂ ಅಲಂಕರಣ (ರಂಗೋಲಿ)),  ಮಹಿಳಾ ಪ್ರಮುಖ್, ಸಂಚಾಲಕರು ಇರುತ್ತಾರೆ. ಅವರುಗಳ ಅವಧಿ ೨ ವರ್ಷ. ಬಡಾವಣೆಗಳಲ್ಲಿಯೂ ಸಮಿತಿಗೆ ಸಂಚಾಲಕರನ್ನು ನಿಯುಕ್ತಿಗೊಳಿಸಬಹುದು.

ಸದಸ್ಯತ್ವ
ಯಾವುದೇ ಸಮಿತಿ ಊರ್ಜಿತವಾಗಬೇಕಾದರೆ ಕನಿಷ್ಠಪಕ್ಷ ೧೧ ಮಂದಿ ಸದಸ್ಯರು ಇರಲೇಬೇಕು. (ಹೆಚ್ಚಿನ ಸಂಖ್ಯೆಯಿದ್ದರೆ ಸ್ಥಳೀಯ ಸಮಿತಿಗಳಿಗೆ ಅನುಕೂಲ)
ವಾರ್ಷಿಕ ಸದಸ್ಯತ್ವ ಶುಲ್ಕ ರೂ.೧೦೦/- ( ನೂರು ರುಪಾಯಿಗಳು ಮಾತ್ರ)
ಇದರಲ್ಲಿ ರೂ.೭೫/- (ಎಪ್ಪತ್ತೈದು ರೂಪಾಯಿಗಳು) ಸ್ಥಳೀಯ ಸಮಿತಿಗೆ. ಕೇಂದ್ರ ಹಾಗೂ ಪ್ರಾಂತಕ್ಕೆ ರೂ.೨೫/- (ಇಪ್ಪತ್ತೈದು ರೂ.ಗಳು) ಗಳನ್ನು ಸಲ್ಲಿಸಬೇಕು. ಸಹಾಯಧನ, ದೇಣಿಗೆ ಸಂಗ್ರಹ ಮಾಡಬಹುದು.

ಸದಸ್ಯತ್ವದ ಹಣವನ್ನು ಸಂಘಟನೆಯ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಕಾರ್ಯಕ್ರಮಗಳಿಗೆ ಪ್ರಾಯೋಜಕರನ್ನು ಹುಡುಕಬೇಕು.
ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ’ಸಂಸ್ಕಾರ ಭಾರತಿ’ ಹೆಸರಿನಲ್ಲಿ ಮೂವರ ಸಮ್ಮುಖದಲ್ಲಿ (ಅಧ್ಯಕ್ಷರು, ಕಾರ್ಯದರ್ಶಿ, ಕಜಾಂಚಿ) ಜಂಟಿ ಖಾತೆ ತೆಗೆದು ಇರಿಸಬೇಕು. ಹಣ ತೆಗೆಯುವಾಗ ಇಬ್ಬರ ಸಹಿ ಅತ್ಯಗತ್ಯ.

ಮಾಸಿಕ ಸಭೆ
ಪ್ರತಿಯೊಂದು ಸಮಿತಿಯೂ ಕನಿಷ್ಠ ತಿಂಗಳಿಗೊಮ್ಮೆ ಸಭೆ ಸೇರಬೇಕು. ಕಾರ್ಯದ ಅವಲೋಕನ, ಸಂಗಟನೆ, ಕೇಂದ್ರದಿಂದ ಬಂದ ಸೂಚನಾ ಪತ್ರಗಳ ಪರಿಶೀಲನೆ, ವಿದಾಗಳ ಕಲೆಯ ಪರಿಚಯ ಮಾಡಿಕೊಳ್ಳುವುದು- ಇತ್ಯಾದಿ ಚಟುವಟಿಕೆ ನಡೆಸಬೇಕು.

ಮಾಸಿಕ ಸಭೆ ಅಥವಾ ಯಾವುದೇ ಸಭೆ ನಡೆಸುವ ಮುನ್ನ ಧ್ಯೇಯ ಗೀತೆ ( ಸಾಧಯತಿ ಸಂಸ್ಕಾರ ಭಾರತಿ)॒ ಹೇಳುವುದು ಅವಶ್ಯಕ. ಕಡೆಯಲ್ಲಿ ಶಾಂತಿ ಮಂತ್ರ ಹೇಳಬೇಕು.
ಈ ಸಭೆಗೆ ಪದಾಧಿಕಾರಿಗಳಲ್ಲದೆ, ಸಾಮಾನ್ಯ ಸದಸ್ಯರನ್ನೂ ಕರೆಯಬಹುದು.

ಉತ್ಸವಗಳು:
ಕನಿಷ್ಠ ೨ ತಿಂಗಳಿಗೊಮ್ಮೆ ಉತ್ಸವಗಳು ಬರುತ್ತವೆ. ಇದು ಕಾರ್ಯಕರ್ತರಿಗೆ ಪ್ರೇರಣೆ, ಉತ್ಸಾಹ ತುಂಬಿದರೆ, ಪಾಲ್ಗೊಂಡ ಇತರರಿಗೆ ಸಂಸ್ಕಾರ ಭಾರತಿಯ ಸಂಪರ್ಕ ನಿಕಟವಾಗುತ್ತದೆ. ಆದ್ದರಿಂದ ಉತ್ಸವಗಳನ್ನು ಶ್ರದ್ಧೆಯಿಂದ, ವ್ಯವಸ್ಥಿತವಾಗಿ ಮಾಡಬೇಕು. ಮತ್ತು, ಈ ಕಾರ್ಯಕ್ರಮಗಳ ಬಗ್ಗೆ ಪ್ರಚಾರ (ಪತ್ರಿಕೆಗಳಿಗೆ ಮಾಹಿತಿ) ಮತ್ತು ಪ್ರಾಂತ ಕೇಂದ್ರಕ್ಕೆ ವರದಿಯನ್ನು ಕಳುಹಿಸಬೇಕು.

ಕಲಾ ಉತ್ಸವ:
ಇದು ಮೂರು ರೀತಿಯಲ್ಲಿ ನಡೆಯುತ್ತದೆ. ಪ್ರಥಮ ವರ್ಷ ಸ್ಥಳೀಯ ಸಮಿತಿಗಳ ಮಟ್ಟದಲ್ಲಿ ಸಾಮರ್ಥ್ಯಕ್ಕೆ ತಕ್ಕಮತೆ ಒಂದು ಅಥವಾ ಅರ್ಧ ದಿನ ಅಥವಾ ಕೆಲವು ಗಂಟೆಗಳ ಕಾಲ ನಡೆಸಬಹುದು.
ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನ, ಮೊದಲಾದವುಗಳನ್ನು ಏರ್ಪಡಿಸಿ, ಉತ್ಸವದ ಉದ್ದೇಶವನ್ನು ಮನದಟ್ಟು ಮಾಡಿಸಬೇಕು.
ನವೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಯಾವಾಗಲಾದರೊಮ್ಮೆ ವರ್ಷಿಕೋತ್ಸವವನ್ನೂ ಆಚರಿಸಬಹುದು.

ಪ್ರಾಂತ ಉತ್ಸವ:
ಎರಡನೆ ವರ್ಷ ಪ್ರಾಂತ ಮಟ್ಟದಲ್ಲಿ ಎರಡು ದಿನಗಳ ಕಾಲ ನಡೆಸುವುದು. ಸ್ಥಳೀಯ ಸಮಿತಿಯ ಉತ್ಸವದಲ್ಲಿ ಉತ್ತಮ ಸಾಂಸ್ಕೃತಿಕ ಪ್ರದರ್ಶನ ನೀಡಿದವರಿಗೆ ಇಲ್ಲಿ ಅವಕಾಶ ಕಲ್ಪಿಸುವುದು. ಚಿಂತನ ಗೋಷ್ಠಿ, ಮೆರವಣಿಗೆ, ಪ್ರದರ್ಶನ ಇತ್ಯಾದಿಗಳೂ ಇರಬೇಕು. ಸಮಿತಿಯ ಎಲ್ಲ ಸದಸ್ಯರು ಮತ್ತು ಕಲಾವಿದರು ಇದರಲ್ಲಿ ಭಾಗವಹಿಸಬಹುದು.

ರಾಷ್ಟ್ರೀಯ ಕಲಾ ಉತ್ಸವ:
೨ ವರ್ಷಕ್ಕೊಮ್ಮೆ ದೇಶದ ಯಾವುದಾದರೊಂದು ಕಡೆ ಇದನ್ನು ನಡೆಸಲಾಗುತ್ತದೆ. ಪ್ರಾಂತ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದವರಿಗೆ ಇಲ್ಲಿ ಅವಕಾಶ ಕೊಡಲಾಗುತ್ತದೆ. ಜಿಲ್ಲಾ ಮಟ್ಟದಿಂದ ಮೇಲ್ಪಟ್ಟವರೆಲ್ಲರೂ ಇದರಲ್ಲಿ ಭಾಗವಹಿಸಬಹುದು.        

ಇವೇ ಅಲ್ಲದೆ, ಸ್ಥಳೀಯವಾಗಿ ಹೊಸ ರೀತಿಯ ಈ ಕಾರ್ಯಕ್ರಮಗನ್ನೂ ಆಯೋಜಿಸಬಹುದು. ಕಾರ್ಯಕ್ರಮಗಳಿಗಾಗಿ ನಡೆಸುವ ಧನ ಸಂಗ್ರಹದ ಬಗ್ಗೆ ಆಲೋಚಿಸಬೇಕು. ನಂತರ, ಲೆಕ್ಕಪತ್ರವನ್ನು ಪ್ರಾಂತ ಕೋಶಾಧ್ಯಕ್ಷರಿಗೆ ತಪ್ಪದೆ ಕಳುಹಿಸಿಕೊಡಬೇಕು.

ಅಭ್ಯಾಸ ವರ್ಗಗಳು:
ಸಂಘಟನೆಯನ್ನು ಧೃಢಪಡಿಸಲು, ರ್ಯಕರ್ತರಿಗೆ ಪ್ರೇರಣೆ ನೀಡಲು, ಧ್ಯೇಯ ಜೀವಿಗಳಾಗಿ ರೂಪಿಸಲು ಒಂದು ಅಥವಾ ಎರಡು ದಿನದ ಅಭ್ಯಾಸವರ್ಗಗಳನ್ನು ಪ್ರಾಂತ ವಿಭಾಗ, ಜಿಲ್ಲಾ, ಸ್ಥಳೀಯ ಮಟ್ಟಗಳಲ್ಲಿ ಮಾಡುವುದು. ಸಂಗಟನೆಯ ವೈಚಾರಿಕ ಹಿನ್ನೆಲೆ, ಕಾರ್ಯ ಶೈಲಿ, ಸದಸ್ಯತ್ವ, ಕಲಾವಿದರ ಸಂಪರ್ಕ, ಕಾರ್ಯ ಯೋಜನೆ, ಉತ್ಸವಗಳ ರೀತಿ, ಪ್ರಚಾರ, ಭಾಷಣ ಕಲೆ, ಮುಂತಾದವನ್ನು ತಿಳಿಸಿಕೊಡುವುದು.
ಕಾರ್ಯಕರ್ತರಿಗೆ ಮಾತ್ರವಲ್ಲದೆ, ವಿದಾವಿಷಯಗಳಿಗೂ ಅಭ್ಯಾಸವರ್ಗ ನಡೆಸಬಹುದು. ಇದರಲ್ಲಿ, ವಿದಾದ ಉದ್ದೇಶ, ರಾಷ್ಟ್ರೀಯ ಹಿತಕ್ಕೆ ಪೂರಕ ಕೈಂಕರ್ಯ ಮೊದಲಾದ ಸಂಗತಿಗಳನ್ನು ತಿಳಿಸಿಕೊಡುವುದು.

ಉತ್ಸವಗಳು
೧. ಚೈತ್ರ ಶುದ್ಧ ಪ್ರತಿಪದ ( ಯುಗಾದಿ)
ಯುಗಾದಿಯ ಸಂದೇಶ, ಬೇವು ಬೆಲ್ಲ ವಿತರಣೆ.
ಪ್ರತಿ ವರ್ಷವೂ ಭಾರತೀಯರು ಆಚರಿಸುವ ಮೊದಲ ಹಬ್ಬ ಚಯತ್ರ ಶುದ್ಧ ಪ್ರತಿಪದ. ಯುಗಾದಿ, ಗುಡಿಪಾಡ್ವಾ ಎಂಬ ಹೆಸರುಗಳಿಂದ ಪ್ರಚಲಿತ. ಪಾಶ್ಚಾತ್ಯ ಪದ್ಧತಿ ಅನುಕರಣೆಯಿಂದ ಇಂದಿನ ಯುವ ಸಮಾಜದಲ್ಲಿ ಜನವರಿ ೧ನ್ನು ವರ್ಷಾಂಭ ಎಂದೇ ಪರಿಗಣಿಸಲಾಗುತ್ತಿದೆ. ಆದರೆ ನಮ್ಮ ಪೂರ್ವಜರು ಹಬ್ಬಗಲನ್ನು ಪ್ರಕೃತಿ ಪೂಜೆಯಂತೆ ತಿಳಿದು ಆಚರಣೆಗೆ ತಂದಿದ್ದಾರೆ.
ಜನವರಿಯಲ್ಲಿ ಎಲೆಗಳ ಉದುರುವಿಕೆಯಿಂದ ಪ್ರಕೃತಿಯು ಬರಡಾಗಿದ್ದು, ಕಳಾಹೀನವಾಗಿ ತೋರುತ್ತದೆ. ಚೈತ್ರ ಮಾಸದಲ್ಲಿ ವಸಂತ ಋತುವಿನ ಆಗಮನದ ಜೊತೆಗೆ ಚಿಗುರು ಮೂಡಿ, ಗಿಡಮರಗಳು ನಳನಳಿಸಿ, ಪ್ರಕೃತಿಯಿಂದ ಭೂಮಿಯನ್ನು ಅಲಂಕರಿಸಿದಂತೆ ತೋರುತ್ತದೆ. ಯುಗಾದಿಯನ್ನು ಆಚರಿಸುವುದರ ಹಿನ್ನೆಲೆ ಇದೇ ಆಗಿದೆ.
ಸಂಸ್ಕಾರ ಭಾರತಿ ಕೂಡ ವರ್ಷಾರಂಭದ ಉತ್ಸವವಾಗಿ ಯುಗಾದಿಯನ್ನು ಆಚರಿಸುತ್ತದೆ. ಆ ದಿನ ಪ್ರಾತಃಕಾಲದಲ್ಲಿ ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಬೇವು- ಬೆಲ್ಲ ಸವಿದು, ಜೀವನದ ಸುಖ- ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ಸಂದೇಶದೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ.
ಬೇವು ಆರೋಗ್ಯವರ್ಧಕ. ಬೆಲ್ಲ ಆನಂದದ ಸಂಕೇತ. ಈ ದಿನ ಬೆಳಗಿನಲ್ಲಿ ಸೂರ್ಯ ನಮಸ್ಕಾರವನ್ನು ಕೂಡ ಮಾಡುವ ಪರಿಪಾಠವಿದೆ. ಶತಾಯುರ್ವಜ್ರದೇಹಾಯ… ಎಂದು ಆರಂಭವಾಗುವ ಮಂತ್ರದೊಂದಿಗೆ ಸೂರ್ಯ ನಮಸ್ಕಾರ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ನೀಡಲಾಗುತ್ತದೆ.

ಹಬ್ಬದ ಕಾರ್ಯಕ್ರಮ: ಈ ದಿನ ಸಂಸ್ಕಾರ ಭಾರತಿಯ ಪದಾಧಿಕಾರಿಗಳು ಒಂದೆಡೆ ಸೇರಿ ಉತ್ಸವವನ್ನು ಆಚರಿಸುತ್ತಾರೆ ಮತ್ತು ಯಾವುದಾದರೊಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಾರೆ.

೨. ಗುರು ಪೂರ್ಣಿಮಾ (ಗುರು ವಂದನಾ)
(ಆಷಾಢ ಮಾಸ ಶುಕ್ಲ ಪೌರ್ಣಮಿ)
ಸ್ಥಳೀಯ ಕಲಾವಿದರನ್ನು ಗುರುತಿಸಿ, ಅವರ ಮನೆಯಲ್ಲಿಯೇ ಗೌರವಿಸುವುದು

ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಮಹೋನ್ನತವಾದದ್ದು. ’ಗುರು’ಎಂಬ ಪದವೇ ’ಜ್ಞಾನವನ್ನು ನೀಡುವವನು’ ಎಂಬುದನ್ನು ಸೂಚಿಸುತ್ತದೆ. ತ್ರ್ರಿಮೂರ್ತಿ ಸ್ವರೂಪಕನಾದ ಗುರುವನ್ನು ಗೌರವಿಸಿ ವಂದಿಸುವ ದಿನವೇ ಗುರು ಪೂರ್ಣಿಮೆ.
ಉತ್ಸವದ ಸ್ವರೂಪ: ಸಂಸ್ಕಾರ ಭಾರತಿಯು ಗುರು ಪೂರ್ಣಿಮೆಯ ಅಂಗವಾಗಿ ಹತ್ತಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತ, ವಿದ್ಯಾದಾನ ಮಾಡುತ್ತ, ಕಲಾಸೇವೆಯನ್ನು ನಡೆಸುವ ಸ್ಥಳೀಯ ಕಲಾವಿದರನ್ನು ಗುರುತಿಸಿ ಗೌರವಿಸುತ್ತದೆ. ಇದಕ್ಕಾಗಿ ಅಜ್ಞಾತ ಕಲವಿದರು, ಶ್ರೇಷ್ಠ ಕಲಾಗುರುಗಲನ್ನು ಗುರುತಿಸಿ, ಅವರು ಇರುವಲ್ಲಿಗೇ ತೆರಳಿ ಆತ್ಮೀಯವಾಗಿ ಅಭಿನಂದಿಸಿ ಸತ್ಕರಿಸುವ ಕರ್ಯಕ್ರಮ ಹಮ್ಮಿಕೊಳ್ಳುತ್ತದೆ. ಈ ಸರಳ ಕಾರ್ಯಕ್ರಮದಲ್ಲಿ ಧ್ಯೇಯ ಗೀತೆ, ಪ್ರಾಸ್ತಾವಿಕ, ಗುರು ಪರಂಪರೆಯ ಪರಿಚಯ, ವ್ಯಕ್ತಿಗತ ಪರಿಚಯ, ಗೌರವ ಸಮರ್ಪನೆ, ಸಿಹಿ ವಿತರಣೆಗಳ ನಂತರ ಗೌರವಿಸಲ್ಪಟ್ಟ ಕಲಾವಿದರ ಕಲೆಯನ್ನು ೧೦-೧೫ ನಿಮಿಷಗಳ ಕಾಲ ಸಭೆಗೆ ಪರಿಚಯ ಮಾಡಿಕೊಡಲಾಗುತ್ತದೆ. ನಂತರ ಶಾಂತಿ ಮಂತ್ರ/ ವಂದೇ ಮಾತರಂನೊಂದಿಗೆ ಕಾರ್ಯಕ್ರಮ ಪರಿಸಮಪ್ತವಾಗುತ್ತದೆ. 

ವಿ.ಸೂ: ಆಯಾ ಸಮಿತಿ ಅನುಕೂಲಕ್ಕೆ ತಕ್ಕಂತೆ ಈ ಮಾಸದಲ್ಲಿಯೇ ಗುರು ವಂದನಾ ಕಾರ್ಯಕ್ರಮ ನಡೆಸುವುದು.

೩. ಶ್ರೀ ಕೃಷ್ಣ ಜನ್ಮಾಷ್ಟಮಿ
ಶ್ರೀ ಕೃಷ್ಣ ಲೋಕ ಕಾರ್ಯಕ್ರಮ

ಸ್ವರೂಪ: ಶ್ರೀ ಕೃಷ್ಣನ ಜನ್ಮದಿನವಾದ ಭಾದ್ರಪದ ಕೃಷ್ಣ (ಬಹುಳ) ಅಷ್ಟಮಿಯ ದಿನ ಜನರಿಗೆ ಶ್ರೀ ಕೃಷ್ಣನ ವ್ಯಕ್ತಿತ್ವ, ತನ್ಮೂಲಕ ಗುಣಗಳನ್ನು ಪರಿಚಯಿಸಿಕೊಡುವುದು. ಆ ದಿನ ಮಕ್ಕಳನ್ನು  ಕೃಷ್ಣನಂತೆ ಅಲಂಕರಿಸಿ ಹಡು/ನರ್ತನ ಕಾರ್ಯಕ್ರಮಗಳನ್ನು ಏಪ್ಡಿಸುವುದು. ಕೃಷ್ಣಾಲಂಕಾರವನ್ನು ಹಾಕುವಂತೆ ಇತರರನ್ನೂ ಪ್ರೋತ್ಸಾಹಿಸುವುದು. ಪ್ರಾಯೋಜಕರನ್ನು ಗುರುತಿಸಿ, ಎಲ್ಲರೂ ಒಟ್ಟಾಗಿ ಕಾರ್ಯಕ್ರಮ ನಡೆಸಿ, ಪ್ರಸಾದ, ನೆನಪಿನ ಕಾಣಿಕೆಗಳನ್ನು ನೀಡುವುದು.
ಎಲ್ಲ ವರ್ಗದ ಜನರೂ ಇದರಲ್ಲಿ ಪಾಲ್ಗೊಳ್ಳುವಂತಾಗುವುದು ಅತಿ ಮುಖ್ಯ. ಕೃಷ್ಣ ಜನ್ಮಾಷ್ಟಮಿ ಎಂದರೆ ಸಂಸ್ಕಾರ ಭಾರತಿ ಉತ್ಸವ ಎನ್ನುವ ಮಟ್ಟಿಗೆ ಕಾರ್ಯಕ್ರಮವನ್ನು ನಡೆಸಿಕೊಡಬೇಕು.
ಇದಕ್ಕಾಗಿ ವೈಯಕ್ತಿಕ ಸಂಪರ್ಕ ನಡೆಸಿ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಅವರು ಕೂಡ ಕರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು, ಅದರ ಅನುಭವ ಪಡೆಯುವಂತಾಗಬೇಕು.

ವಿ.ಸೂ: ಈ ಉತ್ಸವವನ್ನು ಆ ಮಾಸದಲ್ಲಿಯೇ ಅನುಕೂಲವಾದ ದಿನಾಂಕದಂದು ಆಚರಿಸಬೇಕು.

೪. ದೀಪಾವಳಿ ಮಿಲನ ಉತ್ಸವ (ಕಾರ್ತೀಕ ಶುದ್ಧ ಪಾಡ್ಯ)
ಬಲಿ ಪಾಡ್ಯಮಿ, ದೀಪಾರಾಧನೆ

ಭಾರತೀಯರ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿ, ‘ಬೆಳಕಿನ ಹಬ್ಬ’ವೆಂದೇ ಕರೆಯಲ್ಪಡುತ್ತದೆ. ಮೂರು ದಿನಗಳ ಈ ಹಬ್ಬವನ್ನು ಕ್ರಮವಾಗಿ ನರಕ ಚತುರ್ದಶಿ, ಲಕ್ಷ್ಮೀ ಪೂಜೆ ಮತ್ತು ಬಲಿ ಪಾಡ್ಯಮಿಯೆಂದು ಆಚರಿಸಲಾಗುತ್ತದೆ. ಅಭ್ಯಂಜನ, ಪಟಾಕಿ ಸಿಡಿಸುವುದು, ಗೋಪೂಜೆ, ಅಂಗಡಿ ಪೂಜೆಗಳು ಈ ಹಬ್ಬದ ವೈಶಿಷ್ಟ್ಯ. ಹಣತೆಗಳನ್ನು ಬೆಳಗುವ ಮೂಲಕ ಅಜ್ಞಾನದ ಕತ್ತಲನ್ನು ಹೊರದೂಡುವ ಸಂದೇಶ ಸಾರಿದರೆ, ದೀಪ ದಾನದ ಮೂಲಕ ಜ್ಞಾನ ದಾನದ ಸಂದೇಶವನ್ನು ಈ ಹಬ್ಬದ ಮೂಲಕ ನೀಡಲಾಗುತ್ತದೆ.
ವಾಮನಾವತಾರಿ ಶ್ರೀ ವಿಷ್ಣುವು ಬಲಿಯ ಕೋರಿಕೆಯಂತೆ ಭೂಲೋಕದ ಜನ ದೀಪಾರಾಧನೆಯ ಮೂಲಕ ಆತನ್ನು ನೆನೆಸಿಕೊಳ್ಳುವ ಉತ್ಸವವೇ ದೀಪಾವಳಿ.

ಸ್ವರೂಪ: ಸಂಸ್ಕಾರ ಭಾರತಿ ಸಮಿತಿಯ ಸದಸ್ಯರು ಎಲ್ಲ ವರ್ಗದ ಜನರೊಡಗೂಡಿ, ಆಯಾ ಮನೆಗಳಲ್ಲಿ ಹಿರಿಯರೊಂದಿಗೆ ಕಲೆತು, ಸಿಹಿ ತಯಾರಿಸಿ, ಅವರೊಂದಿಗೆ ದೀಪಾರಾಧನೆ ಮಾಡುವ ಮೂಲಕ ಉತ್ಸವವನ್ನು ಆಚರಿಸುವುದು. ಹಬ್ಬದ ಮೂರು ದಿನಗಳಲ್ಲಿ ಯಾವುದಾದರೊಂದು ದಿನ ಈ ‘ದೀಪಾವಳಿ ಮಿಲನ’ ನಡೆಸಲಾಗುತ್ತದೆ. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ನಡೆಸಬಹುದು.

ಭಾರತ ಮಾತಾ ಪೂಜನ (ಜನವರಿ ೨೬)
ಭಾರತ ಮಾತೆಯ ಆರಾಧನೆ 

ಭಾರತ ಮಾತೆ ನಮಗೆ ಮಾತೃ ಸ್ವರೂಪಳು. ಆಕೆ ನಮಗೆ ಗುರುವೂ ಆಗಿದ್ದಾಳೆ. ಅಂತಹ ತಾಯಿಯನ್ನು ಅರ್ಚಿಸಿ, ಆರಾಧಿಸುವುದು ಪ್ರತಿಯೊಬ್ಬ ಭಾರತಯನ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸಂಸ್ಕಾರ ಭಾರತಿಯು  ಪ್ರತಿ ವರ್ಷ ಜನವರಿ ೨೬ರಂದು ಭಾರತ ಮಾತೆಯನ್ನು ಆರಾಧಿಸುವ ‘ಭಾರತ ಮಾತಾ ಪೂಜನ’ ಕಾರ್ಯಕ್ಮವನ್ನು ನಡೆಸುತ್ತದೆ. ಸಂಸ್ಕಾರ ಭಾರತಿಯ ಎಲ್ಲ ಸದಸ್ಯರು, ಕಾರ್ಯಕರ್ತರು, ಕಲಾವಿದರು ಮತ್ತು ಪೋಷಕರು ಈ ದಿನ ಒಟ್ಟಾಗಿ ತಾಯಿ ಭಾರತಿಯ ಪೂಜೆಯನ್ನು ನಡೆಸುತ್ತಾರೆ.
ದೇಶಾದ್ಯಂತ ಗಣರಾಜ್ಯೋತ್ಸವವೆಂದು ಆಚರಿಸಲ್ಪಡುವ ಈ ದಿನ, ನಮ್ಮ ದಏಶವು ಸರ್ವತಂತ್ರ ಸ್ವತಂತ್ರಗೊಂಡ ದಿನವಾಗಿದೆ. ಇದು ಪ್ರಜಾಪ್ರಭುತ್ವದ ಪರ್ವದಿನವೆಂದೇ ಕರೆಯಲ್ಪಡುತ್ತದೆ.

ಸ್ವರೂಪ: ಈ ದಿನದಂದು ನಿಗದಿತ ಸಮಯದಲ್ಲಿ ತ್ರಿವರ್ಣ ರಾಷ್ಟ್ರ ಧ್ವಜವನ್ನು ಹಾರಿಸಿ, ಗಣರಾಜ್ಯದ ಮಹತ್ವವನ್ನು ತಿಳಿಸಿಕೊಡಬೇಕು. ಭಾರತ ಮಾತೆಯ ಪೂಜೆ ನೆರವೇರಿಸಿ, ಆಕೆಯ ಸೇವೆಗೆ ಕಟಿಬದ್ಧರಾಗುವ ಸಂಕಲ್ಪ ತೊಡುವಂತೆ ಪ್ರೇರೇಪಿಸಬೇಕು.

ವಿ.ಸೂ: ೨೬ರಂದು ಬೆಳಗ್ಗೆ ಶಾಲಾ/ ಕಾಲೇಜುಗಳ ಉತ್ಸವವಿರುವುದರಿಂದ ಸಂಜೆಯ ವೇಳೆಯಲ್ಲಿ ಕಾರ್ಯಕ್ರಮ ನಡೆಸುವುದು.

ಭರತ ಮುನಿ ಜಯಂತಿ
ಕಲಾಪಿತಾಮಹ ಭರತ ಮುನಿಯ ಸ್ಮರಣೆ

ಇದೊಂದು ಭಾವನಾತ್ಮಕ ಕಾರ್ಯಕ್ರಮ. ಕಲಾಪಿತಾಮಹ ಶ್ರೀ ಭರತ ಮುನಿಯನ್ನು ಸ್ಮರಿಸಿ, ನಟರಾಜನಿಗೆ ಎಲ್ಲರಿಂದ ಪೂಜೆ ಮಾಡಿಸಿ, ಕಾಣಿಕೆ ಅರ್ಪಿಸುವುದು. ಅರ್ಪನೆಯ ಭಾವ ಎಲ್ಲರಿಗೂ ತಿಳಿಯುವಂತಾಗಬೇಕು. ಸಮಾಜದ ಋಣ ತೀರಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರದೂ ಆಗಿದೆ. ಈ ಕಾರ್ಯವು ತನು, ಮನ, ಧನ ಪೂರ್ವಕವಾಗಿ ನಡೆಯಬೇಕು. ಮನಸ್ಸು ಒಪ್ಪಿಕೊಂಡ ಈ ಕಾರ್ಯವನ್ನು ನಮ್ಮ ತನು (ಶರೀರ) ಮಾಡಿತೋರಿಸುತ್ತದೆ. ಇದರ ಜೊತೆಗೆ ನಾವು ಕಷ್ಟಪಟ್ಟು ಗಳಿಸಿದ ಆದಾಯದ ಸ್ವಲ್ಪ ಅಂಶವನ್ನು ಸಮಾಜ ಕಾರ್ಯಕ್ಕೆ ವಿನಿಯೋಗಿಸಬೇಕು. (ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಭಾವ). ಈ ಭಾವದ ಪ್ರಕಟೀಕರಣವೇ ’ಅರ್ಪಣೆ’.
ಅರ್ಪನೆ ಕೇವಲ ನಿಧಿ ಸಂಗ್ರಹವಲ್ಲ. ದೇಣಿಗೆಯಲ್ಲ. ಅದು ಮನಃಪೂರ್ವಕವಾಗಿ ಅರ್ಪಿಸುವ ಶ್ರದ್ಧಾಕಾಣಿಕೆಯಾಗಿರಬೇಕು. ಈ ಪರಿಕಲ್ಪನೆಯನ್ನು ಎಲ್ಲ ಬಂಧುಗಳಿಗೆ ತಿಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಭಕ್ತಿಭಾವದಿಂದ ನಟರಾಜನಿಗೆ ನಮ್ಮ ಕಾರ್ಯದ ಸಮರ್ಪಣೆಯಾಗಬೇಕೆಂಬ ವಿನೀತ ಭಾವ ವ್ಯಕ್ತಗೊಳ್ಳಬೇಕು. ಈ ಅಂಶಗಳನ್ನು ಎಲ್ಲ ಕಾರ್ಯಕರ್ತರು ಮನಗಾಣುವಂತಾಗಬೇಕು. ಈ ಕಾಣಿಕೆಯನ್ನು ಸಮಾಜ ಕಾರ್ಯಕ್ಕೆ ತಮ್ಮ ಸಮಯ- ಶ್ರಮ, ಬದುಕನ್ನು ನೀಡಿದ (ಪ್ರಚಾರಕರು) ಪೂರ್ಣಾವಧಿ ಕಾರ್ಯಕರ್ತರ ಖರ್ಚಿಗೆ ಬಳಸಲಾಗುತ್ತದೆಯೆಂಬ ಅಂಶವನ್ನು ಮನದಟ್ಟು ಮಾಡಿಕೊಡಬೇಕು.

ಸ್ವರೂಪ: ಎಲ್ಲ ಬಂಧುಗಳಿಗೆ ’ಬರತ ಮುನಿ’ ಆಚರಣೆ ಮತ್ತು ಅರ್ಪಣೆಯ ಸಂಗತಿ ತಿಳಿಸಿಕೊಟ್ಟು ಂದೆಡೆ ಸೇರಿಸಬೇಕು. ನಿಶ್ಚಿತ ದಿನದಂದು ನಟರಾಜ ವಿಗ್ರಹವಿರಿಸಿ, ಅಲಂಕರಿಸಿ, ಒಮದು ಕಲಶವನ್ನಿಟ್ಟು ಪೂಜಿಸಿ, ಅರ್ಪಿಸುವಂತೆ ತಿಳಿಸಬೇಕು. ನಿರ್ಮಲ ಭಕ್ತಿಯನ್ನು ಉದ್ದೀಪಿಸುವ ವಾತಾವರಣವಿರಬೇಕು.

ಹೇಗೆ ಸಹಕರಿಸಬಹುದು?

೧. ಕಲಾವಿದರನ್ನು ಗುರುತಿಸಿ ಸಂಪರ್ಕಿಸುವುದು
೨. ಅವರನ್ನು ಸದಸ್ಯರನ್ನಾಗಿ ಮಾಡುವುದು ( ಶುಲ್ಕ ೧೦೦ ರೂ.ಗಳು)
೩. ಪೋಷಕರಾಗುವುದು ಮತ್ತು ಮಾಡಿಸುವುದು ( ೧,೦೦೦ ರೂ.ಗಳು)
೪. ಕಲಾವಿದರ ಮಿಲನ ಆಗಾಗ್ಗೆ ನಡೆಸುವುದು
೫. ಸಂಸ್ಕಾರ ಭಾರತಿಯ ಯಾವುದಾದರೂ ಜವಾಬ್ದಾರಿ ತೆಗೆದುಕೊಳ್ಳುವುದು
೬. ಕಾರ್ಯಕ್ರಮಕ್ಕೆ ಪ್ರಾಯೋಜಕರನ್ನು ದೊರಕಿಸಿಕೊಡುವುದು

ಧ್ಯೇಯ ಗೀತೆ

ಸಾಧಯತಿ ಸಂಸ್ಕಾರ ಭಾರತಿ ಭಾರತೇ ನವ ಜೀವನಂ ||ಪ||

ಪ್ರಣವ ಮೂಲಂ ಪ್ರಗತಿಶೀಲಂ ಪ್ರಖರ ರಾಷ್ಟ್ರ ವಿವರ್ಧಕಮ್
ಶಿವಂ ಸತ್ಯಂ ಸುಂದರಂ ಅಭಿನವಮ ಸಂಸ್ಕಾರಣೋದ್ಯಮಮ್

ಮಧುರ ಮಂಜುಲ ರಾಗಭರಿತಂ ಹೃದಯ ತಂತ್ರೀ ಮಂತ್ರಿತಮ್
ವಾದಯತಿ ಸಂಗೀತಕಂ ವಸುಧೈಕ ಭಾವನ ಪೋಷಕಮ್

ಲಲಿತ ರಸಮಯ ಲಾಸ್ಯ ಲೀಲಾ ಚಂಡ ತಾಂಡವ ಗಮಕಹೇಲಾ
ಕಲಿತ ಜೀವನ ನಾಟ್ಯವೇದಂ ಕಾಂತಿ ಕ್ರಾಂತಿ ಕಥಾ ಪ್ರಮೋದಮ್

ಚತುಃಷಷ್ಠಿಕಲಾನ್ವಿತಂ ಪರಮೇಷ್ಠೀನಾ ಪರಿವರ್ತಿತಂ
ವಿಶ್ವಚಕ್ರ ಭ್ರಮಣರೂಪಂ ಶಾಶ್ವತಂ ಶ್ರುತಿಸಮ್ಮತಮ್

ಜೀವಯದ್ಯಭಿಲೇಖಮಖಿಲಂ ಸಪ್ತವರ್ಣ ಸಮೀಕೃತಂ
ಪ್ಲಾವಯತಿ ರಸ ಸಿಂಧುನಾ ಪ್ರತಿಹಿಂದು ಮಾನಸ ನಂದನಂ
ಧ್ಯೇಯ ಗೀತೆಯ ಅರ್ಥ

ಸಂಸ್ಕಾರ ಭಾರತಿಯು ಭಾರತದಲ್ಲಿ ಹೊಸಜೀವನವನ್ನು ಸಾಧಿಸುತ್ತದೆ. ಅ ಜೀವನ ಪ್ರಣವ ಮೂಲವೂ ಪ್ರಗತಿಶೀಲವೂ ಪ್ರಖರವಾದ ರಾಷ್ಟ್ರವನ್ನು ಬೆಳೆಸುವಂತಹದೂ ಸತ್ಯ-ಶಿವ-ಸುಂದರವೂ ನವೀನವೂ ಸಂಸ್ಕಾರದ ಪ್ರಕ್ರಿಯೆಯಲ್ಲಿ ತೊಡಗಿರುವಂತಹದೂ ಆಗಿರುತ್ತದೆ.

ಆ ಜೀವನವು ಮಧುರಮಂಜುಲರಾಗದಿಂದ, ಹೃದಯದ ತಂತಿಗಳಿಂದ ಮಂತ್ರಿಸಲ್ಪಟ್ಟ ’ವಸುಧೈವ ಕುಟುಂಬಕಮ್’ ಎಂಬ ಭಾವನೆಗೆ ಪೋಷಕವಾದ ಸಂಗೀತವನ್ನು ನುಡಿಸುತ್ತದೆ.

ಆ ಜೀವನವು ಲಲಿತವೂ ರಸಮಯವೂ ಲಾಸ್ಯಲೀಲೆಗಳಿಂದ ಜೊತೆಗೂಡಿದ್ದೂ ಚಂಡತಾಂಡವದ ಗಮಕವಾಗಿ ನಾಟ್ಯವೇದರೂಪವಾದದ್ದೂ ಶಾಂತಿ- ಕ್ರಾಂತಿ- ಕಥಾ ಪ್ರಮೋದರೂಪವಾದದ್ದೂ ಆಗಿರುತ್ತದೆ.
ಅದು ೬೪ ಕಲೆಗಳಿಂದೊಡಗೂಡಿದ್ದೂ ಪರಬ್ರಹ್ಮನಿಂದ ಬೆಳೆಸಲ್ಪಟ್ಟಿದ್ದೂ ತಿರುಗುವ ಚಕ್ರದ ಭ್ರಮಣ ರೂಪದ್ದೂ ಶಾಶ್ವತವೂ ಶ್ರುತಿ ಸಮ್ಮತವೂ ಆಗಿರುತ್ತದೆ.

ಈ ಜೀವನವು ಎಲ್ಲ ಲೇಖನಕೌಶಲವನ್ನೂ ಉಜ್ಜೀವಿತವಾಗಿಸುತ್ತದೆ. ಸಪ್ತವರ್ಣಗಳಿಂದ ಸಮೀಕರಣಗೊಳಿಸಲ್ಪಟ್ಟ ಅದು ಎಲ್ಲಾ ಹಿಂದೂ ಜನಮಾನಸವನ್ನು ರಸಸಿಂಧುವಿನಲ್ಲಿ ಮುಳುಗಿಸುತ್ತದೆ.
ಸಂಸ್ಕಾರ ಭಾರತಿ ಭೂಮಿಕೆ

ಸಂಸ್ಕೃತಿಯ ಮೂಲ ತತ್ತ್ವವೇ ಸಂಸ್ಕಾರ. ಸಂಸ್ಕಾರದಿಂದ ಪರಿಷ್ಕೃತಗೊಂಡಿದ್ದೇ ಸಂಸ್ಕೃತಿ. ಇದನ್ನು ಪ್ರಭಾವಿಯಾಗಿ ಅಭಿವ್ಯಕ್ತಗೊಳಿಸುವ ಮಾಧ್ಯಮವೇ ಕಲೆ. ವೈವಿಧ್ಯಮಯವಾದ ಕಲೆಗಳಿಂದ ಆಯಾ ಕ್ಷೇತ್ರ ಸಮಾಜ ಮತ್ತು ರಾಷ್ಟ್ರಸ ಸಂಸ್ಕೃತಿಯು ಪುಸ್ಫುಟಿತವಾಗಿ ಪ್ರಕಾಶಿತವಾಗುತ್ತಿದೆ.

ಸಂಸ್ಕಾರ ಜೀವನ ಸುರಭಿಯೂ ಹೌದು. ಅದು ಕಣ್ಣಿಗೆ ಕಾಣುವುದಿಲ್ಲ. ಅನುಭವಗಮ್ಯ ಸಂಸ್ಕಾರದ ಕಾರಣದಿಂದಾಗಿಯೇ ನಮಗೆ ದೇಶ ವಿದೇಶಗಳ ನಡುವಿನ ಅಂತರ ಸ್ಪಷ್ಟವಾಗಿ ತಿಳಿಯುತ್ತದೆ. ಸಂಸ್ಕಾರ ನಷ್ಟವಾದರೆ ಸಂಸ್ಕೃತಿ ನಷ್ಟವಾಗುತ್ತದೆ. ಸಂಸ್ಕೃತಿ ನಷ್ಟವಾದರೆ ರಾಷ್ಟ್ರವೇ ನಷ್ಟವಾಗುತ್ತದೆ.

ಕಲೆ ಎಂದರೆ ಮುಕ್ತಿ. ಮುಕ್ತಿ ಎಂದರೆ ಮರಣದ ನಂತರ ಸಿಗುವುದೆಂದರ್ಥವಲ್ಲ. ಲೌಕಿಕ ಜೀವನದ ಜಂಜಾಟ ಸಂಕೀರ್ಣತೆಗಳಿಂದ, ಪಾಪ- ಸಂತಾಪಗಳಿಂದ ಮುಕ್ತಿ ಎಂದರ್ಥ.

ಜೀವನದಲ್ಲಿ ಎಲ್ಲರಿಗೂ ಆನಂದ ಬೇಕು. ಧರ್ಮ, ಸಂಪ್ರದಾಯ, ಅಧ್ಯಯನ, ಯೋಗ, ತ್ಯಾಗ ಮುಂತಾದ ಅನೇಕ ಮಾಧ್ಯಮಗಳಿಂದ ಆನಂದ ಸಿಗುತ್ತದೆ. ಆದರೆ ಸುಗಮ, ರುಚಿಕರ ಹಾಗೂ ಲೋಕ ರಂಜಕವಾದ ಆನಂದವು ಲಲಿತಕಲೆಗಳ ಮಾಧ್ಯಮದಿಂದ ಮಾತ್ರ ಸಿಗಲು ಸಾಧ್ಯ. ಸಂಸ್ಕಾರಯುಕ್ತ ಕಲೆಗಳು ಮಾನವನನ್ನು ಪಶುತ್ವದಿಂದ ದೈವತ್ವಕ್ಕೇರಿಸುತ್ತವೆ.

ಕಲಾ ಸಾಧಕನಿಗೆ ಸಾಧನೆಯೇ ಗುರಿ. ಕಲೆಯೇ ಪೂಜೆ. ತಪಸ್ಸು. ಅದೇ ಅವನಿಗೆ ಮಾನವತೆಯ ಪರ್ಯಾಯ, ರಾಷ್ಟ್ರೋತ್ಥಾನದ ಮಾರ್ಗವೂ ಹೌದು. ಆತ ದೈವತ್ವಕ್ಕೇರುವ ಸೋಪಾನವೂ ಸಹ ಅದೇ ಆಗಿದೆ. ಅಂತಹ ಕಲಾಕಾರ ತನ್ನ ಎಲ್ಲ ವಿಷಯಕಾಮನೆಗಳಿಂದ ಮುಕ್ತನಾಗಿ ತನ್ನದೆಲ್ಲವನ್ನೂ ಕಲಾ ಸಾಧನೆಗೆ ಸಮರ್ಪಿಸುತ್ತಾನೆ.

ಸಂಸ್ಕಾರ ಭಾರತಿಯು ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆಯಲ್ಲ. ಅಥವಾ ಕಲಾಶಾಲೆಗಳನ್ನೂ ನಡೆಸುವುದಿಲ್ಲ. ನಮ್ಮ ಸಂಸ್ಕೃತಿಯ ಸರಿಯಾದ ಪರಿಜ~ಜಾನ ಇಲ್ಲದವರು, ಕಲೆಯ ಮೂಲ ಉದ್ದೇಶ ತಿಳಿಯದವರು ಹೇಳುವ ಮಾತೊಂದಿದೆ. ಅದೇನೆಂದರೆ, “ಕಲೆಗಾಗಿ ಕಲೆ”. ಸಂಸ್ಕಾರಭಾರತಿಯು, ’ಕಲೆ ವಿಲಾಸಕ್ಕಾಗಿ ಅಲ್ಲ. ಆತ್ಮ ವಿಕಾಸಕ್ಕಾಗಿ’ ಎನ್ನುವ ಮಾತಿನಲ್ಲಿ ನಂಬಿಕೆ ಇರಿಸಿದೆ.

ಬೇವು ಆರೋಗ್ಯವರ್ಧಕ. ಬೆಲ್ಲ ಆನಂದದ ಸಂಕೇತ. ಈ ದಿನ ಬೆಳಗಿನಲ್ಲಿ ಸೂರ್ಯ ನಮಸ್ಕಾರವನ್ನು ಕೂಡ ಮಾಡುವ ಪರಿಪಾಠವಿದೆ. “ಶತಾಯುರ್ವಜ್ರದೇಹಾಯ…” ಎಂದು ಆರಂಭವಾಗುವ ಮಂತ್ರದೊಂದಿಗೆ ಸೂರ್ಯ ನಮಸ್ಕಾರ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ನೀಡಲಾಗುತ್ತದೆ.

ಅರವತ್ತು ನಾಲ್ಕು ಕಲೆಗಳು
೧. ಗೀತಾ (ಹಾಡುಗಾರಿಕೆ)
೨. ವಾದ್ಯ (ವಾದ್ಯಗಳನ್ನು ನುಡಿಸುವುದು)
೩. ನೃತ್ಯ (ನರ್ತಿಸುವುದು)
೪. ಆಲೇಖ್ಯ (ಚಿತ್ರಗಳನ್ನು ರಚಿಸುವುದು)
೫. ವಿಶೇಷಕಚ್ಛೇದ್ಯ (ಹಣೆಯ ಮೇಲೆ ತೊಡಲು ಆಗುವಂತೆ ವಿವಿಧಾಕೃತಿಗಳಲ್ಲಿ ಎಲೆಗಳನ್ನು ಬಿಡಿಸುವುದು)
೬. ತಂಡುಲ-ಕುಸುಮ-ಬಲಿವಿಕಾರ (ಪೂಜೆಗಾಗಿ ಅಕ್ಕಿ ಮತ್ತು ಹೂಗಳನ್ನು ಜೋಡಿಸುವುದು)
೭. ಪುಷ್ಪಾಸ್ತರಣ (ಮನೆಯನ್ನು ಹೂಗಳಿಂದ ಅಲಂಕರಿಸುವುದು)
೮. ದಶನವಸನಾಂಗರಾಗ (ಹಲ್ಲುಗಳಿಗೂ, ಬಟ್ಟೆಗಳಿಗೂ ಮತ್ತು ಶರೀರಕ್ಕೂ ಬಣ್ಣಗಳನ್ನು ಹಚ್ಚುವುದು)
೯. ಮಣಿಭೂಮಿಕಾಕರ್ಮ (ರತ್ನಜಡಿತವಾದ ನೆಲಗಟ್ಟು ಮಾಡುವುದು; ಮೊಸಾಯಿಕ್ ಕೆಲಸ, ‘ಗೊಂಬೆಗಳನ್ನು ಮಾಡುವುದು’ ಎಂದೂ ಅರ್ಥೈಸಿದೆ.)
೧೦. ಶಯನರಚನ (ಹಾಸಿಗೆಗಳನ್ನು ಮಾಡುವುದು)
೧೧. ಉದಕವಾದ್ಯ (ಮುರಜ ಮೊದಲಾದುದರ ದನಿಯಾಗುವಂತೆ ನೀರಿನ ಮೇಲೆ ಬಾರಿಸುವುದು)
೧೨. ಉದಕಾಘಾತ (ಜಲಕ್ರೀಡೆಯಲ್ಲಿ ನೀರನ್ನು ಬೊಗಸೆಗಳಲ್ಲಿ ತುಂಬಿ ಇತರರಿಗೆ ಬಲವಾಗಿ ಎರಚುವುದು)
೧೩. ಚಿತ್ರಾಯೋಗ (ಮದ್ದು ಮೂಲಿಕೆಗಳಿಂದ, ಔಷಧಗಳಿಂದ ಮಂತ್ರಗಳಿಂದ ಬೇರೆಯವರು ಕೃಶಕಾಯರೂ, ಅಕಾಲಿಕವಾಗಿ, ತಲೆ ನರೆತವರೂ ಹುಚ್ಚರೂ ಮುಂತಾಗಿ ಆಗುವಂತೆ ಮಾಡುವುದು)
೧೪. ಮಾಲ್ಯಗ್ರಥನವಿಕಲ್ಪ (ಹಲವು ರೀತಿಗಳಲ್ಲಿ ಹೂವಿನ ಹಾರಗಳನ್ನು ಕಟ್ಟುವುದು)
೧೫. ಶೇಖರಕಾಪೀಡಯೋಜನ (ಉಚಿತವಾದ ಸ್ಥಳಗಳಲ್ಲಿ ಶಿರೋಭೂಷಣವಾಗಿ ಶೇಖರಕ ಮತ್ತು  ಆಪೀಡಕ ಎಂಬೆರಡು ರೀತಿಯ ಆಭರಣಗಳನ್ನು ಧರಿಸುವುದು)
೧೬. ನೇಪಥ್ಯಪ್ರಯೋಗ (ತಾನು ವಸ್ತ್ರಾಲಂಕಾರ ಮಾಡಿಕೊಳ್ಳುವುದು ಅಥವಾ ಇತರರಿಗೆ ಮಾಡುವುದು)
೧೭. ಕರ್ಣಪತ್ರಭಂಗ (ದಂತ ಮೊದಲಾದವುಗಳಿಂದ ಕರ್ಣಾಭರಣಗಳನ್ನು ಮಾಡುವುದು)
೧೮. ಗಂಧಯುಕ್ತಿ (ಪರಿಮಳದ್ರವ್ಯಗಳ ತಯಾರಿಕೆ)
೧೯. ಭೂಷಣಯೋಜನ (ಆಭರಣಗಳನ್ನು ಮಾಡುವುದು)
೨೦. ಐಂದ್ರಜಾಲಯೋಗ (ಇಂದ್ರಜಾಲದ ವಿಧಾನಗಳು, ಎಂದರೆ ಭ್ರಮಾಸೃಷ್ಟಿಯನ್ನು ನಿರ್ಮಿಸುವುದು, ದೇವತೆಗಳು, ಸರ್ಪಗಳು, ಸೈನ್ಯಗಳು ಇತ್ಯಾದಿ)
೨೧. ಕೌಚುಮಾರಯೋಗ  (ದೃಢದೇಹಿಯೂ ವೀರ್‍ಯವಂತನೂ ಆಗಲು ಸಾಧ್ಯವಾಗುವಂತಹ ಕುಚುಮಾರನ ಚಿಕಿತ್ಸಾ ನಿರ್ದೇಶನ)
೨೨. ಹಸ್ತಲಾಘವ (ಎಲ್ಲ ಕೆಲಸಗಳಲ್ಲಿಯೂ ಕೈಗಳ ಎಂದರೆ ಹಸ್ತಗಳ ಚುರುಕು ; ‘ವ್ಯಕ್ತಿಗಳ ಎದುರಿನಲ್ಲಿಯೇ ಪದಾರ್ಥಗಳನ್ನು ಕದಿಯುವುದು’ ಎಂದೂ ಅರ್ಥೈಸಿದ್ದಾರೆ)
೨೩. ವಿಚಿತ್ರ ಶಾಕಯೂಷ ಭಕ್ಷವಿಕಾರಕ್ರಿಯಾ (ಬಗೆ ಬಗೆಯ ಕಾಯಿಪಲ್ಯದ ತಯಾರಿಕೆಯನ್ನೂ ಸಾರು ಹುಳಿ ಇತ್ಯಾದಿಗಳನ್ನೂ ಭಕ್ಷ್ಯಗಳನ್ನೂ ತಯಾರಿಸುವುದು)
೨೪. ಪಾನಕರಸರಾಗಾಸವಯೋಜನ (ಪಾನಕ ರಸ ಮೊದಲಾದ ಪೇಯಗಳನ್ನು ಸಿದ್ಧ ಮಾಡುವುದು)
೨೫. ಸೂಚಿವಾನಕರ್ಮ (ಹೊಲಿಯುವುದು, ನೇಯುವುದು, ಕಸೂತಿ ಹಾಕುವುದು)
೨೬. ಸೂತ್ರಕ್ರೀಡಾ (ದಾರಗಳಿಂದ ಆಡುವುದು, ಎಂದರೆ ಬೆರಳುಗಳಲ್ಲಿ ದಾರವೊಂದನ್ನು ಹಿಡಿದು ಅದರಿಂದ ಮನೆ, ದೇವಾಲಯ ಇತ್ಯಾದಿ ಸ್ಥೂಲ ರೇಖಾಕೃತಿಗಳನ್ನು ರಚಿಸುವುದು; ‘ದಾರಗಳನ್ನೆಳೆಯುವುದರಿಂದ ಆಕೃತಿಗಳು ಚಲಿಸುವಂತೆ ಮಾಡುವುದು’ ಎಂದೂ ಅರ್ಥೈಸಿದ್ದಾರೆ)
೨೭. ವೀಣಾ ಡಮರುಕ ವಾದ್ಯ (ವೀಣೆ ಡಮರುಗ ಮೊದಲಾದ ವಾದ್ಯಗಳನ್ನು ನುಡಿಸುವುದು)
೨೮. ಪ್ರಹೇಲಿಕಾ (ಒಗಟುಗಳು)
೨೯. ಪ್ರತಿಮಾಲಾ (ಒಂದು ಆಟ: ಒಬ್ಬನು ಒಂದು ಶ್ಲೋಕವನ್ನು ಹೇಳುತ್ತಾನೆ, ಇನ್ನೊಬ್ಬನು ಅದರ ಅಂತ್ಯಾಕ್ಷರದಿಂದ ಮೊದಲು ಮಾಡಿ ಇನ್ನೊಂದು ಶ್ಲೋಕವನ್ನು ಹೇಳುತ್ತಾನೆ. ಹೀಗೆಯೇ ಮುಂದುವರಿಯುತ್ತದೆ. ಇದನ್ನು ‘ಅಂತ್ಯಾಕ್ಷರಿ’ ಎನ್ನುತ್ತಾರೆ)
೩೦. ದುರ್ವಾಚಯೋಗ (ಇನ್ನೊಂದು ಆಟ: ಪ್ರತಿಯೊಬ್ಬ ಸ್ಪರ್ಧಿಯೂ ಪರುಷಾಕ್ಷರಘಟಿತವಾದ ಶ್ಲೋಕಗಳನ್ನು ಹೇಳುವುದು)
೩೧. ಪುಸ್ತಕವಚನ (ಪುಸ್ತಕಗಳನ್ನು ಓದುವುದು)
೩೨. ನಾಟಕಾಖ್ಯಾಯಿಕಾದರ್ಶನ (ನಾಟಕಗಳ ಮತ್ತು ಅಖ್ಯಾಯಿಗಳ ಜ್ಞಾನ)
೩೩. ಕಾವ್ಯ ಸಮಸ್ಯಾಪೂರಣ (ಕವಿತೆಯ ರಚನೆ: ಶ್ಲೋಕದ ಕೊನೆಯ ಪಾದವು ಮೊದಲೆ ಕೊಡಲಾಗಿದ್ದು, ಅದರ ಮೊದಲು ಮೂರು ಪಾದಗಳೂ ಕೂಡಿ ಸಮಂಜಸ ಅರ್ಥ ಬರುವಂತೆ ಆಮೇಲೆ ಸೇರಿಸುವುದು)
೩೪. ಪಟ್ಟಿಕಾವೇತ್ರವಾನವಿಕಲ್ಪ (ಬೆತ್ತ ಮತ್ತು ಬಿದಿರುಗಳಿಂದ ಮಂಚಗಳು, ಆಸನಗಳು ಮುಂತಾದ ಬೇರೆ ಬೇರೆ ವಸ್ತುಗಳನ್ನು ಮಾಡುವುದು)
೩೫. ತಕ್ಷಕರ್ಮಗಳು (ಚಿನ್ನ,ಉಕ್ಕು, ಮರ ಮೊದಲಾದವುಗಳಲ್ಲಿ ಕೆತ್ತನೆ ಕೆಲಸ ಮಾಡುವುದು)
೩೬. ತಕ್ಷ (ಮರಗೆಲಸ)
೩೭. ವಾಸ್ತುವಿದ್ಯಾ (ಗೃಹ ನಿರ್ಮಾಣವಿಜ್ಞಾನ)
೩೮. ರೂಪ್ಯ ರತ್ನಪರೀಕ್ಷಾ (ನಾಣ್ಯಗಳು ಮತ್ತು ರತ್ನಗಳ ಪರೀಕ್ಷೆ)
೩೯. ಧಾತುವಾದ (ಖನಿಜಗಳ ಮಿಶ್ರಣ, ಶುದ್ಧೀಕರಣ ಇತ್ಯಾದಿ)
೪೦. ಮಣಿರಾಗಾಕರಜ್ಞಾನ (ಹರಳುಗಳು ಮತ್ತು ರತ್ನಗಳಿಗೆ ಬಣ್ಣ ಹಾಕುವ ವಿಧಾನಗಳ ತಿಳುವಳಿಕೆ ಮತ್ತು ಗಣಿಗಳ ಸ್ಥಲಪರಿಜ್ಞಾನ ಮತ್ತು ಕಾರ್ಯಪರಿಜ್ಞಾನ)
೪೧. ವೃಕ್ಷಾಯುರ್ವೇದಯೋಗ (ಸಸ್ಯಗಳಿಗೆ, ಮರಗಳಿಗೆ ರೋಗವಿಲ್ಲದೆ ಸೊಂಪಾಗಿರುವಂತೆಯೂ, ವಿಶೇಷವಾಗಿ ಅವನ್ನು ಚಿಕ್ಕದು ಅಥವಾ ಎತ್ತರವಾಗಿ ಮಾಡಲು ಸಾಧ್ಯವಾಗುವಂತೆಯೂ ಔಷಧಗಳನ್ನು ಬಳಸುವುದು ಮುಂತಾದ ವಿಧಾನಗಳ ತಿಳುವಳಿಕೆ)
೪೨. ಮೇಷ ಕುಕ್ಕುಟ ಲಾವಕ ಯುದ್ಧನಿಧಿ (ಟಗರು,ಹುಂಜ ಮತ್ತು ಲಾವಗೆಗಳು ಯುದ್ಧ ಮಾಡುವಂತೆ ಮಾಡುವುದು)
೪೩. ಶುಕಸಾರಿಕಾಪ್ರಲಾಪನಾ (ಗಂಡು-ಹೆಣ್ಣು ಗಿಳಿಗಳು ಮಾತನಾಡುವಂತೆ ಕಲಿಸುವುದು)
೪೪. ಉತ್ಸಾದನ-ಸಂವಾಹನ-ಕೇಶಮರ್ಧನ (ಹಸ್ತಪಾದಗಳಿಂದ ತಲೆ ಮತ್ತು ಶರೀರವನ್ನು ತಿಕ್ಕುವ ಎಂದರೆ ಮರ್ದಿಸುವ ಕೌಶಲ)
೪೫. ಅಕ್ಷರಮುಷ್ಟಿಕಾಕಥನ (ಅಕ್ಷರಶ್ರೇಣಿಗಳಿಂದ ಅರ್ಥವನ್ನರಿಯುವುದು ಉದಾ: ‘ಮೇವೃಮಿಕಸಿಂಕತು ವೃಧಮಕುಂಮೀ’ ಎಂಬ ಅಕ್ಷರ ಶ್ರೇಣಿಯು ಮೇಷಾದಿ ದ್ವಾದಶ ರಾಶಿಗಳನ್ನು ಸೂಚಿಸುತ್ತದೆ)
೪೬. ಮ್ಲೇಚ್ಛಿತ ವಿಕಲ್ಪ (ಗೂಢಲಿಪಿ ಭಾಷಾಭೇದಗಳು, ಎಂದರೆ ನಿರ್ದಿಷ್ಟ ವ್ಯಕ್ತಿಗಲ್ಲದೆ ಬೇರೆ ಯಾರಿಗೂ ತಿಳಿಯಲಾಗದ ಭಾಷೆಗಳ ತಿಳುವಳಿಕೆ)
೪೭. ದೇಶಭಾಷಾವಿಜ್ಞಾನ (ನಿಖಿಲ ದೇಶಿಯಭಾಷಾ ಪಾಂಡಿತ್ಯ)
೪೮. ಪುಷ್ಪಶಕಟಿಕಾ (ಪುಷ್ಪಗಳ ಗಾಡಿ, ಎಂದರೆ ಪ್ರೇಮಪತ್ರಗಳನ್ನಿಟ್ಟು ಕಳುಹಿಸಲು ಹೂಗಳಿಂದ ಗಾಡಿಗಳು, ಕುದುರೆಗಳು, ಆನೆಗಳು, ಪಲ್ಲಕ್ಕಿಗಳು ಇತ್ಯಾದಿಗಳನ್ನು ಮಾಡುವುದು)
೪೯. ನಿಮಿತ್ತಜ್ಞಾನ (ಶುಭ ಮತ್ತು ಅಶುಭಶಕುನಗಳ ಜ್ಞಾನ)
೫೦. ಯಂತ್ರಮಾತೃಕಾ (ಸಂಚಾರಕಾರ್ಯಕ್ಕಾಗಿ, ಜಲ ಮತ್ತು ಯದ್ಧೋದ್ಯೋಗಗಳಿಗಾಗಿ ಯಂತ್ರ ನಿರ್ಮಾಣ ಮಾಡುವುದು)
೫೧. ಧಾರಣಮಾತೃಕಾ (ವಿಷಯಗಳನ್ನು ನೆನಪಿಟ್ಟುಕೊಳ್ಳುವುದು, ‘ಕೈಗಳಲ್ಲಿ ವಸ್ತ್ರ ಮತ್ತು ಇತರ ಪದಾರ್ಥಗಳನ್ನು ಹಿಡಿದುಕೊಳ್ಳುವುದು’ ಎಂದು ಅರ್ಥೈಸಿದ್ದಾರೆ)
೫೨. ಸಂಪಾಠ್ಯ (ಒಂದು ಆಟ: ಒಬ್ಬನು ಒಂದು ಶ್ಲೋಕವನ್ನು ಹೇಳುತ್ತಾನೆ. ಅದನ್ನು ಮತ್ತೊಬ್ಬನು ತನಗೆ ಅಪರಿಚಿತವಾಗಿದ್ದರೂ ಮತ್ತೊಮ್ಮೆ ಯಥಾರೀತಿ ಹೇಳಿ ಒಪ್ಪಿಸಬೇಕು)
೫೩. ಮಾನಸೀ (ಒಂದು ಆಟ: ಅನುಸ್ವಾರ ವಿಸರ್ಗಗಳನ್ನು ಯಥಾವತ್ತಾಗಿ ಬರೆದು,ಉಳಿದ ಅಕ್ಷರಗಳೆಡೆಯಲ್ಲಿ ಕೇವಲ ಅವುಗಳ ತಲೆಕಟ್ಟು, ಕೊಂಬು ಇತ್ಯಾದಿ ಚಿಹ್ನೆಗಳನ್ನು ತೋರಿಸಿ ಒಬ್ಬನು ಒಂದು ಶ್ಲೋಕವನ್ನು ಬರೆಯುತ್ತಾನೆ. ಇನ್ನೊಬ್ಬ ಆಟಗಾರ ಆ ಚಿಹ್ನೆಗಳಿರುವೆಡೆಯಲ್ಲಿ ಉಚಿತವಾದ ಅಕ್ಷರಗಳನ್ನು ಪೂರ್ತಿಯಾಗಿ ಬರೆಯಬೇಕು)
೫೪. ಕಾವ್ಯಕ್ರಿಯಾ (ಕಾವ್ಯರಚನೆ)
೫೫. ಅಭಿಧಾನಕೋಶ-ಛಂದೋವಿಜ್ಞಾನ (ಶಬ್ದಕೋಶ ಮತ್ತು ಛಂದಶ್ಯಾಸ್ತ್ರಗಳ ಜ್ಞಾನ)
೫೬. ಕ್ರಿಯಾಕಲ್ಪ (ಕಾವ್ಯ ಮತ್ತು ಅಲಂಕಾರ)
೫೭. ಛಲಿತಕಯೋಗ (ವಂಚನೆಯ ವಿಧಾನ, ಎಂದರೆ ವ್ಯಕ್ತಿಯ ಆಕೃತಿ ಮತ್ತು ಸ್ವರವನ್ನು ಗುರುತುಹಿಡಿಯಲಾಗದಂತೆ ಅಥವಾ ಗುರುತಿಸಲಾಗದೆ ಮತ್ತೊಬ್ಬನ ಕಡೆಗೆ ಮುಂದುವರಿಯುವಂತೆ ಮರೆ ಮಾಡುವುದು)
೫೮. ವಸ್ತ್ರಗೋಪನ (ವಸ್ತ್ರಗಳನ್ನು ತೊಡುವುದರಲ್ಲಿ ಭ್ರಮೋತ್ಸಾದನೆ; ತುಂಡು ಬಟ್ಟೆಯನ್ನು ತೊಟ್ಟರೂ ತುಂಡು ಬಟ್ಟೆಯೆಂದು ಕಾಣದಂತೆ ಮಾಡುವುದು ಇತ್ಯಾದಿ)
೫೯. ದ್ಯೂತವಿಶೇಷ (ಜೂಜಿನ ಹಲವು ವಿಧಗಳು)
೬೦. ಆಕರ್ಷಕ್ರೀಡಾ (ಪಗಡೆಯಿಂದಾಡುವ ಒಂದು ಜೂಜು)
೬೧. ಬಾಲಕ್ರೀಡಾ (ಮಕ್ಕಳಿಗಾಗಿ ಚೆಂಡು, ಗೊಂಬೆ, ಇತ್ಯಾದಿ ಆಟಗಳು)
೬೨. ವೈನಯಿಕೀಯವಿದ್ಯಾ (ವ್ಯಕ್ತಿಯನ್ನು ವಿದ್ಯಾವಂತನನ್ನಾಗಿ ಮಾಡುವ ವಿಜ್ಞಾನ ವಿಷಯಗಳ ಮತ್ತು ಕಲೆಯ ತಿಳುವಳಿಕೆ)
೬೩. ವೈಜಯಿಕೀಯವಿದ್ಯಾ (ಜಯವನ್ನು ಗಳಿಸಕೊಡುವ ವಿದ್ಯೆಗಳ ತಿಳುವಳಿಕೆ)
೬೪. ವ್ಯಾಯಾಮಿಕೀವಿದ್ಯಾ (ವ್ಯಾಯಾಮ ಅಥವ ಅಂಗಸಾಧನೆಯ ವಿದ್ಯೆಗಳ ತಿಳುವಳಿಕೆ)